ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, July 8, 2023

ಜ್ಞಾನಸಂಪಾದನೆಗೆ ರಾಜಕೀಯದ ಅಗತ್ಯವಿದೆಯೆ?

ಮಾನವರಲ್ಲಿ ಮೂರು ವರ್ಗದ ಜನರಿದ್ದಾರೆ ಬಡವರು, ಮಧ್ಯಮವರ್ಗ, ಶ್ರೀಮಂತ ರು. ವಾಸ್ತವದಲ್ಲಿ  ಎಲ್ಲರೂ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿದರೂ ಮನಸ್ಸು ಮಾತ್ರ ಒಂದೇ ರೀತಿಯಲ್ಲಿರೋದಿಲ್ಲವೆನ್ಬುವುದು ಸತ್ಯ. ಇದು ಯುಗಯುಗದಿಂದಲೂ ಭೂಮಿಯಲ್ಲಿ ನಡೆದೇ ಬಂದಿದೆ. ಹಾಗಂತ ಪ್ರಚಾರ ಮಾಡುವಾಗ ನಾನೇ ಬೇರೆ ನೀನೇ ಬೇರೆ ಎಂದವರು ಕಡಿಮೆ.ಇವರನ್ನು ಮಹಾಜನರೆಂದು ಮೇಲೆತ್ತಿ ಅಧಿಕಾರ ಕೊಟ್ಟವರೆ ಮಧ್ಯಮವರ್ಗ ಹಾಗು ಬಡವರು.
ಆಳಿದವರು ಶ್ರೀಮಂತ ರಾದರು. ಹಾಗಾಗಿ ಮಾನವನ ಸಮಸ್ಯೆಗೆ ಕಾರಣ ಮನಸ್ಸಿನ ಸ್ಥಿತಿಯಾಗಿದೆ.ಈ ಮನಸ್ಸು ಬಡವನ  ಜ್ಞಾನವನ್ನು ಗುರುತಿಸದೆ ಶ್ರೀಮಂತನ ಹಣವನ್ನು ಗುರುತಿಸಲು ಕಾರಣವೇ ಅಜ್ಞಾನ. ಕಣ್ಣಿಗೆ ಕಾಣುವ ಹಣ ಕಾಣದ ಜ್ಞಾನವನ್ನು ಕೆಳಗೆ ಹಾಕಿ ತುಳಿಯಲು ಸಹಾಯ ಮಾಡುವ ಮಧ್ಯವರ್ತಿಗಳು , ಮಧ್ಯಮವರ್ಗದವರು ತಮ್ಮ ಜೀವನಕ್ಕಾಗಿ ಸತ್ಯಾಸತ್ಯತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಮಧ್ಯ ಪ್ರವೇಶ ಮಾಡಿ ತಾವೂ ಸತ್ಯದ ಪರ ನಿಲ್ಲದೆ  ಧರ್ಮ  ಧರ್ಮ ಗಳ ನಡುವೆ ಅಂತರ ಬೆಳೆಸಿದರೆ  ಅತಂತ್ರಸ್ಥಿತಿಗೆ  ಮಾನವನ ಜೀವನ ತಲುಪುತ್ತದೆ. 
ಹಾಗಾದರೆ  ಇದರಿಂದ ಪಾರಾಗುವ ಬಗೆ ಹೇಗೆ?
ಶಿಕ್ಷಣದಲ್ಲಿಯೇ  ಮಕ್ಕಳಿಗೆ  ಉತ್ತಮವಾದ ಸದ್ವಿಚಾರಗಳನ್ನು ತಿಳಿಸುತ್ತಾ ಬಡವ ಬಲ್ಲಿದನೆಂಬ ಭೇಧಭಾವವಿಲ್ಲದೆ ಅವರ ಆತ್ಮರಕ್ಷಣೆ ಮಾಡಿಕೊಂಡು ನಡೆಯಲು ಗುರು ಹಿರಿಯರಾದವರು  ಮುಂದೆ ಬರಬೇಕಿತ್ತು.
ರಾಜಪ್ರಭುತ್ವದ ನಂತರದ  ವರ್ಷಗಳಲ್ಲಿ  ನಮ್ಮನ್ನಾಳಲು ಬಂದ ಪಾಶ್ಚಾತ್ಯರ  ಸಂಸ್ಕೃತಿ ಶಿಕ್ಷಣ,ಭಾಷೆ,ವ್ಯವಹಾರವು ಹಣವನ್ನು  ಯಾವ ಮಾರ್ಗದಲ್ಲಾದರೂ ಸಂಪಾದಿಸುವ  ದಾರಿತೋರಿಸಿತು. ಇದರಿಂದಾಗಿ ಆರ್ಥಿಕವಾಗಿ ದುರ್ಭಲರಾದ ಬಡವರನ್ನು ತಮ್ಮ ವಶಪಡಿಸಿಕೊಂಡು ಅವರಲ್ಲಿದ್ದ ಜ್ಞಾನವನ್ನು ಗುರುತಿಸದೆ ಭೌತಿಕಾಸಕ್ತಿಯ ಕೈಗೆ ಮನಸ್ಸನ್ನು ಎಳೆಯುತ್ತಾ  ತಂತ್ರದಿಂದ  ಆಳಿದರು. ಮಹಾತ್ಮರುಗಳು ಹಾಕಿಕೊಟ್ಟ  ಹಿಂದಿನ  ಧಾರ್ಮಿಕ ಕ್ರಿಯೆಯನ್ನು  ಅಪಾರ್ಥ ಮಾಡಿಕೊಂಡು  ಇದೊಂದು ಹಿಂಸೆ ಅಸಹ್ಯ ಎನ್ನುವ ರೀತಿಯಲ್ಲಿ ಸತ್ಯ ತಿಳಿಯದೆ  ಪ್ರಚಾರ ನಡೆಸುತ್ತಾ ಮಧ್ಯವರ್ತಿಗಳು  ಬಡವರಿಗೆ ಸೇರಬೇಕಾದ ಜ್ಞಾನ  ಸಂಪತ್ತನ್ನು  ಅರ್ಧಕ್ಕೆ ತಡೆದು  ಪ್ರಚಾರಪ್ರಿಯರಾದರು
ಹೀಗೇ ಮನಸ್ಸನ್ನು  ಹೊರಗೆಳೆಯುತ್ತಾ  ಬಂದಿರುವ  ರಾಜಕೀಯತೆ ಇಂದಿಗೂ ಭಾರತವನ್ನು ಸ್ಮಾರ್ಟ್ ಮಾಡಲು ಹೋಗಿ ಸಾಲದ ಮೂಟೆಯನ್ನು ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ ತೀರಿಸಲಾಗದ ಪರಿಸ್ಥಿತಿ ತಂದಿಟ್ಟಿದೆ. 
ಸಾಮಾನ್ಯಜ್ಞಾನದಿಂದಲೇ ಈ ಸತ್ಯ ಅರ್ಥ ಮಾಡಿಕೊಳ್ಳಲು ಸಾಧ್ಯವಾದರೂ  ಅಸಮಾನ್ಯರೆನಿಕೊಂಡಿರುವ   ಪ್ರತಿಷ್ಟಿತರು ಹೇಳಿದ್ದೇ ಸರಿ ಎನ್ನುವ ಹಂತಕ್ಕೆ  ಪ್ರಚಾರ ನಡೆಸುತ್ತಾ ಒಳಗೇ ಅಡಗಿದ್ದ ಸತ್ಯ ಧರ್ಮ ವನ್ನು ಬಿಟ್ಟು  ಮೂರನೆಯವರ ಹಿಂದೆ ನಡೆಯುತ್ತಾ ಅಂತರ ಬೆಳೆದಿದೆ. ಇದರಲ್ಲಿ ಮುಖ್ಯವಾಗಿ ಶಿಕ್ಷಣದ ಅಂತರ ಜ್ಞಾನ ವಿಜ್ಞಾನದ ವಿಷಯದಲ್ಲಿ  ಸಮಾನತೆ ಕಾಣದೆ  ಬೆಳೆದಿದೆ, ಅದ್ವೈತ ದೊಳಗಿರುವ ದ್ವೈತವನ್ನು ಕಾಣದವರು ಅದರಲ್ಲಿಯೇ ಇದ್ದು ರಾಜಕೀಯಕ್ಕೆ ಇಳಿದಿದ್ದಾರೆ. ಸ್ತ್ರೀ ಪುರುಷರಲ್ಲಿರುವ  ಜ್ಞಾನಶಕ್ತಿ ಒಂದೇ ಆದರೂ ಸ್ತ್ರೀ ಯನ್ನು ಅಜ್ಞಾನಕ್ಕೆ ಬಳಸಿ ಹೊರಗೆಳೆದು ಸಂಸಾರದಲ್ಲಿಯೇ ಅಸಮಾನತೆ ಬೆಳೆದಿದೆ.
ದೇಶದ ಈ ಸ್ಥಿತಿಗೆ ಕಾರಣವಾಗಿರುವ ಶಿಕ್ಷಣದ ಬದಲಾವಣೆಗೆ ರಾಜಕೀಯತೆಯೇ  ದೊಡ್ಡ ಸಮಸ್ಯೆಯಾಗಿರುವಾಗ ಅದರ ಹಿಂದೆ ನಿಂತು  ಪ್ರಜೆಗಳಾದವರು ಬದಲಾವಣೆ ಮಾಡಲಾಗದು.ಸ್ವತಂತ್ರ ಭಾರತ ಅತಂತ್ರಸ್ಥಿತಿಗೆ ಬರಲು  ನಮ್ಮದಲ್ಲದ ಶಿಕ್ಷಣ ವ್ಯವಸ್ಥೆ ಕಾರಣ. ಹಿಂದಿನ ಗುರುಕುಲ ಶಿಕ್ಷಣ ಪದ್ದತಿ  ಧರ್ಮ ದ ಹಾದಿಯಲ್ಲಿತ್ತು.ಮಕ್ಕಳ ಜ್ಞಾನವನ್ನು ಗುರುತಿಸಿ ಅದಕ್ಕೆ ಪೂರಕವಾದ ಶಿಕ್ಷಣ ನೀಡುವ ಗುರುಗಳಿದ್ದರು. ಆದರೆ ಈಗ ತಂತ್ರಜ್ಞಾನದಿಂದ ಮಕ್ಕಳ ಆಸಕ್ತಿಯನ್ನು ಗುರುತಿಸುವಾಗ ಭೌತಿಕ ಸತ್ಯವಷ್ಟೆ ವಿಷಯ ವಸ್ತುವಾಗಿರುತ್ತದೆ. ಒಳಗಿರುವ ಸದ್ಗುಣ ಸದಾಚಾರ,ಸತ್ಯಕ್ಕೆ ಬೆಲೆಕೊಡದ ಅನೇಕ ಶಿಕ್ಷಣ ಕೇಂದ್ರಗಳು ವ್ಯಾಪಾರದ ಹಂತಕ್ಕೆ ವಿಷಯಗಳನ್ನು ತಂದಿಟ್ಟುಕೊಂಡು ಸ್ಮಾರ್ಟ್ ಆಗಿ ಶ್ರೀಮಂತಿಕೆಯನ್ನು ಹಣದಿಂದ ಅಳೆಯುವ ಅಜ್ಞಾನ ಮಿತಿ ಮೀರಿದೆ. ಮಾನವ ಎಷ್ಟೇ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೂ ಅದರಲ್ಲಿ ಸತ್ಯ,ಸತ್ವ,ತತ್ವ,ನ್ಯಾಯ,ಧರ್ಮ ವಿಲ್ಲ ಎಂದಾಗ  ಅಧರ್ಮ ಭ್ರಷ್ಟಾಚಾರ ವೇ ಬೆಳೆಯೋದು ಸತ್ಯ.
 ಬಡವನ ಬಡತನ ನಿವಾರಣೆಗೆ  ಅವನ ಜ್ಞಾನವೇ ಆಸ್ತಿ. ಆಂತರಿಕ ಜ್ಞಾನಶಕ್ತಿಯನ್ನು  ಗುರುತಿಸಿ ಶಿಕ್ಷಣ ನೀಡದೆ  ಉಚಿತವಾದ ಭೌತಿಕ ಶಿಕ್ಷಣ ನೀಡಿದರೆ ವಿದ್ಯೆಯಿದ್ದರೂ ಅದನ್ನು  ಹೇಗೆ ಬಳಸಿದರೆ  ಸಮಾಜಕಲ್ಯಾಣವಾಗುವುದೆನ್ನುವುದೂ ಕಲಿಸಬೇಕಿತ್ತು. ಯಾವುದೇ ಆಗಲಿ ಉಚಿತವಾಗಿ ಪಡೆದಾಗ ಸಾಲವಾಗುತ್ತದೆ
ಸಾಲ ತೀರಿಸಲು ಸತ್ಕರ್ಮ ಸ್ವಧರ್ಮ  ಆಚಾರ ವಿಚಾರವೂ ಅಗತ್ಯ.ಯಾವಾಗ ಉಚಿತಕೊಟ್ಟು ಆಳಲು ಹೊರಟವರು ಬಡವರ ನಡುವೆ ನಿಂತು ಅಧಿಕಾರ ಚಲಾಯಿಸಿದರೋ  ಅದನ್ನು  ಶೋಷಣೆ ಎಂದು ಕರೆಯಲಾಯಿತು. ಈಗಲೂ ನಾವು ಎಷ್ಟೋ ಹೆಸರಾಂತ ಪ್ರತಿಷ್ಠಿತ ಜನರ ಹಿಂದೆ ಸಾಕಷ್ಟು ಮಂದಿ ನಿಂತು ತಮ್ಮ ಜೀವನದ ಮುಖ್ಯಗುರಿ ತಿಳಿಯದೆ  ಮನರಂಜನೆಯಲ್ಲಿರೋದನ್ನು ಕಾಣಬಹುದು.ಜನಬಲ ಹಣಬಲಕ್ಕಿಂತ ಜ್ಞಾನಬಲವೇ ದೊಡ್ಡದು. ಎಲ್ಲಾ ಮಾನವರೆ ಆದರೂ ಎಲ್ಲರಿಗೂ ಸಮಾನ  ಅಧಿಕಾರ,ಹಣ,ಜ್ಞಾನವಿಲ್ಲ.ಕಾರಣ ಇಲ್ಲಿ ಸಮಾನತೆಯನ್ನು ಹಣದಿಂದ ಅಳೆಯುವ ಅಜ್ಞಾನವಿದೆ. ವೈಜ್ಞಾನಿಕ ಸಂಶೋಧನೆಗೆ  ಬಹಳ ಜನಸಹಾಯ,ಹಣಸಹಾಯ ಅಗತ್ಯ ಆದರೆ ಅಧ್ಯಾತ್ಮದ ಸಂಶೋಧನೆಗೆ ಇವುಗಳಿಂದ ದೂರವಿರಬೇಕಿದೆ. ಹೀಗಾಗಿ ಹೆಚ್ಚು ಸಹಕಾರವಿದ್ದ ಕಡೆ ಹೆಚ್ಚು ಹೆಚ್ಚು ಬೆಳವಣಿಗೆಯಾಗಿ ಭೌತಿಕ ವಿಜ್ಞಾನ ಬೆಳೆದಿದೆ.ಆದರೆ ಸತ್ಯ ಧರ್ಮ ದ ರಕ್ಷಣೆಗೆ ಬೇಕಾದ ಅಧ್ಯಾತ್ಮ ಸಂಶೋಧನೆಯು  ಮಧ್ಯವರ್ತಿಗಳ ವಶವಾಗಿದ್ದು ಅತಂತ್ರಸ್ಥಿತಿಗೆ ತಲುಪಿ ಕುಸಿಯುತ್ತಿದೆ ಎಂದಾಗ ಹಣದಿಂದ ನಮ್ಮ‌ಹಿಂದಿನ ಮಹಾತ್ಮರುಗಳು ಶ್ರೀಮಂತ ರಾಗಿದ್ದರೆ? ಅಧಿಕಾರ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದರೆ? ಅನ್ಯಾಯದ ಪರವಿದ್ದರೆ? ರಾಜಕೀಯದ ಹಿಂದೆ ಬೇಡುತ್ತಾ ಹೆಸರುಮಾಡಿದ್ದರೆ? ಅಥವಾ ಜ್ಞಾನದೆಡೆಗೆ ಕಷ್ಟಪಟ್ಟು ನಡೆದು
ದೇಶಭಕ್ತ ದೇವರಭಕ್ತರಾಗಿ ಶರಣರಾಗಿ ದಾಸ,ಸಂತರಾಗಿ ಮಹಾತ್ಮರಾಗಿದ್ದರೆ?
ಇಂತಹ ಮಹಾತ್ಮರುಗಳು  ಈಗಲೂ  ನಮ್ಮ‌ನಡುವೆ ಇದ್ದರೂ ಗುರುತಿಸದ ಶಿಕ್ಷಣ ವ್ಯವಸ್ಥೆಯನ್ನು  ರಾಜಕೀಯವಾಗಿ ಬಳಸಿಕೊಂಡು ನಮ್ಮವರ ವಿರುದ್ದವೇ ನಿಂತು ಪರಕೀಯರ ಪರ ನಿಂತರೆ ದೇಶ ವಿದೇಶವಾಗುತ್ತದೆ. ಪರಕೀಯರನ್ನು ದೇಶದಿಂದ ಹೊರಗಟ್ಟಲು  ದೇಶಭಕ್ತರು ಜೀವ ಕೊಟ್ಟರು ಆದರೆ ಇಂದಿನ ರಾಜಕಾರಣಿಗಳಿಗೆ ದೇಶವನ್ನು ಆಳುವ ದುರಾಸೆಯಲ್ಲಿ  ಮಕ್ಕಳು ಮಹಿಳೆಯರನ್ನೂ ರಾಜಕೀಯಕ್ಕೆ ಬಳಸಿಕೊಂಡು  ತಮ್ಮ ಸ್ವಾರ್ಥ ಸುಖಕ್ಕಾಗಿ  ಶಿಕ್ಷಣವನ್ನು  ವ್ಯವಹಾರಕ್ಕೆ ಬಳಸಿಕೊಂಡು  ಅನಾವಶ್ಯಕವಾಗಿರುವ ಹಿಂದೆ ಆಗಿಹೋಗಿರುವ ಕ್ರಾಂತಿಕಾರಕ ವಿಷಯವನ್ನು ಪಠ್ಯಕ್ಕೆ ಬಳಸಿ, ಪರಧರ್ಮ ದ ವಿಷಯವನ್ನು ತಲೆಗೆ ತುಂಬುವ ಮೂಲಕ ನಾವೆಲ್ಲರೂ ಒಂದೇ ಎಂದರೆ  ಇದರಲ್ಲಿ ಸತ್ಯವಿಲ್ಲ
ಪೋಷಕರಾದವರು ಮೊದಲು ಎಚ್ಚರವಾದರೆ ಉತ್ತಮ.
ಯಾಕೆ ನಮ್ಮ ಒಳಗಿರುವ ಜ್ಞಾನ ನಮ್ಮಮಕ್ಕಳಿಗೆ ಮನೆಯ ಒಳಗೇ ಕಲಿಸಲಾಗದೆ? ಬಡತನ ಎಂದರೆ ಹಣದ ಕೊರತೆಯಲ್ಲ ಜ್ಞಾನದ ಕೊರತೆ. ಇದು ಎಲ್ಲರ ಒಳಗೇ ಇರೋವಾಗ ಸದ್ಬಳಕೆ ಮಾಡಿಕೊಳ್ಳಲು ರಾಜಕೀಯ ಬೇಕೆ? ಮನೆಯೊಳಗೇ  ಹೆಚ್ಚಾಗಿರುವ  ಭಿನ್ನಾಭಿಪ್ರಾಯ ದ್ವೇಷ ಅಸೂಯೆ ಅಹಂಕಾರ ಸ್ವಾರ್ಥ ವೇ  ಎಲ್ಲಾ ಸಮಸ್ಯೆಯ ಮೂಲ. ಇದನ್ನು ಅಜ್ಞಾನವೆಂದರು. ಯಾವಾಗ ನಮ್ಮ ಮೂಲದ ಧರ್ಮ ಕರ್ಮ ಬಿಟ್ಟು ಮನೆಯಿಂದ ಹೊರಗೆ ಬಂದು ಮಾನವ  ತನ್ನ ಗುರುತಿಸಲು ರಾಜಕೀಯಕ್ಕೆ ಮಣೆ ಹಾಕಿದನೋ ಆಗಲೇ  ತನ್ನ ವ್ಯಕ್ತಿತ್ವ ಕಳೆದುಕೊಂಡು ಪರಮಾತ್ಮನಿಂದ ದೂರವಾದನು.ಕಲಿಗಾಲದ ಪ್ರಭಾವ ಎಷ್ಟು ಹಣ ಸಂಪಾದಿಸಿದರೂ ತನ್ನದಲ್ಲದ್ದನ್ನು ತನ್ನದೆಂದು ತಿಳಿದು ಅಹಂಕಾರ ಹೆಚ್ಚಾಗುವುದು. ಎಲ್ಲಿ ಅಹಂಕಾರ ಇರುವುದೋ ಅಲ್ಲಿ" ಅಹಂ ಬ್ರಹ್ಮಾಸ್ಮಿ" ಎನ್ನುವ ಸತ್ಯವಿರದು
ಹೀಗೇ ಹಣದ ಹಿಂದೆ ಹೋದವರೆಷ್ಟೋ ಹೆಣವಾಗಿ ಹೋದರು. ಆ ಹಣವನ್ನು ತನ್ನದೆಂದು ಬಳಸಿದವರು ರಾಜಕೀಯದಿಂದ ಜನರನ್ನು ಆಳಿದರು.ಆಳಿದವರೂ ಒಮ್ಮೆ ಇಲ್ಲವಾದರೂ ಅವರ ಹೆಸರಿನಲ್ಲಿ ಮತ್ತಷ್ಟು ಮಧ್ಯವರ್ತಿಗಳು ಬೆಳೆದು ಸರಿದಾರಿಯಲ್ಲಿ ನಡೆಯುತ್ತಿದ್ದವರ ದಾರಿತಪ್ಪಿಸಿ ಬಡವನೆಂಬ ಹಣೆಪಟ್ಟಿ ಕಟ್ಟಿ ಶಿಕ್ಷಣ ನೀಡದೆ ಹಣ ಕೊಟ್ಟು ಸಾಲಗಾರಮಾಡಿದರು. ಸಾಲ ತೀರಿಸಲಾಗದ ಬಡವ ಆತ್ಮಹತ್ಯೆ ಮಾಡಿಕೊಂಡರೆ  ಅವನ ಕುಟುಂಬಕ್ಕೆ  ಉತ್ತಮ ವಿದ್ಯಾಭ್ಯಾಸ ಕೆಲಸ ಕೊಡದೆ ನೇರವಾಗಿ ಹಣ ನೀಡಿದರೆ ಜೀವಕ್ಕೆ ಮುಕ್ತಿಸಿಗುವುದೆ? ಒಟ್ಟಿನಲ್ಲಿ ಮಾನವನೊಳಗಿರುವ ಜೀವಾತ್ಮನಿಗೆ ಮುಕ್ತಿ ಸಿಗಬೇಕಾದರೆ  ಪರಮಸತ್ಯದ ವಿದ್ಯೆ ಕೊಡಬೇಕಿತ್ತು.ಇದೇ ಭಾರತೀಯ ಶಿಕ್ಷಣವಾಗಿತ್ತು.
ಈಗಲೂ ಗುರುಕುಲವಿದೆ ಆದರೆ ಹಿಂದಿನ ಹಾಗೆ ಸ್ವತಂತ್ರ ಜ್ಞಾನದಿಂದ ಸ್ವತಂತ್ರ ಗುಣವುಳ್ಳ ಗುರುಗಳಿಂದ ನಡೆಸದೆ ಜನರ ಹಣದಿಂದ  ಪರರ ಸಹಾಯದಿಂದ  ಭೌತಿಕ ಜ್ಞಾನದ ಜೊತೆಗೆ ಅಧ್ಯಾತ್ಮ ಜ್ಞಾನವಿದೆ. ಮಕ್ಕಳು ಕಲಿಯುವ ವಿಷಯ ಪೋಷಕರಲ್ಲಿಲ್ಲ.ಪೋಷಕರು ಕಲಿತ ವಿಷಯ ಮಕ್ಕಳವರೆಗೆ ತಲುಪಿಲ್ಲ ಹೀಗಾಗಿ ಪೋಷಕರು ಮಕ್ಕಳ ನಡುವೆ ಅಂತರ ಬೆಳೆದಿದೆ. ಮನಸ್ಸು ಒಂದೇ ಸಮನಾಗಿರಲು ಒಂದೇ ವಿಷಯದಲ್ಲಿ ಜ್ಞಾನವಿರಬೇಕಿದೆ.
ಒಂದು ಮನೆಯಲ್ಲಿನ ಎಲ್ಲಾ ಸದಸ್ಯರ ಮನಸ್ಸು ಒಂದೇ ರೀತಿಯಲ್ಲಿ ಇರೋದು ಕಷ್ಟವಾದರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಾಮಾನ್ಯಜ್ಞಾನವಿದ್ದರೆ ಒಗ್ಗಟ್ಟು.
ಒಗ್ಗಟ್ಟಿನಲ್ಲಿದೆ ಬಲ. ಹಾಗಾದರೆ ಈಗ ಭಾರತೀಯ ಶಿಕ್ಷಣ ನೀಡಲು ಒಗ್ಗಟ್ಟು ಬೇಡವೆ? ಪರಕೀಯರ ಶಿಕ್ಷಣಕ್ಕೆ ಭಾರತೀಯರೆ  ಹೆಚ್ಚಿನ ಸಹಕಾರ ನೀಡಿರುವಾಗ  ದೇಶಭಕ್ತಿ ಮೂಡುವುದೆ? ಜ್ಞಾನದ ನಂತರ ವಿಜ್ಞಾನ ಬೆಳೆಯಬೇಕು.
ವಿಜ್ಞಾನವೇ ಜ್ಞಾನವನ್ನು ವಿರೋಧಿಸಿ ಆಳಿದರೆ ಏನರ್ಥ?
ಇಲ್ಲಿ ಯಾರೋ ಬಂದು ನಮ್ಮನ್ನು ಸರಿಪಡಿಸಲಾಗದು.ನಮ್ಮ‌ಮಕ್ಕಳ ಶಿಕ್ಷಣಕ್ಕೆ ನಾವೇ ಜವಾಬ್ದಾರರು.ಮಕ್ಕಳ ಜ್ಞಾನವನ್ನು  ಗುರುತಿಸುವಲ್ಲಿ ಸೋತ ಪೋಷಕರು ಕೊನೆಗೆ ಶೋಷಣೆಗೊಳಗಾದರೆ ಸರ್ಕಾರ ಕಾರಣವಾಗದು.ವೃದ್ದಾಶ್ರಮ ಅನಾಥಾಶ್ರಮ, ಅಬಲಾಶ್ರಮ ಇನ್ನಿತರ ಸೇವಾಶ್ರಮಗಳು ವ್ಯಾಪಾರ ಕೇಂದ್ರವಾಗಿದ್ದು ಹಣದಿಂದ ಸೇವೆ ಮಾಡುತ್ತವೆ.ಇದರಲ್ಲಿ ಪ್ರೀತಿ ವಿಶ್ವಾಸ,ಭಕ್ತಿ ಶ್ರದ್ದೆ  ಆತ್ಮವಿಶ್ವಾಸ ಕಂಡುಬರೋದಿಲ್ಲ.ಭಾರತದಂತಹ ಮಹಾದೇಶವು ಯೋಗಿಗಳ ದೇಶವಾಗಿತ್ತು ಈಗಿದು ಭೋಗದಿಂದ ರೋಗದೆಡೆಗೆ ನಡೆಯುತ್ತಿದೆ. ಹೈಟೆಕ್ ಆಸ್ಪತ್ರೆ ಶಾಲಾ ಕಾಲೇಜ್ ರೋಡ್ ಪ್ರತಿಮೆ, ಹೈಫೈ ಜೀವನಕ್ಕೆ ಹಣ ಬಳಸಲಾಗುತ್ತಿದೆ ಎಂದರೆ ಎತ್ತಸಾಗಿದೆ ಭಾರತ?
ಹಣವಿದ್ದವರಿಗೆ ಒಂದು ಎರಡು ಮನೆಸಾಲದು.ಮನೆಯೊಳಗೆ  ಮಕ್ಕಳೇ ಇರದು. ಬಡವರಿಗೆ ಮನೆ ಕಟ್ಟಿಕೊಟ್ಟರೆ ಅದೂ ಸಾಲದ ಮನೆಯಲ್ಲಿ ನೆಮ್ಮದಿ ಇರದು.ಇದಕ್ಕೆ ಬದಲಾಗಿ ಉತ್ತಮ ಜ್ಞಾನದ ಶಿಕ್ಷಣ ನೀಡಿ ಸ್ವಾವಲಂಬನೆ ಸ್ವಾಭಿಮಾನ,ಸತ್ಯ ಧರ್ಮ ನ್ಯಾಯ ನೀತಿಯತ್ತ  ಎಳೆಯೋದಕ್ಕೆ  ನಮ್ಮದೇ ರಾಜಕೀಯಬಿಡದು
ಎಂದಾಗ ನಮಗೆ ನಾವೇ ಶತ್ರು.ಅದೇ ನಮ್ಮೊಳಗೇ ಇರುವ ಅಹಂಕಾರ ಸ್ವಾರ್ಥ. ಇದನ್ನು ಹೊರಗಿನ ಸರ್ಕಾರ ಸರಿಪಡಿಸಲಾಗದು. ನಮ್ಮ ಅಜ್ಞಾನವೇ ನಮ್ಮ ಬಡತನ.
ಒಟ್ಟಿನಲ್ಲಿ ಹಣವಿದ್ದರೆ ಏನನ್ನಾದರೂ ಖರೀದಿಸಿ ಆಳಬಹುದೆನ್ನುವ  ಅಜ್ಞಾನಕ್ಕೆ ಮಾನವ ಬಲಿಯಾಗಿದ್ದು ಒಳಗೇ ಅಡಗಿರುವ  ಆತ್ಮಜ್ಞಾನದಿಂದ ದೂರವಾಗುತ್ತಾ ವಿಜ್ಞಾನ ಜಗತ್ತಿನಲ್ಲಿ ತನ್ನ ಮನರಂಜನೆಗಾಗಿ ಆತ್ಮವಂಚನೆ ಮಾಡಿಕೊಂಡು  ಜೀವ ಹೋಗುತ್ತಿದ್ದರೂ  ಇದನ್ನು ಪ್ರಗತಿ ಸಾಧನೆ ಎಂದು ಕರೆದರೆ  ಅಧೋಗತಿ. 
ಹೆಣವನ್ನೂ ಬಿಡದೆ ವ್ಯವಹಾರಕ್ಕೆ ಇಳಿದಿರುವಾಗ ಧರ್ಮ ಕಾಣೋದಿಲ್ಲ. ಸತ್ಯವಂತೂ ಅರ್ಥ ವಾಗೋದಿಲ್ಲ. ಶಾಸ್ತ್ರ ಪುರಾಣ,ಸಂಪ್ರದಾಯದಂತಹ ಸೂಕ್ಷ್ಮ ವಾಗಿರುವ ಸತ್ಯ ಹಿಂದುಳಿದು ತೋರುಗಾಣಿಕೆಯ  ಕಾರ್ಯಕ್ರಮದಲ್ಲಿಯೂ ವೈಭವವೆ ಹೆಚ್ಚಾಗಿ  ಹಣದದುರ್ಭಳಕೆಯ ಜೊತೆಗೆ ಮಹಿಳೆ ಮಕ್ಕಳ ದುರ್ಭಳಕೆ ಆಗುತ್ತದೆ. ಇದಕ್ಕಾಗಿ ನಮ್ಮ ಮಹಾತ್ಮರು ನಿಧಾನವೇ ಪ್ರಧಾನವೆಂದರು.ತಾಳಿದವನು ಬಾಳಿಯಾನು ಎಂದು ಕಾಯಕವೇ ಕೈಲಾಸವೆಂದರು.ಆದರೆ ಅವರ ಹೆಸರಿನಲ್ಲಿ ವ್ಯವಹಾರ ನಡೆಸಿದವರು ಹಣಕ್ಕಾಗಿ ಸತ್ಯ ಜ್ಞಾನ ಬಿಟ್ಟರು. ಸತ್ಯವೇ ಇಲ್ಲದ ಮೇಲೆ ಧರ್ಮ ರಕ್ಷಣೆ ಹೇಗೆ ಸಾಧ್ಯ?
ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಅಗತ್ಯವಾದರೂ ಆತ್ಮರಕ್ಷಣೆಗಾಗಿ ಮಾನವ  ಕಾಲವನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ಬದಲಾವಣೆ ಸಾಧ್ಯವೆನ್ನುವ ಹಿಂದೂ ಧರ್ಮ ವನ್ನು ಹಿಂದೂಗಳೇ ವಿರೋಧಿಸಿದರೆ ಪರಕೀಯರಾದರೂ  ಅವರ  ಧರ್ಮದ ಬೆಳವಣಿಗೆಗೆ ನಮ್ಮವರನ್ನೇ ಬಳಸಿಕೊಳ್ಳುವರು. ತಪ್ಪು ಯಾರದ್ದು?
ಇಲ್ಲಿ ತಮ್ಮದೇ  ಗೆಲ್ಲಬೇಕೆಂಬ  ಆಸೆ ಎಲ್ಲರಿಗೂ ಇದ್ದರೂ ನಮ್ಮ ಶಿಕ್ಷಣವನ್ನು ಕೊಡದಿದ್ದರೆ ಗೆಲ್ಲಲು ಕಷ್ಟ. ಒಟ್ಟಿನಲ್ಲಿ ಶಿಕ್ಷಣವೇ ನಮ್ಮದಲ್ಲದಿದ್ದರೆ ಜ್ಞಾನ ನಮ್ಮದಾಗಿರೋದಿಲ್ಲ.
ಭೂಮಿ ಮೇಲೇ ನಿಂತು ಭೂಮಿಯನ್ನು ಆಳೋವಾಗ ಧರ್ಮದ ಜೊತೆಗೆ ಸತ್ಯ ಅಗತ್ಯವಿತ್ತು.
ಸತ್ಯಯುಗ, ತ್ರೇತಾಯುಗ,ದ್ವಾಪರಯುಗ ಕಲಿಯುಗ ಈ ನಾಲ್ಕು ಯುಗದಿಂದಲೂ  ಮಾನವ ಜನನ ಮರಣಗಳನ್ನು ಪಡೆದು  ಮುಂದೆ ಬಂದಿರುವ ಸತ್ಯ ನಮಗಿನ್ನೂ ಅರ್ಥ ವಾಗಿಲ್ಲ. ನಾನು ಶಾಶ್ವತ ಎನ್ನುವ ಭ್ರಮೆಯಲ್ಲಿ ಮಾಡಬಾರದ ಕೆಲಸ ಮಾಡಿ ಆಗಬಾರದ್ದು ಆದಾಗ ಯಾರೋ ಕಾರಣವೆಂದು ಹೋರಾಟ ಹಾರಾಟ ಮಾರಾಟ ಮಾಡಿದರೆ ಕರ್ಮಫಲ ಅನುಭವಿಸಲು ತಿರುಗಿ ಬರಲೇಬೇಕು.ಇದನ್ನು ಹಣದಿಂದ ಯಾರೂ   ತಡೆಯಲಾಗದೆನ್ನುವುದೆ ಕರ್ಮ ಸಿದ್ದಾಂತ. ಸಿದ್ದಪುರುಷರ ಜ್ಞಾನವನ್ನು ತನ್ನದೆಂದು ಪ್ರಚಾರ ಮಾಡುವುದೂ ಅಸತ್ಯ . ಮಧ್ಯವರ್ತಿಗಳು  ಮಾನವರು ಮಹಿಳೆ ಮಕ್ಕಳು ಕೇವಲ ಕಾರಣಮಾತ್ರರಷ್ಟೆ ಎನ್ನುವ ಸತ್ಯ ಮಹಾತ್ಮರಿಗಷ್ಟೆ ಅನುಭವಕ್ಕೆ ಬರೋದು.ಹೀಗಾಗಿ ಅವರು ಯಾವ ಮಧ್ಯಸ್ಥಿಕೆ ವಹಿಸದೆಯೇ ಮುಂದೆ ಸ್ವತಂತ್ರ ವಾಗಿ ನಡೆದು ಪರಮಾತ್ಮನ ಸೇರಿ ಮುಕ್ತರಾಗಿದ್ದರು. ಈಗ ಸಂನ್ಯಾಸಿಗಳಿಗೇ ಸ್ವತಂತ್ರ ವಿಲ್ಲ.ಜನಬಲ ಹಣಬಲ ಅಧಿಕಾರಬಲವಿಲ್ಲದೆ ಯಾವುದೇ ಸಹಕಾರ ಸಿಗೋದಿಲ್ಲ.ಹೀಗಾಗಿ ಜ್ಞಾನ ಹಿಂದುಳಿದಿದೆ ಅಜ್ಞಾನಕ್ಕೆ ಬಲ ಬಂದಿದೆ.ಅಜ್ಞಾನದಿಂದ ಜೀವ ಹೋದರೆ ಮುಕ್ತಿ ಸಿಗದು.
ನಾನೆಂಬುದಿಲ್ಲ,ನಾನಿದ್ದೇನೆ, ಎಲ್ಲಾ ನನ್ನೊಳಗೇ ಇರೋದು.ಇದರರ್ಥ ಮಾನವ  ಭೂಮಿಯ ಮೇಲಿದ್ದೇ ತಿಳಿಯಬೇಕಿದೆ. ಭೂಮಿಗೆ ಬಂದ ಮೇಲೆ  ಇದನ್ನು ಬಿಟ್ಟು ಬೇರೆಲ್ಲಾ ಕಲಿತರೆ ಕಲಿಯುಗವಾಗುತ್ತದೆ. ಕಲಿಕೆಗೆ ಅಂತ್ಯವಿಲ್ಲ. ಆತ್ಮಕ್ಕೆ ಸಾವಿಲ್ಲ ಸಾಯುತ್ತಿರುವುದು ಜೀವವಷ್ಟೆ. ಜೀವಾತ್ಮ ಪರಮಾತ್ಮನ ಕಡೆಗೆ ಹೋಗುವುದೇ ಅಧ್ಯಾತ್ಮ ಸಾಧನೆ. ಜೀವಾತ್ಮ  ಪರಕೀಯರ ಕಡೆಗೆ ವಾಲುವುದೇ ಭೌತಿಕ ಸಾಧನೆ. ಪರಕೀಯರನ್ನೂ ಪರಮಾತ್ಮನೇ ನಡೆಸಿರುವಾಗ ನಮ್ಮ ಆತ್ಮಾನುಸಾರ ನಡೆಯುವುದೇ  ಉತ್ತಮ ಮಾರ್ಗ. ಯಾರಿಗೆ ಗೊತ್ತು ಯಾರಲ್ಲಿ ಯಾವ ಮಹಾತ್ಮರಿರುವರೋ?ಅಸುರರಿರುವರೋ?ದೇವರಿರುವರೋ? ನಮ್ಮ ಆತ್ಮರಕ್ಷಣೆಗೆ ನಮ್ಮ ಮೂಲದ ಧರ್ಮ ಕರ್ಮ ದ ಅರಿವು ಅಗತ್ಯ.ಅರಿವೇ ಗುರು.  
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯಬೇಡ ,ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗಶುದ್ದಿ ಎಂದರು ಬಸವಷಣ್ಣನವರು ಇದನ್ನು ರಾಜಕೀಯಕ್ಕೆ ಬಳಸಿ  ಹಣ,ಅಧಿಕಾರ,ಸ್ಥಾನಮಾನ ಪಡೆದವರು ನಮ್ಮವರನ್ನೇ  ಹಳಿಯುತ್ತಾ ದ್ವೇಷಮಾಡುತ್ತಾ ದೂರಮಾಡುತ್ತಾ ವಿದೇಶದವರೆಗೆ ಹೋದರೆ ರಾಜಕೀಯವಾಗುತ್ತದೆ ಅಧರ್ಮ ವಾಗುತ್ತದೆ.ಬಡತನ ಹಣದಿಂದ  ಸರಿಪಡಿಸಲಾಗದು  ಜ್ಞಾನದಿಂದ ಸರಿಪಡಿಸಿ ಸತ್ಕರ್ಮ ದಿಂದ ದುಡಿದರೆ  ಅದೇ ಕೈಲಾಸ.ಶಿವನಿಗೆ ಗುಡಿ ಗೋಪುರದ ಅಗತ್ಯವಿಲ್ಲವೆಂದರೂ  ಈಗ ಗುಡಿಗೋಪುರಕ್ಕೆ ಹೆಚ್ಚು ಹಣಬಳಕೆಯಾಗಿ ಶಿವಕಾಣದೆ ಶವವಾಗುವ ರಾಜಕೀಯವಿದೆ ಎಂದರೆ ಧರ್ಮ ವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತಿದ್ದೇವೆಂದರ್ಥ. ಧರ್ಮದ ಹೆಸರಿನಲ್ಲಿ ಅಸತ್ಯ ಬೆಳೆದಿದೆ.‌ಇದಕ್ಕೆ ಕಾರಣವೇ ನಮ್ಮ ಅಜ್ಞಾನದ ಸಹಕಾರ. ಅಸಹಕಾರ ಚಳುವಳಿಯನ್ನು  ಅಧ್ಯಾತ್ಮ ಸತ್ಯದಿಂದ ತಿಳಿಯುವುದೇ ‌ಜ್ಞಾನ. ಭೌತಿಕಸತ್ಯ ಕೇವಲ ರಾಜಕೀಯವಷ್ಟೆ ಬೆಳೆಸುತ್ತದೆ. ಇದರಲ್ಲಿ ಅಸತ್ಯವಿದ್ದರೆ ತಿಳಿಸಬಹುದು. ಸತ್ಯವೆನಿಸಿದರೆ ಅನುಸರಿಸಿ ಸರಿಪಡಿಸಿಕೊಳ್ಳಲು ಪ್ರಯತ್ನ ಪಡಬಹುದಷ್ಟೆ.ಪ್ರಯತ್ನ ನಮ್ಮದು ಫಲ ಭಗವಂತನದು. ಎಲ್ಲರಿಗೂ ಅವರದೇ ಆದ ವಿಶೇಷ ಜ್ಞಾನವಡಗಿರುತ್ತದೆ. ಅದು ನಮ್ಮ ಪೂರ್ವಿಕರ ಧರ್ಮ ಕರ್ಮದಿಂದ ರಕ್ತಗತವಾಗಿರುತ್ತದೆ. ಇದನ್ನು ಋಣವೆಂದು ಕರೆದರು. ಜ್ಞಾನದಿಂದ  ಅರ್ಥ ಮಾಡಿಕೊಂಡು ಇನ್ನಷ್ಟು ಉನ್ನತಮಟ್ಟದಲ್ಲಿ ಸದ್ಬಳಕೆ ಮಾಡಿಕೊಂಡರೆ ಇದ್ದಲ್ಲಿಯೇ ಸದ್ಗತಿ. ಬಿಟ್ಟು ದೂರವಾದಷ್ಟೂ ಅಧೋಗತಿ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆಎಂದರೆ.ಒಳಗೇ ಅಡಗಿರುವ ಮಹಾಜಗತ್ತಿನಿಂದ ಬಂದಿರುವ ಜೀವ ಮತ್ತೆ ಅದೇ ಜಗತ್ತಿಗೆ ಸೇರಬೇಕಾದರೆ ಒಳಹೊಕ್ಕಿ ಸತ್ಯವರಿತು ಧರ್ಮದ ಹಾದಿ ಹಿಡಿದಾಗಲೇ ಮುಕ್ತಿ. ಇದನ್ನು ಅದ್ವೈತವೆನ್ನಬೇಕೋ? ದ್ವೈತವೋ? ವಿಶಿಷ್ಟಾದ್ವೈತವೋ ಅವರವರಿಗೇ ಬಿಟ್ಟದ್ದು. ಹೊರಗೆ  ಕಾಣೋದೇ ಬೇರೆ ಒಳಗಿರೋದೇ ಬೇರೆಯಾದಾಗಲೇ  ಅಜ್ಞಾನ ಬೆಳೆಯೋದು.

No comments:

Post a Comment