ಅಧ್ವೈತ ಸಂಶೋಧನೆಯಾಗಲಿ ದ್ವೈತ ಸಂಶೋಧನೆಯಾಗಲಿ ರಾಜಕೀಯದಿಂದ ನಡೆಸಲಾಗದು.ಇದಕ್ಕೆ ಸ್ವತಂತ್ರ ಜ್ಞಾನದ ಅಗತ್ಯವಿದೆ. ಕಾಲಮಾನಕ್ಕೆ ತಕ್ಕಂತೆ ಸಿದ್ದಾಂತಗಳು ಬೆಳೆದವು. ಸಿದ್ದರು ಸಾಧ್ಯರು ವಿದ್ಯಾಧರರು ಜ್ಞಾನಿಗಳಾದರು. ಜ್ಞಾನ ಆಂತರಿಕ ಶಕ್ತಿಯಾಗಿ ಭೌತಿಕದಲ್ಲಿ ತೋರಿಸಲಾಗದೆ ಹೋದವರು ಹೆಚ್ಚಾದರು. ತೋರಿಸ ಹೋದವರು ಬೆಳೆದರು ಆದರೆ ಅದು ಅರ್ಧ ಸತ್ಯವಾಗಿ ಜನರನ್ನು ಅತಂತ್ರಸ್ಥಿತಿಗೆ ತಲುಪಿಸಿ ಆಳುವುದನ್ನು ತಡೆಯಲಾಗದೆ ಅದೇ ರಾಜಕೀಯ ವಾಗಿ ಇಂದು ಅಸತ್ಯ ಅನ್ಯಾಯ,ಅಧರ್ಮ ಭ್ರಷ್ಟಾಚಾರದ ರೂಪದಲ್ಲಿ ನಿಂತು ಅಜ್ಞಾನ ಮಿತಿಮೀರಿದೆ. ಇದನ್ನು ಸರಿ ಪಡಿಸ ಹೋಗುವವರು ಮೊದಲು ತಮ್ಮೊಳಗೇ ಅಡಗಿರುವ ಭಿನ್ನಾಭಿಪ್ರಾಯ ದ್ವೇಷ ಬಿಟ್ಟು ಪರಮಸತ್ಯವಾದ ಆತ್ಮಸಾಕ್ಷಿಯ ಕಡೆಗೆ ನಡೆಯುವ ಪ್ರಯತ್ನ ಮನೆಯೊಳಗೆ ಮನಸ್ಸಿನೊಳಗೇ ಮಾಡಿಕೊಂಡರೆ ಬದಲಾವಣೆ ನಮ್ಮಿಂದ ಸಾಧ್ಯವಿದೆ. ಪರರನ್ನು ಬದಲಾಯಿಸುವುದು ಬಹಳಕಷ್ಟ. ಹೀಗಾಗಿ ನಮ್ಮನ್ನು ನಮ್ಮವರನ್ನು ನಮ್ಮ ದೇಶವನ್ನು ನಮ್ಮ ತನವನ್ನು ತತ್ವಸಿದ್ದಾಂತದಿಂದರಿತು ಒಗ್ಗಟ್ಟಿನಿಂದ ಸ್ವತಂತ್ರ ಜ್ಞಾನದಿಂದ ಬಾಳಿ ಬದುಕಲು ಈಗಿನ ಸ್ವತಂತ್ರ ಭಾರತದಲ್ಲಿ ಸಾಧ್ಯವಿಲ್ಲವೆ? ರಾಜಪ್ರಭುತ್ವ ಹೋಗಿ ಪರಕೀಯರ ವಶವಾಗಿ ಸ್ವತಂತ್ರ ಭಾರತವಾಗಿ ಪ್ರಜಾಪ್ರಭುತ್ವ ಬಂದಿದ್ದರೂ ಸತ್ಯ ಧರ್ಮ ಬದಲಾಗದು.ನಮ್ಮೊಳಗೇ ಅಡಗಿರುವ ಹಿಂದಿನ ಸತ್ಯ ಧರ್ಮ ತಿಳಿಸುವ ಗುರುವೇ ಅರಿವು ಅಂದರೆ ಸತ್ಯಜ್ಞಾನ.ಸತ್ಯಕ್ಕೆ ಸಾವಿಲ್ಲ.ಆತ್ಮಕ್ಕೆ ಸಾವಿಲ್ಲ ದೇವರಿಗೆ ಸಾವಿಲ್ಲ ಹಾಗಾದರೆ ಸತ್ತಿರೋದು ಯಾವುದಿಲ್ಲಿ? ಆತ್ಮಾವಲೋಕನಕ್ಕೆ ವಾದ ವಿವಾದ ಪೂರಕವಾಗಿರಬೇಕಿದೆ.ಅದರಲ್ಲೂ ಭೌತಿಕದ ರಾಜಕೀಯವಿದ್ದರೆ ತತ್ವ. ತಂತ್ರದ ವಶದಲ್ಲಿರುತ್ತದೆ ಸ್ವತಂತ್ರ ಸಿಗದ ಜೀವನವಾಗಿರುತ್ತದೆ.
ಇದಕ್ಕಾಗಿ ನಾವೆಲ್ಲರೂ ಮಾಡಬೇಕಾಗಿರೋದಿಷ್ಟೆ ಮಕ್ಕಳಿಗೆ ಮಹಿಳೆಯರಿಗೆ ಉತ್ತಮ ದಾರಿ ತೋರಿಸಿ ಮನೆಯೊಳಗೆ ಸುರಕ್ಷಿತವಾಗಿದ್ದು ನಮ್ಮನ್ನು ನಾವು ಸಂಸ್ಕರಿಸಿಕೊಂಡಿರೋದು. ಸ್ವಚ್ಚ ಭಾರತ ಹೊರಗಿನ ದೇವಸ್ಥಾನ ಕಟ್ಟುವುದರಿಂದ ಸಾಧ್ಯವಿಲ್ಲ ಒಳಗಿನ ದೈವತ್ವ ಬೆಳೆಸೋ ಶಿಕ್ಷಣ ಕೊಟ್ಟು ಬೆಳೆಸುವುದರಲ್ಲಿದೆ. ಅಸಂಖ್ಯಾತ ದೇವಸ್ಥಾನ ಮಠ ಮಂದಿರ ಶಾಲಾ ಕಾಲೇಜ್ ಗಳಿಂದ ದೇಶದ ಧರ್ಮ ರಕ್ಷಣೆ ಆಗಿದೆಯೆ? ಆಗಬೇಕಾದರೆ ಅವುಗಳು ಕೊಡುವ ಸತ್ಯಜ್ಞಾನದ ಶಿಕ್ಷಣದಿಂದಾಗಬೇಕಷ್ಟೆ. ಕಣ್ಣಿಗೆ ಕಾಣುವಷ್ಟು ಸುಲಭವಿಲ್ಲ ಸತ್ಯದ ಅರಿವಾಗೋದು.ಕಾರಣ ಇದು ಒಳಗಿರುವ ಶಕ್ತಿಯಾಗಿದೆ. ಕಾಲಕ್ಕೆ ತಕ್ಕಂತೆ ನಡೆಯೋದು ಸರಿ ಆದರೆ ಕಾಲು ಯಾವ ದಿಕ್ಕಿನಲ್ಲಿ ನಡೆಯುತ್ತದೆ ಎನ್ನುವುದು ಮುಖ್ಯ. ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯಜ್ಞಾನ ಮಾನವನಿಗೆ ಮುಖ್ಯವಾಗಿದೆ. ರಾಜಕೀಯದೆಡೆಗೆ ನಡೆದಷ್ಟೂ ಬೇರೆಯವರನ್ನು ಆಳಬಹುದು.ರಾಜಯೋಗದೆಡೆಗೆ ನಡೆದರೆ ನಮ್ಮನ್ನು ನಾವು ಆಳಿಕೊಳ್ಳಲು ಸಾಧ್ಯವೆಂದಿರೋದು ಮಹಾತ್ಮರ ನಡೆ ನುಡಿ ಆಗಿತ್ತು. ಸಾಮಾನ್ಯರ ಮನಸ್ಥಿತಿ ಪರಿಸ್ಥಿತಿ ಆರ್ಥಿಕ ಸ್ಥಿತಿಯನ್ನು ದುರ್ಭಳಕೆ ಮಾಡಿಕೊಳ್ಳದೆ ನಡೆಯುವುದೇ ಧರ್ಮ.ಪ್ರಜಾಪ್ರಭುತ್ವದ ದೇಶದಲ್ಲಿ ಯಾರು ಆಳು ಅರಸ?
ಹಿಂದಿನಿಂದಲೂ ಬಂದಿರುವ ಬುದ್ದಿಗೂ ಜ್ಞಾನಕ್ಕೂ ವ್ಯತ್ಯಾಸವಿಷ್ಟೆ. ಬುದ್ದಿ ಬೆಳೆದಂತೆ ಜ್ಞಾನ ಹಿಂದುಳಿಯುತ್ತದೆ.ಜ್ಞಾನಬೆಳೆದಂತೆಲ್ಲಾ ಬುದ್ದಿ ಓಡೋದಿಲ್ಲ.ಅಂದರೆ ಜ್ಞಾನಿಗಳೆಲ್ಲ ಬುದ್ದಿವಂತರಲ್ಲ.
ಬುದ್ದಿವಂತರೆಲ್ಲಾ ಜ್ಞಾನಿಗಳಾಗೋದಿಲ್ಲ. ಕಾಯಕವೇ ಕೈಲಾಸ ಎಂದವರು ಜ್ಞಾನಿಗಳು. ಕೈಲಾಸದ ಹೆಸರಿನಲ್ಲಿ ವ್ಯವಹಾರಿಕ ಕಾಯಕ ಮಾಡಿಕೊಂಡು ಶಿವನನ್ನು ಆಳಲು ಹೊರಟರೆ ಅದು ಬುದ್ದಿವಂತಿಕೆಯಷ್ಟೆ.ಶಿವ ಕಾಣೋದಿಲ್ಲ ಹಣ ಬಿಡೋದಿಲ್ಲ. ಒಟ್ಟಿನಲ್ಲಿ ಹಣವಿಲ್ಲದೆ ಜಗತ್ತು ನಡೆಯದು ಜ್ಞಾನವಿಲ್ಲದೆ ಜಗತ್ತು ಅರ್ಥ ವಾಗದು.ಇವೆರಡೂ ಒಂದನ್ನೊಂದು ಅರ್ಥ ಮಾಡಿಕೊಂಡರೆ ಸಮಾನತೆ ಏಕತೆ ಐಕ್ಯತೆಯ ಶಾಂತಿ ಇದ್ದಲ್ಲಿಯೇ ಸಿಗುವುದು. ಅಧಿಕಾರ ಕೊಟ್ಟವರನ್ನೇ ಅಧಿಕಾರ ಪಡೆದವರು ಆಳೋದೆಂದರೆ ಜ್ಞಾನಕ್ಕೆ ಅಧಿಕಾರ ಕೊಡದೆ ಬುದ್ದಿಗೆ ಕೊಟ್ಟರೆ ಆಗೋದು ಹೀಗೇ. ಕಲಿಗಾಲವೆಂದರೆ ಯಾವುದನ್ನು ಕಲಿತರೆ ಏನಾಗುವುದೆಂದು ಕಲಿಸುವ ಕಾಲವೆಂದರೆ ಸರಿಯಾಗಬಹುದು. ಅಸುರರೊಳಗೇ ಸುರರ ಸಾಮ್ರಾಜ್ಯ. ಅಧರ್ಮದೊಳಗೇ ಧರ್ಮಪ್ರಚಾರ , ಅಜ್ಞಾನದೊಳಗೇ ಜ್ಞಾನದ ಹುಡುಕಾಟ ನಡೆಸುವುದಕ್ಕೆ ಹೊರಗಿನ ಸಹಕಾರದ ಜೊತೆಗೆ ಒಳಗಿನ ಸಹಕಾರ ಮುಖ್ಯ.ನಮ್ಮವರೆ ನಮಗೆ ಶತ್ರು ಗಳಾದರೆ ಹೊರಗಿನ ಶತ್ರುಗಳ ಮೂಲಕ ಭಗವಂತ ಭಯ ಹುಟ್ಟಿಸುತ್ತಾನೆ. ಭಗವಂತನೊಳಗೇ ನಡೆದಿರುವ ದುಷ್ಟ ಶಿಷ್ಟ ಶಕ್ತಿಗಳಿಂದ ಭೂಮಿ ನಡೆದಿದೆ. ಭೂಮಿಯ ಮೇಲಷ್ಟೆ ಮನುಕುಲವಿರೋದು.ಮಾನವರಿಗಷ್ಟೆ ಕರ್ಮ ಫಲ ಅನುಭವವಾಗೋದು. ಕರ್ಮಕ್ಕೆ ತಕ್ಕಂತೆ ಫಲ.ಎಷ್ಟೇ ಭೌತಿಕ ಸುಖವಿದ್ದರೂ ಎಲ್ಲಾ ಋಣವಾಗಿರುತ್ತದೆ.ಋಣ ಸಂದಾಯಕ್ಕೆ ಸತ್ಯಜ್ಞಾನಬೇಕು.
No comments:
Post a Comment