ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, July 9, 2023

ನಾನ್ಯಾರು? ನಾವ್ಯಾರು?

ನಾನು,ನನ್ನಿಂದ,ನನಗಾಗಿ, ನಮ್ಮವರು ನಮ್ಮವರಿಗಾಗಿ ನಾನೇ  ಮಾಡಿಕೊಂಡಿರುವ ವ್ಯವಸ್ಥೆಯನ್ನು ನಾನೇ ಸರಿಪಡಿಸಿಕೊಳ್ಳಲು ಕಷ್ಟವಾದಾಗಲೇ ನೀನೇ ಎನ್ನುವ ಶರಣರು, ದಾಸರು ಮಹಾತ್ಮರು ಅರ್ಥ ಆಗೋದು ನಾನು ಹೋದರೆ ಸುಜ್ಞಾನ  ಇದೇ ಅದ್ವೈತಾನುಭವ.
 ಅದ್ವೈತ, ದ್ವೈತ ವಿಶಿಷ್ಟಾದ್ವೈತ ಎಲ್ಲಾ ಒಂದೇ ಶಕ್ತಿಯ ರೂಪ.
ಬ್ರಹ್ಮ ವಿಷ್ಣು ಮಹೇಶ್ವರ  ತ್ರಿಮೂರ್ತಿಗಳು  ತಮ್ಮ ತಮ್ಮ ಕಾರ್ಯದಲ್ಲಿ ನಿರಂತರವಾಗಿ  ಹೇಗೆ ತೊಡಗಿರುವಾಗ  ಮಾನವ ಮಾತ್ರ ನನ್ನಿಂದಲೇ ಜಗತ್ತು ನಡೆದಿದೆಯೆನ್ನುವ ಅಹಂಕಾರ ಸ್ವಾರ್ಥ ದ ಸುಳಿಯಲ್ಲಿ ಬಳಲಿ ಬೆಂದು ಸಾಯೋದು ತಪ್ಪಿಲ್ಲ. ತಪ್ಪು ಒಪ್ಪುಗಳ  ನಡುವಿರುವ ಜೀವನ  ಅರ್ಥ ಮಾಡಿಕೊಳ್ಳಲು  ಬಹಳ ಕಷ್ಟಪಡಬೇಕೆನ್ನುವವರೆ ಹೆಚ್ಚು. ಸುಖವಾಗಿ  ದ್ಯಾನಮಗ್ನರಾಗಿದ್ದ ಎಷ್ಟೋ ಋಷಿಗಳಿಗೆ  ಭೂಮಿಯ ಸತ್ಯದರ್ಶನ ವಾಗದೆ  ತಮ್ಮ ಜೀವನ್ಮುಕ್ತಿಗಾಗಿ ವರ್ಷಗಟ್ಟಲೆ ತಪಸ್ಸು ಮಾಡಿದ್ದರು. ಆದರೆ  ಭೂಮಿಯನ್ನು ಅರ್ಥ ಮಾಡಿಕೊಂಡವರು ಭೂಮಿಯಲ್ಲಿ ಸುಖವಾಗೇ ಇದ್ದರು. ಇಲ್ಲಿ ಸುಖ ದುಃಖ ಕ್ಕೆ ಕಾರಣವೇ  ತಿಳಿಯದೆ ಎಷ್ಟು ವರ್ಷ ಬದುಕಿದರೂ ಜೀವನವಾಗೋದಿಲ್ಲವೆನ್ನುವ ಸತ್ಯ ಜ್ಞಾನ  ಮಾನವನಿಗೆ ಅಗತ್ಯವಾಗಿದೆ.ಸತ್ಯದೆಡೆಗೆ ಮನಸ್ಸು ಹೋದಂತೆಲ್ಲ ಕಷ್ಟಗಳೇ ಹೆಚ್ಚಾಗುವ ಕಾರಣ ಅಸತ್ಯವನ್ನು ಬಳಸಿ ಸುಖಪಡುವತ್ತ ಮಾನವ ಹೊರಡುತ್ತಾನೆ. ಆದರೆ ಆ ಸುಖ ತಾತ್ಕಾಲಿಕ ವೆಂದು ತಿಳಿದಾಗ ತಿರುಗಿ ಸತ್ಯದೆಡೆಗೆ  ಬರಲೇಬೇಕೆನ್ನುವುದೇ ಅಧ್ಯಾತ್ಮ ಸತ್ಯ.
ಭೌತಿಕ ಸತ್ಯ ಇದಕ್ಕೆ ವಿರುದ್ದವಿದ್ದರೆ  ಕಣ್ಣಿಗೆ ಕಾಣೋದಷ್ಟೆ ಸತ್ಯವೆನ್ನುವ ಭ್ರಮೆಯಲ್ಲಿ ಮಾಯಾಜಾಲದಲ್ಲಿ ಜೀವ ಸಿಲುಕಿ ಕೊನೆಯಲ್ಲಿ ಏನೂ  ಅರ್ಥ ವಾಗದೆ ಹೋಗುತ್ತದೆ. ತಿರುಗಿ ಬಂದಾಗಲೂ ಹಿಂದಿನ ಸುಖಕ್ಕಾಗಿ  ಮಾಡಬಾರದ‌ಕೆಲಸಕ್ಕೆ ದೇಹವನ್ನು ಬಳಸಿಕೊಂಡು ಅಸುರ ಶಕ್ತಿಯ ವಶದಲ್ಲಿ  ಜೀವ ಇರುತ್ತದೆ. ಭೂಮಿ ಒಂದು ಗ್ರಹವಷ್ಟೆ ಎನ್ನುವ ವಿಜ್ಞಾನಕ್ಕೂ ಭೂತಾಯಿ ಎನ್ನುವ ಅಧ್ಯಾತ್ಮ ಸತ್ಯಕ್ಕೂ ವ್ಯತ್ಯಾಸವಿದೆ.
ತನ್ನ ಜೀವಕ್ಕೆ ಆಶ್ರಯಕೊಟ್ಟು ಸಾಕಿ ಸಲಹಿ ರಕ್ಷಿಸುವ ತಾಯಿ ಇಲ್ಲದೆ ನಾನಿಲ್ಲವೆನ್ನುವ  ಸಾಮಾನ್ಯಜ್ಞಾನ ಮಕ್ಕಳಿರುವಾಗಲೇ ಅರ್ಥ ಮಾಡಿಸುವ ಶಿಕ್ಷಣ ಅಗತ್ಯ. ಏನೇ ಇರಲಿ ತಾಯಿ ತಂದೆಯರ ಧರ್ಮ ಕರ್ಮದ ಜೊತೆಗೆ ಋಣವೂ ಮಕ್ಕಳು ತೀರಿಸದೆ ಮುಕ್ತಿ ಸಿಗದು ಎನ್ನುವ ಕಾರಣಕ್ಕಾಗಿ ಸನಾತನ ಧರ್ಮವು ಬೇಕಾದಷ್ಟು ಶಾಸ್ತ್ರ ಸಂಪ್ರದಾಯ ಆಚಾರ ವಿಚಾರ ಪ್ರಚಾರ  ಕಾರ್ಯ  ಬೆಳೆಸಿಕೊಂಡರೂ ಈಗಿನ ಸ್ಥಿತಿಗೆ ಇವುಗಳಲ್ಲಿ ಅಡಗಿರುವ ವಿಪರೀತವಾದನಾನು ನನ್ನದು ನಮ್ಮ ಸಂಪ್ರದಾಯ ಶಾಸ್ತ್ರ ಪುರಾಣ,ಇತಿಹಾಸದ ರಾಜಕೀಯತೆಯಿಂದ ಭಿನ್ನಾಭಿಪ್ರಾಯ ದ್ವೇಷವೇ ನಮ್ಮವರಲ್ಲಿ ಹೆಚ್ಚಾಗುತ್ತಾ  ಒಗ್ಗಟ್ಟು ಹೋಗಿ ಬಿಕ್ಕಟ್ಟು ಬೆಳೆದು ನಮ್ಮವರೆ ನಮಗೆ ಶತ್ರುಗಳಾಗಿರುವಾಗ ಹೊರಗಿನಿಂದ ಬಂದ ಶತ್ರುಗಳಿಗೆ  ಒಳ್ಳೆಯ ಅವಕಾಶವಾಯಿತು. ಇಷ್ಟಕ್ಕೂ ನಾವು ಸಾಧಿಸಿರೋದೇನು? ಹಿಂದೆ  ನಡೆದದ್ದನ್ನು ಪ್ರಚಾರ ಮಾಡಿ ಜನರನ್ನು ಬದಲಾವಣೆಗೆ ತರಬಹುದಾಗಿದ್ದರೆ ಈವರೆಗೆ ಎಷ್ಟೋ ಜನರಲ್ಲಿ ಸುಜ್ಞಾನ ಹೆಚ್ಚಾಗಿ ಸ್ವಾಭಿಮಾನ ಸ್ವಾವಲಂಬನೆ ಸತ್ಯ ಧರ್ಮದಿಂದ ಆತ್ಮನಿರ್ಭರ ಭಾರತ ಆಗಬೇಕಿತ್ತು. ವಿಪರೀತ ರಾಜಕೀಯತೆಯೇ ಜನರನ್ನು ದಾರಿ ತಪ್ಪಿ ನಡೆಯುವಂತೆ ಮಾಡಿದೆ. ಮನೆಯೊಳಗೆ  ಸುರಕ್ಷಿತವಾಗಿದ್ದ ಮಹಿಳೆ ಮಕ್ಕಳು ಹೊರಗೆ ಬಂದು ದುಡಿದು ಬದುಕುವಷ್ಟು ಸಾಲ ಬೆಳೆದಿರೋದಕ್ಕೆ ಕಾರಣ ಅಜ್ಞಾನದ ಸಂಪಾದನೆಯ ಹಣ. ಜ್ಞಾನದಿಂದ ಒಂದು ರೂ ಸಂಪಾದಿಸೋದು ಕಷ್ಟ.ಇನ್ನು ಕೋಟ್ಯಾನುಕೋಟಿ ಹಣವಿದ್ದರೂ  ಸದ್ಬಳಕೆ ಮಾಡಿಕೊಳ್ಳುವ ಗುಣಜ್ಞಾನದ ಶಿಕ್ಷಣವೇ ಸಿಗದವರ ಸಾಲ ಬೆಳೆಯುತ್ತಲೇ ಇದೆ ಎಂದರೆ ಭೌತಿಕಾಸಕ್ತಿಗೆ  ಮಿತಿಯಿಲ್ಲದ ಆಸೆಯೇ ದು:ಖಕ್ಕೆ ಕಾರಣವಾಗಿದೆ ಎಂದರ್ಥ.
ಭಗವಾನ್ ಬುದ್ದನ ಆಸೆಯೇ ದು:ಖಕ್ಕೆ ಕಾರಣ ಎನ್ನುವುದನ್ನು ನಾವೀಗ ಅತಿಆಸೆಯೇ ದು:ಖಕ್ಕೆ ಕಾರಣವೆಂದರೆ ಸರಿಯಾಗಬಹುದು.ಆಸೆಯಿಲ್ಲದೆ ಹೋದ ಜೀವಕ್ಕೆ ಜನ್ಮವಿರದು.ಜನ್ಮಪಡೆದ ಜೀವಕ್ಕೆ ಏನೋ ಒಂದು ಆಸೆ ಇರಲೇಬೇಕು.ಅದು ಉತ್ತಮ ಸಮಾಜನಿರ್ಮಾಣ ಮಾಡುವ‌ಹಾಗಿದ್ದರೆ ಅಧ್ಯಾತ್ಮ ವಾಗುತ್ತದೆ. ಸಮಾಜವನ್ನು ಹಾಳು ಮಾಡಿ ತಾನು ಸುಖಪಡುವಂತಿದ್ದರೆ  ಅಸುರ ಶಕ್ತಿಯೇ ಆಗಿರುತ್ತದೆ. ಮನರಂಜನೆಯಲ್ಲಿ ಆತ್ಮವಂಚನೆಯೇ ಇದ್ದರೆ ಅಧರ್ಮ ಬೆಳೆಯುತ್ತದೆ. ಹೀಗಾಗಿ ಹಿಂದಿನ ಎಷ್ಟೋ ಕಲಾವಿದರು,ಸಾಹಿತಿಗಳು,ಜ್ಞಾನಿಗಳು, ಶಿಕ್ಷಕರು,ಗುರುಹಿರಿಯರು  ಅಧಿಕಾರ ಸ್ಥಾನಮಾನ,ಪ್ರತಿಷ್ಠೆ ಪದವಿಗಿಂತ  ಲೋಕಕಲ್ಯಾಣವೇ  ಮುಖ್ಯವಾಗಿಸಿಕೊಂಡು ಸತ್ಯ ಧರ್ಮದ ಪರ. ನಿಂತು    ಸೇವಕರಾಗಿ,     ದಾಸರಾಗಿ,
ಶರಣರಾಗಿ ಮಹಾತ್ಮರಾಗಿದ್ದಾರೆ. ಈಗ ಅವರ ಹೆಸರಿನಲ್ಲಿ ವ್ಯವಹಾರ ನಡೆಸುತ್ತಾ ನಡೆಯಲು ಸಾಧ್ಯವಾಗದ ನುಡಿಯನ್ನು ಬಂಡವಾಳ ಮಾಡಿಕೊಂಡವರು ಹಣದ ಶ್ರೀಮಂತ ರಾದರೆ ಸತ್ಯದರ್ಶನ ವಾಗದು.
ಅಂದರೆ ಆಂತರಿಕ ಶುದ್ದಿಯ ನಂತರವೇ ಭೌತವಿಜ್ಞಾನದ ಸದ್ಬಳಕೆ ಸಾಧ್ಯವೆನ್ನಬಹುದು. ಮಾನವ ಸಂಘ ಜೀವಿ. ಈ ಸಂಘಟನೆ ಸತ್ಯದ ಪರವಿದ್ದರೆ ಸತ್ಸಂಗ. ಅಸತ್ಯ ಅನ್ಯಾಯ ಅಧರ್ಮ ವೇ  ಇದ್ದು ತಾನೂ ಬದಲಾಗದೆ ಪರರನ್ನು ಬದಲಾಗಲು ಬಿಡದೆ ರಾಜಕೀಯಕ್ಕೆ ಬಳಸಿಕೊಂಡು ಹೋರಾಟ ಹಾರಾಟ ಮಾರಾಟದಿಂದ ಹಣಗಳಿಸುತ್ತಾ ದೊಡ್ಡ ಶ್ರೀಮಂತ ನಾದರೂ  ಸಮಾಜದ ಋಣ ತೀರದೆ ತಿರುಗಿ ಬಂದು ನಿಸ್ವಾರ್ಥ ನಿರಹಂಕಾರದ ಸೇವೆ ಮಾಡದೆ ಜೀವನ್ಮುಕ್ತಿಯಿಲ್ಲ ಎನ್ನುವ ಸಂದೇಶ ಹಿಂದೂ ಧರ್ಮ ತಿಳಿಸಿದೆ. ಬಡತನವನ್ನು ಹಣದಿಂದ ಅಳೆಯುವುದೇ ಅಜ್ಞಾನ.
ಹೀಗಿರುವಾಗ  ಅಂತಹ ಶಿಕ್ಷಣವನ್ನು ನೀಡಲು ಲಕ್ಷಾಂತರ ರೂ ಸಾಲ ಮಾಡುತ್ತಿರುವ ಪೋಷಕರ ಸಮಸ್ಯೆಗೆ ಪರಿಹಾರವಿಲ್ಲ.
ಇದ್ದರೆ ಜ್ಞಾನದ ಶಿಕ್ಷಣಕ್ಕಾಗಿ ದಾನ ಧರ್ಮ ಮಾಡಲು ಹಣ ಬಳಸಿ. ಅದೂ ಸತ್ಪಾತ್ರರಿಗೆ ದಾನ ನೀಡಬೇಕು. ದಾನನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ನೀಡಿದರೆ ಮಾತ್ರ ಭಗವಂತನೆಡೆಗೆ  ಜೀವಾತ್ಮ ಸೇರಲು ಸಾಧ್ಯ. ಯೋಗವೆಂದರೆ ಸೇರುವುದು ಪರಮಾತ್ಮನ ಜೀವಾತ್ಮ ಸೇರೋದೆ ಮಹಾಯೋಗ.ಭೂಮಿಯ ಮೇಲಿರುವಾಗಲೇ ಈ ಎಲ್ಲಾ ಸತ್ಯದರ್ಶನ ವಾದರೆ ಮುಕ್ತಿ ಯ ಮಾರ್ಗ ಸುಗಮ.ವಿಪರ್ಯಾಸವೆಂದರೆ ಭೂಮಿಗೆ ಬಂದ ಮೇಲೆ ಆವರಿಸುವ ಮೋಹಮಾಯೆಯಿಂದ ದೇವಾನುದೇವತೆಗಳೇ ದಾರಿತಪ್ಪಿರುವಾಗ ಸಾಮಾನ್ಯ ಮಾನವನ ಪಾಡೇನು?
ಇದನ್ನರಿತು  ನಡೆದವರೆ ಮಹಾತ್ಮರಾದವರು. ಒಟ್ಟಿನಲ್ಲಿ  ಇಲ್ಲಿ ನಮ್ಮದೇನೂ ಇಲ್ಲವಾದರೂ ಎಲ್ಲಾ ನಾವೇ ಮಾಡಿಕೊಂಡ  ವ್ಯವಸ್ಥೆಗೆ   ತಕ್ಕಂತೆ  ಜೀವನ ನಡೆಯುತ್ತದೆ. ಯಾವುದೂ ಸ್ಥಿರ ವಲ್ಲ ಬದಲಾಗುತ್ತಲೇ ಇರುತ್ತದೆ. ಮನಸ್ಸು  ಬದಲಾದರೆ ಕಾಣೋದಿಲ್ಲ ಮನುಷ್ಯ ಬದಲಾದರೆ ಕಾಣುತ್ತದೆ. ಕಣ್ಣಿಗೆ ಕಾಣುವ  ಮಾನವನ ಒಳಗಿರುವ ಮನಸ್ಸೇ ಅವನ ಶತ್ರು ಮಿತ್ರನಾದಾಗ ಹೊರಗಿನ ಶತ್ರುಗಳು  ದೊಡ್ಡವರಲ್ಲ ಕೆಟ್ಟವರೂ ಅಲ್ಲ. ಕಾರಣ ಕೆಟ್ಟವರು ಬೆಳೆಯೋದೇ ಕೆಟ್ಟ ಮನಸ್ಸುಳ್ಳವರ ಸಹಕಾರದಿಂದ ಹಾಗಾಗಿ  ಮಾನವನ ಸಹಕಾರ ಯಾರಿಗಿದೆಯೋ ಅವರು ಬೆಳೆಯುವರು.
ಭಗವಂತನೊಳಗೇ ಅಡಗಿರುವ ಎಲ್ಲಾ ಜೀವಾತ್ಮರುಗಳ ರಾಜಕೀಯದಲ್ಲಿ  ನಾನ್ಯಾರು ಎನ್ನುವ ಪ್ರಶ್ನೆ ಹುಟ್ಟಲು ಕಷ್ಟ. ಈ ಪ್ರಶ್ನೆ ಯಾರಲ್ಲಿ ಒಳಗೇ  ಹುಟ್ಟುವುದೋ  ಅವರಿಗೆ ಒಳಗಿನಿಂದ ಲೇ ಉತ್ತರವೂ ಸಿಗುತ್ತದೆ. ಕಾರಣ ನಾನು ಹೊರಗೆ ಬೆಳೆದರೆ ಅಹಂಕಾರ. ಒಳಗೇ ಬೆಳೆದಾಗ ಆತ್ಮವಿಶ್ವಾಸ ಹೆಚ್ಚುವುದು. "ಅಹಂ ಬ್ರಹ್ಮಾಸ್ಮಿ"  ಬ್ರಹ್ಮನ ಅಂಶವಿರುವ ನನ್ನಲ್ಲಿ ಬ್ರಹ್ಮಜ್ಞಾನವಿರೋವಾಗ ಸೃಷ್ಟಿ ಮಾಡುವಾಗಲೇ ಉತ್ತಮ ವಿಷಯಗಳತ್ತ  ಮನಸ್ಸಿರಬೇಕು. ಅದೇ ಮುಂದೆ ಸ್ಥಿತಿಗೆ ಕಾರಣವಾಗಿ ಲಯವೂ ಮುಕ್ತಿಯ ಕಡೆಗಿರುತ್ತದೆ. ಶಿಕ್ಷಣವೇ ಅಧರ್ಮದ ಕಡೆಗಿದ್ದರೆ  ಇದನ್ನು ಯಾರಾದರೂ ಹಣದಿಂದ ಸರಿಪಡಿಸಬಹುದೆ? ಸಾಧ್ಯವಿಲ್ಲ ವೆಂದರೆ  ಸತ್ಯಜ್ಞಾನದ ಕಡೆಗೆ ಹೋಗಬೇಕು. ಸತ್ಯವೇ ಇಲ್ಲದ ಧರ್ಮ, ಧರ್ಮ ವಿಲ್ಲದ ಸತ್ಯವೇ ಜೀವನದ ಅತಂತ್ರಸ್ಥಿತಿಗೆ ಕಾರಣ.
  ಇಂದಿನ ಭ್ರಷ್ಟಾಚಾರ ಬೆಳೆದಿರೋದಕ್ಕೆ ಭ್ರಷ್ಟರಿಗೆ ನೀಡಿದ ಪ್ರಜೆಗಳ ಸಹಕಾರ ಕಾರಣವಾದಂತೆ ಪರಕೀಯರು ಪರಧರ್ಮದ ಬೆಳವಣಿಗೆಯೂ  ಆಗಿದೆ. ಪ್ರಜಾಪ್ರಭುತ್ವದ ಅರ್ಥ ತಿಳಿಯದ ಪ್ರಜೆಗಳ ಸಹಕಾರವೇ ಎಲ್ಲದ್ದಕ್ಕೂ ಕಾರಣ.ನಾನೇ ಸರಿ ಎನ್ನುವ ಮೊದಲು ನನ್ನ ತಪ್ಪು ನಾನು ತಿದ್ದಿಕೊಂಡರೆ ಸರಿಯಾದ ದಾರಿ ಕಾಣಬಹುದಷ್ಟೆ.ಕಾಣದ ಸತ್ಯ ಕಾಣುವ ಸತ್ಯದ ಹಿಂದೆ ನಿಂತರೂ  ಗೆಲ್ಲುವುದು  ಕಾಣದ ಸತ್ಯವೆ.ಕಾರಣ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಇದನ್ನು ಒಳಗೇ ತಿಳಿದು ನಡೆಯುವುದೇ ಅಧ್ಯಾತ್ಮ ಸಾಧನೆ.ಹೊರಗೆ ತೋರಿಸಲಾಗದ  ಸತ್ಯವನ್ನು ಇಲ್ಲವೇ ಇಲ್ಲವೆಂದು ವಾದ ಮಾಡಿದರೆ ಅಜ್ಞಾನವಷ್ಟೆ.‌ ನಾವ್ಯಾರು? ನಾನ್ಯಾರು?
ನಾವ್ಯಾರು ಮಾನವರು.ನಾನ್ಯಾರು ಮಹಾತ್ಮ ಎಂದರೂ ಮಾನವನಾಗಿದ್ದು ಆತ್ಮಾನುಸಾರ ನಡೆದವರಿಗೆ ನಾನ್ಯಾರು ಪ್ರಶ್ನೆಗೆ ಉತ್ತರ ಸಿಗುವುದು. ನಾನೆಂಬುದಿಲ್ಲವೆನ್ನುವ ಸತ್ಯ ಎಲ್ಲಕ್ಕಿಂತ ದೊಡ್ಡದು.
ಎಷ್ಟೇ ಭ್ರಷ್ಟ ರಾಜಕೀಯದ ವಿರುದ್ದ ಹೋರಾಡಿದರೂ ನಾನು ಬದಲಾಗದೆ  ನನ್ನ ಆತ್ಮಕ್ಕೆ ಶಾಂತಿಸಿಗದು.

No comments:

Post a Comment