ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, June 9, 2023

ಉಚಿತ ಭಾಗ್ಯಜ್ಯೋತಿ ಉತ್ತಮ ಬೆಳಕಿನೆಡೆಗೆ ನಡೆಯಬೇಕಿತ್ತು

ಸರ್ಕಾರ ಕೊಡುವ‌ಉಚಿತ  ಭಾಗ್ಯವನ್ನು ಎಷ್ಟು ಮಂದಿ ಸ್ವಾಗತಿಸುವರೋ ಎಷ್ಟು ಮಂದಿ ವಿರೋಧಿಸುವರೋ ಲೆಕ್ಕ ಸಿಗಲ್ಲ.ಆದರೆ ಯೋಜನೆಯ ಫಲಾನುಭವಿಗಳಲ್ಲಿ
ವಿರೋಧಿಗಳೂ ಇರುವುದಂತೂ ಸತ್ಯ.

ಹಿಂದಿನ ಸರ್ಕಾರವಾಗಲಿ ಈಗಿನ ಸರ್ಕಾರವಾಗಲಿ ಏನು ಕೊಟ್ಟಿದೆಯೋ ಎಲ್ಲಾ ಪ್ರಜೆಗಳೂ ಒಟ್ಟಿಗೆ ಪಕ್ಷಪಾತವಿಲ್ಲದೆ ಪಡೆದರೂ  ಪಕ್ಷ ಬದಲಾವಣೆಯಾದರೂ ಅದೇ ಯೋಜನೆ. ಸ್ವಲ್ಪ ಮಟ್ಟಿಗೆ ಬದಲಾಗಿದೆ . ಒಂದು ದೇಶಕ್ಕೆ ಬಂಡವಾಳದ ಸುರಿಮಳೆಯನ್ನು ತಂದರೆ ಇನ್ನೊಂದು ಬಂಡವಾಳವನ್ನು ಸುಲಿಗೆ ಮಾಡಿ  ರಾಜಕೀಯ ನಡೆಸಲು ಹೊರಟಿರೋದು ಪ್ರಜೆಗಳ ಸಹಕಾರದಿಂದ. 
ಕೊಡುವವರಿದ್ದಾಗ ಪಡೆಯುವವರೂ ಇರುವರು.ಅದೂ ಉಚಿತವಾದ ಸಾಲವಷ್ಟೆ.ಆ ಸಾಲವನ್ನು ತೀರಿಸಲು  ಮತ್ತಷ್ಟು ವಿದೇಶಿ ಬಂಡವಾಳ ವ್ಯವಹಾರ, ಶಿಕ್ಷಣ ಹೆಚ್ಚಾದಂತೆಲ್ಲಾ  ದೇಶ ವಿದೇಶಗಳಿಂದ  ಸಾಲವೇ ಶೂಲವಾಗುತ್ತದೆ.

ಧಾರ್ಮಿಕವಾಗಿ  ಈ ವಿಚಾರವನ್ನು  ಪರಿಶೀಲನೆ ಮಾಡಿದರೆ ಪ್ರಜಾಧರ್ಮ ಪ್ರಜಾಪ್ರಭುತ್ವದ ವಿರುದ್ದ ರಾಜಕೀಯ ವಿದೆ.
ಕೇಳಿದ್ದನ್ನು ಕೊಡುವುದು ಧರ್ಮವಾಗಿದ್ದರೆ ಕರ್ಣನಿಗೆ ಕೊಟ್ಟು ಕೆಟ್ಟ ಎನ್ನುವ ಬಿರುದು  ಬರುತ್ತಿರಲಿಲ್ಲ.ಆದರೆ ಅಂದಿನ ಕ್ಷತ್ರಿಯ ಧರ್ಮ ಕ್ಕೂ ಇಂದಿನ ಪ್ರಜಾಧರ್ಮಕ್ಕೂ ವ್ಯತ್ಯಾಸವಿದೆ.
ಇಷ್ಟು ವರ್ಷ ಆಡಳಿತ‌ ನಡೆಸಿದ ಯಾವ ಪಕ್ಷ ಉಚಿತವಾಗಿ ಶಿಕ್ಷಣ ನೀಡಲು ಸಾಧ್ಯವಾಯಿತು. ಅದರಲ್ಲೂ ಜ್ಞಾನದ ಶಿಕ್ಷಣ ನೀಡಿದ್ದರೆ ಇಂತಹ ಅಜ್ಞಾನದ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ.
ಪ್ರಜೆಗಳೇ ದೇಶವನ್ನು ಸಾಲದ  ಕಡೆಗೆ ಎಳೆದಿರುವಾಗ ಬೇಲಿಯೇ ಎದ್ದುಹೊಲಮೇಯ್ದಂತಲ್ಲವೆ?
 ರಾಜಕಾರಣಿಗಳಾಗಲಿ ಪ್ರತಿಷ್ಟಿತರಾಗಲಿ,ಧಾರ್ಮಿಕ ವರ್ಗ ವಾಗಲಿ  ದೇಶದ ಋಣದಲ್ಲಿಯೇ ಜೀವನ ನಡೆಸಿರೋದು.
ಪ್ರಜೆಗಳ ಹಣ ಅವರ ಮತವಿಲ್ಲದೆ ಯಾವುದಾದರೂ ಸಂಘ ಸಂಸ್ಥೆ, ಮಠ,ಮಂದಿರ  ಇನ್ನಿತರ ಸೇವಾ ಕೇಂದ್ರಗಳಿವೆಯೆ?
ಇಷ್ಟಕ್ಕೂ ಸೇವೆ ಯಾರ ಹಣದಲ್ಲಿ ಯಾರಿಗೆ ನಡೆದಿದೆ.ಯಾರ ಸಾಲ ಯಾರು ತೀರಿಸಲಾಗಿದೆ? ಯಾರ ದೇಶವನ್ನು ಯಾರನ್ನು ಯಾರು ಆಳುತ್ತಿರುವುದು?ಸ್ವಾತಂತ್ರ್ಯ ಯಾರಿಗೆ ಯಾರು ಯಾವಾಗ ಕೊಟ್ಟರೋ ದೇವರಿಗಷ್ಟೆ ಗೊತ್ತು.
ರಾತ್ರಿ ವೇಳೆಯಲ್ಲಿ  ಸಿಕ್ಕಿದ ಸ್ವಾತಂತ್ರ್ಯ  ಕತ್ತಲೆಯಲ್ಲಿದ್ದವರಿಗಷ್ಟೆ ಸಿಕ್ಕಿದೆ. ಬೆಳಕಿನ ಕಡೆಗೆ ಬರುವವರೆಗೆ
 ವಿದೇಶಿ ಸಾಲ ತೀರದು. ಅವರ ಶಿಕ್ಷಣವನ್ನು ಬಂಡವಾಳ ಮಾಡಿಕೊಂಡರೆ ತಂತ್ರವಾಗಿರುತ್ತದೆ.ತತ್ವವಾಗದು
ಜ್ಞಾನಜ್ಯೋತಿ ಯೋಜನೆ ಜಾರಿಗೆ ತಂದಿದ್ದರೆ ಎಲ್ಲಾ ಭಾರತೀಯ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬಹುದು.
ಆಗ ಈ ಕತ್ತಲೆಯ ಸಾಮ್ರಾಜ್ಯದ  ಅಜ್ಞಾನ  ಬೆಳಕಿಗೆ ಬಂದರೆ ರಾಜಕೀಯ ಮೂಲೆ ಸೇರುವುದಲ್ಲವೆ? ಇದಕ್ಕೆ ರಾಜಕಾರಣಿಗಳ ಸಹಕಾರವಿಲ್ಲ.  ಇದೊಂದು  ಅಜ್ಞಾನ. 
 ಇಷ್ಟು ಸತ್ಯ ನಿಜವಾದ ದೇಶಭಕ್ತರು ಅರ್ಥ ಮಾಡಿಕೊಂಡರೆ ಸಾಕು  ನಮ್ಮವರ ಅಜ್ಞಾನವನ್ನು ನಾವೇ ಸಹಕಾರ ಕೊಟ್ಟು ಬೆಳೆಸಿ ಇನ್ನಷ್ಟು ಮೋಸ ಹೋಗಿರುವಾಗ ಯಾರ ವಿರುದ್ದ ಹೋರಾಟ ನಡೆಸಬೇಕು? ಹೋರಾಟ  ಯಾವ ದಿಕ್ಕಿನಲ್ಲಿರಬೇಕಿತ್ತು? ಈಗ ಯಾವ ದಿಕ್ಕಿನಲ್ಲಿ ನಡೆದಿದೆ?
ಅಧ್ಯಾತ್ಮ ಚಿಂತಕರು  ಶಿಕ್ಷಣ ಕ್ಷೇತ್ರದ ಅಧರ್ಮವನ್ನು ಎತ್ತಿ ಹಿಡಿಯದೆ  ತಾವೂ ಅದರಲ್ಲಿ ಸೇರಿದ್ದರೆ ಭಾರತದ ಸಾಲಕ್ಕೆ ಕಾರಣವೇ  ಪ್ರಜಾಸಹಕಾರ.
 ಸಾಲ ಮಾಡಿ ಕೆಟ್ಟ ಸಾಲವೇ ಶೂಲ ಯಾವುದಿದರ ಮೂಲ ಸರ್ಕಾರ ಅಥವಾ ಸಹಕಾರವೇ ಇದರ ಮೂಲ. ಈಗಲೂ ಉಚಿತ ಬೇಕೆ? ಉಚಿತವಾಗಿ ಪಡೆಯುವವರನ್ನು ಎಚ್ಚರಿಸಲಾಗುವುದೆ? ಬಡತನ ಬೆಳೆದಿರೋದು ಅಜ್ಞಾನದಿಂದ ಅಜ್ಞಾನವು ಬೆಳೆದಿರೋದು ಶಿಕ್ಷಣದಿಂದ.
ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ  ಅಭಿವೃದ್ಧಿ. ಇದೇ ಅನಾರೋಗ್ಯಕರವಾಗಿದ್ದರೆ ಅಧೋಗತಿ. ಆರೋಗ್ಯಕರ ಶಿಕ್ಷಣ ನೀಡದೆ ಮಕ್ಕಳ ಮನಸ್ಸನ್ನು ಹಾಳುಮಾಡಿ ರೋಗ ಹೆಚ್ಚಿಸಿದರೆ  ರೋಗವೇ ಹರಡೋದು. ಶಿಕ್ಷಣವೇ ನಮ್ಮದಲ್ಲದ ಮೇಲೆ ನಮ್ಮೊಳಗಿನ ಜ್ಞಾನವೂ ನಮ್ಮದಲ್ಲ. ಜ್ಞಾನಕ್ಕೆ ತಕ್ಕಂತೆ ವಿಜ್ಞಾನ ಜಗತ್ತಿದೆ.ವಿಜ್ಞಾನ ಹೊರಗಿನ ಜಗತ್ತಿನ  ಸತ್ಯ. ಆದರೆ ಭಾರತೀಯರ ವಿಜ್ಞಾನ ಅಧ್ಯಾತ್ಮ ಜಗತ್ತಿನಲ್ಲಿತ್ತು. ತನ್ನ ಸಾಲಕ್ಕೆ ತನ್ನ ಕರ್ಮ ವೇ ಕಾರಣವಾಗಿತ್ತು.ಈಗ ಸರ್ಕಾರ ಕಾರಣವೆನ್ನುವುದರಲ್ಲಿ ಸತ್ಯವಿದೆಯೆ? ಇದರಲ್ಲಿ ಸಾಲಕ್ಕೆ ಕೈ ಚಾಚಿದ ತನ್ನ ಸಹಕಾರವೆ ಕಾರಣ.  ಹೀಗಿರುವಾಗ ಕೈಕೆಸರಾದರೆ ಬಾಯಿಮೊಸರು ಎನ್ನುವಂತಿಲ್ಲ. ತನ್ನ ಕೈ ಕೆಲಸಮಾಡದೆಯೇ ಬಾಯಿಗೆ ಮೊಸರು ಸಿಗೋವಾಗ ಯಾರು ಕೆಸರಿನೆಡೆಗೆ ಹೋಗುವರು?
ಕೈಯನ್ನು ದ್ವೇಷ ಮಾಡಿ  ಆಪರೇಷನ್ ಮೂಲಕ ಕೈಬೆರಳನ್ನು
ಸೇರಿಸಿಕೊಂಡರೂ  ಬೆರಳುಗಳ ಹಿಂದಿನ ಆಟ ನಿಲ್ಲಲಿಲ್ಲ. ಹೀಗಾಗಿ ಯಾವುದೇ ಒಂದು ಪಕ್ಷದಿಂದ ದೇಶದ ಸಾಲ ತೀರಿಸಲಾಗದು.ಪ್ರಜೆಗಳೇ ತಮ್ಮ ತಮ್ಮ ಸಾಲಕ್ಕೆ ಹೊಣೆಗಾರರು.ಎಷ್ಟು ಹೊರಗಿನ ಸಾಲ ಬೆಳೆಸಿದರೂ ತೀರಿಸದೆ  ಬಡತನ ನಿವಾರಣೆ ಆಗದು. ಇದಕ್ಕಾಗಿ ಉತ್ತಮ ಶಿಕ್ಷಣದ ಅಗತ್ಯವಿದೆ.ಇತ್ತೀಚಿನ ದಿನಗಳಲ್ಲಿ ವಿದೇಶಿ ಶಿಕ್ಷಣ ನೀಡಲು ಪೋಷಕರಾದವರು ಮಕ್ಕಳ ಮೇಲೆ ಮಾಡುವ
ಸಾಲಕ್ಕೆ ಮಿತಿಯಿಲ್ಲ.ಅದನ್ನು ತೀರಿಸಲು ಹೊರಗೆ ದುಡಿಯಲೇಬೇಕು. ಮಕ್ಕಳಿಗೆ ಮನೆಯೇ ಮೊದಲಪಾಠ
ಶಾಲೆಯಾಗಿದ್ದ ಭಾರತದಲ್ಲಿ  ಮಕ್ಕಳನ್ನು ಬಿಟ್ಟು ಹೊರಗೆ ಹೋಗುವ ಪೋಷಕರಿಗೆ ಪಾಠ ಹೇಳಿಕೊಡಲು ಸಾಧ್ಯವೆ? ಸಾಲದ ಹೊರೆ ಏರಿಸಿ ರಾಜಕೀಯ ನಡೆಸೋ ರಾಜಕಾರಣಿಗಳೊಂದೆಡೆ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವ ಪೋಷಕರು ಮತ್ತೊಂದು ಕಡೆ.ಒಟ್ಟಿನಲ್ಲಿ ಸಾಲ ಮಾಡದೆಯೇ ಜೀವನವೇ ನಡೆಸೋಹಾಗಿಲ್ಲ ಎನ್ನುವ ಸ್ಥಿತಿಗೆ ಬಂದಿರುವ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಾಲದ ಅರ್ಥ ತಿಳಿಸುವ ಶಿಕ್ಷಣದ ಅಗತ್ಯವಿದೆ.
ಇದನ್ನು ಕೊಡದೆ ಆಳುವುದೇ ಅಧರ್ಮ, ಅನ್ಯಾಯ. ಇದರ ಬಗ್ಗೆ ಯಾರೂ ಪ್ರಶ್ನೆ ಮಾಡೋದಿಲ್ಲವೆಂದರೆ ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಲು ಕಷ್ಟ.ಹೀಗಿರುವಾಗ  ನಮ್ಮ ಸಹಕಾರದಿಂದ ಅಧಿಕಾರ ಪಡೆದವರಿಗೆ ಅರ್ಥ ವಾಗುವುದೆ?ಯಥಾ ಪ್ರಜಾ ತಥಾ ರಾಜಕೀಯ. 
ಉಚಿತದಿಂದ ಸಾಲ ಖಚಿತ.ಸಾಲದಿಂದ  ಸಮಸ್ಯೆ ಹೆಚ್ಚುವುದು. ಅನಗತ್ಯವಾದವರು  ಸಾಲದಿಂದ ದೂರವಿದ್ದರೆ ಉತ್ತಮ. ಶ್ರೀಮಂತ ರೆ  ಸರ್ಕಾರದ ಸಾಲ ಬೇಡಿದರೆ ಬಡತನ ಯಾರಿಗಿದೆ? 
ವೈಚಾರಿಕತೆಯನ್ನು ವಿರೋಧಿಸಿ ವೈಜ್ಞಾನಿಕತೆ ಮುಂದೆ ನಡೆದರೂ ಅಜ್ಞಾನವೇ ಬೆಳೆಯೋದು. 
ನಮ್ಮ ಹಿಂದಿನ ಮಹಾತ್ಮರುಗಳು ದೇಶಕ್ಕಾಗಿ  ಉಚಿತ ಸೇವೆ ಮಾಡುತ್ತಿದ್ದರು. ಈಗಿನವರು  ದೇಶವನ್ನೇ  ಸಾಲಕ್ಕೆ ತಳ್ಳಿ ಉಚಿತ ಯೋಜನೆಗಳಿಗೆ ಕೈ ಚಾಚುತ್ತಿರೋದು ಆತ್ಮನಿರ್ಭರ ಭಾರತದ ಲಕ್ಷಣವೆ? ವಿದೇಶಿ ಸಾಲ ತೀರಿಸಬೇಕಾದವರು ವಿದೇಶಿಗಳನ್ನು  ಬಂಡವಾಳದಿಂದ ಒಳಗೆ ಕರೆಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ತಾತ್ಕಾಲಿಕ ವಾಗಿ ಸುಧಾರಿಸಿದರೂ ಧಾರ್ಮಿಕವಾಗಿ  ಸುಧಾರಣೆಯಾಗುವುದೆ?
ಅಧ್ಯಾತ್ಮ ಸತ್ಯ ತಿಳಿಯದೆ ಭೌತಿಕದೆಡೆಗೆ ನಡೆದರೆ ಸಾಲವೇ ಶೂಲವಾಗುವುದು.
ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು. ಸಾಲ ಅದು.

No comments:

Post a Comment