ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, July 17, 2023

ವ್ಯಕ್ತಿಯಿಂದ ಶಕ್ತಿಯೇ ಶಕ್ತಿಯಿಂದ ವ್ಯಕ್ತಿಯೇ

ಒಬ್ಬ ವ್ಯಕ್ತಿಯ ಹಿಂದೆ ನಡೆದು ಹೆಸರು ಹಣ ಅಧಿಕಾರ ಸ್ಥಾನಮಾನ ಪ್ರಸಿದ್ದಿ ಪಡೆಯುವುದಕ್ಕೂ ಒಂದು ಶಕ್ತಿಯ ಹಿಂದೆ ನಡೆದು  ಸಿದ್ದಿ ಪಡೆಯುವುದಕ್ಕೂ ವ್ಯತ್ಯಾಸವಿಷ್ಟೆ. ವ್ಯಕ್ತಿ ಶಾಶ್ವತವಲ್ಲ ಶಕ್ತಿ ಶಾಶ್ವತ.
ವ್ಯಕ್ತಿಯಿಂದ ಶಕ್ತಿ ನಡೆಯುವುದೆ ಅಥವಾ ಶಕ್ತಿಯಿಂದ ವ್ಯಕ್ತಿಯೇ? ಶಕ್ತಿ ಕಣ್ಣಿಗೆ ಕಾಣೋದಿಲ್ಲ.ಕಣ್ಣಿಗೆ ಕಾಣುವ ವ್ಯಕ್ತಿ ಯ ಒಳಗೆಹೊರಗೂ ಹರಡಿರುವ ಶಕ್ತಿಯನ್ನು ವ್ಯಕ್ತಿ ಹೇಗೆ ಬಳಸಿಕೊಳ್ಳುವನೋ ಹಾಗೆ ಅವನ‌ಜೀವನ ನಡೆಯುವುದು.
ನಾನು ಎಲ್ಲರನ್ನೂ ಆಳಬೇಕೆಂಬ ಆಸೆಯಿದ್ದರೆ  ವ್ಯಕ್ತಿ ಎಲ್ಲಾ ‌ಜನರೊಳಗಿರುವ ಶಕ್ತಿಯನ್ನು  ಆಕರ್ಷಿಸುವುದು ಅಗತ್ಯ.
ನಾಯಕನಾಗಲಿ,ನಟನಾಗಲಿ ಇಬ್ಬರೂ ವ್ಯಕ್ತಿಯಾಗಿದ್ದರೂ ಇಬ್ಬರಿಗೂ ‌ಜನರನ್ನು ತಮ್ಮೆಡೆ ಸೆಳೆದುಕೊಳ್ಳುವ ಆಸೆಯಿದೆ ಆದರೆ, ನಾಯಕ  ಜನರನ್ನು  ಆಳುವಂತೆ ನಟ ಆಳಲಾರ.
ಕಾರಣ ನಾಯಕನ ಹತ್ತಿರ ಹಣ,ಅಧಿಕಾರ ಸ್ಥಾನವಿದ್ದು ಜನರ ಬೇಡಿಕೆಗಳಿಗೆ ತಕ್ಕಂತೆ  ಸಹಕರಿಸುವ‌ನು. ಇದರಿಂದಾಗಿ ಮತ್ತಷ್ಟು  ಜನಬಲ ಹಣಬಲ ಹೆಚ್ಚಾಗಿ ಅಧಿಕಾರ ಗಟ್ಟಿಯಾಗಬಹುದು. ಹಾಗೆ ನಟರಿಗೆ ಜನರ ಭಾವನೆಗಳನ್ನು  ಬಳಸಿಕೊಂಡು  ಮನರಂಜಿಸುವ ಗುಣದ ಪಾತ್ರವಿದ್ದರೆ ಮಾತ್ರ ಅವನು ಉತ್ತಮನಟನಾಗಿದ್ದು  ಜನಬಲದ ಜೊತೆಗೆ ಹಣಬಲ ಪಡೆದರೂ  ಜನರ ಆಸೆ  ಆಕಾಂಕ್ಷೆಗಳನ್ನು  ವ್ಯಕ್ತಿಯಾಗಿ  ನಟನೆಯ ಮೂಲಕ ತೀರಿಸಬಹುದು. ಹಣದಿಂದ ಜನರನ್ನು ಆಳಲಾಗದು. ಇಬ್ಬರೂ ಸಮಾನರೆ ಜನಬಲ ಹಣಬಲವಿಲ್ಲದಿದ್ದರೆ ನಾಯಕನೂ ಆಗೋದಿಲ್ಲ ನಟನೂ ಆಗೋದಿಲ್ಲ. ಶಕ್ತಿಯ ಬಳಕೆ ಬೇರೆ ಬೇರೆಯಾದರೂ ವ್ಯಕ್ತಿ  ಬೆಳೆಯುವನು. ಇದೊಂದು ಭೌತಿಕ ಶಕ್ತಿಯಾದರೆ ವ್ಯಕ್ತಿ  ತನ್ನೊಳಗೇ ಇರುವ ಅಧ್ಯಾತ್ಮದ ಶಕ್ತಿಯ ಹಿಂದೆ ನಡೆದಂತೆಲ್ಲಾ   ಜನಬಲ ಹಣಬಲವಿಲ್ಲದೆ ಮುಕ್ತಿಮಾರ್ಗ ಹಿಡಿಯುವನು.ಇದೊಂದು ಸಿದ್ದಿ. ಪ್ರಸಿದ್ದರಾಗೋದಕ್ಕೆ ಸಿದ್ದಿ ಪುರುಷರನ್ನು  ಒಂದು ವ್ಯಕ್ತಿಯಾಗಿ  ಮಧ್ಯೆ ನಿಲ್ಲಿಸಿದರೆ  ಜನರು‌ನೋಡೋದು‌ನಿಲ್ಲಿಸಿದ ವ್ಯಕ್ತಿಯನ್ನು  ಸಿದ್ದಿಯ ಹಿಂದೆ ಇರುವ ಶಕ್ತಿಯನ್ನಲ್ಲ.ಅಗೋಚರ ಶಕ್ತಿಯನ್ನು  ಅರಿತು  ತನ್ನ ಸ್ವಾರ್ಥ ಸುಖಕ್ಕಾಗಿ ವ್ಯಕ್ತಿ ಬಳಸಿ  ಮಹಾವ್ಯಕ್ತಿ ಆದರೂ ವ್ಯಕ್ತಿತ್ವವನ್ನು  ಜೊತೆಗೆ ಬೆಳೆಸಿಕೊಂಡಾಗಲೇ ಶಕ್ತಿಯ ಅರಿವಾಗುವುದು.
ಒಟ್ಟಿನಲ್ಲಿ ವ್ಯಕ್ತಿಯಿಲ್ಲದೆ ಶಕ್ತಿಗೆ ಸ್ಥಾನಮಾನವಿಲ್ಲ. ಅಗೋಚರ ಶಕ್ತಿ ಚರಾಚರದಲ್ಲಿಯೂ ಅಡಗಿರುವಾಗ ವ್ಯಕ್ತಿ ಶಕ್ತಿಯನ್ನು ಅರ್ಥ ಮಾಡಿಕೊಂಡು ಸದ್ಬಳಕೆ ಮಾಡಿಕೊಂಡರೆ ಉತ್ತಮ. ಶಕ್ತಿವಂತರಾಗೋದು. ಇದರಲ್ಲಿ ಪ್ರಜಾಶಕ್ತಿ ಪ್ರಜಾಪ್ರಭುತ್ವದ ಸ್ಥಿತಿಗೆ ಕಾರಣವಾಗಿರುವಾಗ ಆ ಪ್ರಜೆಗಳಲ್ಲಿ ಉತ್ತಮವಾದ
‌ಜ್ಞಾನಶಕ್ತಿಯಿದ್ದರೂ ಆಳುವವರು ಸರಿಯಾದ ಶಿಕ್ಷಣ ನೀಡದೆ‌ವ್ಯಕ್ತಿಯ ಆರಾಧನೆ ಮಾಡುವ ಮೂಲಕ ಜನರನ್ನು ವ್ಯಕ್ತಿಯ ಹಿಂದೆ ನಡೆಯುವಂತೆ ಮಾಡಿದರೆ ದೇಶದ ಶಕ್ತಿಯ ದುರ್ಭಳಕೆ ಆದಂತೆ. ಇದರ ಬಗ್ಗೆ ಯಾರೂ‌ ಹೆಚ್ಚು ತಿಳಿಯಲಾಗಲಿ ತಿಳಿಸಲಾಗಲಿ ಮುಂದೆ ಬರದಿದ್ದರೆ‌‌  ವ್ಯಕ್ತಿ ಒಮ್ಮೆ ಮರೆಯಾದಾಗ ಹಿಂದೆ ಬಂದವರು ಅದೇ ವ್ಯಕ್ತಿಯ ಚಿತ್ರ ಹಿಡಿದು‌ ಪ್ರಸಿದ್ದರಾಗೋದಂತೂ ಖಚಿತ. ಹಾಗಾದರೆ ಆ ವ್ಯಕ್ತಿಗೆ ಮುಕ್ತಿ ಸಿಗುವುದೆ? ಎಲ್ಲಿಯವರೆಗೆ ಮಾನವ ತನ್ನ ಆತ್ಮಶಕ್ತಿಯ‌ಕಡೆಗೆ‌  ಹೋಗಲಾಗದೆ  ಭೌತಿಕದ ವ್ಯಕ್ತಿಯ ಹಿಂದೆ  ಇರುವನೋ ಅಲ್ಲಿಯವರೆಗೆ ಮುಕ್ತಿ ಯಿಲ್ಲ ಎನ್ನುವ ಆಧ್ಯಾತ್ಮ ಸತ್ಯ‌ಕಣ್ಣಿಗೆ ಕಾಣೋದಿಲ್ಲ. ಹೀಗಾಗಿ ವ್ಯಕ್ತಿ ಪೂಜೆಗೆ ಹೆಚ್ಚು ಬೆಲೆಕೊಟ್ಟು  ಭೌತಿಕದಲ್ಲಿ ಆತ್ಮಶಕ್ತಿ ಕುಸಿದಿದೆ. ಇದು ತಾತ್ಕಾಲಿಕ ವಾಗಿದ್ದರೂ ಯಾವುದೋ ಒಂದು ರೂಪದಲ್ಲಿ ಪರಮಾತ್ಮನೇ ಬಂದು  ಜನರಿಗೆ ಅರಿವು ಮೂಡಿಸುವುದು ಸತ್ಯ. ಪರಮಾತ್ಮನಿಗೆ ಆಕಾರವಿಲ್ಲವಾದರೂ  ಸಾಕಾರದ ಪೂಜೆ ಮಾಡುವಾಗ  ಶಕ್ತಿ ಹೆಚ್ಚಾಗುವುದು ಹೊರಗಿನ ಭಕ್ತಿಯಿಂದಲ್ಲ  ಆಂತರಿಕ ಭಕ್ತಿಯಿಂದ. ಹೀಗಾಗಿ ಹೊರಗೆ ಎಷ್ಟೋ ಜನರ ಬಲ ಹಣದ ಬಲ ಅಧಿಕಾರದ ಬಲವಿದೆ ಎಂದರೆ ಜನರೊಳಗೆ ಭಕ್ತಿಯಿದೆಯೋ ಎನ್ನುವ ಬಗ್ಗೆ ಅರಿವಿರಬೇಕಷ್ಟೆ.ಒಂದೇ ದೇವರಿಗೆ ಅನೇಕ ನಾಮ ಆಕಾರ ಅಲಂಕಾರದ ಜೊತೆಗೆ ಹೆಸರುಗಳಿವೆ  ಎಂದರೆ ಒಂದೇ ಶಕ್ತಿಗೆ ಅಸಂಖ್ಯಾತ ಭಕ್ತರು.ಒಂದೇ ವ್ಯಕ್ತಿಗೆ ಅನೇಕ  ಸಹಚರರು
ಒಂದೇ  ದೇಶದಲ್ಲಿ ಅನೇಕ ಧರ್ಮ, ಜಾತಿ,ಪಕ್ಷ,ಪಂಗಡಗಳು ಇದ್ದು  ತಮ್ಮ ಸುಖ ಸಂತೋಷಕ್ಕಾಗಿ ವ್ಯಕ್ತಿಯ ಹಿಂದೆ ನಿಂತವರು  ಅನೇಕರಿದ್ದರೂ ವ್ಯಕ್ತಿ ಶಾಶ್ವತವಲ್ಲ.‌
ಹಾಗೆ ದೇಹದೊಳಗೆ ಅಡಗಿರುವ ಅನೇಕ ಶಕ್ತಿ ಕಣ್ಣಿಗೆ ಕಾಣದಿದ್ದರೂ ಅವು ನಮ್ಮೊಡನೆ ಸದಾ ಇದ್ದು ರಕ್ಷಣೆ ಮಾಡೋದನ್ನು  ಗಮನಿಸುತ್ತಾ ಆಂತರಿಕ ಶಕ್ತಿಯ ಹಿಂದೆ ನಡೆದಾಗಲೇ ಮುಕ್ತಿ.
ಹತ್ತಿರವಿದ್ದೂ ದೂರನಿಲ್ಲುವೆವು  ಕಾರಣ ಒಂದು ನಮ್ಮ ಅಹಂಕಾರ ಇನ್ನೊಂದು ನಮ್ಮದೇ ಅಜ್ಞಾನ. ಇವೆರಡೂ ಮಾನವನ ಸಮಸ್ಯೆಗೆ ಕಾರಣ. 
ಮಾನವ ಕಾರಣಮಾತ್ರದವನು ಎಂದರೆ ನಂಬಬಹುದೆ?
ನಾನಿಲ್ಲವಾಗಿದ್ದರೆ  ಏನೂ ನಡೆಯುತ್ತಿರಲಿಲ್ಲವೆ? ನನ್ನಿಂದ ಎಲ್ಲಾ ನಡೆದಿದೆಯೆ?ಎರಡೂ ಅಸತ್ಯ.ನಾನು ಹೋದ ಮೇಲೂ ಭೂಮಿ ನಡೆಯುವುದು. ನನ್ನಿಂದ ಭೂಮಿಯಲ್ಲ.
ವ್ಯಕ್ತಿಯ ಒಳಗಿರುವ  ದೇವಾಸುರರ ಶಕ್ತಿಗಳನ್ನು ಯಾರೂ ಸೂಕ್ಮವಾಗಿ ಗಮನಿಸಲಾರರು.ಕಾರಣ ಭೌತವಿಜ್ಞಾನಕ್ಕೆ ವ್ಯಕ್ತಿ ಮುಖ್ಯ. ಅಧ್ಯಾತ್ಮ ಜ್ಞಾನಕ್ಕೆ ಶಕ್ತಿಯೇ ಆಧಾರ. 
ಜನಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಇಲ್ಲವಾದರೆ  ವ್ಯಕ್ತಿಯ ಜೊತೆಗೆ ತತ್ವವೂ ಇರೋದಿಲ್ಲ.  
ಪ್ರತಿಮೆ   ಮಾನವ ನಿರ್ಮಿತ  ಪ್ರತಿಭೆ ದೇವರ ಕೊಡುಗೆ.
ಆ ಕೊಡುಗೆಯನ್ನು  ಸರಿಯಾಗಿ ಬಳಸುವ ವ್ಯಕ್ತಿಯು ಶಕ್ತಿಯ ಅಧೀನದಲ್ಲಿರುವಾಗ  ಜನರನ್ನು ದುರ್ಭಳಕೆ ಮಾಡಿಕೊಳ್ಳಲು ಕಷ್ಟ.ಅದೇ ವ್ಯಕ್ತಿಯನ್ನು ಅಸುರಿಶಕ್ತಿ ನಡೆಸುವಾಗ ಜನರ ದುರ್ಭಳಕೆ ಹೆಚ್ಚಾಗುವುದು.  

ಯಾರನ್ನೂ ಯಾರೋ ಆಳಲು ಹೋಗಿ ಆಳಾಗಿ ಜನ್ಮ ಪಡೆದರೂ ಕೇಳೋರಿಲ್ಲ. 

 

No comments:

Post a Comment