ಸರ್ಕಾರ ಯಾರಿಗೂ ಉಚಿತಕೊಡದಿದ್ದರೆ ಏನಾಗುತ್ತಿತ್ತು? ಎಲ್ಲಾ ಸ್ವತಂತ್ರ ಜ್ಞಾನದಿಂದ ಸರಳವಾಗಿ ಜೀವನ ನಡೆಸಲು ಕಲಿಯುತ್ತಿದ್ದರು. ಗೃಹಲಕ್ಮಿ ಯೋಜನೆಯಿಂದ ಮನೆಒಡೆಯದಿದ್ದರೆ ಸರಿ. ಅತ್ತೆ ಬೇರೆ ಸೊಸೆ ಬೇರೆ ಜೀವನ ನಡೆಸಿದರೆ ಇಬ್ಬರಿಗೂ ಸರ್ಕಾರದ ಭಾಗ್ಯವೆಂದು ಮೂರ್ಖರು ಹೊರಗೆ ನಡೆಯುವಂತಾಗಬಾರದು. ಸರ್ಕಾರದ ಹಣ ದೇಶದ ಜನರ ಋಣ ಅಂದರೆ ಸಾಲವಾದಾಗ ಉಚಿತವಾಗಿ ಸಾಲ ಪಡೆದು ಜನರ. ಸೇವೆ ಮಾಡಬೇಕಿದೆ.ಅದಕ್ಕೆ ಇತ್ತೀಚೆಗೆ ಸಾಕಷ್ಟು ಮಹಿಳೆಯರು ಮಕ್ಕಳು ದುಡಿದು ಸಂಪಾದನೆ ಮಾಡಿದರಷ್ಟೆ ಜೀವನನಡೆಸಲು ಸಾಧ್ಯವೆನ್ನುವಂತಾಗಿದೆ.ಹಿಂದೆ ಮನೆಯಲ್ಲಿ ಒಬ್ಬರು ದುಡಿದು ಹತ್ತು ಮಂದಿ ಸಾಕುವಷ್ಟು ಜ್ಞಾನವಿತ್ತು. ಈಗ ಹತ್ತು ಮಂದಿದುಡಿದರೂ ಒಬ್ಬರ ಸಾಲ ತೀರಿಸಲಾಗದವರಿದ್ದಾರೆ.ಕಾರಣ ಇಲ್ಲಿ ಹಣದ ಹಿಂದಿನ ಋಣ ಭಾರದಿಂದ ಮಾನವನ ಹಿಂದಿನ ಸಾಲದ ಜೊತೆಗೆ ಈಗಿನ ಸಾಲ ಬೆಳೆದು ಆರೋಗ್ಯ ಸಮಸ್ಯೆ,ಅಶಾಂತಿ,ಅಧರ್ಮ, ಅನ್ಯಾಯ, ಭ್ರಷ್ಟಾಚಾರ ದ ಹಣದಿಂದ. ಸುಖ ಶಾಂತಿ ಪಡೆಯಲಾಗದೆನ್ನುವುದೇ ಸನಾತನ ಧರ್ಮದ ಸತ್ಯ ಸತ್ವ.
ಒಟ್ಟಿನಲ್ಲಿ ಕೆರೆಯ ನೀರನು ಕೆರೆಗೆ ಚೆಲ್ಲಿದರೆ ಸಮಸ್ಯೆಯಿಲ್ಲ.ಕೊಳಚೆಗೆ ಚೆಲ್ಲಿದರೆ ಅನಾರೋಗ್ಯವೇ ಜೀವನ ಎನ್ನುವಂತಾಗುತ್ತದೆ.
ಇದಕ್ಕೆ ಪರಿಹಾರ ಆರೋಗ್ಯಕರ ವಿಚಾರವುಳ್ಳ ಸಾತ್ವಿಕ ಶಿಕ್ಷಣ. ಇದನ್ನು ಮಠ ಮಾನ್ಯಗಳು, ಧಾರ್ಮಿಕ ಸಂಘಗಳು ತಮ್ಮ ಸುತ್ತಮುತ್ತಲಿನ ಬಡಜನರಿಗೆ ಉಚಿತವಾಗಿ ಹಂಚಿ ಅವರಲ್ಲಿರುವ ಜ್ಞಾನವನ್ನು ಬೆಳೆಸುತ್ತಾ ಸ್ವತಂತ್ರ ಜೀವನ ನಡೆಸಲು ಅವಕಾಶ ಕೊಟ್ಟರೆ ಸರ್ಕಾರ ಕೊಡುವ ಭಾಗ್ಯದ ಅಗತ್ಯವೇ ಇರಲಿಲ್ಲ. ವಿಪರ್ಯಾಸವೆಂದರೆ ಧಾರ್ಮಿಕ ವರ್ಗವೇ ಉಚಿತ ಕೊಡಲು ಹೋರಾಟ ನಡೆಸಿದರೆ ಅಜ್ಞಾನ.
ಕೆಲವರಿಗೆ ರಾಜಕೀಯ ಬೇರೆ ಧರ್ಮ ಬೇರೆ ಎನಿಸಿದರೂ
ಒಂದಾಗಿ ರಾಜಕೀಯ ನಡೆಸುವರು. ಹಲವರಂತೂ ರಾಜಕೀಯವೇ ಜೀವವಾಗಿಸಿಕೊಂಡರೆ ದೈವತ್ವ ಎಲ್ಲಿದೆ?
ಒಬ್ಬರು ವಿದೇಶಿ ಬಂಡವಾಳದಿಂದ ಸಾಲ ತಂದರೆ ಇನ್ನೊಂದು ಪಕ್ಷ ಬಂಡವಾಳವನ್ನು ಉಚಿತ ಹಂಚಿ ಕೈ ಮುಗಿದರೆ ಇದು ಪ್ರಜ್ಞಾಪ್ರಭುತ್ವ ಧರ್ಮಕ್ಕೆ ವಿರುದ್ದ. ಹಿಂದೂ ರಾಷ್ಟ್ರ ಮಾಡೋ ಹೆಸರಿನಲ್ಲಿ ಹಿಂದೂಗಳನ್ನು ಬಡವರಾಗಿಸಿ ಆಳಿದರೆ? ಪಕ್ಷದ ಕಾರ್ಯಕರ್ತರಿಗೆ ತಮ್ಮ ಸಂಸಾರ ನಡೆಸುವುದೇ ಕಷ್ಟವಾದಾಗ ಸಮಾಜದ ಸೇವೆ ಹಾಗೆ ಸಾಧ್ಯ
ಸಾಲ ಮಾಡಿಕೆಟ್ಟ ಸಾಲವೇ ಶೂಲ.
No comments:
Post a Comment