ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, July 11, 2023

ಜೀವನದಲ್ಲಿ ನಾಟಕವಿದ್ದರೂ ನಾಟಕವೇ ಜೀವನವಾಗಬಾರದು

*ಮನುಷ್ಯರ ದೃಷ್ಟಿಯಲ್ಲಿ ಅಧಿಕಾರ ಮತ್ತು ಬೇಕಾದಷ್ಟು ದುಡ್ಡು, ಆಸ್ತಿ ಇರುವವರಿಗೆ ಬೆಲೆ ಜಾಸ್ತಿ. ದೇವರ ದೃಷ್ಟಿಯಲ್ಲಿ ಪ್ರಾಮಾಣಿಕರು ಮತ್ತು ಪರೋಪಕಾರಿಗಳಿಗೆ ಬೆಲೆ ಜಾಸ್ತಿ ದೇವರು ಕಾಣೋಲ್ಲ ಮಾನವ ಬಿಡೋಲ್ಲ.ದೇವರ ಹೆಸರಿನಲ್ಲಿ ರಾಜಕೀಯ ನಡೆಸುವುದೇ  ಅಧರ್ಮ.ಒಂದು ಪಕ್ಷ ದೇವಸ್ಥಾನ ಕಟ್ಟಿದರೆ ಇನ್ನೊಂದು ದೇವಸ್ಥಾನದ ಹಣವನ್ನು ಬಳಸಿ ಜನರಿಗೆ ಹಂಚುತ್ತದೆ. ಇದರಲ್ಲಿ ದೇವರಿರುವರೋ ಅಸುರರೋ ಎನ್ನುವ ಪ್ರಶ್ನೆಗೆ ಉತ್ತರ ಸಿಗೋದಿಲ್ಲ.ಕಾರಣ ದೇವರ ಹಣ ಬೇಕು ದೈವತ್ವ ಬೇಡ ಎನ್ನುವ ಮಾನವನಿಗೆ ದೇವರು ಕಾಣೋದಿಲ್ಲ ಮಾನವನಷ್ಟೆ ಕಾಣೋದು. ಹಣ ಕೊಟ್ಟರೆ ದೇವರು ಸಿಗುವರೆ? ಹಣವಿದ್ದವರು ದೇವರಾಗುವರೆ? ತತ್ವದಿಂದ  ಒಗ್ಗಟ್ಟು ಬೆಳೆಸಬಹುದಿತ್ತು ಅದೇ ತಂತ್ರದ ವಶದಲ್ಲಿದ್ದರೆ ಬಿಕ್ಕಟ್ಟಿನ  ಜಗತ್ತು. ಇದೊಂದು ನಾಟಕದ ಜಗತ್ತು.ಯಾರು ಹೆಚ್ಚು ದೇವರ ಪಾತ್ರದ ವೇಷ ಧರಿಸುವರೋ ಸುಲಭವಾಗಿ ದೇವರಂತೆ ಕಾಣಬಹುದು. ಆದರೆ, ಒಳಗಿರುವ ಅಸುರಿಗುಣ ಹೋಗುವವರೆಗೂ ದೇವರಾಗಲಾಗದು ಎನ್ನುವ ಸತ್ಯ ಎಲ್ಲರಿಗೂ ಒಂದೇ. ಇದನ್ನು ರಾಜಕೀಯದಿಂದ ಸರಿಪಡಿಸಲಾಗದು. ಅವರವರ  ಆಂತರಿಕ ಶುದ್ದಿಗಾಗಿ  ಸ್ವತಂತ್ರ ವಾಗಿ ಸತ್ಯ ತಿಳಿದು ನಡೆದಾಗಲೇ ಪರಮಾತ್ಮನ ದರ್ಶನ. ಆತ್ಮನಿರ್ಭರ ಭಾರತ ತಂತ್ರದಿಂದ ಮಾಡಿದರೂ ತತ್ವದರ್ಶನವಾಗದ ಶಿಕ್ಷಣ ನೀಡಿದರೆ  ನೀರಿನಲ್ಲಿ ಹೋಮಮಾಡಿದಂತಾಗುವುದು.ಸಾಲ ತೀರೋದಿಲ್ಕ. ಎಲ್ಲಿಯವರೆಗೆ  ಭೂಮಿಯ ಸಾಲ ತೀರದೋ ಅಲ್ಲಿಯವರೆಗೆ ಜನನ ಮರಣದಿಂದ ಮುಕ್ತಿ ಸಿಗದು. ಇದಕ್ಕೆ ನಮ್ಮ‌ಮಹಾತ್ಮರುಗಳು ಆತ್ಮಜ್ಞಾನದೆಡೆಗೆ ಹೋಗಿ ರಾಜಕೀಯದಿಂದ ದೂರವಿದ್ದು ಪರಮಾತ್ಮನಿಗೆ ಶರಣಾಗಿದ್ದರು.ಈಗಿನ ರಾಜಕೀಯವೇ ಪರದೇಶದ ಕಡೆಗೆ ನಡೆದರೂ ಭಾರತೀಯರ ಸಹಕಾರವಿರೋವಾಗ ಪರಮಾತ್ಮ ಏನೂ ಮಾಡಲಾಗದು. ಅಂದರೆ ನಮ್ಮ ಮನಸ್ಸೇ ಹೊರಗೆ ಇರೋವಾಗ ಒಳಗೆ ಅಡಗಿರುವ  ಆತ್ಮಸಾಕ್ಷಿಗೆ  ವಿರುದ್ದ ನಡೆದಂತೆ. 
ಹಣದಿಂದ ಬೆಲೆಕಟ್ಟುವುದು  ವ್ಯವಹಾರ ಜ್ಞಾನಕ್ಕೆ ಬೆಲೆಕೊಡುವುದೇ ಧರ್ಮ. ಈಗ ಶಿಕ್ಷಣವೇ ವ್ಯವಹಾರಕ್ಕೆ ತಿರುಗಿರುವಾಗ ಜ್ಞಾನ ಕಾಣೋದಿಲ್ಲ. ಕಾಣೋದಕ್ಕೆ ಜ್ಞಾನದ ವಿಷಯವೇ ಶಿಕ್ಷಣದಲ್ಲಿ ಮರೆಯಾಗುತ್ತಿದೆ ಇದಕ್ಕೆ ಕಾರಣವೇ ನಮ್ಮ ಸಹಕಾರ.ಸಹಕಾರಕ್ಕೆ ತಕ್ಕಂತೆ ಸರ್ಕಾರ ಬೆಳೆದಿದೆ.
 ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸರಿಯಾದ ಶಿಕ್ಷಣ ನೀಡದೆ ಆಳಿದವರು ದೊಡ್ಡವರಾದರು. ಆಳಿಸಿಕೊಂಡವರು  ದಡ್ಡರಾಗೇ ಹಿಂದುಳಿದರು.ಹಿಂದುಳಿದವರನ್ನು ಹಣದಿಂದ ಮೇಲೆತ್ತುವ  ಯೋಜನೆಗಳಿಗೆ ಹಣ ಸುರಿದರು ಆದರೆ ಒಳಗೇ ಅಡಗಿದ್ದ ಜ್ಞಾನವನ್ನು ಗುರುತಿಸದೆ ಅಜ್ಞಾನಿಗಳಿಗೆ ಎಷ್ಟು  ಸಾಲ ಸೌಲಭ್ಯಗಳನ್ನು ಕೊಟ್ಟರೂ ತೃಪ್ತಿ ಸಿಗದೆ ರಾಜಕೀಯವೇ ಸರಿಯಿಲ್ಲವೆಂದರು. ಹಾಗಾದರೆ ಸರಿಯಿದ್ದವರು ಯಾರು? ಕುಣಿಯಬಾರದವ ನೆಲಡೊಂಕು ಎಂದಂತಾಗಿದೆ. ಈಗಲೂ ಇದೇ ನಡೆದಿದೆ.ದೇಶವನ್ನು ವಿದೇಶ ಮಾಡೋದಕ್ಕೆ ನಮ್ಮದೇ ಸಹಕಾರವಿದೆ. ಅಧರ್ಮ ದೊಳಗೆ ಇರುವ ಧರ್ಮ ಸೂಕ್ಮ ತಿಳಿಯದಾಗಿದೆ.ಅಂದರೆ ಅಸುರರ ಮೂಲಕ ಸುರರನ್ನು ಎಚ್ಚರಿಸುತ್ತಿರುವ ಸತ್ಯ ತಿಳಿದಾಗಲೇ ಎಲ್ಲಾ ಭಗವಂತನ ಇಚ್ಚೆಯಂತೆ ನಡೆದಿದೆ ಎನ್ನಬಹುದು.ಆದರೆ ಆ ಸೂಕ್ಷ್ಮ ದೃಷ್ಟಿ ಎಲ್ಲರಿಗೂ ಇರಲು ಅಂತಹ ಶಿಕ್ಷಣ ನೀಡುವ ಗುರು ಹಿರಿಯರು ಹೆಚ್ಚಾಗಬೇಕಿದೆ.
ಸತ್ಯ ತಿಳಿಸಲೇಬಾರದೆಂದರೆ  ಇದೊಂದು ನಾಟಕವಷ್ಟೆ. ನಾಟಕವು ಸತ್ಯವಾಗೋದಿಲ್ಲ ಆದರೂ  ನಟನೆಗೆ ಬೆಲೆಹೆಚ್ಚು. ಸತ್ಯದ ನಾಟಕವಿರಲಿ ಅಸತ್ಯದ ನಾಟಕವಾಗಬಾರದು.
ಕಲಿಗಾಲದಲ್ಲಿ  ಮಾನವನಿಗೆ ಕಲಿಯುವುದು ಬಹಳವಿರುವುದಂತೆ ಕಾರಣ ಅವನ ಅಜ್ಞಾನ ಮಿತಿಮೀರಿದಾಗಲೇ  ಭೂಕಂಪ ಪ್ರಕೃತಿ ವಿಕೋಪ ರೋಗಕ್ಕೆ ಜೀವ ಹೋಗುವುದು. ಜೀವ ಇಲ್ಲದ ಮೇಲೆ ಜೀವನ ಎಲ್ಲಿರುವರು? ತಾಯಿಯಿಲ್ಲದೆ ಜನ್ಮವಿರದು. ಭೂತಾಯಿ ಸೇವೆ ಮಾಡಲು ರಾಜಕೀಯದ ಅಗತ್ಯವಿರಲಿಲ್ಲ.
ಭೂಮಿಯನ್ನು ಆಳೋದಕ್ಕೆ  ಧರ್ಮ ಸತ್ಯದ ಅಗತ್ಯವಿದೆ. ಸೇವೆಯಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇರಬಾರದೆಂದರೆ ಈಗಿನ ಸ್ಥಿತಿಯಲ್ಲಿ ಕಷ್ಟ. ಹೀಗಾಗಿ ಜನರೆ ಕಾನೂನಿನ ವಿರುದ್ದ ನ್ಯಾಯದ ವಿರುದ್ದ ಧರ್ಮದ ವಿರುದ್ದದ ರಾಜಕೀಯಕ್ಕೆ  ಅಸಹಕಾರ ತೋರಿಸಿ ಚಳುವಳಿ ಮಾಡಲೂ  ಸಾಧ್ಯವಾಗುತ್ತಿಲ್ಲ. ಅಸುರಿ ಶಕ್ತಿ ಒಳಗೇ ಇದ್ದು  ಆಳುತ್ತಿವೆ.   ಇದು ಅತಿಯಾದ ಅಹಂಕಾರ ಸ್ವಾರ್ಥವಾಗಿದೆ. 
ಸತ್ಯ ಕಠೋರವಾಗಲು ಕಾರಣವೇ ಅಸತ್ಯದ ಅತಿಯಾದ ಬಳಕೆಯಾಗಿದೆ. ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ದ ಅಂತರದಲ್ಲಿ ಸಾಮಾನ್ಯಜ್ಞಾನದ ಕೊರತೆಯಿದೆ. ಮಾನವನಾಗಿ ಮಹಾತ್ಮನಾಗೋದಕ್ಕೆ  ಆತ್ಮಜ್ಞಾನದ ಸದ್ಬಳಕೆಯಾಗಬೇಕು. ಆಗಲೇ ಭೌತವಿಜ್ಞಾನವೂ ಸದ್ಬಳಕೆ ಆಗುತ್ತದೆ.

No comments:

Post a Comment