ಶಾರದೆಯನ್ನೇ ಕೆಳಗಿಳಿಸಿ ಎಷ್ಟೋ ವರ್ಷಗಳಿಂದ ಆಳಿದ ಭಾರತವನ್ನು ಮತ್ತೆ ಶಾರದೆಯನ್ನು ಮೇಲೇರಿಸುವುದರ ಮೂಲಕ ಸರಿಪಡಿಸುವ ಪ್ರಯತ್ನ ಭಾರತೀಯರು ಮಾಡುತ್ತಿರುವಾಗ ನಿಜವಾದ ದೇಶಭಕ್ತರು ಮನೆಯೊಳಗಿರುವ ಜ್ಞಾನಿಯಾದ ತಾಯಿಯನ್ನು ಎಷ್ಟರ ಮಟ್ಟಿಗೆ ತಿಳಿದುಕೊಂಡು ದೈವತ್ವದೆಡೆಗೆ ಹೋಗುವರೋ ಅಷ್ಟು ನಮ್ಮ ಜೀವನದ ಸತ್ಯಾಸತ್ಯತೆಯನ್ನು ತಿಳಿಯಬಹುದು.
ಆಂತರಿಕ ಶಕ್ತಿಯಾಗಿರುವ ಜ್ಞಾನವು ಭೌತಿಕದಲ್ಲಿ ವಿಜ್ಞಾನವಾಗಿ ಹೊರಜಗತ್ತನೆಡೆಗೆ ವೇಗವಾಗಿ ಹೊರಟಿದೆ ಆದರೆ ಒಳಗಿರುವ ಸತ್ಯ ಹಿಂದುಳಿದರೆ ಧರ್ಮವೂ ಹಿಂದೇ ಇರುತ್ತದೆ.ಒಟ್ಟಿನಲ್ಲಿ ಸತ್ಯ ಧರ್ಮದ ಜೋಡಿಪದವು ಜೋಡಿಸಿಕೊಂಡಿರಲು ಮಾನವರು ತಮ್ಮೊಳಗಿರುವ ಆತ್ಮಸಾಕ್ಷಿಯ ಜೊತೆಗೆ ಧರ್ಮವನ್ನರಿತರೆ ದೇಶ ಒಂದೇ ಎನ್ನುವ ಸತ್ಯ ಅರ್ಥ ವಾಗುತ್ತದೆ.ದೇಶಭಕ್ತಿಯನ್ನು ವಿದೇಶದಲ್ಲಿ ನೆಲೆಸಿ ಬೆಳೆಸುವ ಅಗತ್ಯವಿಲ್ಲ.ದೇಶದೊಳಗೆ ಇದ್ದು ಬೆಳೆಸಿಕೊಂಡರೆ ಒಳಗಿನ ಆತ್ಮ ಜಾಗೃತ ವಾಗುತ್ತದೆ ಇದು ಆತ್ಮನಿರ್ಭರ ಭಾರತ. ವಿಗ್ರಹದೊಳಗಿರುವ ದೇವಿ ಮಾತನಾಡೋದಿಲ್ಲ ಆದರೆ ,ಅವಳ ಭಕ್ತರಿಂದ ಮಾತನಾಡಿಸುತ್ತಾಳೆನ್ನುವ ಅದ್ವೈತ ತತ್ವ ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವೆಲ್ಲರೂ ಒಂದೇ ದೇಶದ ಪ್ರಜಾಪ್ರಭುತ್ವ ದ ಪ್ರಜೆಯಾಗಿ ಸಾಮಾನ್ಯರಲ್ಲಿರುವ ಸತ್ಯವನ್ನು ಅಧ್ಯಾತ್ಮ ದಿಂದ ತಿಳಿದಾಗ ಸಾಧ್ಯವಿದೆ. ಅಧಿಕಾರ,ಹಣ,ಸ್ಥಾನಮಾನ ಕೊಟ್ಟಿರುವ ಪ್ರಜೆಗಳಲ್ಲಿಯೂ ಅದೇ ತಾಯಿ ನೆಲೆಸಿರುವಾಗ ಅವರಲ್ಲಿರುವ ಜ್ಞಾನವೇಕೆ ಕಾಣೋದಿಲ್ಲ? ಒಟ್ಟಿನಲ್ಲಿ ಪ್ರತಿಮೆಗೆ ಕೊಡುವ ಗೌರವ ಪ್ರತಿಭೆಗೆ ಜ್ಞಾನಕ್ಕೆ ಕೊಡದಿರೋದರ ಪರಿಣಾಮವೇ ಇಂದಿನ ಭ್ರಷ್ಟಾಚಾರ. ಎಲ್ಲಿ ಸತ್ಯ ಧರ್ಮ ಇರುವುದೋ ಅಲ್ಲಿ ಶಾಂತಿಯಿರುವುದು. ಎಲ್ಲಿ ಸತ್ಯಜ್ಞಾನವಿರುವುದೋ ಅಲ್ಲಿ ರಾಜಕೀಯವಿರದು..ರಾಜಕೀಯವಿರಲಿ ಆದರೆ ಅದರಲ್ಲಿ ಧರ್ಮ ವಿದ್ದರೆ ಉತ್ತಮ ಸಮಾಜನಿರ್ಮಾಣ ಸಾಧ್ಯವಿದೆ.
ಪ್ರಜಾಪ್ರಭುತ್ವದ ಪ್ರತಿಯೊಂದು ಕ್ಷೇತ್ರವೂ ಬೆಳೆದಿರೋದು ಪ್ರಜೆಗಳ ಸಹಕಾರದಿಂದಲೇ ಹೀಗಿರುವಾಗ ಭ್ರಷ್ಟಾಚಾರದ ಬೆಳವಣಿಗೆಯೂ ಸಹಕಾರದಿಂದಲೇ. ಇದನ್ನು ತಡೆಯಲು ಶಿಷ್ಟಾಚಾರ ದ ಶಿಕ್ಷಣ ನೀಡುವುದು ಪ್ರಜಾಧರ್ಮ. ಜ್ಞಾನದ ದೇವತೆಗೆ ರಾಜಕೀಯದ ಅಗತ್ಯವಿಲ್ಲ ರಾಜಯೋಗದ ಅಗತ್ಯವಿದೆ.ಪ್ರತಿಯೊಬ್ಬರಲ್ಲಿಯೂ ಅವರದೇ ಆದ ಮೂಲ ಧರ್ಮ ಕರ್ಮ ದ ಜ್ಞಾನವಿದೆ.ಅದನ್ನು ಗುರುತಿಸಿ ಪೂರಕ ಶಿಕ್ಷಣ ನೀಡುವ ಸರ್ಕಾರ ಬೇಕಷ್ಟೆ.ಇಲ್ಲಿ ಸರ್ಕಾರ ಒಬ್ಬ ವ್ಯಕ್ತಿಯಿಂದ ನಡೆದಿಲ್ಲ.ಪ್ರತಿಯೊಬ್ಬರ ಶಕ್ತಿಯಿಂದ ನಡೆದಿದೆ.ಆ ಶಕ್ತಿ ನಮ್ಮ ಆತ್ಮಜ್ಞಾನವನ್ನು ಬೆಳೆಸುವಂತಿದ್ದರೆ ನಮ್ಮ ಅರಿವೇ ಗುರುವಾಗಿ ಸ್ವತಂತ್ರ ಜ್ಞಾನೋದಯ ಸಾಧ್ಯ.
ಜ್ಞಾನ ಕಣ್ಣಿಗೆ ಕಾಣೋದಿಲ್ಲವೆಂದ ಮಾತ್ರಕ್ಕೆ ಅದನ್ನು ದುರ್ಭಳಕೆ ಮಾಡಿಕೊಂಡರೆ ಅಜ್ಞಾನವಷ್ಟೆ. ಮಂತ್ರ ತಂತ್ರ ಯಂತ್ರದಿಂದ ಸುಜ್ಞಾನವೂ ಪಡೆಯಬಹುದು. ಸ್ವತಂತ್ರ ಜ್ಞಾನಿಗಳಾಗಬಹುದು. ಆದರೆ ಇದನ್ನು ಕುತಂತ್ರದಿಂದ ಬಳಸಿದರೆ ಮಾನವನ ಜೀವನವೇ ಅತಂತ್ರಸ್ಥಿತಿಗೆ ತಲುಪುತ್ತದೆ. ಇದೇ ಕಾರಣಕ್ಕಾಗಿ ತತ್ವಜ್ಞಾನಿಗಳಾದವರು ಎಲ್ಲರನ್ನೂ ಒಂದುಗೂಡಿಸುವ ಮೂಲಕ ಸಮಾಜದಲ್ಲಿ ಸಮಾನತೆ,ಒಗ್ಗಟ್ಟು, ಐಕ್ಯತೆ ಏಕತೆಯ ತತ್ವ ಪ್ರಚಾರ ಮಾಡಿ ದೇಶದಲ್ಲಿ ಧರ್ಮ ರಕ್ಷಣೆ ಮಾಡಿದ್ದರು. ಇದೀಗ ಮೂಲ ಶಿಕ್ಷಣದಲ್ಲಿಯೇ ಮರೆಯಾಗಿರುವಾಗ ಮೂಲ ಸರಿಪಡಿಸದೆ ಮೇಲೇರಿಸಿದರೆ ತಾತ್ಕಾಲಿಕ ಬದಲಾವಣೆಯಷ್ಟೆ.ಇದಕ್ಕೆ ಕಾರಣವೇ ನಮ್ಮಲ್ಲೇ ಅಡಗಿರುವ ಅಜ್ಞಾನವನ್ನು ಹೆಚ್ಚಿಸುವ ರಾಜಕೀಯ ಪ್ರಜ್ಞೆ. ಭಾರತಮಾತೆಯನ್ನು ಆಳಲು ಸಾಧ್ಯವೆ? ಭಾರತೀಯರನ್ನು ವಿದೇಶಿಗರಂತೆ ಬೆಳೆಸುವುದು ಸುಲಭ ಆದರೆ ಭಾರತೀಯ ತತ್ವವನ್ನು ಅಳವಡಿಸಿಕೊಂಡು ನಡೆದು ನಡೆಸುವುದೇ ಕಷ್ಟ. ಒಟ್ಟಿನಲ್ಲಿ ಬದಲಾವಣೆ ಆಗುತ್ತಿದೆ ಆಗಬೇಕಿದೆ . ನಾನು ಹೋದರೆ ಎಲ್ಲಾ ಕಾಣುತ್ತದೆ. ಇದ್ದಾಗ ರಾಜಕೀಯಕ್ಕೆ ಬೆಲೆ ಹೋದ ಮೇಲೆ ರಾಜಯೋಗ.ಎಲ್ಲಾ ವಿಚಾರದಲ್ಲೂ ರಾಜಕೀಯ ಬೆರೆತಿರುವಾಗ ರಾಜಯೋಗ ಕಾಣೋದು ಕಷ್ಟ.ಯೋಗಿಗಳ ದೇಶವನ್ನು ಸಾಲ ಮಾಡಿಕೊಂಡು ಭೋಗಿಗಳ ದೇಶ ಮಾಡಬಹುದು.ಆದರೆ ಸಾಲ ತೀರಿಸಲು ತಿರುಗಿ ಯೋಗಿಯಾಗಲೇಬೇಕು.ಯೋಗ್ಯ ಶಿಕ್ಷಣ ಕೊಡದೆ ಆಳುವುದರಲ್ಲಿ ಯಾವುದೇ ಪ್ರಗತಿಯಾಗದು.
ಭ್ರಷ್ಟಾಚಾರ ತಡೆಯಲು ರಾಜಕಾರಣಿಗಳಿಗೆ ಸಾಧ್ಯವಿಲ್ಲ ಕಾರಣ ಅವರು ನಡೆದಿರೋದೇ ಭ್ರಷ್ಟಾಚಾರದ ಹಣದಲ್ಲಿ. ಜನಸಾಮಾನ್ಯರಿಗೆ ಸಾಧ್ಯವಿದೆ ನಮ್ಮ ಹಣಸಂಪಾದನೆ ಶಿಷ್ಟಾಚಾರದಲ್ಲಿದ್ದರೆ ಮಾತ್ರ. ಭ್ರಷ್ಟರಿಗೆ ಸಹಕಾರ ನೀಡದಿದ್ದರೆ ಹೇಗೆ ಬೆಳೆಯುತ್ತಾರೆ?
ಅಸಹಕಾರ ಚಳುವಳಿಯ ಉದ್ದೇಶ ಇದೇ ಆಗಿತ್ತು. ಆಂಗ್ಲರ ದೌರ್ಜನ್ಯದ ವಿರುದ್ದ ಶಾಂತಿಯಿಂದ ಹೋರಾಟ ಮಾಡಲು ಇದೊಂದು ಅಸ್ತ್ರ ವಾಗಿ ಬಳಸಿ,ಸತ್ಯಾಗ್ರಹ,ಉಪವಾಸದಂತಹ ಅಧ್ಯಾತ್ಮದ ಮಾರ್ಗ ಹಿಡಿದವರು ಜೀವ ಉಳಿಸಿಕೊಂಡು ಸ್ವಾತಂತ್ರ್ಯ ಪಡೆದರು.ಆದರೆ ಅದನ್ನು ಮತ್ತೆ ಕಳೆದುಕೊಂಡು ಹೋರಾಟ ನಡೆಸುವಂತಾಗಲು ಕಾರಣವೇ ನಮ್ಮ ಶಿಕ್ಷಣಪದ್ದತಿ. ಬ್ರಿಟಿಷ್ ರನ್ನು ಓಡಿಸಿದ ಮೇಲೆ ಅವರ ಶಿಕ್ಷಣ ಓಡಿಸದೆ ಇನ್ನಷ್ಟು ಬೆಳೆಸಿದರೆ ಯಾರಿಗೆ ಸ್ವಾತಂತ್ರ್ಯ ಸಿಕ್ಕಿದೆ?
ಮಕ್ಕಳೊಳಗಿದ್ದ ಜ್ಞಾನವೇ ಬೇರೆ ಕೊಡುತ್ತಿರುವ ಶಿಕ್ಷಣವೇ ಬೇರೆ.ಯಾವುದನ್ನು ತುಂಬುವೆವೋ ಅದೇ ಬೆಳೆಯೋದಲ್ಲವೆ? ಪೋಷಕರು ಕೇವಲ ಮಕ್ಕಳ ಶೋಷಣೆ ಮಾಡಿಲ್ಲ ದೇಶವನ್ನು ಶೋಷಣೆ ಮಾಡಿ ಇನ್ನಷ್ಟು ಸಾಲದ ಹೊರೆ ತಲೆಮೇಲೆ ಹಾಕಿಕೊಂಡು ಭ್ರಷ್ಟಾಚಾರದ ಮೂಲಕ ಸಾಲ ತೀರಿಸಲು ಹೋದರೆ ಅಜ್ಞಾನವೆನ್ನುವರು.
ದೇವರನ್ನು ಬೆಳೆಸಲು ನಾವ್ಯಾರು? ದೈವತ್ವ ಬೆಳೆಸಿಕೊಂಡರೆ ಮಾತ್ರ ನಾನ್ಯಾರು ನಾವ್ಯಾರು ಪ್ರಶ್ನೆಗೆ ಉತ್ತರ ಒಳಗೇ ಸಿಗುತ್ತದೆ ಎಂದಿದ್ದರು ನಮ್ಮ ಮಹಾತ್ಮರುಗಳು.
ಆಗೋದೆಲ್ಲಾ ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು.
ಆದ ಮೇಲೇ ಬುದ್ದಿಬರೋದು.ಪ್ರಯತ್ನಕ್ಕೆ ತಕ್ಕಂತೆ ಫಲ.ಕರ್ಮಕ್ಕೆ ತಕ್ಕಂತೆ ಫಲ ಎಂದಂತೆ ಪರಮಾತ್ಮನ ಕಾಣುವಜ್ಞಾನದ ಶಿಕ್ಷಣದ ನಂತರ ಪರದೇಶದ ಬಗ್ಗೆ ಚಿಂತನೆ ನಡೆಸಿದರೆ ಉತ್ತಮ.ಪರಕೀಯರು ಭಾರತವನ್ನು ವಿಶ್ವಗುರು
ಎನ್ನಲು ಕಾರಣವೇ ನಮ್ಮಲ್ಲಿರುವ ಕದಿಯಲಾಗದ ಆತ್ಮಜ್ಞಾನದ ವಿಚಾರ. ವಿಚಾರ ಪ್ರಚಾರ ಮಾಡೋ ಮೊದಲು ಸ್ವಚ್ಚತೆಯ ಬಗ್ಗೆ ಗಮನಹರಿಸಿದರೆ ಒಳಗಿರುವ ಸ್ವಚ್ಚ
ಮನಸ್ಸು ಯೋಗದಿಂದ ಶುದ್ದವಾಗುತ್ತದೆ.ಹೀಗಾಗಿ ಜ್ಞಾನಿಗಳ ದೇಶ ಯಾವತ್ತೂ ಜ್ಞಾನವನ್ನು ಸ್ವಚ್ಚ ಶುದ್ದತೆಯ ಕಡೆಗೆ ನಡೆಯಬೇಕು. ರಾಜಕೀಯಕ್ಕೆ ಇಳಿದರೆ ಸಾಕಷ್ಟು ಕಲ್ಮಶವಾಗುತ್ತದೆ . ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲ.ಬದಲಾವಣೆ ಜಗದ ನಿಯಮ.
No comments:
Post a Comment