ಸಂಕಟಬಂದಾಗ ವೆಂಕಟರಮಣ ಎನ್ನುವುದು ಯಾಕೆ? ತಿರುಪತಿ ವೆಂಕಟೇಶ್ವರನ ಸಾಲವೇ ಇನ್ನೂ ತೀರಿಲ್ಲವಂತೆ ಹಾಗಾದರೆ ನಮ್ಮ ಸಾಲ ತೀರುವುದೆ?
ದೇವರ ಸಾಲ ತೀರಿಸಲು ಮಾನವನಿಗೆ ಸಾಧ್ಯವೆ? ತನ್ನ ಸಮಸ್ಯೆಗೆ ಕಾರಣವೆ ಸಾಲವಾಗಿದೆ. ಇದಕ್ಕಾಗಿ ಸಾಕಷ್ಟು ಹಣಗಳಿಸಿದರೂ ಸಮಸ್ಯೆ ಬಗೆಹರಿದಿಲ್ಲ ಹೀಗಾಗಿ ದೇವರನ್ನು ಬೇಡೋದು ತಪ್ಪಲ್ಲ. ಮಾನವನಿಗೆ ಸಂಕಟ,ಸಮಸ್ಯೆಗಳೇ ಬರದಿದ್ದರೆ ಯಾಕೆ ದೇವರನ್ನು ನಂಬುವನು? ನಾನೇ ದೇವರು ಎನ್ನುವವರ ಹಿಂದೆ ಸಾಕಷ್ಟು ಜನರು ನಿಂತು ಬೇಡುವರು ದೇವರನ್ನು ನನ್ನೊಳಗೆ ಹುಡುಕಿಕೊಂಡು ಹೋದವರು ದೇವರಾದರು.
ಅಂದರೆ, ದೈವತ್ವವನ್ನು ಮಾನವ ಬೆಳೆಸಿಕೊಂಡರೆ ಸಂಕಟದಿಂದ ಸಮಸ್ಯೆಯಿಂದಬಿಡುಗಡೆ ಆಗುತ್ತದೆ ಎಂದರೆ ದೇವರು ಯಾರಿಗೂ ಕೇಡನ್ನು ಬಯಸೋದಿಲ್ಲ.ಎಲ್ಲರನ್ನೂ ಒಂದುಗೂಡಿಸಿ ಸಂತೋಷದಿಂದ ಇರಲು ಸಹಕರಿಸುವವ.ಹೀಗಿದ್ದರೂ ಮಾನವ ಮಾತ್ರ ಎಲ್ಲರನ್ನೂ ಆಳಲು ಹೊರಟು, ಎಲ್ಲರ ಪಾಲನ್ನೂ ತಂತ್ರದಿಂದ ಬಗೆದುಕೊಂಡು ತಾನೇ ದೇವರು ಎನ್ನುವಂತೆ ಹಿಂದೆ ಬಂದವರಿಗೆ ತನ್ನದೇ ಹಣ ಎನ್ನುವ ಹಾಗೆ ಕೊಟ್ಟು ಅಧಿಕಾರದಿಂದ ಆಳುವ ರಾಜಕೀಯತೆಯಲ್ಲಿ ದೈವತ್ವವಿರೋದು ಕಷ್ಟ. ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಧಾರ್ಮಿಕ ಕಾರ್ಯ ಮಾಡುತ್ತಿದ್ದರೂ ಯಾಕೆ ಧರ್ಮ ಕುಸಿದಿದೆ? ದೇವರಿಲ್ಲವೆ? ಎಂದರೆ ಧರ್ಮದಿಂದ ಗಳಿಸಿದ ಹಣವನ್ನು ಬಳಸಿಲ್ಲ. ನಮ್ಮ ಸಹಕಾರವೇ ಭ್ರಷ್ಟರಿಗೆ ಹೆಚ್ಚಾಗಿದ್ದರೆ ಭ್ರಷ್ಟಾಚಾರಿಗಳೇಬೆಳೆಯೋದು.ಯಾವುದಕ್ಕೆ ಸಹಕಾರ ಕೊಡುವೆವೋ ಅದೇ ಬೆಳೆಯೋದು. ಹೀಗಾಗಿ ದೇವರಿಲ್ಲವೆನ್ನುವವರ ಸಂಖ್ಯೆ ಬೆಳೆದಿದೆ.ಪಾಪ ಅವರಿಗೇನು ಗೊತ್ತು ನಮ್ಮೊಳಗೇ ಅಡಗಿದ್ದ ಆ ಮಹಾಶಕ್ತಿಯನ್ನು ಬೆಳೆಸದ ಶಿಕ್ಷಣ ನಾವೇ ಪಡೆದಿರೋದಕ್ಕೆ ನಮಗೆ ಒಳಗಿನ ದೈವತತ್ವ ಕಾಣುತ್ತಿಲ್ಲ. ಸಮಾಜಸೇವೆಯು ತತ್ವ ದ ಮೂಲಕ ನಡೆದಿತ್ತು.ಈಗಿದು ತಂತ್ರದಲ್ಲಿದ್ದು ಸ್ವತಂತ್ರ ಜ್ಞಾನದ ಕೊರತೆ ಇದೆ. ಯಾವುದೇ ಶಿಕ್ಷಣವಾಗಲಿ ಮಾನವನ ಮಹಾತ್ಮನಾಗಿಸುವಂತಿದ್ದರೆ ಶಾಂತಿ,ತೃಪ್ತಿ ಮುಕ್ತಿ. ರಾಜಕೀಯಕ್ಕೆ ಇಳಿಸಿದರೆ ಎಲ್ಲಿಯ ಶಾಂತಿ.ಹೋರಾಟದಿಂದ ಆಂತರಿಕ ಶುದ್ದಿಯಾಗೋದು ತತ್ವಜ್ಞಾನದಿಂದ. ಭೌತಿಕದ ಶುದ್ದಿ ಮಾಡಲು ತಂತ್ರದ ಜೊತೆಗೆ ಹಣವೂ ಬೇಕು. ಹಣಕ್ಕೆ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಜ್ಞಾನದೇವತೆ ಶಾಂತವಾಗಿರುವಳು.
ಭೌತಿಕಾಸಕ್ತಿ ಹೆಚ್ಚಾದಂತೆ ಆಸೆಯೇ ದು:ಖಕ್ಕೆ ಕಾರಣವಾಗುತ್ತದೆ. ಅತಿಯಾದ ಸಂಪಾದನೆಯು ಸಮಸ್ಯೆಗಳನ್ನು ಹೆಚ್ಚಿಸಿದಾಗ ದೇವರನ್ನು ಬೇಡುವುದು ಸಹಜ.ದೇವರಾದರೂ ಹೆಚ್ಚಾಗಿರುವ ಹಣವನ್ನು ದಾನ ಧರ್ಮಕ್ಕೆ ಬಳಸಲು ತಿಳಿಸಿ ಹಂಚಿಕೆ ಮಾಡಿದಾಗ ಸಮಾಧಾನ
ನಂತರದ ದಿನಗಳಲ್ಲಿ ಮತ್ತೆ ಮತ್ತೆ ಅದೇ ಅಜ್ಞಾನದ ಜೀವನಕ್ಕೆ ಜೋತುಬಿದ್ದವರಿಗೆ ಸಮಸ್ಯೆ ತಪ್ಪಿದ್ದಲ್ಲ.ಅದರಬದಲಾಗಿ ಎಲ್ಲರ ಜೊತೆಗೆ ಕೂಡಿಬಾಳಿ ಹೆಚ್ಚಿನ ಸಂಪಾದನೆಯನ್ನು ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಯಿಲ್ಲದೆ ಸದ್ಬಳಕೆ ಮಾಡಿಕೊಂಡರೆ ಸಮಸ್ಯೆಗಳೇ ಇರೋದಿಲ್ಲ.
ಇಷ್ಟಕ್ಕೂ ಜೀವ ಭೂಮಿಗೆ ಬರೋದು ಋಣ ತೀರಿಸಲೆಂದಾಗ ಸೇವೆಯ ಮೂಲಕ ಜೀವನ ನಡೆಸೋದು ಉತ್ತಮ. ಯಾರೂ ಬರೋವಾಗ ತಂದಿಲ್ಲ. ಮಾಡಿಟ್ಟದ್ದು ಹೊತ್ತು ಹೋಗಿಲ್ಲ. ಏನಿದ್ದರೂ ಅವರವರ ಹಿಂದಿನ ಕರ್ಮಕ್ಕೆ ತಕ್ಕಂತೆ ಋಣಕ್ಕೆ ತಕ್ಕಂತೆ ಜೀವನ ನಡೆದಿದೆ.ಇದನ್ನರಿಯುವ ಜ್ಞಾನವಿದ್ದರೆ ಎಲ್ಲರಲ್ಲಿಯೂ ಅಡಗಿರುವ ಆ ಪರಮಾತ್ಮನ ದರ್ಶನ ವಾಗುತ್ತದೆ.
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನನಾಮವೊಂದಿದ್ದರೆ ಸಾಕೆಂದರು ದಾಸರು.ಹಾಗಂತ ಎಲ್ಲಾ ದಾಸರಾಗಬಹುದೆ? ಕೊನೆಪಕ್ಷ ದಾಸರ ತತ್ವವರಿತರೆ ಪರಮಾತ್ಮನೆಡೆಗೆ ಹೋಗಲು ಸಾಧ್ಯ. ದಾಸರ ಹೆಸರಿನಲ್ಲಿ ವ್ಯವಹಾರ ನಡೆಸಿದರೆ ಹಣ ಸಿಕ್ಕರೂ ಜ್ಞಾನ ಬರೋದು ಕಷ್ಟ. ಹಣದ ಜೊತೆಗೆ ಬಂದ ಋಣ ಭಾರ ಜ್ಞಾನವನ್ನು ಬೆಳೆಯದಂತೆ ತಡೆಯುತ್ತದೆ.
ಭೂಮಿಗಿಂತ ದೊಡ್ಡ ಶಕ್ತಿ ಬೇಕೆ? ತಾಯಿಗಿಂತ ದೊಡ್ಡ ಬಂಧು ಇದ್ದಾರೆಯೆ? ಇವರಿಬ್ಬರ ಋಣ ತೀರಿಸಲು ಹೊರಗಿನ ದೇವರ ಸಹಕಾರದ ಅಗತ್ಯವಿದೆಯೆ? ಒಳಗಿನ ದೈವತ್ವದ ಅಗತ್ಯವಿದೆಯೆ?
ನಮ್ಮದಲ್ಲದ ಅಗತ್ಯಕ್ಕೆ ಮೀರಿದ ಎಲ್ಲವೂ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ. ಕೆರೆಯ ನೀರನುಕೆರೆಗೆ ಚೆಲ್ಲಿ ಎಂದರು. ತಿರುಗಿ ಕೊಟ್ಟ ಮೇಲೆ ಸಾಲ ಇರೋದಿಲ್ಲ ಶಾಂತಿ ಇರುತ್ತದೆ. ನಾವೆಷ್ಟೇ ದೇವರವಿಗ್ರಹಕ್ಕೆ ಅಲಂಕಾರವಾಗಿ ಚಿನ್ನ ಬೆಳ್ಳಿ ಒಡವೆಗಳನ್ನು ಅರ್ಪಿಸಿದರೂ ಅದರ ಹಿಂದೆ ಮಾಡಿದ ಪಾಪ ಕಾರ್ಯ ಬಿಡದೆ ಮುಂದುವರಿಸಿದರೆ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ ಎನ್ನುವ ಅರ್ಥ ಇಲ್ಲಿದೆ. ಒಳಗಿನಮನಸ್ಸಿನ ಶುದ್ದತೆ ಹೊರಗೂ ಇದ್ದರೆ ಲೋಕ
ಕಲ್ಯಾಣವಾದಂತೆ. ಸಂಸಾರಿಗಳಿಗೆ ಕಷ್ಟವಾದರೂ ಸಂನ್ಯಾಸಿಗಳಿಗೆ ಸುಲಭ. ಸಂನ್ಯಾಸಿಗಳೇ ಹಣದ ಹಿಂದೆ ನಡೆದರೆ ಸಂಸಾರಿಗಳ ಗತಿ ?
No comments:
Post a Comment