ಬ್ರಾಹ್ಮಣರ ಮಕ್ಕಳು ಜಾತಿಬಿಟ್ಟು, ಮತಧರ್ಮ ಬಿಟ್ಟುಮನೆ ಬಿಟ್ಟು ದೇಶ ಬಿಟ್ಟು ಹೋಗುತ್ತಿದ್ದಾರೆಂಬುದು ದೊಡ್ಡವರ ಮಾತಾಗಿದೆ. ಬಿಟ್ಟು ಹೋಗಲು ಕಾರಣ ಕೇಳಿದರೆ ಶಿಕ್ಷಣ ಸರಿಯಿಲ್ಲ ಸರ್ಕಾರ ಸರಿಯಿಲ್ಲ ಸಮಾಜ ಸರಿಯಿಲ್ಲ ನಮ್ಮಮಾತು ಕೇಳಲ್ಲ ಎನ್ನುವ ಉತ್ತರ. ಇದು ಸರಿ ಇಲ್ಲಿ ನಮ್ಮಮಾತನ್ನು ಕೇಳೋದಕ್ಕೆ ನಮ್ಮ ಶಿಕ್ಷಣಜ್ಞಾನ,ಧರ್ಮ ಕರ್ಮ ಆಹಾರ ವಿಹಾರವನ್ನು ನಾವು ತಿಳಿಸಿ ಬೆಳೆಸಿದ್ದೇವೆಯೆ? ಅಥವಾ ಹೊರಗಿನ ಶಿಕ್ಷಣಕೊಟ್ಟು ನಮ್ಮಮನೆಯಿಂದ ದೂರಕಳಿಸಿ ಬೇರೆಯವರ ಸಹವಾಸ ಸ್ನೇಹ ಸಂಬಂಧವನ್ನು ನೋಡಿಯೂ ನೋಡದಿರುವಂತೆ ಅಥವಾ ಪ್ರೋತ್ಸಾಹ ನೀಡುತ್ತಾ ಹೊರಗಿನವರ ಸಾಲ,ಸೌಲಭ್ಯಗಳನ್ನು ಬಳಸಿ ಮನೆ ಮಠ ಕಟ್ಟಿದ್ದರೂ ಹೊರಗಿನವರ ಋಣ ತೀರಿಸಲು ಮಕ್ಕಳು ಹೊರಗೆ ಹೋಗಿ ದುಡಿಯಲೇಬೇಕು. ಹಾಗೆ ಹೋದವರಿಗೆ ಹೊರಗಿನವರೆ ಪ್ರೀತಿಪಾತ್ರರಾದಂತೆ ಕಾಣುವರು.ಆಧುನಿಕತೆ ಬೆಳೆದಂತೆಲ್ಲಾ ಮಕ್ಕಳಿಗೆ ಭೌತಿಕಾಸಕ್ತಿ ಹೆಚ್ಚಾಗಿ ಹಿಂದಿನವರ ಧರ್ಮ ಕರ್ಮ ಅರ್ಥ ವಾಗದೆ ಅಂತರ ಬೆಳೆಯಿತು.ಆ ಅಂತರವನ್ನು ತಮ್ಮ ಸ್ವಾರ್ಥ ಸುಖಕ್ಕಾಗಿ ಬಳಸಿಕೊಂಡ ಪರರು ಧರ್ಮ, ಜಾತಿ, ಪಂಗಡ,ಪಕ್ಷ ದೇಶವನ್ನು ಒಡೆದು ಆಳುವ ರಾಜಕೀಯಕ್ಕೆ ಸಹಕಾರ ಕೊಟ್ಟರೆ ಮಕ್ಕಳಿಗಾದರೂ ಜ್ಞಾನವಿದ್ದರೆ ಸರಿ.ಅವರ ಶಿಕ್ಷಣವೇ ನಮ್ಮದಲ್ಲದಿರೋವಾಗ ಜ್ಞಾನವೂನಮ್ಮದಲ್ಲ.ನಮ್ಮ ಮನಸ್ಸಿಗನುಸಾರ ನಡೆದರೂ ಅವರ ಮನಸ್ಸು ಚಿಂತನೆ ನಡೆಸೋದೆ ಬೇರೆ.ಭೌತವಿಜ್ಞಾನ ಕಣ್ಣಿಗೆ ಕಾಣುವ ಸತ್ಯವಷ್ಟೆ ತಿಳಿಸುವಾಗ ಹಿಂದಿನ ಅಧ್ಯಾತ್ಮ ಸತ್ಯದ ಉದ್ದೇಶ ಒಂದು ಮಾಡುವುದು ಯೋಗದೆಡೆಗೆ ನಡೆಯೋದಾಗಿತ್ತು. ನಮ್ಮವರನ್ನೇ ಬಿಟ್ಟು ದೂರ ಹೋದವರಿಗೆ ತಿರುಗಿ ಬರೋದು ಕಷ್ಟ. ಇದು ಮನಸ್ಸಿಗೆ ಸೇರಿದ ವಿಚಾರ.ಒಬ್ಬರ ಮನಸ್ಸನ್ನರಿತು ಬದುಕುವುದಕ್ಕೆ ಇನ್ನೊಬ್ಬರಲ್ಲಿಯೂ ಅದೇ ಗುಣ ಜ್ಞಾನ ಹಣವಿದ್ಯೆ ಇದ್ದರೆ ಸರಿ. ಹೀಗಾಗಿ ಬ್ರಾಹ್ಮಣರ ಜ್ಞಾನ ಹಿಂದುಳಿದು ಹಣವೇ ಸರ್ವಸ್ವ ಎಂದರಿತು ಅಧರ್ಮ ದಕಡೆಗೆ ಸಹಕಾರ ನೀಡಿ ಹೊರಗಿನ ಸಾಲ ಅಥವಾ ಋಣ ಬೆಳೆದಾಗಲೇ ಋಣ ತೀರಿಸಲು ಮಕ್ಕಳು ಬೇರೆಯವರನ್ನು ಮದುವೆಯಾಗಿ ಹೋಗೋದು. ಮದುವೆ ಕೇವಲ ಆಟವಲ್ಲ. ಇದೊಂದು ಋಣ ಸಂಬಂಧ. ಯಾವ ಜನ್ಮದ ಋಣವೋ ಯಾವುದೋ ಜನ್ಮದಲ್ಲಿ ತೀರಿಸಲೇಬೇಕೆನ್ನುವುದು ಹಿಂದೂ ಧರ್ಮ.
ಹಿಂದಿನ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರ ಧರ್ಮ ಕರ್ಮ ಸಿದ್ಧಾಂತ ಆಚರಣೆ ಶಿಕ್ಷಣವೆಲ್ಲವೂ ಸಂಸ್ಕಾರಯುತವಾಗಿತ್ತು.
ಆದರೆ ಇಂದು ಎಲ್ಲಾ ಮಿಶ್ರವರ್ಣದ ಮಿಶ್ರಜಾತಿ, ಮಿಶ್ರ ಶಿಕ್ಷಣದ ಜೊತೆಗೆ ವ್ಯವಹಾರವೂ ಮಿಶ್ರವೇ ನಾವು ತಿನ್ನುವ ಆಹಾರವನ್ನೇ ಕಲಬೆರಿಕೆ ಮಾಡಿ ಮಾರಾಟಮಾಡುವ ಅಧರ್ಮದ ವ್ಯವಹಾರಿಕಪ್ರಜ್ಞೆ ಧಾರ್ಮಿಕ ಸೂಕ್ಮವಿಚಾರ ತಿಳಿಸೋದಿಲ್ಲ. ಹಣಕ್ಕಾಗಿಹೆಣ್ಣನ್ನು ಕೀಳಾಗಿ ಕಾಣುವವರು ಭೂಮಿಯ ಋಣ ತೀರಿಸಲಾಗದು. ಹೀಗಿರುವಾಗ ಜಾತಿ ಎಲ್ಲಿರುವರು? ಗಿಡಮರ ಪ್ರಾಣಿಪಕ್ಷಿಗಳಿಗೂ ಜಾತಿಯಿದೆ ಹಾಗಂತ ಅವು ಬೇರೆ ಬೇರೆ ಸೇರಲಾಗದು.ಮಾನವ ಮಾತ್ರ ಇದನ್ನು ತನ್ನ ಪ್ರಯೋಗಕ್ಕೆ ಬಳಸಿಕೊಂಡು ಮೂಲದ ಶುದ್ದತೆ ಇಲ್ಲದೆ ಅಶುದ್ದತೆ ಹೆಚ್ಚಾಗುತ್ತಾ ಮನಸ್ಸು ಹೇಳಿದಂತೆ ಕೇಳುತ್ತಾ ಮಾನವನ ಹಿಂದೆ ನಡೆಯೋದಾಗಿದೆ. ಇಲ್ಲಿ ಮಾನವ ಕಾರಣಮಾತ್ರದವನಷ್ಟೆ.ಜಾತಿಯೂ ಅವನ ಸೃಷ್ಟಿ.
ಸೃಷ್ಟಿ ಗೆ ತಕ್ಕಂತೆ ಅದನ್ನು ಸರಿಮಾರ್ಗದಲ್ಲಿ ನಡೆಸಿಕೊಂಡು ಹೋಗದಿದ್ದರೆ ಸ್ಥಿತಿ ಸರಿಯಿರದು ಲಯವಂತೂ ವಿಕೃತ ರೂಪತಾಳಿರುವುದು. ಒಟ್ಟಿನಲ್ಲಿ ಮಾನವ ತನ್ನ ಮೂಲದ ಧರ್ಮ ಕರ್ಮ ಜಾತಿ ನೀತಿ ಸಂಸ್ಕೃತಿ ಸಂಪ್ರದಾಯ ವನ್ನು ಅಳವಡಿಸಿಕೊಂಡು ಮುಂದೆ ಬರೋವಾಗ ಹೊರಗಿನವರ ಸಹಕಾರವಿಲ್ಲದೆ ಏನೂ ಮಾಡಲಾಗದು.ಆ ಸಹಕಾರ ವು ನಮ್ಮ ಮೂಲವನ್ನು ಅಳಿಸಿ ಆಳದಿದ್ದರೆ ಉತ್ತಮ.ಇಲ್ಲವಾದರೆ ನಮ್ಮವರನ್ನೇ ನಾವು ದೂರವಿಡುವ ಹಾಗಾಗುವುದು. ಶಿಕ್ಷಣವೇ ಇದರ ಮೂಲ.ಇದೇ ಕಾರಣ ನಮ್ಮ ಭಾರತವನ್ನು ಆಳಲು ಬಂದವರು ಶಿಕ್ಷಣವನ್ನು ಬುಡಮೇಲು ಮಾಡುವುದರ ಮೂಲಕ ದೇಶ ಆಳಿದರು.ಈಗಲೂ ನಮ್ಮ ಶಿಕ್ಷಣ ಬದಲಾವಣೆ ಆಗದಿರೋದು ನಮಗಿನ್ನೂ ಇದರ ಮುಂದಿರುವ ಭವಿಷ್ಯದ ಅನುಭವವಾಗಿಲ್ಲ.ಎಷ್ಟೋ ವಿದೇಶಿಗಳಿಗೆ ನಮ್ಮಮಕ್ಕಳ ಜ್ಞಾನವೇಬಂಡವಾಳ.ಅದೇ ನಮ್ಮ ದೇಶಕ್ಕೆ ಮಕ್ಕಳ ಜ್ಞಾನ ಕಾಣುತ್ತಿಲ್ಲ. ಭಾರತೀಯರ ಒಳಗಿರುವ ಅಗಾಧವಾದ ಜ್ಞಾನಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳಿದರೂ ಅರ್ಥ ವಾಗದೆ ಪ್ರಗತಿ ಎಂದರೆ ಕಣ್ಣಿಗೆ ಕಾಣೋದೆಲ್ಲಾ ಸತ್ಯವಲ್ಲ.
ಮಕ್ಕಳು ಮೊಮ್ಮಕ್ಕಳವರೆಗೂ ಆಸ್ತಿ ಅಂತಸ್ತು ಮಾಡಿ ನಂತರ ಮಕ್ಕಳನ್ನು ವಿದೇಶಿಗರಿಗೆ ಒಪ್ಪಿಸಿದರೆ ಆಸ್ತಿಯ ಗತಿ? ಕೊನೆಪಕ್ಷ ದೇಶದ ಸಾಲ ತೀರಿಸಲು ಬಳಸುವ ಜ್ಞಾನವಿದ್ದರೆ ದೇಶದ ಸಾಲ ತೀರಿಸಿ ಮುಕ್ತಿ ಪಡೆಯಬಹುದು.ಆದರೆ ಈ ಆಸ್ತಿ ಬಳಸಿಕೊಂಡು ದೇಶದ ಜನರನ್ನು ಆಳುವುದರ ಮೂಲಕ ಇನ್ನಷ್ಟು ಆಸ್ತಿ ಮಾಡಿ ಭ್ರಷ್ಟಾಚಾರ ಬೆಳೆಸಿದರೆ ಇದರ ಪ್ರತಿಫಲ ವೇ ಸ್ವಂತ ಮಕ್ಕಳ ಶೋಷಣೆ, ವೈರತ್ವ, ಭಿನ್ನಾಭಿಪ್ರಾಯ, ದೂರದ ಅಂತರ. ಇಷ್ಟಕ್ಕೂ ವ್ಯಾಮೋಹ ಇರಬಾರದು. ಅವರವರ ಹಣೆಬರಹಕ್ಕೆ ತಕ್ಕಂತೆ ಜೀವನ.
ನಮ್ಮವರಿಂದಲೇ ನಾವು ಬೆಳೆದಿರುವಾಗ ಅವರ ಸಾಲ ತೀರಿಸಲು ಹಣಕ್ಕಿಂತ ಮುಖ್ಯವಾಗಿ ಜ್ಞಾನವಿರಬೇಕು. ಜ್ಞಾನವನ್ನು ನೋಡಲಾಗದಿದ್ದರೂ ಅಳಿಸಲಾಗದು. ಈ ಒಂದು ಕಾರಣಕ್ಕಾಗಿ ಹಿಂದಿನ ಶಿಕ್ಷಣದಲ್ಲಿ ಮೂಲದ ವಿಷಯ ಹಿಂದಿನ ಗುರು ಹಿರಿಯರ ದೇಶಭಕ್ತರ ರಾಜಾಧಿರಾಜರ ಜೊತೆಗೆ ಸಂನ್ಯಾಸಿಗಳ ನಡೆ ನುಡಿಯನ್ನು ತಿಳಿಸುವಪಠ್ಯ ಪಾಠಗಳಿದ್ದವು.ಮಕ್ಕಳಿಗೆ ಸಣ್ಣವಯಸ್ಸಿಗೇ ಜೀವನದ ಬಗ್ಗೆ ಆಸಕ್ತಿ ಸಂತೋಷವಿತ್ತು.ಸಂಬಂಧ ಗಳೂ ನಮ್ಮವರ ಜೊತೆಗೆ ಅಚ್ಚುಕಟ್ಟಾಗಿ ಇತ್ತು. ಆಚರಣೆಗಳಲ್ಲಿ ವ್ಯತ್ಯಾಸವಿರದೆ ಎಲ್ಲಾ ಕೂಡಿ ಮಾಡುತ್ತಿದ್ದರು.ಆದರೆ, ಈಗ ಮಗು ಹುಟ್ಟೋದು ಒಂದೆಡೆ ಬೆಳೆಯೋದು ಒಂದೆಡೆ, ಶಿಕ್ಷಣ ಒಂದೆಡೆಯಾದರೆ ಉದ್ಯೋಗಮತ್ತೊಂದು ಕಡೆ ಹೀಗೇ ಅಲೆದಾಡುವಾಗ ಎಲ್ಲಾ ಕಡೆಯಿಂದಲೂ ಬೆಳೆದ ಋಣ ತೀರಿಸಲು ಕಷ್ಟ. ಒಟ್ಟಿನಲ್ಲಿ ಮನಸ್ಸು ಒಂದೇ ಆದಾಗ ಜಾತಿ ಅಡ್ಡಬರದು.ಹಾಗೆಯೇ ಆಹಾರಪದ್ದತಿ ಒಂದೇ ಆದಾಗ ಮನಸ್ಸು ಕೆಡೋದಿಲ್ಲ. ವ್ಯತ್ಯಾಸವಾದಾಗಷ್ಟೆ ಸಮಸ್ಯೆಯ ಕೊನೆಗೆ ವಿಚ್ಚೇದನ. ಇದೊಂದು ಅಜ್ಞಾಮವಷ್ಟೆ.
ಪೋಷಕರಾದವರೆ ಎಚ್ಚರವಾಗಿರಬೇಕಿದೆ.ಏನು ವಿಷಯ ಒಳಗೆ ತೆಗೆದುಕೊಂಡರೂ ಅದೇ ಬೆಳೆಯೋದು.ಇದು ಹೊರಗಿನಿಂದ ಬರೋದು ಹೆಚ್ಚಾದರೆ ಒಳಗಿನ ಸಂಬಂಧ ಕೂಡಿಕೊಳ್ಳದು. ಸೂಕ್ಷ್ಮ ವಾಗಿರುವ ಜೊತೆಗೆ ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟರೆ ಆಗೋದೆಲ್ಲಾ ಋಣದ ಮೇಲಿರುತ್ತದೆ.ಆಗೋದನ್ನು ತಪ್ಪಿಸಬೇಕಾದರೆ ನಮ್ಮ ಋಣ ತೀರಿಸುವ ಕರ್ಮ ಮಾಡಬೇಕಷ್ಟೆ.ಸರ್ಕಾರದ ಸಾಲ ಜನರ ಸಾಲ.ಇದರಲ್ಲೂ ಜಾತಿ ಇದೆ ಕಾಣೋದಿಲ್ಲ.
ನಮ್ಮ ಬಳಿ ಇದ್ದರೂ ಅತಿಆಸೆಗಾಗಿ ಮಕ್ಕಳು ಮೊಮ್ಮಕ್ಕಳಿಗೆ ಸರ್ಕಾರದ ಸಾಲ ಪಡೆದುಆಸ್ತಿ ಮಾಡಲು ಹೋದರೆ ಮಕ್ಕಳು ಸಾಲ ತೀರಿಸಲು ಸರ್ಕಾರದ ವಶದಲ್ಲಿ ದುಡಿಯಲೇಬೇಕು.
ವಿದೇಶಿ ಶಿಕ್ಷಣವೂ ಬಂಡವಾಳ ವ್ಯವಹಾರವೂ ದೇಶಕ್ಕೆ ಸಾಲ. ಇದನ್ನು ದೇಶವಾಸಿಗಳೇ ಕಷ್ಟಪಟ್ಟು ತೀರಿಸಬೇಕಲ್ಲವೆ?
ಈ ಸತ್ಯ ಧಾರ್ಮಿಕ ವರ್ಗ ದವರು ಸರಿಯಾಗಿ ಅರ್ಥ ಮಾಡಿಕೊಂಡರೆ ಧಾರ್ಮಿಕ ಶಿಕ್ಷಣ ನೀಡಿ ಪ್ರಜೆಗಳನ್ನು ನಮ್ಮವರೆಂದುಕೊಂಡರೆ ಸತ್ಯ ಅರ್ಥ ವಾಗುವುದು.ನಮ್ಮ ಮಕ್ಕಳಿಗೆ ಸಂಬಂಧ ಹುಡುಕುವುದೇ ಕಷ್ಟಪಡುವ ಪೋಷಕರು ಮದುವೆಯ ನಂತರ ದೂರವಾದ ಮಕ್ಕಳ ಕಷ್ಟ ನೋಡಲಾಗದೆ ಹೋಗುತ್ತಿದ್ದಾರೆ.ಹಲವರಿಗೆ ಸಮಸ್ಯೆಯಿಲ್ಲ.ಕೆಲವರಿಗೆ ಇದೇ ದೊಡ್ಡ ಸಮಸ್ಯೆಯಾಗುತ್ತಾ
ಕುಟುಂಬದಲ್ಲಿ ಬಿರುಕು ಮೂಡಿಸಿ ಮಧ್ಯಪ್ರವೇಶ ಮಾಡಿ ಆಳುವ ಮಧ್ಯವರ್ತಿಗಳು ಬೆಳೆದಿರುವರು.ಇಷ್ಟಕ್ಕೂ ಯಾರ ಋಣ ಎಲ್ಲಿದೆಯೋ? ಎಷ್ಟು ದಿನವಿದೆಯ? ಗೊತ್ತಿಲ್ಲ.
ಒಟ್ಟಿಗೆ ಬಾಳುವುದೇ ಸಂತೋಷ. ಕಾಲಬದಲಾದಂತೆ ಎಲ್ಲಾ ಬದಲಾಗುತ್ತದೆ. ಹಾಗಂತ ಜನನ ಮರಣಗಳು ಯಾರ ಕೈಯಲ್ಲಿಲ್ಲ.ಮಾನವ ಇದನ್ನರಿತರೆ ಸಾಕು ಸಂಬಂಧಕ್ಕೆ ಬೆಲೆ.ಇಲ್ಲವಾದರೆ ಕಪ್ಪುಕಲೆ.ಎಲ್ಲೇ ಇರಿ ಹೇಗೇ ಇರಿ ಇನ್ನೊಬ್ಬರಿಗೆ ಹೊರೆಯಾಗದಿರಿ,ಕೇಡುಮಾಡದಿರಿ, ಸ್ವತಂತ್ರ ಜೀವನ ಎಲ್ಲರಿಗೂ ಅಗತ್ಯವಿದ್ದರೂ ಸಿಗೋದೆ ಕಷ್ಟ.
ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷವಾದರೂ ಭಾರತೀಯ ಶಿಕ್ಷಣ ನೀಡಲು ಪೋಷಕರೆ ವಿರೋಧಿಸಿದರೆ ನಾವು ಭಾರತೀಯ ಹಿಂದೂಗಳಾಗಿಲ್ಲ. ಪರಕೀಯರ ವಶದಲ್ಲಿ ಇರುವ ನಮ್ಮಮಕ್ಕಳು ನಮ್ಮವರಾಗುವರೆ?ಉತ್ತಮ ಜ್ಞಾನದ ಶಿಕ್ಷಣ,ಸಂಸ್ಕಾರ ಕಲಿಸಿದವರು ಬಿಟ್ಟು ದೂರವಾಗಬಾರದದೆನ್ನುವವರು ದೂರದವರ ಹೊರಗಿನವರ ಸಾಲದಿಂದಲೂ ದೂರವಿದ್ದು ಸಂಸ್ಕಾರ ಕೊಟ್ಟರೆ ಮಕ್ಕಳು ಜೊತೆಗಿಲ್ಲದಿದ್ದರೂ ಅವರ ಮನಸ್ಸು ಜೊತೆಗಿರುವುದು. .
No comments:
Post a Comment