ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, March 20, 2023

ಗುರುಗಳಿಗೇ ಶಿಷ್ಯ ಮೋಸಮಾಡಿದರೆ ಆತ್ಮದುರ್ಭಲ

ನಮ್ಮ ದೇಶದಲ್ಲಿ ರಾಜಕೀಯ ಭ್ರಷ್ಟಾಚಾರ ಮಿಗಿಲು ಮುಟ್ಟಲು ಕಾರಣವೇ ಧಾರ್ಮಿಕ ಭ್ರಷ್ಟಾಚಾರ ಎಂದರೆ ಮೊದಲು ವಿರೋಧಿಸುವವರು ನಾವೇ ಇಲ್ಲಿ ನಮ್ಮ ಧರ್ಮ ಶ್ರೇಷ್ಠ ಅವರ ಧರ್ಮ ಕನಿಷ್ಟದ ನಡುವೆ ನಮ್ಮ ಮನಸ್ಸನ್ನು ಹಿಡಿದಿಟ್ಟುಕೊಂಡು ಸಾಕಷ್ಟು ಹಣ,ಅಧಿಕಾರ,ಸ್ಥಾನಮಾನ
,ಸನ್ಮಾನ ಪಡೆದವರ  ಹೆಸರಿನಲ್ಲಿ ಇನ್ನಷ್ಟು ಜನರು ತಮ್ಮ ಜೀವನ ನಡೆಸುವಾಗ  ನಿಜವಾದ ಧರ್ಮ ಸತ್ಯ,ನ್ಯಾಯ,
ನೀತಿ,ಸಂಸ್ಕೃತಿಯು  ಕೆಳಭಾಗಕ್ಕೆ ಇಳಿದು  ಹಿಂದುಳಿಯಿತು. ಅದರಲ್ಲಿದ್ದ ಅಲ್ಪ ಸ್ವಲ್ಪ ಹೆಕ್ಕಿ ಕೊಂಡು  ದೊಡ್ಡ ದೊಡ್ಡ ಕಥೆ,ಪುರಾಣವೇ ಪುಸ್ತಕವಾಯಿತು.
ದೊಡ್ಡವರು ಬರೆದರೆ ಕೇಳಬೇಕೆ? ಓದದಿದ್ದರೂ ಸರಿ ಪುಸ್ತಕ ಮಾರಾಟವಂತೂ ನಡೆಯುತ್ತದೆ. ಹೀಗಾಗಿ ರಾಮಾಯಣ ಮಹಾಭಾರತ ಇನ್ನಿತರ ಉನ್ನತ ವಿಚಾರಗಳ  ಗ್ರಂಥಾಲಯ ಬೆಳೆದಿದೆ.ವಿಪರ್ಯಾಸವೆಂದರೆ ಆ ಪುಸ್ತಕದ ವಿಚಾರ ಮಸ್ತಕಕ್ಕೆ ಹಾಕಿಕೊಂಡವರು  ಪ್ರಚಾರ ಮಾಡುವ ಮದ್ಯವರ್ತಿಗಳ ಮೂಲಕ ಬೆಳೆದರು. ಅದೇ ವಿಚಾರವನ್ನು ಶಿಕ್ಷಣದ ಮೂಲಕ ಮಕ್ಕಳು ಮಹಿಳೆಯರಿಗೆ ಅರ್ಥ ವಾಗುವ ಭಾಷೆಯಲ್ಲಿ  ತಿಳಿಸುವುದರಲ್ಲಿ  ಹಿಂದುಳಿದು ಆ ಜಾಗದಲ್ಲಿ ಪರಧರ್ಮದವರು ಪರಕೀಯರು ನಿಂತು ಬೆಳೆದರು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬೆಳೆದಿದ್ದರೂ ಸತ್ಯ ಧರ್ಮ ಮಾತ್ರ ಹಿಂದುಳಿದು ವ್ಯವಹಾರಿಕ ಜ್ಞಾನ ಬೆಳೆದಿದೆ. ಹಣದಿಂದ ಧರ್ಮ ರಕ್ಷಣೆಯೆ? ಸತ್ಯವನ್ನು ಹಣದಿಂದ ಕೊಳ್ಳಬಹುದೆ?
ಎಷ್ಟೋ  ವಿದ್ಯಾವಂತರು  ಮೋಸಹೋಗುತ್ತಿರುವ ಈ ಜಗತ್ತಿನಲ್ಲಿ  ಅವಿದ್ಯಾವಂತರ ಗತಿ ? ಒಂದು ಸಣ್ಣ ಹೆಸರಿನ‌ಸಹಿ ಮಾಡಲು ಕಲಿತರೆ  ಸಾಕೆ? ಆ ಸಹಿಯನ್ನು ಯಾವ ರೀತಿಯಲ್ಲಿ ದುರ್ಭಳಕೆ ಮಾಡಿಕೊಳ್ಳುವರೆನ್ನುವ ಬಗ್ಗೆ ತಿಳಿಯದಿರುವ ಎಷ್ಟೋ ಜನರು ದೇವರನ್ನು  ವ್ಯಕ್ತಿಯ ರೂಪದಲ್ಲಿ ಕಾಣಲು ಹೋಗುವರು. ಆತ್ಮಶಕ್ತಿಯನ್ನು ಬೆಳೆಸುವ ಶಿಕ್ಷಣದಿಂದ  ಎಲ್ಲರೂ ಅವರವರ ಅಂತರವನ್ನು ಕಡಿಮೆಮಾಡಿಕೊಂಡು  ಜ್ಞಾನವಿಲ್ಲದೆ ಹಣವಿಲ್ಲ. ಹಣವಿಲ್ಲದೆ
ಜೀವನವಿಲ್ಲ ಎನ್ನುವ ಕಡೆಗೆ ತತ್ವದಿಂದ ಮುಂದೆ ನಡೆದರೆ ಇಲ್ಲಿ ಮೋಸಹೋಗುವವರಿಗೂ  ಕಾರಣ ತಿಳಿಯುತ್ತದೆ.ಮಾಡಿದವರಿಗೂ  ಸರಿಯಾದ ಪ್ರಾಯಶ್ಚಿತ್ತ ಈ ಜನ್ಮ ದಲ್ಲೇ ಆಗಬಹುದು.
ಒಟ್ಟಿನಲ್ಲಿ  ನನಗೆ ಆಪ್ತರಾಗಿದ್ದ ಒಳ್ಳೆಯವರು  ಒಬ್ಬ  ವ್ಯಕ್ತಿಯಿಂದ  ಹಣಕಳೆದುಕೊಂಡಿದ್ದನ್ನು ತಿಳಿದು ಈ ಲೇಖನದ ಮೂಲಕ  ತಿಳಿಸಿದೆ. ಇಲ್ಲಿ ಜ್ಞಾನವಿಜ್ಞಾನದ ನಡುವಿನ ಅಂತರದಲ್ಲಿ ಅಜ್ಞಾನ ಬೆಳೆದಿರೋದಕ್ಕೆ ಕಾರಣ ರಾಜಕೀಯ.
ಇದು ಧಾರ್ಮಿಕ ಕ್ಷೇತ್ರಗಳನ್ನೂ ಆವರಿಸಿದೆ ಎಂದರೆ  ಆತ್ಮನಿರ್ಭರ ಭಾರತ ಎಂದರೆ ಏನು?
ಹಣಕ್ಕಾಗಿ ಒಬ್ಬ ಗುರುವಿಗೇ ಮೋಸ ಮಾಡುವ ಶಿಷ್ಯರಿಗೆ ಏನು ಹೇಳಬೇಕಿದೆ? ಕಲಿಗಾಲ ಎಲ್ಲವನ್ನೂ ಕಲಿಸುತ್ತದೆ.
ಯಾರೇ ಆಗಿರಲಿ ನಮಗೆ ಸಹಾಯ ಮಾಡುತ್ತಿದ್ದಾರೆಂದರೆ
ಸ್ವಲ್ಪ ಯೋಚಿಸಬೇಕು. ಅವರಿಗೆ ಲಾಭವಿಲ್ಲದೆ ಮಾಡುವರೆ ಅಥವಾ ಲಾಭಕ್ಕಾಗಿ ಮಾಡುವರೆ ಎಂದು. ವ್ಯವಹಾರದಲ್ಲಿ ಲಾಭವಿಲ್ಲದೆ ನಡೆಯದು ಆದರೆ, ಧಾರ್ಮಿಕ ವಿಚಾರದಲ್ಲಿ ಇದೊಂದು ಸೇವೆ ಆದ ಕಾರಣ  ಇದರಿಂದಾಗಿ  ವ್ಯಕ್ತಿತ್ವಕ್ಕೆ ದಕ್ಕೆ ಬರಬಾರದು. ಹಣವಾದರೂ ಮತ್ತೆ ಸಂಪಾದನೆ ಮಾಡಬಹುದು . ಋಣ ತೀರಿಸುವ ಜ್ಞಾನ ಸಂಪಾದನೆ ಕಷ್ಟ. ಶಿಕ್ಷಣದಲ್ಲಿ ಜ್ಞಾನಕ್ಕೆ ಬೆಲೆಕೊಟ್ಟರೆ  ಮಾನವನಿಗೆ  ಇರಬೇಕಾದ ನೈತಿಕತೆ ಮಾನವೀಯತೆ  ಬೆಳೆಯುತ್ತಿತ್ತು. ಈಗ  ಹೊರಗಿನವರು  ಬಂದು ತುಂಬಿದರೂ  ಒಳಗಿನ  ಕೊಳಕು ಹೋಗದಿದ್ದರೆ  ಯಾರ ತಪ್ಪು?
ಉತ್ತಮ ಗುರುಗಳನ್ನು ಗುರುತಿಸದ ಸಮಾಜದಲ್ಲಿರುವ  ಅಸಮಾನತೆಗೆ ಕಾರಣ ಅಜ್ಞಾನ.
ಭಾರತದಂತಹ ಧಾರ್ಮಿಕ ದೇಶ ಬದಲಾಗಿರೋದೆ ಶಿಕ್ಷಣದಿಂದ. ಭೌತಿಕದ ವಿಜ್ಞಾನ ಜಗತ್ತು  ಸಾಕಷ್ಟು ಬೆಳೆದು ಅಧ್ಯಾತ್ಮದ  ಕ್ಷೇತ್ರ ಆವರಿಸಿದೆ. ಉತ್ತಮ ವಿದ್ಯಾವಂತರಿಗೆ  ಕೆಲಸವಿಲ್ಲ. ವಿದ್ಯೆಗೆ ಸುರಿದ ಹಣ ತಿರುಗಿ ಪಡೆಯಲು ಈ ತಂತ್ರಕ್ಕೆ ಇಳಿದರೆ ಸ್ವತಂತ್ರ ಯಾರಿಗೆ ಸಿಕ್ಕಿದೆ? ಜ್ಞಾನಕ್ಕೂ ಅಜ್ಞಾನಕ್ಕೋ?
ಹಣಕ್ಕಾಗಿ ಹೆಣವನ್ನು ಬಿಡದ ವೈಜ್ಞಾನಿಕ ಸಂಶೋಧನೆಯು ವೈಚಾರಿಕತೆಯನ್ನು  ಹಿಂದುಳಿಸಿ ಆಳುತ್ತಿದೆ.ಮಂತ್ರ ತಂತ್ರ ಯಂತ್ರಗಳು ಮಾನವನಿಗೆ ಸ್ವತಂತ್ರ ಜ್ಞಾನದೆಡೆಗೆ ನಡೆಸಬೇಕಿತ್ತು.ಅತಂತ್ರಸ್ಥಿತಿಗೆ ತಲುಪಿರುವ ಜೀವಾತ್ಮನಿಗೆ ಎಲ್ಲೆಡೆಯೂ ಇರುವ ಪರಮಾತ್ಮನ ಸತ್ಯ ಕಾಣದೆ ಮಿಥ್ಯವೇ ಬೆಳೆದಿದೆ. 
ಯಾರೋ ಹೇಳಿದ್ದು ಕೇಳಿದ್ದು ನೋಡಿದ್ದು ಬರೆದದ್ದು ಮಾಡಿದ್ದನ್ನು ಸುಲಭವಾಗಿ  ಕಾಪಿ ಮಾಡಿಕೊಂಡು  ನಾನೇ ಎನ್ನಬಹುದು. ಆದರೆ ಒಳಗಿನ ಆತ್ಮಸಾಕ್ಷಿಗೆ ಮೋಸ ಮಾಡಿದರೆ  ಅದರ ಪ್ರತಿಫಲ  ಬೇರೆಯವರು ಅನುಭವಿಸಲು ಸಾಧ್ಯವೆ? ಶ್ರೇಷ್ಠ ಕನಿಷ್ಠದ ನಡುವಿರುವ ಅನಿಷ್ಟಾವಂತರಿಗೆ
ನಿಷ್ಠೆಯ ಪಾಠ ಕಲಿಸುವವರು ಯಾರು?
ಪ್ರಕೃತಿ  ಯಾವುದಾದರೂ ವ್ಯವಹಾರ ನಡೆಸುವುದೆ? ಅದರ ಸಣ್ಣ ಬಿಂದುಗಾತ್ರದ ಮಾನವ ಮಾತ್ರ  ಪ್ರತಿಯೊಂದರ
ಲ್ಲಿಯೂ  ಹಣಗಳಿಸಲು ಹೋಗಿ  ಇನ್ನಷ್ಟು ಮತ್ತಷ್ಟು ಸಾಲ ಮಾಡಿಕೊಂಡು  ಹೋಗುತ್ತಿದ್ದರೆ ಯಾರಿಗೆ ಮುಕ್ತಿ? ಜೀವನದಲ್ಲಿ ವ್ಯವಹಾರವಿರಲಿ, ವ್ಯವಹಾರವೇ ಜೀವನ
ವಾದರೆ ಸತ್ರ್ಮ ಧರ್ಮ ಎಲ್ಲಿರಬೇಕು? 
ಬದಲಾವಣೆ ಆಗುತ್ತದೆ ಪ್ರಕೃತಿಯೇ ಮಾಡುತ್ತದೆ. ಇದಕ್ಕೆ ಮಾನವ ತಲೆಬಾಗಲೇಬೇಕಲ್ಲವೆ?

No comments:

Post a Comment