ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Thursday, July 6, 2023
ದೇಶ ಹಾಗು ದೇಹದ ಎಲ್ಲಾ ಸಮಸ್ಯೆಗೂ ನಮ್ಮ ಅಜ್ಞಾನದ ಸಹಕಾರವೇ ಕಾರಣ
ಗಮನಿಸಿ ನಮ್ಮ ಸಹಕಾರದಿಂದ ಬೆಳೆದವರೆ ನಮ್ಮನ್ನು ಆಳುತ್ತಿದ್ದಾರೆಂದರೆ ಇದೊಂದು ರಾಜಕೀಯವಷ್ಟೆ. ನಮ್ಮಲ್ಲಿ ಸಾಕಷ್ಟು ಜ್ಞಾನವಿದೆ,ಹಣವಿದೆ ಆದರೆ ಅಧಿಕಾರದ ಕೊರತೆಯಿದೆ.ಈ ಹಣ ಮತ್ತು ಜ್ಞಾನವನ್ನು ಬಳಸಿಕೊಂಡು ನಮ್ಮನ್ನು ಆಳುತ್ತಿರುವವರಿಗೆ ನಮ್ಮದೇ ಸಹಕಾರ ವಿದ್ದಾಗ. ಅದರಿಂದ ಉದ್ಬವಿಸಿರುವ ಸಮಸ್ಯೆ ಗಳ ಫಲವನ್ನು ಮೊದಲು ಸಹಕರಿಸಿದವರೆ ಉಣ್ಣಬೇಕೆಂಬುದು ಕರ್ಮ ಸಿದ್ದಾಂತ ತಿಳಿಸುತ್ತದೆ.ಆದರೆ ಇದನ್ನು ಭೌತಿಕದಲ್ಲಿ ನೀನೇ ಮಾಡಿದ ಕರ್ಮಕ್ಕೆ ನೀನೇ ಕಾರಣವೆಂದಾಗುತ್ತದೆ.ಇದು ಸತ್ಯವಲ್ಲವೆ? ಪ್ರಜಾಪ್ರಭುತ್ವ ನಡೆದಿರೋದೆ ಪ್ರಜಾಸರ್ಕಾರದಿಂದ ಪ್ರಜೆಗಳ ಸಮಸ್ಯೆಗೆ ಅವರು ನೀಡಿದ ಸಹಕಾರವೇ ಕಾರಣವೆಂದಾಯಿತು.ನಮ್ಮಲ್ಲಿ ಸತ್ಯಜ್ಞಾನವಿದ್ದರೆ ಸತ್ಯಕ್ಕೆ ಸಹಕಾರ ನೀಡುತ್ತೇವೆಂದರೆ ಸತ್ಯ ಗೆಲ್ಲುವುದು. ಮಿಥ್ಯಕ್ಕೆ ಸಹಕಾರ ನೀಡಿದರೆ ಮಿಥ್ಯ ಗೆಲ್ಲುವುದು.ಸತ್ಯ ಶಾಶ್ವತವಾಗಿ ನಿಧಾನವಾಗಿ ಸಮಸ್ಯೆಗೆ ಪರಿಹಾರ ನೀಡಿದರೆ ಮಿಥ್ಯ ಶೀಘ್ರವಾಗಿ ತಾತ್ಕಾಲಿಕ ಪರಿಹಾರ ನೀಡಿದರೂ ಸಮಸ್ಯೆ ತಿರುಗಿ ಬರುವುದಂತೂ ಸತ್ಯ.ಹೀಗೇ ನಮ್ಮ ಪ್ರತಿಯೊಂದು ಆಂತರಿಕ ಸಮಸ್ಯೆಗೆ ಪರಿಹಾರ ಕೊಡುವ ಅಧ್ಯಾತ್ಮ ಸತ್ಯವನರಿತವರಿಗೆ ಮೊದಲು ಕಷ್ಟಪಟ್ಟರೂ ಕೊನೆಯಲ್ಲಿ ಒಳಗೆ ಶಾಂತಿ ನೆಲೆಸಿ ಮುಕ್ತಿಪದವಿಯನ್ನು ಪಡೆದವರೆ ಮಹಾತ್ಮರಾಗಿದ್ದಾರೆ.ಇವರಲ್ಲಿ ರಾಜಕೀಯವಿರಲಿಲ್ಲ. ಜನರನ್ನು ಆಳುವ ಆಸೆಯಿರಲಿಲ್ಲ.ಹಣ ಅಧಿಕಾರ,ಸ್ಥಾನಮಾನಕ್ಕಾಗಿ ಪೈಪೋಟಿ, ದ್ವೇಷವಿರಲಿಲ್ಲ.ಹೀಗಾಗಿ ನಾವು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತೇವೆ. ಆದರೆ ವಿಪರ್ಯಾಸವೆಂದರೆ ಅವರ ಹೆಸರಿನಲ್ಲಿ ನೆಡೆಸೋ ಕಾರ್ಯಕ್ರಮದಲ್ಲಿ ಯಾರಿಗೆ ಅಧಿಕಾರ,ಹಣ,ಹೆಸರಿದೆಯೋ ಅವರ ವಾಕ್ಯವೇ ವೇದವಾಕ್ಯವೆಂದರಿತ ಅನೇಕ ಸಾಮಾನ್ಯಜನತೆ ತನ್ನೊಳಗೇ ಅಡಗಿದ್ದ ಆತ್ಮಶಕ್ತಿಯನರಿಯದೆ ಪರರಿಗೇ ಸಹಕಾರ ನೀಡುತ್ತಾ ಅವರನ್ನು ಬೆಳೆಸುತ್ತಾ ಕೊನೆಗೆ ಹಿಂದುಳಿದವರಾಗೇ ಉಳಿದಿರೋದು ದೊಡ್ಡ ದುರಂತ. ಇದನ್ನು ಯಾರೂ ಸರಿಪಡಿಸಲಾಗದು.ನಮ್ಮ ಚೈತನ್ಯಶಕ್ತಿಯನ್ನರಿತು ಅದರೊಂದಿಗೆ ನಡೆಯೋ ಶಕ್ತಿ ಎಲ್ಲರಲ್ಲಿಯೂ ಇದ್ದರೂ ಅದಕ್ಕೆ ಪೂರಕವಾದ ಶಿಕ್ಷಣ ಸಿಗದಿದ್ದರೆ ಅದನ್ನು ಗುರುತಿಸಿ ಗುರಿ ಕಡೆಗೆ ನಡೆಸೋ ಗುರುವೇ ಸಿಗದಿದ್ದರೆ ಇದಕ್ಕೆ ಯಾರನ್ನೂ ದೋಷಿಯನ್ನಾಗಿಸಲಾಗದು.ನಮ್ಮ ಸಹಕಾರ ಅಧ್ಯಾತ್ಮದ ಸದ್ವಿಚಾರಗಳನ್ನು ತಿಳಿದು ತಿಳಿಸುವ ನಡೆದು ನಡೆಸುವತ್ತ ಇದ್ದಾಗ ರಾಜಕೀಯತೆಯಿಂದ ದೂರವಿದ್ದು ಸತ್ಯವನರಿಯುವುದು ಅಗತ್ಯವಾಗಿದೆ.ಯಾವಾಗ ಸತ್ಯವಿಲ್ಲದೆ ಧರ್ಮ ನಡೆಯುವುದೋ ಅದು ಯಶಸ್ಸು ಕಾಣದೆ ಕುಂಟುತ್ತದೆ. ಹಾಗೆಯೇ ಧರ್ಮವಿಲ್ಲದ ಭೌತಿಕಸತ್ಯವೂ ಕುರುಡು ಜನರನ್ನು ಸೃಷ್ಟಿ ಮಾಡುತ್ತಾ ಬೆಳೆಯುತ್ತದೆ. ಇದು ನಮ್ಮೆಲ್ಲರ ಸಹಕಾರದಿಂದಲೇ ನಡೆಯುವಾಗ ನಮ್ಮಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಸಿಗುವುದೋ ಅದಕ್ಕೆ ಹೆಚ್ಚು ಪ್ರೋತ್ಸಾಹ, ಪ್ರಶಂಸೆ,ಅಧಿಕಾರ,ಹಣ,ಸ್ಥಾನಮಾನ,ಸನ್ಮಾನ ವಿದೆಯೋ ಅದೇ ಮುಂದೆ ನಮ್ಮನ್ನು ಆಳುವತ್ತ ನಡೆಸುತ್ತದೆನ್ನುವ ಅಧ್ಯಾತ್ಮ ಸತ್ಯವನರಿತವರೆ ನಮ್ಮ ಹಿಂದಿನ ಮಹಾತ್ಮರು. ಇವರಲ್ಲಿಜ್ಞಾನವಿತ್ತು ರಾಜಕೀಯವಿರಲಿಲ್ಲ. ಈಗ ರಾಜಕೀಯಕ್ಕೆ ವಿಜ್ಞಾನವನ್ನು ಬಳಸಿ ಹೊರದೇಶದವರೆಗೆ ಭಾರತ ನಡೆದಿದೆ ಆದರೆ ತಿರುಗಿ ಬರಲಾಗದೆ ವಿದೇಶದೊಳಗೇ ದೇಶ ಅಡಗಿಕೊಂಡು ವಿಶ್ವಗುರು ಎನ್ನುವ ಪ್ರಚಾರವಿದೆ. ಪ್ರಚಾರಕರು ಅರ್ಧ ಸತ್ಯದಲ್ಲಿದ್ದು ಜನರನ್ನು ಆಳಲು ಹೊರಟು ಹಣ,ಅಧಿಕಾರ,ಸ್ಥಾನಮಾನ ಪಡೆದಿರೋದು ಕಣ್ಣಿಗೆ ಕಾಣುವ ಸತ್ಯ.ಆದರೆ ಇದರ ಹಿಂದೆ ಸಹಕಾರ ನೀಎಇ ಬೆಳೆಸಿರುವ ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಬಡತನವನ್ನು ಹಣದಿಂದ ಅಳೆದು ಒಳಗೇ ಅಡಗಿದ್ದ ಜ್ಞಾನಕ್ಕೆ ಸೂಕ್ತವಾದ ಶಿಕ್ಷಣ ಕೊಡದೆ ಹೊರಗೆಳೆದು ರಾಜಕೀಯದೆಡೆಗೆ ನಡೆಸಿ ಹೋರಾಟ ಹಾರಾಟ ಮಾರಾಟಕ್ಕೆ ಜನಶಕ್ತಿಯನ್ನು ಬಳಸಿಕೊಂಡವರು ಶ್ರೀಮಂತ ರಾಗಿದ್ದಾರೆಂದರೆ ಅವರು ಕಷ್ಟಪಟ್ಟು ಗಳಿಸಿದ್ದೆಷ್ಟು? ಜನರ ಕಷ್ಟಕ್ಕೆ ಸಿಕ್ಕಿದ್ದೇನು? ಒಟ್ಟಿನಲ್ಲಿ ಮಾನವ ತನಗೆ ತಾನೇ ಮೋಸಹೋಗಿರೋದನ್ನು ಭೌತಿಕ ಸತ್ಯದಿಂದ ತಿಳಿಯಲಾಗದು ಅಧ್ಯಾತ್ಮ ಸತ್ಯದಿಂದ ಅರ್ಥ ಮಾಡಿಕೊಳ್ಳಲು ಬೇಕಿದೆ ಆತ್ಮಜ್ಞಾನ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯ ಇನ್ನೊಂದು ಇಲ್ಲ. ಹೀಗಾಗಿ ಪ್ರತಿಯೊಬ್ಬರೂ ಒಳಗೇ ಅಡಗಿರುವ ಮಹಾಚೇತನಾತ್ಮನಿಗೆ ಶರಣಾದರೆ, ಸತ್ಯ ಧರ್ಮದ ಪರ ನಿಂತರೆ ಮನೆ ಮನೆಯೊಳಗೆ ಬೆಳೆದಿರುವ ರಾಜಕೀಯದ ಹಿಂದಿನ ಉದ್ದೇಶ ಅರ್ಥ ವಾಗಬಹುದು. ಸಹಕಾರ ಶಿಷ್ಟಾಚಾರ ಕ್ಕೆ ಸಿಕ್ಕಿದರೆ ಶಿಷ್ಟರು ಬೆಳೆಯುವರು. ಇದರಿಂದ ಶಾಂತಿ ನೆಲೆಸುವುದು.ಇದಕ್ಕೆ ವಿರುದ್ದದ ಭ್ರಷ್ಟಾಚಾರಕ್ಕೆ ಸಹಕಾರ ಸಿಕ್ಕಿದ್ದಷ್ಟೂ ಭ್ರಷ್ಟರಿಗೆ ಬಲ ಇದೇ ಮುಂದೆ ಬೆಳೆದು ಅಶಾಂತಿಯ ಕ್ರಾಂತಿಕಾರರ ಶಕ್ತಿಯಾಗಿ ಜೀವ ಹೋಗುವುದು. ಒಟ್ಟಿನಲ್ಲಿ ಯಾವುದೂ ಅತಿಯಾಗಬಾರದಷ್ಟೆ. ಅತಿಯಾದ ಶಾಂತಿದೂತರಿಂದ ಲೋಕದಲ್ಲಿ ಧರ್ಮ ರಕ್ಷಣೆಆಗದು.ಅತಿಯಾದ ಕ್ರಾಂತಿಯೂ ಮಾನವನಿಗೆ ಜ್ಞಾನೋದಯವಾಗೋದಿಲ್ಲ.ಮಧ್ಯದಲ್ಲಿರುವ ಮನುಕುಲದ ಒಳಗಿರುವ ದೇವಾಸುರರ ಶಕ್ತಿಯ ನಡುವಿರುವ ಅಂತರವೇ ಅತಂತ್ರಸ್ಥಿತಿಗೆ ಕಾರಣವೆನ್ನಬಹುದಷ್ಟೆ.ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸ್ವತಂತ್ರ ಜ್ಞಾನದ ಜೊತೆಗೆ ಸ್ವಾತಂತ್ರ್ಯ ವೂ ನಮ್ಮ ಮಹಾತ್ಮರು ಕೊಟ್ಟು ಹೋಗಿದ್ದರೂ ಅದನ್ನು ತನ್ನ ಸ್ವಾರ್ಥ ಸುಖಕ್ಕಾಗಿ ಬಳಸಿಕೊಂಡ ಮಧ್ಯವರ್ತಿಗಳು ಅರ್ಧ ಸತ್ಯ ತಿಳಿದು ತಿಳಿಸುತ್ತಾ ತಾನೇ ರಾಜ, ತಾನೇ ದೇವರೆಂದರೆ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ದರ್ಶನವಾಗಿಲ್ಲವೆಂದರ್ಥ. ಆದರೆ ಸತ್ಯ ಕಣ್ಣಿಗೆ ಕಾಣದಿದ್ದರೂ ಅರಿವಿಗೆ ಬರುತ್ತದೆ.ಯಾರು ಆತ್ಮಸಾಕ್ಷಿಯ ಜೊತೆಗೆ ನಡೆದಿರುವರೋ ಅವರಿಗೆ ಒಳಗೇ ಅಡಗಿರುವ ಮಹಾಚೇತನದ ದರ್ಶ ನವಾಗಿ ಅಧ್ಯಾತ್ಮ ಸಂಶೋಧಕರಾಗಿ ಮಹಾತ್ಮರಾಗಿದ್ದಾರೆಂದರೆ ಈಗ ನಾವು ಯಾವ ಮಾರ್ಗದಲ್ಲಿ ನಡೆದಿರೋದು? ಯಾವುದಕ್ಕಾಗಿ ಹೋರಾಟ ನಡೆದಿದೆ? ಯಾರ ವಿರುದ್ದ ಹೋರಾಟ ನಡೆಸಿರೋದು? ದೈವತ್ವವಿಲ್ಲದವರಿಗೆ ಎಷ್ಟು ಸಹಕಾರ ನೀಡಿ ಅಧ್ಯಾತ್ಮ ಸತ್ಯದಿಂದ ದೂರವಿದ್ದೇವೆ? ಯಾರ ದೇಶವನ್ನು ಯಾರು ಆಳುತ್ತಿರುವುದು? ಯಾರ ಸಹಕಾರದಿಂದ ಯಾರನ್ನು ಆಳುತ್ತಿರುವುದು? ಹಣದಿಂದ ಸಾಲ ತೀರುವುದಾಗಿದ್ದರೆ ಈವರೆಗಿನ ಸಾಲ ತೀರಿಸಿದವರಿದ್ದಾರೆಯೆ? ಋಣ ತೀರಿಸಲು ಬಂದಂತಹ ಜೀವಕ್ಕೆ ಕೊಡಬೇಕಾದ ಶಿಕ್ಷಣ ಕೊಡಲಾಗದಿರೋದಕ್ಕೆ ಕಾರಣರು ಯಾರು? ಎಷ್ಟೋ ವರ್ಷಗಳಿಂದ ನಡೆದಿರುವ ಧಾರ್ಮಿಕ ಕಾರ್ಯಕ್ರಮಗಳಿಂದ ಧರ್ಮ ರಕ್ಷಣೆ ಆಗಿದೆಯೆ? ಆಗಿಲ್ಲವೆಂದರೆ ತಪ್ಪು ಎಲ್ಲಿ ನಡೆದಿದೆ ಎಂದರೆ ಒಳಗೇ ತಪ್ಪು ನಡೆದಿದೆ.ನಮ್ಮವರೆ ನಮ್ಮನ್ನು ಹೊರಗಿನ ಸತ್ವ ಸತ್ಯ ತತ್ವದ ಶಿಕ್ಷಣ ನೀಡದಿರೋದೆ ತಪ್ಪು. ಇದನ್ನರಿತು ನಮ್ಮನ್ನು ನಾವು ಆಳಿಕೊಳ್ಳಲು ಸಾಧ್ಯವಾದರೆ ಭಗವಂತ ನೀಡಿರುವ ಅಲ್ಪ ಜ್ಞಾನ,ಹಣ,ಅಧಿಕಾರದಿಂದಲೇ ಸ್ವತಂತ್ರವಾಗಿ ಜೀವನ ನಡೆಸುತ್ತಾ ಪಾಲಿಗೆ ಬಂದದ್ದು ಪಂಚಾಮೃತವೆಂದರಿತರೆ ಸಾಮಾನ್ಯರೂ ಅಸಮಾನ್ಯರಾಗಿ ಜೀವನದಲ್ಲಿ ಶಾಂತಿ ಕಾಣಬಹುದು.ಯಾವಾಗ ಇದನ್ನರಿಯದೆ ಹೊರಗಿನ ಭ್ರಷ್ಟರಿಗೆ ಸಹಕಾರ ನೀಡುತ್ತಾ ಮನೆಯಿಂದ ಮನಸ್ಸಿನಿಂದ ದೂರವಾಗುವರೋ ಪರಕೀಯರ ವಶದಲ್ಲಿ ಜೀವನ ನಡೆಸುವುದು ತಪ್ಪೋದಿಲ್ಲ. ಒಟ್ಟಿನಲ್ಲಿ ಸಹಕಾರವೆಂದರೆ ಸರ್ಕಾರ. ಸರ್ಕಾರ ನಡೆಸೋರಿಗೆ ಹಣ ಅಧಿಕಾರ,ಸ್ಥಾನದ ಅಗತ್ಯವಿದೆ.ಇದು ಜನರೆ ಕೊಟ್ಟು ಬೆಳೆಸಿರುವಾಗ ಅದನ್ನು ಯಾವುದಕ್ಕೆ ಯಾರಿಗೆ ಯಾವಾಗ ಎಷ್ಟು ಬಳಸಿದರೆ ಜನರ ಜೀವನ ಸುಗಮವಾಗುವುದೆನ್ನುವ ಜ್ಞಾನವಿಲ್ಲವಾದರೆ ಅದನ್ನು ದುರ್ಭಳಕೆ ಮಾಡಿಕೊಂಡು ಸಾಲ ಹೆಚ್ಚಿಸಿ ಜನರ ತಲೆಯ ಮೇಲೇ ಸಾಲದ ಹೊರೆ ಹಾಕಿ ಆಳುತ್ತಾ ವಿದೇಶದೆಡೆಗೆ ನಡೆದವರಿಗೇ ಅಧಿಕಾರ ಕೊಟ್ಟರೆ ಇದರ ಫಲವನ್ನು ಜನರೆ ಅನುಭವಿಸಲೇಬೇಕೆನ್ನುವುದೇ ಕರ್ಮ ಸಿದ್ದಾಂತ. ಒಟ್ಟಿನಲ್ಲಿ ವಿದೇಶಿ ಬಂಡವಾಳ,ಸಾಲ, ವ್ಯವಹಾರವೇ ದೇಶದ ಈ ಪರಿಸ್ಥಿತಿಗೆ ಕಾರಣ.ಇದಕ್ಕೆ ರಾಜಕಾರಣಿಗಳೇ ಕಾರಣ ರಾಜಕಾರಣಿಗಳಿಗೆ ಸಹಕಾರ ನೀಡುತ್ತಿರುವ ಪ್ರಜಾಪ್ರಭುತ್ವದ ಪ್ರಜೆಗಳೇ ಮೂಲ ಕಾರಣ. ಸಮಸ್ಯೆ ನಮ್ಮ ಸಹಕಾರದಿಂದ ಬೆಳೆದಿರುವಾಗ ಅದನ್ನು ಅರ್ಥ ಮಾಡಿಕೊಂಡರೆ ನಮ್ಮ ಸಹಕಾರ ಉತ್ತಮರಿಗೆ ನಮ್ಮವರಿಗೆ ಕೊಡುವುದರಿಂದ ತಿರುಗಿ ಬಂದರೆ ಮೂಲದ ಧರ್ಮ ಕರ್ಮ ಸತ್ಯಕ್ಕೆ ಬಲ ಬರುತ್ತದೆ. ಇದೇ ಅಧ್ಯಾತ್ಮ.
Subscribe to:
Post Comments (Atom)
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...
No comments:
Post a Comment