ಶೈಲಪುತ್ರಿ

ದಕ್ಷ ಪ್ರಜಾಪತಿಯ ಆ ಬೃಹತ್ ಯಾಗಶಾಲೆಯಲ್ಲಿ ಅಂದು ಧಗಧಗನೆ ಉರಿಯುತ್ತಿದ್ದದ್ದು ಕೇವಲ ಹವಿಸ್ಸಿನ ಬೆಂಕಿಯಲ್ಲ, ಜಗತ್ತಿನ ಮೂಲಶಕ್ತಿಯ ಸ್ವಾಭಿಮಾನ. ತನ್ನ ಪತಿ ಮಹಾದೇವನಿಗೆ ಆ...

Friday, June 9, 2023

ಉಚಿತ ಭಾಗ್ಯಜ್ಯೋತಿ ಉತ್ತಮ ಬೆಳಕಿನೆಡೆಗೆ ನಡೆಯಬೇಕಿತ್ತು

ಸರ್ಕಾರ ಕೊಡುವ‌ಉಚಿತ  ಭಾಗ್ಯವನ್ನು ಎಷ್ಟು ಮಂದಿ ಸ್ವಾಗತಿಸುವರೋ ಎಷ್ಟು ಮಂದಿ ವಿರೋಧಿಸುವರೋ ಲೆಕ್ಕ ಸಿಗಲ್ಲ.ಆದರೆ ಯೋಜನೆಯ ಫಲಾನುಭವಿಗಳಲ್ಲಿ
ವಿರೋಧಿಗಳೂ ಇರುವುದಂತೂ ಸತ್ಯ.

ಹಿಂದಿನ ಸರ್ಕಾರವಾಗಲಿ ಈಗಿನ ಸರ್ಕಾರವಾಗಲಿ ಏನು ಕೊಟ್ಟಿದೆಯೋ ಎಲ್ಲಾ ಪ್ರಜೆಗಳೂ ಒಟ್ಟಿಗೆ ಪಕ್ಷಪಾತವಿಲ್ಲದೆ ಪಡೆದರೂ  ಪಕ್ಷ ಬದಲಾವಣೆಯಾದರೂ ಅದೇ ಯೋಜನೆ. ಸ್ವಲ್ಪ ಮಟ್ಟಿಗೆ ಬದಲಾಗಿದೆ . ಒಂದು ದೇಶಕ್ಕೆ ಬಂಡವಾಳದ ಸುರಿಮಳೆಯನ್ನು ತಂದರೆ ಇನ್ನೊಂದು ಬಂಡವಾಳವನ್ನು ಸುಲಿಗೆ ಮಾಡಿ  ರಾಜಕೀಯ ನಡೆಸಲು ಹೊರಟಿರೋದು ಪ್ರಜೆಗಳ ಸಹಕಾರದಿಂದ. 
ಕೊಡುವವರಿದ್ದಾಗ ಪಡೆಯುವವರೂ ಇರುವರು.ಅದೂ ಉಚಿತವಾದ ಸಾಲವಷ್ಟೆ.ಆ ಸಾಲವನ್ನು ತೀರಿಸಲು  ಮತ್ತಷ್ಟು ವಿದೇಶಿ ಬಂಡವಾಳ ವ್ಯವಹಾರ, ಶಿಕ್ಷಣ ಹೆಚ್ಚಾದಂತೆಲ್ಲಾ  ದೇಶ ವಿದೇಶಗಳಿಂದ  ಸಾಲವೇ ಶೂಲವಾಗುತ್ತದೆ.

ಧಾರ್ಮಿಕವಾಗಿ  ಈ ವಿಚಾರವನ್ನು  ಪರಿಶೀಲನೆ ಮಾಡಿದರೆ ಪ್ರಜಾಧರ್ಮ ಪ್ರಜಾಪ್ರಭುತ್ವದ ವಿರುದ್ದ ರಾಜಕೀಯ ವಿದೆ.
ಕೇಳಿದ್ದನ್ನು ಕೊಡುವುದು ಧರ್ಮವಾಗಿದ್ದರೆ ಕರ್ಣನಿಗೆ ಕೊಟ್ಟು ಕೆಟ್ಟ ಎನ್ನುವ ಬಿರುದು  ಬರುತ್ತಿರಲಿಲ್ಲ.ಆದರೆ ಅಂದಿನ ಕ್ಷತ್ರಿಯ ಧರ್ಮ ಕ್ಕೂ ಇಂದಿನ ಪ್ರಜಾಧರ್ಮಕ್ಕೂ ವ್ಯತ್ಯಾಸವಿದೆ.
ಇಷ್ಟು ವರ್ಷ ಆಡಳಿತ‌ ನಡೆಸಿದ ಯಾವ ಪಕ್ಷ ಉಚಿತವಾಗಿ ಶಿಕ್ಷಣ ನೀಡಲು ಸಾಧ್ಯವಾಯಿತು. ಅದರಲ್ಲೂ ಜ್ಞಾನದ ಶಿಕ್ಷಣ ನೀಡಿದ್ದರೆ ಇಂತಹ ಅಜ್ಞಾನದ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ.
ಪ್ರಜೆಗಳೇ ದೇಶವನ್ನು ಸಾಲದ  ಕಡೆಗೆ ಎಳೆದಿರುವಾಗ ಬೇಲಿಯೇ ಎದ್ದುಹೊಲಮೇಯ್ದಂತಲ್ಲವೆ?
 ರಾಜಕಾರಣಿಗಳಾಗಲಿ ಪ್ರತಿಷ್ಟಿತರಾಗಲಿ,ಧಾರ್ಮಿಕ ವರ್ಗ ವಾಗಲಿ  ದೇಶದ ಋಣದಲ್ಲಿಯೇ ಜೀವನ ನಡೆಸಿರೋದು.
ಪ್ರಜೆಗಳ ಹಣ ಅವರ ಮತವಿಲ್ಲದೆ ಯಾವುದಾದರೂ ಸಂಘ ಸಂಸ್ಥೆ, ಮಠ,ಮಂದಿರ  ಇನ್ನಿತರ ಸೇವಾ ಕೇಂದ್ರಗಳಿವೆಯೆ?
ಇಷ್ಟಕ್ಕೂ ಸೇವೆ ಯಾರ ಹಣದಲ್ಲಿ ಯಾರಿಗೆ ನಡೆದಿದೆ.ಯಾರ ಸಾಲ ಯಾರು ತೀರಿಸಲಾಗಿದೆ? ಯಾರ ದೇಶವನ್ನು ಯಾರನ್ನು ಯಾರು ಆಳುತ್ತಿರುವುದು?ಸ್ವಾತಂತ್ರ್ಯ ಯಾರಿಗೆ ಯಾರು ಯಾವಾಗ ಕೊಟ್ಟರೋ ದೇವರಿಗಷ್ಟೆ ಗೊತ್ತು.
ರಾತ್ರಿ ವೇಳೆಯಲ್ಲಿ  ಸಿಕ್ಕಿದ ಸ್ವಾತಂತ್ರ್ಯ  ಕತ್ತಲೆಯಲ್ಲಿದ್ದವರಿಗಷ್ಟೆ ಸಿಕ್ಕಿದೆ. ಬೆಳಕಿನ ಕಡೆಗೆ ಬರುವವರೆಗೆ
 ವಿದೇಶಿ ಸಾಲ ತೀರದು. ಅವರ ಶಿಕ್ಷಣವನ್ನು ಬಂಡವಾಳ ಮಾಡಿಕೊಂಡರೆ ತಂತ್ರವಾಗಿರುತ್ತದೆ.ತತ್ವವಾಗದು
ಜ್ಞಾನಜ್ಯೋತಿ ಯೋಜನೆ ಜಾರಿಗೆ ತಂದಿದ್ದರೆ ಎಲ್ಲಾ ಭಾರತೀಯ ಪ್ರಜೆಗಳಿಗೂ ಉಚಿತ ಶಿಕ್ಷಣ ನೀಡಬಹುದು.
ಆಗ ಈ ಕತ್ತಲೆಯ ಸಾಮ್ರಾಜ್ಯದ  ಅಜ್ಞಾನ  ಬೆಳಕಿಗೆ ಬಂದರೆ ರಾಜಕೀಯ ಮೂಲೆ ಸೇರುವುದಲ್ಲವೆ? ಇದಕ್ಕೆ ರಾಜಕಾರಣಿಗಳ ಸಹಕಾರವಿಲ್ಲ.  ಇದೊಂದು  ಅಜ್ಞಾನ. 
 ಇಷ್ಟು ಸತ್ಯ ನಿಜವಾದ ದೇಶಭಕ್ತರು ಅರ್ಥ ಮಾಡಿಕೊಂಡರೆ ಸಾಕು  ನಮ್ಮವರ ಅಜ್ಞಾನವನ್ನು ನಾವೇ ಸಹಕಾರ ಕೊಟ್ಟು ಬೆಳೆಸಿ ಇನ್ನಷ್ಟು ಮೋಸ ಹೋಗಿರುವಾಗ ಯಾರ ವಿರುದ್ದ ಹೋರಾಟ ನಡೆಸಬೇಕು? ಹೋರಾಟ  ಯಾವ ದಿಕ್ಕಿನಲ್ಲಿರಬೇಕಿತ್ತು? ಈಗ ಯಾವ ದಿಕ್ಕಿನಲ್ಲಿ ನಡೆದಿದೆ?
ಅಧ್ಯಾತ್ಮ ಚಿಂತಕರು  ಶಿಕ್ಷಣ ಕ್ಷೇತ್ರದ ಅಧರ್ಮವನ್ನು ಎತ್ತಿ ಹಿಡಿಯದೆ  ತಾವೂ ಅದರಲ್ಲಿ ಸೇರಿದ್ದರೆ ಭಾರತದ ಸಾಲಕ್ಕೆ ಕಾರಣವೇ  ಪ್ರಜಾಸಹಕಾರ.
 ಸಾಲ ಮಾಡಿ ಕೆಟ್ಟ ಸಾಲವೇ ಶೂಲ ಯಾವುದಿದರ ಮೂಲ ಸರ್ಕಾರ ಅಥವಾ ಸಹಕಾರವೇ ಇದರ ಮೂಲ. ಈಗಲೂ ಉಚಿತ ಬೇಕೆ? ಉಚಿತವಾಗಿ ಪಡೆಯುವವರನ್ನು ಎಚ್ಚರಿಸಲಾಗುವುದೆ? ಬಡತನ ಬೆಳೆದಿರೋದು ಅಜ್ಞಾನದಿಂದ ಅಜ್ಞಾನವು ಬೆಳೆದಿರೋದು ಶಿಕ್ಷಣದಿಂದ.
ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ  ಅಭಿವೃದ್ಧಿ. ಇದೇ ಅನಾರೋಗ್ಯಕರವಾಗಿದ್ದರೆ ಅಧೋಗತಿ. ಆರೋಗ್ಯಕರ ಶಿಕ್ಷಣ ನೀಡದೆ ಮಕ್ಕಳ ಮನಸ್ಸನ್ನು ಹಾಳುಮಾಡಿ ರೋಗ ಹೆಚ್ಚಿಸಿದರೆ  ರೋಗವೇ ಹರಡೋದು. ಶಿಕ್ಷಣವೇ ನಮ್ಮದಲ್ಲದ ಮೇಲೆ ನಮ್ಮೊಳಗಿನ ಜ್ಞಾನವೂ ನಮ್ಮದಲ್ಲ. ಜ್ಞಾನಕ್ಕೆ ತಕ್ಕಂತೆ ವಿಜ್ಞಾನ ಜಗತ್ತಿದೆ.ವಿಜ್ಞಾನ ಹೊರಗಿನ ಜಗತ್ತಿನ  ಸತ್ಯ. ಆದರೆ ಭಾರತೀಯರ ವಿಜ್ಞಾನ ಅಧ್ಯಾತ್ಮ ಜಗತ್ತಿನಲ್ಲಿತ್ತು. ತನ್ನ ಸಾಲಕ್ಕೆ ತನ್ನ ಕರ್ಮ ವೇ ಕಾರಣವಾಗಿತ್ತು.ಈಗ ಸರ್ಕಾರ ಕಾರಣವೆನ್ನುವುದರಲ್ಲಿ ಸತ್ಯವಿದೆಯೆ? ಇದರಲ್ಲಿ ಸಾಲಕ್ಕೆ ಕೈ ಚಾಚಿದ ತನ್ನ ಸಹಕಾರವೆ ಕಾರಣ.  ಹೀಗಿರುವಾಗ ಕೈಕೆಸರಾದರೆ ಬಾಯಿಮೊಸರು ಎನ್ನುವಂತಿಲ್ಲ. ತನ್ನ ಕೈ ಕೆಲಸಮಾಡದೆಯೇ ಬಾಯಿಗೆ ಮೊಸರು ಸಿಗೋವಾಗ ಯಾರು ಕೆಸರಿನೆಡೆಗೆ ಹೋಗುವರು?
ಕೈಯನ್ನು ದ್ವೇಷ ಮಾಡಿ  ಆಪರೇಷನ್ ಮೂಲಕ ಕೈಬೆರಳನ್ನು
ಸೇರಿಸಿಕೊಂಡರೂ  ಬೆರಳುಗಳ ಹಿಂದಿನ ಆಟ ನಿಲ್ಲಲಿಲ್ಲ. ಹೀಗಾಗಿ ಯಾವುದೇ ಒಂದು ಪಕ್ಷದಿಂದ ದೇಶದ ಸಾಲ ತೀರಿಸಲಾಗದು.ಪ್ರಜೆಗಳೇ ತಮ್ಮ ತಮ್ಮ ಸಾಲಕ್ಕೆ ಹೊಣೆಗಾರರು.ಎಷ್ಟು ಹೊರಗಿನ ಸಾಲ ಬೆಳೆಸಿದರೂ ತೀರಿಸದೆ  ಬಡತನ ನಿವಾರಣೆ ಆಗದು. ಇದಕ್ಕಾಗಿ ಉತ್ತಮ ಶಿಕ್ಷಣದ ಅಗತ್ಯವಿದೆ.ಇತ್ತೀಚಿನ ದಿನಗಳಲ್ಲಿ ವಿದೇಶಿ ಶಿಕ್ಷಣ ನೀಡಲು ಪೋಷಕರಾದವರು ಮಕ್ಕಳ ಮೇಲೆ ಮಾಡುವ
ಸಾಲಕ್ಕೆ ಮಿತಿಯಿಲ್ಲ.ಅದನ್ನು ತೀರಿಸಲು ಹೊರಗೆ ದುಡಿಯಲೇಬೇಕು. ಮಕ್ಕಳಿಗೆ ಮನೆಯೇ ಮೊದಲಪಾಠ
ಶಾಲೆಯಾಗಿದ್ದ ಭಾರತದಲ್ಲಿ  ಮಕ್ಕಳನ್ನು ಬಿಟ್ಟು ಹೊರಗೆ ಹೋಗುವ ಪೋಷಕರಿಗೆ ಪಾಠ ಹೇಳಿಕೊಡಲು ಸಾಧ್ಯವೆ? ಸಾಲದ ಹೊರೆ ಏರಿಸಿ ರಾಜಕೀಯ ನಡೆಸೋ ರಾಜಕಾರಣಿಗಳೊಂದೆಡೆ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವ ಪೋಷಕರು ಮತ್ತೊಂದು ಕಡೆ.ಒಟ್ಟಿನಲ್ಲಿ ಸಾಲ ಮಾಡದೆಯೇ ಜೀವನವೇ ನಡೆಸೋಹಾಗಿಲ್ಲ ಎನ್ನುವ ಸ್ಥಿತಿಗೆ ಬಂದಿರುವ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸಾಲದ ಅರ್ಥ ತಿಳಿಸುವ ಶಿಕ್ಷಣದ ಅಗತ್ಯವಿದೆ.
ಇದನ್ನು ಕೊಡದೆ ಆಳುವುದೇ ಅಧರ್ಮ, ಅನ್ಯಾಯ. ಇದರ ಬಗ್ಗೆ ಯಾರೂ ಪ್ರಶ್ನೆ ಮಾಡೋದಿಲ್ಲವೆಂದರೆ ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳಲು ಕಷ್ಟ.ಹೀಗಿರುವಾಗ  ನಮ್ಮ ಸಹಕಾರದಿಂದ ಅಧಿಕಾರ ಪಡೆದವರಿಗೆ ಅರ್ಥ ವಾಗುವುದೆ?ಯಥಾ ಪ್ರಜಾ ತಥಾ ರಾಜಕೀಯ. 
ಉಚಿತದಿಂದ ಸಾಲ ಖಚಿತ.ಸಾಲದಿಂದ  ಸಮಸ್ಯೆ ಹೆಚ್ಚುವುದು. ಅನಗತ್ಯವಾದವರು  ಸಾಲದಿಂದ ದೂರವಿದ್ದರೆ ಉತ್ತಮ. ಶ್ರೀಮಂತ ರೆ  ಸರ್ಕಾರದ ಸಾಲ ಬೇಡಿದರೆ ಬಡತನ ಯಾರಿಗಿದೆ? 
ವೈಚಾರಿಕತೆಯನ್ನು ವಿರೋಧಿಸಿ ವೈಜ್ಞಾನಿಕತೆ ಮುಂದೆ ನಡೆದರೂ ಅಜ್ಞಾನವೇ ಬೆಳೆಯೋದು. 
ನಮ್ಮ ಹಿಂದಿನ ಮಹಾತ್ಮರುಗಳು ದೇಶಕ್ಕಾಗಿ  ಉಚಿತ ಸೇವೆ ಮಾಡುತ್ತಿದ್ದರು. ಈಗಿನವರು  ದೇಶವನ್ನೇ  ಸಾಲಕ್ಕೆ ತಳ್ಳಿ ಉಚಿತ ಯೋಜನೆಗಳಿಗೆ ಕೈ ಚಾಚುತ್ತಿರೋದು ಆತ್ಮನಿರ್ಭರ ಭಾರತದ ಲಕ್ಷಣವೆ? ವಿದೇಶಿ ಸಾಲ ತೀರಿಸಬೇಕಾದವರು ವಿದೇಶಿಗಳನ್ನು  ಬಂಡವಾಳದಿಂದ ಒಳಗೆ ಕರೆಸಿಕೊಂಡರೆ ದೇಶದ ಆರ್ಥಿಕ ಸ್ಥಿತಿ ತಾತ್ಕಾಲಿಕ ವಾಗಿ ಸುಧಾರಿಸಿದರೂ ಧಾರ್ಮಿಕವಾಗಿ  ಸುಧಾರಣೆಯಾಗುವುದೆ?
ಅಧ್ಯಾತ್ಮ ಸತ್ಯ ತಿಳಿಯದೆ ಭೌತಿಕದೆಡೆಗೆ ನಡೆದರೆ ಸಾಲವೇ ಶೂಲವಾಗುವುದು.
ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು. ಸಾಲ ಅದು.

ಮೇಲಿನ ಲೋಕವನ್ನು ಹೊರಗೆ ಕಾಣಬಹುದೆ?

*ಕಗ್ಗ - 560*
ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ।
ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ॥
ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು।
ಸಾವು ಮರಕೇನಿಲ್ಲ.

                                    *- ಮಂಕುತಿಮ್ಮ.*

*ವಾಚ್ಯಾರ್ಥ,*
ಪರಮೋರ್ಧ್ವದಲಿ = ಪರಮ+ಊರ್ಧ್ವದಲಿ,
ತೀವಿರ್ಪುದದು = ತೀವಿ +ಇರ್ಪುದು+ಅದು,
ಕಡ್ಡಿಯೆಲೆ = ಕಡ್ಡಿ+ಎಲೆ,
ಮರಕೇನಿಲ್ಲ = ಮರಕೆ+ಏನೂ+ಇಲ್ಲ,
ಪರಮೋರ್ಧ್ವ = ಅತ್ಯಂತ ಎತ್ತರ,
ತೀವಿರ್ಪುದು = ತುಂಬಿಕೊಂಡಿದೆ, ವ್ಯಾಪಿಸಿದೆ,

*ಭಾವಾರ್ಥ:-*
ಜೀವನದ ಮೂಲ ಅಥವಾ ಅಧಾರ ಎಲ್ಲೋ ಮೇಲಿದೆ. ಅದು ಇರುವ ಸ್ಥಳ ಪರಮ ಊರ್ಧ್ವ. ಅದಕ್ಕಿಂತ ಮೇಲೆ ಯಾವುದೂ ಇಲ್ಲ. ಆದರೆ ಅದು ಜಗತ್ತಿನಲ್ಲಿ ಎಲ್ಲೆಲ್ಲೂ ಎಂದರೆ ನಮ್ಮ ಲೋಕದಲ್ಲೂ ವ್ಯಾಪಿಸಿಕೊಂಡಿದೆ. ನಾವುಗಳು ಈ ಜಗತ್ವೃಕ್ಷದ ಕಡ್ಡಿ ಮತ್ತು ಎಲೆಗಳು. ನಾವು ಒಣಗಿ ಬಾಡಿ ಉದುರಿದರೂ ಈ ಜಗತ್ವೃಕ್ಷಕ್ಕೆ ಸಾವು ಎಂಬುದು ಇರುವುದಿಲ್ಲ ಎಂದು ಸೃಷ್ಟಿಯ ಸೂಕ್ಷ್ಮತೆಯನ್ನು, ವ್ಯಾಪ್ತಿಯನ್ನು ಮತ್ತು ನಿರಂತರತೆಯನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

*ವ್ಯಾಖ್ಯಾನ,*
ಋಗ್ವೇದದ ಮೊದಲ ಸೂಕ್ತವೇ, ಪುರುಷಸೂಕ್ತ. ಈ ಜಗತ್ತಿನ ಸೃಷ್ಟಿ ಮತ್ತು ಸ್ವರೂಪವನ್ನು ವಿವರಿಸುವ ಸೂಕ್ತವಿದು.
*‘ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತ್ ತಿಷ್ಟತ್ ದಶಾಂಗುಲಂ’*ಎಂದು ಹೇಳುವ ಈ ಸೂಕ್ತ, ಈ ಜಗತ್ತನ್ನು ಸೃಷ್ಟಿಸಿ, ಪೋಷಿಸಿ ಧಾರಣೆ ಮಾಡಿರುವ ಆ ಪರಮಶಕ್ತಿ ನಾವಿರುವಂತಹ ಲಕ್ಷಾಂತರ ಭೂಮಿಗಳನ್ನೂ ಸೇರಿ ಇಡೀ ವಿಶ್ವವನ್ನು ಆವರಿಸಿಕೊಂಡು, ಅದರ ಮೇಲೆ ಹತ್ತಂಗುಲದಲ್ಲಿ ನಿಂತಿದೆ ಎಂದು ಹೇಳುತ್ತದೆ. ಆದರೆ ಇದು ಹೇಳುವ ಆ ‘ಮೇಲೆ’ ಎನ್ನುವುದು ಎಷ್ಟು ಮೇಲಿದೆ ಎನ್ನುವುದು ನಮ್ಮ ಕಲ್ಪನೆಗೂ ನಿಲುಕದ ವಿಷಯ. ‘ನಾನು-ನಾವು’ ಎನ್ನುವ ನಾವುಗಳು ಈ ಜಗತ್ತೆಂಬ ಬೃಹತ್ ವೃಕ್ಷದ ಕೇವಲ ಒಂದು ಸಣ್ಣ ಎಲೆ ಅಥವಾ ಕಡ್ಡಿ. ಚಿಗುರಿ, ಪಲ್ಲವಿಸಿ, ಹೂತು, ಕಾತು, ಒಣಗಿ ಉದುರಿ ಹೋಗುವ ಎಲೆ ಅಥವಾ ಕಡ್ಡಿಗಳು. ಬಣ್ಣ, ಆಕಾರ, ಗಂಧ, ಅಥವಾ ರುಚಿಗಳು ಏನೇ ಇದ್ದರೂ ನಾವೆಲ್ಲಾ ಆ ಜಗತ್ತೆಂಬ ಅಶ್ವತ್ಥ ವೃಕ್ಷದ ಅಂಗಗಳು. ಒಂದು ಮರ ಪ್ರತೀ ಶಿಶಿರದಲ್ಲಿ ತನ್ನೆಲ್ಲ ಎಲೆಗಳನ್ನೂ ಕೊಡವಿಕೊಂಡು ಮತ್ತೆ ಹೊಸ ಚಿಗುರ ತಳೆಯುವಂತೆ ನಾವು ಎಷ್ಟು ಬಾರಿ ಹುಟ್ಟಿ ಬೆಳೆದು ನಾಶಗೊಂಡರೂ ಈ ವೃಕ್ಷ ಮಾತ್ರ ತನ್ನ ಹೊಸ ಹೊಸ ರೂಪಗಳನ್ನು ತಳೆಯುತ್ತಲೇ ಇರುತ್ತದೆ. ಇದು ಚಿರಾಯು ಶಾಶ್ವತ. ನಾವು ಕೇವಲ ಬಂದುಹೋಗುವ ಯಾತ್ರಿಕರಂತೆ. ಒಂದು ಬಾರಿ ಓದಿ ಈ ಮೇಲಿನ ವಿಷಯ ಮತ್ತು ತತ್ವವನ್ನು ತಿಳಿದುಕೊಂಡರೂ, ನಾನು ಎಂಬ ಮಮಕಾರದಿಂದ ಜಗತ್ತಿನ ವೈಶಾಲ್ಯದಲ್ಲಿ ನಮ್ಮ ಅತೀ ‘ಗೌಣ’ತೆ ನಮಗೆ ಅರ್ಥವಾಗುವುದೇ ಇಲ್ಲ. ಕೆಲಕಾಲ ತತ್ವ ಕಣ್ಣಿಗೆ ಕಂಡರೂ ವಿಷಯಾಸಕ್ತರಾದ ನಾವು, ಇಂದ್ರಿಯಲೋಲುಪರಾದ ನಾವು ಅಹಂಕಾರದಿಂದ ಮೆರೆಯುತ್ತೇವೆ. ನಮಗೆ ನಾವು ಯಾರೆಂದು ಅರಿವಾಗುವುದೇ ಇಲ್ಲ. ನಮ್ಮನ್ನು ನಾವು ನಮ್ಮ ಬುದ್ಧಿಯಿಂದಲೋ, ರೂಪದಿಂದಲೋ, ಗುರುತಿಗಾಗಿ ಇಟ್ಟ ಹೆಸರಿನಿಂದಲೋ ಗುರುತಿಸಿಕೊಳ್ಳುತ್ತೇವೆ. ಆದರೆ ನಮ್ಮ ನಿಜವಾದ ಗುರುತು ಆ ಪರಮ ಆತ್ಮನ ಒಂದು ಅಂಶವಾದ ‘ಆತ್ಮ’ವೆಂದು ಅರಿಯುವುದೇ ಇಲ್ಲ. ಹಾಗೆ ಆ ತತ್ವ ನಮ್ಮ ಹೃನ್ಮನಸ್ಸುಗಳಲ್ಲಿ ಸ್ಥಿರವಾದರೆ ಈ ಪ್ರಾಪಂಚಿಕ ಸುಖ ದುಃಖಗಳ ಪೀಡನೆಯಿಂದ ನಾವು ಖಂಡಿತ ಮುಕ್ತಿ ಹೊಂದಬಹುದು..🌹🙏

ಬ್ರಹ್ಮಾಂಡದ ರಹಸ್ಯಗಳನ್ನು ತಿಳಿದವನೊಬ್ಬನೇ ಪರಮಾತ್ಮ.ಇವನು ಒಳಗೂ ಹೊರಗೂ ಇದ್ದು ತನ್ನ ಕಾರ್ಯ ನಡೆಸಿರುವಾಗ ನಾನೆಂಬುದೇ ಇಲ್ಲ. ಹೀಗಿದ್ದೂ ನಾನು ಈ ಭೂಮಿಯನ್ನಾಗಲಿ ಆಕಾಶವನ್ನಾಗಲಿ ಪ್ರಕೃತಿಯನ್ನಾಗಲಿ ಆಳೋದಕ್ಕೆ ಹೊರಟರೆ ನನ್ನಂತೆಯೇ ಇತರರೂ ಜೊತೆಗೆ ಬರಬಹುದಷ್ಟೆ. ನಾನೇ ಅಜ್ಞಾನದ ಹಿಂದೆ ನಡೆದಿರುವಾಗ ಆ ಅಜ್ಞಾನಕ್ಕೆ ಸಹಕಾರ ಕೊಡುವವರಲ್ಲಿ ಎಷ್ಟು ಅಜ್ಞಾನವಿರಬಹುದು. ಅಜ್ಞಾನ ಬೆಳೆದಂತೆಲ್ಲಾ ನಾನು ಹೊರಗೆ ಬೆಳೆಯುತ್ತಾ ಒಳಗೆ ಅಹಂಕಾರ ಸ್ವಾರ್ಥ ವೆಂಬ ಅಸುರೀ ಶಕ್ತಿ ನನ್ನ ಆಳುವುದರ ಅರಿವಿಲ್ಲದೆ ಜೀವ ಹೋಗುತ್ತದೆ. ಆಗ ನಾನಿರೋದಿಲ್ಲ ಪರಮಾತ್ಮನೊಬ್ಬನೇ ಇರೋದು.  ಭೂಮಿಯಲ್ಲಿ ಅಸುರೀ ಶಕ್ತಿ  ಉಳಿಯುವುದು.    ಸಹಕರಿಸಿದವರೂ ನನ್ನ ಮರೆತು ಹೋಗುವರು.ಇದಕ್ಕಾಗಿ  ಸಾಕಷ್ಟು ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಹೋರಾಟದಿಂದ ಧರ್ಮ ಹಾಗು ಸತ್ಯ ರಕ್ಷಣೆಯಾಗಿದ್ದರೆ  ಜೀವಕ್ಕೆಮುಕ್ತಿ. ಇದೇ ಕಾರಣಕ್ಕಾಗಿ ನಿಜವಾದ ಧರ್ಮ ರಕ್ಷಣೆಯಾಗೋದಕ್ಕೆ ಒಳಗಿನ ನಾನು ಹಿಂದುಳಿದು ನೀನೇ ಎಂದು ಶರಣಾಗೋದು ದಾಸನಾಗೋದು  ಮಹಾತ್ಮನಾಗೋದು ಅಗತ್ಯ.ಇದೇ ಹಿಂದೂ ಧರ್ಮದ ಸತ್ಯ.ಎಲ್ಲಿ ಸತ್ಯವಿರುವುದೋ  ಅಲ್ಲಿ ಧರ್ಮ ಕ್ಕೆ ಬೆಲೆಬರುವುದು. ಭೌತಿಕದ ಅರ್ಧ ಸತ್ಯದಲ್ಲಿ ಧರ್ಮ ದ ವ್ಯವಹಾರವಿದ್ದರೆ ಎಲ್ಲಿ ಹಣವಿರುವುದೋ ಅಲ್ಲಿ ಜನರಿರಬಹುದು.ಜನರೊಳಗೆ ಸತ್ಯಜ್ಞಾನವಿದೆಯೆ?ಮಿಥ್ಯ ಜ್ಞಾನವೇ  ಅದನ್ನು ಜನರೆ  ಪರೀಕ್ಷಿಸಿಕೊಂಡರೆ  ಜೀವನದಲ್ಲಿ  ಬದಲಾವಣೆ ಸಾಧ್ಯ.
ಮಾನವನಿಗೆ ಅಸಾಧ್ಯಯಾವುದೂ ಇಲ್ಲ. ಎತ್ತರಕ್ಕೆ ಏರಿದರೆ ಕೆಳಗಿಳಿದುಬರೋದೆ ಕಷ್ಟವಾದರೂ  ಇಳಿಯಲೇಬೇಕಷ್ಟೆ. ಇದಕ್ಕೆ ಬದಲಾಗಿ ಕೆಳಗಿದ್ದೇ ಮೇಲಿನ ಸತ್ಯವನ್ನರಿತು ಜೀವನ ನಡೆಸಿದರೆ ಬೀಳುವ ಭಯವಿರದು. ಆದರೂ ಯಾವಾಗ ಹೇಗೆ  ಮೇಲೆಕೆಳಗೆ ಆಡಿಸುವನೋ  ಯಾರಿಗೂ ತಿಳಿಯದು.
ಹೀಗಾಗಿ  ಕಾಲಚಕ್ರವನ್ನು ನಿಲ್ಲಿಸುವ  ಶಕ್ತಿ ಮಾನವನಲ್ಲಿಲ್ಲ.
ಹುಟ್ಟು ಸಾವುಗಳನ್ನು ನಿರ್ಧಾರ ಮಾಡಲೂ ಸಾಧ್ಯವಿಲ್ಲ.
ಆದರೆ ಜೀವನದಲ್ಲಿ ಯಾವುದು ಶಾಶ್ವತ ಎನ್ನುವ ಜ್ಞಾನಗಳಿಸಲು ಅಡ್ಡಿಯಿಲ್ಲ.ಮನಸ್ಸಿರಬೇಕು. ಮನಸ್ಸಿದ್ದರೂ ಹಿಂದೆ ಗುರು ಹಿರಿಯರಿದ್ದರೆ  ಸುಲಭ ಸಾಧ್ಯ ಅದೂ ಕೂಡ ವಿಧಿಲಿಖಿತ.
ಇಷ್ಟೆಲ್ಲಾ ಅಧ್ಯಾತ್ಮ ಸಂಶೋದನೆಯಿಂದ  ಸದ್ವಿಚಾರ ಹೊರಗೆ ಬಂದರೂ ಮಾನವನಲ್ಲಿ ಯಾಕೆ  ಸದ್ವಿಚಾರಕ್ಕೆ ಸಹಕಾರವಿಲ್ಲ ಎಂದರೆ ಭೌತಿಕ ವಿಜ್ಞಾನ ಅಧ್ಯಾತ್ಮ ವಿಜ್ಞಾನದಿಂದ  ದೂರವಾಗಿ  ಆತ್ಮಜ್ಞಾನದ ಕೊರತೆಯಿದೆ.
ಭೂಮಿ ಮೇಲಿರುವ ಸತ್ಯಕ್ಕೆ ಯಾವ  ಸಂಶೋಧನೆಯ ಅಗತ್ಯವಿಲ್ಲ. ಆಕಾಶದೆತ್ತರ ಹಾರೋದಕ್ಕೆ ಸಂಶೋಧನೆ ಹೆಚ್ಚಾಗಿದೆ ಎಂದರೆ ಯಾವುದು ನಿಜವಾದ ಸಾಧನೆ? ಶಾಶ್ವತ ಯಾವುದು? ಧರ್ಮ ಯಾವುದು?

ಅನಾವಶ್ಯಕ ಉಚಿತವಾಗಿ ಪಡೆದದ್ದು ಸಾಲವಾಗೇ ಇರುತ್ತದೆ

ಸರ್ಕಾರ ಕೊಡುವ ಉಚಿತ ಭಾಗ್ಯಗಳನ್ನು ಸ್ವಾಗತಿಸುವವರು ಹಲವರು ವಿರೋಧಿಸುವವರು ಕೆಲವರು ವಾದಿಸುವವರು ಎಲ್ಲರೂ ಹಾಗಾದರೆ ವಾದ ವಿವಾದದಲ್ಲಿ ಏನಾದರೂ ಈವರೆಗೆ ಬದಲಾವಣೆ ಆಗಿದೆಯೇ?ಚರ್ಚೆ ನಡೆಸುವಾಗ ಒಂದು ಕಡೆಯಿಂದ ವಿಚಾರವಿರುತ್ತದೆ.ವಾದ ಮಾಡುವಾಗ ಎರಡೂ ಕಡೆಯಿಂದ  ಘರ್ಷಣೆಯಿರುತ್ತದೆ. ಘರ್ಷಣೆಯಿಂದ ಹೋರಾಟ ಹೋರಾಟದಿಂದ ಅಶಾಂತಿ,ಅತೃಪ್ತಿ, ಅಸಂತೋಷ ಅದೇ ಮುಂದೆ ದ್ವೇಷ ಹೆಚ್ಚಿಸಿ  ಸತ್ಯನಾಶ.
ಭಾರತದ ಈ ಸ್ಥಿತಿಗೆ ಕಾರಣ ಸರ್ಕಾರದ ಉಚಿತ ಸಾಲ ಸೌಲಭ್ಯವೆಂದರೆ ತಪ್ಪು ಎನ್ನುವವರಿಗೆ  ಈ ಸಾಲದ ಹಿಂದಿನ ಉದ್ದೇಶ ಅರ್ಥ ವಾಗದ ಅಜ್ಞಾನವಿದೆ.ಸುಲಭವಾಗಿ ಸಿಗುವಾಗ ಯಾರು ತಾನೆ ಬಿಡುವರು.ಈಗಲೂ ಹಾಗೆ ಎಲ್ಲರಿಗೂ ಉಚಿತವೆಂದ ಕಾರಣಕ್ಕಾಗಿ ಸರ್ಕಾರ ಗೆದ್ದಿದೆ.ಈಗ ಕೆಲವರಿಗಷ್ಟೆ ಉಚಿತವೆಂದರೆ ಎಲ್ಲಾ  ಸುಮ್ಮನಿರಲಾಗದು.
ಮಾತಿಗೆ ತಪ್ಪಿ ನಡೆದರೆ ಮೆಚ್ಚನಾಪರಮಾತ್ಮನು ಎಂದರು.ಆದರೆ ಇಲ್ಲಿ ಪರಮಾತ್ಮ ಇರೋದೆಲ್ಲಿ ? ಸರ್ಕಾರದಲ್ಲೇ? ಜನರ ಸಹಕಾರದಲ್ಲೆ?
ಪರದೇಶದ ಸಾಲ ತಂದು ಬಂಡವಾಳ ತಂದು ದೇಶವನ್ನು ನಡೆಸುವುದೇ ಅಧರ್ಮ. ಅದರಲ್ಲೂ ಉಚಿತವಾಗಿ ಜನರಿಗೆ ಸಾಲ ಹಂಚಿದರೆ  ದೇಶದ ಗತಿ ಏನಾಗಬಹುದು? ಇಷ್ಟಕ್ಕೂ ಇದು ರಾಜಪ್ರಭುತ್ವವೋ ಪ್ರಜಾಪ್ರಭುತ್ವವೋ? ಪ್ರಜೆಗಳೇ ದೇಶವನ್ನು ಸಾಲದಡಿ ಮಲಗಿಸಿದರೆ ದೇಶ ನಡೆಯೋದು ಹೇಗೆ? ಇಂತಹ  ಪರಿಸ್ಥಿತಿ ಬರಲು ಕಾರಣವೇ ಬಡತನದ ಹೆಸರಿನಲ್ಲಿ, ಧರ್ಮ, ಜಾತಿ,ಭಾಷೆಪಂಗಡ,ಪಕ್ಷದ ಹೆಸರಿನಲ್ಲಿ ಕೋಟ್ಯಾಂತರ ರೂಗಳನ್ನು  ರಾಜಕೀಯ ಪ್ರೇರಿತ ಸಮಾರಂಭ,ಸಮಾವೇಶ,ಸಮಾಚಾರದ ಮೂಲಕ ಜನರನ್ನು ಹೊರಗೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮಧ್ಯವರ್ತಿಗಳು. ಮಧ್ಯವರ್ತಿಗಳು ಎಂದಾಗ ಮಾನವರಾಗಬಹುದು. ಮಾನವರಲ್ಲಿ ಮದ್ಯವರ್ತಿಗಳೆಂದರೆ ಮಹಿಳೆ,ಮಕ್ಕಳು,ಮಾಧ್ಯಮ .ಮಹಿಳಾದೇಶ ನಡೆದಿರೋದು
ಅವಳ ಸಹಕಾರದಿಂದ. ಆ ಸಹಕಾರದಲ್ಲಿ ಸಾಲವೇ ಹೆಚ್ಚಾದರೆ ಅದನ್ನು ತೀರಿಸಲು ಮಹಿಳೆಯೂ ದುಡಿಯಬೇಕು. ಮನೆಯಿಂದ ಹೊರಹೋಗಿ ದುಡಿಯುವ ಮಹಿಳೆಯರೊಳಗಿನ  ಆತ್ಮಜ್ಞಾನ  ಹಿಂದುಳಿಯುತ್ತದೆ.
ಬಡತನ ಬೆಳೆದಿರೋದು  ಅಜ್ಞಾನದಿಂದ. ಅಂದರೆ ಶಿಕ್ಷಣ ನೀಡದೆ  ಸ್ತ್ರೀ ಯನ್ನು  ಆಳಿದರು. ಅವಳ ಜ್ಞಾನವನ್ನು ಗುರುತಿಸದೆ  ಅವಳನ್ನು ನಿರ್ಲಕ್ಷ್ಯ ಮಾಡಿ ಲಕ್ಷ ಗಟ್ಟಲೆ ಸಾಲ ಮಾಡಿದರೆ  ಇದನ್ನು ತೀರಿಸದೆ ಮುಕ್ತಿ ಯಿಲ್ಲ. ಮುಕ್ತಿ ಗಾಗಿ ಸ್ತ್ರೀ ಯನ್ನು ಬಿಟ್ಟು ಮನೆಯಿಂದ ಹೊರಗೆ ನಡೆದವರನ್ನು  ಯಾರೂ ಕೇಳಲಿಲ್ಲ. ಆದರೆ ಸ್ತ್ರೀ ಹಾಗೆ ಹೋದರೆ ಸಮಾಜ
ಬಿಡಲಿಲ್ಲ.ಈಗ ಕಾಲಬದಲಾಗಿದೆ ಆದರೂ ಸಾಲದ ಹೊರೆ ಬೆಳೆದಿದೆ. ಕಾರಣ ಜನ್ಮ ಜನ್ಮ ಕಳೆದರೂ ಅವರವರ ಹಿಂದಿನ ಸಾಲ ತೀರಿಸಲು ಜನ್ಮ ಪಡೆದು ಬರಲೇಬೇಕು ಎನ್ನುವ ಅಧ್ಯಾತ್ಮ ಸತ್ಯ  ಯಾವತ್ತೂ ಬದಲಾಗದು.ಹೀಗಾಗಿ ಈಗ ಸ್ತ್ರೀ ಗೆ ವಿದ್ಯೆ,ಬುದ್ದಿ ಜ್ಞಾನ ಹಣ ಅಧಿಕಾರ,ಸ್ಥಾನಮಾನ ಎಲ್ಲಾ ಇದೆ ಆದರೆ ಸಾಲ ತೀರಿಸುವ  ಧಾರ್ಮಿಕ ಸತ್ಯದ ಕೊರತೆಯಿದೆ.ಪುರುಷರಲ್ಲಿರುವ ಈ ಅಜ್ಞಾನವನ್ನು ದೂರ ಮಾಡಲು ಜ್ಞಾನಿಯಾದ ಸ್ತ್ರೀ ಗೆ ಜ್ಞಾನದ ಶಿಕ್ಷಣದ ಅಗತ್ಯವಿತ್ತು.ಭೌತಿಕ ವಿಜ್ಞಾನದ ವಿದ್ಯೆ ಭೌತಿಕದೆಡೆಗೆ ನಡೆಸಿ ಆಸೆ ಆಕಾಂಕ್ಷೆಗಳನ್ನು ಹೆಚ್ಚಿಸಿ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಮಟ್ಟಿಗೆ ವೈಭೋಗದ ಜೀವನಕ್ಕೆ  ಮಾನವ ಅಂಟಿಕೊಂಡಷ್ಟೂ ಅಧ್ಯಾತ್ಮದ ಋಣ ಪದದ ಅರ್ಥ ತಿಳಿಯಲು ಕಷ್ಟ.
ಕೈತುಂಬಾ ಸಂಪಾದನೆಮಾತ್ರವಲ್ಲ ಮನೆತುಂಬಾ ಸಂಪಾದಿಸುವವರಿದ್ದರೂ ಸಾಲದ ಸಮಸ್ಯೆ ಹೆಚ್ಚಾಗಿದೆ ಎಂದರೆ ಮಾನವನಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ಗೊತ್ತಿಲ್ಲ. ಜನರನ್ನೂ ಸಾಲದ ದವಡೆಗೆ ಎಳೆದು ಆಳುವ ರಾಜಕೀಯದಿಂದ ಈವರೆಗೆ ಸಾಕಷ್ಟು ವಿದೇಶಿ ಸಾಲ ಬಂಡವಾಳ, ವ್ಯವಹಾರಕ್ಕೆ ದೇಶದ ರಾಜಕಾರಣಿಗಳು ಒಪ್ಪಂದ ಮಾಡಿಕೊಂಡು ದೇಶದ ಜನರನ್ನು ವಿದೇಶದವರೆಗೆ ಕಳುಹಿಸಿ ಅವರ ಸೇವೆ ಮಾಡಲು ತಮ್ಮವರನ್ನೇ ಮರೆತು ದೂರಹೋಗಬೇಕಾಗಿದೆ. ಇಲ್ಲಿರುವ ಹಣದ ಶ್ರೀಮಂತ ರಿಗೆ  ಬಡವರಲ್ಲಿದ್ದ ಜ್ಞಾನವನ್ನು ಗುರುತಿಸಲಾಗದೆ  ಶಿಕ್ಷಣ ನೀಡದೆ ಅಜ್ಞಾನದಿಂದ  ಜೀವನ ನಡೆಸುವಂತಾಗಿದೆ ಎಂದರೆ ಸತ್ಯದ ಅರಿವಿಲ್ಲದೆ ಭೂಮಿಯಲ್ಲಿ  ಎಷ್ಟು ಹಣವಿದ್ದರೂ ವ್ಯರ್ಥ.
ಭೋಗ ಜೀವನದಿಂದ ಸಾಕಷ್ಟು ರೋಗ ಬೆಳೆದಿದೆ.ರೋಗಕ್ಕೆ ಸರಿಯಾಗಿ ಆರೋಗ್ಯಕೇಂದ್ರಗಳಾಗಿದೆ.ಅದಕ್ಕೆ ಸರಿಯಾದ ವೈಧ್ಯಕೀಯ ಸಂಶೋಧನಾ ಕೇಂದ್ರ. ಆದರೆ ಆರೋಗ್ಯವೆಂದರೆ ಆರು ಯೋಗ್ಯವಾಗಿರೋದೆಂದರ್ಥ.
ಮಾನವನೊಳಗಿರುವ ಕಾಮ,ಕ್ರೋಧ,ಲೋಭ,ಮೋಹ,ಮಧ ಮತ್ಸರಗಳು  ಮಾನವನನ್ನು ದೈವತ್ವದೆಡೆಗೆ ನಡೆಸುವುದೋ ಅಸುರತ್ವದೊಡನೆ ನಡೆಸುವುದೋ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾದ ಭಾರತೀಯರೆ  ಉಚಿತವಾಗಿ ಸಾಲ ಸೌಲಭ್ಯಗಳನ್ನು ಕೊಟ್ಟು ತಿಂದು ತೇಗಿದ ಮೇಲೆ ಎದ್ದು ಕೆಲಸ ಮಾಡಿ ಎಂದರೆ ಏಳಲಾಗುವುದೆ? ಸೋಮಾರಿತನ ಮಾನವನ ಶತ್ರು.' ಸೋ' ಮಾರಿಯ  ಮನೆತನವಾಗುತ್ತಿದೆ.
ಎಲ್ಲಾ ಪಕ್ಷಗಳಿಗೂ ಅಧಿಕಾರ ಬೇಕು. ಹಾಗಾದರೆ ಪ್ರಜಾಧರ್ಮದ ಪ್ರಕಾರ ದೇಶವನ್ನು ಸಾಲದಿಂದ ಬಿಡುಗಡೆಗೊಳಿಸಲು ಪ್ರಜೆಗಳೆಲ್ಲರೂ ಧರ್ಮ ಮಾರ್ಗ ದಲ್ಲಿ ನಡೆಯಬೇಕಿತ್ತು.ಇರೋದೊಂದು ಭೂಮಿ,ಅಲ್ಲೊಂದು ಪವಿತ್ರವಾದ ದೇಶ.ಆ ದೇಶದ ಒಳಗಿರುವ ಪ್ರಜೆಗಳಿಗೆ ಸತ್ಯ ಧರ್ಮದ  ಶಿಕ್ಷಣವೇ ಕೊಡದೆ ಆಳಿದರೆ ಅಧರ್ಮ. ಇಷ್ಟು ವರ್ಷಗಳಿಂದಲೂ  ಸಾಲ ಕೊಟ್ಟರೂ ಬಡತನ ನಿವಾರಣೆ ಆಗಿಲ್ಲವೆಂದರೆ ಇಲ್ಲಿ ಹಣದಿಂದ ಸಾಲ ತೀರಿಸುವ ಮೊದಲು ಸತ್ಯಜ್ಞಾನವಿರಬೇಕಿತ್ತು. ಅಜ್ಞಾನವನ್ನು ಹೊರಗಿನಿಂದ ತುಂಬುತ್ತಾ ರಾಜಕೀಯದೆಡೆಗೆ  ಜನರನ್ನು ಎಳೆದಾಡುತ್ತಾ ಮನೆಯೊಳಗಿದ್ದ ಶಾಂತಿ ನೆಮ್ಮದಿ ತೃಪ್ತಿ ಯನ್ನು  ಮಧ್ಯವರ್ತಿಗಳು   ಕೆಟ್ಟ ವಿಚಾರಗಳಿಂದ ಮನಸ್ಸನ್ನು ಕೆಡಿಸಿ ಹೊರಗೆ ಬರುವಂತೆ ಮಾಡಿದರೆ ಹೊರಗೆ ಹೋರಾಟ ಹಾರಾಟ ಮಾರಾಟ ಹೆಚ್ಚಾಗುವುದು.ಆದರೆ ಒಳಗಿನ ಸಾಲ ತೀರದು.ಜೊತೆಗೆ ಜ್ಞಾನವೂ ಬೆಳೆಯದು.
ಅಧ್ಯಾತ್ಮ ಎಂದರೆ ಪುರಾಣ ಇತಿಹಾಸ, ಶಾಸ್ತ್ರ ಸಂಪ್ರದಾಯ ಎಂದರೆ ತಪ್ಪು. ಇವೆಲ್ಲವೂ ನಮಗೆ  ಸತ್ಯಾಸತ್ಯತೆಯನ್ನು ತಿಳಿಸುವ ಮೆಟ್ಟಿಲು. ಸತ್ಯ ತಿಳಿದು ಸರಿಯಾದ ಮೆಟ್ಟಿಲು ಹತ್ತಿದರೆ ಜ್ಞಾನ ಹೆಚ್ಚುವುದು. ಸತ್ಯ ತಿಳಿದೂ ತಪ್ಪು ದಾರಿಗೆ ನಡೆದರೆ ಅಜ್ಞಾನ. ಹೊರಗಿನ ರಾಜಕೀಯದಿಂದ ಸಾಲ ಬೆಳೆದರೆ  ಒಳಗಿನ ರಾಜಯೋಗದಿಂದ  ಸಾಲಮನ್ನಾ ಆಗುವುದು. ಇವೆರಡರ ನಡುವೆ ಇರುವ ಅಂತರ ಇಂದು ದುಷ್ಟ ಶಕ್ತಿಗಳ ವಶದಲ್ಲಿದ್ದು  ಭ್ರಷ್ಟಾಚಾರ ಮುಗಿಲುಮುಟ್ಟಿದೆ.
ಭೂಮಿ ಮೇಲಿರುವಾಗ ನಾನು ಶಾಶ್ವತವೆನ್ನುವ ಭ್ರಮೆಯಲ್ಲಿ  ಸಾಲದ ಮೂಟೆ ಕಟ್ಟಿದರೆ ಹೊತ್ತು ನಡೆಯುವಾಗ ಯಾರೂ ಬರೋದಿಲ್ಲ. ಒಟ್ಟಿನಲ್ಲಿ ಸಾಲವೇ ಶೂಲ ಯಾವುದಿದರ ಮೂಲವೆಂದರೆ  ಪ್ರಜೆಗಳ ಸಹಕಾರವೇ ಇದರ ಮೂಲ.
ಪ್ರತಿಯೊಬ್ಬರೂ ಹಣದ  ಶ್ರೀಮಂತರಾದರೆ  ಜ್ಞಾನದ ಶ್ರೀಮಂತಿಕೆಗೆ ಬೆಲೆಯೇ ಇರದು.ಹಿಂದಿನ ಮಹಾತ್ಮರುಗಳಲ್ಲಿ ಜ್ಞಾನದ ಶ್ರೀಮಂತ ವರ್ಗದವರು  ಸಮಾಜದ ಋಣ ತೀರಿಸಲು  ಸಮಾಜ ಸೇವೆಗೆ ದೇಶ ಸೇವೆಗೆ ಜೀವ ತೆತ್ತಿದ್ದರು.
ಈಗ ಸಂಸಾರ ನಿರ್ವಹಣೆಗೆ ಸಮಾಜ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದರೆ  ಇದನ್ನು ತೀರಿಸುವವರೆಗೂ ಜೀವಕ್ಕೆ ಮುಕ್ತಿ ಸಿಗದು. ಈ ವಿಚಾರವನ್ನು ಜನಸಾಮಾನ್ಯರು ಮನೆಯಲ್ಲಿಯೇ ಇದ್ದು  ಆತ್ಮಾವಲೋಕನ ಮಾಡಿಕೊಂಡರೆ ನಾವು ಮಾಡುತ್ತಿರುವ ಸೇವೆಯಿಂದ ಯಾರಿಗೆ ಒಳಿತಾಗಿದೆ? ಯಾರ ಹಣದಲ್ಲಿ ಸೇವೆ ಮಾಡುತ್ತಿರುವುದು? ಅಧ್ಯಾತ್ಮದ ಸೇವೆಗೂ  ಭೌತಿಕ ಸೇವೆಗೂ ಅಂತರವಿದೆಯೆ? ಅಂತರಕ್ಕೆ ಕಾರಣವೇನು? ಸ್ವಾತಂತ್ರ್ಯ ಬಂದ ನಂತರಕ್ಕೂ ಪೂರ್ವ ಕಾಲಕ್ಕೂ  ವ್ಯತ್ಯಾಸವಿದೆಯೆ?
 ಒಂದೇ ದೇಶ ಒಂದೇ ಭೂಮಿ ಆದರೆ  ನಮ್ಮ ಚಿಂತನೆ ಒಂದಾಗದೆ ಇದ್ದರೆ ಮನುಕುಲವಾಗದು. ಅಸುರಕುಲವಾಗಿ  ಸಾಲವೇ ಶೂಲವಾಗಿರುತ್ತದೆ. ಅದಕ್ಕಾಗಿ ಸರಳಜೀವನದಿಂದ ತತ್ವಜ್ಞಾನದಿಂದ  ಸತ್ಯವರಿತು ಧರ್ಮದ ಹಾದಿಯಲ್ಲಿ ನಡೆದರೆ ನಿಧಾನವಾಗಿಯಾದರೂ ಒಳಗಿನ ಜಗತ್ತಿನ ಸತ್ಯದರ್ಶನ ಸಾಧ್ಯ. ಅದೇ ನಿಜವಾದ ಜಗತ್ತು. ಕತ್ತಲಿನಲ್ಲಿದ್ದು ಬೆಳಕನ್ನು ಹುಡುಕಿದರೆ ಸಿಗದು. ಬೆಳಕಿನಕಡೆಗೆ ನಡೆಯಲು ಸ್ವತಂತ್ರ ಜ್ಞಾನದ ಅಗತ್ಯವಿದೆ.ಪ್ರತಿಯೊಬ್ಬ ಪ್ರಜೆಯಲ್ಲಿಯೂ ವಿಶೇಷ ಶಕ್ತಿಯಿದೆ.ಅದನ್ನು ತಿಳಿದು ನಡೆಯಲು ಬಿಟ್ಟರೆ ಸ್ವಾವಲಂಬನೆ ಯ ಜೀವನವಾಗುತ್ತದೆ. ಅಷ್ಟು ಸುಲಭವಿಲ್ಲದ ಕಾರಣ ಅಸತ್ಯದಲ್ಲಿ ಸುಲಭವಾಗಿ ಹೊರಬಂದು ಸಾಲ ಮಾಡುತ್ತಾ ದೊಡ್ಡ ವ್ಯಕ್ತಿಯೆನಿಸಿದರೂ ಸಾಲ ತೀರಿಸಲು ತಿರುಗಿ ಬಂದಾಗ ಸಣ್ಣ ವ್ಯಕ್ತಿಯಾಗೇ ಇರಬೇಕು. ವ್ಯಕ್ತಿಗಿಂತ ಶಕ್ತಿಮುಖ್ಯ.
ಬಡವರಲ್ಲಿರುವ ಜ್ಞಾನ ಶ್ರೀಮಂತರಲ್ಲಿರದು. ಹಾಗಾಗಿ ಯೋಗಿಯಾಗಿ  ಶಾಂತಿ ಪಡೆಯಬೇಕೋ ಭೋಗದಿಂದ ಸಾಲಮಾಡಿ ಕ್ರಾಂತಿಯಾಗಬೇಕೋ ಎಲ್ಲಾ ಮೇಲಿರುವ ಆ ಪರಮಶಕ್ತಿಯೇ ನಿರ್ಧಾರ ಮಾಡುವಾಗ  ಮಾನವ ಕಾರಣಮಾತ್ರದವನಷ್ಟೆ.
ವಿದೇಶಿ ಒಪ್ಪಂದಕ್ಕೆ ಒಪ್ಪುವ ಪ್ರಜೆಗಳಿಗೆ ನಮ್ಮವರು ಹೇಳಿದ್ದು ಒಪ್ಪಲು ಕಷ್ಟವೆಂದರೆ ನಮ್ಮವರನ್ನೇ ದೂರಮಾಡಿ ದ್ವೇಷಮಾಡಿದರೆ  ಸಾಲ ತೀರೋದಿಲ್ಲ.ಕಾರಣ ಅವರು ಬಿಟ್ಟು ನಡೆದ ಆಸ್ತಿಬೇಕು ಸಾಲ ಬೇಡವೆಂದರೆ ಹೇಗೆ? ಆಸ್ತಿಯೂ ಸಾಲದೊಳಗಿದ್ದರೆ ದೇವರೆ ಗತಿ. ದೈವತ್ವದಿಂದ ದೇವರನ್ನು ಕಾಣಬಹುದು. ಉತ್ತಮ ಗುಣಜ್ಞಾನವೇ ದೈವಶಕ್ತಿಯಾಗಿತ್ತು.ಈಗ ದೇವರ ಹೆಸರಿನಲ್ಲೇ ರಾಜಕೀಯ ಬೆಳೆದಿರುವಾಗ ಅದರಲ್ಲಿ ಸತ್ಯವಿದೆಯೆ? ಧರ್ಮ ವಿದೆಯೆ? ನ್ಯಾಯಾಲಯಗಳಿವೆ ಅದರೊಳಗಿನ ನ್ಯಾಯಾಧೀಶರಲ್ಲಿ ಸತ್ಯ ಧರ್ಮ ಇದೆಯೆ? ಮಠ ಮಂದಿರಗಳು ಶಿಕ್ಷಣ
ದಾಸೋಹದಿಂದ ಜ್ಞಾನ ನೀಡಬೇಕಿತ್ತು. ಶಾಲಾಕಾಲೇಜ್ಗಳಲ್ಲಿ ದೇಶೀಯ ಶಿಕ್ಷಣಪದ್ದತಿ ಅಗತ್ಯವಿತ್ತು.
ಎಲ್ಲಾ ವಿದೇಶಿಮಯವಾದಾಗ ಎಲ್ಲಿಯ ಸ್ವದೇಶ? ಸ್ವದೇಶದ ಮೂಲವೇ  ಧಾರ್ಮಿಕ ಶಿಕ್ಷಣವಾಗಿತ್ತು. ಇದರಲ್ಲಿಯೇ ರಾಜಕೀಯವಿದ್ದರೆ  ರಾಜಯೋಗದವಿಚಾರ ತಿಳಿಸುವವರಿಗೆ ಒಳಹೊಕ್ಕಿ ಸತ್ಯ ತಿಳಿಯುತ್ತಿಲ್ಲ. ಸ್ವಾಮಿ ವಿವೇಕಾನಂದರ ಮಹಾತ್ಮ ಗಾಂಧಿಯವರ ತತ್ವಜ್ಞಾನ ಇಂದಿನ ರಾಜಕೀಯತೆ ತಂತ್ರವಾಗಿ ಬಳಸಿದರೂ  ಜನರಲ್ಲಿ ಸತ್ಯಜ್ಞಾನದ ಕೊರತೆಯಿದ್ದು ಸಾಲ ಹೆಚ್ಚಿದಂತೆಲ್ಲ ಸಮಸ್ಯೆಗಳಿಗೆ ಕೊನೆಯಿಲ್ಲ. ಸಾಲಕ್ಕೆ ಮಿತಿಯಿಲ್ಲ.  
 ಪ್ರಜೆಗಳ ಅಜ್ಞಾನದ ಸಹಕಾರವೇ  ಭ್ರಷ್ಟಾಚಾರ ತುಂಬಿದ ಸಮಾಜವಾಗಿದೆ. ಇದನ್ನು ಶಿಷ್ಟಾಚಾರ ದಿಂದ  ಮುಂದೆ ನಡೆಸಲು ಮಕ್ಕಳು ಮಹಿಳೆಯರಿಗೆ ಮನೆಯೊಳಗಿದ್ದೇ ಸತ್ಯಜ್ಞಾನದ ಶಿಕ್ಷಣ ಬೇಕಿತ್ತು. ಮಿಥ್ಯಜ್ಞಾನದ ಶಿಕ್ಷಣ ನೇರವಾಗಿ ತಂತ್ರದಿಂದ ತಲೆಗೆ ತುಂಬಿದರೆ  ತಲೆಕೆಟ್ಟವರೆ  ಬೆಳೆಯೋದಷ್ಟೆ.  ನಮ್ಮ ತಲೆಯೊಳಗೆ ತುಂಬಿಕೊಂಡಿರುವ  ವಿಷಯದಲ್ಲಿಯೇ ವಿಷವಿದ್ದರೆ  ಬದುಕುವುದು ಕಷ್ಟ. ಅಮೃತವೂ ಅತಿಯಾದರೆ ವಿಷವಾಗುವಂತೆ ಅತಿಯಾದ ವಿಷವೂ  ಜನರನ್ನು   ಸಾವಿನ ಬಳಿಗೆ ಎಳೆಯುವಾಗ ಒಳಗೇ ಕುಳಿತಿರುವ ಅಮೃತ  ಸಿಗುವಂತಿದ್ದರೆ  ಉತ್ತಮ ಜೀವನ ಸಾಧ್ಯವಿದೆ
ಇದಕ್ಕಾಗಿ ಅಮೃತವಾದ ವಿಚಾರ ತಲೆಗೆ ತುಂಬುವುದು ಅಗತ್ಯವಿದೆ. ಇದು ಪೋಷಕರ ಧರ್ಮ. ದೇಶದ ಪೋಷಣೆ ಮಾಡಬೇಕಾದ ಪ್ರಜೆಗಳೇ ಸಾಲ ಮಾಡುತ್ತಾ ಶೋಷಣೆ
ಗಿಳಿದರೆ  ಅಜ್ಞಾನ ಮಿತಿಮೀರಿದೆ.  
ಲೇಖನದಲ್ಲಿ ಯಾವುದೇ ಪಕ್ಷಪಾತವಿಲ್ಲ. ಕಾರಣ  ಎಲ್ಲಾ ಪಕ್ಷ ದೇಶ ನಡೆಸಲು ವಿದೇಶಿಬಂಡವಾಳದ ಮೊರೆಹೋಗಿದೆ. ಆದರೆ ಸ್ವದೇಶಿ ಜನರಲ್ಲಿದ್ದ ಜ್ಞಾನ ಬಂಡಾರ ಹೆಚ್ಚಿಸುವಲ್ಲಿ ಸೋತಿವೆ. ಇದಕ್ಕೆ ಕಾರಣ  ನಮ್ಮವರ ಸಹಕಾರ. ಧಾರ್ಮಿಕ ವರ್ಗವೇ . ರಾಜಕಾರಣಿಗಳ ಹಿಂದೆ ನಿಂತು ಬೇಡಿದರೆ  ಎತ್ತ ಸಾಗುತ್ತಿದೆ ಧರ್ಮ?
ಈಗಲೂ ಕಾಲವಿದೆ ಅತಿಯಾದ ಆಸ್ತಿ ಅಂತಸ್ತು ಸಮಾಜದ ಋಣವಷ್ಟೆ. ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಂಡರೆ ಸಾಲಮನ್ನಾ. ಪರಮಾತ್ಮನ ಸಾಲ ತೀರಿಸಲು  ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವುದೆ ಹಿಂದೂ ಧರ್ಮದ ಗುರಿ. ಹಿಂದಿನ ಸಾಲವನ್ನೇ ತೀರಿಸದೆ ಮುಂದೆ  ಸಾಲ ಮಾಡಿದರೆ  ತೀರುವುದೆ? 
ಸಾಮಾನ್ಯಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಮಾಜದಲ್ಲಿ ನಡೆಯುತ್ತಿರುವ  ಬೆಳವಣಿಗೆಗೆ  ಕಾರಣ ತಿಳಿದರೆ  ಒಂದು ಸಾಲ ತೀರಿಸಲು ಇನ್ನೊಂದು ಸಾಲ ಮಾಡುತ್ತಾ ವಿದೇಶದೆಡೆಗೆ  ಹೋದರೂ  ಇದನ್ನು ಪ್ರಗತಿ ಎಂದು ಕರೆದು ಮೇಲೇರಿಸಿದ ಮನರಂಜನೆ ತಾತ್ಕಾಲಿಕ. ಮಧ್ಯವರ್ತಿಗಳು ಈಗಲೂ ಇದೇ ಮನರಂಜನೆಯಲ್ಲಿ ಆತ್ಮವಂಚನೆಯ ಕಾರ್ಯಕ್ರಮ ನಡೆಸಿದರೆ  ಸರಿಯಾಗದು.
ಬದಲಾವಣೆ  ಆಂತರಿಕವಾಗಿದ್ದರೆ  ಉತ್ತಮ ಪ್ರಗತಿ. 
ನಕಾರಾತ್ಮಕ ಶಕ್ತಿಗಳನ್ನು ಬಳಸಿ ಸಕಾರಾತ್ಮಕ ಶಕ್ತಿಯನ್ನು ಹಿಂದುಳಿಸಿದರೂ  ಕೊನೆಗೆ ಉಳಿಯೋದು ಸಕಾರಾತ್ಮಕ ಶಕ್ತಿ.ಇದೇ ದೈವತ್ವ. 

ಭಾರತೀಯರ   ಸ್ವತಂತ್ರ ಜ್ಞಾನಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದರೂ  ಶಿಕ್ಷಣ ಮಾತ್ರ ಜ್ಞಾನದೆಡೆಗೆ  ಹೋಗದೆ ಅತಂತ್ರಸ್ಥಿತಿಗೆ  ಜನಜೀವನ ನಿಂತಿರೋದು ದುರಂತ.

Thursday, June 8, 2023

Monday, June 5, 2023

ಕಣ್ಣಿಗೆ ಕಾಣೋದೆಲ್ಲಾ ಬಡತನವಲ್ಲ.

ನಮ್ಮ ದೇಶಕ್ಕೆ ಬಡತನವಿರಲಿಲ್ಲ  ದೇಶದ ಜನರಲ್ಲಿ ಬಡತನವಿದೆ. ಕಾರಣ ನಮ್ಮವರ ಅಜ್ಞಾನದ ಸಂಪಾದನೆಯನ್ನು ದುರ್ಭಳಕೆ ಮಾಡಿಕೊಂಡು ಸ್ವಾರ್ಥ ಅಹಂಕಾರದ ಜೀವನ ನಡೆಸುತ್ತಾ ಸಮಾಜ ಬೇರೆ ಸಂಸಾರ ಬೇರೆ ದೇಶ ಬೇರೆ ಧರ್ಮ ಬೇರೆ ಎನ್ನುವ  ರಾಜಕೀಯಕ್ಕೆ  ಮುಳುಗಿರೋದು. ಇದನ್ನು ವಿದೇಶಿಗಳು ಪರಧರ್ಮದವರು  ಅರ್ಥ ಮಾಡಿಕೊಂಡು  ಮತಾಂತರ, ಪಕ್ಷಾಂತರ,ದೇಶಾಂತರ ಹೋಗಲು  ಸಹಕರಿಸಿದ್ದಾರಷ್ಟೆ.ಅಂತರ ಬೆಳೆದಷ್ಟೂ ಅಜ್ಞಾನದ ಅವಾಂತರ...ನಮ್ಮವರು ಯಾರು ಪರರು ಯಾರು ಎನ್ನುವ ಜ್ಞಾನ ಶಕ್ತಿಯಿದ್ದರೆ ನಮ್ಮತನ ಬಿಡದೆ ಪರರಲ್ಲಿಯೂ ಇರುವ ಆ ಪರಮಾತ್ಮನ ಕಾಣಬಹುದು.
ಇಲ್ಲವಾದರೆ ನಮ್ಮವರನ್ನೂ    ದೂರಮಾಡಿಕೊಂಡು ಪರಮಾತ್ಮನ ಕಾಣದೆ ಹೋಗುವುದು ಜೀವ..ಇಷ್ಟಕ್ಕೂ  ನಾವ್ಯಾರು? ಭಾರತೀಯರಾಗಿದ್ದರೆ ನಮ್ಮಲ್ಲಿ ಭಾರತೀಯ ತತ್ವಜ್ಞಾನವಿದೆಯೆ? ಇದ್ದರೆ ಒಗ್ಗಟ್ಟು ಯಾಕಿಲ್ಲ? ಹಣವೇ ಸರ್ವಸ್ವ ವಾದವರಿಗೆ  ಸತ್ಯಜ್ಞಾನದ ಕೊರತೆಯಿರುತ್ತದೆ.
ಆಂತರಿಕ ದೃಷ್ಟಿಯಿಂದ  ಸತ್ಯ ತಿಳಿಯಲು ಅಂತರ್ಮುಖಿಗ
ಳಾಗಿರಬೇಕು.  ಈಗಿನ ರಾಜಕೀಯ ಮಹಿಳೆ ಮಕ್ಕಳನ್ನೂ ಬಿಡದೆ ಹೊರಗೆಳೆದು ಆಳುತ್ತಿರುವಾಗ ಎಲ್ಲಿಯ ಅಂತರ್ಮುಖ. ಎಲ್ಲಾ ಬಹಿರ್ಮುಖಿಗಳೇ.ಇದಕ್ಕೆ ರಾಜಕೀಯ ಮನೆ ಮನೆಯೊಳಗಿದೆ ರಾಜಯೋಗ ಹಿಂದುಳಿದಂತೆಲ್ಲಾ ಹಿಂದೂ ಧರ್ಮದ ತತ್ವವೂ ಹಿಂದುಳಿಯುತ್ತದೆ.ತಂತ್ರದಿಂದ ಧರ್ಮ ಬೆಳೆಸಿದರೆ ತಾತ್ಕಾಲಿಕವಷ್ಟೆ.ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ದೇಶವನ್ನು ತಂತ್ರದಿಂದ ಆಳುತ್ತಿತ್ತು.ಈಗ ನಮ್ಮವರೆನ್ನಿಸಿಕೊಂಡವರೆ ಜನರನ್ನು ಸರಿಯಾದ ಶಿಕ್ಷಣ ನೀಡದೆ ಅಜ್ಞಾನ ಬೆಳೆಸಿಕೊಂಡು ತಾವೂ ಸತ್ಯ ತಿಳಿಯದೆ ಪರಕೀಯರನ್ನು ಓಲೈಸಿಕೊಂಡು ಅವರ ಸಾಲ ಬಂಡವಾಳ ವ್ಯವಹಾರಕ್ಕೆ ದೇಶ ಬಳಸಿ ನಮ್ಮ ಮಕ್ಕಳನ್ನು ವಿದೇಶಿಗಳ ಕೈಕೆಳಗೆ ದುಡಿಸಿಕೊಂಡರೆ  ಇದರಲ್ಲಿ ಆತ್ಮನಿರ್ಭರ ಭಾರತ ಎಲ್ಲಿದೆ? ನಮ್ಮ ಸಂಪಾದನೆಯಿಂದ ದೇಶದ ಸಾಲ ತೀರಿಸಲು ಎಷ್ಟು ಪ್ರಜೆಗಳಿಗೆ ಸಾಧ್ಯವಾಗಿದೆ? ಉಚಿತಯೋಜನೆಗಳ ಹಿಂದೆ ಬೆಳೆದಿರುವ ಸಾಲ ತೀರಿಸುವುದು ಸುಲಭವೆ?ಈ ರೀತಿಯಿಂದ  ದೇಶದ ಭವಿಷ್ಯಕ್ಕೆ ದಕ್ಕೆಯಾಗುತ್ತಿದ್ದರೂ  ನಮ್ಮ  ಒಳಜಗಳ ಬಿಟ್ಟಿಲ್ಲ, ದ್ವೇಷ ನಿಂತಿಲ್ಲ ಭಿನ್ನಾಭಿಪ್ರಾಯ ಮುಗಿಲುಮುಟ್ಟಿದೆ ಸ್ವಾರ್ಥ ಅಹಂಕಾರದ ಜೀವನ ಶೈಲಿ ಮಿತಿಮೀರಿದೆ ಎಂದರೆ ಇದರಲ್ಲಿ ಅಧ್ಯಾತ್ಮ ಪ್ರಗತಿಯಾಗಿಲ್ಲ ಎಂದರ್ಥ. ಮೊದಲು ಆಂತರಿಕ ಶುದ್ದಿಗಾಗಿ  ಭಾರತೀಯರು ತತ್ವದೆಡೆಗೆ ನಡೆದಿದ್ದರೆ ಈಗ  ತಂತ್ರದಿಂದ  ಸತ್ಯ ಬಿಟ್ಟು ಮಿಥ್ಯದೆಡೆಗೆ ಹೋಗಿ ಮನೆ ಮನೆಯ ಸಮಸ್ಯೆಗೆ ಸರ್ಕಾರ ಪರಿಹಾರ ಧನ ನೀಡಬೇಕೆಂದರೆ ಇದರಲ್ಲಿ  ಜ್ಞಾನವಿಲ್ಲ.ಪ್ರಜಾಸಹಕಾರ ಅಜ್ಞಾನದೆಡೆಗೆ ಹೆಚ್ಚಾದಂತೆ ಅಧರ್ಮ, ಅನ್ಯಾಯ, ಭ್ರಷ್ಟಾಚಾರ ಬೆಳೆಯುತ್ತದೆ.  ಇದನ್ನು ಯಾವ ರಾಜಕೀಯವೂ ಸರಿಪಡಿಸಲಾಗದು.ಅವರವರ ಸಾಲ ತೀರಿಸಲು ಸತ್ಕರ್ಮ,ಸ್ವಧರ್ಮ, ಸುಜ್ಞಾನ, ಸ್ವತಂತ್ರ ವಾಗಿರುವ  ಆತ್ಮಸಾಕ್ಷಿಗೆ ಮೊರೆಹೋಗಬೇಕಷ್ಟೆ.
ಒಳಗಿರುವ  ದೈವಕ್ಕೆ ಮೋಸಮಾಡಿ ಹೊರಗೆ ಎಷ್ಟು ಹಣ ಸಂಪಾದಿಸಿದರೂ ನೀರಿನಲ್ಲಿ ಹೋಮಮಾಡಿದಂತೆ ಎನ್ನುವ ಸತ್ಯ ಅರ್ಥ ವಾದರೆ  ಉತ್ತಮ ಬದಲಾವಣೆಗೆ ಸಹಕಾರ ಸಿಗಬಹುದು.ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?  ಒಳಗೇ ಸತ್ಯವಿಲ್ಲದ ಮೇಲೆ ಹೊರಗೆ ಸತ್ಯ ಹೇಗಿರುವುದು? ಸತ್ಯವೇ ದೇವರಾದ ಮೇಲೆ ದೈವತ್ವದೆಡೆಗೆ  ನಡೆಯಬೇಕು. ಇದು ಅದ್ವೈತ ವಾಗಬೇಕು.ಅಂದರೆ ಆತ್ಮಸಾಕ್ಷಿಗೆ ವಿರುದ್ದವಿರಬಾರದಷ್ಟೆ.
ಪರಮಾತ್ಮನ ಸತ್ಯ ಜೀವಾತ್ಮನ ಸತ್ಯ ಒಂದಾದರೆ ಯೋಗ.  .
ಪರಮಾತ್ಮನೊಳಗಿರುವ ದೇವತೆಗಳು, ಮಾನವರು,ಅಸುರರು  ಅವರವರ ಜ್ಞಾನಕ್ಕನುಗುಣವಾಗಿ‌ ಜೀವನದ ಸತ್ಯಾಸತ್ಯತೆಯನ್ನು  ಅರ್ಥ ಮಾಡಿಕೊಂಡು  ಬದುಕಿ ತೋರಿಸಿ ಹೋಗಿದ್ದಾರೆ. ಈಗಲೂ ಮನುಕುಲದ ಒಳಗಿರುವ ಈ ಮೂರೂ ಶಕ್ತಿಗಳ ಪ್ರೇರಣೆಯೇ ಜೀವನ ನಡೆಸಿದೆ ಆದರೆ ದೈವತ್ವದೆಡೆಗೆ ನಡೆಯಲು ಮಾನವೀಯತೆ ಅಗತ್ಯ. ಮಾನವನಾಗಿ ಅಸುರತೆಗೆ ಸಹಕಾರ ಕೊಟ್ಟರೆ ಅಸುರರೆ ಬೆಳೆಯೋದು. ಮಾನವ ಮಧ್ಯವರ್ತಿ  ಯಾವಾಗ ತನ್ನ ಸ್ವಾರ್ಥ ಸುಖ ಸಂತೋಷಕ್ಕಾಗಿ  ಮಹಿಳೆ ಮಕ್ಕಳನ್ನು ಹೊರಗೆಳೆದು  ದುಡಿಸಿಕೊಳ್ಳುವುದು  ಹೆಚ್ಚಾಯಿತೋ ಆಗಲೇ  ಒಳಗಿದ್ದ ಸ್ವತಂತ್ರ ಜ್ಞಾನ ಶಕ್ತಿ ಕುಸಿದು ಪರಕೀಯರ  ವಶಕ್ಕೆ  ಭಾರತ  ಸಿಲುಕಿತು. ಆದರೂ ಮೂಲವನ್ನು ಯಾರೂ  ಕದಿಯಲಾಗದು. ಭರತ ಭೂಮಿಯನ್ನು ಕದ್ದು  ವಿದೇಶಕ್ಕೆ  ಒಯ್ಯಲಾಗದಲ್ಲವೆ? ಭೂಮಿಯ ಸಾತ್ವಿಕ ಶಕ್ತಿ ಅರ್ಥ ವಾದರೆ  ಭೂಮಿಯನ್ನಾಗಲಿ ಮಹಿಳೆ ಮಕ್ಕಳನ್ನಾಗಲಿ ಉತ್ತಮ ಜ್ಞಾನದೆಡೆಗೆ ನಡೆಸಬಹುದು. ಇದರಿಂದಾಗಿ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುತ್ತದೆ .
ಆತ್ಮಜ್ಞಾನವೇ ಮಾನವನ ನಿಜವಾದ ಆಸ್ತಿ. ಇದನ್ನು ಕದಿಯಲಾಗದು.ಕಷ್ಟಪಟ್ಟು ಗಳಿಸಬೇಕು.ಯಾರೂ  ಹೊರಗಿನವರು  ಹಣದಿಂದ ಖರೀದಿಸಲಾಗದು. ಶಿಕ್ಷಣ ಪಡೆಯದಿದ್ದವರರಲ್ಲಿದ್ದ. ಸಾಮಾನ್ಯಜ್ಞಾನ ಶಿಕ್ಷಣ ಪಡೆದವರಲ್ಲಿಲ್ಲ ಕಾರಣ ಹೊರಗಿನ ಶಿಕ್ಷಣವು ಹೊರಗಿನ ವಿಚಾರವಷ್ಟೆ.ಮೊದಲೇ ಇದ್ದ ಒಳಗಿನ ಸದ್ವಿಚಾರ  ತಿಳಿದು ನಡೆದರೆ  ಸದಾಚಾರ.  
*ನುಡಿ ಮುತ್ತುಗಳು:-  
 —————————
**ದೇವರು ನಡೆಸುತ್ತಿದ್ದಾನೆ ನಡೆದುಬಿಡೋಣ,ಅವನು ನಡೆಸಿದಂತೆಯೇ ನಡೆದುಬಿಡೋಣ,
"ಅವನೇ ನಿಲ್ಲಿಸುವವರೆಗೆ ನಾವೇ ನಿಲ್ಲದಿರೋಣ"**

**ಕಷ್ಟದ ಆಳದಲ್ಲಿಯೇ ಸುಖಃವಿದೆ,
ಇಳಿಯಲೇಬೇಕು ಹುಡುಕಲೇಬೇಕು
ಇದುವೇ ಜೀವನ.**

*ಮನುಷ್ಯ ಎಷ್ಟೇ ಕೆಂಪಗಿದ್ದರು ಅವನ ನೆರಳು ಮಾತ್ರ ಕಪ್ಪಗೆ ಇರುತ್ತದೆ ನಾನು ಶ್ರೇಷ್ಠ ಎಂಬುದು ಆತ್ಮವಿಶ್ವಾಸ ನಾನೇ ಶ್ರೇಷ್ಠ ಎಂಬುದು ಅಹಂಕಾರ**

**ನಮಗೆ ಮಾತನಾಡಲು ಬರದೆ ಇದ್ದಾಗ ಕೂಡ ನಮ್ಮ ಪ್ರತಿ ಮಾತನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು ತಾಯಿ ಇವತ್ತು ಮಾತು ಬರುತ್ತವೆ ಆದ್ರೆ ಪದೇ ಪದೇ ಹೇಳ್ತಿವಿ ಅಮ್ಮ ನಿಂಗೆ ಅರ್ಥ ಆಗಲ್ಲ ಸುಮ್ಮನಿರು ಅಂತ.**

**ಒಣಗಿದ ಮರವು ತೊಲೆಯಾಗಿ ದೀರ್ಘಕಾಲ ಇರುತ್ತದೆ. ಆದರೆ ಶವವಾದ ನಮ್ಮ ದೇಹ ದಿನಕಳೆಯುವುದರಲ್ಲಿ
ಕೊಳೆಯುತ್ತದೆ.**

**ಮೇಣದಬತ್ತಿಯ (ಕ್ಯಾಂಡಲ್) ಉದ್ದ ಹೆಚ್ಚು-ಕಮ್ಮಿ ಇರಬಹುದು. ಆದರೆ ಅದು ನೀಡುವ ಬೆಳಕು ಒಂದೇ ಇರುತ್ತದೆ. ನೀವು ಇರುವ ವಾತಾವರಣ ಯಾವುದೇ ಇರಬಹುದು, ನಿಮ್ಮ ಸ್ಥಾನಮಾನ ಏನೇ ಇರಬಹುದು, ಆದರೆ ಅದು ನಿಮ್ಮ ಬೆಳಗುವ ಸಾಮರ್ಥ್ಯವನ್ನು ಕುಗ್ಗಿಸುವುದಿಲ್ಲ.**

**ಜಗತ್ತಿನ ಅತ್ಯಂತ ದುಬಾರಿ ವಸ್ತು ಎಂದರೆ ನಂಬಿಕೆ ಅದನ್ನು ಗಳಿಸಲು ವರ್ಷಗಳೇ ಬೇಕಾಗಬಹುದು ಆದ್ರೆ ಕಳೆದುಕೊಳ್ಳಲು ಕೇವಲ ಒಂದು ಕ್ಷಣ ಸಾಕು.**

**If a person controls his tongue, he can avoid many troubles.*^

**When circumstances have to be compromised, Then even intelligent people commit crimes.**

**Falling tears and broken dreams help you to become a strong person..**

**Your persistence and determination will help you overcome any obstacle in your path.**

**Every step you take towards your goal brings you closer to success.**

**Believe in yourself and your abilities, even when others doubt you.**

**Success is not a destination, but a continuous journey of growth and improvement.**

**Keep moving forward, one step at a time, and you will achieve greatness.**
 ——————————————— - - - ———
**

ಸ್ಥಿತಪ್ರಜ್ಞಾವಂತ ಎಂದರೆ ...

ಸ್ಥಿತಪ್ರಜ್ಞಾವಂತರಾಗೋದೆಂದರೆ ತಟಸ್ಥ ರಾಗೋದೆಂದರ್ಥ ವಲ್ಲ. ಒಂದು ಕಡೆ ನಿಲ್ಲೋದೂ ಅಲ್ಲ. ಜ್ಞಾನವಿಜ್ಞಾನವನ್ನು ಸರಿಯಾಗಿ ತಿಳಿದು ಸ್ಥಿತಿಯನ್ನರಿತು ನಡೆಯೋದಷ್ಟೆ.
ಶ್ರೀ ಕೃಷ್ಣ ಪರಮಾತ್ಮನೇ ಅರ್ಜುನನ ಧರ್ಮ ಸಂಕಟವನ್ನು ಹೋಗಲಾಡಿಸಲು ಅಂದಿನ ಸ್ಥಿತಿಯನ್ನರಿತು  ಕ್ಷತ್ರಿಯ ಧರ್ಮದೆಡೆಗೆ  ನಡೆಯಲು ಭಗವದ್ಗೀತೆ ಉಪದೇಶ ಮಾಡಬೇಕಾಯಿತು.ಆದರೆ ಈಗ ರಾಜಪ್ರಭುತ್ವ ವಿಲ್ಲ.ಭಗವದ್ಗೀತೆ ಇದೆ ಪುರಾಣ ಇತಿಹಾಸದ ಜ್ಞಾನವಿದೆ.ಆದರೆ ಶಿಕ್ಷಣದಲ್ಲಿಯೇ  ಇದನ್ನು ತಿಳಿಸಿ ಕಲಿಸಿ ಬೆಳೆಸದೆ  ಹೊರಗಿನ ಶಿಕ್ಷಣವನ್ನು ಕೊಟ್ಟವರಿಗೆ ವಿಜ್ಞಾನವೆಂದರೆ ಭೌತಿಕ ವಿಜ್ಞಾನವಷ್ಟೆ. ಅಧ್ಯಾತ್ಮ ವಿಜ್ಞಾನವನ್ನು ಭಗವದ್ಗೀತೆ ತಿಳಿಸಿದೆ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ಇದರ ಅರಿವಿಲ್ಲದೆ ಕೇವಲ ಪಠಣ ಮಾಡಿದರೆ ಪುಣ್ಯ ಬರಬಹುದು.ಕೆಲವರ ಜೀವನ ನಡೆಯಬಹುದು ಕೆಲವರಿಗೆ  ಹಣ ಅಧಿಕಾರ,ಸ್ಥಾನಮಾನ,ಸನ್ಮಾನ,ಪದಕ,ಪಟ್ಟ ಪದವಿಗಳಿಗೂ ಕೊರತೆಯಾಗದು.ಆದರೆ ದೇಶದ ಸ್ಥಿತಿ ಸರಿಯಾಗುವುದೆ? ಇದರಲ್ಲಿನ ತತ್ವವನರಿತರೆ  ಸಾಧ್ಯವಿದೆ.
ನಮ್ಮ ಈ ದೇಶದ ಸ್ಥಿತಿಗೆ ನನ್ನ ರಾಜಕೀಯ ಎಷ್ಟು ಕಾರಣ? ರಾಜಕೀಯಕ್ಕೆ ನೀಡಿದ ಸಹಕಾರ ಎಷ್ಟು ಕಾರಣ? ನನ್ನ ಶಿಕ್ಷಣ ಎಷ್ಟು ಕಾರಣ? ನನ್ನ  ಮಕ್ಕಳಿಗೇ ನಾನು ಪರಕೀಯರ ವಿದ್ಯೆ ನೀಡಿರುವಾಗ ನನ್ನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ? ಹಾಗೆ ಭಾರತ ಮಾತೆಯನ್ನರಿತು ನಡೆಯಲು ಭಾರತೀಯತೆ  ಅಗತ್ಯ.ತತ್ವವಿಲ್ಲದ ತಂತ್ರದಿಂದ ಅತಂತ್ರ ಜೀವನ. ಹೇಳೋದಕ್ಕೆ ತತ್ವ ನಡೆಯೋದಕ್ಕೆ ತಂತ್ರವಾದರೂ ಇದರಿಂದ ಸಮಾನತೆ  ಹೆಚ್ಚುವುದೆ?
ನಡೆ ನುಡಿಯ ನಡುವಿನ  ಅಂತರದಿಂದ ಸಾಕಷ್ಟು ಅಧರ್ಮ ಮಧ್ಯದಲ್ಲಿ ತೂರಿಕೊಂಡು ಪರಿಸ್ಥಿತಿ ಹದಗೆಟ್ಟಿರುವಾಗ ಆ ಅಂತರವನ್ನು ಕಡಿಮೆಮಾಡುವ ಪ್ರಯತ್ನವಾದರೂ ಮಾಡಲು ಸಹಕಾರ ಕೊಟ್ಟರೆ  ಪಕ್ಷಾಂತರ, ಧರ್ಮಾಂತರ,
ಜಾತ್ಯಾಂತರ,ದೇಶಾಂತರ ಹೋಗುವುದನ್ನು ತಡೆಯಬಹುದು. ಮನೆಯೊಳಗಿರುವ ಸದಸ್ಯರುಗಳೇ ಒಂದಾಗಿ ಬದುಕಲು ತಯಾರಿಲ್ಲವಾದರೆ ದೇಶ ಕಟ್ಟಲು ಕಷ್ಟ.
ಇದೊಂದು  ಅಜ್ಞಾನದ ಬೆಳವಣಿಗೆ. ಭೌತಿಕ ವಿಜ್ಞಾನದ ಮಿತಿಮೀರಿದ ಸಾಧನೆ ಆಧ್ಯಾತ್ಮ ವಿಜ್ಞಾನದ ಅವನತಿಗೆ ಕಾರಣ. ಇವೆರಡರ  ಸಮಾನತೆಯೇ ಆತ್ಮಜ್ಞಾನದ ಲಕ್ಷಣ.ಎಲ್ಲಿದೆ ಸಮಾನತೆ? ಹಣದಲ್ಲೆ? ಜ್ಞಾನದಲ್ಲೆ? 
ಸ್ವಾಮಿ ವಿವೇಕಾನಂದರು ದೇಶದ ಯುವಕರನ್ನು ರಾಜಯೋಗದೆಡೆಗೆ  ಕರೆತಂದು ಉತ್ತಮ ಕ್ಷಾತ್ರಧರ್ಮ ತಿಳಿದು ದೇಶಭಕ್ತರಾಗಲು ಕರೆಕೊಟ್ಟರೆ, ಈಗಿನ ಯುವಕರಿಗೆ ವಿದೇಶಿ ಶಿಕ್ಷಣ ಕೊಟ್ಟು ರಾಜಕೀಯದೆಡೆಗೆ ಎಳೆದು  ತಮ್ಮ ಸ್ವಾರ್ಥ ಕ್ಕೆ ಬಳಸಿಕೊಂಡರೆ  ಎಲ್ಲಿಯ ಧರ್ಮ?
ಜ್ಞಾನವನ್ನು ದುರ್ಭಳಕೆ ಮಾಡಿಕೊಂಡರೆ ಅಜ್ಞಾನವಷ್ಟೆ. ಹಾಗೆಯೇ ದೇಶವನ್ನು ವಿದೇಶ ಮಾಡಲು ಹೊರಟರೆ ಅಧರ್ಮ ವಾಗುತ್ತದೆ.

ಮಹಾಭಾರತ= ಪ್ರಸ್ತುತ ಭಾರತ?

ಮಹಾಭಾರತಕ್ಕೂ ಪ್ರಸ್ತುತ ಭಾರತಕ್ಕೂ
ವ್ಯತ್ಯಾಸವಿಷ್ಟೆ. ಅಂದಿನ ರಾಜಪ್ರಭುತ್ವ ಇಂದಿನ ಪ್ರಜಾಪ್ರಭುತ್ವ. ರಾಜರ ಅತಿಯಾದ  ಸ್ವಾರ್ಥ ಅಹಂಕಾರಕ್ಕೆ ಅಧರ್ಮ ಬೆಳೆದಿತ್ತು  ಇಂದು ಪ್ರಜೆಗಳ ಅಜ್ಞಾನದ ಸ್ವಾರ್ಥ ಪೂರಿತ ಜೀವನವೇ ವಿನಾಶಕ್ಕೆ ಕಾರಣವಾಗಿದೆ. ಅಂದೂ ದೈವತ್ವವಿತ್ತು.ಇಂದೂ ಇದೆ ಆದರೆ ಒಳಗಿರುವ  ತತ್ವ ಬಿಟ್ಟು
ಹೊರ ನಡೆದವರಿಂದ  ದೇಶ ವಿದೇಶವಾಗುತ್ತಿದೆ.
ಹೊರಗೆ ನಡೆದವರು ಒಳಗಿರುವ ಹುಳುಕನ್ನು ಎತ್ತಿಹಿಡಿದು ಕ್ರಾಂತಿಯ ಬೀಜ ಬಿತ್ತಿ ತಾವು ಮಾತ್ರ ಹೊರಗೆ ನಿಂತು ಮನರಂಜನೆಯಲ್ಲಿದ್ದಾರೆ. ಆದರೆ ಆತ್ಮವಂಚನೆಯ ಪ್ರಶ್ನೆ ಬಂದಾಗ  ನಿಜವಾದ ಆತ್ಮವಂಚಕರು ಹೊರಗಿನವರೆ. ಇದರ ಫಲವನ್ನು ಅವರೆ ಉಣ್ಣಬೇಕೆನ್ನುವುದೂ ಕರ್ಮ ಸಿದ್ದಾಂತ.
ಪುರಾಣದ ಕ್ಷತ್ರಿಯ ಧರ್ಮ ವೂ ಇಲ್ಲ ಕ್ಷತ್ರಿಯರೂ ಇಲ್ಲ ಆದರೂ ರಾಜಕೀಯ ಬೆಳೆದಿದೆ ಎಂದರೆ ಅಜ್ಞಾನವಷ್ಟೆ.
ದೇಶದೊಳಗಿದ್ದು ದೇಶ ರಕ್ಷಣೆ ಮಾಡಬೇಕು, ಧರ್ಮದೊಳಗಿದ್ದು ಧರ್ಮ ರಕ್ಷಣೆಯಾಗಬೇಕು,ಸತ್ಯದಲ್ಲಿದ್ದು ಸತ್ಯರಕ್ಷಣೆ  ಇವೆಲ್ಲವೂ ದೈವತ್ವ,ದೈವತತ್ವ ತಿಳಿದವರಿಗಷ್ಟೆ ಸಾಧ್ಯ. ಅಸುರ ಶಕ್ತಿಯು  ಅಜ್ಞಾನದಲ್ಲಿ ಆಳಬಹುದಷ್ಟೆ. 
ಭಾರತೀಯರು ಯಾರು? ಯಾರಲ್ಲಿ ಭಾರತೀಯ ಜ್ಞಾನವಿದ್ದು
ತತ್ವಜ್ಞಾನದಿಂದ ತಮ್ಮಲ್ಲಿ ಅಳವಡಿಸಿಕೊಂಡು ಸ್ವತಂತ್ರ ರಾಗಿ
ಜೀವನ ನಡೆಸಿರುವರೋ ಅವರು ಭಾರತೀಯರು.ಈಗ ಹೇಳಿ ನಮ್ಮೊಳಗೆ  ವಿದೇಶಿ ರೀತಿ,ನೀತಿ,ಸಂಸ್ಕೃತಿ, ಶಿಕ್ಷಣವೆ
ಹೆಚ್ಚಾಗಿದ್ದರೆ ಭಾರತೀಯರೆನ್ನುವುದರಲ್ಲಿ ಅರ್ಧ ಸತ್ಯವಿದೆ.
ನಮ್ಮ‌ಮಕ್ಕಳಿಗೆ ನಮ್ಮ ಧರ್ಮ ಕರ್ಮ ದ ಜ್ಞಾನವೇ ಇಲ್ಲದೆ
ಇದ್ದರೆ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇತ್ತೀಚಿನ ಕೆಟ್ಟ ಬೆಳವಣಿಗೆಗೆ ಕಾರಣವಿಷ್ಟೆ.ನಮ್ಮವರೆ ನಮಗೆ ಶತ್ರುಗಳಾಗಿ ವಿದೇಶಿಗರಿಗೆ ಮಣೆ ಹಾಕುತ್ತಾರೆ.
ವೈಚಾರಿಕತೆ ಯ ಮೂಲ ಉದ್ದೇಶ ತಿಳಿಯದೆ ವೈಜ್ಞಾನಿಕವಾಗಿಮುಂದೆ ನಡೆದವರು ಪ್ರಸಿದ್ದರಾಗಿದ್ದಾರೆ
. ಸಿದ್ದರ ಹೆಸರಲ್ಲಿ ಸಾಕಷ್ಟು ಪ್ರಸಿದ್ದರಿದ್ದಾರೆ.
ಪ್ರಸಿದ್ದರ ಹಿಂದೆ ನಿಂತು ತಮ್ಮತನ ಬಿಟ್ಟು ನಡೆದವರು 
ಹಿಂದುಳಿದವರಾಗಿದ್ದಾರೆ. ಹಿಂದೂ ಧರ್ಮದ  ಹೆಸರಲ್ಲಿ  ಸಾಕಷ್ಟು  ವಿರೋಧಗಳನ್ನು ಮಧ್ಯವರ್ತಿಗಳು ಬೆಳೆಸುತ್ತಾ ವ್ಯವಹಾರ ಬೆಳೆದರೂ ಜ್ಞಾನವೇ ಕುಸಿದರೆ ಕಷ್ಟ ನಷ್ಟ 
ಜೀವನದಲ್ಲಿ ತಪ್ಪಿದ್ದಲ್ಲ.
ದೇವಾಸುರರನ್ನು  ಹೊರಗಿಟ್ಟು ಒಳಗೇ ಇರುವ ದೈವೀ ಶಕ್ತಿ
ಅಸುರಶಕ್ತಿಯ ಹೊಡೆದಾಟದಲ್ಲಿ ಮನಸ್ಸು ಹಾಳಾಗಿದೆ.
ಎಲ್ಲಾ ಒಳಗಿರುವಾಗ ಹೊರಗೆ ಬಂದವರು ಯಾರು? ಹೊರಗೆ ಬಂದವರನ್ನು ಒಳಗೆ ಸೇರಿಸುವ ಯೋಗಿಗಳು ಎಲ್ಲಿ?
ಮನಸ್ಸಿನ ನಿಗ್ರಹಕ್ಕೆ ಯೋಗ ಬೇಕು. ಯೋಗದಲ್ಲಿ  ಪರಮಾತ್ಮನ ತತ್ವಜ್ಞಾನವಿರಬೇಕು. ತಂತ್ರದಿಂದ ಯೋಗ ಕೂಡಿಸಿಕೊಂಡರೆ  ಜೀವ ಅತಂತ್ರಸ್ಥಿತಿಗೆ  ತಲುಪುತ್ತದೆ.
ಆಳುವವರೂ ಆಳಾಗಿಯೇ ಇರೋದು. ಪ್ರಜಾಪ್ರಭುತ್ವದ  ಪ್ರಜೆಗಳ ಹಣದಲ್ಲಿಯೇ ಸರ್ಕಾರ ನಡೆದಿರೋದು. ಹಣದ ಋಣ ತೀರಿಸಲು ಧರ್ಮ ಹಾಗು ಸತ್ಯದ ಅಗತ್ಯವಿದೆ. ಆದರೆ
ಧರ್ಮದ ಹಾದಿಯಲ್ಲಿ ನಡೆದರೆ ಅಧಿಕಾರವೇ ಸಿಗದು.ಹೀಗೇ
ಹಿಂದಿನಿಂದಲೂ ಅಧರ್ಮ ವೇ ಹೆಚ್ಚು ಬಲಶಾಲಿಯಾಗಿ ಭೂಮಿಯನ್ನು ಆಳುವತ್ತ ಹೊರಟು ಅಸುರರೆ ಬೆಳೆದರು.
ಅತಿಯಾದರೆ ಗತಿಗೇಡು.ಹಿಂದೆ ಇಂದು ಮುಂದೆ ಆಗಿದ್ದು ಆಗುತ್ತಿರುವುದು ಆಗೋದೆಲ್ಲಾ ಯಾರೂ ತಡೆಯಲಾಗಿಲ್ಲ.
ಹಾಗಂತ ಪ್ರಯತ್ನ ನಡೆದಿದೆ.ಉತ್ತಮ ಮಾರ್ಗದಲ್ಲಿ ನಡೆದರೆ
ಉತ್ತಮ ಫಲಿತಾಂಶ ವಿದೆ.ಮೂಲದ ಶಿಕ್ಷಣವನ್ನು ಸರಿಪಡಿಸದೆ ರೆಂಬೆಕೊಂಬೆಗಳಿಗೆ ತೇಪೆ ಹಾಕಿ ಜೋಡಿಸಿದರೆ 
ವ್ಯರ್ಥ ವೆನ್ನಬಹುದಷ್ಟೆ. ರಾಜಯೋಗದ ಶಿಕ್ಷಣದಲ್ಲಿ ಯೋಗವಿದೆ. ರಾಜಕೀಯ ಎಂದರೆ ರಾವಣ,ಜರಾಸಂಧ,ಕೀಚಕ,ಯಮ .ಇಲ್ಲಿ ಇರೋರನ್ನು ದೇವರು ಎನ್ನುವರೆ? ಕಲಿಗಾಲವೆಂದರೆ  ಅಧಿಕಾರವಿದ್ದವ
ರನ್ನು ಎತ್ತಿ ಏಣಿಗೇರಿಸಿ ಕೆಳಗಿನವರನ್ನು ಆಳುವುದಾಗಿದೆ ಇದೇನೇ..ವಿದೇಶಿಗಳನ್ನು  ದೇಶದಿಂದ ಓಡಿಸಿದವರನ್ನೇ ಸರಿಯಿಲ್ಲ ಎನ್ನುವ  ಬುದ್ದಿವಂತರಿಗೆ ದೇಶದಲ್ಲಿ ಜ್ಞಾನದ ಶಿಕ್ಷಣ ನೀಡಲು  ಸಾಧ್ಯವಾಗದೆ  ವಿದೇಶಿಗಳನ್ನೇ ಕರೆದು  ಕೂರಿಸಿ ಅತಿಥಿ ಸತ್ಕಾರ  ಮಾಡುತ್ತಿರುವುದರಲ್ಲಿ  ಧರ್ಮ
 ಇದೆಯೆ? ಅತಿಥಿಗಳೇ ತಿಥಿಮಾಡುವಂತಾಗದಿರಲಿ. ಅತಿಯಾದರೆ ಗತಿಗೇಡು. 
ಮನೆಯ ಸಾಲ ತೀರಿಸಲು ಮನೆಯ ಸದಸ್ಯರೆಲ್ಲರೂ  ಸತ್ಕರ್ಮ  ಮಾಡಬೇಕು. ಹೊರಗಿನಿಂದ ಸಾಲ ತಂದು ಕುಳಿತು ತಿಂದರೆ  ಸಾಲ ತೀರದೆ ಜೀವ ಹೋಗುತ್ತದೆ ಅಲ್ಲವೆ? ಹಾಗೆ ದೇಶದ ಸಾಲವಾಗಲಿ ಸ್ತ್ರೀ ಸಾಲ,ಭೂಮಿ ಸಾಲ
ವನ್ನು ತೀರಿಸಲು  ಧರ್ಮಜ್ಞಾನ ಅಗತ್ಯ. ಹಿಂದಿನವರ ಉಡುಗೊರೆಯನ್ನು ಸದ್ಬಳಕೆ ಮಾಡಿಕೊಂಡರೆ ಉತ್ತಮ.
ಜ್ಞಾನವಾಗಬಹುದು ಹಣ,ಆಸ್ತಿ ಶಿಕ್ಷಣ,ಧರ್ಮ, ಕರ್ಮ, ಶಾಸ್ತ್ರ
ವಾಗಬಹುದು. ಕೇವಲ ವ್ಯವಹಾರಕ್ಕೆ ಬಳಸಿಕೊಂಡು  ಭೌತಿಕಕ್ಕೆ ಸೀಮಿತವಾದರೆ  ಬಡ್ಡಿ ಚಕ್ರಬಡ್ಡಿ ಬೆಳೆಯುತ್ತಾ ಹೋಗಿ ಆತ್ಮಹತ್ಯೆ ಹೆಚ್ಚುವುದು. 
ಮಹಾಭಾರತ  ಯುದ್ದದ ಸಮಯದಲ್ಲಿಯೇ  ಕಲಿಪ್ರವೇಶದ
ಪ್ರಯುಕ್ತ ಅಧರ್ಮ ಬೆಳೆದಿತ್ತು.
ಯುದ್ದವಾಗಿತ್ತು. ಯುದ್ದದಿಂದ ಯಾರಿಗೆ ಶಾಂತಿ ಸಿಕ್ಕಿದೆ? ಹಿಂದಿನ ಯುದ್ದ ಅಧರ್ಮದ ವಿರುದ್ದವಿತ್ತು.ಇಂದಿನ ಯುದ್ದ ಧರ್ಮದ ವಿರುದ್ದವಿದೆ.ನಮ್ಮವರೆ ನಮಗೆ ಶತ್ರುಗಳಾದರೆ ಪರರು ಮಿತ್ರರೆ? ಇಂದಿನ ವೈಜ್ಞಾನಿಕ ಜಗತ್ತು ಇದನ್ನು 
ಅರ್ಥ ಮಾಡಿಕೊಳ್ಳಲು ಸೋತಿರುವುದಕ್ಕೆ ಕಾರಣವೆ
ಯೋಗ್ಯ ಶಿಕ್ಷಣದ ಕೊರತೆ.  ಆಗೋದನ್ನು ತಡೆಯಲಾಗದು  ಆಗಬೇಕಾದ್ದನ್ನು  ತಿಳಿದು ಮಾಡಬಹುದು.ಬದಲಾವಣೆ ನಮ್ಮಿಂದ ಆಗಬೇಕು. ನಾವ್ಯಾರು? ನಮ್ಮೊಳಗೇ ಇರುವ ಶತ್ರುಗಳು ಯಾರು?

Sunday, June 4, 2023

ವಿಶ್ವ ಪರಿಸರ ದಿನಾಚರಣೆ ಹೇಗಿದೆ?

ವಿಶ್ವ ಪರಿಸರ‌ದಿನದ ಶುಭಾಷಯಗಳು.

ನಿಮ್ಮ ನಿಮ್ಮ ಮನವ ಶುದ್ದವಾಗಿಡಿ,ನಿಮ್ಮ ನಿಮ್ಮ ತನುವ ಶುದ್ದವಾಗಿಡಿ ನಿಮ್ಮನಿಮ್ಮ  ಮನೆಯ ಶುದ್ದವಾಗಿಡಿ ಆಗ ಪರಿಸರ ಶುದ್ದವಾಗಿರುವುದೆನ್ನಬಹುದೆ? ಯಾರದ್ದೋ ಮನೆಯಲ್ಲಿ ಯಾರೋ ವಾಸವಾಗಿರೋದು ಯಾರದ್ದೋ ದೇಶದಲ್ಲಿ ಯಾರೋ ವಾಸವಾಗೋದು ಯಾರದ್ದೋ ವಿಚಾರವನ್ನು ಯಾರೋ ಪ್ರಚಾರಮಾಡೋದು ಯಾರದ್ದೋ ಜೀವನವನ್ನು ಯಾರೋ ತೀರ್ಮಾನ ಮಾಡೋದು.
ಯಾರೊಳಗೆ ಯಾರಿರುವರೆನ್ನುವುದೇ ಗೊತ್ತಿಲ್ಲ ನಮಗೆ ಕೊನೆಪಕ್ಷ ನಮ್ಮೊಳಗೆ ಯಾರಿರೋದೆನ್ನುವ ಸತ್ಯದ ಅರಿವಾದರೆ  ಪ್ರಕೃತಿ ಯ ಜೊತೆಗೆ ಪರಿಸರವೂ ಉತ್ತಮವಾಗಿ ಸದ್ಬಳಕೆಯಾಗುತ್ತದೆ. ಯಾರನ್ನೂ ಯಾರೋ ಆಳೋದರ ಬದಲು ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಸದ್ವಿಚಾರವಿದ್ದರೆ  ಅದೇ ಪ್ರಗತಿ.
ಪರಿಸರ ಸಂರಕ್ಷಣೆಗಾಗಿ ಸಾಕಷ್ಟು ಕಾರ್ಯಕ್ರಮಕ್ಕೆ ಹಣ
ಬಳಸುತ್ತಾರೆ, ಜನರನ್ನು ಎಚ್ಚರಿಸುತ್ತಾರೆ.ಮಕ್ಕಳಿಗೆ ಪಾಠ ಮಾಡುತ್ತಾರೆ.ಮೆರವಣಿಗೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾರೆ. ಇವೆಲ್ಲವೂ  ಭೌತಿಕದ ಕಾರ್ಯಕ್ರಮ. ಇದೊಂದು ದಿನದಂದು  ನಡೆದ ಕಾರ್ಯಕ್ರಮ ಇಡೀ ವರ್ಷದ ಬದಲಾವಣೆಗೆ ಸಹಕಾರ ಮಾಡಿದ್ದರೆ  ಪ್ರಕೃತಿ ವಿಕೋಪ,ಪರಿಸರ ಮಾಲಿನ್ಯವಿಲ್ಲದೆ ಮಾನವನಿಗೆ ಸಮಸ್ಯೆಗಳಿಂದ ಬಿಡುಗಡೆ ಸಿಗುತ್ತದೆ. ತೋರುಗಾಣಿಕೆಯ ಆಚಾರ ವಿಚಾರ ಪ್ರಚಾರವು ತಾತ್ಕಾಲಿಕ ವಷ್ಟೆ.ಆಂತರಿಕ ಶುದ್ದಿಯಾಗುವ. ಶುದ್ದ ಸತ್ಯ ಸತ್ವ ತತ್ವದ ವಿಚಾರವನ್ನು ವಿರೋಧಿಸಿ ಹೊರಗಿನ ರಾಜಕೀಯದ ಹಣ ಬಳಸಿ ಜನರನ್ನು ಮನೆಯಿಂದ ಹೊರಗೆಳೆದು  ನಡೆಸುವ ಕಾರ್ಯಕ್ರಮದಲ್ಲಿ ಸಾಕಷ್ಟು ಹಣ ದುರ್ಭಳಕೆ ಜನರ ಸಮಯದ ಜೊತೆಗೆ ಹಣವೂ  ಹಾಳು. ಅರಿವನ್ನು ಮೂಡಿಸುವಂತಿದ್ದರೆ ಶಿಕ್ಷಣ ಸರಿಪಡಿಸಬೇಕು. ಶಿಕ್ಷಣ ಸರಿಪಡಿಸಲು ಪೋಷಕರ ಸಹಕಾರಬೇಕು.ಪೋಷಕರ ಸಹಕಾರ ವಿದ್ದರೂ ಶಿಕ್ಷಕರಲ್ಲಿ  ಸರಿಯಾದ  ಮಾಹಿತಿಯಿರಬೇಕು. ಎಲ್ಲರಿಗೂ  ಪ್ರಕೃತಿ ಬೇಕು ಆದರೆ ಅದನ್ನು ವಿಕೃತಗೊಳಿಸಿ ಆಳುವವರನ್ನು ತಡೆಯುವುದು  ಸಾಧ್ಯವಾಗಿಲ್ಲ  ಅದಕ್ಕೆ ಸಹಕಾರ ಕೊಟ್ಟ ಕೆಲವರು ಪರಿಸರ ದಿನಾಚರಣೆ ನಡೆಸುವವರಿದ್ದಾರೆ. ಯಾವ ಆಚರಣೆಯಿಲ್ಲದೆಯೇ ದೈವತ್ವ ಪಡೆದವರಿದ್ದಾರೆ ಶರಣರಾಗಿ ದಾಸರಾಗಿ ಸಂತರಾಗಿ ಮಹಾತ್ಮರಾದವರಿದ್ದಾರೆಂದರೆ ಅವರು ಪರಿಸರವನ್ನು ತಮ್ಮ ಜ್ಞಾನದಿಂದ ಶುದ್ದಗೊಳಿಸಿದ್ದರು.
ಯಾರೂ ಆಳುವ ರಾಜಕೀಯ ನಡೆಸಿರಲಿಲ್ಲ. ಪ್ರಜಾಪ್ರಭುತ್ವದ  ಪ್ರಜೆಗಳಿಗೆ ಈಗಲೂ ತಮ್ಮದೇ ಆದ ಕುಟುಂಬದ ಪರಿಸರವಿದೆ  ಅದನ್ನು ತತ್ವವನರಿತು  ಒಗ್ಗಟ್ಟಿನ ಬಲದಿಂದ  ಗಟ್ಟಿಯಾಗಿಸಿಕೊಳ್ಳಲು  ಹೊರಗಿನ ಕಾರ್ಯಕ್ರಮದ ಅಗತ್ಯವಿಲ್ಲ. ಪ್ರಚಾರ ಮಾಡುವವರು ಮುಖ್ಯವಾಗಿ ಪರಿಸರ ಮಾಲಿನ್ಯವನ್ನು ತಡೆಯುವಂತಿದ್ದರೆ ಉತ್ತಮ. ಮಕ್ಕಳಿಗೆ ಒಂದು ದಿನದ ಕಾರ್ಯಕ್ರಮ ನಡೆಸಲು ಕೊಡಲಾಗುವ  ದೊಡ್ಡ ದೊಡ್ಡ ಚಿತ್ರಪಟಗಳು  ಮರುದಿನ ಕಸದ ತೊಟ್ಟಿಗೆ  ಬೀಳದಂತಿದ್ದರೆ  ಉತ್ತಮ. ಇದರ ಬದಲು ಅವರ ಮನಸ್ಸಿನೊಳಗೇ ಪರಿಸರದ ಕಾಳಜಿ ಹೆಚ್ಚಿಸುವ ವಿಚಾರಗಳನ್ನು ಪ್ರತಿದಿನ ತುಂಬುವ ಕೆಲಸ ಶಿಕ್ಷಕರು ಪೋಷಕರು ಮಾಡುವಂತಿದ್ದರೆ  ಸ್ವಚ್ಚ ಭಾರತ ಅಭಿಯಾನ ಯಶಸ್ವಿಯಾಗುತ್ತದೆ. ಭೂಮಿಯೊಳಗಿರೋದನ್ನು ಬಗೆದು ಹೊರತಂದರೆ ಕಸ  ಅದೇ  ಆತ್ಮದೊಳಗಿನ ಸತ್ಯ ಸತ್ವ ತತ್ವವರಿತು ನಡೆದರೆ ರಸ. ಕಸದಿಂದ ರಸಮಾಡುವ ಕೆಲಸ ಹೆಚ್ಚಾದರೂ  ಪರಿಸರ ನಾಶ.ಒಳಗಿನ ಆತ್ಮ ಶುದ್ದತೆಯಿಂದ  ಪರಿಸರ  ಸಂರಕ್ಷಣೆಯ ಕೆಲಸವಾದರೆ  ಮನುಕುಲಕ್ಕೆ ಹಿತ.
ಪ್ರತಿಯೊಂದರಲ್ಲಿಯೂ  ತಪ್ಪು ಕಾಣುವುದು ತಪ್ಪು ನಿಜ. ಆದರೆ ಇಲ್ಲಿ ಆಂತರಿಕ ಶುದ್ದಿಯಾಗದೆ ಭೌತಿಕ ಪ್ರಸಿದ್ದಿಗೆ  ಹೆಚ್ಚು ಪರಿಸರ ನಾಶವಾಗುತ್ತಿರುವಾಗ  ತಪ್ಪು ನಮ್ಮೊಳಗೇ ಇದೆ ಎನ್ನುವ  ವಿಷಯವಿದೆ.ನಾವೆಲ್ಲರೂ  ಇದಕ್ಕೆ ಸಹಕಾರ ನೀಡಿರೋದರಿಂದ  ನಮ್ಮ ಒಳಗಿನ ಪರಿಸರ ಪ್ರಜ್ಞೆ ಜಾಗೃತವಾದರೆ ಉತ್ತಮವೆನ್ನಬಹುದು. ದೇಹಕ್ಕೆ ಹೊರಗಿನಿಂದ ಕೊಡುವ ಆಹಾರದ ಜೊತೆಗೆ ಆತ್ಮಕ್ಕೆ ಕೊಡುವ  ಜ್ಞಾನದ ಶಿಕ್ಷಣ ಎಷ್ಟು  ಇಂದು ಅಗತ್ಯವಿದೆ ಎನ್ನುವ  ಕಾರಣಕ್ಕಾಗಿ  ವಿಚಾರವನ್ನು  ಹೀಗೆ  ತಿಳಿಸುವ ಸಣ್ಣ ಪ್ರಯತ್ನ.
ಇದಕ್ಕೆ ಸಹಕಾರಕೊಡಲಿ ಬಿಡಲಿ ಇದು ನಮ್ಮ ಆತ್ಮಕ್ಕೆ ನಾವೇ ಕೊಡುವ  ಆಹಾರವಷ್ಟೆ. ನಮ್ಮ‌ಮನೆಯ ಕಸ ಹೊರಹಾಕಿದರೆ ಸಮಾಜದಲ್ಲಿ ಕಸ ಹೆಚ್ಚುವುದು. ಮನಸ್ಸಿನ ಕಸ ತೆಗೆದರೆ ಮನಸ್ಸು ಶುದ್ದವಾಗುತ್ತದೆ ಆಗ ಸಮಾಜವೂ ಶುದ್ದವಾಗಿ ಪರಿಸರ ಉತ್ತಮವಾಗುವುದು. ನಮ್ಮೊಳಗೇ ಅಡಗಿರುವ ಅತಿಯಾದ ಅಹಂಕಾರ ಸ್ವಾರ್ಥ ಬಿಡದೆ ಹೊರಗೆ ಎಷ್ಟೇ  ಸ್ವಚ್ಚಕಾರ್ಯ ನಡೆಸಿದರೂ  ತಾತ್ಕಾಲಿಕವಷ್ಟೆ.‌ 
ಪರಿಸರ ಮಾಲಿನ್ಯಕ್ಕೆ ಅತಿಯಾದ ವೈಜ್ಞಾನಿಕ ಚಿಂತನೆ ಕಾರಣ.ಪರಿಸರ ರಕ್ಷಣೆ ಅಧ್ಯಾತ್ಮ ಚಿಂತನೆಯಿಂದ ಸಾಧ್ಯ.
ಪ್ರಕೃತಿಯ ಸಣ್ಣ ಕಣ ಹೊಂದಿರುವ ಮಾನವ ಪ್ರಕೃತಿ ಆಳೋದಕ್ಕೆ ಹೋಗೋದೆ ಅಜ್ಞಾನ. ಹೀಗಾಗಿ ಇಂದು ಮಾನವನಿಗೆ ಮಾನವನೇ ಶತ್ರು.ಶತ್ರು ಹೊರಗಿಲ್ಲ ಒಳಗೇ ಇರೋದು. ಗಿಡನೆಡಿ ಗಿಡನೆಡಿ ಎನ್ನಬಹುದು ಗಿಡನೆಡುವಷ್ಟು ಭೂಮಿಯ ಅಗತ್ಯವಿದೆ.  ಭೂ ತಾಯಿ ಸೇವೆ ಮಾಡುವವರಿಗೆ ಗೌರವವಿಲ್ಲದೆ ಮನೆಬಿಟ್ಟು ಭೂಮಿ ಕೊಟ್ಟು ಹೊರಬರೋ ಮೊದಲು ಭೂಮಿಯನ್ನು  ಯಾರಿಗೆ ಕೊಟ್ಟು ಬರುತ್ತಿರುವುದೆನ್ನುವ  ಜ್ಞಾನವಿದ್ದರೆ ಉತ್ತಮ. ಅಯೋಗ್ಯರಿಗೆ ಭೂಮಿ ಕೊಟ್ಟರೆ ಪರಿಸರ ಹಾಳಾಗುವುದು.ಮನೆಯೊಳಗೆ ಹೊರಗೆ  ಸಣ್ಣ ಗಿಡ ಬೆಳೆಸಬಹುದು.ಆದರೆ ದೊಡ್ಡ ದೊಡ್ಡ ಮರಗಳನ್ನು ಉರುಳಿಸಿ ಕಾರ್ಖಾನೆ,  ರಸ್ತೆ  ಮನೆ ಮಾಡಿಕೊಂಡರೆ ಉಪಯೋಗವಿಲ್ಲ. ಸಾಧ್ಯವಾದಷ್ಟು ದೊಡ್ಡ ಮರಗಳ ರಕ್ಷಣೆ ಅಗತ್ಯ.ದೊಡ್ಡವರು ಬಿಟ್ಟು ಹೋಗಿರುವ ತತ್ವಜ್ಞಾನ ಅಗತ್ಯ.
ಅವರ ಜ್ಞಾನದಿಂದ  ನಿಧಾನವಾಗಿ ಜೀವನ ನಡೆಸಿದಾಗಲೇ ಪರಿಸರದ  ಉನ್ನತಿ ಸಾಧ್ಯ. ಮೊದಲೇ  ಕಡಿದು ದೂರವಾಗಿ ಹೊರಗೆ  ನಡೆದವರಿಗೆ ಪರಿಸರದ ಬಗ್ಗೆ ಕಾಳಜಿಯಿರದು.
ಒಟ್ಟಿನಲ್ಲಿ ಆಚರಣೆಯು ಸಾತ್ವಿಕವಾದಷ್ಟೂ  ಉತ್ತಮ ಪ್ರಗತಿ.
ಬದಲಾವಣೆ ಆಗುತ್ತಿದೆ  ಹೆಚ್ಚು ಸಹಕಾರವಿದ್ದರೆ  ಹೆಚ್ಚು ಬೇಗ ಬದಲಾವಣೆಯಾಗುವುದು. ನಿಜವಾದ ಅದೃಷ್ಟವಂತರು ಪರಿಸರ  ಸಂರಕ್ಷಕರು.  ಸಂರಕ್ಷಣೆ ಆಗುತ್ತಿದೆ.
ಬದಲಾವಣೆ  ನಮ್ಮೊಳಗೇ  ಆಗುವುದು ಕಷ್ಟವಾದರೂ ಸಾಧ್ಯವಿದೆ ಎಂದು ಮಹಾತ್ಮರೆ ನಡೆದು ನುಡಿದಿದ್ದಾರಲ್ಲವೆ?
ನಾವೀಗ ನುಡಿಯುವುದೇ ಸುಲಭ ನಡೆಯಲು ಕಷ್ಟಪಡಬೇಕಿದೆ. ಇದಕ್ಕೆ ಸರಿಯಾದ ಸಹಕಾರ ಅವಕಾಶವೂ ಮುಖ್ಯ.
ಪ್ರತಿವರ್ಷಕೊಮ್ಮೆ  ಬರೋ  ದಿನಾಚರಣೆ  ಮಕ್ಕಳಿಂದ  ಹಿಡಿದು  ಎಲ್ಲಾ  ಪೋಷಕರಿಗೆ ಪರಿಸರ ವಿಚಾರ  
ತಲುಪಿಸಬಹುದು.ಆದರೆ,ದಿನದಿಂದ ದಿನಕ್ಕೆ
ಹೆಚ್ಚಾಗುತ್ತಿರುವ  ಪರಿಸರ  ಹಾನಿಯ  ಹೊರಜಗತ್ತಿನ
ಅಸಂಖ್ಯಾತ  ಕಾರ್ಯಕ್ರಮಗಳನ್ನ  ನಿಲ್ಲಿಸಲು ಸಾಧ್ಯ
ವಿಲ್ಲವಾದರೆ  ಆಚರಣೆಯ  ಉದ್ದೇಶ ಏನು?.
ಆಚರಣೆಗಳಿಂದ  ಮಾನವನ  ಮನಸ್ಸು  ಶುದ್ದವಾಗಿ
ತನ್ನ ಸುತ್ತಲಿನ  ಪರಿಸರವನ್ನೂ  ಸ್ಚಚ್ಚವಾಗಿಡಬೇಕಿತ್ತು
ಇಂದು  ಆಚರಣೆಗಳೇ  ಪರಿಸರವನ್ನ  ಹಾಳುಮಾಡಿ
ಎಲ್ಲೆಂದರಲ್ಲಿ  ಮಾನವ ‌ಕಸ  ಕೊಳಕುಮಾಡಿ ತನ್ನ
ಮನರಂಜನೆಯನ್ನೇ  ಮುಖ್ಯವಾಗಿಟ್ಟುಕೊಂಡು ಸಭೆ
ಸಮಾರಂಭ,ಸಮಾವೇಶ, ಪ್ರಚಾರ ಮಾಡಿಕೊಂಡು
ಊಟ,ಉಪಚಾರ, ಅನಾವಶ್ಯಕ ವಾಗಿ  ಸಮಯ ಹಣವನ್ನ  ಹಾಳುಮಾಡಿ,ಸಮಾಜದ‌ ಜನರನ್ನ  ದುಡಿಯದಂತೆ  ಸರ್ಕಾರದ  ವಿರುದ್ದ ಎತ್ತಿಕಟ್ಟಿ  ತಮ್ಮರಾಜಕೀಯದ  ಬೇಳೆ 
ಬೇಯಿಸಿಕೊಂಡರೆ ,ಮಾನವನ ಮನಸ್ಸು  ಹಾಳಾಗುತ್ತದೆ. 
ಹಾಳಾದ ಮನಸ್ಸಿನ ಮಾನವನಿಗೆ ಪರಿಸರದ ಕಾಳಜಿ
ಯಿಲ್ಲದೆ  ನಡೆದರೆ ,ಪರಿಸರ ಉಳಿಸುವವರು ಯಾರು?.
ಸಸಿಗಳನ್ನ  ಒಮ್ಮೆ ನೆಟ್ಟು  ದಿನವೂ  ಮರಗಳನ್ನ ಕಡಿದರೆ‌ 
ಪ್ರಯೋಜನವಿಲ್ಲ.ಪ್ಲಾಸ್ಟಿಕ್ ನಿಂದ ಪರಿಸರ ನಾಶವೆಂದು  ತಿಳಿದೂ ಪ್ಲಾಸ್ಟಿಕ್  ತಯಾರಿಕೆ ನಿಲ್ಲಿಸದೆ ಜನರಿಗೆ  ಅರಿವು 
ಮೂಡಿಸಲು  ಹೋದರೆ ಪ್ರಯೋಜನವಿಲ್ಲ.ಮೂಲ  ಸರಿಪಡಿಸದೆ  ಬೆಳೆದಿರೋರೆಂಬೆ‌ಕೊಂಬೆ  ಕಡಿದರೆ  ಸಮಸ್ಯೆ 
ಬಗೆಹರಿಯಲು ಕಷ್ಟ. ಇದು ಎಲ್ಲಾ  ವಿಚಾರಕ್ಕೆ  ಅನ್ವಯಿಸುತ್ತದೆ.
ದೇಶದ  ಅಧರ್ಮ,ಅನ್ಯಾಯ, ಭ್ರಷ್ಟಾಚಾರ ದ ಮೂಲವೇ  ನಮ್ಮ  ವಿದೇಶಿ  ವ್ಯಾಮೋಹದ ಶಿಕ್ಷಣ. ಮೊದಲು  ಶಿಕ್ಷಣ
ದೊಳಗಿನ  ಕೊಳಕನ್ನ  ತೆಗೆದು ಸ್ವಚ್ಚಮಾಡಬೇಕು.
ಆದರೆ,ಪೋಷಕರೇ  ಇದನ್ನ  ಒಳಗೆಸೇರಿಸಿಕೊಂಡಿರುವಾಗ, 
ನಮ್ಮ  ಸಮಸ್ಯೆಗೆ  ನಾವೇ  ಕಾರಣವೆಂದು  ತಿಳಿಯದೆ  
ಸರ್ಕಾರದ  ವಿರುದ್ದ ನಡೆದರೆ  ನಮ್ಮ  ಪರಿಸರದ  ಕೊಳಕಿಗೆ  ರೋಗವೇ ಸರಿಯಾಗಿ  ಉತ್ತರ  ನೀಡುತ್ತದೆ.
ಈಗ ಹೇಳಿ  ಪರಿಸರ  ನಮ್ಮಿಂದ  ಹಾಳಾದ‌ ಮೇಲೆ ನಾವೇ  
ಸರಿಪಡಿಸಲು   ಸರ್ಕಾರಕ್ಕೆ  ಸಹಕರಿಸಬೇಕು ಅಂದರೆ, 
ನಮ್ಮ ಅತಿಯಾದ    ಹೊರಗಿನ ಆಚರಣೆಗಳನ್ನ
ಕಡಿತಗೊಳಿಸಿ  ಆಂತರಿಕ ಶುದ್ದಿಗಾಗಿದಾನ ಧರ್ಮದ  ಹಾದಿ  ಹಿಡಿದರೆ,ಕಾಯಕವೇ  ಕೈಲಾಸವಾದರೆ,ನಮ್ಮ‌ರಾಜಕೀಯ ಸಮಾವೇಶ  ನಿಂತರೆ, ಹಾಗೆ‌ ಅನಾವಶ್ಯಕ  ಸಭೆ ಸಮಾರಂಭ ದಲ್ಲಿ ಸ್ವಚ್ಚತೆ  ಇದ್ದರೆ,ಸಂಘ    ಸಂಸ್ಥೆಗಳು ಮನರಂಜನೆಯ.  
 ಊಟ,ಉಪಚಾರಗಳಿಂದ  ಮೈಮರೆಯದೆ  ಪರಿಸರ
ಮಾಲಿನ್ಯದ  ಅರಿವು   ಹೆಚ್ಚಿಸಿಕೊಂಡು ‌ ನಡೆದರೆ,ನಮ್ಮ ನಮ್ಮ ಮನಸ್ಸು, ಮನೆ,ಸಂಸಾರ,ಸಮಾಜವೂ ಶುದ್ದ
ವಾಗುತ್ತದೆ. ಇಷ್ಟಕ್ಕೂ ಇಷ್ಟು ವರ್ಷ ನಡೆಸಿದ ಆಚರಣೆ
ಯಿಂದ ಮಾನವನ ಮನಸ್ಸುಶುದ್ದವಾಗಿದೆಯೆ? ಸ್ವಚ್ಚಭಾರತ ಆಗಿದೆಯೆ? 
ಆಚರಣೆಗಳಿಂದ ‌ನಾವು  ಯಾವ‌ ಧರ್ಮ ಉಳಿಸಿದ್ದೇವೆ?
.ಪ್ರಕೃತಿ  ವಿಕೋಪಕ್ಕೆ ಮಾನವನ  ಈ ಅನಾವಶ್ಯಕ  ಹೊರ‌ 
ಆಚರಣೆಯೊಳಗಿನ  ರಾಜಕೀಯ  ಅಶುದ್ದತೆಯೆ ಕಾರಣ.
ಇದರಲ್ಲಿ ಕೊರೊನವೂ ಒಂದಾಗಿತ್ತು
ಇದುಧಾರ್ಮಿಕ,ರಾಜಕೀಯ,ಆರ್ಥಿಕ,ಶೈಕ್ಷಣಿಕ,ಸಾಮಾಜಿಕ‌ ಕ್ಷೇತ್ರವನ್ನೇ ದಾರಿ  ತಪ್ಪಿಸಿ  ಪರಿಸರ  ನಾಶಮಾಡಿದರೆ,
ಪ್ರಕೃತಿಯಿಂದ ಹುಟ್ಟಿದ ಸಣ್ಣ ಪ್ರಾಣಿಯಾದ   ಮಾನವನನ್ನ  ಪ್ರಕೃತಿ  ಬಲಿ ತೆಗೆದುಕೊಳ್ಳುವುದರಲ್ಲಿ  ತಪ್ಪಿಲ್ಲ.ಇದಕ್ಕೆ ಸರ್ಕಾರ ಕಾರಣವಲ್ಲ   ನಮ್ಮ ಸಹಕಾರ ಕಾರಣ.
ಒಂದು  ದಿನದ ಕಾರ್ಯಕ್ರಮಕ್ಕೆ  ಹಣ‌ಸುರಿದು  ಕಾಲ
ಹರಣಮಾಡೋ  ಬದಲು  ದಿನವೂ  ಕಾರ್ಯವನ್ನ
ಕ್ರಮಬದ್ದವಾಗಿ  ನಡೆಸಿಕೊಂಡು  ಹೋದರೆ ನಾವು
ಸ್ವಚ್ಚ ಭಾರತೀಯ ಪ್ರಜೆಗಳಾಗಬಹುದು.ವಿದೇಶಿಗಳು  ಪ್ರಾರಂಭಿಸಿದರು  ನಾವು  ಆಚರಿಸಿದೆವು .ಇದರಲ್ಲಿ  ದಿನಕ್ಕೊಂದು ಆಚರಣೆಯಿದೆ.ಆದರೆ,ಎಲ್ಲವೂ  ಹೆಸರು,ಹಣ,ಅಧಿಕಾರಕ್ಕಾಗಿ  ನಡೆಸೋ ಆಚರಣೆ.
ತಪ್ಪೆನಿಸಿದ್ದರೆ  ಕ್ಷಮಿಸಿ .ನಮ್ಮ ಹಲವು ಹೊರ ಆಚರಣೆ
ಪ್ರಕೃತಿ  ವಿರುದ್ದ ನಡೆದಿದೆ.ಇದರಲ್ಲಿ  ಪರಿಸರ ದಿನಾಚರಣೆ  ಆಗಬಾರದಷ್ಟೆ.

ಪರಿಸರ ಮಾಲಿನ್ಯಕ್ಕೆ  ನಮ್ಮ  ಸ್ವಾರ್ಥ ದ  ರಾಜಕೀಯ  ಸ್ವಭಾವ ಕಾರಣ.  ಪ್ರಕೃತಿಯಿಂದ ಮಾನವನೇ ಮಾನವನಿಂದ ಪ್ರಕೃತಿಯೇ? ತಾಯಿಯೇ ಇಲ್ಲದೆ ಜನ್ಮವಿಲ್ಲ.

Saturday, June 3, 2023

ಅನಾವಶ್ಯಕ ಸಾಲಕ್ಕೆ ಕೈ ಒಡ್ಡದಿರಿ

ಸರ್ಕಾರ ಯಾರಿಗೂ ಉಚಿತಕೊಡದಿದ್ದರೆ ಏನಾಗುತ್ತಿತ್ತು? ಎಲ್ಲಾ  ಸ್ವತಂತ್ರ ಜ್ಞಾನದಿಂದ ಸರಳವಾಗಿ ಜೀವನ ನಡೆಸಲು ಕಲಿಯುತ್ತಿದ್ದರು. ಗೃಹಲಕ್ಮಿ ಯೋಜನೆಯಿಂದ ಮನೆಒಡೆಯದಿದ್ದರೆ ಸರಿ. ಅತ್ತೆ ಬೇರೆ ಸೊಸೆ ಬೇರೆ ಜೀವನ ನಡೆಸಿದರೆ ಇಬ್ಬರಿಗೂ ಸರ್ಕಾರದ ಭಾಗ್ಯವೆಂದು ಮೂರ್ಖರು ಹೊರಗೆ  ನಡೆಯುವಂತಾಗಬಾರದು. ಸರ್ಕಾರದ ಹಣ ದೇಶದ ಜನರ ಋಣ   ಅಂದರೆ ಸಾಲವಾದಾಗ ಉಚಿತವಾಗಿ ಸಾಲ ಪಡೆದು ಜನರ. ಸೇವೆ ಮಾಡಬೇಕಿದೆ.ಅದಕ್ಕೆ ಇತ್ತೀಚೆಗೆ ಸಾಕಷ್ಟು ಮಹಿಳೆಯರು ಮಕ್ಕಳು  ದುಡಿದು ಸಂಪಾದನೆ ಮಾಡಿದರಷ್ಟೆ ಜೀವನ‌ನಡೆಸಲು ಸಾಧ್ಯವೆನ್ನುವಂತಾಗಿದೆ.ಹಿಂದೆ ಮನೆಯಲ್ಲಿ ಒಬ್ಬರು ದುಡಿದು ಹತ್ತು ಮಂದಿ ಸಾಕುವಷ್ಟು ಜ್ಞಾನವಿತ್ತು. ಈಗ ಹತ್ತು ಮಂದಿದುಡಿದರೂ ಒಬ್ಬರ ಸಾಲ ತೀರಿಸಲಾಗದವರಿದ್ದಾರೆ.ಕಾರಣ ಇಲ್ಲಿ ಹಣದ ಹಿಂದಿನ ಋಣ ಭಾರದಿಂದ ಮಾನವನ  ಹಿಂದಿನ ಸಾಲದ ಜೊತೆಗೆ ಈಗಿನ ಸಾಲ ಬೆಳೆದು  ಆರೋಗ್ಯ ಸಮಸ್ಯೆ,ಅಶಾಂತಿ,ಅಧರ್ಮ, ಅನ್ಯಾಯ, ಭ್ರಷ್ಟಾಚಾರ ದ ಹಣದಿಂದ. ಸುಖ ಶಾಂತಿ ಪಡೆಯಲಾಗದೆನ್ನುವುದೇ  ಸನಾತನ ಧರ್ಮದ  ಸತ್ಯ ಸತ್ವ.
ಒಟ್ಟಿನಲ್ಲಿ ಕೆರೆಯ ನೀರನು ಕೆರೆಗೆ ಚೆಲ್ಲಿದರೆ  ಸಮಸ್ಯೆಯಿಲ್ಲ.ಕೊಳಚೆಗೆ ಚೆಲ್ಲಿದರೆ ಅನಾರೋಗ್ಯವೇ ಜೀವನ ಎನ್ನುವಂತಾಗುತ್ತದೆ.
ಇದಕ್ಕೆ ಪರಿಹಾರ  ಆರೋಗ್ಯಕರ ವಿಚಾರವುಳ್ಳ ಸಾತ್ವಿಕ ಶಿಕ್ಷಣ. ಇದನ್ನು ಮಠ ಮಾನ್ಯಗಳು, ಧಾರ್ಮಿಕ ಸಂಘಗಳು  ತಮ್ಮ ಸುತ್ತಮುತ್ತಲಿನ  ಬಡಜನರಿಗೆ ಉಚಿತವಾಗಿ ಹಂಚಿ ಅವರಲ್ಲಿರುವ ಜ್ಞಾನವನ್ನು ಬೆಳೆಸುತ್ತಾ ಸ್ವತಂತ್ರ ಜೀವನ ನಡೆಸಲು ಅವಕಾಶ ಕೊಟ್ಟರೆ  ಸರ್ಕಾರ ಕೊಡುವ ಭಾಗ್ಯದ ಅಗತ್ಯವೇ ಇರಲಿಲ್ಲ. ವಿಪರ್ಯಾಸವೆಂದರೆ  ಧಾರ್ಮಿಕ ವರ್ಗವೇ ಉಚಿತ ಕೊಡಲು ಹೋರಾಟ ನಡೆಸಿದರೆ ಅಜ್ಞಾನ.
ಕೆಲವರಿಗೆ ರಾಜಕೀಯ ಬೇರೆ ಧರ್ಮ ಬೇರೆ ಎನಿಸಿದರೂ
ಒಂದಾಗಿ ರಾಜಕೀಯ ನಡೆಸುವರು. ಹಲವರಂತೂ ರಾಜಕೀಯವೇ ಜೀವವಾಗಿಸಿಕೊಂಡರೆ ದೈವತ್ವ ಎಲ್ಲಿದೆ?
ಒಬ್ಬರು ವಿದೇಶಿ ಬಂಡವಾಳದಿಂದ ಸಾಲ ತಂದರೆ ಇನ್ನೊಂದು ಪಕ್ಷ ಬಂಡವಾಳವನ್ನು ಉಚಿತ ಹಂಚಿ ಕೈ ಮುಗಿದರೆ ಇದು ಪ್ರಜ್ಞಾಪ್ರಭುತ್ವ ಧರ್ಮಕ್ಕೆ  ವಿರುದ್ದ. ಹಿಂದೂ ರಾಷ್ಟ್ರ ಮಾಡೋ ಹೆಸರಿನಲ್ಲಿ ಹಿಂದೂಗಳನ್ನು ಬಡವರಾಗಿಸಿ ಆಳಿದರೆ?  ಪಕ್ಷದ ಕಾರ್ಯಕರ್ತರಿಗೆ ತಮ್ಮ ಸಂಸಾರ ನಡೆಸುವುದೇ ಕಷ್ಟವಾದಾಗ ಸಮಾಜದ ಸೇವೆ  ಹಾಗೆ ಸಾಧ್ಯ
ಸಾಲ ಮಾಡಿಕೆಟ್ಟ ಸಾಲವೇ ಶೂಲ.
 ಸರ್ಕಾರಗಳ  ಅಜ್ಞಾನವೇ  ಸಾಲದ ಮೂಲ  ಇದನ್ನು ಹಂಚಿಕೊಂಡು  ಜನರು ಇನ್ನಷ್ಟು ಅಜ್ಞಾನಕ್ಕೆ ದಾಸರಾದರೆ  ಸರ್ಕಾರ  ಕಾರಣವಾ?

ವಿದೇಶಿ ಸಾಲ ತೀರಿಸೋದು ಹೇಗೆ?

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದರೂ ಭಾರತ ತನ್ನ ಮೂಲದ ಸತ್ಯ ಸತ್ವ ತತ್ವದೆಡೆಗೆ ಹೋಗದೆ ಹೊರಗಿನ ತಂತ್ರವನ್ನು ಬಂಡವಾಳವಾಗಿಸಿಕೊಂಡಿದ್ದರೆ  ಸಾಲ ತೀರೋದಿಲ್ಲ.ಇದು ಅದ್ಯಾತ್ಮ ಸತ್ಯವಾಗಿದೆ.
 ದೇಶದ ಸರ್ಕಾರವನ್ನು ವಿದೇಶಿಗಳು ನಡೆಸಿರೋದೆ? ಸತ್ಯ ಸರ್ಕಾರಗಳು ವಿದೇಶಿ ಬಂಡವಾಳ ಸಾಲ ವ್ಯವಹಾರಕ್ಕೆ  ದೇಶವನ್ನು ಒತ್ತೆ ಇಟ್ಟು ದೇಶದ ಜನರಿಗೆ ಉಚಿತವಾಗಿ ಸಾಲ ಸೌಲಭ್ಯಗಳನ್ನು ನೀಡಿ ಮತಬೇಟೆ ಮಾಡಿದ್ದಾರೆಂದರೆ ತಪ್ಪೆ? ಇದನ್ನು ಪ್ರಗತಿ ಎನ್ನಬೇಕೆ ಅಧೋಗತಿ ಯೆ?
ಅಧ್ಯಾತ್ಮ ಚಿಂತಕರ ಭವಿಷ್ಯವನರಿಯದೆ ಮಹಾತ್ಮರ ದೇಶಭಕ್ತಿ ತಿಳಿಯದೆ  ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರಕ್ಕೆ ಬಳಸಿ ಯೋಗಿಗಳ ದೇಶವನ್ನು ಭೋಗದೆಡೆಗೆ ನಡೆಸಿ ಸಾಲ ಬೆಳೆದಾಗ ಅದನ್ನು ತೀರಿಸಲು ವಿದೇಶಿಗಳೊಂದಿಗೆ ಒಪ್ಪಂದ ಇದರ ಫಲವೇ ಮಕ್ಕಳು ಮಹಿಳೆಯರೆನ್ನದೆ ದುಡಿದರೂ ತೀರದ ಸಾಲ. ಅತಿಆಸೆ ಗತಿಗೇಡು ಎನ್ನುವಂತೆ ನಮ್ಮೊಳಗೇ ಇದ್ದ ಜ್ಞಾನವನ್ನು ಬಿಟ್ಟು ಹೊರಗಿನಿಂದ ಹೊರಗಿನವರ ವಿಜ್ಞಾನ  ಒಳಗೆ ತುಂಬಿಕೊಂಡರೆ ನಡೆಸೋದು ಹೊರಗಿನವರೆ.
ಸಾಮಾನ್ಯಜ್ಞಾನವಿದ್ದರೆ  ನಮ್ಮ ಜೀವಕ್ಕೆ ಜೀವನಕ್ಕೆ ಯಾವ ಸಮಸ್ಯೆಯಿರದು. ಎಲ್ಲಾ ಸಾಮಾನ್ಯಪ್ರಜೆಗಳಾಗಿ ದೇಶದ ಬಗ್ಗೆ ಚಿಂತನೆ ನಡೆಸುವಷ್ಟು  ಸಾಮಾನ್ಯಜ್ಞಾನವನ್ನು ಬೆಳೆಸುವ ಶಿಕ್ಷಣವೇ ನೀಡದೆ ವಿಶೇಷ ಜ್ಞಾನವನ್ನು ಸಣ್ಣವಯಸ್ಸಿಗೇ ತಲೆಗೆ ತುಂಬಿ  ಮನಸ್ಸು ಹೊರದೇಶದೆಡೆಗೆ ಹೊರಟಿತು. ಅಲ್ಲಿನ ಸಾಲ ತೀರಿಸಲು ದೇಶ ಬಿಟ್ಟು ಹೋಗಲೇಬೇಕಿತ್ತು.
ಆದರೆ ತನ್ನ ಮೂಲದವರು ತಮಗಾಗಿ ಮಾಡಿಟ್ಟ ಆಸ್ತಿ ಜ್ಞಾನವನ್ನು  ಸದ್ಬಳಕೆ ಮಾಡಿಕೊಳ್ಳದೆ ಎಷ್ಟೇ ದೂರಹೋದರೂ ಸಾಲ ತೀರದು. ಕೊನೆಪಕ್ಷ ಆಸ್ತಿಯನ್ನು ದಾನ ಧರ್ಮ ಕಾರ್ಯಕ್ಕಾದರೂ ಬಳಸಿದರೆ  ನೆಮ್ಮದಿಯ ಜೀವನವಿರುತ್ತದೆ. ಎಂತಹ ವಿಪರ್ಯಾಸವೆಂದರೆ  ತನ್ನ ಹತ್ತಿರವೇ  ಇದ್ದು ತನ್ನ ಧರ್ಮ ಕರ್ಮವನರಿತು ಗುರುಹಿರಿಯರ ಸೇವಾಕಾರ್ಯದಲ್ಲಿ ನಿರತರಾದವರಿಗೆ  ನಮ್ಮಲ್ಲಿ ಬೆಲೆಯಿಲ್ಲ. ಎಲ್ಲೋ ದೂರಕ್ಕೆ ಹೋಗಿ  ಯಾರದ್ದೋ ಸೇವಕರಾಗಿದ್ದು  ಸಾಲ ಮಾಡಿಕೊಂಡರೂ ಅದೊಂದು ಪ್ರಗತಿಯಾದರೆ ಈ ಕೆಲಸ  ಸುಲಭ. ನಮ್ಮವರ ಕಿರಿಕಿರಿಯಿಲ್ಲ  ಸ್ವೇಚ್ಚೇಯಾಗಿರಬಹುದು. ಹಿಂದೂಗಳಲ್ಲಿರುವ‌ ದೋಷ ನಮ್ಮವರನ್ನೇ ದ್ವೇಷಮಾಡುತ್ತಾ ಹೊರಗಿನವರನ್ನು ಬೆಳೆಸೋದು. 
ಆದರೆ  ಜೀವನದ ಉದ್ದೇಶ ಮಾತ್ರ  ಇದಾಗಿಲ್ಲವೆನ್ನುವುದು ಹಿಂದೂ ಧರ್ಮ. ಪರಕೀಯರು ಹೊರಗಿನ ಸತ್ಯ ಎತ್ತಿ ಹಿಡಿದರೆ ಭಾರತೀಯರು ಒಳಗಿನ ಸತ್ಯ ಕಂಡುಕೊಂಡಿದ್ದರು.
ಆಂತರಿಕ ಅರಿವಿನಿಂದ ಭೌತಿಕ ಅರಿವಿನೆಡೆಗೆ ನಡೆದರೆ ಉತ್ತಮ . ಏನೇ  ಪಡೆದರೂ ಕೊಟ್ಟು ಹೋಗೋವರೆಗೆ ಮುಕ್ತಿಯಿಲ್ಲ.ಹಾಗಾದರೆ  ಪಡೆಯುವುದು ತಪ್ಪೆ? ಇಲ್ಲ ಉತ್ತಮವಾದದ್ದನ್ನು ಪಡೆದು ಹಂಚಿಕೊಂಡರೆ ಧರ್ಮ.
 ಸತ್ಯಜ್ಞಾನವೇ  ಇಲ್ಲದೆ ಹಣಗಳಿಸಿದರೆ ದುರ್ಭಳಕೆಯೇ ಹೆಚ್ಚು. ಹೊರಗೆ ಹೋಗುವುದು ತಪ್ಪಲ್ಲ ಒಳಗೆ ಸೇರದಿರೋದು ತಪ್ಪು. ಹೊರಗಿನ ಸಾಲ ತೀರಿಸುತ್ತಾ ಒಳಗೆ ನಡೆಯುವುದು  ಧರ್ಮ. ಒಳಗಿನ ಸಾಲ ಬೆಳೆಸುತ್ತಾ ಹೊರಗೆ ನಡೆಯುವುದೇ ಅಧರ್ಮ. ಸಾಲ ತೀರಿಸಲು ಬಂದವರ ತಲೆಯ ಮೇಲೆ ಸಾಲದ ಹೊರೆ ಹಾಕಿ ಆಳುವುದು ಅಧರ್ಮ. ಇದಕ್ಕೆ ಸಹಕಾರ ಕೊಟ್ಟವರಿಗೇ ಇದರ ಪ್ರತಿಫಲ ಹೆಚ್ಚು.
ಪ್ರಜಾಪ್ರಭುತ್ವ  ದೇಶವನ್ನು  ರಾಜಪ್ರಭುತ್ವದಂತೆ  ಭೋಗದ ಕಡೆಗೆ ನಡೆಸುವಷ್ಟು  ಜ್ಞಾನಶಕ್ತಿ‌ ಪ್ರಜೆಗಳಿಗಿರಬೇಕಾದರೆ ಪ್ರತಿಯೊಬ್ಬರೂ ದೇಶಕ್ಕಾಗಿ  ಸೇವೆ ಮಾಡುವ ಜ್ಞಾನಪಡೆದಿರಬೇಕಿತ್ತು. ದೇಶದಿಂದ ನನಗೇನು ಲಾಭ ಎನ್ನುವ ಅಜ್ಞಾನದಲ್ಲಿ ದೇಶವನ್ನೇ ಸಾಲದೆಡೆಗೆ ನಡೆಸಿ ತಾನು ಶ್ರೀಮಂತ ನೆಂದರೆ  ಅಜ್ಞಾನವಷ್ಟೆ. ಇದನ್ನು ಸರ್ಕಾರ ಸರಿಪಡಿಸಲಾಗದು ನಮ್ಮದೇ ಸಹಕಾರದ ಅಗತ್ಯವಿದೆ. ಜನರು ಏನು ಕೇಳುವರೋ ಸರ್ಕಾರ ಕೊಡಬಹುದು ಹಾಗೆ ದೇವರೂ ಕೂಡ ಬೇಡಿದ್ದನ್ನೆಲ್ಲಾ ಕೊಡುತ್ತಾನೆ.ನಂತರ ಅದನ್ನು ತಿರುಗಿ ಕೊಡಬೇಕಾದವರೂ  ಜನರೆ ಹೊರತು ದೇವರಲ್ಲ. ಕಾರಣ ದೈವತ್ವವನ್ನು ಸಂಪಾದಿಸಿಕೊಳ್ಳುವುದು ಮಾನವರ ಧರ್ಮ ಮತ್ತು ಕರ್ಮ. ಇದು ಒಳಗಿದೆ  ಕೊಡೋದಕ್ಕೆ ಹೊರಗಿಲ್ಲ. ಯಾರೂ ಕದಿಯಲಾಗದ ಜ್ಞಾನವೇ  ಶ್ರೇಷ್ಠ.