ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, July 3, 2023

ಜ್ಞಾನಕ್ಕಿಂತ ಶ್ರೇಷ್ಠ ಬೇರಿಲ್ಲ. ಆಳವಾದ ಬೇರನ್ನು ಕೀಳಲಾಗದು ಬೆಳೆಸಬಹುದು.

ಗುರುಪೂರ್ಣಿಮೆಯ ಶುಭಾಶಯಗಳು
ಭಾರತ ಯೋಗಿಗುರುಗಳ ದೇಶದಿಂದ ವಿಶ್ವಗುರುವಾಗಿತ್ತು.
ಗುರು  ಸತ್ಯಜ್ಞಾನವನ್ನು ಕೊಡುವ  ದೇವರು. ಅಧ್ಯಾತ್ಮ ಸತ್ಯ ಭೌತಿಕ ಸತ್ಯದ ನಡುವಿರುವ ಸಾಮಾನ್ಯ ಸತ್ಯವನರಿತವರು ಭೂಮಿಯಲ್ಲಿ  ಉತ್ತಮ ಜೀವನ ನಡೆಸುವ ಗುರುವಾಗಬಹುದೆಂಬುದನ್ನು ಎಲ್ಲಾ ಸಾಧು ಸಂತ,ದಾಸ,
ಶರಣರ ತತ್ವಗಳಿಂದ ತಿಳಿಯಬಹುದು. ಗುರು,ಮಹಾಗುರು, ವಿಶ್ವಗುರು ಎಲ್ಲರಲ್ಲಿಯೂ ಅಡಗಿರುವ ತತ್ವಜ್ಞಾನದಿಂದ  ಒಗ್ಗಟ್ಟು ಏಕತೆ,ಐಕ್ಯತೆ,ಸಮಾನತೆ  ಬೆಳೆದಿತ್ತು.
ಗುರು ಬೇರೆ ಶಿಕ್ಷಕ ಬೇರೆ ಎನ್ನುವ ಹಂತಕ್ಕೆ ಬಂದಿರುವ ಭಾರತೀಯ ಶಿಕ್ಷಣ ಪದ್ದತಿ  ಇಂದಿಗೂ ಗುರುವಿನ ಆಂತರಿಕ ಶಕ್ತಿಯೇ ಭೌತಿಕ ಜಗತ್ತನ್ನು ನಡೆಸುತ್ತಿರುವುದೆನ್ನುವುದನ್ನು ಗುರುತಿಸುವುದರಲ್ಲಿ ಸೋತಿದೆ .ಕಾರಣ ಶಿಕ್ಷಣದ ಪ್ರಾಥಮಿಕ ಹಂತಕ್ಕೆ  ಸಿಗದ ಸಾತ್ವಿಕ ಗುರು. ಮಕ್ಕಳಿಗೆ ಮನೆಯೊಳಗೆ ಇರುವ ಮೊದಲು ಗುರು ತಾಯಿಯ ಮೂಲಕ ಶಿಕ್ಷಣ ಸಿಕ್ಕಿದರೂ ತಾಯಿಗೆ ಮೊದಲ ಶಿಕ್ಷಣದಲ್ಲಿಯೇ  ಅಧ್ಯಾತ್ಮ ಗುರುಗಳಿಂದ ಶಿಕ್ಷಣ ಸಿಗದೆ ಭೌತಿಕ ಶಿಕ್ಷಣ ಕೊಟ್ಟು ಭೌತ ವಿಜ್ಞಾನ ಬೆಳೆದಿದೆ. ಆದರೆ, ಮೂಲ ಸತ್ಯವನರಿಯದೆ ದೂರದ ಸತ್ಯ ತಿಳಿದಾಗ  ಗುರುವಿಗೂ ಶಿಕ್ಷಕರಿಗೂ ವ್ಯತ್ಯಾಸ ಕಾಣುವುದು ಸಹಜ. ಈ ಅಂತರದಿಂದಾಗುತ್ತಿರುವ ಅವಾಂತರಗಳು ಇಡೀ ಸಮಾಜವನ್ನು ಒಂದು ಮಾಡಲಾಗದೆ ಇನ್ನಷ್ಟು  ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾ ಪರಿಹಾರವನ್ನು ಹೊರಗಿನ ಗುರುಗಳಿಂದ  ಕೇಳಿ ತಿಳಿದರೂ ಒಳಗೇ ಇರುವ ಅರಿವಿನ ಗುರು ಎಚ್ಚರವಾಗದಿದ್ದರೆ ಕಷ್ಟ ನಷ್ಟ ತಪ್ಪಿದ್ದಲ್ಲ.
ಕಷ್ಟದ ನಂತರ ಸುಖವಿದೆ ಎನ್ನುವರು. ಈಗ ಕಷ್ಟಪಟ್ಟು ದುಡಿದದ್ದೇ ನಷ್ಟವಾಗುವಾಗ ಸುಖವಾಗಿ ಗಳಿಸಿದ್ದು ಉಳಿಯಲು ಸಾಧ್ಯವಿಲ್ಲ. ಹಾಗೆಯೇ ಗುರುವಿನ ಕೃಪೆಯಾಗಲು ಹಣವಿದ್ದರೆ ಸಾಕೆನ್ನುವವರೊಮ್ಮೆ ಯೋಚಿಸಿ ಜ್ಞಾನವಿಲ್ಲದೆ  ಹಣಸದ್ಬಳಕೆ ಆಗದು. ಗುರುವಿಗೆ ದಾನ ಮಾಡಿದ ಮೇಲೆ‌ ಮುಗಿಯಿತು. ದೇವರಿಗೂ ಹಾಕುವ. ಕಾಣಿಕೆಯಾಗಲಿ ಮಾಡುವ ಸೇವೆಯಾಗಲಿ  ಎಲ್ಲಾ ಗುರುವಿನ ಮೂಲಕವಾದರೆ ದೇವರಿಗೆ ತಲುಪಿದಂತೆ. ಇಷ್ಟಕ್ಕೂ  ಹಣಸಂಪಾದನೆಗೆ ವಿದ್ಯೆ,ಬುದ್ದಿಯಿದ್ದರೆ ಸಾಕೆಂಬುದು ತಪ್ಪಾಗಿ ಕಾಣುತ್ತಿದೆ  ಅದನ್ನು ದುರ್ಭಳಕೆ ಮಾಡಿಕೊಂಡು  ಗುರು
ಗಳಿಂದ ಆಶೀರ್ವಾದ ಪಡೆದವರು ದೇಶವಾಳುತ್ತಾ ವಿದೇಶ ಉದ್ದಾರ ಮಾಡಿದರೆ  ಅಜ್ಞಾನವಷ್ಟೆ.
ಒಟ್ಟಿನಲ್ಲಿ ಗುರಿ ಗುರು  ಅಧ್ಯಾತ್ಮದ  ಮೂಲಕ ಭೌತಿಕ ಸತ್ಯ ತಿಳಿಸುವಂತಾದರೆ  ನಾಣ್ಯಗಳು  ವ್ಯವಹಾರಕ್ಕಷ್ಟೇ ಸೀಮಿತವಾಗದೆ ಧರ್ಮದೆಡೆಗೆ ಸದ್ಬಳಕೆ ಆಗಬಹುದು. ಕೆಲವೆಡೆ  ಮಿತಿಮೀರಿದ ರಾಜಕೀಯವಿದ್ದು  ಹಲವರಿಗೆ ಗುರು ವ್ಯಕ್ತಿಯಾಗಷ್ಟೇ ಕಾಣುವರು. ಗುರು ವ್ಯಕ್ತಿಯಲ್ಲ ಶಕ್ತಿ ಎನ್ನುವ ಹಿಂದೂ ಧರ್ಮವು  ಜ್ಞಾನ ದೇವತೆ ಎಂದು ಸ್ತ್ರೀ ಶಕ್ತಿಯನ್ನು ಆರಾಧಿಸುವ ಮೂಲಕ ಭಾರತ ಮಾತೆ ವಿಶ್ವಗುರು ಎಂದರು.
ಈಗ ಭಾರತೀಯ ಸ್ತ್ರೀ ಭೌತಿಕದಲ್ಲಿ ಮಾಡಿದಷ್ಟು ಸಾಧನೆ ಅಧ್ಯಾತ್ಮ ದಲ್ಲಿ ಮಾಡಲಾಗುತ್ತಿಲ್ಲವೆಂದರೆ  ಅವಳಿಗೆ ತೋರಿಸುವ ಅಗೌರವ,ಅಸಹಕಾರ. ಹಣವಿದ್ದರೆ ಏನಾದರೂ ಮಾಡಬಹುದೆನ್ನುವ ದುರಹಂಕಾರ ಇಂದು ಅಸುರ ಶಕ್ತಿ ಬೆಳೆದಿದೆ ಎಂದರೆ ಅವರಿಗೆ ಗುರುಗಳ ಸಹಕಾರವೂ ಬೆಳೆದಿದೆ ಎಂದರ್ಥ.
ದೇವಗುರು ಅಸುರಗುರು ಮಾನವಗುರು...ಯಾರಿಗೆ ಹೆಚ್ಚು ಬಲವಿರುವುದೋ  ಅವರ ಶಿಷ್ಯರು ಬೆಳೆಯುವರು. ಆತ್ಮಜ್ಞಾನದೆಡೆಗೆ  ನಡೆದವರು ಮರೆಯಾಗಿದ್ದರೂ ತತ್ವಜ್ಞಾನ ಒಂದೇ ಇರುವುದು. ಇದರಲ್ಲಿ ಬೇಧಭಾವವಿದ್ದರೆ  ಅಧ್ವೈತ ವಾಗದು. ಕಾಲಮಾನಕ್ಕೆ ತಕ್ಕಂತೆ ವ್ಯವಹಾರ ಬದಲಾಗುತ್ತದೆ
ಆದರೆ ಧರ್ಮ ಸತ್ಯ ಒಂದೇ ಇದ್ದಂತೆ ವಿಶ್ವಗುರು ಭಾರತ ಒಂದೇ. ಅದನ್ನು ಸರಿಯಾಗಿ ಗುರುತಿಸಿ ಬೆಳೆಸುವಲ್ಲಿ ಶಿಕ್ಷಣ ಸೋತಿದೆ. ಈಗಲೂ ತಾವು ಬದಲಾಗದೆ ಇತರರನ್ನು ಬದಲಾಯಿಸುವ ರಾಜಕೀಯ ಮನೆ ಮಾಡಿದೆ. ತಾತ್ಕಾಲಿಕ ತಾಂತ್ರಿಕ ಶಿಕ್ಷಣಕ್ಕೂ ಶಾಶ್ವತ ದ ತಾತ್ವಿಕ ಶಿಕ್ಷಣಕ್ಕೂ ವ್ಯತ್ಯಾಸವಿಷ್ಟೆ. ಕಣ್ಣಿಗೆ ಕಾಣೋದು ಬೇಗ ಗುರುತಿಸಲ್ಪಟ್ಟರೂ ಕಾಣದ ಸತ್ಯ ಗುರುತು ಹಿಡಿಯಲು  ಆಂತರಿಕ ಶಕ್ತಿಯಾದ ಜ್ಞಾನವೇ ಗುರು. 
ನಾನು ಹೋದಾಗಲೇ ಗುರುದರ್ಶನ. ಭೌತಿಕದಲ್ಲಿ ಮಾತ್ರ ನಾನಿರುವಾಗಲೇ ಗುರುದರ್ಶನಕ್ಕೆ  ಅವಕಾಶ. ನನ್ನಲ್ಲಿಯ ಗುರು ದರ್ಶನವಾಗಲು  ಆಗೋದಕ್ಕೆ  ಗುರುವಿನ  ಆಶೀರ್ವಾದ ಅಗತ್ಯವಾಗಿದೆ. ಯಾವುದೇ ರೂಪದಲ್ಲಾದರೂ ಬಂದು ಜೀವನದ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಸುವ ಗುರು ಪ್ರತಿಯೊಬ್ಬರಲ್ಲಿಯೂ ಅಡಗಿರುವಾಗ ಕಾಣುವ ಶಕ್ತಿ ಶಿಕ್ಷಣದಲ್ಲಿಯೇ  ನೀಡಿದರೆ ಆತ್ಮನಿರ್ಭರಭಾರತವಾಗುವುದು.
ಯಾರೋ ಹೊರಗಿನಿಂದ ಬಂದು ಜ್ಞಾನ ಕೊಡುವರೆಂದರೆ ತಪ್ಪು. ಒಳಗೇ ಅಡಗಿರುವ ನಮ್ಮ ಸುತ್ತಮುತ್ತಲೂ  ಇರುವ  ಸಾತ್ವಿಕ ಗುರುಗಳಿಂದಲೂ ಸಾಕಷ್ಟು ಜ್ಞಾನ ಪಡೆಯಬಹುದು. ಇದನ್ನು ತಿಳಿಸಿ ಬೆಳೆಸುವ ಜವಾಬ್ದಾರಿ ಪೋಷಕರದ್ದಾಗಿದೆ. ಭಾರತೀಯ ಸ್ತ್ರೀ ಶಕ್ತಿಯನ್ನು  ಸದ್ಬಳಕೆ ಮಾಡಿಕೊಳ್ಳಲು ಅಧ್ಯಾತ್ಮ ಗುರುಗಳಿಂದ ಸಾಧ್ಯ. ಯಾವಾಗ ಅವರೇ ಭೌತಿಕಾಸಕ್ತಿಯ ಬೆಳೆಸೋ ರಾಜಕೀಯಕ್ಕೆ ಮುಖಮಾಡುವರೋ  ಸ್ತ್ರೀ ಶಕ್ತಿಯ ದುರ್ಭಳಕೆ ಹೆಚ್ಚುವುದು. 
ಅಧ್ಯಾತ್ಮದ ವಿಚಾರಗಳನ್ನು ಅನುಭವದಿಂದ  ಸಾಧ್ಯವಾದಷ್ಟು ಅರ್ಥ ಮಾಡಿಕೊಳ್ಳುತ್ತಾ  ಭೌತಿಕದಲ್ಲಿ
‌ಬದುಕುವುದು   ಮಹಿಳೆಗೆ ಕಷ್ಟ.ಸಂಸಾರದೊಳಗಿದ್ದರಂತೂ ಅರ್ಥ ವಾಗೋದೆ ಕಷ್ಟ.ಇವರಿಗೆ ಅರ್ಥ ಮಾಡಿಸಲು ಪುರುಷರಿಗೆ  ಸಾಧ್ಯವಾಗುವುದು  ಅಧಿಕಾರ ಹಣವಿದ್ದಾಗ ಮಾತ್ರ. ಆದರೆ ಅದರ ಹಿಂದೆ ಭ್ರಷ್ಟಾಚಾರವಿದ್ದರೆ,ಅಸತ್ಯ,
ಅನ್ಯಾಯವಿದ್ದರೆ ಧರ್ಮ ರಕ್ಷಣೆ ಕಷ್ಟ. ಒಟ್ಟಿನಲ್ಲಿ ಗುರುವಿನ ಶಕ್ತಿ ವ್ಯಕ್ತಿತ್ವದೊಳಗಿರುತ್ತದೆ ವ್ಯಕ್ತಿಯ ಗುಣಜ್ಞಾನದಿಂದಲೇ  ಗುರುವಿನ ದರ್ಶನವಾಗುತ್ತದೆ. ನಮಗೇ ಒಳಗಿನ ಗುರುವಿನ ದರ್ಶನವಾಗದೆ ಮಕ್ಕಳಿಗೆ ಗುರುವಾಗೋದು ಕಷ್ಟವಿದೆ.
ತಾಯಿಯೇ ಮೊದಲ ಗುರು ತಂದೆಯೇ ಎರಡನೇಗುರು..
ಬಂದು ಬಂಧವರು ಸ್ನೇಹಿತರು, ಸಮಾಜ,ರಾಷ್ಟ್ರವಿಶ್ವಮಟ್ಟಕ್ಕೆ  ಏರಿರುವ‌ ಗುರು ಜಗದ್ಗುರು.

ಶಿಕ್ಷಕರಾಗಬಹುದು ಗುರುವಾಗುವುದು ಸುಲಭವಿಲ್ಲ. ಜ್ಞಾನ ದಾಸೋಹದಿಂದಲೇ  ಮುಕ್ತಿ ಮೋಕ್ಷವೆಂದಿರುವ  ಹಿಂದೂ ಸನಾತನ ಧರ್ಮ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ  ಶಿಕ್ಷಕರಾಗಿ ಸೇವೆ ಮಾಡಿದ್ದ ಅನೇಕ ಮಹಾಗುರುಗಳಿಂದ  ಭಾರತ  ವಿಶ್ವಗುರುವಾಗಿತ್ತು. ಇದೊಂದು ಅಧ್ಯಾತ್ಮ ಸೇವೆಯಾದ್ದರಿಂದ ಕಣ್ಣಿಗೆ ಕಾಣದಿದ್ದರೂ  ಆತ್ಮಜ್ಞಾನದೆಡೆಗೆ ನಡೆಸಿತ್ತು. ಸತ್ಯ ಕಠೋರವಾಗುವುದು ಅದನ್ನು ನಿರ್ಲಕ್ಷ್ಯ ಮಾಡಿದಾಗಷ್ಟೆ. ಈಗ ನಿರ್ಲಕ್ಷ್ಯ ಗೊಳಗಾದ ಸತ್ಯ ಧರ್ಮದ ಅಂತರ ಬೆಳೆದು ಅವಾಂತರ ಹೆಚ್ಚಾಗಿದ್ದರೂ ಇದರಿಂದ ಕಲಿಯಬೇಕಾದದ್ದು ಇದೆ.ಅನುಭವಕ್ಕೆ ಬರದೆ ಮಾನವ ಏನೂ ಒಪ್ಪಿಕೊಳ್ಳದ ಕಾರಣ  ಅನುಭವಿಸಿಯೇ ತೀರಬೇಕಿದೆ.

ಎಲ್ಲಾ ಗುರುವೃಂದದವರಿಗೂ ನಮಸ್ಕಾರಗಳು.  ಚರಾಚರದಲ್ಲಿಯೂ  ಅಡಗಿರುವ  ಅಣು ಪರಮಾಣುಗಳ ಅಪಾರವಾದ ಶಕ್ತಿಯನ್ನು  ಮಾನವ ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋದು ಅಧ್ಯಾತ್ಮ ಸಾಧನೆಯಾಗಿತ್ತು.ಅಧ್ಯಾತ್ಮ   ಮತ್ತು ಭೌತಿಕ ಗುರು  ಒಬ್ಬರಾಗಿರಲು ಶಿಕ್ಷಣದಲ್ಲಿಯೇ ಪ್ರಾಥಮಿಕ  ಶಿಕ್ಷಣ ನೈತಿಕ ಅಧ್ಯಾತ್ಮ ಸತ್ಯ ತಿಳಿಸುವ ಗುರುಗಳು ಶಿಕ್ಷಕರಾಗಿ ಸೇವೆ ಸಲ್ಲಿಸುವಂತಿರಬೇಕಿದೆ. ದೊಡ್ಡವರಿಗೆ ಉಪದೇಶ ನೀಡುವ‌ ಮೊದಲು ಮಕ್ಕಳ ಅರಿವನ್ನು ಗುರುತಿಸುವ ಶಿಕ್ಷಣ ನೀಡುವ ಶಿಕ್ಷಕರಾದರೆ ಭಾರತ ವಿಶ್ವಗುರು ಆಗಬಹುದು. ಮೊದಲು ಆಗಿತ್ತು ಈಗ ಆಗುತ್ತಾ ಇದೆ ಮುಂದೆ ಆಗಲೇ ಬೇಕು.ಇದಕ್ಕಾಗಿ ಎಲ್ಲಾ ಗುರುಗಳ ಆಶೀರ್ವಾದ ಸಹಕಾರವಿರಬೇಕಿದೆ. ಒಗ್ಗಟ್ಟಿನಲ್ಲಿದೆ ತತ್ವಜ್ಞಾನ.
 ಜೀವನ್ಮುಕ್ತಿಗೆ ಅಧ್ಯಾತ್ಮ ಗುರು ಗುರಿತೋರಿಸಿದರೆ, ಜೀವನ ನಡೆಸಲು ಭೌತಿಕ ಶಿಕ್ಷಣದ ಅಗತ್ಯವಿದೆ. ಹಿಂದೆ  ಕಾಡಿನಲ್ಲಿದ್ದು ತಪಸ್ಸು ಮಾಡಿದ್ದರೆ ಇಂದು ನಾಡಿನಲ್ಲಿದ್ದೇ ಜಪ ಮಾಡಲಾಗದ ಸ್ಥಿತಿಗೆ ಕಾರಣವೇ ಮನಸ್ಸನ್ನು ಹೊರಗೆಳೆದು ಆಳಿದ ರಾಜಕೀಯ ವಿಷಯವಾಗಿದೆ. ಇದರಿಂದ ದೂರ ಇದ್ದು ಸತ್ಯದರ್ಶನ ಮಾಡಿಕೊಳ್ಳಲು ಯೋಗಿಗಳಿಗೆ ಸಾಧ್ಯ. ಯೋಗದಿಂದ ಯೋಗ್ಯ ಶಿಕ್ಷಣದಿಂದ  ಭಾರತ ಯೋಗಿಗಳ ದೇಶವಾಗಿ ಶಾಂತಿಯೆಡೆಗೆ ನಡೆದಿತ್ತು. ಈಗಿದು ಭ್ರಷ್ಟಾಚಾರ ದ ರೋಗಕ್ಕೆ ಹೆಚ್ಚು  ಸಹಕಾರ ಕೊಟ್ಟು  ಹಿಂದುಳಿದವರ ಸಂಖ್ಯೆ ಹೆಚ್ಚಾಗಿದೆ. ಯಾವುದೂ ಶಾಶ್ವತವಲ್ಲ. ಯಾರೂ ಶಾಶ್ವತವಲ್ಲ .ಆತ್ಮಶಾಶ್ವತ ಆತ್ಮಾನುಸಾರ ನಡೆದವರಿಗೆ ಅರಿವೇ ಗುರುವಾಗಿರುವುದು. ಜ್ಞಾನಕ್ಕಿಂತ ಶ್ರೇಷ್ಠ ಬೇರಿಲ್ಲ. ಜ್ಞಾನದ ಬೇರು ಆಳವಾಗಿರುವಾಗ ಒಳಹೊಕ್ಕಿ ನೋಡಿದರೆ ಸಾಕು. ಹೊರಬಂದಂತೆಲ್ಲಾ ವಿಶೇಷಜ್ಞಾನವಿದ್ದರೂ ಸತ್ಯ ಇರದು.

No comments:

Post a Comment