ಕುಂಬಾರನಿಗೆ ಒಂದು ವರ್ಷ ದೊಣ್ಣೆಗೆ ಒಂದೇ ನಿಮಿಷ ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ ಇದರಲ್ಲಿ ನಾವು ಒಗ್ಗಟ್ಟನ್ನು ಬೆಳೆಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕು ಆದರೆ ಇದನ್ನು ಒಡೆದು ಆಳುವುದು ಸುಲಭ ಹಾಗಾಗಿ ಭಗವಂತನ ಕಾಣೋದು ಕಷ್ಟ ಅವನ ನಾಮವನ್ನು ಜಪಮಾಡುತ್ತಾ ತಮ್ಮ ಕೆಲಸ ತಾವು ಶ್ರದ್ದೆ ಭಕ್ತಿಯಿಂದ ಮಾಡುತ್ತಾ ಹೋದರೆ ಯಾರೂ ಇದನ್ನು ಒಡೆಯಲಾಗದು.ಸಾಕಷ್ಟು ದೇವರುಗಳು ಪ್ರತಿಮೆಗಳು ಜನಬಲ ಹಣಬಲ ಅಧಿಕಾರಬಲ,ಸ್ಥಾನಮಾನ
ಸನ್ಮಾನಗಳನ್ನು ಎಷ್ಟೋ ವರ್ಷದಿಂದಲೂ ಬೆಳೆಸಿಕೊಂಡು ಬಂದಿದ್ದರೂ ಅಧರ್ಮ ಅನ್ಯಾಯ ಅಸತ್ಯ ಭ್ರಷ್ಟಾಚಾರವನ್ನು ತಡೆಯಲಾಗಿಲ್ಲವೆಂದರೆ ಇಲ್ಲಿ ಮಣ್ಣಿನಿಂದ ಮಾಡಲ್ಪಟ್ಟ ಮಡಿಕೆಗಳು ನೆಲಸಮವಾದವು. ಎಲ್ಲಿಂದ ಬಂದಿತೋ ಅಲ್ಲಿಗೆ ತಿರುಗಿ ಸೇರುವುದು ಪ್ರಕೃತಿ ನಿಯಮ. ಹಾಗೆಯೇ ಸಾಕಷ್ಟು ಮಹಾತ್ಮರುಗಳು ಭೂಮಿಗೆ ಬಂದು ತತ್ವೋಪದೇಶ ಮಾಡಿ ಎಲ್ಲರನ್ನೂ ಕೂಡಿಸುವ ಕೆಲಸ ಮಾಡಿದ್ದರೂ ಅವರನ್ನು ಪ್ರತಿಮೆಯಾಗಿ ಕಾಣುವ ನಮಗೆ ಅವರ ತತ್ವದರ್ಶನ ಆಗದೆ ನಮ್ಮ ವರಲ್ಲಿಯೇ ಬೇಧಭಾವ ಹುಟ್ಟಿಸಿಕೊಂಡರೆ ದೇವರು ಕಾಣೋದಿಲ್ಲ.ಅತೃಪ್ತ ಆತ್ಮಗಳಷ್ಟೆ ಒಳಹೊಕ್ಕಿ ರಾಜಕೀಯ ನಡೆಸೋದಾಗುತ್ತದೆ. ತತ್ವವನ್ನು ತಂತ್ರವಾಗಿಸಿದರೆ ಅತಂತ್ರ.
ತತ್ವದಿಂದ ಜ್ಞಾನ ಬೆಳೆದಾಗಲೇ ಆತ್ಮಜ್ಞಾನ ಎಂದರು.
ಯಾವುದೇ ರಾಜಕೀಯ ವಿಚಾರವನ್ನು ಗಮನಿಸಿದಾಗ ಒಂದೇ ದೇಶದೊಳಗಿದ್ದು ದೇಶದ ಮೂಲ ಶಿಕ್ಷಣದಲ್ಲಿ ಬದಲಾವಣೆ ತರಲಾಗದೆ ವಿದೇಶಿಗಳಿಗೆ ಕೈ ಜೋಡಿಸಿ ಅವರ ವ್ಯವಹಾರ ಸಾಲ, ಬಂಡವಾಳದಿಂದ ದೇಶವಾಳಲು ಹೊರಟು ಇಂದು ಪರಕೀಯರಿಗೆ ಭಾರತೀಯತೆಯ ಜ್ಞಾನವಿಲ್ಲ.ಭಾರತೀಯರಿಗೆ ವಿದೇಶಿ ವ್ಯಾಮೋಹ ಬಿಡಲಾಗಿಲ್ಲ. ಎಲ್ಲಾ ಮಾನವರಾದರೂ ಅವರವರ ಹಿಂದಿನ ಗುರುಹಿರಿಯರ ಧರ್ಮ ಕರ್ಮ ವು ರಕ್ತಗತವಾಗಿರುವಾಗ ಮೂಲ ಶಿಕ್ಷಣದಲ್ಲಿ ಇದನ್ನು ಗುರುತಿಸಿ ಮಾನವೀಯ ಮೌಲ್ಯ ತಿಳಿಸುವಶಿಕ್ಷಕ, ಗುರು ವಿದ್ದರೆ ನಂತರದ ಭೌತಿಕ ವಿಜ್ಞಾನ ಸದ್ಬಳಕೆಯಾಗುತ್ತದೆ. ಹಿಂದಿನವರ ಅಧ್ಯಾತ್ಮ ಸಂಶೋಧನೆಯ ಶ್ರಮಕ್ಕೆ ಬೆಲೆಯೇ ಇಲ್ಲದೆ ಪುಸ್ತಕಗಳ ವಿಚಾರ ಪ್ರಚಾರವಾಗಿ ಸಾಕಷ್ಟು ಹಣ ಸಂಪಾದನೆ ಆಗಿದೆ.ಆದರೆ ದೇಶದ ಸಾಲ ತೀರಿಸಲು ಅದರಲ್ಲಿದ್ದ ತತ್ವಜ್ಞಾನದ ಸದ್ಬಳಕೆ ಆಗಬೇಕಿತ್ತು. ದೇಶ ಕಟ್ಟುವುದು ಕಷ್ಟ
ಮೆಟ್ಟುವುದು ಸುಲಭ. ಸುಲಭದ ಕಾರ್ಯಕ್ಕೆ ಸಹಕಾರ ಹೆಚ್ಚು.
ಹೀಗಾಗಿ ಸುಲಭವಾಗಿ ಮೋಸ ಹೋಗುತ್ತಿರುವುದು ಭಾರತೀಯರೆ. ಮಾನವನಿಗೆ ಶತ್ರು ಹೊರಗಿಲ್ಲ ಒಳಗೇ ಇರೋದು. ಅದೇ ಅತಿಯಾದ ಅಹಂಕಾರ ಸ್ವಾರ್ಥದ ಜೀವನ ಶೈಲಿ. ಯೋಗಿಯಾಗೋದು ಕಷ್ಟ ಭೋಗ ಸುಲಭ ಭೋಗದ ನಂತರವೇ ರೋಗ. ರೋಗ ಹಂಚಿಕೊಳ್ಳಲು ಕಷ್ಟವಾದರೆ ಉತ್ತಮ ಯೋಗ್ಯ ಶಿಕ್ಷಣ ನೀಡುವುದಕ್ಕೆ ಸಹಕರಿಸಿದರೆ ಉತ್ತಮ ಬದಲಾವಣೆ ಸಾಧ್ಯ. ಶಿಕ್ಷಣದಲ್ಲಿ ಮಕ್ಕಳ ಒಳಗಿನ ಜ್ಞಾನ ಶಕ್ತಿ ಗುರುತಿಸಿ ಬೆಳೆಸುವುದು ಎಲ್ಲಾ ಪೋಷಕರ ಧರ್ಮ.ಆದರೆ ಅಂತಹ ಜ್ಞಾನದ ಶಿಕ್ಷಣ ನೀಡುವುದು ಧಾರ್ಮಿಕ ಗುರು ಹಿರಿಯರ ಧರ್ಮ ಕರ್ಮವಾದಾಗ ಮಾತ್ರ ಸಾಧ್ಯ. ಧರ್ಮ ಒಡೆದು ರಾಜಕೀಯ ಬೆಳೆಸಬಾರದು. ಇಲ್ಲಿ ಯಾರೂ ಯಾರನ್ನೋ ಆಳಲು ಹೋಗಿ ಆಳಾಗಿ ಹಾಳಾಗಿ ಹೋದವರನ್ನು ಸಾಧಕರೆಂದರೆ ತಪ್ಪು ನಮ್ಮದೇ. ಭೂಮಿಗೆ ದ ಮೇಲೆ ಭೂ ಋಣ ತೀರಿಸಲು ಸತ್ಕರ್ಮ ಮಾಡಬೇಕು.ಇದಕ್ಕೆ ಪೂರಕವಾದ ಶಿಕ್ಷಣ ಬೇಕು.ಶಿಕ್ಷಕರಲ್ಲಿ ಸದ್ಗುಣ. ಸುಜ್ಞಾನವಿರಬೇಕು. ಯಥಾ ಗುರು ತಥಾಶಿಷ್ಯ.
ಯಥಾ ರಾಜ ತಥಾ ಪ್ರಜಾ, ಯಥಾಪ್ರಜೆ ತಥಾ ದೇಶ. ಯಥಾ ಜ್ಞಾನ ತಥಾ ಜೀವನ.
ದೇವತೆಗಳನ್ನು ಮೇಲಿನಿಂದ ಕೆಳಗಿಳಿಸುವ ಬದಲಾಗಿ ದೈವತ್ವವನ್ನು ಒಳಗಿನಿಂದ ಮೇಲೇರಿಸಿದರೆ ಉತ್ತಮ ಮಾರ್ಗ ಇದ್ದಲ್ಲಿಯೇ ಸಿಗುತ್ತದೆ. ಮಹಿಳೆ ಮಕ್ಕಳನ್ನು ಮನೆಯಿಂದ ಹೊರತಂದು ದೇವರನ್ನು ಬೆಳೆಸಬಾರದು. ಅವರಲ್ಲಿರುವ ದೈವೀ ಶಕ್ತಿಯನ್ನು ಗುರುತಿಸಿ ಗೌರವಿಸಿ ಬೆಳೆಸಿದ್ದರೆ ಮನೆಯೇ ದೇವಾಲಯವಾಗುತ್ತಿತ್ತು. ಇದೇ ನಮ್ಮ ಸಮಸ್ಯೆಗೆ ಪರಿಹಾರ.ಇದರಲ್ಲಿ ರಾಜಕೀಯ ಬೇಕೆ? ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತವಾಗಬೇಕಿದೆ.
ಬ್ರಿಟಿಷ್ ಸರ್ಕಾರದಿಂದ ಭಾರತವನ್ನು ಬಿಡಿಸಿಕೊಂಡ ನಮ್ಮ ದೇಶಭಕ್ತರ ಆತ್ಮಜ್ಞಾನಕ್ಕೂ ವಿದೇಶಿಗಳನ್ನು ವ್ಯವಹಾರಿಕ ಮಾಧ್ಯಮಮಾಡಿಕೊಂಡು ದೇಶವನ್ನು ವಿದೇಶಮಾಡುವಇಂದಿನ ರಾಜಕೀಯಕ್ಕೂ ವ್ಯತ್ಯಾಸವಿಷ್ಟೆ. ಇದು ರಾಜಕಾರಣಿಗಳ ಇಷ್ಟಕ್ಕೆ ತಕ್ಕಂತೆ ನಡೆದಿದೆ ಆದರೆ ಇದೇ ಪ್ರಜೆಗಳ ಕಷ್ಟಕ್ಕೆ ಗುರಿಯಾಗಬಾರದಲ್ಲವೆ?
No comments:
Post a Comment