ಮಹಾತ್ಮ ಗಾಂದೀಜಿಯವರ 154 ನೇ ಜನ್ಮದಿನಾಚರಣೆಯನ್ನು ಭಾರತೀಯರು ಆಚರಣೆ ಮಾಡುತ್ತಿರುವುದು ಗಾಂಧೀಜಿಯ ತತ್ವಕ್ಕೆ ಸರಿಯಾಗಿದೆಯೆ? ರಾಷ್ಟ್ರದ ರಕ್ಷಣೆಗಾಗಿ ರಾಷ್ಟ್ರೀಯ ಚಿಂತನೆಯ ಜೊತೆಗೆ ಧಾರ್ಮಿಕ ಚಿಂತನೆಯನ್ನರಿತು ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟಂತಹ ಇಂತಹ ಎಷ್ಟೋ ಮಹಾತ್ಮರುಗಳನ್ನು ಇಂದು ನಾವು ಅರ್ಥ ಮಾಡಿಕೊಳ್ಳಲು ಸೋತಿರುವಾಗ ಅವರ ಜನ್ಮ ದಿನವನ್ನು ವೈಭವದಿಂದ ಆಚರಣೆ ಮಾಡಿದರೆ ಮಕ್ಕಳಿಗೆ ಜ್ಞಾನ ಬರುವುದೆ?
ಅವರ ಪರ ವಿರುದ್ದ ನಿಂತಿರುವ ಪಕ್ಷಗಳಿಗೇ ರಾಷ್ಟ್ರದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲದೆ ವಿದೇಶಿಗಳ ಹಿಂದೆ ನಡೆದಿದ್ದಾರೆಂದರೆ ಇದರಲ್ಲಿ ಮಹಾತ್ಮರ ತತ್ವಜ್ಞಾನ ಕಾಣೋದಿಲ್ಲ. ದೇಶವನ್ನು ಸ್ವತಂತ್ರ ಗೊಳಿಸಲು ಜೀವ ದ ಭಯ ಬಿಟ್ಟು ಸತ್ಯದ ಪರನಿಂತವರ ಸತ್ಯಾಗ್ರಹದ ಮುಂದೆ ಇಂದಿನವರ ಜೀವನ ಸುಖಕ್ಕಾಗಿ ವಿದೇಶಿಗಳ ಕೈ ಹಿಡಿದು ಒಪ್ಪಂದ ಮಾಡಿಕೊಳ್ಳುವ ರಾಜಕಾರಣಿಗಳು ದೇಶವನ್ನು ವಿದೇಶ ಮಾಡಲು ಹೊರಟಿರುವ ಸತ್ಯ ಧಾರ್ಮಿಕ ವರ್ಗ ಕ್ಕೆ ತಿಳಿಯದಂತಾಗಿರೋದು ವಿಪರ್ಯಾಸ. ಎಲ್ಲದರಲ್ಲೂ ನಮ್ಮ ಸ್ವಾರ್ಥ ಚಿಂತನೆ, ರಾಜಕೀಯ ಚಿಂತನೆ ಹೆಚ್ಚಾದಾಗಲೇ ಈ ದಾರಿ ಹಿಡಿಯೋದು.
ಬ್ರಿಟಿಷ್ ಸರ್ಕಾರ ನೆಲೆಯೂರಲು ಅಂದಿನ ರಾಜಾಧಿರಾಜರ ದ್ವೇಷದ ರಾಜಕೀಯವೇ ಕಾರಣ.ಇದನ್ನು ಪರಕೀಯರು ತಮ್ಮ ಅಸ್ತ್ರ ವಾಗಿಸಿಕೊಂಡು ವ್ಯವಹಾರಕ್ಕೆ ಬಳಸಿಕೊಂಡು ಜನರನ್ನು ತಮ್ಮ ದಾಸರಾಗಿಸಿಕೊಂಡು ಇಡೀ ದೇಶವನ್ನು ಆಳಿದರು. ಇದಕ್ಕೂ ಸಹಕಾರ ನೀಡಿದವರು ಅನೇಕರಿಗೆ ತಮ್ಮ ಜೀವನವೇ ಮುಖ್ಯವಾಗಿತ್ತು. ಕೊನೆಯಲ್ಲಿ ಪರಾವಲಂಬನೆಯ ಅನುಭವ ತಾಳಲಾಗದೆ ತಿರುಗಿ ನಿಂತವರನ್ನು ಕೊಂದು ಆಳಿದರೆನ್ನುವುದೇ ಇತಿಹಾಸದ ಕಥೆ.
ಇದನ್ನು ಪುರಾಣಗಳಲ್ಲಿ ಕಾಣಲಾಗದು.ಪುರಾಣ ಕಥೆಗಳು ರಾಜಪ್ರಭುತ್ವ ದಲ್ಲಿತ್ತು.ರಾಜರಿಗೆ ಧಾರ್ಮಿಕ ಪ್ರಜ್ಞೆ ಯಿತ್ತು.ಜನರನ್ನು ಧರ್ಮದ ಹಾದಿಯಲ್ಲಿ ನಡೆಯಲು ಉತ್ತಮ ಶಿಕ್ಷಣ ನೀಡಲಾಗುತ್ತಿತ್ತು. ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ನಡೆಸಿಕೊಂಡು ಹೋಗುವ ಸ್ವಾತಂತ್ರ್ಯ ವಿತ್ತು. ಯುದ್ದಗಳಾಗಲು ಅಧರ್ಮ ವೇ ಕಾರಣವಾಗಿತ್ತು. ಅತಿಯಾದ ಶೋಷಣೆ ಘೋಷಣೆಗಳು ಜನರನ್ನು ತಿರುಗಿ ನಿಂತು ಹೋರಾಟ ನಡೆಸುವಂತೆ ಮಾಡುತ್ತದೆ.ಹಾಗಾದರೆ ಇಂದಿನ ದಿನಗಳಲ್ಲಿ ಯಾರಿಂದ ಯಾರಿಗೆ ಶೋಷಣೆಯಾಗುತ್ತಿದೆ,ಘೋಷಣೆ ನಡೆದಿದೆ ಎಂದರೆ ಇಲ್ಲಿ ಯಾರೂ ಯಾರನ್ನೂ ಶೋಷಣೆ ಮಾಡುತ್ತಿಲ್ಲ.ಜನರೆ ತಮ್ಮ ಶೋಷಣೆಗೆ ಅವಕಾಶ ನೀಡುತ್ತಾ ಅಧರ್ಮಕ್ಕೆ ಸಹಕರಿಸಿ ಹೊರಗೆ ಹೋರಾಟ ಮಾಡುತ್ತಾ ಹೊರಗಿನ ದೇಶದವರಿಗೆ ಮಣೆ ಹಾಕಿ ಸ್ವಾಗತಿಸಿ ಸಾಲ,ಬಂಡವಾಳ,ವ್ಯವಹಾರಕ್ಕೆ ನಮ್ಮ ನೆಲಜಲವನ್ನು ಬಿಟ್ಟು ಶಿಕ್ಷಣವನ್ನೂ ಹಾಳು ಮಾಡಿದರೂ ಹೇಳೋರಿಲ್ಲ ಕೇಳೋರಿಲ್ಲದ ಪರಿಸ್ಥಿತಿಯಲ್ಲಿ ಮಹಾತ್ಮರ ಹೆಸರಿನಲ್ಲಿ ನಡೆಸೋ ಆಚರಣೆಯಿಂದ ಏನಾದರೂ ಬದಲಾವಣೆ ಸಾಧ್ಯವೆ? ಎಲ್ಲಾ ಒಂದೇ ರೀತಿಯಲ್ಲಿ ಆಚರಣೆ ಮಾಡೋದಿಲ್ಲ ಕಾರಣ ಇಲ್ಲಿ ಎರಡೂ ಪಕ್ಷಗಳ ಮನಸ್ಥಿತಿ ಬೇರೆ ಬೇರೆಯಾದರೂ ದೇಶ ಒಂದೇ ಅದನ್ನು ಸ್ವತಂತ್ರ ಗೊಳಿಸಿದವರು ಹಲವರು. ಅದರಲ್ಲಿ ಮುಖಂಡತ್ವವಹಿಸಿದ ಪ್ರಮುಖರಲ್ಲಿ ಗಾಂಧೀಜಿಯವರು ಮಹಾತ್ಮರಾಗಿದ್ದರು.ಇಲ್ಲಿ ಮಹಾತ್ಮಪದ ಬಳಸಲು ಕಾರಣವೇನೆಂದರೆ ಅಂದಿನಕೆಟ್ಟ ಸ್ಥಿತಿ, ಕೆಟ್ಟ ಬ್ರಿಟಿಷ್ ಮನಸ್ಥಿತಿ ಅರಿತು ಹೋರಾಟ ಮಾಡುವಾಗ ಕೇವಲ ಭೌತಿಕ ಸತ್ಯ ತಿಳಿದರೆ ಸಾಲದಾಗಿತ್ತು.ಅಧ್ಯಾತ್ಮದ ಸತ್ಯವರಿತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜನರ ಜೀವನದಲ್ಲಿ ಸುಧಾರಣೆ ತರುವ ಮೂಲಕ ನಿಧಾನವಾಗಿ ಒಗ್ಗಟ್ಟಿನಿಂದ ಪರಕೀಯರ ವಿರುದ್ದ ನಿಲ್ಲುವುದು ಸುಲಭವಿಲ್ಲ.ಇದು ಮಹಾತ್ಮರಿಂದ ಸಾಧ್ಯವಾಗಿತ್ತು.
ಅಸಹಕಾರ ಚಳುವಳಿಯ ಹಿಂದಿರುವ ಅಧ್ಯಾತ್ಮ ಸತ್ಯ ಗಮನಿಸಿದರೆ ಬ್ರಿಟಿಷ್ ಸರ್ಕಾರದ ದೇಶದ್ರೋಹವನ್ನು ಖಂಡಿಸಲು ದೈಹಿಕಬಲಕ್ಕಿಂತ ಮಾನಸಿಕಬಲವೇ ಹೆಚ್ಚು ಪರಿಣಾಮ ಬೀರುವುದೆನ್ನುವುದಾಗಿದೆ. ಯಾವಾಗ ವೈರಿಗಳನ್ನು ವಿರೋಧಿಸುತ್ತಾ ಹೋರಾಟಕ್ಕೆ ಇಳಿಯುವೆವೋ ಆಗ ವೈರತ್ವ ಬೆಳೆಯುತ್ತಾ ಜೀವ ವೂ ಹೋಗುತ್ತದೆ. ಅದಕ್ಕೆ ಬದಲಾಗಿ ಒಳಗೇ ನಮ್ಮ ಮನಸ್ಸಿನ ಮೂಲಕ ಅವರ ಅಧರ್ಮದ ಕೆಲಸ,ವ್ಯವಹಾರಕ್ಕೆ ಕಡಿವಾಣಹಾಕಿ ಅಸಹಕಾರ ನೀಡುವೆವೋ ಆಗ ಅವರ ಆಂತರಿಕ ಶಕ್ತಿ ಕುಸಿದು ಶರಣಾಗುವರು.ಇದು ಅಧ್ಯಾತ್ಮ ಸತ್ಯವಾಗಿದೆ. ಈಗ ನಾವು ಭ್ರಷ್ಟಾಚಾರ ತಡೆಯಲು ಹೊರಗಿನಹೋರಾಟ,ಹಾರಾಟ ಮಾರಾಟಕ್ಕೆ ಸಹಕಾರ ನೀಡುತ್ತಿರುವುದೇ ಭ್ರಷ್ಟಾಚಾರ ಬೆಳೆಯಲು ಕಾರಣವಾಗಿದೆ. ಭ್ರಷ್ಟಾಚಾರ ನಮ್ಮ ಸಹಕಾರದಿಂದ ಬೆಳೆದಿರುವಾಗ ಭ್ರಷ್ಟಾಚಾರ ನಮ್ಮೊಳಗೇ ಅಡಗಿರುವಾಗ ಅದರಿಂದ ದೂರವಿರಲು ಮೊದಲು ನಾವು ಅಧ್ಯಾತ್ಮ ಸಂಶೋಧಕರಾಗಬೇಕಿದೆ. ಅಧ್ಯಾತ್ಮ ಎಂದರೆ ಪುರಾಣ ಇತಿಹಾಸ ಓದೋದಲ್ಲ ಹೇಳೋದಲ್ಲ ಅದರಂತೆ ನಡೆಯೋದಾಗಿತ್ತು. ಎಷ್ಟು ಮಂದಿ ನಡೆಯಲು ಸಾಧ್ಯವಾಗಿದೆ? ಜನಸಾಮಾನ್ಯರನ್ನು ಆಳೋದಕ್ಕೆ ಹೊರಟವರಿಗೆ ದೇಶ ಕಾಣುತ್ತಿಲ್ಲ ಧರ್ಮದ ಸೂಕ್ಮ ಅರ್ಥ ವಾಗದೆ ವಿದೇಶದೆಡೆಗೆ ನಡೆಯುವಂತಾಗಿದೆ.ಒಳಗೇ ಇರುವ ಆತ್ಮಸಾಕ್ಷಿಗೆ ವಿರುದ್ದ ನಡೆದಂತೆಲ್ಲಾ ಅಧರ್ಮ ಹೆಚ್ಚಾಗುತ್ತದೆ.
ಭ್ರಷ್ಟಾಚಾರ ಕ್ಕೆಕಾರಣವೇ ಅಜ್ಞಾನ.ಅಜ್ಞಾನ ಬೆಳೆದಿರೋದು ರಾಜಕೀಯ ಪ್ರಚಾರದಿಂದ. ಪುರಾಣ ಕಥೆಗಳು ರಾಜಯೋಗಕ್ಕೆ ಬೆಲೆಕೊಟ್ಟಿತ್ತು.ಅಂದರೆ ಆತ್ಮಾನುಸಾರ ಧರ್ಮದ ಪ್ರಕಾರ ಅವರವರ ಸ್ವತಂತ್ರ ಜ್ಞಾನವನ್ನು ಬೆಳೆಸಿಕೊಂಡು ಜೀವನ ನಡೆಸೋದೇ ಹಿಂದೂ ಸನಾತನ ಧರ್ಮದ ಉದ್ದೇಶ ವಾಗಿತ್ತು. ಕಾಲಾನಂತರದಲ್ಲಾದ ಅಂತರದ ಪ್ರಭಾವದಿಂದಾಗಿ ಇಂದು ಅಂತರ ಹೆಚ್ಚಿಸುವ ರಾಜಕೀಯ ಬೆಳೆದಿದೆಯೇ ಹೊರತು ಅಂತರ ಕಡಿಮೆಮಾಡಿ ಒಗ್ಗಟ್ಟಿನ ಮಂತ್ರಹೇಳುವ ತತ್ವಜ್ಞಾನವಿಲ್ಲ.ಎಲ್ಲಾ ತಂತ್ರಮಯ ಆದರೆ ಸ್ವತಂತ್ರ ಯಾರಿಗೆ ಸಿಕ್ಕಿದೆ?
ಮಹಾತ್ಮರುಗಳಲ್ಲಿ ತತ್ವವಿರುತ್ತದೆ ತಂತ್ರವಿರದು. ಹಾಗಾದರೆ ನಾವೆಲ್ಲರೂ ಎಡವಿದ್ದೆಲ್ಲಿ? ತಂತ್ರದ ಬಲೆಯಲ್ಲಿ ಇಳಿದು ಸಿಕ್ಕಿಕೊಂಡು ಹೊರಬರಲಾಗದೆ ಅದೇ ಬಲೆಯಲ್ಲಿ ಸ್ವತಂತ್ರ ಜೀವನ ನಡೆಸಲು ಗಾಳ ಹಾಕಿದವರಿಗೇ ಸಹಾಯ ಮಾಡುತ್ತಾ ನಮ್ಮವರನ್ನೇ ದಗವೇಷ ಮಾಡುತ್ತಾ ಇದೇ ಸ್ವರ್ಗ ಸುಖವೆನ್ನುವ ಭ್ರಮೆಯಲ್ಲಿರುವ ಅತಂತ್ರ ಜೀವಿಗಳೆಂದರೆ ಅವಮಾನವಾಗಬಹುದು. ಆದರೆ ಇದೇ ಸತ್ಯವಾಗಿದೆ. ಇಲ್ಲಿ ದೇಶದ ಮಾನ ಮರ್ಯಾದೆ ಹೋದರೂ ಸರಿ ನಾನು ಜೀವಿಸಬೇಕೆನ್ನುವವರೆ ಹಿಂದೆ ನಿಂತು ಸರ್ಕಾರದ ದಾರಿ ತಪ್ಪಿಸಿ ಅಧರ್ಮಕ್ಕೆ ದಾರಿಮಾಡಿಕೊಟ್ಟಿದ್ದಾರೆಂದರೆಯಾರೋ ಒಬ್ಬರ ಹೆಸರು ಹೇಳಲಾಗದು.ಕಾರಣ ಅವರು ಹಾಗೆ ನಡೆಯಲು ಅಜ್ಞಾನ ಕಾರಣ ಅಜ್ಞಾನ ಕ್ಕೆ ಪಡೆದ ಶಿಕ್ಷಣ ಕಾರಣ, ನೈತಿಕಶಿಕ್ಷಣ ಕೊಡದೆ ಧರ್ಮ ಪ್ರಚಾರ ಮಾಡಿದವರೂ ಕಾರಣ.ಪ್ರಚಾರ ಮಾಡುವವರಿಗೆ ಹಣ ನೀಡಿ ಸಹಕರಿಸಿದ ಪ್ರಜೆಗಳೇ ಎಲ್ಲಾ ಸಮಸ್ಯೆಗಳಿಗೆ ಕಾರಣ. ಸಮಸ್ಯೆ ಈಗ ಮನೆಮನೆಯೊಳಗೆ ಹರಡುತ್ತಿದೆ ಎಂದರೆ ಏನು ಕೊಡುವೆವೋ ಅದೇ ತಿರುಗಿ ಬರುತ್ತದೆ ಎನ್ನುವ ಅಧ್ಯಾತ್ಮ ಸತ್ಯ ಈಗಲೂ ನಾವು ಒಪ್ಪದೆ ಇದ್ದರೆ ಇದನ್ನು ತಪ್ಪು ಎನ್ನುವವರೆ ಎಲ್ಲದ್ದಕ್ಕೂ ಕಾರಣಕರ್ತರು. ಆಗೋದನ್ನು ತಡೆಯಲಾಗದು, ಆಗಿದ್ದೆಲ್ಲಾ ಒಳ್ಳೆಯದಕ್ಕೆ,ಮುಂದೆ ಒಳ್ಳೆಯದಾಗಬೇಕೆಂದರೆ ಹಿಂದಿನ ಮಹಾತ್ಮರನ್ನು ಅಧ್ಯಾತ್ಮದ ಪ್ರಕಾರ ಅರ್ಥ ಮಾಡಿಕೊಂಡು ರಾಜಕೀಯ ಬಿಟ್ಟು ಸ್ವಾರ್ಥ ಮರೆತು ಪರಮಾತ್ಮನ ತತ್ವ ತಿಳಿಯುವ ಪ್ರಯತ್ನ ಮಾಡಿದರೆ ಪ್ರಜಾಪ್ರಭುತ್ವದ ಪ್ರಜೆಗೆ ಮುಂದಿನ ದೇಶದ ಭವಿಷ್ಯ ಹೇಗಿರಬಹುದೆನ್ನುವ ಸತ್ಯ ತಿಳಿದು ಜಾಗೃತರಾಗಿ ಜವಾಬ್ದಾರಿಯುತ ಪೋಷಕರಾಗಿ ಮಕ್ಕಳು ಮಹಿಳೆಯರನ್ನು ಸರಿಯಾಗಿ ತಿಳಿದು ನಡೆದು ನೆಡೆಸಬಹುದಷ್ಟೆ. ನಾವೇ ದಾರಿತಪ್ಪಿರುವಾಗ ಮಕ್ಕಳು ಮಹಿಳೆಯರನ್ನು ಸರಿದಾರಿಯಲ್ಲಿ ನಡೆಸಲು ಸಾಧ್ಯವಿಲ್ಲ.ಒಟ್ಟಿನಲ್ಲಿ ಹೊರಗಿನಿಂದ ಮಹಾತ್ಮರನ್ನು ಬೆಳೆಸೋ ಬದಲಾಗಿ ಒಳಗೇ ಅಡಗಿರುವ ಮಹಾತ್ಮರನ್ನು ಅರ್ಥ ಮಾಡಿಕೊಂಡು ನಡೆಯುವುದೇ ನಿಜವಾದ ಸ್ವಾತಂತ್ರ್ಯ
ತಂದುಕೊಟ್ಟವರಿಗೆ ನಾವು ಕೊಡುವ ಗೌರವವಾಗಿದೆ. ಇದಕ್ಕಾಗಿ ಆಡಂಬರದ ಕಾರ್ಯಕ್ರಮ, ಊಟ,ಉಪಚಾರ,ಸನ್ಮಾನ,ಸಮಾರಂಭ,ಭಾಷಣಕ್ಕಾಗಿ ಜನರನ್ನು ಕರೆದು ಹಣದುಂದುವೆಚ್ಚ ಮಾಡುವ ಅಗತ್ಯವಿರಲಿಲ್ಲ. ದೇಶದ ಹಣ ದುರ್ಭಳಕೆ ಆಗೋದನ್ನು ತಡೆಯಲು ನಮ್ಮಲ್ಲಿ ಸತ್ವ,ತತ್ವ,ಸತ್ಯಜ್ಞಾನವಿದ್ದರೆ ಸಾಕು. ಇದು ಶಿಕ್ಷಣದಲ್ಲಿಯೇ ತಡೆದು ಆಳಿದ ಬ್ರಿಟಿಷ್ ರು ಈಗಲೂ ನಮ್ಮನ್ನು ಶಿಕ್ಷಣದಲ್ಲಿದ್ದೇ ಆಳುತ್ತಿರುವ ಸತ್ಯವೇ ನಮಗರಿವಿಲ್ಲದೆ ನಡೆಸುತ್ತಿರುವಾಗ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದವರ ಆತ್ಮಕ್ಕೆ ಶಾಂತಿ ಸಿಕ್ಕಿದೆಯೆ? ಎಲ್ಲಿರುವರು ಮಹಾತ್ಮರುಗಳು? ರಾಜಕೀಯದಲ್ಲಿರಲು ಸಾಧ್ಯವಿಲ್ಲ ಕಾರಣ ಅಧ್ಯಾತ್ಮ ಯಾವತ್ತೂ ರಾಜಕೀಯ ಬಿಟ್ಟು ರಾಜಯೋಗದಲ್ಲಿರುವುದು..ಬುದ್ದ,ಸ್ವಾಮಿವಿವೇಕಾನಂದ,ಗಾಂಧೀಜಿಯವರ ಕಾಲದಲ್ಲಿ ವ್ಯತ್ಯಾಸವಿತ್ತು ಬುದ್ದ ರಾಜನಾಗಿ ಹೊರಬಂದು ಸಂನ್ಯಾಸಿಯಾಗಿ ಮೋಕ್ಷಪಡೆದರೆ, ವಿವೇಕಾನಂದರು ಬಾಲಸಂನ್ಯಾಸಿಯಾಗಿದ್ದೇ ದೇಶಭಕ್ತರಾಗಿ ರಾಜಯೋಗಿಗಳಾದರು ನಂತರದ ಗಾಂಧೀಜಿಯ ಕಾಲದಲ್ಲಿ ದೇಶವೇ ಬ್ರಿಟಿಷ್ ಸಾಮ್ರಾಜ್ಯ ವಾಗಿತ್ತು. ಇದಕ್ಕಾಗಿ ಶ್ರಮ ಪಟ್ಟು ಜನರನ್ನು ಎಚ್ಚರಿಸುತ್ತಾ ರಾಜಯೋಗದ ವಿಚಾರ ತಿಳಿದು ಅಧ್ಯಾತ್ಮದ ಪ್ರಕಾರವೇಉಪವಾಸ ಸತ್ಯಾಗ್ರಹದ ಜೊತೆಗೆ ಭೌತಿಕದ ವಿಜ್ಞಾನವನರಿತು ದೇಶವನ್ನು ಪರಕೀಯರ ವಶದಿಂದ ಬಿಡಿಸಿಕೊಳ್ಳಲು ಮಹಾತ್ಮರಾಗಿ ಸೇವೆ ಮಾಡಿದರು. ಇದಕ್ಕೆ ಪ್ರತಿಯಾಗಿ ಸಿಕ್ಕಿದ್ದೇನು? ಬುದ್ದ ಬಸವ, ರಾಮಕೃಷ್ಣ ಪರಮಹಂಸರು,ವಿವೇಕಾನಂದರು ಎಲ್ಲರ ವಿಚಾರ ಪ್ರಚಾರದಲ್ಲಿದ್ದರೂ ಮಕ್ಕಳ ಪಠ್ಯಪುಸ್ತಕದಲ್ಲಿ ಮರೆಯಾಗುತ್ತಾ ಅಧ್ಯಾತ್ಮ ವಿಜ್ಞಾನದ ಸಂಶೋಧನೆಯಾಗದೆ ಭೌತಿಕವಿಜ್ಞಾನದ ಸಂಶೋಧನೆ ಕಡೆಗೆ ಭಾರತೀಯರು ದೇಶ ಬಿಟ್ಟು ಹೊರಗೆ ನಡೆದರೆ ಪ್ರಗತಿ ಸಾಧನೆ ಎನ್ನುವ ಅತಿಯಾದ ವಿಜ್ಞಾನವೇ ಇಂದು ಅಧೋಗತಿಯತ್ತ ನಡೆಸಿದೆ.
ಇದಕ್ಕೆ ಕಾಲವೇ ಕಾರಣವೆಂದರೂ ನಮ್ಮ ಬುದ್ದಿ ಸರಿಯಾಗದು. ಮಾನವನ ಬುದ್ದಿ ಬೆಳೆದಂತೆಲ್ಲಾ ಒಳಗಿನ ಜ್ಞಾನ ಹಿಂದುಳಿದರೆ ಹಿಂದಿನವರ ಧರ್ಮ ಕರ್ಮ ದ ಒಳಗಿದ್ದ ಸೂಕ್ಷ್ಮ ಸತ್ಯ ಅರ್ಥ ವಾಗದೆ ಜೀವ ಹೋಗುವುದು. ಅದೇ ಸ್ಥಿತಿಗೆ ಮತ್ತೆ ಭೂಮಿಗೆ ಬಂದಾಗಲೂ ಜ್ಞಾನದ ಶಿಕ್ಷಣ ಸಿಗದಿದ್ದರೆ ಅಜ್ಞಾನವೇಮಿತಿಮೀರಿ ಬೆಳೆಯುವುದು.ಹೀಗಾಗಿ ಕಲಿಗಾಲವನ್ನು ಕಲಿಯುವಕಾಲ ಎನ್ನಬಹುದು.ಎಷ್ಟು ಕಲಿತರೂ ಮುಗಿಯದ ಮಾಯಾಲೋಕದಲ್ಲಿ ಎಷ್ಟು ವರ್ಷ ಬದುಕಿದರೂ ವ್ಯರ್ಥ. ಅದಕ್ಕೆ ಯಾವುದನ್ನು ಕಲಿತರೆ ಕಾಲ ಸರಿಯಾಗುವುದೋ ಅದನ್ನು ಕಲಿಯುವತ್ತ ನಡೆದವರೆ ಮಹಾತ್ಮರಾಗಿರೋದು. ಆತ್ಮಕ್ಕೆ ಸಾವಿಲ್ಲವಾದಾಗ ಮಹಾತ್ಮರು ಹುಟ್ಟು ಸಾವಿನ ಆಚರಣೆಯ ಉದ್ದೇಶ ರಾಜಕೀಯವಾಗದಿದ್ದರೆ ಉತ್ತಮ ಜೀವನವಾಗಬಹುದು.
ಗುರುಹಿರಿಯರು ಮಹಾತ್ಮರುಗಳು ನಡೆದ ದಾರಿಯಲ್ಲಿ ನಾವು ಹಿಂದಿರುಗಿ ನಡೆಯೋ ಪ್ರಯತ್ನ ಮಾಡಿದರೆ ನಮ್ಮ ಮಕ್ಕಳಿಗೆ ದಾರಿದೀಪವಾಗಬಹುದು. ಇಲ್ಲವಾದರೆ ದಾರಿತಪ್ಪಿಸಿ ನಡೆಯೋ ದಾರಿಹೋಕರೆ ಹೆಚ್ಚಾಗುವರು. ಇದಕ್ಕೆ ಒಳಗಿರುವ ಆತ್ಮಜ್ಞಾನದೆಡೆಗೆ ಆತ್ಮಜ್ಯೋತಿ ಕಡೆಗೆ ನಮ್ಮ ನಡೆ ನುಡಿ ಇರಬೇಕಿದೆ. ಸ್ವತಂತ್ರ ವಾಗಿರುವವರಿಗೆ ಇದು ಸಾಧ್ಯವಿದೆ. ತಾವೇ ಜನರ ಹಣಕ್ಕಾಗಿ ಬದುಕಿದ್ದರೆ ಜ್ಞಾನಬರದು. ಸ್ವಾತಂತ್ರ್ಯ ಹೋರಾಟಗಾರರು ಜ್ಞಾನದಲ್ಲಿ ಶ್ರೀಮಂತ ರಾಗಿದ್ದರು.
ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನವೂ ಗಾಂಧೀಜಿಯವರ ಜನ್ಮದಿನವೂ ಒಂದೇ ಆಗಿದ್ದರೂ ಹೆಸರು ಹೆಚ್ಚಾಗಿ ಕೇಳೋದು ಗಾಂಧೀಜಿ ಯವರದ್ದೆ.ಕಾರಣ ಅವರನ್ನು ಕೊನೆಯಲ್ಲಿ ದ್ವೇಷದಿಂದ ಕೊಂದಿದ್ದೇ ಇಂದು ರಾಜಕೀಯದ ದಾಳವಾಗಿ ಹೆಚ್ಚು ಪ್ರಚಾರಕರ ಹೊಟ್ಟೆ ತುಂಬಿಸುತ್ತಿದೆ. ಇದರಲ್ಲಿ ಧರ್ಮ ಎಲ್ಲಿದೆ? ಹುಡುಕಿದರೂ ಸಿಗೋದಿಲ್ಲ. ಎಂತಹ ಅಸಹ್ಯಕರ ರಾಜಕೀಯದಲ್ಲಿ ದೇಶ ನಿಂತಿದೆ ಎನಿಸುವುದಿಲ್ಲವೆ?ಅದರಲ್ಲಿ ಮುಳುಗಿದವರಿಗೆ ಇದು ಅರ್ಥ ವಾಗದು. ಒಟ್ಟಿನಲ್ಲಿ ಎಲ್ಲಾ ದೇಶಭಕ್ತರೂ ಮಹಾತ್ಮರಾಗಿದ್ದರು. ಮಹಾತ್ಮರನ್ನು ತಿಳಿದು ನಡೆಯುವುದರಲ್ಲಿ ನಾವೇ ಸೋತು ಹಿಂದುಳಿದವರಾಗಿದ್ದೇವೆ. ಸತ್ಯ ಕಠೋರವಾಗಿದ್ದರೂ ಸತ್ಯವೇ ದೇವರು.ಸತ್ಯಮೇವ ಜಯತೆ ಎಂದಿದ್ದಾರೆ ಮಹಾತ್ಮರುಗಳು.
ಗುರುಹಿರಿಯರನ್ನು ಮಹಾತ್ಮರನ್ನು ದೇವತೆಗಳನ್ನು ಪ್ರಚಾರಕ್ಕೆ ಬಳಸಿ ಹಣ ಮಾಡುತ್ತಾ ವಿದೇಶದವರೆಗೆ ಹೋಗಿ ನೆಲೆಸಬಹುದು ಆದರೆ ಅವರ ತತ್ವಜ್ಞಾನವನ್ನು ಧರ್ಮ ಸತ್ಯವನರಿತು ಮೂಲದೆಡೆಗೆ ಹೋಗಿ ನೆಲೆಸುವುದೇ ಮಹಾ ಕಷ್ಟ. ಕಷ್ಟಪಡದೆ ಸುಖಪಟ್ಟರೆ ಕಷ್ಟದೆಡೆಗೆ ಬರಲೇಬೇಕಷ್ಟೆ. ಹೀಗಾಗಿ ಯುವಜನಾಂಗ ಕಷ್ಟ ತಡೆಯಲಾಗದೆ ಅಡ್ಡದಾರಿ ಹಿಡಿದು ಅತಂತ್ರಸ್ಥಿತಿಗೆ ತಲುಪಿ ಮಧ್ಯವರ್ತಿಗಳು ಬೆಳೆದಿರುವರು. ಆ ಮಧ್ಯವರ್ತಿಗಳ ಕುತಂತ್ರದಿಂದ ದೇಶವೇ ವಿದೇಶವಾದರೆ ಆತ್ಮದುರ್ಭಲ ಭಾರತವಾಗಿ ಇರುವ ಸ್ವಾತಂತ್ರ್ಯ ಕಳೆದುಕೊಳ್ಳುವಮೊದಲು ಎಚ್ಚರವಾದರೆ ಉತ್ತಮ. ವೈಜ್ಞಾನಿಕ ಚಿಂತನೆ ಇರಲಿ ಆದರೆ ಇದು ಆತ್ಮಹತ್ಯೆ ಆಗುವಷ್ಟು ಬೆಳೆಸಬಾರದು. ನಾನು ಸರಿಯಾಗಲು ಸಾಧ್ಯವಿಲ್ಲವಾದರೆ ಮಕ್ಕಳಿಗೆ ಸರಿದಾರಿಯಲ್ಲಿ ನಡೆಯಲು ಬಿಟ್ಟರೆ ಸಾಕು. ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯಿದೆ.ತಿಳಿದೂ ಮಾಡುವ ತಪ್ಪಿಗೆ ದೇವರೂಕ್ಷಮಿಸಲ್ಲ.
ಪ್ರಜಾಪ್ರಭುತ್ವದಲ್ಲಿ ಧರ್ಮ ಯಾವುದು ಅಧರ್ಮ ಯಾವುದೆನ್ನುವ ವಿಚಾರಗಳುಳ್ಳ ಈ ಪುಸ್ತಕದಲ್ಲಿರುವ ಸಾಮಾನ್ಯಜ್ಞಾನ ತಿಳಿದವರಿಗೆ ದೇಶದ ಈ ಸ್ಥಿತಿಗೆ ಕಾರಣ ಅರ್ಥ ವಾಗುತ್ತದೆ. ಅರ್ಥ ವಾದವರೆ ಅಸಹಕಾರದಿಂದ ವರ್ತನೆಮಾಡಿದರೆಬೇಲಿಯೇಎದ್ದುಹೊಲಮೇದ್ದಂತಾಗುತ್ತದೆಒಗ್ಗಟ್ಟಿನಲ್ಲಿ ಬಲವಿದೆ.ಇದೀಗ ತಂತ್ರದಲ್ಲಿದೆ ತತ್ವದಲ್ಲಿಲ್ಲದೆ ಅತಂತ್ರಸ್ಥಿತಿಗೆ ದೇಶ ತಲುಪುತ್ತಿದೆ..