ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, June 5, 2023

ಕಣ್ಣಿಗೆ ಕಾಣೋದೆಲ್ಲಾ ಬಡತನವಲ್ಲ.

ನಮ್ಮ ದೇಶಕ್ಕೆ ಬಡತನವಿರಲಿಲ್ಲ  ದೇಶದ ಜನರಲ್ಲಿ ಬಡತನವಿದೆ. ಕಾರಣ ನಮ್ಮವರ ಅಜ್ಞಾನದ ಸಂಪಾದನೆಯನ್ನು ದುರ್ಭಳಕೆ ಮಾಡಿಕೊಂಡು ಸ್ವಾರ್ಥ ಅಹಂಕಾರದ ಜೀವನ ನಡೆಸುತ್ತಾ ಸಮಾಜ ಬೇರೆ ಸಂಸಾರ ಬೇರೆ ದೇಶ ಬೇರೆ ಧರ್ಮ ಬೇರೆ ಎನ್ನುವ  ರಾಜಕೀಯಕ್ಕೆ  ಮುಳುಗಿರೋದು. ಇದನ್ನು ವಿದೇಶಿಗಳು ಪರಧರ್ಮದವರು  ಅರ್ಥ ಮಾಡಿಕೊಂಡು  ಮತಾಂತರ, ಪಕ್ಷಾಂತರ,ದೇಶಾಂತರ ಹೋಗಲು  ಸಹಕರಿಸಿದ್ದಾರಷ್ಟೆ.ಅಂತರ ಬೆಳೆದಷ್ಟೂ ಅಜ್ಞಾನದ ಅವಾಂತರ...ನಮ್ಮವರು ಯಾರು ಪರರು ಯಾರು ಎನ್ನುವ ಜ್ಞಾನ ಶಕ್ತಿಯಿದ್ದರೆ ನಮ್ಮತನ ಬಿಡದೆ ಪರರಲ್ಲಿಯೂ ಇರುವ ಆ ಪರಮಾತ್ಮನ ಕಾಣಬಹುದು.
ಇಲ್ಲವಾದರೆ ನಮ್ಮವರನ್ನೂ    ದೂರಮಾಡಿಕೊಂಡು ಪರಮಾತ್ಮನ ಕಾಣದೆ ಹೋಗುವುದು ಜೀವ..ಇಷ್ಟಕ್ಕೂ  ನಾವ್ಯಾರು? ಭಾರತೀಯರಾಗಿದ್ದರೆ ನಮ್ಮಲ್ಲಿ ಭಾರತೀಯ ತತ್ವಜ್ಞಾನವಿದೆಯೆ? ಇದ್ದರೆ ಒಗ್ಗಟ್ಟು ಯಾಕಿಲ್ಲ? ಹಣವೇ ಸರ್ವಸ್ವ ವಾದವರಿಗೆ  ಸತ್ಯಜ್ಞಾನದ ಕೊರತೆಯಿರುತ್ತದೆ.
ಆಂತರಿಕ ದೃಷ್ಟಿಯಿಂದ  ಸತ್ಯ ತಿಳಿಯಲು ಅಂತರ್ಮುಖಿಗ
ಳಾಗಿರಬೇಕು.  ಈಗಿನ ರಾಜಕೀಯ ಮಹಿಳೆ ಮಕ್ಕಳನ್ನೂ ಬಿಡದೆ ಹೊರಗೆಳೆದು ಆಳುತ್ತಿರುವಾಗ ಎಲ್ಲಿಯ ಅಂತರ್ಮುಖ. ಎಲ್ಲಾ ಬಹಿರ್ಮುಖಿಗಳೇ.ಇದಕ್ಕೆ ರಾಜಕೀಯ ಮನೆ ಮನೆಯೊಳಗಿದೆ ರಾಜಯೋಗ ಹಿಂದುಳಿದಂತೆಲ್ಲಾ ಹಿಂದೂ ಧರ್ಮದ ತತ್ವವೂ ಹಿಂದುಳಿಯುತ್ತದೆ.ತಂತ್ರದಿಂದ ಧರ್ಮ ಬೆಳೆಸಿದರೆ ತಾತ್ಕಾಲಿಕವಷ್ಟೆ.ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ದೇಶವನ್ನು ತಂತ್ರದಿಂದ ಆಳುತ್ತಿತ್ತು.ಈಗ ನಮ್ಮವರೆನ್ನಿಸಿಕೊಂಡವರೆ ಜನರನ್ನು ಸರಿಯಾದ ಶಿಕ್ಷಣ ನೀಡದೆ ಅಜ್ಞಾನ ಬೆಳೆಸಿಕೊಂಡು ತಾವೂ ಸತ್ಯ ತಿಳಿಯದೆ ಪರಕೀಯರನ್ನು ಓಲೈಸಿಕೊಂಡು ಅವರ ಸಾಲ ಬಂಡವಾಳ ವ್ಯವಹಾರಕ್ಕೆ ದೇಶ ಬಳಸಿ ನಮ್ಮ ಮಕ್ಕಳನ್ನು ವಿದೇಶಿಗಳ ಕೈಕೆಳಗೆ ದುಡಿಸಿಕೊಂಡರೆ  ಇದರಲ್ಲಿ ಆತ್ಮನಿರ್ಭರ ಭಾರತ ಎಲ್ಲಿದೆ? ನಮ್ಮ ಸಂಪಾದನೆಯಿಂದ ದೇಶದ ಸಾಲ ತೀರಿಸಲು ಎಷ್ಟು ಪ್ರಜೆಗಳಿಗೆ ಸಾಧ್ಯವಾಗಿದೆ? ಉಚಿತಯೋಜನೆಗಳ ಹಿಂದೆ ಬೆಳೆದಿರುವ ಸಾಲ ತೀರಿಸುವುದು ಸುಲಭವೆ?ಈ ರೀತಿಯಿಂದ  ದೇಶದ ಭವಿಷ್ಯಕ್ಕೆ ದಕ್ಕೆಯಾಗುತ್ತಿದ್ದರೂ  ನಮ್ಮ  ಒಳಜಗಳ ಬಿಟ್ಟಿಲ್ಲ, ದ್ವೇಷ ನಿಂತಿಲ್ಲ ಭಿನ್ನಾಭಿಪ್ರಾಯ ಮುಗಿಲುಮುಟ್ಟಿದೆ ಸ್ವಾರ್ಥ ಅಹಂಕಾರದ ಜೀವನ ಶೈಲಿ ಮಿತಿಮೀರಿದೆ ಎಂದರೆ ಇದರಲ್ಲಿ ಅಧ್ಯಾತ್ಮ ಪ್ರಗತಿಯಾಗಿಲ್ಲ ಎಂದರ್ಥ. ಮೊದಲು ಆಂತರಿಕ ಶುದ್ದಿಗಾಗಿ  ಭಾರತೀಯರು ತತ್ವದೆಡೆಗೆ ನಡೆದಿದ್ದರೆ ಈಗ  ತಂತ್ರದಿಂದ  ಸತ್ಯ ಬಿಟ್ಟು ಮಿಥ್ಯದೆಡೆಗೆ ಹೋಗಿ ಮನೆ ಮನೆಯ ಸಮಸ್ಯೆಗೆ ಸರ್ಕಾರ ಪರಿಹಾರ ಧನ ನೀಡಬೇಕೆಂದರೆ ಇದರಲ್ಲಿ  ಜ್ಞಾನವಿಲ್ಲ.ಪ್ರಜಾಸಹಕಾರ ಅಜ್ಞಾನದೆಡೆಗೆ ಹೆಚ್ಚಾದಂತೆ ಅಧರ್ಮ, ಅನ್ಯಾಯ, ಭ್ರಷ್ಟಾಚಾರ ಬೆಳೆಯುತ್ತದೆ.  ಇದನ್ನು ಯಾವ ರಾಜಕೀಯವೂ ಸರಿಪಡಿಸಲಾಗದು.ಅವರವರ ಸಾಲ ತೀರಿಸಲು ಸತ್ಕರ್ಮ,ಸ್ವಧರ್ಮ, ಸುಜ್ಞಾನ, ಸ್ವತಂತ್ರ ವಾಗಿರುವ  ಆತ್ಮಸಾಕ್ಷಿಗೆ ಮೊರೆಹೋಗಬೇಕಷ್ಟೆ.
ಒಳಗಿರುವ  ದೈವಕ್ಕೆ ಮೋಸಮಾಡಿ ಹೊರಗೆ ಎಷ್ಟು ಹಣ ಸಂಪಾದಿಸಿದರೂ ನೀರಿನಲ್ಲಿ ಹೋಮಮಾಡಿದಂತೆ ಎನ್ನುವ ಸತ್ಯ ಅರ್ಥ ವಾದರೆ  ಉತ್ತಮ ಬದಲಾವಣೆಗೆ ಸಹಕಾರ ಸಿಗಬಹುದು.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?  ಒಳಗೇ ಸತ್ಯವಿಲ್ಲದ ಮೇಲೆ ಹೊರಗೆ ಸತ್ಯ ಹೇಗಿರುವುದು? ಸತ್ಯವೇ ದೇವರಾದ ಮೇಲೆ ದೈವತ್ವದೆಡೆಗೆ  ನಡೆಯಬೇಕು. ಇದು ಅದ್ವೈತ ವಾಗಬೇಕು.ಅಂದರೆ ಆತ್ಮಸಾಕ್ಷಿಗೆ ವಿರುದ್ದವಿರಬಾರದಷ್ಟೆ.
ಪರಮಾತ್ಮನ ಸತ್ಯ ಜೀವಾತ್ಮನ ಸತ್ಯ ಒಂದಾದರೆ ಯೋಗ.  .
ಪರಮಾತ್ಮನೊಳಗಿರುವ ದೇವತೆಗಳು, ಮಾನವರು,ಅಸುರರು  ಅವರವರ ಜ್ಞಾನಕ್ಕನುಗುಣವಾಗಿ‌ ಜೀವನದ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಕೊಂಡು  ಬದುಕಿ ತೋರಿಸಿ ಹೋಗಿದ್ದಾರೆ. ಈಗಲೂ ಮನುಕುಲದ ಒಳಗಿರುವ ಈ ಮೂರೂ ಶಕ್ತಿಗಳ ಪ್ರೇರಣೆಯೇ ಜೀವನ ನಡೆಸಿದೆ ಆದರೆ ದೈವತ್ವದೆಡೆಗೆ ನಡೆಯಲು ಮಾನವೀಯತೆ ಅಗತ್ಯ. ಮಾನವನಾಗಿ ಅಸುರತೆಗೆ ಸಹಕಾರ ಕೊಟ್ಟರೆ ಅಸುರರೆ ಬೆಳೆಯೋದು. ಮಾನವ ಮಧ್ಯವರ್ತಿ  ಯಾವಾಗ ತನ್ನ ಸ್ವಾರ್ಥ ಸುಖ ಸಂತೋಷಕ್ಕಾಗಿ  ಮಹಿಳೆ ಮಕ್ಕಳನ್ನು ಹೊರಗೆಳೆದು  ದುಡಿಸಿಕೊಳ್ಳುವುದು  ಹೆಚ್ಚಾಯಿತೋ ಆಗಲೇ  ಒಳಗಿದ್ದ ಸ್ವತಂತ್ರ ಜ್ಞಾನ ಶಕ್ತಿ ಕುಸಿದು ಪರಕೀಯರ  ವಶಕ್ಕೆ  ಭಾರತ  ಸಿಲುಕಿತು. ಆದರೂ ಮೂಲವನ್ನು ಯಾರೂ  ಕದಿಯಲಾಗದು. ಭರತ ಭೂಮಿಯನ್ನು ಕದ್ದು  ವಿದೇಶಕ್ಕೆ  ಒಯ್ಯಲಾಗದಲ್ಲವೆ? ಭೂಮಿಯ ಸಾತ್ವಿಕ ಶಕ್ತಿ ಅರ್ಥ ವಾದರೆ  ಭೂಮಿಯನ್ನಾಗಲಿ ಮಹಿಳೆ ಮಕ್ಕಳನ್ನಾಗಲಿ ಉತ್ತಮ ಜ್ಞಾನದೆಡೆಗೆ ನಡೆಸಬಹುದು. ಇದರಿಂದಾಗಿ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುತ್ತದೆ .
ಆತ್ಮಜ್ಞಾನವೇ ಮಾನವನ ನಿಜವಾದ ಆಸ್ತಿ. ಇದನ್ನು ಕದಿಯಲಾಗದು.ಕಷ್ಟಪಟ್ಟು ಗಳಿಸಬೇಕು.ಯಾರೂ  ಹೊರಗಿನವರು  ಹಣದಿಂದ ಖರೀದಿಸಲಾಗದು. ಶಿಕ್ಷಣ ಪಡೆಯದಿದ್ದವರರಲ್ಲಿದ್ದ. ಸಾಮಾನ್ಯಜ್ಞಾನ ಶಿಕ್ಷಣ ಪಡೆದವರಲ್ಲಿಲ್ಲ ಕಾರಣ ಹೊರಗಿನ ಶಿಕ್ಷಣವು ಹೊರಗಿನ ವಿಚಾರವಷ್ಟೆ.ಮೊದಲೇ ಇದ್ದ ಒಳಗಿನ ಸದ್ವಿಚಾರ  ತಿಳಿದು ನಡೆದರೆ  ಸದಾಚಾರ.  
*ನುಡಿ ಮುತ್ತುಗಳು:-  
 —————————
**ದೇವರು ನಡೆಸುತ್ತಿದ್ದಾನೆ ನಡೆದುಬಿಡೋಣ,ಅವನು ನಡೆಸಿದಂತೆಯೇ ನಡೆದುಬಿಡೋಣ,
"ಅವನೇ ನಿಲ್ಲಿಸುವವರೆಗೆ ನಾವೇ ನಿಲ್ಲದಿರೋಣ"**

**ಕಷ್ಟದ ಆಳದಲ್ಲಿಯೇ ಸುಖಃವಿದೆ,
ಇಳಿಯಲೇಬೇಕು ಹುಡುಕಲೇಬೇಕು
ಇದುವೇ ಜೀವನ.**

*ಮನುಷ್ಯ ಎಷ್ಟೇ ಕೆಂಪಗಿದ್ದರು ಅವನ ನೆರಳು ಮಾತ್ರ ಕಪ್ಪಗೆ ಇರುತ್ತದೆ ನಾನು ಶ್ರೇಷ್ಠ ಎಂಬುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎಂಬುದು ಅಹಂಕಾರ**

**ನಮಗೆ ಮಾತನಾಡಲು ಬರದೆ ಇದ್ದಾಗ ಕೂಡ ನಮ್ಮ ಪ್ರತಿ ಮಾತನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು ತಾಯಿ ಇವತ್ತು ಮಾತು ಬರುತ್ತವೆ ಆದ್ರೆ ಪದೇ ಪದೇ ಹೇಳ್ತಿವಿ ಅಮ್ಮ ನಿಂಗೆ ಅರ್ಥ ಆಗಲ್ಲ ಸುಮ್ಮನಿರು ಅಂತ.**

**ಒಣಗಿದ ಮರವು ತೊಲೆಯಾಗಿ ದೀರ್ಘಕಾಲ ಇರುತ್ತದೆ. ಆದರೆ ಶವವಾದ ನಮ್ಮ ದೇಹ ದಿನಕಳೆಯುವುದರಲ್ಲಿ
ಕೊಳೆಯುತ್ತದೆ.**

**ಮೇಣದಬತ್ತಿಯ (ಕ್ಯಾಂಡಲ್) ಉದ್ದ ಹೆಚ್ಚು-ಕಮ್ಮಿ ಇರಬಹುದು. ಆದರೆ ಅದು ನೀಡುವ ಬೆಳಕು ಒಂದೇ ಇರುತ್ತದೆ. ನೀವು ಇರುವ ವಾತಾವರಣ ಯಾವುದೇ ಇರಬಹುದು, ನಿಮ್ಮ ಸ್ಥಾನಮಾನ ಏನೇ ಇರಬಹುದು, ಆದರೆ ಅದು ನಿಮ್ಮ ಬೆಳಗುವ ಸಾಮರ್ಥ್ಯವನ್ನು ಕುಗ್ಗಿಸುವುದಿಲ್ಲ.**

**ಜಗತ್ತಿನ ಅತ್ಯಂತ ದುಬಾರಿ ವಸ್ತು ಎಂದರೆ ನಂಬಿಕೆ ಅದನ್ನು ಗಳಿಸಲು ವರ್ಷಗಳೇ ಬೇಕಾಗಬಹುದು ಆದ್ರೆ ಕಳೆದುಕೊಳ್ಳಲು ಕೇವಲ ಒಂದು ಕ್ಷಣ ಸಾಕು.**

**If a person controls his tongue, he can avoid many troubles.*^

**When circumstances have to be compromised, Then even intelligent people commit crimes.**

**Falling tears and broken dreams help you to become a strong person..**

**Your persistence and determination will help you overcome any obstacle in your path.**

**Every step you take towards your goal brings you closer to success.**

 
**Believe in yourself and your abilities, even when others doubt you.**

**Success is not a destination, but a continuous journey of growth and improvement.**

**Keep moving forward, one step at a time, and you will achieve greatness.**
 ——————————————— - - - ———
**

No comments:

Post a Comment