ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, July 15, 2023

ವಿದೇಶಿ ಒಪ್ಪಂದ ದೇಶಕ್ಕೆ ಮಾರಕವೂ ಪೂರಕವೋ?

ವಿದೇಶಿ ಒಪ್ಪಂದ ಗಳು ದೇಶಕ್ಕೆ ಮಾರಕವೇ ಪೂರಕವೆ?

ವಿದೇಶಿ ಒಪ್ಪಂದ  ಸ್ವದೇಶಿ ಗಳಿಗೆ ಒಪ್ಪಿಗೆಯ ಮೇಲೆ ನಡೆದಿದೆಯೋ ಅಥವಾ ರಾಜಕಾರಣಿಗಳ  ಒಪ್ಪಿಗೆಯೋ ? ಮನಸ್ಸಿಗೆ ಬಂದಂತೆ ಒಪ್ಪಂದಗಳಿಗೆ ಸಹಿ ಹಾಕಿ ದೇಶವನ್ನು ಒಪ್ಪಿಸುವುದರಿಂದ  ಭವಿಷ್ಯದಲ್ಲಿ  ಆಗುವ ಪರಿಣಾಮವನ್ನು ಪ್ರಜೆಗಳೇ ಅನುಭವಿಸಬೇಕಿದೆ. ಇದು ಒಳ್ಳೆಯದಾಗಿದ್ದರೆ ಒಳ್ಳೆಯದು ಕೆಟ್ಟದ್ದಾಗಿದ್ದರೆ ಕೆಟ್ಟದ್ದೆ ಆಗುವುದು. 
ಮನೆಯೊಳಗೆ ಇರುವ ಸದಸ್ಯರುಗಳ ಒಪ್ಪಿಗೆ ಇಲ್ಲದೆ  ನಡೆಸೋ  ವ್ಯವಹಾರದಲ್ಲಿ  ಕಷ್ಟ ನಷ್ಟಗಳಾದರೆ ಹೇಗೆ ಎಲ್ಲಾ ಒಟ್ಟಿಗೆ ಅನುಭವಿಸಬೇಕೋ ಹಾಗೆ ಹೊರಗಿನವರ ಜೊತೆಗೆ ನಡೆಸೋ ಒಪ್ಪಂದ ಗಳ ಪರಿಣಾಮ ದೇಶದ ಒಳಗಿರುವ ಎಲ್ಲಾ ಅನುಭವಿಸಬೇಕು. ಹೀಗಾಗಿ  ಬಹಳ ಯೋಚಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಂಡು  ವ್ಯವಹಾರ ನಡೆಸುವುದು ಅಗತ್ಯ. ಇತ್ತೀಚೆಗೆ ಸಾಕಷ್ಟು ವಿದೇಶಿ ಒಪ್ಪಂದ ನಡೆದಿದೆ.ಇದರೊಂದಿಗೆ ದೇಶದೊಳಗೆ ವಿದೇಶಿಗಳೂ ಬಂದು ಬಂಡವಾಳ ಹೂಡಿ ವ್ಯವಹಾರಕ್ಕೆ ಇಳಿದಿರುವುದು  ನಮಗೆ ಆರ್ಥಿಕವಾಗಿ ಪ್ರಗತಿ ಎಂದರೂ  ಅದರೊಂದಿಗೆ ವಿದೇಶಿಗಳ ಸಂಸ್ಕೃತಿ ಧರ್ಮ, ಶಿಕ್ಷಣ,ಭಾಷೆಯೂ  ಬೆಳೆದಿರೋದು ಸತ್ಯ.
. ವ್ಯವಹಾರವೇ ಜೀವನವಲ್ಲ ಆರ್ಥಿಕವಾಗಿ ಸಬಲರಾಗೋದಕ್ಕೆ ವ್ಯವಹಾರದ ಅಗತ್ಯವಿದೆ ಆದರೆ, ಈ ವ್ಯವಹಾರದಲ್ಲಿ ಧರ್ಮ ವಿರಬೇಕಿದೆ ನಮ್ಮವರೊಂದಿಗೆ ವ್ಯವಹಾರಕ್ಕೆ ಇಳಿದಾಗ ಹೆಚ್ಚು ಲಾಭಕ್ಕಾಗಿ ಅಧರ್ಮ ದ ಹಾದಿ ಹಿಡಿದಾಗಲೇ ಸಂಬಂಧ ಬಿರುಕು ಬಿಟ್ಟು ಹಾಳಾಗೋದು. ಆದರೂ ಧಾರ್ಮಿಕವಾಗಿ  ಚಿಂತನೆ ನಡೆಸಿದರೆ ಇಲ್ಲಿ ಬದುಕುವುದಕ್ಕಾಗಿ ಹಣ ಬೇಕು.ಇನ್ನೊಬ್ಬರ ಬದುಕನ್ನು ‌ಹಾಳು ಮಾಡುವುದಕ್ಕಾಗಿ  ಹಣ ಗಳಿಸುವುದೇ ಅಧರ್ಮ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾರು ಎಷ್ಟು ಅಧಿಕಾರ,ಹಣ,ಸ್ಥಾನ ಪ್ರತಿಷ್ಟೆ,ಪದಕ ಸನ್ಮಾನ ಗಳಿಸಿದ್ದಾರೆಂಬುದರ ಮೇಲೇ ಜೀವನ ನಡೆದಿದೆ ಆದರೆ ಆ ಮಾರ್ಗದಲ್ಲಿ ನಡೆದವರಲ್ಲಿ ಎಷ್ಟು ಜ್ಞಾನವಿದೆ ಸತ್ಯ ಧರ್ಮ, ನ್ಯಾಯ ನೀತಿ,ಸಂಸ್ಕೃತಿ ಸದಾಚಾರವಿದೆಯೆಂಬುದರ ಬಗ್ಗೆ ಚಿಂತನೆ ನಡೆಸುವ ಹಾಗಿಲ್ಲ
ಹಾಗೆ ನಡೆದವರಿಗೆ ಹಣವೇ ಇರೋದಿಲ್ಲ ಅವರು ಹೆಸರು, ಅಧಿಕಾರ, ಸ್ಥಾನ,ಪದವಿ ಪಟ್ಟ ಗಳಿಸಲಾಗದು .ಹೀಗಾಗಿ ಇತ್ತೀಚೆಗೆ  ನಮ್ಮವರ ವಿರುದ್ದ ನಿಂತು ಪರಕೀಯರಿಗೆ ಶರಣಾಗಿ ಅವರ ಹಣದಲ್ಲಿ ವ್ಯವಹಾರ ನಡೆಸಿಕೊಂಡು ಮೇಲೆ ಮೇಲೆ ಹೋದವರಿಗೆ  ಕೆಳಗಿರುವ  ಸತ್ಯದ ಅರಿವಾಗದು.
ದೇಶದೊಳಗೆ  ಇರುವ ಬಂಡವಾಳ,ಆಸ್ತಿ ಸಂಪತ್ತನ್ನು ಬಳಸದೆ ಹೊರಗಿನವರ ಬಂಡವಾಳ ಹಣ ತಂದು  ದೇಶದ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಎಷ್ಟರ ಮಟ್ಟಿಗೆ ಧರ್ಮ ? ಸಾಲ ಯಾರೇ ಮಾಡಿದ್ದರೂ ತೀರಿಸಲು ಕಷ್ಟಪಟ್ಟು ದುಡಿಯಲೇಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡದೆ ತಲೆಗೆ ವಿಷಯವಷ್ಟೆ ತುಂಬಿದರೆ  ಕೇವಲ ಬಾಯಿಮಾತಾಗುತ್ತದೆ.
ಆಡೋನು ಮಾಡೋದಿಲ್ಲ ಮಾಡೋನು ಆಡೋದಿಲ್ಲ ಎಂದಂತೆ ಕಣ್ಣಿಗೆ ಕಾಣೋದೆಲ್ಲಾ ಸತ್ಯವಾಗಿರಲ್ಲ.ಕಾಣದ್ದು ಅಸತ್ಯವಲ್ಲ. ಇಲ್ಲಿ ನಮ್ಮ ಗುರುಹಿರಿಯರ ಜ್ಞಾನಕ್ಕೆ ಬೆಲೆಯಿಲ್ಲ
ಅವರ ಆಸ್ತಿಗೆ ಬೆಲೆಯಿದೆ ಎಂದರೆ ಇದೊಂದು ಸಾಲವಷ್ಟೆ.
ಆಸ್ತಿ  ಮಾಡೋದು ತಪ್ಪಲ್ಲ ಅದನ್ನು ಸದ್ಬಳಕೆ ಮಾಡಿಕೊಂಡು ನಡೆಯೋದನ್ನು ಮಕ್ಕಳಿಗೆ ಕಲಿಸದಿರೋದೆ ತಪ್ಪು.
ದೇಶದಲ್ಲಿ ಅರಗಿಸಿಕೊಳ್ಳಲಾಗದಷ್ಟು ಜ್ಞಾನದ ಆಸ್ತಿ ಇದೆ. ಅದನ್ನು ಶಿಕ್ಷಣದ ಮೂಲಕ ಕೊಡಲಾಗದವರು ವಿದೇಶಿಗಳ  ವ್ಯವಹಾರಕ್ಕೆ ಕೈ ಜೋಡಿಸಿ ಸಾಲದ ಹೊರೆ ಪ್ರಜೆಗಳಿಗೆ ಏರಿಸಿ ಹೋದರೆ  ತೀರಿಸಲು ಜ್ಞಾನ ಬೇಡವೆ?
ಒಟ್ಟಿನಲ್ಲಿ ಭೂಮಿಯನ್ನು ಆಳೋದಕ್ಕೆ ಹೊರಟವರಿಗೆ ಭೂ ತತ್ವದರ್ಶನ ಆಗದೆ ಆಕಾಶದೆತ್ತರ ಹಾರುವ ಕನಸಿನ ಹಿಂದೆ ನಡೆದಷ್ಟೂ  ಆತ್ಮತೃಪ್ತಿ ಸಿಗೋದಿಲ್ಲ. ಒಳಗೇ ಅಡಗಿರುವ ಸತ್ಯಜ್ಞಾನ ಹೊರಗಿರುವ‌ ಮಿಥ್ಯಜ್ಞಾನ  ಒಂದೇ ನಾಣ್ಯದ ಎರಡು ಮುಖವಾದರೂ  ವ್ಯವಹಾರಕ್ಕೆ ಬಳಸುವಾಗ ಹಣ ಮಾತ್ರ ಕಾಣೋದು  ಅದರ ಹಿಂದೆ ಬೆಳೆಯುತ್ತಿರುವ ಸಾಲ ತೀರಿಸಲು ಜ್ಞಾನವಿರಬೇಕು. 
ರಾಜಕೀಯದ ಹಿಂದೆ ನಡೆದಷ್ಟೂ ಸಾಲದ ಮೂಟೆ ಹೊತ್ತು ಜೀವ ಹೋಗುತ್ತದೆ. ಹಾಗಂತ  ಇದರಲ್ಲಿ ಧರ್ಮ ವಿದ್ದರೆ ಉತ್ತಮ ಪ್ರಗತಿ ಸಾಧ್ಯವಿದೆ. ರಾಜಕೀಯದಲ್ಲಿ ಧರ್ಮ ವಿರಬೇಕು. ಧರ್ಮ ವೇ ಹಿಂದುಳಿದು ರಾಜಕೀಯ ಬೆಳೆದರೆ ?ನೀನು ಮಾಡಿದ ಕರ್ಮಕ್ಕೆ ತಕ್ಕಂತೆ ಫಲ ಎಂದಂತೆ ಪ್ರಜೆಗಳ ಸಹಕಾರದ ಫಲವೇ ಇಂದಿನ‌ಸ್ಥಿತಿಗೆ ಕಾರಣ. ಭ್ರಷ್ಟಾಚಾರ  ಇರೋದು  ಅಸತ್ಯ,ಅಧರ್ಮ,ಅನ್ಯಾಯದ ವ್ಯವಹಾರದಲ್ಲಿ  ಹಣಕ್ಕಾಗಿ  ಇದಕ್ಕೆ ಸಹಕಾರ ನೀಡಿ ಬೆಳೆಸಿದವರು  ಯಾರು? ಪ್ರಜಾಪ್ರಭುತ್ವದ ಪ್ರಜೆಗಳು ಆತ್ಮಾವಲೋಕನ ನಡೆಸಿಕೊಳ್ಳಲೂ  ಸಾಧ್ಯವಾಗದ ಪರಿಸ್ಥಿತಿಯಿದೆ. 
ನಿಮ್ಮನಿಮ್ಮ ಸಾಲಕ್ಕೆ ನೀವೇ ಕಾರಣವಾದಾಗ ಅನಾವಶ್ಯಕ  ಸಾಲ ಮಾಡದಿರೋದು ಉತ್ತಮ . ಅನಾವಶ್ಯಕವಾಗಿ  ಸರ್ಕಾರದ ಉಚಿತವನ್ನು  ಬಳಸಿದರೂ ಸಾಲ. ಎಲ್ಲಾ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ತಂದಿವೆ. ಯೋಜನೆಗಳು ದೇಶದ ಸಾಲ ಬೆಳೆಸಿದ್ದರೂ  ಫಲಾನುಭವಿಗಳ ಸಮಸ್ಯೆಗೆ ಪರಿಹಾರ ಸಿಗಲಿಲ್ಲವೆಂದರೆ  ಸಾಲದ ಹಣದಲ್ಲಿ  ಸಮಸ್ಯೆ ಬಗೆಹರಿಯುವುದಿಲ್ಲವೆಂದರ್ಥ.
ಹಾಸಿಗೆ ಇದ್ದಷ್ಟು ಕಾಲುಚಾಚಬೇಕು. ಹಿಂದಿನ  ಕಾಲದಲ್ಲಿ ಯಾವುದೇ ಸಹಕಾರವಿಲ್ಲದೆಯೇ  ಜನಜೀವನ ಶಾಂತವಾಗಿತ್ತು. ಈಗ ಎಲ್ಲರ ಸಹಕಾರದಿಂದಲೇ ಜನಜೀವನ ಹದಗೆಟ್ಟಿದೆ ಎಂದರೆ ನಮ್ಮ ಸಹಕಾರ ಸರಿಯಾದ ಕಡೆಗಿಲ್ಲ.
 ಬಿಕ್ಷುಗಳ ದೇಶವನ್ನು ಬಿಕ್ಷುಕರ ದೇಶವಾಗಿಸಿ ಆಳೋದರಲ್ಲಿ ಅರ್ಥ ವಿಲ್ಲ. ಬಿಕ್ಷುಗಳ ಜ್ಞಾನದಿಂದ  ಹಿಂದೂಗಳ ಸಾಲ ತೀರುತ್ತದೆ ಬಿಕ್ಷುಕರ ಜ್ಞಾನದಿಂದ ಸಾಲ ಬೆಳೆಯುತ್ತದೆ.  ಬೇಡೋದು ತಪ್ಪಲ್ಲ ಯಾವುದನ್ನು ಬೇಡಬೇಕೆಂಬ ಅರಿವಿರಬೇಕು. ಸಾಲವೇ ಶೂಲ ಸರ್ಕಾರವೇ ಇದರ ಮೂಲ.ಇಲ್ಲಿ ಸರ್ಕಾರ  ನಡೆಸುವವರಿಗೆ ಸಹಕಾರ ಕೊಟ್ಟ ಪ್ರಜೆಗಳೇ ಇದರ ಮೂಲಕಾರಣಕರ್ತರಾದಾಗ  ನಾವೇ ನಮ್ಮ ಸಾಲಕ್ಕೆ ಕಾರಣರು ಇದನ್ನು ತೀರಿಸುವ‌ ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯಜ್ಞಾನದೆಡೆಗೆ  ಹಿಂದಿರುಗಿ ನಡೆದರೆ ಸದ್ಗತಿ.

No comments:

Post a Comment