ಶೈಲಪುತ್ರಿ

ದಕ್ಷ ಪ್ರಜಾಪತಿಯ ಆ ಬೃಹತ್ ಯಾಗಶಾಲೆಯಲ್ಲಿ ಅಂದು ಧಗಧಗನೆ ಉರಿಯುತ್ತಿದ್ದದ್ದು ಕೇವಲ ಹವಿಸ್ಸಿನ ಬೆಂಕಿಯಲ್ಲ, ಜಗತ್ತಿನ ಮೂಲಶಕ್ತಿಯ ಸ್ವಾಭಿಮಾನ. ತನ್ನ ಪತಿ ಮಹಾದೇವನಿಗೆ ಆ...

Friday, March 22, 2024

ಕೆರೆಯನೀರನು ಕೆರೆಗೆ ಚೆಲ್ಲಿ

"ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೊ" ಪುರಂಧರ ದಾಸರ ಈ ಗೀತೆಯೊಳಗಿನ ತತ್ವ ಇಂದಿಗೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿದೆ ವ್ಯತ್ಯಾಸವಿಷ್ಟೆ ಅಂದಿನ‌ಮಹಾತ್ಮರಲ್ಲಿ ಹರಿಸಮರ್ಪಣೆ ಭಾವವಿತ್ತು‌ಇಂದು ಹರಿಯಿಲ್ಲದ  ಸಮಾವೇಷ ಹೆಚ್ಚಾಗಿದೆ.ಅದಕ್ಕೆ  ತತ್ವ ಹೋಗಿ ತಂತ್ರ ಬೆಳೆದಿದೆ.ಮಾನವನ‌ಜೀವನವೇ ಅತಂತ್ರಸ್ಥಿತಿಗೆ ತಲುಪುತ್ತಿದೆ..
ಇದರಲ್ಲಿ ಸ್ವತಂತ್ರವಾಗಿರುವವರನ್ನು ಹುಡುಕಲು ಕಷ್ಟ.ಕಾರಣ ಈ ಸಮಾವೇಷದ ಹಿಂದೆ ನಡೆದವರ ಸ್ವಾತಂತ್ರ್ಯ ಕ್ಕೆ ದಕ್ಕೆ ಬಂದಿರುವಾಗ ಅವರ ನಂಬಿ ನಡೆದ ಮಹಿಳೆ ಮಕ್ಕಳ ಗತಿ ಏನಾಗುತ್ತಿದೆ ? ಸ್ವಲ್ಪ ಈ ಮಾರ್ಗದಲ್ಲಿ  ಗಮನಹರಿಸಿದರೆ ಸಾಕು ಭಾರತ ಆತ್ಮನಿರ್ಭರ ವಾಗುತ್ತಿದೆಯೆ? ಅಥವಾ ದುರ್ಭಲತೆಗೆ ಕಡೆಗೆ ನಡೆದಿದೆಯೆ  ಅರ್ಥ ವಾಗಬಹುದು.
ಕೆಲವರು  ಹರಿಸ್ಮರಣೆಯಲ್ಲಿರಬಹುದಷ್ಟೆ....
ಯೋಗದಿಂದ ಪರಮಾತ್ಮನ ಸೇರೋದಕ್ಕೂ ಭೋಗಕ್ಕಾಗಿ  ಪರಮಾತ್ಮನ ಬೇಡೋದಕ್ಕೂ ಅಂತರ ಹೆಚ್ಚಾಗುತ್ತಾ  ಅಂತರದಲ್ಲಿ ರಾಜಕೀಯ ಮಿತಿಮೀರಿದೆ. ಒಬ್ಬರನ್ನು ಆಳಲು ದೇವರ ಹೆಸರಿನಲ್ಲಿ ವ್ಯವಹಾರ ನಡೆಸಿ ಅಧರ್ಮ ಅಸತ್ಯ ಅನ್ಯಾಯಕ್ಕೆ ಸಹಕರಿಸಿದರೆ  ತತ್ವ ಬೆಳೆಯದು ದಾಸರನ್ನು  ಅರ್ಥ ಮಾಡಿಕೊಳ್ಳಲು  ಅಸಾಧ್ಯ.ಆದರೆ ಭಕ್ತಿಯೋಗ  ಬಹಳ  ಆಂತರಿಕ ವಾಗಿರುವ ಶಕ್ತಿಯಾದಾಗ ಯಾರ ಕಣ್ಣಿಗೂ ‌ತೋರಿಸಲಾಗದು. ನಡೆ ನುಡಿಯಲ್ಲಿ‌ ಸೂಕ್ಷ್ಮ ವಾಗಿ ಗಮನಿಸಬಹುದು.

ಮುಕ್ತಿ ಮಾರ್ಗ ಯಾವುದು? ಎಲ್ಲಿದೆ?

ನನಗೆ ಈ ಭೂಮಿಯಿಂದ ಮುಕ್ತಿ ಬೇಕೆಂಬುದರಲ್ಲಿಯೇ ನಾನಿರುವಾಗ  ಮುಕ್ತಿ ಸಿಗುವುದೆ? ಹಿಂದಿನ ಯುಗಯುಗದಿಂದಲೂ ಇದೇ ಭೂಮಿಯಲ್ಲಿದ್ದು ತನ್ನ ಜೀವನ‌ನಡೆಸಿರುವ ಎಷ್ಟೋ ಆತ್ಮಗಳ ಕಥೆ ಇದೇ ಆಗಿದೆ.ಮುಕ್ತಿಗಾಗಿ‌ದೇವರನ್ನು ಪೂಜಿಸೋದು ಬೇಡೋದು ಮಾಡೋದು ನಡೆದೇ ಇದೆ ಆದರೂ ನನ್ನ ಜನ್ಮ ಆಗುತ್ತಿದೆ ಎಂದರೆ ಜನ್ಮಕ್ಕೆ ಕಾರಣವೇ ನಾನೆಂಬ ಭಾವ. ಈ ಭಾವನೆ ಜೀವವಿರೋವಾಗಲೇ ಅಳಿಸಿಹೋದವರಿಗಷ್ಟೆ ಮುಕ್ತಿ ಸಿಗುತ್ತದೆ ಎಂದರೆ  ಪರಮಾತ್ಮನೊಬ್ಬನೆ ಸತ್ಯ ಶುದ್ದವೆನ್ನುವ ಸತ್ಯದಲ್ಲಿರುವ‌ಜೀವಾತ್ಮನಲ್ಲಿ ನಾನಿರೋದಿಲ್ಲವೆಂದರ್ಥ.
ಇದೇ ಅದ್ವೈತ ತಿಳಿಸೋದು. ಎಲ್ಲಿಯವರೆಗೆ ನನ್ನ‌ಮುಕ್ತಿಗಾಗಿ‌ಕರ್ಮ ಧರ್ಮ  ಮಾಡುವೆವೋ ಅಲ್ಲಿಯವರೆಗೆ ಮುಕ್ತಿಸಿಗದು. ಹಾಗಾದರೆ ಧರ್ಮ ಕರ್ಮ ದ ಉದ್ದೇಶ ವೇನೆಂದರೆ  ಪರಮಾತ್ಮನಿಗೆ  ಅರ್ಪಣೆಯಾಗಲು  ಜೀವಾತ್ಮನು ದಾಸನಾಗಿರೋದಷ್ಟೆ. ತಾನೇ ದಾಸನಾದಾಗ ಇತರರನ್ನು ದಾಸನನ್ನಾಗಿ ಬಳಸಲಾಗದು.ಅಂದರೆ ತನ್ನ ಸ್ವಾರ್ಥ ಸುಖಕ್ಕಾಗಿ ಸ್ತ್ರೀ ಯನ್ನಾಗಲಿ ಭೂಮಿಯನ್ನಾಗಲಿ ಪ್ರಾಣಿಪಕ್ಷಿ.....ಇತರ ಜನರನ್ನಾಗಲಿ  ಎಷ್ಟು ಬಳಸಿದರೂ  ಅದರಲ್ಲಿ ತತ್ವವಿರದು ತಂತ್ರವಾಗಿರುತ್ತದೆ.ಹೀಗಾಗಿ ಪರಮಾತ್ಮನ ಸತ್ಯ ಒಂದೇ  ಅದರಲ್ಲಿ ನನ್ನ ಸತ್ಯ ಸೇರಲು ಆ ಒಂದರ ತತ್ವದರ್ಶನ ಆಗಬೇಕೆನ್ನುವುದೇ ಅದ್ವೈತ. ಇದನ್ನು ರಾಜಕೀಯವಾಗಿ ಬಳಸಿದರೆ ದ್ವೈತ. ವಿಶೇಷವಾಗಿ ಎಲ್ಲರೊಳಗೂ ಅಡಗಿರುವ ಈ ಪರಮಸತ್ಯ ಶುದ್ದ ತತ್ವವನರಿತು ನಡೆದರೆ ವಿಶಿಷ್ಟಾದ್ವೈತ. ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಕಷ್ಟ. ಆ ಭಗವತಿಯ ಕೃಪೆಯಿಂದಷ್ಟೆ ಅರಿವಿಗೆ ಬರಲು ಸಾಧ್ಯವಿದೆ. ಹೀಗಾಗಿ  ತಾಯಿಯ ಋಣ ತೀರಿಸಲು  ದಾಸರಾಗಬೇಕು ಶರಣರಾಗಬೇಕು ಮಹಾತ್ಮರಾಗಬೇಕೆನ್ನುತ್ತದೆ ಅಧ್ಯಾತ್ಮ. 
ಇಂದಿನ ಜಗತ್ತಿನಲ್ಲಿ ಒಳಗಿದ್ದ  ತಾಯಿಯನ್ನು ಹೊರಗೆಳೆದು ನೀನೇ ಸಂಸಾರ ನಡೆಸು ಎಂದು ಭೌತಿಕದಲ್ಲಿ ಜನಜೀವನ ಸಾಲ ತೀರಿಸಲಾಗದೆ ಹೋರಾಟ ಹಾರಾಟ ಮಾರಾಟದ ಮಧ್ಯೆ ರಾಜಕೀಯ ಬೆಳೆದು ನಿಂತಿದೆ ಎಂದರೆ ಅಜ್ಞಾನ ‌ಮಿತಿಮೀರಿದೆ. ಪರಿಹಾರ ಸತ್ಯಜ್ಞಾನದ ಶಿಕ್ಷಣ ಕೊಡಬೇಕಷ್ಟೆ.
ಸತ್ಯ ಎಲ್ಲಿದೆ? ಒಳಗೋ ಹೊರಗೋ? ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ತಾಯಿಗಿಂತ ದೊಡ್ಡ ದೇವರಿಲ್ಲ.
ಹರಿಹರರಲ್ಲಿ ಬೇಧ, ಸ್ತ್ರೀ ಪುರುಷರಬೇಧ ಭೂಮಿ ಆಕಾಶದ ಬೇಧ ಜ್ಞಾನ ವಿಜ್ಞಾನದ ಬೇಧ ದೇಶವಿದೇಶದ ಬೇಧ ಸಂಸಾರ ಸಮಾಜದ ಬೇಧಭಾವ ಮಾನವ ಮಾನವನಲ್ಲಿ ದ್ವೇಷದ ವಿಷಬೀಜ ಹೆಚ್ಚಿಸಿ ಪರಮಾತ್ಮ ಜೀವಾತ್ಮನ‌ನಡುವೆ ಅಂತರ ಬೆಳೆದು ನಾನೇ ಬೇರೆ ನೀನೇ ಬೇರೆ ಎಂದಾಗ ತತ್ವ ಎಲ್ಲಿರುತ್ತದೆ? ಹೇಳಲು ನೋಡಲು ಎಲ್ಲಾ ಒಂದೇ. ಆದರೆ ಒಳಹೊಕ್ಕಿ ನೋಡಿದಾಗ ಎಲ್ಲಾ ಬೇರೆ ಎಂದರೆ ನಾಟಕದ ಜೀವನದಲ್ಲಿ ಎಲ್ಲಾ ಪಾತ್ರಧಾರಿಗಳೇ ಆದರೂ ಕೆಲವರಿಗೆ ಒಳ್ಳೆಯ ಪಾತ್ರ ಕೆಲವರಿಗೆ ಕೆಟ್ಟಪಾತ್ರ ಕೊಟ್ಟು ಆಡಿಸುವವ‌ಒಬ್ಬನೇ. ಆ ಒಬ್ಬನ ಕಡೆಗೆ ನಡೆಯೋದೇ ಜೀವನ.
ಇದರಲ್ಲಿ ನನ್ನದೂ ಒಂದು ಪಾತ್ರ ವಷ್ಟೆ. ಅದರಲ್ಲಿ ಸತ್ಯವಿದ್ದರೆ  ಧರ್ಮ ಬೆಳೆಯುತ್ತದೆ. ಅಸತ್ಯವಿದ್ದರೆ ಅಧರ್ಮ ಬೆಳೆಯುತ್ತದೆ.
ಧರ್ಮ ಕ್ಕೆ ಜಯವಾಗಬೇಕಾದರೆ ಸತ್ಯವೇ ದೇವರಾಗಬೇಕು. ಅಸತ್ಯವನ್ನು ಧರ್ಮ ವೆಂದುಕೊಂಡರೆ ಅಸುರರ ವಶದಲ್ಲಿ ಜೀವನ ನಡೆಸಬೇಕಾಗುತ್ತದೆ. ಅಸುರಿಗುಣಗಳಾದ ಅತಿಯಾದ ಸ್ವಾರ್ಥ ಅಹಂಕಾರ ಅಜ್ಞಾನದೆಡೆಗೆ ನಡೆಸುತ್ತಾ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಪ್ರಕೃತಿಯನ್ನು ವಿಕೃತವಾಗಿಸಿಕೊಂಡಾಗಲೇ ಪ್ರಕೃತಿ ವಿಕೋಪಗಳು ಯುದ್ದಗಳು ಬೆಳೆದು ಜೀವ ಹೋಗುತ್ತದೆ. ಹೋದ ಜೀವ ಮತ್ತೆ ಜನ್ಮ ಪಡೆದಾಗ ನಮ್ಮವರು ಯಾರೂ ಇರೋದಿಲ್ಲ ಪರಮಸತ್ಯ ಧರ್ಮ ವಷ್ಟೆ ಇರೋದು. ಹೀಗಾಗಿ ಇದ್ದಾಗಲೆ ಪರಮಸತ್ಯ ಧರ್ಮ ವನರಿತರೆ ಜೀವನ್ಮುಕ್ಕಿ ಎನ್ನುವುದನ್ನು ಅರಿತವರು ಕಷ್ಟಪಟ್ಟು  ಇಷ್ಟಪಟ್ಟು  ಪರಮಾತ್ಮನೆಡೆಗೆ‌ ನಡೆದರು. ಇಂತಹವರ ಹೆಸರಿನಲ್ಲಿ ವ್ಯವಹಾರ ನಡೆಸಿ ಹಣ ಅಧಿಕಾರ ಹೆಸರು ಸ್ಥಾನ ಪಡೆದರೆ ಭೌತಜಗತ್ತಿನಲ್ಲಿ ಸನ್ಮಾನ ಸ್ವಾಗತ ದ ಸಹಕಾರ ಸಹಾಯ ಸಿಗುವುದೆನ್ನುವ ಮಾನವನಿಗೆ ತನ್ನದೇ ಆದ ಅಸ್ತಿತ್ವ ವಿದೆಯೆ? ನಡೆಸೋ ಶಕ್ತಿ ಕಾಣೋದಿಲ್ಲ ಎಂದರೆ  ಸತ್ಯ ಒಳಗಿದೆ ಎಂದರ್ಥ.ಸತ್ಯ ಕಣ್ಣಿಗೆ ಕಾಣದು ಹಾಗಾಗಿ  ಅಸತ್ಯ ಬೆಳೆದಿದೆ ಅದರೊಂದಿಗೆ ಅಧರ್ಮ ವೂ ಜೊತೆಗಿದೆ. ಒಟ್ಟಿನಲ್ಲಿ  ನಾನ್ಯಾರು ಪ್ರಶ್ನೆಗೆ ಉತ್ತರ ಹುಡುಕಲು ಮನಸ್ಸು ಒಳಗೆ ನಡೆದಷ್ಟೂ  ಸಮಸ್ಯೆಗಳೇ ಹೆಚ್ಚಾಗುತ್ತದೆ ಕಾರಣ ಒಳಗೇ ಇರುವ ಅಸತ್ಯಗಳನ್ನು ನಮ್ಮ ಮನಸ್ಸು ತಡೆದು ನಿಲ್ಲಿಸಿಕೊಳ್ಳುವುದೇ ಕಷ್ಟ.ಅದರಲ್ಲೂ ಸಂಸಾರಕ್ಕೆ ಬಂದವರಿಗೆ ಬಹಳ‌ಕಷ್ಟ.ಇದೇ ಕಾರಣಕ್ಕಾಗಿ ತಿಳಿದವರು ಸಂಸಾರ ಬಿಟ್ಟು ನಡೆದರು.ಆದರೆ ಸಂಸಾರದ ಗತಿ ಏನಾಯಿತೆನ್ನುವುದು ಪ್ರಶ್ನೆಗೆ ಉತ್ತರ ಇಂದಿನ ಪರಿಸ್ಥಿತಿ ತಿಳಿಸುತ್ತಿದೆ. ರಾಜಪ್ರಭುತ್ವದ ಸಂನ್ಯಾಸಿಗಳಿಗೆ ಸ್ವತಂತ್ರ ಜ್ಞಾನವಿತ್ತು  ಸಂಸಾರಿಗಳ ಸಮಸ್ಯೆಗೆ ಪರಿಹಾರ ಕೊಡುವ ಆತ್ಮಜ್ಞಾನವಿತ್ತು. ಪ್ರಜಾಪ್ರಭುತ್ವದ ಲ್ಲಿ ಸಾಕಷ್ಟು ಸಂನ್ಯಾಸಿಗಳಿಗೆ ಪ್ರಜೆಗಳೇ ದೇವರು.ಹಣವಿಲ್ಲದೆ ಧರ್ಮ ಪ್ರಚಾರಮಾಡೋಹಾಗಿಲ್ಲ.ಅಧಿಕಾರವಿಲ್ಲದೆ ಜನಬಲವಿಲ್ಲ ಹೀಗಿರುವಾಗ  ಯಾರ ಕೆಳಗೆ ಯಾರಿರೋದು? ಸ್ವತಂತ್ರ ಜೀವನಕ್ಕೆ ತತ್ವಜ್ಞಾನವಿರಬೇಕು. ತಂತ್ರವೇ ಧರ್ಮ ಎಂದಾಗ ತತ್ವ ಕುಸಿಯುತ್ತದೆ. ಕಲಿಗಾಲ.ಕಲಿಸುತ್ತದೆ. ಕಲಿಕೆಯಲ್ಲಿ ತತ್ವವಿದ್ದರೆ ಉತ್ತಮ‌ಕಾಲಜ್ಞಾನಿಯಾಗಬಹುದು.ಪ್ರತಿಯೊಂದು ಕಾಲವೂ ಪರಮಾತ್ಮನ ವಶದಲ್ಲಿದ್ದಂತೆ ಪರಮೇಶ್ವರಿಯ ಆದೇಶದಂತೆ ನಡೆಯುತ್ತದೆ.ಎಂದಾಗ ನಾವೆಲ್ಲರೂ ಪರಮೇಶ್ವರಿಯ ಸಂತಾನ.ಅವಳ ಋಣ ತೀರಿಸಲು  ಭೂಮಿಯಲ್ಲಿ ಸತ್ಯ ಧರ್ಮ ದ ಪ್ರಕಾರ ನಡೆಯಲೇಬೇಕಲ್ಲವೆ? 
ಈ ಲೇಖನ ಯಾರೋ ಪ್ರತಿಷ್ಠಿತ ರು ಜ್ಞಾನಿಗಳು ಶ್ರೀಮಂತ ರು ರಾಜಕಾರಣಿಗಳು  ಬರೆದಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು.ಆದರೆ ಇದನ್ನು ಸಾಮಾನ್ಯರು ಬರೆದಿರುವಾಗ  ಇದರಲ್ಲಿ ತಪ್ಪು ಹುಡುಕಿ ತಳ್ಳಿದರೂ ಸತ್ಯ ಕ್ಕೆ ಚ್ಯುತಿ ಬರದು. ಇದಕ್ಕೆ ಬೆಲೆಕಟ್ಟಿ ಹಂಚಿದರೂ ಅರ್ಥ ವಾಗದವರಿಗೆ ಅರ್ಥ ವಾಗೋದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ವಿಶೇಷವಾಗಿರುವ  ಆತ್ಮಸಾಕ್ಷಿ ಯ ಕಡೆಗೆ ನಡೆದರೆ ಅದೇ ನಮಗೆ ನಾವು ಮಾಡಿಕೊಳ್ಳುವ‌ ಉಪಕಾರ.
ಪ್ರತಿಯೊಂದು ಚರಾಚರದೊಳಗಿರುವ  ಈ ಶಕ್ತಿಗೇನೂ ಕೊರತೆಯಿಲ್ಲ.ಮಾನವನೇ ಅದನ್ನು ತಿಳಿಯದೆ ಬಳಸಿ ತನ್ನ ಆತ್ಮಹತ್ಯೆಗೆ ತಾನೇ ಕಾರಣನಾಗಿರುವಾಗ ಅದನ್ನು ಹೊರಗಿನ ಹಣದಿಂದ ಸರಿಪಡಿಸಲಾಗದು. ಕರ್ಮಕ್ಕೆ ತಕ್ಕಂತೆ ಫಲ.ಇದು ಯಾವ‌ಜನ್ಮದ ಪುಣ್ಯ ಪಾಪವಾದರೂ ಅನುಭವಿಸೋದು ಜೀವಾತ್ಮನೇ  ಎಂದಾಗ ಪರಮಾತ್ಮ ಏನು ಮಾಡಲಾಗದು.ದೇಶದೊಳಗೆ ಇದ್ದು ವಿದೇಶವನ್ನು  ಬೆಳೆಸಿ ದೇಶ ಹಾಳಾಗಿದೆ ಎಂದಂತಾಗುತ್ತದೆ ಅಲ್ಲವೆ?
ಈ ಭೂಮಿಯಲ್ಲಿ ಎಷ್ಟು ಆಸ್ತಿ ಅಂತಸ್ತು ಹೆಸರು ಹಣ ಅಧಿಕಾರ ಪಡೆದೆ ಎನ್ನುವುದರ ಮೇಲೆ ಭಗವಂತ‌ಮುಕ್ತಿ ಕೊಡೋದಾಗಿದ್ದರೆ ಮಹಾತ್ಮರು ಅವುಗಳನ್ನು ಬಿಟ್ಟು ದೂರವಿರುತ್ತಿರಲಿಲ್ಲವಲ್ಲ.ಇಷ್ಟು ಸಾಮಾನ್ಯ ಜ್ಞಾನವಿದ್ದರೆ  ನಮ್ಮ ಕಾಲುಬುಡ ನಾವು ನೋಡಿಕೊಂಡು ನಡೆಯಬಹುದು.ಇಲ್ಲವಾದರೆ ಯಾರದ್ದೋ ಕಾಲಕಸವಾಗಿ ಜೀವನ ನಡೆಸಬೇಕಾಗುವುದು ಎನ್ನುವುದೆ ಅಧ್ಯಾತ್ಮ.

Tuesday, March 19, 2024

ನಮಗೆ ಆಶ್ರಯ ನೀಡಿದವರು ಯಾರು?


ಭೂಮಿಯ ಮೇಲಿರುವ‌ಮನುಕುಲಕ್ಜಕೆ ಆಶ್ರಯ ನೀಡಿದ ಭೂ‌ಮಾತೆ, ಭಾರತೀಯರಿಗೆ ಭಾರತಮಾತೆ, ಕನ್ನಡಿಗರಿಗೆ ಕನ್ನಡ ಮಾತೆ, ಹೆತ್ತ ತಾಯಿಯರ ಹಿಂದೆ  ನಡೆದವರು ವಿರಳ.

ಪರಮಾತ್ಮನ ಒಂದಂಶವಾಗಿರುವ ಭೂಮಿಯಲ್ಲಿ ಜನ್ಮ ಪಡೆದ ಮೇಲೆ ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಪರಮಾತ್ಮನ ದರ್ಶ ನವಾಗೋದು ಕಷ್ಟ. ಅರ್ಥ ವಾದರೂ ಭೂಮಿಯ ಋಣ ತೀರಿಸೋದು ಇನ್ನೂ ಕಷ್ಟ ಹೀಗಾಗಿ ಹೊರಗಿನ‌ರಾಜಕೀಯ ಮಿತಿಮೀರಿದೆ. ತಮ್ಮೆಡೆ ಸೆಳೆದು ಆಳುವ ಅನೇಕರ ಹಿಂದೆ ನಡೆದಷ್ಟೂ ಜೀವಕ್ಕೆಸುಸ್ತು ನಿಜವಾದ ಮಹಾತ್ಮರು  ನಿನ್ನ ನೀ ತಿಳಿದು ನಡೆ ಎನ್ನುವ ದಾರಿ ತೋರಿಸಿ ಸ್ವತಂತ್ರವಾಗಿರುವರು ತನ್ನ ಹಿಂದೆ ಎಷ್ಟು ಜನರಿದ್ದಾರೆಂದು ಲೆಕ್ಕಹಾಕೋರಿಗೆ  ತನ್ನ ಲೆಕ್ಕಾಚಾರ ತಪ್ಪಾಗಿರೋದೇ ಅರ್ಥ ವಾಗಿರದು.
ಇದನ್ನು ಧಾರ್ಮಿಕ ಕ್ಷೇತ್ರದಲ್ಲಿಯೂ ಕಾಣುತ್ತಿರುವಾಗ ಭಗವಂತನ ಲೆಕ್ಕಾಚಾರ ಅರ್ಥ ವಾಗದೆ ಜೀವ ಹೋಗುತ್ತದೆ.
ಇದನ್ನೇ ರಾಜಕೀಯದವರೂ ಮಾಡಿದಾಗ ತಪ್ಪು ಎನ್ನುವ ಬದಲು ಅದರ ಮೂಲ ಯಾವುದೆನ್ನುವ ಬಗ್ಗೆ ಗಮನಹರಿಸುವುದಕ್ಕೆ ನಮ್ಮಲ್ಲಿ  ಸತ್ಯಜ್ಞಾನವಿರಬೇಕಿದೆ. ಸತ್ಯವಿಲ್ಲದ ಮಿಥ್ಯ ಜಗತ್ತನ್ನು ಆಳೋದಕ್ಕೆ  ಇಷ್ಟು ರಾಜಕೀಯ ಬೆಳೆದು‌ ನಿಂತಿರುವಾಗ ಯಾರನ್ನೂ ಯಾರೋ ಆಳಿ ಅಳಿಸುವುದೇ ಜೀವನದ ಸಾಧನೆ ಎನ್ನುವ ಮಟ್ಟಿಗೆ  ಮಾನವ ಬೆಳೆದು  ತನ್ನ ಅಸ್ತಿತ್ವಕ್ಕೆ  ತಾನೇ ಹೋರಾಟಮಾಡುವಂತಾಗಿರೋದು  ವಾಸ್ತವ ಸತ್ಯ.

ಆಧಾರ್ ಕಾರ್ಡ್‌  ಇಲ್ಲದೆ  ಜೀವನವಿಲ್ಲ ಎನ್ನುವ ಹಂತಕ್ಕೆ  ಬಂದಿರುವ  ವ್ಯವಹಾರಿಕ ಜೀವನದಲ್ಲಿ  ನಮಗೆ ಆಧಾರವಾಗಿ ನಿಂತಿರುವ ಪರಮಾತ್ಮನೆಲ್ಲಿ ಕಾಣುವನು?
ಸ್ವತಂತ್ರವಾಗಿ  ಮುಂದೆ ನಡೆದಿದ್ದ ಭಾರತವನ್ನು ಆಳಲು ಬಂದವರು  ಈಗಲೂ  ಶಿಕ್ಷಣ ವ್ಯವಹಾರ ಬಂಡವಾಳ ಸಾಲದ ಮೂಲಕ ಒಳಗೇ ಇದ್ದರೂ ನಾವು ಸ್ವತಂತ್ರ ರೆನ್ನುವ ಭ್ರಮೆಯಲ್ಲಿ  ನಮ್ಮವರನ್ನೇ  ಆಳಲು ಹೊರಟವರೆ ದೊಡ್ಡವರಾಗಿರೋದು. ದೊಡ್ಡವರ ಒಳಗಿರೋರು ಯಾರು?
ಮತದಾನ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವಾಗ ಮತದಾತರಲ್ಲಿ ಜ್ಞಾನವಿದ್ದರೆ ಉತ್ತಮ.ಅಜ್ಞಾನವೇ ಇದ್ದರೆ ? ಜನಸಂಖ್ಯೆ ಯ ಆಧಾರದಲ್ಲಿ ಭಾರತ ಮಹಾದೇಶವಾಗುತ್ತಿದೆ ಇಂತಹ ಮಹಾದೇಶವನ್ನು ಆಳೋದಕ್ಕೆ  ಪೈಪೋಟಿ ಹಗರಣ ಭ್ರಷ್ಟಾಚಾರ ಹೋರಾಟ ಹಾರಾಟ‌ಮಾರಾಟ ನಡೆದಿದೆ.ಇಲ್ಲಿ ಮಹಾತ್ಮರ ಹಿಂದೆ ನಡೆದವರೆಷ್ಟು ಮಂದಿ ಸ್ವತಂತ್ರ ಜೀವನ ನಡೆಸಲಾಗುತ್ತಿದೆ? ಎಲ್ಲಾ ಪ್ರಜೆಗಳ ಹಣದಿಂದಲೇ ನಡೆದಿರುವಾಗ  ಪ್ರಜೆಗಳನ್ನು ಹಿಡಿದಿಟ್ಟುಕೊಂಡು ತನ್ನ ವಶಪಡಿಸಿಕೊಂಡರೆ ಧರ್ಮ ವೆ? 
ಹೋಗಲಿ ಅವರಿಗೆ ಸ್ವತಂತ್ರ ಜ್ಞಾನದ ಶಿಕ್ಷಣ ನೀಡಿ ಸತ್ಯ ಧರ್ಮ ದಿಂದ ಜೀವನ ನಡೆಸಿದ್ದರೆ  ಪರಮಾತ್ಮ ಒಲಿಯಬಹುದು. ಇದಕ್ಕೆ ವಿರುದ್ದ ನಡೆದವರನ್ನು ತಮ್ಮ ವಶಪಡಿಸಿಕೊಂಡರೆ  ಸಮಸ್ಯೆಯನ್ನು ಮೈಮೇಲೆಳೆದುಕೊಂಡಂತೆ.ಭಾರ ತಾಳಲಾರದೆ ಜೀವ. ಹೋಗುತ್ತದೆ.
ಭೂತಾಯಿಯ ಋಣ ತೀರಿಸುವ‌ಮಹಾತ್ಮರು ಭೂಮಿಯನ್ನು ಆಳೋದಿಲ್ಲ. ಆಳೋರಿಗೆ ಧರ್ಮ ಮಾರ್ಗ ತೋರಿಸಿ ಸತ್ಯದ ಕಡೆಗೆ ನಡೆಸುವರಷ್ಟೆ. ಇಂದು ತಾನೇ ಅಧರ್ಮಕ್ಕೆ ತಲೆಬಾಗಿ ಭ್ರಷ್ಟ ದುಷ್ಟ ರ ಹಣ ಪಡೆದು ಜನರನ್ನು ಆಳೋದಕ್ಕೆ ನಾಟಕ ಮಾಡಿಕೊಂಡಿರುವವರ ವೇಷ ಯಾರಿಗೂ ಕಾಣದಿರೋದಕ್ಕೆ ಅಜ್ಞಾನ ಕಾರಣ.ಕಲಿಗಾಲದ ಮಹತ್ವ ಕಲಿಕೆಯೇ ಸರಿಯಿಲ್ಲದೆ ನಡೆ ನುಡಿ ಸರಿಪಡಿಸಲಾಗದು. ಪ್ರಚಾರಕ್ಕೆ ಸತ್ಯ ಧರ್ಮ ವಿದೆ ಅದರೆಡೆಗೆ ನಡೆಯೋರಿಗೆ  ತಡೆಯಿದೆ ಎಂದರೆ ಮಧ್ಯವರ್ತಿ ಮಾನವನಿಗೆ ತನಗೆ ತಾನೇ ಮೋಸಹೋಗುತ್ತಿದ್ದರೂ ಅರ್ಥ ವಾಗದ‌ಮನಸ್ಥಿತಿ ಪರಿಸ್ಥಿತಿ  ಬೆಳೆದಿರೋದೇ ರಾಜಕೀಯವಾಗಿದೆ. ಎಲ್ಲಿಯವರೆಗೆ ತತ್ವದಲ್ಲಿ ರಾಜಕೀಯಕ್ಕೆ ಬೆಲೆಯಿರುವುದೋ ಅಲ್ಲಿಯವರೆಗೆ ತಂತ್ರ ಕುತಂತ್ರದಿಂದ ಜನರನ್ನು ಆಳುತ್ತಿರುವುದು. ಇದರಿಂದಾಗಿ ಸ್ವತಂತ್ರ ಜ್ಞಾನ ಹಿಂದುಳಿಯುವುದು.
ಸ್ವತಂತ್ರ ಭಾರತವನ್ನು  ಆಳಿದವರ  ಗತಿ ಏನಾಗಿದೆ ಏನಾಗುತ್ತಿದೆ ದೇಶ ಎತ್ತ ಸಾಗುತ್ತಿದೆ.ಇದಕ್ಕಾಗಿ ‌ಮಾಡಿದ ಸಾಲ ಎಷ್ಟು? ಪರಮಾತ್ಮನ ಕಂಡವರೆಷ್ಟು ಮಂದಿ ರಾಜಕೀಯ ನಡೆಸಿದ್ದರು? ಮಹಾತ್ಮರ ದೇಶದಲ್ಲಿ ಪಾಪಿಷ್ಟರೆ ಬೆಳೆದಿರಲು ಕಾರಣವೇನು? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ. ಪರಮಾತ್ಮ ನಮ್ಮೊಳಗೇ ಇದ್ದರೂ  ಹೊರಗಿನ ವ್ಯಕ್ತಿಯ ಹಿಂದೆ ಹೋಗುವ ಮೊದಲು  ಅವರಲ್ಲಿ ಸತ್ಯವಿದೆಯೆ ಮಿಥ್ಯವಿದೆಯೆ ರಾಜಯೋಗವಿದೆಯೆ ರಾಜಕೀಯವಿದೆಯೆ ಎನ್ನುವ ಸಾಮಾನ್ಯ ಜ್ಞಾನವಿದ್ದರೆ  ಮಾನವ‌ಮಹಾತ್ಮರ ಹಿಂದೆ ನಡೆಯಬಹುದಲ್ಲವೆ? ಲಾಭ‌ನಷ್ಟ ಹಣದಲ್ಲಿ ಕಾಣಬಹುದು.ಜ್ಞಾನದಲ್ಲಿ ಕಾಣಲಾಗದು.ಭಾರತೀಯರ ಜ್ಞಾನ ಶಕ್ತಿ ಹಿಂದುಳಿಸಿ ಆಳೋದೇ ಅಜ್ಞಾನದ ಲಕ್ಷಣ. ಇದಕ್ಕೆ ನಮ್ಮದೇ ಸಹಕಾರವಿದ್ದಾಗ ಅದರ ಪ್ರತಿಫಲ ಅನುಭವಿಸಲೇಬೇಕು.ಮಾಡಿದ್ದುಣ್ಣೋ ಮಹಾರಾಯ ಎನ್ನುವುದು ಇದಕ್ಕೆ ಇರಬೇಕು. ಭೂಮಿಯಲ್ಲಿ ದೇವಾಸುರರು ತಮ್ಮ ಸ್ಥಾನಮಾನಕ್ಕೆ ಹೋರಾಟ ಮಾಡೋದು ಯುಗಯುಗದ ಸತ್ಯ.ಸತ್ಯವೇ ದೇವರು ಎಂದಾಗ ಸತ್ಯದಲ್ಲಿ ಜನರನ್ನು ನಡೆಸುವವರಿದ್ದಾರೆಯೆ? ನಡೆಸಲಾಗದೆ  ಹೋದವರಿದ್ದಾರೆ. ಕಾರಣ ಇಲ್ಲಿ ಸತ್ಯ ಒಳಗಿರುವಾಗ ಹೊರಗಿನ ಸತ್ಯ ಅದನ್ನು ವಿರೋಧಿಸುತ್ತದೆ.ಸುಮ್ಮನೆ ವಿರೋಧಕಟ್ಟಿಕೊಂಡು ಇರುವ ಧರ್ಮ ಕರ್ಮ ಬಿಟ್ಟರೆ ನಷ್ಟ ಹೀಗಾಗಿ ಮೌನವಾಗಿ ತಮ್ಮ ಜ್ಞಾನವನರಿತು ಸ್ವತಂತ್ರ ಜೀವನ ನಡೆಸಿದವರೆ ಮಹರ್ಷಿಗಳಾದರು.ಅಂತಹ ಋಷಿ ಪರಂಪರೆಯ ತಳಿಗಳಾಗಿರುವ ಇಂದಿನ ಜನರನ್ನು ಯಾರ ಖುಷಿಗಾಗಿ  ದುರ್ಭಳಕೆ ಮಾಡಿಕೊಂಡರೂ  ಹೇಳುವಂತಿಲ್ಲ.ಹೇಳಿದರೂ ಅರ್ಥ ವಾಗದೆ ಕೇಳೋರಿಲ್ಲ ಎಂದರೆ  ಒಳಗೇ ಅಸುರಿ ಶಕ್ತಿ ಬೆಳೆದಿರುವಾಗ  ಏನೂ ಮಾಡಲಾಗದು. ಭೂಮಿ ಎಲ್ಲವನ್ನೂ ಸಹಿಸಿಕೊಳ್ಳುವಳೆಂಬುದು ಸುಳ್ಳು.ಒಮ್ಮೆ  ಅಲ್ಲಾಡಿದರೆ ಜೀವ ಉದುರಿಹೋಗುವುದು. ಇದಕ್ಕೆ  ಹೇಳೋದು  ತಾಯಿಯ ಋಣ ತೀರಿಸಲಾಗದೆಂದು.ವಿಶ್ವದ ದೈವಮೂಲೆಯಲ್ಲಿರುವ ಭಾರತ ಮಾತೆ ಕನ್ನಡಮ್ಮನ ಋಣ ತೀರಿಸಲು ರಾಜಕೀಯ ಬೇಕೆ? ರಾಜಯೋಗವೆ?
ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳ ಧರ್ಮ ಯಾವುದು ಎಲ್ಲಿದೆ? ಒಳಗೋ ಹೊರಗೋ?ಒಳಗಿನ ಶಿಕ್ಷಣ ಬಿಟ್ಟು ಹೊರ ನಡೆದವರ ಹಿಂದೆ ಸಾಕಷ್ಟು ಜನರು‌ನಡೆದು ರಾಜಕೀಯ ನಡೆಸಿದ್ದಾರೆ. ಇದನ್ನು ಧರ್ಮ ಎನ್ನಬೇಕೋ ಅಧರ್ಮ ಎನ್ನಬೇಕೋ ಪ್ರಜೆಗಳೇ ನಿರ್ಧಾರ ಮಾಡಿಕೊಂಡರೆ ಆತ್ಮನಿರ್ಭರ ಭಾರತವಾಗುವುದು.  ಸರ್ಕಾರ ಬೇಕು ಆದರೆ ಅದು‌ ತನ್ನ ತಾನರಿತಿರಬೇಕು. ತಾನೇ ದಾರಿತಪ್ಪಿರುವಾಗ ಜನರನ್ನು ದಾರಿತಪ್ಪಿಸಿ ಆಳುವುದು ಅಧರ್ಮ. ಇದಕ್ಕೆ ಮತದಾತರು  ಸಹಕರಿಸಿದರೆ ಮುಗಿಯಿತು ಕಥೆ.
ಶೇ 40 ರಿಂದ50 ಮತದಾನವಾಗಿದ್ದರೆ ಉಳಿದವರು ಯಾರು? ದೇಶದೊಳಗೆ ಇದ್ದು ದಾರಿತಪ್ಪಿಸಿ ಆಳುವ ಮಧ್ಯವರ್ತಿಗಳು  ಈ ಕಡೆ ಯಾವ‌ಪಕ್ಷದ ಪರ ವಿರೋಧವಿಲ್ಲದೆ ವ್ಯವಹಾರಕ್ಕೆ ಇಳಿದು ಜನರಲ್ಲಿ ಪಕ್ಷಗಳ ನಡುವೆ ದ್ವೇಷ ಹೆಚ್ಚಿಸುವತ್ತ ಕೆಲಸ ಮಾಡಿದರೆ ದೇಶಭಕ್ತಿ ಎನ್ನಬಹುದೆ? ಇಂತಹ ತಂತ್ರಗಾರಿಕೆಯೇ ದೇಶದ ಸ್ವತಂತ್ರ ಹಾಳು ಮಾಡಿರುವಾಗ ಇದರ ಬಗ್ಗೆ ಜನ ಎಚ್ಚರ ವಾಗಲು  ಜ್ಞಾನವಿರಬೇಕಿದೆ. ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಅದರ ಹಿಂದೆ ನಡೆದವರಿಗೆ  ಪರಮಾತ್ಮನ ದರ್ಶನ ವಾಗಿದೆ ಎಂದರೆ ಮಧ್ಯವರ್ತಿಗಳ ಲ್ಲಿ ಕಾಣಬಹುದೆ? ತನ್ನ ಜೀವನಕ್ಕಾಗಿ  ಕೆಲಸ ಮಾಡೋದು ಸರಿ.ಅದರಿಂದ ಇಡೀ ದೇಶಕ್ಕೆ ಸಮಸ್ಯೆ ಯಾದರೆ ಅದು ಅಕರ್ಮ ಅಧರ್ಮ ವಾಗುತ್ತದೆ. ಇದಕ್ಕಾಗಿ ಹಿಂದಿನ ಮಹಾತ್ಮರುಗಳು ನೇರವಾಗಿ ಪರಮಾತ್ಮನ ಕಡೆಗೆ ನಡೆದಿದ್ದರು.  ಕಾಲಬದಲಾಗಿದ್ದರೂ ಧರ್ಮ ಸತ್ಯ ಒಂದೇ. ಆ ಒಂದರ ಕಡೆಗೆ ನಡೆಯುವಾಗ ಜನಬಲ ಹಣಬಲ ಅಧಿಕಾರಬಲವಿರದು. ಹೀಗಾಗಿ ಇಂದು ಅದ್ವೈತ ಸಂಶೋಧನೆಗಳು ಹೊರಗೆ ನಡೆದಿದೆ.ಎಲ್ಲರನ್ನೂ ಒಂದಾಗಿಸಲು ರಾಜಕೀಯ ಬೆಳೆದಿದೆ. ಆದರೆ ಇದು ರಾಜಯೋಗದೆಡೆಗೆ ನಡೆಸಿದಾಗಲೇ ಅವರವರ ಧರ್ಮ ಕರ್ಮಕ್ಕೆ ಚ್ಯುತಿ ಬರದಂತಹ ಶಿಕ್ಷಣ ನೀಡಲು ಸಾಧ್ಯ.ಇದಕ್ಕೆ ಜನರಸಹಕಾರ ಸಹಾಯ ಸಿಕ್ಕಿದಾಗಲೇ ಆತ್ಮನಿರ್ಭರ ಭಾರತದ ಕನಸು ನನಸಾಗಬಹುದು. ಇಷ್ಟು ಸರಳ ಸುಲಭದ ವಿಚಾರ ಜನರಿಗೆ ತಿಳಿಸೋದು ಇಂದು ಸುಲಭವಾದರೂ ಅರ್ಥ ಮಾಡಿಕೊಳ್ಳಲು ಕಷ್ಟವಿರುವ‌ಕಾರಣ ರಾಜಕೀಯ ದಾರಿತಪ್ಪಿ ನಡೆದಿದೆ.ಧರ್ಮಾಂತರ, ಜಾತ್ಯಾಂತರ,ಮತಾಂತರ, ಪಕ್ಷಾಂತರಗಳು ದೇಶಾಂತರ ಹೋಗುವವರಿಗೆ ಪ್ರೇರಣೆ ನೀಡಿವೆ. ಅದು ಜ್ಞಾನದ ಅಂತರವಾಗದೆ ಅಜ್ಞಾನವಾಗಿರೋದು ದುರಂತವಲ್ಲವೆ?
ಬದಲಾವಣೆ ಆಗುತ್ತದೆ ಆಗಬೇಕಿದೆ.ಅದು ನಮ್ಮೊಳಗೇ ಆದಾಗ ಉತ್ತಮ‌ ಶಾಂತಿ ಎನ್ನುತ್ತದೆ ಸನಾತನ ಧರ್ಮ.
ಆಗೋದೆಲ್ಲಾ ಒಳ್ಳೆಯದಕ್ಕೆ  ಆಗೋದನ್ನು ತಡೆಯಲಾಗದು.ತಡೆದರೂ ತಪ್ಪಿಸಲಾಗದು.
ನಿಧಾನವಾಗಬಹುದಷ್ಟೆ.ಸಾವು ನಿಧಾನವಾಗಿಯಾದರೂ  ಇದ್ದೇ ಇದೆ .ಇದ್ದಾಗಲೇ ಸತ್ತಂತೆ ಬದುಕುವುದು  ಅಜ್ಞಾನ. ಆತ್ಮಕ್ಕೆ ಸಾವಿಲ್ಲವೆಂದಾಗ ಅದರ ಜೊತೆ ಬದುಕುವುದೇ ಜೀವನ. ಇದಕ್ಕೆ ಮಹಾತ್ಮರುಗಳ ಸಂಖ್ಯೆ ಹೆಚ್ಚಾಗಬೇಕಷ್ಟೆ. ಸತ್ಯಕ್ಕೆ  ಬೆಲೆಕೊಡದವರು ಜನರನ್ನುಆಳಿ ಉಪಯೋಗವಿಲ್ಲ. ಭೂಮಿಗೇ ಭಾರವಷ್ಟೆ. ಈ ಭಾರವನ್ನು ಇಳಿಸುವುದಕ್ಕೆ ಯುದ್ದಗಳಾಗಿವೆ. ಧರ್ಮ ಯುದ್ದಗಳಾಗಿವೆ. ಈಗಲೂ ಮನೆ ಮನೆಯೊಳಗೆ ಯುದ್ದಗಳಾಗುತ್ತಿವೆ ಆದರೆ ಇದರಲ್ಲಿ ರಾಜಕೀಯವೇ ಹೆಚ್ಚಾಗುತ್ತಿದೆ  ಎಂದರೆ  ಮಾನವ ಎತ್ತ ನಡೆದಿರೋದು? ಅಧ್ಯಾತ್ಮ ವಿಜ್ಞಾನದೊಳಗಿರುವ ಸೂಕ್ಷ್ಮ ಜ್ಞಾನ‌ ಕಣ್ಣಿಗೆ ಕಾಣೋದಿಲ್ಲ. ಕಣ್ಣಿಗೆ ಕಾಣುವ  ಹೊರಗಿನ‌ಜ್ಞಾನ ದಲ್ಲಿ ಸತ್ಯಧರ್ಮ ವಿಲ್ಲ. ಒಟ್ಟಿನಲ್ಲಿ ಕಾಣದ್ದು ಕಂಡೆ ಎಂದರೆ ನಂಬುವವರ ಹಿಂದೆ  ನಡೆದವರಿಗೆ‌ ಪರಮಾತ್ಮ ಅರ್ಥ ವಾಗಿಲ್ಲ ಪರಕೀಯರು ಅರ್ಥ ಮಾಡಿಸುತ್ತಿದ್ದಾರೆ.ಇದೂ ಭಗವಂತನ ಆಟ.ನಾವೆಲ್ಲರೂ ಕಾಳಾಳುಗಳಷ್ಟೆ.ಚದುರಂಗದಲ್ಲಿ  ಗೆದ್ದರೂ‌ ಒಂದೇ ಸೋತರೂ ಒಂದೇ  ರಾಜನನ್ನು ಉಳಿಸಿಕೊಳ್ಳುವ ಶಕ್ತಿ ಕಾಲಾಳುಗಳಿಗಿದ್ದರೂ  ಹೋರಾಟ ಮಾಡುವ ಅಧಿಕಾರ ಹಣವಿಲ್ಲದೆ ಏನೂ ಮಾಡದ ಪರಿಸ್ಥಿತಿ ಯಲ್ಲಿ ದೇಶ ನಿಂತಿದೆ. ಕೊನೆಗೆ ಗೆಲ್ಲೋದು ಸತ್ಯವೇ ಆದರೂ  ಸತ್ಯ ಒಳಗಿರುವಾಗ ಜನರು ಒಳಗೇ ಹುಡುಕಿಕೊಳ್ಳಬೇಕು. 

ರಾಮರಾವಣರಿಬ್ಬರೂ ಶಿವನ ಆರಾಧಕರಾಗಿದ್ದರು

ನಾನ್ಯಾರೆಂದು ತಿಳಿಯುವವರೆಗೆ  ಎಲ್ಲವೂ ವಿಶೇಷ
ವಾಗಿರುತ್ತದೆ ತಿಳಿದ ಮೇಲೆ ಸಶೇಷವಾಗುತ್ತದೆ.ಅಂದರೆ 
ಎಲ್ಲದರಲ್ಲೂ ಇರೋನು ಒಬ್ಬನೇ ಎಂದಾಗ ನಾನು  ಅದರಲ್ಲಿ ಒಬ್ಬ ಅಷ್ಟೆ ನನ್ನಲ್ಲಿ ವಿಶೇಷವೇನೂ ಇಲ್ಲ ನಾನೆಂಬುದಿಲ್ಲ  ಇದೇ ಅಧ್ವೈತ
-ಭಗವತಿ-

ದಿನಕ್ಕೊಂದು ಸಾಮಾನ್ಯಜ್ಞಾನ.
ರಾಮ,ರಾವಣರು ಶಿವನನ್ನು  ಪೂಜಿಸಿದ್ದರು. ಅಂದರೆ ಶಿವ  ದೇವಾಸುರರಿಬ್ಬರಲ್ಲಿಯೂ ಇದ್ದು ತನ್ನ ಲಯದ ಕಾರ್ಯ ನಡೆಸುತ್ತಿರೋದು ಸತ್ಯ. ಸತ್ಯವೇ ದೇವರು ಅಸತ್ಯವೇ ಅಸುರರು. ಇವು ಮಾನವನೊಳಗಿದೆ. ಎಲ್ಲಾ ಒಮ್ಮೆ ಮರೆಯಾಗೋರೆ ಆದಾಗ  ನಮ್ಮೊಳಗೆ ಸತ್ಯವಿದ್ದರೆ ದೇವರನ್ನು ಸೇರುತ್ತೇವೆ. ಅಸತ್ಯವಿದ್ದರೆ ಅಸುರರ ದಾಸರಾಗಿರುತ್ತೇವೆ. ಶಿವ ಮುಕ್ತಿ ನೀಡುವ  ಮಹಾದೇವ  ಹಾಗಾದರೆ ಮುಕ್ತಿ  ಯಾವುದರಿಂದ? ಅಸತ್ಯದಿಂದಲೋ?ಸತ್ಯದಿಂದಲೋ?
ಮಹಾಶಿವರಾತ್ರಿಯಲ್ಲಿ ಮಾನವರು ರಾತ್ರಿಯಲ್ಲಿ ಶಿವನನ್ನು ಪೂಜಿಸುತ್ತಾರೆ. ರಾತ್ರಿವೇಳೆಯಲ್ಲಿ ಇತರ ದೇವತೆಗಳಿಗೆ ಪೂಜೆ ನಿಶಿದ್ದ.ಆದರೆ ಸರ್ವಾಂತರ್ಯಾಮಿ
ಶಿವನಿಗೆ ಯಾವುದೇ ನಿಶಿದ್ದವಿಲ್ಲ. ಎಲ್ಲಾ ಶಿವಮಯವೆ.
ಶಿವ ಶಕ್ತಿಯರ  ಅರ್ಧನಾರೀಶ್ವರ  ಸ್ತ್ರೀ ಪುರುಷರ ಸಮಾನತೆಯ ಸಂಕೇತವೆನ್ನಬಹುದು. ಶಿವನ  ಅರ್ಧಶಕ್ತಿ
ಶಿವೆಯಲ್ಲಿದ್ದು ಭೂಮಿಯನ್ನು  ನಡೆಸುತ್ತಿರುವ  ಶಕ್ತಿಯನ್ನು  ಪುರುಷರು ಆರಾಧಿಸುವಾಗ ಹತ್ತಿರವೇ ಇದ್ದು ಸಹಕರಿಸುವ ಸ್ತ್ರೀ ಯರನ್ನು ಗೌರವದಿಂದ ಕಾಣುವ ಜ್ಞಾನವಿದ್ದರೆ ಮುಕ್ತಿ. ಮುಕ್ಕಣ್ಣನೆಂದರೆ ಶಿವ.ಮೂರನೆಯ ಕಣ್ಣು ಜ್ಞಾನದ ಕಣ್ಣು. 
ಅದು ಯಾವಾಗ ತೆರೆಯುವುದೋ ಆಗಲೇ ಮುಕ್ತಿ. ಹೀಗಾಗಿ ಶಿವಭಕ್ತರುಸಾಮಾನ್ಯವಾಗಿ ವಿರಾಗಿಗಳಾಗಿರುತ್ತಾರೆ.
ಸರಳ ಜೀವನ. ಸ್ವಾವಲಂಬನೆ, ಸತ್ಯ,ಸ್ವಾಭಿಮಾನ, 
ನಿಸ್ವಾರ್ಥ ಭಕ್ತಿ,ನಿಷ್ಕಾಮಪ್ರೀತಿ,ವಿಶ್ವಾಸವುಳ್ಳವರಾಗಿರುತ್ತಾರೆ.
ಈಎಲ್ಲಾ ಗುಣಗಳೂ ಮಾನವನೊಳಗಿದೆ.ಅದನ್ನು 
ತಿಳಿದು  ಬೆಳೆಸಿಕೊಳ್ಳುವುದಕ್ಕೆ ಜ್ಞಾನದ ಅಗತ್ಯವಿದೆ.
ಹಣ,ಅಧಿಕಾರ,ಸ್ಥಾನಮಾನದ  ಹಿಂದೆ ನಡೆದ 
ಮೇಲೆ ಇದರಿಂದ ದೂರವಾದ ಮನಸ್ಸಿಗೆ ಹೊರಗಿನ ಶಿವ
ಕಾಣಬಹುದಷ್ಟೆ.   ಸಾಮಾನ್ಯವಾಗಿ ಲಿಂಗರೂಪದಲ್ಲಿ ಆರಾಧಿಸುವ ಶಿವನಿಗೆ ಲಿಂಗಬೇಧವಿಲ್ಲ. ಆದರೂ  ಹೊರಗಿನ ಸಾಲ ತೀರಿಸಲು ಕಾಯಕವೇ ಕೈಲಾಸವಾದರೆ ಉತ್ತಮ.
ಕೈಲಾಸವನ್ನೇ  ಕಾಯಕ ಮಾಡಿಕೊಂಡು ವ್ಯವಹಾರ 
ನಡೆಸುವಾಗ ಎಚ್ಚರವಾಗಿರಬೇಕು. ಕಾರಣ ಹಣದ ಹಿಂದಿನ ಋಣ ತೀರಿಸಲು  ಕಷ್ಟಪಡಲೇಬೇಕು.
"ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ" ಎಂದ ದಾಸರಿಗೂ  ಶಿವಭಕ್ತರಿಗೂ, ಶರಣರಿಗೂ,ಮಹಾತ್ಮರಿಗೂ,ದೇವತೆಗಳಿಗೂ, ಪರಮಾತ್ಮನೆನಿಸಿಕೊಂಡ  ಶಿವನೊಬ್ಬನೆ ನಾಮಹಲವು.
ಎಲ್ಲಾ ದೇವತೆಗಳ ಅವತಾರದಂತೆ ಶಿವನೂ ಎಷ್ಟೋ
ಅವತಾರಗಳಲ್ಲಿ ಭೂಮಿಗೆ ಬಂದಿರುವುದಾಗಿದೆ. ವಿಷ್ಣು
ಅವತಾರದಲ್ಲಿ ಹೆಚ್ಚು ರಾಜಕೀಯತೆ ಇದ್ದರೆ,ಶಿವನ ಅವತಾರಗಳಲ್ಲಿ ಸಂನ್ಯಾಸತ್ವವಿದೆ.ಹೀಗಾಗಿ ಮಾನವರು
ಶಿವನಲ್ಲಿ ಮುಕ್ತಿ ಬೇಡುವಾಗ ರಾಜಕೀಯ ಬಿಟ್ಟು  ಮುಂದೆ ಬಂದರೆ  ಶಿವನ‌ಕೃಪೆ  ದೊರೆಯುತ್ತದೆ. ಒಟ್ಟಿನಲ್ಲಿ
ಇಲ್ಲಿ ಮುಕ್ತಿ ಸಿಗಲು ಸತ್ಯಜ್ಞಾನ ಬೇಕು. ಸತ್ಯವೇ ದೇವರಾಗಬೇಕು. "ಸತ್ಯಂ‌ ಶಿವಂ  ಸುಂದರಂ".
ಶಿವನ ಆರಾಧನೆಗೆ ವೈಭವದ ಅಗತ್ಯವಿಲ್ಲ. ಸರಳ ಸುಂದರ ಸತ್ಯಜ್ಞಾನದಿಂದಲೇ ಶಿವನನ್ನು ಒಲಿಸಿಕೊಳ್ಳಲು
ಸಾಧ್ಯವೆನ್ನುವುದೇ ಶಿವಶರಣರ  ಸಂದೇಶವಾಗಿದೆ.ಅವರು ತಮ್ಮ ಜೀವನದಲ್ಲಿ ನಡೆದು ತೋರಿಸಿದ್ದಾರೆ.ಆದರೆ ಅವರ ಹೆಸರಲ್ಲಿ ಅಧರ್ಮದ ರಾಜಕೀಯ ನಡೆಸಿಕೊಂಡು ಸ್ವಾರ್ಥ ಪೂರಿತ  ದೇವಸ್ಥಾನ ಕಟ್ಟಿಕೊಂಡು, ಆಡಂಬರ,ವೈಭವದ ಜೀವನನಡೆಸಿಕೊಂಡು  ಮುಕ್ತಿ  ಕೊಡು ಎಂದರೆ 
 ಶಿವ ಒಲಿಯುವನೆ?
ದ್ವೈತ ಅದ್ವೈತದ  ಭಿನ್ನಾಭಿಪ್ರಾಯ ದಲ್ಲಿ ವಿಷ್ಣುವೇ ಶ್ರೇಷ್ಠ
ಶಿವನೇ ಶ್ರೇಷ್ಠ ಎನ್ನುವುದರಲ್ಲಿಯೇ  ಮಾನವರು ಕಾಲ
ಕಳೆಯುತ್ತಿದ್ದರೆ  ಬ್ರಹ್ಮಜ್ಞಾನಕ್ಕೆ ಬೆಲೆ ಇರುವುದಿಲ್ಲ.
ಸೃಷ್ಟಿ ಇಲ್ಲದೆ ಸ್ಥಿತಿ ಯಿಲ್ಲ ಸ್ಥಿತಿಗೆ ತಕ್ಕಂತೆ ಲಯವೂ ಇದೆ.
ತ್ರಿಮೂರ್ತಿ ಯರ  ನಿತ್ಯ ನಿರಂತರ ಕಾರ್ಯಕ್ಕೆ  ತಡೆಯಿಲ್ಲ
ಹುಲುಮಾನವರಾದ ನಮಗೆ ನಮ್ಮೊಳಗೇ ಅಡಗಿರುವ ಅಲ್ಪ ಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಮಯವಿಲ್ಲ.
ಕಾರಣ ಹೊರಗಿನ‌ ರಾಜಕೀಯದಲ್ಲಿ  ದೇವಾನುದೇವತೆಗಳನ್ನು  ಬಳಸಿಕೊಂಡು ರಾಜಕೀಯಕ್ಕೆ
ಒತ್ತು ಕೊಟ್ಟು ಮನಸ್ಸನ್ನು ಹೊರಗಿಟ್ಟು  ಕಷ್ಟ ನಷ್ಟವನ್ನು
ಒಳಗೆಳೆದುಕೊಂಡು ಬಿಡುಗಡೆಗಾಗಿ ದೇವರನ್ನು ಬೇಡುತ್ತೇವೆ. ಬೇಡೋದರಲ್ಲಿಯೇ ಅಜ್ಞಾನವಿರೋವಾಗ
ಮುಕ್ತಿ ಹೇಗೆ ಸಿಗಬೇಕು?
ಶಿವನಿಗೆ ಆಡಂಬರ,ವೈಭವದಿಂದ ಪೂಜಿಸುವವರಲ್ಲಿ ಹಣವಿರಬಹುದು.ಆ ಹಣದ ಮೂಲ ಯಾವುದೆನ್ನುವುದೂ ಮುಖ್ಯವಾಗಿರುತ್ತದೆ.ಭ್ರಷ್ಟಾಚಾರದ ಹಣವಾಗಿದ್ದರೆ ಶಕ್ತಿ
ಯಾರಿಗೆ  ಸಿಗುತ್ತದೆ?
ನಿಸ್ವಾರ್ಥ, ನಿರಹಂಕಾರ, ನಿರಾಕಾರ,ನಿರಾವಲಂಬನೆ
ನಿರ್ಗುಣ ತತ್ವಜ್ಞಾನಕ್ಕೆ ವಿರುದ್ದವಾಗಿರುವ ತಂತ್ರಜ್ಞಾನದ
ಯುಗದಲ್ಲಿ ಮನುಕುಲ  ದೇವರನ್ನು ಹೊರಗೆ ಹುಡುಕಿ
ಸೋಲುತ್ತಿರುವುದು ಕಾಲ ಪ್ರಭಾವವೆನ್ನಬಹುದಷ್ಟೆ.
ಶಿವನ ನಾಮಸ್ಮರಣೆಯಿಂದಲೇ ಮುಕ್ತಿ ಪಡೆದವರೆಷ್ಟೋ
ಮಾನವರು ಮಹಾತ್ಮರಾಗಿದ್ದಾರೆ. ಎಲ್ಲಾ ದೇವತೆಗಳು
ಭೂಮಿಯ ಮೇಲಿರುವ ಮಾನವರಿಗೆ ಕೇಳಿದ್ದೆಲ್ಲಾ ಕೊಟ್ಟು ಸಲಹಿದ್ದಾರೆ.ಆದರೆ,ಮುಕ್ತಿ ಕೊಡುವ ಶಿವನನ್ನು
ಅರ್ಥ ಮಾಡಿಕೊಂಡವರು ವಿರಳ. ಇದಕ್ಕೆ ವಿಶೇಷಜ್ಞಾನದ ಅಗತ್ಯವಿಲ್ಲ ಸಾಮಾನ್ಯಜ್ಞಾನದ ಅಗತ್ಯ
ಇದೆ ಎನ್ನಬಹುದೆ?
ಓಂ ನಮ; ಶಿವಾಯ.
ಯೋಗಿಯನ್ನು ಬೇಡುವುದಕ್ಕೂ ಯೋಗ ಬೇಕು.
ಯೋಗದಿಂದ ಆರೋಗ್ಯ.ಆರೋಗ್ಯವೆಂದರೆ ಆರು ಯೋಗ್ಯ ಎಂದರ್ಥ. ಕಾಮ,ಕ್ರೋಧ,ಲೋಭ,ಮೋಹ,ಮಧ,ಮತ್ಸರ.ಇವು
ಮಾನವನೊಳಗಿರುವ  ಆರು ಗುಣಗಳು. ಇವುಗಳನ್ನು
ಸನ್ಮಾರ್ಗದಲ್ಲಿ  ನಡೆಸಿಕೊಳ್ಳಲು  ಮನಸ್ಸನ್ನು  ತಡೆಹಿಡಿದು ಜೀವನ ನಡೆಸಬೇಕು. ಆತ್ಮಸಾಕ್ಷಿಗೆ ತಕ್ಕಂತೆ ನಡೆಯಬೇಕು. 
ಆದರೆ, ಇದಕ್ಕೆ ಶಿಕ್ಷಣ ನೀಡುವ‌ ಗುರು ಬೇಕು. 
ಗುರುವಲ್ಲಿ ರಾಜಯೋಗದ ಜ್ಞಾನದ ಅನುಭವಬೇಕು. ಕಲಿಗಾಲಕೊನೆಯ ಯುಗವಾದ್ದರಿಂದ  ಮಾನವರಲ್ಲಿ ಹೆಚ್ಚಾಗಿಅಜ್ಞಾನವೇ ಇರುವುದರಿಂದ   ಅದನ್ನು  ಸರಿಪಡಿಸಲು ಜ್ಞಾನದ ಶಿಕ್ಷಣದಿಂದ   ಮಾತ್ರ   ಸಾಧ್ಯವೆನ್ನ
ಬಹುದಷ್ಟೆ.
ದೇವರಾಗಲು ಕಷ್ಟ,ಅಸುರರಾಗೋದು ಸುಲಭ ಆದರೆ
ಭೂಮಿಯಲ್ಲಿ ಮಾನವರಿರಬೇಕಷ್ಟೆ. ಮನುಕುಲಕ್ಕಾಗಿ
ಭೂಮಿ ಇರೋವಾಗ ಮಾನವರೆ ಇಲ್ಲವಾದರೆ ಮಾನವೀಯತೆ ಎಲ್ಲಿರುತ್ತದೆ.

ಮನಸ್ಸಿನಂತೆ ಮಾನವನ ಜೀವನ

ಮನಸ್ಸು ಒಳಗಿದ್ದಷ್ಟೂ ಮನುಷ್ಯನಿಗೆ ಶಾಂತಿ ಹೊರಬಂದಷ್ಟೂ ಅಶಾಂತಿ. ಅದರಲ್ಲಿ  ಮಹಿಳೆ ಮಕ್ಕಳ ಮನಸ್ಸು ಬಹಳ ಸೂಕ್ಮವಾಗಿರುವುದರಿಂದ  ಒಳಗಿನ‌ಮನಸ್ಸಿನೆಡೆಗೆ ನಡೆಯೋದೆ ಜೀವನದ ಗುರಿಯಾಗಿತ್ತು 
-ಭಗವತಿ-
ನಾನ್ಯಾರೆಂದು ತಿಳಿಯುವವರೆಗೆ  ಎಲ್ಲವೂ ವಿಶೇಷ
ವಾಗಿರುತ್ತದೆ ತಿಳಿದ ಮೇಲೆ ಸಶೇಷವಾಗುತ್ತದೆ.ಅಂದರೆ 
ಎಲ್ಲದರಲ್ಲೂ ಇರೋನು ಒಬ್ಬನೇ ಎಂದಾಗ ನಾನು  ಅದರಲ್ಲಿ ಒಬ್ಬ ಅಷ್ಟೆ ನನ್ನಲ್ಲಿ ವಿಶೇಷವೇನೂ ಇಲ್ಲ ನಾನೆಂಬುದಿಲ್ಲ  ಇದೇ ಅಧ್ವೈತ
-ಭಗವತಿ-

ಶಿವರಾತ್ರಿಯ ಜಾಗರಣೆಯಿಂದ ಶಿವಮಯವಾಗುವುದೆ?

ಇತ್ತೀಚಿನ ದಿನಗಳಲ್ಲಿ ಪಕ್ಷ ಪಕ್ಷಗಳ ನಡುವೆ ನಿಂತು ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಗಳಲ್ಲಿ ಅಡಗಿರುವ ದ್ವೇಷದ ಕಿಚ್ಚು ಯಾವ ದೇಶಕ್ಕೆ ಒಳಿತಾಗುವುದು ಕೆಡುಕಾಗುವುದೆನ್ನುವ ಸಾಮಾನ್ಯ ಜ್ಞಾನವಿಲ್ಲದೆ  ಜನರು ಅಸತ್ಯ ಅಧರ್ಮ ದೆಡೆಗೆ ನಡೆಯುತ್ತಿರುವುದು ಸಾಮಾನ್ಯವಿಚಾರವಾಗಿದೆ.ಆದರೆ ಪ್ರಜಾಪ್ರಭುತ್ವದ ಭಾರತಕ್ಕೆ ಇದೇ ದೊಡ್ಡ ಕಂಟಕತಂದೊಡ್ಡಿರೋದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಲು ಸೋತಿರೋದೇ ದುರಂತ. ಎಲ್ಲಾ ವಿನಾಶದತ್ತ ನಡೆದಿರುವಾಗ ತಡೆಯೋ ಶಕ್ತಿ ಆ ಬ್ರಹ್ಮನಿಗಿಲ್ಲ.ಎಲ್ಲಾ ಶಿವಮಯವೇ .
ಶಿವರಾತ್ರಿಯ ಜಾಗರಣೆ ಮಾಡಿದರೆ ಮುಕ್ತಿ ಸಿಗುವುದು ಪಾಪ ಕಳೆಯುವುದೆಂದು ರಾತ್ರಿಇಡೀ  ಮನರಂಜನೆಯಲ್ಲಿ ಮೈಮರೆತು ಬೆಳಿಗ್ಗೆ ಯಥಾಪ್ರಕಾರ ಅಸತ್ಯ ಅನ್ಯಾಯ ಅಧರ್ಮ ದಲ್ಲಿಯೇ  ಇದ್ದರೆ ಪ್ರಯೋಜನವೇನು?
ನಮ್ಮ ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಮೊದಲು ಆಂತರಿಕ ಶುದ್ದತೆ ಇರಬೇಕು.ಇದನ್ನು ಹೊರಗಿನ ರಾಜಕೀಯದಿಂದ ಗಳಿಸಲಾಗದು. ಭೂಮಿ ಮೇಲೆ ನಿಂತು ಅವಳ ಋಣ ತೀರಿಸಲಾಗದೆ ಅವಳನ್ನೇ ದುರ್ಭಳಕೆ ಮಾಡಿಕೊಂಡು ದೇವರು ಧರ್ಮ ದೇಶ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರವನ್ನು ಪ್ರಚಾರ ಮಾಡಿದವರಿಗೆ  ದೈವತ್ವದ ಗುಣವಿದೆ ಎನ್ನಬಹುದಾದರೆ ಪ್ರತಿಯೊಬ್ಬರೂ ಮಧ್ಯವರ್ತಿಗಳೇ ಮಾನವರು ದೇವರಾಗಬಹುದಿತ್ತು. ಯಾಕಿಷ್ಟು ದ್ವೇಷ ಸೇಡು ಕೆಟ್ಟ ನಡೆ ನುಡಿಗಳಿಂದ  ಎಳೆದಾಡಿಕೊಂಡು ತಾವೂ ಸತ್ಯ ತಿಳಿಯದೆ ತಿಳಿದವರನ್ನೂ  ಮುಂದೆ ನಡೆಯದಂತೆ ತಡೆಯುವ  ಮಧ್ಯವರ್ತಿಗಳು ಬೆಳೆದಿರೋದಕ್ಕೆ ಕಾರಣ ಅಜ್ಞಾನ.
ಅಜ್ಞಾನಕ್ಕೆ ಕಾರಣ ಶಿಕ್ಷಣ.ಸರಿಯಾದ‌ಸಾತ್ವಿಕ ಶಿಕ್ಷಣ ನೀಡದೆ ರಾಜಕೀಯಕ್ಕೆ ಇಳಿದವರಿಗೆ ಹಣ ಅಧಿಕಾರ ಸ್ಥಾನಮಾನವೇ‌ಮುಖ್ಯವಾಗಿ ತನ್ನೊಳಗೇ ಅಡಗಿರುವ  ಜ್ಞಾನವನ್ನು  ಸದ್ಬಳಕೆ ಮಾಡಿಕೊಳ್ಳಲು ಸೋತು ಪರಕೀಯರ‌ವಿಜ್ಞಾನಕ್ಕೆ ಶರಣಾಗಿ ನಾನು ಸ್ವತಂತ್ರ ವಾಗಿದ್ದೇನೆಂಬ ಭ್ರಮೆಯಲ್ಲಿ  ಜನರ ದಾರಿತಪ್ಪಿಸಿ ಆಳುವ ಕುತಂತ್ರಕ್ಕೆ ಸರಿಯಾದ  ಶಿಕ್ಷೆ  ಅಗಲೇಬೇಕು.
ಶಿಕ್ಷೆ ನೀಡುವವರು  ಯಾರು? ಭ್ರಷ್ಟರ ಪರ ನಿಂತು ನ್ಯಾಯಾಧೀಶರು  ಹಣಕ್ಕಾಗಿ ವಾದ ಮಾಡಿದರೆ ನ್ಯಾಯದೇವತೆ ಸುಮ್ಮನಿರುವಳೆ? ಕಣ್ಣಿಗೆ ಕಾಣುವಂತೆ ಕಳ್ಳರು ಸುಳ್ಳರು ಭ್ರಷ್ಟರು ದುಷ್ಟರು ತಮ್ಮ ಕೆಲಸ ರಾಜಾರೋಷವಾಗಿ ಮಾಡಿಕೊಂಡು ಓಡಾಡುತ್ತಿದ್ದರೂ  ನಮಗೇನು  ನಾವು ಸುಖವಾಗಿದ್ದರೆ ಸರಿ ಎನ್ನುವ ಹಲವು ಮಾಧ್ಯಮಗಳು ಮಧ್ಯವರ್ತಿಗಳು ಅವರಿಗೇ ಮಣೆ ಹಾಕಿ‌ ಜನರ ಮುಂದೆ  ಮಾತನಾಡಲು ಅವಕಾಶಕೊಟ್ಟರೆ  ಅದು ಭ್ರಷ್ಟರ ತಪ್ಪಲ್ಲ. ಕಾರಣ ಅಜ್ಞಾನದಲ್ಲಿ  ಎಲ್ಲರೂ ನಾವು ಸರಿಯಾಗಿದ್ದೇವೆಂದೇ ನಡೆಯುವರು. ಅವರಿಗೆ ಸಿಗುವ ಸಹಕಾರ ಅಧಿಕಾರ ಸಹಾಯ ಜನಬಲ ಹಣಬಲವಂತೂ ಇನ್ನಷ್ಟು ದಷ್ಟಪುಷ್ಟವಾಗಿಸುತ್ತದೆ.ಇವೆಲ್ಲವೂ ಹೊರಗಿನಿಂದ ಜನರೇ ಕೊಟ್ಟಿರುವಾಗ  ಇದು ಜನರ ತಪ್ಪು.ಜನರಲ್ಲಿ ಅಜ್ಞಾನವಿದೆ.ಅಜ್ಞಾನ ಬೆಳೆಯಲು ಕಾರಣ ಶಿಕ್ಷಣದ ದೋಷ.ಆ ದೋಷವನ್ನು ಕಂಡೂ ನಮಗೂ ಸರ್ಕಾರಕ್ಕೂ ಸಂಬಂಧ ವಿಲ್ಲವೆಂದು  ನಾನೇ ಬೇರೆ ನೀವೇ ಬೇರೆ ಎಂದು ಧರ್ಮ ಧರ್ಮ ದ ನಡುವೆ ರಾಜಕೀಯಬೆರೆಸಿ ಶಿಕ್ಷಣ ಸರಿಪಡಿಸದಿರೋದೇ ಅಧರ್ಮಕ್ಕೆ/ಕಾರಣ. ಅಂದರೆ ಪ್ರತಿಯೊಂದು ಸಮಸ್ಯೆಯ ಮೂಲವೇ ಅಜ್ಞಾನ. ಅರ್ಧ ಸತ್ಯ ಅಪಾಯಕಾರಿ. ಪೂರ್ಣ ಸತ್ಯ ಫಲಕಾರಿ. ಸತ್ಯದಲ್ಲಿ ಆತ್ಮಸಾಕ್ಷಿ ಯೇ ದೊಡ್ಡದು. ಹಾಗಾದರೆ ಈಗ ರಾಜಕೀಯದಲ್ಲಿ ಆತ್ಮಸಾಕ್ಷಿ ಇದೆಯೆ? ಪ್ರಜೆಗಳಲ್ಲಿ ಆತ್ಮಸಾಕ್ಷಿ ಜಾಗೃತವಾಗಿದೆಯೆ? ಇಷ್ಟು ವರ್ಷ ಉಚಿತವಾಗಿ  ಪಡೆದವರು ಶ್ರೀಮಂತ ರಾದರೆ? ಭಾರತದ ಬಡತನಕ್ಕೆ ಅಜ್ಞಾನ ಕಾರಣವಾದಾಗ  ಜ್ಞಾನದ ಶಿಕ್ಷಣ ಯಾರು ಉಚಿತವಾಗಿ ನೀಡಿರುವರು? ಉಚಿತ ನೀಡಿದಷ್ಟೂ ಸಾಲ ಖಚಿತ ಎನ್ನುವ ಹಾಗೆ ನಾವು ಸತ್ಯ ತಿಳಿಸಿದಷ್ಟೂ ಅದನ್ನು ತಡೆಯಲು ತಿಳಿದವರೆ‌ಮಧ್ಯೆ ನಿಂತರೆ ಬೇಲಿಯೇ ಎದ್ದು ಹೊಲಮೇಯ್ದಂತಾಗುತ್ತಿದೆ. ಒಟ್ಟಿನಲ್ಲಿ ಸತ್ಯಕ್ಕೆ ಸಾವಿಲ್ಲ.ರಾಜಕೀಯದಲ್ಲಿ ಸತ್ಯವೇ ಇಲ್ಲ. ಸತ್ಯ ಯಾವತ್ತೂ ಒಂದೇ  ಇದ್ದಂತೆ ದೇಶ ಒಂದೇ ಇದೆ. ಇದಕ್ಕೆ ಯಾವುದೇ ಅಪಾಯವಿಲ್ಲ ಕಾರಣ ಇದರೊಳಗಿರುವ. ಅಸಂಖ್ಯಾತ ಧರ್ಮ ಜಾತಿ ಪಕ್ಷಕ್ಕೆ  ಸತ್ಯ ಬೇಡವಾಗಿರುವಾಗ ಬೇಡೋರೇ ಹೆಚ್ಚು.ಮತಬೇಟೆ ಗೆ ಹಣಬಳಸಿದರೆ‌ಜ್ಞಾನ ಕುಸಿಯುತ್ತದೆ.
ಜ್ಞಾನ ಕುಸಿದರೆ ಅಸುರಿ ಶಕ್ತಿ ಜಾಗೃತವಾಗುತ್ತದೆ..ಅಸುರಿ ಶಕ್ತಿ ಬೆಳೆದಾಗಲೇ ಈ ರೀತಿಯ ದ್ವೇಷ ಸೃಷ್ಟಿ ಯಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಸಾಯೋದು.ಒಟ್ಟಿನಲ್ಲಿ ಶಾಂತಿ ಸಿಗೋದು ಅಸುರರು ಸತ್ತಾಗಲೇ.ಇದು ನಮ್ಮ ದುರ್ಗುಣವಾಗಿದೆಜೀವ ಇದ್ದಾಗಲೇ  ನಮ್ಮ ದುರ್ಗುಣ ಅರ್ಥ ವಾದರೆ  ಹಿಂದೆ ತಿರುಗಿ ಬರಬಹುದು. ಹಿಂದುಳಿದವರಿಂದ ಹಿಂದೂ ದೇಶವಾಗೋದಿಲ್ಲ.ಅವರೊಳಗಿರುವ‌ಜ್ಞಾನವನ್ನು ಬೆಳೆಸಿ ಸ್ವತಂತ್ರ ಜೀವನ ನಡೆಸೋದರಿಂದಲೇ ಹಿಂದೂ ದೇಶ ಆಗೋದು. ಇಲ್ಲಿ ಎಲ್ಲಾ ಹಿಂದೂಗಳೆ ಕಾರಣ ಭಾರತಮಾತೆ ಹಿಂದೂ ಮಾತೆ.ಅವಳೊಳಗೆ ಇರುವಾಗ ನಾವು ಬೇರೆಯೆ?

ದೇಶದ ಪರ ಯಾವ‌ ಪಕ್ಷವಿದೆ?

ಯಾವ  ಪಕ್ಷ   ದೇಶದ ಪರವಾಗಿದೆ?.
ಪ್ರಜಾಪ್ರಭುತ್ವ ದೇಶವೀಗ ಭ್ರಷ್ಟಾಚಾರದಸುಳಿಯಲ್ಲಿ ಸಿಲುಕಿ  ಹೊರಬರಲಾಗದ  ಪರಿಸ್ಥಿತಿ ಗೆ  ತಲುಪಿರೋದಕ್ಕೆ  
ಪಕ್ಷಗಳ  ಹಗ್ಗಜಗ್ಗಾಟ ಕಾರಣವೆ ಆದರೂ, ಈ ಪಕ್ಷಗಳನ್ನು
  ಬೆಳೆಸಿರೋ  ಪ್ರಜೆಗಳಜ್ಞಾನಕ್ಕೆ   ನಮ್ಮ  ಶಿಕ್ಷಣದೊಳಗಿನ  ರಾಜಕೀಯವೆಕಾರಣ. ಮೂಲ ಧರ್ಮ,ಕರ್ಮವನ್ನೇ  ಅರಿಯದೆಹೊರಗಿನ  ಧರ್ಮ ಕರ್ಮವನ್ನೇ  ಅನುಸರಿಸಿದ  ಜನತಮ್ಮಕಾಲ ಕೆಸರು  ಸ್ವಚ್ಚಗೊಳಿಸಿಕೊಳ್ಳದೆ, ಹೊರಗಿನ  ಕೆಸರಿಗೆ   ಕೈ ಹಾಕಿ ಬೆಳೆಸಿ, ಈಗಿದು ಪಕ್ಷಪಾತಕ್ಕೆ  ಹೆಸರಾಗಿದೆ. ಹಾಗಾದರೆ  ಪಕ್ಷಗಳು ಸೋತಿರೋದೆಲ್ಲಿ? ಗೆದ್ದವರು  ಯಾರು?
ದೊಡ್ಡ ಪಕ್ಷವಾಗೀ  ಬೆಳೆಸೋದಷ್ಟೆ ಮುಖ್ಯವಲ್ಲ.
ಜ್ಞಾನದಿಂದ ಸಹಕಾರ ನೀಡುವುದು ಮುಖ್ಯ.
ಸಂಸಾರದಲ್ಲಿ  ಹೇಗೆ  ಅತಿ ಸಂತಾನದಿಂದ ನರಕ
ಅನುಭವಿಸುವರೋ  ಹಾಗೆ  ದೇಶದ  ಅತಿಯಾದ
ಪಕ್ಷಗಳು,ಧರ್ಮ,ಪಂಗಡ,ಜಾತಿ, ಆಚರಣೆಗಳಿಂದ
ದೇಶದ ಮೂಲ ಧರ್ಮ, ಕರ್ಮಗಳು ಹಿಂದುಳಿದು
ರಾಜಕೀಯ ಬೆಳೆಯಿತೋ  ಹಾಗೆ, ಅತಿಯಾದ ತಮ್ಮ
ಸ್ವಾರ್ಥ ಚಿಂತನೆಯ  ರಾಜಕಾರಣ. ಈದೇಶದ ಮೂಲ ಶಿಕ್ಷಣಕ್ಕೆ  ಕೊಳ್ಳಿ ಇಟ್ಟು, ಇಂದಿನ ಸಾಮಾನ್ಯ
ಜನರಿಂದ  ಹಿಡಿದು  ಪ್ರತಿಷ್ಟಿತರವರೆಗೆ  ವಿದೇಶಿ ಆಂಗ್ಲ
ಮಾಧ್ಯಮ ಶಾಲೆ  ಬೇಕಾಗಿದೆ. ಇದಕ್ಕಾಗಿ ಸರ್ಕಾರ
ಆಂಗ್ಲ  ಮಾಧ್ಯಮ ಶಾಲೆಗಳನ್ನು   ತಾವೆ ಪ್ರಾರಂಭ
ಮಾಡಿ, ಮಾತೃಭಾಷೆ  ಹಿಂದುಳಿದಿದೆ. ರಾಜಕೀಯ
ನಡೆಸೋರಿಗೆ  ತನ್ನ  ಮಾತೆಗೆ  ಗೌರವ ತೋರಿಸಿದಂತೆ
ತನ್ನ ಭಾರತಮಾತೆ, ಕನ್ನಡಾಂಬೆ ಎನ್ನುವ. ಗೌರವ
ಇಲ್ಲವಾದರೆ  ಇವರು  ದೇಶವನ್ನಾಗಲಿ,ರಾಜ್ಯವನ್ನಾಗಲಿ  ಉಳಿಸಿ ಬೆಳೆಸಲು
ಸಾಧ್ಯವೆ?
ಎಲ್ಲಾ  ಪಕ್ಷಗಳು ಬಯಸೋದು  ಪಕ್ಷದ. ಅಧಿಕಾರ
ಇಲ್ಲಿ  ಒಂದೇ ದೇಶದವರಾಗಿ  ಈ ರೀತಿಯ  ಸ್ಪರ್ಧೆ
ನಡೆಸುವಾಗ. ಗೆದ್ದವರಿಗೆ  ಸಹಕಾರ ನೀಡುವುದು
ಮಾನವೀಯ ಗುಣ, ಆದರೆ, ‌ಇಲ್ಲಿಯ ಅಸಂಖ್ಯಾತ
ಪಕ್ಷಗಳೆಲ್ಲವೂ  ದೇಶವನ್ನು  ನಡೆಸಲು  ಭ್ರಷ್ಟಾಚಾರ
ನಡೆಸಿದರೆ  ಇದರ ಪರಿಣಾಮ  ಮುಂದಿನ ಜನತೆ
ಅನುಭವಿಸಬೇಕಷ್ಟೆ. ಶಿಕ್ಷಣದಲ್ಲಿಯ  ಅತಿಯಾದ
ಭ್ರಷ್ಟಾಚಾರ ತೊಲಗಿಸೋ ಬದಲು ತಾವೇ ಅದರಲ್ಲಿ
ಇಳಿದರೆ  ಇದು  ಯಾರಿಗೆ ಲಾಭ? ನಷ್ಟ ಯಾರಿಗೆ?
ವಿದೇಶಿಗಳಿಗೆ ಲಾಭ .ಸ್ವದೇಶಕ್ಕೆ  ನಷ್ಟ.
ಈ  ಧಾರ್ಮಿಕ ನಷ್ಟ ತುಂಬಲು  ಧರ್ಮದ ಶಿಕ್ಷಣ
ಬೇಕು. ಇದನ್ನು ಧಾರ್ಮಿಕ ವರ್ಗ ನೀಡಬೇಕು.ಇಂದು
ಇವರೇ  ರಾಜಕಾರಣಿಗಳ ಹಿಂದೆ  ಬಿದ್ದು, ತಮ್ಮ. ಮಠ
ಮಂದಿರ,ಸಂಘ ಸಂಸ್ಥೆ ಗೆ   ಭ್ರಷ್ಟರ ಹಣವನ್ನು ಬಳಸಿ
ದೇವರು,ಧರ್ಮದ ಹೆಸರಲ್ಲಿ  ಜನರ ಸಾಮಾನ್ಯಜ್ಞಾನವನ್ನೂ  ಹಾಳುಮಾಡಿ ರಾಜಕೀಯನಡೆಸೋರಿಗೆ  ದೇಶಭಕ್ತಿ ಇದೆಯೆ?
ಶ್ರೀ ರಾಮನ  ತತ್ವ. ಶ್ರೀ ರಾಮ ಭಕ್ತರಲ್ಲಿದ್ದರೆ ನಿಜವಾದ  ಶ್ರೀ ರಾಮರಾಜ್ಯಸ್ಥಾಪನೆ, ಹಾಗೆಯೇ ಶ್ರೀಕೃಷ್ಣ ನ  ಭಕ್ತರಲ್ಲಿಯೂ   ಧರ್ಮ ಸತ್ಯದ ಜ್ಞಾನವಿದ್ದುಧರ್ಮದ. ರಾಜಕೀಯ ನಡೆಸಲು  ದೇಶಭಕ್ತಿ ಬೆಳೆಸಿ,ನಡೆಯಬೇಕು. ಆದರೆ, ಇಲ್ಲಿ  ನಡೆಯುತ್ತಿರುವುದೆಬೇರೆ, ಎಲ್ಲರಿಗೂ  ಹೊರಗಿನ ಆಸ್ತಿ, ಅಂತಸ್ತು, ಅಧಿಕಾರ, ಹಣ,ಸ್ಥಾನ ಮಾನಸನ್ಮಾನ,ಒಡವೆ,ವಸ್ತ್ರ
ಮನೆ ಮಠದ್ದೇ ಚಿಂತೆ ಆದರೆ ಅವುಗಳನ್ನೆಲ್ಲ ತನ್ನಲ್ಲಿ
ಅಡಗಿಸಿಟ್ಟುಕೊಂಡು  ಭ್ರಷ್ಟಾಚಾರದಲ್ಲಿ  ಮುಳುಗಿರೋ ದೇಶದ. ಬಗ್ಗೆ  ಎಷ್ಟು  ಜ್ಞಾನಿಗಳು ಚಿಂತನೆ ನಡೆಸಿದ್ದಾರೆಂದು  ಅವರೆ ಆತ್ಮಾವಲೋಕನಮಾಡಿಕೊಂಡರೆ  ಉತ್ತಮ. ಮಾಧ್ಯಮದ  ಮೂಲಕತಾವು  ದೇವರೆಂಬಂತೆ  ಜನರನ್ನು 
 ಸೆಳೆಯುವವರಿಗೆದೇಶದಲ್ಲಿ  ನಮ್ಮೆದುರೆ ನಡೆಯೋ  ಭ್ರಷ್ಟಾಚಾರವನ್ನು ತಡೆಯಲಾಗುತ್ತಿಲ್ಲವೆಂದರೆ  ದೇವರು  ಎಲ್ಲಿರುವರು?
ಪುರಾಣದ. ರಾಜಕೀಯಕ್ಕೂ, ಪ್ರಜಾಪ್ರಭುತ್ವದ   ಕೆಟ್ಟ
ರಾಜಕೀಯಕ್ಕೂ  ಕಾರಣ ಅಜ್ಞಾನದ   ಅಧಿಕಾರದಲ್ಲಿ
ತಮ್ಮೊಳಗೆ  ಅಡಗಿದ್ದ. ಅತಿಯಾದ ಸ್ವಾರ್ಥ ಅಹಂಕಾರ. ಇದು  ಸಾಮಾನ್ಯಜನರಲ್ಲಿದೆಯೆ? ಇಲ್ಲಾ
ಪ್ರತಿಷ್ಟಿತರ  ರಾಜಕೀಯದಲ್ಲಿದೆಯೆ?
ದೇಶದ. ರಾಜಕೀಯ ‌ಪಕ್ಷಗಳಲ್ಲಿ  ಆಡಳಿತ ನಡೆಸೋ
ಮಹಾಪ್ರಜೆಗಳಿಗೆ  ಸ್ವದೇಶದ ಶಿಕ್ಷಣದ  ಮಹತ್ವ ತಿಳಿದಿಲ್ಲ. ಅಶಿಕ್ಷಿತ, ಅಜ್ಞಾನದ  ಇಂತಹವರಿಗೆ ದೇಶ
ಆಳೋ ಸ್ವಾತಂತ್ರ್ಯ ವಿದೆ. ಆಧರೆ, ದೇಶಭಕ್ತರಿಗಿಲ್ಲ.
ವಿದೇಶವನ್ನು  ಎತ್ತಿ ಹಿಡಿಯೋ  ಶ್ರೀಮಂತ ರಿಗಿದೆ.
ಪಕ್ಷಗಳನ್ನು  ಕಟ್ಟಲು ಸ್ವದೇಶದ  ಜನಸಹಾಯ,ಹಣ
ಸಹಾಯ ಪಡೆದು,ಅಧಿಕಾರ ಬಂದ ಮೇಲೆ ವಿದೇಶೀ
ರೀತಿ ನೀತಿ ಶಿಕ್ಷಣ,ವ್ಯವಹಾರ,ಬಂಡವಾಳ,ಸಾಲ
ಪಡೆದು  ದೇಶದ ಜನತೆಗೆ  ಅವರ  ಮೂಲ ಶಿಕ್ಷಣ
ನೀಡದೆ,  ಸ್ವಾವಲಂಬಿಗಳಾಗಿ ಎಂದರೆ ಅರ್ಥವೆಲ್ಲಿದೆ
ಎಲ್ಲವೂ   ಪ್ರಚಾರಕ್ಕಷ್ಟೇ  ಸೀಮಿತಮಾಡಿಕೊಂಡಿರೋ  ಮಾಧ್ಯಮಗಳೂ ಈಗ ಇಂತವರನ್ನೇ ಎತ್ತಿ ಏಣಿಗೇರಿಸಿ  ಮಧ್ಯದಲ್ಲಿ  ಹರಿದು ಬರುವ  ಸರ್ಕಾರದ  ಸಾಲ
 ಸೌಲಭ್ಯಗಳ ದುರುಪಯೋಗ ಪಡಿಸಿಕೊಂಡಿರೋ ಅನೇಕ ಮಧ್ಯವರ್ತಿಗಳಿಗೆ ಕೈ ಜೋಡಿಸಿ  ತಾವು ಮಾತ್ರ ನೆಮ್ಮದಿ ಜೀವನ. ನಡೆಸಲು  ಸಾಧ್ಯವಿಲ್ಲ. 
ಜೀವರಕ್ಷಣೆಗಾಗಿ  ಬಿಕ್ಷೆ ಬೇಡುವುದು ಅವರ ಧರ್ಮ
ಕರ್ಮ/.ಆದರೆ, ಇನ್ನೊಬ್ಬರ ಜೀವ ಹಿಂಡಿ  ಬಿಕ್ಷೆ ಬೇಡಿದರೆ
ಅಧರ್ಮ, ಭಗವಂತ. ಎಲ್ಲರಿಗೂ  ಬದುಕಲು ನೀಡಿ
ರೋ   ಜೀವಕ್ಕೆ  ಬೇಕಾದಷ್ಟು   ದುಡಿದು  ತಿನ್ನಲು
ಕೆಲಸಕೊಟ್ಟು  ಎಲ್ಲರನ್ನೂ  ಅವರವರ ಧರ್ಮದ
ಹಾದಿಯಲ್ಲಿ  ನಡೆಸಿದರೂ, ಮಧ್ಯವರ್ತಿಗಳು  ತಮ್ಮ
ಸ್ವಾರ್ಥ ಸಾಧನೆಗೆ  ಮಧ್ಯದಲ್ಲಿ  ನಿಂತು ರಾಜಕೀಯ
ನಡೆಸಿ, ದಾರಿ ತಪ್ಪಿಸಿತಮ್ಮ.ಅಡಿಯಾಳಾಗಿಸಿಕೊಂಡರೆ  ಇದೇ ಭ್ರಷ್ಟಾಚಾರ.ಇದು ಎಲ್ಲಾ  ಪಕ್ಷಗಳೂ  ಮುನ್ನಡೆಸಿದೆ.ಜಾತಿ ಯ ರಾಜಕೀಯದಲ್ಲಿ  ಧರ್ಮವೇ  ಮರೆಯಾಗಿದೆ.
ಧಾರ್ಮಿಕ  ಆಚರಣೆಗಳಲ್ಲಿಯೂ  ಇದೇ ಭ್ರಷ್ಟಾಚಾರ.
ಏನೇ ಇರಲಿ  ಇಲ್ಲಿ  ಎಲ್ಲರೂ  ಅವರವರ ಅನುಕೂಲಕ್ಕೆ ತಕ್ಕಂತೆ  ನಡೆಯೋದು  ಮಾನವನಿಗೆ ಸರಿ,ಆದರೆ,
 ಅಧರ್ಮದಲ್ಲಿ  ತನ್ನ ಅನುಕೂಲಕ್ಕೆ ತಕ್ಕಂತೆ  ದೇಶವನ್ನೇ  ವಿದೇಶ ಮಾಡೋದು  ಸರಿಯಲ್ಲ . ಬದುಕಿದ್ದಾಗಲೇ  ಆತ್ಮಹತ್ಯೆ ಮಾಡಿಕೊಂಡಂತೆ  ಎನ್ನುವುದು ಮಹಾತ್ಮರ 
 ನಡೆ ನುಡಿಯಹಿಂದಿನ   ಜ್ಞಾನ. ಇಂದಿನ ವಿಜ್ಞಾನ
 ಇದಕ್ಕೆ ವಿರುದ್ದ. ಇದಕ್ಕೆ  ರಾಜಕೀಯ ಸಹಕಾರ ಬೇರೆ  ಪ್ರಜೆಗಳಿಗೆ ತಕ್ಕಂತೆ  ನಡೆಯೋದು  ಪಕ್ಷಗಳ ಧರ್ಮವಾದರೂದೇಶದ ಧರ್ಮಕ್ಕೆ  ವಿರುದ್ದ ಪ್ರಜೆಗಳೇ 
 ನಡೆದರೆ  ಇದು  ಪ್ರಜೆಗಳ ಅಜ್ಞಾನವಷ್ಟೆ. ಅಜ್ಞಾನ ಶಿಕ್ಷಣದಲ್ಲಿಯೇ ಅಡಗಿದೆ.

ಜನಸಂಖ್ಯೆ ಸ್ಪೋಟಕ್ಕೆ ಕಾರಣವೇನು?

ಜನಸಂಖ್ಯೆಯ ಲೆಕ್ಕಾಚಾರದ ಪ್ರಕಾರ ಹೆಚ್ಚು ಜನರಿಗೆ ಹೆಚ್ಚು ಹಣದ ಅಗತ್ಯವಿದೆ. ಭಾರತದಲ್ಲಿ ಜನಸಂಖ್ಯಾ ಸ್ಪೋಟವಾಗುತ್ತಿದೆ ಎಂದಾಗ ಹಣದಿಂದ ಇದನ್ನು ಸರಿಪಡಿಸಬಹುದೆ ಎನ್ನುವ ಪ್ರಶ್ನೆಗೆ ಉತ್ತರ ಭೌತವಿಜ್ಞಾನ ಸಾಧ್ಯವೆಂದು  ಒಪ್ಪಿಕೊಂಡರೆ  ಅಧ್ಯಾತ್ಮ ವಿಜ್ಞಾನ ಒಪ್ಪದಿರಬಹುದು.ಇಲ್ಲಿ ಜನರೊಳಗಿರುವ ಜ್ಞಾನದ‌ಮೇಲೇ‌ದೇಶದ ಭವಿಷ್ಯವಿರುವುದರಿಂದ ಜ್ಞಾನವಿದ್ದವರಿಗೆ ಅಲ್ಪ ಹಣವೂ ಬಂಡವಾಳವಾಗಿರುತ್ತದೆ. ಅಜ್ಞಾನದಲ್ಲಿದ್ದವರಿಗೆ‌ಕೋಟಿ ಹಣವಿದ್ದರೂ ನೋಟಷ್ಟೆ ಕಾಣೋದು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಸುಜ್ಞಾನವಿದ್ದರೆ  ಪ್ರಗತಿಸಾಧ್ಯವಿದೆ.
ಅನಾವಶ್ಯಕ ವಾಗಿ ಚುನಾವಣೆಗಳಲ್ಲಿ ಸುರಿಯುವ ಹಣವೂ ದೇಶದ್ದೇ  ಹಾಗೆ ಅನಾವಶ್ಯಕ ಕಾರ್ಯಕ್ರಮ, ಸಮಾರಂಭ, ಜನರಿಗೆ ಹಣಹಂಚಿಕೊಂಡು ಸೇರಿಸುವ  ಸಮಾವೇಷಗಳೇ  ಜನರನ್ನು ದಾರಿತಪ್ಪಿಸಿ ನಡೆಸಿದಾಗ ಜನಸಂಖ್ಯೆ ಮಿತಿಮೀರಿ ಹೋಗುತ್ತದೆ.
ಹಿಂದಿನ ಕಾಲದಲ್ಲಿದ್ದ ಸ್ವಾವಲಂಬನೆ ಗೂ ಇಂದಿನ ಸ್ವಾವಲಂಬನೆ ಗೂ ವ್ಯತ್ಯಾಸವಿದೆ. ಇಂದು ತನ್ನ ವಿದ್ಯೆಗೆ ತಕ್ಕಂತೆ ಕೆಲಸ ಮಾಡಿ ತನ್ನ ಜೀವನ ನಡೆಸೋದೇ ಸ್ವಾವಲಂಬನೆ ಎನ್ನುವ ಮಂದಿಗೆ ಎಷ್ಟು ಹಣಸಂಪಾದಿಸಿದರೂ  ತೃಪ್ತಿ ಯಿಲ್ಲ ಕಾರಣ ಅವರಲ್ಲಿ ಸಂಸಾರ ಬೇರೆ ಸಮಾಜ ಬೇರೆ ಎನ್ನುವ ಮನಸ್ಥಿತಿ ಇದ್ದು ಸರ್ಕಾರ ಎಲ್ಲರನ್ನೂ ನೋಡಿಕೊಳ್ಳಬೇಕೆಂಬ ಅಜ್ಞಾನವಿರುತ್ತದೆ. ಆದರೆ ಹಿಂದಿನ ಕಾಲದಲ್ಲಿ ತಮ್ಮ ಜ್ಞಾನಕ್ಕೆ ತಕ್ಕಂತೆ ಧರ್ಮ ಕರ್ಮ ವನರಿತು ಸ್ವತಂತ್ರ ವಾಗಿದ್ದು  ಒಗ್ಗಟ್ಟಿನಿಂದ  ಸಂಸಾರದೊಳಗಿದ್ದು ಸಮಾಜ ಸೇವೆ ಯಲ್ಲಿ ತೊಡಗಿಸಿಕೊಂಡವರಿಗೆ ಹಣವಿಲ್ಲದಿದ್ದರೂ  ಸುಜ್ಞಾನವಿದ್ದ ಕಾರಣ ಸ್ವಾವಲಂಬನೆ ಯ ಸುಖವಿತ್ತು.ಕಷ್ಟಪಟ್ಟು ದುಡಿದು ದೊಡ್ಡ ಸಂಸಾರವನ್ನು ನಡೆಸಿದ್ದ ಅವರನ್ನು  ಯಾವುದೇ ಹೊರಗಿನ  ಸರ್ಕಾರ ನಡೆಸಿರಲಿಲ್ಲ ಅಂದರೆ ಅಂದಿನ ರಾಜಪ್ರಭುತ್ವದ  ಶಿಕ್ಷಣವು  ಆಂತರಿಕ ಜ್ಞಾನಕ್ಕೆ  ಪೂರಕವಾಗಿದ್ದು ಅವರವರ ಧರ್ಮ ಕರ್ಮ ದ ಮಧ್ಯೆ ಯಾರೂ ಹೊರಗಿನವರ ಪ್ರವೇಶವಿರದ ಕಾರಣ ಒಗ್ಗಟ್ಟು ಹೆಚ್ಚಾಗಿದ್ದು ಗುರುಹಿರಿಯರು  ಅಧ್ಯಾತ್ಮಿಕ  ಮಾರ್ಗದಲ್ಲಿ  ಕಿರಿಯರನ್ನು ಸ್ವತಂತ್ರ ವಾಗಿದ್ದು ನಡೆಸಲಾಗಿತ್ತು. ಹೀಗಾಗಿ ಬಡತನ ಹಣದಲ್ಲಿ ಕಂಡರೂ ಜ್ಞಾನದ ಶ್ರೀಮಂತಿಕೆ  ಜನರಲ್ಲಿ ಸ್ವಾವಲಂಬನೆ ಕಡೆಗೆ  ನಡೆಸಿತ್ತು. ಈಗಿದು ಅಜ್ಞಾನದೆಡೆಗೆ ನಡೆಸಿ  ಮನೆಮನೆಯೊಳಗೆ ಜನರಿಲ್ಲ ಹೊರಗೆ ಜನಸಂಖ್ಯೆ ಮಿತಿಮೀರಿದೆ. ಮನಸ್ಸು ಹೊರನಡೆದಷ್ಟೂ ಹಿಡಿತ
ಕಳೆದುಕೊಂಡು  ಮನುಷ್ಯತ್ವ ಕಳೆದುಕೊಳ್ಳುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದರೂ ಸತ್ವ ಸತ್ಯ ತತ್ವ ಇಲ್ಲದ  ಮಾನವನ ಮನಸ್ಸು  ಬೇರೆ ಬೇರೆಯಾಗಿರುವಾಗ  ಏಕತ್ವ ಏಕತೆ,ಐಕ್ಯತೆ,ಸಮಾನತೆಯ ಕೊರತೆ ಹೆಚ್ಚಾಗುತ್ತದೆ.ಇದನ್ನು ದುರ್ಭಳಕೆ ಮಾಡಿಕೊಂಡು ಆಳುವವರೂ ಬೆಳೆಯುವರು.
ಪ್ರಜಾಪ್ರಭುತ್ವದಲ್ಲಿ ಆಳು ಯಾರು ಅರಸರು ಯಾರು? 
ಇಷ್ಟು ದೊಡ್ಡ ಜನಸಂಖ್ಯೆಯುಳ್ಳ ದೇಶವನ್ನು ಆಳುವುದೇ ದೊಡ್ಡ ಸಾಧನೆ. ಆದರೆ  ಜನರೇ ಆಳುವವರನ್ನು ದಾರಿತಪ್ಪಿಸಿ ನಡೆಸಿದರೆ  ಇದರರ್ಥ ಅಜ್ಞಾನ ಮಿತಿಮೀರಿದೆ. ಅಜ್ಞಾನದ ಜನರನ್ನು ಆಳೋದಕ್ಕೆ ಹಣ ಬೇಕಿದೆ.ಹಣ ಭ್ರಷ್ಟಾಚಾರದಿಂದ ಗಳಿಸಿರುವಾಗ ಜನರೂ ಭ್ರಷ್ಟ ರ ವಶದಲ್ಲಿದ್ದಾರೆ. ಇದರ ಫಲ ಮಕ್ಕಳು ಮಹಿಳೆಯರ ಮೇಲೂ ಸಾಲದ ಹೊರೆ ಏರಿದೆ.
ತೀರಿಸಲು ಮನೆಯಿಂದ ಮಹಿಳೆ ಮಕ್ಕಳು ಹೊರಬಂದು ದುಡಿಯುವಂತಾಗಿದೆ.ಮನೆ ಖಾಲಿಯಾದಾಗ  ದೇವರಿರುವರೆ?
ಮನಸ್ಸಿನಲ್ಲಿ ದೇವರನ್ನು ನೆನಪಿಸಿಕೊಂಡು ಸತ್ಕರ್ಮದಿಂದ ಸ್ವಧರ್ಮದಿಂದ ಸುಜ್ಞಾನದಿಂದ ಸ್ವತಂತ್ರ ಜೀವನ ನಡೆಸಿದ ಹಿಂದಿನ ಮಹಾತ್ಮರಿಗೂ‌ಇಂದಿನವರಿಗೂ ಅಂತರ ಬೆಳೆದು ಆ ಅಂತರದಲ್ಲಿ ಮಧ್ಯವರ್ತಿಗಳು ಸ್ವತಂತ್ರ ವಾಗಿ ಏನೂ ಕೆಲಸ ಮಾಡದೆಯೇ ಜನರನ್ನು ಆಳುತ್ತಿರುವುದೆ ಭ್ರಷ್ಟ ರಾಜಕೀಯ.
ಪರಮಾತ್ಮನ ಕಾಣೋದಕ್ಕೆ  ಎಲ್ಲಿದ್ದರೇನು? ಹಣ ಬೇಕೆ ಜ್ಞಾನ ಬೇಕೆ?
ಜ್ಞಾನವಿದ್ದವರಿಗೆ ಹಣವಿಲ್ಲ.ಹಣವಿದ್ದವರಿಗೆ ಸುಜ್ಞಾನದ
ಕೊರತೆಯಿದೆ. ದೇಶದ ಸಾಲ ತೀರಿಸದೆ ವಿದೇಶಿ ಸಾಲಕ್ಕೆ ಬೇಡಿಕೆಯಿಟ್ಟರೆ ಏನರ್ಥ? ದೇಶದ ತುಂಬಾ  ಶ್ರೀಮಂತರು ಇದ್ದರೂ  ಸಾಲ ತೀರಿಸಲು  ತಯಾರಿಲ್ಲ. ಬಡವರನ್ನು ಆಳಲು ಹಣದ ಬಳಕೆಯಾಗಿದೆ ಎಂದರೆ ಧರ್ಮ ಯಾವುದು ಎಲ್ಲಿದೆ?
ಇಷ್ಟಕ್ಕೂ  ದೇಶದೊಳಗೆ ಇದ್ದ ಮೇಲೆ ಎಲ್ಲಾ ದೇಶದ ಸಾಲ.ಆ ಸಾಲ ತೀರಿಸಲು ಸ್ವಧರ್ಮ ಸುಜ್ಞಾನ ದಿಂದ ಸ್ವಾವಲಂಬನೆ ಕಡೆಗೆ ನಡೆಯಲೇಬೇಕಿದೆ. ಇದನ್ನು ತಿಳಿಸುವ ಸುಶಿಕ್ಷಣ ಅಗತ್ಯವಿದೆ. ನಮ್ಮ ಶಿಕ್ಷಣವೇ  ಇದಕ್ಕೆ ಬಂಡವಾಳವಾಗಿತ್ತು.
ಮಕ್ಕಳಿಗೆ ಕೊಡುವ  ಶಿಕ್ಷಣವೇ ಪೋಷಕರ ಭವಿಷ್ಯಕ್ಕೆ ಆಧಾರ. ನಮ್ಮನ್ನು ನಾವರಿತು ನಡೆಯೋ ಜನಸಂಖ್ಯೆಯಿಂದ ಶಾಂತಿಯಿರುತ್ತದೆ. ಪರಕೀಯರನ್ನು ಅರಿತು ನಡೆದಷ್ಟೂ ಅಶಾಂತಿಯ ಜೀವನ.ಯಾವುದೂ ಅತಿಯಾಗಬಾರದಷ್ಟೆ.
ಎಷ್ಟೋ ಯುದ್ದಗಳಾಗಿವೆ ಸಾವು ನೋವಾಗಿದೆ ಆದರೆ ಜನಸಂಖ್ಯೆ ಕಡಿಮೆಯಾಗಿಲ್ಲವೆಂದರೆ ಜೀವಾತ್ಮನಿಗೆ ಮುಕ್ತಿ ಸಿಗದೆ‌ಪುನರ್ಜನ್ಮ ಹೆಚ್ಚಾಗಿದೆ. ಜನ್ಮಕ್ಕೆ ಕಾರಣ ಹಿಂದಿನ ಜನ್ಮದ ಋಣ ಅಥವಾ ಸಾಲವಾಗಿದೆ.ಇದನ್ನು ತೀರಿಸಲು ಸತ್ಯಜ್ಞಾನದ ಶಿಕ್ಷಣವಿರಬೇಕು.ಸತ್ಯವೇ ಇಲ್ಲದ ಮಿಥ್ಯ ಶಿಕ್ಷಣದಿಂದ ಹಣ ಸಿಗಬಹುದು  ಹಣವನ್ನು ಸದ್ಬಳಕೆ ಮಾಡಿಕೊಂಡು ಬದುಕುವ ಕಲೆಯ ಅಗತ್ಯವಿದೆ. ಇದೇ ಭಾರತದ ಸಮಸ್ಯೆಗೆ ಕಾರಣವಾಗುತ್ತಿದೆ.ಬದಲಾವಣೆ ಜನರೊಳಗೆ ಆದರೆ  ಸಮಸ್ಯೆಗೆ ಪರಿಹಾರ ಒಳಗೇ ಸಿಗುತ್ತದೆ.
ರಾಜಕೀಯವಿದ್ದರೆ  ಕಷ್ಟ.ಯಾರು ಯಾರನ್ನೂ ಆಳಲಾಗದು.
ಇಂದಿನ ರಾಜ ಮುಂದಿನ ಸೇಕನಾಗಬಹುದು.ಇಂದಿನ ಬಿಕ್ಷು ಮುಂದಿನ‌  ಬಿಕ್ಷುಕನಾಗಲಾರ.ಬಿಕ್ಷುಗಳಿಂದ ಯೋಗಿಗಳಿಂದ ಆರೋಗ್ಯವಾಗಿದ್ದ ದೇಶವನ್ನು  ಭೋಗದೆಡೆಗೆ ನಡೆಸುತ್ತಾ ಬಿಕ್ಷುಕರ ದೇಶವಾಗಿಸಿರೋದೇ ಅಜ್ಞಾನ. ಪರಿಹಾರ ಜ್ಞಾನದ ಶಿಕ್ಷಣವಾಗಿತ್ತು. ಮಕ್ಕಳ ಪ್ರತಿಭೆ,ಜ್ಞಾನ ಆಸಕ್ತಿಯನ್ನು ಗುರುತಿಸಿ ಪೂರಕವಾದ ಶಿಕ್ಷಣ ನೀಡುವುದೇ ಪೋಷಕರ ಧರ್ಮ.ಹಾಗೆ ದೇಶದ ಪೋಷಣೆಯೂ  ಪ್ರಜೆಗಳ ಸುಜ್ಞಾನದಲ್ಲಿದೆ.  ರಾಜಕಾರಣಿಗಳು ಜ್ಞಾನಿಗಳನ್ನು ಸಾಕುವಂತಾಗಬಾರದು .ಜ್ಞಾನಕ್ಕೆ ಅಧಿಕಾರ ಹಣಕ್ಕಿಂತ ಮುಖ್ಯ  ಗುಣವಾಗಿರುತ್ತದೆ. ಸದ್ಗುಣಸಂಪನ್ನರಿಗೆ  ರಾಜಕೀಯ  ಹಿಡಿಸೋದಿಲ್ಲ.ಹೀಗಾಗಿ ರಾಜಕೀಯ  ಇಂದು ದಾರಿತಪ್ಪಿ ನಡೆದಿದೆ. ಎಲ್ಲಾ ನೋಡುತ್ತಿರುವ ಪರಮಾತ್ಮನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಾಗ ಭ್ರಷ್ಟಚಾರ  ಹೇಗೆ ಬೆಳೆಯಿತು? ಬೇಲಿಯೇ ಎದ್ದು ಹೊಲಮೇಯ್ದರೆ   ಸಂಸಾರದಲ್ಲಿ ಸತ್ಯ ಸತ್ವ ತತ್ವವಿರದು.
ಪುರಾಣ ಭವಿಷ್ಯದ ನಡುವರಿರುವ ವರ್ತಮಾನ ದ ಸ್ಥಿತಿ ಯನರಿಯುವುದೇ ಸ್ಥಿತಪ್ರಜ್ಞಾವಂತರ ಲಕ್ಷಣ. ನಮ್ಮ ಈ ಸ್ಥಿತಿಗೆ ‌ನಮ್ಮ ಸಹಕಾರವೇ ಕಾರಣ.

ಭೂಮಿಯಲ್ಲಿ ದಂಡ ಎಲ್ಲಾ ತೆರಲೇಬೇಕು

ಚುನಾವಣೆಯ ನೀತಿ ಸಂಹಿತೆಯಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದೆನ್ನುವ ಕಾನೂನಿರಬೇಕಿತ್ತು. ಈ ಸಮಯದಲ್ಲಿ ಸಂಸಾರ ಸಮೇತ ರಸ್ತೆಗಿಳಿದು ಹಣಮಾಡಿಕೊಳ್ಳುವುದು ಸಾಮಾನ್ಯ ವಾಗಿದೆ.ಕಾಲೇಜ್ ಶಾಲೆ ಬಿಟ್ಟು  ಮಕ್ಕಳು ರಾಜಕೀಯಕ್ಕೆ ಇಳಿದಾಗ ಅವರ ಮನಸ್ಸು ದಾರಿತಪ್ಪಿ ನಡೆಯೋದಷ್ಟೆ. ಚುನಾವಣೆಯ ನಂತರ ಯಾರ ಹಿಂದೆ ನಡೆದಿದ್ದರೋ ಅವರೇ ಅವರ ಜೀವನದ ನಾಯಕರಂತೆ  ನಾಯಿಯ ಹಾಗೆ ಹಿಂಬಾಲಿಸುವಾಗ ಅವರ ಸ್ವಂತ ಬುದ್ದಿವಂತಿಕೆಯೇ  ಇರೋದಿಲ್ಲ. ತಾತ್ಕಾಲಿಕ ಸುಖ ನೀಡುವ ಹಣಕ್ಕಾಗಿ ಯುವಜನತೆ ಮಕ್ಕಳನ್ನು ದುರ್ಭಳಕೆ ಮಾಡಿಕೊಂಡು ಆಳೋದೆ ಭ್ರಷ್ಟಾಚಾರ.ಇದನ್ನು ಪೋಷಕರಾದವರು  ಸಹಕರಿಸುತ್ತಿರುವುದೇ ಅಜ್ಞಾನ. ದೇಶದ ಹಣವನ್ನು ನೀರಿನಂತೆ ಸುರಿದು  ಜನರನ್ನು ದಾರಿತಪ್ಪಿಸಿ ಗೆದ್ದರೇನು ಸೋತರೇನು  ಎಲ್ಲಾ ಭ್ರಷ್ಟಾಚಾರ ವೆ ಆಗಿರುತ್ತದೆ. ಚುನಾವಣೆ ಸ್ವಂತ ಬಲದಿಂದ ಹಣದಿಂದ ನಡೆಸಬೇಕೆ ಹೊರತು ಭ್ರಷ್ಟಾಚಾರ ದಿಂದಲ್ಲ. ಇದನ್ನು ವಿರೋಧಿಸುವವರಿಲ್ಲದೆ ಎಲ್ಲಾ ಪಕ್ಷಗಳೂ ತಮ್ಮ ಪಾಡಿಗೆ ತಾವು ಸ್ವಚ್ಚವಾಗಿದ್ದೇವೆಂಬ ಭ್ರಮೆಯಲ್ಲಿ ನಡೆದಿವೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಅಮ್ಮ‌ಎಲ್ಲಿ ಕೇಳಿದರೆ ಹಣದಲ್ಲಿ ಎಂದರೆ ಸರಿಯೆ? ಜ್ಞಾನದಲ್ಲಿ ಅಮ್ಮನಿರಬೇಕು.ಭಾರತ ಮಾತೆ ಜ್ಞಾನದಲ್ಲಿ ಕಾಣಬೇಕಿತ್ತು.ಭಾರತೀಯ ಶಿಕ್ಷಣದಲ್ಲಿಯೇ ಅಮ್ಮನಿಗೆ ಗೌರವವಿಲ್ಲದೆ ಹಣದ ಲೆಕ್ಕಾಚಾರದಲ್ಲಿ ಅಮ್ಮನ ಹಿಂದೆ ನಿಂತರೆ  ಅಮ್ಮ ಹೊರಗೆ ದುಡಿದು ಸಾಲ ತಂದು ಮಕ್ಕಳನ್ನು ಸಾಕೋದು  ಧರ್ಮ ವೆ? ಭೂಮಿಯ ಋಣ ತೀರಿಸಲು ಬಂದ ಜೀವಾತ್ಮನಿಗೆ  ಇನ್ನಷ್ಟು ಋಣ ಭಾರ ಏರಿಸಿರೋದೆ ರಾಜಕೀಯ ವ್ಯವಸ್ಥೆ. ಈ ಅವಸ್ಥೆ ಯಲ್ಲಿ ಮಕ್ಕಳನ್ನು ಸೇರಿಸಿಕೊಂಡರೆ ಜನಸಂಖ್ಯೆ ಹೆಚ್ಚಬಹುದು  ಜ್ಞಾನ ಬೆಳೆಯದು. ನಿಮ್ಮ ನಿಮ್ಮ ಮಕ್ಕಳ ಮಹಿಳೆಯರ ಯೋಗಕ್ಷೇಮಕ್ಕೆ‌ನೀವೇ ಜವಾಬ್ದಾರರು. ದಾರಿತಪ್ಪಿಸಿ ಆಳಿದರೆ ಅದೇ ಮುಂದೆ  ಮಾರಿಯಾಗಿ ಕಾಡಬಹುದು. 
ನಿಮ್ಮ‌ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದಿದ್ದರು ಮಹಾತ್ಮರು. ಯಾರ ಸಂತಾನ ಯಾರೋ ಸಾಕಲು ಸಾಧ್ಯವೆ? ಹಣದ ಹೊಳೆ ಹರಿಯುತ್ತಿರುವಾಗ ಜ್ಞಾನದ ಕೊಳೆ ಕಾಣೋದಿಲ್ಲ ಎಂದಂತಿದೆ ...

ಕಳೆದ ಚುನಾವಣೆಗಳಲ್ಲಿ  ಸಾರ್ವಜನಿಕರಾಗಿದ್ದು ಕಂಡ ಸತ್ಯವನ್ನು ತಿಳಿಸಲಾಗಿದೆ. ಮಕ್ಕಳಿಗೆ ರಾಜಯೋಗದ ಶಿಕ್ಷಣ ನೀಡಿದಾಗ ಆತ್ಮನಿರ್ಭರ ಭಾರತವಾದರೆ ರಾಜಕೀಯದ ಶಿಕ್ಷಣ ನೀಡಿದಷ್ಟೂ ಆತ್ಮದುರ್ಭಲ ಭಾರತವಾಗುತ್ತದೆ. ನಮ್ಮ ಶಾಲಾ ಕಾಲೇಜ್ ಗಳಲ್ಲಿ ತಿಳಿಸಲಾಗುತ್ತಿರುವ ವಿಷಯಗಳಲ್ಲಿ ಹೆಚ್ಚಾಗಿ ಭೌತವಿಜ್ಞಾನವಿದೆ.ಅಧ್ಯಾತ್ಮ ವಿಜ್ಞಾನ‌ಮಕ್ಕಳ ಒಳಗೇ ಅಡಗಿದ್ದರೂ ಗುರುತಿಸದ ಪೋಷಕರು‌ಶಿಕ್ಷಕರು‌ಮಕ್ಕಳು ಬೇಗ ಬೆಳೆದು ದೊಡ್ಡವರಾದರೆ ಸಾಕೆನ್ನುವ ಬಲದಲ್ಲಿ ಮುಗ್ದ ಮನಸ್ಸಿಗೆ ಪ್ರಭುದ್ದ ವಿಷಯಗಳನ್ನು ಬಲವಂತವಾಗಿ ತುರುಕುವ ಜೊತೆಗೆ ಹಣ ಸಂಪಾ್ನೆಯೇ ಜೀವನದ ಗುರಿ ಎನ್ನುವ ಮಟ್ಟಿಗೆ ಸಮಾಜದ ಬೆಳವಣಿಗೆಯಾಗಿದೆ. ಮಕ್ಕಳ ಪ್ರತಿಭೆ  ತೋರುಗಾಣಿಕೆಯಾಗುತ್ತಾ‌ಮನರಂಜನೆಗೆ ಬಳಸಲಾಗಿ  ಮಕ್ಕಳ ಮನಸ್ಸಿನಲ್ಲಿ ಅಹಂಕಾರ ಸ್ವಾರ್ಥ ಬೆಳೆಸಿದರೆ ಅದೇ ಮುಂದಿನ ಭವಿಷ್ಯಕ್ಕೆ ಮಾರಕವಾದಾಗ ಪೋಷಕರಿಗೆ  ಸರಿಪಡಿಸಲಾಗದ ಪರಿಸ್ಥಿತಿ ಯಿರುತ್ತದೆ.ಇದನ್ನು ಸರ್ಕಾರ ಹಣದಿಂದ ಸರಿಪಡಿಸಲು ಸಾಧ್ಯವೆ? 
ಒಂದು ದಿನಕ್ಕೆ 500 1,000 ಮಕ್ಕಳಿಗೆ ಸಿಗುವುದೆನ್ನುವ‌ಕಾರಣಕ್ಕಾಗಿ ಕಾಲೇಜ್ ಮಕ್ಕಳನ್ನು ಸೇರಿಸಿಕೊಂಡು ಕಾಲಹರಣ ಮಾಡುತ್ತಾ ರಸ್ತೆಯಲ್ಲಿ ತಿರುಗಿದರೆ  ಸ್ವಾವಲಂಬನೆ ಆಗುವುದೆ? ಇಲ್ಲಿ ತಪ್ಪು ಯಾರದ್ದು ಎನ್ನುವ ಪ್ರಶ್ನೆಯಿಲ್ಲ.ಇದೊಂದು ಸಾಮಾನ್ಯವಾಗಿ ಎಲ್ಲೆಡೆಯೂ ‌ ಚುನಾವಣೆಯ ಪ್ರಚಾರದಲ್ಲಿ ಎಲ್ಲಾ ಪಕ್ಷಗಳು ನಡೆಸಿವೆ ಎಂದರೆ ಜನಸಹಕಾರವಿದೆ ಇದಕ್ಕೆ ಕಾನೂನಿನಲ್ಲಿ ಯಾವುದೇ ಅಡೆತಡೆಯಿಲ್ಲ. ಮಾಧ್ಯಮಗಳಂತೂ ಈ ಸಮಯದಲ್ಲಿ ಸಾಕಷ್ಟು ಬೆಳೆದಿರುತ್ತವೆ.ಹಾಗಾದರೆ ಹಣಕ್ಕಾಗಿ ಚುನಾವಣೆಯೆ? ಇದರಿಂದ ಗೆದ್ದವರು ಮತ್ತೆ ಹಣಗಳಿಸಲು ಬಳಸೋ ತಂತ್ರ ಭ್ರಷ್ಟಾಚಾರ. ಅದೇ ಎಲ್ಲರಿಗೂ ಹಂಚಿಕೊಂಡರೆ ದೇಶ ಭ್ರಷ್ಟ ರ ವಶ. ಎಷ್ಟು ಹಣಗಳಿಸಿದರೂ ಸದ್ಬಳಕೆ ಮಾಡಿಕೊಳ್ಳುವ‌ ಜ್ಞಾನವಿಲ್ಲವಾದರೆ‌ ನೀರಿನಲ್ಲಿ ಹೋಮಮಾಡಿದಂತೆಯೇ.ಎಷ್ಟೋ ವರ್ಷಗಳಿಂದಲೂ ದೇವರ ಪೂಜೆ ಪುನಸ್ಕಾರ ಯಾಗ ಯಜ್ಞ ಧಾರ್ಮಿಕ ಕಾರ್ಯ ನಡೆಸುತ್ತಿದ್ದರೂ ಯಾಕಿಷ್ಟು  ಅಧರ್ಮ ಅನ್ಯಾಯ ಅಸತ್ಯ? ಇದಕ್ಕೆ ಕಾರಣ ಅಜ್ಞಾನವಷ್ಟೆ.ಸತ್ಯವನರಿಯದ ಅಮಾಯಕ ಜನರನ್ನು ಆಳುವ ಭ್ರಷ್ಟ ರಾಜಕೀಯತೆ ಮಕ್ಕಳವರೆಗೂ ಹರಡಿದಂತೆಲ್ಲಾ ಆತ್ಮದುರ್ಭಲ ವಾಗುತ್ತಾ ಆತ್ಮಹತ್ಯೆ ಹೆಚ್ಚಾಗುತ್ತದೆ.ಆತ್ಮಹತ್ಯೆ ಎಂದರೆ  ಜೀವನದಲ್ಲಿ ಸತ್ಯದ ವಿರುದ್ದದ ನಡೆ ನುಡಿಯಾಗಿದೆ. ಇದಕ್ಕೆ ಪರಮಾತ್ಮ‌ಕಾರಣವಲ್ಲ ಜೀವಾತ್ಮನೇ ಕಾರಣ.ಅಂದರೆ ಮಾನವನೇ ಕಾರಣ ಮಹಾತ್ಮರಲ್ಲವೆನ್ನಬಹುದು.

ಮಕ್ಕಳನ್ನು ಚುನಾವಣೆ ಪ್ರಚಾರಕ್ಕೆ ಬಳಸಬಾರದಿತ್ತು

ಚುನಾವಣೆಯ ನೀತಿ ಸಂಹಿತೆಯಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದೆನ್ನುವ ಕಾನೂನಿರಬೇಕಿತ್ತು. ಈ ಸಮಯದಲ್ಲಿ ಸಂಸಾರ ಸಮೇತ ರಸ್ತೆಗಿಳಿದು ಹಣಮಾಡಿಕೊಳ್ಳುವುದು ಸಾಮಾನ್ಯ ವಾಗಿದೆ.ಕಾಲೇಜ್ ಶಾಲೆ ಬಿಟ್ಟು  ಮಕ್ಕಳು ರಾಜಕೀಯಕ್ಕೆ ಇಳಿದಾಗ ಅವರ ಮನಸ್ಸು ದಾರಿತಪ್ಪಿ ನಡೆಯೋದಷ್ಟೆ. ಚುನಾವಣೆಯ ನಂತರ ಯಾರ ಹಿಂದೆ ನಡೆದಿದ್ದರೋ ಅವರೇ ಅವರ ಜೀವನದ ನಾಯಕರಂತೆ  ನಾಯಿಯ ಹಾಗೆ ಹಿಂಬಾಲಿಸುವಾಗ ಅವರ ಸ್ವಂತ ಬುದ್ದಿವಂತಿಕೆಯೇ  ಇರೋದಿಲ್ಲ. ತಾತ್ಕಾಲಿಕ ಸುಖ ನೀಡುವ ಹಣಕ್ಕಾಗಿ ಯುವಜನತೆ ಮಕ್ಕಳನ್ನು ದುರ್ಭಳಕೆ ಮಾಡಿಕೊಂಡು ಆಳೋದೆ ಭ್ರಷ್ಟಾಚಾರ.ಇದನ್ನು ಪೋಷಕರಾದವರು  ಸಹಕರಿಸುತ್ತಿರುವುದೇ ಅಜ್ಞಾನ. ದೇಶದ ಹಣವನ್ನು ನೀರಿನಂತೆ ಸುರಿದು  ಜನರನ್ನು ದಾರಿತಪ್ಪಿಸಿ ಗೆದ್ದರೇನು ಸೋತರೇನು  ಎಲ್ಲಾ ಭ್ರಷ್ಟಾಚಾರ ವೆ ಆಗಿರುತ್ತದೆ. ಚುನಾವಣೆ ಸ್ವಂತ ಬಲದಿಂದ ಹಣದಿಂದ ನಡೆಸಬೇಕೆ ಹೊರತು ಭ್ರಷ್ಟಾಚಾರ ದಿಂದಲ್ಲ. ಇದನ್ನು ವಿರೋಧಿಸುವವರಿಲ್ಲದೆ ಎಲ್ಲಾ ಪಕ್ಷಗಳೂ ತಮ್ಮ ಪಾಡಿಗೆ ತಾವು ಸ್ವಚ್ಚವಾಗಿದ್ದೇವೆಂಬ ಭ್ರಮೆಯಲ್ಲಿ ನಡೆದಿವೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಅಮ್ಮ‌ಎಲ್ಲಿ ಕೇಳಿದರೆ ಹಣದಲ್ಲಿ ಎಂದರೆ ಸರಿಯೆ? ಜ್ಞಾನದಲ್ಲಿ ಅಮ್ಮನಿರಬೇಕು.ಭಾರತ ಮಾತೆ ಜ್ಞಾನದಲ್ಲಿ ಕಾಣಬೇಕಿತ್ತು.ಭಾರತೀಯ ಶಿಕ್ಷಣದಲ್ಲಿಯೇ ಅಮ್ಮನಿಗೆ ಗೌರವವಿಲ್ಲದೆ ಹಣದ ಲೆಕ್ಕಾಚಾರದಲ್ಲಿ ಅಮ್ಮನ ಹಿಂದೆ ನಿಂತರೆ  ಅಮ್ಮ ಹೊರಗೆ ದುಡಿದು ಸಾಲ ತಂದು ಮಕ್ಕಳನ್ನು ಸಾಕೋದು  ಧರ್ಮ ವೆ? ಭೂಮಿಯ ಋಣ ತೀರಿಸಲು ಬಂದ ಜೀವಾತ್ಮನಿಗೆ  ಇನ್ನಷ್ಟು ಋಣ ಭಾರ ಏರಿಸಿರೋದೆ ರಾಜಕೀಯ ವ್ಯವಸ್ಥೆ. ಈ ಅವಸ್ಥೆ ಯಲ್ಲಿ ಮಕ್ಕಳನ್ನು ಸೇರಿಸಿಕೊಂಡರೆ ಜನಸಂಖ್ಯೆ ಹೆಚ್ಚಬಹುದು  ಜ್ಞಾನ ಬೆಳೆಯದು. ನಿಮ್ಮ ನಿಮ್ಮ ಮಕ್ಕಳ ಮಹಿಳೆಯರ ಯೋಗಕ್ಷೇಮಕ್ಕೆ‌ನೀವೇ ಜವಾಬ್ದಾರರು. ದಾರಿತಪ್ಪಿಸಿ ಆಳಿದರೆ ಅದೇ ಮುಂದೆ  ಮಾರಿಯಾಗಿ ಕಾಡಬಹುದು. 
ನಿಮ್ಮ‌ನಿಮ್ಮ ಮನವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದಿದ್ದರು ಮಹಾತ್ಮರು. ಯಾರ ಸಂತಾನ ಯಾರೋ ಸಾಕಲು ಸಾಧ್ಯವೆ? ಹಣದ ಹೊಳೆ ಹರಿಯುತ್ತಿರುವಾಗ ಜ್ಞಾನದ ಕೊಳೆ ಕಾಣೋದಿಲ್ಲ ಎಂದಂತಿದೆ ...

ಕಳೆದ ಚುನಾವಣೆಗಳಲ್ಲಿ  ಸಾರ್ವಜನಿಕರಾಗಿದ್ದು ಕಂಡ ಸತ್ಯವನ್ನು ತಿಳಿಸಲಾಗಿದೆ. ಮಕ್ಕಳಿಗೆ ರಾಜಯೋಗದ ಶಿಕ್ಷಣ ನೀಡಿದಾಗ ಆತ್ಮನಿರ್ಭರ ಭಾರತವಾದರೆ ರಾಜಕೀಯದ ಶಿಕ್ಷಣ ನೀಡಿದಷ್ಟೂ ಆತ್ಮದುರ್ಭಲ ಭಾರತವಾಗುತ್ತದೆ. ನಮ್ಮ ಶಾಲಾ ಕಾಲೇಜ್ ಗಳಲ್ಲಿ ತಿಳಿಸಲಾಗುತ್ತಿರುವ ವಿಷಯಗಳಲ್ಲಿ ಹೆಚ್ಚಾಗಿ ಭೌತವಿಜ್ಞಾನವಿದೆ.ಅಧ್ಯಾತ್ಮ ವಿಜ್ಞಾನ‌ಮಕ್ಕಳ ಒಳಗೇ ಅಡಗಿದ್ದರೂ ಗುರುತಿಸದ ಪೋಷಕರು‌ಶಿಕ್ಷಕರು‌ಮಕ್ಕಳು ಬೇಗ ಬೆಳೆದು ದೊಡ್ಡವರಾದರೆ ಸಾಕೆನ್ನುವ ಬಲದಲ್ಲಿ ಮುಗ್ದ ಮನಸ್ಸಿಗೆ ಪ್ರಭುದ್ದ ವಿಷಯಗಳನ್ನು ಬಲವಂತವಾಗಿ ತುರುಕುವ ಜೊತೆಗೆ ಹಣ ಸಂಪಾ್ನೆಯೇ ಜೀವನದ ಗುರಿ ಎನ್ನುವ ಮಟ್ಟಿಗೆ ಸಮಾಜದ ಬೆಳವಣಿಗೆಯಾಗಿದೆ. ಮಕ್ಕಳ ಪ್ರತಿಭೆ  ತೋರುಗಾಣಿಕೆಯಾಗುತ್ತಾ‌ಮನರಂಜನೆಗೆ ಬಳಸಲಾಗಿ  ಮಕ್ಕಳ ಮನಸ್ಸಿನಲ್ಲಿ ಅಹಂಕಾರ ಸ್ವಾರ್ಥ ಬೆಳೆಸಿದರೆ ಅದೇ ಮುಂದಿನ ಭವಿಷ್ಯಕ್ಕೆ ಮಾರಕವಾದಾಗ ಪೋಷಕರಿಗೆ  ಸರಿಪಡಿಸಲಾಗದ ಪರಿಸ್ಥಿತಿ ಯಿರುತ್ತದೆ.ಇದನ್ನು ಸರ್ಕಾರ ಹಣದಿಂದ ಸರಿಪಡಿಸಲು ಸಾಧ್ಯವೆ? 
ಒಂದು ದಿನಕ್ಕೆ 500 1,000 ಮಕ್ಕಳಿಗೆ ಸಿಗುವುದೆನ್ನುವ‌ಕಾರಣಕ್ಕಾಗಿ ಕಾಲೇಜ್ ಮಕ್ಕಳನ್ನು ಸೇರಿಸಿಕೊಂಡು ಕಾಲಹರಣ ಮಾಡುತ್ತಾ ರಸ್ತೆಯಲ್ಲಿ ತಿರುಗಿದರೆ  ಸ್ವಾವಲಂಬನೆ ಆಗುವುದೆ? ಇಲ್ಲಿ ತಪ್ಪು ಯಾರದ್ದು ಎನ್ನುವ ಪ್ರಶ್ನೆಯಿಲ್ಲ.ಇದೊಂದು ಸಾಮಾನ್ಯವಾಗಿ ಎಲ್ಲೆಡೆಯೂ ‌ ಚುನಾವಣೆಯ ಪ್ರಚಾರದಲ್ಲಿ ಎಲ್ಲಾ ಪಕ್ಷಗಳು ನಡೆಸಿವೆ ಎಂದರೆ ಜನಸಹಕಾರವಿದೆ ಇದಕ್ಕೆ ಕಾನೂನಿನಲ್ಲಿ ಯಾವುದೇ ಅಡೆತಡೆಯಿಲ್ಲ. ಮಾಧ್ಯಮಗಳಂತೂ ಈ ಸಮಯದಲ್ಲಿ ಸಾಕಷ್ಟು ಬೆಳೆದಿರುತ್ತವೆ.ಹಾಗಾದರೆ ಹಣಕ್ಕಾಗಿ ಚುನಾವಣೆಯೆ? ಇದರಿಂದ ಗೆದ್ದವರು ಮತ್ತೆ ಹಣಗಳಿಸಲು ಬಳಸೋ ತಂತ್ರ ಭ್ರಷ್ಟಾಚಾರ. ಅದೇ ಎಲ್ಲರಿಗೂ ಹಂಚಿಕೊಂಡರೆ ದೇಶ ಭ್ರಷ್ಟ ರ ವಶ. ಎಷ್ಟು ಹಣಗಳಿಸಿದರೂ ಸದ್ಬಳಕೆ ಮಾಡಿಕೊಳ್ಳುವ‌ ಜ್ಞಾನವಿಲ್ಲವಾದರೆ‌ ನೀರಿನಲ್ಲಿ ಹೋಮಮಾಡಿದಂತೆಯೇ.ಎಷ್ಟೋ ವರ್ಷಗಳಿಂದಲೂ ದೇವರ ಪೂಜೆ ಪುನಸ್ಕಾರ ಯಾಗ ಯಜ್ಞ ಧಾರ್ಮಿಕ ಕಾರ್ಯ ನಡೆಸುತ್ತಿದ್ದರೂ ಯಾಕಿಷ್ಟು  ಅಧರ್ಮ ಅನ್ಯಾಯ ಅಸತ್ಯ? ಇದಕ್ಕೆ ಕಾರಣ ಅಜ್ಞಾನವಷ್ಟೆ.ಸತ್ಯವನರಿಯದ ಅಮಾಯಕ ಜನರನ್ನು ಆಳುವ ಭ್ರಷ್ಟ ರಾಜಕೀಯತೆ ಮಕ್ಕಳವರೆಗೂ ಹರಡಿದಂತೆಲ್ಲಾ ಆತ್ಮದುರ್ಭಲ ವಾಗುತ್ತಾ ಆತ್ಮಹತ್ಯೆ ಹೆಚ್ಚಾಗುತ್ತದೆ.ಆತ್ಮಹತ್ಯೆ ಎಂದರೆ  ಜೀವನದಲ್ಲಿ ಸತ್ಯದ ವಿರುದ್ದದ ನಡೆ ನುಡಿಯಾಗಿದೆ. ಇದಕ್ಕೆ ಪರಮಾತ್ಮ‌ಕಾರಣವಲ್ಲ ಜೀವಾತ್ಮನೇ ಕಾರಣ.ಅಂದರೆ ಮಾನವನೇ ಕಾರಣ ಮಹಾತ್ಮರಲ್ಲವೆನ್ನಬಹುದು.