ಸತ್ಯ ಮತ್ತು ಸುಳ್ಳು ಎರಡೂ ತನ್ನ ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುತ್ತಲೇಇರುತ್ತದೆ.ಆದರೆ ಸತ್ಯ ಒಂದೇ ಆದಾಗ ಕದಲದೆ ಸ್ಥಿರವಾಗಿ ನಿಂತರೆ ಸುಳ್ಳು ಎಲ್ಲಾ ಕಡೆ ಸುತ್ತಿಬಳಲಿ ಬೆಂದು ಸಾಯುತ್ತದೆ ಕೊನೆಗೆ ಉಳಿಯೋದು ಸತ್ಯ ಮಾತ್ರ ಅದಕ್ಕೆ ಸತ್ಯವೇ ದೇವರು ಎಂದಿರೋದು.ಆದರೆ ಮಾನವ ಮಾತ್ರ ಅಸತ್ಯದ ಹಿಂದೆ ನಡೆದು ದಿನದಿನವೂ ಸಾಯುವುದು ತಪ್ಪಿಲ್ಲ.ಕಾರಣ ಸತ್ಯ ಒಳಗಿದೆ ಸುಳ್ಳು ಹೊರಗಿದೆ. ಹೊರಗೆ ನಡೆದಷ್ಟೂ ಸಾವು. ಒಳಗೆ ನಡೆದಷ್ಟೂ ಜೀವನ್ಮುಕ್ತಿ. ಸತ್ಯನಾಶ ಮಾಡಿದಷ್ಟೂ ಅಸತ್ಯ ಬೆಳೆಯುತ್ತದೆ ಇದರಿಂದಾಗಿ ಸಾವೇ ಹೆಚ್ಚುವುದು. ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷ ಕಾಲ ಎಂದ ದಾಸಾನುದಾಸರನ್ನೂ ಬಿಡದೆ ಕಾಡಿದ ಅಸತ್ಯದ ಜಗತ್ತನ್ನು ಗೆದ್ದವರು ವಿರಳ. ಒಟ್ಟಿನಲ್ಲಿ ಕಾಲವನ್ನು ಸುಭಿಕ್ಷ ಮಾಡಲು ಸತ್ಯದೆಡೆಗೆ ನಡೆಯಲೇಬೇಕು. ಸುಳ್ಳಿನಿಂದ ಸುಭಿಕ್ಷ ಮಾಡಲು ಹೋದರೆ ಸಾಲವೇ ಬೆಳೆದು ಬಿಕ್ಷುಕರ ಸಂಖ್ಯೆಯನ್ನು ತಡೆಯಲಾಗದೆ ಸಾವು ಬರುವುದು.ಸಾವು ನಿಶ್ಚಿತ ಆದರೆ ಇದರ ಹಿಂದೆ ಸಾಲವೂ ಖಚಿತ.ಇದನ್ನು ತೀರಿಸದೆ ಮುಕ್ತಿ ಯಿಲ್ಲವೆನ್ನುವುದು ಅಧ್ಯಾತ್ಮ ಸತ್ಯವಾದಾಗ ಭಾರತದ ರಾಜಕೀಯತೆ ಎತ್ತ ಸಾಗುತ್ತಿದೆ? ನಿಜವಾದ ಜ್ಞಾನಿಗಳಲ್ಲಿ ಸತ್ಯ ಇದೆಯೆ? ಹಾಗಾದರೆ ಬಿಕ್ಷುಗಳ ದೇಶ ಬಿಕ್ಷುಕರ ದೇಶವಾಗಲು ಕಾರಣಕರ್ತರು ಯಾರು? ಆತ್ಮಾವಲೋಕನ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅಗತ್ಯವಿದೆ. ಪುರಾಣ ಸತ್ಯದ ಬಂಡವಾಳ ಹಿಡಿದುಕೊಂಡು ಹಣ ಮಾಡಿದರೂ ಸಾಲವೇ ಕಾರಣ ಇದನ್ನು ಒಳಗೆ ಅಳವಡಿಸಿಕೊಳ್ಳದೆ ಹೊರಗೆ ಹಂಚಿದರೆ ಒಳಗೆ ಸತ್ಯ ಬೆಳೆಯದು. ಹೀಗಾಗಿ ಆತ್ಮನಿರ್ಭರ ಭಾರತ ಆತ್ಮದುರ್ಭಲ ಪ್ರಜೆಗಳನ್ನು ಹೊತ್ತು ನಡೆದಿದೆ.
ಶಂಖದಿಂದ ಬಂದರೆ ತೀರ್ಥ . ಕಾಲ ಕೂಡಿಬರಬೇಕಿದೆ ಅಂದರೆ ಕಾಲವನ್ನು ತಡೆಯೋರಿಲ್ಲ ಗಾಳಿಯನ್ನು ಹಿಡಿಯಲೂ ಆಗುತ್ತಿಲ್ಲವೆಂದರೆ ಕಾಲದ ಪ್ರಭಾವವಷ್ಟೆ.ಗಾಳಿಸುದ್ದಿಗಳಲ್ಲಿ ಅಡಗಿರುವ ಅಸತ್ಯ,ಅನ್ಯಾಯ,ಅಧರ್ಮ, ಭ್ರಷ್ಟಾಚಾರ, ಕೊಲೆ ಸುಲಿಗೆಗಳಿಂದ ಇನ್ನಷ್ಟು ಅಸತ್ಯವಂತರೆ ಬೆಳೆಯುತ್ತಿದ್ದರೆ ನಮ್ಮಲ್ಲಿ ಸತ್ಯವೆಲ್ಲಿರುತ್ತದೆ? ಮಾಧ್ಯಮಗಳು ಮಧ್ಯವರ್ತಿಗಳು ಮಹಿಳೆ ಮಕ್ಕಳೆನ್ನದೆ ಹೊರಗೆ ಬಂದು ಎಷ್ಟೇ ಹೋರಾಟ,ಹಾರಾಟ ಮಾರಾಟಕ್ಕೆ ಇಳಿದರೂ ಇರೋದು ಒಂದೇ ಸತ್ಯ ಅದೇ ನಮ್ಮ ಆತ್ಮಸಾಕ್ಷಿ. ನಾನೇನು ಮಾಡಿದ್ದೇನೆ ದೇಶಕ್ಕೆ? ಸಮಾಜಕ್ಕೆ? ಸಂಸಾರಕ್ಕೆ? ಧರ್ಮಕ್ಕೆ ಎನ್ನುವ ಪ್ರಶ್ನೆ ಒಳಗೆ ಹಾಕಿಕೊಂಡರೆ ಉತ್ತರ ಸಿಗುತ್ತದೆ. ಮಾಡಿದ್ದರೂ ಅದರಲ್ಲಿ ನನ್ನ ಸ್ವಾರ್ಥ ಚಿಂತನೆ ಅಹಂಕಾರ ವೇ ಹೆಚ್ಚಾಗಿದ್ದರೆ ಅಧರ್ಮ. ಹಣಕ್ಕಾಗಿ ಹೆಣವನ್ನೂ ಮಾರುವ ಪರಿಸ್ಥಿತಿ ಗೆ ಮಾನವ ಬಂದಿದ್ದರೆ ಇದರಷ್ಟು ಅಜ್ಞಾನ ಮತ್ತೊಂದು ಇಲ್ಲ.
ಹಿಂದೆ ಧರ್ಮ ರಕ್ಷಣೆಗಾಗಿ ಮಹಾತ್ಮರುಗಳು ತಮ್ಮ ದೇಹವನ್ನು ದಾನ ಮಾಡಿದ್ದರು. ಅದೂ ಸ್ವ ಇಚ್ಚೆಯಿಂದ ಜ್ಞಾನದಿಂದ ನೀಡಿದ ದಾನವಾಗಿತ್ತು.ಆದರೆ ಇತ್ತೀಚೆಗೆ ಅಮಾಯಕರ ಅಂಗಾಂಗಗಳಿಗೂ ಕನ್ನ ಹಾಕುವ ವೈಧ್ಯಕೀಯ ಸಂಶೋಧನೆಗಳು ಮೂಲದ ಸತ್ಯ ಧರ್ಮ ಮರೆತು ಮಾನವ ಮಾನವನಿಗೇ ಶತ್ರುವಾಗಿರೋದು ದೊಡ್ಡ ದುರಂತ. ಆಪರೇಷನ್ ಮೂಲಕ ಬೇರೆಯವರ ಅಂಗ ಜೋಡಿಸಿಕೊಂಡು ಬದುಕಬಹುದಷ್ಟೆ ಆದರೆ ಸತ್ಯ ಜ್ಞಾನವಿಲ್ಲದೆ ಎಷ್ಟು ವರ್ಷ ಬದುಕಿದರೂ ಭೂಮಿಗೆ ಭಾರ. ಹೀಗಾಗಿ ಧಾರ್ಮಿಕ ವರ್ಗ ಎಚ್ಚರವಾದರೆ ಉತ್ತಮ.ನಮ್ಮ ರಕ್ತ ಸಂಬಂಧ ಬಿಟ್ಟು ಹೊರಗೆ ಹೋದರೂ ಸತ್ಯ ಒಂದೇ. ತಿರುಗಿ ಬರದೆ ಸಾಲಮನ್ನಾ ಆಗದು ಎನ್ನುವ ಕಾರಣಕ್ಕಾಗಿ ಹಿಂದಿನ ಕೂಡುಕುಟುಂಬವು ಧರ್ಮ ಹಾಗು ಸತ್ಯ ಬಿಟ್ಟು ನಡೆಯುವುದಕ್ಕೆ ಭಯಪಡುತ್ತಿದ್ದರು.ಕಾಲ ಬದಲಾದರೂ ಮೂಲ ಸತ್ಯ ಬದಲಾಗದು.ಮಿಥ್ಯದ ಜಗತ್ತಿನಲ್ಲಿ ಸಾಧನೆ ಮಾಡುವಾಗ ಸತ್ಯ ತಿಳಿದರೆ ಉತ್ತಮ ಸಮಾಜನಿರ್ಮಾಣ ಸಾಧ್ಯ. ಹೇಳೋದು ಸುಲಭ.ಸತ್ಯ ನುಡಿದು ನಡೆಯೋದೆ ಕಷ್ಟ ಹೀಗಿರುವಾಗ ಸುಖವಾಗಿ ಸುಳ್ಳು ಹೇಳುತ್ತಾ ತಿರುಗಿದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಕಾರಣ ಅಸತ್ಯ ಯಾವತ್ತೂ ಸತ್ಯವಾಗದು.
ಅಸತ್ಯದ ಜಗತ್ತಿನಲ್ಲಿ ಹೆಸರು,ಹಣ,ಅಧಿಕಾರಕ್ಕಾಗಿ ಹೊಡೆದಾಟ ಮಾಡಿಕೊಂಡು ಹೋದರೆ ಜೀವ ಅತಂತ್ರಸ್ಥಿತಿಗೆ ತಲುಪುವುದನ್ನು ಯಾವ ಭೌತಿಕ ಸರ್ಕಾರ ತಡೆಯಲಾಗದು.
ಇದನ್ನು ತಡೆಯಲು ಅದ್ಯಾತ್ಮ ಸರ್ಕಾರ ಸತ್ಯದೆಡೆಗೆ ಬಂದರೆ ಸಾಧ್ಯವಿದೆ. ಇದೇ ಭೌತಿಕ ಸರ್ಕಾರದ ಹಿಂದೆ ಹೊರಟರೆ ಬೇಲಿಯೇ ಎದ್ದು ಹೊಲಮೇಯ್ದಂತಾಗುತ್ತದೆ. ಯಾರ ಸತ್ಯ ಯಾರನ್ನೋ ಸಾಯಿಸಲಾಗದು.ಆದರೆ, ಯಾರದ್ದೋ ಅಸತ್ಯ ಸುಳ್ಳು ಎಲ್ಲರನ್ನೂ ಸಾವಿನೆಡೆಗೆ ನಡೆಸಬಹುದು. ಸತ್ಯವೇ ದೇವರು ದೇವರಿಗೆ ಸಾವಿಲ್ಲ.ಸುಳ್ಳು ಅಸುರ ಸಂಪತ್ತು ಅಸುರರಿಗೆ ಸಾವಿದೆ. ಯಾರ ಕಡೆಗೆ ಹೋಗಬೇಕೆಂಬ ಅರಿವಿದ್ದರೆ ಮನುಕುಲಕ್ಕೆ ಒಳ್ಳೆಯದು.
No comments:
Post a Comment