ಶಾಲಾ ಪಠ್ಯಪುಸ್ತಕದ ವಿಷಯದಲ್ಲಿ ನಡೆದಿರುವ ರಾಜಕೀಯಕ್ಕೆ ತೆರೆ ಎಳೆಯಲು ಪ್ರಜೆಗಳಾದ ಪೋಷಕರಿಗೆ ಸಾಧ್ಯವಿಲ್ಲವೆ? ಪಕ್ಷಪಾತದಿಂದ ದೇಶೋದ್ದಾರವಾಗದು.
ಭಾರತೀಯ ಶಿಕ್ಷಣವು ಆತ್ಮಜ್ಞಾನಿಗಳನ್ನು ಬೆಳೆಸಬೇಕಿತ್ತು ವೈಜ್ಞಾನಿಕತೆಯ ಹಿಂದೆ ನಡೆದು ಅಜ್ಞಾನ ಮಿತಿಮೀರಿ ಅಹಂಕಾರ ಸ್ವಾರ್ಥ ದಿಂದ ಜೀವನ ಶೈಲಿಯೇ ಬದಲಾಗಿರೋದು ಶಿಕ್ಷಣದಿಂದ. ಈಗಿರುವ ಸಮಸ್ಯೆ ಶಾಲಾಪಠ್ಯಪುಸ್ತಕದ ವಿಚಾರದಲ್ಲಿ ನಡೆದಿರುವ ರಾಜಕೀಯವಾಗಿದೆ. ಇಷ್ಟಕ್ಕೂ ನಮ್ಮಮಕ್ಕಳಿಗೆ ಏನು ಕಲಿಸಬೇಕೆಂಬ ಜ್ಞಾನ ಪೋಷಕರಲ್ಲಿಲ್ಲವೆ? ತುಂಬಾ ಓದಿಕೊಂಡವರೆ ದಡ್ಡರಂತೆ ಮಾತನಾಡುವಾಗ ಓದದೆಯೂ ಸಾಧಕರಾದವರ ವಿಷಯವನ್ನು ಅಳವಡಿಸಲು ರಾಜಕೀಯಬೇಕೆ? ಜೀವನದಲ್ಲಿ ಓದಿ ಸಾಧನೆ ಮಾಡುವಂತಿದ್ದರೆ ಈಗ ಮಕ್ಕಳು ಹಾಗು ಮಹಿಳೆಯರಿಗೆ ಸಮಸ್ಯೆ ಇರುತ್ತಿರಲಿಲ್ಲ. ಅಂಕದ ಆಧಾರದಲ್ಲಿ ಜ್ಞಾನವನ್ನು ಅಳೆಯುವುದರಿಂದ ಆತ್ಮಶಕ್ತಿ ಬೆಳೆಯದು ಬುದ್ದಿ ಬೆಳೆದರೂ ಜ್ಞಾನ ಬೆಳೆಯದು.ಇಲ್ಲಿ ಸತ್ಯ ಹಾಗು ಮಿಥ್ಯದ ನಡುವಿರುವ ಸಾಮಾನ್ಯಜ್ಞಾನದ ಕೊರತೆಯೇ ಪ್ರಜಾಪ್ರಭುತ್ವದ ಅವನತಿಗೆ ಕಾರಣವೆನ್ನಬಹುದು. ಯಾರೋ ತಿಳಿದ ಹೇಳಿದ ಯಾವುದೋ ಕಾಲದ ವಿಚಾರವನ್ನು ಈಗಿನ ಪರಿಸ್ಥಿತಿ ಅರ್ಥ ಮಾಡಿಸದೆ ಒತ್ತಾಯದಿಂದ ತಲೆಗೆ ತುಂಬಿ ಇಳಿಸುವುದು ಶಿಕ್ಷಣವಲ್ಲ. ಶಿಕ್ಷಣವು ಶಿಕ್ಷೆ ನೀಡುವ ಕ್ಷಣವಾಗಿದೆ ಅದೂ ಅನಾವಶ್ಯಕ ವಿಚಾರಗಳನ್ನು ತಲೆಗೆ ತುಂಬಲು ಶಿಕ್ಷೆ ನೀಡಿದರೆ ಮಕ್ಕಳ ಮುಗ್ಧ ಮನಸ್ಸು ಹಾಳಾಗಿ ಪ್ರಭುದ್ದ ವಿಷಯಕ್ಕೆ ಹೋಗಿ ಪೋಷಕರನ್ನೇ ಶೋಷಣೆ ಮಾಡಿದರೆ ಸರ್ಕಾರ ಕಾರಣವಾಗದು .ಪೋಷಕರ ಸಹಕಾರವೇ ಕಾರಣ. ಯಾವುದೇ ಸಮಸ್ಯೆಯ ಮೂಲವೇ ಮನೆ.ಒಳಗೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ ಉತ್ತಮ. ಇಲ್ಲವಾದರೆ ಗುರು ಹಿರಿಯರಿಂದ ಉತ್ತಮ ಸಲಹೆಯನ್ನಾದರೂ ಕೇಳಿ ಪರಿಹರಿಸಿಕೊಳ್ಳಲು ಸಾಧ್ಯ.ಅದೂ ಸಾಧ್ಯವಿಲ್ಲವೆಂದಾಗಲೇ ಮಾಧ್ಯಮದವರೆಗೆ ಹೋಗಿ ರಂಪಾಟವಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಚರ್ಚೆ ಗೆ ಬರೋದಿಲ್ಲ.ಬಂದರೂ ಯಾರೋ ಮೇಲಿನ ಅಧಿಕಾರಿಗಳೊಂದಿಗೆ ಚರ್ಚೆ ಆಗಬಹುದಷ್ಟೆ.ಪೋಷಕರ ಸಮಸ್ಯೆ ಮನೆಯೊಳಗೆ ಬೆಳೆದು ಹೆಮ್ಮರವಾದರೂ ಕೇಳೋರಿಲ್ಲ.ಇದು ಮಕ್ಕಳ ಭವಿಷ್ಯವನ್ನು ಹಾಳು
ಮಾಡಿದರೂಅನುಭವಿಸುವುದು ಪೋಷಕರೆ ಜೊತೆಗೆ ಸಮಾಜ,ರಾಷ್ಟ್ರ . ಭೂಮಿಯಲ್ಲಿ ಶಾಂತಿಯಿಂದ ಜೀವನ ನಡೆಸಲು ಸದ್ವಿದ್ಯೆ, ಸದ್ಬುದ್ದಿ, ಸದಾಚಾರ,ಸನ್ಮಾರ್ಗ, ಸತ್ಸಂಗ ಸುಜ್ಞಾನದ ಅಗತ್ಯವಿತ್ತು. ಆದರೆ ಇದನ್ನು ತಿರಸ್ಕರಿಸಿ ಮುಂದೆ ನಡೆದವರನ್ನು ಸಾಧಕರೆಂದು ಅಧಿಕಾರ ಸ್ಥಾನಮಾನ ಕೊಟ್ಟು ಮೇಲೇರಿಸಿದಂತೆಲ್ಲಾ ಜನರನ್ನು ಆಳೋದಷ್ಟೆ ಮುಖ್ಯವಾಯಿತು. ಪ್ರಜಾಪ್ರಭುತ್ವದ ಧರ್ಮದಲ್ಲಿ ರಾಷ್ಟ್ರೀಯ ಧರ್ಮ ಶ್ರೇಷ್ಠ ವಾದರೂ ನಮ್ಮ ನಮ್ಮ ಮೂಲದ ಗುರುಹಿರಿಯರ ಧರ್ಮ ಬಿಟ್ಟು ನಡೆದರೆ ಸತ್ಯ ತಿಳಿಯಲಾಗದೆ ಅನುಭವವಿಲ್ಲದೆ ಜೀವ ಹೋಗುವುದು.
ಒಳಗೇ ಅಡಗಿರುವ ಚಕ್ರಗಳಲ್ಲಿ ಮೂಲಾಧಾರ ಚಕ್ರದ ಶುದ್ದಿ ಆಗದೆ ಸಹಸ್ರಾರ ಚಕ್ರದವರೆಗೆ ಹೋಗಲಾಗದು.ಒಟ್ಟಿನಲ್ಲಿ ತಲೆಗೆ ತುಂಬುವ ವಿಷಯ ಅಮೃತತತ್ವವ ನೀಡಿದರೆ ಯೋಗಿ ವಿಷವೇ ತುಂಬುವ ದ್ವೇಷ,ಭಿನ್ನಾಭಿಪ್ರಾಯ, ಹೋರಾಟ ಹಾರಾಟ ಮಾರಾಟವೇ ಹೆಚ್ಚಾದರೆ ಅಜ್ಞಾನ.ಅಜ್ಞಾನ ವೆಂದರೆ ಸತ್ಯದ ತಿಳುವಳಿಕೆಯಿಲ್ಲವೆಂದರ್ಥ ವಾಗುತ್ತದೆ. ಬ್ರಹ್ಮನ್ ಸತ್ಯ ಜಗತ್ ಮಿಥ್ಯ ಎಂದಿದ್ದಾರೆ.ಇದನ್ನರಿತು ನಡೆಯಲು ಬೇಕಿದೆ ಸದ್ವಿದ್ಯೆ. ವಿದ್ಯೆಯಿಂದ ವಿನಯ. ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ಎಂದರು. ಮೂಲವನ್ನರಿತು ಪೂರಕವಾದ ವಿಚಾರಗಳ ವಿದ್ಯೆ ಪಡೆದಾಗಲೇ ಜ್ಞಾನ ಹೆಚ್ಚುವುದು. ಒಳಗಿರುವ ಜ್ಞಾನ ಬಿಟ್ಟು ಹೊರಗಿನ ವಿಶೇಷಜ್ಞಾನ ಪಡೆದು ಹೊಂದಾಣಿಕೆಯಾಗದಿದ್ದರೆ ಸಮಸ್ಯೆ ಹೆಚ್ಚಾಗುವುದು.
ಮಕ್ಕಳ ಆಸಕ್ತಿ ಪ್ರತಿಭೆ ಜ್ಞಾನವನ್ನು ಪೋಷಕರೆ ಗುರುತಿಸಿದರೆ ಮನೆಯೊಳಗೆ ಹೊರಗೆ ಏಕರೀತಿ ಶಿಕ್ಷಣವಿದ್ದರೆ ಸಾಧಕರಾಗುವರು. ಇಲ್ಲವಾದರೆ ಬೇರೆ ಬೇರೆಯಾಗಿದ್ದು ಬೋಧಕರಾಗಿದ್ದರೂ ಸಮಸ್ಯೆ ತಪ್ಪಿದ್ದಲ್ಲ.
ಇಷ್ಟು ವರ್ಷಗಳಿಂದ ದೇಶವನ್ನಾಳಲು ಹೊರಟಿರುವ ರಾಜಕೀಯ ಪಕ್ಷಗಳಿಗೆ ನಮ್ಮದೇ ಆದ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನೀಡಲು ಸಾಧ್ಯವಾಗದಿರೋದು ದುರಂತ ವಷ್ಟೆ.ಇದಕ್ಕೆ ಕಾರಣವೇ ಪ್ರಜೆಗಳ ಅಸಹಕಾರ. ಅಸಹಕಾರಕ್ಕೆ ಕಾರಣವೇ ರಾಜಕೀಯ ವ್ಯವಹಾರ. ಹಣವಿದ್ದರೆ ಏನನ್ನಾದರೂ ಕೊಂಡುಕೊಳ್ಳಬಹುದೆನ್ನುವ ದುರಹಂಕಾರ ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದೆ. ಈಗಲೂ ನಾನು ಬದಲಾಗದೆ ಪರರನ್ನು ಬದಲಾಯಿಸ ಹೊರಟವರ ಹೋರಾಟ ಹಾರಾಟ ಮಾರಾಟದಿಂದ ಅಧ್ಯಾತ್ಮ ಎಂದರೆ ಪುರಾಣ ಕಥೆ ತಿಳಿಸುವುದೆನ್ನುವ ಮಟ್ಟಿಗೆ ನಿಂತಿರೋದು ಧರ್ಮದ ಅವನತಿಗೆ ಕಾರಣವೆಂದರೆ ತಪ್ಪಿಲ್ಲ. ಪ್ರಜಾಪ್ರಭುತ್ವದ ಪ್ರಜೆಗಳಾಗಿ ದೇಶೀಯ ಶಿಕ್ಷಣ ನೀಡಲು ಹೊರಗಿನ ಸಹಕಾರದ ಅಗತ್ಯವಿಲ್ಲ.ಒಳಗಿನ ಸಹಕಾರ ಅಗತ್ಯವಿದೆ. ನಮ್ಮವರೆ ನಮಗೆ ಶತ್ತುವಾದಾಗಲೇ ಪರರು ಮಧ್ಯೆವರ್ತಿಗಳಾಗಿ ನಿಂತು ಅಂತರ ಬೆಳೆಸಿ ಆಳುವುದು.ಒಟ್ಟಿನಲ್ಲಿ ಜ್ಞಾನವಿಜ್ಞಾನದ ಅಂತರದಲ್ಲಿ ಅಜ್ಞಾನ ತನ್ನ ಸ್ಥಾನಮಾನ ಗಳಿಸಿ ಮಾನವನ ಜೀವನ ಅತಂತ್ರಸ್ಥಿತಿಗೆ ತಂದಿಟ್ಟಿದೆ. ಕಲಿಗಾಲದಪ್ರಭಾವ ಎಷ್ಟು ಹೊರಗಿನ ವಿಚಾರ ಕಲಿತರೂ ಒಳಗಿನಕುಂದು ಕೊರತೆ ಅಷ್ಟೇ ಬೆಳೆಯುತ್ತದೆ. ಯಾರನ್ನೂ ಯಾರೋ ಸರಿಪಡಿಸೋ ಮೊದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟರೆ ಮಕ್ಕಳೂ ಸರಿದಾರಿಗೆ ಬರಬಹುದು.ಬರದಿದ್ದರೂ ನಮ್ಮ ಆತ್ಮರಕ್ಷಣೆಯ ಜವಾಬ್ದಾರಿ ನಮ್ಮದೇ ಆಗಿರುತ್ತದೆ ಇದನ್ನು ಸರ್ಕಾರ ಸರಿಪಡಿಸಲಾಗದು.
No comments:
Post a Comment