ವಿಜ್ಞಾನವಿತ್ತು. ವಿದೇಶಿಗರು ಭಾರತೀಯರಿಗೆ ಭೌತಿಕವಿಜ್ಞಾನ ಉಚಿತವಾಗಿ ಹಂಚಿಕೊಂಡು ಮುಂದೆ ನಡೆದರು.ಭಾರತೀಯರು ಮಾತ್ರ ಅಧ್ಯಾತ್ಮ ಜ್ಞಾನ ಹಂಚಿಕೊಳ್ಳಲಾಗದೆ ಹಿಂದುಳಿದರು.ಈಗಲೂ ಇದೇ ಭೌತ ಶಾಸ್ತ್ರದ ತಂತ್ರಜ್ಞಾನ ಮಾನವರನ್ನು ಆಳುತ್ತಿದೆ ಆದರೆ ಆಧ್ಯಾತ್ಮ ಶಾಸ್ತ್ರ ಅರ್ಥ ವಾಗದೆ ಹೊರಗೆ ಹೋರಾಟ ನಡೆಸುತ್ತಿದೆ. ಒಳಗೇ ಹೋರಾಟ ನಡೆಸಿದರೆ ಆತ್ಮನಿರ್ಭರ ಭಾರತ ಸಾಧ್ಯವಿದೆ. ವಿದೇಶಿಗರಲ್ಲಿ ಭೌತಿಕ ವಿಜ್ಞಾನವಿತ್ತು ಭಾರತೀಯರಲ್ಲಿ ಅಧ್ಯಾತ್ಮ ನಮ್ಮ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸೋತವರು ಬೇರೆಯವರ ಮಕ್ಕಳ ದಾರಿತಪ್ಪಿಸಿ ಆಳುವುದರಲ್ಲಿ ಧರ್ಮ ವಿಲ್ಲ. ಇದು ತಿರುಗಿ ಬರೋವಾಗ ನಮ್ಮ ಮಕ್ಕಳೇ ನಮ್ಮಬಳಿ ಇರೋದಿಲ್ಲ.
ಅದಕ್ಕಾಗಿ ಅವರವರ ಸಂಸಾರದ ಜವಾಬ್ದಾರಿ
ಅವರೆ ಹೊತ್ತು ನಡೆಯುವಾಗ ಹೊರಗಿನವರ ತಂತ್ರದ ಅಗತ್ಯವಿಲ್ಲ.ಸ್ವತಂತ್ರ ಭಾರತೀಯ ಪ್ರಜೆಗಳಲ್ಲಿ ಅಡಗಿರುವ ತತ್ವಜ್ಞಾನವನ್ನು ಅರ್ಥ ಮಾಡಿಸುವ ಗುರು ಹಿರಿಯರು ರಾಜಕೀಯ ಬಿಟ್ಟು ಸತ್ಯ ತಿಳಿದರೆ ಉತ್ತಮ ಬದಲಾವಣೆ.ತಾವೇ ಸಾಲದಲ್ಲಿದ್ದರೆ ಬೇರೆಯವರ ಸಾಲ ತೀರಿಸಲಾಗದು. ಭೂಮಿಯ ಋಣ ತೀರಿಸಲು ಬಂದ ಸಣ್ಣ ಜೀವ ಉಳಿಸಿಕೊಳ್ಳಲು ಹೊರಗಿನ ಸಾಲ ಬೇಕೆ? ಇದರಿಂದ ಆತ್ಮರಕ್ಷಣೆ ಸಾಧ್ಯವೆ? ಬಡತನವನ್ನು ಹಣದಿಂದ ಅಳೆಯುವ ಅಜ್ಞಾನ ತೊಲಗಿದರೆ ಒಳಗಿರುವ ಸುಜ್ಞಾನದಿಂದ ಸ್ವತಂತ್ರ ಜೀವನ ನಡೆಸಬಹುದು. ದೇಶದೊಳಗಿರಲಿ ವಿದೇಶದೊಳಗಿರಲಿ ಅತಿಯಾದ ಅಹಂಕಾರ ಸ್ವಾರ್ಥ ದ ಜೀವನದಿಂದ ನಿಜವಾದ ಸುಖ,ನೆಮ್ಮದಿ,ಶಾಂತಿ,ತೃಪ್ತಿ ಸಿಗದು
ನಿಜವಾದ ಪ್ರಜಾಧರ್ಮ ಪಾಲನೆ ಮಾಡುವ ದೇಶಸೇವಕರು ಯಾರ ಅಡಿಯಾಳಾಗಿರದೆ ಸ್ವತಂತ್ರ ಜೀವನ ನಡೆಸಿ ಹಣವನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುತ್ತಾರೆ. ಜನರ ಹಣವನ್ನು ಬಳಸಿ ಜನರನ್ನೇ ಆಳುತ್ತಾ ಹಣವನ್ನು ಹಂಚಿದರೆ ಇದರಲ್ಲಿ ನಮ್ಮ ಸಂಪಾದನೆ ಏನಿದೆ?
ಮಧ್ಯವರ್ತಿಗಳು ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ.
ಉಚಿತ ಯೋಜನೆಗಳ ಹಿಂದೆ ಕೆಲವರಿಗೆ ಸುಖವಿರಬಹುದು ಹಲವರಿಗೆ ದು:ಖವೂ ಇರಬಹುದು.ಆದರೆ ಯೋಜನೆಯನ್ನು ಮಾತ್ರ ಎಲ್ಲರೂ ಪಡೆಯುವುದು ಖಚಿತ. ಯಾವ ಪಕ಼್ದ ಬಂದರೂ ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಯೋಜನೆಗಳಿಂದ ಜನರನ್ನು ತಮ್ಮೆಡೆ ಸೆಳೆಯುತ್ತಾರೆ. ಅದು ಯಶಸ್ಸು ಪಡೆಯಲು ಜನಸಹಕಾರವೇ ಕಾರಣ. ಅದರಿಂದ ನಷ್ಟವಾಗುವುದು ಲಾಭವಾಗುವುದೂ ಜನರಿಗೇ ಅಂದರೆ ಸರ್ಕಾರ ಕೊಡುವ ಸಾಲ ದೇಶ ವಿದೇಶದ ಸಾಲವಾದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಭಳಕೆ ಮಾಡಿಕೊಂಡವರ ಸಾಲ ಬೆಳೆದು ಸಂಸಾರದೊಳಗೇ ಸಮಸ್ಯೆ ಬೆಳೆಯುತ್ತದೆ. ಹೀಗಾಗಿ ಯಾವುದನ್ನು ಹೇಗೆ ಬಳಸಿದರೆ ಉಳಿತಾಯವಾಗುವುದೆನ್ನುವ ಜ್ಞಾನವಿದ್ದವರು ಸಾಲ ಬೆಳೆಸದೆ ಬಂದ ಹಣವನ್ನು ದ್ವಿಗುಣ ಮಾಡಿಕೊಂಡು ಸಾಲ ತೀರುಸುವತ್ತ ನಡೆಯುವರು.ಆದರೆ ಅಂತಹ ಸುಜ್ಞಾನ ಎಷ್ಟು ಮಂದಿಗೆ ನೀಡಲಾಗಿದೆ? ಇದರ ಬಗ್ಗೆ ಚಿಂತನೆ ನಡೆಸಲೂ ತಯಾರಿಲ್ಲದ ಜನಸಂಖ್ಯೆ ಮಿತಿಮೀರಿ ಪರಕೀಯರ ಸಾಲದ ಹಣದಲ್ಲಿ ಮನರಂಜನೆ ನಡೆದಿದೆ ಎಂದರೆ ತಪ್ಪಾಗಲಾರದು.
ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ.
ಸರ್ಕಾರದ ಯೋಜನೆಗಳಲ್ಲಿ ಸ್ತ್ರೀ ಯರಿಗೆ ಉಚಿತ ಪ್ರಯಾಣ
1 ಎಷ್ಟೋ ಬಡಮಹಿಳೆಯರಿಗೆ ಅನುಕೂಲಕರವಾಗಿದೆ.ಉಳ್ಳವರಿಗೆ ಅಗತ್ಯವಿರಲಿಲ್ಲ.
2. ಗೃಹಲಕ್ಮಿ ಯೋಜನೆಯೂ ಉತ್ತಮವೆ ಆದರೂ ಮನೆಯೊಳಗೆ ಜೊತೆಗೆ ಇದ್ದ ಅತ್ತೆ ಸೊಸೆಯರ ನಡುವೆ ಕಲಹಬರದಿದ್ದರೆ ಸಾಕು.
3. ವಿದ್ಯುತ್ ಯೋಜನೆಯಿಂದ ಮಿತವಾಗಿ ವಿದ್ಯುತ್ ಬಳಸುವವರಿಗೆ ಅನುಕೂಲವಾದರೂ ಉಳಿದವರಿಗೆ ಬಿಲ್ ಬೆಲೆ ಅತಿಯಾಗಿ ಏರಿಸಿರೋದು ಸರಿಕಾಣದು.
4. ಪದವೀಧರ ವಿದ್ಯಾರ್ಥಿಗಳಿಗೆ ಕೊಡುವ ಹಣವು ದುರ್ಭಳಕೆ ಆಗುವ ಸಾಧ್ಯತೆ ಹೆಚ್ಚಾಗಿದೆ.ಸಾಮಾನ್ಯವಾಗಿ ಪದವಿಯವರೆಗೆ ಹೋದವರಲ್ಲಿ ಹಣವಿರುತ್ತದೆ.ಜೊತೆಗೆ ತಂತ್ರಜ್ಞಾನವೂ ಇರುತ್ತದೆ.ಅದರಿಂದ ಸ್ವಲ್ಪ ಮಟ್ಟಿಗೆ ಹಣ ಸಂಪಾದಿಸುವ ಜ್ಞಾನವೂ ಇರುತ್ತದೆ.ಹೀಗೆ ಸರ್ಕಾರ ಉಚಿತ ಹಣ ನೀಡಿದರೆ ಅದನ್ನು ಇನ್ನಾವುದೋ ಮನರಂಜನೆಗೆ ಬಳಸಿ ಸಮಯಕಳೆದರೆ ದುರ್ಭಳಕೆ ಹೆಚ್ಚಾಗುವ ಜೊತೆಗೆ ವಿದ್ಯಾರ್ಥಿಗಳಿಗೆ ಹಣದ ಬೆಲೆ ತಿಳಿಯುವುದಿಲ್ಲ. ಈಗಾಗಲೇ ಇದು ಪೋಷಕರ ಅರಿವಿಗೆ ಬಂದಿದೆ.
5. ಅನ್ನಭಾಗ್ಯವಂತೂ ಈಗಾಗಲೇ ಸಾಕಷ್ಟು ಜನರು ಪಡೆದಿದ್ದರೂ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಇದನ್ನು ಹೆಚ್ಚಿನ ಬೆಲೆಗೆ ಮಾರಿಕೊಳ್ಳುವವರಿದ್ದಾರೆಂದರೆ ಬಡವರು ಯಾರೆಂಬ ಪ್ರಶ್ನೆ ಮೂಡುತ್ತದೆ.
ಒಟ್ಟಿನಲ್ಲಿ ಯಾವುದೂ ಅತಿಯಾದರೆ ಗತಿಗೇಡು. ಸರ್ಕಾರಗಳ ಯೋಜನೆಯಿಂದ ದೇಶದ ಜೊತೆಗೆ ಪ್ರಜೆಗಳ ಸಾಲ ತೀರಿಸುವಂತಿದ್ದರೆ ಉತ್ತಮ ಬದಲಾವಣೆ.ಆದರೆ ಈ ಯೋಜನೆಯಲ್ಲಿ ಸಾಲ ಮಿತಿಮೀರಿದರೆ ಜನರ ಸಮಸ್ಯೆ ಇನ್ನಷ್ಟು ಬೆಳೆದು ದೇಶದಲ್ಲಿ ಕ್ರಾಂತಿಕಾರಕ ಬೆಳವಣಿಗೆಯಾಗುವುದು. ಇಂತಹ ಯೋಜನೆಗಳು ಹೊರಗಿನಿಂದ ಸರಿಯೆನಿಸಿದರೂ ಒಳಗಿನ ದೃಷ್ಟಿಯಿಂದ ನೋಡಿದಾಗ ಭಾರತವನ್ನು ಸ್ಮಾರ್ಟ್ ಮಾಡಲು ಹೋಗಿ short ಆಗುವಂತಿದೆ. ಇಷ್ಟು ವರ್ಷದಿಂದಲೂ ಸರ್ಕಾರಗಳ ಯೋಜನೆಗಳಿಂದ ಭ್ರಷ್ಟಾಚಾರ ಬೆಳೆದಿರೋದಕ್ಕೆ ಕಾರಣವೆ ಯೋಜನೆಯನ್ನು ಜನರು ದುರ್ಭಳಕೆ ಮಾಡಿಕೊಂಡಿರೋದು.ಇದಕ್ಕೆ ಮಧ್ಯವರ್ತಿಗಳ ಸಹಕಾರ ಬೇರೆ.ಯಾವುದೇ ಯೋಜನೆ ಸಮರ್ಪಕವಾಗಿ ಸದ್ಬಳಕೆ ಆಗಬೇಕಾದರೆ ಜನರಲ್ಲಿ ಜ್ಞಾನವಿರಬೇಕಿತ್ತು.ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದಂತೆ ಹಿತವಾಗಿ ಮಿತವಾಗಿ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ ಸಾಲ ಬೆಳೆಯದು.
ದೇವರು ಕೇಳಿದ್ದೆಲ್ಲಾ ಕೊಡುತ್ತಾನೆ ಆದರೂ ಯಾಕೆ ನೆಮ್ಮದಿ ಸುಖವಿಲ್ಲ? ಅಂದರೆ ಯಾವುದನ್ನು ಬೇಡಿದರೆ ಆತ್ಮಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗೋದೆಂಬ ಆತ್ಮಜ್ಞಾನವಿಲ್ಲ.ಹೀಗಾಗಿ ಎಲ್ಲಾ ಸಾಲವಾಗುತ್ತಾ ಅದೇ ಮುಂದೆ ಶೂಲವಾಗಿ ತಿರುಗಿ ತಿವಿಯುವಾಗ ತಿರುಗಿ ಬರಲಾಗದೆ ಜೀವ ಆತ್ಮಹತ್ಯೆ ಕಡೆಗೆ ನಡೆಯುತ್ತದೆ. ಆತ್ಮಹತ್ಯೆ ಮಹಾಪಾಪ ಎಂದರು.ಮಾನವ ಜನ್ಮ ದೊಡ್ಡದೆಂದರು.ಮಾನವ ಜನ್ಮದಲ್ಲಿ ಮಾತ್ರ ಮುಕ್ತಿ ಮೋಕ್ಷ ಪಡೆಯಬಹುದೆಂದರು.ಸಾಲ ತೀರಿಸಲು ಬಂದ ಜೀವಕ್ಕೆ ಮೇಲೆ ಮೇಲೆ ಸಾಲದ ಹೊರೆ ಹಾಕಿದರೆ ಹೇಗೆ ತೀರಿಸಲಾಗುವುದು? ಭ್ರಷ್ಟಾಚಾರ ದಿಂದ ಸಾಲ ತೀರದು.ಶಿಷ್ಟಾಚಾರ ದಿಂದ ಮಾತ್ರ ಸಾಲ ತೀರುವುದೆಂದಾಗ
ಕಷ್ಟಪಟ್ಟು ಆತ್ಮವಿಶ್ವಾಸದಿಂದ ದುಡಿದು ಜೀವಿಸಲು ಜ್ಞಾನ ಬೇಕು. ವಿಜ್ಞಾನ ಜಗತ್ತು ಅಧ್ಯಾತ್ಮ ವನ್ನು ವಿರೋಧಿಸಿ ಮುಂದೆ ನಡೆದಿದ್ದರೂ ಅಸತ್ಯ ಅನ್ಯಾಯ ಅಧರ್ಮ ವೆ.
ಹೀಗಾಗಿ ಭೂಮಿಯ ಜನಸಂಖ್ಯೆ ಮಿತಿಮೀರಿದೆ. ಅಜ್ಞಾನದ ಸಂಪಾದನೆಯು ದುರ್ಭಳಕೆ ಆಗುತ್ತಿದೆ. ದುರ್ಭಲ ಮನಸ್ಸಿನವರನ್ನು ಆಳುತ್ತಿದ್ದಾರೆ. ಮಾನವ ಮಾನವನಿಗೇ ಶತ್ರುವಾದರೆ ಇದನ್ನು ಪ್ರಗತಿ ಎನ್ನಬೇಕೋ ಅಧೋಗತಿಯೋ? ನಿನ್ನ ನೀ ಆಳಿಕೊಳ್ಳಲು ಹಣ ಬೇಕೆ ಜ್ಞಾನವೆ? ಜ್ಞಾನದಿಂದ ಹಣಸಂಪಾದನೆ ಮಾಡಿ ದಾನ ಧರ್ಮಕ್ಕೆ ಬಳಸಿದ್ದ ನಮ್ಮ ಮಹಾತ್ಮರುಗಳು ರಾಜಕೀಯ ನಡೆಸಿರಲಿಲ್ಲ. ರಾಜಕೀಯದ ಹಿಂದೆ ನಡೆದಿರಲಿಲ್ಲ ಎಂದರೆ ಇಂದಿನ ಪ್ರಜಾಪ್ರಭುತ್ವದ ಪ್ರಜೆಗಳು ಎತ್ತ ನಡೆದಿರೋದು?.ಸರ್ಕಾರ ಎತ್ತ ಸಾಗುತ್ತಿದೆ? ನಮ್ಮ ಸಹಕಾರ ಇಲ್ಲದೆಯೇ ಸರ್ಕಾರ ನಡೆದಿದೆಯೆ? ಸಾಲ ಬೆಳೆಯಲು ಸರ್ಕಾರದ ಯೋಜನೆಗಳು ಕಾರಣವೆಂದರೆ ಅದರ ಫಲಾನುಭವಿಗಳು ಯಾರು? ಉತ್ತಮ ಯೋಜನೆಗಳಿಂದ ಉತ್ತಮ ಬದಲಾವಣೆ ಆಗಬೇಕಿತ್ತು ಆಗಿಲ್ಲವೆಂದರೆ ಕಾರ್ಯವೇ ಕ್ರಮಬದ್ದವಾಗಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ.ಮಧ್ಯವರ್ತಿಗಳು ಜನರನ್ನು ದಾರಿತಪ್ಪಿಸಿ ತಮ್ಮ ಸ್ವಾರ್ಥ ಕ್ಕೆ ಮನರಂಜನೆಗೆ ಬಳಸಿದರೆ ಅಧರ್ಮ. ಅಧರ್ಮಕ್ಕೆ ತಕ್ಕಂತೆ ಶಿಕ್ಷೆಯಿದೆ. ಶಿಕ್ಷೆ ಅನುಭವಿಸುವಾಗ ಯಾವ ದೇವರೂ ರಾಜಕಾರಣಿಗಳೂ ಜೊತೆಗಿರುವವರೂ ಬರೋದಿಲ್ಲವೆನ್ನುವ ಸತ್ಯ ತಿಳಿದರೆ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಸಂಪಾದಿಸಿ ಉಳಿತಾಯಮಾಡಿ ಸಾಲ ತೀರಿಸುವ ಜ್ಞಾನ ಬರುತ್ತದೆ. ಆದರೂ ಲೋಕವನ್ನು ತಿದ್ದುವ ಕೆಲಸ ಯಾರಿಗೂ ಸಾಧ್ಯವಿಲ್ಲ.ಕಾರಣ ನಡೆಸೋ ಶಕ್ತಿ ಅಗೋಚರವಾಗಿರುವಾಗ
ಆ ಶಕ್ತಿಯನರಿತು ನಡೆಯಬೇಕಿದೆ.ಪ್ರತಿಯೊಬ್ಬರೊಳಗೂ ಇರುವ ಆತ್ಮಶಕ್ತಿ ಹೆಚ್ಚಾಗಲು ಆತ್ಮಜ್ಞಾನದ ಶಿಕ್ಷಣವನ್ನು ಉಚಿತವಾಗಿ ಕೊಡಬೇಕಿತ್ತು.ಅದನ್ನು ಕೊಡದೆ ಹಣಕೊಟ್ಟು ಆಳಿದರೆ ಸಾಲವಾಗುತ್ತದೆ. ಒಟ್ಟಿನಲ್ಲಿ ಸಾಲ ಮಾಡೋದು ತಪ್ಪಲ್ಲ ತೀರಿಸದೆ ನಡೆಯೋದು ತಪ್ಪು. ತೀರಿಸುವ ಚೈತನ್ಯ ಶಕ್ತಿ ಹೆಚ್ಚಿಸುವ ಜ್ಞಾನದ ಶಿಕ್ಷಣ ಕೊಡುವುದೇ ನಿಜವಾದ ಪರಿಹಾರ. ಯಾರ ಸಾಲ ಯಾರೋ ತೀರಿಸಲಾಗದು.
ಬಡತನಕ್ಕೆ ಕಾರಣವೇ ಅಜ್ಞಾನದ ಜೀವನ ಶೈಲಿ. ಯಾರಿಗೆ ಗೊತ್ತು ಯಾರ ದೇಹದಲ್ಲಿ ಯಾವ ಮಹಾತ್ಮರಿದ್ದರೋ? ಮಹಾತ್ಮರನ್ನು ಗುರುತಿಸದ ಶಿಕ್ಷಣ ಕೊಟ್ಟು ಆಳುವುದೇ ಅಸುರಿತನ. ಅಂದರೆ ದೈವಶಕ್ತಿಯಿದ್ದರೆ ಹಣ ಸದ್ಬಳಕೆ.ಅಸುರಿಶಕ್ತಿ ಹೆಚ್ಚಾದರೆ ದುರ್ಭಳಕೆ ಹೆಚ್ಚಾಗಿ ಭೂಮಿಯಲ್ಲಿ ಅಶಾಂತಿ ಸೃಷ್ಟಿಯಾಗುವುದು.ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಮತ್ತು ಲಯದ ಕಾರ್ಯ ನಡೆಯುವುದು. ಒಟ್ಟಿನಲ್ಲಿ ಉತ್ತಮ ಸೃಷ್ಟಿ ಗೆ ಉತ್ತಮ ಜ್ಞಾನದ ಶಿಕ್ಷಣ ಉಚಿತವಾಗಿ ಕೊಟ್ಟರೆ ಉತ್ತಮ ಬದಲಾವಣೆ ಸಾಧ್ಯವಿದೆ. ಇದಕ್ಕೆ ಉತ್ತಮ ಸರ್ಕಾರ ಅಗತ್ಯ.ಇಲ್ಲಿ ಸರ್ಕಾರ ಎಂದರೆ ಪ್ರಜಾ
ಸಹಕಾರ.ನಾವೆಲ್ಲರೂ ಭಾರತೀಯ ಪ್ರಜೆಗಳಾಗಿ ಭಾರತ ಮಾತೆಯ ಮಕ್ಕಳಾಗಿ ಆ ತಾಯಿಯ ಋಣ ತೀರಿಸಲು ವಿದೇಶಿ ಸಾಲ ಬಂಡವಾಳ ವ್ಯವಹಾರಕ್ಕೆ ಕೈ ಜೋಡಿಸಿರೋದು ಧರ್ಮ ವೆ? ಅಧರ್ಮವೆ? ಆತ್ಮಾವಲೋಕನ ಅಗತ್ಯವಿದೆ. ವಿಪರೀತ ಬೆಳೆಯೋ ಮೊದಲು ಎಚ್ಚರವಾದರೆ ಉತ್ತಮ .ಮಹಿಳೆ ಮಕ್ಕಳ ಮೇಲೆ ಉಚಿತ ಸಾಲದ ಹೊರೆ ಹಾಕಿದಷ್ಟೂ ಮನೆಯಿಂದ ಹೊರಗೆ ಹೋಗಿ ದುಡಿದು ತೀರಿಸದೆ ಮನೆಯಲ್ಲಿ ಶಾಂತಿಯಿರದು. ಸಾಲ ಯಾವತ್ತೂ ಸಾಲವೇ.
ಯೋಜನೆಗಳ ಪ್ರಾರಂಭದ ಕಾರ್ಯಕ್ರಮಕ್ಕೆ ಸರ್ಕಾರದ ಕೋಟ್ಯಾಂತರ ಹಣ ಬಳಸಿದರೆ ಅದೂ ಸಾಲವೇ
ಅಗತ್ಯವಿದ್ದವರು ಯೋಜನೆಗಳ ಸದ್ಬಳಕೆ ಮಾಡಿಕೊಂಡರೆ ಉತ್ತಮ. ಅನಗತ್ಯ ವಸ್ತು ಒಡವೆ ಆಹಾರ ವಿಹಾರವೇ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿದೆ.ಆಸೆ ಇರಲಿ ಅತಿಆಸೆ ಬೇಡ. ಒಟ್ಟಿನಲ್ಲಿ ದೇಶದ ಸ್ಥಿತಿ ಸಂಕಟದಲ್ಲಿದೆ. ಲಯವೂ ಮುಂದೆ ನಡೆಯುವ ಸೂಚನೆಯಾಗಿದೆ.ಎಲ್ಲಾ ನಡೆಯುತ್ತಿದೆ ನಡೆಯುತ್ತದೆ.ಮಾನವ ಕಾರಣಮಾತ್ರದವನಷ್ಟೆ. ಒಳಗಿದ್ದು ನಡೆಸೋ ದೇವಾಸುರರ ಶಕ್ತಿಯನ್ನು ಗುರುತಿಸುವ ಜ್ಞಾನಬೇಕಿದೆ. ಪುರಾಣ ಇತಿಹಾಸವೂ ಇದಕ್ಕೆ ಹೊರತಾಗಿಲ್ಲ. ಅಂದು ಸತ್ಯಜ್ಞಾನದ ಜೊತೆಗೆ ಧರ್ಮ ವಿತ್ತು.ಇಂದು ಧರ್ಮದ ಜೊತೆಗೆ ಸತ್ಯವಿಲ್ಲ.
No comments:
Post a Comment