ಭಾರತೀಯರ ದೋಷವೆಂದರೆ ನಮ್ಮತನ ನಮ್ಮವರನ್ನು ನಾವು ಗುರುತಿಸದೆ ಪರರನ್ನು ಪ್ರೀತಿಸಿ ಬೆಳೆಸೋದು ಇದಕ್ಕೆ ರಾಜಕಾರಣಿಗಳೂ ಅದೇ ದಾರಿ ಹಿಡಿದಿರೋದು ಇದರಿಂದ ಲಾಭವಾಗಿದ್ದು ಪರರಿಗೇ ತಾನೇ?
ಇದೊಂದು ಹಿಂದಿನಿಂದಲೂ ಬೆಳೆದು ಬಂದಿರುವ ರಾಜಕೀಯ ತಂತ್ರವಾಗಿದೆ.ತತ್ವದಿಂದ ಧರ್ಮ ಬೆಳೆದರೆ ತಂತ್ರದಿಂದ ಅಧರ್ಮ ವೇ ಬೆಳೆದುಬಂದಿದೆ. ತಂತ್ರಜ್ಞಾನದಿಂದ ಆತ್ಮನಿರ್ಭರ ಭಾರತ ಮಾಡಲು ಹೊರಟವರು ವಿದೇಶಿಗಳನ್ನು ಸುತ್ತಿದರೂ ಭಾರತೀಯತೆ ಭಾರತದ ಪ್ರಜೆಗಳಲ್ಲೇ ಮಾಯವಾಗುತ್ತಿದ್ದರೆ ಆತ್ಮದುರ್ಭಲ ಭಾರತವಷ್ಟೆ. ಇಲ್ಲಿ ನಾವು ರಾಜಕೀಯದಿಂದ ಜನರನ್ನು ಬದಲಾವಣೆ ಮಾಡುವ ಬದಲಾಗಿ ರಾಜಯೋಗದ ಸತ್ಯದ ಕಡೆಗೆ ನಡೆದಿದ್ದರೆ ನಮ್ಮೊಳಗೇ ಅಡಗಿರುವ ಭ್ರಷ್ಟಾಚಾರ ಹೋಗಿ ಶಿಷ್ಟಾಚಾರ ಹೆಚ್ಚಾಗಿ ಶಾಂತಿ ಸಮಾಧಾನ,ನೆಮ್ಮದಿ ತೃಪ್ತಿ ಇದ್ದಲ್ಲಿಯೇ ಇದ್ದುದರಲ್ಲಿಯೇ ಪಡೆಯಬಹುದಿತ್ತು. ಆದರೆ ವಿಪರ್ಯಾಸವೆಂದರೆ ಯಾರಲ್ಲಿ ಸತ್ಯವಿತ್ತೋ ಧರ್ಮ ವಿತ್ತೋ ಅದನ್ನು ಗುರುತಿಸದೆ ಗುರುಹಿರಿಯರೇ ಹೊರಗಿನ ರಾಜಕೀಯದೆಡೆಗೆ ನಡೆಯುತ್ತಾ ಹೊರಗೆ ಬಂದರೆ ಒಳಗಿದ್ದ ಸತ್ಯವಾಗಲಿ ಧರ್ಮ ವಾಗಲಿ ಸಹಕಾರವಿಲ್ಲದೆ ಹಿಂದುಳಿಯುತ್ತದೆ. ಈಗ ಭಾರತೀಯರ ಸ್ಥಿತಿಯೂ ಇದೇ ಆಗಿದೆ.
ಮಕ್ಕಳ ಒಳಗಿರುವ ಮಹಾತ್ಮರನ್ನು ಗುರುತಿಸದ ಶಿಕ್ಷಣವನ್ನು ಕೊಡುತ್ತಾ ತಾವೂ ಹೊರಗಿನ ರಾಜಕೀಯದ ದಾಸರಾಗಿ ಸಾಲ ಮಾಡುತ್ತಾ ವಿದೇಶದವರೆಗೆ ಹೋದವರಿಗೆ ತಿರುಗಿ ಬರಲಾಗದೆ ಅಲ್ಲಿ ನೆಲೆನಿಂತು ದೇಶದ ಹುಳುಕನ್ನು ಎತ್ತಿ ಹಿಡಿದು ಶಾಂತಿಯಿಂದ ಬದುಕಿದವರ ನೆಮ್ಮದಿ ಕೆಡಿಸಿದರೆ ದೇಶದ ಋಣ ತೀರಿಸಲಾಗದು. ಒಟ್ಟಿನಲ್ಲಿ ತಾವೇ ಸರಿಯಿಲ್ಲದೆ ಮಕ್ಕಳು ಮಹಿಳೆಯರನ್ನು ಸರಿಪಡಿಸಹೋದರೆ ನಾರಿ ಮಾರಿಯಾಗುತ್ತಾಳೆ.ಮಕ್ಕಳು ಪೋಷಕರನ್ನೇ ಶೋಷಣೆ ಮಾಡುತ್ತಾರೆ. ಕರ್ಮಕ್ಕೆ ತಕ್ಕಂತೆ ಪ್ರತಿಫಲ .ಇದನ್ನು ಯಾರೂ ತಪ್ಪಿಸಲಾಗದ ಮೇಲೆ ನಮ್ಮ ಕರ್ಮವು ಧರ್ಮದ ಜೊತೆಗೆ ಸತ್ಯವನ್ನರಿತು ನಡೆಸಿದರೆ ಆತ್ಮನಿರ್ಭರ ಭಾರತ ಸಾಧ್ಯ. ಇದಕ್ಕೆ ಹೊಂದಿಕೊಳ್ಳದ ಯಾವುದೇ ರಾಜಕೀಯ ದೇಶವನ್ನು ಹಿಂದುಳಿಸುವುದರ ಜೊತೆಗೆ ವಿದೇಶಿಗಳನ್ನು ಸ್ವಾಗತಿಸುವ ಮೂಲಕ ವಿದೇಶದ ಕೈಕೆಳಗೆ ದೇಶ ಬಿಟ್ಟು ಹೋಗುವುದು ಸತ್ಯ.ಇದು ಅಧ್ಯಾತ್ಮ ಸತ್ಯವಾಗಿರುವಕಾರಣ ಹಣ ಅಧಿಕಾರ ಸ್ಥಾನಮಾನ ಪಡೆದವರು ಒಪ್ಪಿಕೊಳ್ಳಲು ಕಷ್ಟ ಕಾರಣ ಅವರ ಜೀವನ ನಡೆದಿರೋದೆ ವಿದೇಶಿ ವಿಜ್ಞಾನದಿಂದ ಹೀಗಿರುವಾಗ ಸತ್ಯ ತಿಳಿಯಲು ಆಂತರಿಕ ಶುದ್ದಿಯಿರಬೇಕು. ಈಗಿನಪರಿಸ್ಥಿತಿಯಲ್ಲಿ ಕಷ್ಟವಿದೆ. ಆದರೂ ಪ್ರಯತ್ಮ ಪಟ್ಟರೆ ಸಾಧ್ಯವಿದೆ. ಆಡಂಬರದ ವೈಭೋಗದ ಜೀವನಕ್ಕೆ ಬಳಸುವ ಹಣವನ್ನು ಕಡಿತಗೊಳಿಸಿ ದೇಶದ ಸಾಲ ತೀರಿಸುವತ್ತ ಅಥವಾ ನಮ್ಮವರ ಹಿಂದಿನ ಜ್ಞಾನದೆಡೆಗೆ ನಡೆಯುವುದರ ಮೂಲಕ ನಮ್ಮೊಳಗೇ ಅಡಗಿರುವ ಅಜ್ಞಾನವನ್ನು ಕಡಿಮೆಗೊಳಿಸಿಕೊಂಡರೆ ಸದ್ಗತಿ . ಇಲ್ಲವಾದರೆ ಅಧೋಗತಿ. ಮಾನವನೊಳಗಿರುವ ದೇವಾಸುರರ ಗುಣವು ಹೊರಗಿನ ಶಿಕ್ಷಣದಿಂದ ಪಡೆದಿದ್ದರೂ ಯಾವ ಗುಣ ನಮ್ಮ ಜೀವನ ದಲ್ಲಿ ಶಾಶ್ವತ ಶಾಂತಿ ಕೊಡುವುದೆನ್ನುವ ಅರಿವಿದ್ದರೆ ಉತ್ತಮ .ಅರಿವೇ ಇಲ್ಲದೆ ಯಾರೋ ಹೇಳಿದ್ದಷ್ಟೆ ಸತ್ಯವೆಂದು ನಡೆದರೆ ಒಳಗಿರುವ ಸತ್ಯ ಅರ್ಥ ವಾಗದು. ಇದೇ ಮಾನವನ ಸಮಸ್ಯೆಗೆ ಕಾರಣವಾಗುತ್ತದೆ. ಲೋಕಕಲ್ಯಾಣಕ್ಕಾಗಿ ಹಿಂದಿನ ಮಹಾತ್ಮರುಗಳು ತಮ್ಮ ಸುತ್ತಮುತ್ತಲಿನ ಕಸ ಕಡ್ಡಿ ಮುಳ್ಳುಗಳನ್ನು ಸ್ವಚ್ಚ ಮಾಡಿಕೊಂಡು ಬದುಕಲು ತಿಳಿಸಿದ್ದರೆ ಈಗ ಆ ಮುಳ್ಳುಗಳನ್ನು ಬಳಸಿಕೊಂಡು ಎಲ್ಲರಿಗೂ ಹಂಚಿ ಚುಚ್ಚಿದರೂ ನೋವಾಗಿಲ್ಲವೆನ್ನುವ ನಾಟಕವಾಡಿದರೆ ಅಸತ್ಯ. ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂದಂತೆ ನಮ್ಮ ಮಕ್ಕಳು ಏನು ಮಾಡಿದರೂ ಸರಿ. ಅದೇ ಬೇರೆಯವರ ಮಕ್ಕಳು ಮಾಡಿದರೆ ತಪ್ಪಾಗುವುದೇಕೆ? ಸತ್ಯ ಒಂದೇ ಆದಾಗ ನಮ್ಮ ದೃಷ್ಟಿ ಒಂದೇ ಸಮನಾಗಿರದ ಕಾರಣ ಇಲ್ಲಿ ಅಧರ್ಮ ಹೆಚ್ಚಾಗಿರೋದು.
ಒಂದು ಮಠದಲ್ಲಿ ಕೆಲಸ ಮಾಡೋದಕ್ಕೂ ಸೇವೆ ಮಾಡೋದಕ್ಕೂ ವ್ಯತ್ಯಾಸವಿದ್ದ ಹಾಗಿದೆ. ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಕೆಲಸವೇ ಪರಮಾತ್ಮನ ಸೇವೆ. ಇಲ್ಲವಾದರೆ ಇದೊಂದು ವ್ಯವಹಾರಿಕ ಪರಕೀಯರ ಸೇವೆ. ಋಣ ತೀರದು. ಕಲಿಗಾಲ ಇಷ್ಟು ಸ್ವಚ್ಚವಾಗಿರಲು ಕಷ್ಟವಿದೆ.ಕೊನೆಪಕ್ಷ ನಮ್ಮವರ ಸತ್ಯ ಧರ್ಮದ ವಿಚಾರಕ್ಕೆ ಸ್ಪಂದಿಸುವ ಗುಣವಾದರೂ ಇದ್ದರೆ ಬದಲಾವಣೆ ಸಾಧ್ಯವಿತ್ತು. ನಮ್ಮ ಸ್ವಾರ್ಥ ಸಂತೋಷವೇ ಮುಖ್ಯಗುರಿಯಾಗಿಸಿಕೊಂಡು ಜನರನ್ನು ಆಳೋದರಿಂದ ಮುಂದೆ ಆಳಾಗಿ ದುಡಿಯಲೇಬೇಕು. ಆಳು ಅರಸನಾಗಲು ಆತ್ಮಜ್ಞಾನ ಅಗತ್ಯ.
ಇದಕ್ಕೆ ಮಾನವ ಅ ದಿಂದ ಆ ಕಡೆಗೆ ಹೊರಟು ಮ ದ ಮಧ್ಯಸ್ಥಿಕೆ ಯಲ್ಲಿ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಂಡು ಸತ್ಯದ ಕಡೆಗೆ ಹೊರಟರೆ ಜ್ಞ ಎಂಬ ಕೊನೆಮುಟ್ಟಲು ಸಾಧ್ಯವಿದೆ.
ಇಲ್ಲಿ ಅ ಮೊದಲಕ್ಷರದಲ್ಲಿರುವ ಅಹಂಕಾರ, ಅಸಹಕಾರ, ಅಸಹಾಯಕತೆ,ಅಜ್ಞಾನ,ಅತಿಆಸೆ ಬಿಟ್ಟು ಮುಂದಿನ 'ಆ' ಅಂದರೆ ಆತ್ಮವಿಶ್ವಾಸ, ಆತ್ಮಸಂಶೋಧನೆ,ಆತ್ಮಪರಿಶೀಲನೆ
,ಆತ್ಮಸಮಾಲೋಚನೆ,ಆಧ್ಯಾತ್ಮದ ಆತ್ಮಜ್ಞಾನದೆಡೆಗೆ ಹೊರಟರೆ ಆನಂದದ ಜೀವನ ನಡೆಸುತ್ತಾ ಮಧ್ಯದಲ್ಲಿ ಬರುವ ಮಧ್ಯವರ್ತಿಗಳ ಅರ್ಧ ಸತ್ಯ ಅರ್ಧ ಮಿಥ್ಯವನರಿತು ಸತ್ಯಕ್ಕೆ ಸಹಕಾರ ಕೊಟ್ಟವರಷ್ಟೇ ನಿಜವಾದ ಆತ್ಮಜ್ಞಾನಿ
ಗಳಾಗಿರಬಹುದು. ಇಲ್ಲಿ ಓದಿ ತಿಳಿದ ಸಾಕಷ್ಟು ವಿಷಯಗಳಲ್ಲಿ ಅಡಗಿರುವ ರಾಜಕೀಯತೆ ಬಿಟ್ಟರೆ ಅದರಲ್ಲಿ ಸತ್ಯ ಸತ್ವ ತತ್ವ ಅರ್ಥ ವಾಗುತ್ತದೆ. ಎಷ್ಟು ಹಣ ಸಂಪಾದಿಸಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನ ಬೇಕಿದೆ. ವಿಜ್ಞಾನ ಜಗತ್ತಿನಲ್ಲಿ ಹಣವನ್ನು ಹೊಳೆಯಾಗಿಸಿ ಹರಿಸಿದ್ದರೂ ಸತ್ಯ ಜ್ಞಾನದ ಕೊರತೆ ಮಾನವನಿಗೆ ಆಪತ್ತು ತರುತ್ತಿದೆ ಎಂದರೆ ನಮ್ಮ ನಡೆ ನುಡಿಯು ವ್ಯವಹಾರಕ್ಕೆ ಸೀಮಿತವಾಗಿದೆ .ಮೂಲ ಧರ್ಮ ಕರ್ಮ ಬಿಟ್ಟು ಹೊರಗೆ ನಡೆದವರಿಗೆ ಮೂಲದೆಡೆಗೆ ಬರಲಾಗದಿದ್ದರೆ ಬಿಟ್ಟು ಬಿಡಬೇಕು. ಹಿಂದೆ ನಡೆದು ಬರುವಮಕ್ಕಳು ಮಹಿಳೆಯರಿಗೆ ಉತ್ತಮ ದಾರಿದೀಪವಾದರೆ ಸಾಕು. ಇದು ಬಿಟ್ಟು ಹೊರಗೆ ಹೋದವರಿಗೇ ಮಣೆಹಾಕುತ್ತಾ ತಾವೂ ಹೊರಗೆ ಹೋದರೆ ಅಧರ್ಮ ವಲ್ಲವೆ?
ವಾಸ್ತವ ಸತ್ಯ ವಾಸ್ತವದಲ್ಲಿದ್ದೇ ತಿಳಿಯಬೇಕಷ್ಟೆ.ಪುರಾಣ ತಿಳಿದು ಭವಿಷ್ಯ ನಿರ್ಧಾರ ಮಾಡಿದರೂ ವಾಸ್ತವ ಸತ್ಯ ಅರ್ಥ ಆಗದಿದ್ದರೆ ನೀರಿನಲ್ಲಿ ಹೋಮಮಾಡಿದಂತೆ. ಕುಟ್ಟಿ ಕುಂದಾಪುರಕ್ಕೆ ಹೋಗಿಬಂದಂತಾಗುವುದು.ಅಂದರೆ ಯಾರೋ ಹೇಳಿದರೆಂದು ಅದರ ಮೂಲ ತಿಳಿಯದೆ ವಾಸ್ತವ ಸರಿಯದೆ ಭವಿಷ್ಯದ ಚಿಂತನೆ ಮಾಡಿದರೆ ವ್ಯರ್ಥ.
ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಇದಕ್ಕೆ ತಕ್ಕಂತೆ ಲಯವಾಗುತ್ತದೆ. ಒಂದು ಸರಿಯಿಲ್ಲವೆಂದರೂ ಇನ್ನೊಂದು ಸರಿಯಾಗದು.
ಮೂಲದ ಸೃಷ್ಟಿ ಅರ್ಥ ವಾದರೆ ಉತ್ತಮಸ್ಥಿತಿ.ಅಜ್ಞಾನದ ಸೃಷ್ಟಿ ಅಜ್ಞಾನದ ಸ್ಥಿತಿಗೆ ಕಾರಣವಾಗಿ ಲಯವೂ ಅಜ್ಞಾನ
ದಲ್ಲೇ ಆಗುವುದು. ಇದಕ್ಕೆ ಪರಿಹಾರ ಮೂಲ ಶಿಕ್ಷಣದಲ್ಲಿಯೇ ಸೃಷ್ಟಿಯ ರಹಸ್ಯಜ್ಞಾನವಿದ್ದರೆ ಮನುಕುಲದ ಸ್ಥಿತಿಗೆ ಕಾರಣ ತಿಳಿದು ಲಯದ ಮುಕ್ತಿ ಕಡೆಗೆ ಆನಂದದಿಂದ ಜೀವದ ಪಯಣವಿರುವುದು.
ನಮ್ಮ ಪ್ರತಿಯೊಂದು ಕರ್ಮದ ಹಿಂದೆ ಕಾರಣವಿರುತ್ತದೆ.
ಇದನ್ನು ರಾಜಕೀಯವಾಗಿ ತಿಳಿಯಲಾಗದು. ಹಾಗಾಗಿ ಜ್ಞಾನಕ್ಕೆ ರಾಜಯೋಗದ ಅಗತ್ಯವಿದೆ. ತನ್ನ ತಾನರಿತು ನಡೆಯಲು ಆತ್ಮಾವಲೋಕನ ಅಗತ್ಯವಿದೆ. ಹೆಚ್ಚು ಹಳೇ ಗಾಯ ಕೆದಕಿ ಹುಣ್ಣು ಮಾಡಿಕೊಂಡರೆ ನೋವು ದೇಹಕ್ಕೆ ಅಲ್ಲವೆ? ಹಾಗೆಯೇ ಹಿಂದೆ ನಡೆದ ವಿಚಾರದಲ್ಲಿ ಅಧರ್ಮ ಅಸತ್ಯ,ಅನ್ಯಾಯದ ರಾಜಕೀಯವೇ ಇದ್ದರೆ ಅಧರ್ಮ ವೇ ಹೆಚ್ಚುತ್ತಾ ಶಾಂತಿಕಾಣದೆ ಜೀವ ಹೋಗುವುದು. ಇಷ್ಟಕ್ಕೂ ಭೂಮಿಗೆ ಬಂದಿರುವ ಉದ್ದೇಶ ಸಾಲ ತೀರಿಸುವುದಾದರೆ ಸತ್ಕರ್ಮ ಸ್ವಧರ್ಮ ಸುಜ್ಞಾನ,ಸತ್ಯದ ಕಡೆಗೆ ನಡೆಯಲೇಬೇಕು. ರಾಜಕಾರಣಿಗಳಲ್ಲಿ ರಾಜಕೀಯದಲ್ಲಿ ಇವುಗಳಿದೆಯೆ? ಕಣ್ಣಿಗೆ ಕಂಡದ್ದೇ ಸತ್ಯವೆನ್ನುವ ಅಜ್ಞಾನ ಮಿತಿಮೀರಿದೆ. ಇದಕ್ಕೆ ಹಣ,ಅಧಿಕಾರ,ಸ್ಥಾನಮಾನ,
ಸನ್ಮಾನ,ಜನರ ಸಹಕಾರ ಸಿಕ್ಕಿದರಂತೂ ಮುಗಿದೇ
ಹೋಯಿತು.ಅಸುರಕುಲದಿಂದ ಭೂಮಿ ನಡುಗುತ್ತದೆ.ಇದಕ್ಕೆ ಭೂಕಂಪ.ಪ್ರಕೃತಿವಿಕೋಪ, ನದಿಗಳ ದುರ್ಭಳಕೆಯಿಂದ ಪ್ರಳಯಾಂತಕ ಸುನಾಮಿ ಹೀಗೇ ಜೀವ ಹೋಗುತ್ತಿರುವುದು. ಸರ್ಕಾರ ಜೀವ ಉಳಿಸಬಹುದೆ? ಜೀವಕ್ಕೆ ಬೆಲೆ ಕಟ್ಟಿ ಹಣ ಕೊಟ್ಟರೂ ಸಾಲವೆ .ತೀರಿಸಲು ಬರಲೇಬೇಕು.ಕಾಣದ ಸತ್ಯ ಹೇಳಿದರೂ ಅರ್ಥ ವಾಗಲು ಆತ್ಮ ಜ್ಞಾನ ಬೇಕಿದೆ. ಇದು ಎಲ್ಲರೊಳಗಿರುವ ಪರಮಾತ್ಮನ ಶಕ್ತಿಯಾಗಿದೆ.
ತತ್ವದಿಂದ ಒಗ್ಗಟ್ಟು ಮೂಡಬೇಕಿತ್ತು ಅದೇ ತಂತ್ರದ ವಶದಲ್ಲಿ ಇದ್ದರೆ ಬಿಕ್ಕಟ್ಟು ಹೆಚ್ಚಾಗಿ ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿಯೇ ಜೀವ ಹೋಗುತ್ತದೆ.
ಪುರಾಣ ಕಥೆಯಲ್ಲಿ ಅಸುರರ ತಪಸ್ಸಿಗೆ ಮೆಚ್ಚಿ ದೇವತೆಗಳು ವರನೀಡಿ ಕೊನೆಗೆ ದೇವಲೋಕವನ್ನೇ ಆಳಲು ಅಸುರರು ಹೊರಟಾಗ ದೇವತೆಗಳು ಮೊರೆಹೋಗಿದ್ದು ತ್ರಿಮೂರ್ತಿಗಳನ್ನೇ ಅವರಿಂದಲೂ ಸಾಧ್ಯವಾಗದಿರುವಾಗ ಸ್ವಯಂ ಶಕ್ತಿಯೇ ಅವತಾರವೆತ್ತಬೇಕಾಯಿತು. ಅಂದರೆ ಭೂ ಶಕ್ತಿಯ ದುರ್ಭಳಕೆ ಹೆಚ್ಚಾಗುವುದೆ ಸ್ತ್ರೀ ಯರು ಅಸುರರಿಗೆ ಸಹಕರಿಸಿದಾಗ ಅದರ ಪ್ರತಿಫಲ ತಿರುಗಿ ಬರೋವಾಗ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ದೇವತೆಗಳೆಲ್ಲರ ಒಗ್ಗಟ್ಟು ಅಗತ್ಯವಾದರೂ ,ಸ್ತ್ರೀ ಶಕ್ತಿಯ ಸಹಕಾರವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ ಎನ್ನುವ ಸಂದೇಶ ಇದರಲ್ಲಿದೆ. ಈಗಲೂ ಸಾಕಷ್ಟು ದೇವತಾರಾಧನೆ ನಡೆದಿದೆಯಾದರೂ ನಮ್ಮ ಸಹಕಾರ ಮಾತ್ರ ಭ್ರಷ್ಟಾಚಾರದ ಸರ್ಕಾರಕ್ಕೆ ಇದ್ದಾಗ ಧರ್ಮ ರಕ್ಷಣೆ ಹೀಗಾಗುತ್ತದೆ? ಜೊತೆಗೆ ಭ್ರಷ್ಟಾಚಾರದ ಹಣದಲ್ಲಿಯೇ ಧಾರ್ಮಿಕ ಕಾರ್ಯ ನಡೆಸಿದರೆ ಶಿಷ್ಟಾಚಾರಕ್ಕೆ ಯಾರೂ ಬೆಲೆಕೊಡದೆ ಹಿಂದುಳಿದವರೂ ಭ್ರಷ್ಟಾಚಾರದ ವಶಕ್ಕೆ ಬರುತ್ತಾರೆ. ಯಾವೊಬ್ಬ ವ್ಯಕ್ತಿಯಿಂದ ದೇಶ ನಡೆದಿಲ್ಲ ಹಾಳಾಗಲೂ ಇಲ್ಲ ಬೆಳೆದೂ ಇಲ್ಲ ಪ್ರಜಾಸರ್ಕಾರದಿಂದ ಎಲ್ಲಾ ನಡೆದಿರುವಾಗ ಪ್ರಜೆಗಳ ಒಳಗೆ ಇದ್ದು ನಡೆಸೋ ಶಕ್ತಿ ಯಾವುದು? ದೈವಶಕ್ತಿಯೋ ಅಸುರಶಕ್ತಿಯೋ? ಕಣ್ಣಿಗೆ ಕಾಣದಿದ್ದರೂ ಗುಣದಿಂದ ಅರ್ಥ ಮಾಡಿಕೊಳ್ಳಲು ಜ್ಞಾನ ಬೇಕಷ್ಟೆ. ಹಣದಿಂದ ಗುಣವನ್ನು ಅಳೆಯುವುದೇ ಅಜ್ಞಾನ.
ಹಿಂದಿನ ಕಾಲದಲ್ಲಿದ್ದ ಪರಿಸ್ಥಿತಿ ಇಂದಿಲ್ಲ ಇಂದಿರುವ ಸ್ವಾತಂತ್ರ್ಯ ಮುಂದೆ ಇರುವುದೋ ಇಲ್ಲವೋ ಗೊತ್ತಿಲ್ಲ. ಈಗ ಸಿಕ್ಕಿರುವ ಸ್ವಾತಂತ್ರ್ಯ ವನ್ನು ಸಾತ್ವಿಕ ವಿಚಾರಗಳನ್ನು ತಿಳಿದು ತಿಳಿಸಿ ಬೆಳೆಸಲು ಅವಕಾಶವಿದ್ದರೆ ಉತ್ತಮ ಬದಲಾವಣೆ ಆಂತರಿಕ ವಾಗಿ ಆಗಬಹುದು. ಭೌತಿಕಜಗತ್ತನ್ನಾಗಲಿ, ಅಧ್ಯಾತ್ಮ ಜಗತ್ತನ್ನಾಗಲಿ ಯಾರೂ ಪೂರ್ಣ ಆಳಲಾಗದು. ಕಾರಣ ಅದರೊಳಗಿರುವ ಸಣ್ಣ ಜೀವ ಪಡೆದು ಬೆಳೆದಿರುವ ಹುಲುಮಾನವ ಜೀವ ಇರೋವರೆಗಷ್ಟೆ ಜೀವನ ನಡೆಸೋದು ಜೀವಾತ್ಮನ ಬಿಟ್ಟು ಪರಮಾತ್ಮನಿಲ್ಲವಾದರೂ ಪರಮಾತ್ಮನ ಮರೆತು ಜೀವಾತ್ಮ ಭೂಮಿ ಮೇಲಿರುವುದು ಸತ್ತ. ಹಾಗಾದರೆ ಯಾರಿಂದ ಯಾರು ? ದೇಶದೊಳಗೆ ಪ್ರಜೆಗಳಿದ್ದರೂ ಪ್ರಜೆಗಳಲ್ಲಿ ದೇಶಭಕ್ತಿಯಿಲ್ಲವಾದರೆ ಸಾಲ ತೀರದು. ಹೀಗೇ ಪರಮಾತ್ಮ ಜೀವಾತ್ಮರ ಕಥೆಯಾಗಿದೆ. ದೇಶ ಬಿಟ್ಟು ವಿಶ್ವ ಗುರುವಾಗಲು ಹೊರಟರೆ ದೇಶ ಗುರುತಿಸೋದು ಯಾರು? ಹೀಗೇ ನಿಮ್ಮ ನಿಮ್ಮ ತನುವ ಸಂತೈಸಿಕೊಂಡು ವಾಸ್ತವದ ಸತ್ಯ ತಿಳಿದು ಹಿಂದಿನವರಲ್ಲಿದ್ದ ದೇಶಭಕ್ತಿ ಆಂತರಿಕ ವಾಗಿ ಬಿತ್ತಿ ಬೆಳೆಸುವವರೂ ಶುದ್ದತೆ ಕಡೆಗೆ ನಡೆಯಲೇಬೇಕೆನ್ನುವರು.ಶುದ್ದವಾದ ಶಿಕ್ಷಣವೇ ಇದಕ್ಕೆ ಪರಿಹಾರ. ಹೊರಗೆ ಕೊಡಲಾಗದವರು ಮನೆಯೊಳಗೆ ಕೊಟ್ಟು ತಮ್ಮ ಮಕ್ಕಳ ಜ್ಞಾನ ಬೆಳೆಸುವ ಸ್ವಾತಂತ್ರ್ಯ ಭಾರತೀಯ ಪೋಷಕರಿಗಿಲ್ಲವೆ?
No comments:
Post a Comment