ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, July 13, 2023

ಉಪವಾಸ ಮತ್ತು ಉಪಕಾರದಿಂದ ಆರೋಗ್ಯರಕ್ಷಣೆ

ಉಪವಾಸ ಮಾಡುವುದರಿಂದ ಆರೋಗ್ಯ ಹೆಚ್ಚಾಗುವುದು  ಹಾಗೆಯೇ  ಉಪಕಾರ ಮಾಡುವುದರಿಂದಲೂ ಆರೋಗ್ಯ ಹೆಚ್ಚುವುದು.

ಉಪವಾಸ  ಮೂರು ಬಗೆಯ ಜನರು ಬೇರೆ ಬೇರೆ ಕಾರಣದಿಂದ  ಮಾಡುವರು. ಹೊಟ್ಟೆಗೆ ಹಿಡ್ಟಿಲ್ಲದವರು ಮಾಡುವ ಉಪವಾಸ, ಹೊಟ್ಟೆಗೆ ಇದ್ದರೂ ವ್ರತ ನಿಯಮಕ್ಕಾಗಿ ಆಚರಿಸುವ ಉಪವಾಸ ಬೇರೆ, ಹೊಟ್ಟೆ ಕೆಟ್ಟಾಗ ಮಾಡುವ ಉಪವಾಸ ಬೇರೆ. ಈ ಮೂವರಿಗೂ ಹೊಟ್ಟೆಯಿದೆ ಅದರ ಪಾಲನೆಪೋಷಣೆಯಲ್ಲಿ ವ್ಯತ್ಯಾಸವಿದೆ.
 ಬಡವನ ಉಪವಾಸವನ್ನು ಯಾರೂ ಕೇಳೋದಿಲ್ಲವಾದರೂ ಪರಮಾತ್ಮ  ಸುಮ್ಮನಿರೋದಿಲ್ಲ ಹೊಟ್ಟೆ ತುಂಬಲು ಎಲ್ಲೋ ಒಂದೆಡೆ  ಅವಕಾಶ ನೀಡಿರುತ್ತಾನೆ ಆದರೆ  ಆ ಕಡೆ ಹೋಗಲು ಜ್ಞಾನವಿರೋದಿಲ್ಲ. ಮಧ್ಯಮವರ್ಗದ ಜನ ಭಗವಂತನ ಸ್ಮರಣೆ ಯಲ್ಲಿ ಮಾಡುವ ಉಪವಾಸ  ಉತ್ತಮವಾಗಿದ್ದರೂ ಆ ದಿನ‌ ಮುಗಿದ ನಂತರ ಮತ್ತದೇ ರೀತಿಯ ಭೋಜನ ಕೊಟ್ಟು ಹೊಟ್ಟೆ ತುಂಬುತ್ತದೆ. ಶ್ರೀಮಂತ ರ ಉಪವಾಸಕ್ಕೆ ಕಾರಣ  ಆರೋಗ್ಯ ಕೆಟ್ಟಿರುವುದಾಗಿರುತ್ತದೆ. ಹೀಗಾಗಿ ಯಾವ ದೇವರ ಸ್ಮರಣೆಯಿಲ್ಲದೆಯೇ ಊಟ ಬಿಟ್ಟು ಯೋಗಾಸನದಿಂದ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಅನಿವಾರ್ಯ ವಾಗಿರುತ್ತದೆ.
 ಆದರೆ ಉಪವಾಸದ ಅರ್ಥ  ಪರಮಾತ್ಮನ ಹತ್ತಿರವಿರೋದಾಗಿದ್ದರೆ ಮನಸ್ಸು ಯಾವಾಗಲೂ ಪರಮಾತ್ಮನ ನೆನಪಿನಲ್ಲಿರದ ಕಾರಣದಿಂದ ‌ ಹೊಟ್ಟೆಗೆ ಆಹಾರ ಹಾಕುವುದನ್ನು ಬಿಟ್ಟು ಪರಮಾತ್ಮನ ಪೂಜೆ ವ್ರತ ಕಥೆ ದ್ಯಾನ ಮಾಡಿದಾಗ ಒಳಗಿರುವ ಚೈತನ್ಯಶಕ್ತಿ ಜಾಗೃತವಾಗಿದ್ದು ಹೆಚ್ಚು ಸಾತ್ವಿಕ ಶಕ್ತಿಯ ಸಹಾಯದಿಂದ ಆರೋಗ್ಯ ಹೆಚ್ಚುವುದು.
ಬಡವನಿಗೆ ಉಪವಾಸ ಮಾಡುವ ಅಗತ್ಯವೇ ಇರೋದಿಲ್ಲ
ಶ್ರೀಮಂತ ನಿಗೆ ಮಾಡದಿದ್ದರೆ ಆಗೋದಿಲ್ಲ
ಮಧ್ಯಮವರ್ಗದವರು ಈ ಕಡೆ ಬಡವನ ಪಾಲು ಇನ್ನೊಂದು ಕಡೆ ಶ್ರೀಮಂತನ ಬಾಳನ್ನು  ಪಡೆದು  ತನ್ನ ಜೀವನದಲ್ಲಿ ಹೆಚ್ಚು ಆರೋಗ್ಯವಿರಬೇಕಾದರೆ  ದೇವರ ಹೆಸರಿನಲ್ಲಿ  ಉಪವಾಸ ಮಾಡಿದಾಗ  ಆರೋಗ್ಯ ಹೆಚ್ಚುವುದೆನ್ನುವ ನಂಬಿಕೆಯಿದೆ.
 ಆತ್ಮಜ್ಞಾನಿಗಳಾಗಬೇಕಾದರೆ ಮಧ್ಯಮವರ್ಗ ದಿಂದ ಸಾಧ್ಯ ಎನ್ನುವರು. ಕಾರಣ  ಅತಿಯಾದ ಬಡತನವಿಲ್ಲ ಸಿರಿತನವಿಲ್ಲ
ಹೀಗಾಗಿ ಒಂದು ಕಡೆ ನಿಂತು  ಸಮಾನವಾಗಿ  ಸತ್ಯ ಅರ್ಥ ಮಾಡಿಕೊಳ್ಳಲು  ಸ್ವಲ್ಪ ಮನಸ್ಸಿನ ಹಿಡಿತದ ಅಗತ್ಯವಿದೆ.  ಈ ಮನಸ್ಸೇ ಎಲ್ಲಾ ರೋಗಗಳ ಗೂಡಾಗಿರುವಾಗ  ಮನಸ್ಸನ್ನು
ತಡೆಹಿಡಿಯುವ ಯೋಗಿಯಾಗೋದು ಮಧ್ಯಮವರ್ಗದವರಿಗೆ ಸಾಧ್ಯವೆಂದು ಶ್ರೀ ಸ್ವಾಮಿ ವಿವೇಕಾನಂದರೆ ತಿಳಿಸಿದ್ದಾರೆ.ಆದರೆ, ಸ್ವತಂತ್ರ ವಾಗಿರಬೇಕಷ್ಟೆ. ಯಾರೋ ಹೇಳಿದ್ದನ್ನು ಕೇಳಿದ್ದನ್ನು ಸತ್ಯ ತಿಳಿಯದೆ ಅನುಭವಕ್ಕೆ ಬರದಿದ್ದರೂ ಒಪ್ಪಿಕೊಂಡು ನಡೆದರೆ ಕೆಳಗಿಳಿಯಬೇಕು ಇಲ್ಲಾ ಮೇಲೇ ಹೋಗಬೇಕು. ನಮ್ಮ ದೇಶ ಮಧ್ಯಮವರ್ಗದವರ ದೇಶವೆಂದರೆ ಸರಿಯಾಗಬಹುದು.ಇಲ್ಲಿ ಜ್ಞಾನವೂ ಇದೆ ವಿಜ್ಞಾನವೂ ಇದೆ ಅದರ ಜೊತೆಗೆ ಸಾಮಾನ್ಯಜ್ಞಾನ ಎಲ್ಲರಲ್ಲಿಯೂ ಇದೆ. ಇದು ಮಾನವನ ಮೂಲವಾಗಿದೆ.ಮೊದಲು ಮಾನವನಾಗು ಎಂದಿದ್ದಾರೆ. ಜನ್ಮ ಪಡೆದಾಗ ಮಾನವ,ರೂಪ ಬೆಳೆದಂತೆಲ್ಲಾ ಅವನ ಗುಣಸ್ವರೂಪವು ಅವನು ಪಡೆಯುವ ಆಹಾರ ವಿಹಾರ ಶಿಕ್ಷಣದ ಮೇಲೇ ಇರುತ್ತದೆ. ಯಾರೂ ಮೂಲದಂತೆ ಕೊನೆಯವರೆಗೂ ಇರೋದಿಲ್ಲ.ಹೀಗಾಗಿ ಮಾನವ ತನ್ನದೈಹಿಕ ಸುಖ ಸಂತೋಷಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ ಅವನ ಮುಂದಿನ ಅವಸ್ಥೆ ಗೆ ಕಾರಣವೆನ್ನಬಹುದು.

ಉಪವಾಸದಿಂದ ಆರೋಗ್ಯ ಹೆಚ್ಚಾದಂತೆ ಉಪಕಾರ ಮಾಡಿದರೂ ಆರೋಗ್ಯ ಹೆಚ್ಚುವುದಂತೆ ಇಲ್ಲಿ ಯಾರೋ ಒಬ್ಬ ಹಸಿದವನಿಗೆ ಅನ್ನ ವಸ್ತ್ರ ನೀಡಿ ಕೆಲಸ ಕೊಟ್ಟರೆ ಮಹಾ ಉಪಕಾರವಾಗುತ್ತದೆ. ಕೇವಲ ಅನ್ನ ನೀಡಿದರೆ ಆಗದು ಜೊತೆಗೆ ವಸ್ತ್ರ ಕೊಟ್ಟು ದುಡಿದು ಬದುಕಲು ಉಪಕಾರ ಮಾಡಿದವರು ದೇವರಾಗುವರು. ಉಚಿತವಾಗಿ ಏನನ್ನೂ ಕೊಡಬಾರದೆನ್ನುವರು ಆದರೆ  ಬರಿಕೈಯಲ್ಲಿರುವವರಿಗೆ ಅಥವಾ ಏನೂ ತಿಳಿಯದವರಿಗೆ ಹಣ ಕೊಟ್ಟು ಜ್ಞಾನ ನೀಡಿ ಸ್ವತಂತ್ರ ಜೀವನ ನಡೆಸಲು ಬಿಟ್ಟರೆ ಇದಕ್ಕಿಂತ ಉಪಕಾರ ಬೇರಿಲ್ಲ. ಎಲ್ಲಾ ನೀಡುತ್ತಾ ತನ್ನ  ದಾಸನಾಗಿರಲೆಂದು ಸ್ವಾರ್ಥ ಅಹಂಕಾರ ತೋರಿಸಿದರೆ  ಅಧರ್ಮ.
ನಾವು ಕಾಣುತ್ತಿರುವ ರಾಜಕೀಯತೆ ಇದೇ ಆಗಿದೆ. ಪ್ರಜೆಗಳ ಹಣವನ್ನೇ ಬಳಸಿಕೊಂಡು ಪ್ರಜೆಗಳನ್ನು ಆಳುತ್ತಾ ತಾವೇ ರಾಜನೆಂದುಕೊಂಡು  ಹೆಸರು ಹಣ ಅಧಿಕಾರ ಪಡೆಯುತ್ತಾ ದೊಡ್ಡ ದೊಡ್ಡ ಶ್ರೀಮಂತ ರು,  ಪ್ರತಿಷ್ಟಿತರು, ಜ್ಞಾನಿಗಳು  ತಮ್ಮ  ಆರೋಗ್ಯರಕ್ಷಣೆಗಾಗಿ ಉಪವಾಸ ಮಾಡುವುದರ ಬದಲಾಗಿ  ಯಾರಿಗೆ ತಲುಪಬೇಕೋ ಅವರಿಗೆ ತಲುಪಲು ನಿಸ್ವಾರ್ಥ ನಿರಹಂಕಾರದಿಂದ ಉಪಕಾರ ಮಾಡಿದರೆ ಈ ಉಪವಾಸದ ಅಗತ್ಯವಿರದು.
ಯಾವಾಗ ಮಾನವ ಬೇರೆಯವರಿಗೆ ಸೇರಬೇಕಾದ ಹಣ, ಆಸ್ತಿ ಸಂಪತ್ತು ಜ್ಞಾನವನ್ನು ಹಿಡಿದಿಟ್ಟುಕೊಂಡು ತನ್ನ ಸ್ವಾರ್ಥ ಸುಖದ ಲಾಭವನ್ನು ಹೆಚ್ಚಿಸಿಕೊಂಡು  ಬೆಳೆಯುವನೋ ಆಗಲೇ ಅವನೊಳಗೆ ಬೇರೆಯವರ ರೋಗವೂ ಆವರಿಸಿ ಆರೋಗ್ಯ ಹಾಳಾಗುತ್ತಾ ಆಯಸ್ಸು ಕ್ಷೀಣಿಸುತ್ತದೆ.
ಪಾಲಿಗೆ ಬಂದದ್ದು ಪಂಚಾಮೃತವೆಂಬ ಅರಿವಿರಬೇಕಷ್ಟೆ.
ಅರಿವೇ ಇಲ್ಲದೆ ಸಿಕ್ಕಿದ್ದೆಲ್ಲಾ ನನ್ನದೇ ಎಂದು ಸೇರಿಸಿಕೊಂಡರೆ ಕೊನೆಯಲ್ಲಿ  ಎಲ್ಲಾ ಸಮಸ್ಯೆ ಒಟ್ಟಿಗೇ ಬರುವುದು. ಇದು ಅಧಿಕಾರ, ಹಣ, ಆಸ್ತಿ ವಿದ್ಯೆ,ಬುದ್ದಿ,ಜ್ಞಾನ ಯಾವುದೇ ಆದರೂ ನಮಗೆ ಸಂಬಂಧಿಸದ, ನಮ್ಮದಲ್ಲದ್ದನ್ನು  ನಾವು ಸಾಧ್ಯವಾದಷ್ಟು ದೂರವಿಟ್ಟರೆ ಉತ್ತಮ. ಹತ್ತಿರಬಂದರೂ ಹಂಚಿಕೊಂಡು ಬಾಳುವುದು ಅಗತ್ಯವಾಗಿದೆ. ಹಂಚಿಕೊಳ್ಳದೆ ಕೂಡಿಟ್ಟು ಆಳಿದರೆ  ಕಷ್ಟ ನಷ್ಟದ ಜೊತೆಗೆ ಆರೋಗ್ಯಸಮಸ್ಯೆ ಹೆಚ್ಚುವುದು. ಕೆಲವರಿಗೆ ಮಕ್ಕಳು ಮೊಮ್ಮಕ್ಕಳ ಕಾಲದವರೆಗೂ  ಅನುವಂಶೀಯ ರೋಗ ಹರಡಿರುವುದು ಪೂರ್ವಿಕರ  ಜೀವನದ ಪ್ರಭಾವವಾಗಿದೆ. ಸೂಕ್ಮವಾಗಿರುವ ಸತ್ಯವು ತಕ್ಷಣ ಕಾಣದಿದ್ದರೂ  ಮುಂದೆ ನಡೆದಂತೆಲ್ಲಾ ಕಾಣುತ್ತದೆ.‌ಇದಕ್ಕೆ ಕರ್ಮಕ್ಕೆ ತಕ್ಕಂತೆ ಫಲ ಎಂದಿದ್ದಾರೆ.
ಇದನ್ನು ಉಪವಾಸದಿಂದ ತಾತ್ಕಾಲಿಕ ವಾಗಿ ತಡೆದರೂ ಒಳಗೇ ಸೇರಿರುವ‌ ಕರ್ಮ ಫಲ ಅನುಭವಿಸಿಯೇ ತೀರಬೇಕು.
ಇತ್ತೀಚೆಗೆ  ಧಾರ್ಮಿಕ  ಕಾರ್ಯ ದಲ್ಲಿರುವವರಿಗೂ ರೋಗಗಳು ಬೆಳೆಯುತ್ತಿದೆ. ಮೊದಲು ಆರೋಗ್ಯಕ್ಕಾಗಿ ಧಾರ್ಮಿಕ ಸೇವಾಕಾರ್ಯ ನಡೆಯುತ್ತಿತ್ತು. ಈಗ ಆರೋಗ್ಯ ಸರಿಯಿಲ್ಲದವರೂ  ಕಾರ್ಯ ನಡೆಸುವಂತಾಗಿದೆ. ನಮ್ಮ ಜೀವನ ನಿರ್ವ ಹಣೆಗಾಗಿ ಇದೊಂದು ವೃತ್ತಿ ಮಾಡಿಕೊಂಡು ಎಲ್ಲರ ಯೋಗಕ್ಷೇಮಕ್ಕಾಗಿ ಧಾರ್ಮಿಕ ಕಾರ್ಯ ಕ್ರಮ ನಡೆಸುವವರು ಹೆಚ್ಚಾಗಿ ಉಪವಾಸ ವ್ರತ ಮಾಡುವರು.
ಕಾರಣ, ಪರಮಾತ್ಮನ ಸ್ಮರಣೆಯನ್ನು  ಮನಸ್ಸಿನ  ಮೂಲಕ ಮಾಡುವಾಗ ಯಾವುದೇ ರೀತಿಯಲ್ಲಿ ಸೋಮಾರಿತನವಿರದೆ ಪ್ರಶಾಂತವಾಗಿರಲು ಉಪವಾಸ ಸಹಾಯ ಮಾಡುತ್ತದೆ. ಹಾಗೆಯೇ ಬ್ರಾಹ್ಮಣರಾದವರಿಗೆ ಸಾಕಷ್ಟು  ಜ್ಞಾನದ ಅಗತ್ಯವಿರುವುದರಿಂದ ಅಧ್ಯಾತ್ಮ ಪ್ರಗತಿಗಾಗಿ  ಭಗವಂತನ ನಿವಾಸಕ್ಕಾಗಿ ಉಪವಾಸ ಅಗತ್ಯ. ಇದರಲ್ಲಿ ಶುದ್ದತೆ,ಶುದ್ದಮನಸ್ಸು ಅಗತ್ಯವಾಗಿದೆ. ಕೊರೊನ ಸಮಯದಲ್ಲಿ  ಕಂಡಂತೆ   ರೋಗವು ಯಾವ ಜಾತಿ ಧರ್ಮ ವ್ಯಕ್ತಿಯನ್ನು  ಬಿಡದೆ ಕಾಡಿತ್ತು. ದೇವಸ್ಥಾನಗಳೇ ಮುಚ್ಚಲ್ಪಟ್ಟಿದ್ದವು. ಮನೆಯೊಳಗಿದ್ದೇ ಸ್ವಚ್ಚತೆ ಕಾಪಾಡಿಕೊಳ್ಳಲು  ಎಲ್ಲಾ ಶ್ರಮಪಟ್ಟರು. ನಂತರದ ದಿನ ಮತ್ತೆ ಅದೇ ಹಿಂದಿನ  ಮೋಜುಮಸ್ತಿಯ ಜೀವನ ನಡೆದಿದೆ. 
ಒಟ್ಟಿನಲ್ಲಿ ಉಪವಾಸದ ಜೊತೆಗೆ ಉಪಕಾರದ ಬುದ್ದಿ ಬೆಳೆದರೆ ಸದ್ಗತಿ. ಇವೆರಡೂ ಕೇವಲ ತನ್ನ ದೇಹದ ರೋಗ ನಿವಾರಣೆಗೆ  ಹಾಗು ತನ್ನ ಸ್ವಾರ್ಥ ಸುಖಕ್ಕಾಗಿ  ಉಪಕಾರ ಮಾಡಿದರೆ  ಆರೋಗ್ಯ  ಉತ್ತಮವಾಗಿರಲು ಕಷ್ಟ.
ಹೆಚ್ಚು ಹೆಚ್ಚು ಹಣ ಸಂಪಾದನೆಗೆ ತಕ್ಕಂತೆ ರೋಗ ರುಜಿನ ಖರ್ಚು ವೆಚ್ಚ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ ಕಾರಣ ಯಾರದ್ದೋ ಪಾಲು ಯಾರೋ ಪಡೆದಾಗ ಅವರ ರೋಗ ಆಸೆ ಕಷ್ಟ ನಷ್ಟವೂ ಹಣದ ಮೂಲಕ ಸೇರಿರುವುದು ಕಾಣದು.ನೋಡಲು ಹಣದ ಶ್ರೀಮಂತ  ಆದರೆ ಒಳಗೆ ಹೊಕ್ಕರೆ  ಜ್ಞಾನದ ಬಡತನ.
ಹೀಗಾಗಿ  ಯೋಗಿಯಾಗೋದಕ್ಕೆ  ಸಾಮಾನ್ಯಜ್ಞಾನದಿಂದ ವಿಶೇಷಜ್ಞಾನ ಅರ್ಥ ಮಾಡಿಕೊಳ್ಳುವ  ಶಕ್ತಿಯಿದ್ದರೆ ಸಾಕು.
ಸಾಮಾನ್ಯಜ್ಞಾನವೇ ಇಲ್ಲದ ವಿಶೇಷಜ್ಞಾನಿ ಅಹಂಕಾರ ಸ್ವಾರ್ಥ ದಿಂದ  ತನ್ನ ತಾನರಿಯಲಾರ. ಯಾರದ್ದೋ ಕಥೆಯನ್ನು ನನ್ನ ಕಥೆಯೆಂದು ಇಳಿಸಿದರೆ ವ್ಯಥೆಯಾಗಬಹುದು. ಹೆಸರು,ಹಣಕ್ಕಾಗಿ  ಪರಮಾತ್ಮನ ಬೇಡದೆ  ಪರಮಸತ್ಯಕ್ಕಾಗಿ ಪರಮಾತ್ಮನ ದಾಸನಾಗಿರೋದೆ ನಿಜವಾದ ಉಪವಾಸ.ಇವನು ಮಹಾಯೋಗಿ  ಹಾಗೆಯೇ, ತುಂಬಾ ಹಸಿದಿರುವ ಬಡವನಿಗೂ  ಯೋಗಿಯಾಗೋದು ಕಷ್ಟ.
ಅನ್ನದಾನ ಮಹಾದಾನವೆಂದರು.ಜ್ಞಾನದಾನ ಸರ್ವ ಶ್ರೇಷ್ಠ ದಾನವಾದರೂ  ಹೊಟ್ಟೆ ಹಸಿವಿರುವಾಗ ಉಪವಾಸ ಮಾಡಿ ಜ್ಞಾನಸಂಪಾದಿಸಲಾಗದು. ಹೊಟ್ಟೆ ತುಂಬಿದವನಿಗೂ  ಉಪವಾಸ ಮಾಡಲಾಗದು. ಇತಿಮಿತಿಗಳನ್ನು ಕಾಯ್ದುಕೊಂಡು ಸತ್ಯಾಸತ್ಯತೆಯನ್ನು  ತಾಳ್ಮೆಯಿಂದ ತಿಳಿದು ಜೀವನ ನಡೆಸುವುದು ಮಾನವನಿಗೆ ಸಾಧ್ಯ.ದೇವತೆಗಳಿಗೂ ಕಷ್ಟ ಅಸುರರಿಗಂತೂ  ಈ ಭೂಮಿಯಲ್ಲಿ ಸಾಧ್ಯವಿಲ್ಲ.
ಪ್ರಜಾಪ್ರಭುತ್ವದ ಸಾಮಾನ್ಯಪ್ರಜೆಗಳಲ್ಲಿ ಸಾಮಾನ್ಯಜ್ಞಾನ ಅಗತ್ಯವಾಗಿ ಇದೆ.ಆದರೆ ಅದನ್ನು ಸರಿಯಾಗಿ ತಿಳಿಯದೆ,
ತಿಳಿಸದೆ ಕೆಳಗಿರುವ ಮೇಲಿರುವ ಜನರನ್ನು  ನೋಡಿಕೊಂಡು  ಸತ್ಯಾಸತ್ಯತೆಯನ್ನು  ದುರ್ಭಳಕೆ ಮಾಡಿಕೊಂಡು ವ್ಯವಹಾರ ಜಗತ್ತು ಬೆಳೆಸಿರುವ ಮಧ್ಯವರ್ತಿಗಳು ತಮ್ಮ ಆರೋಗ್ಯವನ್ನು ಹಾಳುಮಾಡಿ ಕೊಂಡು ಸಮಾಜದ ಆರೋಗ್ಯವನ್ನು ಕೆಡಿಸಿದರೆ  ಯೋಗ ಎಲ್ಲಿಂದ ಬರಬೇಕು?
ಭಗವದ್ಗೀತೆ ಯ ಯೋಗವೇ ಬೇರೆ ರಾಜಕೀಯದ ಯೋಗವೇ ಬೇರೆ. ಅಧ್ಯಾತ್ಮ ಯೋಗಕ್ಕೆ ಉಪವಾಸ ಅಗತ್ಯ
ಭೌತಿಕದ ಯೋಗಕ್ಕೆ ಉಪಕಾರ ಅಗತ್ಯ. ಉಪವಾಸದಿಂದ ಹೊಟ್ಟೆಯ ಆರೋಗ್ಯದ ಜೊತೆ ಮನಸ್ಸಿನ ಆರೋಗ್ಯ ವೃದ್ದಿಸಿದರೆ ಭೌತಿಕದ ಉಪಕಾರ ಕಣ್ಣಿಗೆ ಕಾಣುತ್ತದೆ ಹೀಗಾಗಿ ಹೆಚ್ಚು ಹಣ,ಅಧಿಕಾರ ಸ್ಥಾನಮಾನ ಸನ್ಮಾನ ಗಳು ಜನರೆ ಕೊಡುವರು  ಆದರೆ ಉಪಕಾರದಿಂದ ಪ್ರತ್ಯುಪಕಾರ ಪಡೆದಾಗ  ಪರಮಾತ್ಮ ಕಾಣೋದಿಲ್ಲ ವ್ಯಕ್ತಿ ವ್ಯಕ್ತಿಯಾಗೇ ಇರುವನು .ಆಂತರಿಕ ಶಕ್ತಿ ಕಾಣಬೇಕಾದರೆ ನಿಸ್ವಾರ್ಥ ನಿರಹಂಕಾರದ ಉಪಕಾರವಾಗಬೇಕೆನ್ನುವರು ಯೋಗಿಗಳು. ಉಪವಾಸವೂ  ಯಾವುದೇ ಸ್ವಾರ್ಥ ಪೂರಿತ ಬೇಡಿಕೆಯಿಲ್ಲದೆ ಪರಮಾತ್ಮನ ಸ್ಮರಣೆಯಲ್ಲಿದ್ದರೆ ಆರು ಯೋಗ್ಯದ  ಅರಿಷಡ್ವರ್ಗದ ಸದ್ಗತಿ. 
ಜ್ಞಾನದಿಂದ ಪರಮಾತ್ಮನ ಜೊತೆಗಿದ್ದು ಮಾಡುವ ಉಪವಾಸ  ಜೀವನ್ಮುಕ್ತಿಗೆ ದಾರಿಯಾದಂತೆ ಉಪಕಾರವೂ ಪರಮಾತ್ಮನ ಸೇವೆಯೆಂದು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡೋದಕ್ಕೂ  ಆತ್ಮಜ್ಞಾನವೇ ಇರಬೇಕು. ಆಗಲೇ ಸಮಾನತೆ ಇರೋದು.

No comments:

Post a Comment