ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Tuesday, March 19, 2024

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು

"ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು"
ಎರಡು ರಾಷ್ಟ್ರೀಯ ಪಕ್ಷಗಳ  ರಾಜಕೀಯ ದ್ವೇಷಕ್ಕೆ ದೇಶವೇ ಬಡತನದೆಡೆಗೆ ನಡೆದಿದೆ. ಒಂದು ಮೊದಲಿನಿಂದಲೂ ತಾನೇ ಸರಿ ಎಂದು ನಡೆದು ಜನರನ್ನು ಮೋಸಗೊಳಿಸಿ  ಆಳುತ್ತಾ ಮುಂದೆ ಬಂದಂತೆಲ್ಲಾ  ಇನ್ನೊಂದು ಪಕ್ಷ ತನ್ನದೇ ಆದ ರೀತಿಯಲ್ಲಿ  ಬದಲಾವಣೆಗೆ ಪ್ರಯತ್ನಪಟ್ಟು ಮುಂದೆ ಬಂತು.
ಎರಡೂ ಪಕ್ಷಗಳಿಗೂ ಪ್ರಜಾಸಹಕಾರ  ಸಿಕ್ಕಿ ಸರ್ಕಾರ ನಮಗೇನು ಕೊಡುತ್ತದೆನ್ನುವ ಸ್ವಾರ್ಥ ಪರ ಜೀವನಕ್ಕೆ ತಮ್ಮ ಜ್ಞಾನವನ್ನು  ಲೆಕ್ಕಿಸದೆ ಹಣ ಪಡೆದು ಸಾಲದ ಸುಳಿಯಲ್ಲಿ ರೈತರಿಂದ ಹಿಡಿದು ಶಿಕ್ಷಕರವರೆಗೂ  ಬೆಳೆದರು.ಅವರ ಹಿಂದೆ ಸಾಲದ ಹೊರೆಯೂ ಹೆಚ್ಚಾದಾಗ ಸಾಲ ತೀರಿಸಲು ಭ್ರಷ್ಟಾಚಾರ ಬೆಳೆಯಿತು. ಭ್ರಷ್ಟರ ಹಿಂದೆ ನಡೆದವರಿಗೆ ದೇಶ ಕಾಣದೆ ವಿದೇಶಿ ಸಾಲ ಬೆಳೆಸಿದರು. ಇದರಿಂದಾಗಿ ಭಾರತ ಆತ್ಮದುರ್ಭಲ ವಾಗಿದೆಯೆ ಹೊರತು ಆತ್ಮನಿರ್ಭರ ವಾಗಿಲ್ಲವೆಂದರೆ ವಿರೋಧಿಸುವವರು ನಮ್ಮವರೆ.ಇಲ್ಲಿ ವಿದೇಶಿಗರಿಗೆ ಮಣೆ ಹಾಕುವವರೆ ಹೆಚ್ಚು.ವಿದೇಶದಿಂದ ಇಲ್ಲಿ ಬಂದವರು ಹಿಂದೂಗಳಾಗಿಲ್ಲವಾದಾಗ ಅವರ ಧರ್ಮಕ್ಕೆ ಹೆಚ್ಚಿನ ಸಹಕಾರವಿರುತ್ತದೆ.ಹಣ,ಬಂಡವಾಳ ಸಾಲ ವ್ಯವಹಾರ ಮೂಲ ಶಿಕ್ಷಣವೇ ಪರಕೀಯರದ್ದಾಗಿದ್ದರೆ ಒಳಗಿರುವ  ಜ್ಞಾನ ಯಾರದ್ದು? 
ಕಣ್ಣಿಗೆ ಕಾಣದ ಈ ಸತ್ಯವನ್ನು ‌‌ ಅರ್ಥ ಮಾಡಿಕೊಳ್ಳದೆ ಸರ್ಕಾರ ನಡೆಸಿದರೆ  ಅಸತ್ಯ ಅನ್ಯಾಯ ಅಧರ್ಮ ದೆಡೆಗೆ ನಡೆಯುತ್ತಿದ್ದರೂ  ನಾನು ಪರಿಶುದ್ದನೆನ್ನುವ ಭ್ರಮೆಯೇ ಹೆಚ್ಚಾಗುತ್ತದೆ. ಯಾರದ್ದೋ ಹಣವನ್ನು ಯಾರೋ  ಯಾರಿಗೋ ಕೊಟ್ಟು ದಾನಶೂರ ಕರ್ಣ ಎನ್ನುವ ಬಿರುದು ಪಡೆದರೆ ಅಧರ್ಮ. ಕರ್ಣ ನ ಕಥೆ ಇದಕ್ಕೆ ಸಾಕ್ಷಿ.ಆದರೆ ಆ ಮಹಾಶೂರ ಕರ್ಣ ನಲ್ಲಿ ಧರ್ಮ ಜ್ಞಾನವಿತ್ತು.ದುರ್ಯೋಧನನ ಪಕ್ಷದ ಋಣ ತೀರಿಸುವುದಾಗಿತ್ತು.ಆದರೆ ಅಂದಿನ ರಾಜರ ಕಾಲ ಇಂದಿಲ್ಲ ಹೀಗಿರುವಾಗ ಪ್ರಜೆಗಳ ಹಣವನ್ನು ದುರ್ಭಳಕೆ ಮಾಡಿಕೊಂಡು  ಅಜ್ಞಾನದಲ್ಲಿ ಆಳುವುದರಿಂದ ಆಗುವ ನಷ್ಟ  ತುಂಬೋದೇ ಕಷ್ಟ. ಕಷ್ಟಪಡದೆ ಕೋಟ್ಯಾಂತರ ರೂಗಳನ್ನು ಹಾಳುಮಾಡುವವರ. ಹಿಂದೆ ಸಾಕಷ್ಟು ಶ್ರಮಜೀವಿಗಳು ಬುದ್ದಿಜೀವಿಗಳು ಜ್ಞಾನಿಗಳಿದ್ದಾರೆಂದರೆ ಎಲ್ಲಿದೆ ಸತ್ಯ ಧರ್ಮ?
ಸಾಮಾನ್ಯ ಜ್ಞಾನವಿಲ್ಲದೆ ವಿಶೇಷಜ್ಞಾನದ ಹಿಂದೆ ನಡೆದವರಿಗೆ ಒಳಗೇ ಅಡಗಿರುವ ಭ್ರಷ್ಟ ದುಷ್ಟ ಗುಣಗಳ ಅರಿವಿಲ್ಲದೆ ಏನಾದರಾಗಲಿ ನಾನುಗೆಲ್ಲಬೇಕೆಂಬ  ಅಜ್ಞಾನ ಮಿತಿಮೀರಿದೆ.
ಇದಕ್ಕೆ ಸಾಕ್ಷಿಯಾಗಿರುವ‌ ಪರಮಾತ್ಮನೇ ಸುಮ್ಮನಿರುವನೆಂದರೆ ಸಾಮಾನ್ಯರಿಗೆ ಯಾವ ಸಂದೇಶ ಹೋಗುತ್ತಿದೆ? ಒಟ್ಟಿನಲ್ಲಿ  ದೇವರು ಧರ್ಮ, ಭಾಷೆ,ಸಂಸ್ಕೃತಿ ಸಂಪ್ರದಾಯಗಳು ರಾಜಕೀಯಕ್ಕೆ ಬಂದಾಗ ಅಳಿಸಿಹೋಗಿ ನಾನೇ ದೇವರು ಎನ್ನುವ ಹಂತಕ್ಕೆ ಬಂದಾಗ ನಾನೆಲ್ಲಿರೋದೆನ್ನುವುದೂ ಮರೆತು ಹೋಗುತ್ತದೆ. ದೇಶದೊಳಗೇ ಇದ್ದು ವಿದೇಶಿಗಳಿಗೆ ಮಣೆಹಾಕುವ ಸಂಸ್ಕೃತಿ ಯಾವ ಮಹಾತ್ಮರು ಕಲಿಸಿದ್ದಾರೋ ? ಪುರಾಣಗಳಲ್ಲಿಯೇ ನಾವು ರಾಜ್ಯ ರಾಜ್ಯದ ನಡುವೆ  ನಡೆದ ಯುದ್ದಕ್ಕೆ ಅಧರ್ಮ ದ ರಾಜಕೀಯತೆ ಕಾರಣವಾಗಿದ್ದನ್ನು ತಿಳಿಯಬೇಕಿದೆ. ಆದರೆ ಇಲ್ಲಿ ಅಧರ್ಮ ವೇ ರಾಜಕೀಯ ನಡೆಸಿರುವಾಗ  ಧರ್ಮ ಎಲ್ಲಿದೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಲ್ಲಿ ಅಜ್ಞಾನ ಮನೆಮಾಡಿ ಹಣ ಅಧಿಕಾರ ಸ್ಥಾನಕ್ಕಾಗಿ  ಭ್ರಷ್ಟ ದುಷ್ಟ ರಿಗೆ ಸಹಕರಿಸುವ ಗುಣ ಬೆಳೆದಿರೋದೇ  ದುರಂತ. ‌ಇಷ್ಟು ವರ್ಷ ಆಳಿದ ಪಕ್ಷಗಳಿಗೆ  ದೇಶದ ಮೂಲ ಶಿಕ್ಷಣದೊಳಗಿದ್ದ ಸಾತ್ವಿಕ ಸತ್ಯದ ಅರಿವಾಗದೆ ರಾಜಕೀಯತೆ ಬೆಳೆದು ಅದೇ ದ್ವೇಷ ರೂಪತಳೆದು ಮಧ್ಯವರ್ತಿಗಳು  ಬೆಳೆದರು. ಮಹಾತ್ಮರು ಬೆಳೆದಿಲ್ಲವೆಂದರೆ ಆತ್ಮದುರ್ಭಲ ಭಾರತವಾಗಿದೆ ಎಂದರ್ಥ.
ಎಲ್ಲಿ ರಾಜಕೀಯವಿರುವುದೋ ಅಲ್ಲಿ ಸತ್ಯವಿರದು.ಎಲ್ಲಿ ಸತ್ಯವಿರದೋ ಅಲ್ಲಿ ಧರ್ಮ ವಿರದು.ಎಲ್ಲಿ ಧರ್ಮ ಇರದೋ ಅಲ್ಲಿ ದೇವತೆಗಳಿರೋದಿಲ್ಲ.ಎಲ್ಲಿ ದೇವತೆಗಳಿರುವುದಿಲ್ಲವೋ ಅಲ್ಲಿ ಶಾಂತಿಯಿರದು. ಹೀಗಾಗಿ ದೇಶದೊಳಗೆ ಕ್ರಾಂತಿಯೇ ಮುಂದಾಗಿದೆ.ಇದರಲ್ಲಿ ಯಾರು ಜ್ಞಾನಿಗಳೋ ಅಜ್ಞಾನಿಗಳೋ   ಭಗವಂತನಿಗೇ ಗೊತ್ತು. ಸೃಷ್ಟಿ ಸರಿಯಿಲ್ಲದೆ ಸ್ಥಿತಿ ಲಯವೂ ಸರಿಯಾಗಿರದು.ಲಯದೆಡೆಗೆ ನಡೆದಿರುವ ನಮ್ಮ ಜೀವನದಲ್ಲಿ ಬದಲಾವಣೆ ಆಗಬೇಕಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗುವ ಶಿಕ್ಷಣಕೊಡಬೇಕಿದೆ.
ಜೀವ ಶಾಶ್ವತವಲ್ಲ ಆತ್ಮಶಾಶ್ವತ ಎಂದಿರುವ ಮಹಾತ್ಮರ ಹೆಸರಿನಲ್ಲಿ ಕೆಸರೆರಚಾಟ ಮಾಡಿಕೊಂಡು ತಾವೇ ಶುದ್ದವಾಗದೆ ಜನರನ್ನು ಶುದ್ದಮಾಡಲು ರಾಜಕೀಯಕ್ಕೆ ಮಣೆ ಹಾಕಿದವರಿಗೆ ಜನಬಲ ಹಣಬಲ ಅಧಿಕಾರ ಬಲವೇನೂ ಸುಲಭವಾಗಿ ಸಿಗಬಹುದು ಆದರೆ ಸತ್ಯಜ್ಞಾನ ಸಿಗೋದಿಲ್ಲ.ಕಾರಣ ಸತ್ಯ ಒಂದೇ  ಇರೋದು ಅದೂ ಒಳಗೇ ಇರೋವಾಗ ಹೊರಗಿನ ರಾಜಕೀಯದಲ್ಲಿ ಕಾಣದು.
ಹಿಂದೂ‌ಮುಸ್ಲಿಂ ನಡುವಿರುವ ಇಸ್ಲಾಂ ಧರ್ಮ ಮತಾಂತರ ಮಾಡಿ ತನ್ನ ಸ್ಥಾನ ಭದ್ರಗೊಳಿಸಿಕೊಂಡರೂ  ಅದರಿಂದ ದೇಶದ ಮೂಲ ಶಿಕ್ಷಣದಲ್ಲಿದ್ದ ತತ್ವದರ್ಶನ ಆಗೋದಿಲ್ಲ. ಜನಸಂಖ್ಯೆಗಿಂತ ಸತ್ಯಜ್ಞಾನಿಗಳ ಸಂಖ್ಯೆ ಮುಖ್ಯ.ಅದರಲ್ಲೂ ಸತ್ಯಜ್ಞಾನ  ಜೀವಾತ್ಮನಿಗೆ ಅಗತ್ಯ .ಪುನರ್ಜನ್ಮ ಇಲ್ಲವೆನ್ನಬಹುದು ಆದರೆಇದು ಸತ್ಯವಾಗಿರದು.ಈ ಜನ್ಮದ ಹಿಂದೂ ಮುಂದೆ ಇಸ್ಲಾಂ ಮುಸ್ಲಿಂ ಆದಂತೆ ಇಸ್ಲಾಂ ಮುಸ್ಲಿಂ ಮುಂದೆ ಹಿಂದೂವಾಗಿ ಜನ್ಮ ಪಡೆಯುವುದಿಲ್ಲವೆ?

ಸನಾತನ ಹಿಂದೂ ಧರ್ಮ ತಿಳಿಸುವುದಿಷ್ಟೆ ಭೂಮಿಯ ಋಣ ತೀರಿಸುವುದಕ್ಕಾಗಿ ನಾವು ಜೀವಾತ್ಮನಿಗೆ ಸತ್ಯ ಧರ್ಮದಲ್ಲಿ ನಡೆಯುವ ಶಿಕ್ಷಣ ಕೊಡಬೇಕಷ್ಟೆ.ಭೌತವಿಜ್ಞಾನ ಅಧ್ಯಾತ್ಮ. ವಿಜ್ಞಾನದಿಂದ ದೂರವಾದಷ್ಟು ಸಾಲ ಬೆಳೆಯುತ್ತದೆ. ಸಾಲ ತೀರಿಸದೆ  ಜೀವನ್ಮುಕ್ತಿ ಸಿಗದು. ಹಿಂದೂಗಳೇ ಈವಿಚಾರಕ್ಕೆ ವಿರೋಧಿಸಿ ಮುಂದೆ ಮುಂದೆ  ನಡೆದಿರುವಾಗ ಇದನ್ನರಿಯದ ಪರಧರ್ಮ ದವರ ವಿರುದ್ದ ದ್ವೇಷಮಾಡಿ ಉಪಯೋಗವಿಲ್ಲ.
ನಮ್ಮ ಮಕ್ಕಳಿಗೇ ಉತ್ತಮಜ್ಞಾನದ ಶಿಕ್ಷಣ ನೀಡಲು ಕಷ್ಡವಾಗಿರುವಾಗ ಪರರಿಗೆ ಉಪದೇಶ ಮಾಡಿ ಉಪಯೋಗವಿದೆಯೆ?ನಮ್ಮನೆಯೇ  ಸಾಲದೊಳಗಿರುವಾಗ ಪರರಮನೆಯ ಸಾಲತಂದು ತೀರಿಸಬಹುದೆ? ಹೀಗೆ ದೇಶದ ಒಳಗೆ ಸಾಕಷ್ಟು ಅಗರ್ಭ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲು ಸಾಧ್ಯವಾಗಿಲ್ಲವೆಂದರೆ ಆ ಹಣ ಭ್ರಷ್ಟಾಚಾರದ ಅಧರ್ಮ ಅನ್ಯಾಯ ಅಸತ್ಯದ ಸಂಪಾದನೆ ಆಗಿರುತ್ತದೆ.
ಪರಮಾತ್ಮನಿಗೆ ತಲುಪದ ಈ ಹಣದಿಂದ ಧರ್ಮ ರಕ್ಷಣೆ ಕಷ್ಟವಿದೆ. ಜನರ ಹಣವೇ ದುರ್ಭಳಕೆ ಆಗಿರುವಾಗ ಜನರಲ್ಲಿ ಅರಿವಿನ ಕೊರತೆ ಇರೋವಾಗ ಅವರನ್ನೇ ಆಳಲು ಹೊರಟರೆ ಏನರ್ಥ?ನಾವ್ಯಾರು ? ನಮ್ಮ ಸಹಕಾರ  ಯಾರಿಗೆ ಕೊಟ್ಟು  ಜ್ಞಾನ ದುರ್ಭಳಕೆ ಆಗುತ್ತಿದೆ? ಸತ್ಯ ತಿಳಿಸಬಾರದೆನ್ನುವರು ಆದರೆ ಸತ್ಯವೇ ದೇವರೆನ್ನುವರು.ಮಕ್ಕಳಿಗೂ ಇದೇ ರೀತಿ ಅಡ್ಡ ಗೋಡೆ ಮೇಲೆ ದೀಪ  ಇಟ್ಟು ಅರ್ಧ ಕತ್ತಲಲ್ಲೇ ಕಾಲ‌ಕಳೆದರೆ ಪೂರ್ಣ ಸತ್ಯ ಪೂರ್ಣಬೆಳಕಿನೆಡೆಗೆ ಹೋಗಲು ಸಾಧ್ಯವೆ?ಜ್ಞಾನದಿಂದ ಮುಂದುವರಿದಿದ್ದ ದೇಶವನ್ನು ಅಜ್ಞಾನದ ಶಿಕ್ಷಣದಿಂದ ಹಿಂದುಳಿಸುತ್ತಾ ವಿದೇಶ ಮಾಡಲು ಹೊರಟವರಿಗೆ ಇಂದು ಬೇಡಿಕೆ ಹೆಚ್ಚು. ಸ್ವಾತಂತ್ರ್ಯ ಸ್ವೇಚ್ಚಾಚಾರವಾದರೆ ಆತ್ಮದುರ್ಭಲ ವಾಗಿದೆವೆಂದರ್ಥ..
ಮನರಂಜನೆಯಿರಲಿ ಆತ್ಮವಂಚನೆಯಾಗದಿರಲಿ.ಯಾವ ಪಕ್ಷ ಬಂದರೂ ಜನಬಲದಿಂದಾಗಿರುವುದು ಅದು ಆತ್ಮಬಲವಾದರೆ ಉತ್ತಮ ದೇಶ.ಸ್ಮಾಟ್ ಆಗಲು ಹೋಗಿ ಸಾಲದ ಹೊರೆಹೊತ್ತು‌ ನಡೆಯಲಾಗದೆ ಕುಸಿದರೆ  ಮೇಲೆ ಎತ್ತಲು ಯಾರಿರುವರು? ಎಲ್ಲದ್ದಕ್ಕೂ  ಇತಿಮಿತಿಗಳಿದ್ದರೆ ಉತ್ತಮ.
ಕಾಲವೇ ಹೀಗಿದೆ.ಹಾಗಂತ‌ಕಾಲರಾಯ ಸುಮ್ಮನಿರೋದಿಲ್ಲ.
ಸಕಾಲದಲ್ಲಿ ಎಲ್ಲಾ ಸರಿಯಾಗಿ ಸನ್ಮಾರ್ಗದಲ್ಲಿ ನಡೆದರೆ ಕಾಲವೂ  ಚೆನ್ನಾಗಿಯೇ ಇರುತ್ತದೆ. ಇದು ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ. ಯಾರದ್ದೋ ಮೂಲ  ಶಿಕ್ಷಣ  ಇತರರು  ಬಂದು ಹಾಳುಮಾಡಿದರೆ‌ ಅವರ ಬುದ್ದಿವಂತಿಕೆ  ಚೆನ್ನಾಗಿದ್ದರೂ ಜ್ಞಾನದ ಕೊರತೆ ಕಾಣುವುದು. ಅಜ್ಞಾನದಲ್ಲಿ ಎಷ್ಟು ಹೋರಾಡಿದರೂ ವ್ಯರ್ಥ.
ಯಾಕೆ ರಾಜಕೀಯದ ವಿರುದ್ದ ನಿಲ್ಲಬೇಕೆ ಎಂದರೆ ರಾಜಕೀಯ ಬೇಕು ಅದು ಧರ್ಮದ ಪರವಿರಬೇಕು. ಮನೆಯೊಳಗೇ ಅಧರ್ಮ ವಿದ್ದರೆ ದೈವತ್ವ ಬೆಳೆಯುವುದೆ?
ಸರಳವಾಗಿದ್ದ ತತ್ವವನ್ನು ಕಷ್ಟಕರವಾಗುವಂತೆ ತಿಳಿಸಿ ತಂತ್ರದ ಕಡೆಗೆ ನಡೆದರೆ ತಂತ್ರ ಇಸ್ಲಾಂ ರ ಕೊಡುಗೆ ಯಂತ್ರ ಮುಸ್ಲಿಂ ರ ಮೂಲಕ ಬಂದಿರೋದು.ಹಾಗಾದರೆ ಸ್ವತಂತ್ರ ರು ಯಾರು? ಹಿಂದೂಗಳ‌ಮಂತ್ರಶಕ್ತಿಯೇ ತಂತ್ರ ಯಂತ್ರಗಳ ಸೃಷ್ಟಿ ಗೆ ಕಾರಣವಾದಾಗ ಮೂಲವನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳಿದಷ್ಟೂ ತಂತ್ರ ಯಂತ್ರವೂ ಅದೇ ದಾರಿಹಿಡಿದು ಮನುಕುಲವೇ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೂಪಮಂಡೂಕದಂತಿರುವ ಅನೇಕರಿಗೆ ಹೊರಗಿನ ಹಣ ಸುಲಭವಾಗಿ ಒಳಗೆ ಸೇರುವಾಗ ಹೊರಗಿನ ಅಧರ್ಮ ಅಸತ್ಯ ಅನ್ಯಾಯ  ಕಾಣೋದಿಲ್ಲ ಅದನ್ನು ತಡೆಯಲಾಗದು.
ತಾವೂ ಪಾಲುದಾರರಾದಾಗಲೇ ಬೇಲಿಯೇ ಎದ್ದು ಹೊಲಮೇಯೋದು. ಹೀಗಾಗಿ ಇಂದು ಎಷ್ಟೋ ಜ್ಞಾನಿಗಳ ಜ್ಞಾನಯೋಗ,ಭಕ್ತಿಯೋಗ ಕರ್ಮ ಯೋಗ ಹಿಂದುಳಿದು ಭೌತವಿಜ್ಞಾನ ಮುಗಿಲುಮುಟ್ಟಿ ಆಳುತ್ತಿದೆ.ಇದನ್ನು ‌ಪ್ರಗತಿ ಎಂದರೆ ಅಧ್ಯಾತ್ಮ ದ ಪ್ರಕಾರ ಇದೇ ಅಧೋಗತಿಗೆ ಕಾರಣ.
ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಚೆನ್ನಾಗಿರುತ್ತದೆ.ಸೃಷ್ಟಿ ಮಾಡಲಾಗದವರು ಲಯ  ಮಾಡುವ  ಅಧಿಕಾರವಿದೆಯೆ?
ಎಲ್ಲಾ ಒಂದೇ ಎನ್ನುವವರಲ್ಲಿ ಭಿನ್ನಾಭಿಪ್ರಾಯ ದ್ವೇಷ ಇರುವುದೆ? ಇದೆ  ಎಂದರೆ  ತಪ್ಪು ನಡೆದಿದೆ ಎಂದರ್ಥ.
ಕಾಲಕ್ಕೆ ತಕ್ಕಂತೆ ಕುಣಿಯಬೇಕೆಂದಿಲ್ಲ.ನಡೆಯಬೇಕು ಎಂದರೂ ಸತ್ಯ  ಧರ್ಮ ಕ್ಕೆಚ್ಯುತಿ ಆದರೆ  ಪರಮಾತ್ಮನಲ್ಲಿ ಕ್ಷಮೆಯಿಲ್ಲ. ತಿಳಿಯದೇ ನಡೆದ ತಪ್ಪಿಗೆ ಕ್ಷಮೆಯಿರಬಹುದಷ್ಡೆ.
ಸೂಕ್ಷ್ಮ ವಾಗಿರುವ ಈ ಅಧ್ಯಾತ್ಮ ವಿಜ್ಞಾನವನ್ನು  ಹೊರಗಿನ ಜಗತ್ತು ಒಪ್ಪದಿದ್ದರೂ ಅದನ್ನು ಬಿಟ್ಟು ಜಗತ್ತಿಲ್ಲ.ಅದರ ಒಂದು ಸಣ್ಣ ಕಿಡಿ ನಮ್ಮೊಳಗೇ ಅಡಗಿರುವಾಗ ಅದರೆಡೆಗೆ ಹೋಗೋದೇ ಜೀವನದ ಮುಖ್ಯಗುರಿ ಎನ್ನುವರು ಮಹಾತ್ಮರು.ಎಲ್ಲಿರುವರು ಮಹಾತ್ಮರು? ರಾಜಕೀಯದಲ್ಲೋ? ರಾಜಯೋಗದಲ್ಲೋ?
ರಾಜಯೋಗದ ಶಿಕ್ಷಣ ಪ್ರಜೆಗಳಿಗೆ ಸಿಕ್ಕಿದ್ದರೆ ರಾಜಕೀಯ ಇಷ್ಟು ಹದಗೆಡುತ್ತಿರಲಿಲ್ಲ. ತನ್ನ ತಾನರಿತು ಪರಮಾತ್ಮನೆಡೆಗೆ ಸಾಗುವುದೇ ರಾಜಯೋಗಿಗಳ ಲಕ್ಷಣ. ಆದರಿದು ಸುಲಭವಿರದ ಕಾರಣ ಪ್ರಚಾರಕ್ಕಷ್ಟೆ ಸೀಮಿತವಾಗಿ ರಾಜಕೀಯತೆ ಬೆಳೆಯಿತು. ಈಗಲೂ ಇದರ ಚರ್ಚೆ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಅರಿವು ಮೂಡಬಹುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇಶದ ಆಸ್ತಿ.ಅವರಲ್ಲಿ ಜ್ಞಾನವಿದ್ದರೆ ದೇಶದ ಪ್ರಗತಿ.ಅಜ್ಞಾನವಿದ್ದರೆ ಅಧೋಗತಿ.
ಮೂಲಸತ್ಯ ಧರ್ಮ ಬಿಟ್ಟು  ನಡೆದವರಿಗೆ ವಿದೇಶವೇ ಗತಿಕಾಣಿಸುತ್ತದೆ. ಅಲ್ಲಿಯೂ ಉತ್ತಮ ಜ್ಞಾನದ ಶಿಕ್ಷಣವಿದ್ದರೆ ಸರಿಯಾಗಿರುತ್ತದೆ  ಮಾನವನ  ಮನಸ್ಥಿತಿ.
 ರಾಜಯೋಗದ ಮಹಾತ್ಮರ ಸರಳತೆಯಿಂದಅಧ್ಯಾತ್ಮ ಪ್ರಗತಿಯಾಗಿದ್ದ ಭಾರತವನ್ನು  ರಾಜಕೀಯದಿಂದ ಸ್ಮಾರ್ಟ್ ಮಾಡಲು ಹೋದರೆ  ಅಧೋಗತಿ.

ಇನ್ನೆಷ್ಟು ದಿನ‌ಈ ಅಜ್ಞಾನ?

ಇನ್ನಷ್ಟು ದಿನ ಈ ಅಜ್ಞಾನ?
ಇಡೀ ವಿಶ್ವವ್ಯಾಪಿಸಿರುವ ಮೂರೂ ಮತಗಳು ಭಾರತದಲ್ಲಿ ಹೆಚ್ಚು ಹೋರಾಡುತ್ತವೆಂದರೆ ಭಾರತೀಯರಿಗೇ ತಮ್ಮ ಒಳಗಿರುವ ಧರ್ಮ ಕರ್ಮದ ಅರಿವಿಲ್ಲದೆ ಪರರಿಗೆ ಮಣೆ ಹಾಕಿಕೊಂಡು ತಲೆಬಾಗಿರೋದಷ್ಟೆ ಕಾರಣ.ಹಿಂದೂಗಳ ಈ ಬಾಗುವಿಕೆಗೆ ಕಾರಣ ವ್ಯವಹಾರ. ಹಣ ಬೇಕು ಜನ ಬೇಡ ಎಂದರೆ ಹೇಗೆ? ನಮ್ಮವರನ್ನೇ ದ್ವೇಷ ಮಾಡುತ್ತಾ ವಿದೇಶಿ ವ್ಯಾಮೋಹದಲ್ಲಿ ಪೋಷಕರೆ ಮಕ್ಕಳನ್ನು ದೂರ ಓಡಿಸಿಕೊಂಡು ಅನಾಥಾಶ್ರಮ ವೃದ್ದಾಶ್ರಮ ಸೇರಿದರೆ ತಪ್ಪು ಯಾರದ್ದು? ರಾಜಕೀಯ ದ್ವೇಷದಿಂದ ಯುದ್ದಗಳಾಗಿವೆ. ಇದಕ್ಕೆ ಪರಿಹಾರ ಜ್ಞಾನದಿಂದ ಕಂಡುಕೊಳ್ಳಲು ಆತ್ಮಾವಲೋಕನ ಬೇಕಷ್ಟೆ. ಬೇರೆಯವರಿಗೆ ಉಪದೇಶ ಕೊಡೋರಿಗೆ ತನ್ನ ಸಂಸಾರದ ಸಮಸ್ಯೆಗೇ ಪರಿಹಾರವಿರದು. ಸಂನ್ಯಾಸಿಗಳು ಸಂಸಾರಿಗಳ ಸಮಸ್ಯೆಗೆ ಪರಿಹಾರ ಕೊಡಬಹುದೆ? ಅನುಭವವಿಲ್ಲದ  ಪ್ರವಚನದಲ್ಲಿ  ಎಷ್ಟೋ ಮಂದಿ ದಾರಿತಪ್ಪಿ ಮನೆಯಿಂದ ಹೊರಬಂದಿರುವಾಗ ಅವರನ್ನು ಹೊರಗಿನವರೆ ಆಳೋದಲ್ಲವೆ?ಎಲ್ಲಾ ಕಾಲದ ಪ್ರಭಾವವೋ ಅಥವಾ ಕಲಿಕೆಯ ಪ್ರಭಾವವೋ.ಕಾಲ ನಿಲ್ಲದು ಕಲಿಕೆ ನಿಲ್ಲಬಹುದು. ಕಲಿಯುವುದನ್ನು ಸರಿಯಾಗಿ ಕಲಿತಾಗಲೇ ಕಾಲ ಬದಲಾಗೋದು. ಅದಕ್ಕೆ ಮಹಾತ್ಮರುಗಳು ತಿಳಿಸಿರೋದು ಎಲ್ಲಾ ಸತ್ಯ ನಿನ್ನೊಳಗೆ ಅಡಗಿರುವಾಗ ನಿನ್ನ ನೀ ಅರಿತು ನಡೆ ಎಂದು.ಎಲ್ಲಾ ರಾಜಕೀಯಕ್ಕೆ ಮುಖಮಾಡಿದರೆ ಅಸತ್ಯವೇ ಬೆಳೆಯೋದು.ಸತ್ತ ಮೇಲೆ ಸತ್ಯ ಕಾಣುವುದೆ? ಜೀವವಿರೋವಾಗಲೇ ಆತ್ಮದರ್ಶನ ಮಾಡಿಕೊಂಡವರೆ ಮಹಾತ್ಮರಾಗಿರೋದು.ಅವರಲ್ಲಿ ದ್ವಂದ್ವವಿರಲಿಲ್ಲ.
ದ್ವೇಷವಿರಲಿಲ್ಲ ರಾಜಕೀಯವಂತೂ ದೂರದ ಮಾತಾಗಿತ್ತು.ಸಮಾಜದ ಮಧ್ಯೆ ಇದ್ದು ಯೋಗದೃಷ್ಟಿಯಿಂದ ಸತ್ಯವರಿತು ತಮ್ಮ ಆತ್ಮಸಂಶೋಧನೆಯಿಂದ  ಲೋಕಕಲ್ಯಾಣಕ್ಕಾಗಿ  ಸಮಾಜದ ಲೋಪದೋಷಗಳನ್ನು ಹೊರಹಾಕಿ ಜನರನ್ನು ಎಚ್ಚರಿಸಿದವರನ್ನು ಅಂದಿನ ಸಮಾಜ ತಿರಸ್ಕಾರದಿಂದ ಕಂಡಿತ್ತು ಅಂದರೆ ಮಹಾತ್ಮರುಗಳ ನಡೆ ನುಡಿ ನೇರವಾಗಿರುವುದರಿಂದ  ಅದನ್ನು ಅರ್ಥ ಮಾಡಿಕೊಳ್ಳಲು ಜನರಲ್ಲಿ ಸತ್ಯಜ್ಞಾನವಿರಬೇಕಷ್ಟೆ. ಈಗ ಅದನ್ನೇ ಪ್ರಚಾರ ಮಾಡುವ ಮಧ್ಯವರ್ತಿಗಳು ಬೆಳೆದಿರುವರು ಆದರೆ ಅವರಂತೆ ನಡೆಯಲಾಗದ ಕಾಲದಲ್ಲಿ  ಜನರಿದ್ದಾರೆ ಕಾರಣ ಶಿಕ್ಷಣದಲ್ಲಿಯೇ ಮಹಾತ್ಮರುಗಳ ಸತ್ಯವನ್ನು ತಿರುಚಲಾಗಿದೆ. ಇದನ್ನು  ಎಷ್ಟೋ ವರ್ಷಗಳಿಂದಲೂ ಮಕ್ಕಳ ತಲೆಗೆ ತುಂಬುತ್ತಿದ್ದರೂ ವಿರೋಧಿಸದವರು ಈಗ  ಎಚ್ಚರವಾಗಿ ಹೋರಾಟ ಹೊರಗೆ ನಡೆಸಿದರೆ ಒಳಗೇ ಹೋರಾಟ ನಡೆಸುವಷ್ಟು ಜ್ಞಾನವಿದ್ದರೆ ಉತ್ತಮ ಫಲ. ಒಟ್ಟಾಗಿ ಮಾಡೋರು ಆಡೋದಿಲ್ಲ.ಆಡಿದವರು ಮಾಡಲಿಲ್ಲ.
ನಡೆದಿದ್ದೇ ಬೇರೆ ಎಂದಾಗ ನಡೆಯುವ ದಾರಿ ಸರಿಯಿರಲಿಲ್ಲ.
ದಾರಿ ಬದಲಾಯಿಸಲು ಪೋಷಕರೆ ತಯಾರಿಲ್ಲವೆಂದರೆ ಮಕ್ಕಳ ಗತಿ ಅಧೋಗತಿ.ಕೆಲವರು ಉತ್ತಮ ದಾರಿ ಹಿಡಿದರೂ ಅವರೊಂದಿಗೆ ಹೋಗೋರಿಲ್ಲ ತಡೆಯೋರೆ ಹೆಚ್ಚು. ಅವರ  ಈ ಮಧ್ಯಸ್ಥಿಕೆ ಯೇ ಎಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಹಾಗಾದರೆ  ಪರಿಹಾರ ಹೊರಗಿದೆಯೆ? ಒಳಗಿದೆಯೆ? ಮಹಿಳೆ ಮಕ್ಕಳೆನ್ನದೆ ಹೊರಬಂದು ಹಣಸಂಪಾದಿಸಿದರೂ  ಮುಗಿಯದ ಸಾಲ ತೀರಿಸಲು ಸತ್ಯ ತಿಳಿಯುವುದು ಅಗತ್ಯವಿದೆ.ಅಧ್ಯಾತ್ಮ ಸತ್ಯ ಅಧ್ಯಯನ ಮಾಡಿ ತಿಳಿಯುವುದಕ್ಕಿಂತ  ಅಭ್ಯಾಸ ಮಾಡಿ ಅನುಭವದಿಂದ ತಿಳಿದಾಗಲೇ ಮಹಾತ್ಮರು ಕಾಣಿಸೋದು.
ಆತ್ಮ ಒಳಗಿರುವಾಗ ಕಾಣದ್ದನ್ನು ಕಂಡೆ ಎನ್ನುವ ಹೊರಗಿನವರಲ್ಲಿ ಸತ್ಯವಿದೆಯೆ? ಇದ್ದರೂ ದೇವರನ್ನು  ತೋರಿಸಬಹುದೆ? ತೋರಿಸಿರುವರೆ? ದೈವತ್ವಕ್ಕೆ ತತ್ವಜ್ಞಾನ ಬೇಕು.ತಂತ್ರಜ್ಞಾನದಿಂದ ದೇವರನ್ನು ತೋರಿಸುವ ಪ್ರಯತ್ನ ಮಾಡಿದರೆ ಅತಂತ್ರಸ್ಥಿತಿಗೆ ತಲುಪಬಹುದು. ಸ್ವತಂತ್ರ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಭಾರತೀಯರಿಗೆ ನೀಡಿದರೆ ಸಾಧ್ಯ.ಗುರುತಿಸುವ ಗುರುವಿನ ಅಗತ್ಯವಿದೆ. ಪೋಷಕರು ಎಚ್ಚರವಾಗದಿದ್ದರೆ  ಮಕ್ಕಳು ಪರಕೀಯರ ವಶವಾಗುತ್ತಾರೆ. ಹಣ ಸಿಕ್ಕರೂ  ನಮ್ಮಜ್ಞಾನವಿರದು. ನಮ್ಮ ಜ್ಞಾನವೇ ಹಿಂದುಳಿದಾಗಲೇ ಹಿಂದೂ ಧರ್ಮ ಅರ್ಥ ವಾಗದೆ ಹಿಂದುಳಿದವರ ಸಂಖ್ಯೆ ಬೆಳೆಯೋದು.  ಜನಸಂಖ್ಯೆಯಿಂದ ಭೂಭಾರ ಹೆಚ್ಚಾಗಿ ಭೂಕಂಪಗಳಾಗೋದು. ಪ್ರಕೃತಿ ವಿಕೋಪಕ್ಕೆ  ಸರ್ಕಾರ ಕಾರಣವಾಗುವುದೆ? ಇಲ್ಲಿ ವಿಕೃತ ಮನಸ್ಸಿನವರಿಗೆ ನೀಡುವ ಸಹಕಾರವೇ ಎಲ್ಲಾ ಸಮಸ್ಯೆಗೆ ಕಾರಣವಾಗುತ್ತಿದೆ. ಪ್ರಕೃತಿಗೆ ತಲೆಬಾಗಿ ನಡೆಯೋದಕ್ಕೆ ಮಹಾತ್ಮರಿಗೆ ಸಾಧ್ಯ. ಜನನ ಮರಣದ ನಡುವಿನ ಎರಡು ದಿನದ ಜೀವನಕ್ಕೆ  ಇಷ್ಟು ಹೋರಾಟ ಹಾರಾಟ ಮಾರಾಟ ಬೇಕೆ?  ಮಾನವನಿಗೆ ಸಾಮಾನ್ಯಜ್ಞಾನದ ಕೊರತೆಯಿದೆ.
ಶಿಕ್ಷಣದಲ್ಲಿಯೇ ಮಕ್ಕಳ ಸಾಮಾನ್ಯ ಜ್ಞಾನವನ್ನು ತಿರಸ್ಕರಿಸಲಾಗಿದೆ ಏನಂತೀರಾ? ಯಾರು ಶಾಶ್ವತರು?
ಮೊದಲು ಮಾನವರಾಗಲು ಸಾಮಾನ್ಯರಲ್ಲಿ ಸಾಮಾನ್ಯರಂತಿರಬೇಕಿದೆ ಸಾಧ್ಯವೆ? ನಂತರ ಮಹಾತ್ಮರನ್ನು ಕಾಣಬಹುದು. ಈಗಲೂ ನಮ್ಮ ಸುತ್ತಮುತ್ತ ಮಹಾತ್ಮರಿದ್ದರೂ ನಮ್ಮ ಹೊರದೃಷ್ಟಿಗೆ ಕಾಣುತ್ತಿಲ್ಲವೆಂದರೆ ನಮ್ಮಲ್ಲಿ ದೃಷ್ಟಿ ದೋಷವಿದೆ. ನಾವು ಬದಲಾಗಬೇಕಷ್ಟೆ. ಅಸುರರೊಳಗೇ ಸಿಲುಕಿರುವ ಸುರರ ಪರಿಚಯವಾಗಬೇಕಿದೆ

Wednesday, March 13, 2024

ಸತ್ಯಕ್ಕೆ ಸಾವಿಲ್ಲ,ಸತ್ಯ ಯಾವುದು ಎಲ್ಲಿದೆ?

ಸತ್ಯ ತಿಳಿದು ತಿಳಿಸುವವರಿಗೆ ವೈರಿಗಳು ಹೆಚ್ಚು  ಹಾಗೆ  ಅಸತ್ಯದಿಂದ ಆಳುವವರಿಗೆ ಮಿತ್ರರು ಹೆಚ್ಚು. ಸತ್ಯ   ಕಹಿ ಅಸತ್ಯ  ಸಿಹಿ ಎನಿಸಿದರೆ ಅದೊಂದು ಅಜ್ಞಾನವಷ್ಟೆ ಅತಿಯಾಗಸಿಹಿಯೇ ರೋಗಕ್ಕೆ ಕಾರಣ ರೋಗ ಬಂದಾಗ ಹಂಚಿಕೊಳ್ಳಲು ಯಾರೂ ಹತ್ತಿರವಿರೋದಿಲ್ಲ ಎನ್ನುವುದೂ ಸತ್ಯ. ಆರೋಗ್ಯಕ್ಕೆ ಸತ್ಯಜ್ಞಾನ ಅನಾರೋಗ್ಯಕ್ಕೆ ಮಿಥ್ಯಜ್ಞಾನ.
ಮಾನವನೊಳಗೇ ಅಡಗಿರುವ ಈ ರೋಗಾರೋಗಗಳಿಗೆ ಜ್ಞಾನವೇ ಕಾರಣ.ಇದು ಸತ್ಯದೆಡೆಗೆ ನಡೆದರೆ  ಉತ್ತಮ ಆರೋಗ್ಯವಂತ ಜೀವನ. 
ಸನಾತನ ಕಾಲದಲ್ಲಿದ್ದ  ಸಾತ್ವಿಕ ಶಿಕ್ಷಣ ಇಂದಿಲ್ಲ ಅಂದಿನ ರಾಜಪ್ರಭುತ್ವವೂ ಇಲ್ಲ ಆದರೆ ಅಂದಿನಿಂದ ಇಂದಿನವರೆಗೂ ಒಳಗಿರುವ ಆತ್ಮ ಒಂದೇ ಎನ್ನುವಾಗ ಸತ್ಯ ಒಳಗೇ ಅಡಗಿದ್ದರೂ  ಗುರುತಿಸುವ ಶಿಕ್ಷಣವಿಲ್ಲದೆ ಗುರುವಿಲ್ಲದೆ ಹೊರಗಿನ ಮಿಥ್ಯದಲ್ಲಿ ಮಿಂದು  ಅಸತ್ಯ ಅನ್ಯಾಯ ಅಧರ್ಮಕ್ಕೆ ಸಹಕಾರ ಕೊಡುತ್ತಾ ತನಗೆ ತಾನೇ ಮೋಸಹೋಗಿದ್ದರೂ ಯಾರೋ ಮೋಸ ಮಾಡಿದ್ದಾರೆಂದು ಹೋರಾಟ ಹಾರಾಟ ಮಾರಾಟದಲ್ಲಿ  ಮಾನವರು ಜೀವನ ನಡೆಸಿರೋದು ಸತ್ಯವಲ್ಲವೆ? ಇದನ್ನು ವಿರೋಧಿಸಿ ದ್ವೇಷ ಮಾಡಿದರೆ  ಇನ್ನಷ್ಟು ಅಸತ್ಯವೇ ಹತ್ತಿರಬರೋದು.
ಶತ್ರುಗಳನ್ನು ಪ್ರೀತಿಸುವ ಶಕ್ತಿ ಹಿಂದಿನ ಸನಾತನಿಗಳ ಆತ್ಮಶಕ್ತಿಯಾಗಿತ್ತು. ಆದರೆ  ಇಂದು ಕಣ್ಣಿಗೆ ಕಾಣುವ ಹಿಂದಿನ ಗುರು ಹಿರಿಯರನ್ನೇ ದ್ವೇಷ ಮಾಡುವಷ್ಟು ವಿಜ್ಞಾನಬೆಳೆದು ನಿಂತಿರುವಾಗ  ಇದರಿಂದ ಯಾವ ಸಾಧನೆ ಮಾಡಿದಂತಾಯಿತು?
ಕೆಲವರು  ಸತ್ಯ ಕ್ಕೆ ಬೆಲೆಕೊಡದೆ ತಾನೇ ದೇವರು ಗುರು ರಾಜ ಎನ್ನುವ ಹಾಗೆ ಜನರನ್ನು  ಹಣದಿಂದ ಅಧಿಕಾರ ಸ್ಥಾನದಿಂದ  ದಾರಿತಪ್ಪಿಸಿದವರಿದ್ದರೂ  ಹಲವರು  ಉತ್ತಮವಾದ ಜೀವನ ಮಾರ್ಗ ದರ್ಶಕರಾಗಿರುವರು. ಆದರೆ ಇದೀಗ ಅವರನ್ನೂ ರಾಜಕೀಯಕ್ಕೆ ಎಳೆದುಕೊಂಡು  ಜನರನ್ನು ಆಳುತ್ತಿರೋದು ದುರಂತವಷ್ಟೆ.
ಸ್ವಾವಲಂಬನೆ ಸ್ವರ್ಗ ಪರಾವಲಂಬನೆನರಕ ಎಂದರು. ಪ್ರಜಾಪ್ರಭುತ್ವದಲ್ಲಿ  ಸ್ವಾವಲಂಬಿ ಪ್ರಜೆಗಳು ಯಾರು?ಸ್ವತಂತ್ರ ಜ್ಞಾನದಿಂದ ಸತ್ಯ ಧರ್ಮವನರಿತು ಜನರನ್ನು ನಡೆಸುವ ಮಹಾತ್ಮರು ಯೋಗಿಗಳು ಸಂನ್ಯಾಸಿಗಳು ಶಿಕ್ಷಕರು ಸೈನಿಕರು ರೈತರು ಬ್ರಾಹ್ಮಣರು ಎಂದರೆ ಸತ್ಯವಾಗಿರುವುದೆ?
ದೇಶದ ಮೂಲ ಶಿಕ್ಷಣವೇ ಪರಕೀಯರ ವಶದಲ್ಲಿ ಇರುವಾಗ ಸತ್ಯಜ್ಞಾನದ ಆಳ ಅಗಲ ಅರ್ಥ ವಾಗದು. ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಸಂಘ ಸಂಸ್ಥೆ ಮಠ ಮಂದಿರ ಇನ್ನಿತರ ಸೇವಾಕೇಂದ್ರಗಳಾದ ಅನಾಥಾಶ್ರಮ ಅಬಲಾಶ್ರಮ ಸೇವಾಶ್ರಮ, ಬಿಕ್ಷುಕಾಶ್ರಮ... ಯಾರ ಹಣದಿಂದ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಅದು ಶ್ರೀಮಂತ ವರ್ಗ ಪರಧರ್ಮ ,ಪರದೇಶದವರ ಹಣವೇ ಆಗಿರೋದು ಸತ್ಯ. ಹೀಗಿರುವಾಗ ನಾವು ಯಾರನ್ನು ದ್ವೇಷ ಮಾಡಿ ದೇಶ ನಡೆಸಿರೋದು?
ದೇಶಸೇವೆ ಮಾಡೋದಕ್ಕೆ ದೇಶಭಕ್ತಿ ಇರಬೇಕು. ಭಕ್ತಿ ಆಂತರಿಕ ಶುದ್ದಿಯಿಂದ ಬೆಳೆದಿರಬೇಕು. ಇದನ್ನು ಭಕ್ತಿ ಯೋಗ ಎಂದಿದ್ದಾರೆ.ದೇವರಿಗೂ ಯೋಗಿಗಳೇ ಶ್ರೇಷ್ಟವಾಗಿರುವಾಗ ಭೋಗದ ಭ್ರಷ್ಟಾಚಾರದ  ಹೊರಗಿನ  ಹಣಬಲ ಜನಬಲದಿಂದ  ಭೌತವಿಜ್ಞಾನ ಬೆಳೆದಿದೆ ಅಧ್ಯಾತ್ಮ ವಿಜ್ಞಾನವಲ್ಲ ಎನ್ನುವ ಸತ್ಯ ಅರ್ಥ ವಾದರೆ  ಪ್ರತಿಯೊಬ್ಬರೊಳಗೂ ಅಡಗಿರುವ ಆತ್ಮಸಾಕ್ಷಿ ಎಚ್ಚರವಾಗಿ
ತನ್ನ  ಆತ್ಮತೃಪ್ತಿ ಗೆ  ಸತ್ಯವೇ ಬಂಡವಾಳ ಧರ್ಮ ತನ್ನ ಜೀವನಕ್ಕೆ ಆಧಾರವಾಗಿರುತ್ತದೆ. ಜನನ ಮರಣವನ್ನು ಯಾರೂ ಹೇಳಿಕೇಳಿ ಪಡೆಯೋದಿಲ್ಲ.ಯಾವ ದೇಶ ಸ್ಥಳ ಧರ್ಮ  ,ಜಾತಿ, ಕುಟುಂಬ  ವರ್ಣ ದಡಿ ಜನನವಾಗಿದೆಯೋ ಅದರ ಬಗ್ಗೆ  ಸರಿಯಾದ ಜ್ಞಾನವಿದ್ದರೆ ಅಲ್ಲಿಯೇ ಸತ್ಯಧರ್ಮ ಉಳಿಸಿಬೆಳೆಸುವ ಯೋಗಿಗಳಾಗಬಹುದು. ಕಾರಣ ಪರಮಾತ್ಮನಿಗೆ  ಯಾವುದೇ ಬೇಧಭಾವವಿಲ್ಲ.ಹಿಂದಿನ ಜನ್ಮ ಋಣ ಕರ್ಮಕ್ಕೆ ತಕ್ಕಂತೆ ಪುನರ್ಜನ್ಮ ಪಡೆದಾಗ ಅದರೊಳಗೆ ಇದ್ದು ಅಧ್ಯಾತ್ಮ ಸಾಧನೆ ಮಾಡಿದವರು ನಮ್ಮ ಮಹಾತ್ಮರು.
ಅವರು ಇದ್ದಾಗ ಹೀನಾಯವಾಗಿ ಕಂಡವರೆ ಹೋದ ಮೇಲೆ ದೇವರೆನ್ನುವಾಗ  ನಾನಿದ್ದಾಗ ಸತ್ಯ ಕಾಣೋದಿಲ್ಲ ಹೋದ ಮೇಲೆ ಸತ್ಯ ಕಾಣುವುದೆ? ಇದರಲ್ಲಿಯೇ ನಾವು ಅಸತ್ಯವಂತರು ಮಧ್ಯವರ್ತಿಗಳಾಗಿ ಹೇಗೆ  ಬೆಳೆದಿದ್ದಾರೆಂದು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಒಟ್ಟಿನಲ್ಲಿ ಹಣವಿದ್ದರೆ ಸತ್ಯ ಗೆಲ್ಲುವುದು ಎನ್ನುವುದೇ ಅಸತ್ಯ.ಹಣವಿದ್ದವರಲ್ಲಿ ಸತ್ಯಕ್ಕೆ ಸ್ಥಾನಮಾನ ಇರೋದಿಲ್ಲ.ಭ್ರಷ್ಟರಲ್ಲಿ ಹಣವಿದೆ ಸತ್ಯವಿದೆಯೆ? ಆದರೆ ಜನಬಲ ಅಧಿಕಾರಬಲವಿದೆ ಹೀಗಾಗಿ ಅವರು ಗೆಲ್ಲುವರು.ಇದರಿಂದ ನಷ್ಟಯಾರಿಗೆ?
ಹಾಗಂತ ರಾಜಕೀಯಕ್ಕೆ ಇಳಿದಾಗ ಇದು ಸಹಜ.ಅದರಲ್ಲೂ ಪ್ರಜಾಪ್ರಭುತ್ವದ  ಇಂದಿನ ಪ್ರಜೆಗಳ ಬೇಡಿಕೆ ಈಡೇರಿಸಲು ಇದು ಅನಿವಾರ್ಯ ವಾಗಿದೆ. ಪ್ರಜೆಗಳಿಗೆ ಸತ್ಯದ ಶಿಕ್ಷಣ ನೀಡದೆ ಆಳುವುದರಿಂದ ದೇಶಕ್ಕೆ ನಷ್ಟ. ಧರ್ಮ ದ ಹೆಸರಿನಲ್ಲಿ ಅಸತ್ಯ ಹೆಚ್ಚಾದರೆ  ಅಜ್ಞಾನವಾಗುತ್ತದೆ. ಹೀಗಾಗಿ ಹಣವನ್ನು ಸದ್ಬಳಕೆ ಮಾಡಿಕೊಂಡು  ಜನರಿಗೆ ಸನ್ಮಾರ್ಗ ತೋರಿಸುವ  ಸತ್ಯಜ್ಞಾನದ ಶಿಕ್ಷಣ ಕೊಡಬೇಕಾಗಿದ್ದು ಧಾರ್ಮಿಕ ಗುರುಹಿರಿಯರ  ಧರ್ಮ ಕಾರ್ಯ ವಾಗಿತ್ತು.
ಎಷ್ಟೋ ವರ್ಷ ಗಳಿಂದಲೂ ಆಳಿದ ಬ್ರಿಟಿಷ್ ರನ್ನು ದೇಶದಿಂದ ಓಡಿಸಿದ ಮಹಾತ್ಮರನ್ನೇ ದ್ವೇಷ ಮಾಡುವಷ್ಟು ಬೆಳೆದಿರುವ ಅಜ್ಞಾನದಿಂದ ದೇಶದ ಧರ್ಮ ಉಳಿಸಬಹುದೆ?
ಹೋರಾಟ ಹಾರಾಟ ಮಾರಾಟವೆಲ್ಲವೂ ಹೊರಗಿನ‌ಜಗತ್ತಿಗೆ ಮಾರಕವಾದಾಗ  ಒಳಗಿನ ಜಗತ್ತಿನ ಬಗ್ಗೆ ತಿಳಿಯುವ ಪ್ರಯತ್ನವಾಗುತ್ತದೆ.ಯಾರನ್ನು ಭಯೋತ್ಪಾದಕರು ಭ್ರಷ್ಟರು ದುಷ್ಟರು ಎನ್ನುವೆವೋ  ಅವರೊಳಗೇ ಅಡಗಿರುವ ಚೇತನಾಶಕ್ತಿಯೂ ಪರಮಾತ್ಮನ ಒಂದು ಕಿಡಿಯಾಗಿದೆ.ಆದರೆ  ಅದು ಆ ಮಾನವನಿಗೇ ಕಾಣದಾಗಿರೋದಕ್ಕೆ ಅವನಿಗೆ ಕೊಟ್ಟ ಶಿಕ್ಷಣವೇ ಕಾರಣ. ಅಂದರೆ ದುಷ್ಟರಿಗೆ  ಉತ್ತಮ ಜ್ಞಾನದ ಶಿಕ್ಷಣದ ಕೊರತೆಯಿದೆ. ಸಂಸ್ಕಾರ ಸಂಸ್ಕೃತಿ ಯ ವಿಚಾರದಲ್ಲಿ ಸಾಕಷ್ಟು ಗೊಂದಲ ಭಿನ್ನಾಭಿಪ್ರಾಯ ಹೆಚ್ಚಾಗಿ ಅದೇ ದ್ವೇಷದ ವಿಷಬೀಜ ಬಿತ್ತಿ ಬೆಳೆಸಿರುವಾಗ ಅದನ್ನು ಇಂದಿನ ಶಿಕ್ಷಣದಲ್ಲಿಯೇ ಸಂಶೋಧಿಸಿಕೊಳ್ಳಲು ಉತ್ತಮ ಗುರು ಹಿರಿಯರು ಶಿಕ್ಷಕರಾಗಬೇಕಲ್ಲವೆ?
ಹೆಚ್ಚು ಅಂಕ ಪಡೆದವರು ಬುದ್ದಿವಂತರು. ಕಡಿಮೆ ಅಂಕ ಪಡೆದವರು ಜ್ಞಾನಿಗಳು ಎಂದರೆ ತಪ್ಪೆ?
ನನ್ನ ಅನುಭವದಿಂದ ತಿಳಿದ ಸತ್ಯ ಇದಾಗಿದೆ. ನಾನು ಸಣ್ಣ ವಯಸ್ಸಿನಿಂದಲೇ  ಆತ್ಮವಲೋಕನದಲ್ಲಿದ್ದೆ ಎನ್ನುವ ವಿಚಾರ ನನಗೆ ಅರಿವಿಗೆ ಬಂದದ್ದು 34 ನೇ ವಯಸ್ಸಿನಲ್ಲಿ. ಅಂದರೆ ನಾನು ನಾನಾಗಿರಲಿಲ್ಲ ಎಂದರ್ಥ. ನನ್ನಲ್ಲಿ ಏಳುತ್ತಿದ್ದ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದಷ್ಟೂ ಗೊಂದಲದ ಜೊತೆಗೆ ಬೇಸರವಾಗುತ್ತಿತ್ತು.ಕೊನೆಗೆ ಉತ್ತರ ಒಳಗೇ ಸಿಕ್ಕಿದಾಗಲೇ ಗೊತ್ತಾಗಿದ್ದು ಸತ್ಯ ಹೊರಗಿಲ್ಲ ಒಳಗೇ ಇತ್ತು ಎಂದು.ಇದನ್ನು ಹೊರಗಿನ ಎಷ್ಟೋ ಗುರುಹಿರಿಯರಿಗೆ ತಿಳಿಸುವ ಪ್ರಯತ್ನಕ್ಕೆ ತೊಡಗಿಸಿಕೊಂಡಾಗಲೇ ವೈರಿಗಳು ಕಾಣಿಸಿದ್ದು. ಸತ್ಯ ತಿಳಿಸಬಾರದು, ಈ ಕಾಲಕ್ಕೆ ನಡೆಯೋದಿಲ್ಲ, ನಿಮಗೇನು ಅಧಿಕಾರವಿದೆ? ನೀವ್ಯಾರು ಹೇಳೋದಕ್ಕೆ?ನಿಮ್ಮಲ್ಲಿ ಹಣವಿದೆಯೆ? ನಿಮಗ್ಯಾರು ಸಹಾಯ ಮಾಡುವರು? ನಿಮ್ಮ ಸಂಸಾರ ನೀವು ನೋಡಿಕೊಂಡು ಸುಮ್ಮನಿರಿ.. ಹೀಗೇ ಉತ್ತರಗಳು ಬಂದಾಗ  ಇದೂ ಕೂಡ ಭಗವಂತನ ನುಡಿಗಳೇ ಎನ್ನುವ ಸಮಾಧಾನವಾದರೂ  ಮುಗ್ದ ಜನರನ್ನು ಆಳುವಾಗ ಅವರೊಳಗೇ ಇರುವ ಜ್ಞಾನಕ್ಕೆ ಪೂರಕವಾದ ಶಿಕ್ಷಣಯಾಕೆ ಕೊಡಬಾರದು ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಸಿಗಲಿಲ್ಲ.
ಇದಕ್ಕೆ ಉತ್ತರ ಅದೂ ಕೂಡ  ಅಜ್ಞಾನವೇ ಆಗಿತ್ತು. ಧರ್ಮ ಯಾವತ್ತೂ ಸ್ವತಂತ್ರ ವಾದಂತೆ ಸತ್ಯವೂ ಸ್ವತಂತ್ರ ವಾಗಿರುತ್ತದೆ ಆದರೆ ಅದು ಒಳಗೇ ಅಡಗಿರುವುದರಿಂದ  ಅದನ್ನು ಸರಿಯಾದ  ಗುರುಮೂಲಕ ಬೆಳೆಸುವ ಶಿಕ್ಷಣದ ಅಗತ್ಯ ಮನುಕುಲಕ್ಕೆ ಇದೆ. ಓದಿ ತಿಳಿದರೆ ವಿದ್ಯೆ ಮಾಡಿ ಕಲಿತರೆ ಜ್ಞಾನ. ನಡೆ ನುಡಿ,ನಲಿಕಲಿ, ಜ್ಞಾನವಿಜ್ಞಾನವಾದಾಗ  ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಇದಕ್ಕೆ ಯೋಗ ಬೇಕು.ಯಾರಿಗೆ ಯಾವಾಗ ಈ ಶಕ್ತಿ ಜಾಗೃತವಾಗುವುದೋ ತಿಳಿಯಲಾಗದು.ಇದಕ್ಕೆ ಸಾಕ್ಷಿ ನಮ್ಮ ಹಿಂದಿನ ಮಹಾತ್ಮರುಗಳಾಗಿರುವರು.ವೈಜ್ಞಾನಿಕ ಪ್ರಗತಿ ಕಣ್ಣಿಗೆ ಕಾಣಬಹುದು ಅಧ್ಯಾತ್ಮಿಕ ಪ್ರಗತಿ ಅನುಭವಕ್ಕೆ ಬಂದ ಮೇಲೂ  ಸಂಪೂರ್ಣ ಅರ್ಥ ವಾಗೋದಕ್ಕೆ ಸ್ವತಂತ್ರ ಜ್ಞಾನವಿರಬೇಕು.  ಸ್ವತಂತ್ರ ಭಾರತದ ಪ್ರಜೆಗಳಿಗೆ ಸ್ವತಂತ್ರ ಬುದ್ದಿವಂತಿಕೆ ಇದ್ದರೂ ಜ್ಞಾನದ ಶಿಕ್ಷಣವಿಲ್ಲದೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ  ಎಂದಾಗ ನಮ್ಮ ಕಲಿಕೆಯೇ ಸರಿದಾರಿಗೆ ನಡೆದಿಲ್ಲ.ಭೂಮಿಯ ಋಣ ತೀರಿಸುವ ಬಗ್ಗೆ ಅಧ್ಯಾತ್ಮ ಶಿಕ್ಷಣ ತಿಳಿಸಿದರೆ ಭೂಮಿಯನ್ನು ಆಳೋದಕ್ಕೆ ವಿಜ್ಞಾನ ನಡೆದಿದೆ. 
ಒಂದು ಸತ್ಯ ಅರ್ಥ ಮಾಡಿಕೊಳ್ಳಲು ಅಸಂಖ್ಯಾತ ಅಸತ್ಯದ ಸೃಷ್ಟಿ ಮಾಡಿ ಅಧರ್ಮ ಬೆಳೆದಿದೆ .ಅದಕ್ಕೆ ನಮ್ಮದೇ ಸಹಕಾರ ಸಹಾಯವಿದ್ದಾಗ ಅದರ ಫಲ ಜೀವವೇ ಅನುಭವಿಸೋದು.ಆತ್ಮದುರ್ಭಲ ವಾದಾಗ ಆತ್ಮಹತ್ಯೆ ಹೆಚ್ಚುವುದು. ಹಾಗಾದರೆ ಆತ್ಮಕ್ಕೆ ಸಾವಿದೆಯೆ? ಸತ್ತಿರೋದು ಸತ್ಯವೆ? ಜೀವಕ್ಕೆ ಸಾವಿದೆ ಅಸತ್ಯಕ್ಕೆ ಸಾವಿದೆ. ಪರಮಾತ್ಮನ ಕಡೆಗೆ ನಡೆಯುವ ಸತ್ಯ ಒಂದೇ ಆದರೂ  ಇದಕ್ಕೆ ವಿರುದ್ದ ನಿಲ್ಲುವ ಅಸತ್ಯ  ಲೆಕ್ಕವಿಲ್ಲದಷ್ಟು ಬೆಳೆದಾಗ ಹಿಂದಿರುಗಲು ಕಷ್ಟ. ಹಿಂದೂ ಧರ್ಮ  ಯಾವತ್ತೂ  ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುವಾಗ  ಅಧ್ಯಾತ್ಮಿಕ ಸತ್ಯಕ್ಕೆ ಬೆಲೆಕೊಡಬೇಕು ಭೌತಿಕ ಸತ್ಯಕ್ಕೆ ಕೊಟ್ಟಷ್ಟೂ ಹಿಂದುಳಿಯುವುದು  ಹಿಂದೂಗಳೇ ಆಗಿರುವರು. ಒಟ್ಟಿನಲ್ಲಿ ಹಿಂದೂ  ತತ್ವ ಎಲ್ಲರ ಒಳಗಿದ್ದರೂ ಒಂದಾಗದಿರೋದಕ್ಕೆ ಕಾರಣ ತಂತ್ರದ ರಾಜಕೀಯವಾಗಿದೆ. ಇದು ಯುಗಯುಗದಿಂದಲೂ ಬೆಳೆದುಬಂದಿರುವಾಗ ಕಲಿ ಯುಗದ ಕಲಿಕೆಯಲ್ಲಿ  ಬದಲಾವಣೆ ಅಗತ್ಯವಿದೆ. ಇದರಿಂದಾಗಿ ನಮ್ಮ ಆತ್ಮರಕ್ಷಣೆಯಾಗಬಹುದು. ಎಲ್ಲರಲ್ಲಿಯೂ ಅಡಗಿರುವ ಈ ಶಕ್ತಿಯ ಪ್ರೇರಣೆಯಿಂದ ಜಗತ್ತು ನಡೆದಿದೆ. ಸಂಸಾರ ಸಾಗರ ದಾಟಲು ಬೇಕಾಗಿರುವ  ಸತ್ಯ ಧರ್ಮ ಅವರವರ ಕರ್ಮಕ್ಕೆ ತಕ್ಕಂತೆ ಅರ್ಥ ವಾದರೂ ಯಾರೋ ಹೊರಗಿನವರ ಧರ್ಮ ಕರ್ಮಕ್ಕೆ ಅಂಟಿಕೊಂಡರೆ  ಅಧರ್ಮವೇ ಆಳೋದು. ಇದಕ್ಕೆ ಹೇಳಿರೋದು ಎಲ್ಲಾ ನಿನ್ನೊಳಗೆ ಇದೆ ಹುಡುಕಿಕೊಂಡು ನಡೆ ಎಂದು.ಪೋಷಕರೆ ಮಕ್ಕಳನ್ನು ಹೊರಗೆ ಹುಡುಕುವ ಶಿಕ್ಷಣಕ್ಕೆ ದಾಸರಾಗಿಸಿದರೆ ಅವರು ಒಳಗೆ ಬರಲು ಸಾಧ್ಯವಿಲ್ಲ.
ಮೂಲವರಿತು ರೆಂಬೆಕೊಂಬೆಗಳನ್ನು ಬೆಳೆಸುವ ಶಿಕ್ಷಣವೇ ಹಿಂದಿನ ಭಾರತೀಯ ಶಿಕ್ಷಣವಾಗಿತ್ತು. ದೂರ ಹೋದವರನ್ನು ತಡೆಯದೆ ಹಿಂದೆ ಬರುವವರಿಗೆ ಉತ್ತಮ ದಾರಿ ತೋರಿಸಿ ಸಹಕರಿಸಿದಾಗಲೇ‌ಬದಲಾವಣೆ ಸಾಧ್ಯವಿದೆ. ಆಗೋದೆಲ್ಲಾ ಒಳ್ಳೆಯದಕ್ಕೆ ಆಗಿದ್ದೆಲ್ಲಾ ಒಳ್ಳೆಯದೆ  ಒಳ್ಳೆಯದು ಸತ್ಯವಾಗಿರಬೇಕಷ್ಟೆ. ಅದೇ ಪರಮಸತ್ಯ ಆತ್ಮಜ್ಞಾನದ ಸತ್ಯ,ಮಹಾತ್ಮರ ಸತ್ಯ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ ಆದರೆ  ಕಣ್ಣಿಗೆ ಕಾಣದ ಅಗೋಚರ ಶಕ್ತಿ ಆತ್ಮ ವೇ ದೇವರು.ನಿರಾಕಾರ ಬ್ರಹ್ಮನ ಅರಿವೇ ಬ್ರಹ್ಮಜ್ಞಾನ.ಸೃಷ್ಡಿಯ ರಹಸ್ಯ ಅರ್ಥ ವಾಗೋದಕ್ಕೆಭೂಮಿಯಲ್ಲಿ ಜನ್ಮ ತಾಳಿದ ಮಾನವನೊಳಗೇ ಇರುವ ದೇವಾಸುರರ ಗುಣಗಳಲ್ಲಿ ಹೊರಗೆ ಅಸುರಿ ಶಕ್ತಿ ಬೆಳೆದರೆ ಒಳಗೆ ದೈವೀ ಶಕ್ತಿಯಿರುತ್ತದೆ. ಹೀಗಾಗಿ ದೇವರನ್ನು ಕಾಣೋದಕ್ಕೆ ಹೊರಗೆ ಬರುವ ಅಗತ್ಯವಿಲ್ಲ ಎಂದರು.ಇದಕ್ಕೆ ಸಹಕಾರಿಯಾಗುವ ದ್ಯಾನ ಜಪ ತಪ ದಾನಧರ್ಮ ಕಾರ್ಯ  ಬೆಳೆದವು. ದಾನ ಧರ್ಮದ ವಿಚಾರದಲ್ಲಿ ಹಣವೇ ಮುಖ್ಯವಾಗುತ್ತಾ ಜಪತಪ ದ್ಯಾನ ಹಿಂದುಳಿದವು.  ಯಾರಿಗೆಷ್ಟು ಸಾಧ್ಯವೋ ಅಷ್ಟು ಸತ್ಯಕ್ಕೆ ಬೆಲೆಕೊಟ್ಟರೆ ಧರ್ಮ ವಿರುತ್ತದೆ. ಅಸತ್ಯಕ್ಕೆ ಹಣಸುರಿದರೆ ಅಧರ್ಮ ಬೆಳೆಯುತ್ತದೆ. ಸತ್ಯದಲ್ಲಿ ಮನರಂಜನೆಯಿರದು ಇದೇ ಕಾರಣದಿಂದ ಹೆಚ್ಚು ಜನರಿಗೆ ಸತ್ಯದ ಅರಿವಿಲ್ಲದೆ ಅಸತ್ಯ ಅನ್ಯಾಯ ಅಧರ್ಮದಲ್ಲಿಯೇ ಜೀವನ ಮುಗಿಯುತ್ತಿದೆ. ಎಲ್ಲಿಯವರೆಗೆ ಸತ್ಯಜ್ಞಾನವಿರದೋ ಅಲ್ಲಿಯವರೆಗೆ ಆತ್ಮಕ್ಕೆ ಮುಕ್ತಿ ಸಿಗದು. ಅಸುರರನ್ನೂ ದೇವರೆಂದು ಪೂಜಿಸಿದರೆ  ಬೆಳೆಯೋದು ಯಾರು?
ಅರಿಷಡ್ವರ್ಗ ಅತಿಯಾದರೆ ಗತಿಗೇಡು. ಇತಿಮಿತಿಯಲ್ಲಿದ್ದರೆ  ಉತ್ತಮ ಜೀವನ. ಅಹಂಕಾರ ಸ್ವಾರ್ಥ ವಿಲ್ಲದ ಮಾನವನಿಲ್ಲ.
ಮಹಾತ್ಮರಿದ್ದರು. ನಾವೆಲ್ಲರೂ ಮಾನವರಾಗಿ  ಮಹಾತ್ಮರ ಸತ್ಯದೆಡೆಗೆ ಹೋಗಬೇಕಾದರೆ  ಸತ್ಯವೇ ದೇವರಾಗಬೇಕು.
ಭೂಮಿ ಮೇಲಿರುವ‌ ಮನುಕುಲ ಭೂಮಿಯನ್ನು ಅಸತ್ಯದಲ್ಲಿ ಆಳಿದರೆ ಅಧರ್ಮ ತಾಂಡವವಾಡುತ್ತದಲ್ಲವೆ? ಭ್ರಷ್ಟರ ಹಣದಲ್ಲಿ ಧರ್ಮ ಕಾರ್ಯ ನಡೆಸಿದರೆ ಪರಮಾತ್ಮನ ಸತ್ಯ ಅರ್ಥ ವಾಗುವುದೆ?  ಯಾಕೆ ಹಿಂದಿನ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಅಧ್ಯಾತ್ಮ ಸಾಧನೆ ಮಾಡಿದ್ದರು? ಪರಮಸತ್ಯ ತಿಳಿದು ಪರಮಾತ್ಮನ ದಾಸರಾದರು?  ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಅತಿಯಾದ ವ್ಯಾಮೋಹ,ಪ್ರೀತಿ ವಿಶ್ವಾಸ ಅಮೃತವೂ ವಿಷವಾಗುತ್ತದೆ ಎನ್ನುವುದು ಸತ್ಯವಲ್ಲವೆ?
ಸತ್ಯ ಹಿಂದೆ ತಳ್ಳಿ ಅಸತ್ಯ ಹೊರಗೆ ಬೆಳೆದರೂ ಹಿಂದಿರುಗಿ ಬರೋವಾಗ ಅಸತ್ಯವನ್ನು ದಾಟಿ ಬರೋದು ಕಷ್ಟ.ಅದಕ್ಕೆ ಸತ್ಯ ತಿಳಿದು ಅದರೊಳಗೆ ಇದ್ದರೆ ಶಾಂತಿ ಸುಖ ಇದ್ದಲ್ಲೇ ಸಿಗುತ್ತದೆನ್ನುವರು.

Tuesday, March 12, 2024

ನಾವು ಭಾರತೀಯರೆ?

"ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು"
ಎರಡು ರಾಷ್ಟ್ರೀಯ ಪಕ್ಷಗಳ  ರಾಜಕೀಯ ದ್ವೇಷಕ್ಕೆ ದೇಶವೇ ಬಡತನದೆಡೆಗೆ ನಡೆದಿದೆ. ಒಂದು ಮೊದಲಿನಿಂದಲೂ ತಾನೇ ಸರಿ ಎಂದು ನಡೆದು ಜನರನ್ನು ಮೋಸಗೊಳಿಸಿ  ಆಳುತ್ತಾ ಮುಂದೆ ಬಂದಂತೆಲ್ಲಾ  ಇನ್ನೊಂದು ಪಕ್ಷ ತನ್ನದೇ ಆದ ರೀತಿಯಲ್ಲಿ  ಬದಲಾವಣೆಗೆ ಪ್ರಯತ್ನಪಟ್ಟು ಮುಂದೆ ಬಂತು.
ಎರಡೂ ಪಕ್ಷಗಳಿಗೂ ಪ್ರಜಾಸಹಕಾರ  ಸಿಕ್ಕಿ ಸರ್ಕಾರ ನಮಗೇನು ಕೊಡುತ್ತದೆನ್ನುವ ಸ್ವಾರ್ಥ ಪರ ಜೀವನಕ್ಕೆ ತಮ್ಮ ಜ್ಞಾನವನ್ನು  ಲೆಕ್ಕಿಸದೆ ಹಣ ಪಡೆದು ಸಾಲದ ಸುಳಿಯಲ್ಲಿ ರೈತರಿಂದ ಹಿಡಿದು ಶಿಕ್ಷಕರವರೆಗೂ  ಬೆಳೆದರು.ಅವರ ಹಿಂದೆ ಸಾಲದ ಹೊರೆಯೂ ಹೆಚ್ಚಾದಾಗ ಸಾಲ ತೀರಿಸಲು ಭ್ರಷ್ಟಾಚಾರ ಬೆಳೆಯಿತು. ಭ್ರಷ್ಟರ ಹಿಂದೆ ನಡೆದವರಿಗೆ ದೇಶ ಕಾಣದೆ ವಿದೇಶಿ ಸಾಲ ಬೆಳೆಸಿದರು. ಇದರಿಂದಾಗಿ ಭಾರತ ಆತ್ಮದುರ್ಭಲ ವಾಗಿದೆಯೆ ಹೊರತು ಆತ್ಮನಿರ್ಭರ ವಾಗಿಲ್ಲವೆಂದರೆ ವಿರೋಧಿಸುವವರು ನಮ್ಮವರೆ.ಇಲ್ಲಿ ವಿದೇಶಿಗರಿಗೆ ಮಣೆ ಹಾಕುವವರೆ ಹೆಚ್ಚು.ವಿದೇಶದಿಂದ ಇಲ್ಲಿ ಬಂದವರು ಹಿಂದೂಗಳಾಗಿಲ್ಲವಾದಾಗ ಅವರ ಧರ್ಮಕ್ಕೆ ಹೆಚ್ಚಿನ ಸಹಕಾರವಿರುತ್ತದೆ.ಹಣ,ಬಂಡವಾಳ ಸಾಲ ವ್ಯವಹಾರ ಮೂಲ ಶಿಕ್ಷಣವೇ ಪರಕೀಯರದ್ದಾಗಿದ್ದರೆ ಒಳಗಿರುವ  ಜ್ಞಾನ ಯಾರದ್ದು? 
ಕಣ್ಣಿಗೆ ಕಾಣದ ಈ ಸತ್ಯವನ್ನು ‌‌ ಅರ್ಥ ಮಾಡಿಕೊಳ್ಳದೆ ಸರ್ಕಾರ ನಡೆಸಿದರೆ  ಅಸತ್ಯ ಅನ್ಯಾಯ ಅಧರ್ಮ ದೆಡೆಗೆ ನಡೆಯುತ್ತಿದ್ದರೂ  ನಾನು ಪರಿಶುದ್ದನೆನ್ನುವ ಭ್ರಮೆಯೇ ಹೆಚ್ಚಾಗುತ್ತದೆ. ಯಾರದ್ದೋ ಹಣವನ್ನು ಯಾರೋ  ಯಾರಿಗೋ ಕೊಟ್ಟು ದಾನಶೂರ ಕರ್ಣ ಎನ್ನುವ ಬಿರುದು ಪಡೆದರೆ ಅಧರ್ಮ. ಕರ್ಣ ನ ಕಥೆ ಇದಕ್ಕೆ ಸಾಕ್ಷಿ.ಆದರೆ ಆ ಮಹಾಶೂರ ಕರ್ಣ ನಲ್ಲಿ ಧರ್ಮ ಜ್ಞಾನವಿತ್ತು.ದುರ್ಯೋಧನನ ಪಕ್ಷದ ಋಣ ತೀರಿಸುವುದಾಗಿತ್ತು.ಆದರೆ ಅಂದಿನ ರಾಜರ ಕಾಲ ಇಂದಿಲ್ಲ ಹೀಗಿರುವಾಗ ಪ್ರಜೆಗಳ ಹಣವನ್ನು ದುರ್ಭಳಕೆ ಮಾಡಿಕೊಂಡು  ಅಜ್ಞಾನದಲ್ಲಿ ಆಳುವುದರಿಂದ ಆಗುವ ನಷ್ಟ  ತುಂಬೋದೇ ಕಷ್ಟ. ಕಷ್ಟಪಡದೆ ಕೋಟ್ಯಾಂತರ ರೂಗಳನ್ನು ಹಾಳುಮಾಡುವವರ. ಹಿಂದೆ ಸಾಕಷ್ಟು ಶ್ರಮಜೀವಿಗಳು ಬುದ್ದಿಜೀವಿಗಳು ಜ್ಞಾನಿಗಳಿದ್ದಾರೆಂದರೆ ಎಲ್ಲಿದೆ ಸತ್ಯ ಧರ್ಮ?
ಸಾಮಾನ್ಯ ಜ್ಞಾನವಿಲ್ಲದೆ ವಿಶೇಷಜ್ಞಾನದ ಹಿಂದೆ ನಡೆದವರಿಗೆ ಒಳಗೇ ಅಡಗಿರುವ ಭ್ರಷ್ಟ ದುಷ್ಟ ಗುಣಗಳ ಅರಿವಿಲ್ಲದೆ ಏನಾದರಾಗಲಿ ನಾನುಗೆಲ್ಲಬೇಕೆಂಬ  ಅಜ್ಞಾನ ಮಿತಿಮೀರಿದೆ.
ಇದಕ್ಕೆ ಸಾಕ್ಷಿಯಾಗಿರುವ‌ ಪರಮಾತ್ಮನೇ ಸುಮ್ಮನಿರುವನೆಂದರೆ ಸಾಮಾನ್ಯರಿಗೆ ಯಾವ ಸಂದೇಶ ಹೋಗುತ್ತಿದೆ? ಒಟ್ಟಿನಲ್ಲಿ  ದೇವರು ಧರ್ಮ, ಭಾಷೆ,ಸಂಸ್ಕೃತಿ ಸಂಪ್ರದಾಯಗಳು ರಾಜಕೀಯಕ್ಕೆ ಬಂದಾಗ ಅಳಿಸಿಹೋಗಿ ನಾನೇ ದೇವರು ಎನ್ನುವ ಹಂತಕ್ಕೆ ಬಂದಾಗ ನಾನೆಲ್ಲಿರೋದೆನ್ನುವುದೂ ಮರೆತು ಹೋಗುತ್ತದೆ. ದೇಶದೊಳಗೇ ಇದ್ದು ವಿದೇಶಿಗಳಿಗೆ ಮಣೆಹಾಕುವ ಸಂಸ್ಕೃತಿ ಯಾವ ಮಹಾತ್ಮರು ಕಲಿಸಿದ್ದಾರೋ ? ಪುರಾಣಗಳಲ್ಲಿಯೇ ನಾವು ರಾಜ್ಯ ರಾಜ್ಯದ ನಡುವೆ  ನಡೆದ ಯುದ್ದಕ್ಕೆ ಅಧರ್ಮ ದ ರಾಜಕೀಯತೆ ಕಾರಣವಾಗಿದ್ದನ್ನು ತಿಳಿಯಬೇಕಿದೆ. ಆದರೆ ಇಲ್ಲಿ ಅಧರ್ಮ ವೇ ರಾಜಕೀಯ ನಡೆಸಿರುವಾಗ  ಧರ್ಮ ಎಲ್ಲಿದೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಲ್ಲಿ ಅಜ್ಞಾನ ಮನೆಮಾಡಿ ಹಣ ಅಧಿಕಾರ ಸ್ಥಾನಕ್ಕಾಗಿ  ಭ್ರಷ್ಟ ದುಷ್ಟ ರಿಗೆ ಸಹಕರಿಸುವ ಗುಣ ಬೆಳೆದಿರೋದೇ  ದುರಂತ. ‌ಇಷ್ಟು ವರ್ಷ ಆಳಿದ ಪಕ್ಷಗಳಿಗೆ  ದೇಶದ ಮೂಲ ಶಿಕ್ಷಣದೊಳಗಿದ್ದ ಸಾತ್ವಿಕ ಸತ್ಯದ ಅರಿವಾಗದೆ ರಾಜಕೀಯತೆ ಬೆಳೆದು ಅದೇ ದ್ವೇಷ ರೂಪತಳೆದು ಮಧ್ಯವರ್ತಿಗಳು  ಬೆಳೆದರು. ಮಹಾತ್ಮರು ಬೆಳೆದಿಲ್ಲವೆಂದರೆ ಆತ್ಮದುರ್ಭಲ ಭಾರತವಾಗಿದೆ ಎಂದರ್ಥ.
ಎಲ್ಲಿ ರಾಜಕೀಯವಿರುವುದೋ ಅಲ್ಲಿ ಸತ್ಯವಿರದು.ಎಲ್ಲಿ ಸತ್ಯವಿರದೋ ಅಲ್ಲಿ ಧರ್ಮ ವಿರದು.ಎಲ್ಲಿ ಧರ್ಮ ಇರದೋ ಅಲ್ಲಿ ದೇವತೆಗಳಿರೋದಿಲ್ಲ.ಎಲ್ಲಿ ದೇವತೆಗಳಿರುವುದಿಲ್ಲವೋ ಅಲ್ಲಿ ಶಾಂತಿಯಿರದು. ಹೀಗಾಗಿ ದೇಶದೊಳಗೆ ಕ್ರಾಂತಿಯೇ ಮುಂದಾಗಿದೆ.ಇದರಲ್ಲಿ ಯಾರು ಜ್ಞಾನಿಗಳೋ ಅಜ್ಞಾನಿಗಳೋ   ಭಗವಂತನಿಗೇ ಗೊತ್ತು. ಸೃಷ್ಟಿ ಸರಿಯಿಲ್ಲದೆ ಸ್ಥಿತಿ ಲಯವೂ ಸರಿಯಾಗಿರದು.ಲಯದೆಡೆಗೆ ನಡೆದಿರುವ ನಮ್ಮ ಜೀವನದಲ್ಲಿ ಬದಲಾವಣೆ ಆಗಬೇಕಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗುವ ಶಿಕ್ಷಣಕೊಡಬೇಕಿದೆ.
ಜೀವ ಶಾಶ್ವತವಲ್ಲ ಆತ್ಮಶಾಶ್ವತ ಎಂದಿರುವ ಮಹಾತ್ಮರ ಹೆಸರಿನಲ್ಲಿ ಕೆಸರೆರಚಾಟ ಮಾಡಿಕೊಂಡು ತಾವೇ ಶುದ್ದವಾಗದೆ ಜನರನ್ನು ಶುದ್ದಮಾಡಲು ರಾಜಕೀಯಕ್ಕೆ ಮಣೆ ಹಾಕಿದವರಿಗೆ ಜನಬಲ ಹಣಬಲ ಅಧಿಕಾರ ಬಲವೇನೂ ಸುಲಭವಾಗಿ ಸಿಗಬಹುದು ಆದರೆ ಸತ್ಯಜ್ಞಾನ ಸಿಗೋದಿಲ್ಲ.ಕಾರಣ ಸತ್ಯ ಒಂದೇ  ಇರೋದು ಅದೂ ಒಳಗೇ ಇರೋವಾಗ ಹೊರಗಿನ ರಾಜಕೀಯದಲ್ಲಿ ಕಾಣದು.
ಹಿಂದೂ‌ಮುಸ್ಲಿಂ ನಡುವಿರುವ ಇಸ್ಲಾಂ ಧರ್ಮ ಮತಾಂತರ ಮಾಡಿ ತನ್ನ ಸ್ಥಾನ ಭದ್ರಗೊಳಿಸಿಕೊಂಡರೂ  ಅದರಿಂದ ದೇಶದ ಮೂಲ ಶಿಕ್ಷಣದಲ್ಲಿದ್ದ ತತ್ವದರ್ಶನ ಆಗೋದಿಲ್ಲ. ಜನಸಂಖ್ಯೆಗಿಂತ ಸತ್ಯಜ್ಞಾನಿಗಳ ಸಂಖ್ಯೆ ಮುಖ್ಯ.ಅದರಲ್ಲೂ ಸತ್ಯಜ್ಞಾನ  ಜೀವಾತ್ಮನಿಗೆ ಅಗತ್ಯ .ಪುನರ್ಜನ್ಮ ಇಲ್ಲವೆನ್ನಬಹುದು ಆದರೆಇದು ಸತ್ಯವಾಗಿರದು.ಈ ಜನ್ಮದ ಹಿಂದೂ ಮುಂದೆ ಇಸ್ಲಾಂ ಮುಸ್ಲಿಂ ಆದಂತೆ ಇಸ್ಲಾಂ ಮುಸ್ಲಿಂ ಮುಂದೆ ಹಿಂದೂವಾಗಿ ಜನ್ಮ ಪಡೆಯುವುದಿಲ್ಲವೆ?

ಸನಾತನ ಹಿಂದೂ ಧರ್ಮ ತಿಳಿಸುವುದಿಷ್ಟೆ ಭೂಮಿಯ ಋಣ ತೀರಿಸುವುದಕ್ಕಾಗಿ ನಾವು ಜೀವಾತ್ಮನಿಗೆ ಸತ್ಯ ಧರ್ಮದಲ್ಲಿ ನಡೆಯುವ ಶಿಕ್ಷಣ ಕೊಡಬೇಕಷ್ಟೆ.ಭೌತವಿಜ್ಞಾನ ಅಧ್ಯಾತ್ಮ. ವಿಜ್ಞಾನದಿಂದ ದೂರವಾದಷ್ಟು ಸಾಲ ಬೆಳೆಯುತ್ತದೆ. ಸಾಲ ತೀರಿಸದೆ  ಜೀವನ್ಮುಕ್ತಿ ಸಿಗದು. ಹಿಂದೂಗಳೇ ಈವಿಚಾರಕ್ಕೆ ವಿರೋಧಿಸಿ ಮುಂದೆ ಮುಂದೆ  ನಡೆದಿರುವಾಗ ಇದನ್ನರಿಯದ ಪರಧರ್ಮ ದವರ ವಿರುದ್ದ ದ್ವೇಷಮಾಡಿ ಉಪಯೋಗವಿಲ್ಲ.
ನಮ್ಮ ಮಕ್ಕಳಿಗೇ ಉತ್ತಮಜ್ಞಾನದ ಶಿಕ್ಷಣ ನೀಡಲು ಕಷ್ಡವಾಗಿರುವಾಗ ಪರರಿಗೆ ಉಪದೇಶ ಮಾಡಿ ಉಪಯೋಗವಿದೆಯೆ?ನಮ್ಮನೆಯೇ  ಸಾಲದೊಳಗಿರುವಾಗ ಪರರಮನೆಯ ಸಾಲತಂದು ತೀರಿಸಬಹುದೆ? ಹೀಗೆ ದೇಶದ ಒಳಗೆ ಸಾಕಷ್ಟು ಅಗರ್ಭ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲು ಸಾಧ್ಯವಾಗಿಲ್ಲವೆಂದರೆ ಆ ಹಣ ಭ್ರಷ್ಟಾಚಾರದ ಅಧರ್ಮ ಅನ್ಯಾಯ ಅಸತ್ಯದ ಸಂಪಾದನೆ ಆಗಿರುತ್ತದೆ.
ಪರಮಾತ್ಮನಿಗೆ ತಲುಪದ ಈ ಹಣದಿಂದ ಧರ್ಮ ರಕ್ಷಣೆ ಕಷ್ಟವಿದೆ. ಜನರ ಹಣವೇ ದುರ್ಭಳಕೆ ಆಗಿರುವಾಗ ಜನರಲ್ಲಿ ಅರಿವಿನ ಕೊರತೆ ಇರೋವಾಗ ಅವರನ್ನೇ ಆಳಲು ಹೊರಟರೆ ಏನರ್ಥ?ನಾವ್ಯಾರು ? ನಮ್ಮ ಸಹಕಾರ  ಯಾರಿಗೆ ಕೊಟ್ಟು  ಜ್ಞಾನ ದುರ್ಭಳಕೆ ಆಗುತ್ತಿದೆ? ಸತ್ಯ ತಿಳಿಸಬಾರದೆನ್ನುವರು ಆದರೆ ಸತ್ಯವೇ ದೇವರೆನ್ನುವರು.ಮಕ್ಕಳಿಗೂ ಇದೇ ರೀತಿ ಅಡ್ಡ ಗೋಡೆ ಮೇಲೆ ದೀಪ  ಇಟ್ಟು ಅರ್ಧ ಕತ್ತಲಲ್ಲೇ ಕಾಲ‌ಕಳೆದರೆ ಪೂರ್ಣ ಸತ್ಯ ಪೂರ್ಣಬೆಳಕಿನೆಡೆಗೆ ಹೋಗಲು ಸಾಧ್ಯವೆ?ಜ್ಞಾನದಿಂದ ಮುಂದುವರಿದಿದ್ದ ದೇಶವನ್ನು ಅಜ್ಞಾನದ ಶಿಕ್ಷಣದಿಂದ ಹಿಂದುಳಿಸುತ್ತಾ ವಿದೇಶ ಮಾಡಲು ಹೊರಟವರಿಗೆ ಇಂದು ಬೇಡಿಕೆ ಹೆಚ್ಚು. ಸ್ವಾತಂತ್ರ್ಯ ಸ್ವೇಚ್ಚಾಚಾರವಾದರೆ ಆತ್ಮದುರ್ಭಲ ವಾಗಿದೆವೆಂದರ್ಥ..
ಮನರಂಜನೆಯಿರಲಿ ಆತ್ಮವಂಚನೆಯಾಗದಿರಲಿ.ಯಾವ ಪಕ್ಷ ಬಂದರೂ ಜನಬಲದಿಂದಾಗಿರುವುದು ಅದು ಆತ್ಮಬಲವಾದರೆ ಉತ್ತಮ ದೇಶ.ಸ್ಮಾಟ್ ಆಗಲು ಹೋಗಿ ಸಾಲದ ಹೊರೆಹೊತ್ತು‌ ನಡೆಯಲಾಗದೆ ಕುಸಿದರೆ  ಮೇಲೆ ಎತ್ತಲು ಯಾರಿರುವರು? ಎಲ್ಲದ್ದಕ್ಕೂ  ಇತಿಮಿತಿಗಳಿದ್ದರೆ ಉತ್ತಮ.
ಕಾಲವೇ ಹೀಗಿದೆ.ಹಾಗಂತ‌ಕಾಲರಾಯ ಸುಮ್ಮನಿರೋದಿಲ್ಲ.
ಸಕಾಲದಲ್ಲಿ ಎಲ್ಲಾ ಸರಿಯಾಗಿ ಸನ್ಮಾರ್ಗದಲ್ಲಿ ನಡೆದರೆ ಕಾಲವೂ  ಚೆನ್ನಾಗಿಯೇ ಇರುತ್ತದೆ. ಇದು ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ. ಯಾರದ್ದೋ ಮೂಲ  ಶಿಕ್ಷಣ  ಇತರರು  ಬಂದು ಹಾಳುಮಾಡಿದರೆ‌ ಅವರ ಬುದ್ದಿವಂತಿಕೆ  ಚೆನ್ನಾಗಿದ್ದರೂ ಜ್ಞಾನದ ಕೊರತೆ ಕಾಣುವುದು. ಅಜ್ಞಾನದಲ್ಲಿ ಎಷ್ಟು ಹೋರಾಡಿದರೂ ವ್ಯರ್ಥ.
ಯಾಕೆ ರಾಜಕೀಯದ ವಿರುದ್ದ ನಿಲ್ಲಬೇಕೆ ಎಂದರೆ ರಾಜಕೀಯ ಬೇಕು ಅದು ಧರ್ಮದ ಪರವಿರಬೇಕು. ಮನೆಯೊಳಗೇ ಅಧರ್ಮ ವಿದ್ದರೆ ದೈವತ್ವ ಬೆಳೆಯುವುದೆ?
ಸರಳವಾಗಿದ್ದ ತತ್ವವನ್ನು ಕಷ್ಟಕರವಾಗುವಂತೆ ತಿಳಿಸಿ ತಂತ್ರದ ಕಡೆಗೆ ನಡೆದರೆ ತಂತ್ರ ಇಸ್ಲಾಂ ರ ಕೊಡುಗೆ ಯಂತ್ರ ಮುಸ್ಲಿಂ ರ ಮೂಲಕ ಬಂದಿರೋದು.ಹಾಗಾದರೆ ಸ್ವತಂತ್ರ ರು ಯಾರು? ಹಿಂದೂಗಳ‌ಮಂತ್ರಶಕ್ತಿಯೇ ತಂತ್ರ ಯಂತ್ರಗಳ ಸೃಷ್ಟಿ ಗೆ ಕಾರಣವಾದಾಗ ಮೂಲವನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳಿದಷ್ಟೂ ತಂತ್ರ ಯಂತ್ರವೂ ಅದೇ ದಾರಿಹಿಡಿದು ಮನುಕುಲವೇ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೂಪಮಂಡೂಕದಂತಿರುವ ಅನೇಕರಿಗೆ ಹೊರಗಿನ ಹಣ ಸುಲಭವಾಗಿ ಒಳಗೆ ಸೇರುವಾಗ ಹೊರಗಿನ ಅಧರ್ಮ ಅಸತ್ಯ ಅನ್ಯಾಯ  ಕಾಣೋದಿಲ್ಲ ಅದನ್ನು ತಡೆಯಲಾಗದು.
ತಾವೂ ಪಾಲುದಾರರಾದಾಗಲೇ ಬೇಲಿಯೇ ಎದ್ದು ಹೊಲಮೇಯೋದು. ಹೀಗಾಗಿ ಇಂದು ಎಷ್ಟೋ ಜ್ಞಾನಿಗಳ ಜ್ಞಾನಯೋಗ,ಭಕ್ತಿಯೋಗ ಕರ್ಮ ಯೋಗ ಹಿಂದುಳಿದು ಭೌತವಿಜ್ಞಾನ ಮುಗಿಲುಮುಟ್ಟಿ ಆಳುತ್ತಿದೆ.ಇದನ್ನು ‌ಪ್ರಗತಿ ಎಂದರೆ ಅಧ್ಯಾತ್ಮ ದ ಪ್ರಕಾರ ಇದೇ ಅಧೋಗತಿಗೆ ಕಾರಣ.
ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಚೆನ್ನಾಗಿರುತ್ತದೆ.ಸೃಷ್ಟಿ ಮಾಡಲಾಗದವರು ಲಯ  ಮಾಡುವ  ಅಧಿಕಾರವಿದೆಯೆ?
ಎಲ್ಲಾ ಒಂದೇ ಎನ್ನುವವರಲ್ಲಿ ಭಿನ್ನಾಭಿಪ್ರಾಯ ದ್ವೇಷ ಇರುವುದೆ? ಇದೆ  ಎಂದರೆ  ತಪ್ಪು ನಡೆದಿದೆ ಎಂದರ್ಥ.
ಕಾಲಕ್ಕೆ ತಕ್ಕಂತೆ ಕುಣಿಯಬೇಕೆಂದಿಲ್ಲ.ನಡೆಯಬೇಕು ಎಂದರೂ ಸತ್ಯ  ಧರ್ಮ ಕ್ಕೆಚ್ಯುತಿ ಆದರೆ  ಪರಮಾತ್ಮನಲ್ಲಿ ಕ್ಷಮೆಯಿಲ್ಲ. ತಿಳಿಯದೇ ನಡೆದ ತಪ್ಪಿಗೆ ಕ್ಷಮೆಯಿರಬಹುದಷ್ಡೆ.
ಸೂಕ್ಷ್ಮ ವಾಗಿರುವ ಈ ಅಧ್ಯಾತ್ಮ ವಿಜ್ಞಾನವನ್ನು  ಹೊರಗಿನ ಜಗತ್ತು ಒಪ್ಪದಿದ್ದರೂ ಅದನ್ನು ಬಿಟ್ಟು ಜಗತ್ತಿಲ್ಲ.ಅದರ ಒಂದು ಸಣ್ಣ ಕಿಡಿ ನಮ್ಮೊಳಗೇ ಅಡಗಿರುವಾಗ ಅದರೆಡೆಗೆ ಹೋಗೋದೇ ಜೀವನದ ಮುಖ್ಯಗುರಿ ಎನ್ನುವರು ಮಹಾತ್ಮರು.ಎಲ್ಲಿರುವರು ಮಹಾತ್ಮರು? ರಾಜಕೀಯದಲ್ಲೋ? ರಾಜಯೋಗದಲ್ಲೋ?
ರಾಜಯೋಗದ ಶಿಕ್ಷಣ ಪ್ರಜೆಗಳಿಗೆ ಸಿಕ್ಕಿದ್ದರೆ ರಾಜಕೀಯ ಇಷ್ಟು ಹದಗೆಡುತ್ತಿರಲಿಲ್ಲ. ತನ್ನ ತಾನರಿತು ಪರಮಾತ್ಮನೆಡೆಗೆ ಸಾಗುವುದೇ ರಾಜಯೋಗಿಗಳ ಲಕ್ಷಣ. ಆದರಿದು ಸುಲಭವಿರದ ಕಾರಣ ಪ್ರಚಾರಕ್ಕಷ್ಟೆ ಸೀಮಿತವಾಗಿ ರಾಜಕೀಯತೆ ಬೆಳೆಯಿತು. ಈಗಲೂ ಇದರ ಚರ್ಚೆ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಅರಿವು ಮೂಡಬಹುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇಶದ ಆಸ್ತಿ.ಅವರಲ್ಲಿ ಜ್ಞಾನವಿದ್ದರೆ ದೇಶದ ಪ್ರಗತಿ.ಅಜ್ಞಾನವಿದ್ದರೆ ಅಧೋಗತಿ.
ಮೂಲಸತ್ಯ ಧರ್ಮ ಬಿಟ್ಟು  ನಡೆದವರಿಗೆ ವಿದೇಶವೇ ಗತಿಕಾಣಿಸುತ್ತದೆ. ಅಲ್ಲಿಯೂ ಉತ್ತಮ ಜ್ಞಾನದ ಶಿಕ್ಷಣವಿದ್ದರೆ ಸರಿಯಾಗಿರುತ್ತದೆ  ಮಾನವನ  ಮನಸ್ಥಿತಿ.
 ರಾಜಯೋಗದ ಮಹಾತ್ಮರ ಸರಳತೆಯಿಂದಅಧ್ಯಾತ್ಮ ಪ್ರಗತಿಯಾಗಿದ್ದ ಭಾರತವನ್ನು  ರಾಜಕೀಯದಿಂದ ಸ್ಮಾರ್ಟ್ ಮಾಡಲು ಹೋದರೆ  ಅಧೋಗತಿ.

ಬ್ರಹ್ಮಜ್ಞಾನ ದಲ್ಲಿ ಶ್ರೇಷ್ಠ ಕನಿಷ್ಟವಿದೆಯೆ?

ಸಾಕಾರ ನಿರಾಕಾರ ಬ್ರಹ್ಮಜ್ಞಾನದಲ್ಲಿ ಶ್ರೇಷ್ಠ ಕನಿಷ್ಠ ವಿದೆಯೆ?
ಕಣ್ಣಿಗೆ ಕಾಣದ್ದನ್ನು ಕಂಡೆ ಎಂದರೆ ತೋರಿಸಿ ಎನ್ನುವವರ ಮುಂದೆ ವಾದ ಮಾಡಲಾಗದು.ಅದೇ ನಾನು ಕಂಡುಕೊಂಡ ಸತ್ಯವನ್ನು  ವಿವರಿಸಿದಾಗ ಅದು ಹಿಂದಿನ ಮಹಾತ್ಮರ ಅನುಭವಕ್ಕೆ ಹೊಂದಿಕೊಂಡಿದ್ದರೆ ಒಪ್ಪಬಹುದು. ಆದರೆ ಇಲ್ಲಿ ಹಿಂದಿನ ಮಹಾತ್ಮರ ಅನುಭವವನ್ನೇ ನನ್ನ ಅನುಭವವೆಂದು ಪ್ರಚಾರ ಮಾಡಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡರೆ  ಧರ್ಮ ರಕ್ಷಣೆ ಆಗದು. ತಲೆಗೆ ತುಂಬಿದ ಜ್ಞಾನ ಹೃದಯಾಂತರಾಳದೊಳಗೆ ಇಳಿಯುವ ಮೊದಲೇ  ಹೊರಹಾಕಿದರೆ ಅನುಭವಿ ಜ್ಞಾನಿಯಾಗಲಾರನು. ಇದರಿಂದ ಅರ್ಧ ಸತ್ಯದ ತಂತ್ರ ಬೆಳೆದು ತತ್ವ ಹಿಂದುಳಿದು  ಸತ್ಯವೂ ಅರ್ಥ ವಾಗದೆ ಜೀವ ಹೋಗುತ್ತದೆ.
ಭಾರತ ದೇಶದೊಳಗೆ ಭಾರತೀಯರಿರೋದನ್ನು  ಅಧ್ವೈತ ಎನ್ನಬಹುದು. ವಿದೇಶದೊಳಗಿದ್ದು ನಾನು ಭಾರತೀಯ ಎಂದರೆ ದ್ವೈತ. ಎರಡೂ ಸರಿ ಎಂದರೆ ನಮ್ಮ ಜ್ಞಾನ ಒಂದೇ ಇರಬೇಕಷ್ಟೆ. ಬ್ರಹ್ಮಜ್ಞಾನದಿಂದ ಸೃಷ್ಟಿ ಯ ರಹಸ್ಯ ತಿಳಿಯಬೇಕು.ಅದರಲ್ಲಿ ನಾನ್ಯಾರೆಂಬ ಸತ್ಯವೂ ಅಡಗಿರುವುದನ್ನು ಕಂಡುಕೊಳ್ಳಲು ಸಾಧ್ಯವಾಗಬೇಕು.ಆಗ ನಾನೆಂಬುದಿಲ್ಲವೆನ್ನುವುದೂ ಅರ್ಥ ವಾಗುತ್ತದೆ ಅಹಂಕಾರ ಅಳಿಯುತ್ತದೆ ಬ್ರಹ್ಮಚೈತನ್ಯವೇ ಶ್ರೇಷ್ಠ ವಾಗುತ್ತದೆ.ಆದರೆ ಇದು ಸಾಕಾರಕ್ಕೆ ಬಂದಾಗ ಎರಡಾಗಿ ಮೂರಾಗಿ ನೂರು ಸಾವಿರ ಲಕ್ಷ ಕೋಟಿಗೆ ಏರಿದರೆ  ಸಮಸ್ಯೆ ಹೊರಗಿನಿಂದ ಒಳಗೆ ಸೇರುವುದು. ಜ್ಞಾನವೂ ಒಂದು ಋಣದ ಲೆಕ್ಕಾಚಾರದಲ್ಲಿದೆ.ಎಲ್ಲಾ ಶ್ರೇಷ್ಠ ವಾಗಿಯೇ ಇರದು.ಕನಿಷ್ಠ ವೆಂದರೂ ತಪ್ಪು. ಕಾರಣ ಭೂಮಿಯಲ್ಲಿ ಜನ್ಮ ಪಡೆದಿರುವಾಗ ಅದರ ಹಿಂದೆ ಒಂದು ನಿರ್ದಿಷ್ಟ ಕಾರಣವಿರುತ್ತದೆ. ಹಾಗೇ ಅದಕ್ಕೆ ತಕ್ಕಂತೆ ಜ್ಞಾನವೂ ಒಳಗೇ ಅಡಗಿರುತ್ತದೆ. ಅದನ್ನು ಗುರುತಿಸದೆ ಹೊರಗಿನಿಂದ ಅಳೆದು ತೂಗಿ ತನ್ನ ಇಚ್ಚೆಯಂತೆ ತಲೆಗೆ ವಿಷಯ ತುಂಬಿ ಕೊನೆಗೆ ತಲೆಸರಿಯಿಲ್ಲವೆಂದರೆ  ತುಂಬಿಕೊಂಡ ವಿಷಯಗಳು ಸುಮ್ಮನಿರುವವೆ? ಹಾಗೆಯೇ ಒಂದು ದೇಶದ ಭವಿಷ್ಯವೂ ಅದರೊಳಗಿರುವ ಪ್ರಜೆಗಳ ತಲೆಗೆ ತುಂಬಿದ ಶಿಕ್ಷಣದ ವಿಷಯಗಳಲ್ಲಿ ಅಡಗಿರುವುದು. ಕಾಣದ ಸತ್ಯ ಬಿಟ್ಟು ಕಾಣುವ ಸತ್ಯವೇ ತುಂಬಿದ್ದರೆ  ಸಾಕಾರಕ್ಕೆ ಬೆಲೆಹೆಚ್ಚು. ಆದರೆ ಇದರಿಂದ ಸತ್ಯವಾಗಲಿ ಧರ್ಮ ವಾಗಲಿ ಬೆಳೆದಿದೆಯೆ? 
ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲವೆಂದರೆ ಇಲ್ಲವೆಂದರ್ಥ ವಲ್ಲ.
ಹಾಗೆ ದೇವರಿಲ್ಲವೆಂದರೂ ಅನರ್ಥ ವಾಗುತ್ತದೆ.
ದೇಶವೇ ಇಲ್ಲ ನಾನೇ ಎಲ್ಲಾ ಎನ್ನಬಹುದೆ?
ಭೂಮಿಯೇ ಇಲ್ಲದೆ ಮನುಕುಲವಿದೆಯೆ?
ಹೀಗೇ ತಾಯಿಯವರೆಗೂ ದೇವರನ್ನು ತೋರಿಸಿಕೊಟ್ಟ ಸನಾತನ ಧರ್ಮ ಇಂದು  ತಾಯಿಯನ್ನೇ  ಮರೆತು ಮುಂದೆ ಹೋದವರಿಗೆ ಮಣೆಹಾಕಿ ಸ್ವಾಗತಿಸಿದರೆ  ಇದರರ್ಥ  ವ್ಯವಹಾರ ಜ್ಞಾನ ಧರ್ಮ ವನರಿಯದೆ ಮೇಲೇರಿದೆ ಎಂದು.
ಇದನ್ನು  ಒಪ್ಪಿಕೊಂಡು  ಹಣದ ಶ್ರೀಮಂತ ರಾಗಬಹುದು, ರಾಜಕೀಯ ನಡೆಸಬಹುದು ಆದರೆ ಧರ್ಮ ರಕ್ಷಣೆ ಮಾಡಲಾಗದು. ಮಾತೃಭೂಮಿ,ಮಾತೃಭಾಷೆಗಾಗಿ ಹೋರಾಟ ಹಾರಾಟ ಮಾರಾಟ ಹೊರಗೆ ನಡೆಸಿದರೆ  ಸಾಲದು ಒಳಗಿನಿಂದ  ಅರ್ಥ ಮಾಡಿಕೊಂಡು ಬೆಳೆಸುವ ಜ್ಞಾನವಿರಬೇಕಿದೆ. ಭಾಷೆಯಿಂದ ಜ್ಞಾನ ಬೆಳೆಯುತ್ತದೆ ಎಂದರೆ ರಕ್ತಗತವಾಗಿ ಸೇರಿಕೊಂಡಿರುವ ಧರ್ಮ ಸಂಸ್ಕೃತಿ ಭಾಷೆಗೆ ತಕ್ಕಂತೆ ಶಿಕ್ಷಣವಿದ್ದರೆ  ಎಲ್ಲಾ  ನಿರಾಕಾರವೇ. ಒಳಗಿರೋದನ್ನು  ಕಾಣಲಾಗದಲ್ಲವೆ?
ಹೃದಯದ ಕಸಿ ವಿಜ್ಞಾನ ಮಾಡಬಹುದು ಹೃದಯವಂತಿಕೆ ತುಂಬಬಹುದೆ? ಹಾಗೆ ಹೊರಗೆ ದೇವಾನುದೇವತೆಗಳನ್ನು ಹಿಡಿದು‌  ಬೇಡಬಹುದು.ಒಳಗಿರುವ ದೈವತ್ವ ಇದರಿಂದ ಬೆಳೆಯುವುದೆ?
ಮನಸ್ಸನ್ನು  ಹೇಗೆಂದರೆ ಹಾಗೆ ಹರಿಹಾಯಿಸಬಹುದು ಆದರೆ ಅದನ್ನು ಒಂದೆಡೆ ತಡೆ ಹಿಡಿಯುವುದು ಸುಲಭವೆ?
ದೇಶವನ್ನು  ವಿದೇಶಿ ಸಾಲ ಬಂಡವಾಳ ವ್ಯವಹಾರಕ್ಕೆ ಒಪ್ಪಿಸಿ ಆಳಬಹುದು ಆದರೆ  ವಿದೇಶಿ ಸಾಲ ತೀರಿಸುವಷ್ಟು ದುಡಿದು ಜೀವನ ನಡೆಸುವಾಗ ನಮ್ಮ ಮೂಲಜ್ಞಾನವಿರುವುದೆ?

ಒಟ್ಟಿನಲ್ಲಿ ಎಲ್ಲರಿಗೂ ಕಣ್ಣಿಗೆ ಕಾಣುವ ಸತ್ಯದ ಹಿಂದೆ ಅಸತ್ಯವೂ ಅಡಗಿರುವ  ಬಗ್ಗೆ ಜ್ಞಾನವಿಲ್ಲದೆ ನಿರಾಕಾರ ಬ್ರಹ್ಮ ಶ್ರೇಷ್ಠ ವೆಂದರೂ ಸಾಕಾರವೇ ಬೆಳೆದಿದೆ. ಸಾಕಾರದಿಂದ ನಿರಾಕಾರದೆಡೆಗೆ ನಡೆದವರೆ ಮಹಾತ್ಮರುಗಳಾದರು. ನಿರಾಕಾರವನ್ನು ನಿರಾಕರಿಸಿ ನಡೆದವರು ಮಾನವರಾದರು.
ಸಾಕಾರವನ್ನೂ ನಿರಾಕರಿಸಿದವರು ಅಸುರರಾದರು.
ಅಸುರರ ವಶದಲ್ಲಿ ಸುರರಿರೋದನ್ನು ಕಂಡೂ ಕಾಣದವರಂತೆ ನಾಟಕವಾಡುವವರನ್ನು ಏನೆನ್ನಬೇಕು ಮಧ್ಯವರ್ತಿಗಳು ಎಂದರೆ ಸರಿಯಾಗಬಹುದು.‌
ಎಲ್ಲರಿಗಿಂತ  ಅಪಾಯ ತಂದಿಟ್ಟವರು ಅರ್ಧ ಸತ್ಯ ತಿಳಿದು ಪ್ರಚಾರ ಮಾಡುವ‌ ಮಧ್ಯವರ್ತಿಗಳು. ಹೀಗೇ ಜಗತ್ತು ನಡೆಯುತ್ತದೆ. ಒಂದೆಡೆ ಮನರಂಜನೆ ಇನ್ನೊಂದು ಕಡೆ ಆತ್ಮವಂಚನೆ.
ಎಲ್ಲಾ ಪರಮಾತ್ಮನ ಇಚ್ಚೆ ಎಂದಾಗ ಯಾವುದನ್ನು ವಿರೋಧಿಸಬೇಕಿದೆ? ಯಾರನ್ನು ಶತ್ರು ಗಳೆನ್ನಬಹುದು? ಯಾರು ಕಾರಣರು? ಯಾರು ಶಾಶ್ವತವಾಗಿರೋದು?
ಕಾಲಚಕ್ರ ತಿರುಗುತ್ತಲೇ ಇರೋವಾಗ  ಮೇಲಿನವರು ಕೆಳಗಿಳಿಯುವರು ಕೆಳಗಿರುವವರು ಮೇಲೇರುವರು.
ಹಿಂದೆ  ದೇವಲೋಕವನ್ನು ಅಸುರರು ವಶಪಡಿಸಿಕೊಂಡು ಆಳಿದರು.ನಂತರ ಭಗವಂತನೇ ಧರೆಗಿಳಿದು ಅಸುರ ಸಂಹಾರ ಮಾಡಿದನೆಂದು ಪುರಾಣ ಕಥೆಗಳಿವೆ.ಹಾಗಾದರೆ ಈಗ ಎಲ್ಲಿರುವರು ದೇವಾಸುರರು? ನಮ್ಮೊಳಗೇ ಅಡಗಿರುವ ಈ  ಶಕ್ತಿಯನ್ನರಿಯದೆ ಹೊರಗೆ ಹುಡುಕಿದರೆ ಸಿಗುವರೆ ಕಾಣುವರೆ? 
ರಾಮಕೃಷ್ಣ ಪರಮಹಂಸರಿಗೆ ಸ್ವಾಮಿ ವಿವೇಕಾನಂದ ರಂತಹ ಮಹಾಶಿಷ್ಯರು ಹಾಕಿದ ಪ್ರಶ್ನೆಗೆ  ಉತ್ತರ ನೀಡುವಷ್ಟು‌ ಆತ್ಮಜ್ಞಾನವಿತ್ತು. ಕಾರಣ  ಅದು ಅವರ  ಪರಿಶ್ರಮವಾಗಿತ್ತು. ಉಪಾಸನೆ,ಉಪವಾಸ,ಉಪದೇಶದ ಮೂಲಕ  ದೇವರನ್ನು ಕಂಡವರು ವಿವೇಕಾನಂದರಾಗಬಹುದು. ವಿವೇಕದ ಆನಂದ ಅನುಭವಿಸಿಯೇ ತಿಳಿದರೆ ನಿರಾಕಾರವನ್ನು ಶ್ರೇಷ್ಠ ವೆನ್ನಬಹುದು. ಆದರೆ ಇದನ್ನು ಹೊರಗೆ ತೋರಿಸಲಾಗದು.
ಹೀಗಾಗಿ ಯಾವತ್ತೂ ಅದ್ವೈತ ಕಣ್ಣಿಗೆ ಕಾಣದು.ದ್ವೈತ ಬೆಳೆಯುತ್ತದೆ.ದ್ವೈತದಲ್ಲಿ ಒಗ್ಗಟ್ಟು ಏಕತೆ ಸಮಾನತೆ ಇದ್ದರೂ ಅದ್ವೈತ ವೇ ಆಗುತ್ತದೆ. ಯಾವುದೇ ತತ್ವ ರಾಜಕೀಯದಲ್ಲಿ ದುರ್ಭಳಕೆ ಆದರೆ ಮಾತ್ರ ಅಧರ್ಮಕ್ಕೆ ಸ್ಥಾನಮಾನ ಹೆಚ್ಚುವುದು.ಬಹಳ ಕಷ್ಟವಿದೆ ಅಧ್ಯಾತ್ಮ ಸಂಶೋಧನೆ. ಅದಕ್ಕೆ ಬೆಳೆದಿದೆ ಭೌತಿಕ ಸಂಶೋಧನೆ.
ಇದು ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ  ಮಾತ್ರ ಆಗುವುದು ಶೋಷಣೆ. ಶೋಷಣೆಯಿಂದ ಯಾವ ಸತ್ಯವೂ ಅರ್ಥ ವಾಗದು.

Tuesday, March 5, 2024

ಕಲಿಕೆಯೇ ಸರಿಯಿಲ್ಲದ ತಿಳುವಳಿಕೆಯೇ ಅಜ್ಞಾನ

ಪುರಾಣ ಇತಿಹಾಸದ‌ ವಿಚಾರಗಳನ್ನು ನಾವು ಆಧ್ಯಾತ್ಮಿಕ ವಿಚಾರವೆಂದರಿತರೆ ಪೂರ್ಣ ಸತ್ಯವಲ್ಲ. ಅದು ನಡೆದು ಹೋಗಿರುವ ಭೌತಿಕ ವಿಚಾರವೇ ಆಗಿದೆ.ಅದರಲ್ಲಿ ರಾಜಯೋಗವನ್ನು ಅರ್ಥ ಮಾಡಿಕೊಂಡಾಗ ಆತ್ಮಜ್ಞಾನ ಜ್ಞಾನಾಭಿವೃದ್ದಿ ರಾಜಕೀಯಕ್ಕೆ ಬಳಸಿದರೆ  ಭೌತವಿಜ್ಞಾನ.ಸತ್ಯ ಒಂದೇ  ಅದರಲ್ಲಿ ಎರಡು ರೀತಿಯಲ್ಲಿ  ಸತ್ಯವಾದಾಗ ಅರ್ಧ ಸತ್ಯದ  ರಾಜಕೀಯವಾಗಿರುತ್ತದೆ.
ವೇದ ಶಾಸ್ತ್ರ  ಪುರಾಣಗಳು ನಡೆದಿರೋದು ಭೂಮಿಯ ಮೇಲೇ ಎಂದಾಗ ಭೂಮಿ ಒಂದೇ. ಭೂ ಋಣ ತೀರಿಸಲು ಧರ್ಮ ಮಾರ್ಗದಲ್ಲಿ ನಡೆಯಬೇಕೆಂಬುದೇ ಸನಾತನ ಋಷಿಗಳ  ಸಂದೇಶ. ಹೀಗಿರುವಾಗ ಧರ್ಮ ತತ್ವವರಿಯದೆ ಕಲಿಸಿದ ವಿದ್ಯೆಯೇ ಅವಿದ್ಯೆಯಾಗಿ ಅಜ್ಞಾನ ಬೆಳೆಸಿದರೆ  ಇದರಿಂದ  ಲಾಭ ನಷ್ಟ ಯಾರಿಗೆ? ಋಣಸಂದಾಯವಾಗದೆ ಜೀವಾತ್ಮನಿಗೆ‌ಮುಕ್ತಿಸಿಗದು ಎಂದಾಗ‌ ಋಣ ತೀರಿಸಲು ಸತ್ಕರ್ಮ ಸ್ವಧರ್ಮ, ಸಂಸ್ಕಾರದ ಶಿಕ್ಷಣ ವೇ ಮೂಲವಾಗಬೇಕು ಎನ್ನುವ ಮಹಾತ್ಮರುಗಳೆಲ್ಲರೂ ವಿದ್ಯಾವಂತರಾಗಿರಲಿಲ್ಲ ಜ್ಞಾನಿಗಳಾಗಿದ್ದರು.ವಿದ್ಯೆ ಹೊರಗಿನಿಂದ ಕಲಿತರೆ ಜ್ಞಾನ ಒಳಗಿನಿಂದ ಬೆಳೆಯುವ ಶಕ್ತಿ.
ವಿದ್ಯೆ ಜ್ಞಾನಕ್ಕೆ ಪೂರಕವಾದಾಗ ಸಂಪೂರ್ಣ .ವಿರುದ್ದ ಆಗಿದ್ದರೆ ಅಪೂರ್ಣ.
ಪುರಾಣ ಪಾತ್ರ ಪರಿಚಯದಲ್ಲಿ ಸಾಕಷ್ಟು ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಆತ್ಮಜ್ಞಾನವಿರಬೇಕು. ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲರೂ ಆಳೋರೆ ಆದಾಗ ಎಲ್ಲಾ ಒಂದು ರೀತಿಯ ಆಳುಗಳೇ ಆದರೆ ಯಾರನ್ನು ಯಾರು ಆಳಬೇಕಿತ್ತು ಎನ್ನುವ ಪ್ರಶ್ನೆಗೆ ಉತ್ತರ ತಿಳಿದವರಿಲ್ಲದೆ ಅಳುವ ಸರದಿಯಲ್ಲಿ ಸಾಕಷ್ಟು ಮಂದಿ ನಿಲ್ಲಬೇಕಾಗಿದೆ.
ಆತ್ಮ ಯಾವತ್ತೂ  ಸತ್ಯದೆಡೆಗೆ  ನಡೆಸುವಾಗ ಅಸತ್ಯ ಹೇಗೆ ಬೆಳೆಯಿತು? ಪುರಾಣಗಳು ಸತ್ಯ ವಾಗಿದ್ದರೂ ಅದರೊಳಗಿದ್ದ ತತ್ವ ಸತ್ವ ಸತ್ಯ ಯಾಕೆ ಹಿಂದುಳಿಯಿತು? ಇದಕ್ಕೆ ಕಾರಣವೆ ಪುರಾಣ ಇತಿಹಾಸವನ್ನು ರಾಜಕೀಯಕ್ಕೆ ಬಳಸಿಕೊಂಡು ವ್ಯವಹಾರ ನಡೆಸಿರೋದು. ವ್ಯವಹಾರದಲ್ಲಿ ಧರ್ಮ ಸತ್ಯ ಇದ್ದರೆ ಸರಿ ಅದೇ ಇಲ್ಲವಾದಾಗಲೇ  ಅನರ್ಥ ವಾಗುತ್ತದೆ.
ಒಟ್ಟಿನಲ್ಲಿ ಕಲಿಯುಗದಲ್ಲಿ  ಮೊದಲೇ ತಿಳಿಸಿದಂತೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ ಎಂದಂತಿದೆ. ಇದಕ್ಕೆ  ಪರಿಹಾರ ಒಳಗೇ ಇರೋವಾಗ ಒಳಹೊಕ್ಕಿ ಸತ್ಯ ತಿಳಿಯುವ ಜ್ಞಾನದ ಕೊರತೆಯಿದೆ.ಜ್ಞಾನ ಹೊರಗಿನಿಂದ ಬೆಳೆಸಿಕೊಂಡು  ಒಳಗಿನ‌ಜ್ಞಾನ ಹಿಂದುಳಿದಾಗ  ನಮ್ಮ ಆತ್ಮಕ್ಕೆ ತೃಪ್ತಿ ಸಿಗದೆ ಹೋಗುತ್ತದೆ. ಆದರೆ ಭೌತಿಕದಲ್ಲಿ ರಾಜಕೀಯ ಅಗತ್ಯವಿದೆ.
ಕಾರಣ  ಎಲ್ಲಿಯವರೆಗೆ  ಮಾನವನಿಗೆ ಕಾನೂನಿನ ಚೌಕಟ್ಟು ಇರುವುದಿಲ್ಲವೋ ಅಲ್ಲಿಯವರೆಗೆ ತನ್ನ ಮನಸ್ಸನ್ನು ಹಿಡಿದುಕೊಂಡು ‌ ಬದುಕಲಾಗದು. ಆದರೆ ಇದು ಹಣದಿಂದ  ಖರೀದಿಸುವಷ್ಟು  ಭ್ರಷ್ಟರ ಪಾಲಾದರೆ ಮಾತ್ರ  ಕಾನೂನಿಗೆ ಅರ್ಥ ವಿರದು. ಇಂದಿನ ಸಮಾಜದಲ್ಲಿ ಸಾಕಷ್ಟು ಜ್ಞಾನಿಗಳಿರುವರು. ಸಾಕಷ್ಟು  ಹೆಸರು,ಹಣ ಅಧಿಕಾರವನ್ನೂ ಪಡೆದು ಮುಂದೆ ಬಂದಿರುವರು.ಆದರೆ ಅವರು ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ನಡೆಯುತ್ತಿರುವ ಅಧರ್ಮ ಅಸತ್ಯ ಅನ್ಯಾಯವನ್ನು ಪ್ರಶ್ನೆ ಮಾಡದ ಕಾರಣವೇ ಭ್ರಷ್ಟರು ದುಷ್ಟರು ಬಲಿಷ್ಟರಾಗಿರೋದು. ಬಿಲಿಷ್ಟರೆಂಬಕಾರಣಕ್ಕಾಗಿ ಇವರನ್ನು ದೇಶಭಕ್ತರೆಂದರೆ ತಪ್ಪು. ಒಬ್ಬ. ದೇಶಕಾಯುವ ಸೈನಿಕನಿಗೆ ಬಲಿಷ್ಟ ಎನ್ನಬಹುದು. ಆದರೆ ದೇಶ ಆಳುವವರಿಗೆ ಬಲಿಷ್ಟ ಎಂದರೆ ಹೇಗೆ? ಜನರಿಂದ ಜನರಿಗಾಗಿ ಜನರೇ  ಅವರ  ಮತದಾನದಿಂದ ‌ಮೇಲೆತ್ತಿರುವಾಗ ಯಾರಬಲ ಯಾರಲ್ಲಿದೆ?
ಒಟ್ಟಿನಲ್ಲಿ ಪುರಾಣ ಕಾಲದಿಂದಲೂ  ಈ ಹೆಣ್ಣು ಹೊನ್ನು ಮಣ್ಣಿಗಾಗಿ  ಹೋರಾಟ ಹಾರಾಟ ಮಾರಾಟಗಳಾಗಿವೆ.ಇದು ವಿಪರೀತ  ಬೆಳೆದು ಅಸುರರು ಭೂಮಿಯಲ್ಲಿ ಬೆಳೆದುನಿಂತಾಗ ಯುದ್ದಗಳಾಗಿವೆ. ಇಂದು ವಿಪರ್ಯಾಸವೆಂದರೆ ಯುದ್ದಗಳೇನೋ ನಡೆಯುತ್ತಿದೆ ಆದರೆ ಅದರ ಉದ್ದೇಶ ಧರ್ಮ ರಕ್ಷಣೆಯಾಗಿಲ್ಲ. ಒಂದು ಜೀವ  ಮಾನವಜನ್ಮ ಪಡೆಯೋದಕ್ಕಾಗಿ ಎಷ್ಟೋ ಜನ್ಮಗಳೆತ್ತಿ ಕಷ್ಟಪಟ್ಟಿರುತ್ತದೆ.ಆದರೆ ಇಲ್ಲಿ ಮಾನವನಿಗೆ ತನ್ನ ಜೀವಾತ್ಮನಿಗೆ  ಮುಕ್ತಿ ಸಿಗೋದಕ್ಕೆ ಬೇಕಾದ ಸತ್ಯಜ್ಞಾನವೇ  ಸಿಗದಿದ್ದರೆ ಜನ್ಮ ವ್ಯರ್ಥ. ಹಾಗಂತ ಎಲ್ಲರಿಗೂ ಅದೇ ಉದ್ದೇಶ ವಿರದು.ಹಿಂದಿನ ದ್ವೇಷ,ಋಣಗಳ ಮೂಲವೇ ಈ ಜನ್ಮವಾದಾಗ ಹಿಂದಿನ ಪುರಾಣ ಇತಿಹಾಸ ತಿಳಿಯುವಾಗ ಅಂದಿನ ಮಹಾರಾಜ ರಲ್ಲಿದ್ದ ಧಾರ್ಮಿಕ ಪ್ರಜ್ಞೆ ಇಂದು ಆಳುವವರಿಗೆ ಇದೆಯೇ? ಅಂತಹಶಿಕ್ಷಣ ನೀಡಲಾಗಿದೆಯೆ?/ಇದ್ದರೆ ಯಾಕೆ ಜನಸಾಮಾನ್ಯರ ಸತ್ಯಕ್ಕೆ  ಸ್ಪಂಧಿಸುವ ಗುಣವಿಲ್ಲ..ರಾಜಕಾರಣಿಗಳಾದರೂ ಇದ್ದಾರೆ ಆದರೆ ಧಾರ್ಮಿಕ ಕ್ಷೇತ್ರದಲ್ಲಿನ  ಮುಖ್ಯಸ್ಥರು ತಾವು ದೇವರಿಗಿಂತ ಗುರುವಿಗಿಂತ ದೊಡ್ಡವರೆನ್ನುವಂತೆ‌ ವರ್ತ ನೆ ಮಾಡಿಕೊಂಡು ಭಕ್ತರ ಹಣದಲ್ಲಿ  ಶ್ರೀಮಂತ ರಾಗಿರೋದನ್ನು ನೋಡಿದರೆ ಇಲ್ಲಿ ಜ್ಞಾನಕ್ಕಿಂತ ಹಣವೇ ಮುಖ್ಯವಾಗಿದೆ. ನಿಜ ಒಂದು ಅಧಿಕಾರ ಪಡೆದಾಗ ಹಣವಿಲ್ಲದೆ ಕೆಲಸವಾಗದು.ಆದರೆ ಆ ಹಣದಿಂದ  ಧರ್ಮ ರಕ್ಷಣೆ ಆಗಿದ್ದರೆ ಸರಿ.ಅದೇ ಜನರನ್ನು ಅಧರ್ಮಕ್ಕೆ  ಸಹಕಾರನೀಡುವಂತೆ ಪ್ರಚೋಧಿಸಿದರೆ?
ಕಲಿಗಾಲದ ಕಲಿಕೆಯಲ್ಲಿಯೇ ರಾಜಕೀಯ ಬೆರೆಸಿಕೊಂಡು ಯಾವುದನ್ನು ತಿಳಿಸಿದರೆ ಆತ್ಮಜ್ಞಾನ ಬೆಳೆಯುವುದೋ ಅದನ್ನು ಬಿಟ್ಟು ಹೊರಗೆನಡೆದವರ ಹಿಂದೆ ನಿಂತು ರಾಜಕೀಯಕ್ಕೆ ಸಹಕರಿಸುವವರೆ ಶಿಕ್ಷಕರಾಗಿ ಗುರುವಾಗಿದ್ದರೆ  ಅದರಲ್ಲಿ ರಾಜಯೋಗವೇ ಇಲ್ಲ.
ಯೋಗವೆಂದರೆ ಸೇರೋದು.ಪರಮಸತ್ಯದ ಜೊತೆಗೆ ಪರಮಧರ್ಮ ಸೇರೋದು.ಪರಮಾತ್ಮನಜೊತೆ ಜೀವಾತ್ಮ ಸೇರೋದು ಯೋಗ.ಇದು ಸತ್ಯಜ್ಞಾನ ,ಭಕ್ತಿ ಸತ್ಕರ್ಮದ  ಮೂಲಕವಾದಾಗಲೇ  ಯೋಗಿಯಾಗೋದು.ಪುರಾಣದಲ್ಲಿ ಯೋಗಿಗಳಿಂದ ಧರ್ಮ ರಕ್ಷಣೆಯಾಗಿದೆ. ಶ್ರೀ ರಾಮ ಮಹಾಯೋಗಿ. ಶ್ರೀ ಕೃಷ್ಣನೂ ಯೋಗಿಯೇ ಆಗಿದ್ದರೂ ಅವನ ಭೋಗ ಜೀವನವನ್ನು ಅಪಾರ್ಥ ಮಾಡಿಕೊಂಡು ಸುಖವಾಗಿದ್ದು ಜನಬಲ ಹಣಬಲ ಅಧಿಕಾರ ಬಲದಿಂದ  ಇಂದು  ಭಕ್ತರೆನಿಸಿಕೊಂಡರೆ  ಸತ್ಯವಿರದು. ಹೀಗಾಗಿ ಕಣ್ಣಿಗೆ ಕಾಣುವ ವೇಷಭೂಷಣಗಳು ಹೊರಗಿನ‌ಜನರನ್ನು ಮರುಳುಮಾಡಿದ್ದರೂ ಒಳಗೇ ಇರುವ ಪರಮಾತ್ಮನಿಗೆ ಮೋಸಮಾಡಲಾಗದು.ಆತ್ಮಸಾಕ್ಷಿಯೇ ಪರಮಾತ್ಮನ ಸತ್ಯ. ಆದರೆ ಇದಕ್ಕೆ ಬೇಕಿದೆ ಸ್ವಚ್ಚಜ್ಞಾನ ವಿಜ್ಞಾನ.ಈಗೆಲ್ಲಿದೆ ಎಲ್ಲಾ ಹಿಂದಿನ ಪುರಾಣವಾಗಿದ್ದು ವಾಸ್ತವ ಸತ್ಯವನರಿಯದೆ ಭವಿಷ್ಯದೆಡೆಗೆ ನೇರವಾಗಿ ಹೊರನಡೆದು ರಾಜಕೀಯದ ಹಿಂದೆ ನಿಂತವರನ್ನು ಮಹಾತ್ಮರೆನ್ನಬಹುದೆ? ಹಿರಿಯ ಗುರುಗಳ ಕಾಲದಲ್ಲಿದ್ದ ಶಿಕ್ಷಣವ್ಯವಸ್ಥೆ ಮರೆಯಾಗಿ ಈಗಿನ ಶಿಕ್ಷಣದಲ್ಲಿಯೇ  ಜನರನ್ನು ಮಂತ್ರ ತಂತ್ರ ಯಂತ್ರದಿಂದ ಬಂಧಿಸಿದರೆ ಆ ಬಂಧನದಿಂದ  ಬಿಡಿಸಿಕೊಳ್ಳುವ ಸ್ವತಂತ್ರ ಜ್ಞಾನ  ಎಲ್ಲರೊಳಗೂ ಇದ್ದರೂ  ತಿಳಿಸುವವರಿಲ್ಲವಾದಾಗ ಅತಂತ್ರಸ್ಥಿತಿಗೆ ಜೀವ ತಲುಪಿ ಭೂತ ಪ್ರೇತ ಪಿಶಾಚಿಗಳಂತೆ ಅಲೆದಾಡುತ್ತವೆ. ಇದನ್ನು  ಆರಾಧಿಸಿ ಹಣಮಾಡಿ ಬದುಕಿದರೆ  ದೇವರು  ಕಾಣುವರೆ? ಭಗವಂತನ ತಲುಪಲು ಸಾಧ್ಯವೆ?
ಎಲ್ಲರೂ ಇರೋದು ಭಗವಂತನೊಳಗೇ ಆದರೂ ಭೂಮಿಯ ಮೇಲಿರುವಾಗ. ಆ ಭಗವಂತನ‌ ಶಕ್ತಿ ಊಹಿಸಲೂ ಕಷ್ಟ.ಮಾಯೆಯ ವಶದಲ್ಲಿರುವ‌ಮನಸ್ಸಿನ ನಿಗ್ರಹ ಮಾಡಿಕೊಂಡು  ಬದುಕಿದವರೆ ಮಹಾತ್ಮರಾದವರು.
 ಆ ಮಹಾತ್ಮರಿಂದಲೇ ಧರ್ಮ ರಕ್ಷಣೆಯಾಗಿರೋದು..ಈಗ ಮಹಾತ್ಮರ ಹೆಸರಿನಲ್ಲಿ ದೇವರು ಧರ್ಮ ಜಾತಿ ಪಕ್ಷದ. ಹೆಸರಿನಲ್ಲಿ ರಾಜಕೀಯತೆ ನಡೆಸಿದರೆ ಅದು ಅಧರ್ಮ ವೆ ಸರಿ.
ಎಲ್ಲರಲ್ಲಿಯೂ ಪರಮಾತ್ಮನ ಕಾಣೋದು ತತ್ವದ ಉದ್ದೇಶ.
ಪರಮಾತ್ಮನನ್ನೇ ಆಳೋದು ತಂತ್ರವಾಗಿದ್ದರೆ  ಅದು ದುರುದ್ದೇಶವಾಗಿರುತ್ತದೆ. ಇದಕ್ಕೆ ಪ್ರತಿಫಲ ಕಠೋರವಾಗಿರುತ್ತದೆನ್ನುವರು ಯೋಗಿಗಳು.

Monday, March 4, 2024

ನಾವ್ಯಾರು ನಮ್ಮೊಳಗಿರೋ ಶಕ್ತಿ ಯಾರು?

ಎಷ್ಟು ಕಷ್ಟ  ವಿದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಜೈಕಾರ ಹಾಕೋದು .ಇದೊಂದು ದೇಶದ್ರೋಹವಾಗುತ್ತದೆ. ಎಷ್ಟೋ  ಜನರಿಗೆ ಈ ವಿಷಯದ ಬಗ್ಗೆ ಜ್ಞಾನವಿಲ್ಲದೆ ಮನೆಯೊಳಗೆ ಕುಳಿತು ವಿದೇಶವನ್ನು ಹೊಗಳಿಕೊಂಡು ಸ್ವದೇಶದ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ.ಇದೂ‌ಕೂಡ ತಪ್ಪು ಆದರೆ ಇದನ್ನು  ಕಾನೂನು ಪರಿಗಣಿಸದಿರಬಹುದು  ಪರಮಾತ್ಮ ಪರಿಗಣಿಸುವನು. ತಪ್ಪು ಒಳಗೆ ಮಾಡಿದರೂ ತಪ್ಪು ಹೊರಗೆ ತೋರಿಸಿದರೂ ತಪ್ಪು. ಹೊರಗೆ ತೋರಿಸಿದಾಗ ಶಿಕ್ಷೆ ಆಗುತ್ತದೆ.ಒಳಗೇ ಬೆಳೆಸಿಕೊಂಡರೂ  ಬೇರೆ ರೀತಿಯಲ್ಲಿ ಶಿಕ್ಷೆ ಆಗುತ್ತದೆ. ಆದರೂ  ತಪ್ಪನ್ನು ತಿದ್ದಿ ‌ನಡೆಯುವುದಕ್ಕೆ ಶಿಕ್ಷೆ ಅಗತ್ಯವಿದೆ. 
ಕಳೆದು ಹೋದ ಒಂದು ಇದೇ ರೀತಿಯ ಘಟನೆಯ ಬಗ್ಗೆ ಒಂದು ಮಗು ಕೇಳಿದ ಪ್ರಶ್ನೆ ಏನೆಂದರೆ ಯಾಕೆ ಒಮ್ಮೆ ಒಬ್ಬ ಕೂಗಿದ್ದಕ್ಕೆ ಶಿಕ್ಷೆ ಆಗಿರುವಾಗ ಅದೇ ವಿಷಯ ಹಿಡಿದು ಮನೆ‌ ಮನೆಗೆ ಸುದ್ದಿ  ತಲುಪಿಸುವಾಗ ಎಷ್ಟೋ  ಮಾಧ್ಯಮದವರು ರಾಜಕಾರಣಿಗಳು ಜನರು ಅದೇ ರೀತಿ ಹೇಳಿದ್ದಕ್ಕೆ ಯಾಕೆ ಶಿಕ್ಷೆಯಾಗಿಲ್ಲ? 
ಇದರಲ್ಲಿ ಸತ್ಯವಿಲ್ಲವೆ? ಮಕ್ಕಳ ಮುಗ್ದ ಮನಸ್ಸು ದೇವರಂತಿರುತ್ತದೆ. ಪರೋಕ್ಷವಾಗಿ ಅಪರೋಕ್ಷವಾಗಿ  ನೋಡಿದಾಗ ನಮ್ಮ ಬಾಯಿಂದ ಬರುವ‌ಪ್ರತಿಯೊಂದು ಶಬ್ದದ ಹಿಂದೆ  ನಡೆಯೋ ಪ್ರತಿಕ್ರಿಯೆ ಒಂದೇ ಆಗಿರುತ್ತದೆ.ನಾವು ಏನನ್ನು  ಹೇಳುವೆವೋ ಅದೇ ಬೆಳೆಯುವುದು.ವಿದೇಶಕ್ಕೆ ಜೈಕಾರ ಹಾಕಿದರೆ ವಿದೇಶಕ್ಕೆ ಒಳ್ಳೆಯದಾಗುವುದು.ಅದು  ನಮ್ಮ ಮನಸ್ಸಿನಿಂದ ಹೇಳುವೆವೋ ಅಥವಾ ಯಾರೋ ಹೇಳಿಸುವೆವೋ  ಅಥವಾ ಯಾರೋ ಹೇಳಿದ್ದನ್ನು ತಿರುಗಿ ಹೇಳುವೆವೋ  ಅದು ತಿಳಿಯೋದಿಲ್ಲ. ವಾಲ್ಮೀಕಿ ಮಹರ್ಷಿ ಯಾಗೋದಕ್ಕೆ  ರಾಮ ಜಪ ಮಾಡಿದ್ದೇ ಕಾರಣವೆನ್ನುವರು. ಇಲ್ಲಿ ಮರ ಮರವೇ ರಾಮ ರಾಮವಾಗಿ ಆತ್ಮಜ್ಞಾನ ಸಿಕ್ಕಿದೆ ಎಂದಾಗ ಒಂದು ಹೆಸರನ್ನು ಪದೇ ಪದೇ ಹೇಳಿದಾಗ ಅದರ ಪ್ರತಿಫಲ ಒಳ್ಳೆಯದಾದರೆ ಉತ್ತಮ. ಇದಕ್ಕೆ ಬದಲಾಗಿ  ಕೆಟ್ಟ ಫಲ ಸಿಕ್ಕರೆ? ಅದಕ್ಕೆ ತಿಳಿಸೋದು ಒಳ್ಳೆಯ ಸುದ್ದಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡುತ್ತಾ ಜನರಲ್ಲಿ ಒಳ್ಳೆಯ ಜ್ಞಾನ ಬೆಳೆಯಲು  ಸಹಕರಿಸಿದರೆ ಒಳ್ಳೆಯ ಬದಲಾವಣೆ ಆಗುತ್ತದೆ.
ಆದರೆ ವಿಪರ್ಯಾಸವೆಂದರೆ ಇಂದಿನ ದಿನಗಳಲ್ಲಿ ಕೆಟ್ಟ ಸುದ್ದಿಗೆ ಹೆಚ್ಚು ಹಣ  ಜಾಹಿರಾತು ಜನಬಲ ಇರುವ‌ಕಾರಣ ವ್ಯವಹಾರವೇ ಮುಖ್ಯವಾಗುತ್ತಾ  ಅಸತ್ಯ ಅನ್ಯಾಯ ಅಧರ್ಮ ದ ಭ್ರಷ್ಟ ದುಷ್ಟರ ವಿಷಯಗಳನ್ನು ‌ಪದೇ  ಪದೇ‌ಹೇಳುತ್ತಾ ಕೇಳುತ್ತಾ  ನೋಡುತ್ತಾ ಮಾನವ ಮುಂದೆ ಹೋದಂತೆಲ್ಲಾ ಅದೇ ಶಕ್ತಿಗಳ ಕೈಕೆಳಗೇ  ಕೆಲಸಮಾಡುವ ಪರಿಸ್ಥಿತಿ  ಬಂದಿದೆ ಎಂದಾಗ ನಾವು ಯಾರನ್ನು ಬೆಳೆಸಿದ್ದೇವೆ?
ಹೊರಗಿನ  ರಾಜಕೀಯತೆ ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆ ಪೋಷಕರಾಗಲಿ ಶಿಕ್ಷಣಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಲಿ ಗಮನಿಸದಿರೋದೆ  ವಿಪರ್ಯಾಸ. ಕಾರಣ ಎಲ್ಲರ ದೃಷ್ಟಿ ರಾಜಕೀಯದ ಮೇಲೇ ಇರೋವಾಗ ಮಕ್ಕಳ ಮೇಲೆ ಹರಿಸಲಾಗೋದಿಲ್ಲವಲ್ಲ. ಇಲ್ಲಿ ತಪ್ಪು ಮಕ್ಕಳಲ್ಲಿಲ್ಲ ಪ್ರಚಾರಕರಲ್ಲಿದೆ ಪೋಷಕರಲ್ಲಿದೆ. ಈ ಒಂದೇ ವಿಷಯದ ಬಗ್ಗೆ ಇಲ್ಲಿ ತಿಳಿಸುವ‌ಪ್ರಯತ್ನವಾಗಿದೆಯಷ್ಟೆ.ಉಳಿದ ಇನ್ನಿತರ ಸುದ್ದಿಗಳ,ಧಾರಾವಾಹಿ, ಮನರಂಜನಾ ಕಾರ್ಯಕ್ರಮಗಳ ಹಿಂದೆ ‌ ಎಷ್ಟೋ ನಕಾರಾತ್ಮಕ  ಶಕ್ತಿಯನ್ನು  ತಿಳಿಯದೆಯೇ ನಾವು ಒಳಗೆ ಎಳೆದುಕೊಂಡು ಜೀವನವನ್ನು ನರಕಮಾಡಿಕೊಂಡು ಸರ್ಕಾರ ಕಾರಣವೆಂದರೆ  ತಪ್ಪು ಯಾರದ್ದು? ಕಣ್ಣಿಗೆ ಕಾಣೋದೇ ಬೇರೆ ಹಿಂದೆ ನಡೆಯೋದೇ ಬೇರೆ  ಹಾಗೆ ಅಧ್ಯಾತ್ಮ ವಿಜ್ಞಾನವೇ ಬೇರೆ ಭೌತ ಜಗತ್ತೇ ಬೇರೆಯಾಗಿ ತಮ್ಮದೇ  ಮಾರ್ಗದಲ್ಲಿ ವಿರುದ್ದ ದಿಕ್ಕಿನಲ್ಲಿ ನಡೆದಾಗ ಅಂತರದಲ್ಲಿ ನಿಂತು ಆಡಿಸೋ ಮಧ್ಯವರ್ತಿ  ಮಾನವನ ಸ್ಥಿತಿ  ಅಧೋಗತಿ. ಇದರ ಬಗ್ಗೆ ಜ್ಞಾನಿಗಳಾದವರು‌ ಮಾತನಾಡೋದಿಲ್ಲವಾದಾಗ  ದುಷ್ಟರಿಗೆ ಇನ್ನಷ್ಟು ಬಲ.
ಮಕ್ಕಳನ್ನು ರಾಜಕೀಯಕ್ಕೆ ಎಳೆಯದೆ ರಾಜಯೋಗದ ಕಡೆಗೆ ಎಳೆದಾಗಲೇ ವಿವೇಕಾನಂದರಂತಹ ದೇಶಭಕ್ತರಾಗೋದು.
ಮಕ್ಕಳಿಗೆ  ಕೊಡುವ ಶಿಕ್ಷಣದಲ್ಲಿಯೇ  ಎಡವಿರುವಾಗ ಎಲ್ಲಿಯ ಬದಲಾವಣೆ? ಪ್ರತಿಯೊಬ್ಬರೂ ದೇಶದ ಒಳಗಿನ ಸಾಮಾನ್ಯಪ್ರಜೆಗಳೆ. ಕೆಲವರಲ್ಲಿ ದೇಶದ ಸಾಲ ಹೆಚ್ಚಾಗಿದ್ದರೆ ಕೆಲವರಲ್ಲಿ ಕಡಿಮೆಯಿದೆ ಅಷ್ಟೆ. ಕಡಿಮೆಯಿದ್ದವರಲ್ಲಿ ಜ್ಞಾನವಿದ್ದು  ಸ್ವತಂತ್ರ ಜೀವನ ನಡೆಸೋ ಅವಕಾಶವಿದ್ದರೆ ದೇಶದ ಋಣ ತೀರಿಸಬಹುದು. ಹೆಚ್ಚಾದವರಲ್ಲಿ‌ ನಿಸ್ವಾರ್ಥ ನಿರಹಂಕಾರ ವಿದ್ದು ದೇಶ ಸೇವೆಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ  ಋಣಮುಕ್ತರಾಗಬಹುದು.
ಆದರೆ, ವಿದೇಶದ ಸಾಲ ಬಂಡವಾಳ ವ್ಯವಹಾರದ ಜೊತೆಗೆ  ಅದರ ವ್ಯಾಮೋಹದಲ್ಲಿ  ಒಳಗೇ ಬೆಳೆಯುತ್ತಿದ್ದರೆ  ಅದೇ ದೇಶಕ್ಕೆ ಅಪಾಯ. ಇದು ಕಣ್ಣಿಗೆ ಕಾಣದಿದ್ದರೂ  ಬೆಳೆಯುತ್ತದೆ. ಇದಕ್ಕೆ  ಶಿಕ್ಷೆ  ಪರಮಾತ್ಮನೇ ಕೊಡಬೇಕಿದೆ.
ನೇರ ನಡೆ ನುಡಿಯೊಳಗಿರುವ ಸತ್ಯ ಎಲ್ಲರಿಗೂ ಅಪ್ರಿಯವಾದರೂ ಭಗವಂತನಿಗೆ ಪ್ರಿಯವಾಗಿರುತ್ತದೆ. ಅದಕ್ಕಾಗಿ ಮಹಾತ್ಮರುಗಳು ‌ ನೇರವಾಗಿ ನಡೆದಿದ್ದರು. ಈಗ ನೇರವಾಗಿ ಸತ್ಯ ತಿಳಿಸಿದರೂ ತಪ್ಪು ಎನ್ನುವವರೆ ಹೆಚ್ಚಾಗಿರುವಾಗ  ಸತ್ಯವೇ ದೇವರಾಗಿರದು. ಅಸತ್ಯವೇ ದೇವರಂತೆ ಕಾಣಬಹುದು.ಅಗತ್ಯವಿರುವಲ್ಲಿ ಅಧರ್ಮ ವೂ ಇರುತ್ತದೆ.ಅಧರ್ಮ ದ ಜೊತೆಗೆ ಅಸುರರೂ ಇರುವರು.ಅಸುರರ ಒಳಗೇ ಸುರರಿದ್ದರೂ  ಕಣ್ಣಿಗೆ ಕಂಡರೂ ಒಪ್ಪಿಕೊಳ್ಳರು.ಹಾಗಾದರೆ ನಾವ್ಯಾರು? ನಮ್ಮೊಳಗೇ ಇದ್ದು ನಡೆಸೋರು ಯಾರು? ಇದನ್ನು ಮಧ್ಯವರ್ತಿಗಳು ಕೇಳಿಕೊಂಡು ನಡೆದಾಗಲೇ  ಮಹಾತ್ಮರು  ಕಾಣುವರು. ಪರಮಸತ್ಯ, ಪರಮಾತ್ಮನ ಅರಿವು ಬೆಳೆಯುವುದು.
ದೇಹ ಶಾಶ್ವತವಲ್ಲ. ದೇಹವಿರೋವಾಗಲೇ ಒಳಗಿರುವ ಶಕ್ತಿಯ ಪರಿಚಯ ಮಾಡಿಕೊಂಡರೆ ಉತ್ತಮ ಜ್ಞಾನ. ಜೀವಾತ್ಮ ಪರಮಾತ್ಮನ  ಸೇರೋದೇ ಮಹಾಯೋಗ. 

Sunday, March 3, 2024

ಅತಿಯಾದ ಅಮೃತವೂ ವಿಷವಾಗಿರುತ್ತದೆ

ಇವತ್ತಿನ ವಿಶೇಷ ಲೇಖನದಲ್ಲಿ  ಎಲ್ಲಾ ವಿಷಯದ‌ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ

ಸಕ್ಕರೆಯಲ್ಲಿ ವಿಷವಿದೆ ಎನ್ನುವುದು ಎಲ್ಲರಿಗೂ  ತಿಳಿದ ವಿಚಾರವೆ ಆದರೂ ಸಕ್ಕರೆ ಸೇವಿಸೋದನ್ನು ಯಾರೂ ಬಿಡದಿರೋದಕ್ಕೆ ಕಾರಣಗಳಿವೆ. ಕೆಲವರಷ್ಟೆ ಅದಕ್ಕೆ ಪೂರಕವಾದ ಬೇರೆಯದನ್ನು ಬಳಸಿ ಸಿಹಿ ಪದಾರ್ಥ ತಿಂದರೆ ಹಲವರಿಗೆ ಇದು ವಿಷವೆಂದರಿತರೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿಯಿರೋದೆ ದೊಡ್ಡದು.ಹಾಗಾದರೆ ಇದಕ್ಕೆ ಪರಿಹಾರ  ತಿನ್ನೊದನ್ನು ಬಿಡೋದೇ ಅಥವಾ ವಿಷವನ್ನು ತೆಗೆಯೋದೇ. ವಿಷ ಬೆರೆಸೋ ವಿಷಜಂತುಗಳು ಈಗಂತೂ ತಿನ್ನುವ ಎಲ್ಲಾ ಆಹಾರ ಪದಾರ್ಥಗಳು,  ಹಾಲು ಹಣ್ಣು, ತರಕಾರಿ ದವಸಧಾನ್ಯಗಳು ಮಾಂಸಹಾರ.ಸಿದ್ದ ಆಹಾರಗಳಲಗಲಿಯೂ ಕಲಬೆರೆಸಿಕೊಂಡು ಮಾರಾಟವಾಗುತ್ತಿದ್ದರೂ ಅದನ್ನು ತಿಳಿದರೂ ಯಾವುದೇ ರೀತಿಯ ಕಾನೂನಿನ‌ಕ್ರಮ ತೆಗೆದುಕೊಳ್ಳಲಾಗದೆ ಇದನ್ನು ಜನಸಾಮಾನ್ಯರವರೆಗೆ ಪ್ರಚಾರ ಮಾಡಿಕೊಂಡಿದ್ದರೆ  ಉಪಯೋಗವಿಲ್ಲ.ಜನರ ಮನಸ್ಸಿನಲ್ಲಿ ವಿಷ ಬೆರೆಸಿದರೆ  ಇದ್ದೂ ಸತ್ತಂತೆ. ಅಮೃತದಂತಹ ವಿಚಾರವನ್ನು ಹೊರಹಾಕದೆ ಹೊಡಿದಿಟ್ಟುಕೊಂಡು ತಮ್ಮ ವ್ಯವಹಾರಕ್ಕೆ  ಏನು ಬೇಕೋ ಅದನ್ನು ಹೆಚ್ಚಾಗಿ ಹರಡೋದರಿಂದ ಅದೇ ಮುಂದೆ ನಮ್ಮ ಜೀವನಕ್ಕೂ ವಿಷವಾಗಿ ಕಾಡುವುದೆನ್ನುವ ಸತ್ಯ ತಿಳಿದಾಗಲೇ ಪ್ರಚಾರ ಮಾಡೋದಾದರೆ ಉತ್ತಮ ವಿಚಾರಗಳಿರಲಿ ಮನಸ್ಸಿಗೆ ಶಾಂತಿ ನೆಮ್ಮದಿ ಆತ್ಮತೃಪ್ತಿ ನೀಡುವಂತಿರಲಿ. ಇದು ಜನರ  ಜೀವನದಲ್ಲಿ ಬದಲಾವಣೆ ತರುವಂತಾದರೆ ಅದೇ ನಮ್ಮ ಸಮಾಜಸೇವೆಯಾಗಿರುತ್ತದೆ.ತನ್ನ ಸಂಸಾರಕ್ಕಾಗಿ ಸಮಾಜಕ್ಕೆ ಕೆಟ್ಟುಹೋದ ವಿಚಾರ ತಲುಪಿಸುವಾಗ  ಇದರಿಂದಾಗಿ ಸಮಾಜದಲ್ಲಿ  ಯಾವ ದುಷ್ಪರಿಣಾಮ ಬೀರುವುದೆನ್ನುವ ಬಗ್ಗೆ ಪ್ರಚಾರಕರಿಗೆ ಅರಿವಿದ್ದರೆ‌ ನಿಜವಾಗಿಯೂ ನಾವು  ನಡೆಯೋ ದಾರಿ ತಲುಪೋ ದಾರಿ ಸುಗಮವಾಗಿರುವುದು. ಇದರಲ್ಲಿಯೇ ಸ್ವಾರ್ಥ ಪೂರಿತ ವಿಷಯವಿದ್ದು ಯಾವುದೇ ಪರಿಹಾರ ಮಾರ್ಗ ವಿಲ್ಲದೆ ಜನರನ್ನು  ದಾರಿತಪ್ಪಿಸುವ ಅಥವಾ ಆರೋಗ್ಯ ಹಾಳಾಗುವಂತಾದರೆ ಇದಕ್ಕೆ ಭಗವಂತನಲ್ಲಿ ಕ್ಷಮೆಯಿರದು.
ಒಂದು ಮಗು ಜನ್ಮ ಪಡೆಯಲು ಅವರ ಪೋಷಕರೆ ಕಾರಣವಾಗಿರುವರು.ಹಾಗೆ ಒಂದು ಸುದ್ದಿ ಜನ್ಮಪಡೆದು ಜನಸಾಮಾನ್ಯರಿಗೆ ತಲುಪಬೇಕಾದರೆ ಅದೂ ಮಾಧ್ಯಮಗಳಿಂದಲೇ ಸಾಧ್ಯ. ಇದರಲ್ಲಿ ವಿಷಯ ಸತ್ಯ ಧರ್ಮ ನ್ಯಾಯ ನೀತಿಯಿದ್ದರೂ ಅದರ ಹಿಂದೆ  ಸಾಕಷ್ಟು ರಾಜಕೀಯ ಕುತಂತ್ರದ ವ್ಯವಹಾರವೇ ಮುಖ್ಯವಾಗಿದ್ದರೆ ಅಲ್ಲಿ ಸತ್ಯವೂ ಇರದು ಧರ್ಮ ವೂ ನಿಲ್ಲದೆ  ಅಶಾಂತಿಗೆ ಕಾರಣವಾಗುತ್ತದೆ.ಹಾಗಂತ  ಎಲ್ಲರೂ ಒಂದೇ ರೀತಿಯಲ್ಲಿ ಇರೋದಿಲ್ಲ.ಕೆಲವರ ಉದ್ದೇಶ ಉತ್ತಮವಾಗಿದ್ದರೂ ಸುದ್ದಿಯ ಹಿಂದಿರುವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಕಷ್ಟದ ಜೊತೆಗೆ ನಷ್ಟವೂ ಹೆಚ್ಚುವುದು. ಒಟ್ಟಿನಲ್ಲಿ ನಾವೇನು ತಿಳಿಸಿದರೂ ಅದಕ್ಕೆ ಸೂಕ್ತವಾದ ಪರಿಹಾರವಿದ್ದರೆ ಉತ್ತಮ ಇಲ್ಲವಾದರೆ ತಿಳಿಸದಿರೋದೆ ಉತ್ತಮ. ಕಾರಣ ಮಾನವನ ಮನಸ್ಸಿನಲ್ಲಿ ಕುಳಿತು ಆಡಿಸುವ ವಿಚಾರಗಳೇ ಅವನ ಆರೋಗ್ಯಕ್ಕೆ ಹಾನಿಕರವಾಗಬಹುದು. ಕಲಬೆರಕೆಯ ಶಿಕ್ಷಣದಿಂದ ಹಿಡಿದು ಧರ್ಮ, ಜಾತಿ,ಪಕ್ಷ,ವಿಚಾರ
ವಿನಿಮಯವೇ ವಿಷಕಾರಿಯಾಗಿರೋವಾಗ ಹೊರಗಿನಿಂದ ಸೇವಿಸುವ ಆಹಾರದೊಳಗಿನ ವಿಷವೂ ಸೇರಿದರೆ  ಮುಗಿಯಿತು ಕಥೆ ಮಾನವನ ದೇಹವೇ ವಿಷಪೂರಿತವಾಗಿದ್ದು ಅದೇ ಮುಂದಿನ‌ ಪೀಳಿಗೆಗೂ ಹರಡಿಕೊಂಡು  ಬೆಳೆಯುತ್ತದೆ. ಇದಕ್ಕೆ ಪರಿಹಾರ ಅಮೃತದಂತಹ ವಿಷಯವನ್ನು ಶಿಕ್ಷಣದಲ್ಲಿಯೇ ಸೇರಿಸುತ್ತಾ ಸರಳ ಜೀವನ ಸ್ವಾವಲಂಬನೆ, ಸತ್ಯ ಧರ್ಮದ‌ ನಡೆ ನುಡಿ ಸ್ವತಂತ್ರ ಜ್ಞಾನದೆಡೆಗೆ  ನಡೆದ ಮಹಾತ್ಮರ ಆಹಾರ ವಿಹಾರದ ಬಗ್ಗೆ ಗಮನಹರಿಸಿದರೆ ಪ್ರಕೃತಿ ಶುದ್ದವಾಗೇ ಇದೆ ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಲು ನಮ್ಮಲ್ಲಿ ಜ್ಞಾನವಿಲ್ಲ.
ಪ್ರತಿಯೊಂದು ರಾಜಕೀಯ ವ್ಯವಹಾರವಾದಾಗ ಕಾಣೋದು ಹಣ ಮಾತ್ರ.ಇದೇ ಮುಂದೆ  ಎಲ್ಲಾ ಸಮಸ್ಯೆಗಳಿಗೆ ದಾರಿಯಾಗುತ್ತಾ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಆಸೆಗೆ  ಮನಸ್ಸು ಬಲಿಯಾದಾಗ ತಿನ್ನುವುದಕ್ಕಾಗಿಯೇ ಜೀವನವಾಗುತ್ತದೆ. ಇದರಲ್ಲಿ ವಿಷವಿದ್ದರಂತೂ ರೋಗವೇ ಹೆಚ್ಚಾಗಿ  ಯೋಗಿಗಳ ದೇಶ ರೋಗಿಗಳ ದೇಶವಾಗುತ್ತಾ ಹೈಟೆಕ್ ಆಸ್ಪತ್ರೆ ಗಳಿಗೆ ಸರ್ಕಾರ ಸಾಕಷ್ಟು ಹಣ ಸುರಿದರೆ ಉಪಯೋಗವಿಲ್ಲ. ಕಾರಣ  ಸುಜ್ಞಾನವು ಯೋಗದಿಂದ ಸಿಗೋವಾಗ  ಆರೋಗ್ಯ ಉತ್ತಮವಾಗಿರಲು ಆರೋಗ್ಯಕರ ಶಿಕ್ಷಣವಿರಬೇಕಷ್ಟೆ.ಹಿಂದೆ ಮಹರ್ಷಿಗಳು ಯೋಗಿಗಳು ಪ್ರಕೃತಿಗೆ ತಕ್ಕಂತೆ ಜೀವನ ನಡೆಸಿ ಸಾವಿರಾರು ವರ್ಷ ಆರೋಗ್ಯವಾಗಿದ್ದರು ಎಂದರೆ ಪ್ರಕೃತಿ ವಿರುದ್ದದ ಮಾನವನ ನಡೆ ನುಡಿ ಆಹಾರ ವಿಹಾರ ಶಿಕ್ಷಣದ ಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಕಾರಣ. ಒಟ್ಟಿನಲ್ಲಿ ಹೆಚ್ಚುವಿಚಾರ ತಿಳಿದಷ್ಟೂ ಬುದ್ದಿವಂತರಾಗಬಹುದು ಆದರೆ ಜ್ಞಾನಿಗಳಾಗೋದಿಲ್ಲ. ಜ್ಞಾನ ಯಾವತ್ತೂ ಒಳಗೆ ಶುದ್ದವಾಗಿಸುತ್ತದೆ. ಹೊರಗಿನ ವಿಷಯದಲ್ಲಿ ವಿಷವಿರೋವಾಗ ಅಶುದ್ದತೆಯ ದೇಹದಲ್ಲಿ ಸತ್ಯ ಧರ್ಮ ಕ್ಕೆ ಸ್ಥಾನವೇ ಇರದು. ದಯವಿಟ್ಟು ಪ್ರಚಾರಕರು ಎಚ್ಚರವಾಗಿದ್ದು ದೇಶದ ಭವಿಷ್ಯ ನಮ್ಮ ಸುದ್ದಿಗಳ ಮೇಲಿದೆ ಎಂದು ತಿಳಿದು ಯಾವುದನ್ನು ತಿಳಿಸಿದರೆ  ಉತ್ತಮ ಅಧಮ ಎನ್ನುವ ಬಗ್ಗೆ  ಆತ್ಮಾವಲೋಕನ ನಡೆಸಿಕೊಂಡರೆ  ನಾವು ಮಧ್ಯವರ್ತಿ ಯಾಗಿದ್ದರೂ‌ ಮುಂದೆ ನಡೆಯಬಹುದು. ಕಾರಣ ಮಧ್ಯವರ್ತಿ ಯಾವಾಗಲೂ ಅತಂತ್ರವೆ. ಹಾಗಾಗಿ ಮಾನವನಿಗೆ ಮೊದಲು ಮಾನವನಾಗಿ ನಂತರ ಮಹಾತ್ಮರಾಗಲು ತಿಳಿಸಿರೋದು. ಹಣಕ್ಕಾಗಿ ಸುದ್ದಿಯಾಗಬಾರದು.ಜ್ಞಾನಕ್ಕೆ ಸುದ್ದಿ ಹರಡಬೇಕಿದೆ. ಅದರಲ್ಲಿ ನನ್ನ ಜ್ಞಾನವೂ ಬೆಳೆದಾಗಲೇ ಪ್ರಸಿದ್ದರಾಗಬಹುದು.  ಹಲವು ಗುರುಹಿರಿಯರು  ಭೌತಿಕ ವಿಷಯಗಳನ್ನು ತಿಳಿಯಲು ಪ್ರಯತ್ನಪಡೋದೇ ಇಲ್ಲ ಹೀಗಾಗಿ ಅವರಲ್ಲಿ ಆಂತರಿಕ ಶಕ್ತಿ ಜಾಗೃತವಾಗಿದ್ದು ಭವಿಷ್ಯ ಅರ್ಥ ವಾಗಿ ವರ್ತ ಮಾನದ ವಾರ್ತೆ ಉತ್ತಮವಾಗಿರುತ್ತದೆ. ಜ್ಞಾನ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖ.ಹಾಗೆ  ಅಮೃತ ಹೆಚ್ಚಾದರೂ ವಿಷವಾಗಿರುತ್ತದೆ. ವಿಷ ಅಧಿಕವಾದರೂ ಅಮೃತ ಹೊರಬರುತ್ತದೆ.ಅಂದರೆ ವಿಷತುಂಬಿದ ಮನಸ್ಸಿಗೆ ವಿಷವೇ ಅಮೃತ ಕುಡಿದಂತಿರುತ್ತದೆ.ಆದರೆ ಇದೇ ಅಸುರ ಗುಣ.ನಮಗೇ ತಿಳಿಯದೆ ಒಳಗೇ ಎಷ್ಟೋ ಅಸುರಿ ಶಕ್ತಿ ಬೆಳೆದಿರುವಾಗ ಅಸುರರಿಗೆ ವಿಷ  ಏನೂ ಮಾಡದಿದ್ದರೂ ಅದು ಇಡೀ ವಿಶ್ವ ವನ್ನೇ ದಾರಿತಪ್ಪಿಸಿ ಆಳೋದಂತೂ ಸತ್ಯವಾಗಿದೆ. ಸಾಧ್ಯವಾದವರು ಉತ್ತಮ ಸಾತ್ವಿಕ ವಿಷಯಗಳನ್ನು  ಪ್ರಸಾರ ಮಾಡಿದರೆ ಎಲ್ಲೋ ಕೆಲವರ ಜೀವನವೂ ಅಮೃತಮಯವಾಗಬಹುದು.ಅದೇ ನಾವೀಗ ಸಮಾಜಕ್ಕೆ ಮಾಡಬೇಕಾದ ಸಣ್ಣ ಸೇವೆ. ಮೇಲಿರುವ ಭಗವಂತ ಎಲ್ಲದ್ದಕ್ಕೂ ಸಾಕ್ಷಿಯಾಗಿರುವಾಗ  ಜೀವ ಶಾಶ್ವತವಲ್ಲ ಆತ್ಮ ಶಾಶ್ವತ.ಇದನ್ನು ಶುದ್ದವಾಗಿಡಲು ಉತ್ತಮ ವಿಚಾರಗಳನ್ನು ಹರಡಿದರೆ ಉತ್ತಮ ಬದಲಾವಣೆ ಸಾಧ್ಯ.
ದಿನವಿಡೀ ಯಾವುದೋ ಭ್ರಷ್ಟ ದುಷ್ಟ ಭಯೋತ್ಪಾದಕರ ವಿಷಯ ಹಿಡಿದು ಸಮಾಜಕ್ಕೆ ಸುದ್ದಿ ತಲುಪಿಸೋದೇ ನಮ್ಮ ಧರ್ಮ ಎಂದರೆ  ಅಸತ್ಯವಷ್ಟೆ.
ಇದೇ ಅಧರ್ಮಕ್ಕೆ ದಾರಿಯಾಗುತ್ತಿದೆ.ಎಷ್ಟೋ ಭ್ರಷ್ಟ ದುಷ್ಟ
 ಭಯೋತ್ಪಾದಕರ ಜನ್ಮವಾಗುತ್ತಿದೆ‌.ಬೀಜವೇ ವಿಷವಿದ್ದರೆ ಮರವಾಗೋದು.
ಸಾಮಾನ್ಯರ ಜೀವನ ನರಕವಾಗುತ್ತಿದೆ.ಜನರನ್ನು ದಾರಿತಪ್ಪಿಸಿ ಆಳುವವರು ಮಧ್ಯೆ ಬೆಳೆಯುತ್ತಿದ್ದಾರೆ.ಮನೆಯಲ್ಲಿ ನೆಮ್ಮದಿ ಶಾಂತಿ ಸುಖದಿಂದಿದ್ದ ಕುಟುಂಬಗಳು  ಮರೆಯಾಗುತ್ತಿದೆ.
ಕೆಲವರು ಮನೆ ಬಿಟ್ಟು ಹೊರಬಂದರೆ ಹಲವರಿಗೆ ಕುಟುಂಬ ಎಂದರೆ ಏನೆಂಬ ಅರಿವೇ ಇಲ್ಲ. ಒಟ್ಟಿನಲ್ಲಿ ಹಣಕ್ಕಾಗಿ ಏನನ್ನಾದರೂ ಮಾಡಬಹುದೆನ್ನುವ ಬುದ್ದಿವಂತಿಕೆ ಮಾನವನಲ್ಲಿ ಹೆಚ್ಚಾಗಿ ಒಳಗೇ ಅಡಗಿರುವ ಜ್ಞಾನವನ್ನು  ಬೆಳೆಸದ ಶಿಕ್ಷಣವೇ  ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೂ ಈವರೆಗೆ  ಎಷ್ಟೋ  ಮಾನವರು ಎಚ್ಚರವಾಗದಿರೋದಕ್ಕೆ ಕಾರಣ ಒಳಗೇ ಅಡಗಿರುವ ಭಯಪೂರಿತ ವಿಷಯ  ಅದೂ ಹೊರಗಿನಿಂದ ಬೆಳೆದಿದೆಯೋ ಅಥವಾ ಒಳಗಿದ್ದೇ ಸೇರಿದೆಯೋ ದೇವರಿಗಷ್ಟೆ ಗೊತ್ತು.
ಅದನ್ನು  ಹಿಡಿದು ಜೀವನ ನಡೆಸಿದರೆ ಅಮೃತವೆಲ್ಲಿರುತ್ತದೆ? ವ್ಯವಹಾರವಿರಲಿ ಅದು ಧರ್ಮಮಾರ್ಗದಲ್ಲಿರಲಿ.ಧರ್ಮ ವು ಆತ್ಮಸಾಕ್ಷಿಯ ಕಡೆಗಿದ್ದರೆ ಉತ್ತಮ ಬದಲಾವಣೆ ಒಳಗೇ ನಡೆಯುತ್ತದೆ.ವಿಷ ತಿಂದರೂ ಪರಮಾತ್ಮನಿಗೇನೂ ಆಗೋದಿಲ್ಲವೆಂದಂತಿರುತ್ತದೆ.ಇಲ್ಲಿ ಎಲ್ಲರಿಗೂ ತಿಳಿದ ಭಕ್ತ ಪ್ರಹ್ಲಾದನ ಕಥೆ ನೆನಪಿಸಿಕೊಳ್ಳಬಹುದು.ತಂದೆಯೇ ವಿಷದ ಅಸುರ ರಕ್ತಗತವಾಗಿ ಬಂದಿದ್ದರೂ‌ ಮಗನಲ್ಲಿದ್ದ ಅಮೃತದಂತಹ ತತ್ವಜ್ಞಾನವು ದೇವತೆಗಳ ಕೊಡುಗೆಯಾದ ಕಾರಣ ಎಷ್ಟೇ ವಿಷ ಕೊಟ್ಟರೂ ಬದುಕಿ ಬಂದ ಎಂದರೆ  ನಮ್ಮೊಳಗೇ  ಅಮೃತವಿದ್ದರೆ ಹೊರಗಿನ ವಿಷದ ಪರಿಣಾಮ  ತಾತ್ಕಾಲಿಕ ವಾಗಿರುತ್ತದೆ.
ಹಾಗೆಯೇ ನಮ್ಮೊಳಗೇ ಒಳ್ಳೆಯ ಗುಣವಿಶೇಷವಿದ್ದಾಗ ಹೊರಗಿನ ವಿಷಯಗಳಲ್ಲಿ ಅಡಗಿರುವ. ವಿಷವೂ ಅರ್ಥ ವಾಗುತ್ತಾ ಅದರಿಂದ ಮನಸ್ಸು ದೂರವಾಗುತ್ತದೆ. ಮನಸ್ಸಿನ ವಿಷ ಬಹಳ ಅಪಾಯಕಾರಿ. ದೇಹವನ್ನಾದರೂ ಸ್ವಚ್ಚಗೊಳಿಸಬಹುದು.ಮನಸ್ಸನ್ನು ಸ್ವಚ್ಚಗೊಳಿಸೋದು ಕಷ್ಟವಿದೆ. ಇದಕ್ಕೆ ಸಾತ್ವಿಕ  ವಿಚಾರಗಳೇ ಆಹಾರವಾಗಿದೆ.  ಇನ್ನಾದರೂ ಭಾರತೀಯರು  ತಮ್ಮ ಮಕ್ಕಳಿಗೆ ಉಣಬಡಿಸುತ್ತಿರುವ ಶಿಕ್ಷಣದ ವಿಚಾರದ ಬಗ್ಗೆ ಪೋಷಕರಾಗಿ ಗಮನಹರಿಸಿದರೆ ಅಮೃತ ಪುತ್ರರಿಂದ ದೇಶೋದ್ದಾರ ಸಾಧ್ಯವಿದೆ.
ಪ್ರತಿಯೊಂದು ರಾಜಕೀಯ ವ್ಯವಹಾರಕ್ಕೆ ಸೀಮಿತವಾದರೆ ಅದೇ ವಿಷವಾಗಿರುತ್ತದೆ. ಯಾರನ್ನೋ ಯಾರೋ ಆಳೋದೇ ಅಧರ್ಮ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ರಾಜರು ಯಾರು? ಸಾಮಾನ್ಯ ಜ್ಞಾನದ ಕೊರತೆಯೇ ಎಲ್ಲದ್ದಕ್ಕೂ ಕಾರಣ. 
ಅತಿಯಾಗಿ ಒಳಗೂ ಹೋಗದೆ ಅತಿಯಾಗಿ ಹೊರಗೂ ನಡೆಯದೆ ಇತಿಮಿತಿಯಲ್ಲಿ ನಡೆ ನುಡಿ ಇದ್ದರೆ ಸಾಮಾನ್ಯಜ್ಞಾನವಿರುತ್ತದೆ.ನಾವು ನಾವಾಗಿರಬಹುದು. ಇಲ್ಲವಾದರೆ ಇನ್ನೊಬ್ಬರ ಆಳಾಗಿ ಹೋಗೋದು ಸತ್ಯ. ಎಲ್ಲಾ ಭಗವಂತನ ದಾಸರೆ ಭೂಮಿ ಪುತ್ರರೆ ಆದರೂ ಭಗವಂತ ಮತ್ತು ಭೂಮಿಯನ್ನೇ ದಾಸರಾಗಿಸಿಕೊಳ್ಳುವ ಅಸುರರವಶ
ದಲ್ಲಿ ಜೀವನವಿದ್ದರೆ ಯಾರೂ ಕಾಣೋದಿಲ್ಲ.ನಾನು ನಾನಾಗಿಯೂ ಇರೋದಿಲ್ಲ. ನಾನ್ಯಾರೆಂಬ ಪ್ರಶ್ನೆ ಒಳಗಿಂದ ಬರೋದೂ ಇಲ್ಲ.ಪ್ರಶ್ನೆ ಏಳದೆ ಉತ್ತರ ಸಿಗೋದೂ ಇಲ್ಲ. ಎಲ್ಲಾ ಹೊರಗಿನ ವಿಷವೇಸ್ಥಾನ ಪಡೆದು ಸನ್ಮಾನ ಗಳಿಸುತ್ತಾ   ದೇಹ ತುಂಬಿಕೊಳ್ಳುತ್ತದೆ. ಅದೇ ದೇಶ ವಿಶ್ವ ವನ್ನು ಆಳಲು ಹೊರಡುತ್ತದೆ.  ಇದಕ್ಕೆ ಸಹಕಾರ ಕೊಟ್ಟವರೆ ಮಾನವರು.
ದೇವಾಸುರರ ನಡುವಿರುವ ಮಾನವ ಶಕ್ತಿಯ ಸಹಕಾರವಿಲ್ಲದೆ ಏನೂ ನಡೆಯದು,ನಡೆಯುತ್ತಿಲ್ಲ,
ನಡೆಯುತ್ತಿರುವುದು ನಡೆದಿದೆ.ನಮ್ಮ ಮನಸ್ಸು ಅಮೃತ ತತ್ವದೆಡೆಗೆ ನಡೆದಾಗಲೇ ವಿಷದ ಪ್ರಭಾವ ಕುಸಿಯುತ್ತದೆ.  ಇಲ್ಲಿ ಯಾರನ್ನೂ ತೆಗಳುವ  ಹಾಗಿಲ್ಲ  ಹೊಗಳುವಂತೆಯೂ ಇಲ್ಲ. ಅವರವರ ಸಂಸಾರಕ್ಕೆ ಮಾಡಿಕೊಂಡ ಆಸ್ತಿ  ಅವರಷ್ಟೆ ಅನುಭವಿಸುವಾಗ ಇದರಲ್ಲಿ ಯಾರಿಗೂ ಪಾಲಿಲ್ಲ. ಹಾಗೇನಾದರೂ ಕೊಟ್ಟರೆ ಅದರಲ್ಲಿ  ಧರ್ಮ ಸತ್ಯವಿದ್ದರೆ ಉತ್ತಮ.ಅಧರ್ಮ ಅಸತ್ಯವಿದ್ದರೆ ಪಡೆದವರಿಗೂ ಸಂಕಷ್ಟ. ಸರ್ಕಾರವೇ ಭ್ರಷ್ಟಾಚಾರ ದಲ್ಲಿರುವಾಗ ಅದರ ಹಿಂದೆ ನಡೆದವರಿಗೆ ಒಳ್ಳೆಯದಾಗುವುದೆ? ಅಥವಾ ಮನೆಯೊಡೆಯನೇ ಕಳ್ಳ ಸುಳ್ಳನಾಗಿದ್ದರೆ ಮಕ್ಕಳು  ಸತ್ಯವಂತರಾಗೋದು ಕಷ್ಟವಿದೆ. ಹಾಗೆ ನಾನೇ ವಿದೇಶಿಗರ ವಶದಲ್ಲಿರುವಾಗ ದೇಶದ ಆಸ್ತಿ ಹೇಗಾಗಬಹುದು? ಅವರಿಂದ ದೂರವಿದ್ದು ಉತ್ತಮ ಸಂಸ್ಕಾರದ ಶಿಕ್ಷಣದ ಜೊತೆಗೆ ಗುರುವಿನ ಅನುಗ್ರಹವಿದ್ದರೆ ಸಾಧ್ಯ.ಆದರೆ ಇಂದು ಇದಕ್ಕೆ  ಸಹಕರಿಸುವವರು  ಯಾರಿದ್ದಾರೆ? ಧಾರ್ಮಿಕ ಕ್ಷೇತ್ರದ ಹಿಂದೆ ರಾಜಕಾರಣಿಗಳಿದ್ದಾರೆ.ಹಾಗೆ ರಾಜಕಾರಣಿಗಳ ಹಿಂದೆ ಧಾರ್ಮಿಕ ಗುರುಗಳೂ ಹಲವರು  ನಡೆದಿದ್ದಾರೆಂದರೆ ಯಾರಿಂದ ಯಾರು ಬೆಳೆದಿರೋದು? ಪ್ರಜಾಪ್ರಭುತ್ವದ ಪ್ರಜೆಗಳೇ  ಎಚ್ಚರವಾಗಿದ್ದರೆ  ನಮ್ಮೊಳಗೇ ಇರುವ  ಸತ್ಯದ ಹಿಂದೆ ನಡೆದರೆ ಭಗವಂತನಿರುವನು,ಹೊರಗೆ ನಡೆದಷ್ಟೂ ಭಗವಂತನಿಂದ ದೂರವಾದಂತೆ.  ಇದನ್ನರಿತು  ನಮ್ಮ ಇಂದಿನ ಸ್ಥಿತಿಗೆ ಕಾರಣ ತಿಳಿದರೆ  ಪರಿಹಾರವೂ ಒಳಗೇ  ಸಿಗಬಹುದು. ಕಾಲದ ವಶದಲ್ಲಿರುವ ಕಲಿಗಾಲದಲ್ಲಿ  ಕಲಿಕೆಯೇ ಸರಿಯಿಲ್ಲವಾದರೆ  ಎಲ್ಲಾ ಪರರ ವಶ.
ಪರಮಾತ್ಮನ ವಶದಲ್ಲಿ ಅಲ್ಪಮಂದಿಯಿರಬಹುದು.
ಅಲ್ಪಸಂಖ್ಯಾತರನ್ನು ಬಹುಸಂಖ್ಯಾತಗೊಳಿಸುವ ಅಜ್ಞಾನದ ಸಹಕಾರಕ್ಕಿಂತ ಅಲ್ಪಸಂಖ್ಯಾತರಲ್ಲಿರುವ  ಅಲ್ಪ ಬುದ್ದಿಗೆ  ಉತ್ತಮ ಸಂಸ್ಕಾರದ ಶಿಕ್ಷಣ‌ನೀಡಿ ಬೆಳೆಸಿದ್ದರೆ ಆತ್ಮನಿರ್ಭರ ಭಾರತವಾಗುತ್ತಿತ್ತು. ನಿಜವಾದ ಜ್ಞಾನಿಗಳನ್ನೇ ಅಲ್ಪಸಂಖ್ಯಾತರನ್ನು ಒಪ್ಪಿ ನಡೆಯುವಂತೆ ಮಾಡಿದರೆ ಆತ್ಮದುರ್ಭಲ ಭಾರತ. ಇಲ್ಲಿ ಯಾವ ಜನ್ಮದಲ್ಲಿ ಯಾವ ಧರ್ಮ,ಜಾತಿ, ದೇಶ,ಪಕ್ಷದ ಅಡಿಯಲ್ಲಿದ್ದರೂ ಅದರ ಋಣ ತೀರಿಸಲು ಅದರಡಿ ಜನಗಮಪಡೆದು ಬರಲೇಬೇಕೆನ್ನುತ್ತದೆ ಆಧ್ಯಾತ್ಮ ಸತ್ಯ.
ವಿಶ್ವ ವಿಡೀ ಹರಡಿರುವ ಹಿಂದೂ ಧರ್ಮ ದವರು ಹಿಂದೂಸ್ತಾನದಲ್ಲಿಯೇ ಕಡಿಮೆಯಾದರೆ ಹಿಂದೂ ದೇಶ ಆಗೋದಿಲ್ಲ.ಮೊದಲು ನಮ್ಮ ನಮ್ಮ ಹಿಂದಿನ ಗುರುಹಿರಿಯರ ಶಿಕ್ಷಣಜ್ಞಾನ ಧರ್ಮ ಕರ್ಮ ದ ಬಗ್ಗೆ ತಿಳಿದು ಮಕ್ಕಳಿಗೆ ಮನೆಯೊಳಗೆ ತಿಳಿಸಿ ಬೆಳೆಸುವತ್ತ ಹಿಂದೂಗಳಿರುವರೆ  ಎಂದರೆ ಇಲ್ಲವೆನ್ನಬಹುದು.ಕಾರಣ ನಮ್ಮ ಮೊದಲ ಶಿಕ್ಷಣವೇ ಹೊರಗಿನವರ ಕೊಡುಗೆ.
ಅವರನ್ನು ದ್ವೇಷ ಮಾಡಿದಷ್ಟೂ ಅಜ್ಞಾನವೇ ಸುತ್ತಿಕೊಂಡು ಆಳುತ್ತದೆ.ಹೀಗಾಗಿ ದ್ವೇಷ ಬಿಟ್ಟು ಹಿಂದಿನ ಸತ್ಯ ಅರ್ಥ ಮಾಡಿಕೊಂಡು ನಮ್ಮ ಜೀವನಕ್ಕೆ ಬೇಕಾದ  ವಿಚಾರವಷ್ಟೆ ತಿಳಿದು ಅಳವಡಿಸಿಕೊಳ್ಳಲು ಸರ್ಕಾರದ ಅಗತ್ಯವಿರಲಿಲ್ಲ. ಹೊರಗಿನಿಂದ ಪಡೆದದ್ದು ಸಾಲ ಒಳಗಿನಿಂದ ಸಾಲ ತೀರಿಸಿದ್ದು  ಧರ್ಮ.  ಆದರೆ ಒಳಗಿನ ಸಾಲ ತೀರಿಸಲು ಹೊರಗಿನಿಂದ ಸಾಲ ಪಡೆದದ್ದು ಧರ್ಮ ವಾಗದು.
ಎಷ್ಟೋ ಪ್ರಭುದ್ದ ಯುವಪೀಳಿಗೆ  ತಮ್ಮ ದುಡಿಮೆಯ ಹಣವನ್ನು  ದೇಶದ ಏಳಿಗೆಗಾಗಿ ಕೊಟ್ಟಿದ್ದರೂ  ಅದನ್ನು ದುರ್ಭಳಕೆ ಮಾಡಿಕೊಂಡು ಆಳುವವರೆ ಅರಸರಾದರೆ ಅಧೋಗತಿ. ಅದೇ ಹಣವನ್ನು  ನಮ್ಮ ಹತ್ತಿರವೇ ಇರುವ ಶ್ರಮ ಜೀವಿಗಳಿಗೆ  ಕೊಟ್ಟು ಅವರು ಸ್ವತಂತ್ರ ವಾಗಿ ಜೀವನ ನಡೆಸೋ ಕೆಲಸ ಕೊಟ್ಟಿದ್ದರೆ  ಆತ್ಮರಕ್ಷಣೆಯಾಗುತ್ತದೆ.
ಈ ಕಡೆ ಓದಿನಲ್ಲೂ  ನಮ್ಮಜ್ಞಾನವಿಲ್ಲ, ಕೆಲಸದಲ್ಲೂ ನಮ್ಮತನವಿಲ್ಲ, ಧರ್ಮ ವಂತೂ ಇಲ್ಲವೇ ಇಲ್ಲವೆಂದಾಗ ಸತ್ಯ ಎಲ್ಲಿರುವುದು? ಆಳವಾಗಿರುವ ಬೇರನ್ನು ಕೀಳಲಾಗದು. ರೆಂಬೆಕೊಂಬೆಗಳು ತಮ್ಮ ಇಷ್ಟದಂತೆ ಬೆಳೆದಾಗ ಕತ್ತರಿಸಬಹುದಲ್ಲವೆ? ಇದಕ್ಕಾಗಿ ಧರ್ಮ ಯುದ್ದಗಳಾಗಿದೆ.

ಒಳಗಿನ ಜ್ಞಾನವನ್ನೇ ಬೆಳೆಸದೆ ಹೊರಗಿನ  ಜ್ಞಾನ ಬೆಳೆಸಿ ಸಾಲ ಮಾಡಿದರೆ  ಅಜ್ಞಾನವಷ್ಟೆ.ಸಾಲ ಪಡೆಯೋದೇ ಹೆಚ್ಚಾದರೆ ತೀರಿಸೋ ಧರ್ಮವಿರದು. ವ್ಯವಹಾರವೇ ಜೀವನವಾಗದೆ ಜೀವನದಲ್ಲಿ ಧಾರ್ಮಿಕ ವ್ಯವಹಾರವಿದ್ದರೆ‌ ಶಾಂತಿ.
ಎಲ್ಲಾ ಮಾಡೋದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಎನ್ನುವುದನ್ನು ಈಗ ಎಲ್ಲರೂ ಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎಂದಂತಾಗಿದೆ.  ಇದಕ್ಕೆ ಕಾರಣವೇ ವಿಷಪೂರಿತ ವಿಷಯಗಳನ್ನು ಹಿಡಿದು ದ್ವೇಷದ ವಿಷಬೀಜ ಬಿತ್ತುವ ಮಧ್ಯವರ್ತಿಗಳು. ಇದರಿಂದ ಲಾಭ ಯಾರಿಗೆ? ನಷ್ಟ ಯಾರಿಗೆ?
ದೈವತ್ವ ಬೆಳೆಸದೆ ಅಸುರತ್ವ ಬೆಳೆಸಿದರೆ ನಮ್ಮೊಳಗೇ ಅಸುರರಿರೋದನ್ನು ತೋರಿಸಿದಂತೆ ಅಲ್ಲವೆ?

ಹಿಂದೆ ಸಕ್ಕರೆ ಕಾಯಿಲೆ ಶ್ರೀಮಂತರ ಕಾಯಿಲೆ ಎನ್ನುತ್ತಿದ್ದರು.ಈಗಿದು ಸರ್ವರಿಗೂ ಸಾಧಾರಣವಾಗಿದೆ.
ಅಂದರೆ, ಅತಿಯಾದ ಸಿಹಿ  ರೋಗದ ಮೂಲ. ಹಾಗೆ ಅತಿಯಾದ ಕಹಿಯೂ ಸಿಹಿಯನ್ನು  ಆಶ್ರಯ ಪಡೆದರೆ ಸಿಹಿಯ ರೋಗವೂ ಅಂಟಿಕೊಳ್ಳುತ್ತದೆ.ಬಡವರು ಶ್ರೀಮಂತರ ಹಿಂದೆ ನಡೆದಷ್ಟೂ  ಬಡತನ ಹೋಗದು.
ಕಾರಣ‌ ಬಡತನ ಇರೋದೇ ಹೊರಗಿನ ವಿದ್ಯೆ ಜ್ಞಾನದಲ್ಲಿ.
ಹೊರಗಿನವರಿಗೆ ಇದು  ವಿದ್ಯೆ ಆಗಬಹುದು. ವಿಜ್ಞಾನವೂ ಬೆಳೆಯಬಹುದು.ನಮಗೆ ನಮ್ಮೊಳಗಿನ ವಿದ್ಯೆ ಜ್ಞಾನವೇ  ಶ್ರೀಮಂತಿಕೆಯ ಮೂಲವಾಗಿತ್ತು. ಇದು ಭಾರತೀಯತೆಯ ಪ್ರತೀಕ.ಭಾರತಾಂಬೆಯ ಪ್ರತಿಷ್ಟೆಯಾಗಿತ್ತು.  ಈಗ ಪ್ರತಿಷ್ಟಿತರೆ ವಿದೇಶಿ ವ್ಯಾಮೋಹದಲ್ಲಿ ತೇಲಾಡಿಕೊಂಡಿರೋದು ದುರಂತ.
ಒಳ್ಳೆಯದೂ ಪ್ರಚಾರವಾಗುತ್ತಿದೆಯಲ್ಲ ಎನ್ನಬಹುದು.ಆದರೆ ಸತ್ಯವಷ್ಟೆ ದಿನದ 24 ತಾಸಿನಲ್ಲಿ ಹೆಚ್ಚೆಂದರೆ1 ಅಥವಾ2 ತಾಸಿರಬಹುದು.ಉಳಿದ 22 ತಾಸಿನಲ್ಲೂ ನಕಾರಾತ್ಮಕ ಸುದ್ದಿಯಿದ್ದರೆ ತಲೆಗೆ ಹೋಗೋದು ಯಾವುದು? ಮಕ್ಕಳಲ್ಲಿ ಒಳ್ಳೆಯತನಕ್ಕಿಂತ ಕೆಟ್ಟದ್ದೇ ಇದ್ದರೆ  ಕೆಟ್ಟದ್ದನ್ನು ತೆಗೆದುಹಾಕುವ‌ ಪ್ರಯತ್ನವಾಗಬೇಕಾದರೆ ಒಳ್ಳೆಯದನ್ನು ತುಂಬಬೇಕು. 
 

Friday, March 1, 2024

ನಾನ್ಯಾರು ಅದ್ವೈತಿ,ದ್ವೈತಿ,ವಿಶಿಷ್ಟಾದ್ವೈತಿ?

ನಾನು ಅದ್ವೈತಿ ನಾನು ದ್ವೈತಿ ಎನ್ನುವವರಿಗೊಂದು ಪ್ರಶ್ನೆ ನಾವೆಲ್ಲರೂ ಒಂದೇ ಎನ್ನುವ ಅದ್ವೈತ ಕ್ಕೂ ನಾನೇ ಬೇರೆ ನೀನೇ ಬೇರೆ ಎನ್ನುವ ದ್ವೈತ ಕ್ಕೂ ನಡುವಿನ ದ್ವೇಷದಿಂದ ಬೆಳೆದ ಅಂತರದಲ್ಲಿ ಧರ್ಮ ರಕ್ಷಣೆ ಆಗಿದೆಯೆ? ಭಕ್ಷಣೆ ನಡೆದಿದೆಯೆ?  ಪುರಾಣ ಸತ್ಯ  ಭವಿಷ್ಯವನ್ನು ಉತ್ತಮಗೊಳಿಸಬೇಕಾದರೆ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ನಡೆಯೋದೇ ಧರ್ಮ. ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ ಎಂದರೆ  ಕಾಲಬದಲಾಗಿದೆ ಆದರೆ ಮನುಕುಲವಿದೆ. ಇದರಲ್ಲಿ ಮಧ್ಯವರ್ತಿ ಮಾನವನೊಳಗೇ ದೇವಾಸುರರ ಗುಣಜ್ಞಾನ ಅಡಗಿದ್ದು ಯಾರು ಯಾವುದನ್ನು ಬೆಳೆಸುವರೋ ಅದೇ  ಎಲ್ಲಾ ಆಗು ಹೋಗುಗಳಿಗೆ ಕಾರಣ.
ಭೂಮಿ ಮೇಲಿದ್ದು ಭೂಮಿ ಬೇರೆ ನಾನೇ  ಬೇರೆ ಎಂದರೆ ಸರಿಯೆ? ಅಥವಾ ನಾನೇ ಭೂಮಿ ಎಂದರೆ ಸರಿಯೆ? ಇದರ ಒಂದು ಸಣ್ಣ ಕಣವಾಗಿರುವ ನನ್ನೊಳಗಿರುವ ಜೀವಾತ್ಮನಿಗೆ ಪರಮಾತ್ಮನ  ಅರ್ಥ ಆಗದಿದ್ದರೆ ತಪ್ಪು ಯಾರದ್ದು? ಇದಕ್ಕೆ ಎಷ್ಟು ಹೊರಗೆ ರಾಜಕೀಯ ನಡೆಸಿದರೂ ಒಳಗಿನ ಜಗತ್ತು ಬದಲಾಗದು. ಅದು ತನ್ನ ಪ್ರಕಾರ ನಡೆಯುತ್ತಲೇ ಇರುತ್ತದೆ. ನಮ್ಮ ಹೊರಗಿನ ಸೃಷ್ಟಿ ಸರಿಯಿದ್ದರೆ ಸ್ಥಿತಿ ಲಯವೂ ಉತ್ತಮವಾಗೇ ಕಾಣುತ್ತದೆ. ನಾವೇ ಸೃಷ್ಟಿಸಿದ  ಅರ್ಧ ಸತ್ಯ ನಮ್ಮನ್ನೇ ಅತಂತ್ರಸ್ಥಿತಿಗೆ  ತಲುಪಿಸಿ ಆಳುತ್ತಿರುವಾಗ ಮೇಲಿನ ಸತ್ಯ ಒಳಗಿನ ಸತ್ಯ ಒಂದಾಗಿ ಕಾಣೋದಿಲ್ಲ.  ಒಟ್ಟಿನಲ್ಲಿ ನೀನು  ಜೀವಾತ್ಮ ನಾನೇ ಪರಮಾತ್ಮ ಎಂದರೆ ಸರಿಯಲ್ಲ. ತತ್ವ ಒಂದು ಮಾಡುತ್ತದೆ ತಂತ್ರ ಬೇರೆ ಮಾಡಿ ಆಳುತ್ತದೆ.   ಭಾರತದೊಳಗಿದ್ದು  ಭಾರತೀಯ ತತ್ವಶಾಸ್ತ್ರ ತಿಳಿದು ನಡೆಯೋದನ್ನು  ಅಧ್ವೈತ ವೆಂದರೆ ಹೊರಗೆ ಹೋಗಿ ತಿಳಿಯುವುದನ್ನು ದ್ವೈತ ವೆನ್ನಬಹುದು.  ಹೊರಗೆ ಹೋದ ಮೇಲೆ ನಾನಿರೋದಿಲ್ಲವೆ? ಅಥವಾ ಒಳಗಿದ್ದಾಗ ನಾನಿರೋದಿಲ್ಲವೆ? ನಾನು ಹೋಗುವವರೆಗೂ ಅದ್ವೈತವಾಗದು ಎಂದಾಗ ಇಲ್ಲಿ ಎಲ್ಲರೂ ದ್ವೈತಿಗಳೆಂದಾಯಿತು. ಎಲ್ಲಿಯವರೆಗೆ ನಾನೆಂಬುದಿಲ್ಲವೆನ್ನುವ ದಾಸತ್ವ,ಶರಣಾಗತಿಭಾವ ಒಳಗಿನಿಂದ ಉದಯಿಸುವುದಿಲ್ಲವೋ ಅಲ್ಲಿಯವರೆಗೆ ನಾವೆಲ್ಲರೂ ದ್ವೈತಿಗಳೇ ಆಗಿರುವೆವು. ಎಲ್ಲಿಯವರೆಗೆ  ಭೂಮಿಯಿರುವುದೋ ಮನುಕುಲವಿರುವುದೋ ಅಲ್ಲಿಯವರೆಗೆ ಈ ವಾದ ವಿವಾದಗಳಿರುತ್ತದೆ.ಇದನ್ನು ತಡೆಯಲು ಹೋದರೆ ಅಧೋಗತಿಯಾಗುತ್ತದೆ. ತನ್ನ ಅಸ್ಥಿತ್ವಕ್ಕಾಗಿ ಆಸ್ತಿ ಮಾಡಲು  ಹೊರಜಗತ್ತು ನಡೆದಿದೆ.ಆದರೆ ಅದರಲ್ಲಿ ಸತ್ಯ ಧರ್ಮ ವಿರಲು ಜ್ಞಾನವೇ  ಬಂಡವಾಳವಾಗಿದೆ. ಅದೇ ಅಜ್ಞಾನವಾದರೆ  ಬಂಡವಾಳ ವ್ಯರ್ಥ ವಾಗುತ್ತದೆ.ಕಾರಣ ಅಜ್ಞಾನವೇ ನಮ್ಮ ಬಂಡವಾಳವಾಗಿ ಸಾಲವಾಗಿ ಬೆಳೆದಿದೆ. ಇದರ ಹಿಂದೆ ನಡೆದವರನ್ನು ದೇವರೆಂದರೆ ಸರಿಯೆ? ಹಣದ ಹಿಂದಿರುವ ಋಣದ ಲೆಕ್ಕಾಚಾರ ಮಾಡಿಕೊಳ್ಳುವ‌ಜ್ಞಾನ ಇಂದು ಅಗತ್ಯವಿದೆ. ಇದೇಬಂಡವಾಳ ಸತ್ಯ ಧರ್ಮಕ್ಕೆ ಬಳಸಿದರೆ ಸದ್ಗತಿ.ರಾಜಕೀಯಕ್ಕೆ ದುರ್ಭಳಕೆ ಆದರೆ ದುರ್ಗತಿ. ಹೀಗಾಗಿ ನಮ್ಮ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸತ್ಯ ಸಾಕ್ಷಾತ್ಕಾರ ಮಾಡಿಕೊಂಡರು. ಈಗ ಸತ್ಯ ಯಾವುದು? ಎಲ್ಲಿದೆ? ಎಂದು ಹೊರಗೆ ಹುಡುಕಿದರೂ ಕಾಣೋದಿಲ್ಲ
ಆದ್ದರಿಂದ ಒಳಗೇ ಹಿಂದುಳಿದಿರುವ ಸತ್ಯವನ್ನು  ಆತ್ಮಾವಲೋಕನ ದಿಂದ ಮೇಲೆತ್ತಿದರೆ ಧರ್ಮ ಉಳಿದಂತೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾದರೂ  ಆ ಲಾಭ ಕೇವಲ ವ್ಯವಹಾರಕ್ಕೆ ಸೀಮಿತವಾಗಿ ಕಷ್ಟ ನಷ್ಟ ತಪ್ಪಿದ್ದಲ್ಲ. ಕಷ್ಟಪಡದೆ ಸುಖ ಸಿಗೋದು  ಭ್ರಷ್ಟಾಚಾರ ದಿಂದ ಮಾತ್ರ. ಆದರೆ ಇದೇ ಅಧರ್ಮ ವಾಗಿರುವಾಗ  ಅದರ ಹಣದಲ್ಲಿ ಧರ್ಮ ಉಳಿಸಲು ಸಾಧ್ಯವೆ?  ಧರ್ಮ ರಕ್ಷಣೆ ಗುಣಜ್ಞಾನದ ಶಿಕ್ಷಣದಿಂದಾದಾಗಲೇ  ತತ್ವದರ್ಶನ. ಇಲ್ಲವಾದರೆ ತಂತ್ರವೇ ಬೆಳೆದು ಅತಂತ್ರಸ್ಥಿತಿಗೆ ತಲುಪಬಹುದು. ತಂತ್ರದಲ್ಲಿ  ಸ್ವಾರ್ಥ ವಿರುತ್ತದೆ.ಆದರೆ ಇದೇ ಅತಿಯಾದಾಗ  ಜೀವಾತ್ಮ ಅತಂತ್ರಸ್ಥಿತಿಗೆ ತಲುಪೋದು.
ಆತ್ಮವೇ ಇಲ್ಲ ನಾನೇ ಎಲ್ಲಾ ಎನ್ನುವವರಿಗೆ ಈ ದ್ವೇಷ ಭಿನ್ನಾಭಿಪ್ರಾಯ ಅಸೂಯೆ,ಸೇಡು,ವಾದ ವಿವಾದದ ಕ್ರಾಂತಿ ಹೆಚ್ಚು ಪ್ರಿಯವಾಗಿರುತ್ತದೆ. ಒಂದು ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಂಡು ಜನರನ್ನು ಹೊರಗೆಳೆದು ಆಳೋದೇ ಇದರ ಮುಖ್ಯ ಗುರಿಯಾಗಿರುತ್ತದೆ. ಅಧ್ಯಾತ್ಮ ಸಾಧನೆ ಒಳಗೇ ನಡೆಯೋದಕ್ಕೆ  ಇದರಿಂದ ಸಾಧ್ಯವೇ ಇಲ್ಲದ ಮೇಲೆ ಈಗ ಬೆಳೆದಿರೋದು ಕೇವಲ ಭೌತಿಕ ಸಾಧನೆ. ಹೊರಬಂದಷ್ಟೂ ಸಾಲ. ಒಳಗಿದ್ದಷ್ಟೂ ಸಾಲಮನ್ನಾ .ಭಾರತೀಯರ ಈ ಸ್ಥಿತಿಗೆ ಸತ್ಯ ಅರ್ಥ ವಾಗದೆ ಮನಸ್ಸನ್ನು ಹೊರಗೆಳೆದು ಆಳಿದ ಶಿಕ್ಷಣ ಕಾರಣ. ಆಗಿದ್ದನ್ನು ತಡೆಯಲಾಗದು.ಮುಂದೆ ಆಗದಂತೆ ತಡೆಯಬಹುದು.ಅದೂ  ಗುರುಹಿರಿಯರು  ದೇಶಭಕ್ತರು ದೇವರ ಭಕ್ತರು ಒಂದಾಗಿ  ಸತ್ಯ ತಿಳಿದಾಗಲೇ ಮುಂದೆ ಬರುವ ಸಂಕಷ್ಟದಿಂದ ಪಾರಾಗಬಹುದು. ಅಂದರೆ ಸಂಕಷ್ಟ ಹೊರಗಿನ ಶಕ್ತಿಯಿಂದ ಬರೋವಾಗ ಅದನ್ನು  ಬಿಟ್ಟು ನಡೆಯೋದೆ ಪರಿಹಾರ. ಬೆಳೆದು ನಿಂತಿರೋ ಮರ ಕಡಿದರೆ ಅದರ ಮೂಲ‌ ಮತ್ತೆ ಚಿಗುರುತ್ತದೆ. ಅದೇ ಮೂಲದಲ್ಲಿಯೇ ಸತ್ಯ ತಿಳಿಸಿ ಬೆಳೆಸಿದರೆ ಉತ್ತಮ ಫಲ ನೀಡುವ‌ಮರ ಬೆಳೆಯುತ್ತದೆ. 
ನಮ್ಮೊಳಗೇ  ಬೆಳೆದು ನಿಂತಿರುವ ಈ ಭಿನ್ನಾಭಿಪ್ರಾಯ ದಿಂದ ನಮ್ಮ ಆತ್ಮಶಕ್ತಿಯೇ ಕ್ಷೀಣವಾಗಿರುವಾಗ ಇದಕ್ಕೆ ಹೊರಗಿನ ಶಕ್ತಿಯನ್ನು ದ್ವೇಷ ಮಾಡಿದರೆ ಸರಿಯಾಗಬಹುದೆ?
ಮನೆಮನೆಯೊಳಗೆ  ಇಂತಹ ಕಲಹ ಮನಸ್ತಾಪ ಜಗಳ ಭಿನ್ನಾಭಿಪ್ರಾಯ ದ್ವೇಷ ಅಸೂಯೆಯ ವಿಷಯಗಳ ಒಳಗೇ ವಿಷವಿರೋವಾಗ ಅಮೃತತತ್ವ  ಬೆಳೆಯೋದು ಕಷ್ಟವಿದೆ.
ಕಷ್ಟಪಟ್ಟರೆ  ಹಿಂದಿರುಗಿ ಬರಲು ಸಾಧ್ಯವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಕಷ್ಟದ ದುಡಿಮೆಯ ಹಣ ದುರ್ಭಳಕೆ ಆದರೆ ಧರ್ಮ ವಿರದು.
ಇದನ್ನು ಉತ್ತಮ ಶಿಕ್ಷಣಕ್ಕೆ ಬಳಸಿ ನೋಡಿಬದಲಾಗಬಹುದು. 
ಹಾಗಾದರೆ ಉತ್ತಮ ಶಿಕ್ಷಣ ಯಾವುದು?
ಮಕ್ಕಳ  ಜ್ಞಾನಾಭಿವೃದ್ದಿ  ಆಗೋದೇ ತತ್ವಜ್ಞಾನದಿಂದ. ಇದೇ ಎರಡು ಮೂರಾಗಿ ಬೇರೆ ಬೇರೆಯಾಗಿ ನಿಂತರೆ  ಒಂದೇ ದೇಶ ಕಾಣೋದಿಲ್ಲ,ಒಂದೇ ಧರ್ಮ ಬೆಳೆಯೋದೂ ಇಲ್ಲ.ಹಾಗೆ ಇರುವ ಒಂದೇ ದೇವರನ್ನು  ಕಾಣೋದು ಕೂಡೋದು ಕಷ್ಟ.
ಕಷ್ಟಪಡುವವರನ್ನು  ಭ್ರಷ್ಟರ ಹಣದಲ್ಲಿ  ಖರೀದಿಸಿದರೆ ಅವರ ಕಷ್ಟ ಕಳೆಯೋದಿಲ್ಲ.ಅವರ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ಕೊಟ್ಟು ಕೆಲಸ ಮಾಡಲು ಬಿಟ್ಟರೆ ಆತ್ಮನಿರ್ಭರ ಭಾರತ ಸಾಧ್ಯ.
ಭಕ್ತರು ಕೊಡುವಹಣವನ್ನು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಬಳಸಿದ್ದರೆ  ಇಷ್ಟು ಅಜ್ಞಾನ ಬೆಳೆಯುತ್ತಿರಲಿಲ್ಲ. ಆದರೆ ಪೋಷಕರಿಗೇ ಅರ್ಥ ವಾಗದ ಶಿಕ್ಷಣ ಮಕ್ಕಳಿಗೆ  ಕಲಿಸೋದೂ ಕಷ್ಟ.ಹಾಗಂತ ಇಂದಿನ ಆಂಗ್ಲಭಾಷೆ ಪೋಷಕರಿಗೂ ಅರ್ಥ ವಾಗದಿದ್ದರೂ ವಿಶ್ವ ದೆಲ್ಲೆಡೆ ಬೆಳೆದಿದೆ ಎಂದರೆ ಯಾರೋ ಹೊರಗಿನವರ ಭಾಷೆಗೆ ನಮ್ಮ ಸಹಕಾರವಿದೆ.ನಮ್ಮವರ ಭಾಷೆ ಅಥವಾ ಮಾತಿಗೆ ಬೆಲೆಯಿಲ್ಲ. ನಮ್ಮತನ ನಮ್ಮ ಜ್ಞಾನ ನಮ್ಮ ಒಗ್ಗಟ್ಟು  ನಮಗೆ ಶ್ರೀ ರಕ್ಷೆಯಾಗಿರುತ್ತದೆ.
ಭೂಮಿ ಮೇಲಿರುವಾಗಷ್ಟೆ ಈ ವಾದ ವಿವಾದ.ಮೇಲೇರಿ ಹೋದ ಮೇಲೆ ಸರಿಯಿಲ್ಲದಿದ್ದರೆ ಕೆಳಗಿಳಿಯಬೇಕು.ಕೆಳಗಿಳಿದ ಮೇಲೇ ಮತ್ತೆ‌ಮೇಲೇರಬೇಕು.
ಇವೆರಡರ ಮಧ್ಯೆ ಇರುವ ಅರ್ಧ ಸತ್ಯ ಮಾತ್ರ ಭೂಮಿ ಬಿಜಾಪುರ ಹೋಗದು ಮುಕ್ತಿಯೂ ಸಿಗದು. ಹೀಗಾಗಿ ಎಲ್ಲೇ ಇದ್ದರೂ ಭೂಮಿಯೇ ಇರೋವಾಗ ಅದರ ಋಣ ತೀರಿಸುವ ಸತ್ಕರ್ಮ ನಡೆಸುವ ಜ್ಞಾನವಿದ್ದರೆ ತತ್ವ ಸಿದ್ದಾಂತಗಳ ಮೂಲ ಉದ್ದೇಶ ಒಂದೇ ಆಗಿರುವುದು. 

ಅದ್ವೈತಾನುಭವ ಕಷ್ಟಕರವಾಗಿದೆ.

ಜೀವನದ ಗುರಿಯೇ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಹುಡುಕೋದೆನ್ನುತ್ತದೆ ಅಧ್ಯಾತ್ಮ. ಇದಕ್ಕೆ ಉತ್ತರ ಒಳಗೇ ಹುಡುಕಿದಾಗ ಮೊದಲು ನಾನ್ಯಾರೆಂಬ ಉತ್ತರ ಸಿಗುತ್ತದೆ ಇನ್ನೂ ಮುಂದೆ ಹೋದಾಗ ನಾನೆಂಬುದಿಲ್ಲವೆನ್ನುವ ಅರಿವಾಗುತ್ತದೆ ಇದೇ ಅದ್ವೈತ.
ಶ್ರೀ ಶಂಕರಭಗವತ್ಪಾದರಂತೆ‌ ಇಂದು ಯಾರೂ ನಡೆಯಲಾಗದು.‌ ಅದ್ವೈತ ವೆಂದರೆ ಎಲ್ಲರಲ್ಲಿಯೂ ಅಡಗಿರುವ‌ಆ ಪರಮಾತ್ಮನ ಅರ್ಥ ಮಾಡಿಕೊಂಡು ನಡೆಯೋದು ಎಂದಾಗ ನಡೆದವರಿಲ್ಲ ಕಾರಣ ನಮಗೆ ಪರಮಾತ್ಮ ‌ಕಂಡರೂ ಬೇರೆಯವರಿಗೆ ನಮ್ಮೊಳಗೇ ‌ನಿಂತು ನಡೆಸೋ ಪರಮಾತ್ಮನ ದರ್ಶನ ವಾಗದಿದ್ದರೆ ಘರ್ಷಣೆ ಆಗುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಇರುವ  ಒಂದೇ ಸತ್ಯ ಬಿಟ್ಟು ಹೊರಬರಬೇಕು. ಆದರೆ ಜಗತ್ತನ್ನು  ನಡೆಸಿರುವ  ದ್ವೈತ ಸಿದ್ದಾಂತ ವನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ  ಬದಲಾವಣೆ ಸಾಧ್ಯ.ಅಂದರೆ ನಾನೇ ಬ್ರಹ್ಮ ಎನ್ನುವ ಬದಲಾಗಿ ನಾನು ಬ್ರಹ್ಮನ ಒಂದಂಶ ಎಂದಾಗ ಬೇರೆಯವರಲ್ಲಿಯೂ  ಇರುವ ಒಂದಂಶ ಎಚ್ಚರವಾಗಬಹುದು.ಎರಡೂ ಬ್ರಹ್ಮನ ಅಂಶವಾದಾಗ ಅವರವರ ಜನ್ಮಕ್ಕೆ  ಸೃಷ್ಟಿ ಗೆ ಕಾರಣ ತಿಳಿಯಲು ಸ್ವತಂತ್ರ ಜ್ಞಾನದ ಬಳಕೆಯಾಗುತ್ತದೆ.ಇಲ್ಲವಾದರೆ ಒಬ್ಬರ ಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ  ಅದನ್ನು ಎಲ್ಲಾ ಹಿಡಿದು ಹೋಗಿ ಅನುಭವದ ಕೊರತೆಯಿಂದ ಅಲ್ಲಗೆಳೆಯುವ ವಾದ ವಿವಾದ ಹೆಚ್ಚಾಗುವುದು.
ಇಲ್ಲಿ ವಿಶ್ವಗುರು  ಎನ್ನುವಾಗ ಇಡೀ ವಿಶ್ವದ  ಜ್ಞಾನ ಒಬ್ಬರಲ್ಲಿ ಇರದು.ಇದು ಪರಮಾತ್ಮನಿಗಷ್ಟೆ ಇರೋವಾಗ ಅವನೊಳಗಿರುವ ಜೀವಾತ್ಮರು ತನ್ನೊಳಗೆ ವಿಶೇಷವಾಗಿರುವ ಜ್ಞಾನವನ್ನು ಗುರುತಿಸಿಕೊಂಡು ಸನ್ಮಾರ್ಗದಲ್ಲಿ ನಡೆದಾಗ ಜೊತೆಗಿರುವವರೂ ಪ್ರಯತ್ನಪಡಬಹುದಷ್ಟೆ. ಎಲ್ಲರನ್ನೂ ನಾನೇ ನಡೆಸೋದೆಂದಾಗ ನನ್ನ ಅಭಿಪ್ರಾಯ, ಅನುಭವಕ್ಕೆ ವಿರುದ್ದ ನಡೆಯೋ  ಕಾಲಬರುವುದು.ಹೀಗಾಗಿ ಹಿಂದಿನ ಶಾಸ್ತ್ರ ಪುರಾಣಗಳಿಂದ ಜ್ಞಾನ‌ಪಡೆದರೂ ಅದರ ಮೂಲ ಸತ್ಯ ಸತ್ವ ತತ್ವವನರಿಯದೆ  ಓದಿ ಪ್ರಚಾರಮಾಡಿ  ಜ್ಞಾನಿಯಾಗಿ ಜನರನ್ನು ನಡೆಸೋದರಲ್ಲಿಯೂ ದ್ವೈತವೇ ಅಡಗಿದೆ.ಇಲ್ಲಿ  ಪ್ರಚಾರದಿಂದ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಜನರ ದಾರಿತಪ್ಪಿಸಿ ಆಳುವ ರಾಜಕೀಯ ಬೆಳೆದರೆ ಸಮಾಜಕ್ಕೆ ನಷ್ಟ. ಹೀಗಾಗಿ  ಸಂಸಾರದೊಳಗಿದ್ದು ಸಮಾಜದ ಆಗುಹೋಗುಗಳಿಗೆ ನನ್ನ ಧರ್ಮ ಕರ್ಮ ದಿಂದ  ಶಾಂತಿ ಸಿಗೋದಾದರೆ  ಉತ್ತಮ. ಧರ್ಮ ರಕ್ಷಣೆಗಾಗಿ ಈಗಾಗಲೇ ಸಾಕಷ್ಟು ಯುದ್ದಗಳಾಗಿವೆ.ಸಾವುನೋವುಗಳಿಂದ  ಜೀವಾತ್ಮ ಪರಮಾತ್ಮನ ಕಡೆಗೆ ಹೋಗಲಾಗದೆಯೇ ದ್ವೇಷ ಸೇಡು ಸ್ಪರ್ಧ ಪೈಪೋಟಿ ಹಗೆತನದಿಂದ ಇನ್ನಷ್ಟು ಅತೃಪ್ತ ಆತ್ಮಗಳು ಸುಳಿದಾಡುತ್ತಿರುವ ಈ ಸಮಯದಲ್ಲಿ ಕಣ್ಣಿಗೆ ಕಾಣೋದೇ ಒಂದು ಹಿಂದೆ ನಿಂತು ನಡೆಸೋ ಶಕ್ತಿಯೇ ಬೇರೊಂದು.ಇಲ್ಲಿ ದ್ವೈತ ವಿದೆ.ಭೂಮಿ ನಡೆದಿರೋದೇ ದ್ವೈತಿಗಳಿಂದ ಎಂದಾಗ ಅಧ್ವೈತ ದೊಳಗೇ ದ್ವೈತದ. ರಾಜಕೀಯ ಕಣ್ಣಿಗೆ ಕಂಡಾಗ ಅದಕ್ಕಿಂತ  ಇನ್ನೊಂದು ಸತ್ಯ ಒಳಗಿದೆ ಎನ್ನುವ ಬಗ್ಗೆ ಅಧ್ವೈತ ಸಂಶೋದನೆ‌‌ನಡೆದಿದೆ,ನಡೆಯುತ್ತಿದೆ,ನಡೆಯುತ್ತಲೇ ಇರುತ್ತದೆ.