ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Tuesday, October 22, 2024

ಆತ್ಮಸಾಕ್ಷಿಗಿಂತ ದೊಡ್ಡದೇನಿದೆ?

ಸಣ್ಣ ವಯಸ್ಸಿನಿಂದಲೇ ಮನಸ್ಸಿನ ಒಂದು ಮೂಲೆಯಲ್ಲಿ  ಏಳುತ್ತಿದ್ದ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೂ  ಸಿಗದಕಾರಣಪ್ರಶ್ನೆಯೇ ಸರಿಯಿಲ್ಲವೇನೋ ಎನ್ನುವ ಮಟ್ಟಕ್ಕೆ ಬಂದು ಎಲ್ಲರಂತೆ ಬದುಕಲು ಪ್ರಯತ್ನ ಪಟ್ಟರೂ ಎಲ್ಲೋ ಮನಸ್ಸಿಗೆ ಸಮಾಧಾನವಿಲ್ಲ.ಸಂತೋಷ ತಾತ್ಕಾಲಿಕ ಸುಖ ಮರೀಚಿಕೆಯಾಗೇ ಉಳಿದಿತ್ತು. ಒಳಗಿನ ಪ್ರಶ್ನೆ ನಿರಂತರವಾಗಿ  ಎಚ್ಚರವಾಗುವಂತೆ ಮಾಡಿದ್ದರೂ  ಉತ್ತರ ಕ್ಕಾಗಿ  ಎಷ್ಟೋ ಜನರಲ್ಲಿ  ಹುಡುಕಿದರೂ ಸಿಗದೆ  ಮುಂದೆ ನಡೆದಂತೆಲ್ಲಾ ಜಗತ್ತು ನಡೆದಿರೋದೆ ಪ್ರಶ್ನೆಗಳ ಸರಮಾಲೆಯಲ್ಲಿ ಎಂದಾಯಿತು.ಇದಕ್ಕೆ ಸೂಕ್ತವಾದ ಉತ್ತರ ಯಾರಲ್ಲೂ ಇಲ್ಲ ಆದರೂ ಒಬ್ಬೊಬ್ಬರು ಒಂದೊಂದು ನೀಡುತ್ತಿದ್ದರು. ಅದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಹುಡುಕಿದರೆ ಸರಿಕಾಣದೆ  ಆತ್ಮಾವಲೋಕನ ಮಾಡಿಕೊಂಡು ನಡೆಯುವುದೇ ಸರಿ ಎಂದು ಸತ್ಯದ ಬೆನ್ನೆತ್ತಿದಾಗ  ಉತ್ತರ ಸಿಕ್ಕಿದ್ದು ಒಳಗೆ ಹೊರತು  ಹೊರಗಲ್ಲ.ಆದರೆ ಹೊರಗಿನವರ  ಜೊತೆಗಿದ್ದೇ ಒಳಗಿನ  ಪ್ರಶ್ನೆ ಗೆ  ಉತ್ತರ ಹುಡುಕುವುದು  ಸಂಸಾರಕ್ಕೆ ಅನಿವಾರ್ಯ ವಾಗುತ್ತದೆ .
 ಬಾಲ್ಯ. ಯೌವನ ಗೃಹಸ್ಥ ವಾನಪ್ರಸ್ಥ  ಸಂನ್ಯಾಸ..ಆಶ್ರಮ ದಲ್ಲಿ ಶ್ರಮ ಇದ್ದೇ ಇದೆ..ಆದರೆ ಅದರಲ್ಲಿ ನಮ್ಮ ಶ್ರಮ ಇದೆಯೋ ಅಥವಾ ಬೇರೆಯವರ ಶ್ರಮ ವೋ ಎನ್ನುವ ಪ್ರಶ್ನೆ ಹಾಕಿಕೊಂಡರೆ ನಮ್ಮ ಶ್ರಮ ಅಲ್ಪ  ಪರರ ಶ್ರಮ ಹೆಚ್ಚು.
ಆ ಹೆಚ್ಚಾದ ಶ್ರಮದಿಂದ  ದೂರವಿದ್ದು ನಮ್ಮ ಶ್ರಮ ಹೆಚ್ಚಿಸಿಕೊಳ್ಳಲು  ಆತ್ಮಬಲ ಆತ್ಮವಿಶ್ವಾಸ ಅಗತ್ಯವಿದೆ.
ಈಗಲೂ ನಮ್ಮ ದೇಶ ನಡೆದಿರೋದೆ ಶ್ರಮಿಕರಿಂದ .ಜನರು ಅಜ್ಞಾನದಲ್ಲಿದ್ದು ಶ್ರಮವಹಿಸಿ ದುಡಿದು ಸಂಪಾದಿಸಿದ ಹಣ ಸದ್ಬಳಕೆ  ಆಗದೆ ದುರ್ಭಳಕೆ ಆದರೆ  ಎಲ್ಲಾ ವ್ಯರ್ಥ.
ವೈಜ್ಞಾನಿಕ ಚಿಂತನೆಗಳಿಗೆ ಹೆಚ್ಚಿನ ಬೆಲೆ ವೈಚಾರಿಕತೆಗೆ ಬೆಲೆ ಕಡಿಮೆ. ಕಾರಣ ವೈಜ್ಞಾನಿಕ ಸುಖದ ಮುಂದೆ ವೈಚಾರಿಕತೆಯ ಕಷ್ಟ  ಯಾರೂ ಇಷ್ಟಪಡರು.ಆತ್ಮಜ್ಞಾನಕ್ಕೆ  ಅಧ್ಯಾತ್ಮಿಕ ವಿಜ್ಞಾನವೇ ಮೂಲಾಧಾರವಾದಾಗ ಇದನ್ನು ಬಿಟ್ಟು ಹೊರ ಬಂದಷ್ಟೂ ಕಷ್ಟ ನಷ್ಟ ತಪ್ಪಿದ್ದಲ್ಲ. ಅದನ್ನು  ತಡೆಯಲು ಅಸತ್ಯ ಅನ್ಯಾಯದ ಭ್ರಷ್ಟಾಚಾರ ಬೆಳೆದಿದೆ ಇದು ಧಾರ್ಮಿಕ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸದ್ದು ಮಾಡಿದರೆ ಮುಗಿಯಿತು ಕಥೆ. ಒಟ್ಟಿನಲ್ಲಿ  ಅಧ್ಯಾತ್ಮವಿಜ್ಞಾನಕ್ಕೆ ಸತ್ಯ ಅಗತ್ಯವಿದೆ. ಸತ್ಯವೇ ದೇವರೆನ್ನುವವರೂ ಸತ್ಯ ತಿಳಿಸಬಾರದೆಂದರೆ ದೇವರು ಕಾಣೋದಿಲ್ಲ. ಹೀಗಾಗಿ ಶಿವಶರಣರು  ದಾಸ ಸಂತರು ಮಹಾತ್ಮರುಗಳು  ಆಳವಾಗಿದ್ದ ಸತ್ಯದೆಡೆಗೆ ಹೊರಟು ಜಗತ್ತಿನ ಸತ್ಯಾಸತ್ಯತೆಯನ್ನು ಅನುಭವದ  ವಚನ ಸಾಹಿತ್ಯದಮೂಲಕ ಹೊರಹಾಕಿದರು
ಸಾಹಿತ್ಯ ಕ್ಷೇತ್ರ  ಹಣ ಮಾಡುವ ಕ್ಷೇತ್ರವಲ್ಲ.ಸತ್ಯವನ್ನು ಬಿಚ್ಚಿಡುವ ಕ್ಷೇತ್ರ..ಅದರಲ್ಲಿ ಕೇವಲ ಹೊರಗಿನ ಸತ್ಯವೇ ತುಂಬಿದರೆ ಒಳಗಿನ ಸತ್ಯಹಿಂದುಳಿದು  ಸಮಾಜ ದಾರಿತಪ್ಪಿ ನಡೆಯುತ್ತದೆ.
ಸಾಹಿತ್ಯ ಸಾಮಾಜಿಕ‌ಹಿತಕ್ಕಾಗಿ ಸತ್ಯವನ್ನು ಹೊರಹಾಕುವ ಒಂದು ಪ್ರಾಕಾರವಾಗಿದ್ದರೂ ಇತ್ತೀಚೆಗೆ ಇದರ ದುರ್ಭಳಕೆ ಹೆಚ್ಚಾಗಿರೋದನ್ನು ಕಾಣುತ್ತಿದ್ದೇವೆಂದರೆ ಇದಕ್ಕೆ ಕಾರಣ ಜನರ ಸಹಕಾರವಷ್ಟೆ.
ಯಾರೋ ಹೆಸರು‌ಮಾಡಿದವರು ಒಂದು ಲೇಖನಬರೆದರೆ ಹಣಕೊಟ್ಟು ಖರೀದಿಸುವ ಜನ ತಮ್ಮ ಒಳಗೇ ಇರುವ ಸತ್ಯದಜೊತೆಗೆ ನಡೆಯುತ್ತಿದ್ದೇವೆಯೆ ಅಥವಾ ಯಾರದ್ದೋ ಸತ್ಯ ನಂಬಿ ಬದುಕಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಂಡರೆ ನಮ್ಮ ಒಳಗಿರುವ ಪ್ರಶ್ನೆಗೆ ಉತ್ತರ ಒಳಗೇ ಸಿಗುತ್ತದೆ.ಆದರೆ ನಾವು  ಶುದ್ದವಾಗೋದಕ್ಕೆ‌ಕಷ್ಟಪಡಲೇಬೇಕು. ಜನ್ಮಜನ್ಮಗಳ ಪಾಪ ಪುಣ್ಯಗಳ ಸಂಗ್ರಹ ಒಳಗಿರುವಾಗ ಹೊರಗಿನ ಸಂಗ್ರಹಗಳನ್ನು ನೋಡಿಕೊಂಡು ಕೇಳಿಕೊಂಡು ಕಾಲಕಳೆಯಲು ಹಣಬೇಕು.ಹಣಸಂಪಾದನೆಗೆ ಜ್ಞಾನ ಬೇಕು.
ಜ್ಞಾನದಲ್ಲಿ ಸತ್ಯವಿರಬೇಕು.ಆತ್ಮಸಾಕ್ಷಿಗಿಂತದೊಡ್ಡಸತ್ಯವಿದೆಯೆ?
ಇದರಲ್ಲಿ ಮೂರು  ಪಂಗಡವಿದೆ ದೈವ ಸಾಕ್ಷಿ, ಮನುಷ್ಯ ಸಾಕ್ಷಿ ಅಸುರ ಸಾಕ್ಷಿ.
ನ್ಯಾಯಾಲಯಗಳಿಗೇನೂ ಕೊರತೆಯಿಲ್ಲ.ನ್ಯಾಯಾಧೀಶರೂ ಬೆಳೆಯುವರು ಆದರೆ  ನ್ಯಾಯ ಬೆಳೆಯದಿರೋದಕ್ಕೆ ಕಾರಣ ಮನುಷ್ಯ ಸಾಕ್ಷಿ ಅಸುರರಿಗೆ ವರವಾಗಿದೆ.ಹಣಕೊಟ್ಟರೆ ಜೀವ ಬರುವುದಿಲ್ಲವೆಂದುತಿಳಿದೂ ಹಣಕ್ಕಾಗಿ ಜೀವಹತ್ಯೆ ಮಾಡಿದರೆ  ಇದರ ಫಲ ಕಠೋರವೆ. 
ಕಲಿಗಾಲದಲ್ಲಿ ಹೇಗಿರುವುದೆಂದು ಶ್ರೀ ಕೃಷ್ಣ ಪರಮಾತ್ಮಮೊದಲೇ  ತಿಳಿಸಿದಂಂತೆ ಬೇಲಿಯೇಎದ್ದುಹೊಲಮೇಯ್ದರೆ ಕಾಯೋರಿಲ್ಲ.ಆದರಿದು ತಾತ್ಕಾಲಿಕ. ಎಷ್ಟೋ ಯುಗಯುಗದಿಂದಲೂ ಭೂಮಿಯಿದೆ. ಭೂಮಿಯ ಋಣ ತೀರಿಸೋರು ಇಂದು ಕಡಿಮೆಯಾಗಿ ಜನಸಂಖ್ಯೆ ಬೆಳೆದಿದೆಯಷ್ಟೆ.
ಜನ್ಮವೇ ಇಲ್ಲದೆ ಜೀವನವಿಲ್ಲ. ಜೀವನದಲ್ಲಿಯೇ ಜೀವಿಗಳ ವನ ವಿದೆ. ಆ ವನವನ್ನೇ ನಾಶ ಮಾಡಿ ಬದುಕುವುದು ಅಧರ್ಮ. ಅಧರ್ಮಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣದ ವಿಷಯ. ವಿಷಯದಲ್ಲೇ  ಸತ್ಯವಿಲ್ಲದಿದ್ದರೆ ದೈವತ್ವ ಇರುವುದೆ?
ಆಕಾಶದೆತ್ತರ ಹಾರುವ ಮಾನವ ಬುದ್ದಿವಂತಿಕೆಗೂ ಆಕಾಶದಲ್ಲೇ ನೆಲೆಸಿರುವ ಗ್ರಹನಕ್ಷತ್ರ ದೇವತೆಗಳಿಗೂ  ಎಷ್ಟೋ ಅಂತರವಿದೆಯಲ್ಲವೆ?
ಹಾಗಾದರೆ ನಾನ್ಯಾರು? ನಾವ್ಯಾರು? ಪ್ರಶ್ನೆಗೆ ಉತ್ತರ ಹೊರಗೆ ಸಿಗುವುದೆ? ಒಳಗೋ? 
ಎಲ್ಲರಲ್ಲಿಯೂ ಅಡಗಿರುವ‌ಪರಾಶಕ್ತಿ ಪರಮಾತ್ಮನ ಅರ್ಥ ಮಾಡಿಕೊಳ್ಳಲು  ಇಂದಿನ ಶಿಕ್ಷಣದಿಂದ ಸಾಧ್ಯವೆ?
ಇಲ್ಲವಾದರೆ ಶಿಕ್ಷಣವೇ ಎಲ್ಲದ್ದಕ್ಕೂ ಕಾರಣವೆಂದಾಯಿತು. ಇದನ್ನು ಎಷ್ಟು ಧಾರ್ಮಿಕ ವರ್ಗ ಸಂಘಗಳು  ಬೆಳೆಸಲಾಗಿದೆ?
ಮಕ್ಕಳ ನ್ನು ದೇವರೆಂದರು. ದೇವರಿಗೆ ಕೊಡುವ ಶಿಕ್ಷಣದ ವಿಚಾರ ಹೇಗಿದೆ?
ಇದರ ಬಗ್ಗೆ ತಿಳಿದ‌ಮೇಲೆ ಮಾಡಿದ ಪ್ರಯತ್ನ ದಲ್ಲಿ  ಸಾಕಷ್ಟು ಅನುಭವವಾದರೂ  ಯಾವ ಉಪಯೋಗವಾಗಿಲ್ಲ.ಕಾರಣ ಸತ್ಯ ತಿಳಿಸಿದರೆ ಸತ್ಯ ಹೇಳಬಾರದೆನ್ನುವವರೆ ಹೆಚ್ಚು. ಅಧಿಕಾರ ಹಣವಿದ್ದರೆ ಸತ್ಯ ಹೇಳಬಹುದು ಎಂದರೆಅಷ್ಟು ಹಣಗಳಿಸಲು ಸತ್ಯದಿಂದ ಕಷ್ಟ. ಹೀಗಾಗಿ ಇಂದಿಗೂ ಭಾರತ ವಿಶ್ವ ಗುರು  ಆಗಿದ್ದರೂ ವಿಶ್ವೇಶ್ವರ ನ ಜೊತೆಗಿರುವ ಜಗದೀಶ್ವರಿಯನ್ನು  ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಡೆದಿದೆ. ಇಲ್ಲಿ ಸ್ತ್ರೀ ಶಕ್ತಿಯನ್ನು ಹೊರಗೆಳೆದು ದುಡಿಸಿಕೊಂಡು  ರಾಜಕೀಯ‌ ನಡೆಸೋದರಿಂದ ಒಳಗಿರುವ ಪ್ರಶ್ನೆಗೆ ಉತ್ತರ ಸಿಗೋದಿಲ್ಲ.
ಅದ್ವೈತ ದೊಳಗೇ ಅಡಗಿರುವ ದೈತ ಕಣ್ಣಿಗೆ ಕಂಡರೂ ಎರಡೂ ಬೇರೆ ಎಂದು ರಾಜಕೀಯ ನಡೆಸಬಹುದು.ಇದಕ್ಕೆ ಸಹಕಾರವೂ ಇರುತ್ತದೆ.ಆದರೆ ಎರಡರ ಸಮಾನತೆಯನ್ನು ಎತ್ತಿ ಹಿಡಿಯುವ ಸತ್ಯಕ್ಕೆ ಬೆಲೆಯಿರದು.ಎಲ್ಲಿ ಸತ್ಯವಿರದೋ ಅಲ್ಲಿ ದೇವರಿರೋದಿಲ್ಲ.ಎಲ್ಲಿ ದೇವರಿರುವುದಿಲ್ಲವೋ ಅಲ್ಲಿ ಶಾಂತಿಯಿರದು ಅಸುರ ಶಕ್ತಿ ಜಾಗೃತವಾಗಿರುತ್ತದೆ.ಹೀಗಾಗಿ ಮನೆ ಮನೆಯೊಳಗೆ ರಾಮಾಯಣ ಮಹಾಭಾರತ ಪ್ರಚಾರ ನಡೆದರೂ ಯುದ್ದ ಕಲಹ ಜಗಳ ದ್ವಂದ್ವ ಭಿನ್ನಾಭಿಪ್ರಾಯ ದ ರಾಜಕೀಯವಿದೆ.. ರಾಜಯೋಗ ಯೋಗದಿಂದಷ್ಟೆ ಸಾಧ್ಯ.
ಬದಲಾವಣೆ ಒಳಗೇ ಆಗಬೇಕು. ನಮ್ಮ ಕರ್ಮ ಧರ್ಮದ ಪ್ರಕಾರ ಇರಬೇಕು.ಹಾಗಾದರೆ ಶಿಕ್ಷಣ ಧರ್ಮದಲ್ಲಿದೆಯೆ? ದೇಶದ ಪ್ರಜೆಗಳಿಗೆ ವಿದೇಶದ ಅನ್ಯರ ಶಿಕ್ಷಣ  ಮೂಲವಾದರೆ ಜ್ಞಾನವೂ  ಹೊರಗಿನವರದ್ದೇ ಆಗಿರುತ್ತದೆ ಇದು ಸಹಜ. 
ಎಲ್ಲಾ ಆಗಿಹೋಗಿದೆ ಆಗಬೇಕಿತ್ತು ತಡೆಯಲಿಲ್ಲ ತಡೆಯಲಾಗಲಿಲ್ಲ ಎಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಆದರೆ ನಮ್ಮ ತಲೆಯಲ್ಲಿ ಬುದ್ದಿಯಿದೆ ಜ್ಞಾನವಿದೆ ಅದನ್ನು ನಮ್ಮ ಆತ್ಮಕ್ಕೆ ತೃಪ್ತಿ ಶಾಂತಿ  ನೀಡುವತ್ತ ಬಳಸಿದರೆ ಆತ್ಮನಿರ್ಭರ ಭಾರತ.ಇಲ್ಲವಾದರೆ ಆತ್ಮದುರ್ಭಲವೆ.
 ಜ್ಞಾನ ಬಂದಾಗಿನಿಂದ ಒಂದೇ ವಿಷಯದ ಬಗ್ಗೆ ಚಿಂತನೆ ನಡೆಸಿ ಪರೀಕ್ಷಿಸಿದರೂ ಸತ್ಯ ಒಂದೇ .ಅದು ಒಳಗೇ ಇದೆ ಅದನ್ನು ಬಿಟ್ಟು ಎಲ್ಲಾ ಅಸತ್ಯವೂ ಹೊರಗೆ ಹೋರಾಟ ಹಾರಾಟ ಮಾರಾಟದೆಡೆಗೆ  ಹೊರಟಾಗ  ಇದು ಅಸುರ ಶಕ್ತಿ ಬೆಳೆದು ನಿಲ್ಲುತ್ತದೆ.

ಎಲ್ಲಿಯವರೆಗೆ ಸತ್ಯ ಧರ್ಮ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಅಧ್ವೈತವಾಗದು. ದೇಶದ ಪ್ರಶ್ನೆ ಬಂದಾಗ ದೇಶ ಒಂದೇ ಇದ್ದರೂ ಇದರೊಳಗಿನ ಪ್ರಜೆಗಳಲ್ಲಿ ಒಗ್ಗಟ್ಟಿನ ಸಮಸ್ಯೆ ಯಿದೆ.ಇದಕ್ಕೆ ಮಧ್ಯವರ್ತಿಗಳ ಅರ್ಧ ಸತ್ಯದ ಅಜ್ಞಾನದ ರಾಜಕೀಯವೇ ಕಾರಣ. ಸ್ವಾರ್ಥ ಪೂರ್ಣ ವಾದ ಜೀವನದಲ್ಲಿ  ಪರಮಾತ್ಮನಿರುವನೆ? ಪರಮಸತ್ಯವಿರುವುದೆ?
ಭಗವದ್ಗೀತೆ ಓದಿ ಎಷ್ಟೋ ಮಹಾತ್ಮರು ಯೋಗಿಗಳಾದರು
ಈಗ ಎಷ್ಟೋ ಜನರು ಭೋಗದೆಡೆಗೆ ನಡೆದಿರುವರುಎಂದರೆ ಹಣಕ್ಕಾಗಿ ಗೀತೆಯಲ್ಲ. ಜ್ಞಾನಕ್ಕಾಗಿ ಗೀತೆ. 
ಅನುಭವರಹಿತ ಪ್ರಚಾರದಿಂದ ಅಧರ್ಮ ವೂ ಬೆಳೆಯುತ್ತದೆ.
ಮಠ ಮಂದಿರ ಮಸೀದಿ ಚರ್ಚ್... ಧಾರ್ಮಿಕ ಸಂಸ್ಥೆಗಳು ಒಂದೇ ಭೂಮಿಯಲ್ಲಿ ಒಂದೇ ದೇಶದೊಳಗೆ ಬೆಳೆದಿದ್ದರೂ ಒಳಗಿರುವ ದೈವೀಕ ಗುಣಜ್ಞಾನವನ್ನು ಬೆಳೆಸದಿದ್ದರೆ  ನೀರಿನಲ್ಲಿ ಹೋಮಮಾಡಿದಂತಾಗುತ್ತದೆ.
ಭೂಮಿ ಆಕಾಶ ಪಾತಾಳದ ಮಧ್ಯವರ್ತಿ. ಮಧ್ಯವರ್ತಿಗೆ ಸರಿಯಾದ ಜ್ಞಾನವಿದ್ದರೆ ಸರಿ. ಸ್ತ್ರೀ ಶಕ್ತಿಯನ್ನು  ಹೇಗೆ ಬಳಸಬೇಕು ಬೆಳೆಸಬೇಕೆಂಬ ಜ್ಞಾನವಿಲ್ಲದವರೆ ಭೂಮಿ ಆಳಿದರೆ  ಆಳೋರೂ ಆಳೇ ಆಗುವರು. ಕರ್ಮಕ್ಕೆ ತಕ್ಕಂತೆ ಜನ್ಮ. ಒಟ್ಟಿನಲ್ಲಿ ಭೂ ವಶದಲ್ಲಿರುವ ಮಾನವನಿಗೆ  ಮಾಯೆ ಆವರಿಸಿ ಮಾಯಾಮೃಗಗಳು  ಬೆಳೆದಿರೋದಕ್ಕೆ ಕಾರಣ ಅಜ್ಞಾನ.ಅಜ್ಞಾನವೆಂದರೆ ಜ್ಞಾನವಿಲ್ಲವೆಂದಲ್ಲ ಸತ್ಯಜ್ಞಾನ ಇಲ್ಲ ಎಂದರ್ಥ. ಇದು ನಮ್ಮೆಲ್ಲರ ಸಮಸ್ಯೆ. ನಮ್ಮದೇ ಸಹಕಾರದ ಸಮಸ್ಯೆ. ಒಳಗೇ  ಅಸಹಕಾರವಿದ್ದರೆ  ಹೊರಗೆ ಬರೋದು ಕಷ್ಟವಿದೆ. ನಮಗೆನಾವೇ ಶತ್ರುವಾದರೆ ಮಿತ್ರರು ಕಾಣರು.
ಹಾಗೆ ಅತಿಯಾದ ಆಸೆ ಅಹಂಕಾರ ಸ್ವಾರ್ಥ ದ ಜೀವನದಲ್ಲಿ ಗೆದ್ದವರು ಯಾರು? ಸೋತವರು ಎಲ್ಲಿ? 
ಹಿಂದೆ ಇಂದು  ಮುಂದೆ ಇರುವ ಆತ್ಮಕ್ಕೆ ಸಾವಿಲ್ಲ.ಸತ್ಯಕ್ಕೂ ಸಾವಿಲ್ಲ. ಎರಡೂ ಒಳಗೇ ಅಡಗಿರುವಾಗ ಅದರಹಿಂದೆನಡೆದರೆ ಹಿಂದೂ ಬಿಟ್ಟು ಮುಂದೆ ನಡೆದರೆ ಮುಸ್ಲಿಂ. ಮುಸ್ಲಿಂ  ಜನಾಂಗ ಎಷ್ಟೋ  ವಿಚಾರದಲ್ಲಿ ಒಗ್ಗಟ್ಟು ತೋರಿಸಿದರೂ ಅವರ ಯಾಂತ್ರಿಕ ಜೀವನದಲ್ಲಿ ಸತ್ಯವಿರದು.
ಹಾಗಾಗಿ‌ಇಡೀ ಜಗತ್ತು ಜನಸಂಖ್ಯೆಯಿಂದ ತುಂಬಿದೆ.ಅಷ್ಟೇ ಸಾವು ನೋವು ಹೆಚ್ಚಾಗಿದೆ. ಜೀವನ್ಮುಕ್ತಿ  ಕೊಡುವ ಶಿವನನ್ನು ಎಲ್ಲಾ ಒಪ್ಪಬಹುದು.ಆದರೆ ಲಯವನ್ನು ಒಪ್ಪುವುದು ಕಷ್ಟ.
ಸಾವು  ನಿಶ್ಚಿತ ಎಂದು ತಿಳಿದರೂ  ಸತ್ತ ನಂತರ ಇದಕ್ಕೆ ಕಾರಣಕರ್ತ  ಶಿವ ಎಂದು ತಿಳಿಯದೆ ಮಾನವರು ಅಪಾರ್ಥ ಮಾಡಿಕೊಂಡು  ಹೋರಾಟ ಹಾರಾಟ ಮಾರಾಟ ಕಾದಾಟಕ್ಕೆ ಸಹಕರಿಸಿದರೆ  ಎಲ್ಲಿ ಆತ್ಮಕ್ಕೆ ಶಾಂತಿ?
ಯುದ್ದದಲ್ಲಿ ಮರಣಹೊಂದಿದರೆ ಸದ್ಗತಿ. ಯುದ್ದಕ್ಕೆ ಪ್ರೇರಣೆ ಕೊಟ್ಟು ಬದುಕಿದರೆ ದುರ್ಗತಿ. ಹೀಗೆ ಕರ್ಮ ಫಲ ಬೇರೆಯೇ ಆದಾಗ  ಎರಡೂ ಸತ್ಯವನರಿತು ಜೀವನ ಮಾಡೋದು   ಮನುಕುಲಕ್ಕೆ  ಸಮ್ಮತಿಯಾಗಬೇಕಷ್ಟೆ.ಒಪ್ಪಲಿ ಬಿಡಲಿ ಆಗೋದನ್ನು ತಡೆಯಲಾಗಿಲ್ಲ ತಡೆದವರೂ ಇಲ್ಲ.

ಪುರಾಣ ಓದುತ್ತಾ  ವಾಸ್ತವ ಸತ್ಯ ತಿಳಿಯದೆ  ಭವಿಷ್ಯ. ಹೇಳಿ ಕೇಳಿ ಉಪಯೋಗವಿಲ್ಲ. ಹಾಗಾಗಿ  ವಾಸ್ತವದಲ್ಲಿ ನಾವು ದೇಶದ ಒಂದು  ಜವಾಬ್ದಾರಿಯುತ ಪ್ರಜೆಯಾದರೂ  ಹಿಂದೆ ರಾಜರು  ಆಳಿದಂತೆ  ಜನರನ್ನು  ಆಳಲು ಸಾಧ್ಯವೆ? 
ಧರ್ಮದ  ಮಾರ್ಗ ಒಳಗಿಲ್ಲದೆ  ಹೊರಗೆ  ತಿರುಗಿದರೆ ಧರ್ಮ ಉಳಿಯುವುದೆ? ಸತ್ಯ  ಅರ್ಥ ವಾಗಲು ಅದರ ಹಿಂದೆ  ನಡೆಯಬೇಕು ಎಂದರೆ  ಅದಕ್ಕೆ ವಿರುದ್ದವಿರುವವರ ಸಂಗವಿದ್ದರೆ  ಅಸಾಧ್ಯ. 
ಒಬ್ಬಂಟಿಯಾಗಿ  ನಿಂತ ಸತ್ಯದ   ವಿರುದ್ದ  ನಡೆದಷ್ಟೂ  ಅಸುರ ಶಕ್ತಿ ಜೊತೆಗಿರುತ್ತದೆ. ಹಾಗಂತ ಭೂಮಿ  ದೇವಾಸುರರ  ನಡುವಿರುವ  ಮಾನವನಿಲ್ಲದೆ  ನಡೆದಿಲ್ಲ. ಎಚ್ಚರವಾಗಬೇಕಿರೋದು ಮಾನವ. ತಾನೇ  ಸಹಕಾರ ಕೊಟ್ಟು ಬೆಳೆಸಿದ  ಶಕ್ತಿಯೇ  ತನ್ನ ಸಮಸ್ಯೆಗೆ ಕಾರಣವೆಂದರೆ ಆ ಶಕ್ತಿಯಿಂದ ದೂರವಾಗುವ ಶಕ್ತಿಯೂ ಒಳಗೇ ಇದೆ ಎಂದರ್ಥ. ಅದನ್ನು ಬಳಸಿಕೊಳ್ಳುವ  ಅವಕಾಶ ಸ್ವಾತಂತ್ರ್ಯ ವಿದ್ದರೂ  ಬೆಳೆಸಿದ ಶಕ್ತಿ ಬಿಡದು. ಹೀಗಾಗಿ ಮಕ್ಕಳಿರುವಾಗಲೇ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವುದೇ ಪರಿಹಾರ ಎನ್ನುವರು ಮಹಾತ್ಮರು. ಇದು ಪೋಷಕರ ಧರ್ಮ. ದೇಶದ ಪೋಷಣೆಯೂ ಪ್ರಜಾಪ್ರಭುತ್ವ ದ ಪ್ರಜಾಧರ್ಮ. ಕಲಿಕೆಯ ಪ್ರಭಾವ ಕಲಿಗಾಲವಾಗಿದೆ.

ವೇದಕಾಲದ ಸ್ತ್ರೀ ಜ್ಞಾನ ಇಂದು ಇದೆಯೆ?

ಸ್ತ್ರೀ ಯರಿಗೆ ವೇದಕಲಿಯಲು ನಿಷೇಧ ವಿದೆ ಆದರೂ ಕೆಲವರು ಕಲಿಸುತ್ತಿದ್ದಾರೆ  ಎಂದರೆ  ಬೆಳವಣಿಗೆಯ ಲಕ್ಷಣವೆ?

ನಿಷೇಧದ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ .ಸ್ತ್ರೀ ಭೂಮಿಯ ಮಹಾಶಕ್ತಿ. ಭೂಮಿ ನಡೆದಿರೋದು ಮನುಕುಲದ ಸಂತಾನದಿಂದ  ಸಂತಾನದಲ್ಲಿ ಗಂಡುಹೆಣ್ಣಿಗೆ ತನ್ನದೇ ಆದ ವಿಶೇಷ ಶಕ್ತಿಯಿದೆ.. ವೇದಕಾಲದಲ್ಲಿದ್ದ ಸತ್ವ ತತ್ವ ಸತ್ಯಜ್ಞಾನ ಇಂದಿಲ್ಲ.  ಪರಮಾತ್ಮನೆಡೆಗೆ  ಹೋಗಲು  ಆತ್ಮಶುದ್ದಿಚಿತ್ತಶುದ್ದಿ ಮನಸ್ಸಿನ ಶುದ್ದಿ..ಮಂತ್ರಶುದ್ದಿಯಿಂದ ಮಾಡಲಾಗಿದೆ. ಇದನ್ನು  ಯಾರೇ ಆಗಲಿ ತಪ್ಪಾಗಿ ಹೇಳಿದರೂ ವಿರುದ್ದ  ಪ್ರತಿಫಲ ಅನುಭವಿಸೋದು ಜೀವವೇ.ಜೀವಾತ್ಮರಾಗಿರುವ  ಮಾನವರಿಗೆ ಉತ್ತಮವಾದ ಗುರು ಶಿಕ್ಷಣ  ಸಿಗುವುದೇ ಅಪರೂಪವಾಗಿರುವ ಇಂದು ವೇದಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ಬೇಧವಿದೆಯೋ  ಇಲ್ಲವೋ ಒಟ್ಟಿನಲ್ಲಿ ನಾವುಕಲಿತಿರುವ ಶಿಕ್ಷಣದಲ್ಲೇ ಬೇಧವಿದೆ. ಇದರಿಂದಾಗಿ ಹಿಂದಿನ ಜ್ಞಾನಶಕ್ತಿ ನಮಗಿಲ್ಲ. ಜ್ಞಾನಿಎನಿಸಿಕೊಂಡ ಸ್ತ್ರೀ ಯನ್ನೇ ಶಿಕ್ಷಣದಿಂದ ದೂರವಿಟ್ಟು ಏನೋ ಸಾಧನೆ ಮಾಡಿದಂತೆ  ವಾದ ಮಾಡುವುದರಿಂದ  ಸಂಸಾರ ನಡೆಯೋದಿಲ್ಲ.  ಉಭಯಭಾರತಿ ದೇವಿಯೊಂದಿಗೆ ಶ್ರೀ ಶಂಕರಭಗವದ್ಪಾದರು ವಾದ ಮಾಡಿ ಗೆಲ್ಲಲು ಪರಕಾಯ ಪ್ರವೇಶ ಮಾಡಿದ್ದರಂತೆ.
ಅಂದರೆ ಸ್ತ್ರೀ ಜ್ಞಾನವನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು  ಅಸಾಧ್ಯ. ಅನುಭವದಲ್ಲಿ ಬೇರೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೆಲವೊಂದು ಸೂಕ್ಷ್ಮ ವಿಚಾರಕ್ಕೆ ನಿಷೇಧಿಸಿ  ಸಂಸಾರ ಸುಸೂತ್ರವಾಗಿ ನಡೆಯಲು ಮಾಡಿದ್ದಾರೆನ್ನಬಹುದು. ಈಗ ಬಿಡಿ ಎಲ್ಲಾ ಓದಿದರೂ  ನಮ್ಮ ಭೌತವಿಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ ಹೊರಗೆ ನಡೆದಿದೆ ಜೀವನ. ವೇದಕಾಲಕ್ಕೂ ವಾಸ್ತವ ಕ್ಕೂ ಅಂತರ ಬೆಳೆದು ಅರ್ಧ ಸತ್ಯವೇ ಅತಂತ್ರಸ್ಥಿತಿಗೆ ತಂದಿಟ್ಟಿದೆ. 
ಹಿಂದಿನಂತೆ  ಗುರುಮುಖೇನ ಕಲಿಯುವ ಶಿಕ್ಷಣವೂ ದೂರವಾಗುತ್ತಿದೆ. ಆನ್ಲೈನ್ ನಲ್ಲಿ  ಏನು ಬೇಕಾದರೂ ಓದಿ ತಿಳಿಯಬಹುದು. ಆದರೆ ತಿಳಿದಮೇಲೆ ಅದಕ್ಕೆ ಪೂರಕವಾದ ಸಹಕಾರವಿಲ್ಲವಾದರೆ  ಸ್ತ್ರೀ ಎಲ್ಲಿಗೆ ಹೋಗಬೇಕು?
ಮನೆಯೊಳಗೆ  ಇದ್ದಂತೆಹೊರಗೆ ಸುರಕ್ಷೆ ಇದೆಯೆ?ಸಂನ್ಯಾಸಿಯಾದವರೆ  ರಾಜಕೀಯ ನಡೆಸಿರುವಾಗ ಸಂಸಾರಿಗಳ ಪಾಡೇನು? ಎಲ್ಲಾ ಸಂನ್ಯಾಸಿ ವೇಷಧರಿಸಿದಾಕ್ಷಣ ಸಂನ್ಯಾಸವಾಗದು.ಹಾಗೆ ಸಂಸಾರಕ್ಕೆ ಬಂದವರೆಲ್ಲರೂ  ಅಜ್ಞಾನಿಗಳಾಗರು. ಬಾಲ್ಯ ಯೌವನ  ಗೃಹಸ್ಥ  ವಾನಪ್ರಸ್ಥ ಸಂನ್ಯಾಸವೆನ್ನುವ  ಆಶ್ರಮ ದಾರಿಯಲ್ಲಿ    ಕಷ್ಟ ಪಟ್ಟು    ನಡೆದ ಎಷ್ಟೋ ವೇದ ಪುರುಷ ಸ್ತ್ರೀ ಯರು  ಇಂದಿಗೂ  ಅಮರರು. ಆದರೆ  ಅವರಂತೆ  ವಾದಕ್ಕೆ ನಿಂತರೆ  ಸೋಲುವುದು  ಶತಸಿದ್ದ ಕಾರಣ ಅವರ ಅನುಭವ ಜ್ಞಾನವಿಲ್ಲದ ಮೊಂಡುವಾದದಿಂದ  ಸತ್ಯ ತಿಳಿಯದು ಧರ್ಮ ಉಳಿಯದು.ಪ್ರಚಾರಕ್ಕೆ ಅಡ್ಡಿಯಿಲ್ಲ.ಆಚಾರ ವಿಚಾರಕ್ಕೆ ಅಡೆತಡೆಯಿದೆ. 
ಲಿಂಗಕ್ಕೆ ಬೇಧವಿರಲಿಲ್ಲ ಆದರೆ ಅಧಿಕಾರಕ್ಕೆ  ಇಂದೂ ಬೇಧವಿದೆ .ಭೂಮಿ ಆಳೋದಕ್ಕೆ ಭೂಮಿಯನ್ನೇ ಅಜ್ಞಾನಕ್ಕೆ ಎಳೆದರಾಯಿತು. ಜನರನ್ನು ಆಳೋದಕ್ಕೆ ಉತ್ತಮ ಶಿಕ್ಷಣ ಕೊಡದೆ ಹೋದರಲ್ಲಹಾಗೆ ಸ್ತ್ರೀ ಗೆ ಸತ್ಯ ತಿಳಿದರೆ ಕಷ್ಟವಿದೆ.

ಈಗ ಗಂಡುಮಕ್ಕಳಿಗೇ ವೇದ ಶಾಸ್ತ್ರ ಪುರಾಣ ಸರಿಯಾಗಿ ತಿಳಿಯದೆ ವ್ಯವಹಾರನಡೆಸಿರುವಾಗ ಮೊದಲು ಅವರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ. ಮನೆಯಜಮಾನನೇ ಅಜ್ಞಾನಿಯಾದರೆ ಯಜಮಾನಿಯ ಜ್ಞಾನ ಅರ್ಥ ವಾಗದು.
ಕಲಿಕೆಗೆ ನಿಷೇಧವಿಲ್ಲ ಆದರೆ ಮೂಲಸಂಸ್ಕಾರ ಗಟ್ಟಿಯಿರಬೇಕು. ಇದೊಂದು ಅಭಿಪ್ರಾಯವಷ್ಟೆ.

Saturday, October 5, 2024

ಬ್ರಹ್ಮಚಾರಣಿ ದೇವಿ

ಬ್ರಹ್ಮ ಪುರಾಣ ವಿಷ್ಣುಪುರಾಣ ಶಿವಪುರಾಣ ಹೀಗೇ ಅನೇಕ ದೇವತೆಗಳ ಪುರಾಣಗಳಿವೆ ದೇವೀ ಪುರಾಣ ಮಾತ್ರ ನವರಾತ್ರಿ ಸಮಯದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.ಅಂದರೆ ದೇವಿ ಶಕ್ತಿಯಿಲ್ಲದೆ ಜೀವನವಿಲ್ಲ. ಹರಿಹರ ಬ್ರಹ್ಮಾದಿ ದೇವಾನುದೇವತೆಗಳೂ ದೇವಿಯ ಉಪಾಸಕರಾಗಿರುವುದನ್ನು ಪುರಾಣಗಳು ತಿಳಿಸಿವೆ.ಇಲ್ಲಿ  ಪರಮಾತ್ಮನೆಡೆಗೆ ಸಾಗಲು ಜ್ಞಾನಶಕ್ತಿ ಅಗತ್ಯವಿದೆ.ಜ್ಞಾನ ದೇವತೆಯ ಸಹಕಾರವಿಲ್ಲದೆ ಸೃಷ್ಟಿ ಯ ರಹಸ್ಯವರಿಯಲು ಅಸಾಧ್ಯ. ಇದನ್ನರಿಯದ ಹುಲುಮಾನವ ಸ್ತ್ರೀ ಶಕ್ತಿಯನ್ನು  ತಿರಸ್ಕರಿಸಿ ಅಥವಾ ದುರ್ಭಳಕೆ ಮಾಡಿಕೊಂಡು ಎಷ್ಟು ಹೊರಗೆ  ದೇವರಿಗೆ ಮಾಡಿದರೂ ಜ್ಞಾನ ಬರದು.

ನವಶಕ್ತಿಯರನ್ನು ಆರಾಧಿಸುವ‌ ನವರಾತ್ರಿಯ ವಿಶೇಷತೆಯನ್ನು  ಎಷ್ಟು ವರ್ಣಿಸಿದರೂ ಕಡಿಮೆಯೆ.ವರ್ಷ ವಿಡೀ ಕಾಯುವ ದೇವಿಗೆ ಎಷ್ಟು ಶಕ್ತಿಯಿರಬಹುದು? ಬಹಳ ಎತ್ತರಕ್ಕೆ ಹೋದವರ ವ್ಯವಹಾರದಲ್ಲಿ  ಲಕ್ಮಿ ಕೃಪೆ ಇರುತ್ತದೆ. ಅದರ ಮೂಲವೇ ಜ್ಞಾನ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು  ದಾನಧರ್ಮದೆಡೆಗೆ  ಮಾನವಹೋದರೆ ದಾನವಕುಲ ಹೆಚ್ಚುವುದಿಲ್ಲ.ಮಾನವನಿಗೆ  ಭೂಮಿಯಲ್ಲಿ ಎಲ್ಲಾ ಉಚಿತವೆ ಆದರೆ ವ್ಯವಹಾರಕ್ಕೆ ಇಳಿದಾಗ ಪಂಚಭೂತಗಳ ಬೆಲೆ ಅರ್ಥ ಆಗೋದಿಲ್ಲ. ಭೂಮಿ ಆಕಾಶ ,ವಾಯು,ಅಗ್ನಿ ನೀರು  ಸ್ವಚ್ಚಗೊಳಿಸುವುದಕ್ಕೆ  ಸಾಧ್ಯವೆ?
ಹೀಗಿರುವಾಗ  ಕಲ್ಮಶವಾಗಿಸುವ ಅಧಿಕಾರವೂ ಇರಲಿಲ್ಲ.
ಹಾಗೆ ತಾಯಿಯಿಲ್ಲದೆ ಜನ್ಮವಿಲ್ಲವಾದಾಗ ತಾಯಿಯನ್ನು ಹೇಗೆ ನೋಡಬೇಕೆಂಬ ಅರಿವೇ ಇಲ್ಲದಿದ್ದರೆ ಜೀವನವೇ ಅಲ್ಲ.

ಅಲ್ಲದರ ಹಿಂದೆ  ಹೋದವರಿಗೆ ಅಲ್ಲಾನೇ‌ ಕಾಣೋದು. ಅಂದರೆ ನಾನಲ್ಲ  ನೀನು ಎಂದ ಹಿಂದೂ ಧರ್ಮದ ಹಿಂದೆ ಶಕ್ತಿಯಿದೆ. ಅದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೆ ಹುಡುಕಿಕೊಳ್ಳಲು ನಾನು ಹೋಗಬೇಕು. ಹೀಗಾಗಿ ಇನ್ನೂ ಹುಡುಕಾಟ ನಡೆದೇ ಇದೆ.
ಹುಡುಕಾಟವೇ ಜೀವನ. ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ  ಹೋರಾಟ ಹಾರಾಟ ಮಾರಾಟಕ್ಕೆ ಕೊನೆಯಿಲ್ಲ. 
ನವರಾತ್ರಿ ವಿಶೇಷ

2.. ದಿನದ ನವರಾತ್ರಿ ಆರಾಧನೆ  👏ಬ್ರಹ್ಮಚಾರಿಣೀ ದೇವಿ*👏

*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ*
*ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|*
*ನಮಸ್ತೇ ಜಗದ್ವಂದ್ಯ ಪಾದಾರವಿಂದೇ*
*ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ||*

ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ ವಿಶ್ವರೂಪಿಣಿಯೇ, ನಿನಗೆ ನಮಸ್ಕರಿಸುತ್ತೇನೆ. ಜಗದ್ವಂದ್ಯಳಾದ ನೀನು ಶ್ರೇಷ್ಠಳಾಗಿರುವೆ. ಎಲ್ಲರಿಂದಲೂ ನಮಸ್ಕರಿಸಲ್ಪಡುವ ಪರಮಪವಿತ್ರವಾದ ಪಾದಕಮಲಗಳನ್ನು ಹೊಂದಿದವಳು. ಜಗತ್ತಿನ ರಕ್ಷಕಳು. ಬರುವ ಎಲ್ಲಾ ದುರಂತಗಳನ್ನು ದೂರಮಾಡಿ ರಕ್ಷಿಸು ಮಹಾತಾಯೇ.

ಸೃಷ್ಟಿ -ಸ್ಥಿತಿ -ಲಯಗಳನ್ನು ಮಾಡಬಲ್ಲ ಶಕ್ತಿ ಸ್ವರೂಪಳು, ಸನಾತಳು, ತ್ರಿಗುಣಗಳಿಗೆ ಆಶ್ರಯದಾತಳು, ತ್ರಿಗುಣಾಮಯಳು, ನಾರಾಯಿಣೀ ಮಾತೆಯೆ ನಿನಗೆ ನಮಸ್ಕರಿಸುವೆನು.

*ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿ ಭೂತೇ ಸನಾತಿನಿ|*
*ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತುತೇ||*

ನವದುರ್ಗೆಯ *ಎರಡನೇ ದಿನದ ರೂಪವೇ ‘ಬ್ರಹ್ಮಚಾರಿಣೀ ದೇವಿ’.* ದೈವಿಕ ಅಂಶವನ್ನು ಮೈಗೂಡಿಸಿಕೊಂಡು, ಶಕ್ತಿ ಸ್ವರೂಪಿಣಿಯಾಗಿ, ಶುದ್ಧಳಾಗಿ, ಶ್ವೇತವಸ್ತ್ರಧಾರಿಣಿಯಾಗಿ, ಗುಲಾಬಿ ಹೂವು, ಜಪಮಾಲೆ ಮತ್ತು ನೀರಿನಿಂದ ತುಂಬಿದ ಕಮಂಡಲವನ್ನು ಕರಗಳಲ್ಲಿ ಹಿಡಿದು ಶೋಭಿಸುತ್ತಿರುವಳು. ಶಾಂತಿ, ಸಮೃದ್ಧಿಯ ಅಧಿದೇವತೆಯಾಗಿ ಭಕುತವೃಂದವ ಸಲಹುವ ಮಾತೆ. ತನ್ನನ್ನೇ ನಂಬಿ ಬಂದವರಿಗೆ ಅಭಯವನ್ನು ನೀಡಿ ಹರಸುವಳು. ನಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸವನ್ನು ಮೂಡಿಸಿ, ಮನಸ್ಸಿನ ಪ್ರಶಾಂತತೆಗೆ ದಾರಿಯನ್ನು ತೋರಿಸುವಳು ಮಾತೆ.

ಹಿಮವಂತನ ಪುತ್ರಿ ಕಠಿಣ ತಪಸ್ಸನ್ನು ಮಾಡಿದ ಕಾರಣ ‘ತಪಶ್ಚಾರಿಣೀ’- ಅರ್ಥಾತ್ ‘ಬ್ರಹ್ಮಚಾರಿಣೀ’ ಎಂದು ಕರೆಯಲ್ಪಟ್ಟಳು. *ಕೇವಲ ಪರ್ಣ ಎಲೆಗಳನ್ನು ಆಹಾರವಾಗಿ ಸ್ವೀಕರಿಸಿ ‘ಅಪರ್ಣಾ’ ,ಅಪರ್ಣೆ ಎಂದೂ ನಾಮಾಂಕಿತಗೊಂಡಳಂತೆ.*

ಕಾಠಿಣ್ಯತೆಯಪ್ರತಿರೂಪ ಈಕೆ.ಯಾವುದೇ ಕ್ಲಿಷ್ಟ ಕರವಾದ ಸಮಸ್ಯೆಗಳಿಗೆ ಮೋಕ್ಷವನ್ನು ಕಾಣಿಸುವ ತಾಯಿ.ತನ್ನ ಭಕ್ತ ಸಂಕುಲಕ್ಕೆ ಸಂತಸವನ್ನು ನೀಡುವವಳು ಮಹಾಮಾತೆ. ನೆಮ್ಮದಿ, ಶಾಂತಿ, ಕರುಣಿಸುವ ತಾಯಿ. ಜ್ಯೋತಿರ್ಮಯವಾದ ಮತ್ತು ಭವ್ಯವಾದ ರೂಪಗುಣ ಸಂಪನ್ನಳೀಕೆ. ತಾಯಿಯ ಕಠಿಣ, ಏಕಾಗ್ರತೆ, ವೈರಾಗ್ಯ, ಪಡೆದೇ ತೀರಬೇಕೆಂಬ ಹಠ, ಹಂಬಲ ಎಲ್ದಕ್ಕೂ ಒಲಿದವ ಆ ಪರಮೇಶ್ವರನಂತೆ. ಬ್ರಹ್ಮ ಜ್ಞಾನ ಸಿದ್ಧಿಸಲು ಕಾಠಿಣ್ಯತೆ ಬೇಕು. ಯೋಗಿಗಳು, ಋಷಿಮುನಿಗಳು ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸುವಾಗ *ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಾರಂತೆ.*

ಈ ದಿನದ ಪೂಜೆ, ನಿಷ್ಠೆಗಳು ತಪಸ್ಸಿಗೆ ಸಮ. ಮಾಂಗಲ್ಯ ಭಾಗ್ಯವನ್ನು ಕರುಣಿಸುವ ಮಾತೆ. ನಮಗಿರುವ ಎಲ್ಲಾ ಎಡರುತೊಡರುಗಳನ್ನು ದೂರೀಕರಿಸಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ. ಲೋಕಕ್ಕೆ ಆವರಿಸಿದ ಎಲ್ಲಾ ಕಷ್ಟಗಳು ತೊಲಗಿ ಕ್ಷೇಮವುಂಟಾಗಲಿ.👏

*(ಆಕರಗ್ರಂಥ:ಪುರಾಣ ಮಾಲಾ ಗ್ರಂಥ))

      
*ಶಕ್ತಿ ದೇವತೆ ದುರ್ಗಾ ಮಾತೆಯ ೨ ನೇ ಅವತಾರ ಬ್ರಹ್ಮಚಾರಿಣೀ, ತಪಶ್ಚಾರಿಣೀ ದೇವಿ. ಕಠಿಣತೆ ಹಾಗೂ ಸೌಮ್ಯತೆ ಎರಡನ್ನೂ ಸಹಿಸುವ ಶಕ್ತಿ ದಯಪಾಲಿಸುವ ಮಾತೆ. ಬ್ರಹ್ಮಚಾರಿಣಿ ಎಂದರೆ ಸುಲಭದ ಮಾತಲ್ಲ, ಕಠಿಣ ತಪಸ್ಸಿನಂತೆ ಅದು. ತಪಸ್ಸಿನ ಹಿಂದೆ ಒಂದು ಯೋಚನೆಯಿರುತ್ತದೆ. ಯಾವುದನ್ನೋ ಸಾಧಿಸಲು ತಪಸ್ಸು ಮಾಡುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ಶಕ್ತಿಸ್ವರೂಪಿಣಿ ತಾಯಿ ಇಲ್ಲಿ ಶಿವನನ್ನು ಒಲಿಸಿಕೊಳ್ಳಲು, ಲೋಕಕ್ಷೇಮಕ್ಕಾಗಿ ಮಹಾತಪಸ್ಸನ್ನು ಕೈಗೊಂಡಳಂತೆ. ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಜಯ ಸಾಧಿಸಿದಳೆಂದು ಉಲ್ಲೇಖವಿದೆ. ಆಕೆ ಯುವತಿಯಾಗಿ, ಶ್ವೇತವಸ್ತ್ರಧಾರಿಣಿಯಾಗಿ ನಾರದರ ಉಪದೇಶದಂತೆ ತಪಸ್ಸು ಮಾಡಿದ ಕಾರಣ ತಪಶ್ಚಾರಿಣೀ ದೇವಿಯಾಗಿ, ಹೂವು ಎಲೆ ಮಾತ್ರ ಸೇವಿಸಿದ ಕಾರಣ ಅಪರ್ಣಾ ಎಂದೂ ಕರೆಯಲ್ಪಟ್ಟಳು. ದೇವಿಯ ಶಾಂತತೆ, ಅಪಾರ ಜ್ಞಾನ, ಅಖಂಡತೆ ಶಿವನನ್ನು ಒಲಿಯುವಂತೆ ಮಾಡಿತು. ನಮಗೂ ಸಹ ಬದುಕಿನ ಹಾದಿಯಲ್ಲಿ ಎದುರಾಗುವ ಕಾಠಿಣ್ಯವನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು, ತಾಳ್ಮೆ, ಸಂಯಮವನ್ನು ಆ ಮಹಾಮಾತೆ ನೀಡಿ ಅನುಗ್ರಹಿಸಲಿ*.🤝🙏

Wednesday, September 25, 2024

ಜನಸಂಖ್ಯೆಯಲ್ಲಿ ಜ್ಞಾನಿಗಳ ಸಂಖ್ಯೆ ದೊಡ್ಡದಿರಬೇಕು

ದೇಶದ ತುಂಬಾ ಜನಸಂಖ್ಯೆ ಇದ್ದರೂ ಜನರಲ್ಲಿ ದೇಶಭಕ್ತಿಯೇ ಇಲ್ಲವಾದರೆ ವ್ಯರ್ಥ. ಹಾಗೆ ಮನೆತುಂಬ ಜನರಿದ್ದರೂ ಜನರೊಳಗೆ ಸತ್ಯಜ್ಞಾನವೇ ಇಲ್ಲವಾದರೆ ವ್ಯರ್ಥ. ಇದು ದೇವಸ್ಥಾನ ಮಠ ಮಂದಿರ ಚರ್ಚ್ ಮಸೀದಿಯವರೆಗೂ ಜನಸಂಖ್ಯೆ ಬೆಳೆಸುವತ್ತ ನಡೆದು  ಒಳಗೇ  ಇದ್ದ ದೈವತ್ವಕ್ಕೆ ಕೊರತೆಯಾದಾಗಲೇ ಅಸುರಿ ಶಕ್ತಿ‌ಜಾಗೃತವಾಗಿ ಆಳೋದು. ಇದನ್ನು ಪುರಾಣಗಳೇ ತಿಳಿಸಿವೆ.
ದೇವತೆಗಳು ಸ್ವರ್ಗದಲ್ಲಿ ಮೈ‌ಮರೆತಾಗ ಅಸುರರು ಆಕ್ರಮಣ ಮಾಡಿ ಸ್ವರ್ಗದಿಂದ ಓಡಿಸಿದರಂತೆ‌ ಸುರರು ಬ್ರಹ್ಮಾದಿ ದೇವರುಗಳ ಮೊರೆ ಹೋಗಿ ಯುದ್ದ ಮಾಡಿ ಅಸುರರ ಸಂಹಾರವಾಯಿತಂತೆ, ಧರ್ಮ ಕ್ಕೆ ಜಯದೊರೆಯಿತಂತೆ... ಹೀಗೇ ಎಷ್ಟೋ ಪುರಾಣ ಕಥೆಗಳ ಹಿಂದೆ ‌ಇರುವ ಸತ್ಯವನ್ನು  ವಾಸ್ತವದಲ್ಲಿ ಅರ್ಥ ಮಾಡಿಕೊಳ್ಳಲು  ಒಳಗಿರುವ  ಆತ್ಮಸಾಕ್ಷಿ   ಅಗತ್ಯವಿದೆ.
ನಾನೇ ಎಲ್ಲಾ ನನ್ನಿಂದಲೇ‌ಎಲ್ಲಾ ನನಗಾಗಿಯೇ ಎಲ್ಲಾ ಎನ್ನುವಾಗಲೇ ಅಲ್ಲ ಅಲ್ಲ ಎನ್ನುವವರು  ಬೆಳೆಯೋದು. ಹಾಗಾದರೆ ನಾನಲ್ಲ ಎಂದರೆ ಸರಿಯೆ?  ಪ್ರಶ್ನೆಗೆ ಉತ್ತರ ಒಂದೇ ನಾನೆಂಬುದಿಲ್ಲ. ನಾನೆಂಬ ಅಹಂಕಾರ ಹೋಗಿ ಆತ್ಮವಿಶ್ವಾಸ ದೆಡೆಗೆ  ನಡೆದವರನ್ನು ಮಹಾತ್ಮರೆಂದರು.
ಮಹಾತ್ಮರ ಸಂಖ್ಯೆ ಬೆಳೆಯಲು  ಅಂತಹ ಜ್ಞಾನದ ಶಿಕ್ಷಣ ಕೊಡಬೇಕು. ಮಕ್ಕಳೇ ಬೇಡ ಎನ್ನುವ ಸ್ಥಿತಿಗೆ ತಲುಪಿರುವಾಗ  ,ಸಂಸಾರವನ್ನು ಬಿಟ್ಟು ಹೊರಬಂದವರು ಬೆಳೆದಿರುವಾಗ  ಸತ್ಯ ಸತ್ವ ತತ್ವದ ಬಗ್ಗೆ  ಸ್ತ್ರೀ ತಿಳಿಸಬಹುದೆ?
ತಿಳಿಸಿದರೂ ಸಮಾಜ ಒಪ್ಪುವುದೆ? ಹಿಂದಿನಿಂದಲೂ  ಸ್ತ್ರೀ ಜ್ಞಾನ ದೇವತೆ ಎಂದವರೆ ಜ್ಞಾನದಿಂದ ದೂರವಿಟ್ಟವರು ಹೊರಗೆ  ರಾಜಕೀಯದಲ್ಲಿ ಬೆಳೆದರು. ಆದರೆ ರಾಜಕೀಯದಲ್ಲಿ ಸತ್ಯವಿರದು. ಹೀಗಾಗಿ ಅಸತ್ಯ ಅನ್ಯಾಯ ಅಧರ್ಮ ವೂ ಜೊತೆಯಾಗಿ ಬೆಳೆಯಿತು.  ಬೆಳೆದು ನಿಂತ ಮೇಲೆ ಸರಿಪಡಿಸಲಾಗದು. ಹಾಗಾಗಿ ಗಿಡವಾಗಿರುವಾಗಲೇ ಸತ್ವಯುತ ಆಹಾರ ಫೋಷಣೆ ಮಾಡಿದರೆ ಉತ್ತಮ ಫಲ ಕೊಡುತ್ತದೆ. ಈಗಲೂ ಮಕ್ಕಳಿಗೆ ಕೊಡಲೇಬೇಕಾದ ಸಂಸ್ಕಾರದ ಶಿಕ್ಷಣ ಮನೆಯೊಳಗೆ ಹೊರಗೆ ಕೊಟ್ಟರೆ  ಮಕ್ಕಳು ಮಹಾತ್ಮರಾಗಬಹುದು. ಅತಿಯಾದ ಜ್ಞಾನವೂ ಅಹಂಕಾರ ಆಗಬಹುದು.ಅಜ್ಞಾನದಿಂದ ಜನ್ಮ ಪಡೆದ ಅಹಂಕಾರ ವನ್ನು ಸರಿಪಡಿಸಬಹುದು.ಆದರೆ ಅರ್ಧ ಸತ್ಯ ತಿಳಿದು ನಡೆದವರ ಅಹಂಕಾರ  ವಿನಾಶಕ್ಕೆ ಕಾರಣವಾಗಬಹುದು.
ಎಲ್ಲಿಯವರೆಗೆ  ಜ್ಞಾನಿಗಳ ಸಂಖ್ಯೆ ಬೆಳೆಯದೋ ಅಲ್ಲಿಯವರೆಗೆ ಅಜ್ಞಾನಿಗಳೇ ಭೂಮಿ ಆಳೋದು. ಭೂ ಭಾರ ಹೆಚ್ಚಾದಾಗ  ಭೂಕಂಪ ಪ್ರಳಯ . ಯುದ್ದ ರೋಗ.ದಂತಹ ಪ್ರಕೃತಿ ವಿಕೋಪದಲ್ಲಿ ಜೀವಹೋಗೋದು.
ನಿರಂತರವಾಗಿ ನಡೆದು ಬಂದಿರುವ ಈ ಮನುಕುಲವನ್ನು ನಡೆಸಿರೋದೆ ಮಾನವನ ಧರ್ಮ ಕರ್ಮ ಫಲವಾಗಿದೆ.

ಸಾಲ ಅಥವಾ ಋಣ ತೀರಿಸಲು ಸ್ವಧರ್ಮ, ಸತ್ಕರ್ಮ,ಸ್ವಾಭಿಮಾನ ಸ್ವಾವಲಂಬನೆ ಸತ್ಯಜ್ಞಾನದ ಶಿಕ್ಷಣವೇ ಮೂಲಧಾರ. ಇದೇ ಮಹಾತ್ಮರ ಜೀವನ.

ಸಮ್ಮಿಶ್ರ ಸರ್ಕಾರ ಅಂದರೆ‌ ಮಿಶ್ರಣಕ್ಕೆ ನೀಡಿದ ಸಹಕಾರ

ಮಿಶ್ರ ತುಪ್ಪದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಲ್ಲಾ   ವಿಚಾರದಲ್ಲಿ ತೆಗೆದುಕೊಂಡರೆ  ಈ ಮಿಶ್ರ ಜಾತಿ,ವರ್ಣ, ಧರ್ಮ, ದೇಶ ಸಮ್ಮಿಶ್ರ ಸರ್ಕಾರವೇ ಇಲ್ಲದೆ ಸ್ವತಂತ್ರ ವಾಗಿ  ತಮ್ಮನ್ನು ತಾವು ಆಳಿಕೊಳ್ಳುವ ಜ್ಞಾನವಿರುತ್ತಿತ್ತು ಮಾನವನಿಗೆ. ಎಲ್ಲಾ ಕಲಬೆರೆಕೆಯ ಜೀವನದಲ್ಲಿ ಶುದ್ದವಾಗಿರೋದು ಯಾರು?

ಹೊರಗೆ ತಳುಕುಬಳುಕು ಒಳಗೆ ಹುಳುಕು.

ಪರಮಾತ್ಮನೊಬ್ಬನೆ ಶುದ್ದ ಆದ್ದರಿಂದ ಶುದ್ದ ಸತ್ಯ ಧರ್ಮ ಆಚಾರ ವಿಚಾರ ಪ್ರಚಾರ ಶಿಕ್ಷಣದ ಕಡೆಗೆ ನಡೆಯೋದೆ ಯೋಗ ಮಾರ್ಗ. ಹೊರಗೆ ನಡೆದು  ತಿಂದಷ್ಟೂ ರೋಗ. 
ಏನೇ  ತಿಂದರೂ ಪರಮಾತ್ಮನ ಪ್ರಸಾದ ಎನ್ನುವ ಭಕ್ತರು ಇದ್ದರೆ  ಪರಮಾತ್ಮನ ರಕ್ಷಣೆ ಇರುವುದಂತೆ ಹಾಗಾಗಿ ಹೊರಗಿನ  ಪ್ರಸಾದಕ್ಕಾಗಿ ಕಾದು ನಿಲ್ಲುವರು.  ಪಾಪಕ್ಕೆ ತಕ್ಕಂತೆ ಫಲವಿರುತ್ತದೆ.ಪ್ರಸಾದವೇ ಭ್ರಷ್ಟರ ವಶವಾದರೆ  ಗೋವಿಂದನೇ ಗತಿ.

ಸಾಕಾರದಿಂದ ನಿರಾಕಾರದೆಡೆಗೆ ನಡೆದ  ಧರ್ಮ ಇಂದು ಸರ್ಕಾರದ ಹಿಂದೆ ನಡೆದಿದೆ ಎಂದರೆ  ದಾರಿತಪ್ಪಿದೆಯೆ?

ಸ್ವಚ್ಚ ಭಾರತಕ್ಕೆ  ಸ್ವಚ್ಚ ಜ್ಞಾನದ ಶಿಕ್ಷಣ ಕೊಡದೆ ಉಚಿತವಾಗಿ ತಿನ್ನಿಸಿದರೆ  ದೇವರು ಕಾಣೋದಿಲ್ಲ. ಅತೃಪ್ತ ಆತ್ಮಗಳೇ ಕಾಣೋದು.

ಆಹಾರವಿಲ್ಲದೆ ತಪಶ್ಯಕ್ತಿಯಿಂದ ಸಾವಿರ ವರ್ಷ ಬದುಕಿದ ತಪಸ್ವಿಗಳ  ದೇಶದಲ್ಲಿ  ತಾಮಸಗುಣದವರು  ಬೆಳೆಯಲು ಕಾರಣವೇ ಅಜ್ಞಾನ. ಪರಮಾತ್ಮನಿಗೆ ತಲುಪದ ಕರ್ಮ ವೇ ಅಕರ್ಮ, ವಿನಯವನ್ನು ಬೆಳೆಸದ ವಿದ್ಯೆಯೇ ಅವಿದ್ಯೆ.
ಸತ್ಯವನ್ನು ತಿಳಿಸದ  ತಿಳುವಳಿಕೆಯೇ ಅಜ್ಞಾನ.

ಹಿಂದೆ  ಅವರವರ ಜನ್ಮದ‌ಮೂಲ ಧರ್ಮ/ ಕರ್ಮಕ್ಕೆ‌ತಕ್ಕಂತೆ ಜೀವನ ನಡೆಸುತ್ತಾ ಸಮಾಜದ ಒಂದು ಹಿತದೃಷ್ಟಿಯಿಂದ ಸಂಸಾರದಲ್ಲಿ ಒಗ್ಗಟ್ಟು ಇತ್ತು. ಈಗಿದು ವಿರುದ್ದವಾಗಿದ್ದು ಹೊರಗಿನವರ ಜೊತೆಗೆ ಬೆರೆತು ಒಳಗಿನವರನ್ನೇ‌ಮರೆತು  ಅಂತರ ಬೆಳೆಸಿಕೊಂಡರೆ  ಜೀವನಕ್ಕೆ ಅರ್ಥ ವಿರದು ಜೀವಕ್ಕೆ ಶಾಂತಿ ಸಿಗದು. ಇದೇ ಎಲ್ಲಾ ಅನರ್ಥಗಳಿಗೆ ಅವಾಂತರಕ್ಕೆ ಕಾರಣ.

Sunday, September 22, 2024

ಜ್ಞಾನ ಬೇರೆ ವಿದ್ಯೆ‌ಬೇರೆಯೆ?

ನಾವು ಈವರೆಗೆ ಕಲಿತಿರೋದು ಜ್ಞಾನವಲ್ಲ ವಿದ್ಯೆ ಎಂದರೆ ಅರ್ಥ ವಾಗದು.
ಇಲ್ಲಿ ಜ್ಞಾನ ಆಂತರಿಕ ವಾಗಿರುವ ಶಕ್ತಿ ವಿದ್ಯೆ ಹೊರಗಿನ ಶಕ್ತಿ. ಅದನ್ನು ಯಾರು ಸದ್ಬಳಕೆ ಮಾಡಿಕೊಂಡು ಜೀವನದ ಸತ್ಯ ತಿಳಿದು ನಡೆಯುವರೋ ಅವರು ಜ್ಞಾನಿಗಳು ಎಂದರ್ಥ.
  ಜ್ಞಾನ ಎಂದರೆ ತಿಳುವಳಿಕೆ ವಿಜ್ಞಾನ ವಿಶೇಷವಾದ ತಿಳುವಳಿಕೆ.ಇದರಲ್ಲಿ ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ಒಂದೇ ನಾಣ್ಯದ ಎರಡು ಮುಖ. ಮಾನವನಲ್ಲಿ ಸಾಮಾನ್ಯ ಜ್ಞಾನ ಅಡಗಿದೆ. ಇತಿಮಿತಿಯಲ್ಲಿ ಜ್ಞಾನ ವಿಜ್ಞಾನವನರಿತವರು ಜೀವನದಲ್ಲಿ ಸಾಧನೆ ಮಾಡಿರುವರು. ಅಂದರೆ ಎರಡೂ ಸಮಾನವಾಗಿ ಬಳಸುವಾಗ  ಸ್ಥಿತಪ್ರಜ್ಞಾವಂತರಾಗಿರಬೇಕು.
ಅತಿಯಾಗಿ ತಿಂದರೂ ಕಷ್ಟ ತಿನ್ನದೆ ಬಿಟ್ಟರೂ ಕಷ್ಟ. ಹಾಗೆ ಹಸಿದವನಿಗೆ ಅನ್ನದಾನ ಮಾಡಿದರೆ ಪುಣ್ಯ ಹೊಟ್ಟೆ ತುಂಬಿದವನಿಗೆ ಅತಿಥಿಸತ್ಕಾರವೂ  ಪಾಪವಾಗಬಹುದು.
ಅತಿಯಾದ ಬಡತನ ಅತಿಯಾದ ಸಿರಿತನ ಮಾನವನಿಗೆ ಶಾಪವಾಗುತ್ತದೆಂದರ್ಥ.
ವಾಸ್ತವದಲ್ಲಿ ನಾವೆಲ್ಲರೂ ಪುರಾಣ ಇತಿಹಾಸ ಶಾಸ್ತ್ರ ಕಥೆಗಳನ್ನು ತಿಳಿದು  ವಿದ್ಯಾವಂತರೆನಿಸಿದ್ದರೂ  ನಮ್ಮ ಈಸ್ಥಿತಿಗೇ  ಏನು ಕಾರಣವೆನ್ನುವ ಸತ್ಯದ ಅರಿವಿಲ್ಲವಾದರೆ ನಾವು ಜ್ಞಾನಿಗಳಲ್ಲ. ನಮ್ಮ ಸಮಸ್ಯೆಯ ಮೂಲವೇ ಅಜ್ಞಾನದ ನಡೆನುಡಿಯ  ಕರ್ಮ ವಾಗಿದೆ. ಆ ಕರ್ಮ ವೇ ಹಿಂದಿರುಗಿ ಬಂದು ಫಲ ನೀಡುತ್ತಿದೆ. ಹಣವಿದ್ದರೂ ಸಾಲದ ಹೊರೆ ಎಂದಾಗ ಯಾವುದಕ್ಕಾಗಿ ಸಾಲ ಮಾಡಿದ್ದೆವು? 
ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ. ರೂ ಕಟ್ಟುವರೆಂದರೆ ಆ ಶಿಕ್ಷಣದಲ್ಲಿ ಜ್ಞಾನವಿತ್ತೆ? ಅದೇ ಮುಂದೆ ಮಕ್ಕಳ ತಲೆಯ ಮೇಲಿನ ಸಾಲವಾಗಬಾರದೆಂದರೆ ಶಿಕ್ಷಣದವಿಷಯದಲ್ಲಿ ಸತ್ಯ ಜ್ಞಾನವಿರಲಿ. ಆಗ ಸಾಲದ ಅರ್ಥ ಋಣ ತೀರಿಸುವ ಜ್ಞಾನ ಬರುತ್ತದೆ.
ದೇಶದ ಒಳಗಿದ್ದು  ದೇಶ ಬೇರೆ  ನಾನೇ ಬೇರೆ ದೇವರು ಬೇರೆ ನಾನೇ ದೇವರು ಎಂದರೆ  ಸತ್ಯವಿರದು.
ನನ್ನೊಳಗೆ ದೇವಶಕ್ತಿ ಇದ್ದರೂ ದೈವೀಕ ಗುಣಜ್ಞಾನದಿಂದ ಬೆಳೆಯದಿದ್ದರೆ  ದೇವರನ್ನು ನಂಬಲಾಗದು. ಇದಕ್ಕಾಗಿ ನಮ್ಮ ಶಿಕ್ಷಣದಲ್ಲಿಯೇ  ಸತ್ವಯುತ ವಿಷಯ ಗಳನ್ನು ತಿಳಿಸಿದರೆ ಮಕ್ಕಳು ಮಹಾತ್ಮರಾಗಿ  ಋಣಮುಕ್ತರಾಗಬಹುದು.
ಕಷ್ಟ ವಿದೆ. ಹಾಗಂತ ಅಸಾಧ್ಯವಲ್ಲ.ನಮ್ಮ ಹಿಂದಿನ ಮಹಾತ್ಮರುಗಳೆ ಇದಕ್ಕೆ ಸಾಕ್ಷಿ.
ದೇವರಾಗದಿದ್ದರೂ ಸರಿ ಅಸುರರ ವಶವಾಗದಿದ್ದರೆ ಉತ್ತಮ.
ಎಲ್ಲಿ ಸತ್ವ ಸತ್ಯ ತತ್ವ ಜ್ಞಾನವಿರುವುದೋ ಅಲ್ಲಿ ದೇವರಿರುವರು.ಶಾಂತಿಯಿರುವುದು. ಶಾಂತಿಯಿಂದ ಆತ್ಮಜ್ಞಾನ ಪ್ರಾಪ್ತಿ. ಆತ್ಮಜ್ಞಾನದ ನಂತರವೆ ಆತ್ಮಕ್ಕೆ ತೃಪ್ತಿ ಮುಕ್ತಿ ಇದು ಅಧ್ಯಾತ್ಮ ಸತ್ಯ.
ಭೌತಿಕದಲ್ಲಿ ಇದನ್ನು ಕಾಣಲಾಗದು. ಹಾಗಂತ ಭೌತವಿಜ್ಞಾನದಿಂದ ಮಾನವ ದೂರವಾಗಿರೋದು ಕಷ್ಟ.
ಜ್ಞಾನವಿಜ್ಞಾನವು ಒಂದೇ ನಾಣ್ಯದ ಎರಡು ಮುಖ. ಒಂದು ಬಿಟ್ಟರೆ ಇನ್ನೊಂದು ಮುಂದೆ ನಡೆಯುತ್ತದೆ. ಎರಡನ್ನೂ ಸದ್ಬಳಕೆ ಮಾಡಿಕೊಂಡು ನಡೆದರೆ ಸ್ಥಿತಪ್ರಜ್ಞಾವಂತ
ಆಗಬಹುದು.ಅಂದರೆ ನಮ್ಮ ಸ್ಥಿತಿಗೆ ‌ನಾನೇ ಕಾರಣವೆನ್ನುವ ಸತ್ಯ ತಿಳಿದು ನನ್ನನ್ನು ನಾನರಿತು ನಡೆಯಬಹುದು. ಇದು ರಾಜಯೋಗದ ವಿಚಾರ.
ಇಂದು ಭೋಗದ ರಾಜಕೀಯವನ್ನು ಎತ್ತಿ ಹಿಡಿದು ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿರುವವರ ಹಿಂದೆ ನಡೆದವರು ಸಾಲದ ಸುಳಿಯಲ್ಲಿ ಸಿಲುಕಿ ಸಾಲ ತೀರಿಸಲು ಯಾವ ಕೆಲಸವಾದರೂ ಸರಿ ಯಾವ ದೇಶವಾದರೂ ಸರಿ ಎನ್ನುವ ಮಟ್ಟಿಗೆ ಪರಿಸ್ಥಿತಿ ಇದೆ. ಆದರೆ,ಒಳಜಗತ್ತಿನ ಸಾಲ ತೀರಿಸಲು ಸದ್ವಿದ್ಯೆಯಿಂದ ಸುಜ್ಞಾನದಿಂದ ಮಾತ್ರ ಸಾಧ್ಯ ಎನ್ನುವಾಗ ಅದನ್ನು ಶಿಕ್ಷಣದಿಂದಲೇ ಕೊಡುವುದು ಧರ್ಮ.
ಇದಕ್ಕೆ ವಿರೋಧಿಸುವ ಪೋಷಕರಿರುವವರೆಗೂ ವಿದ್ಯೆ ಅವಿದ್ಯೆಯಾಗೇ ಇರುತ್ತದೆ.

ಶಿಕ್ಷಕರಾಗಲಿ ಗುರುವಾಗಲಿ‌ ನಿಸ್ವಾರ್ಥ, ನಿರಹಂಕಾರ ,ಪ್ರತಿಫಲಾಪೇಕ್ಷೆ ಯಿಲ್ಲದ ಸೇವೆ ಮಾಡುವ‌ ಪರಮಾತ್ಮನ ದಾಸರು. ಹಾಗಾಗಿ ಗುರುವನ್ನು ದೇವರೆಂದರು.  ಇವರಲ್ಲಿ ಸ್ವಾರ್ಥ ಅಹಂಕಾರವಿರದಿರಲು ಕಾರಣವೇ ತತ್ವಜ್ಞಾನ. ಎಲ್ಲರಲ್ಲೂ ಆ ಪರಾಶಕ್ತಿ ಪರಮಾತ್ಮಶಕ್ತಿ  ಕಾಣೋದಕ್ಕೆ ಕಷ್ಟಪಟ್ಟು ಅಧ್ಯಾತ್ಮ ಸಾಧನೆ ಮಾಡಿದವರು ಗುರುವಾಗಬಹುದು. 
ಒಳಗಿರುವ ಅರಿವೇ ಗುರುವಾದಾಗ ದೇಹವೇ ದೇಗುಲ ಆಗುತ್ತದೆ. ಎಲ್ಲಿ ಹೋದರೂ  ದೇವರಿರುವರು. ನಿರಾಕಾರ ಬ್ರಹ್ಮನ್  ಕಡೆಗೆ ನಡೆಸೋ ಗುರುವೇ ನಿಜವಾದ ಜ್ಞಾನಿ ವಿಜ್ಞಾನಿ  ಎಂದಿರುವರು. ಯಾರಿಗೆ ಗೊತ್ತು ನಮ್ಮೊಳಗೆ  ದೇವರಿರುವರೋ ಅಸುರರೋ?
ಗುಣಜ್ಞಾನದಿಂದಲೇ ಜೀವನ ನಡೆದಿರೋದು. ವ್ಯಕ್ತಿಗಿಂತ ವ್ಯಕ್ತಿತ್ವ ಶ್ರೇಷ್ಠ. ಹಾಗೆ ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆನ್ನುವರು.
ಇತರರ ಒಳಿತಿಗಾಗಿ ಬದುಕೋದು ದೇವರು
ತನ್ನ ಜೊತೆಗೆ ತನ್ನವರ ಒಳಿತನ್ನು ಬಯಸೋದು ಮಾನವ
ಕೇವಲ ತನ್ನ ಸ್ವಾರ್ಥ ಅಹಂಕಾರಕ್ಕೆ ಇತರರನ್ನು ಬಲಿಕೊಡೋದೆ  ಅಸುರ ಬುದ್ದಿ..ಎಷ್ಟು ವರ್ಷ ಬದುಕಿದರೂ ಸೂಕ್ಮ.  ಜ್ಞಾನವಿಲ್ಲವಾದರೆ ಅತಂತ್ರಸ್ಥಿತಿಯೇ ಗತಿ.
ವಿದ್ಯಾವಂತರೆಲ್ಲ ಜ್ಞಾನಿಗಳಾಗಿಲ್ಲ.ಜ್ಞಾನಿಗಳಾದವರೆಲ್ಲರೂ ವಿದ್ಯೆ  ಕಲಿತಿರಲಿಲ್ಲ. ಆದರೆ ಈಗ  ಎಲ್ಲಾ ಮಿಶ್ರ.

ಅದ್ವೈತ ದ ಆಳ ಅಗಲ ಅಳೆಯಲಾಗದು.ಅರ್ಥ ವಾಗಬಹುದು

ಇದು ಅದ್ವೈತ. ಆಳವಾದ ಅರಿವು ಎಂದರೆ ನಾನು ಹೋಗಿ ನೀನೇ ಎನ್ನುವ ಶರಣಾಗತಿಯಲ್ಲಿ ಜೀವಿಸೋದಾಗಿತ್ತು. ವಾಸ್ತವದಲ್ಲಿ ನಾವು ಬದುಕಿದ್ದೇವೆಯೇ ಸತ್ತಿರುವೆವೆ ಎನ್ನುವ ಪ್ರಶ್ನೆಗೆ ಉತ್ತರ ಒಳಗಿದೆ.ಹೊರಗಿನಿಂದ ಬದುಕಿದಂತೆ ಕಂಡರೂ ಒಳಗಿನ‌ಮನಸ್ದು ಸತ್ತಂತಿರುತ್ತದೆ.ಎಲ್ಲಾ ಸತ್ಯ ತಿಳಿದರೂ ತಿಳಿಸೋಹಾಗಿಲ್ಲ.ತಿಳಿಸಿದರೂ  ಅರ್ಥ ವಾಗಲ್ಲ ಎನ್ನುವವರ ಜೊತೆಗೆ ಸತ್ಸಂಗ  ನಡೆಸಿದರೂ ಸತ್ಯವಿಲ್ಲದೆ ನಾನೇ ಮಾಡುತ್ತಿರೋದು ನಾನೇ ಹೇಳುತ್ತಿರೋದು ನಾನೇ ಎಲ್ಲಾ ಎನ್ನುವವರ ಜೊತೆಗೆ  ನಾನಿರುವಾಗ ನಾನೆಂಬುದಿಲ್ಲ ಎನ್ನುವ ಅದ್ವೈತ ಭಾವನೆ ಇರೋದಿಲ್ಲ.ಹಾಗಾಗಿ ಭೂಮಿ ನಡೆದಿರೋದು ದ್ವೈತದಲ್ಲಿ .ಈ ದ್ವೈತ ಹೊರಗೆ ಬಂದಷ್ಟೂ ಭಿನ್ನವೆ  ಒಂದಾಗೋದು‌ಕಷ್ಟ.ಇದು ಎಲ್ಲಾ ಯುಗಯುಗದ ಕಥೆಯಾಗಿರುವಾಗ ಕಲಿಯುಗದಲ್ಲಿ ಇದನ್ನು ವಿರೋಧಿಸಿದರೆ ಅದ್ವೈತವಾಗದು.ಒಟ್ಟಿನಲ್ಲಿ ಒಂದನ್ನೊಂದು ಸೇರಿದರೆ‌ ಒಗ್ಗಟ್ಟು  ಇಲ್ಲವಾದರೆ ಬಿಕ್ಕಟ್ಟು.

ಭಾರತೀಯರ ಒಂದು ಸಮಸ್ಯೆ ಮೂಲ ಜ್ಞಾನವನ್ನು ಮರೆತು ಹೊರಗೆ ಬಂದು ರಾಜಕೀಯ ನಡೆಸಿರೋದು.ಎಷ್ಟೋ ರಾಜಾಧಿರಾಜರು ದೇಶ ಆಳಿದ್ದರೂ ಅವರ ಶ್ರೇಷ್ಠ ಜ್ಞಾನ ಅರಿಯದೆ ಕೇವಲ ಅವರನ್ನು ಪ್ರತಿಮೆಯ ರೂಪದಲ್ಲಿ ಕೂರಿಸಿ  ಜನರನ್ನು ಆಳಿರೋದು. ಇಂದಿಗೂ ಒಳಗೆ ಹುಳುಕು ಹೊರಗೆ ತಳುಕು ಬಳುಕಿನ ಜೀವನವೇ ಜನಸಾಮಾನ್ಯರ ಸಾಮಾನ್ಯಜ್ಞಾನವನ್ನು ನಿರ್ಲಕ್ಷ್ಯ ಮಾಡಿದೆ .ಪ್ರಜಾಪ್ರಭುತ್ವ ವ್ಯವಸ್ಥೆಯ ಅವಸ್ಥೆ ಗೆ  ಈ ನಾನೇ ಎನ್ನುವ ಅಹಂಕಾರ ಕಾರಣವೆಂದಾಗ ನಾನು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದಿರುವ ದಾಸರ ಯೋಗ ಅರ್ಥ ವಾಗದು.
 
ಜನಸಾಮಾನ್ಯರ ಸಹಕಾರವಿಲ್ಲದೆ ನಾನು ಬೆಳೆದಿಲ್ಲವೆಂದರೆ ಇದಕ್ಕೆ ಕಾರಣವೇ ಜನಸಾಮಾನ್ಯರ ಅಜ್ಞಾನದ ಸಹಕಾರ.
ಅಜ್ಞಾನಕ್ಕೆ ಕಾರಣವೇ ಶಿಕ್ಷಣದ ವಿಷಯ. ಶಿಕ್ಷಣದಿಂದ ಹಣಗಳಿಸಿದ್ದರೂ  ಹಣದ ದುರ್ಭಳಕೆ ಮಾಡುವ ಅಜ್ಞಾನ ಹೋಗದೆ  ಒಳಗಿನ ಜ್ಞಾನ  ಸಿಗದು.
ಎಷ್ಟೋ ಮಹಾತ್ಮರುಗಳ ಸಂದೇಶ ಹಿಡಿದು ಜನರನ್ನು ಮನೆಯಿಂದ ಹೊರಗೆಳೆದು ಹಣ ಅಧಿಕಾರ ಸ್ಥಾನಮಾನ ಗಳಿಸಿ ಕೊನೆಗೆ ಜನರನ್ನೇ ಸೇವಕರಂತೆ ಕಾಣುವ ಅಸುರ ಶಕ್ತಿ ಗಮನಿಸುವ ಬುದ್ದಿವಂತಿಕೆ ಇದ್ದರೆ  ಗಂಜಿಅನ್ನ ತಿಂದಾದರೂ ಅಂಜಿಕೆಯಿಲ್ಲದೆ ಜೀವನ ನಡೆಸಬಹುದು.
ಇದು ಸಾಧ್ಯವಾಗಬೇಕಾದರೆ ಮೊದಲು ಮನೆಯೊಳಗೆ ತನ್ನ ಅನ್ನ ತಾನೇ ಬೇಯಿಸಿಕೊಂಡು ತಿನ್ನುವ ಸ್ವಾಭಿಮಾನ ಅಗತ್ಯ.
ಸಂಸಾರಕ್ಕೆ ಬಂದ ಮೇಲೆ ಸಂಸಾರದ ಜವಾಬ್ದಾರಿ ಹೊತ್ತು ನಡೆಯೋದು ಧರ್ಮ .ಅದನ್ನು ಏನೇ ಸಾಧನೆ ಮಾಡಿದಂತೆ ಹೇಳಿದರೆ  ನಡೆಸೋ ಶಕ್ತಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದರ್ಥ.
ಒಟ್ಟಿನಲ್ಲಿ ಭೂಮಿಯ ಆಸರೆ ಸಹಕಾರ ಸಹಾಯವಿಲ್ಲದೆ ಯಾವ ಜೀವಿಯೂ ಇಲ್ಲಿ ಬದುಕಲಾಗದು.ಹೀಗಾಗಿ ಭೂ ಋಣ ತೀರಿಸಲು ಪರಮಾತ್ಮನ ಸೇವೆ ನಿಸ್ವಾರ್ಥ ನಿರಹಂಕಾರ ದಲ್ಲಿ ಸ್ವತಂತ್ರ ಜ್ಞಾನದಿಂದ ಸತ್ಯ ಧರ್ಮ ದಿಂದ ನಡೆದವರಿಗಷ್ಟೆ  ನಾನೆಂಬುದಿಲ್ಲ ಎನ್ನುವ ಅದ್ವೈತ ಸತ್ಯದ ಅರಿವಿಗೆ ಬಂದಿದೆ.ಹಾಗಂತ ಇದು ಎಲ್ಲರಿಗೂ ಬರೋದಿಲ್ಲ.ಬಂದರೆ ಸಂಸಾರವೇ ಇರೋದಿಲ್ಲ.ಎಲ್ಲಾ ಸಂನ್ಯಾಸಿಗಳಾಗಲು ಸಾಧ್ಯವೆ?
ಆದರೆ ಸಂನ್ಯಾಸಿಯ ವೇಷಧರಿಸಿ ಅಧರ್ಮ ಅನ್ಯಾಯ ಅಸತ್ಯದ ರಾಜಕೀಯದೆಡೆಗೆ ಹೊರಟರೆ  ಭ್ರಷ್ಟಾಚಾರ.
ಕಾಲ ಸರಿಯಿಲ್ಲ  ಕಾಲು ಸರಿಯಿಲ್ಲ ಹಾಗಾದರೆ ತಲೆ ಸರಿಯಿದೆಯೆ? ತಲೆಗೆ ತುಂಬಿರುವ ವಿಷಯದಲ್ಲಿ ವಿಷ ಇದ್ದರೆ ದ ಅಮೃತಜ್ಞಾನ  ಹಿಂದುಳಿಯುವುದು ಸಹಜ.
ಈಗಲೂ ಕಾಲಮಿಂಚಿಲ್ಲ.ಸತ್ಯ ಎಲ್ಲಿಂದಲಾದರೂ ಯಾವ ರೂಪದಲ್ಲಾದರೂ ಹರಿದು ಬರುತ್ತಿರುವುದು.ಆದರೆ ನಾವು ನಮ್ಮ ಸ್ವಾರ್ಥ ಚಿಂತನೆಯಿಂದ  ಹೊರಬರದೆ ಅದರೊಳಗೇ ಇದ್ದು ನನಗೇನು ಲಾಭ ಎಂದರೆ ನಷ್ಟ ಕಟ್ಟಿಟ್ಟ ಬುತ್ತಿ.
ಒಂದು ಮಗು ಜ್ಞಾನದೆಡೆಗೆ ನಡೆದರೂ ಭವಿಷ್ಯ ಉತ್ತಮ.
ಅದೇ ಮಗು ಅಜ್ಞಾನದೆಡೆಗೆ ನಡೆದಷ್ಟೂ ಭವಿಷ್ಯ ಅಧಮ.
ಅಸುರರೊಳಗೇ ಸುರ ಅಡಗಿದ್ದರೂ ಆ ಶಕ್ತಿಯನ್ನು ಗುರುತಿಸುವ ಶಿಕ್ಷಣ ಕೊಡದಿದ್ದರೆ ಅಸುರರೆ ಸುರರನ್ನು ಆಳೋದು.
ಮೇಲಿರುವ  ಆ ಭಗವಂತನಿಗೇನೂ ನಷ್ಟವಿಲ್ಲ ಕಾರಣ ಇಲ್ಲಿ ಜೀವಾತ್ಮರ ಸಾಮ್ರಾಜ್ಯ ವಿದ್ದರೂ ಅದರೊಳಗಿರುವ ಧರ್ಮ ಕರ್ಮದ ಫಲ ಅದೇ ಜೀವವೇ ಅನುಭವಿಸಲೇಬೇಕೆಂಬ ವಿಧಿ‌ನಿಯಮವನ್ನು ಸ್ವಯಂ ಅವತಾರ ಪುರುಷರೆ ತಡೆಯಲಾಗಿಲ್ಲವೆಂದರೆ  ಇದರ‌ಮೂಲ ಒಳಗಿರುವ ಧರ್ಮ ಕರ್ಮಕ್ಕೆ ಅಂಟಿಕೊಂಡಿದೆ ಎಂದರ್ಥ.
ಭಾರತ ಸ್ವಾತಂತ್ರ್ಯ ಗಳಿಸಿ ಇಷ್ಟು ವರ್ಷ ಕಳೆದರೂ ನಮ್ಮನ್ನು ಆಳುತ್ತಿರುವುದು ಪರಕೀಯರೆ ಎನ್ನುವ ಸತ್ಯ ಇಂದಿಗೂ ಹಸಿರಾಗಿದೆ.ಕಣ್ಣಿಗೆ ಕಾಣುತ್ತಿಲ್ಲವಷ್ಟೆ.
ವಿದೇಶಿ ಕಂಪನಿಗಳ ಸಾಮ್ರಾಜ್ಯವನ್ನು ಸ್ವತಃ ರಾಜಕಾರಣಿಗಳೆ ಸ್ವಾಗತಿಸಿರುವಾಗ ಆಳುವವರ ಅಜ್ಞಾನವನ್ನು ಎತ್ತಿ ಏರಿಸಿರುವ ಪ್ರಜಾಪ್ರಭುತ್ವ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಪ್ರಜೆಗಳ  ಅಜ್ಞಾನಕ್ಕೆ ಸರಿಯಾದ ಹಣಸಂಪಾದನೆ. ಹಣದ ದುರ್ಭಳಕೆ ಯಾದಷ್ಟೂ ಸಾಲದ ಹೊರೆ. ಸಾಲ ಬೆಳೆದಷ್ಟೂ ತೀರಿಸಲು ಅಡ್ಡದಾರಿಹಿಡಿಯೋದು ಸಹಜ. ಅಡ್ಡ ದಾರಿ ಹಿಡಿದ‌ಮೇಲೆ ಸೀದಾ ಬರೋದು ಬಹಳ‌ಕಷ್ಟ.ಕಷ್ಟಪಡದೆ ಸುಖ  ಅನುಭವಿಸಿದವರಿಗಂತೂ ಸತ್ಯ ಅರ್ಥ ವಾಗದು.
ಹೀಗೇ ಒಂದನ್ನೊಂದು ಸೇರಿಕೊಂಡು ಮೇಲ್ಮಟ್ಟಕ್ಕೆ ಏರಿ ಒಮ್ಮೆ ಕೆಳಗೆ ಬಿದ್ದು ಹೋಗುವ ಜೀವಕ್ಕೆ  ಬೆಲೆಯಿಲ್ಲ. ಸತ್ತ ಹೆಣಕ್ಕೆ ಬೆಲೆಕೊಟ್ಟು ಖರೀದಿಸುವಷ್ಟು  ಸತ್ಯಕ್ಕೆ ಬೆಲೆಕೊಡದ ಅಸುರ ಗುಣ  ದೈವತ್ವದೆಡೆಗೆ ಹೋಗೋದು ಕಷ್ಟ.ಇದಕ್ಕೆ ಕಾರಣ ಅಹಂಕಾರ ಸ್ವಾರ್ಥ ದ ಜೀವನ ಎನ್ನುವ ಕಾರಣದಿಂದ  ಮಹಾತ್ಮರುಗಳು ಅಹಂ‌ಬ್ರಹ್ಮಾಸ್ಮಿ ಎಂದರು.
ನಾನು ಬ್ರಹ್ಮನ ಒಂದು ಅಂಶವಾದ್ದರಿಂದ ನನ್ನೊಳಗೆ ಬ್ರಹ್ಮನಿರೋವಂತೆ ನಾನು ಬ್ರಹ್ಮನಾಗಬಹುದು. 
ಮೂಲ ಬ್ರಹ್ಮನಾಗೋದು ಅಸಾಧ್ಯ. ಹೇಗೆ ವಿಷ್ಣುವಿನವತಾರ ನಡೆದಿದೆಯೋ ಹಾಗೆಯೇ ದೇವಾನುದೇವತೆಗಳ ಅವತಾರವಾಗಿದೆ.ಅದರಲ್ಲಿ ಸ್ತ್ರೀ ಶಕ್ತಿಯೂ ಅಡಗಿರುವಾಗ ಅವಳನ್ನು ನಿರ್ಲಕ್ಷ್ಯ ಮಾಡಿದಷ್ಟೂ ಭೂಮಿಯ ಸತ್ಯ ಸತ್ವ ತತ್ವ ಕುಸಿಯುತ್ತದೆ.
ಇದನ್ನರಿತವರು  ವಿರಳ.ಒಟ್ಟಿನಲ್ಲಿ ಭೂಮಿಯಲ್ಲಿ ನಾನಿದ್ದೇನೆ .ಆ ನಾನು ಹೋದ ಮೇಲೆ ಭೂಮಿಯಿಂದ ಮುಕ್ತಿ. ಹಾಗಾದರೆ ಭೂಮಿ ಮೇಲಿರುವಾಗಲೇ ನಾನೆಂಬ ಅಹಂಕಾರ ತೊಲಗಿದವರು ಮಹಾತ್ಮರಾಗಿರುವರಲ್ಲವೆ?
ಅವರ ತತ್ವಜ್ಞಾನದಿಂದ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆ ಬೆಳೆದಿದೆಯೆ? ಇಲ್ಲವೆಂದರೆ ಪ್ರಚಾರ ಮಾಡಿದವರಲ್ಲಿ ನಾನೆಂಬ ಅಹಂಕಾರ ವಿತ್ತು. ಒಬ್ಬ ಗುರು ಅಥವಾ ಶಿಕ್ಷಕನಾಗಲು ಅಹಂಕಾರ ಸ್ವಾರ್ಥ ವಿರಬಾರದು.ಇಲ್ಲಿ ಅಧ್ಯಾತ್ಮ ಸತ್ಯ ಭೌತಿಕ ಸತ್ಯದ ನಡುವಿನ ಅಂತರದಿಂದ  ದ ಸಮಸ್ಯೆ ಮಧ್ಯೆ ಬೆಳೆದಿದೆ. ನಾನೂ ಇದ್ದರೂ ಪರಮಾತ್ಮ ನಿಲ್ಲದೆ ನಾನಿಲ್ಲವೆಂದಾಗ ಪರಮಸತ್ಯ ಪರಮಶಕ್ತಿ  ನನ್ನ ಒಳಗೇ ಬೆಳೆಸುವ ಶಿಕ್ಷಣ ನಾನೂ ಪಡೆದು ಎಲ್ಲರಿಗೂ ಕೊಡುವವರೆ ನಿಜವಾದ ಗುರು ಅಥವಾ ಶಿಕ್ಷಕ. ನಾನ್ಯಾರು ಎನ್ನುವ ಪ್ರಶ್ನೆ ಒಳಗಿನಿಂದ ಜನ್ಮ ಪಡೆದಾಗಲೇ  ಅದ್ವೈತ ದರ್ಶನ. ಶ್ರೀ ಶಂಕರಾಚಾರ್ಯರು ಶ್ರೀ ಮಧ್ವಾಚಾರ್ಯರು ಶ್ರೀ ರಾಮಾನುಜಾಚಾರ್ಯರು ಇಂದಿಗೂ ಸ್ಮರಣೀಯರು.
ಅವರು ಕಾಲಮಾನವನರಿತು ಜನರನ್ನು ಒಂದು ಮಾಡುವ ತತ್ವಜ್ಞಾನಕ್ಕೆ ಒತ್ತುಕೊಟ್ಟು ಧರ್ಮ ಸೂಕ್ಮದ ಕಡೆಗೆ ನಡೆಸಿದ ಸ್ವಯಂ ಭಗವಂತನ ಅವತಾರಿಗಳು ಗುರುಗಳು. ಆದರೆ ಇಂದು ಇದರಲ್ಲಿ ತಂತ್ರವೇ ಹೆಚ್ಚಾಗಿ ಕಂಡಾಗ ಜನರಲ್ಲಿ ಸತ್ಯ ಹಿಂದುಳಿಯುವುದು ಸಹಜ. ದೈವತ್ವದೆಡೆಗೆ ನಡೆಯಲು ತತ್ವ ಅಗತ್ಯ.ಹಿಂದಿನವರಷ್ಟು ನಮ್ಮಲ್ಲಿ ಜ್ಞಾನವಿಲ್ಲ ವಿಜ್ಞಾನವಿದೆ.ವಿಜ್ಞಾನ ಹೊರಗಿನ ಸತ್ಯವಾಗಿದೆ. ಹೊರಗಿನ ಸತ್ಯ ತಾತ್ಕಾಲಿಕ ವಾಗಿರುವ ಬದಲಾಗುವ ಕಾರಣದಿಂದ ಜೀವಕ್ಕೆ ತೃಪ್ತಿ ಸಿಗದು. ಹೀಗಾಗಿ ಜೀವಾತ್ಮ ಪರಮಾತ್ಮನ ಕಡೆಗೆ ನಡೆಯದೆ ಪರಕೀಯರ ವಶವಾಗಿ ಮುಂದೆ ನಡೆದಿದೆ.
ಹಿಂದುಳಿದವರನ್ನು ಕಡೆಗಣಿಸಿದಷ್ಟೂ ಹಿಂದೂ ಬೆಳೆಯೋದಿಲ್ಲ. ಹಿಂದಿನ ಸತ್ಯವೇ ಬೇರೆ  ವಾಸ್ತವ ಸತ್ಯವೇ ಬೇರೆ.ಹಿಂದೆ ರಾಜಯೋಗದ ಜೀವನಕ್ಕೆ ಪೂರಕ ಶಿಕ್ಷಣವಿತ್ತು.ಈಗ ರಾಜಕೀಯಕ್ಕೆ ಒತ್ತುಕೊಡುವ ಶಿಕ್ಷಣವಿದೆ.
ರಾಜಕೀಯ ಒಬ್ಬರನ್ನು ಆಳೋದು ಗುರಿ ಎಂದರೆ ರಾಜಯೋಗ ನಿನ್ನ ನೀ ಅರಿತು ನಿನ್ನ ನೀ ಆಳಿಕೊಂಡಿರೋದೆ ಗುರಿ ಎನ್ನುತ್ತದೆ.
ವಿವೇಕವನ್ನು ಅಧ್ಯಾತ್ಮ ದಿಂದರಿತು ನಡೆದರೆ ವಿವೇಕದ ಆನಂದ.
ಜ್ಞಾನವಿಜ್ಞಾನದ‌ನಡುವಿರುವ ಸಾಮಾನ್ಯ ಜ್ಞಾನದ ಸದ್ಬಳಕೆ ಆದರೆ ಮಾನವನಾಗಿ ಮಹಾತ್ಮರಾಗೋದು.ಎಲ್ಲಾ ಭೂಮಿಯ ದಾಸರೆ ಆಳೋದಕ್ಕೆ ಹೋಗಿ ಆಳಾಗಿದ್ದವರೆ. ಆದರೂ  ಅವರಲ್ಲಿದ್ದ ಯೋಗದಿಂದ ಮುಕ್ತಿಗಳಿಸಿ ಇಂದಿಗೂ ಮಹಾತ್ಮರಾಗಿರುವರು ದೇವರಾಗಿರುವರು..ದೇವನೊಬ್ಬನೆ ನಾಮ ಹಲವು ಎಂದಂತೆ  ಒಂದೇ ಸತ್ಯ ಒಂದೇ ದೇವರು ಒಂದೆ ದೇಶವನ್ನು  ಒಬ್ಬೊಬ್ಬರು ಒಂದೊಂದು ಕಡೆಗೆ ಎಳೆದರೆ  ಅದರೊಳಗೆ ಹೋರಾಟ ಹಾರಾಟ ಮಾರಾಟದ ರಾಜಕೀಯ ಬೆಳೆಯೋದು. ರಾಜಯೋಗವಲ್ಲ. ಇದನ್ನು ದುರ್ಭಳಕೆ ಮಾಡಿಕೊಳ್ಳುವ ಅಸುರಶಕ್ತಿಗೆ  ಮನರಂಜನೆಯಷ್ಟೆ. 
ಆತ್ಮವಂಚನೆಯಲ್ಲಿ ಮನರಂಜನೆಯಿದ್ದರೆ  ಧರ್ಮವಲ್ಲ.
ಎಲ್ಲಾ ನಕಾರಾತ್ಮಕ ಚಿಂತನೆ  ಎಂದರೆ  ಹಿಂದಿನ ಮಹಾತ್ಮರ ದೃಷ್ಟಿ ಕೋನವೇ ನಕಾರಾತ್ಮಕ ವಾಗಿ ಕಾಣುತ್ತದೆ.ಕಾರಣ ಅವರು ಕಣ್ಣಿಗೆ ಕಾಣದ ಸತ್ಯವನ್ನು ಬಿಚ್ಚಿಟ್ಟರು ಇದನ್ನು ವಿರೋಧಿಸಿ‌ ನಡೆದವರೆ ಅಸುರರಾದರು.ಈಗಲೂ ಇದೇ ನಮ್ಮನ್ನು ನಡೆಸಿದೆ ವಿರೋಧಿಗಳೂ ನಮ್ಮನ್ನು ಆಳುತ್ತಿವೆ ಎಂದರೆ ನಮ್ಮ ಸಹಕಾರ ಒಳಗಿಲ್ಲ ಹೊರಗಿದೆ ಎಂದರ್ಥ.
ಶ್ರೀ ಕೃಷ್ಣ ಪರಮಾತ್ಮನೆ ತಿಳಿಸಿರುವಂತೆ ನಾವೆಲ್ಲರೂ ಸತ್ತವರೆ.
ಯುಗಯುಗದಿಂದಲೂ ಇದೇ ಭೂಮಿಯಲ್ಲಿ ಜನ್ಮ ಪಡೆದು ಹೋರಾಟ ಹಾರಾಟ ಮಾರಾಟದಲ್ಲಿ ಜೀವನ‌ಕಟ್ಟಿಕೊಂಡು ಜನನ ಮರಣವನ್ನು ತಡೆಯಲಾಗದ ನಿಶ್ಯಕ್ತ ಜೀವಾತ್ಮರು‌ ನಾವೇ ಆದಾಗ ಜ್ಞಾನಸಂಪಾದನೆಯ‌ನಂತರವೇ ಜೀವಕ್ಕೆ ಮುಕ್ತಿ .ಇದಕ್ಕಾಗಿ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿತ್ತು.ರಾಜಕೀಯದ ಗುದ್ದಾಟದಲ್ಲಿ  ಪ್ರಜಾಪ್ರಭುತ್ವ ‌ತನ್ನ ಸ್ವಂತ ಜ್ಞಾನ ಬಿಟ್ಟು ಹೊರಗೆ ಬಂದರೆ  ಯಾರ ತಪ್ಪು?
ನಮ್ಮ ಅಜ್ಞಾನಕ್ಕೆ ನಮ್ಮದೇ ಸಹಕಾರವಿದ್ದಾಗ ಸರ್ಕಾರ ಏನು ಮಾಡಿದರೂ  ತಪ್ಪು ಕಾಣುತ್ತದೆ.ಅತಿಯಾದ ಪರಾವಲಂಬನೆ  ಪರಮಾತ್ಮನಿಂದ ದೂರ ಮಾಡಿಸಿದ್ದರೂ ಅವನೊಳಗೇ ಇರೋದು ಸತ್ಯ.ತಲೆಯನರಿಯದಿದ್ದರೂ ಕಾಲು ನಡೆಯದೆ ಇರದು. ಹೀಗಾಗಿ ನಮ್ಮ ಸೇವೆ ಉತ್ತಮ ಗುರುಗಳ ಸನ್ನಿದಿಯಲ್ಲಿ ನಡೆದರೂ  ಮುಕ್ತಿ ಮೋಕ್ಷದೆಡೆಗೆ ನಿಧಾನವಾಗಿ ನಡೆಯುವುದು. ಸದ್ಗುರುಗಳ  ಕೃಪೆ ಆಶೀರ್ವಾದ ಸಹಕಾರವಿಲ್ಲದೆ  ಏನೂ ನಡೆಯದು.ಇದು ಧರ್ಮ ಅಧರ್ಮ ಬೆಳೆಯಲು ಕಾರಣ. ಅಧರ್ಮದೊಳಗೇ ಧರ್ಮ, ಅಜ್ಞಾನದೊಳಗೇ ಜ್ಞಾನ,ಅಸತ್ಯದೊಳಗೆ ಸತ್ಯ,ವಿಜ್ಞಾನದೊಳಗೆ ಜ್ಞಾನ,ವಿದೇಶದೊಳಗೆ ದೇಶ ಅಡಗಿರುವಂತೆ ಅದ್ವೈತ ದೊಳಗೇ ದ್ವೈತ ವಿದೆ.ಒಳಹೊಕ್ಕು ತನ್ನ ತಾನರಿಯುವ ಪ್ರಯತ್ನಪಟ್ಟರೆ ಬಿಡುಗಡೆ ಸಾಧ್ಯವೆನ್ನುವರು. ಪ್ರಯತ್ನ ನಮ್ಮದು ಫಲ ಭಗವಂತನದು.
ಮಂತ್ರ ತಂತ್ರ ಯಂತ್ರದಿಂದ ಸ್ವತಂತ್ರ ಜ್ಞಾನ ಒಳಗೇ ಬೆಳೆಸುವ ಶಿಕ್ಷಣ ನೀಡುವ ಗುರುಪರಂಪರೆ ನಮ್ಮ ಭಾರತವನ್ನು ಆತ್ಮನಿರ್ಭರ ಭಾರತ ಆಗಿಸುತ್ತದೆ.ಆದರೆ ಕುತಂತ್ರವಿದ್ದರೆ ಆತ್ಮದುರ್ಭಲ ಭಾರತವಾಗೋದನ್ನು ತಡೆಯಲಾಗದು.
ಹೊರಗಿನ ಯುದ್ದ ಸಂಧಾನ ದಿಂದ ತಡೆಯಬಹುದು.ಆದರೆ ಒಳಗಿನ ಧರ್ಮ ಯುದ್ದ ತಡೆಯಲಾಗದು. ವ್ಯವಹಾರಿಕ  ಸಂಬಂಧ ತಾತ್ಕಾಲಿಕ ತೃಪ್ತಿ ನೀಡಿದರೂ ಸಾಲ ಖಚಿತ.
ಧಾರ್ಮಿಕ ಸಂಬಂಧ ದಿಂದ  ಋಣ ತೀರಿಸಿದರೆ ಮುಕ್ತಿ ನಿಶ್ಚಿತ.
ಸಾಧ್ಯವಾದಷ್ಟು ಧಾರ್ಮಿಕ ಗುಂಪಿಗೆ ಹಂಚಿಕೊಂಡು ದೇಶದ ಋಣ ತೀರಿಸುವ ಜ್ಞಾನ ಬೆಳೆದರೆ ಅದೇ ನಮ್ಮ ಪುಣ್ಯವಷ್ಟೆ.
ಯಾರ ಋಣ ಯಾರೋ ತೀರಿಸಲಾಗದು. ಅವರವರ ಕರ್ಮಕ್ಕೆ ತಕ್ಕಂತೆ ಫಲ ನೀಡೋ ಶಕ್ತಿ ಒಳಗೇ ಇರೋವಾಗ ಒಳಗಿನ ಸತ್ಯ ಧರ್ಮ ಬೆಳೆದರೆ ಅದ್ವೈತ. ಅದು ಹೊರಗೆ ಕಾಣೋದಿಲ್ಲ.
ದೇವರು ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಕೊಟ್ಟು ಏನೂ ಮಾಡದಿರುವ ಪರಿಸ್ಥಿತಿ ತಂದಿಡುವವನೂ ಅವನೇ ಎಂದರೆ ದೇವರನ್ನು  ಅರ್ಥ ಮಾಡಿಕೊಳ್ಳಲು ಕಷ್ಟವಿದೆ. ಸತ್ಯವೇ ದೇವರೆನ್ನುವರು ಸತ್ಯ ತಿಳಿದ ಮೇಲೆ ದೇವರೆ ಇಲ್ಲವೆನ್ನುವರು.
ಅಂದರೆ ಸತ್ಯ ಎರಡೂ ಕಡೆಯಿದೆ ಒಳಸತ್ಯ ಹೊರಸತ್ಯ.ಎರಡರ ನಡುವೆ ಇರೋರು ಮಾನವರಷ್ಟೆ. ಮಾನವನೊಳಗಿರುವ ದೇವಾಸುರರ ಶಕ್ತಿಯ ಪ್ರೇರಣೆಯಂತೆ ಜಗತ್ತು ನಡೆದಿದೆ ಇದು  ತನ್ನ ಮನಸ್ಸಿಗೆ ಸತ್ಯ ಅರ್ಥ ವಾಗದಿದ್ದರೆ ತಪ್ಪು ಮನಸ್ಥಿತಿ ಯದ್ದಾಗಿದೆ. ಸ್ಥಿತಿಗೆ ಕಾರಣ ನಾನೇ ಆದಾಗ  ನಾನು ಹೋದರೆ ಸ್ಥಿತಿ ಚೆನ್ನಾಗಿ ಇರುವುದು. ನಾನೇ ಕಾರಣವಾದಾಗ  ನಾನು ಕಾರಣಕರ್ತ ನಷ್ಟೆ ಎನ್ನುವ ಸತ್ಯದ ಅರಿವಾಗದು. 
 ಮಠದಿಂದ ಹಿಡಿದು ಎಲ್ಲಾ ಕಡೆ ಸಂಘ ಶಾಲೆ ಕಾಲೇಜ್ ಸಂಸ್ಥೆ ಸಂಘಟನೆಯೂ ದೇಶದಲ್ಲಿ  ಶಾಂತಿ ಸ್ಥಾಪನೆಗಾಗಿ  ಧಾರ್ಮಿಕ ಕೆಲಸಮಾಡಿದ್ದರೂ ಅಧರ್ಮ  ಮುಗಿಲುಮುಟ್ಟಲು ಕಾರಣ   ನಮ್ಮ ಸ್ವಾರ್ಥ ಪೂರ್ಣ ಅಹಂಕಾರದ ರಾಜಕೀಯ ಸಹಕಾರವಾದಾಗ  ನನ್ನ ಈ ಸಹಕಾರವಿಲ್ಲದೆ  ಏನೂ ನಡೆದಿಲ್ಲ ಬೆಳೆದಿಲ್ಲವೆಂದರೆ  ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದಿದೆಯೆ?
ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಅಧ್ಯಾತ್ಮ ಅಗತ್ಯವಿದೆ.ಅಧ್ಯಾತ್ಮ ಶಕ್ತಿ ಒಳಗಿದೆ. ಒಳಗಿದ್ದೇ ಹುಡುಕಿಕೊಂಡು ಆತ್ಮನಿರ್ಭರ ಭಾರತ ಮಾಡಬೇಕು.ಹೊರಗೆ ಬಂದಷ್ಟೂ ಅತಂತ್ರಭಾರತ. ಆದರೂ ಭಗವಂತನ ಮುಂದೆ ಎಲ್ಲಾ ನಗಣ್ಯ. ಜನಸಹಕಾರದಿಂದಗಣ್ಯವ್ಯಕ್ತಿಯಾಗಬಹುದು.ಜನ ಹೋದ ಮೇಲೆ ನಗಣ್ಯರೆ ಎಲ್ಲಾ.  ನಾನಿದ್ದಾಗ ದೇವರು ಕಾಣೋದಿಲ್ಲ.ನಾನು ಹೋದ ಮೇಲೆ ದೇವರಿರೋದಿಲ್ಲ ಎಂದರೆ ದೇವರು ನಿರಾಕಾರಶಕ್ತಿಯಾಗಿ ನನ್ನೊಳಗೇ ಹೊರಗೆ ಇದ್ದರೂ ನನಗೆ ಕಾಣೋದಿಲ್ಲವೆಂದರೆ ನನ್ನದೆ ದೃಷ್ಟಿ ಸರಿಯಿಲ್ಲವೆಂದರ್ಥ.  ಏನೂ ಮಾಡದಿರೋದಕ್ಕೂ ನನ್ನ ಬಿಡೋದಿಲ್ಲ.ಮಾಡಿದರೂ ನಾನು ಮಾಡಿರೋದಲ್ಲ ಇದೇ ಅಧ್ವೈತಾನುಭವದ ಸತ್ಯ.
ಇದನ್ನು ಪ್ರತಿಯೊಬ್ಬರೂ ಅನುಭವಿಸುವರು  ಆದರೆ ಒಳ್ಳೆಯದಾದರೆ ನಾನು ಮಾಡಿದ್ದು ಕೆಟ್ಟದ್ದಾದರೆ ಬೇರೆಯವರು ದೇವರು ಮಾಡಿಸಿದ್ದು ಎನ್ನುವುದು ಬಿಡೋದಿಲ್ಲ.ಅದಕ್ಕೆ ಬಿಡುಗಡೆಯಿಲ್ಲದ ಬದುಕು ನಡೆಯುತ್ತದೆ. ಬರವಣಿಗೆಯ ಹಿಂದೆ ಇರುವ ಶಕ್ತಿ ಕಾಣೋದಿಲ್ಲ‌ನಾನು ಕಾಣುತ್ತೇನೆಂದರೆ ವಿರೋಧಿಗಳೆ ಹೆಚ್ಚು.
ಇದರಿಂದಾಗಿ  ನಮ್ಮ ಕರ್ಮ ನಾವೇ ಮಾಡೋದು . ಫಲ ಭಗವಂತನೇ ಕೊಡೋದು. ಒಳ್ಳೆಯವರಿಗೆ ಕಷ್ಟ ಕೆಟ್ಟವರಿಗೆ ಸುಖ ಎಂದರೆ ಕೆಟ್ಟದ್ದಕ್ಕೆ ಸಹಕಾರಕೊಟ್ಟರೆ ಹಣಗಳಿಸಿ ಶ್ರೀಮಂತ ನಾಗಬಹುದು. ಅದೇ ಶ್ರೀಮಂತ ನನ್ನ ಆಳುವನೆಂದರೂ ನನ್ನ ಸಹಕಾರವಿದ್ದರೆ  ಕರ್ಮಕ್ಕೆ ತಕ್ಕಂತೆ ಫಲ. ಇದನ್ನು ದೇವಾನುದೇವತೆಗಳೆ ಸಾಕ್ಷಿಭೂತರಾಗಿದ್ದಾರೆ.
ಎಷ್ಟು ಅಸುರರ ಹಿಂದೆ ನಡೆದರೂ ಅಥವಾ ವಿರೋಧಿಸಿದರೂ  ಸತ್ಯ ಒಂದೇ ಇರೋದು.
ಅನ್ಯಧರ್ಮ ದವರನ್ನು ದೇವರನ್ನು ವಿರೋಧಿಸಿ ಅವರ ಕಂಪನಿ,ದೇಶ ಭಾಷೆ ಶಿಕ್ಷಣ ವ್ಯವಹಾರಕ್ಕೆ ಕೈಜೋಡಿಸಿದರೆ ದೇವರು ಮೆಚ್ಚುವನೆ? ಸತ್ಯ ಎಲ್ಲರೊಳಗೂ ಇದ್ದರೂ ಗುರುತಿಸಿ ಬೆಳೆಸುವ‌ಜ್ಞಾನದ ಶಿಕ್ಷಣವೇ ಕೊಡದಿದ್ದರೆ ಅಜ್ಞಾನ.

ಆಧ್ಯಾತ್ಮಿಕ ಚರ್ಚೆ ಭೌತಿಕ ವಾದ ಎರಡೂ ಒಂದೇ?

ಹಿಂದಿನ ಕಾಲದಲ್ಲಿ ಆಧ್ಯಾತ್ಮಿಕ ಚರ್ಚೆ ವಾದಗಳು  ಜ್ಞಾನಿಗಳ ನಡುವೆ ನೇರವಾಗಿ ನಡೆಯುತ್ತಿತ್ತು. ಇಂದು ಇದಕ್ಕೆ ಅವಕಾಶ ಕೇವಲ ಹೆಚ್ಚುಹಣ ಹೆಚ್ಚು ಓದಿದವರಿಗೆ ಹಾಗು ಅಧಿಕಾರ ಇದ್ದವರಿಗಷ್ಡೆ ಅವಕಾಶವಿರುವ‌ಕಾರಣ ಎಷ್ಟೋ ಸತ್ಯಗಳು ಸತ್ತು ಹೋಗುತ್ತಿದೆ. ಸತ್ಯ ಸಾಯೋದಿಲ್ಲವೆನ್ನುವುದೂ ಸತ್ಯ.
ಯಾವಾಗ ಅಸತ್ಯ ಮುಂದೆ ನೆಡೆಯುವುದೋ ಸತ್ಯ ಹಿಂದುಳಿಯುವುದು. ಹಿಂದುಳಿಯುವುದು ಎಂದರೆ ಒಳಗೇ ಇರುವುದೆಂದು. ಒಳಗೇ ಸತ್ಯ ಹಿಡಿದಿಟ್ಟುಕೊಂಡರೂ ಒಮ್ಮೆ ಸಾವು ಬಂದಾಗ  ಹೊರಬರಲೇಬೇಕಷ್ಟೆ.ಅದಕ್ಕೆ ಹೇಳೋದು ನಾನಿರುವಾಗ ದೇವರು ಕಾಣಲ್ಲವೆಂದು.ಸತ್ಯವೇ ದೇವರು. ಎಷ್ಟೋ ಮಹಾತ್ಮರುಗಳು ಭೂಮಿಯಲ್ಲಿದ್ದರೂ  ಸತ್ಯ ಕಾಣದು. ಸತ್ಯವೆನ್ನುವುದು ಒಂದೇ ಇರೋದರಿಂದ ಅದನ್ನು ಒಂದು  ಮಾಡೋದರ ಅಗತ್ಯವಿಲ್ಲ.ಎರಡು ಮೂರು.....ಇದ್ದರೆ ಜೋಡಿಸುವ‌ಕೆಲಸವಾಗುತ್ತದೆ.ಆದರೆ ಅದು ಒಂದೇ ಸತ್ಯದ ಕವಲುಗಳಷ್ಟೆ ಎನ್ನುವುದೆ ಸತ್ಯ.
ಒಂದು ತಾಯಿಗೆ ಅನೇಕ ಮಕ್ಕಳು ಇದ್ದರೂ ತಾಯಿ ಒಬ್ಬಳೆ ಹಾಗೆ ತಂದೆಯೂ ಒಬ್ಬನೆ. ಇವರಿಬ್ಬರೂ ದೇವಸ್ವರೂಪರು ಎಂದರೆ ಸತ್ಯ. ಇದನ್ನು  ಯಾರಾದರೂ ಅಸತ್ಯ ಎಂದರೆ ನಂಬುವ ಜನರಿದ್ದಾರೆ.ಕಾರಣ ಪರಮಾತ್ಮನು ಒಬ್ಬನೆ ಎನ್ನುವ ಮಹಾಸತ್ಯದ ಮುಂದೆ ಇದು‌ನಗಣ್ಯ. ಆದರೆ ಭೂಮಿಯಲ್ಲಿ ನಾನಿದ್ದೇನೆಂದರೆ ಇದರ‌ಮೂಲ ತಂದೆತಾಯಿಯಲ್ಲವೆ?
ಯಾರೋ ಪ್ರವಚನ ಮಾಡುವಾಗ ಕೇಳಿದ ಮಾತಿದು.ಪರಮಾತ್ಮ ನೊಬ್ಬನೆ ಸತ್ಯವೆಂದು ಆ ಪರಮಾತ್ಮನ ತಿಳಿಯಲು  ಜೀವಾತ್ಮರು  ಇಲ್ಲವೆ? ಲೋಕ ನಡೆದಿರೋದು ಜೀವಾತ್ಮರಿಂದಲೇ ಎನ್ನುವ ಸತ್ಯ ಕಣ್ಣಿಗೆ ಕಾಣುತ್ತದೆ. ಆದರೆ ಇದು ಅಸತ್ಯವೆಂದರೆ ನಾನಿಲ್ಲವೆ? ನಾನಿದ್ದರೆ‌ ನಾನ್ಯಾರು?
ಜಗತ್ ಮಿಥ್ಯ ಎಂದಿದ್ದಕ್ಕೆ  ಸಾಕಷ್ಟು ವಾದವಿವಾದಗಳಾಗುತ್ತದೆ. ಹಾಗಾದರೆ ಜಗತ್‌ಮಿಥ್ಯ ಎನ್ನುವ ಸತ್ಯವನ್ನು  ಪರಮಾತ್ಮನೊಬ್ಬನೆ  ಎನ್ನುವ ಅದ್ವೈತ ತಿಳಿಸಿದೆ.
ಏನೇ ಆದರೂ ಈ ವಾದ ವಿವಾದಗಳಿಗೆ‌ಮನುಕುಲಕ್ಕೆ ಆಸರೆ ಆಗಿರುವ ಭೂ ಲೋಕದಲ್ಲಿ ಚರ್ಚೆ ವಾದ ವಿವಾದವಿಲ್ಲದೆ‌ನಡೆದಿಲ್ಲ,ನಡೆಯೋದಿಲ್ಲ,ನಡೆಯಲಾಗದು.
ನಿರಂತರವಾಗಿ ಚಲನೆಯಲ್ಲಿರುವ ಸತ್ಯಾಸತ್ಯತೆಯನ್ನು ‌ಕೇವಲ ಕಣ್ಣಿನಿಂದ ಅಳೆಯಲಾಗದು .ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಆಗುವ ಪ್ರತಿಯೊಂದು  ಪೂರ್ಣ ಸತ್ಯವಿರದು. ಹಾಗಾಗಿ ಒಂದೇ ಸತ್ಯದೆಡೆಗೆ ಒಳಹೊಕ್ಕಿದವರಿಗೆ ಪರಮಾತ್ಮ ನ ದರ್ಶನ ವಾಗಿದೆ.  
ದೇವನೊಬ್ಬನೆ ನಾಮ‌ಹಲವು, ದೇಶ ಒಂದೇ ರಾಜ್ಯ ಹಲವು ಈ ಹಲವುಗಳ ನಡುವಿರುವ ಭಿನ್ನಾಭಿಪ್ರಾಯ ದಿಂದ ಸತ್ಯ‌ ಮರೆಯಾಗಿದೆ  ಸತ್ತಿಲ್ಲ.

ಅಧ್ಯಾತ್ಮ ಆಂತರಿಕ ಶಕ್ತಿಯಾಗಿದೆ.

ಯಾವಾಗ ನನ್ನೊಳಗೇ ಅಧ್ಯಾತ್ಮಿಕ ವಿಚಾರಗಳು ಬರತೊಡಗಿತೋ ಆಗಲೇ ಗೊತ್ತಾಗಿದ್ದು ಸತ್ಯ ಬನ ಒಳಗೇ ಇದೆ ಹೊರಗಿಲ್ಲವೆಂದು. ಇದನ್ನು ಹೊರಹಾಕಲು ಪ್ರಾರಂಭಿಸಿ್ ‌ಮೇಲೇ ತಿಳಿದದ್ದು ಶತ್ರು ಒಳಗಿಲ್ಲ ಹೊರಗೇ ಇರೋದೆಂದು. ಹಾಗಂತ ನಮ್ಮ ಶತ್ರುವಾಗಿರುವ ಅಹಂಕಾರ ಸ್ವಾರ್ಥ ಬೆಳೆಸಿಕೊಂಡರೆ  ಹೊರಗೆ ಗೆಲ್ಲಬಹುದು ಒಳಗೆ ಸೋಲುವುದು ಖಚಿತವಾದ್ದರಿಂದ ಒಳಗಿದ್ದೇ ಹೊರಗಿನ ಸತ್ಯಾಸತ್ಯತೆಯನ್ನು  ತಿಳಿದು ನಡೆಯುವುದೇ ಉತ್ತಮ ಎನ್ನುವ  ಹಂತಕ್ಕೆ  ಬಂದಾಗ ಯಾವುದೇ ಸಹಕಾರ ಸಹಾಯ ಆಶೀರ್ವಾದ ಇಲ್ಲದೆ ಒಬ್ಬಂಟಿ ಆದರೂ  ಪರಮಶಕ್ತಿಯ ಪ್ರೇರಣೆಯಿಂದ  ದೂರವಿರುವುದಿಲ್ಲ. ಇದನ್ನು ಅದ್ವೈತ ಎನ್ನಬೇಕೋ ದ್ವೈತ ವೋ ವಿಶಿಷ್ಟಾದ್ವೈತ ವೋ ಒಟ್ಟಿನಲ್ಲಿ ನಮ್ಮಿಂದ  ಆಗಬೇಕಾದ ಕೆಲಸ ಕಾರ್ಯ  ನಡೆಯುತ್ತಲೇ ಇರುತ್ತದೆ.ಅದರಲ್ಲಿ ನಾನು ಬೆಳೆದರೆ  ಜನಬಲ ಹಣಬಲ ಅಧಿಕಾರಬಲವೂ ಸೇರಿ   ಆತ್ಮನಿರ್ಭರ ಭಾರತವಾಗಲೂಬಹುದು. ದುರ್ಭಲವೂ ಆಗಬಹುದು.
ಎಷ್ಟೇ  ಸತ್ಯ  ತಡೆದರೂ  ಒಂದಲ್ಲ ಒಂದು ರೀತಿಯಲ್ಲಿ ಹೊರಬರೋದು ಸತ್ಯ ವೇ ಎನ್ನುವಂತೆ  ಕಣ್ಣಿಗೆ ಕಾಣುತ್ತಿರುವ ಶಿಕ್ಷಣದ ಭ್ರಷ್ಟಾಚಾರ ಮಾತ್ರ ಜನಸಾಮಾನ್ಯರ ಅರಿವಿಗೆ ಬರದಂತೆ ತಡೆಯುತ್ತಿರುವ  ತಂತ್ರಜ್ಞಾನದಿಂದ  ಮಕ್ಕಳ ಭವಿಷ್ಯವನ್ನು ತಡೆಯಲಾಗದು. ಅತಿಯಾದರೆ ಗತಿಗೇಡು.
ತತ್ವ ಬಿಟ್ಟು ತಂತ್ರದ ದುರ್ಭಳಕೆ ಆದಷ್ಟೂ ಅತಂತ್ರ ಜೀವನ.
ಹಿಂದೆ ಯಾವುದೇ ತಂತ್ರಜ್ಞಾನವಿಲ್ಲದೆ ಸ್ವತಂತ್ರ ಜ್ಞಾನದಿಂದ ಜೀವನ‌ನಡೆಸಿದ್ದರು. ಈಗ ಮೊದಲೇ ತಂತ್ರಕ್ಕೆ ಸಿಲುಕಿ ಅತಂತ್ರಸ್ಥಿತಿಗೆ ಜೀವನ ತಲುಪಿದರೆ  ಇದಕ್ಕೆ ಕಾರಣ ಶಿಕ್ಷಣವೆ ಆಗಿರುತ್ತದೆ.
ಶಿಕ್ಷಣದ ವಿಷಯಕ್ಕೆ ಬಂದಾಗ  ಸಾಕಷ್ಟು ಬದಲಾವಣೆ ಆಗಬೇಕಿದೆ. ಆದರೂ  ಬದಲಾವಣೆಗೆ ಪೋಷಕರ ಸಹಕಾರ ಗುರುಹಿರಿಯರ ಸಹಕಾರ ವಿಲ್ಲವಾದರೆ ಏನೂ ಮಾಡಲು ಕಷ್ಟ. ಪತ್ರಿಕೆ ನಡೆಸುವಾಗ ತಡೆಯಲು ಅಸಹಕಾರ ತೋರಿಸಿದವರು  ಈಗ ಅದೇ ವಿಚಾರದಲ್ಲಿ ಚರ್ಚೆ ನಡೆಸುವರು.ಅಂದರೆ  ಪೋಷಕರ ಸಮಸ್ಯೆ ಪೋಷಕರಾಗಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯ. ಮೇಲಾಧಿಕಾರಿಗಳಾಗಿ ನಿಂತು ಮಕ್ಕಳು ಪೋಷಕರು ಸರಿಯಿಲ್ಲವೆನ್ನುವ ಬದಲು ಕೆಳಗಿಳಿದು ವಾಸ್ತವತೆಯನ್ನು ಅರ್ಥ ಮಾಡಿಕೊಂಡರೆ ಭೂಮಿಯಲ್ಲಿ ಹೇಗೆ ಬದುಕಬಹುದೆನ್ನುವುದರ ಅರಿವಿರುತ್ತದೆ. ಒಟ್ಟಿನಲ್ಲಿ ಮೇಲೇರಿದವರಿಗೆ ಕೆಳಗಿನವರ ಸಹಕಾರ ಸಹಾಯ ಹೆಚ್ಚು.ಅದೇ ಕೆಳಗಿದ್ದವರಿಗೆ ಮೇಲಿನವರ ಸಹಾಯವಿದ್ದರೆ ಎರಡೂ ಕಡೆ ಸಮಾನತೆಯ ಶಾಂತಿ.ಶಾಂತಿ ಒಳಗಿದ್ದೇ ಪಡೆಯಲು  ಹೊರಗಿನವರ ಸಹಕಾರದ ಅಗತ್ಯವಿಲ್ಲ. ಆದರೆ ಭೌತಿಕದಲ್ಲಿರುವಾಗ  ಬದಲಾವಣೆಗೆ  ಅಗತ್ಯವಿದೆ. ತಿಳಿದವರಿಗೆ ಹೇಳೋ ಅಧಿಕಾರವಿಲ್ಲ.ಹೇಳೋರಿಗೆ ಸತ್ಯದ ಅರಿವಿಲ್ಲವಾದರೆ‌ಮಧ್ಯದಲ್ಲಿರುವ ಮಕ್ಕಳ ಭವಿಷ್ಯ ಅತಂತ್ರ.
ಗೃಹಿಣಿ ಮನೆಯೊಳಗೆ ಇದ್ದು ಸಂಸಾರ ನೋಡಿಕೊಂಡರೆ ಗೌರವವಿಲ್ಲ. ಅದೇ ಹೊರಗೆ ಹೋಗಿ ದುಡಿದು ಬಂದರೆ ಮಕ್ಕಳನ್ನು ಗಮನಿಸುವ ಸಮಯವಿರದು. ಹಾಗೆ ಯಾರಲ್ಲಿ ಏನಿದೆಯೋ ಅದೇ ಬೆಳೆಯೋದು.ನಾವಲ್ಲ.

ಸಂಸ್ಕಾರದ ಶಿಕ್ಷಣದಿಂದ ಮಹಾತ್ಮರಾಗಬಹುದು

ಸಾಮಾನ್ಯವಾಗಿ ನಾವು ಕಾಣುವ ಸತ್ಯದಲ್ಲಿ ಯಾರ ಮಕ್ಕಳು ಸಣ್ಣವರಿರುವಾಗಲೇ ಸಂಸ್ಕಾರಯುತ ಶಾಸ್ತ್ರೀಯ ವಿದ್ಯೆ ಕಲಿತಿರುವರೋ ಅವರು ನಿರಹಂಕಾರದಿಂದ  ವಿದ್ಯಾ ದಾನದ ಮಹತ್ವವರಿತು ಸಜ್ಜನರಾಗಿರುವರು. ಆದರೆ ಯಾವ ಮಕ್ಕಳು ಪೋಷಕರ ಹೆಸರು ಹಣ ಅಧಿಕಾರ ಸ್ಥಾನಮಾನದಿಂದ ಒಮ್ಮೆಲೆ ‌ಮೇಲೇರಿರುವರೋ ಅವರಿಗೆ ಅಹಂಕಾರ ಸ್ವಾರ್ಥ ಹೆಚ್ಚಾಗಿ ಜನರನ್ನು ತನ್ನ ವಶದಲ್ಲಿಟ್ಟುಕೊಳ್ಳುವ ಕೊಳ್ಳುಬಾಕ ಸಂಸ್ಕೃತಿಗೇ ಹೆಚ್ಚಿನ ಮಹತ್ವ ಕೊಟ್ಟಿರುವರು.
ಅದಕ್ಕೆ ಮಕ್ಕಳಿಗೆ ಸಂಸ್ಕಾರಯುತ ವಿದ್ಯೆ‌ನಿಧಾನವಾದರೂ ಸರಿ ಮನೆಯೊಳಗಿನಿಂದ ಯಾವುದೇ ಒತ್ತಡವಿಲ್ಲದೆ ಕಲಿಸಿದರೆ ಉತ್ತಮ ಭವಿಷ್ಯವಿದೆ.
ಆದರಿದು‌ಎಲ್ಲರಿಗೂ ಕಷ್ಟ.ವ್ಯವಹಾರದ ಜಗತ್ತಿನಲ್ಲಿ  ಹೆಚ್ಚು ಹೆಸರು ಮಾಡಿದವರಿಗೆ ಸಮಯವಿರದು. ಹೆಚ್ಚು ಸಮಯವಿದ್ದವರ ವಿದ್ಯೆಗೆ ಬೆಲೆಕೊಡೋರು ವಿರಳ.
ಕೆಲವು ಪೋಷಕರು  ವಿದ್ಯೆ ಕಲಿಸೋ‌ ಮೊದಲೇ ಕೇಳುವರು ನಮ್ಮ ಮಗುವಿಗೆ ಯಾವಾಗ  ಸ್ಟೇಜ್ ಕಾರ್ಯಕ್ರಮ ಕೊಡಿಸುವಿರಿ?.  ಕೆಲವರು  ಹಾಗಿಲ್ಲ.ಅಂದರೆ ವಿದ್ಯೆ ತೋರುಗಾಣಿಕೆಯಾದಷ್ಟೂ  ಜ್ಞಾನ ಕುಸಿಯುತ್ತದೆ ಜೊತೆಗೆ  ಅಹಂಕಾರ ಸ್ವಾರ್ಥ ‌ಬೆಳೆಯುತ್ತದೆ.
ಹಿಂದೆ ಎಷ್ಟೋ ಮಹಾರಾಜರುಗಳು  ಅತ್ಯುತ್ತಮ ಕಲಾವಿದರನ್ನು ಗೌರವಿಸಲು ಇದ್ದಲ್ಲಿಯೇ ಹೋಗಿ ಕಲೋಪಾಸಕರಾಗಿದ್ದರು.ಕಾರಣ ಕಲಾಸೇವೆ ಪರಮಾತ್ಮನಿಗೆ ಮೀಸಲಿಟ್ಟ ಮಹಾತ್ಮರುಗಳಿಗೆ ಹೆಸರು ಹಣ ಪ್ರತಿಷ್ಟೆ ಪದಕ ಸನ್ಮಾನದ ಹಂಗಿರಲಿಲ್ಲ. 
 ಈಗ ಕಾಲಬದಲಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸ  ಹೆಚ್ಚಿಸುವ ಶಿಕ್ಷಣವಿರಲಿ ಅಹಂಕಾರ ದ ಶಿಕ್ಷಣದ ಅಗತ್ಯವಿಲ್ಲ..
ಸ್ಪರ್ಧೆ ನಡೆಸೋದಾದರೆ  ಅಧ್ಯಾತ್ಮ ದಲ್ಲಿ ರಲಿ. ನಾನು ಸತ್ಯ ಬಿಡೋದಿಲ್ಲ ಧರ್ಮ ಬಿಡೋದಿಲ್ಲ  ನ್ಯಾಯದಲ್ಲಿರುವೆ ಭ್ರಷ್ಟರಿಂದ ದೂರವಿರುವೆ, ರಾಜಕೀಯದಿಂದ ದೂರವಿರುವೆ..ಕಲಬೇಡ ಕೊಲಬೇಡ.......ಅಂತರಂಗ ಶುದ್ದಿಯ ನಂತರವೇ ಆತ್ಮಜ್ಞಾನದ ಆತ್ಮವಿಶ್ವಾಸ,.. ಅಲ್ಲಿಯವರೆಗೂ ಕೇವಲ ಶ್ವಾಸವಿರುತ್ತದೆನ್ನುವರು. ಶ್ವಾಸವನ್ನು ವಿಶೇಷವಾಗಿ ಹಿಡಿದುಕೊಂಡು  ನಡೆಯೋ ಮಾರ್ಗ ವೇ ಯೋಗ ಮಾರ್ಗ ವಾಗಿತ್ತು.ಈಗಂತೂ ಮಕ್ಕಳಿಗೆ ಉಸಿರಾಡೋದಕ್ಕೆ ಸಮಯವಿಲ್ಲ.ಅಷ್ಟು ಕಲಿಕೆ.ಆದರೆ ಕಲಿತಿರುವ ವಿಷಯದಲ್ಲಿ ಸಂಸ್ಕಾರವಿದೆಯೆ ಸಂಸ್ಕೃತಿಯಿದೆಯೆ ಗುರುತಿಸುವುದು ಗುರುಗಳ ಧರ್ಮವಾಗಿದೆ. ಮೊದಲ ಗುರು ತಾಯಿಂದ ಹಿಡಿದು ಹೊರಗಿರುವ ಎಲ್ಲರಿಗೂ ಒಂದೇ  ಜ್ಞಾನವಿರೋದಿಲ್ಲವಲ್ಲ.ಅದಕ್ಕೆ ಹೊರಗಿನ ವಿದ್ಯೆಗೂ ಒಳಗಿನ ಜ್ಞಾನಕ್ಕೂ  ಅಂತರ ಬೆಳೆದು ಅವಿದ್ಯೆ ಹೆಚ್ಚಾಗಿ ಅಹಂಕಾರ ಬೆಳೆದಿದೆ.