ಕ್ರಾಂತಿಯಿಂದ ಹೋದ ಜೀವ ಜನ್ಮ ಪಡೆದರೂ ಮತ್ತೆ ಅದೇ ಕ್ರಾಂತಿಕಾರಕ ಚಿಂತನೆಯಲ್ಲಿಯೇ ಜೀವನ ನಡೆಸುವುದು ಹಾಗೆ ಸತ್ಯ ಶಾಂತಿಯ ಕಡೆಗೆ ಹೋದವರು ಮುಂದಿನ ಜನ್ಮದಲ್ಲಿಯೂ ಶಾಂತಿ ಮಾರ್ಗ ಹಿಡಿಯುವರೆನ್ನುವ ಪೂರ್ವ ಜನ್ಮ ದ ಸಿದ್ದಾಂತ ಎಷ್ಟು ಸತ್ಯ ಅಸತ್ಯವೆಂದು ಇದ್ದಾಗ ಸಾಬೀತು ಮಾಡಲಾಗದು. ಆದರೂ ಪುರಾಣ ಕಥೆಗಳಲ್ಲಿನ ಪುನರ್ಜನ್ಮ ದ ಕಥೆಗಳಲ್ಲಿ ಇದನ್ನು ಸತ್ಯವೆಂದುತಿಳಿಯಬಹುದು. ಮಹಾಭಾರತದಲ್ಲಿ ಶ್ರೀ ಭೀಷ್ಮ ಪಿತಾಮಹರು ಕುರುವಂಶಾಭಿವೃದ್ದಿಗಾಗಿ ಅಂಬೆ ಅಂಬಾಲಿಕೆ ಅಂಬಿಕೆಯರನ್ನು ಗೆದ್ದು ಹೊತ್ತು ತಂದರೂ ಕೊನೆಯಲ್ಲಿ ಕುರುವಂಶವೇನೂ ಉದ್ದಾರವಾಗಲಿಲ್ಲ.ಅಂಬೆಗಾದ ಮೋಸಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಶಿಖಂಡಿಯಾಗಿ ಜನ್ಮ ತಳೆದು ಭೀಷ್ಮ ರ ಕೊನೆಗೆ ಕಾರಣವಾದಂತಾಯಿತು. ಹೀಗೇ ಎಷ್ಟೋ ಮಂದಿಗೆ ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಕರ್ಮ ವೇ ಮುಂದಿನ ಜನ್ಮದ ಆಗು ಹೋಗುಗಳಿಗೆ ಕಾರಣವೆನ್ನುವ ಸತ್ಯ ತಿಳಿದರೂ ಆಗೋದನ್ನು ತಡೆಯುವ ಹೋರಾಟ,ಹಾರಾಟ ಮಾರಾಟ ನಡೆಸುವುದು ಮಾನವನ ಸಹಜ ಗುಣ. ಇದನ್ನು ಮೋಹಮಾಯೆ ಎಂದರು. ಹಿಂದಿನ ದೇಶಭಕ್ತರು ದೇಶಕ್ಕಾಗಿ ಹೋರಾಟ ಮಾಡಿ ಜೀವ ಬಿಟ್ಟರು.ಆದರೆ ಈಗಿನವರು ಜೀವ ಉಳಿಸಿಕೊಳ್ಳಲು ವಿದೇಶಿಗಳಿಗೆ ಶರಣಾಗುತ್ತಿರುವುದರ ಹಿಂದೆ ಅಜ್ಞಾನವಿದೆಯಷ್ಟೆ.ಅಂದಿನ ಜ್ಞಾನಿಗಳಿಗೂ ಇಂದಿನ ವಿಜ್ಞಾನಿಗಳಿಗೂ ವ್ಯತ್ಯಾಸವಿಷ್ಟೆ. ಅಂದು ಸತ್ಯ ಧರ್ಮ ದ ಪರ ಜ್ಞಾನಿಗಳಿದ್ದರು.ಈಗ ಅಸತ್ಯ ಅನ್ಯಾಯ ಅಧರ್ಮ ವಿದ್ದರೂ ಹಣದ ಅಧಿಕಾರ ಸ್ಥಾನಮಾನದ ಪರ ನಿಂತು ಧರ್ಮ ರಕ್ಷಣೆ ಎಂದರೂ ಒಪ್ಪಿಕೊಂಡು ಸಹಕಾರ ನೀಡುವವರೆ ಹೆಚ್ಚು.ಅದಕ್ಕೆ ದೇಶ ವಿದೇಶದೆಡೆಗೆ ನಡೆಯುತ್ತಿದೆ. ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನದಿಂದ ದೂರವಾದಷ್ಟೂ ಅಶಾಂತಿಯಿಂದ ಜೀವ ಹೋಗುತ್ತದೆ. ಅದೇ ಅಜ್ಞಾನ
ದಲ್ಲಿಯೇ ಮತ್ತೆ ಜನ್ಮ ಪಡೆದಾಗ ಅದೇ ರಾಜಕೀಯಕ್ಕೆ ಜೀವ ಸಿಲುಕಿ ಹೋರಾಡುವುದನ್ನು ತಪ್ಪಿಸಲು ಮಕ್ಕಳಿಗೆ ಪ್ರಾರಂಭದ ಶಿಕ್ಷಣದಲ್ಲಿಯೇ ನಿಜವಾದ ಜೀವನ ಸತ್ಯ ತಿಳಿಸುವ ಶಿಕ್ಷಣವಿದ್ದರೆ ಬದಲಾವಣೆ ಸಾಧ್ಯವಾಗುವುದು. ಅಂತಹ ಶಿಕ್ಷಣ ಪಡೆಯುವುದಕ್ಕೂ ಹಿಂದಿನ ಜನ್ಮದಲ್ಲಿ ಕಲಿತಿರಬೇಕಷ್ಟೆ.ಒಳಗಿರುವ ಶಕ್ತಿಯೇ ಹೊರಗೂ ಇರೋದು. ಇದು ಒಂದಾದರೆ ಶಾಂತಿ. ಅದು ದೈವ ಶಕ್ತಿಯಾಗಿದ್ದರೆ ದೈವತ್ವದೆಡೆಗೆ, ಅಸುರಶಕ್ತಿಯಾಗಿದ್ದರೆ ಅಸುರರ ಕಡೆಗೆ ಮನಸ್ಸು ಹೊರಡುತ್ತದೆ. ಒಟ್ಟಿನಲ್ಲಿ ಮಾನವನೊಳಗಿರುವ ಎರಡೂ ಶಕ್ತಿಯೇ ಎಲ್ಲಾ ಹೋರಾಟ ಹಾರಾಟ ಮಾರಾಟದ ಕೇಂದ್ರಬಿಂದು. ನಮ್ಮೊಳಗೇ ಅಡಗಿರುವ ಈ ಶಕ್ತಿಯಕಡೆಗೆ ಮನಸ್ಸನ್ನು ಹೊರಳಿಸಿಕೊಳ್ಳಲು ಸೋತು ಹೊರಗಿನವರ ಮನಸ್ಸನ್ನು ಗೆದ್ದವರು ಗೆದ್ದುಸೋತವರೆ. ರಾಜಕಾರಣಿಯಾಗಬೇಕೆಂದು ಜನರನ್ನು ಅಸತ್ಯ ಅಧರ್ಮ ಅನ್ಯಾಯಕ್ಕೆ ಬಳಸಿಕೊಂಡು ಗೆದ್ದರೂ ಅದು ಜೀವನದ ಸೋಲು. ಹಾಗೆ ಒಳಗಿನ ಶಕ್ತಿಯನರಿತು ಹೊರಗಿನ ಶಕ್ತಿಯ ಕಡೆಗೆ ಹೊರಟವರು ಸೋತು ಗೆದ್ದವರು. ಶ್ರೀರಾಮಚಂದ್ರನು ತನ್ನ ಕ್ಷತ್ರಿಯ ಧರ್ಮ ಬಿಡದೆ ಹೆಂಡತಿ ಮಕ್ಕಳನ್ನು ಬಿಟ್ಟು ಮಹಾರಾಜ ಮಹಾತ್ಮ,ಪರಮಾತ್ಮ
ನಾಗಿರೋದು ತತ್ವಜ್ಞಾನದಿಂದಷ್ಟೆ. ಸೋಲು ಗೆಲುವು ತಾತ್ಕಾಲಿಕ ವಷ್ಟೆ. ಹಿಂದಿನ ಜನ್ಮದ ಪ್ರತಿಫಲವೇ ಈ ಜನ್ಮದ ಆಗುಹೋಗುಗಳ ಮೂಲವೆನ್ನುವುದೆ ಸತ್ಯ. ಇದನ್ನು ಅರ್ಥ ಮಾಡಿಕೊಂಡವರಿಗೂ ಮಾಯೆಯೆಂಬುದು ಆವರಿಸಿ ಆಡಿಸುವಾಗ ಸಾಮಾನ್ಯರ ಪಾಡೇನು?
ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿದಂತೆ ನಿನಗೂ ಜನ್ಮವಿದೆ ನನಗೂ ಜನ್ಮವಿದ್ದರೂ ನನಗೆ ಹಿಂದಿನ ಎಲ್ಲಾ ನೆನಪಿದೆಯಷ್ಟೆ ಎಂದು ಅರ್ಜುನನಿಗೆ ತಿಳಿಸಿದಂತೆ ನಾವೆಲ್ಲರೂ ಯಾವುದೋ ಜನ್ಮದ ಮೂಲಕ ಭೂಮಿಯಲ್ಲಿ ಜನಿಸಿ ಜೀವನ ನಡೆಸಿ ಮರಣ ಹೊಂದುವ ಜೀವಾತ್ಮರೆ. ಪರಮಾತ್ಮನ ಒಳಗಿದ್ದು ನಡೆಸೋ ಕರ್ಮಕ್ಕೆ ತಕ್ಕಂತೆ ಜೀವನದಲ್ಲಿ ಸುಖದು:ಖ ತಪ್ಪಿದ್ದಲ್ಲವಾದಾಗ ಯಾರನ್ನೂ ಯಾರೋ ಆಳಲು ಹೋಗಿ ಆಳಾಗಿ ಹೋದವರೆ ಹೆಚ್ಚು.
ಆಗೋದೆಲ್ಲಾ ಒಳ್ಳೆಯದಕ್ಕೆ ಎಂದು ಹೇಳುವುದು ಸುಲಭ ಹಾಗೆ ತಿಳಿದು ನಡೆಯೋದೆ ಕಷ್ಟ. ಆಗೋದನ್ನು ತಪ್ಪಿಸಲಾಗದೆನ್ನುವುದು ಸತ್ಯ ಮಹಾಭಾರತ ರಾಮಾಯಣದಂತಹ ಮಹಾಯುದ್ದವೇ ನಡೆದಿದೆ. ಈಗಿನ ಯುದ್ದ ನಿಲ್ಲಿಸಬಹುದೆ? ಯಾಕೆ ನಡೆಯುತ್ತದೆ ಎಂದು ತಿಳಿದರೆ ಸಮಾಧಾನ, ಶಾಂತಿ ಸಿಗಬಹುದು.ಜೀವ ಒಮ್ಮೆ ಹೋಗೋದೇ ಆದರೂ ಉಳಿಸಿಕೊಳ್ಳಲು ಬಳಸಲಾಗುವ ತಂತ್ರಕ್ಕಿಂತ ತತ್ವವನರಿತರೆ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ.
ರಾಜಪ್ರಭುತ್ವದ ಧರ್ಮ ಜ್ಞಾನಕ್ಕೂ ಪ್ರಜಾಪ್ರಭುತ್ವದ ಅಧರ್ಮ ಕ್ಕೂ ವ್ಯತ್ಯಾಸವಿಷ್ಟೆ ಅಂದಿನ ಶಿಕ್ಷಣದಲ್ಲಿಯೇ ಧಾರ್ಮಿಕ ಪ್ರಜ್ಞೆ ಪ್ರಜೆಗಳಿಗೆ ನೀಡುವ ಗುರುಗಳಿದ್ದರು ಶಿಕ್ಷಣವಿತ್ತು.ಈಗಿದರ ಕೊರತೆಯಿದೆ ಎಲ್ಲಾ ರಾಜಕೀಯ ವ್ಯವಹಾರದಡೆಗೆ ನಡೆದರೆ ಹಣ ಸಿಗಬಹುದಷ್ಟೆ ಸತ್ಯಜ್ಞಾನವಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಯೋರು ಯಾರು? ಬೇಲಿಯಿಲ್ಲದ ಹೊಲವನ್ನು ಚೆನ್ನಾಗಿ ತಿಂದು ತೇಗುವ ಹೊಲಸುಜನರು ಹೆಚ್ಚಾಗುವರಷ್ಟೆ. ಶಾಸ್ತ್ರ ಸಂಪ್ರದಾಯ ಆಚರಣೆಗಳ ಹಿಂದಿನ ಉದ್ದೇಶ ಮನಸ್ಸನ್ನು ತಡೆಹಿಡಿದು ಸತ್ಯಧರ್ಮ ದಲ್ಲಿ ಜೀವನನಡೆಸೋದಾಗಿತ್ತು. ಶಾಸ್ತ್ರ ಬಿಟ್ಟು ಶಸ್ತ್ರ ಹಿಡಿದರೆ ವ್ಯರ್ಥ. ಶಾಸ್ತ್ರೀಯ ಶಿಕ್ಷಣ ಕಷ್ಟವಾದರೂ ಆತ್ಮರಕ್ಷಣೆಯಾಗುತ್ತದೆ.ಕೇವಲ ಶಸ್ತ್ರ ಹಿಡಿದು ಹೋರಾಟನಡೆಸಿದರೆ ಜೀವ ಹೋದರೂ ಆತ್ಮಜ್ಞಾನವಿಲ್ಲ
ವಾದರೆ ಶಾಂತಿ ಸಿಗೋದಿಲ್ಲ. ಭೂಮಿಗೆ ಜೀವ ಬರೋದೇ ಋಣ ತೀರಿಸಿ ಮುಕ್ತಿ ಪಡೆಯಲು ಎಂದಾಗ ಇಂದಿನ ಸರ್ಕಾರ ಕೊಡುವ ಉಚಿತದಿಂದ ಸಾಲ ತೀರುವುದೆ? ಬೆಳೆಯುವುದೆ?
ಪರರ ಪಾಲನ್ನೂ ಕಬಳಿಸಿಕೊಂಡು ಶ್ರೀಮಂತರಾದರೂ ಋಣ ತೀರಿಸಲು ಬಡವನಾಗೇ ಜನ್ಮಪಡೆಯಬೇಕು.
ದೇವಸ್ಥಾನ ಕಟ್ಟಿ ವ್ಯವಹಾರ ನಡೆಸಿದರೂ ಭಕ್ತಿಯೋಗವಿಲ್ಲದೆ ಪರಮಾತ್ಮನ ದಾಸನಾಗಲಾರ. ಕೈಲಾಸ ದರ್ಶ ನವಾದರೂ ಕಾಯಕವೇ ಶುದ್ದವಾಗಿರದಿದ್ದರೆ ಶಿವೊಲಿಯೋದಿಲ್ಲ. ದೇಶದ ಋಣ ತೀರಿಸದೆ ವಿದೇಶದ ಸೇವೆ ಮಾಡಿ ಪ್ರಯೋಜನವಿಲ್ಲ.
ಒಳಗೇ ಶುದ್ದಿಯಾಗದೆ ಹೊರಗಿನಿಂದ ಎಷ್ಟೇ ಅಲಂಕಾರ ಮಾಡಿದರೂ ವ್ಯರ್ಥ. ಜನ್ಮಾಂತರದ ಪಾಪ ಪುಣ್ಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದರೂ ಅನುಭವಿಸಿಯೇ ಹೋಗಬೇಕಿದೆ ಜೀವ.ಇದನ್ನು ಹೊರಗಿನ ಸರ್ಕಾರದಿಂದ ಸರಿಪಡಿಸಲಾಗದು.ಒಳಗಿರುವ ಸಹಕಾರದ ಅಗತ್ಯವಿದೆ. ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಒಡೆಯನೆಂದರೆ ಆತ್ಮ. ಸತ್ಯವೇ ಆತ್ಮ. ಸತ್ಯವೇ ದೇವರು.ಸತ್ಯವಿದೆಯೇ ಇದ್ದರೂ ಸದ್ಬಳಕೆ ಆಗಿದೆಯೆ?
No comments:
Post a Comment