ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, May 23, 2023

ಸಾಲವೇ ಶೂಲ ಸಹಕಾರವೇ ಇದರ ಮೂಲ

ಸಾಲವೇ ಶೂಲ ಸಹಕಾರವೇ ಇದರ ಮೂಲ. ಇಲ್ಲಿ ಅಧ್ಯಾತ್ಮ ಹಾಗು ಭೌತಿಕದ ಋಣ=ಸಾಲ ಪದಕ್ಕೆ ಅರ್ಥ ತಿಳಿಯದೆ ಸಹಕಾರ ನೀಡಿದ ಪರಿಣಾಮ ಇಡೀ ದೇಶದ ಜನತೆ ಸಾಲಮಾಡಿಯಾದರೂ ತುಪ್ಪ ತಿನ್ನು ಎಂದು ಮುಂದೆ ನಡೆದರು ಇದಕ್ಕೆ ಕಾರಣವೇ ಪೋಷಕರ ಸಹಕಾರ,ಪ್ರಜೆಗಳ ಸಹಕಾರ ವಾದಾಗ ಇದನ್ನು ತೀರಿಸುವವರೆಗೂ ಆತ್ಮಕ್ಕೆ ಶಾಂತಿ ನೆಮ್ಮದಿ ಇಲ್ಲ. ಅಧ್ಯಾತ್ಮ ವಿಚಾರದಲ್ಲಿ ನಡೆದ  ರಾಜಕೀಯ ವು ಜನರ ಕಣ್ಣಿಗೆ ಕಾಣದೆ ಹೋಯಿತು, ಭೌತಿಕದಲ್ಲೂ  ಇದೇ ಮುಂದುವರಿದಾಗ  ಅದಕ್ಕೂ ಸಹಕಾರ ಸಿಕ್ಕಿತು. ಯಾರನ್ನು ಯಾರು ಆಳಬೇಕಿತ್ತು ಆಳುತ್ತಿದ್ದಾರೆ ಎಂದು ಈಗ ಪ್ರಜಾಪ್ರಭುತ್ವದ ಸಾಮಾನ್ಯ ಪ್ರಜೆಗಳಿಗೆ ಯೋಚನೆ ಮಾಡುವಷ್ಟು  ಸಮಯವಿಲ್ಲದೆ ಯಾರಾದರೂ ಆಳಲು ನನ್ನ ಜೀವನ ಸುಖವಾಗಿರಲಿ ಎನ್ನುವ ಮಟ್ಟಿಗೆ ಸ್ವಾರ್ಥ ಬೆಳೆದಿದೆ.ಸ್ವಾರ್ಥದಿಂದ  ಏನಾದರೂ ಸಾಧನೆ ಮಾಡಬಹುದಾದರೆ ಇದು ರಾಜಕೀಯವಷ್ಟೆ. ಮಾನವನ ಸಮಸ್ಯೆಗಳಿಗೆ  ಕಾರಣವೇ ಅಜ್ಞಾನ.ಸತ್ಯವಿಲ್ಲದ ಧರ್ಮ ,ಧರ್ಮ ವಿಲ್ಲದ ಸತ್ಯ  ಅತಂತ್ರಸ್ಥಿತಿಗೆ  ತಲುಪಿಸುವಕಾರಣ ಹಿಂದಿನ ಮಹಾತ್ಮರುಗಳು ಸತ್ಯವನರಿತು ಧರ್ಮ ರಕ್ಷಣೆ ಮಾಡಲು ತತ್ವಜ್ಞಾನದೆಡೆಗೆ ನಡೆದಿದ್ದರು.
ತತ್ವದ ಪ್ರಕಾರ ಅದ್ವೈತ ವಿಶಿಷ್ಟಾದ್ವೈತ ದ್ವೈತವನ್ನು  ಎಲ್ಲಾ ಒಂದೇ ಶಕ್ತಿಯ ಪ್ರತಿಬಿಂಬಗಳೆಂದು ತಿಳಿದಾಗಲೇ  ಏಕತೆ ಸಮಾನತೆ,ಐಕ್ಯತೆ ಒಗ್ಗಟ್ಟು  ಹೆಚ್ಚುವುದು.ಇದಕ್ಕೆ ಸಹಕಾರ ನೀಡದೆ ಬಿನ್ನತೆಗೆ ಸಹಕಾರಕೊಟ್ಟು ಇದ್ದ ಜ್ಞಾನಕ್ಕೆ ಸರಿಯಾದ ಶಿಕ್ಷಣ ನೀಡದೆ  ಒಂದು ಕಡೆ ಧರ್ಮ ಬೇರೆ ರಾಜಕೀಯ ಬೇರೆ ಎಂದರೆ ಇನ್ನೊಂದು ಕಡೆ  ರಾಜಕೀಯದೊಳಗೇ ಧರ್ಮ ಸೇರಿಕೊಂಡು ಹೊರಗೆ ಬರಲಾರದ‌ ಪರಿಸ್ಥಿತಿ ಭಾರತದಲ್ಲಿದೆ.
ತಾವೇ ಸ್ವತಂತ್ರರಾಗಿಲ್ಲದಿರುವಾಗ  ಬೇರೆಯವರಿಗೆ ಸ್ವತಂತ್ರ ನೀಡಲು  ಸಾಧ್ಯವಿಲ್ಲವಾಗಿ  ಪ್ರಜಾಪ್ರಭುತ್ವದ  ದುರ್ಭಳಕೆ ಆಗಿರುವುದಕ್ಕೆ ನಮ್ಮದೇ ಸಹಕಾರವಿದೆ ಎಂದರ್ಥ.
 ದೇವರು ಇರೋದೆಲ್ಲಿ?
 ರಾಜನೇ ದೇವರಾದರೆ ಪ್ರಜಾಪ್ರಭುತ್ವದಲ್ಲಿ ರಾಜನೆಲ್ಲಿ?
ಪರಮಾತ್ಮನ  ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿ ಅಲ್ಲಾಡದು ಎಂದರೆ ಈಗ ನಡೆದಿರೋದೆಲ್ಲವೂ ಪರಮಾತ್ಮನ ಇಚ್ಚೆಯೆ ಆದಾಗ ಹೋರಾಟ ಯಾಕೆ,ದ್ವೇಷ ಯಾಕೆ,ವ್ಯವಹಾರ ಯಾಕೆ?
"ವಿನಾಶಕಾಲೇ ವಿಪರೀತ ಬುದ್ದಿ"
ಸುಮ್ಮನೆ ಇರಲಾಗದಿದ್ದರೆ ಕೊನೆಪಕ್ಷ ಸತ್ಯಕ್ಕೆ ಸಹಕಾರ ನೀಡಲು ಧಾರ್ಮಿಕ ಕ್ಷೇತ್ರ  ಯಾಕೆ ಮುಂದುವರಿಯುತ್ತಿಲ್ಲ?
ಒಂದೇ ದೇಶವನ್ನು ಹಲವಾರು ಪಕ್ಷಗಳು ಆಳುವುದಕ್ಕೆ ಸಹಕಾರವಿದೆ ಆದರೆ ದೇಶ ಒಂದು ಮಾಡುವ ತತ್ವಕ್ಕೆ ಸಹಕಾರವಿಲ್ಲವಾದರೆ ಧರ್ಮ  ಯಾವುದು? ರಾಜಕೀಯ ಎಲ್ಲಿದೆ?
ಅಸಂಖ್ಯಾತ ದೇವಾನುದೇವತೆಗಳು ಭೂಮಿಯನ್ನು ಕಾಪಾಡುತ್ತಾರೆಂದ ಮೇಲೆ ಅಸುರರ ಸಂಖ್ಯೆ ಹೇಗೆ ಬೆಳೆಯಿತು? ಇದಕ್ಕೆ ಕಾರಣ ದೇವರ ಹೆಸರಿನಲ್ಲಿ ವ್ಯವಹಾರಕ್ಕೆ ಇಳಿದವರು ಅಸುರರ ಪಕ್ಷ ಸೇರಿದ್ದಾರೆ. ಇಲ್ಲಿ ಮಾನವನೊಳಗೆ ಅಡಗಿರುವ ದೈವ ಗುಣ ಅಸುರ ಗುಣವೇ ದೇವಾಸುರರ ಶಕ್ತಿ. ಯಾರಿಗೆ ಹೆಚ್ಚು ಸಹಕಾರ ಸಿಗುವುದೋ ಆ ಶಕ್ತಿ ಬೆಳೆಯುವುದು. 
ಇನ್ನೊಬ್ಬ ರನ್ನು ಆಳುವುದಕ್ಕಾಗಿ ತನ್ನ ತಾನರಿಯದವರು ಮುಂದೆ ನಡೆದು ಹಣ,ಅಧಿಕಾರ,ಸ್ಥಾನಮಾನ ಸನ್ಮಾನ ಪದವಿ,ಪಟ್ಟ ಪಡೆದರೂ  ಎಲ್ಲರೊಳಗಿರುವ ಆ ಪರಮಾತ್ಮನ ದೃಷ್ಟಿಯಿಂದ  ಇದೊಂದು  ಭ್ರಷ್ಟಾಚಾರ. ಇದರಲ್ಲಿ ಸತ್ಯವೂ ಇಲ್ಲ ಧರ್ಮ ವೂ ಇಲ್ಲದ ಮೇಲೆ  ದೇವರನ್ನು ಆಳಲು ಸಾಧ್ಯವೆ?  ಅಜ್ಞಾನದ ಅಂಧಕಾರದಲ್ಲಿ  ಜನರನ್ನು ಬಳಸಿ ತಾನೇ ದೇವರು, ರಾಜನೆನ್ನುವುದು ಪುರಾಣ ಕಥೆಯಲ್ಲಿ ಅಸುರರ ಲಕ್ಷಣ ಎಂದಿರುವಾಗ  ಈಗಿನ ಪ್ರಜಾಪ್ರಭುತ್ವದಲ್ಲಿ
ಪ್ರಜೆಗಳಿಗೆ ಕೊಡಬೇಕಾದ ಜ್ಞಾನದ ಶಿಕ್ಷಣ ನೀಡದೆ ಅಜ್ಞಾನದ ಶಿಕ್ಷಣವನ್ನು  ನೇರವಾಗಿ ಕೊಟ್ಟು ಸಾಲ ಬೆಳೆಸುತ್ತಾ ವಿದೇಶಿ ಸಾಲ ತಂದು ದೇಶ‌ನಡೆಸಲು ಹೋಗುವವರಿಗೆ ಬಹಳಷ್ಟು ಗೌರವ, ಸಹಕಾರವಿದೆ ಎಂದರೆ ಎತ್ತ ಸಾಗುತ್ತಿದೆ  ದೇಶ..
ಸಾಲ ಮಾಡಿ‌ಕೆಟ್ಟ,ಸಾಲವೇ ಶೂಲ ಎಂದರು ಮಹಾತ್ಮರು.
ಭೂಮಿಯ ಋಣ ತೀರಿಸಲು ಭೂ ಸೇವೆ, ದೇಶದ ಋಣ ತೀರಿಸಲು ದೇಶಸೇವೆ, ತಾಯಿಯ ಋಣ ತೀರಿಸಲು ತಾಯಿಸೇವೆ ಹೀಗೇ ತಂದೆ ಬಂಧು ಬಳಗ,ಸ್ವೇಹಿತರು... ಎಂಬ ಸಂಬಂಧ  ಜೋಡಣೆಯಾಯಿತು.ಜೋಡಿಸಿದ ತತ್ವ ಬಿಟ್ಟು ಅದರಲ್ಲಿ ತಂತ್ರ ಬೆರೆಸಿ ಆಳಲು ಹೊರಟವರಿಗೆ ಸಹಕಾರ ಹೆಚ್ಚಾದ ಕಾರಣ ಇಂದು ಮನೆಯೊಳಗೆ  ಹೊಂದಿಬಾಳುವ  ಜನಸಂಖ್ಯೆ ವಿರಳವಾಗುತ್ತಿದೆ. ಆದರೆ ಹೊರಗಿನ ರಾಜಕೀಯಕ್ಕೆ ಹೆಚ್ಚಿನ ಸಹಕಾರವಿದೆ. ಮನೆಯೊಳಗೆ ಸಾಲದ ಹೊರೆ ಇರೋವಾಗ ದೇಶದ ಸಾಲ ತೀರಿಸಲಾಗದು.ಎಲ್ಲಾ ವಿಜ್ಞಾನಯುಗದ ಪ್ರಭಾವವಷ್ಟೆ. ವಿಜ್ಞಾನವನ್ನು ಅಧ್ಯಾತ್ಮ ದ ಪ್ರಕಾರ ವಿಶೇಷವಾಗಿ ತಿಳಿಯಲು ಉತ್ತಮ ಗುರು ಹಿರಿಯರ ಆಶೀರ್ವಾದ ಸಹಕಾರ,ಸಹಾಯವಿದ್ದರೆ ಆತ್ಮನಿರ್ಭರ ಭಾರತ. ಅದೇ ಇಲ್ಲದೆ ಅಂತಹ ಶಿಕ್ಷಣವೇ ನೀಡದೆ ಸ್ತ್ರೀ ಯನ್ನು, ಭೂಮಿಯನ್ನು, ದೇಶ ರಾಜ್ಯವನ್ನು  ಆಳಲು ಹೋದರೆ  ಅಧರ್ಮ ವಾಗುತ್ತದೆ. ಈಗಲೂ  ಪ್ರಜೆಗಳಿಗೆ ಸ್ವಾತಂತ್ರ್ಯ ವಿದೆ.ಸ್ವತಂತ್ರ ಜ್ಞಾನವಿದೆ.ಸಾಮಾನ್ಯಪ್ರಜೆಯಾಗಿ ದೇಶವನ್ನು  ಧರ್ಮದ ದೃಷ್ಟಿಯಿಂದ ನೋಡುವ ಜ್ಞಾನವಿದೆ.
ಅಧಿಕಾರ,ಹಣ,ಸ್ಥಾನಮಾನ ಇದ್ದವರಿಗೆ ಈ ಸತ್ಯ ಅರ್ಥ ಆಗಿದ್ದರೆ  ತಮಗೆ ಇವೆಲ್ಲವೂ ಕೊಟ್ಟು ಸಹಕಾರ ನೀಡಿದ ಪ್ರಜೆಗಳಿಗೆ‌ನಾವೇನು ಕೊಟ್ಟಿದ್ದೇವೆ? ಕೊಡಬಹುದು? ಎನ್ನುವ ಬಗ್ಗೆ ಚಿಂತನೆ ನಡೆಸಬಹುದು.
ಇದೊಂದು  ಪ್ರಜಾಪ್ರಭುತ್ವ ದೇಶ.ಇಲ್ಲಿ ಪ್ರತಿಯೊಂದು ಪ್ರಜಾ ಸಹಕಾರದಿಂದ ನಡೆಯುತ್ತದೆ. ಯಾವಾಗ ಪ್ರಜೆಗಳಲ್ಲಿ ಅಜ್ಞಾನ ಹೆಚ್ಚುವುದೋ ದೇಶವೇ ವಿದೇಶವಾಗುತ್ತದೆ.ವಿದೇಶದವರಿಗೆ ಭೂಮಿ ಭೋಗದ ವಸ್ತು.ಆದರೆ ಭಾರತ  ಪವಿತ್ರವಾದ  ಧಾರ್ಮಿಕ ಭೂಮಿ ಎಂಬ  ಜ್ಞಾನ  ಪಡೆಯಲು ಯೋಗ್ಯ ಯೋಗದ ಶಿಕ್ಷಣ ಬೇಕು.
ಎಷ್ಟು ಪ್ರಜೆಗಳು ಇಂತಹ ಶಿಕ್ಷಣ ಮಕ್ಕಳಿಗೂ ಕೊಟ್ಟು ಬೆಳೆಸಲು ಸಾಧ್ಯವಾಗಿದೆ? ಈ ಧರ್ಮದ ಕೆಲಸಕ್ಕೆ ಎಷ್ಟು ಜನಬಲ ಸಿಕ್ಕಿದೆ? ಕೊಟ್ಟರೂ  ಅದರಲ್ಲಿ ಎಷ್ಟು ಜನರಿಗೆ ದೇಶ ಕಾಣುತ್ತಿದೆ? ಸಾಲದ ಹಣದಲ್ಲಿ ಭ್ರಷ್ಟಾಚಾರದ ಹಣದಲ್ಲಿ ಸರ್ಕಾರದ ಹಣದಲ್ಲಿ ಮಕ್ಕಳಿಗೆ ಭೋಗದ ಜೀವನ ತೋರಿಸಿ ಯೋಗದ ಕಡೆಗೆ  ಎಳೆಯಲಾಗದು. ಹೀಗಾಗಿ  ಸಾಧ್ಯವಾದರೆ
ಮೊದಲು ಪೋಷಕರ ಸಹಕಾರ  ಧರ್ಮ ಜ್ಞಾನಕ್ಕೆ ಸಿಕ್ಕರೆ ಉತ್ತಮ ಬದಲಾವಣೆ.ಇದರಲ್ಲಿ ಯಾವ ರಾಜಕೀಯ ದ್ವೇಷ,ಅಸೂಯೆ,ಭಿನ್ನಾಭಿಪ್ರಾಯ, ಕಲಹ,ಕ್ರಾಂತಿ ಇಲ್ಲದೆ‌  ಆತ್ಮಾವಲೋಕನ ದಿಂದ ತಮ್ಮನ್ನು ತಾವು ತಿದ್ದಿಕೊಂಡು ಮಕ್ಕಳಲ್ಲಿರುವ‌ ಅಮೃತಜ್ಞಾನವನ್ನು ಬೆಳೆಸಿದರೆ ಅದೇ ಧರ್ಮ.
ಯಾರಿಗೆಗೊತ್ತು ಯಾರೊಳಗೆ ಯಾವ ದೇವಾಸುರರು ಇರುವರೋ .ಒಟ್ಟಿನಲ್ಲಿ ಮಾನವನೊಳಗಿನ ಅಸುರಿ ಗುಣಕ್ಕೆ ಸಿಕ್ಕಿರುವ ಸಹಕಾರ ದೈವಗುಣಕ್ಕೆ ಸಿಗದೆ ಭೂಮಿಯಲ್ಲಿ ಅಸುರಿ ಶಕ್ತಿ‌ಮಿತಿಮೀರಿ ಬೆಳೆದಿದೆ. ಈಗಲೂ ದೇವರನ್ನು ಹೊರಗೆಳೆದು ವ್ಯವಹಾರ ನಡೆಸಿ ಹಣ ಅಧಿಕಾರ,ಸ್ಥಾನಮಾನಕ್ಕೆ ರಾಜಕೀಯ‌ನಡೆಸುತ್ತಿದ್ದರೆ ಮುಂದೆ ಅದೇ ತಿರುಗಿ ಹೊಡೆಯುವಾಗ ಯಾವುದೇ ಜನರಸಹಕಾರ ಇಲ್ಲದೆ ಜೀವ ಹೋಗುತ್ತದೆ. ಎಲ್ಲಾ ಕಡೆ ಇರುವ‌ಜೀವಕ್ಕೂ ತನ್ನದೇ ಆದ ಅಸ್ತಿತ್ವ ಇದೆ. ಅದರಲ್ಲೂ ವಿಶೇಷಜ್ಞಾನದ ಮಾನವನಿಗೆ ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸುವುದು ಧರ್ಮ. ತನ್ನ ಆತ್ಮವಂಚನೆ ತಾನೇ‌ಮಾಡಿಕೊಂಡರೆ ಇದಕ್ಕೆ ಸರ್ಕಾರ ಹೊಣೆಯಾಗದು. ನಮ್ಮದೇ ಸಹಕಾರವೇ ಕಾರಣ. ಹೀಗಾಗಿ  ಮಾನವನಾಗಿದ್ದು ಸಾಮಾನ್ಯಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ವಿಶೇಷವಾಗಿರುವ ಆತ್ಮಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಮಹಾತ್ಮರ ತತ್ವವರಿತು ಅವರ ನಡೆ ನುಡಿಯಲ್ಲಿದ್ದ ಸ್ವತಂತ್ರ ಜ್ಞಾನವನ್ನು  ತಿಳಿದು ಮಕ್ಕಳಿಗೂ ಶಿಕ್ಷಣ ನೀಡುತ್ತಾ  ಗುರುಹಿರಿಯಾದವರು ಪೋಷಕರಾದವರು ಸಹಕಾರ ನೀಡಿದರೆ ಭಾರತವು ಸ್ವತಂತ್ರ ವಾಗಲು ಸಾಧ್ಯ. ಇವಿಲ್ಲದೆ ಹೊರಗಿನ‌ಪಕ್ಷಪಾತಕ್ಕೆ ಸಹಕಾರ ನೀಡಿ,ದೇವರನ್ನು ವ್ಯವಹಾರಕ್ಕೆ ಬಳಸಿ ತಾವೂ ಹಣ,ಅಧಿಕಾರ, ಸ್ಥಾನಕ್ಕಾಗಿ ಭ್ರಷ್ಟಾಚಾರ ಬೆಳೆಸಿದರೆ ಬೇಲಿಯೇ ಎದ್ದು ಹೊಲಮೇಯ್ದಂತೆ.
ಕಲಿಗಾಲದಲ್ಲಿ  ಇದನ್ನು ಅಜ್ಞಾನದ ಅಧರ್ಮ ಎನ್ನುವರು.
ಇದಕ್ಕೆ ಸಹಕಾರ ಸಿಕ್ಕಿದರೆ  ಮನುಕುಲಕ್ಕೆ ಅಪಾಯ.ಇಲ್ಲಿ ಯಾವ ವ್ಯಕ್ತಿಯನ್ನು  ಉದ್ದೇಶಿಸಿ ವಿಚಾರ ತಿಳಿಸಿಲ್ಲವಾದರೂ ವ್ಯಕ್ತಿಯೊಳಗಿನ ಶಕ್ತಿ ಯಾವ ರೀತಿಯಲ್ಲಿ ಆಟವಾಡಿಸಿ ಆಳುತ್ತಿದೆ ಎಂದು ನಾವೇ ನಮ್ಮಲ್ಲಿ,ನಮ್ಮವರಲ್ಲಿ ಕಾಣಬಹುದು. ಪರರನ್ನು ಪ್ರೀತಿಸುವುದು ತಪ್ಪಲ್ಲ ನಮ್ಮವರನ್ನೇ ದ್ವೇಷ ಮಾಡುವುದು ತಪ್ಪು. ಅದೂ ಸತ್ಯ ಧರ್ಮ  ವಿರೋಧಿಸಿ ನಮ್ಮವರನ್ನೇ ಆಳುವುದು ಅಧರ್ಮ.
ಇದಕ್ಕೆ ತಿಳಿದೋ ತಿಳಿಯದೆಯೋ ಸಹಕಾರ ಕೊಡುತ್ತಿರುವ ಪ್ರಜೆಗಳೇ ದೇಶದ ಈ ಪರಿಸ್ಥಿತಿಗೆ ಕಾರಣವಾದಾಗ  ಅದಕ್ಕೆ ತಕ್ಕಂತೆ ಪ್ರಕೃತಿ ವಿಕೋಪ, ರೋಗ,ಭ್ರಷ್ಟಾಚಾರ, ಅಸುರರ ಬಲ ಪ್ರಯೋಗ, ಅಧರ್ಮದ  ಬೆಳವಣಿಗೆ ಆಗಿದೆ. ಇದನ್ನು ಹೊರಗಿನ ಸರ್ಕಾರದ ಹಣವಾಗಲಿ,ಸಾಲವಾಗಲಿ ಸರಿಪಡಿಸಲಾಗದು.ಒಳಗಿನ ಶಿಕ್ಷಣದಲ್ಲಿ ಸತ್ಯಜ್ಞಾನ ಬೇಕಿದೆ.
ಸತ್ಯವೇ ತಿಳಿಯದವರು ಶಿಕ್ಷಣ ನೀಡಿದರೆ  ಸತ್ಯವೇ ದೇವರಾಗಲು ಸಾಧ್ಯವಿಲ್ಲ.ಮಿಥ್ಯದ ವಿಜ್ಞಾನ ಸತ್ಯದ ಜ್ಞಾನದ ನಡುವಿರುವ ಮಾನವನಿಗೆ ಸಾಮಾನ್ಯಜ್ಞಾನ ಅಗತ್ಯವಿದೆ.
ಜನನ ಮರಣವನ್ನು ಮಾನವ ತಡೆಯಲಾಗದು.ಆದರೆ ಜೀವನದ ಉದ್ದೇಶ ತಿಳಿಯಬಹುದು. ಭೂ ಗ್ರಹವನ್ನು ಅರ್ಥ ಮಾಡಿಕೊಂಡು ಮೇಲಿರುವ ಗ್ರಹ ತಿಳಿಯಬೇಕು.ಕಾರಣ ಭೂಮಿಯಿಲ್ಲದೆ ಮನುಕುಲವೇ ಇಲ್ಲ. ಅಲ್ಪ ಆಯಸ್ಸು ಅಲ್ಪ ಜ್ಞಾನ ಪಡೆದೇ ಇಷ್ಟು  ಮೆರೆದಾಡುವ ಮಾನವನಿಗೆ ಸತ್ಯ ತಿಳಿದರೆ  ಹೇಗಿರಬಹುದು ಜೀವನ? ಅಹಂಕಾರ ಸ್ವಾರ್ಥ ವೇ ಮಾನವನ ನಿಜವಾದ ಶತ್ರುಗಳು.ಇದು ಅತಿಯಾದರೆ ಜೀವನ ವ್ಯರ್ಥ ವೆಂದಿದ್ದಾರೆ ನಮ್ಮ ಮಹಾತ್ಮರುಗಳು. 
ಎಷ್ಟು ಭೂಮಿಯನ್ನು  ಸ್ತ್ರೀ ಶಕ್ತಿಯನ್ನು    ದುರ್ಭಳಕೆ ಮಾಡಿಕೊಂಡು  ಭೌತಿಕದಲ್ಲಿ ಸುಖ ಪಡುವನೋ ಅಷ್ಟೇ ಸಾಲ ಬೆಳೆದು ರೋಗ ಹರಡಿಕೊಂಡು  ಜೀವ ಹೋಗುತ್ತದೆ. ಅದಕ್ಕಾಗಿ ಜ್ಞಾನ ಸಂಪಾದನೆಗೆ ಹೆಚ್ಚು ಶ್ರಮಪಟ್ಟು ದುಡಿದು ತನ್ನ ಭೂ ಋಣ ತೀರಿಸಲು ಯೋಗಿಗಳಾದವರು ಅಧ್ಯಾತ್ಮ ಸಾಧನೆಕಡೆಗೆ ನಡೆದಿದ್ದರು.ಈಗ ಎಲ್ಲಾ ರೆಡಿಮೇಡ್ ಜಗತ್ತು. ಹಿಂದಿನವರ  ಜ್ಞಾನ ಪ್ರಚಾರದಲ್ಲಿದ್ದರೂ ಹೊರಗಿನಿಂದ ಬಂದ  ಶಿಕ್ಷಣದಲ್ಲಿಯೇ ಜ್ಞಾನವಿಲ್ಲದೆ ಮಾನವ ಹೊರಗಿನ ರಾಜಕೀಯಕ್ಕೆ ನೀಡುವ ಸಹಕಾರ ಒಳಗಿರುವ ರಾಜಯೋಗಕ್ಕೆ ನೀಡಲಾಗದೆ ಸೋತಿರುವುದು ಸಾಲ ಬೆಳೆಯುವಂತೆ ಮಾಡಿದೆ. ಸತ್ಯವಿಲ್ಲದ ಧರ್ಮ ಕುಂಟುತ್ತಿದೆ
ಧರ್ಮ ವಿಲ್ಲದ ಭೌತಿಕ ಸತ್ಯ ಕುರುಡರನ್ನು ಬೆಳೆಸುತ್ತಿದೆ.
ಆಳಲು ಹೊರಟವರೆ ಆಳಾಗಿ ಹಾಳಾಗಿ ಹೋಗುತ್ತಿದ್ದರೆ ಜೀವದ  ಅಧೋಗತಿ. ಎಲ್ಲಿರುವರು ಮಹಾತ್ಮರುಗಳು? ಒಳಗೋ ಹೊರಗೋ? ಸಾಲ  ತೀರಿಸಲು ಸುಜ್ಞಾನದಿಂದ ಸಾಧ್ಯವಿದೆ. ಸುಶಿಕ್ಷಣದ ಕೊರತೆಯಿದೆ. ಮನೆಯೊಳಗೆ ಕೊಟ್ಟರೆ ಬದಲಾವಣೆ ಸಾಧ್ಯವಿದೆ. ಎಲ್ಲರಲ್ಲಿಯೂ ಅಡಗಿರುವ  ಮಹಾ ಆತ್ಮಶಕ್ತಿಯನ್ನು  ಅಧ್ಯಾತ್ಮ ದಿಂದ  ಬೆಳೆಸಿಕೊಳ್ಳಲು ಸ್ವಪ್ರಯತ್ನ ಅಗತ್ಯವಿದೆ.ಇದಕ್ಕೆ ಸರ್ಕಾರದ ಹಣ ಸಾಲ ವಿದೇಶದ ಬಂಡವಾಳದ ಅಗತ್ಯವಿರಲಿಲ್ಲ. 
ದಾಸ ಶರಣರಂತೆ ಪರಮಾತ್ಮನಿಗೆ  ಶರಣಾಗಲು ಸತ್ಯಜ್ಞಾನ ಧರ್ಮ ಜ್ಞಾನವೇ ಬಂಡವಾಳವಾಗಿದೆ. ದಾನಧರ್ಮ ಕಾರ್ಯ ಶಿಷ್ಟಾಚಾರದಿಂದ ಸಂಪಾದಿಸಿದ ಹಣದಲ್ಲಿ ನಡೆಸಿದಾಗಲೇ ಆತ್ಮನಿರ್ಭರ ಭಾರತ ಸಾಧ್ಯ.

No comments:

Post a Comment