ದ್ವೇಷ ಬೆಳೆಸುವುದು ಸುಲಭ ,ವೇಷ ಹಾಕಿಕೊಂಡು ತಿರುಗುವುದು ಸುಲಭ ಆದರೆ, ಅದರಿಂದ ಹುಟ್ಟಿಕೊಂಡು ಬೆಳೆಯುವ ಅಸುರರನ್ನು ದೇಶದಿಂದ, ದೇಹದಿಂದ ಹೊರಹಾಕುವುದು ಬಹಳ ಕಷ್ಟ. ಅದಕ್ಕೆ ಸ್ವಯಂ ಶಕ್ತಿ ಪರಮಾತ್ಮನೇ ಬರಬೇಕು.ಇದು ಸರ್ವಕಾಲಿಕ ಸತ್ಯ. ಅಧ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲದರಲ್ಲೂ ದ್ವೈತವಿದೆ ಆದರೆ ಸಮಾನತೆಯಿಲ್ಲದೆ ದ್ವೇಷದಿಂದ ದೇಶ ಬೆಳೆದಿದೆ.
ನರಸಿಂಹ ಜಯಂತಿಯ ಶುಭಾಶಯಗಳು
ನರಸಿಂಹನ ರೂಪ ತಳೆದು ನಾರಸಿಂಹನಾದ ಮಹಾವಿಷ್ಣುವು ನರರನ್ನು ರಕ್ಷಣೆ ಮಾಡಿದ ಕಥೆ ಎಲ್ಲರಿಗೂ ತಿಳಿದಿದೆ.ಹೀಗೇ ಅನೇಕ ದೇವಾನುದೇವತೆಗಳ ಅವತಾರಗಳಿವೆ ಶ್ರೀ ವಿಷ್ಣುವಿನವತಾರದ ಬಗ್ಗೆ ವಿಷ್ಣುಪುರಾಣದಲ್ಲಿದ್ದರೆ ಬ್ರಹ್ಮನ ಅವತಾರ ಬ್ರಹ್ಮ ಪುರಾಣ,ಶಿವನ ಅವತಾರ ಶಿವಪುರಾಣಗಳಾದರೆ ಶಕ್ತಿಯ ಅವತಾರ ಎಲ್ಲಾ ಪುರಾಣಗಳಲ್ಲಿದೆ. ಆದರೆ ತ್ರಿಮೂರ್ತಿ ಗಳಂತೆ ತ್ರಿದೇವಿಯರ ಶಕ್ತಿ ಅಷ್ಟು ಪ್ರಚಾರವಾಗದಿದ್ದರೂ ಶಕ್ತಿಯಿಲ್ಲದೆ ಭೂಮಿಯಿಲ್ಲ.ಭೂಮಿಯಿಲ್ಲದೆ ಮನುಕುಲವಿಲ್ಲ ಎಂದರೆ ತಪ್ಪಿಲ್ಲ.
ದೇವಾನುದೇವತೆಗಳು ಈಗಲೂ ಎಲ್ಲಾ ಕಡೆ ತಮ್ಮದೇ ಆದ ಕಾರ್ಯ ನಡೆಸಿದ್ದರೂ ಮಾನವರು ಮಾತ್ರ ಎಲ್ಲಾ ನಾನೇ ನಡೆಸಿರೋದೆಂದು ಅಸುರರ ಜೊತೆಗೆ ಸೇರಿಕೊಂಡು ಇನ್ನಷ್ಟು ಮತ್ತಷ್ಟು ಭೂಮಿಯನ್ನು ದುರ್ಭಳಕೆ ಮಾಡಿಕೊಂಡರೆ ಶಕ್ತಿಯ ಅವತಾರ ಹೆಚ್ಚಾಗುತ್ತದೆ. ಇದು ಕೊರೊನದಂತಹ ಮಹಾಮಾರಿಯೇ ತೋರಿಸಿದೆ. ಅಗೋಚರ ಶಕ್ತಿಯನ್ನು ಕಾಣದಿದ್ದರೆ ಇಲ್ಲವೇ ಇಲ್ಲ ಎನ್ನುವ ಅಸತ್ಯ,ಅಧರ್ಮ ಅನ್ಯಾಯದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಮಾನವನಿಗೇ ನಷ್ಟ. ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ದೈವೀ ಶಕ್ತಿ ಎಲ್ಲವನ್ನೂಸೂಕ್ಮರೂಪದಲ್ಲಿದ್ದು
ನೋಡುತ್ತಿರುವಾಗ ಭೌತಿಕದಲ್ಲಿ ನಡೆಸುವ ನಾಟಕ ಕೇವಲ ಕ್ಷಣಿಕವಷ್ಟೆ. ಆಂತರಿಕ ಶಕ್ತಿಯ ಮುಂದೆ ಯಾವ ಭೌತವಿಜ್ಞಾನ ನಿಲ್ಲೋದಿಲ್ಲ. ನಿಂತರೂ ಉತ್ತಮ ಕಾರ್ಯ ಆಗಿರಬೇಕಷ್ಟೆ.
ಪ್ರಹ್ಲಾದ ನಂತಹ ಮಹಾಭಕ್ತನು ಹಿರಣ್ಯಕಶ್ಯಪುವಿನಂತಹ ಮಹಾವೀರ ಅಸುರನಿಗೆ ಮಗನಾಗಿ ಜನ್ಮಪಡೆಯುವುದಕ್ಕೂ
ಶಕ್ತಿಯ ಪ್ರೇರಣೆಯೇ ಕಾರಣ. ಶಿಶುವನ್ನು ಗರ್ಭದೊಳಗಿಂದಲೇ ಸಂಸ್ಕರಿಸಿ ಜನ್ಮ ಪಡೆಯಲು ದೇವತೆಗಳೆ ಸಹಕಾರ ನೀಡಿದ್ದನ್ನು ಕಥೆ ಹೇಳುತ್ತದೆ. ಈಗ ಮಕ್ಕಳು ಹುಟ್ಟುವ ಮೊದಲೇ ಯಾವ ದೇಶದ ಶಿಕ್ಷಣ ನೀಡಬೇಕು ಏನಾಗಬೇಕೆಂದು ಪೋಷಕರು ನಿರ್ಧಾರ ಮಾಡಿದಂತೆ ಅಂದು ದೇವತೆಗಳು ನಿರ್ಧಾರ ಮಾಡುತ್ತಿದ್ದರು. ಭಗವಂತನ ಅವತಾರಗಳಲ್ಲಿ ಯಾವುದು ಶ್ರೇಷ್ಠ ಕನಿಷ್ಟ ಎನ್ನುವಂತಿಲ್ಲ. ಯಾವ ರೂಪದಲ್ಲಾದರೂ ಬಂದು ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಬಹುದು. ಇದನ್ನು ಮಾನವ ಅರ್ಥ ಮಾಡಿಕೊಂಡರೆ ನಮ್ಮ ಸುತ್ತಮುತ್ತಲಿನ ಜನರನ್ನು ಜೀವಿಗಳನ್ನು ಪ್ರಾಣಿ ಪಕ್ಷಿಗಳನ್ನು ದುರ್ಭಳಕೆ ಮಾಡಿಕೊಳ್ಳದೆ ಸ್ವತಂತ್ರ ಜೀವನ
ನಡೆಸುತ್ತಾ ಯೋಗಿಯಾಗಬಹುದು. ಆದರೆ ಇದಕ್ಕೆ ಮುಖ್ಯವಾಗಿರುವ ಆತ್ಮಜ್ಞಾನದ ಅಗತ್ಯವಿದೆ.ವಿಜ್ಞಾನ ಜಗತ್ತು
ಎಲ್ಲಾ ತನ್ನ ಹತೋಟಿಗೆ ತರಲು ಪ್ರಯತ್ನಪಟ್ಟು ತನ್ನ ಹತೋಟಿಯಲ್ಲಿ ತಾನೇ ಇಲ್ಲದಂತಾಗಿ ಸ್ವೇಚ್ಚಾಚಾರದೆಡೆಗೆ ನಡೆದಿದೆ. ಹಾಗಾದರೆ ಇದನ್ನು ತಡೆಯಲು ದೇವತೆಗಳಿಗೆ ಸಾಧ್ಯವೆ? ದೇವತೆಗಳಿರೋದೆಲ್ಲಿ?
ಮಾನವರೂಪತಳೆದಿರುವ ಮಹಾತ್ಮರಲ್ಲಿ ದೇವತೆಗಳಿರುತ್ತಾರೆ.ಮಹಾತ್ಮರೆಂದರೆ ಯಾರು? ಆತ್ಮಾನುಸಾರ,ಸತ್ಯ ಧರ್ಮದ ಹಾದಿಯಲ್ಲಿ ನಡೆದವರು ಮಹಾತ್ಮರಾಗಿದ್ದರು. ದೇವಾನುದೇವತೆಗಳು ಭೂಮಿಯಲ್ಲಿ ಪೂಜಿಸಲ್ಪಡುತ್ತಿದ್ದರೂ ಯಾಕಿಷ್ಟು ಅಸುರ ಶಕ್ತಿ ಬೆಳೆದಿದೆ?
ಕಾರಣವಿಷ್ಟೆ ದೇವರನ್ನು ಅಸುರರು ತಮ್ಮ ಸ್ವಾರ್ಥ ಸುಖಕ್ಕೆ ಬಳಸಿಕೊಂಡು ಭೌತಿಕದಲ್ಲಿ ಹೆಚ್ಚು ಅಧಿಕಾರ, ಹಣ,ಸ್ಥಾನಮಾನ ಪಡೆಯುತ್ತಾ ಮಾನವರನ್ನು ತಮ್ಮ ವಶಕ್ಕೆ ಪಡೆದು ದೇವರಿಲ್ಲ ನಾನೇ ಎಲ್ಲಾ ಎನ್ನುವ ಹಂತಕ್ಕೆ ಬಂದಿದ್ದಾರೆಂದರೆ ಇದಕ್ಕೆ ಸಹಕಾರ ಕೊಟ್ಟವರೆ ಮಾನವರು.
ಅವರಿಂದ ಸಾಧ್ಯವಾದಷ್ಟು ದೂರವಿದ್ದು ದೈವಗುಣವನ್ನು ಬೆಳೆಸಿಕೊಂಡರೆ ಆ ಭಗವಂತನು ನರಸಿಂಹನಾಗಿ ನರನ ರೂಪದಲ್ಲಿ ಅಸುರರನ್ನು ಸಂಹಾರ ಮಾಡಬಹುದಷ್ಟೆ.
ಕಾಣದ ದೇವರಿಗೆ ಕಟ್ಟುವ ಗುಡಿ ಗೋಪುರ ದೇವಾಲಯಗಳು ಅಸುರರಿಂದ ನಾಶವಾಗಬಹುದು.ಆದರೆ
ಮಾನವನೊಳಗಿರುವ ಆತ್ಮಚೈತನ್ಯ ಹೆಚ್ಚಿಸುವ ವಿದ್ಯೆಯನ್ನು ಯಾರು ಮಕ್ಕಳು ಮಹಿಳೆಯರಿಗೆ ಕೊಟ್ಟು ಆಂತರಿಕ ವಾಗಿ ಸಬಲರಾಗಿಸಿ ಜ್ಞಾನದೆಡೆಗೆ ನಡೆಸುವರೋ ಅವರು ಗುರು.
ಇಂತಹ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಕಷ್ಟ.
ಕಾಣೋದೂ ಕಷ್ಟ.ಕಷ್ಟವಾಗಿದ್ದನ್ನು ಅಸುರರು ಇಷ್ಟಪಡದೆ ದೂರವಿರುವರೆಂದರೆ ಮಾನವರಾದವರು ದೇವರ ರಕ್ಷಣೆಗೆ ಆತ್ಮಾನುಸಾರ ನಡೆದು ಆತ್ಮಜ್ಞಾನ ಪಡೆದರೆ ಬಂದಿರುವ
ಸಂಕಷ್ಟದಿಂದ ಮುಕ್ತಿ. ಇದು ಬಿಟ್ಟು ಇನ್ನಷ್ಟು ದುಷ್ಟರನ್ನು ದೂರಿಕೊಂಡು ಜನರ ದಾರಿತಪ್ಪಿಸಿಕೊಂಡು ಮನೆಯಿಂದ ಹೊರಗೆ ಕರೆತಂದರೆ ಮನಯಲ್ಲಿದ್ದ ಅಲ್ಪ ಸ್ವಲ್ಪ ನೆಮ್ಮದಿಯೂ ಬೀದಿಪಾಲು. ಹೊರಗೆ ಬರೋದನ್ನೇ ಕಾದು ಕುಳಿತವರಿಗೆ ಇನ್ನಷ್ಟು ಬಲ ಬಂದು ಮನೆ ಸೇರದಂತೆ ಮಾಡುವರು. ಇದರಲ್ಲಿನ ಸತ್ಯ ಗಮನಿಸಲು ನಾವು ಶಾಂತ ಮನಸ್ಸುಳ್ಳವರಾಗಿರಬೇಕು. ಎಲ್ಲೇ ಇರಲಿ ಹೇಗೆ ಇರಲಿ ಮಾನವರಾಗಿರಬೇಕು. ಮನಸ್ಸು ಅಂತರ್ಮುಖಿಯಾದರೆ ಮಾತ್ರ ದೇವರನ್ನು ಕಾಣಬಹುದು.ನಿರಾಕಾರದ ದೇವರು ಕಾಣೋದು ಹೇಗೆ ? ಆಕಾರ ಕೊಟ್ಟವರು ನಾವೇ ಆದಾಗ ಯಾವ ಆಕಾರದಲ್ಲಾದರೂ ನೋಡಬಹುದಲ್ಲ.
ಹೇಗೆ ಹೊರಗಿನ ವ್ಯಕ್ತಿಗಳು ದೇವರಂತೆ ಕಾಣುವರೋ ಹಾಗೇ ಒಳಗಿನ ವ್ಯಕ್ತಿಗಳಲ್ಲಿ ಯಾಕೆ ಕಾಣಬಾರದು? ಎಲ್ಲರಲ್ಲಿಯೂ ಇರೋದು ಒಂದೇ ಶಕ್ತಿಯಾದರೂ ಯಾಕೆ ಕಾಣುತ್ತಿಲ್ಲ? ಇದಕ್ಕೆ ಕಾರಣ ನಮ್ಮ ದೃಷ್ಟಿ ಸರಿಯಿಲ್ಲ.ನಮ್ಮ ಸ್ವಾರ್ಥ ಸುಖಕ್ಕಾಗಿ ಯಾರನ್ನು ಬಳಸಿದರೂ ವ್ಯರ್ಥ. ಇದು ದೇವರಾಗಬಹುದು ಅಸುರರಾಗಬಹುದು ಮಾನವರಾಗಬಹುದು.ಅಂದರೆ ಇಲ್ಲಿ ದೇಹಕ್ಕೆ ಕೊಡುವ ಬೆಲೆ ಆತ್ಮಕ್ಕೆ ಕೊಡದಿದ್ದರೆ ನಮ್ಮೊಳಗೇ ಅಡಗಿರುವ ಈ ಮೂರೂ ಗುಣಗಳಲ್ಲಿ ಯಾವುದಾದರೂ ಒಂದು ಬೆಳೆದು ದೇಹ ಹೋಗುತ್ತದೆ. ಅಧ್ಯಾತ್ಮ ಎಂದರೆ ತನ್ನೊಳಗೆ ಇರುವ ಆತ್ಮಶಕ್ತಿಯಿಂದ ತನ್ನ ತಾನರಿತು ತನ್ನ ತಾನು ಆಳಿಕೊಳ್ಳಲು ಬೇಕಾದ ಜ್ಞಾನಪಡೆಯೋದು.ಇತರನ್ನು ಆಳಲು ಹೋಗಿ ತಾನೇ ಆಳಾಗಿರುವ ಸತ್ಯ ತಿಳಿಯದಿದ್ದರೆ ಮುಂದೆ ಅಳುವ ಸರದಿ ಬರುತ್ತದೆ. ಒಟ್ಟಿನಲ್ಲಿ ದೇವರು ನಿರಾಕಾರರೂಪದಲ್ಲಿ ಆತ್ಮನಾಗಿ ಎಲ್ಲರೊಳಗಿದ್ದು ನಡೆಸುವಾಗ ನಾನೆಂಬುದಿಲ್ಲ.
ನಾನೊಬ್ಬನೇ ಇಲ್ಲ.ನನ್ನಿಂದಲೇ ಎಲ್ಲಾ ಬದುಕಿಲ್ಲ.ನಾನೇ ರಾಜನಲ್ಲ .ನಾನೇ ಎಲ್ಲದ್ದಕ್ಕೂ ಕಾರಣನಾಗಿರುವಾಗ ಇದನ್ನು ತಿಳಿದು ನಡೆಯುವುದು ಅಗತ್ಯವಿದೆಯಲ್ಲ. ಯಾರೋ ಹೊರಗಿನವರು ಬಂದು ನನ್ನ ಜೀವ ಉಳಿಸುವರೆಂದರೆ ಜೀವ ಶಾಶ್ವತವಲ್ಲ. ಇಷ್ಟೆಲ್ಲಾ ತಿಳಿದರೂ ಎಲ್ಲರೂ ಒಗ್ಗಟ್ಟನ್ನು ಬೆಳೆಸಿಕೊಳ್ಳದೆ ಹೊರಗೆ ನಡೆದಷ್ಟೂ ಮನೆ ಖಾಲಿ. ಆ ಖಾಲಿಮನೆಯಲ್ಲಿ ಸೇರಿಕೊಂಡು ಆಳುವುದು ಅಸುರರಷ್ಟೆ ದೇವರಲ್ಲ. ಇದು ಧಾರ್ಮಿಕ ವರ್ಗ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಭಾರತದ ಭವಿಷ್ಯಕ್ಕೆ ಅಗತ್ಯವಿದೆ. ಧರ್ಮ ಒಳಗಿದೆಯೋ ಹೊರಗಿದೆಯೋ?
ಹೊರದೇಶಕ್ಕೆ ಹೋಗಿ ಪ್ರಚಾರ ಮಾಡಿದರೆ ಪ್ರಗತಿ ಯಾದರೆ ದೇಶದೊಳಗೆ ಅಂತಹ ಶಿಕ್ಷಣ ನೀಡಿದ್ದರೆ ಎಷ್ಟು ಪ್ರಗತಿ ಆಗುತ್ತಿತ್ತು. ಪುರಾಣ,ಇತಿಹಾಸದ ಪ್ರತಿಯೊಂದರಲ್ಲಿಯೂ ಧರ್ಮದ ಜೊತೆಗೆ ಅಧರ್ಮ ವಿದೆ.ಅಧರ್ಮದ ಪ್ರಚಾರ ಮಾಡುತ್ತಾ ಮಾನವನೊಳಗೆ ಅಧರ್ಮ ವೇ
ಬೆಳೆದಿದೆ.ರಾಜಕೀಯದಲ್ಲಿ ಧರ್ಮ ವಿರಲಿಲ್ಲ.ಆದರೂ ರಾಜಕೀಯ ಮನೆಮಾತಾಗಿದೆ.ಏನು ಹರಡುವೆವೋ ಅದೇ ಬೆಳೆಯೋದು .ಇದನ್ನು ಯಾವ ದೇವರೂ ಬಂದು ತಡೆಯಲಾಗದು. ಮನಸ್ಸನ್ನು ಹರಿಯಲು ಬಿಟ್ಟರೆ ತಡೆಯಲು ಕಷ್ಟ.ಹಾಗಾಗಿಯೇ ಹಿಂದೆ ಮನೆಯೆ ಗುಡಿ ಮನಸ್ಸು ಆಲಯ ಎಂದರು. ದೇವನೊಬ್ಬನೆ ಎಂದಂತೆ ಧರ್ಮವೂ ಒಂದೇ.
ಆದರಿದು ಮೂರಾಗಿದೆ ದೇವರ ಧರ್ಮ, ಮಾನವರ ಧರ್ಮ, ಅಸುರರ ಧರ್ಮ.
ಮಧ್ಯವರ್ತಿ ಮಾನವ ಧರ್ಮವನ್ನು ದುರ್ಭಳಕೆ ಮಾಡಿಕೊಂಡು ತನಗೆ ತಾನೇ ಮೋಸಹೋದರೆ ಕಷ್ಟ ನಷ್ಟ ಅವನ ಜೀವವೇ ಅನುಭವಿಸಬೇಕೆಂದು ಕರ್ಮ ಸಿದ್ದಾಂತ ತಿಳಿಸಿದೆ.
ನರ ನಾರಾಯಣನ ಸಣ್ಣ ಅಂಶವಷ್ಟೆ. ನಾರಾಯಣನಾಗಲು ಅಸಾಧ್ಯ. ಈ ಸತ್ಯ ತಿಳಿದವರು ದಾಸರಾದರು,ಶರಣರಾದರು ಸಾದು,ಸಂತ,ಸಂನ್ಯಾಸಿ,ಮಹಾತ್ಮರಾದರು. ಈಗವರು ಎಲ್ಲಿರುವರು?
No comments:
Post a Comment