ಆರೋಗ್ಯವೇ ಭಾಗ್ಯ.ಧಾನ್ಯ ದ್ಯಾನ ಧನ್ಯ.ಹೆಚ್ಚಿನ ಧಾನ್ಯ ಬೆಳೆಯುವುದರ ಜೊತೆಗೆ ಹಂಚಿಕೊಂಡು ಬದುಕುವ ದ್ಯಾನದಲ್ಲಿದ್ದರೆ ಧನ್ಯತಾಬಾವ ಹೆಚ್ಚುವುದು ಆಗ ಆರೋಗ್ಯಕರ ಜೀವನ. ಇದು ಕರ್ಮ ಯೋಗಿಗಳ ಲಕ್ಷಣ
ಬೆಳೆದ ಧಾನ್ಯ ಹಂಚದೆ ,ತಾನೇ ಎಲ್ಲಾ ತಿಂದರೆ ರೋಗ. ಹಾಗೆಯೇ ಸದ್ವಿಚಾರವನ್ನು ಹಂಚದೆ ಜನರ ದಾರಿ ತಪ್ಪಿಸಿ ಆಳಿದರೆ ಅಧರ್ಮ ..ಆಹಾರವೂ ಸಾತ್ವಿಕವಾಗಿದ್ದರೆ ಸತ್ವಗುಣ ಬೆಳೆಯುತ್ತದೆ. ಆಗ ದ್ಯಾನವೂ ಸಾತ್ವಿಕತೆಕಡೆಗೆ ನಡೆಯುತ್ತದೆ ಇದೇ ಮಾನವನನ್ನು ಮಹಾತ್ಮನಾಗಿಸುತ್ತದೆ. ಒಳಗೆ ಏನು ಹಾಕುವೆವೋ ಅದೇ ಮನಸ್ಸಾಗಿ ಪರಿವರ್ತನೆ ಹೊಂದಿ ಮನುಷ್ಯನಾಗುತ್ತಾನೆ. ಮನಸ್ಸಿನಂತೆ ಮಾನವ. ಮಕ್ಕಳ ಮನಸ್ಸು ಸ್ವಚ್ಚವಾಗಿರುತ್ತದೆ.ಯಾವುದೇ ಕಪಟವಿರದು.ಅದರ ಒಳಗೆ ಹಾಕುವ ಆಹಾರವು ದೈಹಿಕ ಶಕ್ತಿ ಕೊಟ್ಟು ನಡೆಸುತ್ತದೆ. ಹಾಗೆ ಆತ್ಮಜ್ಞಾನವನ್ನು ಬೆಳೆಸುವ ಶಿಕ್ಷಣ ನೀಡಿದರೆ ಯೋಗಿಯಾಗಿ ಯೋಗ್ಯ ಪ್ರಜೆಯಾಗಿ ಬೆಳೆಯುತ್ತಾರೆ. ಆಂತರಿಕ ಶುದ್ದಿಯ ನಂತರ ಭೌತಿಕ ಶುದ್ದಿಯಾಗುವುದು. ದೇಹದ ಸ್ವಚ್ಚತೆ ಎಲ್ಲಾ ಮಾಡಬಹುದು ಮನಸ್ಸಿನ ಶುದ್ದಿ ಧಾನ್ಯ,ದ್ಯಾನದ ಮೂಲಕ ಆಗುತ್ತದೆ.
ಮಾನಸಿಕ ಆರೋಗ್ಯವೇ ದೈಹಿಕದೆಡೆಗೆ ಸಾಗುವುದು.
ಮಾನಸಿಕ ರೋಗಕ್ಕೆ ಸದ್ವಿಚಾರ,ಸತ್ಸಂಗ,ಯೋಗ,ದ್ಯಾನವೇ ಮದ್ದು.ಹಣದಿಂದ ಇದನ್ನು ಖರೀದಿಸಲಾಗದು.
No comments:
Post a Comment