ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, July 31, 2023

ಶಿವಶಕ್ತಿಯ ಸಮಾನತೆ ಅಧ್ವೈತ. ಹರಿಹರರ ಸಮಾನತೆಯೂ ಅಧ್ವೈತ.

ಅಧ್ವೈತ ಸಿದ್ದಾಂತವನ್ನು ಸಿದ್ದರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ.ಆದರೆ ನಡೆಯುವುದಕ್ಕೆ ಸಿದ್ದರಾಗೋದು ಕಷ್ಟವಿದೆ.ಅಂದರೆ ಶ್ರೀ ಶಂಕರ ಭಗವತ್ಪಾದರ  ಕಾಲದಲ್ಲಿದ್ದ ಅಧರ್ಮ, ಅನ್ಯಾಯ,ಅಸತ್ಯ ಇಂದಿಗೂ ಇದೆ ಎಂದರೆ ಸಿದ್ದಾಂತವನ್ನು ತಿಳಿದು ನಡೆಯೋದಕ್ಕೆ ನಮ್ಮವರು ಸಿದ್ದರಾಗದೆ ರಾಜಕೀಯದೆಡೆಗೆ ಹೆಚ್ಚಿನ ಗಮನಕೊಟ್ಟು ವೈಜ್ಞಾನಿಕ ಸಂಶೋಧನೆ ಬೆಳೆದಿದೆ.ಇಲ್ಲಿ ವಿಜ್ಞಾನ ಅಧ್ಯಾತ್ಮ ದಿಂದ ಬೆಳೆಸುವುದು ಸಿದ್ದಾಂತದ ತತ್ವ. ಭೌತಿಕದಲ್ಲಿ ಬೆಳೆಸುವುದರಿಂದ ತಂತ್ರಜ್ಞಾನವೇ ಬೆಳೆಯುತ್ತದೆ.ಒಬ್ಬರನ್ನು ಆಳೋದಕ್ಕೂ ನಮ್ಮನ್ನು ನಾವು ಅರಿತು ನಡೆಯುವುದಕ್ಕೂ ವ್ಯತ್ಯಾಸವಿದ್ದಂತೆ. ಒಂದರೊಳಗೆ ಇನ್ನೊಂದು ಇದ್ದಂತೆ ಆ ಒಳ  ಅರ್ಥ ತಿಳಿಯುವಾಗ  ಹೊರಗೆ ಮನಸ್ಸಿರದು.ಹೊರಗಿನ ಅರ್ಥ ತಿಳಿಯುವಾಗ ಒಳಮನಸ್ಸಿರದು. ಅಂದರೆ ಭೂಮಿಯ ಮೇಲಿದ್ದು ಆಕಾಶತತ್ವ ಅರಿಯುವಾಗ ಭೂಮಿ ಕಾಣದು. ಹಾಗಂತ ಭೂಮಿ ಬಿಟ್ಟು ತತ್ವದರ್ಶನ ಮಾಡಿಕೊಂಡವರಿಲ್ಲ. ಒಳಗಿರುವ ಆತ್ಮಸಂಶೋಧನೆ  ಮಾಡಿಕೊಳ್ಳುವಾಗ ನಾನೆಂಬ ಅಹಂಬಾವವಿದ್ದರೆ ಸಂಶೋಧನೆ ಕಷ್ಟ.ಹಾಗಾದರೆ ನಾನಿಲ್ಲದೆ  ಆತ್ಮದರ್ಶನಸಾಧ್ಯವೆ? ಪರಮಾತ್ಮನ ಜೊತೆಗೆ ಜೀವಾತ್ಮನಿದ್ದರೂ  ಶಾಶ್ವತವಾಗಿರುವ‌ಪರಮಾತ್ಮನರಿಯದೆ ನಾನೇ  ಸತ್ಯ ಶುದ್ದನೆಂದರೆ  ಪೂರ್ಣ ಸತ್ಯವಲ್ಲ. ಹಾಗಾಗಿ ಭೂಮಿಯಲ್ಲಿ ಜನ್ಮ ಪಡೆಯುವುದಕ್ಕೆ  ಕಾರಣವಿದ್ದರೂ  ಅದನ್ನರಿತು ನಡೆಯೋದಕ್ಕೆ ಪರಮಾತ್ಮನಿಲ್ಲದೆ ಅಸಾಧ್ಯ.
ಎಲ್ಲಾ ಗ್ರಹ ನಕ್ಷತ್ರ ಆಕಾಶಕಾಯಗಳನ್ನು ಸಂಶೋಧನೆ ಮಾಡುವ‌ಶಕ್ತಿ ಮಾನವನಿಗಿಲ್ಲ ಹಾಗಂತ ಅವುಗಳಿಲ್ಲವೆ? ಹಿಂದೂ ಧರ್ಮ ವನರಿಯದೆ ಬೆಳೆದ ಪರಧರ್ಮದವರಿಗೆ  ಕಣ್ಣಿಗೆ ಕಾಣೋದಷ್ಟೆ ಸತ್ಯ ವೆನಿಸಿದರೂ ಅಸತ್ಯವೆ ಎನ್ನುವ ಜ್ಞಾನ ಹಿಂದೂಗಳಿಗೆ ತಿಳಿದರೂ  ಅವರಿಗೇ ಸಹಕಾರ ಸಹಾಯ ಮಾಡುತ್ತಿದ್ದರೆ  ಹಿಂದುಳಿಯುವುದು ಯಾರು?
ಮಕ್ಕಳು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೆ ಸರಿಯಾಗಿ ತಿಳಿಸಿ ಬೆಳೆಸೋ ಬದಲಾಗಿ  ಅವರ ಹಿಂದೆ ನಡೆದರೆ ತಪ್ಪು ಯಾರದ್ದು? ಹಾಗೆಯೇ ಭಾರತೀಯರಾಗಿದ್ದು ಭಾರತೀಯ ತತ್ವಶಾಸ್ತ್ರ  ಸರಿಯಾಗಿ ತಿಳಿಸದೆ,ತಿಳಿಯಲಾಗದೆ ತಂತ್ರಕ್ಕೆ ಸಹಕಾರ ನೀಡಿದರೆ ಅತಂತ್ರ ಸ್ಥಿತಿಗೆ  ಜೀವನ ತಲುಪುವುದು.
ಹಾಗಾದರೆ  ಆಳವಾಗಿರುವ ಜ್ಞಾನವನ್ನು  ಬೆಳೆಸಿಕೊಳ್ಳಲು ನಮಗೆ ಸಮಯವಿಲ್ಲ ಕಾರಣ ಅಜ್ಞಾನ ನಮ್ಮನ್ನೇ ಆಳುತ್ತಿದೆ. ಒಳಗೇ ಸೇರಿಕೊಂಡಿರುವ ದೇವಾಸುರರ ಗುಣ ಲಕ್ಷಣ ನಮಗೇ ಅರ್ಥ ವಾಗದೆ ಹೊರಗೆ ಸತ್ಯಾನ್ವೇಷಣೆ ನಡೆಸಿದರೆ ಸತ್ಯ ಅರ್ಥ ವಾಗೋದಿಲ್ಲ. ವಾಸ್ತವದಲ್ಲಿ ಭಾರತದ ಈ ಸ್ಥಿತಿಗೆ ಕಾರಣವೇ ನಮ್ಮ ಮೂಲ ಶಿಕ್ಷಣದಲ್ಲಿಯೇ ಸನಾತನ ಧರ್ಮ ಬಿಟ್ಟು ಪಾಶ್ಚಿಮಾತ್ಯ ರ ಶಿಕ್ಷಣ ಅಳವಡಿಸಿ ಬೆಳೆಸಿರೋದು. ಇದರಿಂದಾಗಿ ನಾವೀಗ ಸುಲಭವಾಗಿ ತಂತ್ರಜ್ಞಾನದಿಂದ ಜೀವನ ನಡೆಸುವಂತಾಗಿದ್ದರೂ ಪ್ರಕೃತಿ ವಿಕೋಪ, ರೋಗ, ಭ್ರಷ್ಟಾಚಾರ, ಭಯೋತ್ಪಾದಕರನ್ನು  ತಡೆಯಲಾಗದು. ಎಲ್ಲಾ ಮಾನವರಾದರೂ ಒಳಗಿರುವ‌ ಶಕ್ತಿ ಬೇರೆ ಬೇರೆಯಾಗಿದೆ.ದೇವನೊಬ್ಬನಾದರೂ ನಾಮ ಹಲವಾಗಿದೆ. ಹಾಗಂತ ದೇಶದ ಪ್ರಶ್ನೆ ಬಂದಾಗ ಒಂದೇ ದೇಶದಲ್ಲಿ ಸಾಕಷ್ಟು ದೇವತೆಗಳಿದ್ದರೂ ಪ್ರಜೆಗಳೊಳಗೆ ದೈವಭಕ್ತಿ ದೈವಗುಣವಿಲ್ಲದೆ  ದೇಶಕ್ಕೆ ಶಕ್ತಿಬರೋದಿಲ್ಲ. ದೇಶಭಕ್ತಿಯನ್ನು ಹೊರಗಿನಿಂದ  ತಿಳಿಸೋದೆ ಬೇರೆ ಒಳಗಿನಿಂದ ಬೆಳೆಸೋದೆ ಬೇರೆ. ಹಾಗೆಯೇ ಅದ್ವೈತ ದ್ವೈತ ವಿಶಿಷ್ಟಾದ್ವೈತ ತತ್ವವನ್ನು  ಒಳಗಿದ್ದು  ಸಂಶೋಧನೆಗೊಳಪಡಿಸಿದಾಗಲೇ ಇದು ಒಂದು ಎನ್ನುವ  ಸತ್ಯದ ಅರಿವಾಗೋದು. ದೇಶದಿಂದ ಹೊರಹೋಗಿ  ನಮ್ಮ ದೇಶ ಎಂದರೆ  ಮನಸ್ಸು  ಮತ್ತು ದೇಹ ಒಂದಾಗಿರದು.
ಹಾಗೆಯೇ ಪರಮಾತ್ಮನೊಳಗೇ ಜೀವಾತ್ಮನಿರೋವಾಗ‌ ನಾನೇ ಬೇರೆ  ನೀನೇ ಬೇರೆ ಎಂದರೂ  ಬೇರೆಯಾಗದು. ಒಳಗೆ ದೈವಗುಣವಿದ್ದರೂ ಅಸುರರೊಂದಿಗೆ ವಾದ ಮಾಡಲು ಕಷ್ಟ. ಕಾರಣ ಗುಣಸ್ವಭಾವ ವಿರುದ್ದವಿದ್ದಾಗ ಸತ್ಯ ಅರ್ಥ ವಾಗದು. ಹಾಗೆ  ಪರಕೀಯರನ್ನು ನಮ್ಮವರೆಂದು ಪರಿಗಣಿಸಿದರೂ  ಅವರ ಮೂಲ ಗುಣ ಒಂದಲ್ಲ ಒಂದು ಬಾರಿ  ತೋರಿಸುವುದು ಸಹಜ.ಕುಟುಂಬದ ಸದಸ್ಯರಲ್ಲಿಯೇ‌ಒಗ್ಗಟ್ಟು ಒಮ್ಮತ ಏಕತೆ ಐಕ್ಯತೆ  ಬೆಳೆಸಲು  ಕಷ್ಟವಾಗಿದ್ದರೂ ದೇಶವನ್ನು ಕಟ್ಟುವ ರಾಜಕೀಯಕ್ಕೆ ಇಳಿದರೆ ತಾತ್ಕಾಲಿಕ  ಪ್ರಗತಿ ಎನಿಸಬಹುದಷ್ಟೆ .ಆದರೂ ಮಾನವ ಪ್ರಯತ್ನವಿದ್ದರೆ ಮಾತ್ರ ಬದಲಾವಣೆ ಸಾಧ್ಯ. ಎತ್ತರದಲ್ಲಿರುವ ದೈವಶಕ್ತಿಯೆಡೆಗೆ ಅಲ್ಪ ಮಂದಿ ಹೋಗುವ ಪ್ರಯತ್ನಪಟ್ಟರೆ ಕೆಳಗಿರುವ ಅಸುರ ಶಕ್ತಿಗೆ ಹೆಚ್ಚಿನ ‌ಸಹಕಾರ ಸಹಾಯ ಸಿಗುತ್ತದೆ. ಹೀಗಾಗಿ ಭೂಮಿಯಲ್ಲಿ ಅಸುರಿ ಶಕ್ತಿಗೆ ಬಲ. ಆದರೆ ಇದರಿಂದಾಗಿ ಭೂಮಿಯಲ್ಲಿ ಅಧರ್ಮ ಅನ್ಯಾಯದ ಭ್ರಷ್ಟಾಚಾರ ಹೆಚ್ಚಾಗಿ  ಜನಜೀವನ ಅತಂತ್ರಸ್ಥಿತಿಗೆ ತಲುಪಿದಾಗ  ತಿರುಗಿ  ದೈವಶಕ್ತಿ ಕಡೆಗೇ ಹಿಂದಿರುಗಬೇಕು. ಹಿಂದೂಗಳೆ  ಹಿಂದಿರುಗಿ  ತಮ್ಮ ಮೂಲದ ಶಿಕ್ಷಣದಲ್ಲಿಯೇ ಶುದ್ದವಾದ ಧರ್ಮ ಕರ್ಮ ದ ಬಗ್ಗೆ ಅರಿತಾಗಲೇ ಅರ್ಥ ಆಗೋದು ಭೂ ಋಣ ತೀರಿಸದೆ ಮುಕ್ತಿಯಿಲ್ಲವೆಂದು.ಇದಕ್ಕೆ ಸೇವೆ  ಮಾಡುವಾಗ  ತತ್ವದರ್ಶನ ಅಗತ್ಯವಿದೆ. 

No comments:

Post a Comment