ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, June 5, 2023

ಮಹಾಭಾರತ= ಪ್ರಸ್ತುತ ಭಾರತ?

ಮಹಾಭಾರತಕ್ಕೂ ಪ್ರಸ್ತುತ ಭಾರತಕ್ಕೂ
ವ್ಯತ್ಯಾಸವಿಷ್ಟೆ. ಅಂದಿನ ರಾಜಪ್ರಭುತ್ವ ಇಂದಿನ ಪ್ರಜಾಪ್ರಭುತ್ವ. ರಾಜರ ಅತಿಯಾದ  ಸ್ವಾರ್ಥ ಅಹಂಕಾರಕ್ಕೆ ಅಧರ್ಮ ಬೆಳೆದಿತ್ತು  ಇಂದು ಪ್ರಜೆಗಳ ಅಜ್ಞಾನದ ಸ್ವಾರ್ಥ ಪೂರಿತ ಜೀವನವೇ ವಿನಾಶಕ್ಕೆ ಕಾರಣವಾಗಿದೆ. ಅಂದೂ ದೈವತ್ವವಿತ್ತು.ಇಂದೂ ಇದೆ ಆದರೆ ಒಳಗಿರುವ  ತತ್ವ ಬಿಟ್ಟು
ಹೊರ ನಡೆದವರಿಂದ  ದೇಶ ವಿದೇಶವಾಗುತ್ತಿದೆ.
ಹೊರಗೆ ನಡೆದವರು ಒಳಗಿರುವ ಹುಳುಕನ್ನು ಎತ್ತಿಹಿಡಿದು ಕ್ರಾಂತಿಯ ಬೀಜ ಬಿತ್ತಿ ತಾವು ಮಾತ್ರ ಹೊರಗೆ ನಿಂತು ಮನರಂಜನೆಯಲ್ಲಿದ್ದಾರೆ. ಆದರೆ ಆತ್ಮವಂಚನೆಯ ಪ್ರಶ್ನೆ ಬಂದಾಗ  ನಿಜವಾದ ಆತ್ಮವಂಚಕರು ಹೊರಗಿನವರೆ. ಇದರ ಫಲವನ್ನು ಅವರೆ ಉಣ್ಣಬೇಕೆನ್ನುವುದೂ ಕರ್ಮ ಸಿದ್ದಾಂತ.
ಪುರಾಣದ ಕ್ಷತ್ರಿಯ ಧರ್ಮ ವೂ ಇಲ್ಲ ಕ್ಷತ್ರಿಯರೂ ಇಲ್ಲ ಆದರೂ ರಾಜಕೀಯ ಬೆಳೆದಿದೆ ಎಂದರೆ ಅಜ್ಞಾನವಷ್ಟೆ.
ದೇಶದೊಳಗಿದ್ದು ದೇಶ ರಕ್ಷಣೆ ಮಾಡಬೇಕು, ಧರ್ಮದೊಳಗಿದ್ದು ಧರ್ಮ ರಕ್ಷಣೆಯಾಗಬೇಕು,ಸತ್ಯದಲ್ಲಿದ್ದು ಸತ್ಯರಕ್ಷಣೆ  ಇವೆಲ್ಲವೂ ದೈವತ್ವ,ದೈವತತ್ವ ತಿಳಿದವರಿಗಷ್ಟೆ ಸಾಧ್ಯ. ಅಸುರ ಶಕ್ತಿಯು  ಅಜ್ಞಾನದಲ್ಲಿ ಆಳಬಹುದಷ್ಟೆ. 
ಭಾರತೀಯರು ಯಾರು? ಯಾರಲ್ಲಿ ಭಾರತೀಯ ಜ್ಞಾನವಿದ್ದು
ತತ್ವಜ್ಞಾನದಿಂದ ತಮ್ಮಲ್ಲಿ ಅಳವಡಿಸಿಕೊಂಡು ಸ್ವತಂತ್ರ ರಾಗಿ
ಜೀವನ ನಡೆಸಿರುವರೋ ಅವರು ಭಾರತೀಯರು.ಈಗ ಹೇಳಿ ನಮ್ಮೊಳಗೆ  ವಿದೇಶಿ ರೀತಿ,ನೀತಿ,ಸಂಸ್ಕೃತಿ, ಶಿಕ್ಷಣವೆ
ಹೆಚ್ಚಾಗಿದ್ದರೆ ಭಾರತೀಯರೆನ್ನುವುದರಲ್ಲಿ ಅರ್ಧ ಸತ್ಯವಿದೆ.
ನಮ್ಮ‌ಮಕ್ಕಳಿಗೆ ನಮ್ಮ ಧರ್ಮ ಕರ್ಮ ದ ಜ್ಞಾನವೇ ಇಲ್ಲದೆ
ಇದ್ದರೆ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇತ್ತೀಚಿನ ಕೆಟ್ಟ ಬೆಳವಣಿಗೆಗೆ ಕಾರಣವಿಷ್ಟೆ.ನಮ್ಮವರೆ ನಮಗೆ ಶತ್ರುಗಳಾಗಿ ವಿದೇಶಿಗರಿಗೆ ಮಣೆ ಹಾಕುತ್ತಾರೆ.
ವೈಚಾರಿಕತೆ ಯ ಮೂಲ ಉದ್ದೇಶ ತಿಳಿಯದೆ ವೈಜ್ಞಾನಿಕವಾಗಿಮುಂದೆ ನಡೆದವರು ಪ್ರಸಿದ್ದರಾಗಿದ್ದಾರೆ
. ಸಿದ್ದರ ಹೆಸರಲ್ಲಿ ಸಾಕಷ್ಟು ಪ್ರಸಿದ್ದರಿದ್ದಾರೆ.
ಪ್ರಸಿದ್ದರ ಹಿಂದೆ ನಿಂತು ತಮ್ಮತನ ಬಿಟ್ಟು ನಡೆದವರು 
ಹಿಂದುಳಿದವರಾಗಿದ್ದಾರೆ. ಹಿಂದೂ ಧರ್ಮದ  ಹೆಸರಲ್ಲಿ  ಸಾಕಷ್ಟು  ವಿರೋಧಗಳನ್ನು ಮಧ್ಯವರ್ತಿಗಳು ಬೆಳೆಸುತ್ತಾ ವ್ಯವಹಾರ ಬೆಳೆದರೂ ಜ್ಞಾನವೇ ಕುಸಿದರೆ ಕಷ್ಟ ನಷ್ಟ 
ಜೀವನದಲ್ಲಿ ತಪ್ಪಿದ್ದಲ್ಲ.
ದೇವಾಸುರರನ್ನು  ಹೊರಗಿಟ್ಟು ಒಳಗೇ ಇರುವ ದೈವೀ ಶಕ್ತಿ
ಅಸುರಶಕ್ತಿಯ ಹೊಡೆದಾಟದಲ್ಲಿ ಮನಸ್ಸು ಹಾಳಾಗಿದೆ.
ಎಲ್ಲಾ ಒಳಗಿರುವಾಗ ಹೊರಗೆ ಬಂದವರು ಯಾರು? ಹೊರಗೆ ಬಂದವರನ್ನು ಒಳಗೆ ಸೇರಿಸುವ ಯೋಗಿಗಳು ಎಲ್ಲಿ?
ಮನಸ್ಸಿನ ನಿಗ್ರಹಕ್ಕೆ ಯೋಗ ಬೇಕು. ಯೋಗದಲ್ಲಿ  ಪರಮಾತ್ಮನ ತತ್ವಜ್ಞಾನವಿರಬೇಕು. ತಂತ್ರದಿಂದ ಯೋಗ ಕೂಡಿಸಿಕೊಂಡರೆ  ಜೀವ ಅತಂತ್ರಸ್ಥಿತಿಗೆ  ತಲುಪುತ್ತದೆ.
ಆಳುವವರೂ ಆಳಾಗಿಯೇ ಇರೋದು. ಪ್ರಜಾಪ್ರಭುತ್ವದ  ಪ್ರಜೆಗಳ ಹಣದಲ್ಲಿಯೇ ಸರ್ಕಾರ ನಡೆದಿರೋದು. ಹಣದ ಋಣ ತೀರಿಸಲು ಧರ್ಮ ಹಾಗು ಸತ್ಯದ ಅಗತ್ಯವಿದೆ. ಆದರೆ
ಧರ್ಮದ ಹಾದಿಯಲ್ಲಿ ನಡೆದರೆ ಅಧಿಕಾರವೇ ಸಿಗದು.ಹೀಗೇ
ಹಿಂದಿನಿಂದಲೂ ಅಧರ್ಮ ವೇ ಹೆಚ್ಚು ಬಲಶಾಲಿಯಾಗಿ ಭೂಮಿಯನ್ನು ಆಳುವತ್ತ ಹೊರಟು ಅಸುರರೆ ಬೆಳೆದರು.
ಅತಿಯಾದರೆ ಗತಿಗೇಡು.ಹಿಂದೆ ಇಂದು ಮುಂದೆ ಆಗಿದ್ದು ಆಗುತ್ತಿರುವುದು ಆಗೋದೆಲ್ಲಾ ಯಾರೂ ತಡೆಯಲಾಗಿಲ್ಲ.
ಹಾಗಂತ ಪ್ರಯತ್ನ ನಡೆದಿದೆ.ಉತ್ತಮ ಮಾರ್ಗದಲ್ಲಿ ನಡೆದರೆ
ಉತ್ತಮ ಫಲಿತಾಂಶ ವಿದೆ.ಮೂಲದ ಶಿಕ್ಷಣವನ್ನು ಸರಿಪಡಿಸದೆ ರೆಂಬೆಕೊಂಬೆಗಳಿಗೆ ತೇಪೆ ಹಾಕಿ ಜೋಡಿಸಿದರೆ 
ವ್ಯರ್ಥ ವೆನ್ನಬಹುದಷ್ಟೆ. ರಾಜಯೋಗದ ಶಿಕ್ಷಣದಲ್ಲಿ ಯೋಗವಿದೆ. ರಾಜಕೀಯ ಎಂದರೆ ರಾವಣ,ಜರಾಸಂಧ,ಕೀಚಕ,ಯಮ .ಇಲ್ಲಿ ಇರೋರನ್ನು ದೇವರು ಎನ್ನುವರೆ? ಕಲಿಗಾಲವೆಂದರೆ  ಅಧಿಕಾರವಿದ್ದವ
ರನ್ನು ಎತ್ತಿ ಏಣಿಗೇರಿಸಿ ಕೆಳಗಿನವರನ್ನು ಆಳುವುದಾಗಿದೆ ಇದೇನೇ..ವಿದೇಶಿಗಳನ್ನು  ದೇಶದಿಂದ ಓಡಿಸಿದವರನ್ನೇ ಸರಿಯಿಲ್ಲ ಎನ್ನುವ  ಬುದ್ದಿವಂತರಿಗೆ ದೇಶದಲ್ಲಿ ಜ್ಞಾನದ ಶಿಕ್ಷಣ ನೀಡಲು  ಸಾಧ್ಯವಾಗದೆ  ವಿದೇಶಿಗಳನ್ನೇ ಕರೆದು  ಕೂರಿಸಿ ಅತಿಥಿ ಸತ್ಕಾರ  ಮಾಡುತ್ತಿರುವುದರಲ್ಲಿ  ಧರ್ಮ
 ಇದೆಯೆ? ಅತಿಥಿಗಳೇ ತಿಥಿಮಾಡುವಂತಾಗದಿರಲಿ. ಅತಿಯಾದರೆ ಗತಿಗೇಡು. 
ಮನೆಯ ಸಾಲ ತೀರಿಸಲು ಮನೆಯ ಸದಸ್ಯರೆಲ್ಲರೂ  ಸತ್ಕರ್ಮ  ಮಾಡಬೇಕು. ಹೊರಗಿನಿಂದ ಸಾಲ ತಂದು ಕುಳಿತು ತಿಂದರೆ  ಸಾಲ ತೀರದೆ ಜೀವ ಹೋಗುತ್ತದೆ ಅಲ್ಲವೆ? ಹಾಗೆ ದೇಶದ ಸಾಲವಾಗಲಿ ಸ್ತ್ರೀ ಸಾಲ,ಭೂಮಿ ಸಾಲ
ವನ್ನು ತೀರಿಸಲು  ಧರ್ಮಜ್ಞಾನ ಅಗತ್ಯ. ಹಿಂದಿನವರ ಉಡುಗೊರೆಯನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ.
ಜ್ಞಾನವಾಗಬಹುದು ಹಣ,ಆಸ್ತಿ ಶಿಕ್ಷಣ,ಧರ್ಮ, ಕರ್ಮ, ಶಾಸ್ತ್ರ
ವಾಗಬಹುದು. ಕೇವಲ ವ್ಯವಹಾರಕ್ಕೆ ಬಳಸಿಕೊಂಡು  ಭೌತಿಕಕ್ಕೆ ಸೀಮಿತವಾದರೆ  ಬಡ್ಡಿ ಚಕ್ರಬಡ್ಡಿ ಬೆಳೆಯುತ್ತಾ ಹೋಗಿ ಆತ್ಮಹತ್ಯೆ ಹೆಚ್ಚುವುದು. 
ಮಹಾಭಾರತ  ಯುದ್ದದ ಸಮಯದಲ್ಲಿಯೇ  ಕಲಿಪ್ರವೇಶದ
ಪ್ರಯುಕ್ತ ಅಧರ್ಮ ಬೆಳೆದಿತ್ತು.
ಯುದ್ದವಾಗಿತ್ತು. ಯುದ್ದದಿಂದ ಯಾರಿಗೆ ಶಾಂತಿ ಸಿಕ್ಕಿದೆ? ಹಿಂದಿನ ಯುದ್ದ ಅಧರ್ಮದ ವಿರುದ್ದವಿತ್ತು.ಇಂದಿನ ಯುದ್ದ ಧರ್ಮದ ವಿರುದ್ದವಿದೆ.ನಮ್ಮವರೆ ನಮಗೆ ಶತ್ರುಗಳಾದರೆ ಪರರು ಮಿತ್ರರೆ? ಇಂದಿನ ವೈಜ್ಞಾನಿಕ ಜಗತ್ತು ಇದನ್ನು 
ಅರ್ಥ ಮಾಡಿಕೊಳ್ಳಲು ಸೋತಿರುವುದಕ್ಕೆ ಕಾರಣವೆ
ಯೋಗ್ಯ ಶಿಕ್ಷಣದ ಕೊರತೆ.  ಆಗೋದನ್ನು ತಡೆಯಲಾಗದು  ಆಗಬೇಕಾದ್ದನ್ನು  ತಿಳಿದು ಮಾಡಬಹುದು.ಬದಲಾವಣೆ ನಮ್ಮಿಂದ ಆಗಬೇಕು. ನಾವ್ಯಾರು? ನಮ್ಮೊಳಗೇ ಇರುವ ಶತ್ರುಗಳು ಯಾರು?

No comments:

Post a Comment