*(ಋಗ್ವೇದ. ಮಂಡಲ ೧. ಸೂಕ್ತ ೧೧೯. ಮಂತ್ರ ೬.)*
*ಮತ್ತೆ ಅದೇ ವಿಷಯವನ್ನು ಹೇಳಲಾಗಿದೆ.*
*ಯುವಂ ರೇಭಂ ಪರಿಷೂತೇರುರುಷ್ಯಥೋ ಹಿಮೇನ ಘರ್ಮಂ ಪರಿತಪ್ತಮತ್ರಯೇ |*
*ಯುವಂ ಶಯೋರವಸಂ ಪಿಪ್ಯಥುರ್ಗವಿ ಪ್ರ ದೀರ್ಘೇಣ ವಂದನಸ್ತಾರ್ಯುಯುಷಾ ||೬||*
*ಪದಾರ್ಥ :-* ಹೇ ಎಲ್ಲ ವಿದ್ಯೆಗಳಲ್ಲಿ ವ್ಯಾಪ್ತರಾದ ಸ್ತ್ರೀ - ಪುರುಷರೇ ! ಹೇಗೆ
[ಯುವಮ್] ನೀವಿಬ್ಬರೂ
[ಅತ್ರಯೇ] ಆಧ್ಯಾತ್ಮಿಕ, ಆಧಿ ಭೌತಿಕ, ಆಧಿ ದೈವಿಕ ಈ ಮೂರು ದುಃಖಗಳು ಯಾವುದರಲ್ಲಿ ಇಲ್ಲವೋ ಆ ಉತ್ತಮ ಸುಖಕ್ಕಾಗಿ
[ಪರಿಷೂತೇ] ಎಲ್ಲ ಕಡೆಗಳಿಂದ ಎರಡನೇ ವಿದ್ಯೆಯು ಜನ್ಮದಲ್ಲಿ ಪ್ರಸಿದ್ಧನಾಗಿರುವ ವಿದ್ವಾಂಸನಿಂದ ವಿದ್ಯೆಯನ್ನು ಪಡೆದ
[ಪರಿತಪ್ತಮ್] ಎಲ್ಲ ರೀತಿಯ ಕ್ಲೇಶಗಳನ್ನು ಹೊಂದಿದ
[ರೇಭಮ್] ಸಮಸ್ತ ವಿದ್ಯೆಗಳಿಂದ ಪ್ರಶಂಸೆಯನ್ನು ಮಾಡುವ ವಿದ್ವಾಂಸನಾದ ಮನುಷ್ಯನನ್ನು
[ಹಿಮೇನ] ಶೀತದ
[ಘರ್ಮಮ್] ಧಾಮದಂತೆ
[ಉರುಷ್ಯಥಃ] ಪಾಲಿಸಿ ಅಂದರೆ ಶೀತದಿಂದ ಧಾಮವು ಹೇಗೆ ರಕ್ಷಿಸುವುದೋ ಹಾಗೆ ಪಾಲಿಸಿರಿ.
[ಯುವಮ್] ನೀವಿಬ್ಬರೂ
[ಗವಿ] ಪೃಥಿವಿಯಲ್ಲಿ
[ಶಯೋಃ] ಮಲಗಿರುವವನ
[ಅವಸಮ್] ರಕ್ಷಣೆ ಮೊದಲಾದವುಗಳನ್ನು
[ಪಿಪ್ಯಥುಃ] ಹೆಚ್ಚಿಸಿರಿ.
[ವಂದನಃ] ಪ್ರಶಂಸೆ ಮಾಡಲು ಯೋಗ್ಯವಾದ ವ್ಯವಹಾರಗಳು
[ದೀರ್ಘೇಣ] ಅತಿದೀರ್ಘವಾದ ದಿನಗಳ
[ಆಯುಃ] ಆಯುಸ್ಸಿನಿಂದ ನೀವಿಬ್ಬರೂ
[ತಾರಿ] ಪಾರುಗೊಳಿಸಿದಿರಿ. ಹಾಗೆಯೇ ನಾವೂ ಕೂಡ
[ಪ್ರ] ಪ್ರಯತ್ನ ಮಾಡಲಿ.
*ಭಾವಾರ್ಥ :-* ಈ ಮಂತ್ರದಲ್ಲಿ ವಾಚಕಲುಪ್ತೋಪಮಾಲಂಕಾರವಿದೆ. ಹೇ ವಿವಾಹ ಮಾಡಿಕೊಂಡ ಸ್ತ್ರೀ - ಪುರುಷರೇ ! ಹೇಗೆ ಶೀತದಿಂದ ಉಷ್ಣವನ್ನು ಕೊಲ್ಲಲಾಗುತ್ತದೋ ಹಾಗೆಯೇ ಅವಿದ್ಯೆಯನ್ನು ವಿದ್ಯೆಯಿಂದ ಕೊಲ್ಲಿರಿ. ಅದರಿಂದ ಆಧ್ಯಾತ್ಮಿಕ, ಆಧಿ ಭೌತಿಕ, ಆಧಿದೈವಿಕ ಈ ಮೂರೂ ಪ್ರಕಾರದ ದುಃಖಗಳು ನಾಶವಾಗಲಿ. ಹೇಗೆ ಧಾರ್ಮಿಕ ರಾಜಪುರುಷರು ಕಳ್ಳರು, ಮೊದಲಾದವರನ್ನು ದೂರ ಮಾಡಿ, ಮಲಗಿರುವ ಪ್ರಜೆಗಳಿಗೆ ರಕ್ಷಣೆ ಕೊಡುತ್ತಾರೋ ಮತ್ತು ಹೇಗೆ ಸೂರ್ಯಚಂದ್ರರು ಸಂಪೂರ್ಣ ಜಗತ್ತಿಗೆ ಪುಷ್ಟಿಯನ್ನು ಕೊಟ್ಟು ಜೀವಿಸಲು ಆನಂದವನ್ನು ಕೊಡುತ್ತಾರೋ ಹಾಗೆ ಈ ಜಗತ್ತಿನಲ್ಲಿ ಪ್ರವೃತ್ತರಾಗಿರಿ.
ಸೂರ್ಯಯಾನವಂತೂ ಅಸಾಧ್ಯ ಚಂದ್ರಯಾನ ಸಾಧ್ಯ. ಅದು ಕೆಲವರ ಸಾಧನೆಯಾದರೂ ನಿರಂತರವಾಗಿ ತಮ್ಮ ಕೆಲಸ ಮಾಡಿಕೊಂಡು ಲೋಕಕ್ಕೆ ಬೆಳಕ ನೀಡುವ ಅಸಂಖ್ಯಾತ ದೈವಶಕ್ತಿಯ ಜೊತೆಗೆ ಸೂರ್ಯ ಚಂದ್ರರ ಬಗ್ಗೆ ಜ್ಞಾನ ಬೆಳೆಸಿಕೊಂಡರೆ ಮಾನವನ ವಿದ್ಯೆ ಸಾರ್ಥಕ.
ವಾಟ್ಸಪ್ ಕೃಪೆ
ಈ ಮೇಲಿನ ಸಂಸ್ಕೃತ ಮಂತ್ರವನ್ನು ಅರ್ಥ ಮಾಡಿಕೊಳ್ಳಲು ಸಂಸ್ಕೃತ ಜ್ಞಾನವಿರಲೇಬೇಕು. ಒಂದು ಮಂತ್ರದಲ್ಲಿರುವ ಅನೇಕ ಶಬ್ದದ ಅರ್ಥ ತಿಳಿಯುವುದಕ್ಕೆ ಸಂಸ್ಕೃತ ಕಲಿಕೆ ಅಗತ್ಯವಿದೆ.ನಮ್ಮ ಹಿಂದಿನ ಸನಾತನಕಾಲದಿಂದಲೂ ಸಂಸ್ಕೃತ ಭಾಷೆ ಜ್ಞಾನದ ಭಾಷೆಯಾಗಿ ಸಾಕಷ್ಟು ಜ್ಞಾನಿಗಳನ್ನು ಬೆಳೆಸಿದೆ.ಆದರೆ ಇಂದು ಸಂಸ್ಕೃತ ಕಲಿಯುವುದಕ್ಕೆ ಸರ್ಕಾರದ ಒಪ್ಪಿಗೆ ಬೇಕು. ಸರ್ಕಾರ ಒಪ್ಪಿದರೂ ಶಾಲಾ ಕಾಲೇಜ್ ನಡೆಸೋರ ಒಪ್ಪಿಗೆ ಇರಬೇಕು.ಶಾಲಾ ಕಾಲೇಜ್ಗಳಲ್ಲಿ ಅಳವಡಿಸಿದ್ದರೂ ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳು ಕಲಿಯಲಾರರು. ಸಂಸ್ಕೃತ ದಿಂದ ಸಂಸ್ಕಾರ ಬೆಳೆಯುವುದೆ? ಸಂಸ್ಕಾರವೆಂದರೆ ನಮ್ಮೊಳಗೇ ಅಡಗಿರುವ ದುರ್ಗುಣಗಳನ್ನು ಸಂಸ್ಕರಿಸಿ ಸದ್ಗುಣವನ್ನು ಬೆಳೆಸಿ ದೇಹದ ಜೊತೆಗೆ ಆತ್ಮ ಶುದ್ದಗೊಳಿಸುವುದೆನ್ನುವ ಸರಳ ಶಬ್ದ ಬಳಸಿದರೆ ಅರ್ಥ ಆಗಬಹುದು.
ಆದರೆ ಸಂಸ್ಕೃತ ಕಲಿತವರೆಲ್ಲರೂ ಶುದ್ದ ಹೃದಯದವರಾಗಿ ಸಮಾಜಕಲ್ಯಾಣ ಲೋಕಕಲ್ಯಾಣಕ್ಕಾಗಿ ಸೇವೆ ಮಾಡದ ಕಾರಣ ಜನರು ಪೂರ್ವಗ್ರಹ ಪೀಡಿತರಾಗಿ ಭಾಷೆಯನ್ನು ತಿರಸ್ಕರಿಸುತ್ತಾ ಪರಕೀಯರ ಭಾಷೆಯನ್ನು ಒಪ್ಪಿ ಅಪ್ಪಿ ಮುಂದೆ ಬಂದರೂ ಸಂಸ್ಕಾರವಿಲ್ಲದ ಮಕ್ಕಳನ್ನು ಇಂದಿನ ಸಮಾಜದಲ್ಲಿ ಕಾಣಬೇಕಿದೆ. ಆದರೆ ಭಾಷೆ ಯಾವುದಾದರೂ ಅದನ್ನು ಬಳಸುವ ರೀತಿಯಲ್ಲಿ ಜ್ಞಾನವಿದೆ. ಅರ್ಥ ವಾಗದೆ ತಿಳಿಸಿದರೆ ವ್ಯರ್ಥ ಅರ್ಥ ವಾಗುವ ರೀತಿಯಲ್ಲಿ ಕಲಿಸುವುದು ಉತ್ತಮ.
ವಿಷಯ ಉತ್ತಮವಾಗಿದ್ದು ವಿದ್ಯೆಯಿಂದ ವಿನಯ ಹೆಚ್ಚಾಗಿ ಸಮಾಜದಲ್ಲಿ ಶಾಂತಿ ಸುಖ ಸಂತೋಷ ಸಮಾಧಾನ,ಸದಾಚಾರದ ವ್ಯಕ್ತಿತ್ವ ಬೆಳೆಸುವುದೇ ನಿಜವಾದ ವಿದ್ಯೆ. ಇವುಗಳನ್ನು ಬಿಟ್ಟು ಅಶಾಂತಿ, ಕ್ರೌರ್ಯ, ಹಿಂಸೆ, ಅನಾಚಾರ ಅಧರ್ಮ ಅನ್ಯಾಯವನ್ನು ಅಸ್ತ್ರ ಮಾಡಿಕೊಂಡು ರಾಜಕೀಯದೆಡೆಗೆ ನಡೆದಷ್ಟೂ ಅವಿದ್ಯೆಯೇ. ಮೇಲಿನಮಂತ್ರದಲ್ಲಿರುವ ವಿದ್ಯೆ ಅವಿದ್ಯೆ ಎಂಬ ಎರಡು ಶಬ್ದದ ಅರ್ಥ ನಮ್ಮ ನಮ್ಮ ಭಾಷೆಯಲ್ಲಿಯೇ ತಿಳಿಯಬಹುದು. ಇಲ್ಲಿ ಅವಿದ್ಯೆ ಎಂದರೆ ವಿದ್ಯಾಭ್ಯಾಸ ಇಲ್ಲದೆ ಇರುವುದಲ್ಲ. ಸತ್ಯಜ್ಞಾನವಿಲ್ಲದ ವಿದ್ಯೆ ಎನ್ನಬಹುದು. ಆತ್ಮಜ್ಞಾನದೆಡೆಗೆ ನಡೆಸೋ ವಿದ್ಯೆಯೇ ನಿಜವಾದ ವಿದ್ಯೆ ಎನ್ನುವ ಅರ್ಥದಲ್ಲಿ ವಿವರಿಸಲಾಗಿದೆ. ನಮ್ಮತನ ನಮ್ಮವರು ನಾವೆಲ್ಲರೂ ಒಂದೇ ಎಂದು ಹೊರಗಿನಿಂದ ಕಾಣುವುದು ಬೇರೆ, ಆಂತರಿಕವಾಗಿ ತಿಳಿದು ನಡೆಯುವುದೇ ಬೇರೆ. ಆಧ್ಯಾತ್ಮಿಕ, ಆದಿ ಭೌತಿಕ,ಆದಿ ದೇವಿಕ ಶಕ್ತಿ ನಮ್ಮೊಳಗೇ ಅಡಗಿರುವಾಗ ಅದನ್ನು ಸಂಶೋಧನೆ ಮಾಡಿಕೊಂಡು ಅದಕ್ಕೆ ಪೂರಕವಾದ ಭೌತಿಕ ವಿದ್ಯೆ ಪಡೆದವರು ನಮ್ಮ ಋಷಿಮುನಿಗಳಾಗಿದ್ದರು. ನಮ್ಮ ಮನಸ್ದಿನ ಖುಷಿಗಾಗಿ ಋಷಿಗಳನ್ನು ತಿಳಿಯದೆ ವಿದ್ಯೆ ಕಲಿತಂತೆಲ್ಲಾ ಅವಿದ್ಯೆ ಹೆಚ್ಚಾಗಿದೆ.ಸಾಮಾನ್ಯವಾಗಿ ಇಂದು ನಾವು ಮಕ್ಕಳಿಗೆ ಕಲಿಸುವ ವಿದ್ಯೆ ನಮ್ಮ ಖುಷಿಗಾಗಿದೆ.ಮುಂದೆ ಹೋದಂತೆಲ್ಲಾ ಮಕ್ಕಳು ತಮ್ಮ ತಮ್ಮ ಖುಷಿಗಾಗಿ ವಿದ್ಯೆಯನ್ನು ಭೌತಿಕದಲ್ಲಿ ಬಳಸಿದರೆ ಮೂಲದ ಋಷಿಗಳ ಜ್ಞಾನವಿರದು ವಿದ್ಯೆಗಿಂತ ಜ್ಞಾನವೇ ಮೇಲು.ಎಂದರೆ ತಿಳುವಳಿಕೆಯು ಸಮಾಜವನ್ನು ಉದ್ದಾರ ಮಾಡುವಂತಿದ್ದರೆ ಉತ್ತಮ. ಸಮಾಜಘಾತಕರನ್ನು ಸೃಷ್ಟಿ ಮಾಡಿದ್ದರೆ ಎಲ್ಲಿ ತಪ್ಪಿರುವೆವೆಂದು ಹಿಂದಿರುಗಿ ಸತ್ಯ ತಿಳಿಯುವುದು ಅಗತ್ಯವಿದೆ. ಏನೇ ಆದರೂ ಎಲ್ಲಾ ವಿದ್ಯಾವಂತರೂ ಜ್ಞಾನಿಗಳಲ್ಲ. ಎಲ್ಲಾ ಜ್ಞಾನಿಗಳೂ ವಿದ್ಯಾವಂತರಾಗಿ ಇರಲಿಲ್ಲ.
ನಮ್ಮ ನಮ್ಮ ಮೂಲವನರಿತು ಮುಂದೆ ನಡೆದರೆ ಪ್ರಗತಿ.
No comments:
Post a Comment