ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, May 16, 2023

ಮಾನವ ಯಾರನ್ನೂ ಅಜ್ಞಾನದಿಂದ ಆಳಬಾರದು

ಮಾನವರೂಪದಲ್ಲಿ ಬಂದ ನಮ್ಮ ಅನೇಕ ಮಹಾತ್ಮರುಗಳು ಯಾವುದೇ ಅಸತ್ಯ ಅಧರ್ಮ, ಅನ್ಯಾಯವನ್ನು  ಪುರಸ್ಕಾರ ಮಾಡದೆ  ತಮ್ಮ ಆತ್ಮಾನುಸಾರ ನಡೆದು ಪರಮಾತ್ಮನ ದರ್ಶನ ಮಾಡಿಕೊಂಡರು. ಇದು ಭಾರತೀಯ ತತ್ವಜ್ಞಾನದ ಉದ್ದೇಶವೂ ಆಗಿತ್ತು ಆಗಿದೆ ಆಗಿರುತ್ತದೆ. ಈಗಿನ ಪರಿಸ್ಥಿತಿಗೆ ಕಾರಣವೇ ಈ ತತ್ವವನ್ನು ತಂತ್ರವಾಗಿ ಬಳಸುತ್ತಾ ಜನರಲ್ಲಿದ್ದ ಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಲಕ್ಷ ಸಂಪಾದನೆಗೆ ತಾವೇ ತಂತ್ರಜ್ಞಾನಕ್ಕೆ ಸಹಕರಿಸಿರುವುದೆಂದರೆ  ಯಾರಾದರೂ ಒಪ್ಪಲು ಸಾಧ್ಯವೆ? ಸತ್ಯ ಒಂದೇ  ಅದನ್ನು ಎಷ್ಟೇ ತಿರುಚಿದರು ಮೂಲ ಒಂದೇ ಇರೋದು. ಮಹಾತ್ಮರುಗಳು ಅಸಂಖ್ಯಾತ ದೇವಾನುದೇವತೆಗಳಲ್ಲಿದ್ದ ತತ್ವವನ್ನು ಅರ್ಥ ಮಾಡಿಕೊಂಡು ಬದುಕಲು ತಿಳಿಸಿದ್ದರು.ಅವರನ್ನು ಆಳಲು ತಿಳಿಸಿರಲಿಲ್ಲ.ಇಲ್ಲಿ ಪ್ರಜಾಪ್ರಭುತ್ವದ ದೇಶವಿದೆ.ಪ್ರಜೆಗಳೇ ದೇವರಾಗಿದ್ದರೆ ಅವರ ಒಳಗಿರುವ ದೈವತ್ವಕ್ಕೆ ಪೂರಕವಾದ ಶಿಕ್ಷಣ ನೀಡುವುದು ಧರ್ಮ. ಅದನ್ನು ಬಿಟ್ಟು  ಅವರನ್ನೇ ಆಳಲು ಹೊರಟರೆ ದುಷ್ಕರ್ಮ ವಾಗಿ ದುಷ್ಟರು ಬೆಳೆಯುವರಷ್ಟೆ.ಕರ್ಮಕ್ಕೆ ತಕ್ಕಂತೆ ಫಲವಿದೆ ಎಂದರೆ ದುಷ್ಟರು ಬೆಳೆದಿರೋದೆ ಅಜ್ಞಾನದಿಂದ. ಅವರ ಅಜ್ಞಾನ ನೋಡಿಯೂ  ಅವರಿಗೆ ಸರಿಯಾದ ಶಿಕ್ಷಣ ಕೊಡದೆ ಬಡವರೆಂದು ಆಳಿದರೆ ಎಲ್ಲಿದೆ ಧರ್ಮ?
ಎಲ್ಲಾ ಪಕ್ಷಳಿಗೂ ಅಧಿಕಾರದ ದಾಹವಿದೆ.ಎಲ್ಲರಿಗೂ ಜನರನ್ನು ಆಳುವ ಆಸೆಯಿದೆ.ಹಾಗಾದರೆ ಪ್ರಜಾಪ್ರಭುತ್ವ ಕ್ಕೆ ಅರ್ಥ ವಿದೆಯೆ? ಮೊದಲು ಬಹಳ ಪ್ರತಿಷ್ಠಿತ ಪ್ರಜೆಗಳು ಈ ವಿಚಾರದ ಬಗ್ಗೆ ಗಮನಕೊಟ್ಟರೆ ನಾವಿರುವ  ನೆಲದ ಋಣ ಜಲದ ಋಣ ಹಾಗು ನಮ್ಮ ಹಿಂದಿನವರ ಋಣ ತೀರಿಸಲು ನಾವೇನು ಮಾಡಿದ್ದೇವೆ? ಸೇವೆ ಯಾರಿಗೆ ಮಾಡಿದ್ದೇವೆ ಅಥವಾ ಮಾಡಿಸಿಕೊಂಡಿದ್ದೇವೆ? ಇದರಿಂದ ಋಣ ತೀರಿಸಲು ಸಾಧ್ಯವೆ? ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನೂ ಬಿಡದೆ ರಾಜಕೀಯಕ್ಕೆ ಎಳೆದುಕೊಂಡು ವಿದೇಶಿಗರನ್ನು ದೇಶಕ್ಕೆ ಕರೆತಂದು  ದೇಶ ಉದ್ದಾರ ಮಾಡಲು ಹಾಕಿದ ಯೋಜನೆಯು ಬಡವರನ್ನು ಬೆಳೆಸಿತೆ ಶ್ರೀಮಂತ ರನ್ನು ಬೆಳೆಸಿತೆ? ಅಜ್ಞಾನಕ್ಕೆ ಮದ್ದು ಜ್ಞಾನದ ಶಿಕ್ಷಣವಾಗಿತ್ತು.ಇದನ್ನು ಧಾರ್ಮಿಕ ವರ್ಗ ಕೊಡುವುದು ಧರ್ಮ ವಾದರೂ ಅದನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ವಿದೇಶಿ ಶಿಕ್ಷಣ ಬೆಳೆಸಿದ ಸರ್ಕಾರದಿಂದ ಸಿಕ್ಕಿದ್ದು ಚಿಪ್ಪು.
ಈ ಭೂಮಿಗೆ ಬಂದ ಪ್ರತಿ ಜೀವಿಗೂ ತನ್ನದೇ ಆದ ಅಸ್ತಿತ್ವ ಇದೆ. ಆದರೆ ಮಾನವನಿಗೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ  ಜೀವ ಹೋಗುತ್ತಿದೆ ಎಂದರೆ ಇಲ್ಲಿ ಕೇವಲ ರಾಜಕೀಯಕ್ಕೆ ಬೆಲೆಯಿದೆ.
ಸ್ವಾತಂತ್ರ್ಯ ಪೂರ್ವ ದ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರವು ಭಾರತವನ್ನು  ಭೋಗದ ದೇಶವೆಂದು ಪರಿಗಣಿಸಿ ಎಲ್ಲಾ ಭೌತಿಕ ಸಂಪತ್ತನ್ನು ಲೂಟಿ ಮಾಡುತ್ತಾ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡು ಮೆರೆಯಿತು. ಈಗಲೂ ಅದೇ ರೀತಿಯಲ್ಲಿ ಜನರನ್ನು ಮನರಂಜನೆಯ ವಸ್ತುವಾಗಿಸಿಕೊಂಡು ಮೆರೆಯುವವರ ಹಿಂದೆ ನಡೆದಿರೋದು ದುರಂತ ವಷ್ಟೆ.ಇಲ್ಲಿ ಯಾರನ್ನೂ ನೇರವಾಗಿ ತಪ್ಪಿತಸ್ಥ ರೆಂದರೆ  ಸತ್ಯವಾಗದು.ಕಾರಣ ಜನಬಲ ಹಣಬಲ ಅಧಿಕಾರಬಲ ಇದ್ದರೆ ಮಾನವನಿಗೆ ಅಜ್ಞಾನವೇ ಬಲ. ಇದು ತನ್ನ ಆತ್ಮವಂಚನೆಗೆ ಕಾರಣವಾದಾಗ  ಇದನ್ನು ಸಾಧನೆ ಎಂದರೆ ಸರಿಯೆ?
ಅಧ್ಯಾತ್ಮ ಸಾಧನೆ ಭೌತಿಕ ಸಾಧನೆಯ ಅಂತರದಲ್ಲಿ ನಿಂತಿರುವ ಮಾನವನಿಗೆ ದೈವಗುಣ ಅಸುರಗುಣದ ಬಗ್ಗೆ ಸರಿಯಾದ ಅರಿವಿಲ್ಲದೆ ಪರಿಸ್ಥಿತಿ ಹದಗೆಟ್ಟಿದೆ. ಯಾರದ್ದೋ ದುಡ್ಡಿನಲ್ಲಿ ರಾಜಕೀಯ ನಡೆಸುವುದಕ್ಕೂ, ತನ್ನದೇ ಪರಿಶ್ರಮದಿಂದ   ಸಾತ್ವಿಕ ಹಣಗಳಿಸಿ ದಾನ ಧರ್ಮ ಕಾರ್ಯ ನಡೆಸಿ ಜನರನ್ನು ಸನ್ಮಾರ್ಗದಲ್ಲಿ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಜ, ಇಂದು ಸತ್ಯ ಧರ್ಮ ದಲ್ಲಿ ಸ್ವತಂತ್ರವಾಗಿ ನಡೆಯುವುದು ಕಷ್ಟ. ಹೀಗಾಗಿ  ಹಣವಿದ್ದರೆ ಮಾತ್ರ ಜನರು ನಮ್ಮ ಮಾತನ್ನು ಕೇಳಿಸಿಕೊಂಡು  ಸತ್ಯ ತಿಳಿಯಬಹುದು.
 ಹಾಗಂತ ಜನರಿಗೆ ಉತ್ತಮ ಶಿಕ್ಷಣವೇ ನೀಡದೆ ಸತ್ಯ ತಿಳಿಸಿದರೆ  ಹಾಗೆ ನಡೆಯುವ ದಾರಿಯೇ ಮುಚ್ಚಿರುವಾಗ ಸತ್ಯ ಬೆಳೆಯುವುದೆ? ನಾವೇ ಸತ್ಯ ತಿಳಿಯದೆ ಯಾರೋ ತಿಳಿಸಿದ್ದನ್ನು ನಾನು ತಿಳಿಸಿದರೆ ನಾನು ಸತ್ಯವಂತನೆ? ಹಾಗೆ ಧರ್ಮ ವೂ ಜೊತೆಗೆ ಇರುತ್ತದೆ. ಯಾವಾಗ ಈ ಅರ್ಧ ಸತ್ಯ ಧರ್ಮ ವ್ಯವಹಾರಕ್ಕೆ  ಇಳಿದು ಜನರನ್ನು ಆಳಲು ಹೊರಟವೋ ಆಗಲೇ ಜೀವನ ಅತಂತ್ರಸ್ಥಿತಿಗೆ ತಲುಪಿದೆ. ಈಗ ವಿಪರೀತ ಅಸತ್ಯ ಅನ್ಯಾಯ, ಅಧರ್ಮ, ಭ್ರಷ್ಟಾಚಾರ
ಹೆಚ್ಚಾಗಿರಲು ಕಾರಣ  ಅದಕ್ಕೆ ಸಹಕಾರ ನೀಡಿದ ಸಮಾಜ.
ಸಂಸಾರ ನಡೆಸಲು ಸಮಾಜದ ಸಹಕಾರ,ಹಣ,ಜನ ಬೇಕು.ಆದರೆ ಸತ್ಯಜ್ಞಾನ ಬೇಡವೆಂದರೆ ಅಜ್ಞಾನ. ಹೀಗೆಯೇ ಚಿಂತನೆ ನಡೆಸುತ್ತಾ ಪ್ರತಿಯೊಬ್ಬ ಪ್ರಜೆಯೂ ಆತ್ಮಾವಲೋಕನ ಮಾಡಿಕೊಂಡರೆ  ವಾಸ್ತವದಲ್ಲಿ  ನಡೆದಿರುವ  ಪ್ರತಿಯೊಂದರ ಹಿಂದೆ  ಪರಾವಲಂಬನೆಯೇ ಇದೆ.ಸ್ವಾವಲಂಬನೆ  ನಮ್ಮ ಜ್ಞಾನದ ಶಿಕ್ಷಣದಿಂದ ಆಗಬೇಕು.ಅದೂ ಕೂಡ ರಾಜಕೀಯವಾಗಿದ್ದು ನಿಜವಾದ ಸತ್ಯ ತಿಳಿಸುವ ಪ್ರಜೆಯನ್ನು ದೂರವಿಟ್ಟು ಸಹಕಾರ ಕೊಡದೆ ತಮ್ಮದೇ ಆದ ಸಂಘ ಕಟ್ಟಿಕೊಂಡು ದೇವರುಗಳನ್ನು ಹೊರಗೆ ತಂದು ಮನೆಯೊಳಗಿರುವ‌ಮಹಿಳೆ ಮಕ್ಕಳನ್ನು  ಹೊರಗೆ ಕರೆಸಿಕೊಂಡರೆ ಒಳಗಿದ್ದ ಸತ್ಯವೂ ತಿಳಿಯದೆ,ಧರ್ಮ ವೂ ಉಳಿಯೋದಿಲ್ಲ. ಇಲ್ಲಿ ಯಾವ ಪಕ್ಷ ಒಳ್ಳೆಯದು ಕೆಟ್ಟದ್ದು ಎನ್ನುವ ಬದಲು ನಮ್ಮೊಳಗೇ ಅಡಗಿರುವ ಪಕ್ಷಪಾತದಿಂದ ಯಾರಿಗೆ ಒಳ್ಳೆಯದಾಗಿದೆ ಕೆಟ್ಟದ್ದಾಗಿದೆ ಎಂದರೆ ಪ್ರಜೆಗಳಿಗೆ ಕೆಟ್ಟದ್ದಾಗಿ ರಾಜಕೀಯ ನಡೆಸುವವರು ಬೆಳೆದಿರುವುದು ಸತ್ಯ.
ಹೀಗೇ ಮುಂದುವರಿದರೆ ಅಜ್ಞಾನ ಇನ್ನಷ್ಟು ಬೆಳೆಯುತ್ತಾ ಮಾನವ ಮಾನವರಲ್ಲಿಯೇ ದ್ವೇಷ ಹೆಚ್ಚಾಗಿ  ಸತ್ತರೂ ಅಜ್ಞಾನದಿಂದ ಮತ್ತೆ ಜನ್ಮ ಪಡೆಯುವ‌ಜನಸಂಖ್ಯೆ ಬೆಳೆದು ಜ್ಞಾನ  ಹಿಂದುಳಿಯುತ್ತದೆ. ಹಿಂದೂಧರ್ಮದ ಮುಖ್ಯ ಗುರಿ ಜ್ಞಾನಾರ್ಜನೆ. ಇದು ಅಧ್ಯಾತ್ಮದ  ಪ್ರಕಾರ  ಇದ್ದರೆ ಮಹಾತ್ಮರು.ಭೌತಿಕದಲ್ಲಿದ್ದರೆ ?
ಈಗಲೂ ಕಾಲಮಿಂಚಿಲ್ಲ. ಹಿಂದಿನ ರಾಮಾಯಣ ಮಹಾಭಾರತ ಭಗವದ್ಗೀತೆ ಇನ್ನಿತರ ವೇದ ಶಾಸ್ತ್ರ ಸಾಹಿತ್ಯವು ಸತ್ಯದೆಡೆಗೆ ಧರ್ಮ ದೆಡೆಗೆ ನಡೆಸುತ್ತದೆ ಎಂದರೆ ಅದನ್ನು ಓದಿ ತಿಳಿದವರು ರಾಜಕೀಯ ಬಿಟ್ಟು ದೇಶವನ್ನು ಕಾಣಲು ಸಾಧ್ಯವೆ
ದೇಶದೊಳಗೆ ಇರುವ‌ ಪ್ರಜೆಗಳಿಗೆ ಭಕ್ತರಿಗೆ ಎಷ್ಟರ ಮಟ್ಟಿಗೆ ಧಾರ್ಮಿಕ ಯೋಗ ಶಿಕ್ಷಣ ಕೊಡಲಾಗಿದೆ? ಎಷ್ಟು ಶಾಲಾ ಕಾಲೇಜುಗಳಲ್ಲಿ  ಉತ್ತಮ ಜ್ಞಾನವಿರುವ‌ವಿದ್ಯಾವಂತರು ಶಿಕ್ಷಕರಾಗಲು ಸಾಧ್ಯವಾಗಿದೆ?  ಈ ವಿಚಾರದ ಬಗ್ಗೆ ಧಾರ್ಮಿಕ ಸಂಘಟನೆಗಳು  ಒಂದಾಗಿ ಚರ್ಚೆ ಮಾಡಿದರೆ ನಮ್ಮ ಹತ್ತಿರವೇ ಇರುವ  ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ.ಎಷ್ಟು  ಹೊರಗಿನ ರಾಜಕೀಯದೆಡೆಗೆ  ಹೋಗುವೆವೋ ಅಷ್ಟು  ಅಧರ್ಮ ಬೆಳೆಯುತ್ತದೆ. ಇದನ್ನು ಪ್ರತಿಯೊಬ್ಬ‌ಪ್ರಜೆಗಳೂ ಮನೆಯೊಳಗಿರುವ  ಸಂಪತ್ತನ್ನು  ಸದ್ಬಳಕೆ ಮಾಡಿಕೊಂಡರೆ  ದೈವತ್ವ ಹೆಚ್ಚುವುದು.ಸಂಪತ್ತು ಎಂದರೆ ಹಣವಲ್ಲ ಜ್ಞಾನ,ತಿಳುವಳಿಕೆ‌ಜೊತೆಗೆ ಮಾನವ ಸಂಪತ್ತು. ಮಾನವನೊಳಗೆ ಅಡಗಿರುವ ಸತ್ಯಜ್ಞಾನವೇ ಸಂಪತ್ತು.ಧರ್ಮ ಜ್ಞಾನವೇ ಸಂಪತ್ತು.ಮಹಿಳೆಯ ಜ್ಞಾನವೇ ಸಂಪತ್ತು.ಮಕ್ಕಳ ಸುಜ್ಞಾನವೇ ಸಂಪತ್ತು.ನಮಗೆ ಪರಮಾತ್ಮ ಕೊಟ್ಟಿರುವ  ಮೂಲ ಜ್ಞಾನವೇ ಅಧ್ಯಾತ್ಮ ವಿದ್ಯೆ.ಮೊದಲು ಇದನ್ನರಿತು  ಅತಿಯಾದ ಸ್ವಾರ್ಥ ಅಹಂಕಾರ ಬಿಟ್ಟು  ಎಲ್ಲರ ಒಳಗಿರುವ‌ಪರಮಶಕ್ತಿಯನ್ನರಿತು ಬೆಳೆಸಿ ಬೆಳೆಯುವವರೆ ನಿಜವಾದ ಆತ್ಮಜ್ಞಾನಿಗಳಾಗಿದ್ದರು ಗುರುವಾಗಿದ್ದರು.ಇದರಲ್ಲಿ ಮಂತ್ತ ತಂತ್ರ ಯಂತ್ರಜ್ಞಾನವಿದ್ದರೂ ಅದರ ಸದ್ಬಳಕೆಯಿಂದ ಸ್ವತಂತ್ರ ಜ್ಞಾನ ಬೆಳೆದಿತ್ತು.ದುರ್ಭಳಕೆ ಮಾಡಿಕೊಂಡವರು ಅತಂತ್ರಸ್ಥಿತಿಗೆ ತಲುಪಿದ್ದರು. ಇಷ್ಟು ತಿಳಿದರೆ  ಈಗಿನ ಸ್ಥಿತಿಗೆ ಕಾರಣವೂ ಇದೇ ಪರಿಹಾರವೂ ಇದರೊಳಗಿದೆ.ಎಚ್ಚರವಾಗಬೇಕಷ್ಟೆ.ಎಷ್ಟು ವರ್ಷ ಜನರನ್ನು ಆಳಬಹುದು? ಆಳಿದವರು ಮತ್ತೆ ಆಳಾಗಿ ಜನ್ಮ ಪಡೆಯಲೇಬೇಕೆನ್ನುವುದೆ ಕರ್ಮ ಸಿದ್ದಾಂತ.
ಮಾನವರಾಗಿದ್ದು ಯಾರನ್ನೂ ಆಳಲು ಹೋಗಬಾರದು. ಹೋದರೆ ಆಳಾಗಿ‌ಹಾಳಾಗಿ ಹೋಗುತ್ತದೆ ಜೀವ. ಆಳುವಂತಿದ್ದರೆ ತನ್ನ ತಾನು ಆಳಿಕೊಳ್ಳುವ ‌ಜ್ಞಾನವಿರಬೇಕು. ಇದಿಲ್ಲದ ವಿಜ್ಞಾನ  ಅಸುರರನ್ನು ಸೃಷ್ಟಿ ಮಾಡುತ್ತದೆ ಎಚ್ಚರ.ಮಹಿಳೆ ಮಕ್ಕಳ ಒಳಗಿನ ಅರಿವಿಗೆ ಸೂಕ್ತವಾದ ಶಿಕ್ಷಣ ಕೊಡದೆ  ಹೊರಗೆಳೆದು ಆಳಿದರೆ ಭೂ ಋಣ ತೀರದು.

No comments:

Post a Comment