ಆಗೋದೆಲ್ಲಾ ಒಳ್ಳೆಯದಕ್ಕೆ, ಮಾನವ ಕಾರಣಮಾತ್ರದವನಷ್ಟೆ ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು, ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ, ನಿನ್ನ ಕರ್ಮಕ್ಕೆ ನೀನೇ ಕಾರಣ, ಕರ್ಮಕ್ಕೆ ತಕ್ಕಂತೆ ಫಲ, ಕಾಯಕವೇ ಕೈಲಾಸ,ದೇಶಸೇವೆಯೇ ಈಶಸೇವೆ, ಜನರ ಸೇವೆಯೇ ಜನಾರ್ದನನನ ಸೇವೆ, ಸೇವೆಯಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದಿದ್ದಾಗಲೇ ಪರಮಾತ್ಮನ ಸೇವೆಯಾಗೋದು ಎಂದಿರುವ ಮಹಾತ್ಮರ ನುಡಿಮುತ್ತುಗಳಲ್ಲಿ ಯಾವುದೇ ರಾಜಕೀಯವಿರದೆ ಸ್ವತಂತ್ರ ಜ್ಞಾನವಿತ್ತು. ಹಾಗಾಗಿ ಈಗ ನಾವು ಇದನ್ನು ಯಾವ ರೀತಿಯಲ್ಲಿ ತಿಳಿದು ನಡೆದಿದ್ದೇವೆ? ತಿಳಿಸುತ್ತಿರುವವರಲ್ಲಿ ಇದನ್ನು ಕಾಣಬಹುದೆ? ದೇವರಿರೋದೆಲ್ಲಿ? ಅಭಿಮಾನಿ ದೇವತೆಗಳು ಯಾವ ದಿಕ್ಕಿನಲ್ಲಿ ನಡೆದಿರುವರು? ಯಾಕಿಷ್ಟು ದ್ವೇಷ ಕ್ರೋಧ, ರಗಳೆ ರಂಪಾಟದ ಭ್ರಷ್ಟಾಚಾರ ಭಯೋತ್ಪಾದನೆ ಪ್ರಕೃತಿ ? ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುವುದು.ಮಾಡಿದ್ದುಣ್ಣೋ ಮಹಾರಾಯ ಎನ್ನುವುದು ಸತ್ಯ. ಇಲ್ಲಿ ಯಾರೂ ಕಷ್ಟ ಹಂಚಿಕೊಳ್ಳಲು ತಯಾರಿಲ್ಲವಾದಾಗ ಕಷ್ಟಪಟ್ಟು ಮೇಲೆ ಬರೋದನ್ನು ಕಲಿಯಬೇಕು.ಭಗವಂತ ನೀಡಿರುವುದನ್ನು ಹಂಚಿಕೊಂಡು ಜೀವಿಸಬೇಕು. ಎಷ್ಟೇ ಕೂಡಿಟ್ಟರೂ ಆಪತ್ಕಾಲದಲ್ಲಿ ಬಳಸದಿದ್ದರೆ ವ್ಯರ್ಥ. ದೇಶದ ಸಾಲ ತೀರಿಸಲು ಸಾಕಷ್ಟು ಶ್ರೀಮಂತ ಪ್ರಜೆಗಳಿದ್ದರೂ ದೇಶಕ್ಕೆ ಕೊಡದೆ ವಿದೇಶದಲ್ಲಿ ಕೂಡಿಡುತ್ತಾರೆಂದರೆ ಅಜ್ಞಾನವಷ್ಟೆ. ಇದನ್ನು ತೀರಿಸಲು ಮತ್ತೆ ಬರಲೇಬೇಕೆನ್ನುವುದೇ ಅಧ್ಯಾತ್ಮ ಸತ್ಯ. ಒಟ್ಟಿನಲ್ಲಿ ದೇಶದ ಸಂಪತ್ತು ಜ್ಞಾನದಿಂದ ಬಳಸಿದರೆ ಆಪತ್ತಿನಿಂದ ಪಾರಾಗಬಹುದು. ಅಜ್ಞಾನಿಗಳಿಗೆ ಅಧಿಕಾರಕೊಟ್ಡು ಬೆಳೆಸಿದರೆ ಆಪತ್ತನ್ನು ಮೈಮೇಲೆ ಎಳೆದುಕೊಂಡಂತೆ. ಇದಕ್ಕೆ ಪರಿಹಾರವಿಲ್ಲ.ಒಟ್ಟಿನಲ್ಲಿ ಸತ್ಯಕ್ಕೆ ಸಾವಿಲ್ಲ. ಸತ್ಯವೇ ದೇವರು ಎಂದವರ ಹೆಸರಿನಲ್ಲಿ ಅಸತ್ಯದ ರಾಜಕೀಯತೆ ಬೆಳೆದರೆ ಅಧರ್ಮ ಬೆಳೆಯುವುದು.ಕಾರಣ ಸತ್ಯದ ಜೊತೆಗೆ ಧರ್ಮ ವಿದ್ದ ಹಾಗೆ ಅಸತ್ಯದ ಜೊತೆಗೆ ಅಧರ್ಮ ವಿರುವುದು. ಮಂತ್ರ ತಂತ್ರ ಯಂತ್ರದಿಂದ ಸ್ವತಂತ್ರ ಸಿಕ್ಕಿದ್ದು ಯಾರಿಗೆ? ಯೋಗದಿಂದ ಸ್ವತಂತ್ರ ಭೋಗದಿಂದ ಅತಂತ್ರವೇ ಬೆಳೆದಿರೋದು.ಭೋಗದಲ್ಲಿಯೂ ಅಧ್ಯಾತ್ಮದ ಉನ್ನತಿ ಪಡೆದವರಿದ್ದರೆ ಅದು ಯೋಗದಿಂದಲೇ ಸಾಧ್ಯವಾಗಿತ್ತು.
ಭೂಮಿಯ ಮೇಲಿರುವ ಮನುಕುಲಕ್ಕೆ ಸತ್ಯದರ್ಶನ ಮಾಡಿಸೋದು ಬಹಳ ಕಷ್ಟದ ಕೆಲಸ. ಹೀಗಾಗಿ ಅನುಭವಕ್ಕೆ ಬರುವವರೆಗೂ ಮಾನವ ಸತ್ಯಕ್ಕೆ ಬೆಲೆಕೊಡೋದಿಲ್ಲ ಎನ್ನುವ ಕಾರಣದಿಂದಾಗಿ ಹಿಂದಿನ ಸತ್ಯವನ್ನು ಗ್ರಂಥಗಳ ರೂಪದಲ್ಲಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವಂತೆ ಹಲವು ಕಟ್ಟು ಕಥೆಗಳೂ ಜನಸಾಮಾನ್ಯರ ಅನುಭವಕ್ಕೆ ತಕ್ಕಂತೆ ಸೃಷ್ಟಿ ಯಾದವು. ಆದರೆ ಧರ್ಮ ಸೂಕ್ಮದ ಜೊತೆಗೆ ಸತ್ಯವಿದ್ದಾಗಲೇ ಭೂಮಿಯಲ್ಲಿ ಶಾಂತಿ ನೆಲೆಸುವುದೆನ್ನುವ ಕಾರಣ ಹಿಂದೂ ಸನಾತನ ಧರ್ಮ ಆಳವಾಗಿರುವ ಬೇರನ್ನು ಹಿಡಿದು ಬೆಳೆದು ಬಂದಿದೆ. ಈ ಮಧ್ಯೆ ನಡೆದಿರುವ ದೇವಾಸುರರ ಯುದ್ದಕ್ಕೆ ಕಾರಣವೂ ಅಧರ್ಮ ತಡೆದು ಧರ್ಮ ರಕ್ಷಣೆ ಮಾಡೋದಾಗಿತ್ತು. ಕಾಲಾನಂತರದಲ್ಲಿ ಆದ ವೈಚಾರಿಕತೆಯ ಹಾಗು ವೈಜ್ಞಾನಿಕತೆಯ ನಡುವಿನ ಭಿನ್ನಾಭಿಪ್ರಾಯ, ದ್ವೇಷವೇ ಈಗಲೂ ಹರಡಿಕೊಂಡಿದೆ. ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ.ಅವರವರ ಅನುಭವದಲ್ಲಿಯೇ ವ್ಯತ್ಯಾಸವಿದ್ದು ಯೋಗಿ ಶಾಂತಿಯಿಂದ ಜೀವನ್ಮುಕ್ತಿ ಕಡೆಗೆ ನಡೆದರೆ ಭೋಗಿ ಕ್ರಾಂತಿಕಾರಕ ವಿಷಯವನ್ನು ಸೃಷ್ಟಿ ಮಾಡಿ ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಾ ಜೀವನ ನಡೆಸುವನು. ಆದರೆ ಇಬ್ಬರೂ ಶಾಶ್ವತವಾಗಿರೋದಿಲ್ಲೆನ್ನುವುದು ಸತ್ಯದ ವಿಚಾರ. ಆದರೂ ಶಾಶ್ವತವಾದ ಶಾಂತಿಗಾಗಿ ಹೋರಾಟ ನಡೆಯುತ್ತದೆ. ಹೀಗಾಗಿ ಯಾವಾಗ ಅಧರ್ಮ ತನ್ನ ಸ್ಥಾನ ಭದ್ರಪಡಿಸಿಕೊಂಡಾಗಲೇ ದೇವತೆಗಳ ಶಕ್ತಿ ಹೀನವಾಗಿ ವಾಗಿ ಪರಮಾತ್ಮನ ಅವತಾರವಾಗಿ ದುಷ್ಟರ ಶಿಕ್ಷೆ ಶಿಷ್ಟರ ರಕ್ಷೆ ಆಗಿದ್ದ ಪುರಾಣ ಕಥೆಗಳನ್ನು ನಾವು ಓದಿ ಕೇಳಿ ಪ್ರಚಾರ ಮಾಡಿದ್ದರೂ ನಮ್ಮೊಳಗೇ ಅಡಗಿರುವ ದುಷ್ಟಶಕ್ತಿಗಳ ನಿಗ್ರಹವಾಗದಿದ್ದರೆ ಅಸುರರ ಸಂಹಾರ ಹೊರಗಿನಿಂದ ಮಾಡಲಾಗದು.ಇಲ್ಲಿ ಪ್ರಜಾಪ್ರಭುತ್ವದ ರಾಜಕೀಯವಿದೆ.ಹಿಂದಿನ ರಾಜಪ್ರಭುತ್ವದ ವಿಚಾರವಿದೆ ಒಳಗೇ ಅಡಗಿರುವ ಸ್ವಾರ್ಥ ಅಹಂಕಾರದ ಗುಣ ಕಾಣದೆ ಭ್ರಷ್ಟಾಚಾರ ಬೆಳೆದಿದೆ. ಹಾಗಾದರೆ ನಮಗೆ ನಾವೇ ಶತ್ರುಗಳೆ? ಮಿತ್ರರೆ?
ಪತ್ರಿಕೆಯಲ್ಲಿ ಕರ್ನಾಟಕದಲ್ಲಿ ಇದ್ದವರೆ ಕನ್ನಡ ಭಾಷೆಯನ್ನು 8 ನೇ ತರಗತಿಯಲ್ಲಿಯೂ ವಿರೋಧಿಸಿ ಸರ್ಕಾರದ ಮೊರೆ ಹೋಗಿದ್ದಾರೆಂಬ ಸುದ್ದಿ ಓದಿದರೆ ಅಸಹ್ಯವೆನಿಸುತ್ತದೆ. ಉಂಡ ಮನೆಗೇ ದ್ರೋಹವೆಸಗುವ ಮಟ್ಟಿಗೆ ಸ್ವಾರ್ಥ ಬೆಳೆದಿದೆ ಎಂದರೆ ಇದನ್ನು ತಡೆಯಲು ಸಹಕಾರ ಬೇಕೆ ಸರ್ಕಾರವೇ?
ಸರ್ಕಾರದ ಶಾಲೆಗಳು ಮಕ್ಕಳ ಸಂಖ್ಯೆ ಬೆಳೆಸಲು ಆಂಗ್ಲ ಮಾಧ್ಯಮ ಪ್ರಾರಂಭಿಸಿದ್ದರೂ ಖಾಸಗಿ ಶಾಲೆಗೆ ಲಕ್ಷಾಂತರ ಹಣ ನೀಡಿ ಪೋಷಕರು ಸೇರಿಸೋದು ತಪ್ಪಿಲ್ಲ. ಅಂದರೆ ಶಿಕ್ಷಣ ಕೇವಲ ಪರಕೀಯರನ್ನು ಓಲೈಸಿಕೊಂಡು ಇರೋ ಸಂಸ್ಥೆ ಆಗುತ್ತಿರುವುದು ದೊಡ್ಡ ಸಮಸ್ಯೆಗಳಿಗೆ ಕಾರಣ.ಇಲ್ಲಿ ಸಾಕಷ್ಟು ಸಂಘಗಳಿವೆ ಅವೂ ಸರ್ಕಾರದ ಹಣದಲ್ಲಿ ಅನುದಾನದಲ್ಲಿ ಹೊರಗೆ ಕಾರ್ಯಕ್ರಮ ನಡೆಸುತ್ತಾ ತಮ್ಮ ಹೆಸರು,ಅಧಿಕಾರ,ಸ್ಥಾನಮಾನಕ್ಕೆ ಗುದ್ದಾಡಿಕೊಂಡು ದ್ವೇಷ ಬೆಳೆಸಿಕೊಂಡು ಜನರಿಗೆ ತಿಳಿಯದೆ ನಡೆದಿವೆ.ಶಾಲಾ ಕಾಲೇಜ್‌ನಲ್ಲಿರುವ ಮಕ್ಕಳ ಮನಸ್ಥಿತಿ, ಪೋಷಕರ ಪರಿಸ್ಥಿತಿ ಇವರಿಗೆ ಅರ್ಥ ವಾಗುತ್ತಿಲ್ಲ. ಹಿಂದಿನ ಹೆಸರು ಮಾಡಿದವರ ಹೆಸರನ್ನು ಹಿಡಿದುಕೊಂಡು ಕಾರ್ಯಕ್ರಮ ನಡೆಸುವಾಗ ಅವರಲ್ಲಿದ್ದ ದೇಶಭಕ್ತಿ, ಯೋಗಶಕ್ತಿ, ಜ್ಞಾನಶಕ್ತಿ ನಮ್ಮಲ್ಲಿ ಎಷ್ಟರ ಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮಾಡಿಕೊಂಡರೆ ಉತ್ತಮ ಬದಲಾವಣೆ ಸಾಧ್ಯವಿದೆ.ಯಾರೋ ಏನೋ ಹೇಳಿದರೆಂದರೆ ಅವರ ಹಿಂದಿನ ಉದ್ದೇಶ ತಿಳಿಯುವ ಜ್ಞಾನವಿಲ್ಲದೆ ಅದೇ ವಿಚಾರದಲ್ಲಿ ರಾಜಕೀಯ ನಡೆಸಿ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ ಸತ್ಯ ತಿಳಿಯದೆ ಜೀವ ಹೋಗುತ್ತದೆ. ಒಟ್ಟಿನಲ್ಲಿ ತತ್ವದರ್ಶ ನವಾಗದೆ ತಂತ್ರ ಬೆಳೆದು ಮಾನವನ ಜೀವನ ಅತಂತ್ರಸ್ಥಿತಿಗೆ ತಂದಿರೋದೆ ಅಜ್ಞಾನ.ಅಜ್ಞಾನ ಎಂದರೆ ಸತ್ಯವಿಲ್ಲದ ಜ್ಞಾನವಷ್ಟೆ.ಆಂತರಿಕ ಶುದ್ದಿಯಿಲ್ಲದೆ ಅಹಂಕಾರ ಸ್ವಾರ್ಥ ಮಿತಿಮೀರಿ ಬೆಳೆದಾಗ ಯಾವ ಧರ್ಮ, ಸಂಸ್ಕೃತಿ ಭಾಷೆ ಬೆಳೆದರೂ ನಾಟಕವಾಗಿರುವುದು. ಕರ್ ನಾಟಕದ ರಾಜಕೀಯಕ್ಕೆ ಇದೇ ಕಾರಣ.ಕರುನಾಡಿನ ಉತ್ಸವ ವಿದೇಶದಲ್ಲಿ ನಡೆಸುವರು ಆದರೆ ಕರುನಾಡಿನ ಜನರಿಗೇ ಕನ್ನಡ ಬೇಡವಾದರೆ ಇಲ್ಲಿರುವವರು ಯಾರು? ಹಾಗೆಯೇ ದೇಶಕ್ಕಿಂತ ವಿದೇಶ ವ್ಯಾಮೋಹ ಬಹಳ ಮಂದಿಗಿದೆ ಅವರಿಗೆ ಇಲ್ಲಿ ಅತಿಥಿ ಸತ್ಕಾರ ಮಾಡಿ ಪೋಷಣೆ ಮಾಡೋರು ನಮ್ಮವರನ್ನೇ ದ್ವೇಷ ಮಾಡಿದರೆ ನಮ್ಮ ಕಾರ್ಯಕ್ರಮದ ಉದ್ದೇಶ ಏನು? ಹಣದಿಂದ ಏನನ್ನಾದರೂ ಮಾಡಬಹುದೆಂದರೆ ಅಜ್ಞಾನ ಎಂದಿರುವವರು ನಮ್ಮ ಮಹಾತ್ಮರು.ಹಣವಿಲ್ಲದೆ ಏನೂ ನಡೆಯದು ಆದರೆ ಸತ್ಯಜ್ಞಾನದಿಂದ ಹಣವನ್ನು ಸದ್ಬಳಕೆ ಮಾಡಿಕೊಂಡರೆ ಋಣ ತೀರುವುದು. ಭ್ರಷ್ಟಾಚಾರ ಬೆಳೆದಿರೋದು ಅಜ್ಞಾನದ ಸಂಪಾದನೆಯಲ್ಲಿ ಅಂದರೆ ಹಣಕ್ಕಾಗಿ ಸತ್ಯ ಧರ್ಮ ಬಿಟ್ಟರೆ ಅಜ್ಞಾನ. ಅಜ್ಞಾನದೊಳಗಿರುವ ಜ್ಞಾನ ಒಳಗಿದ್ದು ಹುಡುಕಬೇಕು. ಆಪರೇಷನ್ ಮಾಡಿಕೊಂಡಿರುವ ಸಮ್ಮಿಶ್ರ ಸರ್ಕಾರಗಳು ಆಂತರಿಕವಾಗಿ ಶುದ್ದವಾಗಲು ಸಾಧ್ಯವೆ? ಒಂದನ್ನೊಂದು ಸೇರಿಕೊಂಡು ದೂರಿಕೊಂಡು,ದ್ವೇಷದ ಜೊತೆಗೆ ವೇಷವನ್ನೂ ಹೆಚ್ಚಿಸಿಕೊಂಡರೂ ಜನಸಾಮಾನ್ಯರನ್ನು ಬದಲಾಯಿಸಲಾಗದು ಕಾರಣ ಅಜ್ಞಾನದ ಸಹಕಾರ ಇರೋದೆ ಪ್ರಜೆಗಳಲ್ಲಿ. ಸರ್ಕಾರದ ಹಣವನ್ನು ದುರ್ಭಳಕೆ ಮಾಡಿಕೊಂಡು ಉಚಿತವಾಗಿ ತಿಂದು ತೇಗಿದರೆ ದೇಹಕ್ಕೆ ರೋಗ ಬರೋದು. ರೋಗವನ್ನು ಮನೆಯವರೆ ಹಂಚಿಕೊಳ್ಳಲು ತಯಾರಿಲ್ಲವೆಂದರೆ ಸಮಾಜವಾಗಲಿ ಸರ್ಕಾರವಾಗಲಿ ಏನೂ ಮಾಡಲಾಗದು. ಒಟ್ಟಿನಲ್ಲಿ ಎಲ್ಲದ್ದಕ್ಕೂಮೂಲವೇ ಸಾಲ. ಸಾಲವೇ ಶೂಲ ಸರ್ಕಾರ ಅಥವಾ ಜನಸಹಕಾರವೇ ಇದರ ಮೂಲ.ತೀರಿಸದೆ ಜೀವಕ್ಕೆ ಬಿಡುಗಡೆಯಿಲ್ಲ. ಭಗವದ್ಗೀತೆಯು ತಿಳಿಸುವ ಸಾಮಾನ್ಯಸತ್ಯ ಅರ್ಥ ಮಾಡಿಕೊಳ್ಳಲು ಸಾಮಾನ್ಯರಲ್ಲಿ ಸಾಮಾನ್ಯಜ್ಞಾನ ಇರಬೇಕಷ್ಟೆ. ಸೇವೆಯು ನಿಸ್ವಾರ್ಥ, ನಿರಹಂಕಾರ ಪ್ರತಿಫಲಾಪೇಕ್ಷೇ ಇಲ್ಲದೆ ಸ್ವತಂತ್ರವಾಗಿರುವ ಸತ್ಯ ಧರ್ಮದ ಜ್ಞಾನದಿಂದ ಸಂಪಾಧಿಸಿದ ಹಣದಿಂದ ಮಾಡಿದಾಗಲೇ ಪರಮಾತ್ಮನ ದರ್ಶನ ಮುಕ್ತಿ ಮೋಕ್ಷವೆಂದರು.ಇದು ಜ್ಞಾನಯೋಗ,ರಾಜಯೀಗ,ಭಕ್ತಿಯೋಗ,ಕರ್ಮ ಯೋಗದಿಂದ ಸಾಧ್ಯವೆಂದರು.ಯೋಗವೆಂದರೆ ಅಧ್ಯಾತ್ಮದ ಯೋಗ.ಅಧ್ಯಾತ್ಮವೆಂದರೆ ತನ್ನ ತಾನರಿತು ಒಳಗಿರುವ ಆತ್ಮಸಾಕ್ಷಿಯ ಕಡೆಗೆ ನಡೆಯೋದಾಗಿತ್ತು.ಹೊರಗಿನವರೆಡೆಗೆ ನಡೆದವರಿಗೆ ಪರದೇಶ ಸಿಕ್ಕಿ ಪರಕೀಯರ ವಶವಾಗಿದ್ದರೂ ಪರಮಾತ್ಮ ಕೇಳೋದು ಸ್ವಚ್ಚ ಮನಸ್ಸು. ಹಾಗಂತ ದೇಹ ಒಂದು ಕಡೆ ಮನಸ್ಸು ಇನ್ನೊಂದು ಕಡೆ ಇದ್ದರೆ ಯೋಗವಾಗದು. ಸರಳ ಜೀವನ ನಡೆಸೋದು ಕಷ್ಟ. ಮಾಡಿದ್ದುಣ್ಣೋ ಮಹಾರಾಯ ಎಂದಿರೋದು ಪುರುಷರಿಗೆ?
ಸ್ತ್ರೀ ಗೆ ಯಾಕಿಲ್ಲ? ಭೂಮಿ ನಡೆದಿರೋದು ಸ್ತ್ರೀ ಯಿಂದಲೇ ಅದಕ್ಕಾಗಿ ಈ ವಾಕ್ಯ. ಸ್ತ್ರೀ ಗೆ ಕೊಡಬೇಕಾದ ಗೌರವ, ಪ್ರೀತಿ,ವಿಶ್ವಾಸದ ಜೊತೆಗೆ ಅಧ್ಯಾತ್ಮ ಶಿಕ್ಷಣದ ಕೊರತೆ ಭಾರತವನ್ನು ಈ ಸ್ಥಿತಿಗೆ ತಂದಿದೆ ಎಂದರೂ ವಿರೋಧಿಸುವವರನ್ನು ಏನೂ ಮಾಡಲಾಗದು.ಬದಲಾವಣೆ ಆಗುತ್ತದೆ,ಆಗುತ್ತಿದೆ ನಿಧಾನವಾಗಿದೆ ಅಷ್ಟೇ. ತಾಳಿದವರು ಬಾಳಿಯಾರು. ಹೊರಗಿನಿಂದ ಒಳಗೆಳೆದುಕೊಂಡಿರೋದನ್ನು ತಿರುಗಿ ಕೊಡೋವರೆಗೂ ಋಣ ತೀರೋದಿಲ್ಲವೆಂದರೆ ನಮ್ಮದು ಎಷ್ಟೋ ಜನ್ಮ ಜನ್ಮಗಳ ಸಾಲವಿದೆ. ಈಗಿನ ಸಾಲ ಗೊತ್ತಿದ್ದರೆ ತೀರಿಸುವ ಪ್ರಯತ್ನಪಟ್ಟರೆ ಹಿಂದಿನ ಸಾಲ ಮನ್ನಾ ಆಗಬಹುದು. ಸರ್ಕಾರ ಸಾಲಮನ್ನಾ ಮಾಡಬಹುದು ಆದರೆ ಒಳಗಿರುವ ದೈವ ಸರ್ಕಾರದ ಲೆಕ್ಕ ಚುಕ್ತಾ ಆಗುವುದೆ? ಎಲ್ಲಿರುವರು ದೇವರು? ಆತ್ಮವೇ ದೇವರು, ಸತ್ಯವೇ ದೇವರು ಆತ್ಮಸಾಕ್ಷಿಯಂತೆ ನಡೆಯೋದೆ ಧರ್ಮವೆಂದರೂ ಇದರಲ್ಲಿ ಮೂರು ವರ್ಗ ವಿದೆ ದೇವರು ಮಾನವರು ಅಸುರರು. ಮಾನವರೋಳಗಿದ್ದು ನಡೆಸೋ ದೇವಾಸುರರ ಯುದ್ದಕ್ಕೆ ಮಾನವರು ಕಾರಣರು. ಯುಗಯುಗದಿಂದಲೂ ನಡೆದ ಈ ಯುದ್ದ ಇಂದು ಬೇರೆ ರೂಪ ತಳೆದಿದೆಯಷ್ಟೆ. ಅಧ್ಯಾತ್ಮದ ಸತ್ಯವೇ ಬೇರೆ ಭೌತಿಕದ ಸತ್ಯವೇ ಬೇರೆಯಾದರೂ ಎರಡೂ ಒಂದೇ ಸತ್ಯದ ಕಡೆ ನಡೆಯುವುದು.ಇದೇ ಲಯ.ಇದೀಗ ಭಯೋತ್ಪಾದನೆ, ಹೋರಾಟ,ರೋಗ,ಅಪಘಾತ,ಭ್ರಷ್ಟಾಚಾರ ಪ್ರಕೃತಿ ವಿಕೋಪದ ರೂಪಕ್ಕೆ ತಿರುಗಿದೆ ಕಾರಣ ಇಲ್ಲಿ ದೇಶದ ಒಳಗಿನ ಶತ್ರುಗಳನ್ನು ಓಡಿಸಲು ಅಧಿಕಾರವಿಲ್ಲದ ಸೈನಿಕರು ದೇಶರಕ್ಷಣೆ ಮಾಡಿದರೂ ಒಳಗೇ ಅಡಗಿರುವ ಶತ್ರುಗಳ ನಾಶಕ್ಕೆ ಪರಮಾತ್ಮನ ಸೃಷ್ಟಿ ಅಗತ್ಯವಿದೆ. ಅಹಂಕಾರ ಸ್ವಾರ್ಥ ವೇ ಮಾನವನ ಹಿತಶತ್ರುಗಳು.ಅತಿಯಾದರೆ ಗತಿಗೇಡು.
No comments:
Post a Comment