ಒಂದು ದೇಶದ ಭವಿಷ್ಯ ಅದರ ಮೂಲ ಶಿಕ್ಷಣದಲ್ಲಿರುತ್ತದೆ.
ಭಾರತದ ಭವಿಷ್ಯ ಮೂಲ ಶಿಕ್ಷಣದಲ್ಲಿತ್ತು ಯೋಗ್ಯಯೋಗ ಶಿಕ್ಷಣದ ಮೂಲಕ ಯೋಗಿಗಳ ಜ್ಞಾನಿಗಳ ದೇಶವನ್ನು ಕಟ್ಟಲು ಬೇಕು ರಾಜಯೋಗ ಆದರೆ ರಾಜಕೀಯದಿಂದ ದೇಶವನ್ನು ವಿದೇಶ ಮಾಡಿ ಆಳುವುದಕ್ಕೆ ಸಾಕಷ್ಟು ಹಣಬಳಕೆ ಆಗಿದೆ ಆಗುತ್ತಿದೆ.ಇದರ ಫಲಾನುಭವಿಗಳು ಸಾಲದ ದವಡೆಗೆ ಸಿಲುಕಿ ನಿಜವಾದ ಜೀವನದ ಅರ್ಥ ತಿಳಿಯದೆ ಜೀವ ಹೋಗುತ್ತಿದೆ.ಬ್ರಿಟಿಷ್ ಸರ್ಕಾರವೂ ತಂತ್ರದಿಂದಲೇ ದೇಶವಾಳಿತ್ತು.ತಂತ್ರಜ್ಞಾನದ ಶಿಕ್ಷಣ ಪಡೆದ ಭಾರತೀಯರೂ ಯಾಂತ್ರಿಕವಾಗಿ ಮುಂದೆ ನಡೆದು ಸ್ವತಂತ್ರ ಜ್ಞಾನವಿಲ್ಲದೆ ಯಾರೋ ಹೇಳಿದ್ದನ್ನು ಸತ್ಯ ಎಂದು ನಂಬಿ ಜನರನ್ನು ಒಗ್ಗೂಡಿಸಿಕೊಂಡು ಮನೆಯಿಂದ ಹೊರಗೆಳೆದು ರಸ್ತೆಯಲ್ಲಿ ಹೋರಾಟ,ಹಾರಾಟ,ಮಾರಾಟಕ್ಕೆ ಬಳಸಿಕೊಂಡಿರುವ ಮಧ್ಯವರ್ತಿಗಳಿಗೆ ಎರಡೂ ಕಡೆಯಿಂದ
ಹರಿದುಹೋಗುತ್ತಿರುವ ಹಣ,ಅಧಿಕಾರ,ವಿಷಯ,ವಸ್ತು ಇನ್ನೂ ಉಚಿತ ಭಾಗ್ಯಗಳಲ್ಲಿ ಪಾಲಿದೆ ಎಂದರೆ ಜೀವನಕ್ಕೆ ಏನೂ ಕೊರತೆಯಾಗದು.ಆದರೆ ಮಾನವನಿಗೆ ಮುಖ್ಯವಾಗಿ ಇರಬೇಕಾದ ಆತ್ಮಜ್ಞಾನದ ಕೊರತೆಯನ್ನು ಇವುಗಳು ತೀರಿಸಲಾಗದು. ಇದನ್ನು ಬಿಟ್ಟು ಯಾರು ಸ್ವತಂತ್ರ ವಾಗಿ ನಡೆದರೋ ಅವರುಗಳು ಮಾತ್ರ ಜ್ಞಾನಿಗಳಾಗಿ ಯೋಗಿಗಳಾಗಿ ದೇಶವನ್ನು ಧರ್ಮ, ಸಂಸ್ಕೃತಿಗಳ ಮೂಲಕ ಕಟ್ಟಿ ಬೆಳೆಸಿದ್ದರು.
ಈಗಲೂ ಸಾಕಷ್ಟು ಬದಲಾವಣೆಗೆ ಅವಕಾಶವಿದೆ.ಆದರೆ ಶಿಕ್ಷಣ ಮಾತ್ರ ಬದಲಾಗದೆ ತಂತ್ರಜ್ಞಾನದ ಅಡಿಯಲ್ಲಿ ಮಕ್ಕಳು ಮಹಿಳೆಯರನ್ನು ಸ್ವತಂತ್ರ ಜೀವನನಡೆಸಲು ಬಿಟ್ಟರೆ
ತಂತ್ರ ಯಾವತ್ತೂ ಬೇರೆ ಬೇರೆ ಮಾಡುತ್ತದೆ.ತತ್ವವಿಲ್ಲದ ತಂತ್ರ ರಾಜಕೀಯವಾಗಿಸಿ ಮಾನವ ಮಾನವನ ನಡುವೆ ಬಿರುಕು ಬಿಡಿಸಿ ಅಂತರದಲ್ಲಿ ಮೂರನೆ ಶಕ್ತಿ ತೂರಿಕೊಂಡರೆ
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದಂತಾಗುವುದರಲ್ಲಿ ಸಂದೇಹವಿಲ್ಲ.
ಸಾಮಾನ್ಯಜ್ಞಾನ ವಿದ್ದವರು ಸತ್ಯ ತಿಳಿದರೆ ಉತ್ತಮ.ನಮ್ಮ ಭೌತಿಕ ಸಹಕಾರದ ಪ್ರತಿಫಲ ಭೌತಿಕದಲ್ಲಿಯೇ ಸಿಗಬಹುದು. ಆದರೆ ಅಧ್ಯಾತ್ಮ ದೆಡೆಗೆ ನಡೆದರೆ ಮಾತ್ರ ಇಹಪರದ ಜ್ಞಾನ ಸಿಗುವುದು. ಯಾವ ದಾರಿಯಲ್ಲಿ ನಡೆದರೆ ನಿಜವಾದ ಶಾಂತಿ ಸಿಗುವುದೆನ್ನುವ ಶಿಕ್ಷಣ ನೀಡದೆ ಹೊರಗಿನ ರಸ್ತೆಗಳಿಗೆ ತೇಪೆ ಹಾಕಲು ಕೋಟ್ಯಾಂತರ ಹಣ ಬಳಸಿದರೆ ಅದರ ಸಾಲದ ಹೊರೆ ಪ್ರಜೆಗಳೇ ಹೋರಬೇಕು. ಯಾವ ರಾಜಕಾರಣಿಗಳೂ ಮಾಧ್ಯಮಗಳು ಬರೋದಿಲ್ಲ. ನಿಜವಾದ ದೇಶಭಕ್ತಿ ಒಳಗೆ ಜನ್ಮಪಡೆಯಲು ದೇಶಭಕ್ತಿಯ ಶಿಕ್ಷಣವಿರಬೇಕಿತ್ತು.ಈಗಿನ ಶಿಕ್ಷಣವೇ ವಿದೇಶಿ ವಿಜ್ಞಾನದೆಡೆಗೆ ಭರದಿಂದ ಸಾಗಿದೆ.ಮಕ್ಕಳ ಒಳಗೆ ತುಂಬುವ ಪ್ರತಿಯೊಂದು ವಿಷಯವೂ ವಿಷವಾಗದಂತೆ ತಡೆಯೋದಕ್ಕೆ ಪೋಷಕರಿಗೂ ಕಷ್ಟವಾಗಿದೆ.
ಕಾರಣವಿಷ್ಟೆ ಶಾಲಾ ಕಾಲೇಜುಗಳಲ್ಲಿ ಓದದಿರುವಮಕ್ಕಳಿಗೆ ಕಠಿಣ ಶಿಕ್ಷೆ ನೀಡಿಯಾದರೂ ತಲೆಗೆ ತುಂಬಲು ಪೋಷಕರ ಸಹಕಾರವಿದೆ.ಅದೇ ಉತ್ತಮ ವಿಚಾರ ತುಂಬಲು ವಿರೋಧವಿದೆ ಎಂದರೆ ನಿಜವಾದ ಶೋಷಣೆ ಯಾರಿಂದ ಯಾರಿಗಾಗುತ್ತಿದೆ?
ಸಣ್ಣ ಮುಗ್ದ ಮಕ್ಕಳಿಗೆ ಆಗುವ ಶೋಷಣೆಯ ಪ್ರತಿಫಲ ಮುಂದೆ ಅವರು ಪೋಷಕರನ್ನು ಬಿಟ್ಟು ಹೋದಾಗ ಅಥವಾ ಹತ್ತಿರವಿದ್ದೇ ಶೋಷಣೆ ಮಾಡುವಾಗ ಯಾವ ಸರ್ಕಾರ ಸಹಾಯ ಮಾಡುತ್ತದೆ? ಹಾಗೆ ಮಧ್ಯವರ್ತಿಗಳು ಮಾಧ್ಯಮಗಳು ಇಂತಹ ವಿಷಯವನ್ನು ಎಲ್ಲೆಡೆ ಹರಡಬಹುದು ಮಕ್ಕಳ ಮನಸ್ಥಿತಿ ಬದಯಿಸಲಾಗುವುದೆ?
ಎಲ್ಲಿಗೆ ಹೊರಟಿರುವುದು ಭಾರತೀಯರು?
ಮಂತ್ ತಂತ್ರ ಯಂತ್ರಗಳು ಮಾಧ್ಯಮಗಳಷ್ಡೆ.ಇದರಿಂದಾಗಿ ಸ್ವತಂತ್ರ ಜ್ಞಾನ ಪಡೆಯುವುದಕ್ಕೆ ಕಷ್ಟ ಸ್ವತಂತ್ರ ಜೀವನ ನಡೆಸುವುದಕ್ಕೆ ಕಾಡಿಗೆ ಹೋಗಬೇಕಷ್ಟೆ. ಹಾಗಾದರೆ ನಮ್ಮ ರಾಜಕೀಯತೆ ಕಾಡನ್ನು ನಾಡಾಗಿಸುವುದಕ್ಕೆ ಹೊರಟಿದ್ದರೆ ಪ್ರಕೃತಿ ವಿರುದ್ದ ನಡೆದಂತೆ.
ಸರ್ಕಾರದ ಒಂದೊಂದು ಐಸೆಯೂ ಜನರ ಹಾಗು ದೇಶದ ಸಾಲವಾಗಿ ದೇಶ ಸೇವೆ ಮಾಡಿಯೇ ತೀರಿಸಬೇಕು. ಹಾಗೆಯೇ ನೆಲಜಲದ ಋಣವೂ ತೀರಿಸಲು ಭೂ ಸೇವೆ ನಿಸ್ವಾರ್ಥ ನಿರಹಂಕಾರದಿಂದ ಮಾಡಬೇಕೆನ್ನುವ ಅಧ್ಯಾತ್ಮ ಇಂದಿಗೂ ಸತ್ಯ.ಈ ಸತ್ಯವನ್ನು ಅಧ್ಯಾತ್ಮ ಚಿಂತಕರಾದವರೆ ಸರಿಯಾಗಿ ತಿಳಿಯದೆ ರಾಜಕೀಯಕ್ಕೆ ಇಳಿದರೆ ಬೇಲಿಯೇ ಎದ್ದು ಹೊಲಮೇಯ್ದಂತೆ ಎನ್ನುವರು.ಕಲಿಗಾಲದಲ್ಲಿ ಯಾವ ಸ್ಥಿತಿ ಇರುವುದೆನ್ನುವ ಪಾಂಡವರ ಪ್ರಶ್ನೆಗೆ ಶ್ರೀ ಕೃಷ್ಣ ನೀಡಿದ ಉತ್ತರ ಈಗಲೇ ನೋಡುವಂತಾದರೆ ಮುಂದೆ ಹೇಗಿರಬಹುದು? ಬಿತ್ತಿದ ವಿಷಬೀಜ ಮರವಾಗೋ ಮೊದಲು ಗಿಡವನ್ನು ಕಡಿದುಹಾಕುವುದು ಬುದ್ದಿವಂತರ ಲಕ್ಷಣ.ಬುದ್ದಿಗೆ ಮಂಕುಬಡಿದಿದ್ದರೆ ಬದಲಾವಣೆ ಕಷ್ಟ. ಕೋಟ್ಯಾಂತರ ಹಣದ ಸಾಲ ತೀರಿಸಲು ಕೋಟಿ ಜನ್ಮ ಬೇಕೆ? ಒಂದೇ ಜನ್ಮದಲ್ಲಿ ಇಷ್ಟೊಂದು ದುಡಿದರೂ ಅದು ಅಧರ್ಮ, ಅನ್ಯಾಯ,ಅಸತ್ಯದ ಭ್ರಷ್ಟಾಚಾರದ ಹಣವಾಗಿದ್ದರೆ ಪರಮಾತ್ಮನ ಸಾಲ ಮನ್ನಾ ಆಗದು. ಒಟ್ಟಿನಲ್ಲಿ ಕೋಟಿ ವಿದ್ಯೆಗಿಂತ ಮೇಟಿವಿದ್ಯೆಯೇ ಮೇಲು ಎನ್ನುತ್ತಿದ್ದ ಜ್ಞಾನಿಗಳ ದೇಶವನ್ನು ತಂತ್ರದಿಂದ ಮೇಲೆತ್ತಲು ಹೋಗಿ ತಮ್ಮ ಸ್ವತಂತ್ರ ಜ್ಞಾನವೇ ಹರಣವಾಗಿದೆ. ಬಡತನವನ್ನು ಜ್ಞಾನದಿಂದಲೇ ಮೇಲೆ ತರುವ ಶಿಕ್ಷಣದ ಕೊರತೆ ಭಾರತೀಯರನ್ನು ಈ ಸ್ಥಿತಿಗೆ ತಂದಿದೆ.ಎಲ್ಲಿಯವರೆಗೆ ಸ್ತ್ರೀ ಶಕ್ತಿಗೆ ಅಧ್ಯಾತ್ಮ ಸತ್ಯದ ಅರಿವು ಬರುವುದಿಲ್ಲವೋ ಅಲ್ಲಿಯವರೆಗೆ ಅವಳ ಸಂಸಾರದಲ್ಲಿ ಹಣಕ್ಕೆ ಹೆಚ್ಚಿನ ಸ್ಥಾನಮಾನವಿದ್ದು ಜ್ಞಾನ ಹಿಂದುಳಿದು ಜೀವನದ ಸಮಸ್ಯೆಗೆ ಪರಿಹಾರವಿಲ್ಲ. ಭೌತಿಕದಲ್ಲಿ ಸಾಕಷ್ಟು ವೈಧ್ಯಕೀಯ ಸಂಘ ಸಂಸ್ಥೆಗಳು ಎದ್ದುನಿಂತು ರೋಗಕ್ಕೆ ಔಷಧ ಕೊಡಬಹುದು.ಈರೋಗದ ಮೂಲವೇ ತಿಳಿಯದ ಮಾನವನಿಗೆ ಹೊರಗಿನಿಂದ ಕೊಡುವ ಚಿಕಿತ್ಸೆ ಇನ್ನಷ್ಟು ರೋಗ ಒಳಗಿನಿಂದ ಬೆಳೆಸಿದರೆ ರೋಗ ಹಂಚಿಕೊಳ್ಳಲು ಕಷ್ಟ.ಹಣ ಹಂಚಿಕೊಳ್ಳಲು ಎಲ್ಲಾ ಮುಂದಿರುತ್ತಾರೆ ಆದರೆ ಅದರಿಂದ ಹುಟ್ಟಿದ ರೋಗವನ್ನು ಒಬ್ಬರೆ ಅನುಭವಿಸಬೇಕು.ಭ್ರಷ್ಟಾಚಾರದ ದೊಡ್ಡ ಸುಳಿಯಲ್ಲಿ ದ್ದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಭ್ರಷ್ಟರ ಹೋರಾಟ ಹಾರಾಟ ಮಾರಾಟಕ್ಕೆ ಶಿಷ್ಟರೂ ಸಹಕರಿಸಿದರೆ ಇರುವ ಅಲ್ಪ ಸ್ವಲ್ಪ ಜ್ಞಾನವೂ ಹಿಂದುಳಿದು ಹಿಂದೂ ದೇಶ ಹಿಂದುಳಿದವರ ದೇಶವಾಗುತ್ತದೆ.
ಸರಳಜೀವನ,ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಧರ್ಮ, ನ್ಯಾಯ,ನೀತಿ,ಸಂಸ್ಕೃತಿ ( ಸಂಸ್ಕಾರಯುತ ಕೃತಿ) ಇವುಗಳಿಗೆ ಸತ್ಯಜ್ಞಾನವಿರಬೇಕು. ರಾಜಕೀಯದಲ್ಲಿ ಇದೆಯೇ? ರಾಜರ ಕಾಲದಲ್ಲಿದ್ದ ಶಿಕ್ಷಣ ಪದ್ದತಿ ಈಗಿದೆಯೆ? ಕೋಟ್ಯಾಂತರ ರೂ ಸಾಲ ಮಾಡಿ ಕಲಿಸುವ ಶಿಕ್ಷಣದಿಂದ ಮಕ್ಕಳಿಗೆ ಆತ್ಮಜ್ಞಾನ ಬಂದಿದೆಯೆ? ಕೊನೆಪಕ್ಷ ಮಾನವರಾಗಿದ್ದರೆ ಉತ್ತಮ. ಎಲ್ಲಾ ರೀತಿಯಲ್ಲಿಯೂ ಶೋಷಣೆ ಮಾಡುವ ಸರ್ಕಾರಗಳಿಗೆ ಅಧಿಕಾರದ ದಾಹವಷ್ಟೆ. ಇಲ್ಲಿ ತಾವೇ ಆಪರೇಷನ್ ಮೂಲಕ
ರೋಗಕ್ಕೆ ಚಿಕಿತ್ಸೆ ಪಡೆದಿರುವಾಗ ಆರೋಗ್ಯವಂತ ಸಮಾಜ ಕಟ್ಟುವುದಕ್ಕೆ ಸಾಧ್ಯವಿಲ್ಲ.ಹುಟ್ಡುಗುಣ ಸುಟ್ಟರೂ ಹೋಗದು ಎಂದಂತೆ ಭ್ರಷ್ಟಾಚಾರವನ್ನು ಮೇಮೇಲೆಳೆದುಕೊಂಡು ಜನರನ್ನು ಹಣದಿಂದ ಖರೀದಿಸಿ ಅಧಿಕಾರ ಪಡೆದವರಲ್ಲಿ ಜ್ಞಾನದ ಕೊರತೆಯಿದೆ. ದೇಶವನ್ನು ಸ್ಮಾರ್ಟ್ ಮಾಡಲು ವಿದೇಶಿಗಳನ್ನು ಕರೆತರುವುದರಲ್ಲಿ ಪ್ರಗತಿ ಕಾಣಬಹುದಾದರೆ
ಹಿಂದಿನ ಬ್ರಿಟಿಷ್ ಸರ್ಕಾರವನ್ನು ಪ್ರಗತಿಯ ಸರ್ಕಾರ ಎಂದರೆ ತಪ್ಪಿಲ್ಲ.ಒಟ್ಟಿನಲ್ಲಿ ಅಂದಿನ ದೇಶಭಕ್ತರು ಪರಕೀಯರನ್ನು ಓಡಿಸಲು ರಾಜಯೋಗದೆಡೆಗೆ ನಡೆದರೆ ಇಂದಿನ ಹೆಚ್ಚಿನವರಿಗೆ ತಾವೇ ವಿದೇಶಿಗಳಿಗೆ ಮಣೆಹಾಕಿ ನಮ್ಮವರನ್ನು ಹಿಂದುಳಿಸಿ ಆಳುತ್ತಿರುವ ಸತ್ಯದ ಅರಿವಿಲ್ಲ.ಬದಲಾವಣೆ ಒಳಗಿನಿಂದ ನಡೆಸಬೇಕಿದೆ. ಆತ್ಮಸಾಕ್ಷಿ ಬಿಟ್ಟು ನಡೆದರೆ ಆತ್ಮಹತ್ಯೆ. ಆತ್ಮನಿರ್ಭರ ಭಾರತ ಅದ್ಯಾತ್ಮ ಸತ್ಯದಲ್ಲಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಬದಲಾಗಿ ಕೆರೆಯ ನೀರನು ಕೊಳಚೆಗೆ ಚೆಲ್ಲಿದರೆ ರೋಗವೇ ಹೆಚ್ಚುವುದು.
No comments:
Post a Comment