ಮಹಾಮಂತ್ರಿ ಮಹೋದಯರೊಬ್ಬರು ಸಸ್ಯದಲ್ಲೂ
ಜೀವವಿರೋವಾಗ ಗೋ ಮಾಂಸಕ್ಕೆ ವಿರೋಧವೇಕೆ? ಎನ್ನುವ ಮೂಲಕ ಜನರೊಳಗಿರುವ ಸಾತ್ವಿಕ ಬಾವನೆಗೆ ದಕ್ಕೆ ತರುವ ಪ್ರಶ್ನೆ ಹಾಕಿದ್ದಾರೆಂದರೆ ಕಣ್ಣಿಗೆ ಕಂಡದ್ದಷ್ಟೇ ಸತ್ಯವಲ್ಲ ಕಾಣದ ಸತ್ಯ ತಿಳಿದು ಜನನಾಯಕನಾಗಬೇಕಿದೆ.
ಮಾಂಸಹಾರಕ್ಕೂ ಸಸ್ಯಾಹಾರಕ್ಕೂ ವ್ಯತ್ಯಾಸ ತಿಳಿಯದವರು ಜನರನ್ನು ತಿನ್ನೊದಕ್ಕೆ ಹುಟ್ಟಿರೋದೆಂದು ಬಳಸಿಕೊಂಡು ಬೆಳೆಯುತ್ತಿದ್ದಾರೆಂದರೆ ಇದೊಂದು ಅಜ್ಞಾನವಷ್ಟೆ.
ಸಸ್ಯಾಹಾರದಲ್ಲಿರುವ ಜೀವಶಕ್ತಿಗೂ ಮಾಂಸಾಹಾರ
ದಲ್ಲಿರುವ ಪ್ರಾಣಶಕ್ತಿಗೂ ವ್ಯತ್ಯಾಸವಿಲ್ಲವೆ?
ಪ್ರಾಣಿಗಳ ಮನಸ್ಸಿಗೂ ಸಸ್ಯಕ್ಕೂ ವ್ಯತ್ಯಾಸವಿಲ್ಲವೆ? ಪ್ರಕೃತಿಗೂ ಪ್ರಾಣಿಗೂ ವ್ಯತ್ಯಾಸವಿಲ್ಲವೆ? ಪ್ರಕೃತಿಯ ಒಂದು ಸಣ್ಣ ಕಣದಿಂದ ಜೀವಸೃಷ್ಟಿಯಾಗಿ ಬೆಳೆಯುತ್ತದೆ .ಇದು ಪ್ರಾಣಿ ಪಕ್ಷಿ ಜೀವ ಜಂತುಗಳಲ್ಲಿ ಆಹಾರದ ಮೂಲಕ ಸೇರಿದಾಗ ಅದರಲ್ಲಿ ಸತ್ವ,ರಜಸ್ಸು,ತಮಸ್ಸಾಗಿ ಪರಿವರ್ತನೆ ಆಗುವುದು ಎಲ್ಲರಿಗೂ ತಿಳಿದ ವಿಚಾರ. ಈ ಗುಣ ಲಕ್ಷಣ ಕಾಣದಿದ್ದರೂ ಮಾನವನೊಳಗೇ ಶಕ್ತಿ ಯಾಗಿರುತ್ತದೆ. ಆರನೇ ಅರಿವಿನೆಡೆಗೆ ಹೋಗಲು ಸಾಧ್ಯವಾಗುವ ಮಾನವನಿಗಷ್ಟೆ ಆಹಾರದಲ್ಲಿ ವ್ಯತ್ಯಾಸ ಕಾಣೋದು.
ಹೊಟ್ಟೆ ತುಂಬಿದ ಮೇಲೂ ತಿನ್ನೋದು ಮಾನವನೆ.ಹೀಗಾಗಿ ತನ್ನ ಆರೋಗ್ಯಕ್ಕೆ ತಾನೇ ಆಹಾರ ತಯಾರಿಸಿಕೊಂಡು ಸತ್ಕರ್ಮದಿಂದ ಹಣಗಳಿಸಿ ಸ್ವಾವಲಂಬನೆ ಕಡೆಗೆ ನಡೆಯುವುದು ಮಾನವ ಧರ್ಮ ವಾಗಿದೆ.ಪ್ರಕೃತಿ ಎಲ್ಲರಿಗೂ ಸರಿಸಮನಾಗಿ ಜೀವಿಸಲು ಅವಕಾಶ ಕೊಟ್ಟರೂ ತನ್ನ ಬುದ್ದಿವಂತಿಕೆ ಯನ್ನು ಬಳಸಿ ಇತರರ ಜೀವನಕ್ಕೆ ಒಳ್ಳೆಯದೂ ಮಾಡಬಹುದು.ಹಾಳೂ ಮಾಡಬಹುದು.
ಇದಕ್ಕೆ ಕಾರಣ ಒಳಗಿರುವ ಮನಸ್ಸು. ಹೀಗಾಗಿ ಮನಸ್ಸಿನ
ನಿಗ್ರಹಕ್ಕೆ ಸಾತ್ವಿಕ ಆಹಾರವಾದ ಸಸ್ಯವನ್ನು ಬಳಸಿದ್ದರು. ಸಸ್ಯಾಹಾರದಲ್ಲಿಯೂ ಸಾತ್ವಿಕ ರಾಜಸಿಕ ತಾಮಸಿಕ ಗುಣವಿರೋದನ್ನು ಸೂಕ್ಮವಾಗಿ ಗಮನಿಸಿದವರು ಆಹಾರ ಬಿಟ್ಟು ತಪಶ್ಯಕ್ತಿಯಿಂದ ಸಾವಿರಾರು ವರ್ಷ ಭೂಮಿಯಲ್ಲಿ ಜೀವಿಸಿದ್ದರೆಂದರೆ ದೇಹ ಒಂದು ಮಾಧ್ಯಮವಷ್ಟೆ.ಇಲ್ಲಿ ಆತ್ಮೋದ್ದಾರಕ್ಕೆ ಸಹಕಾರಿಯಾಗುವ ಧರ್ಮ ಕರ್ಮವನರಿತು ನಡೆದವರನ್ನು ಮಹಾತ್ಮರೆಂದರು. ಭೌತಿಕದ ರಾಜಕೀಯಕ್ಕೂ ಅಧ್ಯಾತ್ಮದ ರಾಜಯೋಗಕ್ಕೂ ಹೇಗೆ ವ್ಯತ್ಯಾಸವೆದೆಯೋ ಹಾಗೇ ಸಸ್ಯಾಹಾರ ಮಾಂಸಾಹಾರಕ್ಕೆ ವ್ಯತ್ಯಾಸವಿದೆ. ಮನಸ್ಸು ಒಳಗೆ ನಡೆದಷ್ಟೂ ಸತ್ಯದರ್ಶನ ಹೊರಗೆ ಹೊರಟಷ್ಟೂ ಮಿಥ್ಯದರ್ಶನ. ಭೌತಿಕ ವಿಜ್ಞಾನ ಬೆಳೆದಂತೆಲ್ಲಾ
ಕಾಲಾನಂತರದಲ್ಲಿ ಬದಲಾವಣೆ ಆದರೂ ಹಿಂದಿನ ಸಾತ್ವಿಕ ಮನಸ್ಸು ಇಂದಿಲ್ಲ.ಅಂದಿನ ಶಿಕ್ಷಣಪದ್ದತಿ,ಆಹಾರಪದ್ದತಿ ಇಂದಿಲ್ಲ ಹೀಗಾಗಿ ಏನು ಮಾಡಿದರೂ ಸರಿ ಎನ್ನುವ ಹಂತಕ್ಕೆ ಮಾನವ ಬೆಳೆದು ನಿಂತು ತನ್ನ ಪಾಪಕ್ಕೆ ತಾನೇ ಶಿಕ್ಷೆ ಅನುಭವಿಸುವಂತಾಗಿದೆ. ಪ್ರಾಣಿಗಳ ಗುಣಲಕ್ಷಣಕ್ಕೂ ಜೀವಿಗಳ ಗುಣಲಕ್ಷಣಕ್ಕೂ ವ್ಯತ್ಯಾಸವಿದೆ. ಸಾತ್ವಿಕ ರಾಜಸಿಕ ತಾಮಸಿಕ ಗುಣದಿಂದಲೇ ಈ ಜಗತ್ತು ನಡೆದಿರೋದು.ಇದು ಆಹಾರ ವಿಹಾರದಲ್ಲಿಯೇ ಕಾಣಬಹುದು. ಒಟ್ಟಿನಲ್ಲಿ ಮಾನವ ತಿನ್ನುವುದಕ್ಕಾಗಿ ಬದುಕಬಾರದು ಬದುಕಲು ತಿನ್ನಬೇಕಷ್ಟೆ.ಹಿಂದಿನ ಮಹರ್ಷಿಗಳುತಪಸ್ವಿಗಳು,ಯೋಗಿ,,
ಜ್ಞಾನಿ,ಸಂಸಾರದಲ್ಲಿದ್ದೂ ತಮ್ಮ ಆಹಾರದಲ್ಲಿ ಕಟ್ಟುನಿಟ್ಟಿನ ನಿಯಮ ಹೊಂದಿದ್ದು ಆತ್ಮಜ್ಞಾನದಿಂದ ಜೀವನ್ ಮುಕ್ತಿ ಪಡೆದರೆಂದರೆ ದೇಹದೊಳಗೆ ಸೇರಿಸುವ ಪ್ರತಿಯೊಂದು ವಿಷಯ ಆಹಾರವೇ ಜೀವನದ ಸುಖ ದು:ಖಕ್ಕೆ ಕಾರಣವೆನ್ನುವುದು ಸ್ಪಷ್ಟವಾಗಿ ತಿಳಿಯಬಹುದು. ಭೂಮಿಯ ಋಣ ತೀರಿಸುವುದಕ್ಕಾಗಿ ಸತ್ಕರ್ಮ, ಸ್ವಧರ್ಮದ ಜೊತೆಗೆ ಸುಜ್ಞಾನದಿಂದ ಜೀವನ ನಡೆಸುತ್ತಾ ಸಾತ್ವಿಕ ಆಹಾರ ಸೇವಿಸಿ ಜೀರ್ಣಿಸಿಕೊಂಡವರು ಯೋಗಿಗಳಾದರು. ಪರಮಾತ್ಮನ ಪ್ರಸಾದವೆಂದರಿತು ಆಹಾರ ಸೇವನೆ ನಡೆಸಿದವರ ಜ್ಞಾನಕ್ಕೂ, ಪ್ರಕೃತಿ ಭೂಮಿ ತನ್ನ ಸ್ವತ್ತು ಎಂದರಿತು ಜೀವನ ನಡೆಸುವುದಕ್ಕೂ ವ್ಯತ್ಯಾಸವಿದೆ. ಹೊರಗಿನಿಂದ ಏನೇ ಹಾಕಿದರೂ ಒಳಗೆ ಹೋದಮೇಲೆ ಅದರ ಪ್ರಭಾವ ತಿಳಿಯೋದು. ಈಗ ವಿದೇಶಿ ಸಾಲವಾಗಲಿ ಶಿಕ್ಷಣವಾಗಲಿ ಆಹಾರ ವಿಹಾರವಾಗಲಿ ಹೇಗೆ ನಮ್ಮನ್ನು ಸಮಸ್ಯೆಕಡೆಗೆ ಕರೆದೊಯ್ದು ಸಾಲದ ಜೊತೆಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿದೆಯೋ ಹಾಗೇ ಹೊರಗಿನಿಂದ ಪಡೆಯುವಾಗ ಒಳಗೇ ಇರುವ ಶಕ್ತಿಯನ್ನರಿಯದಿದ್ದರೆ ವಿರುದ್ದ ದಿಕ್ಕಿನ ಪ್ರಭಾವ ಮಾನವನಿಗೆ ಸತ್ಯದ ಅರಿವಾಗದೆ ಅಸತ್ಯವೇ ಬೆಳೆದು ನಿಂತು ಹೊರಗಿನ ಸಾಲ ಬೆಳೆಯುತ್ತದೆ. ಹೀಗಾಗಿ ಹಿಂದೆ ಬೇರೆಯವರಿಂದ ಪಡೆದದ್ದನ್ನು ಸಾಲವೆಂದರಿತು ಅದರಿಂದ ದೂರವಿರುತ್ತಿದ್ದರು. ಸ್ವಾವಲಂಬನೆ, ಸ್ವಾಭಿಮಾನ,ಸ್ವತಂತ್ರ ಜ್ಞಾನದ ಜೊತೆಗೆ ಸ್ವಾನುಭವದಿಂದಲೇ ಸತ್ಯ ತಿಳಿಯುತ್ತಾ ಧರ್ಮ ರಕ್ಷಣೆಗಾಗಿ ಸರಳ ಜೀವನ ನಡೆಸುತ್ತಿದ್ದ ಭಾರತದ ಯೋಗಿಗಳ ದೇಶ ಇಂದು ಭೋಗದೆಡೆಗೆ ನಡೆಸುವ ವಿಜ್ಞಾನದೆಡೆಗೆ ವೇಗವಾಗಿ ಹೋಗಿ ರೋಗಿಗಳ ದೇಶವಾಗುತ್ತಿದೆ ಎಂದರೆ ಆರೋಗ್ಯಕರ ಶಿಕ್ಷಣವೂ ಕೊಡದೆ ಆಹಾರದಲ್ಲಿಯೂ ವಿಷ ಬೆರೆಸಿ ಪ್ರಾಣಿಪಕ್ಷಿ ಜೀವಜಂತುಗಳ ಸ್ವಾತಂತ್ರ್ಯ ಹರಣಮಾಡಿ ಪ್ರಕೃತಿಯನ್ನು ವಿಕೃತಗೊಳಿಸುವಷ್ಟು ರಾಜಕೀಯತೆ ಮಾನವನಲ್ಲಿ ಮನೆ ಮಾಡಿದ್ದರೆ ಇದಕ್ಕೆ ಕಾರಣ ಅಜ್ಞಾನವಷ್ಟೆ. ಸತ್ಯ ಬಿಟ್ಟು ಮಿಥ್ಯ ಬೆಳೆದಷ್ಟೂ ಸಮಸ್ಯೆ ಹೆಚ್ಚುವುದೆನ್ನುವುದು ಮಹಾತ್ಮರ ಸಂದೇಶವಾಗಿತ್ತು.ಹಾಗಾದರೆ ಸತ್ಯ ಯಾವುದು? ಆತ್ಮಜ್ಞಾನವೇ ಸತ್ಯ ವಿಜ್ಞಾನ ಮಿಥ್ಯ. ಸಾಧ್ಯವಾದವರು ಬದಲಾಗಬಹುದಷ್ಟೆ.ಯಾರನ್ನೂ ಬದಲಾಯಿಸಲಾಗದು.
No comments:
Post a Comment