ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, July 6, 2023

ಅಧ್ಯಾತ್ಮದಲ್ಲಿನ ಸಂಖ್ಯೆಯ ವಿಶೇಷತೆ

*"ಸಂಖ್ಯಾ ವಿಶೇಷತೆ.."*

ತುಂಬಾ ಜನ 48 ದಿನ ಪೂಜೆ ಮಾಡಿ, 108 ಜಪ ಮಾಡಿ, ಅಖಂಡ ಪೂಜೆ ಮಾಡಿ ಅಂತಾರೆ..
ಆದರೆ 48 ಯಾಕೆ, 108 ಯಾಕೆ, ಅಖಂಡ ಅಂದರೆ ಏನು ಅಂತ ಹೇಳೋರು ತುಂಬಾ ಕಮ್ಮಿ..
48 ಅಂದರೆ 27+9+12=48
27 ನಕ್ಷತ್ರಗಳು
9 ಗ್ರಹಗಳು.
12 ರಾಶಿಗಳು
ಹೀಗೆ 27 ನಕ್ಷತ್ರಗಳ 12 ರಾಶಿಗಳ, ಅಂದರೆ, ಮನೆಯ ಎಲ್ಲರಿಗೂ 9 ಗ್ರಹಗಳು ಶುಭವನ್ನುಂಟು ಮಾಡಲಿ ಎಂದು ಇದರ ಅರ್ಥ..
108 ಎಂದರೆ 
108 = 60+27+9+12
60 ಸಂವತ್ಸರಗಳು.
27 ನಕ್ಷತ್ರಗಳು
9   ಗ್ರಹಗಳು
12 ರಾಶಿಗಳು.
ಅಖಂಡ ಎಂದರೆ 128 ದಿನ.
128 ರಲ್ಲಿ ಅರ್ಧ 64.
64-ಶಿವ ಶಕ್ತಿ ಪೀಠಗಳು.
64-ದೇವಿ ಶಕ್ತಿ ಪೀಠಗಳು.
64 ರಲ್ಲಿ ಅರ್ಧ 32.
32-ಗಣಪತಿಯ ಆಕಾರಗಳು
32 ರಲ್ಲಿ ಅರ್ಧ 16.
16-ಷೋಡಶ ಸಂಸ್ಕಾರಗಳು
16 ರಲ್ಲಿ ಅರ್ಧ 8
ಎಂಟು - ಅಷ್ಟ ಲಕ್ಷ್ಮಿಯರು, ಅಷ್ಟೈಶ್ವರ್ಯ ಫಲ
8 ರಲ್ಲಿ ಅರ್ಧ 4
ನಾಲ್ಕು ವೇದಗಳು..!
4 ರಲ್ಲಿ ಅರ್ಧ 2
ಎರಡು - ಸೂರ್ಯ, ಚಂದ್ರ..!
2 ರಲ್ಲಿ ಅರ್ಧ 1.
ಒಂದು-ಅದೇ " ನೀನು" ..! ಅದೇ "ಆತ್ಮ"..!
ಆ ಆತ್ಮವನ್ನು ಜಾಗೃತಗೊಳಿಸಿ, ಪರಮಾತ್ಮನನ್ನು ಒಲಿಸಿಕೊಳ್ಳುವುದೇ "ಅಖಂಡ"..!

ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ..
ಈ ಒಂದೇ ಅಂತರಾತ್ಮದ ಸತ್ಯಜ್ಞಾನ.ಸತ್ಯದಿಂದ ಜ್ಞಾನ ಪಡೆಯುತ್ತಾ ಒಂದೊಂದು ಮೆಟ್ಟಿಲು ಹತ್ತುತ್ತಾ ಮೇಲೆ ಏರಿದರೆ  ಮೇಲಿರುವ ಪರಮಾತ್ಮನ ತಲುಪುವ ಸಾಧನೆ.
ಕೆಳಗಿರುವ ಒಂದನ್ನು ಬಿಟ್ಟು ಹೊರಗೆ  ಮೇಲೆ ಮೇಲೆ ಏರಿದರೆ  ಕೆಳಗೇ ಜೀವ ಇರುತ್ತದೆ. ಇದನ್ನು ಅದ್ವೈತ, ದ್ವೈತ
ವಿಶಿಷ್ಟಾದ್ವೈತ ಸಿದ್ದಾಂತಗಳಿಂದ ಆ ಆ ಕಾಲಜ್ಞಾನಕ್ಕೆ ಅರ್ಥ
ಆಗುವಂತೆ  ಬಿಡಿಸಿ ಹೇಳಿದರೂ  ಅರ್ಥವಾಗದೆ ಬಿಡಿಸಿಟ್ಟಿದ್ದನ್ನು  ಒಂದಾಗಿಸಲಾಗದೆ ಬಿಕ್ಕಟ್ಟು ಹೆಚ್ಚಾಗಿ ತತ್ವ
ಹೋಗಿ ತಂತ್ರ ಬೆಳೆದಿದೆ. 
ಮಹಾತ್ಮರನ್ನು ಹೊರಗೆ ಹುಡುಕೋ ಬದಲು ಒಳಗೇ ಇರುವ
ಸತ್ಯ ತಿಳಿದು  ಒಳಹೊಕ್ಕು  ಆತ್ಮಪರಿಶೀಲನೆ  ಮಾಡಿಕೊಂಡರೆ ಹೊರಗಿರುವ  ರಾಜಕೀಯದೊಳಗಿರುವ 
ತಂತ್ರದಲ್ಲಿ ನಾನೆಷ್ಟುಕಾರಣನಾಗಿ  ಹಿಂದುಳಿದಿದ್ದೇನೆಂಬುದರ 
ಅರಿವಾಗಬಹುದು.
ರಾಜಕೀಯಕ್ಕೆ ನಮ್ಮ ಅಜ್ಞಾನದ ಸಹಕಾರವೇ ಕಾರಣ. ಈಗ
ಜ್ಞಾನದಿಂದ ಮೇಲೆತ್ತಲೂ ನಮ್ಮ ಸಹಕಾರ ಬೇಕಿದೆ. 
"ಮಾಡಿದ್ದುಣ್ಣೋ ಮಹಾರಾಯ" ಇದನ್ನು ಮೇಲಿನಿಂದ ಕೆಳಗೆ
ಇಳಿದಿರುವ  ಪುರುಷರ ರಾಜಕೀಯಕ್ಕೆ ಹೇಳಲಾಗಿದೆಯೆ?
ಕೆಳಗಿರುವ  ಜ್ಞಾನಶಕ್ತಿಯನ್ನು  ತಿರಸ್ಕರಿಸಿ,ಮೇಲಿನ ವಿಜ್ಞಾನ
ಜಗತ್ತು  ಮೇಲೇರಿದೆ. ಜೀವ ಹೋಗೋದು ಕೆಳಗೇ ಅಲ್ಲವೆ?
ಹಿಂದಿನ ಪ್ರತಿಯೊಂದು ಪದಕ್ಕೂ, ಅಕ್ಷರಕ್ಕೂ,ಸಂಖ್ಯೆಗೂ
ಆಧ್ಯಾತ್ಮದ ಪ್ರಕಾರ ಅರ್ಥವಿತ್ತು. ಕಾಲದಪ್ರಭಾವದಿಂದಾಗಿ
ಲೆಕ್ಕಾಚಾರವೇನೋ ಮುಗಿಲುಮುಟ್ಟಿದೆ ಆದರೆ ಅದಕ್ಕೆ ಅರ್ಥವಿಲ್ಲದೆ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲ ಬೆಳೆದಿದೆ. ಆತ್ಮಜ್ಞಾನಕ್ಕೆ ಸಾಲದಿಂದ ಬಿಡುಗಡೆ ಪಡೆಯಬೇಕು
ಎನ್ನುತ್ತಾರೆ ಮಹಾತ್ಮರುಗಳು.

No comments:

Post a Comment