ವಿಷ್ಣುವಿನ
ಎಲ್ಲಾ ಅವತಾರಗಳಲ್ಲಿ ಶ್ರೇಷ್ಠ ಹಾಗು ಶುದ್ದವಾದ ಅವತಾರವೆ ಶ್ರೀ ರಾಮಾವತಾರ. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ತಮ್ಮದೇ ಆದ ವಿಶೇಷ ಗುಣಜ್ಞಾನವನ್ನು ಹೊಂದಿದೆ. ಆಗೋದನ್ನು ತಡೆಯಲಾಗದು ಎನ್ನುವ ಸತ್ಯ ಅಡಗಿದೆ.ಪ್ರತಿಯೊಂದು ಪರಮಾತ್ಮನ ಇಚ್ಚೆಯೇ ಎನ್ನುವ ಸಂದೇಶದ ಜೊತೆಗೆ ಕರ್ಮಕ್ಕೆ ತಕ್ಕಂತೆ ಪ್ರತಿಫಲ ಅನುಭವಿಸಲೇಬೇಕೆನ್ನುವ ಸತ್ಯವಿದೆ. ಶ್ರೀ ರಾಮಚಂದ್ರನು ಮಗನಾಗಿ,ಅಣ್ಣನಾಗಿ, ಪತಿಯಾಗಿ,ರಾಜನಾಗಿ ಪ್ರಜಾಸೇವಕನಾಗಿ ಸಾಮ್ರಾಟನಾಗಿರೋದರ ಹಿಂದಿನ ತತ್ವಜ್ಞಾನವು ಶ್ರೀ ಕೃಷ್ಣ ನ ಕಾಲದಲ್ಲಿ ಕಾಣೋದು ಕಷ್ಟ.ತಂತ್ರದಿಂದ ರಾಜಕೀಯ ನಡೆಸಬಹುದು. ತತ್ವದಿಂದ ನಡೆಸೋದನ್ನು ಕೇವಲ ರಾಮಾವತಾರ ತೋರಿಸಿದೆ.ಇದನ್ನು ಗಮನಿಸಿದರೆ ಉತ್ತಮ ಜ್ಞಾನ ಮಾನವ ಪಡೆಯಬಹುದು.
ಪ್ರಜಾಪ್ರಭುತ್ವದ ಇಂದು ತತ್ವವೇ ತಂತ್ರದೆಡೆಗೆ ನಡೆದಿರೋದು ಅಧರ್ಮಕ್ಕೆ ಹೆಚ್ಚಿನ ಬಲ ಬರಲು ಕಾರಣವಾಗುತ್ತಿದೆ ಅನಿಸುವುದಿಲ್ಲವೆ? ಬದುಕಬೇಕು ಆದರೆ ಯಾವ ರೀತಿ ಬದುಕಬೇಕೆಂಬ ತತ್ವಜ್ಞಾನ ಅಗತ್ಯವಿದೆ.
ಧರ್ಮದ ಹಾದಿಯಲ್ಲಿ ರಾಜಕೀಯ ನಡೆಸುವುದಕ್ಕೂ ರಾಜಕೀಯದ ಹಾದಿಯಲ್ಲಿ ಧರ್ಮ ನಡೆಯುವುದಕ್ಕೂ ವ್ಯತ್ಯಾಸವಿಷ್ಟೆ. ಒಂದು ಆಂತರಿಕ ಸಿದ್ದಿ,ಇನ್ನೊಂದು ಭೌತಿಕ ಪ್ರಸಿದ್ದಿ.ಆಂತರಿಕ ಸಿದ್ದಿಯಿಂದ ಭೌತಿಕದಲ್ಲಿ ಪ್ರಸಿದ್ದರಾದವರು ನಮ್ಮ ಭಾರತೀಯ ತತ್ವಜ್ಞಾನಿಗಳು.ಇದರಲ್ಲಿ ರಾಜಕೀಯ ವಿರದೆ ರಾಜಯೋಗವಿತ್ತು.
ಅಧ್ಯಾತ್ಮ ಚಿಂತಕರು ಅದ್ವೈತ ,ದ್ವೈತ ,ವಿಶಿಷ್ಟಾದ್ವೈತ ದ ,ಸಂಶೋಧನೆ ನಡೆಸಲು ಸಂಶೋಧನಾ ಕೇಂದ್ರಗಳಿವೆ. ಆದರೆ ತತ್ವಜ್ಞಾನ ಬೆಳೆದಿರೋದು ಆಂತರಿಕ ಸಂಶೋಧನೆಯಿಂದ. ಬ್ರಹ್ಮವಿಷ್ಣು ಶಿವರೆ ಶಕ್ತಿಯ ಅಧೀನರೆನ್ನುವುದನ್ನು ಒಪ್ಪಲು ಕಷ್ಟ. ಭೂಮಿ ಮೇಲೇ ಎಲ್ಲಾ ತತ್ವಜ್ಞಾನಿಗಳಿಗೆ ಪರಮಾತ್ಮನ ದರ್ಶನವಾಗಿರುವಾಗ ಜೀವಾತ್ಮನಿಲ್ಲದೆ ಪರಮಾತ್ಮನ ಕಾಣಲಾಗಿಲ್ಲ. ಇತರ ಗ್ರಹಗಳಲ್ಲಿಯೂ ಹರಡಿಕೊಂಡಿರುವ ಒಂದೇ ಶಕ್ತಿಯನ್ನು ಕಾಣೋದೆ ಅದ್ವೈತ. ಕಾಣಲಾಗದಿದ್ದರೆ ನಾನಿರುತ್ತೇನೆ ದ್ವೈತ. ಹೀಗೇ ನಾನು ಹೋಗುವವರೆಗೂ ಆ ಪರಮಶಕ್ತಿಯ ಅಧೀನದಲ್ಲಿರಲೇಬೇಕು. ಒಟ್ಟಿನಲ್ಲಿ ನಮ್ಮ ಹಿಂದಿನ. ವೇದ ಪುರಾಣಗಳ ಪಾತ್ರ ಪರಿಚಯ ನಮ್ಮ ಪರಿಚಯವನ್ನು ನಾವು ಮಾಡಿಕೊಳ್ಳಲು ಸಹಕಾರಿಯಾಗಿದೆ. ಅಲ್ಲಿತುವ ಪ್ರತಿಯೊಂದು ಪಾತ್ರವೂ ತಮ್ಮದೇ ಆದ ವಿಶೇಷ ಶಕ್ತಿ ಪಡೆದು ಧಾರ್ಮಿಕ ನೆಲೆಗಟ್ಟಿನಲ್ಲಿ ಹೇಗೆ ನಡೆದರು, ಅಧರ್ಮ ದಲ್ಲಿ ನಡೆದವರ ಗತಿ ಏನಾಯಿತೆನ್ನುವುದನ್ನು
ಸೂಕ್ಷ್ಮ ವಾಗಿ ತಿಳಿಯಲು ನಮ್ಮೊಳಗಿನ ಗುಣವನ್ನು ಶೋಧಿಸಿಕೊಳ್ಳುವುದು ಅಗತ್ಯ. ಸಂಶೋಧನೆ ಹೊರಗೆ ನಡೆಸಿ ಒಳಗಿನ ಶೋಧನೆಯೇ ಇಲ್ಲವಾದರೆ ಮೂಲ ಶುದ್ದಿ ಕಷ್ಟ.
ಈ ಸಂಶೋಧನೆಗಳ ಫಲ ನಾವೇ ಅನುಭವಿಸುವುದಾಗಿರುವಾಗ ಯಾರೋ ಕಾರಣರೆಂದರೆ ತಪ್ಪು. ನಿನ್ನ ಮನಸ್ಸು ನಿನ್ನ ಜೀವ ನಿನ್ನ ಒಳಗಿರುವಾಗ ಹೊರಗಿನವರ ಮನಸ್ಸು ಜೀವ ಕ್ಕೆ ಹೆಚ್ಚು ಒತ್ತು ಕೊಟ್ಟರೆ ಒಳಮನಸ್ಸು ಎಚ್ಚರವಾಗೋದಿಲ್ಲ.
ಏಕಾಂತದಲ್ಲಿದ್ದು ತಪಸ್ಸಿನಿಂದ ಅಧ್ಯಾತ್ಮ ಸತ್ಯ ತಿಳಿದಿರುವ ನಮಗಮಮಹರ್ಷಿಗಳ ಸಂಶೋಧನೆ ಸತ್ಯವಾಗಿದೆ. ಆದರೆ ಅದನ್ನು ಹೊರಗಿನಿಂದ ಸಂಶೋಧನೆ ಮಾಡಿ ತಿಳಿಯಲಾಗದು.
ಹಾಗೆಯೇ ಶ್ರೀ ರಾಮಚಂದ್ರನಿಗೆ ಹೊರಗಿನ ರಾಜಕೀಯದ ಅಗತ್ಯವಿಲ್ಲ. ಒಳಗಿನ ರಾಜಯೋಗದ ಅಗತ್ಯವಿದೆ. ರಾಮನಾಮದಿಂದಲೇ ಆತ್ಮಸಾಕ್ಷಾತ್ಕಾರ ಪಡೆದ ಮಹಾತ್ಮರ ನಡೆ ನುಡಿ ಜೀವನ ಶೈಲಿಯಲ್ಲಿ ಯಾವುದೇ ರಾಜಕೀಯತೆ ಇರಲಿಲ್ಲ. ರಾಮರಾಜ್ಯದ ಕನಸು ಒಳಗಿರುವ ಆತ್ಮಜ್ಞಾನದ. ಮೂಲಕ ಸಾಧ್ಯ. ಹೊರಗಿರುವ ವಿಜ್ಞಾನದಿಂದ ಕಷ್ಟ ನಷ್ಟ ಎರಡೂ ಇದೆ.
ಅಸಹಕಾರ ಅಧರ್ಮಕ್ಕೆ ಅಸತ್ಯಕ್ಕೆ ಇರಬೇಕು.ಸತ್ಯ ಧರ್ಮಕ್ಕೆ ಉತ್ತಮ ಸಂಗದ ಸಹಕಾರದ ಶಿಕ್ಷಣ ಬೇಕು.
No comments:
Post a Comment