ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, June 15, 2023

ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು

ಗಂಡಹೆಂಡಿರ‌ಜಗಳದಲ್ಲಿ ಕೂಸು ಬಡವಾಯಿತು. ದೇಶದ ಎರಡು ಪ್ರಮುಖ ಪಕ್ಷದ ದ್ವೇಷಕ್ಕೆ  ದೇಶವೇ ಬಡತನಕ್ಕೆ ಬರುತ್ತಿದೆ ಎಂದರೆ ಇಲ್ಲಿ ಶ್ರೀಮಂತ ರು ಯಾರು?  ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿಯ ಸೋಲಿಗೆ‌ ಮತಬೇಟೆ ನಡೆಯಿತು. ನಂತರದ‌ ಉಚಿತ ಭಾಗ್ಯದ ಹೆಸರಿನಲ್ಲಿ  ಜನಸಾಮಾನ್ಯ ಮಹಿಳೆಯರನ್ನೂ ಮನೆಯಿಂದ ಹೊರಗೆ ಬರುವಂತೆ ಮಾಡಿ  ಕೋಟ್ಯಾಂತರ ರೂಗಳ ಉಚಿತ ಫಲಾನುಭವಿಗಳಿಂದ  ರಾಜ್ಯಕ್ಕಾಗುವ ಕಷ್ಟ ನಷ್ಟವನ್ನು ತುಂಬಲು  ರಾಜಕೀಯದಿಂದ ಅಸಾಧ್ಯ.
ದ್ವೇಷದಿಂದ ದೇಶಕಟ್ಟಿದವರಿಲ್ಲ.ಧರ್ಮದಿಂದ  ದೇಶ ಉಳಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ವ್ಯವಹಾರಕ್ಕೆ  ದೇಶವನ್ನು ದೇಶವಾಸಿಗಳನ್ನು ಬಳಸುತ್ತಾ  ಸ್ಮಾರ್ಟ್ ಯೋಜನೆಗಳು ಬೆಳೆದಿರುವಾಗ  ಅದರ ಹಿಂದಿನ ಸಾಲ ಗುರುತಿಸುವ ಜ್ಞಾನವಿಲ್ಲವಾದರೆ  ಆತ್ಮದುರ್ಭಲ ಭಾರತ. ಹಿಂದೂ ರಾಷ್ಟ್ರ ವಾಗಲು ಹೊರಗಿರುವ ಹಿಂದೂಗಳನ್ನು  ಕರೆತರಬೇಕಿತ್ತು ಅವರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ದುಡಿಯಲು ಉದ್ಯೋಗ ನಮ್ಮಲ್ಲೇ ಕೊಡದೆ ಬದಲಾಗಿ ಪರಧರ್ಮದವರನ್ನು ಒಳಗೆಳೆದುಕೊಂಡು ಬಂಡವಾಳ,ಸಾಲಕ್ಕೆ ಕೈಚಾಚಿದರೆ ಇದು ಮುಂದಿನ ಪೀಳಿಗೆಯವರೂ  ಸಾಲ ತೀರಿಸಲಾಗದು. 
ವಿವೇಕಾನಂದರು ಯುವಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೊದಲು ಅವರಲ್ಲಿದ್ದ  ಜ್ಞಾನವನ್ನು  ಬೆಳೆಸುವ  ಆತ್ಮಜ್ಞಾನಿಗಳಾಗಿದ್ದರು. ಭೌತಿಕದೆಡೆಗೆ  ನಡೆದ ಭಾರತ ಭೂತಕಾಲದ ಧರ್ಮ ಬಿಟ್ಟು ವಾಸ್ತವದ ಸ್ಥಿತಿಯರಿಯದೆ ಭವಿಷ್ಯಕ್ಕಾಗಿ ಸಾಲ ಮಾಡಿದರೆ  ಆತ್ಮನಿರ್ಭರ ಆಗದು. ಒಟ್ಟಿನಲ್ಲಿ ಭಾರತ ವಿಶ್ವಗುರುವಾಗಲು ಅಧ್ಯಾತ್ಮ  ಸತ್ಯವರಿಯಬೇಕಿತ್ತು.ತಾವೇ ಸಾಲದಲ್ಲಿರುವಾಗ ಬೇರೆಯವರ ಸಾಲ ತೀರಿಸಲಾಗುವುದೆ? ಕೊನೆಪಕ್ಷ ಬಡವರು ಬದುಕಲು ಬಿಟ್ಟರೆ ಉತ್ತಮ. ಸ್ತ್ರೀ ಯರ ರಕ್ಷಣೆ ಮನೆಯೊಳಗೆ ಆದರೆ ಅತ್ಯುತ್ತಮ. ಸ್ತ್ರೀ ಶಕ್ತಿಯನ್ನು ವಿಗ್ರಹದಲ್ಲಿ ಪೂಜಿಸುವವರೆ ಸ್ತ್ರೀ ಯರನ್ನು ದ್ವೇಷ‌ಮಾಡುತ್ತಾ ಹಿಂದೆ ತಳ್ಳಿದರೆ ಅಧರ್ಮ. ಮಕ್ಕಳ ರಕ್ಷಣೆಗೆ ಆತ್ಮಜ್ಞಾನದ ಶಿಕ್ಷಣ ನೀಡಿದರೆ  ಮುಂದೆ ವೈಜ್ಞಾನಿಕ ಜಗತ್ತನ್ನು ಹೇಗೆ ನಡೆಸಿದರೆ  ಜೀವನ ಸುಖವಾಗಿರುವುದೆಂಬ ಅರಿವಿರುತ್ತದೆ. ಅಜ್ಞಾನದಿಂದ ಸಾಲ ಮಾಡುತ್ತಾ ಉಚಿತವಾಗಿ ಸಾಲದ ಹಣವನ್ನು ಹಂಚಿಕೊಂಡರೆ  ದುಡಿಯುವವರು ಯಾರು?
ಕಾಯಕವೇ ಕೈಲಾಸವೆಂದವರನ್ನು ಪ್ರತಿಮೆ ಮಾಡಿ ನಿಲ್ಲಿಸಿ  ಅದರಲ್ಲಿ ವ್ಯವಹಾರ ನಡೆಸಿ ಹಣಸಂಪಾದನೆ ಮಾಡಿದರೆ ಜ್ಞಾನ ಬರದು.
ಮಹಾತ್ಮರನ್ನು ರಾಜಕೀಯಕ್ಕೆ ಬಳಸಿ  ಅಧರ್ಮ ಅನ್ಯಾಯದಿಂದ ಜನರನ್ನು ಆಳಿದರೆ  ಆತ್ಮನಿರ್ಭರವಾಗದು.
ಶಿಕ್ಷಣದೊಳಗೇ ಭ್ರಷ್ಟಾಚಾರ ತುಂಬಿಕೊಂಡು  ಮಕ್ಕಳ ಮೇಲೆ ಸಾಲದ ಹೊರೆಹಾಕಿ ಹೊರಗಿನ ವಿಚಾರ ತುಂಬಿದಷ್ಟೂ ಸ್ವೇಚ್ಚಾಚಾರದೆಡೆಗೆ  ಮಕ್ಕಳು ನಡೆಯುವರು.
ಧಾರ್ಮಿಕ ಕ್ಷೇತ್ರವೇ ರಾಜಕೀಯದ ಕೆಳಗೆ ನಿಂತು ಬೇಡುವುದು ಆತ್ಮದುರ್ಭಲತೆಯಾಗಿದೆ.
ದೇಶದ ಸಂಪತ್ತಿಗೇನೂ ಕೊರತೆಯಿಲ್ಲವಾದರೂ  ಆ ಸಂಪತ್ತನ್ನು ದುರ್ಭಳಕೆ ಮಾಡಿಕೊಂಡವರು ಸಿರಿವಂತರಾದರು..ಆದರೂ ದೇಶದ ಸಾಲ ತೀರಿಸಲು ಮುಂದೆ ಬರದೆ ವಿದೇಶದವರೆಗೆ  ಹೊರಟಿದ್ದಾರೆಂದರೆ ಇವರಲ್ಲಿ ದೇಶಭಕ್ತಿಯಿಲ್ಲ.ಇನ್ನು ದೇವರ ಹೆಸರಿನಲ್ಲಿ ನಡೆಸೋ ವ್ಯವಹಾರವೇ ಭ್ರಷ್ಟಾಚಾರದ ಹಣವಾಗಿದ್ದರೆ ದೈವತ್ವ ಎಲ್ಲಿದೆ?
ಕೆಲವರಿಗೆ ಎಚ್ಚರವಾಗಿದ್ದರೂ  ಸರ್ಕಾರಕ್ಕೆ ತಿಳಿಸುವ ಅಧಿಕಾರವಿಲ್ಲ.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲುಕಡ್ಡಿ ಅಲ್ಲಾಡದು ಎನ್ನುವುದಾದರೆ ಈಗಿನ ಹೋರಾಟ ಹಾರಾಡ ಮಾರಾಟದ ಹಿಂದೆ ಇರುವ ಸ್ವಾರ್ಥ ಅಹಂಕಾರದ ಅಜ್ಞಾನ  ಹೋಗದು.ಶಿಕ್ಷಣ ಬದಲಾವಣೆಗಾಗಿ ಸಾಕಷ್ಟು ವಾದ ವಿವಾದವಾಗುತ್ತದೆ.ಅದರೆ ಮನೆಯೊಳಗೆ ಇರುವ ಮಕ್ಕಳಿಗೆ ಸರಿಯಾದ ಸದ್ವಿಚಾರ ಹೇಳಲು ಸಮಯವಿಲ್ಲದ ಪೋಷಕರು ಹಣಕೊಟ್ಟು  ಅಜ್ಞಾನದೆಡೆಗೆ ನಡೆಸಿದರೆ ಇದು ಸರ್ಕಾರದ ತಪ್ಪಲ್ಲ.ನಮ್ಮದೇ ಸಹಕಾರದ ತಪ್ಪು ಇದನ್ನು ನಾವೇ ಸರಿಪಡಿಸದಿದ್ದರೆ  ಫಲವನ್ನು ಅನುಭವಿಸಬೇಕಿದೆ.
ಕೆಟ್ಟದ್ದನ್ನು ಹೇಳೋದು,ನೋಡೋದು,ಮಾಡೋದು,ಮಾತನಾಡೋದರಿಂದ ಅದೇ ಸಮಾಜದಲ್ಲಿ ಬೆಳೆಯುತ್ತದೆ ಎನ್ನುವ ಸಾಮಾನ್ಯ ಜ್ಞಾನವಿದ್ದರೆ ಸಾತ್ವಿಕ ವಿಚಾರದಿಂದ ಸರಳ ಜೀವನ ನಡೆಸಿ ತನ್ನ ಹಿಂದಿನ ಸಾಲದ ಜೊತೆಗೆ ಇಂದಿನ ಸಾಲವೂ ಮನ್ನಾ ಆಗುತ್ತದೆ.ಸರ್ಕಾರ ಕೊಡುವ ಉಚಿತ ಸಾಲ ತೀರಿಸಲು ಪರಮಾತ್ಮನ  ಕಡೆಗೆ ನಡೆಯಬೇಕೇ ಹೊರತು ಪರದೇಶದ ಕಡೆಗೆ ನಡೆದರೆ ನಾವು ವಿದೇಶದವರೆ. ದೇಶದಿಂದ ಏನು ಸಿಕ್ಕಿದೆ ಎನ್ನುವ ಮಂದಿಗೆ  ಸಾಲ ಕೊಟ್ಟರೆ  ದೇಶಭಕ್ತರು ಬೆಳೆಯೋದಿಲ್ಲ. ಇರಲಿ ಅವಶ್ಯಕತೆ ಇದ್ದವರಿಗೆ ಬಳಸಿ ತಿರುಗಿ ಕೊಡುವಂತಿದ್ದರೆ ಭವಿಷ್ಯ ಉತ್ತಮವಾಗಿರುವುದು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನು ಆಸ್ತಿ ಮಾಡಿದರೆ ಉತ್ತಮ.
ಇಲ್ಲಿ ಯಾರೋ ಒಬ್ಬರಿಂದ ಸಾಲ ಬೆಳೆದಿಲ್ಲ.ಪ್ರತಿಯೊಬ್ಬರ  ವೈಭೋಗದ ಜೀವನದಿಂದ ಸಾಲ ಬೆಳೆದಿದೆ. ಒಂದು ಮನೆ ಕಟ್ಟಲು  ಸಾಲ ಮಾಡಿದರೂ ತೀರಿಸುವ ತನಕ ಆ ಮನೆ ನಮ್ಮದಾಗದು. ಹೀಗಿರುವಾಗ ಅನಾವಶ್ಯಕವಾಗಿ ಸಾಲ ಮಾಡಿ‌ಹಲವು ಮನೆಯ ಒಡೆಯನಾದರೂ ಅದೂ ದೇಶದ ಸಾಲವೇ. ಹೀಗೆ ಪ್ರಜೆಗಳು ಚಿಂತನೆ ನಡೆಸಿದರೆ ಸಮಸ್ಯೆಗಳಿಗೆ ಸಾಲವೇ‌ ಮೂಲ ಕಾರಣ. ಪ್ರಜೆಗಳ ಹಣದಲ್ಲಿ ಸತ್ಕರ್ಮದ ಮಾರ್ಗದಲ್ಲಿ  ನಡೆದವರು ವಿರಳ. ಹಣವನ್ನು ದುರ್ಭಳಕೆ ಮಾಡಿಕೊಂಡು ಆಳಿದವರೆ ಹೆಚ್ಚಾಗಿದ್ದಾರೆಂದರೆ‌ ಇಲ್ಲಿ ಪ್ರಗತಿ ಕಣ್ಣಿಗೆ ಕಾಣುವ ವಸ್ತು ಒಡವೆ ವೈಭೋಗದೆಡೆಗೆ ನಡೆದಿದೆ. ಭಾರತದ ಸ್ಥಿತಿ  ಅಧ್ಯಾತ್ಮದ ಪ್ರಕಾರ ಸಂಕಟದಲ್ಲಿದೆ.
ಯಾರೋ ಯಾರನ್ನೋ ಆಳೋದಕ್ಕೆ ಯಾರದ್ದೋ ಹಣ‌ ಪಡೆದು  ಸಾಲ ಮಾಡುತ್ತಾ  ಹೋಗುವುದು ಅಜ್ಞಾನವಷ್ಟೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ  ಮಕ್ಕಳು ಮಹಿಳೆಯರು ಸುರಕ್ಷಿತವಾಗಿ ಮನೆಯೊಳಗಿರಲು ಕಷ್ಟವಿದೆ. ಸಾಲವಿದ್ದರೆ ನೆಮ್ಮದಿಯಿರದು,ನೆಮ್ಮದಿಯಿಲ್ಲದ ಮನೆಯಲ್ಲಿ  ಸ್ತ್ರೀಗೆ ಶಾಂತಿ ಸಿಗದು. ಶಾಂತಿಗಾಗಿ ಅಧ್ಯಾತ್ಮದ ಕಡೆಗೆ ಹೋದರೆ ಉತ್ತಮ.ಅದು ಬಿಟ್ಟು ಹೊರಗೆ ಬಂದರೆ ಕುಟುಂಬ ವ್ಯವಸ್ಥೆ ಹಾಳಾಗುತ್ತದೆ.ಉತ್ತಮ ವಿದ್ಯಾಭ್ಯಾಸವಿದ್ದವರಿಗೆ ಉತ್ತಮ ಉದ್ಯೋಗ ಸಿಗಬಹುದು. ಆದರೆ ಮನೆಯೊಳಗೆ ಹೊರಗೆ ದುಡಿಯುವುದರಿಂದ ಅನಾರೋಗ್ಯ ಹೆಚ್ಚುವುದು. ಆರೋಗ್ಯ ರಕ್ಷಣೆಗಾಗಿ ಯೋಗದೆಡೆಗೆ ಬರಬೇಕಿದೆ. ಎಲ್ಲರಿಗೂ  ಸಮಯವಿರದ ಕಾರಣ. ವೈದ್ಯರಿಗೆ  ಒಳ್ಳೆಯ  ಅವಕಾಶ. ವೈದ್ಯನಿಗೆ ರೋಗಿಗಳ ಸಂಖ್ಯೆ ಬೆಳೆದರೆ ಸಂತೋಷ. ಇದರಲ್ಲಿ ಧರ್ಮ ರಕ್ಷಣೆಯಾಗುವುದೆ?
ದೇಶದ  ಹಣ ಪ್ರಜೆಗಳ ಋಣವಾಗಿದ್ದರೆ ತೀರಿಸಬಹುದು ಆದರೆ ವಿದೇಶಿಗಳ ಋಣವಾಗಿದ್ದರೆ ಅವರ ಧರ್ಮ ಕರ್ಮ ಕ್ಕೆ ತಕ್ಕಂತೆ  ಜನ ಕುಣಿಯಲೇಬೇಕು. ಮನರಂಜನ ಮಾಧ್ಯಮಗಳು  ಒಂದೊಂದು ಕಾರ್ಯಕ್ರಮಕ್ಕೆ ಬಳಸುವ ಕೋಟ್ಯಾಂತರ ಹಣವು ಯಾರದ್ದು?ಇದರಲ್ಲಿ ಬರುವ ಸಂದೇಶದಿಂದ ಏನಾದರೂ  ನೈತಿಕವಾಗಿ ಧಾರ್ಮಿಕವಾಗಿ  ಬದಲಾವಣೆ ಆಗುತ್ತಿದೆಯೆ? ಆಗಿಲ್ಲವೆಂದರೆ ಇದರ ಉದ್ದೇಶ ಏನು? ಇಂತಹ ಪ್ರಶ್ನೆ ಹಾಕದವರು ರಾಜಕಾರಣಿಗಳ ತಪ್ಪು ಎತ್ತಿ ಹಿಡಿದು ಆಟವಾಡುತ್ತಿರುವುದು ದುರಂತ ವಷ್ಟೆ.
ಜನರ ಬೇಡಿಕೆಗಳನ್ನು ಪೂರೈಸಲು ಪಕ್ಷಗಳು ಸಾಲ ಮಾಡುತ್ತಿವೆ. ಬೇಡಿಕೆಯೇ ಅಜ್ಞಾನದಲ್ಲಿದ್ದರೆ ಸಾಲ ತೀರಿಸಲು ಕಷ್ಟ. ಉತ್ತಮವಾದ ಶಿಕ್ಷಣ ನೀಡದೆ  ಈ ರೀತಿಯಲ್ಲಿ ಜನರ ಭೂಮಿ  ಬಳಸಿ ರೈತರನ್ನು ದಾರಿತಪ್ಪಿಸಿ ಸಾಲ ಸೌಲಭ್ಯಗಳನ್ನು ಕೊಟ್ಟರೆ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದೆ ಜೀವ ಸಾಲದ ಜೊತೆಗೆ ಹೋಗುತ್ತದೆ. ಸಾಲ ತೀರಿಸದೆ ಮುಕ್ತಿ ಯಿಲ್ಲ ಎಂದರೆ ಹೋದ ಜೀವ ದ ಸಾಲ ತೀರಿಸಲು  ಕಷ್ಟಪಟ್ಟು ಧರ್ಮ ಮಾರ್ಗ ಹಿಡಿಯಲೇಬೇಕು. ಜನ್ಮ ಜನ್ಮಾಂತರದ ಈ ಋಣ ತೀರಿಸಲು ಬಂದಿರುವ ಮಾನವನಿಗೆ ಜ್ಞಾನವೇ ಆಸ್ತಿ.
ಎಷ್ಟು ಉಚಿತಪಡೆದರೂ ಸಾಲ ಖಚಿತ.  ಕಷ್ಟಪಟ್ಟು ದುಡಿದು ಜೀವಿಸುವವರೆ ಮಹಾತ್ಮರು. ಪರಮಾತ್ಮನ ಋಣ ತೀರಿಸಲು ಅವರಿಂದ ಸಾಧ್ಯ. ಬಡತನವು ಜ್ಞಾನದಿಂದ ಕಡಿಮೆಮಾಡಲು ಉತ್ತಮ ಜ್ಞಾನದ ಶಿಕ್ಷಣ ಕೊಡಬೇಕಿದೆ. ಇದೂ ಉಚಿತವಾಗಿದ್ದರೂ  ಅದನ್ನು ತೀರಿಸುವ  ಬಗೆ ತಿಳಿಸುವ‌
ಶಿಕ್ಷಣವಿದ್ದರೆ ಆತ್ಮನಿರ್ಭರ ಭಾರತವಾಗುವುದು.
ವಿದೇಶಿಗಳನ್ನು ಮನಮೆಚ್ಚಿಸುವ  ಬದಲು ನಮ್ಮವರ ಮನೆ ಮನ ಉಳಿಸುವ ಕೆಲಸ ನಾವು ಮಾಡುವುದೇ ಧರ್ಮ.
ಪರರೆಲ್ಲಾ ನಮ್ಮವರಾದರೆ ಸರಿ ಆದರೆ ನಮ್ಮವರನ್ನೇ ಪರಕೀಯರ ವಶಕ್ಕೆ ಬಿಟ್ಟರೆ ಅಧರ್ಮ ವಾಗುತ್ತದೆ. ಅಧರ್ಮದಿಂದ ಸಾಲ ತೀರಿಸಲಾಗದು. ರಾಜಕೀಯದಿಂದ ಸಾಲ ಬೆಳೆಯುತ್ತದೆ. ರಾಜಯೋಗದಿಂದ ಸಾಲ ಕಳೆಯುತ್ತದೆ.
ಇಬ್ಬರ ನಡುವಿನ ದ್ವೇಷದ ರಾಜಕೀಯಕ್ಕೆ ದೇಶವೇ ಸಾಲಕ್ಕೆ ಬಲಿಯಾಗುತ್ತಿದ್ದರೂ ಆತ್ಮನಿರ್ಭರ ಭಾರತದ ಕನಸನ್ನು ಕಾಣುತ್ತಾ ಒಂದು ಪಕ್ಷವಹಿಸಿದರೆ  ನಮ್ಮದೇ ಆತ್ಮದುರ್ಭಲ ವಾಗಿರುತ್ತದೆ. 
ಸರ್ಕಾರದ ಒಂದು ಉಚಿತ ಯೋಜನೆಯೇ  ರಾಜ್ಯವನ್ನು ದಿವಾಳಿಯತ್ತ ನಡೆಸಿರುವಾಗ ಎರಡನೇ ಉಚಿತ ಭಾಗ್ಯ ಬಂದರೆ  ಗತಿಯೇನು? "
ಹೆಂಡತಿಯೊಬ್ಬಳು ಮನರಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಇದರರ್ಥ ಗೃಹಿಣಿಯರಿಗೆ ಜ್ಞಾನ ಸಂಪತ್ತಿದ್ದರೆ ಕೋಟಿ ರುಪಾಯಿ ಸಾಲ ತೀರಿಸಬಹುದೆಂದು.ಮನೆ ಬಿಟ್ಟು ಹೊರಗೆ ಹೋದಷ್ಟೂ ಸಾಲ ತೀರದು.ಅದೂ ಉಚಿತ ಭಾಗ್ಯ ಸಾಲವಾಗಿರುತ್ತದೆ. ಅಧ್ಯಾತ್ಮ ಸತ್ಯವರಿಯದ ರಾಜಕೀಯದ ಬೆಳವಣಿಗೆಯು  ದೇಶವನ್ನು ಲೂಟಿ ಮಾಡಿದರೂ ಕೇಳದ ಪ್ರಜೆಗಳ ಅಜ್ಞಾನದ ಸಹಕಾರದಿಂದ ಬೆಳೆದಿರುವಾಗ  ಬದಲಾವಣೆ ಪ್ರಜೆಗಳಿಂದಲೇ ಆಗಬೇಕಿದೆ. ಅಧ್ಯಾತ್ಮ ಸತ್ಯ ಬಿಟ್ಟು ಭೌತಿಕ ಮಿಥ್ಯ  ಬೆಳೆದರೆ  ಅಧೋಗತಿ. 

No comments:

Post a Comment