ಮಾನವರು ಒಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಕಲಿತರೆ ಎಲ್ಲಾ ಅರ್ಥ ವಾಗಬಹುದು. ಭೂಮಿಯ ಮೇಲೆ ಬರುವ ಉದ್ದೇಶ ಒಂದೇ ಆದರೂ ಬಂದ ಮೇಲೆ ಅಲ್ಲಿ ಬೇರೆ ಬೇರೆ ಉದ್ದೇಶಗಳಾಗುತ್ತದೆ ಎಂದರೆ ಜೀವ ಹೋಗುವಾಗ ಯಾವ ಉದ್ದೇಶ ಹೊತ್ತು ಹೋಗುವುದೋ ಅದೇ ಮುಂದುವರಿದಿರುತ್ತದೆನ್ನುವುದೆ ಅಧ್ಯಾತ್ಮ ಸತ್ಯ.
ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿದಂತೆ ಮಾನವನ ಜೀವಾಂತ್ಯದಲ್ಲಿರುವ ಯೋಚನೆಗೆ ತಕ್ಕಂತೆ ಪುನರ್ಜನ್ಮ ಪಡೆಯುವುದಾಗಿದೆ.ಹೀಗಾಗಿ ಪ್ರಾರಂಭದಲ್ಲಿ ಯಾವ ಚಿಂತನೆಗಳು ಬರುವವೋ ಅದೇ ಮುಂದೆ ದೊಡ್ಡದಾಗಿ ಬೆಳೆದು ಕೊನೆಗಾಣುವುದು.ಇದರಲ್ಲಿ ಕೆಲವರಿಗೆ ಸಾತ್ವಿಕ ಚಿಂತನೆ ಇದ್ದರೆ ಮತ್ತೆಕೆಲವರಿಗೆ ರಾಜಸಿಕ ಚಿಂತನೆ ಹಲವರಿಗೆ ತಾಮಸಿಕ ಚಿಂತನೆ. ಭೂಮಿಯಲ್ಲಿ ಸುಖ ಕಾಣುವುದಕ್ಕಾಗಿ ಮಾಡಬಾರದ ಕರ್ಮಕ್ಕೆ ಕೈ ಹಾಕಿ ಸೋತರೂ ಬುದ್ದಿಬರದೆ ಅಧರ್ಮದೆಡೆಗೇ ಜೀವಹೋಗಿರುತ್ತದೆ ಮತ್ತೆ ಮತ್ತೆ ಜನ್ಮ ಪಡೆದರೂ ಸರಿಯಾದ ಜ್ಞಾನ ಸಿಗದೆ ಅವರ ಸಂಖ್ಯೆ ಭೂಮಿಯಲ್ಲಿ ಬೆಳೆಯುತ್ತಾ ಅಸುರ ಆಗಿರುತ್ತಾರೆ. ಇನ್ನೂ ಕೆಲವರಿಗೆ ಆ ಅಸುರರನ್ನು ಆಳುವ ರಾಜಸಿಕ ಬುದ್ದಿ ತೀವ್ರವಾಗಿ ಕೊನೆಗೆ ತಾನೂ ಅದೇ ದಾರಿಯಲ್ಲಿ ನಡೆಯುತ್ತಿರುವ ಜ್ಞಾನವಿಲ್ಲದೆ ಆ ಶಕ್ತಿಯನ್ನು ಇನ್ನಷ್ಟು ಬೆಳೆಸಿ ಭೂಮಿಯಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಾರೆ. ಕೆಲವರಷ್ಟೆ ಸಾತ್ವಿಕ ವಿಚಾರಗಳತ್ತ ಜನರನ್ನು ಸೆಳೆಯುವ ಪ್ರಯತ್ನ ಮಾಡಿ ತಾನೂ ಅದರಲ್ಲಿ ನಡೆಯುತ್ತಾ ಕೊನೆಗೆ ಆ ದೈವತ್ವದಲ್ಲಿ ಮರೆಯಾಗುತ್ತಾರೆ. ಮೂರೂ ತರಹದ ಜನರೂ ಭೂಮಿಗೆ
ಮಕ್ಕಳಾದರೂ ಭೂಮಿಯ ಋಣ ತೀರಿಸಲು ಸಾಧ್ಯವಾಗುವುದು ಕೇವಲ ಕೆಲವೇ ಸಾತ್ವಿಕರಿಗಷ್ಟೆ. ಸಾತ್ವಿಕರೆನಿಸಿಕೊಂಡವರೂ ರಾಜಸಿಕ ತಾಮಸಿಕ ಜನರ ಒಡನಾಟದಲ್ಲಿದ್ದರೆ ತಾವೂ ತಿಳಿಯದೆ ದಾರಿತಪ್ಪಬಹುದು. ಈ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಇಳಿಯದೆ ಸ್ವತಂತ್ರ ಜೀವನ ನಡೆಸಿಕೊಂಡು ಪರಮಾತ್ಮನ ಸತ್ಯವರಿತು ಒಂದೇ ಮಾರ್ಗ ಹಿಡಿದಿದ್ದರು.
ಯಾವುದೇ ಸತ್ಯವಿರಲಿ ಅದು ನಮ್ಮ ಅನುಭವದಿಂದ ಸ್ಪಷ್ಟವಾಗಿ ತಿಳಿದಾಗಲೇ ಅದು ಸತ್ಯವಾಗುತ್ತದೆ. ಯಾರೋ ಹೇಳಿದ್ದಾರೆಂದರೆ ಅಂದಿನ ಕಾಲಮಾನಕ್ಕೂ ಈಗಿನ ಕಾಲಕ್ಕೂ ಹೊಂದಿಕೆಯಾಗುವುದೆ ಎನ್ನುವ ಬಗ್ಗೆ ಚಿಂತನೆ ನಡೆಸಿ ನಮ್ಮ ಮನಸ್ಥಿತಿ, ಪರಿಸ್ಥಿತಿ ಆರ್ಥಿಕ ಸ್ಥಿತಿ ಗತಿ ಎಲ್ಲವೂ ಒಂದೇ ಸಮನಾಗಿದ್ದರೆ ಒಂದೇ ಸತ್ಯವನ್ನು ಎಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯ.ಆದರೆ ಇದು ಕಾಲಕಾಲಕ್ಕೆ ಬದಲಾದಂತೆ ಒಂದೇ ಸತ್ಯವೂ ಹಲವರಿಗೆ ಹಲವು ರೀತಿಯಲ್ಲಿ ಕಂಡು ಪ್ರಚಾರವಾಗಿ ಒಂದೇ ಧರ್ಮ ದೇವರು ಜಾತಿ ಎಲ್ಲಾ ಬೇರೆ ಬೇರೆಯಾಗಿದೆ. ಹಾಗಂತ ಭೂಮಿ ಎರಡಿಲ್ಲ, ದೇಶ ಎರಡಿಲ್ಲ,ತಾಯಿ ಒಬ್ಬಳೆ ಆದಾಗ ನಮ್ಮ ಈ ಜನ್ಮದಲ್ಲಿ ಹತ್ತಿರವಿರುವ ಈ ಶಕ್ತಿಯನರಿಯುವತ್ತ ನಮ್ಮ ಚಿತ್ತವಿದ್ದರೆ ಎಷ್ಟೋ ಬದಲಾವಣೆ ಸಾಧ್ಯ. ಇಲ್ಲಿ ಸ್ತ್ರೀ ಯನ್ನು ಆಳುವುದಕ್ಕಾಗಿ ಅವಳನ್ನು ದುರ್ಭಳಕೆ ಮಾಡಿಕೊಂಡು ಮುಂದೆ ನಡೆದವರಿಗೆ ಸಾತ್ವಿಕತೆಯ ಅರ್ಥವಾಗದೆ ರಾಜಸಿಕತೆ ಬೆಳೆದು ತಾನೇ ಸೋಮಾರಿಯಾಗಿದ್ದರೂ ಬೇರೆಯವರಿಗೆ ದುಡಿದು ತಿನ್ನುವಂತಹ ಉಪದೇಶ ನೀಡುವವರ ಸಂಖ್ಯೆ ಬೆಳೆದಿರೋದೆ ಭಾರತೀಯರ ಸಮಸ್ಯೆಗಳಿಗೆ ಕಾರಣವೆಂದರೂ ಹೇಳುವುದಕ್ಕೆ ಕೇಳುವುದಕ್ಕೆ ನಿಮಗೇನು ಅಧಿಕಾರವಿದೆ ಎನ್ನುವವರಿದ್ದಾರೆಂದರೆ ನಾವು ಪ್ರಜಾಪ್ರಭುತ್ವದ ಪ್ರಜೆಗಳಾಗಿ ಚಿಂತನೆ ನಡೆಸದೆ ರಾಜಕೀಯಕ್ಕೆ ಹೆಚ್ಚು ಬೆಲೆಕೊಟ್ಟು ಬೆಳೆಸುವುದರಲ್ಲಿಯೇ ಜೀವನ ನಡೆದಿದೆ ಎಂದರ್ಥ. ಇದರಿಂದಾಗಿ ಏನು ಸಾಧನೆ ಆಯಿತು? ಧರ್ಮ ಉಳಿಯಿತೆ? ಸತ್ಯ ತಿಳಿಯಿತೆ? ಆತ್ಮಜ್ಞಾನ ಹೆಚ್ಚಾಯಿತೆ? ಶಾಂತಿ ಸಿಕ್ಕಿತೆ? ದೇಶ ಯಾವ ದಾರಿಗೆ ನಡೆದಿದೆ? ಮನೆಯೊಳಗೆ ಸುರಕ್ಷಿತವಾಗಿದ್ದ ಮಹಿಳೆ ಮಕ್ಕಳು ಹೊರಗೆ ಬಂದು ಹೋರಾಟ ಮಾಡುವ ಸ್ಥಿತಿಗೆ ಭಾರತ ಬಂದಿದೆ ಎಂದರೆ ಯಾರ ವಿರುದ್ದ ಯಾರು ಹೋರಾಟ ನಡೆಸುತ್ತಿರುವುದೆನ್ನುವ ಬಗ್ಗೆ ಶಾಂತಿಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ನಮ್ಮವರ ವಿರುದ್ದ ನಾವೇ ನಿಂತಿದ್ದೇವೆ. ಇದರ ಫಲ ಪರರು ಬೆಳೆದಿರೋದು.
ನಾವೆಲ್ಲರೂ ದೇವರ ಮಕ್ಕಳು ಎಂದರೆ ದೇವರ ಅಂಶ ನಮ್ಮಲ್ಲಿದೆಯೆ? ಆ ಸತ್ವ,ಸತ್ಯ,ತತ್ವ ಒಳಗಿದೆಯೆ? ಇದ್ದರೆ ಮನಸ್ಸು ಶಾಂತವಾಗಿರಬೇಕಿತ್ತು. ಇದನ್ನು ಹಿಂದಿನಮಹಾತ್ಮರು ಎಷ್ಟೋ ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಾ ಓದಿ ತಿಳಿದರೂ ಹೊರಗಿನ. ರಾಜಕೀಯಕ್ಕೆ ಇಳಿದ ಮನಸ್ಸಿಗೆ ಒಳಗಿರುವ ಆ ಸತ್ಯವನ್ನು ಜೀರ್ಣಿಸಿಕೊಳ್ಳಲು ಶಕ್ತಿಯಿಲ್ಲವಾಗಿದೆ ಎಂದರೆ ಆ ಶಕ್ತಿಗೆ ಪೂರಕವಾದ ಆಹಾರ, ಶಿಕ್ಷಣಜ್ಞಾನ ನೀಡದೆ ಹಿಂದುಳಿದಿದೆ.
ಇದನ್ನು ಮನೆಯೊಳಗೆ ಕೊಟ್ಟು ಬೆಳೆಸಿದರೆ ಇದ್ದಲ್ಲಿಯೇ ಶಾಂತಿ ಕಾಣಬಹುದು. ಬಹಳ ಕಷ್ಟಪಡಬೇಕಿದೆ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಯೋಗಮಾರ್ಗ ಅಗತ್ಯವಿದೆ.ಭೋಗಕ್ಕೆ ಹೊರಟರೆ ರೋಗವೇ ಹೆಚ್ಚಾಗಿ ಜೀವ ಹೋಗುವುದು.ಮತ್ತೆ ರೋಗದಿಂದ ಜನ್ಮ ಪಡೆಯುವುದು.ರೋಗಕ್ಕೆ ಔಷಧವೇ ಆರೋಗ್ಯಕರ ಶಿಕ್ಷಣ. ಆರೋಗ್ಯ ಎಂದರೆ ಆರು ಯೋಗ್ಯವಾಗಿರೋದು. ಕಾಮ ಕ್ರೋಧ ಲೋಭ,ಮೋಹ ಮಧ,ಮತ್ಸರವೆಂಬ ಗುಣವನ್ನು ಮಾನವ ಎಷ್ಟು ಅರ್ಥ ಪೂರ್ಣವಾಗಿ ಅರಿತು ನಡೆಯುವನೋ ಅವನಿಗೆ ಮಾತ್ರ ಜೀವನದ ಸತ್ಯ ತಿಳಿಯುವುದು. ಇತಿಮಿತಿಗಳನ್ನು ಕಾಯ್ದು ಕೊಂಡಿರೋದೆ ಸಾಧನೆ.ಅತಿಯಾದರೆ ಅಮೃತವೂ ವಿಷ.
ಇಷ್ಟೇ ಜೀವನದ ರಹಸ್ಯ. ಭಾರತೀಯರಲ್ಲಿ ವಿದೇಶಿಯತೆ ಅತಿಯಾದರೆ ವಿಷವೇ. ಹಾಗೆ ಮಕ್ಕಳಲ್ಲಿ ಪ್ರಭುದ್ದತೆ ಹೆಚ್ಚಾದರೆ ವಿಷ. ಮಹಿಳೆಯರಲ್ಲಿ ರಾಜಕೀಯತೆ ಹೆಚ್ಚಿದರೆ ವಿಷ. ಪುರುಷರಲ್ಲಿ ವ್ಯಾಮೋಹ ಅತಿಯಾದರೆ ವಿಷ.
ಒಟ್ಟಿನಲ್ಲಿ ಕಲಿಯುಗದ ಜನರಲ್ಲಿ ಅಜ್ಞಾನ ಮಿತಿಮೀರಿದರೆ ಅಸುರರೆ ಬೆಳೆಯೋದು. ಇದಕ್ಕೆ ಪರಿಹಾರ ಜ್ಞಾನದ ಶಿಕ್ಷಣ.
ಇದಕ್ಕೆ ಯಾವುದೇ ರಾಜಕೀಯವಿರದೆ ಜಾತಿಬೇಧವಿರದೆ, ಲಿಂಗಬೇಧವಿರದೆ, ಸಮಾನತೆ ಇದ್ದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಗುರು ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಅರಿವೇ ಗುರು.ಸ್ವಾನುಭವವೇ ಸ್ವಾವಲಂಬನೆ. ಸ್ವತಂತ್ರ ಜ್ಞಾನ,ಸ್ವಾಭಿಮಾನ,ಸತ್ಯ ಧರ್ಮದೆಡೆಗೆ ನಡೆಸುತ್ತದೆ.ಈಗಾಗಲೇ ಸಾಕಷ್ಟು ಅನುಭವಿಸಿರುವ ಸಾಮಾನ್ಯ ಪ್ರಜೆಗಳು ಎಚ್ಚೆತ್ತುಕೊಳ್ಳದಿದ್ದರೆ ಏನೂ ಬದಲಾವಣೆ ಆಗದು. ಅಸುರರೊಳಗೆ ಸುರರಿದ್ದರೆ ಅವರನ್ನು ಹೊರತರಲು ಭಗವಂತ ಅಸುರರಿಂದಲೇ ಮಾನವರಿಗೆ ಪಾಠ ಕಲಿಸುವುದು.ಭಗವಂತನಿಗೇನೂ ನಷ್ಟವಿಲ್ಲ ಲಾಭವೂ ಇಲ್ಲ
ಕಾರಣ ಎಲ್ಲಾ ಅವನೊಳಗಿರುವಾಗ ಮೇಲಿದ್ದವರು ಕೆಳಗೆ ಹೋಗಬಹುದು ಕೆಳಗಿದ್ದವರು ಮೇಲೇರಬಹುದು. ಹೀಗಾಗಿ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡುವಾಗ ಅಸುರರ ಜೊತೆಗೆ ಸುರರೂ ಹೋಗಬಹುದು. ಯಾವಾಗ ಕೆಟ್ಟವರಿಗೆ ಸಹಕಾರ ನೀಡುವರೋ ಅವರೊಂದಿಗೆ ಹೋಗುವರು.ಎಲ್ಲರಿಗೂ ಸಾವಿದೆ .ಸಾಯೋ ಮೊದಲು ನಮ್ಮೊಳಗೇ ಏನಿದೆ ಯಾರಿರುವರು ಎನ್ನುವ ಬಗ್ಗೆ ನಾವೇ ತಿಳಿಯದಿದ್ದರೆ ವ್ಯರ್ಥ. ಯಾರಿಗೆ ಗೊತ್ತು ಯಾರೊಳಗೆ ಯಾವ ದೇವಾಸುರರು ಇರುವರೋ?
"ತೊರೆದು ಹೋಗಲು ಬಹುದೆ ಹರಿನಿನ್ನ ಚರಣವನು ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯಾ" ಕನಕದಾಸರು.
ಧನಕನಕ ಬಿಟ್ಟು ಪರಮಾತ್ಮನ ದಾಸರಾಗಿ ಸತ್ಯದರ್ಶನ ಮಾಡಿಕೊಂಡವರನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ?
ಸರ್ಕಾರ ಕೊಡುವ ಧನ ಕನಕಕ್ಕಾಗಿ ಒಳಗಿದ್ದ ಜ್ಞಾನವನ್ನು ಕಳೆದುಕೊಂಡರೆ ನಷ್ಟ ಯಾರಿಗೆ? ಭಾರತೀಯರಿಗೆ ಆತ್ಮಾವಲೋಕನ ಅಗತ್ಯವಿದೆ.
No comments:
Post a Comment