ಶ್ರೀ ಶಂಕರ ಭಗವತ್ಪಾದರು ಮಂಡನಮಿಶ್ರರ ಜೊತೆಗೆ ಜ್ಞಾನಯೋಗ ಕರ್ಮ ಯೋಗಕ್ಕಿಂತ ಶ್ರೇಷ್ಠ ವೆಂಬ ವಾದದಲ್ಲಿ ಗೆದ್ದು ಸರ್ವ ಜ್ಞರಾಗಿದ್ದರು. ಇದು ನಡೆದು ಎಷ್ಟೋ ವರ್ಷದ ನಂತರದಲ್ಲಿ ಈಗ ನಾವು ಕರ್ಮ ಯೋಗವೇ ಜ್ಞಾನಕ್ಕಿಂತ ದೊಡ್ಡದು ಎನ್ನುವ ಹೋರಾಟದಲ್ಲಿದ್ದೇವೆಂದರೆ ಇದರಲ್ಲಿ ಸತ್ಯ ಯಾವುದು ಅಸತ್ಯ ಎಲ್ಲಿದೆ?
ಆತ್ಮ ಜ್ಞಾನವನ್ನು ಆಂತರಿಕ ಶುದ್ದಿಯಿಂದ ಸ್ವತಂತ್ರ ಜೀವನದಿಂದ ಆತ್ಮಾನುಸಾರ ಸತ್ಯದ ಮಾರ್ಗದಲ್ಲಿ ನಡೆದ ಮಹರ್ಷಿಗಳು ಜ್ಞಾನಯೋಗವೇ ಶ್ರೇಷ್ಠ ಎಂದರು.
ಜ್ಞಾನವನ್ನು ಕಾಯಕದ ಮೂಲಕ ಶುದ್ದೀಕರಿಸಿ ಕಷ್ಟಪಟ್ಟು ಸಂಸಾರದಲ್ಲಿದ್ದೇ ಜೀವನ ಸತ್ಯವನರಿತ ಎಷ್ಟೋ ಮಹಾತ್ಮರುಗಳು ಭೌತಿಕದಲ್ಲಿದ್ದೂ ಅಧ್ಯಾತ್ಮ ದ ಪ್ರಕಾರ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಂಡವರೂ ಜ್ಞಾನಯೋಗಿಗಳೆ. ಆದರೆ ಸ್ವತಂತ್ರ ಜೀವನ ನಡೆಸುವಾಗ ಸಂನ್ಯಾಸಧರ್ಮ ಅಗತ್ಯವಿದೆ. ಸಂನ್ಯಾಸ ಸ್ವೀಕಾರ ಮಾಡಿಯೂ ಸ್ವತಂತ್ರ ವಾಗಿರುವ ಜ್ಞಾನವನ್ನು ಹೊರಹಾಕದಿದ್ದರೆ ಅಧರ್ಮ ಕ್ಕೆ ದಾರಿಯಾಗುತ್ತದೆ. ಹಾಗಾಗಿ ಹಿಂದಿನ ಸಂನ್ಯಾಸಿಗಳಲ್ಲಿದ್ದ ಸ್ವತಂತ್ರ ಜ್ಞಾನದ ಜೊತೆಗೆ ಸ್ವತಂತ್ರ ಜೀವನ ಇಂದಿಲ್ಲ.ಇಲ್ಲಿ ಒಂದು ಚೌಕಟ್ಟನ್ನು ಹಾಕಿ ತನ್ನ ಕರ್ಮ ಅಥವಾ ಕರ್ತವ್ಯ ನಿರ್ವಹಿಸಲು ಅವಕಾಶ ವಿದೆ.ಚೌಕಟ್ಟು ಮೀರಿದರೆ ಹೊರಗಿನವರೆ ವಿರೋಧಿಸುವರು.
ಹೀಗಾಗಿ ಬ್ರಹ್ಮಾಂಡವನರಿತರೂ ಅದನ್ನು ತಿಳಿಸುವುದು ಕಷ್ಟ.
ಪ್ರಜಾಪ್ರಭುತ್ವದ ಪ್ರತಿಯೊಂದು ಸಮಸ್ಯೆಗೆ ಕಾರಣವೇ ತಂತ್ರ.
ತತ್ವದ ಪ್ರಕಾರ ಎಲ್ಲಾ ಒಂದೇ. ಆದರೆ ತಂತ್ರದಲ್ಲಿ ಬೇರೆ ಬೇರೆ.
ಚತುವರ್ಣ, ಚತುರ್ವೇದ, ಬ್ರಹ್ಮನ ಚತುರ್ಮುಖ ಒಂದನ್ನು ಒಂದು ನೋಡದಿರುವಾಗ ಇದರಿಂದ ಸೃಷ್ಟಿ ಯಾದ ಅಸಂಖ್ಯಾತ ಧರ್ಮ ಕರ್ಮ , ಜಾತಿ ,ಭಾಷೆಯ ಜನರನ್ನು ಒಂದು ಮಾಡೋದರಲ್ಲಿ ಅರ್ಥ ವಿಲ್ಲ. ನಾವೇನಾದರೂ ಹೊರಗಿನಿಂದ ಓದಿ ಪುರಾಣ ಇತಿಹಾಸ ಇನ್ನಿತರ ಅಧ್ಯಾತ್ಮ ಸತ್ಯ ತಿಳಿಯುತ್ತಿದ್ದರೆ ಒಂದಕ್ಕೊಂದು ಹೊಂದಿಕೊಳ್ಳಲು ಕಷ್ಟ
ಆದರೆ ಸತ್ಯ ಒಂದೇ ಅದು ನಮ್ಮ ಆತ್ಮಸಾಕ್ಷಿ. ಇದರ ಪ್ರಕಾರ ಸತ್ಯಜ್ಞಾನದೆಡೆಗೆ ಒಳಗೆ ನಡೆದಾಗಲೇ ಆಂತರಿಕ ವಾಗಿ ಶುದ್ದಿ ಆಗಿ ಒಳಗಿರುವ ಆ ಮೂಲ ಸತ್ಯ ಸತ್ವ ತತ್ವದ ಅರಿವಾಗುವುದು.ಈ ಕಾರಣಕ್ಕಾಗಿ ಅಂದು ಶ್ರೀ ಶಂಕರಾಚಾರ್ಯರು ಸಂಸಾರದಲ್ಲಿದ್ದು ಮಹಾಜ್ಞಾನ ಪಡೆದ ಮಂಡನಮಿಶ್ರರಿಗೆ ಜ್ಞಾನಯೋಗವೇ ಶ್ರೇಷ್ಠ ವೆಂದು ಅವರನ್ನು ಸಂನ್ಯಾಸ ದೀಕ್ಷೆ ಪಡೆಯುವಂತೆ ಮಾಡಿದ್ದರು. ಆದರೆ ಅಂದಿನ ಕಾಲದ ಸಂನ್ಯಾಸಕ್ಕೂ ಈಗಿನ. ರಾಜಕೀಯದ ಸಂನ್ಯಾಸಕ್ಕೂ ವ್ಯತ್ಯಾಸವಿದ್ದರೂ ಕೆಲವರಷ್ಟೇ ಯಾವುದೇ ರಾಜಕೀಯದ ಸುಳಿಗೆ ಸಿಗದೆ ತಮ್ಮ ಧಾರ್ಮಿಕ ಕಾರ್ಯ ನಡೆಸಿರೋದು. ಹಲವರಿಗೆ ಇದು ಕಷ್ಟವಾಗಿ ರಾಜಕಾರಣಿಗಳ ಹಿಂದೆ ನಡೆದು ಸತ್ಯ ಧರ್ಮ ದ ಸಂಶೋಧನೆ ಹೊರಗೆ ನಡೆಸುವಂತಾಗಿದೆ. ಒಟ್ಟಿನಲ್ಲಿ ಕಣ್ಣಿಗೆ ಕಾಣುವ ವಿಜ್ಞಾನ ಸಂಶೋಧನೆಯು ಕಣ್ಣಿಗೆ ಕಾಣದ ಜ್ಞಾನದ ಸಂಶೋಧನೆಗೆ ವಿರುದ್ದ ನಿಂತು ನಾನೇ ಶ್ರೇಷ್ಠ ನೀನು ಕನಿಷ್ಟವೆಂದರೆ ಕರ್ಮ ವಿಲ್ಲದ ಜ್ಞಾನವಿಲ್ಲ. ಜ್ಞಾನವೇ ಇಲ್ಲದ ಕರ್ಮ ವ್ಯರ್ಥ.
ಅದ್ವೈತ ವಿಲ್ಲದ ದ್ವೈತ ವಿಲ್ಲ. ದ್ವೈತ ವಿಲ್ಲವಾಗಿದ್ದರೆ ಅದ್ವೈತಕ್ಕೆ ಬೆಲೆಯೇ ಇರುತ್ತಿರಲಿಲ್ಲ.
ಭೂಮಿಯಿಲ್ಲದೆ ಮನುಕುಲವಿರುತ್ತಿರಲಿಲ್ಲ ಆಗ ದೇವರಾಗಲಿ ಪರಮಾತ್ಮನಾಗಲಿ ಧರ್ಮ ಸತ್ಯವಾಗಲಿ ತಿಳಿಯುವ ಅಗತ್ಯವಿರುವುದೆ? ಭೂಮಿಗೆ ಬಂದ ಮೇಲೆ ತಿರುಗಿ ಹೋಗಲು ಜ್ಞಾನವಿಜ್ಞಾನ ಅಗತ್ಯ.ವಿಶೇಷವಾದ ಅಧ್ಯಾತ್ಮಜ್ಞಾನವಿಲ್ಲದೆ ಭೌತಿಕ ವಿಜ್ಞಾನ ಬೆಳೆದರೆ ಭೂಮಿಗೇ ಜೀವ ಭಾರ.ಹೀಗಾಗಿ ಭೂ ಕಂಪ ಪ್ರಕೃತಿ ವಿಕೋಪ.ಹೀಗೇ ಹಿಂದಿನ ಯುಗಯುಗದಿಂದಲೂ ನಡೆದು ಬಂದಿರುವ ಮನುಕುಲಕ್ಕೆ ಜ್ಞಾನಯೋಗ ಮುಖ್ಯ. ಜ್ಞಾನದ ನಂತರವೇ ನಿಜವಾದ ಜೀವನದ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಯಾರದ್ದೋ ಜ್ಞಾನವನ್ನು ನನ್ನದೆಂದರೆ ಅಸತ್ಯ.ಹಾಗೆ ಯಾರದ್ದೋ ಹೆಸರಿನಲ್ಲಿ ನನ್ನ ಜೀವನ ನಡೆಸಿದರೂ ಜ್ಞಾನಬರದು. ಹೀಗಾಗಿ ಅವರವರ ಮೂಲ ಧರ್ಮ ಕರ್ಮ ದ ಪ್ರಕಾರ ಒಗ್ಗಟ್ಟಿನಿಂದ ಸತ್ಯವನರಿತು ನಡೆದಾಗಲೇ ತತ್ವದರ್ಶ ನ.ಅದರಲ್ಲಿ ಭಿನ್ನಾಭಿಪ್ರಾಯ, ದ್ವೇಷದ ಬಿಕ್ಕಟ್ಟು ಬೆಳೆದಂತೆಲ್ಲಾ ತಂತ್ರವಾಗಿ ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ. ವ್ಯಕ್ತಿ ಪೂಜೆ,ಮೂರ್ತಿ ಪೂಜೆಯಿಂದ ವ್ಯಕ್ತಿತ್ವ ಜ್ಞಾನೋದಯವಾಗುವಂತಿದ್ದರೆ ಉತ್ತಮ. ಇವುಗಳು ಮಾನವನನ್ನು ಮಹಾತ್ಮನಾಗಿಸುವಂತಿದ್ದರೆ ಧರ್ಮ . ಮಾನವನಿಗೆ ಮಾನವನೇ ಶತ್ರುವಾಗಿಸಿದರೆ ಅಧರ್ಮ. ಹೇಳುವಷ್ಟು ಕೇಳುವಷ್ಟು,ನೋಡುವಷ್ಟು ಸುಲಭವಾಗಿದ್ದರೆ ಜ್ಞಾನ ಎಲ್ಲರೂ ಪಡೆಯಬಹುದು. ಕಷ್ಟಪಟ್ಟು ಗಳಿಸಿದ ಜ್ಞಾನ ಇಂದು ನಮಗೆ ಸುಲಭವಾಗಿ ಓದಿ ತಿಳಿಯಬಹುದು.ಅದರ ಒಳಹೊಕ್ಕಿ ಸತ್ಯದರ್ಶನವಾದರೆ ಅದೇ ನಿಜವಾದ ಜ್ಞಾನ. ಮಕ್ಕಳಲ್ಲಿರುವ ಶುದ್ದಾತ್ಮನಿಗೆ ಸಣ್ಣವಯಸ್ಸಿನಲ್ಲಿಯೇ ಶಿಕ್ಷಣದ ಮೂಲಕ ಜ್ಞಾನ ನೀಡುತ್ತಿದ್ದ ನಮ್ಮ ಋಷಿಗಳ ಕಾಲ ಹಿಂದುಳಿದಿದೆ. ನಮ್ಮ ನಮ್ಮ ಖುಷಿಗಾಗಿ ಹೊರಗಿನ ಶಿಕ್ಷಣ ನೀಡುವ ಕಾಲಬಂದಿದೆ. ಅದರಲ್ಲಿಯೂ ಅಧ್ಯಾತ್ಮ ಶಿಕ್ಷಣ ಅನುಭವರಹಿತವಾಗಿದ್ದರೆ ಭಿನ್ನಾಭಿಪ್ರಾಯದ ವಾದ ವಿವಾದವೇ ಹೆಚ್ಚು ಇದರಿಂದ ಅಂತರ ಬೆಳೆದು ಈ ಅಂತರವೇ ಎಲ್ಲಾ ಸಮಸ್ಯೆಗೆ ಕಾರಣವಾಗುತ್ತಿದೆ. ನಾನೆಂಬುದೇ ಇಲ್ಲ ಎನ್ನುವ ಜ್ಞಾನಕ್ಕೂ ನಾನೇ ಎಲ್ಲಾ ಎನ್ನುವ ಅಜ್ಞಾನಕ್ಕೂ ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ಜೀವನ. ರಾಜಕೀಯದಿಂದ ಧರ್ಮ ರಕ್ಷಣೆಯಾಗದು.
ಭಗವಂತ ನೀಡಿದ ದೇಹದೊಳಗಿರುವ ಆ ಚೇತನಾಶಕ್ತಿ
ಯನರಿತು ನಡೆಯಲು ರಾಜಕೀಯದಿಂದ ಕಷ್ಟ.
ಎಲ್ಲಾ ಧಾರ್ಮಿಕ ಕ್ಷೇತ್ರ ಒಂದಾಗಿಸಲು ರಾಜಕೀಯದಿಂದ ಅಸಾಧ್ಯವಾದಾಗ ಒಂದೇ ದೇಶದಲ್ಲಿ ಏಕರೀತಿ ಶಿಕ್ಷಣ, ಏಕತೆ,ಐಕ್ಯತೆ,ಸಮಾನತೆಯ ಮಂತ್ರ ತಂತ್ರ ಯಂತ್ರದ ಬಳಕೆ ಭೌತಿಕದಲ್ಲಿ ಜ್ಞಾನವೆನಿಸಿದರೂ ಅಧ್ಯಾತ್ಮದ ಪ್ರಕಾರ ಇದರಲ್ಲಿ ರಾಜಯೋಗವಿರಬೇಕಿದೆ ಅಂದರೆ ನಾವು ಬದಲಾಗಬೇಕಿದೆ. ಬೇರೆಯವರನ್ನು ಬದಲಾಯಿಸೋ ಮೊದಲು ನಾವು ಸತ್ಯ ತಿಳಿಯುವುದು ಅಗತ್ಯವಿದೆ. ಇಲ್ಲವಾದರೆ ಅಸತ್ಯದ ರಾಜಕೀಯವಾಗುತ್ತದೆ.
No comments:
Post a Comment