"**ಭೂತಕಾಲ"ದ ಪ್ರಶ್ನೆಗಳು, ವರ್ತಮಾನ" ದಲ್ಲಿ ಸಮಸ್ಯೆಗಳನ್ನು ಜಾಸ್ತಿಯಾಗುವಂತೆ ಮಾಡುತ್ತವೆ.**
**ಹುಚ್ಚು ಸಂತೆಯಲ್ಲಿ ಪ್ರಶ್ನೆಗಳದ್ದೇ ಗದ್ದಲ. ಉತ್ತರಗಳು ಮಾತ್ರ ಮೌನವ್ರತವನ್ನಾಚರಿಸುತ್ತಿದೆ.**
ಭೂತ ವರ್ತಮಾನ ಭವಿಷ್ಯ, ಸೃಷ್ಟಿ ಸ್ಥಿತಿ ಲಯ,ಬ್ರಹ್ಮ ವಿಷ್ಣು ಮಹೇಶ್ವರ, ತಾಯಿ ತಂದೆ ಮಕ್ಕಳು, ದೇವರು ಮಾನವರು ಅಸುರರು..ಹೀಗೇ ಮೂರರಲ್ಲಿರುವ ಭಿನ್ನಾಭಿಪ್ರಾಯ ವೇ ಮಾನವನಜೀವನಕ್ಕೆ ಮುಳ್ಳಾಗಿವೆ. ಇವುಗಳನ್ನು ತತ್ವದಿಂದ ಅರ್ಥ ಮಾಡಿಕೊಂಡರೆ ಒಗ್ಗಟ್ಟು ತಂತ್ರದಿಂದ ರಾಜಕೀಯಕ್ಕೆ ಬಳಸಿದರೆ ಬಿಕ್ಕಟ್ಟು.
ಹುಚ್ಚರ ಸಂತೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಸಿಗದು.
ಆದರೆ ಶಾಂತವಾಗಿರುವ ಮನಸ್ಸಿನಲ್ಲಿ ಉತ್ತರವಿದ್ದರೂ ಹುಚ್ಚರಿಗೆ ತಿಳಿಸಿದರೂ ಅರ್ಥ ವಾಗದ ಕಾರಣ ಮೌನವಾಗಿ ವ್ರತವನ್ನಾಚರಿಸಿಕೊಂಡಿದ್ದವರು ಮುಕ್ತಿ ಮಾರ್ಗ ಹಿಡಿದರು. ಈಗ ಮುಕ್ತರಾದವರನ್ನು ಮಧ್ಯೆ ತಂದು ಹುಚ್ಚರ ಸಂತೆಯಲ್ಲಿ ಪ್ರದರ್ಶನದ ವಿಗ್ರಹವಾಗಿಸಿದರೆ ವಿಗ್ರಹದೊಳಗಿದ್ದ ಜ್ಞಾನ ಬರುವುದೆ ಅಥವಾ ಅದನ್ನು ವ್ಯವಹಾರಕ್ಕೆ ಬಳಸಿ ಮತ್ತಷ್ಟು ಹಣಗಳಿಸುವರೆ? ನಿರಾಕಾರ ಬ್ರಹ್ಮನ ಹಿಂದೆ ನಡೆದವರನ್ನು ಮಹಾತ್ಮರೆಂದರು.
ಅತಿಯಾದ ಪುರಾಣ ಇತಿಹಾಸದ ಪ್ರಚಾರದಲ್ಲಿರುವ ರಾಜಕೀಯ ಶಕ್ತಿಯಿಂದ ಯಾರಿಗೆ ಲಾಭವೋ ನಷ್ಟವೋ ತಿಳಿಯದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ಹಗರಣಗಳು ಬೆಳೆದು ನಿಂತಿದೆ. ಭ್ರಷ್ಟಾಚಾರದ ಹಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಮಾನವನ ಆಂತರಿಕ ಶಕ್ತಿಯು ವಾಸ್ತವದ ಸತ್ಯಬಿಟ್ಟು ನಡೆದರೆ ಪರಿಪೂರ್ಣತೆ ಕಾಣದು.
ಸೃಷ್ಟಿ ಸಿದ ಅಸತ್ಯವೇ ಸ್ಥಿತಿಗೆ ಕಾರಣವಾಗಿ ಲಯವಾಗುತ್ತದೆ.ಅದರ ಬದಲು ಸತ್ಯವನ್ನರಿತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಲಯವನ್ನು ಸ್ವೀಕರಿಸುವ ಜ್ಞಾನವಿದ್ದರೆ ಉತ್ತಮ ಸದ್ಗತಿ.
ಮಾತಿಗಿಂತ ಕೃತಿಯೇ ಮೇಲೆಂದರು, ಮಾತಯ ಬೆಳ್ಳೆ ಮೌನಬಂಗಾರವೆಂದರು.ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು. ಹೀಗೇ ಮಾತು ಬೇಕು ಯಾವ ಮಾತಾಡಬೇಕೆಂಬ ಅರಿವಿರಬೇಕು. ಸತ್ಯ ತಿಳಿಸುವುದೇ ತಪ್ಪು ಎನ್ನುವ ಮಟ್ಟಿಗೆ ಜಗತ್ತು ಮಿಥ್ಯವನ್ನು ನಂಬಿ ನಡೆದಿದೆ. ಹಾಗಾಗಿ ಯಾರಿಗೆ ಯಾವುದು ಸರಿ ಎನಿಸುವುದೋ ಅದನ್ನು ಒಪ್ಪಿ ನಡೆದ ಮೇಲೆ ತಪ್ಪಾದರೂ ವಿರೋಧಿಸುವ ಬದಲು ತಪ್ಪು ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟರೆ ಉತ್ತಮ ಶಾಂತಿ ಒಳಗೆ ಸಿಗಬಹುದು.
ತಪ್ಪು ಮಾಡದವರು ಯಾರಿದ್ದಾರೆ? ತಪ್ಪು ಮಾಡಿಯೇ ಮಾನವ ತಿದ್ದಿಕೊಳ್ಳುವುದು. ಇದನ್ನು ಪುರಾಣ ಇತಿಹಾಸದ ಕಾಲದ ಕಥೆಯಲ್ಲಿಯೂ ಕಾಣುತ್ತೇವೆ. ಒಂದು ಸಂದೇಶ
ಪುರಾಣ ಇತಿಹಾಸವು ನಮ್ಮನ್ನು ರಾಜಯೋಗದೆಡೆಗೆ ನಡೆಸಬೇಕು ರಾಜಕೀಯದೆಡೆಗೆ ನಡೆಸಿದಷ್ಟೂ ಅಜ್ಞಾನ ಆವರಿಸುತ್ತದೆ.ಅಂದಿನ ರಾಜರಲ್ಲಿದ್ದ ಧರ್ಮ ಇಂದಿನವರಲ್ಲಿ ಕಾಣಲಾಗದ ಮೇಲೆ ಯಾರು ಶ್ರೇಷ್ಟರು? ಅಂದಿನ ರಾಜಪ್ರಭುತ್ವಕ್ಕೂ ಇಂದಿನ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವಿದೆ.ಅಂದಿನ ಶಿಕ್ಷಣ ರಾಜಯೋಗದಲ್ಲಿತ್ತು
ಇಂದಿನ ಶಿಕ್ಷಣವೇ ರಾಜಕೀಯಮಯವಾಗಿದೆ. ಆಂತರಿಕ ಜ್ಞಾನ ಗುರುತಿಸದ ಶಿಕ್ಷಣ ಶಿಕ್ಷಣವಾಗೋದಿಲ್ಲ.
ಕಾಲಬದಲಾವಣೆಗೆ ಕಾರಣವೇ ಶಿಕ್ಷಣದೊಳಗಿನ ವಿಜ್ಞಾನ.(ವಿಶೇಷವಾದ ಜ್ಞಾನ)
ಇದರಲ್ಲಿ ಅಧ್ಯಾತ್ಮ ವಿಜ್ಞಾನವಿದ್ದರೆ ಶಾಂತಿ.ಇಲ್ಲವಾದರೆ ಕ್ರಾಂತಿಯ ಜೀವನ.
No comments:
Post a Comment