ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, March 15, 2023

ಭಗವಂತನ ಸೇರಬಹುದು ಆಳಲಾಗದು.ಭಗವದ್ಗೀತೆ ಬದಲಾಗದು ನಾವು ಬದಲಾಗಬಹುದು

ಭಗವದ್ಗೀತೆಯ ಸೌಂದರ್ಯವೆಂದರೆ ನೀವು ಅದರ ಸಂದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ,ಆದರೆ  ಅದರಲ್ಲಿರುವ ಸಂದೇಶ ನಿಮ್ಮನ್ನು ಬದಲಾಯಿಸಬಹುದು.**

 *ಸ್ವಾಮಿ ವಿವೇಕಾನಂದ

ಭಗವದ್ಗೀತೆ ಸರ್ವ ಕಾಲಕ್ಕೂ ಸರಿಹೊಂದುವ ಬದಲಾವಣೆ
ಯಾಗದಿರುವ ತತ್ವಜ್ಞಾನವೇ ಹೊರತು ತಂತ್ರಜ್ಞಾನವಲ್ಲ.
ವಾಸ್ತವ ಜಗತ್ತಿನಲ್ಲಿ ಇದರ ಪ್ರಚಾರ ಹಲವರು ಹಲವಾರು ರೀತಿಯಲ್ಲಿ ಹಲವಾರು ಜನರಿಗೆ ಹಲವಾರು ವರ್ಷಗಳಿಂದಲೂ ತಿಳಿಸುತ್ತಿದ್ದರೂ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಿ ಹಲವಾರು ಜನರಿಗೆ ಸಿಕ್ಕಿಲ್ಲ.ಆದರೂ ಕೆಲವರಿಗೆ ಸಿಕ್ಕಿದೆ. ಇಲ್ಲಿ ಕೆಲವರನ್ನು ಕೇವಲವಾಗಿ ಕಾಣುವ
ವರಿಗೆ ಹಲವಾರು ಸಮಸ್ಯೆಗಳು ಹೆಚ್ಚಾಗಿರೋದಕ್ಕೆ  ಕಾರಣವೇ ನಮ್ಮೊಳಗೇ ಅಡಗಿರುವ ಹಲವಾರು ಗೊಂದಲ
ಗಳು,ಸಂಶಯಗಳು ಭಿನ್ನಾಭಿಪ್ರಾಯ ದ್ವೇಷ,ಅಸೂಯೆ ಕ್ರೋಧ ಇನ್ನಿತರ ಗುಣಗಳೆಂದರೆ ಹಲವರಿಗೆ  ಕೋಪ ಬರಬಹುದು. 
ಕೋಪದ ಮೂಲವೇ ಅನಾವಶ್ಯಕ ವಿಚಾರಗಳನ್ನು ತಲೆಗೆ ತುಂಬಿಕೊಂಡು ನಡೆದಿರುವುದು.ಭಗವದ್ಗೀತೆ ಮಹಾಗ್ರಂಥ
ಬ್ರಾಹ್ಮಣ,ಕ್ಷತ್ರಿಯ ವೈಶ್ಯ ಶೂದ್ರರನ್ನು ಮೇಲು ಕೀಳೆಂದು ತಿಳಿಸಿಲ್ಲ. ಅದರಲ್ಲಿರುವ ನಾಲ್ಕು ಯೋಗಮಾರ್ಗಗಳೂ ಶ್ರೇಷ್ಠ
ಭಗವಂತನೆಡೆಗೆ  ಸಾಗುವಾಗ ಜೀವಾತ್ಮನ ಮೂಲವನ್ನರಿತು  ಹಿಂದಿನ ಧರ್ಮ ಕರ್ಮ ವನ್ನರಿಯುವ ಅರಿವನ್ನು
ಹೊಂದಿದ್ದರೆ  ಸಾಕು ಒಳಗೇ ಇದ್ದು ಮೂಲದೆಡೆಗೆ ಸೇರಬಹುದು. ಯಾವಾಗ  ಈ ಯೋಗದಿಂದ ದೂರವಾಗಿ ಹೊರಗೆ  ಬರುವುದೋ ಅದರ ಅಂತರದಲ್ಲಿ ಸಾಕಷ್ಟು ಸಮಸ್ಯೆ ಬೆಳೆಯುತ್ತಾ ತಿರುಗಿ ಬರೋವಾಗ ಸಮಸ್ಯೆಗಳಿಗೆ ಅಧ್ಯಾತ್ಮ ಕಾರಣ ತಿಳಿಯುವುದು ಅಗತ್ಯ. ಇಲ್ಲಿ ಸಮಸ್ಯೆ ಇಲ್ಲದ ಜೀವನವಿಲ್ಲ. ಈ ಸಮಸ್ಯೆಯ ಮೂಲ ಹಿಂದಿನ ಜನ್ಮದ ಋಣ ಮತ್ತು ಕರ್ಮ ಎನ್ನುವ ಅಧ್ಯಾತ್ಮ ಸತ್ಯವನ್ನು ಮಾನವ ಅರ್ಥ ಮಾಡಿಕೊಳ್ಳಲು ಸೋತರೆ ಯಾವ ಗ್ರಂಥದ ಮೂಲ ಉದ್ದೇಶ ತಿಳಿಯದು.
ಸ್ವಾಮಿ ವಿವೇಕಾನಂದರನ್ನು ಒಪ್ಪಿಕೊಳ್ಳುವ  ಭಾರತೀಯರು
ಗಾಂಧೀಜಿಯನ್ನು ಒಪ್ಪಿಕೊಳ್ಳಲಾರರು. ಇಬ್ಬರೂ ದೇಶಭಕ್ತರೆ ಆದರೂ ಸ್ವಾಮಿ ವಿವೇಕಾನಂದರ ಯೋಗ ಜೀವನಕ್ಕೂ ಗಾಂಧೀಜಿಯವರ ಹೋರಾಟದ ಸಾಂಸಾರಿಕ ಜೀವನಕ್ಕೂ ವ್ಯತ್ಯಾಸವಿದೆ.ಆದರೆ ಇಬ್ಬರೂ ಭಗವದ್ಗೀತೆ ಯಿಂದಲೇ ಪ್ರೇರಣೆ ಹೊಂದಿದ ಮಹಾತ್ಮರಾಗಿರೋದು ಅದರಲ್ಲಿದ್ದ ತತ್ವದ ಮೂಲಕ ಎನ್ನಬಹುದು.
ಅಂದಿನ ಭಾರತೀಯರ ಗುಲಾಮಿತನವನ್ನು ವಿರೋಧಿಸಿ ದೇಶದ ಸ್ವಾತಂತ್ರ್ಯ ಕ್ಕಾಗಿ  ತತ್ವಜ್ಞಾನವನ್ನು ಹಿಡಿದೆತ್ತಿ ಜನರ ಆತ್ಮಶಕ್ತಿಯನ್ನು ಬೆಳೆಸುವುದು ಸುಲಭದ ಕೆಲಸವಲ್ಲ.
ಮಾಡು ಇಲ್ಲ ಮಡಿ ಎನ್ನುವ ಹೋರಾಟದಲ್ಲಿ ಆತ್ಮಜ್ಞಾನವಿದೆ.
ಇಂದಿನ ತಂತ್ರದ ರಾಜಕೀಯದಲ್ಲಿ ಜನರು ಸತ್ತರೂ ಸರಿ ವಿದೇಶಿಗಳು ದೇಶವಾಳಿದರೂ  ಸರಿ ನನ್ನ ಅಧಿಕಾರ ಸ್ಥಾನಮಾನ ಬಿಡೋದಿಲ್ಲ ಎನ್ನುವವರ ಹಿಡಿತದಲ್ಲಿರುವ ದೇಶದಲ್ಲಿ ಭಗವದ್ಗೀತೆ ಯಾವ ಸಂದೇಶ ನೀಡಬಹುದು?
ಧಾರ್ಮಿಕ ಕ್ಷೇತ್ರವನ್ನೂ ಬಿಡದೆ ಆವರಿಸಿರುವ ರಾಜಕೀಯತೆ ರಾಜಯೋಗವನ್ನು ಅಪಾರ್ಥ ಮಾಡಿಕೊಂಡು ಜನರನ್ನು ಸುಲಿಗೆ ಮಾಡಿ  ದೇವರು,ಧರ್ಮ, ಸಂಸ್ಕೃತಿ, ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ  ವ್ಯಾಪಾರಿಕರಣ ಹೆಚ್ಚಾಗಿರುವುದಕ್ಕೆ ಕಾರಣವೇ ಮೂಲ ಶಿಕ್ಷಣದಲ್ಲಿರದ ಸತ್ಯಜ್ಞಾನ ತತ್ವಜ್ಞಾನ.
ಇದನ್ನು ಸಾಮಾನ್ಯರು ಕೇಳುವ ಪರಿಸ್ಥಿತಿಯಲ್ಲಿಲ್ಲ.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು? 
ಕೆಲವೆಡೆ  ಉತ್ತಮ ಬದಲಾವಣೆಗೆ  ಅವಕಾಶವಿದ್ದರೂ ಹಲವು ಕಡೆ  ಬದಲಾಗುವವರನ್ನೂ ತಡೆದು ಆಳುವ ರಾಜಕೀಯವಿದೆ. ಹೀಗಾಗಿ ಭಗವದ್ಗೀತೆ ಪ್ರಚಾರದಲ್ಲಿ  ಸಾಕಷ್ಟು  ಜನರನ್ನು ಮನೆಯಿಂದ ಹೊರಬರುವಂತಾಗಿದೆ.
ಮನೆಯೊಳಗೆ ಇದ್ದು  ತತ್ವ ಬೆಳೆಸುವುದಕ್ಕೂ ಹೊರಗೆ ಬಂದು ತಂತ್ರದಿಂದ ಆಳುವುದಕ್ಕೂ ವ್ಯತ್ಯಾಸವಿಷ್ಟೆ ಒಂದು ನಮ್ಮ ಆತ್ಮಾವಲೋಕನಕ್ಕೆ ಸಹಕಾರಿಯಾದರೆ ಇನ್ನೊಂದು ನಮ್ಮ ವ್ಯವಹಾರಕ್ಕೆ ದಾರಿ. ನಾವೆಷ್ಟೇ  ಪ್ರಚಾರ ಮಾಡಿದರೂ ಒಳಗಿನ ಶುದ್ದತೆ ಇಲ್ಲವಾದರೆ ತತ್ವದ ಆಳ ಅಗಲ ಅರ್ಥ ಆಗದೆ ತಂತ್ರ ಬೆಳೆಯುತ್ತದೆ.
ಸ್ವತಂತ್ರ ಭಾರತಕ್ಕೆ ಸ್ವತಂತ್ರವಾಗಿದ್ದ ಜ್ಞಾನದ ಶಿಕ್ಷಣ ಬೇಕಿತ್ತು.
ಶಿಕ್ಷಣವೇ ತಂತ್ರದೆಡೆಗೆ ನಡೆಸಿಕೊಂಡು ತತ್ವಪ್ರಚಾರ ಮಾಡಿ ಉಪಯೋಗವಿಲ್ಲ.ಮೊದಲು ತತ್ವ ನಂತರವಷ್ಟೆ ತಂತ್ರ
ದಲ್ಲಿರುವ ಲೋಪದೋಷಗಳನ್ನು ತಿಳಿದು ಸರಿಪಡಿಸುವ ಕೆಲಸವಾಗಬೇಕು.ಭಗವಂತನ ಗೀತೆ ಅಂದಿನ ಕ್ಷಾತ್ರಧರ್ಮ ವನ್ನು ಅರ್ಜುನನ ವಿಷಾಧಯೋಗವನ್ನು ನಿವಾರಿಸಿತ್ತು.
ಆದರೀಗಿನ ಪ್ರಜಾಪ್ರಭುತ್ವದ ಜನರಿಗೆ ವಿಷಾಧ ಯೋಗ ನಿವಾರಣೆ ಮಾಡಲು ಯಾವ ಕ್ಷಾತ್ರಧರ್ಮ ವಿದೆ? ರಾಜಪ್ರಭುತ್ವ ಹೋಗಿದೆ.ಅಂದಿನ ಶಿಕ್ಷಣವಿಲ್ಲ.ನಾವೇ ವಿದೇಶಿಗಳ ಶಿಕ್ಷಣದಲ್ಲಿರುವಾಗ ಯಾರನ್ನು ಯಾರು ಆಳಬೇಕು? ಆಳುತ್ತಿರುವುದು? ಅಳುತ್ತಿರುವವರಿಗೆ ಹಣ
ದಿಂದ  ಸಾಂತ್ವನ ನೀಡುವುದರಿಂದ  ಜ್ಞಾನಬರುವುದೆ?
ಭ್ರಷ್ಟಾಚಾರ ಮುಗಿಲುಮುಟ್ಟಿದೆ ಅದರಲ್ಲಿಯೇ ಇದ್ದವರು ಧರ್ಮ ರಕ್ಷಣೆ ಮಾಡಬಹುದೆ? ಇಲ್ಲಿ  ರಾಜಯೋಗ ಎಲ್ಲಿದೆ?
ನಮ್ಮನ್ನು ನಾವು ಆಳಿಕೊಳ್ಳಲು ಸ್ವಾತಂತ್ರ್ಯ ತಂದುಕೊಟ್ಟ
ವರನ್ನೇ ಸರಿಯಿಲ್ಲವೆನ್ನುವ ಅಜ್ಞಾನದ ರಾಜಕೀಯ ತುಂಬಿ
ಕೊಂಡು ಹೊರಗಿನಿಂದ ಭಗವದ್ಗೀತೆ ಪಠಣ ಮಾಡಿದರೆ ಭೂತದ ಬಾಯಲ್ಲಿ ಗೀತೆ ಎನ್ನುವಂತಾಗಿದೆ.
ಒಂದೇ ಗೀತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ ಆದರೆ ಹಲವಾರು ಸಮಸ್ಯೆಗಳು ಹುಟ್ಟಿರುವುದಕ್ಕೆ ಕಾರಣವಿಷ್ಟೆ ನಾವಿದರ ರಾಜಯೋಗದ ಬದಲಾಗಿ ರಾಜಕೀಯವನ್ನು ತಂತ್ರವಾಗಿ ಬಳಸಿಕೊಂಡು ಜನಸಾಮಾನ್ಯರಲ್ಲಿದ್ದ ಸಾಮಾನ್ಯಜ್ಞಾನವನ್ನು ತಿರಸ್ಕರಿಸಿ ಆಳಿರೋರ ಹಿಂದೆ ನಡೆದಿರೋದಷ್ಟೆ. ಸತ್ಯ ಕಠೋರ
ವಾಗಿರುವುದೆನ್ನುವುದಕ್ಕೆ ಕಾರಣವೂ ಇದೇ ಆಗಿದೆ.ಹೆಸರು ಹಣ ಪ್ರತಿಷ್ಠಿತ ವ್ಯಕ್ತಿಗಳನ್ನು ಪ್ರಶ್ನೆ ಮಾಡದೆ  ಅವರಿಗೆ 
 ಅಧಿಕಾರ ಕೊಟ್ಟು ಸಹಕರಿಸಿ ನಮ್ಮೊಳಗೇ ಇದ್ದಂತಹ ಸತ್ಯನಾಶ ಧರ್ಮ ನಾಶಕ್ಕೆ ನಾವೇ ಕಾರಣರಾದಾಗ ಇದರ
 ಫಲವನ್ನು  ಯಾರು ಅನುಭವಿಸಬೇಕು?
ಒಟ್ಟಿನಲ್ಲಿ ಕೆಲವರು ಉತ್ತಮ ಜ್ಞಾನಿಗಳಾಗಿದ್ದರೂ ಅವರಿಗೆ ಅಧಿಕಾರವಿಲ್ಲ ಹಣವಿಲ್ಲದ ಕಾರಣ ಸಂಸಾರದ ಜೊತೆಯಲ್ಲಿ ಸಮಾಜವೂ ದೂರಮಾಡಿದೆ. ಕೆಲವರು ಎಲ್ಲಾ ತಿಳಿದರೂ ಹೇಳದೆ ಮೌನವಾಗಿದ್ದಾರೆ.ಹಲವರಿಗೆ ತಮಗೆ ತಾವೇ ಮೋಸ ಹೋಗುತ್ತಿರುವ ಅರಿವಿಲ್ಲ. ಅರಿವುನೀಡಬೇಕಾದವರು ಶಿಕ್ಷಣ ನೀಡದೆ ವ್ಯವಹಾರಕ್ಕೆ ಇಳಿದಿದ್ದಾರೆ. ಹೀಗಾಗಿ ಮನೆಯೊಳಗೆ ಮನದೊಳಗೆ ಇರಬೇಕಾದ ಭಗವಂತನ ತತ್ವ  ಹೊರಗಿನವರ ತಂತ್ರಕ್ಕೆ ಬಳಸಿ ಸ್ವತಂತ್ರ ಜ್ಞಾನ ಹಿಂದುಳಿದಿದೆ. ಇದೊಂದು ವಿಶ್ವದ ಜನತೆಗೆ  ತಲುಪಬೇಕಾದ ಗ್ರಂಥ.ಹಿಂದೂಗ್ರಂಥ
ವೆನ್ನುವ ಕಾರಣಕ್ಕಾಗಿ  ಸೀಮಿತ ಜನರೆಡೆಗೆ ಹೋದರೂ ಅದರಲ್ಲಿ ರಾಜಕೀಯ ಹೆಚ್ಚಾದಂತೆ ರಾಜಯೋಗಹಿಂದುಳಿದು
 ಮಾನವನ ಆಂತರಿಕ ಜ್ಞಾನದವರೆಗೆ ತಲುಪಲಾಗದು. ಒಟ್ಟಿನಲ್ಲಿ ಪ್ರತಿಯೊಂದು ಅಧ್ಯಾಯವೂ ಮಾನವನನ್ನು ಮಹಾತ್ಮನಾಗಿಸುತ್ತದೆ. ಅವರವರ ಆಹಾರ ವಿಹಾರ ಶಿಕ್ಷಣದ ಮೂಲಕ  ಶುದ್ಧತೆಯನ್ನು ಬೆಳೆಸಿಕೊಂಡು ಯೋಗದೆಡೆಗೆ ಹೋದರೆ ಭಗವಂತನೆಡೆಗೆ ಹೋಗಬಹುದು.
ಮನಸ್ಸಿನ ಸ್ವಚ್ಚತೆಗೆ ಯೋಗಬೇಕು. ರಾಜಕೀಯತೆ  ಜನರ ಮನಸ್ಸನ್ನು ಹಾಳು ಮಾಡಿ ಆಳುತ್ತಿರುವಾಗ ಗೀತೆಯಲ್ಲಿಯೂ ರಾಜಕೀಯತೆ ಬೆಳೆಸುವುದರಿಂದ  ಶಾಂತಿ ಕಾಣೋದು ಕಷ್ಟ.
ಒಟ್ಟಿನಲ್ಲಿ  ಸ್ವಾಮಿ ವಿವೇಕಾನಂದರು ತಿಳಿಸಿದಂತೆ,
ಭಗವದ್ಗೀತೆಯ ಸೌಂದರ್ಯವೆಂದರೆ ನೀವು ಅದರ ಸಂದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ,ಆದರೆ  ಅದರಲ್ಲಿರುವ ಸಂದೇಶ ನಿಮ್ಮನ್ನು ಬದಲಾಯಿಸಬಹುದು.**
ಸಂದೇಶಗಳು ಯೋಗದ ಮಾರ್ಗದಲ್ಲಿದೆ ಭೋಗದ ಮಾರ್ಗದಲ್ಲಿಲ್ಲ. ಭಾರತವನ್ನು ಸ್ಮಾರ್ಟ್ ಮಾಡಲು‌ಹಣದ ಅಗತ್ಯಕ್ಕಿಂತ ಸತ್ಯಜ್ಞಾನದ ಯೋಗದ ಅಗತ್ಯವಿದೆಯಲ್ಲವೆ?
ವಿದೇಶಿಗಳನ್ನು ಓಡಿಸಿ ಸ್ವಾತಂತ್ರ್ಯ ತಂದುಕೊಟ್ಟ ದೇಶಭಕ್ತರೆಲ್ಲಿ? ದೇಶವನ್ನು ವಿದೇಶ ಮಾಡಿ ಜನರನ್ನು ಆಳುವ ರಾಜಕಾರಣಿಗಳೆಲ್ಲಿ? 
ಪ್ರಜಾಪ್ರಭುತ್ವದ ಅರ್ಥ ಎಷ್ಟು ಪ್ರಜೆಗಳಿಗೆ ತಿಳಿದಿದೆ? ಜ್ಞಾನದಿಂದ ಯೋಗಿಗಳ ದೇಶವಾಗಿದ್ದ ದೇಶ ಅಜ್ಞಾನದಿಂದ ರೋಗಿಗಳ ದೇಶ ಮಾಡಿರೋದು ರಾಜಕೀಯದ ಪ್ರಭಾವ.
ಇದಕ್ಕೆ ನಮ್ಮದೇ ಸಹಕಾರವಿದ್ದ ಕಾರಣ ಪ್ರತಿಫಲ ಪ್ರಜೆಗಳೇ ಅನುಭವಿಸುತ್ತಿರೋದು.ಕರ್ಮಕ್ಕೆ ತಕ್ಕಂತೆ ಫಲ ಋಣ 
ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಋಣಬಾರ.
ಇದನ್ನು ಭೌತಿಕದ ಸಾಧನೆ ಎಂದರೆ ಅಧ್ಯಾತ್ಮದ ಕಡೆಗಣನೆ ಎಂದರ್ಥ .ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ .
ವಿನಾಶಕಾಲೇ ವಿಪರೀತ ಬುದ್ದಿ ಎಂದಂತಿದೆ . ಎಲ್ಲದ್ದಕ್ಕೂ ಕಾರಣವಿದೆ. ಬದಲಾವಣೆಯೂ ಆಗಬೇಕು ಆಗುತ್ತದೆ.
ಭಗವಂತನೊಳಗಿರುವ ಸಾಮಾನ್ಯರಾಗಿರುವ ಮಾನವನು ಭಗವಂತನನ್ನು ಸೇರಬಹುದೆ ಹೊರತು ಬದಲಾಯಿಸ
ಲಾಗದು.   ದೇಶಭಕ್ತಿಯಿಂದ ದೇಶವನ್ನು ರಕ್ಷಣೆಮಾಡ
ಬಹುದೆ ಹೊರತು ದೇಶವನ್ನೇ  ವಿದೇಶ ಮಾಡಿ ಆಳುತ್ತೇನೆಂದು ವಿದೇಶಿಯಂತೆ  ನಡೆಯೋದು ಅಧರ್ಮ. ಭಗವದ್ಗೀತೆಯನ್ನು  ಯಾರು ಹೇಗೇ ಅರ್ಥ ಮಾಡಿಕೊಂಡು ತಿಳಿಸಿದರೂ ನಮ್ಮ ಅನುಭವಕ್ಕೆ ಬರದೆ ತತ್ವದ ಅರ್ಥ ವಾಗದು. ಇದು ಎಲ್ಲಾ ಅಧ್ಯಾತ್ಮ ವಿಚಾರಕ್ಕೂ ಅನ್ವಯಿಸುತ್ತದೆ. ವ್ಯವಹಾರದಿಂದ ಹಣ ಮಾಡಬಹುದು ಜ್ಞಾನ ಪಡೆಯಲು ಹಣವನ್ನು  ದಾನಧರ್ಮಕ್ಕೆ ಸದ್ಬಳಕೆಯಾಗಬೇಕು. ಅದೂ ಸತ್ಕರ್ಮದ ಹಣ
ವಾಗಿರಬೇಕು.ಪ್ರತಿಫಲಾಪೇಕ್ಷೆ ಯಿಲ್ಲದ ಕರ್ಮವಾಗಬೇಕು ಎನ್ನುತ್ತದೆ ಭಗವದ್ಗೀತೆ. ಸಾಧ್ಯವೆ? ಪ್ರಜಾಪ್ರಭುತ್ವ ನಡೆದಿರೋದು ಪ್ರಜೆಗಳ ಹಣಬಲ ಜನಬಲ,ಜ್ಞಾನಬಲ
ದಿಂದ. ಜ್ಞಾನವೇ ನಮ್ಮದಲ್ಲದಿದ್ದರೆ ಯಾರಬಲದಲ್ಲಿದೆ ದೇಶದ ಧರ್ಮ?
ನಿಜವಾದ ದೇಶಭಕ್ತರು  ಅಧ್ಯಾತ್ಮ ಚಿಂತಕರು ಉತ್ತರ ಕೊಡಬೇಕಿದೆ.

No comments:

Post a Comment