ಭೂಮಿಯಲ್ಲಿ ಮಾನವನಾಗಿರೋದು ಸುಲಭವಿಲ್ಲ ದೇವರಾಗಬಹುದು ಅಸುರರಾಗಿರಬಹುದು.ಶ್ರೀ ರಾಮಚಂದ್ರನೇ ಇದಕ್ಕೆ ಸಾಕ್ಷಿ. ರಾಮರಾಜ್ಯ ಮಾಡಲು ಹೋಗುವವರು ಮಾನವರಾಗಿರಬೇಕಿತ್ತು ದೇವರಿಗಿಂತ ನಾನೇ ದೊಡ್ಡವನೆನ್ನುವವರೂ ಬೆಳೆದರು, ನಾನೇ ದೇವರೆನ್ನುವವರೂ ಬೆಳೆದರು.ಈ ಬೆಳೆದವರನ್ನು ಬೆಳೆಸಿದವರೆ ಮಾನವರು.ಹಾಗಾದರೆ ಭೂಮಿ ನಡೆದಿರೋದು ಯಾರಿಂದ? ಬೆಳೆದವರಿಂದಲೇ ಬೆಳೆಸಿದವರಿಂದಲೆ? ಬೆಳೆದವರಲ್ಲಿ ಅಸತ್ಯ ಅನ್ಯಾಯ ಅಧರ್ಮವಿದ್ದರೂ ಒಪ್ಪಿಕೊಂಡು ಬೆಳೆಸಿದವರಿಗೆ ಸಿಕ್ಕಿದ್ದು ಏನು? ತತ್ವವೋ ತಂತ್ರವೋ? ತತ್ವದಿಂದ ಸಮಾನತೆ ತಂತ್ರದಿಂದ ಅಸಮಾನತೆ. ಭೂಮಿ ಮೇಲೆ ನಿಂತು ಭೂಮಿ ಆಳೋದಕ್ಕೆ ಶ್ರೀ ರಾಮಚಂದ್ರನ ಧರ್ಮ ತತ್ವವಿದ್ದರೆ ಅದು ರಾಮರಾಜ್ಯ.ಎಲ್ಲರಿಗೂ ಒಂದೇ ನ್ಯಾಯ,ನೀತಿ,ಶಿಕ್ಷಣ.ಇದು ಈಗ ಭಾರತದಲ್ಲಿ ಜಾರಿಗೆ ತರಲು ಭಾರತೀಯರೆ ತಯಾರಿಲ್ಲ ಆದರೂ ರಾಮರಾಜ್ಯದ ಕನಸನ್ನು ಬಿಡಲಾಗುತ್ತಿಲ್ಲ. ಒಳ ಅರಿವು ಹೊರ ಅರಿವು ತಮ್ಮದೇ ಆದ ಸ್ಥಾನಮಾನ ಪಡೆದು ಹರಿದಾಡುತ್ತಿದ್ದರೂ ಮಧ್ಯವರ್ತಿಗಳು ಎರಡಲ್ಲಿರುವ ರಾಜಕೀಯಕ್ಕೆ ಸಹಕರಿಸಿದ್ದಷ್ಟು ರಾಜಯೋಗಕ್ಕೆ ಸಹಕಾರ ನೀಡದೆನಿಂತ ನೀರಾಗಿ ಕೆಸರಿನಲ್ಲಿ ಒದ್ದಾಡಿಕೊಂಡು ಅಲ್ಲೇ ಬೆಳೆದಿರುವ ಕಮಲವನ್ನು ಲಕ್ಮಿ ಪೂಜೆಗೆ ಉಪಯೋಗಿಸಿ ಹಣವನ್ನು ಪಡೆದರೂ ಸ್ವಚ್ಚವಾಗಿರುವ ಸರಸ್ವತಿಯ ಜ್ಞಾನದ ಶಿಕ್ಷಣ ಪಡೆಯದಿದ್ದರೆ ನಮ್ಮನ್ನು ಆಳುತ್ತಿರುವ ಶಕ್ತಿಯ ಬಗ್ಗೆ ನಮಗೇ ಅರ್ಥ ವಾಗದೆ ಒಮ್ಮೆ ಜೀವ ಹೋಗುತ್ತದೆ.
ಕರ್ಮಕ್ಕೆ ತಕ್ಕಂತೆ ಫಲ ಇದು ಎಲ್ಲರಿಗೂ ಒಂದೇ. ಹಣವಿದ್ದವರಿಗೆ ಒಂದು ನ್ಯಾಯ ಇಲ್ಲದವರಿಗೊಂದು ನ್ಯಾಯವೆಂದು ಶ್ರೀ ರಾಮ ತಿಳಿಸಿರಲಿಲ್ಲ.ಹಾಗೆಯೇ ಎಷ್ಟೋ ಮಹಾತ್ಮರುಗಳು ಭೂಮಿಯ ಮೇಲಿದ್ದೇ ಆಕಾಶತತ್ವವನರಿತು ಭೂಮಿ ಆಳಿದವರು. ಅಂದರೆ ಧರ್ಮದ ಹೆಸರಿನಲ್ಲಿ ಎಷ್ಟು ರಾಜಕೀಯ ಬೆಳೆಯುವುದೋ ಅಷ್ಟೇ ಅಧರ್ಮ ವೂ ಬೆಳೆಯುವುದು. ವಿವೇಕವನ್ನು ಸರಿಯಾದ ಶಿಕ್ಷಣದಿಂದ ಪಡೆಯಬಹುದು. ಅದನ್ನರಿತ ಗುರುಗಳಿರಬೇಕು.
ಅವಿವೇಕತನದ. ಸಾಲದೆಡೆಗೆ ನಡೆದಿರುವ ರಾಜಕೀಯತೆಗೆ ಜನಬಲ ಹಣಬಲ ಅಧಿಕಾರಬಲವೇನೂ ಇದೆ ಆದರೆ ನ್ಯಾಯ ನೀತಿ ಸಂಸ್ಕೃತಿ , ಸಂಪ್ರದಾಯ,ಆಚಾರ ವಿಚಾರಗಳು ಪ್ರಚಾರಕ್ಕೆ ಸೀಮಿತವಾಗಿ ಪ್ರಚಾರಕರಾದ ಮಧ್ಯವರ್ತಿಗಳು ಮಾಧ್ಯಮಗಳಲ್ಲಿಯೇ ಮರೆಯಾಗುತ್ತಿರುವುದು ಭಾರತೀಯರ ಸಮಸ್ಯೆಗೆ ಕಾರಣ.
ಮಧ್ಯದಿಂದ ಮುಂದೆ ನಡೆದರೆ ಉತ್ತಮ. ಇಲ್ಲಿ ಮುಂದೆ ಅಂದರೆ ಸತ್ಯ ಧರ್ಮದ ಕಡೆಗೆ ಆದರೆ ಅಸತ್ಯ ಅಧರ್ಮಕ್ಕೆ ಸಹಕಾರ ಕೊಟ್ಟು ಮುಂದೆ ಹೋದರೆ ಹಣ ಗಳಿಸಿದರೂ ಒಮ್ಮೆ ಎಲ್ಲಾ ಕೊಟ್ಟು ಹೋಗಲೇಬೇಕು. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂದಂತೆ ಸತ್ಪಾತ್ರರಿಗೆ ದಾನ ಧರ್ಮ ಮಾಡಿ ಹೋದರೆ ಜ್ಞಾನ ಅಪಾತ್ರರಿಗೆ ಬಿಟ್ಟು ಹೋದರೆ ಅಜ್ಞಾನ.
ಶಾಂತವಾಗಿದ್ದ ಮನಸ್ಸಿಗೆ ಕ್ರಾಂತಿಕಾರಕ ಸುದ್ದಿ ಹರಡಿದರೆ ಅಧ್ಯಾತ್ಮ ಸಾಧನೆ ಆಗೋದಿಲ್ಲ. ದ್ಯಾನದಿಂದ ಮಾತ್ರ ಆಂತರಿಕ ಶುದ್ದಿ ಎಂದರೆ ಇದು ಮನೆ ಮನೆಯೊಳಗೆ ಮಾಡಲು ಮಹಿಳೆ ಮಕ್ಕಳು ಮನೆಯೊಳಗೆ ಶಾಂತಿಯಿಂದ ಇರಬೇಕು.ಅಂತಹ ವಾತಾವರಣ ಸೃಷ್ಟಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹೊರಗಿನ ವ್ಯವಹಾರವೇ ಮುಖ್ಯವಾದವರು ಹಣಕ್ಕಾಗಿ ಮಹಿಳೆ ಮಕ್ಕಳನ್ನು ಹೊರಗೆಳೆದರೆ ಶಾಂತಿ ಹೇಗೆ ಸಿಗಬೇಕು? ಒಟ್ಟಿನಲ್ಲಿ ಮಾನವನಾದ ಮೇಲೆ ಏನೇನು ಕಂಡೆ ಎಂದರೆ ಸಾಯೋತನಕ ಸಂಸಾರದೊಳಗೆ ಗಂಡ ಗುಂಡಿ ಎನ್ನುವಂತಿದೆ. ಇದಕ್ಕೆ ಮಾನವರ ಸಹಕಾರವೇ ಕಾರಣ.ಒಳಗಿರುವ ದೈವಗುಣ ಅಸುರಿಗುಣಗಳನ್ನು ಅರ್ಥ ಮಾಡಿಕೊಳ್ಳಲು ಸೋತ ಮಾನವರಿಗೆ ಸಿಕ್ಕಿದ್ದು ಹೋರಾಟದ ಜೀವನ. ನಿಜ ಬದುಕೇ ಒಂದು ಹೋರಾಟ.ಇದು ಸತ್ಯ ಧರ್ಮದ ಪರವಿದ್ದರೆ ಶಾಂತಿ.ಇಲ್ಲವಾದರೆ ಕೇವಲ ಕ್ರಾಂತಿಯ ಅಶಾಂತಿ.
No comments:
Post a Comment