ಶ್ರೀ ರಾಮರಾಜ್ಯ ಮಾಡೋದಕ್ಕೆ ಹೊರಟ ನಾವು ಶ್ರೀ ರಾಮ ತಿಳಿಸಿದ ದೋಷರಹಿತ ನಾಯಕನು ಹೇಗಿರಬೇಕೆಂಬುದನ್ನು ತಿಳಿದರೆ ನಮ್ಮಲ್ಲೂ ನಾಯಕನ ಗುಣವಿರಬಹುದು.ಇದು ಪ್ರಜಾಪ್ರಭುತ್ವದ ಕಾಲ ಇವುಗಳನ್ನು ತಿಳಿಯೋಣ ಬನ್ನಿ.ಶ್ರೀ ರಾಮಚಂದ್ರ ತನ್ನ ತಮ್ಮ ಭರತನಿಗೆ ತಿಳಿಸಿದ ಆಡಳಿತದ ಸೂತ್ರ ಹಿಡಿದ ರಾಜನು ತ್ಯಜಿಸಬೇಕಾದ 14 ದೋಷಗಳು
1ಪರಲೋಕವೇ ಇಲ್ಲ
2ದೇವರಿಲ್ಲವೆನ್ನುವುದು
3. ಸುಳ್ಳು ಹೇಳುವುದು
4. ವಿನಾಕಾರಣ ಕೋಪಗೊಳ್ಳುವುದು
5. ಕರ್ತ ವ್ಯದಲ್ಲಿ ಅಲಕ್ಷ್ಯ
ಅಕರ್ತವ್ಯದಲ್ಲಿ ಪ್ರವೃತ್ತಿ
6. ವಿಳಂಬಿಸಿ ಕಾರ್ಯ ವೆಸಗುವುದು
7. ಜ್ಞಾನಿಗಳನ್ನು ಸಂದರ್ಶಿಸದಿರೋದು
8. ಸೋಮಾರಿತನ
9. ಪಂಚೇಂದ್ರಿಯಗಳಿಗೆ ಅಧೀನನಾಗಿರೋದು
10. ಯಾರೊಡನೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವುದು
11. ಅವಿವೇಕಿಗಳು,ಅನನುಭವಿಗಳು ಆದವರೊಂದಿಗೆ ಮಂತ್ರಾಲೋಚನೆ
12. ನಿಶ್ಚಯಿಸಿದ ಕಾರ್ಯ ಯೋಜನೆ ಕಾಲಮೀರಿದರೂ ಪ್ರಾರಂಭಿಸದಿರೋದು
13.. ಮಂತ್ರಾಲೋಚನೆಯನ್ನು ರಹಸ್ಯವಾಗಿಟ್ಟುಕೊಳ್ಳುವುದು
14. ಮಂಗಲಾಚರಣೆಯಿಲ್ಲದೆ ಕಾರ್ಯ ಆರಂಭಿಸುವುದು
ಎಲ್ಲಾ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ದಾರಂಭ
ತತ್ವಜ್ಞಾನ ಧರ್ಮ ಜ್ಞಾನದ ಮೇಲೇ ಯೋಗ ಕೂಡಿಬರೋದರಿಂದ ಹಿಂದಿನ ಮಹಾತ್ಮರುಗಳು ಮಹಾರಾಜರುಗಳು ಈ ಧರ್ಮ ಸೂಕ್ಮದ ಮೇಲೇ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡಿದ್ದರು. ತಂತ್ರಜ್ಞಾನದ ವೈಜ್ಞಾನಿಕತೆಯ ಅಬ್ಬರದಲ್ಲಿ ಮುನ್ನೆಡೆದ ಮನುಕುಲ ಈಗ ಈ ತತ್ವವನ್ನರಿತು ತನ್ನ ಜೀವನದ ರಹಸ್ಯವನ್ನರಿಯಲು ಹೊರಗಿನ ರಾಜಕೀಯಕ್ಕೆ ಬದಲಾಗಿ ಒಳಗಿನ ರಾಜಯೋಗದೆಡೆಗೆ ನಡೆಯಲು ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿನ ಮಹಾಪ್ರಜೆಗಳಿಗೆ ಸ್ವಾತಂತ್ರ್ಯ ವಿದೆ. ಪ್ರಜೆಗಳ ಜ್ಞಾನದಿಂದ ದೇಶ ನಡೆದಿರೋದು.ಇದಕ್ಕಾಗಿ ಶ್ರೀ ರಾಮರಾಜ್ಯಕ್ಕೆ ತತ್ವಜ್ಞಾನದ ಅಗತ್ಯವಿದೆ. ಮೇಲಿನ ಎಲ್ಲಾ ದೋಷಗಳನ್ನು ನಮ್ಮಲ್ಲಿ ಕಾಣಬಹುದು. ಈ ದೋಷಗಳು ನಮ್ಮ ಜೀವನದ ಜೊತೆಗೆ ದೇಶದ ಭವಿಷ್ಯ ಮಾತ್ರವಲ್ಲ ಮಕ್ಕಳ ಭವಿಷ್ಯವೂ ಹಾಳಾಗುವ ಮೊದಲು ಜ್ಞಾನಿಗಳಾದವರು ಎಚ್ಚರವಾದರೆ ಒಳಗಿನ ಸಮಸ್ಯೆಗೆ ಒಳಗೇ ಪರಿಹಾರವಿದೆ. ಸಮಸ್ಯೆಯನ್ನು ಹೊತ್ತು ಹೊರನಡೆದಷ್ಟೂ ಇನ್ನಷ್ಟು ಬೆಳೆದು ತಿರುಗಿ ಬರೋದು ಕಷ್ಟ.
ಎಲ್ಲಾ ಸಮಸ್ಯೆಗೂ ಪರಿಹಾರವಿದೆ.ಆದರೆ ಅದರ ಮೂಲ ತಿಳಿಯುವುದು ಅಗತ್ಯವಿದೆ.ಮೂಲಾಧಾರ ಚಕ್ರ ಶುದ್ದಿಯಾಗದೆ ಸಹಸ್ರಾರ ಚಕ್ರ ಶುದ್ದವಾಗುವುದೆ? ಹೊರಗೆ ಚಕ್ರಕಟ್ಟಿಕೊಂಡು ಎಷ್ಟು ಸುತ್ತಾಡಿದರೂ ಕಾಲಹರಣ.ಅದಕ್ಕೆ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸಾಧಕರಾಗಿದ್ದರು.ನಾವೀಗ ಎಲ್ಲರಲ್ಲಿಯೂ ರಾಜಕೀಯ ಬೆಳೆಸಿಕೊಂಡು ಹಿಂದುಳಿದಿದ್ದೇವೆ. ಶ್ರೀ ರಾಮ ವ್ಯಕ್ತಿಯಲ್ಲ ಮಹಾಶಕ್ತಿ. ನಾಮ ಜಪದಿಂದಲೇ ಜ್ಞಾನೋದಯ ಮಾಡಿಕೊಂಡರೆ ಇನ್ನಷ್ಟು ಜೀವನ ಸರಳ ಸುಲಭ. ಸಾದು ಸಂತ ದಾಸ,ಶರಣರ ಸಂದೇಶ ಇದೇ ಆಗಿತ್ತಲ್ಲವೆ? ಪ್ರತಿಮೆಗೆ ಹಣ ಬೇಕು ಪ್ರತಿಭೆಯು ಜ್ಞಾನದಲ್ಲಿದೆ.ಜ್ಞಾನದ ಶಿಕ್ಷಣ ನೀಡದೆ ರಾಜಕೀಯ ಬೆಳೆಸಿದರೆ ಅಜ್ಞಾನದ ಅಸುರರ ಸಾಮ್ರಾಜ್ಯ.
ಉತ್ತಮನಾಯಕರಿದ್ದರೂ ಗುರುತಿಸುವ ಜ್ಞಾನ ಜನರಲ್ಲಿ ಇಲ್ಲವಾದರೆ ಪ್ರಜಾಪ್ರಭುತ್ವ ದೇಶದಲ್ಲಿ ಧರ್ಮ ಎಲ್ಲಿರುವುದು? ರಾಮನ ಹೆಸರಿನಲ್ಲಿ ರಾಜಕೀಯ ನಡೆಸಲು ಸುಲಭ ಆದರೆ ಅವನ ತತ್ವವರಿತು ನಡೆಯೋದು ಬಹಳ ಕಷ್ಟ.ಕಷ್ಟಪಟ್ಟು ತಂತ್ರದೆಡೆಗೆ ನಡೆಯೋ ಬದಲು ತತ್ವದೆಡೆಗೆ ನಡೆದರೆ ಶ್ರೀ ರಾಮನ ಸೇರಿದಂತೆ.ಇದನ್ನು ಮುಕ್ತಿ ಎಂದರು.
ಯಾರಿಗೆ ಸಿಕ್ಕಿದೆ ಮುಕ್ತಿ? ಭಗವಂತನ ಒಳಗೆ ದೇವಾ
ಸುರರಿಬ್ಬರೂ ಇದ್ದಂತೆ ದೇಶದೊಳಗೆ ಇದ್ದಾರೆ. ನಮ್ಮಲ್ಲಿ ಯಾವ ಶಕ್ತಿ ಇದೆಯೋ ಅದೇ ನಾವಾಗಿರುತ್ತೇವೆ. ಅಂದರೆ ನಮ್ಮಲ್ಲಿ ದೈವತ್ವ ದೈವತತ್ವ ಇದ್ದರೆ ಜೀವ ದೇವರೆಡೆಗೆ
ಅಸುರತ್ವವಿದ್ದು ಅಸುರಿ ಶಕ್ತಿಗೆ ಸಹಕರಿಸಿದರೆ ಅಸುರರಿಗೆ ಶಕ್ತಿ.ಇಷ್ಟೇ ಅಧ್ಯಾತ್ಮ. ತನ್ನೊಳಗಿನ ಶಕ್ತಿಯನ್ನು ತಾನೇ ಕಂಡುಕೊಳ್ಳಲು ಹಣ ಅಧಿಕಾರ,ಸ್ಥಾನಕ್ಕೆ ಮೊದಲು ಜ್ಞಾನದ ಅಗತ್ಯವಿದೆ. ಎಷ್ಟೇ ತಂತ್ರದಿಂದ ಜನಬಲ ಹಣಬಲ ಅಧಿಕಾರ ಪಡೆದರೂ ತತ್ವವಿಲ್ಲವಾದರೆ ಅತಂತ್ರ ಜೀವನ.
ಪ್ರಜಾಪ್ರಭುತ್ವದ ಪ್ರಜೆಗಳೇ ರಾಜರು. ರಾಜಕಾರಣಿಗಳು ಅವರ ಸೇವಕರಾದಾಗ ಪ್ರಜೆಗಳ ಸಹಕಾರಕ್ಕೆ ತಕ್ಕಂತೆ ಸೇವಕರು ಬೆಳೆದಿರುವರು.ಭ್ರಷ್ಟರಿಗೆ ಸಹಕರಿಸಿ ಶಿಷ್ಟರನ್ನು ಹುಡುಕಿದರೆ ಹೇಗೆ ಸಾಧ್ಯ? ಹಾಗೆ ಶಿಕ್ಷಣದಲ್ಲಿಯೇ ವಿದೇಶಿ ವಿಜ್ಞಾನದ ವಿಷಯ ತುಂಬಿಸಿ ಸ್ವದೇಶದ ಜ್ಞಾನ ಹುಡುಕಿದರೆ ಸಿಗೋದಿಲ್ಲ.ಮಕ್ಕಳನ್ನು ಹೊರದೇಶಕ್ಕೆ ಕಳುಹಿಸಿ ಸ್ವದೇಶದ ಜನರನ್ನು ಆಳುವುದು ಅಧರ್ಮ. ಪರಕೀಯರು ನಮ್ಮವರಾದರೆ ಸ್ವರ್ಗ ನಮ್ಮವರೆ ಪರಕೀಯರಾದರೆ ನರಕ
No comments:
Post a Comment