ಮಾನವ ಸಂಘ ಜೀವಿ. ಸಂಘಟನೆಯಿಂದ ಸಂಕಟಪಡುವಂತಾದರೆ ಸಂಘರ್ಷದಲ್ಲಿಯೇ ಜೀವ ಹೋಗುತ್ತದೆ. ಜೀವಕ್ಕೆ ಶಾಂತಿ ಸಿಗದೆ ಅಲೆದಾಡುತ್ತದೆ. ಇದಕ್ಕಾಗಿ ಹಿಂದಿನ ಮಹಾತ್ಮರುಗಳು ಸಂಘಟನೆಯಲ್ಲಿ ಸತ್ಯ ಧರ್ಮಕ್ಕೆ ಹೆಚ್ಚಿನ ಮಹತ್ವಕೊಟ್ಟು ಸತ್ಸಂಗವಾಗಿತ್ತು.ಇತ್ತೀಚೆಗೆ ದುಷ್ಟರ ಸಂಘಟನೆಗಳು ಭಯೋತ್ಪಾದನೆಯತ್ತ ನಡೆಯುತ್ತಾ ಜೀವನದ ಮುಖ್ಯ ಗುರಿ ತಿಳಿಯದಂತಹ ಪರಿಸ್ಥಿತಿಗೆ ತಲುಪಿಸಿವೆ. ಪರಿಸ್ಥಿತಿಗೆ ಕಾರಣವೇ ಸಂಘಟನೆಗಳ ರಾಜಕೀಯತೆ. ಎಲ್ಲಿ ರಾಜಕೀಯವಿರುವುದೋ ಅಲ್ಲಿ ಒಗ್ಗಟ್ಟು ಇರದು.ಎಲ್ಲಿ ಒಗ್ಗಟ್ಟು ಇರದೋ ಅಲ್ಲಿ ಧರ್ಮದ ಜೊತೆಗೆ ಸತ್ಯವಿರದು.ಎಲ್ಲಿ ಸತ್ಯವಿರುವುದಿಲ್ಲವೋ ಅಲ್ಲಿ ದೈವಶಕ್ತಿ ಇರದು.ಎಲ್ಲಿ ದೈವಶಕ್ತಿ ಇರುವುದಿಲ್ಲವೋ ಅಲ್ಲಿ ಶಾಂತಿ ಇರದು. ಎಲ್ಲಿ ಶಾಂತಿ ಇರದೋ ಅಲ್ಲಿ ಹೆಚ್ಚಿನಕ್ರಾಂತಿಕಾರಕ ಬದಲಾವಣೆ ಆಗುವುದು.ಆದರೆ ಕ್ರಾಂತಿಕಾರಕ ಬದಲಾವಣೆ ಜೀವವನ್ನು ಉಳಿಸುವ ಬದಲಾಗಿ ತೆಗೆಯುವುದೇ ಆದರೆ ಜೀವನವಾಗದು. ಜೀವಾತ್ಮನಿಲ್ಲದೆ ಪರಮಾತ್ಮನ ಅರಿವು ಹೇಗೆ ಬರುವುದು? ಪರಮಾತ್ಮನೇ ಎಲ್ಲರಲ್ಲಿಯೂ ಅಡಗಿದ್ದರೂ ಸಂಘಟನೆಯಲ್ಲಿ ಸಂಘರ್ಷ ಹೆಚ್ಚಾಗಲು ಕಾರಣವೇ ರಾಜಕೀಯ. ಒಟ್ಟಿನಲ್ಲಿ ರಾಜಕೀಯದಿಂದ ಶಾಂತಿ ಸಿಗೋದಿಲ್ಲವೆನ್ನುವುದು ಸ್ಪಷ್ಟವಾಯಿತು.ಅದರ ಹಿಂದೆ ನಡೆದವರಿಗೆ ಹಣ ಅಧಿಕಾರ ಸ್ಥಾನಮಾನ ಸಿಕ್ಕಿದರೂ ತಾತ್ಕಾಲಿಕವಷ್ಟೆ. ಹಾಗಂತ ರಾಜಕೀಯವಿಲ್ಲದೆ ಭೂಮಿಯಿಲ್ಲ.ಭೂಮಿಯಿಲ್ಲದೆ ಮನುಕುಲವೇ ಇಲ್ಲ. ಮಾನವ ಮೊದಲು ಮಾನವನಾಗೋದಕ್ಕೆ ರಾಜಕೀಯದಿಂದ ಕಷ್ಟವಿದೆ. ಸಮಾನತೆಯ ಹೆಸರಿನಲ್ಲಿ ಬೆಳೆದಿರುವ ಅಸಂಖ್ಯಾತ ಧರ್ಮ, ಜಾತಿ,ಪಂಗಡ,ಪಕ್ಷಗಳ ಸಂಘಟನೆಯು ಭಾರತದಂತಹ ಮಹಾದೇಶದಲ್ಲಿ ಶಾಂತಿ ಸ್ಥಾಪನೆ ಮಾಡಲು ಭಾರತದ ಶಿಕ್ಷಣವನ್ನು ಕೊಡಬೇಕಿತ್ತು. ಅದನ್ನು ವಿರೋಧಿಸಿ ಬೆಳೆದ ಸಂಘಟನೆಗಳು ಭಯೋತ್ಪಾದನೆ ಬೆಳೆಸಿದ್ದರೆ ಹಾಗಾದರೆ ಸಂಘಗಳ ಉದ್ದೇಶ ಶಾಂತಿಯೆ ಕ್ರಾಂತಿಯೆ?
ಕಲಿಗಾಲ ಭೌತವಿಜ್ಞಾನದ ಹಿಂದೆ ನಡೆದ ಅದ್ಯಾತ್ಮ ಸಂಘ ಸರ್ಕಾರದ ವಶದಲ್ಲಿರುವಾಗ ಸರ್ಕಾರ ವಿಜ್ಞಾನದ ವಶದಲ್ಲಿ ನಡೆದಿರುವಾಗ ಎಷ್ಟೇ ಹೊರಗೆ ಹೋರಾಟ ಮಾಡಿದರೂ ಒಳಗೇ ಅಡಗಿರುವ ಸತ್ಯ ಧರ್ಮ ದ ಬಗ್ಗೆ ಅರಿವಿಲ್ಲವಾದರೆ ಮಾನವನ ಜೀವನದ ಸಂಘರ್ಷಕ್ಕೆ ಕಾರಣ ತಿಳಿಯದೆ ಜೀವ ಹೋಗುವಾಗ ಭಯದಲ್ಲಿಹೋಗುವುದು. ಅದೇ ಭಯದಲ್ಲಿ ಜನ್ಮ ತಾಳುವುದು. ಗುರು ಹಿರಿಯರಲ್ಲಿದ್ದ ಭಯ ಭಕ್ತಿ ಮರೆಯಾಗುತ್ತಿದೆ. ಅಸುರಶಕ್ತಿಯು ಕೊಡುತ್ತಿರುವ ಭಯ ಹೆಚ್ಚಾಗುತ್ತಿದೆ. ತಾವೂ ಸತ್ತು ಇತರರನ್ನೂ ಸಾಯಿಸಿ ಹೋಗುವುದೇ ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೆ ಸಹಕಾರ ನೀಡುವವರು ಕಣ್ಣಿಗೆ ಕಾಣೋದಿಲ್ಲವೆಂದರೆ ತಮ್ಮ ಸುಖಕ್ಕಾಗಿ ಪರರ ಹಿಂಸೆ ಮಾಡಿಯಾದರೂ ಆಳುವವರನ್ನು ಬೆಳೆಸುತ್ತಿರುವವರು ಯಾರು? ಸಹಕಾರ ಹೇಗಿರುವುದೋ ಹಾಗೆ ಸಂಘಟನೆಗಳು ಬೆಳೆದಿವೆ. ಸರ್ಕಾರದ ಹಣದಲ್ಲಿ ಸಂಘನಡೆಸಿ ಸಂಘರ್ಷಕ್ಕೆ ಸರ್ಕಾರ ಕಾರಣವೆಂದರೆ ಸರಿಯಲ್ಲ. ಅದರಿಂದ ದೇಶಕ್ಕಾಗಲಿ ಜನಕ್ಕಾಗಲಿ ಏನು ಸಿಕ್ಕಿದೆ ಎನ್ನುವುದು ಮುಖ್ಯವಲ್ಲವೆ?
ಸರ್ಕಾರದ ಹಣ ಜನರ ಋಣ. ಸಮಾಜಸೇವಕರಲ್ಲಿ ಜ್ಞಾನ ಅಗತ್ಯವಿದೆ.ತನ್ನ ತಾನರಿತು ಎಲ್ಲರಿಗೂ ಸಹಕರಿಸುವುದು ಸುಲಭವಿಲ್ಲ.ಎಲ್ಲರಿಗೂ ಒಳ್ಳೆಯದನ್ನು ಬಯಸೋದು ಸರಿ ಎಲ್ಲರಿಗೂ ಒಳ್ಳೆಯದಾಗಲೆಂದು ಹರಸಬಹುದು.ಆದರೆ ಎಲ್ಲರ ಹಣ ಪಡೆದು ನಾನು ಎಲ್ಲರನ್ನೂ ಸರಿಪಡಿಸುವೆ ಎನ್ನುವ ಅಹಂಕಾರ ಸ್ವಾರ್ಥ ಸಲ್ಲದು. ಇದೇ ಮುಂದೆ ಭಯ ಹುಟ್ಟಿಸುವ ವಾತಾವರಣ ಸೃಷ್ಟಿ ಮಾಡಿ ಅಧಿಕಾರಕ್ಕಾಗಿ ಹೊಡೆದಾಟ ಬಡಿದಾಟ ಕಾದಾಟವಾಡಿ ಜೀವ ಹೋಗುತ್ತದೆ. ಭೂಮಿಯಲ್ಲಿ ಮಾನವ ಜನ್ಮ ಪಡೆಯಲು ನಡೆಸಿದಹಿಂದಿನ ಎಷ್ಟೋ ಜನ್ಮಗಳ ಹೋರಾಟಕ್ಕೆ ಇದೇ ಏನು ಸಿಕ್ಕಿದ್ದು? ಮಾನವನಿಗಷ್ಟೆ ಆರನೇ ಅರಿವಿರೋದು. ಅದರ ಹಿಂದೆ ಧೈರ್ಯದಿಂದ ಹೋದವರಷ್ಟೆ ಮಹಾತ್ಮರಾದರು. ಹೋಗಲಾಗದೆ ಇರೋರು ಭಯ ಹುಟ್ಟಿಸಿ ಜನರನ್ನು ಆಳಿದರು. ಆಳಿದವರೂ ಆಳಾಗಿ ಜನ್ಮತಾಳಿದ್ದರೂ ಯಾರೂ ಗುರುತಿಸಿ ಕೇಳೋರಿಲ್ಲವಾದಾಗ ಭಯವೇ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ಬೆಳೆಯುವುದು.
ಪುರಾಣ ಇತಿಹಾಸದ ಯುದ್ದಗಳ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಲು ಸತ್ಯಜ್ಞಾನವಿರಬೇಕಿದೆ. ಆದರೆ ಅದರಲ್ಲಿ ಅಡಗಿದ್ದ ರಾಜಕೀಯ ದ್ವೇಷವನ್ನು ಹರಡುತ್ತಾ ಮನಸ್ಸಿನಲ್ಲಿ ದ್ವೇಷದ ವಿಷಬೀಜಬಿತ್ತಿ ಜನರ ನಡುವೆ ಸಂಸಾರದಲ್ಲಿ ಭಯ ಹುಟ್ಟಿಸಿ ಆಳುವುದು ಅಸುರಿ ಗುಣ. ಇದು ಅಧರ್ಮಕ್ಕೆ ದಾರಿಯಾಗುವುದರಿಂದ ಅದರಿಂದ ದೂರವಿದ್ದು ಸತ್ಯ ತಿಳಿಯುವಪ್ರಯತ್ನ ನಡೆಸಿದರೆ ನಮ್ಮೊಳಗೇ ಅಡಗಿರುವ ಧೈರ್ಯ ಶಕ್ತಿ ಹೆಚ್ಚುವುದು.ಪರಮಾತ್ಮನ ಕಡೆಗೆ ಹೋಗಲು ಸಾಧನವಾಗುವುದು. ಆಂತರಿಕ ಶುದ್ದಿಯ ನಂತರ ಭೌತಿಕ ಶುದ್ದಿ. ಆರನೇ ಅರಿವು ಆಳವಾಗಿರುವಾಗ ಅರ್ಧಸತ್ಯಕ್ಕೆ ತಲೆಬಾಗಿದರೆ ಅಸುರರೆ ಬೆಳೆಯೋದಷ್ಟೆ. ಯಾರಲ್ಲಿ ಯಾವ ದೇವಾಸುರರು ಅಡಗಿರುವರೋ ಯಾರಿಗೆ ಗೊತ್ತು? ಎಲ್ಲಾ ಒಳಗೇ ಇದ್ದುಹೋರಾಟ ಮಾಡಿಕೊಂಡು ಸತ್ತರೆ ಏನು ಉಪಯೋಗ. ಲಯದಕಾರ್ಯ ನಡೆಯುತ್ತಿದೆ.ಇದರಲ್ಲಿ ರೋಗ,ಅಪಘಾತ,ಕೊಲೆ ಸುಲಿಗೆ, ಭಯೋತ್ಪಾದನೆ, ಪ್ರಕೃತಿ ವಿಕೋಪ ಮುಂತಾದ ರೂಪಗಳಿವೆ. ಒಲಿದರೆ ನಾರಿಮುನಿದರೆ ಮಾರಿ. ಸಾರಿ ಕೇಳಿದರೂ ಕರ್ಮಕ್ಕೆ ತಕ್ಕಂತೆ ಪ್ರತಿಫಲ ಉಣ್ಣಲೇಬೇಕು.
No comments:
Post a Comment