ಬ್ರಾಹ್ಮಣನೆಂದರೆ ಒಬ್ಬ ವ್ಯಕ್ತಿಯಲ್ಲ ಜ್ಞಾನದ ಶಕ್ತಿ. ಆಂತರ್ಮುಖಿಯಾಗಿದ್ದು ಬ್ರಹ್ಮನೆಡೆಗೆ ಸಾಗುವ ಮಹಾಶಕ್ತಿ ಬ್ರಾಹ್ಮಣನ ಜ್ಞಾನದಲ್ಲಿರುತ್ತದೆ.ಆ ಜ್ಞಾನದಿಂದಲೇ ಲೋಕಕಲ್ಯಾಣವಾಗುತ್ತದೆ. ಅವನ ಜ್ಞಾನದ ದೀಪದಲ್ಲಿ ಭೂಮಿ ನಡೆಯುತ್ತದೆ. ಭೂಮಿಯ ಮೇಲಿರುವ ಎಲ್ಲಾ ಚರಾಚರದಲ್ಲಿ ಅಡಗಿರುವ ಪರಮಸತ್ಯ ಪರಮಾತ್ಮನ ತಿಳಿಯುವುದೆ ಬ್ರಹ್ಮಜ್ಞಾನ. ಬ್ರಹ್ಮಾಂಡದ ಸೃಷ್ಟಿಯ ರಹಸ್ಯವನ್ನು ಸೂಕ್ಮವಾಗಿರುವ ದಿವ್ಯದೃಷ್ಟಿಯಿಂದ ತಿಳಿದ ನಮ್ಮ ಮಹರ್ಷಿಗಳಲ್ಲಿದ್ದ ಜ್ಞಾನದಿಂದಲೇ ಹಿಂದೂ ಸನಾತನ ಧರ್ಮ ಬೆಳೆದಿದೆ. ಮನುಕುಲ ನಡೆದಿದೆ. ಹಾಗಾದರೆ ಬ್ರಾಹ್ಮಣನನ್ನು ಪೂಜನೀಯವಾಗಿ ಕಾಣುತ್ತಿದ್ದ ಕಾಲದ
ಲ್ಲಿಯೂ ಅಜ್ಞಾನವಿರಲಿಲ್ಲವೆ? ಅಜ್ಞಾನವು ಭೌತಿಕ ಜಗತ್ತಿನಲ್ಲಿದೆ.ಬ್ರಾಹ್ಮಣನನ್ನು ವ್ಯಕ್ತಿಯಾಗಿ ಕಂಡರೆ ಅವನಲ್ಲಿ ಅಡಗಿರುವ ಜ್ಞಾನ ಹಿಂದುಳಿಯುತ್ತದೆ. ಹೀಗಾಗಿ ಬ್ರಾಹ್ಮಣ
ನಿಗೆ ಬೇಕಾದ ಎಲ್ಲಾ ಸಂಸ್ಕಾರಗಳು ಸಮಯಕ್ಕೆ ಸರಿಯಾಗಿ ಸಿಕ್ಕಿದರೆ ಮಾತ್ರ ನಿಜವಾದ ಬ್ರಾಹ್ಮಣನಾಗಬಲ್ಲ.
ಭೌತಿಕಾಸಕ್ತಿ ಬೆಳೆದಂತೆಲ್ಲಾ ಮಾನವನಲ್ಲಿ ಅಜ್ಞಾನವೂ ಹೆಚ್ಚಾಗಿ ನಿಜವಾದ ಸತ್ಯಧರ್ಮದ ಅರಿವಿಲ್ಲದೆ ವ್ಯಕ್ತಿ ಬೆಳೆಯುತ್ತಾನೆಯೇ ಹೊರತು ಅವನೊಳಗಿನ ಜ್ಞಾನಶಕ್ತಿಯಲ್ಲ.
ಜ್ಞಾನ ವಿಜ್ಞಾನದ ಅಂತರದಲ್ಲಿ ಸಾಮಾನ್ಯಜ್ಞಾನವಿದೆ.
ಮಕ್ಕಳಲ್ಲಿ ಈ ಸಾಮಾನ್ಯಜ್ಞಾನವಿರುತ್ತದೆ.ಮಕ್ಕಳಲ್ಲಿ ಬೇಧಭಾವವಿರದು,ದ್ವೇಷ,ಅಸೂಯೆ,ಸ್ವಾರ್ಥ, ಅಹಂಕಾರ ವಿರದು. ಆದರೆ ,ಪೋಷಕರಲ್ಲಿರುವ ಈ ಗುಣಗಳು ಬೆಳೆದಂತೆಲ್ಲಾ ಮಕ್ಕಳಲ್ಲಿ ಸೇರಿಕೊಳ್ಳುವ ಕಾರಣದಿಂದಾಗಿ ಹಿಂದೆ ಮಕ್ಕಳ ಪ್ರಾಥಮಿಕ ಶಿಕ್ಷಣವು ಗುರುಕುಲ ದಲ್ಲಿತ್ತು.
ಮೂಲದ ಕೆಲವು ಅಶುದ್ದ ಗುಣಲಕ್ಷಣಗಳನ್ನು ಶುದ್ದಗೊಳಿಸುವ ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳು ಮಾನವರಾಗಿ ಮುಂದೆ ಮಹಾತ್ಮರಾಗಲು ಅವರವರ ಪ್ರತಿಭೆ, ಜ್ಞಾನ, ಆಸಕ್ತಿ ಗುರುತಿಸಿ,ಮೂಲದ ಧರ್ಮ ಕರ್ಮದ ಮೂಲಕ ಜ್ಞಾನ ಬೆಳೆಸಲಾಗುತ್ತಿತ್ತು. ಯಾವಾಗ ಮೂಲದೆಡೆಗೆ ಮನಸ್ಸು ಸೇರಿಕೊಂಡು ನಡೆಯುವುದೋ ಆಗಲೇ ಯೋಗಪ್ರಾಪ್ತಿ ಸಾಧ್ಯ. ಈ ಕಾರಣಕ್ಕಾಗಿ ಹಿಂದೆ ಅವರವರ ಜನ್ಮಕ್ಕೆ ತಕ್ಕಂತೆ ಅವರವರ ಕುಟುಂಬಕ್ಕೆ ಸರಿಯಾದ ಮೂಲ ವೃತ್ತಿ ಶಿಕ್ಷಣ ಮಕ್ಕಳಿಗೆ ಮನೆ ಮನೆಯಲ್ಲಿ ಕೊಟ್ಟು ಬೆಳೆಸುತ್ತಿದ್ದು ಒಗ್ಗಟ್ಟನ್ನುಹೆಚ್ಚಿಸುವ ತತ್ವಜ್ಞಾನದೆಡೆಗೆ
ಬ್ರಾಹ್ಮಣರಿಂದ ಕ್ಷತ್ರಿಯ ವೈಶ್ಯ ಶೂದ್ರರೆನ್ನುವ ವರ್ಣ ಪದ್ದತಿ ಇತ್ತು. ಕಾಲಾನಂತರದಲ್ಲಾದ ಅಜ್ಞಾನದ ಬೆಳೆವಣಿಗೆಯಲ್ಲಿ ಬ್ರಾಹ್ಮಣನನ್ನು ಬಡವನೆಂದು ಪರಿಗಣಿಸಿ ಜ್ಞಾನವನ್ನು ಸರಿಯಾಗಿ ಬಳಸದೆ ಅಪಾರ್ಥ ಮಾಡಿಕೊಂಡು ಜ್ಞಾನಿಗಳನ್ನು ಮುಗಿಸುವ ಅಸುರಶಕ್ತಿ ಬೆಳೆಯಿತು. ಇದರ ಪರಿಣಾಮವೇ ಸಮಾಜದಲ್ಲಿ ನಡೆಯುತ್ತಿರುವ ಹೋರಾಟ,
ಹಾರಾಟ,ಮಾರಾಟದ ರಾಜಕೀಯ.ಎಲ್ಲಿ ರಾಜಕೀಯ
ವಿರುವುದೋ ಅಲ್ಲಿ ತತ್ವವಿರದು.ತಂತ್ರವೇ ಮುಂದಾದರೆ ಅಸಮಾನತೆ.ಒಗ್ಗಟ್ಟು ಏಕತೆ,ಐಕ್ಯತೆ ಸಮಾನತೆಯು ಜ್ಞಾನದಿಂದಲೇ ಬೆಳೆಯಬೇಕು.
ಬ್ರಹ್ಮತತ್ವ ಒಂದೇ ಬ್ರಹ್ಮಾಂಡದೊಳಗಿರುವ ಎಲ್ಲದರಲ್ಲೂ ಅಡಗಿರುವ ಚೇತನಾಶಕ್ತಿಯನ್ನು ಭೌತಿಕದಲ್ಲಿದ್ದು
ಸಂಶೋಧನೆ ಮಾಡಲಾಗದು.
ನಮ್ಮ ಮಹರ್ಷಿಗಳ ಅಧ್ಯಾತ್ಮ ಸಂಶೋಧನೆಯಿಂದ ಭೂಮಿಯಲ್ಲಿ ಸಾಕಷ್ಟು ಸತ್ಯ ಸತ್ವವಿತ್ತು.
ಆದರೆ ಈಗಿನ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಭೂ ತತ್ವ ಹಿಂದುಳಿದು ಅದರ ಸತ್ವವೇ ಹಾಳಾದರೂ ಪರವಾಗಿಲ್ಲ ಭೂಮಿ ಆಳುವುದು ಸಾಧನೆ ಎನ್ನುವ ರಾಜಕೀಯತೆ ಮಾನವನಲ್ಲಿ ಮನೆಮಾಡಿದೆ.ಇದಕ್ಕಾಗಿ ಸಾಕಷ್ಟು ಪರಿಸರ ನಾಶವಾಗಿ ಪರಿಸ್ಥಿತಿ ಹದಗೆಟ್ಟಿದೆ. ಹಣಕ್ಕಾಗಿ ಹೆಣವನ್ನು ಮಾರುವ ವ್ಯವಹಾರಿಕ ಜ್ಞಾನವು ಧರ್ಮವನ್ನು ನಾಶ
ಮಾಡಲು ಹೊರಟಿದೆ.
ಇದಕ್ಕೆ ಸಹಕಾರ ಕೊಟ್ಟವರಲ್ಲಿ ನಮ್ಮದೂ ಪಾಲಿರುವಾಗ ಅದರ ಪ್ರತಿಫಲ ಅನುಭವಿಸಲೇಬೇಕೆನ್ನುವ ಜ್ಞಾನವಿದ್ದರೆ ಸಹಕಾರ ಕೊಡುವ ಮೊದಲು ಚಿಂತನೆ ನಡೆಸಬೇಕಿದೆ.
ಉತ್ತಮ ಸತ್ಯದ ವಿಚಾರಕ್ಕೆ ನಮ್ಮವರೆ ನಮಗೆ ಶತ್ರುಗಳಾಗಿರುವ ಕಾಲದಲ್ಲಿ ಮಾನವನಿಗೆ ಮೂಲದ ಅರಿವು
ಬರಲು ಕಷ್ಟ. ಇಲ್ಲಿ ಮಂತ್ರ ತಂತ್ರ ಯಂತ್ರದ ಮಾಧ್ಯಮಗಳು ತಮ್ಮ ಕೆಲಸಮಾಡಿದರೂ ಸ್ವತಂತ್ರ ಜ್ಞಾನದ ಅಭಾವವಿದೆ. ಒಟ್ಟಿನಲ್ಲಿ ನಾವು ಏನು ಬೆಳೆಸಿದರೂ ಬೆಳೆಯುತ್ತದೆ. ಏನು ವಿರೋಧಿಸಿದರೂ ಕಳೆಯುತ್ತದೆ.ಆದರೆ ಇದಕ್ಕೆ ಬೇಕಿದೆ ಜ್ಞಾನಶಕ್ತಿ. ಬ್ರಹ್ಮನ ಸೃಷ್ಟಿ ,ವಿಷ್ಣುವಿನಸ್ಥಿತಿ ,ಶಿವನ ಲಯ ಕಾರ್ಯ ತಡೆಯಲಾಗದ ಮಾನವನಿಗೆ ತನ್ನೊಳಗೆ ಇರುವ ಬ್ರಹ್ಮಜ್ಞಾನವನ್ನು ಹುಡುಕಿಕೊಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಿದ್ದರೂ ಶಿಕ್ಷಣದಲ್ಲಿಯೇ ಅದನ್ನು ಬಿಟ್ಟು ಹೊರಗಿನ ವಿಚಾರವನ್ನು ತಲೆಗೆ ತುಂಬಿಕೊಂಡು ಎಷ್ಟು ಬುದ್ದಿವಂತ
ನಾದರೂ ಒಳಗಿದ್ದ ಮಹಾಜ್ಞಾನದೆಡೆಗೆ ವಿಚಾರ
ಸೇರಿಕೊಳ್ಳದಿದ್ದರೆ ನಾನೇ ಬೇರೆ ನೀನೇ ಬೇರೆ ಎನ್ನುವ ಹಂತಕ್ಕೆ ಮನಸ್ಸು ಹೊರಗಿರುತ್ತದೆ ಆತ್ಮನ ದರ್ಶನ ವಾಗದೆ
ಜೀವ ಹೋಗುತ್ತದೆ.
ಬ್ರಾಹ್ಮಣನಿಗೆ ಜ್ಞಾನವೇ ಭೂಷಣ. ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ ವೆಂದರು. ಅಂದರೆ ನಮ್ಮ ಆತ್ಮಸಾಕ್ಷಿಯಿಂದ ತಿಳಿದ ಸದ್ವಿಚಾರಗಳಿಂದ ಲೋಕಕಲ್ಯಾಣವಾದರೆ ಮಾತ್ರ ಧರ್ಮ ರಕ್ಷಣೆಯಾಗುತ್ತದೆ. ಲೋಕಕಂಟಕರನ್ನು ಸೃಷ್ಟಿ ಮಾಡುವ ಶಿಕ್ಷಣವು ಶಿಕ್ಷಣವಲ್ಲ. ಅಸುರೀ ಶಕ್ತಿಯು ಸಂಪಾದಿಸಿದ ವಿದ್ಯೆ ವಿದ್ಯೆಯಲ್ಲ. ಇದರಿಂದಾಗಿ ಆತ್ಮಹತ್ಯೆ ಗಳು ಹೆಚ್ಚಾಗುತ್ತದೆ.
ಜೀವನದ ಮುಖ್ಯಗುರಿಯೇ ಆತ್ಮಜ್ಞಾನ ಪಡೆದು ಮುಕ್ತಿ ಪಡೆಯುವುದಾಗಿತ್ತು. ಕಾಲದ ಪ್ರಭಾವದಿಂದಾಗಿ ಸಾಕಷ್ಟು ಅಜ್ಞಾನ ಬೆಳೆದಿದೆ. ಇದನ್ನು ಸರಿಯಾದ ಶಿಕ್ಷಣದ ಮೂಲಕವೇ ಸರಿಪಡಿಸಲು ಬ್ರಹ್ಮಜ್ಞಾನಿಗಳಿಗೆ ಶಿಕ್ಷಣ
ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶವಿರಬೇಕು.ಇಲ್ಲಿ ಜ್ಞಾನಿಗಳೆಂದರೆ ಕೇವಲ ಜಾತಿಯಿಂದಲ್ಲ. ಗುಣನಡತೆಯ ಶುದ್ದಿಯಿರುವವರೆಲ್ಲರೂ ಜ್ಞಾನಿಗಳೆ.ಗುರುವೇ ಸರಿಯಾದ ಮಾರ್ಗದರ್ಶಕರಾಗಬೇಕೆಂದರೆ ಮೊದಲು ಅವರಲ್ಲಿ
ಶುದ್ದಜ್ಞಾನದ ಅನುಭವವಿರಬೇಕು.
ದಾಸರಾಗಿ,ಶರಣರಾಗಿ,ಭಕ್ತ ರಾಗಿ, ಸೇವಕರಾಗಿ ಮಹಾತ್ಮರಾಗಿ,ಸಂತರಾಗಿದ್ದವರು ಪರಮಾತ್ಮನೆಡೆಗೆ ನಡೆದಿದ್ದರು.ಈಗಿನ ಶಿಕ್ಷಣವೇ ಪರದೇಶದ ಪರಕೀಯ
ರೆಡೆಗೆಹೊರಟಿದೆ. ಅಂದರೆ ಸ್ವಧರ್ಮ ಬಿಟ್ಟು ಪರಧರ್ಮ ವನ್ನು ಬೆಳೆಸಲು ಹೊರಟವರಿಗೆ ಸ್ವಧರ್ಮದಲ್ಲಿದ್ದ ಸತ್ಯ
ಸತ್ವವೇ ಕಾಣಲಿಲ್ಲ. ಇದೀಗ ಮತ್ತೆ ಹಿಂದಿರುಗುತ್ತಿದೆ. ಆದರೂಸಹಕಾರದ ಕೊರತೆಯಿದೆ . ಕಾರಣವಿಷ್ಟೆ ಇಲ್ಲಿ ನಮ್ಮ ಮಾನ ಮರ್ಯಾದೆಗಾಗಿ ದೇಶದ ಧರ್ಮದ ಕಡೆಗೆ ಹಿಂದಿರುಗಲು ಭೌತಿಕದಲ್ಲಿ ಸಾಧ್ಯವಾಗುತ್ತಿಲ್ಲ.ಹೀಗಾಗಿ
ಅವರವರ ಆತ್ಮರಕ್ಷಣೆಗೆ ಅವರವರ ಹಿಂದಿನ ಧರ್ಮ ಕರ್ಮದಲ್ಲಿದ್ದ ಸತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡಬೇಕು.ದೊಡ್ಡದಾಗಿ ಬೆಳೆದಿರುವ ಕೆಟ್ಟ ರಾಜಕೀಯದಿಂದ ದೂರವಿದ್ದರೆ ಸಾಧ್ಯವಿದೆ. ರಾಜಕೀಯದ ಹಿಂದೆ ಬಿದ್ದವರು ರಾಜಯೋಗದಲ್ಲಿದ್ದ ವಿಚಾರ ತಿಳಿಯಲಾಗದು.ಹೀಗಾಗಿ ಬದಲಾವಣೆ ಒಳಗಿನಜ್ಞಾನದಿಂದಾದರೆ ಉತ್ತಮ ಜೀವನ. ಪ್ರತಿಯೊಂದರಲ್ಲಿಯೂ ತೂರಿಕೊಂಡಿರುವ ರಾಜಕೀಯ ಶಕ್ತಿಗೆ ಬ್ರಹ್ಮಜ್ಞಾನ ಅರ್ಥ ವಾಗದು. ಬ್ರಾಹ್ಮಣನನ್ನು ಎಷ್ಟು ಕೀಳಾಗಿ ಕಂಡರೂ ಜ್ಞಾನ ಕೀಳಾಗಿರಲಾಗದು. ಜ್ಞಾನವೇ ಎಲ್ಲಾ ಶಕ್ತಿಯ ಮೂಲ. ಸರಸ್ವತಿಯಿಲ್ಲದ ಲಕ್ಮಿ ಕುಂಟುತ್ತಾಳೆ.
ಲಕ್ಮಿಯಿಲ್ಲದ ಸರಸ್ವತಿಯನ್ನು ಕುರುಡು ಜಗತ್ತು
ತಿರಸ್ಕರಿಸುವುದರಿಂದಾಗುವ ಅಪಾಯವನ್ನು ಜೀವವೆ ಅನುಭವಿಸುತ್ತದೆ.ಹೀಗಾಗಿ ಭೂಮಿಯ ಮೇಲಿರುವ ಮನುಜ ಎಷ್ಟೇ ಹಣ ಸಂಪಾದಿಸಲಿ ಎಷ್ಟೇ ಜ್ಞಾನ. ಸಂಪಾದಿಸಲಿ ಅದನ್ನು ಸರಿಯಾಗಿ ಬಳಸಿಕೊಳ್ಳದೆ ಹಂಚಿಕೊಳ್ಳದೆ ಇದ್ದರೆ ವ್ಯರ್ಥ. ಸತ್ಯ ಎನ್ನುವುದು ಒಂದೇ ಎನ್ನಬಹುದಷ್ಟೆ. ಆದರೆ ಆ ಒಂದು ಸತ್ಯದೆಡೆಗೆ ಸಾಗುವುದಕ್ಕೆ
ಮಾನವನಿಗೆ ಕಷ್ಟವಿದೆ. ಆದರೂ ಅದು ಅವನೊಂದಿಗೆ ಇರುತ್ತದೆ.ಒಳಗಿತುವ ಈ ಶಕ್ತಿಯಿಂದ ದೂರವಾದಷ್ಟು ಮಾನವ ಅತಂತ್ರಸ್ಥಿತಿಗೆ ತಲುಪುತ್ತಾನೆ. ಹೀಗಾಗಿ ಇರುವ ಒಂದು ದೇಶ,ಒಂದು ದೇಹ,ಒಂದು ಜನ್ಮ,ಒಂದು ಮನೆ,ಕುಟುಂಬ, ಒಂದು ದೇವರನ್ನು ಹಲವುಮಾಡಿ
ಕೊಂಡು ಭೌತಿಕದಲ್ಲಿ ಅಸಂಬದ್ದ ವಿಚಾರಗಳನ್ನು
ಬೆಳೆಸಿಕೊಂಡು ಸಮಸ್ಯೆಗಳನ್ನು ಸುತ್ತಿಕೊಂಡರೆ ಇದನ್ನು ಸರಿಪಡಿಸಲು ಹಣದಿಂದ ಕಷ್ಟ. ಜ್ಞಾನದಿಂದಲೇ ಇದಕ್ಕೆ ಕಾರಣ ಮತ್ತು ಪರಿಹಾರವಿದೆ. ಹೀಗಾಗಿ ಯಾರನ್ನೂ ಯಾರೋ ಆಳುವ ರಾಜಕೀಯಕ್ಕಿಂತ ನಮ್ಮನ್ನು ನಾವು ಆಳಿಕೊಳ್ಳುವ ರಾಜಯೋಗದ ಶಿಕ್ಷಣವನ್ನು ಎಲ್ಲಾ ದೇಶದವರು ಅವರವರ ರಕ್ಷಣೆಗೆ ಕೊಟ್ಟರೆ ಯಾವ ದೇಶಕ್ಕೂ ಹೋಗಿ ಬದುಕುವ ಬದಲಾಗಿ ನಮ್ಮ ದೇಶದಲ್ಲಿ ನಾವು ಬದುಕಬಹುದು.ನಮ್ಮ ದೇಹದಲ್ಲಿರುವ ಅಸಂಖ್ಯಾತ ಜೀವಶಕ್ತಿಯನ್ನರಿತು ಪರಮಾತ್ಮನೆಡೆಗೆ ಸ್ವತಂತ್ರವಾಗಿ ನಡೆಯಬಹುದು. ಭಗವದ್ಗೀತೆ ಯಂತಹ ಮಹಾಗ್ರಂಥ ಇಂದು ಸಾಕಷ್ಟು ಕೆಲಸಮಾಡುತ್ತಿದೆ.ವಿಪರ್ಯಾಸವೆಂದರೆ ಇದನ್ನು ನಮ್ಮ ಭಾರತೀಯ ಶಿಕ್ಷಣದಲ್ಲಿಯೇ ಅಳವಡಿಸಲು ವಿರೋಧಿಗಳಿದ್ದಾರೆಂದರೆ ಅಜ್ಞಾನವಷ್ಟೆ. ಅಸುರಿ ಶಕ್ತಿಯನ್ನು
ಬೆಳೆಸುವುದು ಸುಲಭ.ಈ ಸುಲಭಕಾರ್ಯಕ್ಕೆ ಸಹಕಾರವೂ ಸುಲಭವಾಗಿ ಸಿಗುತ್ತದೆ. ಈ ಕಾರಣದಿಂದಾಗಿ ಸಮಾಜವು ದಾರಿ ತಪ್ಪಿ ನಡೆದಿದೆ.ಅಡ್ಡದಾರಿ ಹಿಡಿದವರಿಗೆ ಸೀದಾದಾರಿ ತೋರಿಸುವ ಕೆಲಸವಾದರೆ ನಿಧಾನವಾಗಿ ಯಾದರೂ ಗುರಿ ಸೇರಬಹುದು. ಏನೇ ಇರಲಿ ವ್ಯಕ್ತಿಯನ್ನು ಹಣದಿಂದ ಅಳೆಯುವ ಅಜ್ಞಾನ ಹೋದರೆ ಜ್ಞಾನೋದಯವಾಗುತ್ತದೆ.
ಭಾರತದಂತಹ ಯೋಗಿಗಳ ದೇಶವನ್ನು ರೋಗಿಗಳ ದೇಶ ಮಾಡಿಕೊಂಡು ವೈದ್ಯರನ್ನು ಸೃಷ್ಟಿ ಮಾಡೋ ಬದಲಾಗಿ ಉತ್ತಮ ಜ್ಞಾನಿಗಳನ್ನು ಬೆಳೆಸುವ ಯೋಗ್ಯ ಶಿಕ್ಷಣ ನೀಡುವ ಗುರುಗಳ ಅಗತ್ಯವಿದೆ. ಹೊರಗಿನಿಂದ ಓದಿ,ಕೇಳಿ,ನೋಡಿ ಕಲಿತದ್ದು ವಿದ್ಯೆ ಆ ವಿದ್ಯೆಯನ್ನು ಲೋಕಕಲ್ಯಾಣಕ್ಕಾಗಿ ಬಳಸಿ ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನ ಕಾಣುವ ಶಕ್ತಿ ಬೆಳೆಸುವುದೇ ಗುರುಗಳ ಕರ್ತವ್ಯ. ವಾಸ್ತವ ಸತ್ಯವೇ ಬೇರೆ ಪುರಾಣ ಸತ್ಯವೇ ಬೇರೆ.ಅಂದಿನ ರಾಜಪ್ರಭುತ್ವ ಇಂದಿನಪ್ರಜಾಪ್ರಭುತ್ವ ಬೇರೆಯಾಗಿದ್ದರೂ ಆಳುವವರಿಗೆ ಸರಿಯಾದ ಜ್ಞಾನವಿಲ್ಲ. ಹೀಗಾಗಿ ಅಜ್ಞಾನ ಮಿತಿಮೀರಿದೆ. ಎಲ್ಲಿಯವರೆಗೆ ಜ್ಞಾನ ಬರುವುದಿಲ್ಲವೋ ಅಲ್ಲಿಯವರೆಗೆ ಯೋಗಿಯಾಗಲಾರ, ಯೋಗವೆಂದರೆ ಸೇರುವುದು.
ಪರಮಸತ್ಯದೊಂದಿಗೆ ಸೇರುವುದರಿಂದ ಪರಮಾತ್ಮನ ದರ್ಶನ ಸಾಧ್ಯವೆಂದರೆ ನಮ್ಮ ಇಂದಿನ ಶಿಕ್ಷಣ ಯಾವ ಸತ್ಯ ತಿಳಿಸುತ್ತಿದೆ? ಇದರಿಂದಾಗಿ ಮಕ್ಕಳು ಯಾವ. ಮಾರ್ಗ ಹಿಡಿದಿದ್ದಾರೆ.ಯಾರಿಗೆ ನೆಮ್ಮದಿ ಸುಖ,ಶಾಂತಿ ಸಿಕ್ಕಿದೆ.
ತತ್ವದ ಬದಲು ತಂತ್ರವೇ ಮೇಲುಕೈ ಹಿಡಿದರೆ ಸ್ವತಂತ್ರ ವಿಲ್ಲದ ಜೀವನವೇ ಭವಿಷ್ಯವಾಗಿರುತ್ತದೆ. ತತ್ವದ ಜೊತೆಗೆ ತಂತ್ರವಿದ್ದು ಅವರವರ ಆತ್ಮರಕ್ಷಣೆಯ ಕಡೆಗೆ
ಸಾಧ್ಯವಾದಷ್ಟು ನಡೆಯುವ ಪ್ರಯತ್ನ ಮಾನವ ಮಾಡಿದರೂ ಫಲವಿದೆ. ಕುತಂತ್ರದಿಂದ ಏನೇ ಷಡ್ಯಂತ್ರ ರಚಿಸಿದರೂ ವ್ಯರ್ಥ ಎನ್ನುವುದು ಕರ್ಮ ಸಿದ್ದಾಂತ.
ಅದ್ವೈತ, ದ್ವೈತ, ವಿಶಿಷ್ಟಾದ್ವೈತದ ಉದ್ದೇಶ ತತ್ವದಿಂದ ಪರಮಾತ್ಮನ ಕಾಣೋದಾಗಿತ್ತು. ಕಾಲಚಕ್ರ ತಿರುಗುತ್ತದೆ.
ಬದಲಾವಣೆ ಆಗುತ್ತದೆ. ಮೇಲಿದ್ದವರು ಮರೆಯಾಗುತ್ತಾರೆ ತಿರುಗಿ ಬರುತ್ತಾರೆ. ಬಂದಾಗ ಉತ್ತಮ ಜ್ಞಾನದ ಶಿಕ್ಷಣದ ಜೊತೆಗೆ ಗುರು ಸಿಕ್ಕಿದರೆ ಲೋಕಕಲ್ಯಾಣ. ಎಲ್ಲಾ ನಿಂತಿರುವ ಭೂಮಿ ಒಂದೇ. ಇದರ ಋಣ ತೀರಿಸಲು ಸೇವೆಯನ್ನು ನಿಸ್ವಾರ್ಥ ನಿರಹಂಕಾರದಿಂದ ಮಾಡಬೇಕಂತೆ ಯಾರಿಗೆ ಸಾಧ್ಯವಾಗಿದೆ? ಆತ್ಮಾವಲೋಕನ ಅಗತ್ಯವಿದೆ.
ಇಲ್ಲಿ ಯಾರು ಯಾರಿಗೂ ಮೋಸಮಾಡಿದರೂ ತಿರುಗಿ ಮೋಸ ಹೋಗಲೇಬೇಕೆನ್ನುವುದು ಸತ್ಯವಾಗಿರುವಾಗ ಅಜ್ಞಾನದಿಂದ ಜ್ಞಾನದೆಡೆಗೆ ಬರುವುದಷ್ಟೆ ಇರುವ ಮಾರ್ಗ.
ಜ್ಞಾನಿಗಳನ್ನು ಆಳಬಾರದು ಅಜ್ಞಾನಿಗಳನ್ನು ಬೇಡಬಾರದು.
ಭ್ರಷ್ಟಾಚಾರದ ಹಣದಲ್ಲಿ ಧರ್ಮ ಕಾರ್ಯ ನಡೆಸಿದರೆ ಭ್ರಷ್ಟರಿಗೆ ಫಲ ದೊರೆಯುತ್ತದೆ.ಮೂಲ ಶುದ್ದವಾಗಿದ್ದರಷ್ಟೆ ರೆಂಬೆಕೊಂಬೆಗಳಲ್ಲಿ ಸತ್ವವಿರುತ್ತದೆ.ಮೂಲದ ಶಿಕ್ಷಣವೇ ನಮ್ಮ ವಿರುದ್ದವಿದ್ದರೆ ಅಂತರದಿಂದ ಅವಾಂತರವಾಗುತ್ತದೆ.