ಯಾಕೆ ಹೀಗಾಯಿತು? ಒಂದು ಪಕ್ಷದ ದುರಾಡಳಿತವನ್ನು ವಿರೋಧಿಸಿ ಇನ್ನೊಂದು ಪಕ್ಷ ಬಂದು ಉತ್ತಮ ಆಡಳಿತ ನಡೆಸುತ್ತೇವೆಂದು ಮುಂದೆ ನಡೆದರೂ ಜನರೆ ತಿರುಗಿ ಹಿಂದಿನ ಆಡಳಿತವೇ ಉತ್ತಮ ಎನ್ನುವ ಸ್ಥಿತಿಗೆ ಬಂದಿರೋದರ ಹಿಂದೆ ಸ್ವಾತಂತ್ರ್ಯ ವಿದೆಯೆ? ಪರತಂತ್ರವಿದೆಯೆ? ತಂತ್ರದಿಂದಲೇ ಅಧಿಕಾರ ಪಡೆದು ರಾಜಕೀಯ ನಡೆಸೋದು.ಯಾರೂ ಸ್ವತಂತ್ರ ವಾಗಿದ್ದು ತತ್ವದಿಂದ ರಾಜಕೀಯ ನಡೆಸಲಾಗದು.ಕಾರಣ ನಮ್ಮೊಳಗೇ ತತ್ವಜ್ಞಾನವೇ ಇಲ್ಲ.ಹೊರಗಿನ ತಂತ್ರಕ್ಕೆ ಬೆಲೆಕೊಟ್ಟು ಜೀವನ ನಡೆಸುವಾಗ ಸ್ವತಂತ್ರ ಜ್ಞಾನ ಎಲ್ಲಿರುವುದು?
ಪ್ರಜಾಪ್ರಭುತ್ವ ದೇಶದಲ್ಲಿ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ರಾಜಕಾರಣಿಗಳಿಗಷ್ಟೆ.ಇವರಿಗಿಂತ ಹೆಚ್ಚು ಸ್ವಾತಂತ್ರ್ಯ ಮಧ್ಯವರ್ತಿಗಳು ಮಾಧ್ಯಮಗಳು ಪಡೆದಿವೆ. ಸತ್ಯವನ್ನು ತಿರುಚಿ ಹರಡಿದರೆ ಅಸತ್ಯವೇ ಹರಡೋದು.ಹೀಗಾಗಿ ಯಾವ ಸರ್ಕಾರ ಬಂದರೂ ತಮ್ಮ ಪಾಲನ್ನು ಮಾತ್ರ ಬಿಡದೆ ಪಡೆಯುವ ಎಷ್ಟೋ ಮಧ್ಯವರ್ತಿಗಳಿಗೆ ಹಿಂದಿನ ಸರ್ಕಾರ ಕಡಿವಾಣ ಹಾಕಿ ಭ್ರಷ್ಟಾಚಾರ ತಡೆಯೋ ಪ್ರಯತ್ನನಡೆಸಿ ಸೋತಿದೆ ಎಂದರೆ ಜನರಲ್ಲಿರುವ ಅಜ್ಞಾನ ಕಾರಣ.ನಮ್ಮದೇಶವನ್ನೇ ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶ ಸಾಲ ಮಾಡುತ್ತಾ ಜನರಿಗೆ ಉಚಿತ ಹಂಚಿಕೊಂಡರೆ
ಅಧಿಕಾರವೇನೂ ಸಿಗಬಹುದು. ಆದರೆ ಇದರಿಂದ ದೇಶದ ಜೊತೆಗೆ ಪ್ರಜೆಗಳ ಸಾಲ ಮಿತಿಮೀರಿದರೆ ಸಾಲವೇ ಶೂಲ.
ಕೋಟ್ಯಾಂತರ ರೂಗಳಿಂದ ನಡೆಸೋ ವೈಭೋಗದ ಕಾರ್ಯಕ್ರಮಕ್ಕೆ ಕಡಿವಾಣವಿಲ್ಲ. ಜನರ ಹೊಟ್ಟೆ ಹಸಿವಿಗೆ ಬರಗಾಲವಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗೋ ಎಷ್ಟೋ ಕಾರ್ಯಕ್ರಮಕ್ಕೆ ಸುರಿಯುವ ಕೋಟ್ಯಾಂತರ ಹಣವು ಯಾರ ಕೊಡುಗೆ? ಸರ್ಕಾರ ಕೊಡುತ್ತಿಲ್ಲವೆಂದರೆ ಜನರ ಹಣವೇ ಮನರಂಜನೆಗೆ ಬಳಕೆಯಾಗಿದೆ. ಇದರಿಂದಾಗಿ ಜ್ಞಾನ ಬಂದರೆ ಉತ್ತಮ ಸಮಾಜ ಅಜ್ಞಾನ ಬೆಳೆದರೆ ಸಮಾಜನಿರ್ನಾಮ.
ಒಟ್ಟಿನಲ್ಲಿ ರಾಜಕೀಯ ಬೆಳೆದಿರೋದು ಮಧ್ಯವರ್ತಿಗಳ ಕುತಂತ್ರದಿಂದ ಇದರಿಂದಾಗಿ ದೇಶದ ಜನತೆಯ ಆಂತರಿಕ ಶಕ್ತಿ ವೃದ್ದಿಯಾದರೆ ಆತ್ಮನಿರ್ಭರ. ಭೌತಿಕಾಸಕ್ತಿ ಬೆಳೆದರೆ ಆತ್ಮದುರ್ಭಲ ಭಾರತ. ಸರ್ಕಾರ ಜನಬಲ ಹಣಬಲವಿಲ್ಲದೆ ನಡೆದಿಲ್ಲವಾದರೆ ಎಲ್ಲಾ ಬದಲಾವಣೆಗೆ ಕಾರಣವೇ ನಮ್ಮ ಸಹಕಾರವಷ್ಟೆ.
ಯಾವುದಕ್ಕೆ ಸಹಕರಿಸಬೇಕೆಂಬುದೇ ತಿಳಿಯದವರು ಸರ್ಕಾರ ಸರಿಯಿಲ್ಲವೆಂದು ಜಾರಿಕೊಂಡರೂ ಸತ್ಯ ಒಂದೇ ನಮ್ಮ ಸಹಕಾರ ಸರಿಯಿಲ್ಲ. ನಮ್ಮಲ್ಲಿ ಸತ್ಯವಿಲ್ಲದೆ ಸತ್ಯ ಕಾಣದು.ನಮ್ಮಲ್ಲಿ ಧರ್ಮ ವಿಲ್ಲದೆ ಧರ್ಮ ಬೆಳೆಯದು.
ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ತತ್ವಜ್ಞಾನ ಅರ್ಥ ವಾಗದು.
ದೋಷ ಒಳಗಿರುವಾಗ ಹೊರಗೆ ತೇಪೆ ಹಾಕಿದರೆ ದೋಷ ಹೋಗದು. ರಾಜಪ್ರಭುತ್ವದ ರಾಜಕೀಯ ಧರ್ಮ ಪ್ರಜಾಪ್ರಭುತ್ವ ದ ಪ್ರಜಾಧರ್ಮ ದಲ್ಲಿರಲು ಪ್ರಜೆಗಳೊಳಗೆ ಧಾರ್ಮಿಕ ಪ್ರಜ್ಞೆ ಇರಬೇಕಿತ್ತು. ಇರೋದು ದೇಶದೊಳಗೆ ನೋಡೋದು ವಿದೇಶವನ್ನು. ಹೀಗಾಗಿ ಯಾವ ಸರ್ಕಾರ ಸರಿ ತಪ್ಪು ಎನ್ನುವ ಬದಲಾಗಿ ನಮ್ಮ ಸಹಕಾರದಲ್ಲಿರುವ ದೋಷ ಸರಿಪಡಿಸಿಕೊಂಡರೆ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆ. ಅಮೃತವನ್ನು ಬಿಟ್ಟು ವಿಷದೆಡೆಗೆ ಹೋದರೆ ಸಾವು ನಿಶ್ಚಿತ. ಇದನ್ನು ಯಾವ ಸರ್ಕಾರ ತಡೆಯಲಾಗದು.
ಹಾಗಂತ ರಾಜಕೀಯ ಬಿಟ್ಟು ಬದುಕಲಾಗದು.ಅದರಲ್ಲಿ ಉತ್ತಮವಾದದ್ದು ಹುಡುಕಿದರೆ ಎಲ್ಲಾ ಸರಿಯಾಗಿ ಅರ್ಥ ವಾಗಬಹುದು. ಭ್ರಷ್ಟಾಚಾರ ಒಳಗಿದೆ ಹೊರಗೆ ಹೋರಾಟ ಹಾರಾಟ ಮಾರಾಟ ನಡೆದಿದೆ.ಇದಕ್ಕೆ ನಮ್ಮದೇ ಸಹಕಾರವಿದೆ.ಇದೇ ರೀತಿಯಲ್ಲಿ ಶಿಷ್ಟಾಚಾರ ಕ್ಕೆ ಸಹಕಾರ ನೀಡಿದರೆ ಪರಿಹಾರ ಇದ್ದಲ್ಲೇ ಸಿಗಬಹುದು.ಪ್ರಯತ್ನ ನಮ್ಮದು ಫಲ ಭಗವಂತನದು.ಭಗವಂತನೊಳಗೇ ಇರುವ ಭ್ರಷ್ಟರು ಶಿಷ್ಟರ ನಡುವಿನ ಹೋರಾಟ ನಿರಂತರವಾಗಿ ನಡೆದರೂ ಯಾರ ಬಲ ಹೆಚ್ಚಿರುವುದೋ ಅವರು ಗೆಲ್ಲುವರು. ಇದು ಪ್ರಕೃತಿ ನಿಯಮ. ಪ್ರಕೃತಿಯನ್ನು ವಿಕೃತವಾಗಿ ಬಳಸಿದರೆ ಪ್ರಕೃತಿವಿಕೋಪವೇ ಹೆಚ್ಚಾಗುವುದು.
ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ದೇಶ ನಡೆಸಿದರೆ ದೇಶಕ್ಕೆ ನಷ್ಟ.
ಅಧ್ಯಾತ್ಮ ಸಾಧನೆ ತೋರುಗಾಣಿಕೆಯಾಗಬಾರದು.ಭೌತಿಕ ಸಾಧನೆ ತೋರುಗಾಣಿಕೆಯಾಗಿದೆ. ಮಕ್ಕಳು ಮಹಿಳೆಯರು ಮನರಂಜನೆಯ ಸಾಧನವಲ್ಲ. ಸತ್ಯಜ್ಞಾನ ಒಳಗಿದೆ ಮಿಥ್ಯಜ್ಞಾನ ಹೊರಗೆ ಬೆಳೆದಿದೆ. ಒಳಗಿನ ಸಂಶೋಧನೆಯಾಗದೆ ಹೊರಗಿನ ಸಂಶೋಧನೆಗೆ ಸಹಕಾರ ಹೆಚ್ಚಾಗಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
No comments:
Post a Comment