ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, July 28, 2024

ವೇದಾಂತಗಳಲ್ಲಿ ಅಂತರವಿದೆಯೆ?

ವೇದಾಂತಗಳ ಅಂತರದಲ್ಲಿ ತ್ರಿಮೂರ್ತಿಗಳನ್ನೂ ಸಮಾನವಾಗಿ ಕಾಣುವ ತತ್ವ ಅದ್ವೈತ. ಸೃಷ್ಟಿ  ಸ್ಥಿತಿ ಲಯವಿಲ್ಲದೆ ಜಗತ್ತಿಲ್ಲವೆ ನ್ನುವುದನ್ನು ತಿಳಿಯುವುದಕ್ಕೆ ತತ್ವದರ್ಶನವಾಗ ಬೇಕೇಹೊರತು ಅದರೊಳಗಿರುವ ತಂತ್ರವಲ್ಲ. ತಂತ್ರ ಬೆಳೆದಾಗಲೇ ಅತಂತ್ರ ಜೀವನವಾಗೋದು ಕಲಿಯುಗದ ಶಿಕ್ಷಣವೇ ತಂತ್ರಮಯವಾಗಿದ್ದರೆ‌ ತತ್ವ ಹೇಗೆ ಕಾಣಿಸುತ್ತದೆ? ವ್ಯವಹಾರಕ್ಕೆ ಸೀಮಿತವಾದರೆ ಹಣ ಅಗತ್ಯ.ಧರ್ಮಕ್ಕೆ ಸೀಮಿತವಾದರೆ‌ ಸತ್ಯಜ್ಞಾನ ಅಗತ್ಯ.
ಸತ್ಯ ಕಣ್ಣಿಗೆ ಕಾಣೋದಿಲ್ಲ ಅರಿವಿಗೆ ಅರ್ಥ ವಾಗಬೇಕಷ್ಟೆ.ಅರಿವಾಗೋದು ಅನುಭವಿಸಿದ ಮೇಲೇ. ಸತ್ಯದ ದಾರಿ‌ಕಠಿಣವಾದ್ದರಿಂದ ಅಸತ್ಯದ ಸುಲಭದ ದಾರಿ ಹಿಡಿಯೋದರಿಂದ ಹೆಚ್ಚಿನ ಹಣದ‌ಲಾಭವಾಗುತ್ತದೆ ಎನ್ನುವ ಸತ್ಯಕ್ಕೆ ಬೆಲೆಹೆಚ್ಚು.
ಭೂಮಿ ನಡೆದಿರೋದೆ ಸತ್ಯ ಧರ್ಮದ ಅಡಿಪಾಯದಲ್ಲಿ. ಈ ಅಡಿಪಾಯ ಹಾಕಿದವರು ಉನ್ನತ ಮಟ್ಟಕ್ಕೆ ಏರಿದ್ದರೂಕಾಣೋದಿಲ್ಲ ಗ್ರಹನಕ್ಷತ್ರಗಳ ಚಲನವಲನಗಳ ಹಿಂದಿನ ವಿಜ್ಞಾನ ಕಣ್ಣಿಗೆ ಕಾಣದು. ಭೂಮಿ ಒಂದು ಗ್ರಹವಷ್ಟೆ. ಈ ಗ್ರಹದ ಋಣ ತೀರಿಸಲು  ಮನುಕುಲದ ಜನನ.ಹಾಗಾದರೆ ನಮ್ಮ ಜನನದಿಂದ ಭೂಮಿಗೆ ಲಾಭ ನಷ್ಟವಿದೆಯೆ? ಭೂಮಿಯನ್ನು ಆಳುವುದಕ್ಕೆ ಸಾಕಷ್ಟು ತಂತ್ರ ಪ್ರಯೋಗವಾಗಿದ್ದರೂ ಯಾವುದೇ ತತ್ವದ ಮೂಲ ಗುರಿ ತಲುಪಲಿಲ್ಲ. ಜನಜೀವನದಲ್ಲಿ ಸಾಕಷ್ಟು ಹೊರಮುಖದ ಬದಲಾವಣೆ ಒಳಮುಖದ ದರ್ಶನ ವಾಗದಂತಾಗಿದೆ.
ಎಷ್ಟು ಜನಬಲ ಹಣಬಲ. ಅಧಿಕಾರಬಲವಿದ್ದರೂ ದೈವಬಲಕ್ಕೆ ಸರಿಸಾಟಿಯಲ್ಲ. ದೈವತ್ವಕ್ಕೆ ಎದುರಾಗಿ‌ನಿಂತು  ಒಗ್ಗಟ್ಟನ್ನು  ಬೆಳೆಸುವೆ ಎಂದಾಗಲೂ ದೈವಶಕ್ತಿ ತನ್ನದೇ ಆದ ರೀತಿಯಲ್ಲಿ  ನಡೆದು ಬಂದಿರುತ್ತದೆ.ಅಂದರೆ ಆತ್ಮವೇ ದೇವರು ಎಂದಾಗ ಎಲ್ಲರ ಆತ್ಮ ಪರಿಶುದ್ದವೆ ಆದರೆ ಜೀವನದಲ್ಲಿ ತತ್ವವಿದೆಯೆ ತಂತ್ರವಿದೆಯೆ ಎನ್ನುವ ಹಂತಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಸರ್ಕಾರ ಅಗತ್ಯವಿಲ್ಲ.
ನಮ್ಮ ಮನಸ್ಸು ಆತ್ಮದೊಂದಿಗಿದ್ದರೆ ಅದೇ ಅಧ್ಯಾತ್ಮ ಚಿಂತನೆ.
ಅದ್ವೈತ ಎಲ್ಲರನ್ನೂ ಕೂಡಿಸುವಾಗ ದ್ವೈತವಿರದು. ಆಳುವಾಗ ದ್ವೈತವಿರುತ್ತದೆ ಆದರೆ, ಆಳುವವರ ದೃಷ್ಟಿ ಅಧ್ಯಾತ್ಮ  ಪ್ರಗತಿಯಾದಾಗ  ಒಂದೇ ಆಗುತ್ತದೆ. ದ್ವೈತಾದ್ವೈತ ಒಂದೇ ನಾಣ್ಯದ ಎರಡು ಮುಖಗಳು. 


ಶ್ರೀ ಗುರುಗಳು ನಂಬಿದ ದೇವರ ನ
 ನಾನೂ ನಂಬಿ ನಡೆದರೆ ಕಲ್ಯಾಣ.  ಗುರುವನ್ನೇ ನಾನು  ನಡೆಸಿರೋದೆನ್ನುವ ಅಹಂಕಾರ ವಿದ್ದರೆ  ? ಮರಣ.

ಮಕ್ಕಳಿರುವಾಗಲ್ಲಿ ಆತ್ಮಜಾಗೃತವಾಗಿರುತ್ತದೆ

ಸಣ್ಣ ವಯಸ್ಸಿರುವಾಗ ನನಗೆ ಎಲ್ಲೋ ಮೂಲೆಯಲ್ಲಿರುವ ಒಂದು ಕೂಗು ಕೇಳುತ್ತಿತ್ತು. ಅದರೊಂದಿಗೆ ‌ಮೌನವಾಗಿ ಮಾತನಾಡಿದರೂ ಹೊರಗಿನ‌ಮಾತು ಕಥೆ ಬಗ್ಗೆ ಹೆಚ್ಚಿನ ಗಮನ ಕೊಡುವಾಗ  ಒಳಗಿನ ದ್ವನಿ ಅಡಗಿ ಹೋಗಿತ್ತು.
ಹೀಗೇ ಬೆಳೆದಂತೆ  ಒಮ್ಮೊಮ್ಮೆ  ಎಲ್ಲೋ ಸರಿಯಿಲ್ಲ.ಸತ್ಯಕ್ಕೆ ‌ಬೆಲೆಯಿಲ್ಲ.ಅಸತ್ಯ ಹೇಳಿದರೆ ನಂಬುವರು ಎಂದಾಗ ಅಸತ್ಯ ಹೇಳೋದರಿಂದ ಯಾರಿಗೂ ಬೇಸರವಾಗದು ಎನ್ನುವುದರ ಅರಿವಾಯಿತು.ಪ್ರತಿಯೊಂದು  ಅಸತ್ಯದ ನುಡಿಗೆ ತಕ್ಷಣದ ಪ್ರತಿಕ್ರಿಯೆ ಬರಲು ಪ್ರಾರಂಭವಾದಾಗ ಸತ್ಯವೇ ಉತ್ತಮ ಬೈಸಿಕೊಂಡರೂ ಸರಿ ಎನ್ನುವ ಹಾಗಾಯಿತು. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು  ಬದಿಗಿಟ್ಟು ಸತ್ಯದ ಪರ ನಿಲ್ಲುವುದು ಸುಲಭ ವಿಲ್ಲ. ಕೊನೆಪಕ್ಷ ಬೇರೆಯವರ ಆಸೆಗಾಗಿ ಅಸತ್ಯ ನುಡಿದರೂ  ಸಂತೋಷವೆನಿಸುತ್ತಾ  ಬೇರೆಯವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯ? ವಿದ್ಯೆಯಲ್ಲಿ ಅಂತಹ ವಿಚಾರವಿದ್ದರೆ‌ಅಳವಡಿಸಿಕೊಳ್ಳಬಹುದು. ಆಗಲೇ ಪುಸ್ತಕದ‌ವಿಷಯದ‌ಬಗ್ಗೆ ಗಮನಿಸುವ  ಅಭ್ಯಾಸ. ಅದರಲ್ಲಿ ಅಂತಹ ವಿಷಯ ಕಾಣದಾದಾಗ ಇದನ್ನು ಓದಿ ಯಾವ‌ಕೆಲಸ ಸಿಗಬಹುದು ಎನ್ನುವ ಪ್ರಶ್ನೆಗೆ ಉತ್ತರ ಕೊನೆಗೂ ಸಿಗಲಿಲ್ಲ.
ಡಿಗ್ರಿ ಮಾಡೋವರೆಗೂ ಒಳಗಿನ‌ಕೂಗು ಹೊರಗಿನ‌ನೋವು ಯಾರಿಗೂ ಅರ್ಥ ವಾಗದೆ‌ ತನ್ನದೇ ‌ಜಗತ್ತಿನಲ್ಲಿ ನಾನು ಒಬ್ಬಂಟಿ. ಕೊನೆಯಲ್ಲಿ  ಹೊಸಜಗತ್ತಿನ ಪರಿಚಯ ಒಳಗೇ ಆದಾಗಂತೂ ಹೊರಗಿನ ಜಗತ್ತಿನಲ್ಲಿ ಸಿಲುಕಿಕೊಂಡಿರುವ ಸತ್ಯ ತಿಳಿದು‌ನಿದಾನವಾಗಿ ಹಿಂದಿರುಗಲು ಸತ್ಯದ  ಕಡೆಗೆ‌ ನಡಿಗೆ.
ಈಗಲೂ ಎಷ್ಟೋ ವಿಚಾರಗಳಲ್ಲಿ ರುವ ಗೊಂದಲಕ್ಕೆ  ಗುರುಗಳಿಂದ ಸಿಗುವುದೆನ್ನುವ ಕಾರಣದಿಂದ ಓಡಾಟ‌ನಡೆದರೂ  ಸರಿಯಾದ ಉತ್ತರ ಹೊರಗಿನಿಂದ ಸಿಗದೆ ಒಳಗೇ ಸಿಕ್ಕಿದೆ. ಆದರೂ ಆತ್ಮ ತೃಪ್ತಿ ಗೆ ಸ್ವತಂತ್ರ ವಿರಬೇಕು.ನಾವೇ ಬಂಧನದಲ್ಲಿರುವಾಗ ಬೇರೆಯವರಿಗೆ ಸ್ವತಂತ್ರ ಗೊಳಿಸಲಾಗದು. ಅದಕ್ಕೆ ಹೇಳೋದು ನಿನ್ನೊಳಗೆ ಎಲ್ಲಾ ಸತ್ಯ ಅಡಗಿದೆ.ದೇವರಿದ್ದಾರೆ ಧರ್ಮವಿದೆ ಹುಡುಕಬೇಕು ಎಂದು.ಇದನ್ನು ಹೊರಜಗತ್ತಿನಲ್ಲಿ ಹುಡುಕಿದರೂ ಸಿಗದು.ಇಲ್ಲಿ ಯಾರೋ ಹೊರಗಿನಿಂದ ಬಂದು ಸತ್ಯ ತುಂಬಲಾಗದು.ಶಿಕ್ಷಣ  ನೀಡಿದರೂ ಮೂಲದಲ್ಲಿ ಉತ್ತಮ ಸಂಸ್ಕಾರವಿದ್ದರೆ‌ ಸುಲಭವಾಗಿ ಸ್ವಚ್ಚವಾಗುತ್ತದೆ. ಮುದಿತನದಲ್ಲಿ ಎಲ್ಲಾ ‌ತುಂಬಿಕೊಂಡ ಮೇಲೆ  ಸಂಸ್ಕಾರ ಮಾಡೋದು ಕಷ್ಟವಾದರೂ ಅನುಭವ ದಿಂದ  ಶುದ್ದವಾಗುತ್ತದೆ. 

ಅಸತ್ಯದೊಳಗಿರುವ ಸತ್ಯ ಸಂಶೋಧನೆ ಒಳಗೇ ಆಗಬೇಕು

ಮೊದಲೆಲ್ಲಾ ಸತ್ಯ ಯಾವುದೆನ್ನುವ  ಗೊಂದಲ ದಲ್ಲಿ ಅಸತ್ಯವನ್ನು ಒಪ್ಪಿಕೊಂಡಿದ್ದರೂ  ಸತ್ಯ ತಿಳಿದ ನಂತರ ಅಸತ್ಯದಿಂದ ದೂರವಿರೋದು ಕಷ್ಟವಾಗುತ್ತದೆ.ಆದರೂ  ಅಸತ್ಯದೊಳಗೂ ಸೂಕ್ಮವಾಗಿರುವ ಸತ್ಯ ತಿಳಿದಾಗಲೇ ಸತ್ಯ ಒಂದೇ ಇರುವ ಸತ್ಯದ ಅರಿವಾಗೋದು.
ಇದನ್ನು ದೇವನೊಬ್ಬನೆ ನಾಮ ಹಲವು ಎನ್ನುವರು. ಒಬ್ಬ‌ದೇವನಿಗಾಗಿ ಹಲವು ದೇವರ ಸೃಷ್ಟಿ ಯಾಗಿದ್ದರೂ ಒಗ್ಗಟ್ಟು ಇಲ್ಲವಾದರೆ ಆ ಒಬ್ಬನನ್ನು ಅರ್ಥ ಮಾಡಿಕೊಳ್ಳಲು ಕಷ್ಟ. 
ಅದ್ವೈತ ದೊಳಗೇ ದ್ವೈತವಿದ್ದರೂ ಎರಡೂ‌ಬೇರೆ ಎನಿಸುತ್ತದೆ ಆದರೆ ಎರಡೂ ಒಂದೇ ಎಂದಾಗ ಸಮಾಧಾನ ಶಾಂತಿ. ಹಾಗೆ ಅಸುರರೊಳಗೆ ಸುರರು ಸೇರಿದ್ದರೂ ಸುರರು‌ಮಾಡೋದು ಸರಿ,ಅಸುರರು ಮಾಡೋದು ತಪ್ಪು ಎನಿಸುತ್ತದೆ. ಆದರೆ ಸುರರ ಉದ್ದೇಶಕ್ಕೂ ಅಸುರರ ದುರುದ್ದೇಶಕ್ಕೂ ವ್ಯತ್ಯಾಸ‌ ಕಂಡಾಗ ಸುರರಿಗೆ ಸಹಕಾರ‌ ಕೊಡುವ ಮನಸ್ಸಾಗುತ್ತದೆ.
ಈ. ಮನಸ್ಸು‌ಹೊರಮುಖವಾಗಿದ್ದರೆ  ಒಳಮುಖವಾಡ ತಿಳಿಯದು.
ಇಬ್ಬರೂ ಭೂಮಿ ಆಳಬೇಕು.ಆದರೆ ಆಳೋರಲ್ಲಿ ಸತ್ಯಧರ್ಮ ಜ್ಞಾನ ಎಷ್ಟಿದೆ.ಅವರ ಉದ್ದೇಶ ಏನಿದೆ ಎನ್ನುವ ಬಗ್ಗೆ ನಮ್ಮಲ್ಲಿ  ಜ್ಞಾನವಿದ್ದರೆ ಸರಿ. ಅಜ್ಞಾನ ವೇ ಇದ್ದು ತನ್ನ ಸ್ವಾರ್ಥ ಚಿಂತನೆಗಾಗಿಯೇ ಅಸುರರೊಂದಿಗೆ ಸೇರಿಕೊಂಡಿದ್ದರೆ  ಅಧರ್ಮ ಕ್ಕೆ ಜಯ.
ಒಂದೇ ದೇಶದಲ್ಲಿ  ಎರಡು ಮೂರು‌ನಾಲ್ಕು ಐದು.....ಹೀಗೇ ಧರ್ಮ ಪಂಗಡ ವಿದ್ದರೂ ಎಲ್ಲಾ ಧರ್ಮ ಗಳ ತತ್ವ ಒಂದೇ ಎನ್ನಲಾಗದು. ಹೀಗಾದಾಗ ನಮ್ಮ ಮೂಲವನರಿತು ನಮ್ಮ ಆತ್ಮರಕ್ಷಣೆಗಾಗಿ  ಸತ್ಯ ದೆಡೆಗೆ ನಡೆದವರನ್ನು ಮಹಾತ್ಮರೆಂದರು. ಆ ಮಹಾತ್ಮರ ಹಿಂದೆ ‌ನಡೆದವರೂ ಮಹಾತ್ಮರೆ ಆಗಿದ್ದರು ಹಾಗೆ ಎಷ್ಟೋ ಮಹಾತ್ಮರುಗಳ ಹಿಂದೆ ಹಿಂದೂಗಳು‌ನಡೆದರೂ ಧರ್ಮ ಯಾಕೆ ಇಂದು ಕುಸಿದಿದೆ ಎಂದರೆ  ಹಿಂದೆ ನಡೆದವರ ಬಡತನವನ್ನು ಎತ್ತಿ ಹಿಡಿದವರ ರಾಜಕೀಯ ಕಾರಣ. ಇಲ್ಲಿ ಬಡತನ ಹಣದ ಮೂಲಕ ಜನರಿಗೆ ತೋರಿಸಲಾಗಿದೆ. ಜ್ಞಾನದ ಶಿಕ್ಷಣ ತಡೆ ಹಿಡಿದು ಜನರನ್ನು ತಮ್ಮ ವಶಕ್ಕೆ ಬಳಸಿಕೊಂಡು ವಿದೇಶದೆಡೆಗೆ ನಡೆದಿದೆ. ಹಾಗಂತ ವಿದೇಶದೊಳಗೆ ಅಡಗಿರುವ  ದೇಶ ‌ಕಾಣಲಿಲ್ಲವೆ?  ಕಂಡರೂ ಅದನ್ನು ಪ್ರಗತಿ ಎಂದು ಬೆಳೆಸಿದ ಮೇಲೆ  ಅದನ್ನು ‌ವಿರೋಧಿಸುವುದರಲ್ಲಿ ಅರ್ಥ ವಿರದು.
ಋಣ ಯಾವ ದೇಶದ್ದಾದರೂ ಸರಿ ಅದನ್ನು ತೀರಿಸಲು ಅಲ್ಲಿಯ ಸೇವೆ ಮಾಡಲೇಬೇಕು. ನಮ್ಮ ಜ್ಞಾನದ ಪ್ರಕಾರ‌ಕರ್ಮ ಅಥವಾ ಕೆಲಸ ಮಾಡುವಾಗ ಅದು ಒಳ್ಳೆಯದೋ ಕೆಟ್ಟದ್ದೋ  ಹಣ ಬಂದರೆ ಸರಿ ಎನ್ನುವ ಮಟ್ಟಿಗೆ  ಮಾನವ ಹಣಗಳಿಸುತ್ತಾ ಅದನ್ನು ಸದ್ಬಳಕೆ ಮಾಡಿಕೊಂಡರೆ ಅಧ್ಯಾತ್ಮ ಪ್ರಗತಿ. ಇಲ್ಲವಾದರೆ ಭೌತಿಕ ಪ್ರಗತಿ. ಕಲ್ಲು ಮಣ್ಣು ಚರಾಚರದಲ್ಲಿಯೂ ಪರಮಾತ್ಮನ ಸೃಷ್ಟಿ ‌ಕಾಣೋದು ಬಹಳ ಕಷ್ಟ. ಭೂಮಿಯಲ್ಲಿ ಹೇಗೆ ಜೀವನ‌ನಡೆಸಬೇಕೆಂಬ‌ ಅರಿವಿದ್ದವರಿಗೆ  ಎಲ್ಲದರಲ್ಲೂ  ಸತ್ಯ ಕಾಣುತ್ತದೆ .ಮಿಥ್ಯದಲ್ಲೂ ಸತ್ಯ ಕಾಣುತ್ತದೆ ಆದರೆ ಇದು ತಾತ್ಕಾಲಿಕ ವಾಗಿರುತ್ತದೆ.ಹೀಗಾಗಿ ಅವಿದ್ಯೆಯ ಒಳಗೇವಿದ್ಯೆ ಇದ್ದರೂ ಅದು ತಾತ್ಕಾಲಿಕ ವಷ್ಟೆ.
ಇಂದಿನ ಹೆಚ್ಚಿನ ಮಕ್ಕಳಿಗೆ ಅವಿದ್ಯೆಯ ಶಿಕ್ಷಣ‌
ಕೊಡಲಾಗುತ್ತಿದೆ.  ಅಂತಹ ಪೋಷಕರು ಮಕ್ಕಳ ಶಿಕ್ಷಣ ಸರಿಪಡಿಸದೆ ಸರ್ಕಾರದ ವಿರುದ್ದ ದೇಶದ ವಿರುದ್ದ ನಿಂತರೂ ವ್ಯರ್ಥ ಪ್ರಯತ್ನ.ಇದರಿಂದಾಗಿ ಅವರ ಸ್ವಂತಬುದ್ದಿ ಜ್ಞಾನದ ಸದ್ಬಳಕೆ ಆಗುವುದೆ ಇಲ್ಲವೆ ಎನ್ನುವ ಚಿಂತನೆ ಪೋಷಕರೆ ಮಾಡೋದಕ್ಕೂ ಪೋಷಕರಿಗೆ ಸದ್ವಿದ್ಯೆ ಇರಬೇಕು. ಕಲಿಗಾಲದ  ಶಿಕ್ಷಣ ಧರ್ಮಯುಕ್ತವಾಗಿದ್ದರೆ ಧರ್ಮ ರಕ್ಷಣೆ ಆಗುತ್ತದೆ.ಅದರಲ್ಲಿ ರಾಜಕೀಯ‌ ವಿಚಾರವೇ ತುಂಬಿ  ತಂತ್ರವೇ ಇದ್ದು, ರಾಜಯೋಗದ ವಿಚಾರದಿಂದ ದೂರವಿದ್ದರೆ  ಅಜ್ಞಾನದ ಜೀವನ.
ಯೋಗವೆಂದರೆ ಸೇರೋದು. ಪರಮಾತ್ಮನ ಜೀವಾತ್ಮ ಸೇರೋದು‌ಮಹಾಯೋಗ.ಇದು ಸ್ವಂತ ಜ್ಞಾನದಿಂದಲೋ  ರಾಜಯೋಗದಿಂದಲೋ,ಭಕ್ತಿಯಿಂದಲೋ ಕರ್ಮ ದಿಂದಲೋ  ಆದಾಗಲೇ  ಸತ್ಯದ ಜೊತೆಗೆ ಧರ್ಮ ವಿರುತ್ತದೆ.
ಇಲ್ಲವಾದರೆ  ಸತ್ಯವಿಲ್ಲದ ಧರ್ಮ ಕುಂಟುತ್ತದೆ.ಧರ್ಮ ಇಲ್ಲದ ಸತ್ಯ ಕುರುಡು ಜಗತ್ತನ್ನು ಆಳುತ್ತದೆ.‌
ಪ್ರೀತಿ‌ಪ್ರೇಮ ವಿಶ್ವಾಸ  ನಮ್ಮ ಶ್ವಾಸದ ಮೂಲಕ ಹೃದಯದಿಂದ ಜನ್ಮ ಪಡೆದಾಗಲೇ ಯೋಗವಾಗೋದು. ಕೇವಲ  ಹೊರಗಿನ ನಾಟಕದಿಂದ ಹುಟ್ಟಿದ್ದರೆ  ಯೋಗವಾಗದು. ಅದು ತಾತ್ಕಾಲಿಕವಷ್ಟೆ.

Wednesday, July 24, 2024

ವೇದವಿಜ್ಞಾನ.. ವೈದೀಕ ವಿಜ್ಞಾನ

ವೇದ ವಿಜ್ಞಾನದಿಂದ ವೈದೀಕ ವಿಜ್ಞಾನದವರೆಗೂ ನಮ್ಮ ಸನಾತನಧರ್ಮ ಬೆಳೆದಿದೆ. ವೈದೀಕ ಪರಂಪರೆಯಲ್ಲಿ ಪಿತೃಋಣವನ್ನು ಎತ್ತಿ ಹಿಡಿದರೆ ವೇದವಿಜ್ಞಾನದಲ್ಲಿ ಋಷಿಋಣವಿದೆ. ಋಷಿಪರಂಪರೆಯಿಂದ ಬೆಳೆದಿರುವ ಮನುಕುಲವೀಗ ಯಾವ ಋಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರೋದಕ್ಕೆ ಕಾರಣವೇ ಶಿಕ್ಷಣಪದ್ದತಿ ಎಂದಾಗ ನಾವು ಮೊದಲು ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕಲಿಸಬೇಕೆನ್ನುವುದನ್ನು  ತಿಳಿದು ಕಲಿತು ಕಲಿಸುವುದೇ ಧರ್ಮ.
 ಸರ್ಕಾರ ದ ಋಣ ಮಿತಿಮೀರಿದೆ. ಅದನ್ನು ತೀರಿಸಲು ಕಷ್ಟಪಟ್ಟು ಕೆಲಸ ಮಾಡಬೇಕಿದೆ.ಕೆಲಸ ಮಾಡುವ ಶಕ್ತಿಯಿಲ್ಲದೆ ಬೇಡೋರಿಗೆ ಸರಿಯಾದ ಯೋಗಶಿಕ್ಷಣ ಉಚಿತ ನೀಡಲು ಧಾರ್ಮಿಕ ವರ್ಗ ಮುಂದಾದರೆ  ಅದರಲ್ಲಿ ರಾಜಕೀಯ ಬೆರೆತರೆ  ಮಕ್ಕಳ ಜ್ಞಾನ ಗುರುತಿಸೋದೆ ಕಷ್ಟ.
ಜಾತಿ ರಾಜಕೀಯತೆಯಿಂದಾಗಿ ಅಜ್ಞಾನದಿಂದ ಮಾನವ ಬಡವ ಶ್ರೀಮಂತ ಎನ್ನುವ ಅಂತರ‌ಬೆಳೆಸಿಕೊಂಡರೆ ಒಳಗಿನ ಆತ್ಮಜ್ಞಾನ ಕಾಣಿಸದು. ಎಲ್ಲೋ‌ಕೆಲವರಷ್ಟೆ ಉತ್ತಮ ಮಾರ್ಗ ಹಿಡಿಯಲು ಸಾಧ್ಯವಾಗಿದ್ದರೆ ಅದನ್ನು ವಿರೋಧಿಸುವವರೆ ಹೆಚ್ಚಾಗಿರೋದು  ಕಲಿಕೆಯ ಪ್ರಭಾವ.
ನಮ್ಮ ಋಣ ತೀರಿಸಲು‌ಬಂದ ಜೀವಕ್ಕೆ ಇನ್ನಷ್ಟು ಋಣ ಏರಿಸಿ ಆತ್ಮಹತ್ಯೆಯಾದರೆ  ಅತೃಪ್ತ ಆತ್ಮಗಳ ಸಾಮ್ರಾಜ್ಯ ಸಹಜವಾಗಿರುತ್ತದೆ.ಒಟ್ಟಿನಲ್ಲಿ ಹಣದಿಂದ ತೃಪ್ತಿ ಸಿಗದು ಜ್ಞಾನದಿಂದ ತೃಪ್ತಿ ಸಿಗುತ್ತದೆ.ಅದು ಸತ್ಯಧರ್ಮ ದಲ್ಲಿರಬೇಕೆನ್ನುವುದು ಸನಾತನಧರ್ಮ.
ಏನೇ ಇರಲಿ ಎಷ್ಟು ಮೇಲೇರಿದರೂ ಭೂ ಋಣ ತೀರಿಸದೆ  ಜೀವನ್ಮುಕ್ತಿಯಿಲ್ಲವೆನ್ನುವುದೇ ಮಹರ್ಷಿಗಳು ತಿಳಿದು ತಿಳಿಸಿರುವಾಗ ಸೇವೆಯಿಂದ ಸಾಧ್ಯ.
ಪರಮಾತ್ಮನ ಸೇವೆಗೆ ಸತ್ಯಜ್ಞಾನ ಬೇಕು. ಪಿತೃಗಳ ಋಣ ತೀರಿಸಲು   ಅವರ ಆಸ್ತಿ ಧರ್ಮ ಕರ್ಮ ವನ್ನು ಸರಿಯಾಗಿ ತಿಳಿದು  ಸದ್ಬಳಕೆ  ಆಗೋದಕ್ಕೂ ಶಿಕ್ಷಣವೇ ಸರಿಯಿಲ್ಲದೆ   ಭೌತಿಕ ವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನವೇ  ಜನರಲ್ಲಿ  ಇಲ್ಲವಾದರೆ  ವಿಶೇಷಜ್ಞಾನದಿಂದ ಉಒಯೋಗವಿಲ್ಲ.  ಯಾರನ್ನು ಯಾರೋ ಆಳಿದರೆ ಋಣ ತೀರುವುದೆ? 
ಮಾತಾಪಿತರಿಲ್ಲದೆ ಋಷಿಗಳ ಜ್ಞಾನ ಬರುವುದೆ? 
ಮೂಲವರಿತು ನಡೆಯೋದೆ ಹಿಂದೂ ಧರ್ಮ.

Tuesday, July 23, 2024

ಮದುವೆ ಮಾಡಿನೋಡು ಮನೆ ಕಟ್ಟಿ ನೋಡು

ಅಂಬಾನಿಯವರ ಮಗನ ಮದುವೆ ಮುಗಿದುಹೋಗಿದ್ದರೂ ಅದರ ಸುದ್ದಿ ಮಾತ್ರ ಪ್ರಚಾರವಾಗುತ್ತಲೇ ಇದೆ."ಮದುವೆ ಮಾಡಿ  ನೋಡು ಮನೆ ಕಟ್ಟಿ ನೋಡು"
ಎಂದಿರೋದು  ಯಾರದ್ದೋ‌ಮದುವೆ ಮನೆಯನ್ನು ನೋಡಿ ವಿಚಾರ ಪ್ರಚಾರ. ಮಾಡುವುದಕ್ಕಲ್ಲವಾಗಿತ್ತು.ಇತ್ತೀಚಿನ ದಿನಗಳಲ್ಲಿ ಮದುವೆ ಒಂದು ಪ್ರತಿಷ್ಟೆಯಾಗುತ್ತಿದೆ.ಬಡವರ ಪಾಡಿಗೂ ಶ್ರೀಮಂತರ   ಪಾಡಿಗೂ ವ್ಯತ್ಯಾಸವೇನಿಲ್ಲ. ಬಡವರ ಪಾಲಿನ ಹಣವನ್ನು ಶ್ರೀಮಂತ ವರ್ಗ  ಬಳಸಿಕೊಂಡು  ವೈಭೋಗದಲ್ಲಿ‌  ಮದುವೆ ಮನೆ ಮಾಡಿ ಕಟ್ಟಿದರೆ  ದೊಡ್ಡ ಪ್ರಚಾರ ಮಾಡುತ್ತಾ ಮಧ್ಯಮವರ್ಗ  ತನ್ನ ಪಾಲಿಗೆ‌ಬಂದ ಪಂಚಾಮೃತದಲ್ಲಿರುವರಷ್ಟೆ.
ಇದರಿಂದಾಗಿ ಸಂಸಾರದಲ್ಲಿ  ಸುಖ ಶಾಂತಿ ನೆಮ್ಮದಿ ತೃಪ್ತಿ ಸಿಕ್ಕರೆ ಸರಿ.ಅತೃಪ್ತ ಆತ್ಮಗಳು ಎದ್ದು  ಕುಣಿದರೆ ಸಮಾಜದ ನೆಮ್ಮದಿಯೂ ಹಾಳು ಸಂಸಾರವೂ ದಾರಿತಪ್ಪಬಹುದಷ್ಟೆ.
 ಯಾಕೆ ವಿಚಾರ ತಿಳಿಸಿರುವುದೆಂದರೆ ನಿಜವಾಗಿಯೂ ಮದುವೆ ಮಾಡೋದು ಕಷ್ಟವೆ? ಮನೆ ಕಟ್ಟೋದು ಕಷ್ಟವೆ? ಎಂಬ‌ಪ್ರಶ್ನೆಗೆ ಇಂದು ಎಷ್ಟೋ ಮಂದಿಗೆ ಮದುವೆಯ ಪವಿತ್ರ ಅರ್ಥ ತಿಳಿದಿಲ್ಲ ಮನೆಯೇ ಮಂತ್ರಾಲಯವೆನ್ನುವ ಅರಿವಿಲ್ಲ.
ಸಾಲ ಮಾಡಿಯಾದರೂ ತನ್ನ ಪ್ರತಿಷ್ಠೆಯನ್ನು  ತೋರಿಸಲು ಮುಂದೆ  ಹೋದವರ ಗತಿ ಏನಾಗಿದೆ ಎನ್ನುವ ಬಗ್ಗೆ ಚಿಂತನೆ ನಡೆಸುವಷ್ಟೂ ಪುರುಸೊತ್ತಿಲ್ಲದ ಆಧುನಿಕ ಜಗತ್ತಿನಲ್ಲಿ ಎಷ್ಟೋ ಲಕ್ಷ ಕೋಟಿ ಸಾಲದ ಹೊರೆಹೊತ್ತವರು ಮದುವೆ ಆದ ಮೇಲೆ ಸಾಲ ತೀರಿಸದೆ ಮಕ್ಕಳು ಬೇಡವೆನ್ನುವ‌ಮಟ್ಟಿಗೆ ದುಡಿದರೂ ಸಾಲ ಮಾತ್ರ ತೀರುತ್ತಿಲ್ಲವೆಂದರೆ ಅಗತ್ಯಕ್ಕೆ ‌ಮೀರಿದ ಆಸೆಯೇ ಕಾರಣ.
ಯಾರೋ ಹೊರಗಿನವರು ನೋಡೋದಕ್ಕೆ‌ಮದುವೆ ಬೇಕೆ ಅಥವಾ ಮನೆ ಬೇಕೆ? ತಮ್ಮ ಹಿರಿಯರ ಕಾಲದ ಆಸ್ತಿ ಇದ್ದವರೂ ಅದನ್ನು ಹಳ್ಳಿಗಳಲ್ಲಿ ಬಿಟ್ಟು ನಗರದಲ್ಲಿ ಸ್ವಂತ ಮನೆ ಮಾಡಲು ಸಾಲ ಮಾಡುವರು.ಹಿಂದಿರುಗಿ ಹೋಗಲಾಗದೆ ಹಿರಿಯರ‌ಆಸ್ತಿ ಮಾರುವರು.ಇದೊಂದು  ವೈಜ್ಞಾನಿಕ ಜಗತ್ತಿನಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ಸತ್ಯ.
ಅನಿವಾರ್ಯ ವಾಗಿದೆ ಎಂದರೂ ತಪ್ಪಿಲ್ಲ. ನಮ್ಮ ಶಿಕ್ಷಣದಲ್ಲಿ ‌ಮೊದಲೇ ತಲೆಗೆ ಹಾಕುವ ವೈಜ್ಞಾನಿಕ ವಿಚಾರ ಆಕಾಶದೆತ್ತರ ಮನಸ್ಸನ್ನು ಎಳೆಯುತ್ತದೆ.ಅದೇ ಭೂಮಿಯ ಮೇಲಿರುವ ಸತ್ಯ ಅರ್ಥ ಮಾಡಿಸದೆ ಭೂಮಿಯ ಋಣ ತೀರಿಸಲಾಗದೆ  ಜೀವ ಹೋಗುತ್ತಿದೆ.
ಶಿಕ್ಷಣವೇ ಇದರ‌ ಮೂಲ. ಹಣದ ಸಂಪಾದನೆಯ ಶಿಕ್ಷಣ ಗುಣಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಮಾನವನನ್ನು ಆಳುತ್ತಿದೆ.
ಇಷ್ಟಪಟ್ಟ ಮನೆ ಮಡದಿ ಮಕ್ಕಳು ಕಷ್ಟಪಟ್ಟವರಿಗೆ ಸಿಗುತ್ತದೆ ಎನ್ನುವುದು  ಸುಳ್ಳಾಗುತ್ತಿದೆ ಎಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಸಾಲ‌ಮಾಡಿ‌ಕೆಟ್ಟ ಸಾಲವೇ ಶೂಲ, ಸರ್ಕಾರದ ಸಾಲ‌ಜನರ ಹಣವೇ ಆದಾಗ ಅದನ್ನು ಹಿಂದರುಗಿ ಕೊಡಲು ಕಷ್ಟಪಟ್ಟು ದುಡಿಯಲೇಬೇಕು ಅಲ್ಲಿಯವರೆಗೆ ಆತ್ಮಕ್ಕೆ ತೃಪ್ತಿ ಸಿಗದು.
ಆತ್ಮಕ್ಕೆ ತೃಪ್ತಿ ಸಿಗಲು ಸತ್ಯ ಧರ್ಮದ ಕಾಯಕವಿರಬೇಕು.
ಒಂದಕ್ಕೊಂದು  ಅಂಟಿಕೊಂಡಿರುವಾಗ ಯಾರೋ ಮಧ್ಯವರ್ತಿ  ಬೇರೆ ಮಾಡಿದರೆ  ಒಗ್ಗಟ್ಟು ಹೇಗೆ ಬೆಳೆಯುವುದು?
ಅಂಬಾನಿಯಂತಹ ಮಹಾ ಶ್ರೀಮಂತರ ಮನೆ ಮದುವೆ ನೋಡಲು ಎಷ್ಟು ಸುಂದರ. ಆನೆ ಮೇಲೆ ಕುಳಿತು ಹೋದರೂ ತಪ್ಪಿಲ್ಲ ಆನೆ ಸಾಕಿದರೂ ತಪ್ಪಿಲ್ಲ.
ಅದೇ ರೀತಿಯಲ್ಲಿ ಒಬ್ಬ ಆನೆಯನ್ನು ಪಳಗಿಸಿ ಆನೆ ಮೇಲೆ ಕುಳಿತ ಬಡವನನ್ನೂ ಹಾಗೇ ಕಾಣಲಾಗದು. ಬಡವನ ಜ್ಞಾನಶಕ್ತಿ ಶ್ರೀಮಂತ ನ ಹಣದಶಕ್ತಿ   ಒಂದೇ ನಾಣ್ಯದ ಎರಡು‌ಮುಖವಷ್ಟೆ.
 ಯಾಕೆ ಸರಳ ಮದುವೆ ಆಗಬಾರದು?
ಹಿಂದೂ ಶಾಸ್ತ್ರ ಸಂಪ್ರದಾಯ ಧರ್ಮದ ಪ್ರಕಾರ ಮದುವೆ  ಎರಡು ಪವಿತ್ರ ಆತ್ಮಗಳ ಬಂಧನ. ಇದೀಗ ದೇಹಕ್ಕೆ ತಿರುಗಿ ಸಮಸ್ಯೆ ಹೆಚ್ಚಾಗಿದೆ.ಇದರಲ್ಲಿ ವ್ಯವಹಾರಕ್ಕಿಂತ ಧರ್ಮ ವೇ ಮುಖ್ಯವಾಗಿತ್ತು.ಈಗಿದು ವ್ಯವಹಾರಕ್ಕೆ ತಿರುಗಿದೆ ಹಾಗಾಗಿ ಪ್ರೀತಿ ವಿಶ್ವಾಸ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ವಿಚ್ಚೇದನ ಹೆಚ್ಚಾಗುತ್ತಿದೆ.ಇದು ಹಿಂದೂ ಧರ್ಮ ದವರ ಸಮಸ್ಯೆ.
ಅನ್ಯಧರ್ಮದವರೆಡೆಗೆ  ಹಿಂದೂಗಳು ವಾಲತ್ತಿರುವುದಕ್ಕೆ ಕಾರಣ  ಇದೇ ಆಗಿದೆ. ವೈಭೋಗದ ಮದುವೆಯಿಂದ ಯಾರಿಗೆ ಲಾಭ ಯಾವುದರ‌ನಷ್ಟ?
ಹೆಚ್ಚಿನ  ಜನರಿಗೆ ಮದುವೆಯಲ್ಲಿ ಶಾಸ್ತ್ರ ಸಂಪ್ರದಾಯ ಧರ್ಮದ ಬಗ್ಗೆ ಅರಿವಿರದು. ಪುರೋಹಿತರು ಅವರವರ ಆರ್ಥಿಕ ಸ್ಥಿತಿಗೆ ತಕ್ಕಂತೆ  ಮದುವೆ ನಡೆಸುವ ಕಾಲವಿದೆ. ಮದುವೆಗೆ ಬರುವ ಬಂಧು ಮಿತ್ರರೂ  ಶ್ರೀಮಂತ ರಾಗಿದ್ದರೆ ಹೆಚ್ಚು ಉಡುಗೊರೆ ಬಡವರಾಗಿದ್ದರೆ ಕಡಿಮೆ ಉಡುಗೊರೆ ಕೊಡುವರೆನ್ನುವ ನಂಬಿಕೆ. ಜೊತೆಗೆ ತಾವೂ ಮದುವೆಗಾಗಿ ತಯಾರಿ ಮಾಡಿಕೊಳ್ಳಲು ಖರ್ಚು ವೆಚ್ಚದ ಲೆಕ್ಕಾಚಾರ ನಡೆಸುವಂತಾಗಿದೆ.  ಕೋರ್ಟ್ ಮ್ಯಾರೇಜ್  ಇದು ಪಾಶ್ಚಾತ್ಯ ರ ಕೊಡುಗೆ ಈಗಿದು ಭಾರತದಲ್ಲಿ ಜನಪ್ರಿಯವಾಗುತ್ತಿದೆ. ಹಾಗೇ ಮುರಿದೂ ಬೀಳುತ್ತಿದೆ.
ಸ್ವರ್ಗದಲ್ಲಿ ಮದುವೆ ತೀರ್ಮಾನ ವಾಗಿರುತ್ತದೆ.ಋಣ ಸಂಬಂಧ ತಪ್ಪಿಸಲಾಗದು. ಮದುವೆ ಒಂದು ಪವಿತ್ರ ಸ್ಪಂಧನ ವಾಗಿದ್ದನ್ನು ವ್ಯವಹಾರಕ್ಕೆ ಎಳೆದು ಬಂಧನವ ಮಾಡಿ ಕೊನೆಗೆ ಲೆಕ್ಕಚಾರದಲ್ಲಿಯೇ ಜೀವನ. ಗಂಡುಹೆಣ್ಣಿಗೆ ಹಾಕುವಹೂ ಹಾರದಿಂದ ಹಿಡಿದು  ಅಲಂಕಾರದವರೆಗೂ ಜನರ ದೃಷ್ಟಿ ಇರುತ್ತದೆ ಆದರೆ ಅವರೊಳಗಿನ ಗುಣ ಜ್ಞಾನವನ್ನು  ಅರ್ಥ ಮಾಡಿಕೊಳ್ಳಲು  ಸೋತವರು ಹೆಚ್ಚು. ಒಟ್ಟಿನಲ್ಲಿ ಎರಡು ಗೊಂಬೆಗಳನ್ನು ನಿಲ್ಲಿಸಿ ಮದುವೆ ಮಾಡಿ ಗೊಂಬೆಗಳನ್ನು ಆಟವಾಡಿಸುವುದರಿಂದ ಏನಾದರೂ ಧರ್ಮ ಉಳಿಯುವುದೆ? ಹಿಂದೆ  ಹಾಗಿತ್ತು ಹೀಗಿತ್ತು ಎನ್ನುವವರೊಮ್ಮೆ ಯಾಕಿತ್ತು  ಈಗ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ನಡೆಸಿದರೆ ತಿಳಿಯುವುದು ಅಂದಿನ ಶಿಕ್ಷಣದಲ್ಲಿ ಧರ್ಮ ತತ್ವವಿತ್ತು.ಈಗಿನ‌ಶಿಕ್ಷಣದಲ್ಲಿ ಕೇವಲ ತಂತ್ರವಿದೆ. ತಂತ್ರದಿಂದ ಹೆಣ್ಣು ಹೊನ್ನು ಮಣ್ಣಿನ ಋಣ ತೀರಿಸಲಾಗದು.
ತತ್ವದಿಂದ ಮಾತ್ರ ಸಾಧ್ಯವಿದೆ.
ಆತ್ಮಸ್ವರೂಪರಾಗಿರುವ ಗಂಡುಹೆಣ್ಣಿನ ಮಿಲನದಿಂದ ಮಹಾತ್ಮರ ಸಂತಾನವಾಗೋದು. ಇಲ್ಲವಾದರೆ ಅಸುರಿ ಸಂತಾನವೇ ಗತಿ. ಇಲ್ಲಿ ಮದುವೆ ಒಂದು ಸಂಸ್ಕಾರ.ಸಂಸ್ಕಾರ ಎಂದರೆ ಶುದ್ದಿಗೊಳಿಸುವ‌ಕ್ರಿಯೆ. ಹೀಗಿರುವಾಗ ಹೊರಗಿನಿಂದ ಎಷ್ಟು ಶುದ್ದಿ ಮಾಡಿದರೂ ಒಳಗಿನ ಶುದ್ದಿ ಇಲ್ಲವಾಗಿದ್ದರೆ ಅಶುದ್ದ ಕ್ರಿಯೆಗೇ ಹೆಚ್ಚು ಬೆಲೆ. ಆಡಂಬರಕ್ಕೆ ಸುರಿಯುವ ಹಣವನ್ನು ದಾನಧರ್ಮ ಕ್ಕೆ ಬಳಸಿದರೆ ಆರೋಗ್ಯ ಹೆಚ್ಚುವುದು.
ಮದುವೆ ಹಿಂದೆ ಮನೆಯೊಳಗೆ ನಡೆಯುತ್ತಿತ್ತು.ಈಗಿನಂತೆ ಹೊರಗಿನ ಛತ್ರ ಕಡಿಮೆಯಿತ್ತು. ಇದ್ದರೂ ಧಾರ್ಮಿಕ ಸೇವೆ ಎಂದು ಉಚಿತವಾಗಿ ಬಿಡುತ್ತಿದ್ದರು. ಆದರೆ ಈಗ‌ಲಕ್ಷ ಕೊಟ್ಟು ಹಾಲ್ ಬುಕ್ ಮಾಡಿ ಲಕ್ಷ ಲಕ್ಷ ಸುರಿದು ಅಲಂಕಾರ ಒಡವೆ ವಸ್ತು,ಬಟ್ಟಬರೆ ಉಡುಗೊರೆ  ಇನ್ನಿತರ ಊಟ ಉಪಚಾರದ ಜೊತೆಗೆ ಫೋಟೋಗ್ರಫಿ ಗೆ ಕೂಡಿಟ್ಟ ಹಣದ ಜೊತೆಗೆ ಸಾಲವೂ ಬೆಳೆದಿರುತ್ತದೆ.ಇದಕ್ಕೆ ಹೇಳಿದ್ದು‌ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂದು.
ಇದು ಶ್ರೀಮಂತ ಜನರಿಗೆ ಕಷ್ಟವಿರದು.ಬಡವರಿಗೆ ಆಸೆ ಇದ್ದರೂ  ಮಾಡೋದಿಲ್ಲ.ಮದ್ಯಮ ವರ್ಗ ವೇ ಹೆಚ್ಚಾಗಿ ಸಾಲ ಮಾಡೋದಾಗಿದೆ. ಈ‌ಕಡೆ ಬಡತನವನ್ನು  ಒಪ್ಪದೆ ಶ್ರೀಮಂತ ರೂ ಆಗದೆ ತೋರುಗಾಣಿಕೆಯ ಜೀವನಕ್ಕಾಗಿ ಕಷ್ಟ ನಷ್ಟದ ಸುಳಿಯಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಪರಿಸ್ಥಿತಿ ಮಧ್ಯಮವರ್ಗಕ್ಕೆ ಹೆಚ್ಚಾಗಿರೋದು. ಈ ಕಡೆ ಪೂರ್ಣ ಭಾರತೀಯರೂ ಅಲ್ಲ ಆ ಕಡೆ ಪರದೇಶಿಗಳೂ ಅಲ್ಲದ  ಅಲ್ಲ ಅಲ್ಲ ಎನ್ನುವ ಮಧ್ಯವರ್ತಿ ಗಳೆಂದರೆ ಸರಿಯಾಗಬಹುದಲ್ಲವೆ? ಅನ್ಯಧರ್ಮದವರು ಬೆಳೆಯಲು ಕಾರಣವೇ  ಹಿಂದೂಗಳ ಈ ಮನಸ್ಥಿತಿ. ನಮ್ಮವರಿಗೆ ಸಹಕಾರ ಕೊಡದೆ ಪರಕೀಯರನ್ನು ಓಲೈಸಿಕೊಂಡು ತಮ್ಮ ಮನೆ ಮದುವೆಗೆ ಸಾಲ ಮಾಡಿದರೆ ತೀರಿಸಲು ಪರಕೀಯರ ಆಳಾಗಿ ದುಡಿಯಲೇಬೇಕು. ಪರಕೀಯರ ವ್ಯವಹಾರದಲ್ಲಿ  ಹಣಗಳಿಸಬಹುದು ಆದರೆ ನಮ್ಮ ಶಿಕ್ಷಣದಲ್ಲಿ ಜ್ಞಾನಗಳಿಸಿದ್ದರೆ  ಯಾರೊಂದಿಗೆ ಸಂಬಂಧ ಮಾಡಬೇಕು? ವ್ಯವಹಾರಕ್ಕಿಳಿಯಬೇಕು ಎನ್ನುವ ಧಾರ್ಮಿಕ ಸತ್ಯ ಅರ್ಥ ಆಗುತ್ತದೆ.
ಒಟ್ಟಿನಲ್ಲಿ  ಮದುವೆ ಆಗಬೇಕು.ಮನೆಯೂ ಕಟ್ಟಬೇಕು.
ಇದು ಒಂದು ಧಾರ್ಮಿಕ  ಕ್ರಿಯೆಯಾಗಿ ಸತ್ವಯುತವಿದ್ದರೆ  ಧರ್ಮ ರಕ್ಷಣೆ. ದಿನದಿಂದ ದಿನಕ್ಕೆ ಏರುತ್ತಿರುವ‌ಬೆಲೆಯಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವವರು ಬೆಳೆಯುತ್ತಿರುವುದು ಅಜ್ಞಾನದ ಸಂಕೇತ.
ಯಾರು ಏನೇ ಹೇಳಿದರೂ ತನ್ನ ಆತ್ಮಕ್ಕೆ ದ್ರೋಹ ಇಲ್ಲದೆ ಬದುಕೋದು  ಜೀವನವೆಂದಿದ್ದ ಸನಾತನಧರ್ಮ ಇಂದು ಯಾರದ್ದೋ  ಮಾತಿಗೆ ಬೆಲೆಕೊಟ್ಟು ಹೊರಗಿನ ಜಗತ್ತಿನಲ್ಲಿ ತನ್ನ ಮನಸೋಇಚ್ಚೆ ಕುಣಿದು ಕುಪ್ಪಳಿಸುವವರ ಹಿಂದೆ ನಡೆದಿದೆ. ಸತ್ಯ ತಿಳಿಸಿದರೆ ತಪ್ಪು ಎನ್ನುವ ಮಟ್ಟಿಗೆ ಜನರ ಮನಸ್ಥಿತಿ ಹದಗೆಟ್ಟಿದೆ. ಇದಕ್ಕೆ ಕಾರಣವೇ ಕಲಿಗಾಲದ ಕಲಿಕೆ.
ಹುಡುಗಹುಡುಗಿ ಎಷ್ಟು ಕಲಿತಿದ್ದಾರೆನ್ನುವ ಮೊದಲು ಎಷ್ಟು ಅರಿತಿದ್ದಾರೆನ್ನುವುದೇ ಮುಖ್ಯ.
ಕಲಿಕೆ ಹೊರಗಿನ ಶಕ್ತಿ ಅರಿವು ಒಳಗಿನಶಕ್ತಿ. ಒಳಗಿನ ಶಕ್ತಿ ಜಾಗೃತವಾಗಿದ್ದರೆ  ಅದೇ ನಿಜವಾದ ಮುಕ್ತಿಮಾರ್ಗ ವಾಗಿದೆ.
ಹೇಳೋರು ಲಕ್ಷಜನವಿದ್ದರೂ ಕೇಳುವ ಎರಡೂ ಕಿವಿ ಸ್ವಚ್ಚ ವಿದ್ದರೆ  ಉತ್ತಮ ಜೀವನ. ನಾಟಕದ ಜಗತ್ತಿನಲ್ಲಿ ಎಷ್ಟು ಹೊರಗೆ ಅಲಂಕಾರ ಮಾಡಿದರೂ ಒಳಗಿರುವ ಅಹಂಕಾರ ಅಳಿಯುವವರೆಗೂ  ಸತ್ಯದರ್ಶನವಾಗದು. 
ಮದುವೆಯನ್ನು  ಮ- ಮಮಕಾರ, ದು- ದು:ಖ, ವೆ- ವೇದನೆ ಆಗದಂತೆ  ಮಾಡಿಕೊಂಡರೆ ಉತ್ತಮ.
ನಾನು ನನ್ನದು ನನಗಾಗಿ ನಾನೇ ಬೆಳೆಸಿಕೊಂಡ ಸಂಬಂಧ ಧರ್ಮದ ಹಾದಿಯಲ್ಲಿ ನಡೆಯುವಾಗ ಎಷ್ಟೋ ಹೊರಗಿನ ದುಷ್ಟಶಕ್ತಿಗಳು ಅಡ್ಡಬರುತ್ತವೆ. ಅದನ್ನು ಮೆಟ್ಟಿನಿಂತು ಮುಂದೆ ಒಟ್ಟಿಗೆ ಹೋಗೋದಕ್ಕೆ ಆತ್ಮಜ್ಞಾನ ಬೇಕು. ಅದಕ್ಕೆ ಹಲವರು ಹೆದರಿಕೊಂಡು ಸ್ತ್ರೀ ಮಾಯೆ ಎಂದು‌ಬಿಟ್ಟು ಹೋದರು. ನಮ್ಮ  ಅಶಕ್ತತೆಗೆ ಸ್ತ್ರೀ ಯನ್ನು ಬಲಿಪಶು ಮಾಡೋದರಿಂದ ಯಾವುದೇ ಸಾಧನೆಯಾಗದು.ಭೂ ಋಣ ತೀರಿಸದೆ ವಿಧಿಯಿಲ್ಲ.  ಸಂಸಾರ ಸಾಗರ ದಾಟಲು ಸಂಸಾರಕ್ಕೆ ಬಂದೇ ಹೋಗಬೇಕು.ಬಿಟ್ಟು ಹೋದರೆ ಅನ್ಯರವಶದಲ್ಲಿ ಸ್ತ್ರೀ ತನ್ನ  ಪ್ರಭಾವ ತೋರಿಸುವಳು. ಅನ್ಯಧರ್ಮದವರು ಎಷ್ಟು ಮದುವೆಯಾದರೂ ಕೇಳೋದಿಲ್ಲ.ಹಾಗೆ ಹಿಂದೂಗಳಾದರೆ ಎಲ್ಲಾ ಕೇಳೋರೆ ಹೇಳೋರೆ. ಎಂದರೆ‌ಮದುವೆಯಿಂದ ಧರ್ಮ ಉಳಿಯಿತೆ? ಧಾರ್ಮಿಕ ಸಂಸ್ಕಾರದಲ್ಲಿ ಮದುವೆ ನಡೆಯುತ್ತಿದೆಯೆ? ಇದರ‌ಬಗ್ಗೆ ಧಾರ್ಮಿಕ ವರ್ಗ ಚಿಂತನೆ ‌ನಡೆಸಬೇಕು.ಮೂಲ ಶಿಕ್ಷಣವನ್ನೇ ಪರಕೀಯರಿಗೆ ಬಿಟ್ಟು ಹೊರಗೆ ಆಚರಣೆ ನಡೆಸಿದರೆ  ಆಗೋದೇ ಹೀಗೆ.
ಈಗ‌ಕೆಲವರು ಸಂಸ್ಕಾರದ ವಿಚಾರದಲ್ಲಿ  ಆಳವಾಗಿರುವ ಸತ್ಯವನ್ನು ಹೊರಹಾಕುವ‌ ಪ್ರಯತ್ನ ನಡೆಸಿದರೂ  ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ತಾವೇ ಸೋತಿರುವುದಾಗಿದ್ದರೆ  ಕೇವಲ ಪ್ರಚಾರಕ್ಕೆ ಸೀಮಿತವಾದ ಕಾರ್ಯ ಕ್ರಮವಾಗುತ್ತದೆ. ಯಾವುದನ್ನು ಸರಿಪಡಿಸಲಾಗದು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಒಗ್ಗಟ್ಟು ಮುಖ್ಯ. ನಮ್ಮ ಮಾತನ್ನು ಬೇರೆಯವರು ಕೇಳಿಸಿಕೊಳ್ಳುವರೆನ್ನುವುದು ಸಂತೋಷವಾದರೂ ಅವರ ಪರಿಸ್ಥಿತಿ ಸರಿಪಡಿಸುವ ಶಕ್ತಿ ನಮಗಿದೆಯೆ? 
ಒಬ್ಬರು ಸಂನ್ಯಾಸಿಗಳಿಗೆ ಸಾಕಷ್ಟು ಜನಬಲ ಹಣಬಲ ಅಧಿಕಾರಬಲವಿದ್ದರೂ ಸಂಸಾರಕ್ಕೆ ಇಳಿದು ಅನುಭವಿಸಲಾಗದು. ಸಂನ್ಯಾಸವೆಂದರೆ ನಿಸ್ಸಂಗ ನಿಸ್ವಾರ್ಥ ನಿರಹಂಕಾರವಾಗಿತ್ತು.
 ಹಾಗಂತ  ಹೇಳೋದು ತಪ್ಪಲ್ಲ  ನಾನೇ ಸರಿ ಎನ್ನುವ ಮೊದಲು  ನಾನ್ಯಾರಿಂದ‌ ಮೇಲೆ ಬಂದೆ ಎನ್ನುವ ಬಗ್ಗೆ ತಿಳಿದರೆ  ಪರಮಾತ್ಮನ ಸತ್ಯ ಅರ್ಥ ವಾಗುತ್ತದೆ.
ಯಾರದ್ದೋ  ಕಣ್ಣಿಗೆ ನಮ್ಮ ಜೀವನ ಬದಲಾವಣೆಯಾಗದೆ ನಮ್ಮ ಆತ್ಮಕ್ಕೆ ತೃಪ್ತಿ ಸಿಗುವಂತಹ ಬದಲಾವಣೆಗೆ ಸ್ಪಂದನೆ ಇದ್ದರೆ ಮದುವೆ ಬಂಧನವಾಗದು... 
ಈವರೆಗೆ ಯಾರೂ‌ ಮದುವೆಯಿಂದ  ಜೀವನ್ಮುಕ್ತಿ‌ಪಡೆದೆ ಎಂದವರಿಲ್ಲ.ಪುರಂಧರ ದಾಸರಂತಹ‌ಮಹಾತ್ಮರಿಗೆ ಸಿಕ್ಕಿದ ಪತ್ನಿ ಎಲ್ಲರಿಗೂ ಸಿಗೋದಿಲ್ಲವಲ್ಲ. ಧಾರ್ಮಿಕ ಪ್ರಜ್ಞೆ ಯಿದ್ದರೆ  ಎಲ್ಲಾ ಸರಿಕಾಣುತ್ತದೆ. ಇಲ್ಲವಾದರೆ ಎಲ್ಲಾ ತಪ್ಪಾಗೇ ಕಾಣೋದಷ್ಟೆ.
ಮದುವೆಗಾಗಿ ಮನೆಗಾಗಿ ಸುರಿಯುವ  ಹಣವನ್ನು ದಾನ ಧರ್ಮದ ಶಿಕ್ಷಣಕ್ಕೆ ಭಾರತೀಯರು ಬಳಸಿದ್ದರೆ ಆತ್ಮನಿರ್ಭರ ಭಾರತವಾಗುತ್ತಿತ್ತು. ವಿದೇಶಿಗಳ ಕಂಪನಿಗಳನ್ನು ದೇಶದ ತುಂಬಾ  ತುಂಬಿಕೊಂಡು ಅವರ ಶಿಕ್ಷಣ ಪಡೆಯುತ್ತಾ  ವೈಭೋಗದೆಡೆಗೆ ಸಾಲ ಮಾಡಿ‌ಮದುವೆ ,ಮನೆಯಲ್ಲಿದ್ದರೆ  ಸಾಲ ತೀರಿಸಲು ಬರಲೇಬೇಕು. ಕಾಲಕ್ಕೆ ತಕ್ಕಂತೆ ಮಾನ ಮರ್ಯಾದೆ.  ಇದಕ್ಕಾಗಿ ಹಾರಾಟ ಹೋರಾಟ ಮಾರಾಟ ನಡೆಯುತ್ತಲೇ‌ಇರುತ್ತದೆ..  ಅರ್ಥ ವಾದವರು ಬದಲಾಗಬಹುದು.ಆಗದವರನ್ನು ಬದಲಾಯಿಸಲಾಗದು.
ಸಾಲ ಕೊಡೋರು  ಬೆಳೆಯೋದು ಮಾಡೋರು ಬೆಳೆದಾಗಲೇ.ತೀರಿಸೋದೆ ಕಷ್ಟ. ಅದಕ್ಕೆ ಇಷ್ಟು ಜನಸಂಖ್ಯೆ.
ಉಳ್ಳವರು ಶಿವಾಲಯವ ಮಾಡುವರು ನಾನೇನು‌ಮಾಡಲಿ ಬಡವನಯ್ಯ... ಬಡತನ ಜ್ಞಾನಕ್ಕಿಲ್ಲ. ಅದು ಸ್ವತಂತ್ರ ವಾಗಿತ್ತು.ಈಗಿದು ಅತಂತ್ರಸ್ಥಿತಿಗೆ ತಲುಪಲು ಶಿಕ್ಷಣವೇ ಕಾರಣ. 
ಶೋಡಸ ಸಂಸ್ಕಾರದ ಬಗ್ಗೆ ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಹೀಗಾಗಿ ಸಾಮಾನ್ಯರಾಗಿದ್ದು ನಮ್ಮ ಮನಸ್ಸನ್ನು ಶುದ್ದವಾಗಿಡುವ ಸತ್ಯ ಧರ್ಮ ವನರಿತರೆ ಉತ್ತಮ ಮನಸ್ಸಿನ ಸಂಸ್ಕಾರವಾಗಬಹುದು. ಶುದ್ದತೆಗೆ ಉತ್ತಮ ವಿಷಯ ಆಹಾರ ಕ್ರಮ ,ಕರ್ಮ ಯೋಗ ಅಗತ್ಯವಿದೆ. ಕಲಿಯುಗದಲ್ಲಿ ನಾಮಜಪದಿಂದಲೇ ಪರಮಾತ್ಮನ ಕಂಡವರಿದ್ದರು. ಈಗಿದು ಪರಕೀಯರನ್ನು ಕಾಣುವತ್ತ‌ ನಡೆದಿರೋದು ಭಾರತೀಯರ ದುರಂತ. ನಾವು ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ಹೊರಗೆ ನಡೆಸುತ್ತಿದ್ದೇವೆಂದರೆ ಅದಕ್ಕೆ ಜನಬಲ ಹಣಬಲವೂ ಹೊರಗಿನವರ ಕೊಡುಗೆಯಾಗಿದೆ. ಆದರೆ ಅವರ ಧರ್ಮ ತತ್ವವೇ  ರಾಜಕೀಯವಾಗಿದ್ದರೆ ರಾಜಯೋಗವಿರದು.
ಯೋಗವೆಂದರೆ ಸೇರೋದು ಕೂಡೋದು.ಪರಮಸತ್ಯ ಧರ್ಮದ ಜೊತೆಗೆ ಜೀವಾತ್ಮನ ಕರ್ಮ ವಿದ್ದರೆ ಅದೇ ಯೋಗ.
ಇಲ್ಲವಾದರೆ ಭೋಗದ ರೋಗ.

ಮನೆ ಚಿಕ್ಕದಾದರೂ ಮನಸ್ಸು ದೊಡ್ಡದಿರಬೇಕು. ಬಡವರ ಊಟ ಚೆಂದ ಶ್ರೀಮಂತ ಮನೆಯ ನೋಟ ಚೆಂದ..ಸಾಲ ಮಾತ್ರ ಶ್ರೀಮಂತ ವರ್ಗದವರದ್ದೇ ಹೆಚ್ಚಾಗಿರೋದು. ಅದಕ್ಕೆ ಶ್ರೀಮಂತ ರು ಹೆಚ್ಚಾಗಿ ದಾನ ಧರ್ಮ ಕಾರ್ಯ ಮಾಡಲೇಬೇಕು. 

Friday, July 19, 2024

ಹಿಂದೂ ಧರ್ಮ ಹಿಂದುಳಿದಿದೆಯೆ?

ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ ಹಿಂದೂ ಧರ್ಮ ಹಿಂದುಳಿಯುತ್ತಿದೆ,ಹಿಂದೂ   ದಾರಿತಪ್ಪಿದ್ದಾನೆ ..ಮಹಿಳೆ ಮಕ್ಕಳು ಹಿಂದಿನಂತಿಲ್ಲ....ಹೀಗೇ ಸಮಸ್ಯೆಗಳ‌  ಪಟ್ಟಿ ಬೆಳೆಸುವವರೊಮ್ಮೆ ಆತ್ಮಾವಲೋಕನ ಮಾಡಿಕೊಂಡರೆ ನಾವು ಹಿಂದಿನವರಂತಿರಲು ಸಾಧ್ಯವಾಗಿದೆಯೆ? ಅಂತಹ ಜ್ಞಾನದ ಶಿಕ್ಷಣ ಪಡೆದಿರುವೆವೋ? ಅಂತಹ ತಾಳ್ಮೆ ಸಹನೆ,ಕರುಣೆ, ಆತ್ಮಶಕ್ತಿ ಆತ್ಮವಿಶ್ವಾಸ ದ ಜೀವನ ನಡೆಸಲಾಗಿದೆಯೆ? ದೈವತತ್ವವನರಿತು ಒಗ್ಗಟ್ಟಿನಿಂದ ಸತ್ಯದ ಕಡೆಗೆ ನಡೆಯಲಾಗಿದೆಯೆ? ಮಹಾತ್ಮರ‌ನಡೆ‌ನುಡಿಯೊಳಗಿದ್ದ ರಾಜಯೋಗ ಅಂದರೆ ತನ್ನ ತಾನರಿತು ತನ್ನ ತಾನು ಆಳಿಕೊಳ್ಳುವ ಜ್ಞಾನ ನಮಗಿದೆಯೆ? ಇಂತಹ ಹಲವಾರು ಪ್ರಶ್ನೆಗೆ ಉತ್ತರ ಒಳಗೆ ಸಿಕ್ಕಿದರೆ ನಾವು ಹಿಂದೂಗಳೆ ಮುಂದುವರಿದವರೆ ಅಥವಾ ಮಧ್ಯವರ್ತಿಗಳೆ ಎಂದು ಸ್ಪಷ್ಟವಾಗಿ ಅರ್ಥ ವಾಗುತ್ತದೆ.
ಇತ್ತೀಚಿನ. ದಿನಗಳಲ್ಲಿ ವೈಚಾರಿಕತೆ ಬಿಟ್ಟು ವೈಜ್ಞಾನಿಕತೆ ಬೆಳೆದಿದೆ.ವೈಜ್ಞಾನಿಕ ವಾಗಿ ನಾವು ಹೊರಗಿನ ಜಗತ್ತನ್ನು ಆಳಲು ಹೊರಟು ಒಳಜಗತ್ತಿನಿಂದ ದೂರವಾದಾಗ ಹಿಂದಿನವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಪೋಷಕರೆ ಅರ್ಥ ಮಾಡಿಕೊಳ್ಳಲಾಗದ. ವೈಚಾರಿಕತೆಯ ವಿಜ್ಞಾನವನ್ನು ಮಕ್ಕಳು   ಅರ್ಥ ಮಾಡಿಕೊಳ್ಳಲು ಸಾಧ್ಯವೆ?

ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ. ಕಲಿಗಾಲದ ಕಲಿಕೆಯೇ ಹೊರಗಿರುವಾಗ  ಹಿಂದಿನ ಸತ್ಯ ಧರ್ಮ ಸೂಕ್ಮ ಹಿಂದುಳಿಯುವುದು ಸಹಜ. ಕೇವಲ ಪ್ರಚಾರ ಮಾಡಿದಾಕ್ಷಣ ಜನ ಬದಲಾಗುವರೆನ್ನುವ ನಂಬಿಕೆಯಲ್ಲಿ ಇಷ್ಟು ವರ್ಷ ಸರಿಯಾದ ಶಿಕ್ಷಣ ಕೊಡದೆ ಆಳಿದ ರಾಜಕೀಯತೆಯಲ್ಲಿ ದೈವತ್ವ ಹಿಂದುಳಿಯಿತು. ಈಗ ಕೆಲವು ಬದಲಾವಣೆ ಆಗುತ್ತಿದೆ. ಎಲ್ಲಾ ಪೂರ್ವ ನಿರ್ಧಾರಿತ ಎನ್ನುವ ಸನಾತನ ಧರ್ಮ  ಆಗೋದೆಲ್ಲಾ ಒಳ್ಳೆಯದಕ್ಕೆ, ಅನುಭವಿಸಿಯೇ ತೀರಬೇಕು ಎನ್ನುವುದು ಹಿಂದೆ ಇಂದು‌ಮುಂದೆ ಒಂದೆ ಇರೋವಾಗ‌ನಮ್ಮನ್ನು ನಾವು‌ ಬದಲಾವಣೆಗೆ  ತೊಡಗಿಸಿಕೊಳ್ಳುವುದಕ್ಕೆ ನಮ್ಮವರೆ ಬಿಡೋದಿಲ್ಲವೆಂದರೆ  ತಪ್ಪು ಯಾರದ್ದು?
ಶಿಕ್ಷಣದ ವಿಚಾರವಾಗಲಿ,ಧರ್ಮದ ವಿಚಾರವಾಗಲಿ  ಇದನ್ನು ಮನೆಮನೆಯೊಳಗೆ ಸರಿಪಡಿಸಿಕೊಳ್ಳಲು ಹೊರಗಿನ ಸರ್ಕಾರದ ಅಗತ್ಯವಿರಲಿಲ್ಲ. ಆದರೆ ಆಗಿದ್ದೇನು?ಎಲ್ಲಾ ಸರ್ಕಾರ ಸರಿಮಾಡತ್ತೆ, ಸರ್ಕಾರ ಹಿಂದುಳಿದವರನ್ನು‌ಮೇಲಕ್ಕೆ ತರತ್ತೆ, ಸರ್ಕಾರ ಭ್ರಷ್ಟಾಚಾರ ತಡೆಯುತ್ತೆ,ಸರ್ಕಾರವೇ ನಮ್ಮ ಸಂಸಾರ ನಡೆಸುತ್ತೆ ಎನ್ನುವ ಮಟ್ಟಿಗೆ ಜನ ಹೊರಬಂದುಹೋರಾಟ,ಹಾರಾಟ,ಮಾರಾಟಕ್ಕಿಳಿದು ಕಾದಾಟ ಮನೆಮನೆಯೊಳಗೆ ಬೆಳೆದಾಗ ಒಗ್ಗಟ್ಟು ಎಲ್ಲಿರುವುದು? ಇಲ್ಲಿ ತತ್ವದಿಂದ ಪರಮಾತ್ಮನ ದರ್ಶನ ಆಗಬೇಕಿತ್ತು.ತತ್ವವೇ ತಂತ್ರಕ್ಕೆ ಶರಣಾದರೆ ಪರಕೀಯರಿಗೆ ಮಣೆ ಹಾಕಿದಂತೆ.ಪಾಶ್ಚಾತ್ಯ ರನ್ನು  ಅನುಸರಿಸಿದ ಶಿಕ್ಷಣದ ಬದಲಾವಣೆಗೆ ಹಿಂದೂಗಳ ಸಹಕಾರ ದೊರೆತಾಗ ಬೆಳೆಯೋದು ಯಾರು? ಇದಕ್ಕೆ ಗುರುಹಿರಿಯರು ಸಹಕಾರ ನೀಡದಿದ್ದರೆ ಬೆಳವಣಿಗೆಯೇ ಇರುತ್ತಿರಲಿಲ್ಲ.ಎಲ್ಲ ವೈಜ್ಞಾನಿಕ ದೃಷ್ಟಿಯಿಂದ ಅಳೆಯಲಾಗದು. ಅಣು ಪರಮಾಣುಗಳನ್ನು ಹೇಗಂದರೆ ಹಾಗೆ ಬಳಸಬಹುದು.ಆದರೆ ಅದರ ಪ್ರತಿಫಲ ಅನುಭವಿಸುವುದೂ  ಸತ್ಯ.
ಉದಾಹರಣೆಗೆ ಮೊಬೈಲ್, ಟಿ.ವಿ.ಕಂಪೂಟರ್...ಇನ್ನಿತರ ಮಾಧ್ಯಮಗಳು ಮಾನವನಿಗೆ ಕುಳಿತಲ್ಲಿಯೇ ಸಂದೇಶಗಳನ್ನು ಕಳಿಸುತ್ತದೆ.ಆದರೆ ಆ ಸಂದೇಶದಿಂದಾಗುವ ಒಳಗಿನ ಬದಲಾವಣೆಗಳಿಂದ ಮಕ್ಕಳ ಮನಸ್ಸು ಯಾವ ದಿಕ್ಕಿನಲ್ಲಿ ಓಡುತ್ತದೆನ್ನುವ ಬಗ್ಗೆ  ಚಿಂತನೆ ನಡೆಸಬೇಕಾಗಿದ್ದು ಪೋಷಕರ ಧರ್ಮ. ಅರಿವೇ ಇಲ್ಲದೆ ಗುರುವಾಗಲು ಸಾಧ್ಯವಿಲ್ಲ.
ಅರಿವು ಎಂದರೆ ತಿಳುವಳಿಕೆ ಜ್ಞಾನ ಎಂದಾಗ ನಮ್ಮ ಹಿಂದಿನ
ಕಾಲದಲ್ಲಿದ್ದ ಸತ್ಯ ಸತ್ವ ತತ್ವಕ್ಕೆ ಬೆಲೆಕೊಡದ ಕಾಲದಲ್ಲಿ ಬೆಲೆಕೊಡುವ ಅಸತ್ಯ ಅಧರ್ಮ  ಪ್ರಚಾರಕರು ಮಧ್ಯವರ್ತಿ ಗಳಾಗಿರುವಾಗ  ಅವರಿಂದ ಮುಂದೆ ಹೋಗೋದಕ್ಕೆ ಕಷ್ಟ ಪಡಬೇಕು. ಹಿರಿಯರೆ ಅಸತ್ಯದಲ್ಲಿದ್ದರೆ  ಮಕ್ಕಳಿಗೆ ಸತ್ಯ ತಿಳಿಸೋರು ಯಾರು?
ರಾಜರ ಕಾಲದಲ್ಲಿದ್ದ ಧಾರ್ಮಿಕ ಶಿಕ್ಷಣಕ್ಕೂ ಪ್ರಜಾಪ್ರಭುತ್ವ ದ ಶಿಕ್ಷಣಕ್ಕೂ ಅಂತರ ಬೆಳೆದು ಆ ಅಂತರದಲ್ಲಿ ಮಧ್ಯವರ್ತಿ ಅರ್ಧ ಸತ್ಯ ಹಿಡಿದು ವ್ಯವಹಾರಕ್ಕೆ ಇಳಿದಾಗ ಅತಂತ್ರಸ್ಥಿತಿಗೆ  ಜೀವನ ತಲುಪುತ್ತದೆ.
ಒಟ್ಟಾರೆ ಹೇಳೋದಾದರೆ ಹಿಂದೂ ಸನಾತನಧರ್ಮ  ಕುಸಿದಿಲ್ಲ ಕಾರಣ ಇದು ಆಳವಾಗಿದೆಯಷ್ಟೆ. ಚರಾಚರದಲ್ಲಿಯೂ ಅಡಗಿರುವ ಈ ಶಕ್ತಿಯನ್ನು ಮಾನವ ಅರ್ಥ ಮಾಡಿಕೊಳ್ಳಲು ಸೋತು ಹೊರಗಿದ್ದಾನೆಂದರೆ ಸರಿ.
ದೇವರನ್ನು ಹೊರಗೆಳೆದು ರಾಜಕೀಯ ‌ನಡೆಸಿದರೆ ದೇವರಾಗೋದಿಲ್ಲ,ಹಾಗೆ ಸತ್ಯ ಧರ್ಮ ವನ್ನು ವ್ಯವಹಾರದ ವಸ್ತುವಾಗಿಟ್ಟು ಹಣ ಮಾಡಿದರೆ  ತತ್ವವಾಗೋದಿಲ್ಲ. ಹಿಂದೆ ಎಷ್ಟೋ ಮಹಾತ್ಮರುಗಳ ಜೀವನದಲ್ಲಿ  ಬದಲಾವಣೆಗಳನ್ನು ಕಾಣಬಹುದು.. ಹಾಗೆಯೇ ಈಗಲೂ ಜನಸಾಮಾನ್ಯರು ಬದಲಾವಣೆಗೆ  ಸಹಕಾರ ನೀಡಿದರೂ  ಮೇಲಿರುವವರಲ್ಲಿ ಬದಲಾವಣೆ  ಆಗದೆ ಜನರನ್ನು ದಾರಿತಪ್ಪಿಸುವ‌ಕೆಲಸವಾದರೆ  ಹಿಂದುಳಿಯುವುದು  ಜನರಲ್ಲ ಮೇಲಿರುವವರೆ ಆಗುವರು.
ಕಾರಣ ಭೂಮಿಯ ಮೇಲೆ ಜೀವನ‌ನಡೆಸೋದಕ್ಕೆ ಮೊದಲು ಸಾಮಾನ್ಯರಾಗಿರಬೇಕು.ಸಾಮಾನ್ಯಜ್ಞಾನದಿಂದಲೇ ಸತ್ಯವರಿತು ಪರಮಾತ್ಮನಿಗೆ ಶರಣಾದವರು ದಾಸರಾದವರು ಹಿಂದೂಗಳಾಗಿದ್ದಾರೆ. ಅಂದೂ ಅವರನ್ನು ಬಡವರೆಂದಿದ್ದರು.ಈಗಲೂ ಹಣವಿಲ್ಲದವರನ್ನು ಬಡವರೆನ್ನುವರು.ವ್ಯತ್ಯಾಸವಿಷ್ಟೆ ಅಂದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿತ್ತು ಪರಮಾತ್ಮನ ಸತ್ಯ ತಿಳಿದು ಮಹಾತ್ಮರಾದರು.ಈಗ ಲೋಕದ ಅಂಕುಡೊಂಕನ್ನು ಹರಡುವ ಮಧ್ಯವರ್ತಿಗಳ ವಶದಲ್ಲಿ ಎಷ್ಟೋ  ಹಿಂದುಳಿದವರು ಒಳಗೇ ಅಡಗಿರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗದೆ  ಸರ್ಕಾರದ ಹಿಂದೆ ಬೇಡಿ ಸಾಲದ ಜೀವನದಲ್ಲಿ ಶ್ರೀಮಂತ ರಾಗಲು ಹೊರಟಿರುವರು.
ಹಿಂದೂ ಸನಾತನಧರ್ಮ ಸಾಲದಿಂದ ಬಿಡುಗಡೆ ಪಡೆಯುವ ದಾರಿ ತೋರಿಸಿತ್ತು ಈಗಿದು ಸಾಲದ ಮಡಿಲಿಗೆ ಎಳೆಯುವ ರಾಜಕೀಯದತ್ತ ವೈಭೋಗದೆಡೆಗೆ ನಡೆಸುತ್ತಿದೆ ಎಂದರೆ ಧರ್ಮ ಹಿಂದುಳಿಯಿತೆ? ಅಥವಾ ಧರ್ಮ ವನ್ನು ಅಪಾರ್ಥ ಮಾಡಿಕೊಂಡಿರುವವರು ಹಿಂದುಳಿದವರಾದರೆ? ಎಲ್ಲಾ ಹಿಂದೂಗಳೆ  ಅಂದು ದೇವರು ಮಾನವರು ಅಸುರರು ಎಂದು ಮೂರು ಪಂಗಡವಿತ್ತು.ಈಗ ಹೆಸರು ಬೇರೆಯಷ್ಟೆ. ಒಟ್ಟಿನಲ್ಲಿ ದೇವರು ಕಣ್ಣಿಗೆ ಕಾಣೋದಿಲ್ಲ ಸತ್ಯ ಕಾಣೋದಿಲ್ಲ ಧರ್ಮ ವೂ ಕಾಣೋದಿಲ್ಲ. ಜನ ಮಾತ್ರ ಕಾಣೋದು ಅವರ ಒಳಗಿರುವ ಜ್ಞಾನ ಕಾಣೋದಿಲ್ಲ. ಉತ್ತಮ ಜ್ಞಾನಕ್ಕೆ ಪೂರಕ ಶಿಕ್ಷಣ ನೀಡಿದರೆ  ಜ್ಞಾನೋದಯ. ಜ್ಞಾನದಿಂದ ಬೆಳಕು.
ಅದು ಒಳಗಿನಿಂದ ಬೆಳೆಸಬೇಕು.ಹೊರಗಿನ‌ಬೆಳಕು ತಾತ್ಕಾಲಿಕ ವಷ್ಟೆ.
ಶಾಶ್ವತವಾಗಿರುವ ಎಲ್ಲರ ಹೃದಯಂತಿಕೆಯನ್ನು ಬೆಳೆಸದ ಶಿಕ್ಷಣದಿಂದ ಹೃದಯಹೀನರು  ಬೆಳೆದರೆ ಹೃದಯದ ಕಸಿ ಮಾಡುವ ವೈದ್ಯರು ಬೆಳೆಯುವರು.ಕೊನೆಗೆ ಹೃದಯವನ್ನು ಕದ್ದು ಮಾರುವ ಚೋರರೂ ಬೆಳೆಯುವರು. ಇದನ್ನು  ಹಿಂದೂ ಧರ್ಮ  ಒಪ್ಪದು. ಜೀವ ತಾತ್ಕಾಲಿಕ ಆತ್ಮ ಶಾಶ್ವತ.ಇದು ಎಲ್ಲಾ ಧರ್ಮ ಒಪ್ಪುತ್ತದೆ.ಅಂದರೆ ಎಲ್ಲಾ ಹಿಂದೂಗಳೆ ಆಗಿದ್ದರೂ ಒಪ್ಪೋದಿಲ್ಲ. ಆಗೋದೂ  ಇಲ್ಲ.
ನಿಮ್ಮ ನಿಮ್ಮ ಮನವ ಮನೆಯ ಸಂತೈಸಿಕೊಳ್ಳಲು ಸರ್ಕಾರ ಬಿಡೋದಿಲ್ಲವೆಂದರೆ ಸರ್ಕಾರದ ವಶದಲ್ಲಿ ಜೀವನವಿದೆಯೆ?
ಯಾರಿಗೆ ಗೊತ್ತು ಯಾರೊಳಗೆ  ಯಾವ ಮಹಾತ್ಮರಿರುವರೋ? ಇದಕ್ಕೆ ಮುಖ್ಯವಾಗಿ ಮಕ್ಕಳ ಶಿಕ್ಷಣ ಸತ್ವ ಸತ್ಯ ತತ್ವದೊಳಗಿರಬೇಕಿತ್ತು.
ಯಾರೋ ಹೊರಗಿನವರು ತಂದು ಹಾಕಿದ ಕಸಕಡ್ಡಿಗಳನ್ನು ಸ್ವಚ್ಚ ಮಾಡಿಕೊಂಡರೆ ಒಳಗೆ ಸ್ವಚ್ಚವಾಗುವುದೆ? ಉತ್ತಮ ಗುಣಜ್ಞಾನವಿದ್ದರೆ ಎಲ್ಲಾ ಸಾಧ್ಯ. ಒಟ್ಟಿನಲ್ಲಿ ನಮ್ಮ ಕರ್ಮಕ್ಕೆ ತಕ್ಕಂತೆ ಫಲ. ಪರಮಾತ್ಮನಿಗೇನೂ ಸಮಸ್ಯೆಯಿಲ್ಲ ಜೀವಾತ್ಮನಿಗೇ ಸಮಸ್ಯೆ. ಸ್ವಚ್ಚ ಶಿಕ್ಷಣ,ಸ್ಪಷ್ಟ ಉತ್ತರ ನೀಡುವ ಅನುಭವಿ  ಗುರು ಶಿಕ್ಷಕರು ಎಂತಹ ಹಿಂದುಳಿದವರನ್ನೂ  ಬದಲಾಯಿಸಬಹುದು.ಆದರೆ  ರಾಜಕೀಯ ಬಿಟ್ಟು  ಧರ್ಮ ತತ್ವ ಹಿಡಿದವರು ಹಿಂದೂಗಳಾಗಿರಬಹುದು.
ಹೊರಗಿನ ಆಚಾರ ವಿಚಾರ ಪ್ರಚಾರದಿಂದ ಹಣಗಳಿಸಬಹುದು.ಜ್ಞಾನ ಒಳಗಿನಿಂದ ಬೆಳೆಸುವ ಶಿಕ್ಷಣದಿಂದ ಬದಲಾವಣೆ ಸಾಧ್ಯ. ಪೋಷಕರು ಬದಲಾದರೆ ಮಕ್ಕಳೂ‌ಬದಲಾಗುವರು.ಹಾಗೆ ಹಿಂದೂಗಳು ಬದಲಾದರೆ ಎಲ್ಲಾ ಬದಲಾವಣೆ ಸಾಧ್ಯ. ಇದಕ್ಕೆ ‌ಕಾರಣವೇ ಮನಸ್ಸು.
ಮನಸ್ಸಿನ ನಿಗ್ರಹ ಸರ್ಕಾರ ಮಾಡಲಾಗದು.ಯೋಗದಿಂದ ಸಾಧ್ಯ.ಯೋಗಿಗಳ ದೇಶವನ್ನು ಭೋಗಿಗಳಿಗೆ ಬಿಟ್ಟರೆ‌ ರೋಗ ಹೆಚ್ಚುವುದು.ಆರೋಗ್ಯ ಎಂದರೆ ಆರು ಯೋಗ್ಯ ರೀತಿಯಲ್ಲಿ ಬಳಸುವುದಾಗಿದೆ.ಕಾಮ,ಕ್ರೋಧ ಲೋಭ ಮೋಹ‌ಮಧ ಮತ್ಸರಗಳೆಂಬ ಅರಿಷಡ್ವರ್ಗ ಎಲ್ಲರ ಗುಣ.ಇದರಿಂದಾಗಿ ಆತ್ಮಜ್ಞಾನ ಹಿಂದುಳಿದಾಗ ಹಿಂದೂ ಧರ್ಮ ಅರ್ಥ ಆಗದು.
ಬೇರನ್ನು ಕೀಳಲಾಗದು.ರೆಂಬೆಕೊಂಬೆಗಳು ಬೇರನ್ನು ಅರ್ಥ ಮಾಡಿಕೊಳ್ಳಲು  ಆಳಕ್ಕೆ ಇಳಿಯುವುದು ಅಗತ್ಯ. ಮೇಲೆ ನೋಡುತ್ತಿದ್ದರೆ ಒಮ್ಮೆ ಕೆಳಗೆ ಬೀಳೋದನ್ನು ತಪ್ಪಿಸಲಾಗದು.
ಬಿದ್ದ ಮೇಲೆ ಎದ್ದು ನಿಂತು ನಡೆಯುವಷ್ಟು ಶಕ್ತಿಯಿದ್ದರೆ ಉತ್ತಮ  ಬದಲಾವಣೆ.
ಜಗತ್ತಿನಾದ್ಯಂತ ಹರಡಿರುವ ಹಿಂದೂಗಳು ಒಂದಾದರೆ ಅದೇ ನಿಜವಾದ ಧರ್ಮ. ಸಾಧ್ಯವಿಲ್ಲವೆ? ಅಸಾಧ್ಯವಾದದ್ದು ಏನಿದೆ? ಇದ್ದರೆ  ಸಾಯೋದನ್ನು ತಡೆಯಲಾಗದಷ್ಟೆ.ಜನನ ಮರಣದ ನಡುವರಿರುವ ಈ ಜೀವನದ ಗುರಿ ತಲುಪಲು ಆತ್ಮಜ್ಞಾನವಿರಬೇಕಷ್ಟೆ.ನಂತರ ವಿಜ್ಞಾನ ಬೆಳೆದಿದೆ.

ದ್ವೇಷಿಸುವುದು ಸಾಧನೆಯೆ?

" ಹಾವಿನ ದ್ವೇಷ  ಹನ್ನೆರಡು  ವರುಷ ನನ್ನ ರೋಷ ನೂರು ವರುಷ "  ಚಲನ ಚಿ ತ್ರ. ಗೀತೆ  ಕೇಳುತ್ತೇವೆ .ಆದರೆ, ಕೊನೆಯಲ್ಲಿ ಚಿತ್ರ ಮುಗಿಯುವುದು  ಕ್ಷಮಿಸಿ ಬಾಳುವುದರಿಂದಲೋ ಅಥವಾ ಹೊಡೆದಾಡಿ ಸಾಯುವುದರಿಂದಲೋ ಆಗಿರುತ್ತದೆ.ಅಂದರೆ ಸಿಟ್ಟು ದ್ವೇಷ ರೋಷಗಳು ನಕಾರಾತ್ಮಕ ಶಕ್ತಿಯ ಪ್ರಚೋಧನೆಗಳಾಗಿವೆ. ದ್ವೇಷ ಹೆಚ್ಚಿಸಲು ಕ್ಷಣ ಸಾಕು  ಸುಲಭ ,ಪ್ರೀತಿ ಅರಳಿಸುವುದೇ ಕಷ್ಟ.
ದ್ವೇಷ ಒಂದು ನಕಾರಾತ್ಮಕ ಶಕ್ತಿ ಇದನ್ನು ಬಿಟ್ಟು  ಜೀವನ ನಡೆಸುವುದೇ ಅಧ್ಯಾತ್ಮಿಕ ಶಕ್ತಿ ಆಗಲೇ ಆತ್ಮಕ್ಕೆ ತೃಪ್ತಿ ಮುಕ್ತಿಹಾಗಾದರೆ ದುಷ್ಟರನ್ನು ದ್ವೇಷ ಮಾಡಬಾರದೆ ? ಮಾಡಿದರೆ ಇನ್ನಷ್ಟು ದ್ವೇಷ ಒಳಗೇ ಬೆಳೆಯುವುದೆಂದಾಗ  ದ್ವೇಷಕ್ಕೆ ಮೂಲ ಕಾರಣ ತಿಳಿದು ಅದನ್ನು ಸರಿಪಡಿಸುವತ್ತ‌ ಪ್ರಯತ್ನ ಪಟ್ಟರೆ ಫಲ ಉತ್ತಮವಿರುವುದು. 
ದೇಶ ದೇಶದ ನಡುವೆ ಸ್ನೇಹದ ಪಂದ್ಯಾವಳಿ ನಡೆಯುತ್ತದೆ.‌ಆದರೆ, ಅದನ್ನು ವೀಕ್ಷಣೆ ಮಾಡುವ ಜನರಲ್ಲಿ ದ್ವೇಷ ಬೆಳೆಯಲು ಕಾರಣ ಪಂದ್ಯವನ್ನು  ನೋಡುವ ದೃಷ್ಟಿ ಸರಿಯಿಲ್ಲವೆಂದರ್ಥ. ಹಾಗೆಯೇ ಒಡಹುಟ್ಟಿದವರು ಬೆಳೆದು ದೊಡ್ಡವರಾದಂತೆಲ್ಲಾ  ದೈಹಿಕವಾಗಿ ಬೆಳೆದರೂ ಮಾನಸಿಕತೆಯಲ್ಲಿ  ಬೆಳೆದಿರೋದಿಲ್ಲ. ಸಂಕುಚಿತ ಮನಸ್ಸಿನಲ್ಲಿ  ನೋಡುವ ದೃಷ್ಟಿ ಕೋನವೇ‌ಬೇರೆಯಾದಾಗ ನಮ್ಮವರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾದರೆ  ಜ್ಞಾನ.ಕುಸಿದರೆ ಅಜ್ಞಾನ.ಇದಕ್ಕೆ ಕಾರಣ  ನಾವು ಕೊಡುವ ಶಿಕ್ಷಣ..ದ್ವೇ
. ಶಿಕ್ಷಣದಲ್ಲಿಯೇ ಸಂಸ್ಕಾರದ ವಿಷಯವಿಲ್ಲದೆ  ತಲೆಗೆ ಒತ್ತಾಯದಿಂದ ತುಂಬಿದ್ದರೆ ಬೆಳೆದಂತೆಲ್ಲಾ ಅನಾವಶ್ಯಕ ವಿಷಯಗಳು ಮನಸ್ಸಿನಲ್ಲಿ ಹರಿದಾಡಿಕೊಂಡು ಮನಸ್ಸನ್ನು ಮನೆಯನ್ನು  ಅರ್ಥ ಮಾಡಿಕೊಳ್ಳಲು ಸೋತರೆ  ನಮಗೆ ನಾವೇ ಶತ್ರುಗಳು.
ಕಲಿಯುಗ ಕಲಿಕೆಯ ಪ್ರಭಾವದಿಂದಾಗಿ ಹೊರಗಿನ ರಾಜಕೀಯ ಮಿತಿಮೀರಿದೆ ಒಳಗಿದ್ದ ರಾಜಯೋಗದ ವಿಷಯ ಕುಸಿಯುತ್ತಿದೆ. ಕೆಲವರು ಎಚ್ಚರವಾಗಿ ಹಿಂದೆ ತಿರುಗಿ ತಮ್ಮ ಮೂಲ ಧರ್ಮ ಕರ್ಮ ದೆಡೆಗೆ ಬಂದರೆ ಹಲವರು ಹಿಂದಿರುಗಲಾಗದೆ ತಮ್ಮ ಭೂಮಿಯನ್ನು ‌ಮಾರಿ ಪರಕೀಯರ ಕೈವಶವಾಗಿದ್ದರೂ ದ್ವೇಷ ಬಿಡಲಾಗುತ್ತಿಲ್ಲ.
ಮನಸ್ಸಿನ ಈ ಸಮಸ್ಯೆಯ‌ಮೂಲ ನಮ್ಮವರೆ ಹಿಂದಿನವರೆ ಆದಾಗ ಹೋದವರು ಇನ್ನೂ ಇಲ್ಲೇ ಇರುವರೆಂದರ್ಥ. ಆತ್ಮಕ್ಕೆ ಸಾವಿಲ್ಲ. ಪರಮಾತ್ಮನಿಗೆ ಯಾರೂ ವೈರಿಗಳಿಲ್ಲ.
ದೈವತ್ವಕ್ಕೆ ದ್ವೇಷವಿರಬಾರದು. ದೇವಸ್ಥಾನ‌ ಎಲ್ಲರನ್ನೂ ಒಂದಾಗಿಸುವ ತಾಣ ಸ್ಥಳ .ಶುದ್ದಿ ಮಾಡಿಯೇ ದೇವರನ್ನು ಪ್ರತಿಷ್ಟಾಪಿಸುತ್ತಾರೆಂದರೆ  ಒಂದು ಮನೆ ಕಟ್ಟಲು ಆ ಸ್ಥಳ ಶುದ್ದಿ ಮಾಡುವರು, ಮಂದಿರ ಕಟ್ಟಲೂ ಆ ಸ್ಥಳದ ಹಿಂದಿನ ಸತ್ವದ ಬಗ್ಗೆ ತಿಳಿಯುವರು ಹಾಗೆ ಮನಸ್ಸು ಶುದ್ದವಾಗೋದಕ್ಕೆ ನಮ್ಮ ಹಿಂದಿನವರ ಧರ್ಮ ಕರ್ಮದ ಬಗ್ಗೆ ಅರಿವಿರಬೇಕು.ಅದೇ ಸರಿಯಿಲ್ಲದಿದ್ದರೆ ಹೊರಗಿನ ಶುದ್ದತೆಗೆ ಅರ್ಥ ವಿರದು.ಅಂತರಂಗ ಶುದ್ದಿಯೇ ಹಿಂದೂ ಸನಾತನ ಧರ್ಮದ ರಕ್ಷಣೆಯ ಮೂಲವಾಗಿದೆ.

ಹಿಂದೂ ಸನಾತನಧರ್ಮ ಭೂಮಿಯ ಆಳದವರೆಗೂ ಇಳಿದಿದೆ.ಆದರೆ ಭೂಮಿಯ ಮೇಲೆ ಕಡಿಮೆಯಿದೆ ಕಾರಣ ಭೂಲೋಕದ ಜನ‌ಭೂಮಿಯ ಸತ್ಯ ಸತ್ವ ತತ್ವವರಿಯದೆ ಆಕಾಶದತ್ತ ಮುಖ ಮಾಡಿಕೊಂಡು  ನೆಡೆದು ಎಡವಿ ಬಿದ್ದರೂ ಮೀಸೆ‌ಮಣ್ಣಾಗಿಲ್ಲವೆಂದು‌ವಾದ ವಿವಾದದಲ್ಲಿ ಮುಂದೆ ನಡೆದರು. ಭೂಮಿ ಬಿಟ್ಟು  ಮೇಲಿನ‌ಲೋಕದಲ್ಲಿ ಈವರೆಗೆ ಯಾರಾದರೂ‌ ಮನುಕುಲದ ಸಂಸಾರ ನಡೆಸಿರುವರೆ? ಇಲ್ಲ ಎಂದರೆ ಸಂಸಾರ ನಡೆಸಲು ಭೂಮಿಯನ್ನುಉತ್ತಮವಾಗಿ  ಬಳಸಿ  ಬೆಳೆಸುವುದೇ ಧರ್ಮ. 
ಇಂತಹ ಪವಿತ್ರವಾಗಿರುವ ಭೂಮಿಯಲ್ಲಿ ಅಸುರರು ಬೆಳೆದರೆ   ಅಧರ್ಮ ಕ್ಕೆ ಜಯ.ಹಿಂದಿನ ಕಾಲದಲ್ಲಿ  ಕುಟುಂಬದ  ಮುಖ್ಯಸ್ಥ ಜ್ಞಾನದಿಂದ ಎಲ್ಲರನ್ನೂ ಒಂದಾಗಿಸಿ ತಮ್ಮ ಮೂಲದ ಧರ್ಮ ಕರ್ಮ ಕ್ಕೆ ತಲೆಬಾಗಿ‌  ಅನ್ಯಧರ್ಮವನರಿಯದೆ ಇದ್ದಲ್ಲಿಯೇ ಸುಖ ಶಾಂತಿಯಿಂದಿದ್ದರು. ಯಾವಾಗ  ಹೊರಗಿನ‌ಜ್ಞಾನ ಹೆಚ್ಚಾಯಿತೋ  ಭೂಮಿಯ ದುರ್ಭಳಕೆ ಆಗುತ್ತಾ ಮಹಿಳೆ ‌ಮಕ್ಕಳವರೆಗೂ‌ ಹೊರಜಗತ್ತಿನ ವಿಷಯಾಸಕ್ತಿ  ಅನ್ಯಧರ್ಮದ ಕಡೆಗೆ ಹರಿಯಿತು. ಮೂಲದ ಶಕ್ತಿಯಿಂದ ಅಂದರೆ  ಆತ್ಮಶಕ್ತಿ ಆತ್ಮಸಾಕ್ಷಿಯಿಂದ ದೂರವಾದಂತೆ  ನಾವು ಭೂಮಿಯ ಮೇಲಿರುವ  ಸಾಮಾನ್ಯ ಜ್ಞಾನ ಬಿಟ್ಟು ಭೂಮಿಯನ್ನು ಅಗೆದು ಬಗೆದು ಆಳುವಷ್ಟು‌ ವಿಜ್ಞಾನದ ಸಂಶೋಧನೆ ಬೆಳೆಯಿತು.ಈಗ ನಾವು ವಿಜ್ಞಾನದ ಸಂಶೋಧನೆಯ  ಅಡಿಯಾಳುಗಳು. ನಮ್ಮ ಜೀವನ ಇದರಲ್ಲಿ ನಡೆದಿದೆ. ಆದರೆ ಭೂಮಿಯಲ್ಲಿ  ಅಸುರಿ ಶಕ್ತಿ ಬೆಳೆದಿದೆ ಎಂದರೆ ನಾವು ಅಸುರರೆ? ಎಷ್ಟೋ ದೇವತಾರಾಧನೆ ಮಾಡಿದರೂ ಯಾಕೆ ಅಸುರರು ಬೆಳೆದರು?
ಕಾರಣವಿಷ್ಟೆ ದೈವಶಕ್ತಿಯ ಶಿಕ್ಷಣದ ಕೊರತೆ ನಮ್ಮ ಒಳಗಿನ ಅಸುರಿಗುಣಗಳಾದ ಅತಿಯಾದ ಸ್ವಾರ್ಥ ಅಹಂಕಾರದ ರೂಪ ಪಡೆದು ನಮಗೇ ತಿಳಿಯದೆ ಅಂತಹ ಗುಣದವರನ್ನೇ ಸಹಕಾರ ಕೊಟ್ಟು ಬೆಳೆಸಿರುವಾಗ ಅದರ ಫಲ ಹಿಂದಿರುಗಿ ಬರುತ್ತಿದೆ. ಇದರಿಂದ ಬಿಡುಗಡೆ ಪಡೆಯಲು ಹಿಂದಿರುಗಿ ನಮ್ಮ ಮೂಲದ ಭೂಮಿಯನ್ನು ಉತ್ತಮವಾಗಿ ಬಳಸಬೇಕು.ಕೆಲವರಿಗಷ್ಟೆ ಈ ಅದೃಷ್ಟ ವಿರಬಹುದು.ಕಾರಣ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು  ಭೂಮಿ ಕೊಟ್ಟು ನಗರಕ್ಕೆ ಬರುವಂತಾಗಿದೆ. ಸರಿಯಾದ ಮಳೆ ಬೆಳೆ ಆಳು ಕಾಳುಗಳಿಲ್ಲ.
ಆದರೆ ಕೊಡೋವಾಗ  ಹಿಂದೂಗಳಿಗೇ ಕಡಿಮೆ ಬೆಲೆಗೆ ಕೊಟ್ಟರೆ ಉತ್ತಮ.ಅನ್ಯಧರ್ಮದವರಿಗೆ ಹೆಚ್ಚಿನ‌ಬೆಲೆ ಸಿಗುವುದೆಂದು ಮಾರಿದರೆ  ಮುಂದೆ ಅದೇ ದೊಡ್ಡ ರೋಗಕ್ಕೆ  ಕಾರಣವಾಗುತ್ತದೆ.
ಕಾರಣ ಒಂದು  ಪುರಾತನ. ದೇಗುಲವಾಗಲಿ,ಮನೆಯಾಗಲಿ ಕಟ್ಟುವಾಗ ಸಾಕಷ್ಟು  ಭೂಮಿ ಪೂಜೆ ಸಂಸ್ಕಾರಗಳು ನಡೆಸಿಶುದ್ದಮಾಡಿರುವರು.ನಂತರ ಆ ಸ್ಥಳ ದೇವಸ್ಥಾನವಾಗಿರುತ್ತದೆ. ಯಾವಾಗ ಅದು ಬೇರೆಯವರ ಕೈವಶವಾಗುವುದೋ ಪವಿತ್ರತೆ ಹೋಗುತ್ತದೆ. ಅದರ ಫಲ ಕೊಟ್ಟವರು ಅನುಭವಿಸಲೇಬೇಕೆನ್ನುವರು ಅಧ್ಯಾತ್ಮ ಚಿಂತಕರು.
ಇದೇ ಕಾರಣಕ್ಕಾಗಿ ಸತ್ಪಾತ್ರರಿಗೆ ದಾನಧರ್ಮ ಮಾಡಬೇಕೇನ್ನುವರು.ನಮ್ಮ ಹಿಂದೂ ದೇವಾಲಯಗಳ ಕಥೆ ಈಗ. ಇದೇ ಆಗಿದೆ.
ಎಲ್ಲಾ ಪವಿತ್ರ ಮಂದಿರಗಳ ಸ್ಥಳವನ್ನು ಮಲಿನಗೊಳಿಸಿ ಮತ್ತೆ ಹಿಂದುಗಳಿಗೆ ಬಿಟ್ಟರೂ ಅದನ್ನು ಮತ್ತೆ‌ಶುದ್ದಗೊಳಿಸಲು ಸಾಕಷ್ಟು   ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಧಾರ್ಮಿಕ  ಸೇವೆ ಆಗಬೇಕು. ಅದಾಗದೆ ಇನ್ನಷ್ಟು ಸಾಲ ಮಾಡಿಟ್ಟು ಆಡಂಬರದ  ಕಾರ್ಯಕ್ರಮ ನಡೆಸಿ  ಜನರ ಹಣವನ್ನು ದುರ್ಭಳಕೆ ಮಾಡಿ ರಾಜಕೀಯ ನಡೆಸಿದರೆ ಇರುವ ಅಲ್ಪ ಸ್ವಲ್ಪ ಪುಣ್ಯವೂ ಹೋಗಿ  ಪಾಪದ ಕೂಪಕ್ಕೆ ಜೀವ ಹೋಗುತ್ತದೆ. ಅಧ್ಯಾತ್ಮ ಸತ್ಯ ಅರ್ಥ ವಾಗೋದು  ಕಷ್ಟ.ಕಾರಣ ಎಲ್ಲಿಯವರೆಗೆ ದೇವರನ್ನು ಹೊರಗೆ ಬೆಳೆಸಿ ಒಳಗಿನ ದೈವತ್ವ ಹಿಂದುಳಿಯುವುದೋ  ಅಲ್ಲಿಯವರೆಗೆ ಹಿಂದುಳಿದೇ ಇರುವೆವು.
ಹಿಂದೂಗಳು ವಿಶ್ವದ  ತುಂಬಾ ಇರುವರು. ಹಿಂದೂಸ್ತಾನಿ ಎಲ್ಲರೂ ಆಗಿಲ್ಲ. ನಮ್ಮ ಹಿಂದಿನ ಗುರುಹಿರಿಯರಲ್ಲಿದ್ದ ದೈವೀಕ ಗುಣಜ್ಞಾನ ನಮ್ಮಲ್ಲಿ ಇರಲು ಅವರ ತತ್ವಜ್ಞಾನ ಅರ್ಥ ಆಗಬೇಕು.ತತ್ವ ನಮ್ಮ ಮೂಲದೆಡೆಗೆ ಅಂದರೆ ಪರಮಾತ್ಮನ ಕಡೆಗೆ ಎಳೆಯುವುದರಿಂದ ನಮ್ಮ ನಮ್ಮ ಮೂಲದ ಭೂಮಿ ಧರ್ಮ ಕರ್ಮ ದ ಜೊತೆಗೆ ನಮ್ಮ ಜೀವನ ಇರುತ್ತದೆ.ಆಗ ಹೊರಗಿನವರ ಮಧ್ಯಸ್ಥಿಕೆ ಇರದೆ ಸ್ವತಂತ್ರ ಜ್ಞಾನದಿಂದ  ಸತ್ಯದ ಅರಿವಿನಲ್ಲಿ ಸರಳ ಜೀವನ ನಡೆಸಿ ಸಂತೃಪ್ತಿ ಯಿಂದ ದೈವನೆಲೆ ಕಂಡಿದ್ದರು.
ಇದೇ ಭೂಮಿಯಲ್ಲಿದ್ದ ಎಲ್ಲಾ ದೇವತೆಗಳನ್ನು ನೆನಪಿಸಿಕೊಂಡು ಅವರ ಸತ್ಯ ಧರ್ಮದ ಹಾದಿಯಲ್ಲಿ ನಡೆಯುವುದು ಇಂದು ಕಷ್ಟ ಆದರೆ  ನಡೆಯದಿದ್ದರೆ ಅಸುರರ ವಶದಲ್ಲಿ ಜೀವ‌ಸಿಲುಕುತ್ತದೆ.ನಮ್ಮ ಭೂಮಿ ಆಸ್ತಿ ಸಂಸಾರವೂ  ಅವರ ವಶವಾದಾಗ  ಯುದ್ದವಾಗುತ್ತದೆ.
ಒಟ್ಟಾಗಿ  ಹೋರಾಡುವುದಕ್ಕೂ ಒಬ್ಬರೆ ಹೋರಾಡುವುದಕ್ಕೂ ವ್ಯತ್ಯಾಸವಿದೆ. ತನ್ನ  ತಾನರಿತು ಇತರರನ್ನು ಅರಿಯುವುದಕ್ಕೂ,ತನ್ನ ತಾನರಿಯದೆ ಪರರನ್ನು ಅರಿಯುವುದಕ್ಕೂ   ಅಂತರವಿದೆ. ಎಲ್ಲಾ ಬೇರೆ ಎಂದರೂ ಸರಿ.ಎಲ್ಲಾ ಒಂದೇ ಎಂದರೂ ಸರಿ.  ಎಂದರೆ ನಮ್ಮ ಮನಸ್ಸಿಗೆ ಬರೋದೆ ಒಂದು ಆಗೋದೇ ಇನ್ನೊಂದು ಎಂದರೆ ನಮ್ಮನ್ನು ನಡೆಸಿರೋದು ಬೇರೆ ಶಕ್ತಿ.ನಾವಂದುಕೊಂಡದ್ದೆ ಆದರೆ ನಮ್ಮದೇ ಶಕ್ತಿ. ನಮ್ಮವರನ್ನು ಬಿಟ್ಟು ದೂರಹೋದಂತೆಲ್ಲಾ ಪರರ ವಶದಲ್ಲಿ ಜೀವನವಿರುತ್ತದೆ.

ಧರ್ಮ ದೇವರು ಇರೋದೆಲ್ಲಿ?

ಧರ್ಮ ರಕ್ಷಿಸಿ ಎನ್ನುವುದು ಸುಲಭ ಯಾವುದು ಧರ್ಮ ಅಧರ್ಮ ಎನ್ನುವ ಪ್ರಶ್ನೆ ಬಂದಾಗ  ಬಡವ ಬಲ್ಲಿದ ಶ್ರೀಮಂತ ಮೇಲು ಕೀಳಿನ ರಾಜಕೀಯವೇ ಎದ್ದು ನಿಲ್ಲುವುದು..ಮಾನವೀಯ‌ಮೌಲ್ಯಗಳನ್ನು ಮರೆತು ಮುಂದೆ ಅಧಿಕಾರ ಪಡೆದವರಿಗೆ ಧರ್ಮದ‌ಬಗ್ಗೆ ತಿಳಿಸುವುದೇ ಅಧರ್ಮ ಎನ್ನುವ ಮಟ್ಟಿಗೆ ಹೊರಗೆ ತಮ್ಮದೇ ಆದ ಧರ್ಮ ಬೆಳೆಸಿದ್ದರೂ ಒಳಗಿದ್ದ ಸತ್ಯಕ್ಕೆ ಬೆಲೆಯಿಲ್ಲ ಮೂಲದ ಧರ್ಮ ಕರ್ಮಕ್ಕೆ ನೆಲೆಯೇ ಇಲ್ಲವಾದರೆ  ಧರ್ಮ ಕುಂಟುತ್ತದೆ. ಸತ್ಯ ಕುರುಡು ಜಗತ್ತನ್ನು  ಸೃಷ್ಟಿಸಿ ಆಳುತ್ತದೆ. ಒಟ್ಟಾರೆ ಇಲ್ಲಿ ಧರ್ಮದ ಚೌಕಟ್ಟನ್ನು ಭದ್ರಗೊಳಿಸಲು ಸಾಕಷ್ಟು ಪ್ರಯತ್ನ ಆಗಿದ್ದರೂ ಧಾರ್ಮಿಕ ಶಿಕ್ಷಣ ಮಾತ್ರ ಕೊಡದೆ ಆಳಿದವರೆ ಹೆಚ್ಚಾಗಿರೋದರಿಂದ ಈಗಲೂ ಕಾಲಮಿಂಚಿಲ್ಲ ನಿಮ್ಮ ನಿಮ್ಮ ‌ಮನೆಯ ಮನವ ಸಂತೈಸಿಕೊಳ್ಳುವಷ್ಟು ಆತ್ಮವಿಶ್ವಾಸದಿಂದ ನಮ್ಮವರನ್ನು ಒಗ್ಗೂಡಿಸಿ  ಸಂಪತ್ತನ್ನು  ಸದ್ವಿನಿಯೋಗಿಸಿ  ಪರಮಾತ್ಮನ ಕಡೆಗೆ ನಡೆಯಬಹುದು.ಆದರೆ, ಪರಮಾತ್ಮನ ಕಡೆಗೆ ಜೀವಾತ್ಮ ನಡೆಯಬೇಕಾದರೆ ಯೋಗದಿಂದ ಮಾತ್ರ ಸಾಧ್ಯ. ಇದು ಯೋಗಾಸನಕ್ಕೆ ಸೀಮಿತವಾಗದೆ ಎಲ್ಲರನ್ನೂ ಸೇರಿಸಿ ಕೂಡಿಸಿ ಬಾಳುವ‌ಕಡೆಗೆ ನಮ್ಮ ಸಂಪತ್ತನ್ನು  ಪರಮಾತ್ಮನ ಸೇವೆಗೆ ಬಳಸುವಾಗ ನಿಸ್ವಾರ್ಥ ‌ನಿರಹಂಕಾರದ ಜೊತೆಗೆ ಪ್ರತಿಫಲಾಪೇಕ್ಷೆ ಇಲ್ಲದ ಮನಸ್ಸಿರಬೇಕು.
ಅಷ್ಟೊಂದು ಆಸ್ತಿ ಪಾಸ್ತಿ ಅಂತಸ್ತು ಅಧಿಕಾರ ಹೆಸರು ಹಣದ ಮೂಲವೇ  ಭ್ರಷ್ಟಾಚಾರ ವಾಗಿದ್ದರೆ ನೀರಿನಲ್ಲಿ ಹೋಮಮಾಡಿದಂತೆ. ಕೆರೆಯ ನೀರನು‌ಕೆರೆಗೆಚೆಲ್ಲಿ....ಎಂದರೆ ಸರಿ‌ಕೊಳಚೆಗೆ‌ಚೆಲ್ಲಿ ಅಸುರರನ್ನು ಒಂದುಗೂಡಿಸಹೋದರೆ ಒಳಗೆ ಸ್ವಚ್ಚವಿರುವುದೆ?
ಅಮಾಯಕರ ಜೀವನ ಜೀವ‌ತೆಗೆದು ಎಷ್ಟು  ವರ್ಷ ಬದುಕಿದರೂ  ಸಾವು ನಿಶ್ಚಿತ ಜೊತೆಗೆ ಪಾಪದ ಫಲವೂ ಖಚಿತವಾಗಿ ಹಿಂದೇ ಬರುತ್ತದೆ. ಆದ್ದರಿಂದ ಧರ್ಮದ ವಿಚಾರದಲ್ಲಿ ಸಾಕಷ್ಟು ರಾಜಕೀಯತೆ ಬೆಳೆಸಿಕೊಂಡು ಜನರ ಹಣ ದಿಂದಲೇ ದೇವರನ್ನೂ ಖರೀದಿಸುವಷ್ಟು ಅಧರ್ಮ ಅನ್ಯಾಯ ಅಸತ್ಯದ ಭ್ರಷ್ಟರಿಗೆ  ಜನಸಹಕಾರವಿದ್ದರೆ ಪ್ರಗತಿಯಲ್ಲ ಅಧೋಗತಿ. ಎಲ್ಲಿರುವರು ಮಹಾತ್ಮರು?
ಆತ್ಮ ವೇ ದೇವರು, ಸತ್ಯವೇ ದೇವರು,ಧರ್ಮ ವೇ ದೇವರು,ತಾಯಿಯೇ ದೇವರು,ಗುರುವೇ ದೇವರು.....ಇವರು ಮನೆಮನೆಯಲ್ಲಿಲ್ಲವೆ? ಒಳಗೇ ಇರುವ ದೇವರನ್ನು  ಬಿಟ್ಟು ಹೊರಬಂದರೆ ಧರ್ಮ ವೆ?
ಕಲಿಗಾಲದ ಕಲಿಕೆಯೇ ಹೊರಮುಖವಾಗಿರುವಾಗ ಒಳಮುಖದ ಸತ್ಯ ಧರ್ಮ ಕಾಣದು. 

Wednesday, July 17, 2024

ಪ್ರಥಮ ಏಕಾದಶಿ ಶಯನ ಏಕಾದಶಿ

ಸಾಮಾನ್ಯವಾಗಿ ಹಿಂದೂಗಳ ಉಪವಾಸವ್ರತ ಆಚರಣೆಗಳ ದಿನದಂದು ಅನ್ಯಧರ್ಮದವರ ಹಬ್ಬಗಳು ಜೊತೆಗಿರುತ್ತವೆ. ಆದರೆ ಆಚಾರ ವಿಚಾರ ಪ್ರಚಾರದಲ್ಲಿ ಆಹಾರ ವಿಹಾರಗಳಲ್ಲಿ ಬಹಳ. ವ್ಯತ್ಯಾಸ ವಿರುವ ಕಾರಣ ಅಂತರ ಬೆಳೆದಿದೆ ಸಾತ್ವಿಕತೆಯ ಜೊತೆಗೆ ತಾಮಸಿಕತೆ ಸೇರಿದರೆ  ಪ್ರಕೃತಿಯಲ್ಲಿ ವಿರುದ್ದ ಬದಲಾವಣೆ ಹೇಗೆ ಆಗುವುದೋ ಹಾಗೆಯೇ ನಮ್ಮ ಆಚಾರ ವಿಚಾರಗಳಲ್ಲಿ ಆಹಾರವಿಹಾರಗಳಲ್ಲಿ ಸತ್ವವಿದ್ದರೆ  ಪ್ರಕೃತಿವಿಕೋಪವಿರದು. ಇದು ಹಿಂದೂಗಳಲ್ಲಿಯೇ ಬೇರೆ ಬೇರೆಯಾದಾಗಂತೂ ಧರ್ಮ ಸಂಕಟ‌ ಹೇಳತೀರದು.
ಅನ್ಯರಿಗೆ ತಿಳಿಯದೆ ಮಾಡಿದರೆ ತಿಳಿದೂ ಮಾಡುವವರ ಕಥೆ ಗೋವಿಂದ.
ಇಂದು ಆ ಆಷಾಢ ಏಕಾದಶಿಯ ಪ್ರಯುಕ್ತ ಕೆಲವರಿಗೆ ಉಪವಾಸ,ಹಲವರಿಗೆ ಉಪಚಾರ .ಉಪಯೋಗಿಸುವ  ಪದಾರ್ಥದಿಂದ ಹಿಡಿದು ನಡೆ ನುಡಿಗಳಲ್ಲಿ ತುಂಬುವ ಸತ್ವ ದಿಂದ ಆತ್ಮಶುದ್ದಿಯಾಗುತ್ತದೆ.
ವರ್ಷವಿಡೀ ತುಂಬಿಕೊಳ್ಳುವ ವಿಷಯವನ್ನು ಒಂದು ದಿನದಲ್ಲಿ ಶುದ್ದಿಗೊಳಿಸಲಾಗದು.ಆದರೂ ಶುದ್ದವಾಗಿಟ್ಟುಕೊಂಡರೆ ನಮಗೇ ಒಳ್ಳೆಯದೆನ್ನುವ ಕಾರಣಕ್ಕಾಗಿ ಹಲವಾರು ಉಪವಾಸವ್ರತ ಪೂಜೆ ಯಾಗ ಯಜ್ಞ ಹವನ ಹೋಮಗಳಿಂದ ಭಗವಂತನೆಡೆಗೆ ಹೋಗಲು ನಮ್ಮ ಆಚರಣೆಗಳು  ಆತ್ಮಶುದ್ದಿಗೆ  ಸಹಕಾರಿಯಾಗಿದೆ.

ಮಹಾವಿಷ್ಣು ಕ್ಷೀರಸಾಗರದಲ್ಲಿರುವ ಶೇಷನ ಮೇಲೆ ಮಲಗಿನಿದ್ರಿಸುವ ಕಾರಣದಿಂದ ಇದನ್ನು ಶಯನ ಏಕಾದಶಿ ಎಂದೂ ಕರೆಯುತ್ತಾರೆ.
ಜಗದೊಡೆಯನೇ ನಿದ್ರೆಗೆ ಜಾರಿದರೆ ಸಾಮಾನ್ಯರ ಪಾಡೇನು? ಇದಕ್ಕಾಗಿ  ಈ ದಿನಗಳಲ್ಲಿ ಜನರಲ್ಲಿ ಸಾತ್ವಿಕ ಗುಣ ಹೆಚ್ಚಿಸಲು   ಉಪವಾಸ ವ್ರತ ಪೂಜೆ ಆರಾಧನೆಗಳಿವೆ. ಒಟ್ಟಾರೆ ಪರಮಾತ್ಮನಿಲ್ಲದೆ ಜೀವಾತ್ಮನಿಲ್ಲ.ಜೀವಾತ್ಮನ ಧರ್ಮ  ಕರ್ಮದಿಂದ ಪರಮಾತ್ಮನ ಸೇವೆಯಾಗುತ್ತದೆ.

ಇಂತಹ ಆಚರಣೆಗಳ ಮೂಲಕ ನಮ್ಮ ಧರ್ಮ ರಕ್ಷಣೆ ಆದರೂ, ನಮ್ಮ ಕೆಲಸ ಕಾರ್ಯಗಳು ಅನ್ಯರ ಕೈ ಕೆಳಗಿದ್ದರೆ ಅವರ ಧರ್ಮದ ಆಚರಣೆಯನ್ನೂ ಒಪ್ಪಲೇಬೇಕಷ್ಟೆ.
ಒಬ್ಬರ ಸತ್ಯ ಇನ್ನೊಬ್ಬರ  ಮಿಥ್ಯಕ್ಕೆ ವಿರುದ್ದವಿದ್ದರೆ ಕಷ್ಟ ನಷ್ಟ. ಇಬ್ಬರಿಗೂ  ಆಗೇ ಆಗುತ್ತದೆ.
ಇಡೀ ಜಗತ್ತಿನಲ್ಲಿ ಯಾರೂ ಸಂಪೂರ್ಣಸುಖದಿಂದಿಲ್ಲವೆಂದರೆ 
ಎಲ್ಲರಿಗೂ ಅವರವರ ಧರ್ಮ ಕರ್ಮ ವನ್ನು  ಪೂರ್ಣ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಆಗೋದು ಇಲ್ಲ.
ಬದುಕಿದು ಜಟಕಾಬಂಡಿ ವಿಧಿ ಓಡಿಸುವ ಬಂಡಿ. ಹಣೆಬರಹ ಅಳಿಸಲು ಹೋದರೆ ಆಗೋದೆ‌ಬೇರೆ.ಹಾಗಂತ ಸುಮ್ಮನಿರಲು ಸಾಮಾನ್ಯರಿಗೆ ಸಾಧ್ಯವೆ? .ಒಳ್ಳೆಯದಕ್ಕೆ ಸಹಕರಿಸಿದರಾಯಿತು.ಕೆಟ್ಟದ್ದುತಾನಾಗೇ ಹಿಂದೆ ಸರಿಯುತ್ತದೆ.
ಒಳ್ಳೆಯ ಸಹಕಾರ ನೀಡಲಾಗದಿದ್ದರೂ ಸರಿ ಕೆಟ್ಟದ್ದಕ್ಕೆ ಸಹಕಾರ ನೀಡಬಾರದು. ಕಣ್ಣಿಗೆ ಕಾಣೋದೆಲ್ಲ ಒಳ್ಳೆಯದಿರದು.ಕಾಣದ್ದು  ಹಲವು ಇದ್ದರೂ ಒಳ್ಳೆಯದೆ ಆಗುವುದು.ಆಗೋದೆಲ್ಲ ಒಳ್ಳೆಯದಕ್ಕೆ ಎಂದಿದ್ದಾರೆ.
ಪ್ರಕೃತಿವಿಕೋಪ ಒಳ್ಳೆಯದೆ? ತಡೆಯಬಹುದೆ? ಪ್ರಕೃತಿಯ ಪರ ನಿಂತು ಜೀವನ ನಡೆಸಿದರೆ ಸಾಧ್ಯವಿದೆ. ಅದಕ್ಕಾಗಿ ಪರಮಾತ್ಮನ ಸೇವೆ ಸತ್ವಯುತ ವಾಗಿದ್ದರೆ ಉತ್ತಮ.
"ನೀನ್ಯಾಕೋ ನಿನ್ನ‌ಹಂಗ್ಯಾಕೋ ನಿನ್ನನಾಮ ಒಂದಿದ್ದರೆ ಸಾಕು"
ಮಾನವ ಪರಮಾತ್ಮನ ಸ್ಮರಣೆ ಮಾತ್ರದಿಂದಲೇ ಪುಣ್ಯಗಳಿಸುವನೆಂದರೆ  ಆ ಸ್ಮರಣೆಗಾಗಿ  ಎಷ್ಟೋ ಶ್ರಮ ಪಡಬೇಕು. ಮನಸ್ಸು  ಹೊರಗಿದ್ದಾಗ ಒಳಗಿನಸ್ಮರಣೆ ಆಗದು.ಇದಕ್ಕಾಗಿ ದೇಹ ಶುದ್ದಿ ಗಾಗಿಯೋಗ ಕೂಡಿಬರಬೇಕು.
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮ ಯೋಗದಲ್ಲಿ ಯಾವುದಾದರೂ ಸರಿ ಸತ್ವ ಸತ್ಯ ತತ್ವವಿದ್ದರೆ ಪರಮಾತ್ಮನ ಸ್ಮರಣೆಯಲ್ಲಿರುವುದೇ ಮಹಾಯೋಗ. ಉಸಿರಿನಲ್ಲಿದ್ದರಂತೂ ಸ್ವಯಂ ಭಗವಂತನೇ ನಡೆಸುವನು.
ರಾಮಜಪದಿಂದಲೇ ರಾಮನನ್ನು ಸೇರಿರುವ  ಯೋಗಿಗಳ ದೇಶದಲ್ಲಿ  ರಾಮಭಕ್ತರು ಬೇರೆ ಕೃಷ್ಣ ಭಕ್ತರು ಬೇರೆಯಾಗಬಾರದು. ಹೋಗಲಿ ಶ್ರೀ ರಾಮನ ಗುಡಿ  ಗೋಪುರ ದೇವಸ್ಥಾನ  ಮಠ ಮಂದಿರಗಳನ್ನು  ಕಟ್ಟಿದವರು ಶ್ರಮಿಕರು.ಕಟ್ಟಿಸಿದವರು ಧನಿಕರಾದರು.ಶ್ರಮಿಕರಿಗೆ ಸಿಗದ ರಾಮ ಧನಿಕರಿಗೆ  ಸಿಗುವನೆ?  ಹೀಗೇ ಎಲ್ಲಾ ವಿಷಯದಲ್ಲೂ ನಾವು ಮೇಲುಕೀಳೆಂಬುದನ್ನು ಕಾಣುತ್ತೇವೆ ಆದರೆ ಪರಮಾತ್ಮನದೃಷ್ಟಿಯಲ್ಲಿ  ವ್ಯವಹಾರಕ್ಕೆ ಸ್ಥಾನವಿಲ್ಲ.ಜೀವಾತ್ಮನಲ್ಲಿದೆ.ಎಲ್ಲಿಯವರೆಗೆ ವ್ಯವಹಾರಕ್ಕೆ ಜೊತೆಗಿರುವರೋ ಅಲ್ಲಿಯವರೆಗೆ ಪರಮಾತ್ಮನ ದರ್ಶನ ವಾಗಲ್ಲ.  ಹಿಂದೆ ಯಾರಿಗೂ ಆಗಿಲ್ಲ.

ಎಲ್ಲದಕ್ಕೂ ಕಾರಣ ಸ್ತ್ರೀ ಯೆ? ಪುರುಷನೆ?

ಪುರುಷಪ್ರಧಾನ ಸಮಾಜ ಮತ್ತು ಭಾರತ
ಮಹಾಭಾರತ ಯುದ್ದವಾಗಲಿ,ರಾಮಾಯಣಯುದ್ದವಾಗಲಿ ನಡೆದಿದ್ದಕ್ಕೆ ಸ್ತ್ರೀ ಕಾರಣವೆನ್ನುವ  ಮಾತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ವಿವರಿಸಿದರೆ ಪುರುಷಪ್ರಧಾನ ಸಮಾಜವೇ ಇದಕ್ಕೆ ಕಾರಣವೆನ್ನಬಹುದು. ಭಾರತವನ್ನು ಪವಿತ್ರದೃಷ್ಟಿಯಿಂದ ಕಾಣೋದಕ್ಕೆ ಆತ್ಮಜ್ಞಾನವಿರಬೇಕು.ಈ ಆತ್ಮಜ್ಞಾನ ಸಿಗೋದಕ್ಕೆ ಭೂಮಿಗೆ ಬರಬೇಕು.ಭೂಮಿಯಲ್ಲಿ ಜನ್ಮ ಪಡೆಯುವುದಕ್ಕೆ ತಾಯಿಯ  ಗರ್ಭದಿಂದಷ್ಟೆ ಸಾಧ್ಯ.
ಹೀಗಾಗಿ ಜನನಿಯನ್ನು  ಯಾವ ರೀತಿಯಲ್ಲಿ ನೋಡಲಾಗುವುದೋ ಆ ರೀತಿಯಲ್ಲಿ  ಜೀವನವಿರುತ್ತದೆ. ಸಮಾಜಕ್ಕೆ ಮೊದಲು ಸಂಸಾರ ಕಾಣುವ ಮಗು ಸಂಸಾರದಲ್ಲಿರುವ  ಎಲ್ಲಾ ಸದಸ್ಯರ ಪೈಕಿ ತಾಯಿಯನ್ನು ಅವಲಂಬಿಸಿರುತ್ತದೆ.ಆ ತಾಯಿಗೆ ಸಿಗುವ ಜ್ಞಾನದಿಂದ  ತನ್ನ ಜ್ಞಾನ ಮುಂದುವರಿಸಿಕೊಂಡು ಸಮಾಜದ ಒಂದು ಅಂಗವಾಗಿ ಬೆಳೆಯುವ ಮಕ್ಕಳ ಭವಿಷ್ಯ ದ ಮೂಲಾಧಾರವೆ ಮೊದಲು ಗುರು ತಾಯಿಯಾಗಿದ್ದಳು. ಈಗಲೂ ಅಂತಹ ಗುರುವಿದ್ದರೂ ಮೊದಲ ಗುರುವಿನ ಶಿಕ್ಷಣವೇ ಭೌತಿಕ ಶಿಕ್ಷಣ ಹೀಗಾಗಿ ಆಂತರಿಕ ಅರಿವಿಲ್ಲದ ಮಕ್ಕಳು ಮೊದಲು ಮದಲು ನೋಡುವುದು ದೈಹಿಕ ಬೆಳವಣಿಗೆ.ಅಧಿಕಾರ,ಹಣ,ಸ್ಥಾನಮಾನವಿಲ್ಲದ ಸ್ತ್ರೀ ಯನ್ನು ಕೀಳಾಗಿ ಕಾಣುವ ಸಂಸಾರವು ಇಂದಿಗೂ ಭಾರತದಂತಹ ಮಹಾತ್ಮರನ್ನು ಗುರುತಿಸಲು ಸೋತಿದೆ ಎನ್ನಬಹುದು. ಎ ಷ್ಟೋ  ಕುಟುಂಬ  ಒಡೆದಿರುವುದೂ  ಈ ಅಜ್ಞಾನದಿಂದಲೇ ಇದಕ್ಕೆ ಕಾರಣವೆ ಶಿಕ್ಷಣ ವ್ಯವಸ್ಥೆ.
ಹಿಂದಿನ ಶಿಕ್ಷಣ ವ್ಯವಸ್ಥೆ ಮನೆಮನೆಯೂ ಗುರುಕುಲವಾಗಿಸಿ ಅಧ್ಯಾತ್ಮ ದೆಡೆಗೆ  ಸಾಗಿಸಿತ್ತು.ವಿಪರೀತವಾದ ಸ್ತ್ರೀ ಶೋಷಣೆಗೆ ಕಾರಣ ಅಂದಿನ  ಪುರುಷಪ್ರಧಾನ ಸಮಾಜ ವ್ಯವಸ್ಥೆ ಯಾಗಿತ್ತು.ಈಗಲೂ ಇದೇ ಸಮಾಜ ಸ್ತ್ರೀ ಯನ್ನು ಆಳಲು ಹೊರಟು ಸ್ತ್ರೀ ವಿದ್ಯಾವಂತೆಯಾಗಿ ಮನೆಯಿಂದ ಹೊರಬಂದು ಸ್ವತಂತ್ರ ಜೀವನ ನಡೆಸುವಂತೆ ಮಾಡಿದ್ದರೂ  ಒಳಗಿರಬೇಕಾದ ಜ್ಞಾನಶಕ್ತಿ  ಕುಸಿದರೆ ಅಥವಾ ತೊರೆದು ಹೊರಗೆ ಹೋದರೆ  ಏನಾಗಬಹುದು? ಇದಕ್ಕೆ ಕಾರಣವೆಂದರೆ  ಸಂಸಾರ ಬೇರೆ ಸಮಾಜ ಬೇರೆ, ಜ್ಞಾನ ಬೇರೆ ವಿಜ್ಞಾನ ಬೇರೆ, ಸ್ತ್ರೀ ಬೇರೆ ಪುರುಷ ಬೇರೆ, ಹರಿಹರ ರ ಭೇಧಭಾವ, ದ್ವೈತಾದ್ವೈತದ ದ್ವೇಷ, ಹೀಗೇ  ಬೆಳೆಯುತ್ತಾ ಹೋಗಿ ಈಗಿದು ಬಿಡಿಸಲಾಗದ ಗಂಟಾಗಿದೆ. ಸರಳವಾಗಿದ್ದ ತತ್ವವನ್ನು  ಕಠಿಣವಾಗಿಸಿಕೊಂಡು  ಅರ್ಧ ಸತ್ಯವನ್ನು  ಬಂಡವಾಳ ಮಾಡಿಕೊಂಡು ಎಲ್ಲರಿಗೂ ಹಂಚಿದ ಮಧ್ಯವರ್ತಿ ಮಾನವನಿಗೆ ತನ್ನೊಳಗೆ ಅಡಗಿರುವ ಶಿವಶಕ್ತಿಯರ  ಅಂಶದ ಅರಿವಿಲ್ಲದೆ ಹೊರಗಿನ ರಾಜಕೀಯಕ್ಕೆ ಮಣೆ ಹಾಕುತ್ತಾ ಅತಿಥಿ ಸತ್ಕಾರ ಮಾಡಿ ನಮ್ಮವರನ್ನೇ ದ್ವೇಷ ಮಾಡಿಕೊಂಡು ಹೊರಗಿನ ದೇವರನ್ನು ಬೆಳೆಸಿದರೆ  ಕಷ್ಟ ನಷ್ಟ ಯಾರಿಗೆ?
ಸ್ತ್ರೀ ಶಕ್ತಿಯನ್ನು  ಯಾರೋ ಆಳಲು ಹೋಗಿ ಆಳಾಗಿ ಹಾಳಾಗಿ ಹೋದರೂ ಅದರಲ್ಲಿಯೂ ಸಾಧನೆ ಎನ್ನುವವರು ಪುರುಷರಿದ್ದಾರೆ.ಅದೇ ಸ್ತ್ರೀ ತನ್ನ ಆತ್ಮರಕ್ಷಣೆಯ ಜೊತೆಗೆ ದೇಹ ರಕ್ಷಣೆಯನ್ನೂ ಮಾಡಿಕೊಂಡು ಧರ್ಮದ ಹಾದಿ ಹಿಡಿದರೆ  ಅದರಲ್ಲಿ ಲೋಪದೋಷಗಳನ್ನು ಹುಡುಕಿಕೊಂಡು ಕೆಳಗಿಳಿಸುವ  ಪುರುಷಪ್ರಧಾನ ಸಮಾಜದಿಂದ ಭಾರತೀಯರಿಗೆ ಸಿಕ್ಕಿದ್ದು ಭ್ರಷ್ಟಾಚಾರ ಮಾತ್ರ. ಇಲ್ಲಿ ಯಾರೋ ಕೆಲವರು ಉತ್ತಮರಿದ್ದರೂ ಇಡೀ ಸಮಾಜ ಹಾಳಾಗಿ ಹೋಗಿರುವಾಗ  ಕೆಲವರನ್ನು ಎತ್ತಿ ಏಣಿಗೇರಿಸುವ ಅಗತ್ಯವಿಲ್ಲ.ಹಾಗೆಯೇ ಕೆಲವು ಸ್ತ್ರೀ ಯರು ದಾರಿತಪ್ಪಿ ನಡೆದರೆ ಎಲ್ಲಾ ಸ್ತ್ರೀ ಯರೂ ಹೀಗೇ ಎನ್ನಬಾರದಷ್ಟೆ. ಒಳ್ಳೆಯದು ಕಣ್ಣಿಗೆ ಕಾಣದು ಕೆಟ್ಟದ್ದು ಕಂಡರೂ ಹೇಳೋಹಾಗಿಲ್ಲ. ನಿರಾಕಾರ ಶಕ್ತಿ ಕಾಣೀದಿಲ್ಲವೆಂದ ಮಾತ್ರಕ್ಕೆ ಇಲ್ಲವೆಂದಲ್ಲ.ಹಾಗೆ ಕಾಣೋದೆಲ್ಲಾ ಸತ್ಯವಲ್ಲ. ಅಜ್ಞಾನದ ಕಣ್ಣಿಗೆ ಕಂಡದ್ದೇ ಸತ್ಯವೆನ್ನುವ ಮಟ್ಟಿಗೆ ಸಮಾಜ ಭೌತಿಕದಲ್ಲಿ ಬೆಳೆದು ಜ್ಞಾನದ ಕಣ್ಣು ಮುಚ್ಚಿಹೋಗಿದೆ. ಆ ಕಣ್ಣನ್ನು ಯಾರೋ ಹೊರಗಿನಿಂದ ಬಂದು ತೆರೆಸುವ ಮೊದಲು ನಾವೇ ಒಳಗೆಹೊಕ್ಕಿ ನೋಡಲು ಸ್ತ್ರೀ ಸಹಕಾರದ ಜೊತೆಗೆ ಪುರುಷ ಸಹಕಾರ ಅಗತ್ಯವಾಗಿತ್ತು. ವೈಜ್ಞಾನಿಕ ಚಿಂತನೆಗಳಂತೆ ಅಧ್ಯಾತ್ಮದ ಚಿಂತನೆ ಕಣ್ಣಿಗೆ ಕಾಣೋದಿಲ್ಲ. ಅವರವರ ಆತ್ಮಸಾಕ್ಷಿಗೆ ತಕ್ಕಂತೆ ನಡೆಯುವುದಕ್ಕೆ  ಅವಕಾಶ,ಸ್ವಾತಂತ್ರ್ಯ ಇದ್ದರೂ ಹಿಂದಿನವರ ಕುತಂತ್ರದ ಕೆಲವು ರಾಜಕೀಯವಿಚಾರ ಇಂದಿಗೂ  ಸಮಾಜ ಹಾಗು ಸಂಸಾರ ಪೀಡಕರನ್ನು ಸೃಷ್ಟಿ ಮಾಡಿ ಮೆರೆಯುತ್ತಿದೆ. ಎಲ್ಲಿಯವರೆಗೆ ಶಾಸ್ತ್ರ ಸಂಪ್ರದಾಯ, ಆಚರಣೆಗಳು ಶುದ್ದ  ಮನಸ್ಸಿನಿಂದ ನಡೆಯುವುದಿಲ್ಲವೋ ಎಲ್ಲಿಯವರೆಗೆ ಅತಿಯಾದ ವ್ಯವಹಾರಿಕ ಪ್ರವೃತ್ತಿಯ ರಾಜಕೀಯತೆ ಇರುವುದೋ ಅಲ್ಲಿಯವರೆಗೆ ಆತ್ಮಜ್ಞಾನವು ಹಿಂದುಳಿದಿರುತ್ತದೆ. ಪುಸ್ತಕದ ವಿಚಾರ ಮಸ್ತಕಕ್ಕೆ ಬಂದು ಮಾತಿನ ಮೂಲಕ ಹೊರಹೋಗುತ್ತಿದ್ದರೆ ಹೃದಯವಂತರಿರದೆ ಹೃದಯಹೀನ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಹೋರಾಟ,ಹಾರಾಟ,ಮಾರಾಟದ ವ್ಯವಹಾರವೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಮನೆಯೊಳಗಿದ್ದ ಶಕ್ತಿ ಮನದೊಳಗೆ ಹೋಗಲಾಗದೆ  ಅಶುದ್ದತೆಯಿಂದ ಹೊರಗೆ  ಹೆಚ್ಚಾಗಿ ಹರಡಿಕೊಂಡರೆ  ಇದನ್ನು  ರಾಜಕೀಯತೆ ಎನ್ನಬಹುದು.ರಾಜಯೋಗವಾಗಲಾರದು. ಅಧ್ಯಾತ್ಮದ ಬೆಳವಣಿಗೆಗೆ ಆಂತರಿಕ ಶುದ್ದಿಯಾಗಬೇಕು.ಶಾಂತಿಯಿರಬೇಕು.ಇದನ್ನು ಹೊರಗಿನ ರಾಜಕೀಯ ಕೊಡುವುದೆ? ಸಂಸಾರ ಕಷ್ಟವೆಂದು  ಕಾವಿಧರಿಸಿ ಸಂನ್ಯಾಸಿಯಂತೆ ಸಮಾಜದ ಮಧ್ಯೆ ಪ್ರಚಾರಕರಾದವರು ಸಾಕಷ್ಟು ವೈಭವದ ಜೀವನ ನಡೆಸಿದರೂ  ಸಾಧನೆ ಎನ್ನುವುದಾದರೆ ಯಾರು ತಾನೆ ಸಂಸಾರಸ್ಥರಾಗಿದ್ದು ಕಷ್ಟಪಟ್ಟು ಧರ್ಮದ ಹಾದಿಯಲ್ಲಿ ನಡೆಯಲು ಇಷ್ಟಪಡುವರು? ಸಾಕಷ್ಟು ಹಣವಿರುವವರಿಗೆ ಸತ್ಯಜ್ಞಾನದ ಕೊರತೆ, ಹಣವಿಲ್ಲದವರಿಗೆ ಜ್ಞಾನವಿದ್ದರೂ  ಗೌರವದ ಕೊರತೆ.
ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಹೆಚ್ಚಾಗಿದೆ. ಭೂಮಿಯ ಸಾಲ ತೀರಿಸಲು ಬಂದವರು ಭೂಮಿಯನ್ನು ದುರ್ಭಳಕೆ ಮಾಡಿಕೊಂಡಾದರೂ ಭೂ ಆಳುವರು. ಆದರೆ ಋಣ ತೀರಿಸಲು ಭೂ ಸೇವೆ ಮಾಡಬೇಕು. ಸತ್ಕರ್ಮ, ಸ್ವಧರ್ಮ, ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ಜ್ಞಾನವಿಲ್ಲದೆ ಸಾಲ ತೀರದು. ಇಂತಹ ವಿಚಾರವನ್ನು ಶಿಕ್ಷಣದಿಂದ  ಪಡೆದು ಭಾರತದ ಹಿಂದೂ ಸನಾತನ ಧರ್ಮ ಬೆಳೆದಿತ್ತು.ಈಗ ಶಿಕ್ಷಣವೇ ಪರಕೀಯರ ವಶವಾಗಿ ಪರದೇಶಕ್ಕೆ ಹೆಣ್ಣನ್ನು ಕೊಟ್ಟು  ಸ್ವದೇಶಕ್ಕೂ ನನಗೂ ಸಂಬಂಧ ವಿಲ್ಲವೆನ್ನುವಂತೆ ದೇಶವನ್ನೇ ವಿದೇಶ ಮಾಡಲು ಹೊರಟಿರುವ ಸರ್ಕಾರಕ್ಕೆ ಹೆಚ್ಚಿನ ಸಹಕಾರ ನೀಡುವ ಶ್ರೀಮಂತ ಪ್ರಜೆಗಳಲ್ಲಿ  ಆತ್ಮಜ್ಞಾನದ ಕೊರತೆ ಹೆಚ್ಚಾಗಿರೋದು  ಕಣ್ಣಿಗೆ ಕಾಣದ ಕಟು ಸತ್ಯ. ಇದನ್ನು ಪರಧರ್ಮದವರು ಗಮನಿಸುತ್ತಾ ಭಾರತೀಯ ಸ್ತ್ರೀ ಯರನ್ನು ತಮ್ಮೆಡೆ ಸೆಳೆಯುವ‌ಪ್ರಯತ್ನದಲ್ಲಿ ಯಶಸ್ವಿಯಾಗಿರೋದನ್ನು  ಪುರುಷರು ದ್ವೇಷ ಮಾಡಿ ಪ್ರಯೋಜನವಿಲ್ಲ. ಸಾಮಾನ್ಯಜ್ಞಾನದ ಕೊರತೆಯಿಂದ ಇಂದು  ಸಮಾಜದಲ್ಲಿ ಕೆಟ್ಟ ಬದಲಾವಣೆ ಆಗುತ್ತಿದೆ. ಒಳಗಿದ್ದ ಸತ್ವ ಸತ್ಯ ಬಿಟ್ಟು ಹೊರಗಿನ ಮಿಥ್ಯವನ್ನು ತುಂಬಿಕೊಂಡಿರುವ ಸಮಾಜವನ್ನು  ಭೌತಿಕದಲ್ಲಿ  ಕಂಡರೂ  ಅಧ್ಯಾತ್ಮದ  ಕೊರತೆಯನ್ನು  ನೀಗಿಸಲು ಸರಿಯಾದ ಶಿಕ್ಷಣ,ಶಿಕ್ಷಕ,ಗುರು ಮೂಲ ಶಕ್ತಿಯನ್ನು  ಗುರುತಿಸಲು ಸೋತಿರುವುದು ಭಾರತೀಯರ  ಈ ಸ್ಥಿತಿಗೆ ಕಾರಣವೆಂದರೂ ಇಲ್ಲಿ ತಪ್ಪಾಗುತ್ತದೆ. ಕಾರಣ ಇಲ್ಲಿ ಹೇಳಿದ್ದಷ್ಟೇ ಸತ್ಯವೆನ್ನುವ ಮಂದಿ ಹೆಚ್ಚು. ಪುರಾಣ ಇತಿಹಾಸದ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ನಮ್ಮ ಹಿಂದಿನ ರಾಜಕೀಯ ಬಿಡದೆ ರಾಜಯೋಗ ಅರ್ಥ ವಾಗದು. ತನ್ನ ತಾನು ಆಳಿಕೊಳ್ಳುವ ಜ್ಞಾನಶಕ್ತಿ ಸ್ತ್ರೀ ಪುರುಷರಿಬ್ಬರಲ್ಲಿಯೂ ಇದೆ. ಆದರೆ ಸ್ತ್ರೀ ಯ ಅಧ್ಯಾತ್ಮ ಶಕ್ತಿ ಪುರುಷರ ಭೌತಿಕ ಶಕ್ತಿಯನ್ನು  ಆಳುವುದೆನ್ನುವ ಕಾರಣಕ್ಕಾಗಿ ಸ್ತ್ರೀ ಯನ್ನು ಹಿಂದುಳಿಸಿ ಆಳಿರುವುದೇ  ಸಂತಾನದ ಅಜ್ಞಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಮೊದಲ ಗುರುವಿಗೆ ಕೊಡಬೇಕಾದ ಜ್ಞಾನದ ಶಿಕ್ಷಣದಲ್ಲಿಯೇ  ಪುರುಷಪ್ರಧಾನ ಮಿತಿಮೀರಿ ಭಾರತದಂತಹ ಪವಿತ್ರ ದೇಶ ದಾರಿತಪ್ಪಿ ನಡೆಯಲು ಕಾರಣವಾಗಿರೋದು ಸತ್ಯ. ಇಡೀ ಸಂಸಾರದ ಜವಾಬ್ದಾರಿ ಹೊತ್ತು ಹೊರಗೆ ಒಳಗೆ ದುಡಿದು ಜೀವನ ನಡೆಸುತ್ತಿರುವ ಮಹಿಳೆಯರು  ದೇಶದ ಆಸ್ತಿ.ಇವರನ್ನು ಮನರಂಜನೆಗಾಗಿ ಮೀಸಲಾಗಿಟ್ಟುಕೊಂಡವರೆಷ್ಟೋ ಮಂದಿಗೆ  ತಾವು ಆತ್ಮಹತ್ಯೆ ಮಾಡಿಕೊಂಡಿರುವ ಸತ್ಯಜ್ಞಾನವಿಲ್ಲ. ಎಲ್ಲಿಯವರೆಗೆ  ಪುರುಷ ತನ್ನ ಸಾಲ ತೀರಿಸಲು ಧರ್ಮ ಮಾರ್ಗ ಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಆತ್ಮಕ್ಕೆ ಶಾಂತಿ, ನೆಮ್ಮದಿ, ತೃಪ್ತಿ ಸಿಗೋದಿಲ್ಲ.ಅತೃಪ್ತ ಆತ್ಮಗಳಾಗಿದ್ದು ಆತ್ಮವಂಚನೆಯಲ್ಲಿಯೇ  ಕಾಲಕಳೆಯುವಂತಹ  ಮಕ್ಕಳು  ಬೆಳೆಯುತ್ತಿರುವುದರ ಹಿಂದೆ  ಅಜ್ಞಾನವಡಗಿದೆ.ಎಷ್ಟು ಪುಸ್ತಕ ಓದಿದ್ದೇವೆನ್ನುವ ಬದಲಾಗಿ ಎಷ್ಟು ಸತ್ಯ ಧರ್ಮದ  ಮಾರ್ಗ ದಲ್ಲಿ ನಡೆದು ಸ್ವತಂತ್ರ ರಾಗಿ ಸ್ವತಂತ್ರಜ್ಞಾನ ಪಡೆದಿದ್ದೇವೆನ್ನುವುದೇ ಮುಖ್ಯ. ಆಳುವುದಕ್ಕೆ ಹಣ ಬೇಕು.ಹಣಗಳಿಸುವುದಕ್ಕೆ ಜ್ಞಾನವಿರಬೇಕು.ಜ್ಞಾನ ಬಂದ‌ಮೇಲೆ ಹಣ ಸದ್ಬಳಕೆಯಾಗಬೇಕು. ಸದ್ಬಳಕೆ ಧರ್ಮದ ಪರವಿರಬೇಕು.ಧರ್ಮದ ಪ್ರಕಾರ ಜ್ಞಾನಕ್ಕೆ ಲಿಂಗಬೇಧವಿಲ್ಲ. ಹಾಗಾಗಿ ಜ್ಞಾನದೇವತೆಯಿಲ್ಲದ ಬ್ರಹ್ಮಜ್ಞಾನವಿಲ್ಲ. ಬ್ರಹ್ಮಜ್ಞಾನವಿಲ್ಲದೆ ಬ್ರಾಹ್ಮಣನಾಗೋದಿಲ್ಲ.ಬ್ರಾಹ್ಮಣನ ನಂತರ ಕ್ಷತ್ರಿಯಧರ್ಮ, ವೈಶ್ಯ ಶೂದ್ರರೂ ಮೇಲಿನ ತಲೆಯ ಆಧಾರದಲ್ಲಿಯೇ ಬೆಳೆದಿರುವಾಗ ತಲೆಯಿದ್ದವರು ಸರಿಯಾಗಿ ನಡೆಯಬೇಕು. ನಡೆದವರಲ್ಲಿ ತಲೆಯಿದ್ದರೂ ಗುರುತಿಸದವರು ಬೆಳೆದರು.ಇವೆಲ್ಲವೂ ಅಸಮಾನತೆಯ ಅಜ್ಞಾನವನ್ನು ಬೆಳೆಸಿತು.ಈಗಲೂ ಹಳೆಯ ಗಾಯವನ್ನು ಕೆದಕಿಕೊಂಡು ಹುಣ್ಣು ಮಾಡಿಕೊಂಡು  ಜೀವನದಲ್ಲಿ ರೋಗ ಹರಡಲು ರಾಜಕೀಯತೆ ಮನೆಮಾಡಿಕೊಂಡಿದೆ. ಇದನ್ನು ತಡೆಯಲು ಕಷ್ಟ.ಕಷ್ಟಪಟ್ಟರೆ ಸಾಧ್ಯ.ಆದರೆ ಕಷ್ಟವನ್ನು ಹಣದಿಂದ ಸರಿಪಡಿಸಹೋಗಿ ಇನ್ನಷ್ಟು ಸಾಲ ಹೋರಿಸಿ  ತಮ್ಮ ಅಧಿಕಾರ ಸ್ಥಾನಮಾನ ಉಳಿಸಿಕೊಳ್ಳಲು ಹೊರಟಿರುವ ಮಧ್ಯವರ್ತಿಗಳು  ತಾವೂ ಸತ್ಯ ತಿಳಿಯದೆ ಪರರಿಗೂ ತಿಳಿಸದಂತೆ ಅಡ್ಡದಾರಿಗೆ ಸ್ತ್ರೀ ಯರನ್ನು ಮಕ್ಕಳನ್ನು ಎಳೆದಿರೋದು ದುರಾದೃಷ್ಟಕರ ವಿಚಾರ. ಒಟ್ಟಿನಲ್ಲಿ ಮಾಡಿದ್ದುಣ್ಣೋ ಮಹಾರಾಯ ಎಂದು ಪುರುಷರಿಗೆ ಹೇಳಿರುವುದಕ್ಕೆ ಈ ರಾಜಕೀಯತೆ ಕಾರಣ.
ಹಿಂದಿನ ಸ್ತ್ರೀ ಯರಲ್ಲಿದ್ದ ಆತ್ಮಜ್ಞಾನಕ್ಕೂ ಈಗಿನ ವಿಜ್ಞಾನಕ್ಕೂ ಬಹಳ ಅಂತರವಿದೆ.ಈ ಅಂತರವನ್ನು ಮದ್ಯವರ್ತಿಗಳು ನಿಂತು ಕುತಂತ್ರದಿಂದ  ಇನ್ನಷ್ಟು ದೂರ ಮಾಡಿದರೆ‌ಯಾರಿಗೆ ಲಾಭ? ನಷ್ಟ? ಮನುಕುಲ ಎಚ್ಚರವಾಗೋದು ಕಷ್ಟವಿದೆ.
ಭ್ರಷ್ಟಾಚಾರ ಬೆಳೆಯಲು ಕಾರಣ ಸ್ತ್ರೀ ಸಹಕಾರ. ಇದರಿಂದಾಗಿ ಸ್ತ್ರೀ ಶೋಷಣೆ ಹೆಚ್ಚಾಗುವುದೆನ್ನುವ ಸತ್ಯವನ್ನು ಸ್ವಯಂ ಸ್ತ್ರೀ ಅರ್ಥ ಮಾಡಿಕೊಂಡಿಲ್ಲ. ಹಣವೇ ಸರ್ವಸ್ವ ವಲ್ಲ.ಜ್ಞಾನ ಸರ್ವಸ್ವ.ಕರ್ಮಫಲ ಈ ಜನ್ಮದಲ್ಲಿ  ಅನುಭವಿಸದಿದ್ದರೂ ಮುಂದಿನ ಜನ್ಮದಲ್ಲಿ ಅನುಭವಿಸಲೇಬೇಕೆನ್ನುವುದು ಅಧ್ಯಾತ್ಮ ಸತ್ಯ. ಭೌತಿಕ ವಿಜ್ಞಾನ ಒಪ್ಪಲಿ ಬಿಡಲಿ ಸತ್ಯ ಒಂದೇ. ಇದನ್ನರಿತು  ನಡೆದರೆ ಸಮಾನತೆ ಮನೆಯೊಳಗೆ ಹೊರಗೆ ಸರಿಯಿರುತ್ತದೆ. ಸಂಸಾರ ಸಮಾಜದ ಒಂದು ಭಾಗವಷ್ಟೆ. ಸಮಾಜವೇ ಸಂಸಾರವಾದರೆ ನಡೆಸೋದು ಕಷ್ಟ.ಅವರವರ ಜ್ಞಾನದ ಸದ್ಬಳಕೆಗೆ ಸರ್ಕಾರದ ಹಣಕ್ಕಿಂತ ಜ್ಞಾನದ ಶಿಕ್ಷಣವೇ ಮೂಲಾಧಾರ.
ಮೂಲಾಧಾರ ಬಿಟ್ಟು ಸಹಸ್ರಾರದವರೆಗೆ  ಹೋಗಲು ಕಷ್ಟ.ಮೂಲದ ಧರ್ಮ ಕರ್ಮ ಜ್ಞಾನದ ಶಿಕ್ಷಣವೇ ಕೊಡದೆ ರೆಂಬೆಕೊಂಬೆಗಳನ್ನು  ಹಿಡಿದರೆ  ಮೂಲಾಧಾರ ಗಟ್ಟಿಯಾಗುವುದೆ?  ಹಲವರು ಬದಲಾಗುತ್ತಿದ್ದಾರೆ.ಕೆಲವರಿಗೆ ಬದಲಾವಣೆ ಕಷ್ಟವಾದರೂ ಸಾಧ್ಯವಿದೆ. ಬದಲಾಗದವರಿಗೆ ಬದಲಾಯಿಸಲಾಗದು. ಬದಲಾವಣೆ ಜಗದ ನಿಯಮ. ಕಾಲಚಕ್ರ ತಿರುಗುವುದಂತೂ ಸತ್ಯ. ಕಾಲಿಗೆ ಚಕ್ರ ಕಟ್ಟಿಕೊಂಡು  ಓಡುವ ಬದಲು ನಿಂತಲ್ಲಿಯೇ ಕಾಲಮಾನದ ಬಗ್ಗೆ ಚಿಂತನೆ ನಡೆಸಿ ನಡೆದರೆ ಉತ್ತಮ ದಾರಿ ಹತ್ತಿರವೇ ಸಿಗಬಹುದು.

ಭಾರತೀಯರ ಸ್ಥಿತಿಗೆ ಶಿಕ್ಷಣವೆಷ್ಟು ಕಾರಣ?

ಭಾರತೀಯರ ಈ ಸ್ಥಿತಿಗೆ ಕಾರಣವಾಗಿರುವ ಶಿಕ್ಷಣ ಪದ್ದತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ  ಸಾಕಷ್ಟು  ಪ್ರಯತ್ನಗಳಾಗುತ್ತಿದೆ. NEP ಪ್ರಕಾರ  ಕೆಲವು ಶಾಲಾ ಕಾಲೇಜುಗಳಲ್ಲಿ  ಪಠ್ಯಪುಸ್ತಕಗಳನ್ನು ಅಳವಡಿಸಿ ಪ್ರಾರಂಭವೂ ಆಗಿದೆ. ಆದರೆ ನಮ್ಮ ಶಿಕ್ಷಣ ಪದ್ದತಿಯು ಮನೆಯೊಳಗಿನ ಮೊದಲ ಗುರುವಿನಿಂದ  ಪ್ರಾರಂಭಿಸಿ ನಂತರವೇ ಹೊರಗಿನ‌ ಗುರುವಿನ ಕಡೆಗೆ  ನಡೆಸಿರೋದನ್ನು ಹಿಂದೂಗಳಾದವರು  ಗಮನಿಸಿದರೆ   ಹೊರಗಿನ ಕೆಲವು ಶಾಲೆ ಬಿಟ್ಟರೆ ಉಳಿದೆಲ್ಲಾ ಹಿಂದಿನ ಪಠ್ಯಕ್ರಮದಲ್ಲಿಯೇ
ತರಗತಿಗಳು ನಡೆದಿದ್ದು ಮಕ್ಕಳ ಬೆನ್ನಿಗೆ ಹೊರೆ ತಲೆಗೆ  ಭಾರವನ್ನು ಇಳಿಸಿಲ್ಲ. ಅದೇ ಶಿಕ್ಷೆ ಅದೇ ರಾಜಕೀಯ, ಅದೇ
ಸುಲಿಗೆಯಲ್ಲಿ ಪೋಷಕರಿಗೂ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಪರಿಹಾರವೇನು? 
ಪರಿಹಾರ ಒಳಗಿದೆ ಮನೆಯೊಳಗಿನಿಂದಲೇ ನಮ್ಮ ಧರ್ಮ ಸಂಸ್ಕೃತಿ, ಭಾಷೆಯ‌ಕಡೆಗೆ ಹೆಚ್ಚು ಒತ್ತುಕೊಟ್ಟು ಮಕ್ಕಳನ್ನು
ಸಂಸ್ಕಾರದೆಡೆಗೆ ನಡೆಸಲು ಮಹಿಳೆಯರು ತಯಾರಾದರೆ ಮುಂದಿನ ದಿನಗಳಲ್ಲಿ  ಹೊರಗೂ ಬದಲಾವಣೆ ಸಾಧ್ಯ.
ಮೊದಲು ಪೋಷಕರಾದವರು ಒಗ್ಗಟ್ಟಿನಿಂದ ಸತ್ಯದೆಡೆಗೆ ನಡೆದರೆ ಮಕ್ಕಳಿಗೂ ಉತ್ತಮ ದಾರಿಯಾಗುತ್ತದೆ. ಹಾಗಾದರೆ ಇಲ್ಲಿ ಸತ್ಯ ಇಲ್ಲವೆ? ಧರ್ಮ ಯಾವುದು? ಪ್ರಶ್ನೆಗೆ ಉತ್ತರ ನಮ್ಮ ದೇಶ,ರಾಜ್ಯದ ನೆಲ ಜಲವನ್ನು ಬಳಸುವಾಗ ಅಲ್ಲಿ ನಾವಿರೋದು ಸತ್ಯ. ಇನ್ನು ಅದರ ಋಣ ತೀರಿಸಲು  ಅಲ್ಲಿಯ ಭಾಷೆ,ಸಂಸ್ಕೃತಿ, ಧರ್ಮವನ್ನು ಉಳಿಸುವ ಬೆಳೆಸುವ ಶಿಕ್ಷಣ ನೀಡುವುದು ಧರ್ಮ ವಾಗುತ್ತದೆ. ಇಲ್ಲಿ ಯಾರೂ ಹಿಂದೂಗಳೂ ಅಲ್ಲ,ಮುಸ್ಲಿಂ ಅಲ್ಲ, ಕ್ರೈಸ್ತ ರೂ ಅಲ್ಲ ಎಲ್ಲಾ ಒಂದೇ ದೇಶದ ರಾಜ್ಯದ ಪ್ರಜೆಗಳಷ್ಟೆ. ಮೊದಲು
ನಿಂತ ನೆಲವನ್ನು ಗಟ್ಟಿ ಮಾಡಿಕೊಂಡರೆ ಜಲವೂ ಶುದ್ದ .ಇದಕ್ಕೆ ರಾಜಕೀಯ ಬೇಕೆ?
ಮೊದಲು ಮಾನವರಾಗಿ ಎಂದ ಮಹಾತ್ಮರ ದೇಶವನ್ನು ಭ್ರಷ್ಟಾಚಾರದ ಕಡೆಗೆ ಎಳೆದುಕೊಂಡು ಹೋರಾಟ ನಡೆಸಿದರೆ
ಆ ಹೋರಾಟದ ಫಲವನ್ನು ಮಕ್ಕಳು ಮೊಮ್ಮಕ್ಕಳೇ ಅನುಭವಿಸುವುದು. ನಮ್ಮ ಸಾಮಾನ್ಯಜ್ಞಾನ ಬಿಟ್ಟು ವಿಶೇಷ ಜ್ಞಾನಕ್ಕೆ  ಹೊರಗೆ ನಡೆದರೆ ಅಧರ್ಮ. ಇದರಿಂದಾಗಿ ಸಿಕ್ಕಿದ್ದು
ಕೇವಲ ದು:ಖ.
ಶೋಷಣೆ ವಿಚಾರದಲ್ಲೂ ರಾಜಕೀಯ ಬೆಳೆದಿದೆ. ಹಾಗಾದರೆ ಈಗ ಪ್ರಜಾಪ್ರಭುತ್ವದ ಲ್ಲಿ ಶೋಷಣೆ ಮಾಡುತ್ತಿರುವವರು ಯಾರು? ನಮ್ಮದಲ್ಲದ ಶಿಕ್ಷಣವನ್ನು ನೀಡುತ್ತಿರುವವರು ಯಾರು?  ಇದಕ್ಕಾಗಿ  ಸಾಲ ಮಾಡಿ ಮಕ್ಕಳ ತಲೆಮೇಲೆ ಹೋರಿಸಿ ಸರಿಯಾದ ಕೆಲಸವಿಲ್ಲದೆ  ಅಡ್ಡದಾರಿ ಹಿಡಿದರೆ ತಪ್ಪು ಯಾರದ್ದು?
ರಾಷ್ಟ್ರೀಯ ಶಿಕ್ಷಣ ನೀತಿಯೇನೋ ಹೊಸದಲ್ಲ.ಇದು ಹಳೇ
ಕಾಲದ್ದು.ಆದರೂ ಇಂದಿನ ಶಿಕ್ಷಣದಲ್ಲಿ  ಹೊಸದಾದ ತಂತ್ರ ಸೇರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಸಾಕಷ್ಟು ರಾಜಕೀಯ
ನಡೆಸಿದ್ದಾರೆನ್ನಬಹುದು. ಮೊದಲು ಆಳುವವರಿಗೆ ಸರಿಯಾದ ಶಿಕ್ಷಣವಿರಬೇಕಿದೆ. 
ನಮ್ಮ ಭಾರತೀಯ  ಶಿಕ್ಷಣವು ತತ್ವಜ್ಞಾನದಿಂದ ತಂತ್ರಜ್ಞಾನದ ಕಡೆಗೆ ನಡೆದಿತ್ತು. ಈಗಿನ ಶಿಕ್ಷಣದಲ್ಲಿ ಮೊದಲೇ ತಂತ್ರಜ್ಞಾನದ
ದಾಸರಾಗಿಸಿಕೊಂಡು ತತ್ವದ ಭೋದನೆ ಮಾಡಿದರೆ ತಿರುಗಿ
ಬರೋದು ಕಷ್ಟ. ಬದಲಾವಣೆಯು ಸಾತ್ವಿಕವಾಗಿರಬೇಕಿದೆ.
ರಾಜಕೀಯವಾದರೆ ಶಿಕ್ಷಕರಿಂದ ಹಿಡಿದು  ಇಡೀ ಕ್ಷೇತ್ರವೇ ಮಕ್ಕಳನ್ನು ತಂತ್ರದಿಂದ ಆಳಬಹುದು.ಉತ್ತಮ ವಿಚಾರವನ್ನು ಪಠ್ಯಪುಸ್ತಕದಲ್ಲಿ ಸೇರಿಸುವಾಗ ವಾಸ್ತವ ಸತ್ಯವನ್ನು ಗಮನದಲ್ಲಿಟ್ಟುಕೊಂಡುಮುಂದೆ ಹೋಗಬೇಕಿದೆ.
ಪೋಷಕರ ಸಮಸ್ಯೆಗೆ ಕಾರಣವನ್ನುಹೊರಗಿನ ಶಿಕ್ಷಣದಲ್ಲಿ
 ತಿಳಿಸಲಾಗದು. ಹೊರಗಿನ ಶಿಕ್ಷಣದ ಸಮಸ್ಯೆಯು ಪೋಷಕರಿಗೆ ತಿಳಿಯುತ್ತಿಲ್ಲ.ಹೀಗಿರುವಾಗಮಧ್ಯದಲ್ಲಿ ಮಕ್ಕಳ ಗತಿ ಏನಾಗಬಹುದು?
ಇಲ್ಲಿ  ಕೆಲವು ಸೂಕ್ಷ್ಮ ವಿಚಾರಗಳಿವೆ.ಇದನ್ನು ಎಲ್ಲಾ ಪ್ರಜೆಗಳು
ತಮ್ಮಲ್ಲಿ  ತಿಳಿಯಲು ಸಾಧ್ಯವಾದರೆ ನಮಗೆ ನಾವೇ ಗುರು ಆಗಬಹುದು.
ಮೊದಲನೆಯದಾಗಿ ನಾವೆಲ್ಲರೂ ದೇಶದೊಳಗಿರುವ ಸಾಮಾನ್ಯ ಪ್ರಜೆಗಳಷ್ಟೆ.ನಮ್ಮಲ್ಲಿ ಸಾಮಾನ್ಯಜ್ಞಾನವಿದೆ. ಇದು
ನಮ್ಮ ಮಕ್ಕಳಲ್ಲಿಯೂ ಇರುತ್ತದೆ. ನಾವೆಷ್ಟು ಇದನ್ನು ಸದ್ಬಳಕೆ
ಮಾಡಿಕೊಂಡು ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ? ದೇಶಭಕ್ತಿಯಾಗಲಿ,ಭಾಷಾಪ್ರೇಮವಾಗಲಿ
ಹೊರಗಿನಿಂದ ಬೆಳೆಸುವ ಶಿಕ್ಷಣವಾಗದು.ಇದು ಜನ್ಮದಿಂದ
ಒಳಗಿರುವ ಶಕ್ತಿ. ಇದಕ್ಕೆ ಪೂರಕವಾದ ಸದ್ವಿಚಾರ,ಆಚಾರ, ಸಂಸ್ಕಾರವನ್ನು ನಾವು ಪಡೆದಿದ್ದರೆ ಅದೂ ಮಕ್ಕಳಲ್ಲಿರುತ್ತದೆ
ನಾವು  ಮನೆಯಲ್ಲಿಯೇ ಇನ್ನಷ್ಟು  ಸಹಕರಿಸಿ ಬೆಳೆಸಬೇಕು.
ಇಂದಿನ ಶಿಕ್ಷಣ ಪದ್ದತಿ ಸರಿಯಿಲ್ಲದೆ ದೇಶ ಹಾಳಾಗುತ್ತಿದೆ ಎನ್ನುವ  ವಿಚಾರದ ಬಗ್ಗೆ ಬಹಳಷ್ಟು ಚರ್ಚೆ ಯಾಗುತ್ತದೆ. ವಾದ ವಿವಾದವಾಗುತ್ತದೆ.ಆದರೆ ಇದು ಸ್ವಾತಂತ್ರ್ಯ ಪೂರ್ವದ
ಕಾಲದಿಂದ  ಕೆಲವು ರಾಜಕೀಯ ಶಕ್ತಿಗಳು ಭಾರತದಲ್ಲಿದ್ದೇ
ಇದಕ್ಕೆ ವಿರುದ್ದದ ಶಿಕ್ಷಣ ಪ್ರಾರಂಭಿಸಿರೋದು ಸತ್ಯ. ಸ್ವಾತಂತ್ರ್ಯ ಬಂದ ನಂತರ ಭಾರತೀಯರೆ ಒಪ್ಪಿಕೊಂಡು ಅಪ್ಪಿಕೊಂಡು  ಬೆಳೆಸಿರುವಾಗ ನಾವದನ್ನು ನಮ್ಮ ತಪ್ಪಿಲ್ಲ ಎನ್ನುವುದರಲ್ಲಿ ಅರ್ಥ ವಿಲ್ಲ. ಈಗಂತೂ ಇದೇ ಪೋಷಕರಿಗೆ
ಗೌರವ ನೀಡುವ ಮಟ್ಟಿಗೆ  ಬೆಳೆಸಿ ವಿದೇಶವನ್ನು ತಿರಸ್ಕರಿಸಿದ
ಹಿಂದಿನ ಮಹಾತ್ಮರನ್ನೇ ತಿರಸ್ಕಾರದಿಂದ ನೋಡುವ‌ಯುವಕ
ಯುವತಿಯರನ್ನು ಪೋಷಕರೆ ಪ್ರೋತ್ಸಾಹ ಮಾಡುತ್ತಾರೆಂದರೆ  ಶಿಕ್ಷಣ ಸರಿಯಿಲ್ಲವೆಂದಲ್ಲ.ಅದರಲ್ಲಿ ತುಂಬಿದ  ವಿಷಯವೇ ಸರಿಯಿರಲಿಲ್ಲ.
ಪ್ರತಿಯೊಂದು ಭೌತಿಕಾಸಕ್ತಿ ಬೆಳೆಸೋ ಭೌತ ವಿಜ್ಞಾನವಿಲ್ಲದೆ
ನಮ್ಮ ಜೀವನ ನಡೆದಿಲ್ಲ.ಆದರೆ ಅಧ್ಯಾತ್ಮ ವಿಜ್ಞಾನವಿಲ್ಲದ ಜೀವನ ಜೀವನವೇ ಅಲ್ಲವೆನ್ನಬಹುದಷ್ಟೆ.
ಹಾಗಾದರೆ ನಮ್ಮ ಜೀವನ ವ್ಯರ್ಥ ವೆ? ಮಕ್ಕಳು ಕಲಿತ ಶಿಕ್ಷಣ
ವ್ಯರ್ಥ ವೆ?  ಹಾಗೆಂದರೆ ಯಾರಾದರೂ  ಒಪ್ಪುವರೆ? ಇಲ್ಲಿ ತಪ್ಪು ಒಪ್ಪುಗಳ ವಿಚಾರದಲ್ಲೂ  ಜ್ಞಾನ ವಿಜ್ಞಾನದ ಅಂತರ ಬೆಳೆದುನಿಂತು ಅಂತರವನ್ನು ಅಜ್ಞಾನದ ರಾಜಕೀಯ  ತುಂಬಿದೆ. ರಾಜಕೀಯದಿಂದ  ಯಾರಾದರೂ ಮುಕ್ತಿ  ಪಡೆದರೆ? 
ಹಿಂದಿನ ರಾಜಾಧಿರಾಜರ ಕೊನೆಗಾಲವನ್ನು ಇತಿಹಾಸದಲ್ಲಿ
ಓದಿ ತಿಳಿದರೂ ಯಾರೂ ಅವರ ಅನುಭವವನ್ನು ತಿಳಿಯಲಾಗದು.ಹಾಗೆಯೇ ಎಷ್ಟೋ ಮಹಾತ್ಮರುಗಳು ನಮ್ಮ ಭಾರತವನ್ನು ಶ್ರೇಷ್ಠ ಮಾಡಿದ್ದಾರೆ. ಇದನ್ನು ಕನಿಷ್ಠ ಮಾಡುವತ್ತ  ಶಿಕ್ಷಣವನ್ನು  ಎಳೆದಾಡಿಕೊಂಡು ಮುಂದೆ ನಡೆದವರೂ ಈಗಿಲ್ಲದಿರಬಹುದು.ಆದರೆ ವಾಸ್ತವ ಸತ್ಯವು
ನಮ್ಮ‌ಕಣ್ಣ ಮುಂದೆ ನಿಂತಿದೆ. ಈಗಲೂ ಅದೇ ಶಿಕ್ಷಣವನ್ನು
ತಲೆಗೆ ತುಂಬಿ ಮಕ್ಕಳೇ ಮುಂದಿನ  ಪ್ರಜೆಗಳಾಗಿರುವಾಗ ಅವರಿಂದ  ದೇಶಕ್ಕೇನು ಲಾಭ? ವಿದೇಶದೆಡೆಗೆ ನಡೆಸೋ ತಂತ್ರಜ್ಞಾನದಿಂದ ತತ್ವಜ್ಞಾನ ಬೆಳೆಸಬಹುದೆ?
ತತ್ವ ಒಳಗಿನ‌ಜ್ಞಾನದಲ್ಲಿರುತ್ತದೆ.ತಂತ್ರ ಹೊರಗಿನಿಂದ ಸೇರುತ್ತದೆ. ಇವೆರಡರ  ಸಮ್ಮಿಲನವೇ ವಿಜ್ಞಾನ.ವಿಶೇಷ ಜ್ಞಾನ.
ಮಕ್ಕಳ ವಿಶೇಷ ಆಸಕ್ತಿ,ಪ್ರತಿಭೆ ಗುರುತಿಸೋದು ಶಿಕ್ಷಕರ ಕರ್ತವ್ಯ. ಮಕ್ಕಳಿಗೆ ಸಂಸ್ಕಾರ ನೀಡಿ  ಶುದ್ದಗೊಳಿಸುವುದು ಪೋಷಕರ ಧರ್ಮ. ಇವುಗಳನ್ನು ತಿಳಿಯದೆ ಎಲ್ಲವನ್ನೂ ಸರ್ಕಾರವೇ ಮಾಡಲಿ ಎನ್ನುವವರಿಂದ ಯಾವ ಮಕ್ಕಳ ಭವಿಷ್ಯ ಉಜ್ವಲವಾಗದು. 
ಇದನ್ನು ಪ್ರಜೆಗಳೇ  ಆತ್ಮಾವಲೋಕನ ದಿಂದರಿತು ತಮ್ಮಲ್ಲಿ ಬದಲಾವಣೆಯಾದರೆ ದೇಶದ ಶಿಕ್ಷಣವೂ ಬದಲಾಗುತ್ತದೆ.
ನಿರಂತರ ನಡೆಯುತ್ತಿರುವ ಮಕ್ಕಳು ಮತ್ತು ಮಹಿಳೆಯರ ಮೇಲಿನ ಶೋಷಣೆಗೆ ಕಾರಣವೇ ಅಜ್ಞಾನದ ಶಿಕ್ಷಣವಾಗಿದೆ.
ಇದು ವಿದೇಶದಲ್ಲಿ ಇದ್ದರೂ ಅಲ್ಲಿಯ ಕಾನೂನಿಗೆ ಭಯ
ಪಡುವ  ಜನರಿದ್ದಾರೆ. ಶಿಕ್ಷೆಯೂ ಚೆನ್ನಾಗಿದೆ.ಹೀಗಾಗಿ ಅಲ್ಲಿನ
ಕೆಟ್ಟ ಬುದ್ದಿಯವರು ತಮ್ಮ ಹಣಬಲದಿಂದ ಶಿಕ್ಷಣ ಕೇಂದ್ರ ತೆರೆದು ಇಲ್ಲಿಯ ಮಕ್ಕಳನ್ನು ಆಳಲು ಇಲ್ಲಿಯ ಸರ್ಕಾರಗಳು
ಒಪ್ಪಿದರೆ ಇದಕ್ಕೆ ಪ್ರೋತ್ಸಾಹ ಕೊಡುವ‌ ಹಣವಂತರಿಗೇನೂ
ಕಡಿಮೆಯಿಲ್ಲ. ಇದರ ಪರಿಣಾಮವೇ ದೇಶದ ಮೂಲ ಶಕ್ತಿ
ಹಿಂದುಳಿಯೋದು. ಪ್ರಜಾಶಕ್ತಿಯಾಗಿರುವ ಆತ್ಮಜ್ಞಾನದ ಕೊರತೆಯೇ  ಎಲ್ಲಾ  ಭ್ರಷ್ಟಾಚಾರದ ಮೂಲ. 
NEP  ಬಂದ ಮೇಲೆ ಎಲ್ಲಾ ಬದಲಾಗುವುದೆನ್ನುವ ಕನಸು ಬಿಟ್ಟು ಈಗಲೇ ನಮ್ಮಲ್ಲಿರುವ ಸ್ವಂತ ಬುದ್ದಿ,ಜ್ಞಾನವನ್ನು ನಮ್ಮ ಮಕ್ಕಳಿಗೆ ಮನೆಯೊಳಗೆ ಹೊರಗೆ ನೀಡಿದರೆ ಸಾಕು.
ಇಲ್ಲಿ ಮಕ್ಕಳಿಗೆ ರಾಜಕೀಯದ ಅಗತ್ಯವಿಲ್ಲ.ರಾಜಯೋಗದ ಅಗತ್ಯವಿದೆ. ಅವರನ್ನು ಅವರು ತಿಳಿದುಕೊಳ್ಳಲು ಯೋಗದ ಕಡೆಗೆ ಪೋಷಕರು ನಡೆಸುವುದರಿಂದ ಮುಂದೆ  ಆತ್ಮನಿರ್ಭರ ಭಾರತ ಸಾಧ್ಯವಿದೆ.ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿಸಿ
ಎಷ್ಟೋ ವರ್ಷ ವಾದರೂ ಈಗಲೂ ಅದರ ವಿರುದ್ದ ನಿಂತವರಿಗೆ  ನಮಗೆ ನಾವೇ ಮೋಸಹೋಗಿರುವ ಜ್ಞಾನವಿಲ್ಲ. ಇದನ್ನು  ಶಿಕ್ಷಣದಲ್ಲಿ ಜಾರಿಗೊಳಿಸುವುದಿರಲಿ ಶಿಕ್ಷಕರಾದವರಿಗೆ ಇದರ ಬಗ್ಗೆ  ಜ್ಞಾನವಿದೆಯೆ ಇದು ತಿಳಿದರೆ
ಶಿಕ್ಷಕರನ್ನು ತಯಾರಿಸುವ ಕೆಲಸ ಮಾಡೋರು ಯಾರು?
ಸಾಕಷ್ಟು ಸಮಸ್ಯೆಗಳಿಗೆ ಉತ್ತರವಿಲ್ಲ.ಹೀಗಾಗಿ ಪೋಷಕರೇ ಎಚ್ಚರವಾಗಿದ್ದರೆ ಮಕ್ಕಳ ಭವಿಷ್ಯ  ಪೋಷಕರ ಕೈಯಲ್ಲಿರಬಹುದು. ಇಲ್ಲವಾದರೆ ಯಾರದ್ದೋ ಕೈ ಕೆಳಗೆ ಮಕ್ಕಳು ಸಿಲುಕಿ ದೂರವಾಗುತ್ತಾರೆ.ಈಗಾಗಲೇ ಎಷ್ಟೋ ವಿದೇಶಿ ಕಂಪನಿಗಳು ತಮ್ಮ ಲ್ಲಿ ಕೆಲಸಮಾಡುವ ವಿದ್ಯಾವಂತ
ಭಾರತೀಯ ಪ್ರಜೆಗಳನ್ನು  ಅವರವರ ದೇಶದ ಸಂಪತ್ತು ಮಾಡಿಕೊಂಡು  ದೇಶವನ್ನು ವಿದೇಶ ಮಾಡೋದರಲ್ಲಿದ್ದಾರೆ.
ಇನ್ನೂ ಮುಂದೆ ಹೋದರೆ ನಮ್ಮ ಮಕ್ಕಳೇ  ನಮಗೆ ವಿರುದ್ದ ನಿಂತು ಆಳೋದರಲ್ಲಿ ಆಶ್ಚರ್ಯ ವಿಲ್ಲ.ಈಗಾಗಲೇ ಎಷ್ಟೋ ಸಂಸಾರಗಳು ಹೀಗೇ ಆಗಿದೆ.ಕೆಲವರಿಗೆ ಇದೊಂದು ಪ್ರಗತಿ ಪ್ರತಿಷ್ಡೆಯಾದರೆ ಹಲವರಿಗೆ ರೋಧನೆಯಾಗಿದೆ.ಇದಕ್ಕೆ ಕಾರಣವೆ ನಮ್ಮ ಸಹಕಾರವೆಂದರೆ ಪ್ರತಿಫಲ ಮಕ್ಕಳ. ಅಸಹಕಾರ. ಜ್ಞಾನದ ದೇಶವನ್ನು ಅಜ್ಞಾನದಿಂದ ಆಳಿದರೆ ಜ್ಞಾನ ಬರುವುದೆ?  ಜ್ಞಾನ ಬಂದವರು ಮಕ್ಕಳಿಗೆ ಜ್ಞಾನದ ಶಿಕ್ಷಣ ನೀಡುವುದೇ ಇದಕ್ಕಿರುವ ಪರಿಹಾರ. 
ಸಾಮಾನ್ಯರ ಸತ್ಯಕ್ಕೆ ಬೆಲೆಕೊಡದೆ ದೇಶವನ್ನು ಹಾಳುಮಾಡಿ
ಜ್ಞಾನ ಕುಸಿದಿದೆ. ಜ್ಞಾನಿಗಳಿಂದ ತುಂಬಿದ್ದ ಭಾರತದಲ್ಲಿರುವ ರಾಜಕೀಯಕ್ಕೆ ಕಾರಣವೇ ಅಜ್ಞಾನದ ಶಿಕ್ಷಣ ಪಡೆದ ಪ್ರಜೆಗಳ
ಸಹಕಾರ. ಇದರಿಂದಾಗಿ ಯಾರಿಗೆ ಲಾಭ ಯಾರಿಗೆ ನಷ್ಟ ಆಗಿದೆ ಎನ್ನುವ ಸತ್ಯವನ್ನು  ಎರಡು ರೀತಿಯಲ್ಲಿ ಅಳೆದರೆ
ನಿಜವಾದ  ಬಡತನವನ್ನು ಹಣದಿಂದ ಅಳೆದವರಿಗೆ ಕಷ್ಟ ನಷ್ಟ
ಜ್ಞಾನದಿಂದ ಅಳೆದವರಿಗೆ ಲಾಭವಾಗಿದೆ. 
ಜ್ಞಾನದಲ್ಲಿಯೂ ಎರಡು ರೀತಿಯಿದೆ ಒಂದು ಅಧ್ಯಾತ್ಮ ಇನ್ನೊಂದು ಭೌತಿಕ. 
ಅಧ್ಯಾತ್ಮ ಜ್ಞಾನಿಗಳಿಂದ ಶಾಂತಿ ನೆಲೆಸಬೇಕಿತ್ತು.ನೆಲೆಸಿದೆಯೆ?
ಇಲ್ಲವೆಂದರೆ  ಅಲ್ಲಿಯೂ ರಾಜಕೀಯವಿದೆ ಎಂದರ್ಥ. ಎಲ್ಲಿ ರಾಜಕೀಯವಿರುವುದೋ ಅಲ್ಲಿ ಕ್ರಾಂತಿಯೇ ಹೆಚ್ಚು.
ಹಾಗೆಯೇ ಎಲ್ಲಿ ರಾಜಯೋಗವಿದೆಯೋ ಅಲ್ಲಿ ಶಾಂತಿ ಸತ್ಯ
ಧರ್ಮ ಇರುತ್ತದೆ. ರಾಜಯೋಗವನ್ನು ರಾಜಕೀಯವೆಂದು ತಿಳಿಯುವುದೇ ಅಜ್ಞಾನ.
ಸ್ವಾಮಿ ವಿವೇಕಾನಂದರು ಭಾರತವನ್ನು ಸದೃಢವಾಗಿ ಕಟ್ಟಲು
ಯುವಶಕ್ತಿಗೆ ರಾಜಯೋಗದ ಶಿಕ್ಷಣ ನೀಡುವ ಸಂದೇಶವನ್ನು
ಎಷ್ಟು ಮಂದಿ ಅರ್ಥ ಮಾಡಿಕೊಂಡರೋ ದೇವರಿಗಷ್ಟೆ ಗೊತ್ತು. ಯುವಜನತೆಯನ್ನು ರಾಜಕೀಯದ ದಾಳ ಮಾಡಿಕೊಂಡು ಆಟವಾಡಿದವರು ದೇಶವನ್ನು ಸಾಲದೆಡೆಗೆ ಎಳೆದು ಯುವಶಕ್ತಿ ದುರ್ಭಳಕೆ  ಆಗಿದೆ.ಕಾರಣ ಶಿಕ್ಷಣದಲ್ಲಿ ಭಾರತೀಯತೆ ಮಾಯವಾಗಿ ವಿದೇಶಿಯತೆ ಬೆಳೆಸಿದ್ದಾರೆ.
ಇದರಲ್ಲಿನ  ಒಂದೊಂದು ವಿಚಾರವೂ ಭಾರತದ ಪ್ರಜೆಗಳಿಗೆ
ಇಂದು ಅರ್ಥ ವಾಗಬಹುದು. ಸತ್ಯವನ್ನು ಎಷ್ಟೇ ತಿರುಚಿದರು
ಬದಲಾಗದು.ಕಾರಣ ಒಂದೇ ಸತ್ಯ ಇರೋದು. ಒಂದೇ ದೇಶ, ಒಂದೇ ರಾಜ್ಯ, ಆದರೆ ಎಲ್ಲಾ ಒಂದಾಗೋದೆ ಕಷ್ಟದ ಕೆಲಸ.
ಕಟ್ಟುವುದು ಕಷ್ಟ ಮೆಟ್ಟುವುದು ಸುಲಭ.ಸುಲಭವ ಕೆಲಸಕ್ಕೆ ಎಲ್ಲರ ಸಹಕಾರ.ಕಷ್ಟದ ಕೆಲಸಕ್ಕೆ ಎಲ್ಲರ ವಿರೋಧವಿದ್ದರೆ ಬದಲಾವಣೆ ಸಾಧ್ಯವಿಲ್ಲ. ನಿಧಾನವಾದರೂ ಸರಿ ನಮ್ಮ ದಾನ ಧರ್ಮ ಕಾರ್ಯದಲ್ಲಿ ತತ್ವವಿರಲಿ.ತಂತ್ರದ ಅಗತ್ಯವಿಲ್ಲ.
ಸತ್ಯವಿರಲಿ ಅಸತ್ಯದ ರಾಜಕೀಯ ಬೇಡ. ನ್ಯಾಯವಿರಲಿ 
ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟುವ ಅಜ್ಞಾನದ ಅನ್ಯಾಯ ಬೇಡ. ಹೀಗೇ  ನಮ್ಮ ಶಿಕ್ಷಣವನ್ನು ನಾವೇ ಅರ್ಥ ಮಾಡಿಕೊಂಡರೆ ಅದರೊಳಗಿರುವ ರಾಜಕೀಯತೆ ತೊಲಗಿಸಿ
ರಾಜಯೋಗದೆಡೆಗೆ ಮಕ್ಕಳನ್ನು  ಬೆಳೆಸಬಹುದಲ್ಲವೆ?
ಪರರೆಲ್ಲಾ ನಮ್ಮವರೆ ಆದರೆ ಅವರಲ್ಲಿ ನಮ್ಮ ಜ್ಞಾನವಿದ್ದರೆ ಮಾತ್ರ.ನಮ್ಮವರಲ್ಲಿಯೂ ಇರುವ ಪರರ ಜ್ಞಾನದಿಂದ ಅವರು ನಮ್ಮವರಾಗೋದಿಲ್ಲವೆ? ಜ್ಞಾನವಿಜ್ಞಾನದ ಮಧ್ಯೆ
ಸಾಮಾನ್ಯ ಜ್ಞಾನವಿದ್ದರೆ  ಉತ್ತಮ ಸಮಾಜ ನಿರ್ಮಾಣ.

ಎಲ್ಲವನ್ನೂಒಂದುವ್ಯಕ್ತಿಯಾಗಲಿ,ಶಕ್ತಿಯಾಗಲಿ,ಸರ್ಕಾರವಾಗಲಿ ಸಂಘ,ಸಂಸ್ಥೆ, ಮಠ,ಮಂದಿರವಾಗಲಿ ಮಾಡಲಾಗದು. ಅವರವರ ಮನೆ ಮನೆಯಲ್ಲಿಯೇ ಅವರವರೆ ಒಗ್ಗಟ್ಟಿನಿಂದ ಉತ್ತಮ ಕಾರ್ಯ ನಡೆಸಿದರೆ ಎಲ್ಲಾ ಬದಲಾವಣೆ ಆಗಬಹುದು. ಭ್ರಷ್ಟಾಚಾರಕ್ಕೆ ರಾಜಕೀಯಕ್ಕೆ ಕೊಡುವ ಸಹಕಾರಕ್ಕೆ  ಬದಲಾಗಿ ಶಿಷ್ಟಾಚಾರದ ಶಿಕ್ಷಣಕ್ಕೆ, 
ರಾಜಯೋಗದ ವಿಷಯಗಳಿಗೆ ಸಹಕರಿಸಲೂ ನಮಗೆ ಆತ್ಮಜ್ಞಾನವಿರಬೇಕು.ಭೌತಿಕದ ತಂತ್ರಜ್ಞಾನದ ಜೊತೆಗೆ ಧಾರ್ಮಿಕದ ತಂತ್ರವೂ  ತತ್ವವನ್ನು ಹಿಂದುಳಿಸಿ ಮಾನವನಲ್ಲಿ ಅಜ್ಞಾನ ಹೆಚ್ಚಿಸಿದೆ  ಎಂದರೆ ತಪ್ಪಿಲ್ಲ.ಇದು ಕಣ್ಣಿಗೆ ಕಾಣದ ಸತ್ಯವಾದ್ದರಿಂದ ಅನುಭವಕ್ಕೆ ಬರದೆ ಅರ್ಥ ಆಗೋದಿಲ್ಲ. 
ಜೀವನವೂ ಶಾಶ್ವತವಲ್ಲ ಜೀವವೂ ಶಾಶ್ವತವಲ್ಲ.ಆತ್ಮ ಅಮರವೆಂದರಿತು ನಡೆದಿರೋದು ನಮ್ಮ ಸೈನಿಕರಷ್ಟೆ. ಇವರು ದೇಶ ಕಾಯೋದಕ್ಕೆ  ಜೀವನ ನಡೆಸಿದ್ದಾರೆ. ಆದರೆ ದೇಶದೊಳಗಿರುವವರಲ್ಲಿಯೇ  ಅಡಗಿರುವ ದ್ವೇಷದ ರಾಜಕೀಯಕ್ಕೆ  ಶಿಕ್ಷಣವೇ ಕಾರಣವಾಗಿರೋದು ದೊಡ್ಡ ದುರಂತ. . 
 ವಾಸ್ತವದಲ್ಲಿ ವಿದೇಶದೊಳಗೆ ದೇಶವಿದೆ. ಅದ್ವೈತ ದೊಳಗೇ ದ್ವೈತವಿದೆ. ಹಾಗಾದರೆ ಅಧರ್ಮ ಅಸತ್ಯದೊಳಗೆ ಸತ್ಯ ಧರ್ಮ ಎಲ್ಲಿದೆ ?ಹೇಗಿದೆ? 
ಇವುಗಳಿಗೆಲ್ಲ ಕಾರಣವೇ ಮಿಶ್ರವರ್ಣ, ಮಿಶ್ರಜಾತಿ,ಮಿಶ್ರ ದೇಶ, ಸಮ್ಮಿಶ್ರ ಸರ್ಕಾರ. ಮಿಶ್ರಣವನ್ನು  ಸ್ವಚ್ಚಗೊಳಿಸುವ ಶಿಕ್ಷಣ ಬೇಕಿದೆ. ಅರ್ಧ ಸತ್ಯದ  ಪ್ರಚಾರಕರಾಗಿ ಮಧ್ಯವರ್ತಿಗಳು  ಬೆಳೆದರೂ  ಅವರ ಜೀವನವೂ ಅತಂತ್ರವೆ
ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯ ಯಾರಿಗೆ ಕೊಟ್ಟಿದ್ದೇವೆ?
ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು ಎನ್ನುವರು.ಇಲ್ಲಿ ಪರಮಾತ್ಮನಿರೋದು ಎಲ್ಲಾ ಚರಾಚರದಲ್ಲಿ ಹಾಗೆ ಮಾನವನೊಳಗೇ ಮಾನವ ಮಾತ್ರ  ಸತ್ಯಕ್ಕೆ ವಿರುದ್ದ ನಡೆಯುತ್ತಾ ಎಲ್ಲಾ ಪರಮಾತ್ಮನ ಇಚ್ಚೆ ಎಂದರೆ ಧರ್ಮ ವೆ?

ಮತಾಂತರಕ್ಕೆ ಕಾರಣವೇನು?

ಬಲವಂತದ ಮತಾಂತರ ಡೇಂಜರ್
ಯಾರನ್ನೂ ಬಲವಂತದಿಂದ ಆಳಬಾರದು.

ವಿಜಯವಾಣಿ ಪತ್ರಿಕೆ ಇಂದಿನ‌ ಮುಖ್ಯ ಸುದ್ದಿಯಾಗಿದೆ.
ಇದಕ್ಕೆ ರಾಜಕೀಯ ಪರಿಹಾರವಿದೆಯೇ ರಾಜಯೋಗದ ಪರಿಹಾರವೆ? ಒಟ್ಟಿನಲ್ಲಿ ಸಮಸ್ಯೆಗೆ ಪರಿಹಾರವಿರುತ್ತದೆ ಯಾವಾಗ ರಾಜಕೀಯದ ಪರಿಹಾರ ಹೆಚ್ಚುವುದೋ ರಾಜಯೋಗವಿಲ್ಲದೆ ಜೀವ ಹೋಗುತ್ತದೆ ಅಂತರ ಬೆಳೆಯುತ್ತದೆ. ಇಲ್ಲಿ ಜೀವಾತ್ಮ ಪರಮಾತ್ಮರ ನಡುವಿನ ಅಂತರವೇ ಸಮಸ್ಯೆಗಳಿಗೆ ಕಾರಣವೆನ್ನುವ ಯೋಗಿಗಳಿಲ್ಲ.
ಹಣದಿಂದಲೇ ಪರಿಹಾರ ಸೂಚಿಸುವ ಭೋಗಿಗಳ ಜಗತ್ತಿನಲ್ಲಿ
ಅಜ್ಞಾನದ ಅಂತರಗಳು ಬೆಳೆದು ನಿಂತಿವೆ.
ಒಂದು ಮಗು ಜನ್ಮತಾಳಿದ  ಸ್ಥಳ,ಧರ್ಮ ಕರ್ಮ ವು ಹಿಂದಿನ
ಕಾಲದಿಂದಲೂ  ಋಣ ಸಂಭಂದವಿದೆ ಎನ್ನುವ ಜ್ಞಾನದಿಂದ ಮಕ್ಕಳಿಗೆ ಅಲ್ಲಿಯ ಮೂಲವನ್ನು ಶಿಕ್ಷಣದಲ್ಲಿ ತಿಳಿಸುತ್ತಾ ಪೋಷಕರೂ ನಡೆಯುತ್ತಾ ಇದ್ದಲ್ಲಿಯೇ ಪರಮಾತ್ಮನ ಸೇವೆ ಮಾಡಿಕೊಂಡು  ಮುಕ್ತಿ ಪಡೆದಿದ್ದ ಹಿಂದೂ ಧರ್ಮ ಇಂದು ಹಿಂದುಳಿಯಲು ಕಾರಣವೇ ಹಿಂದಿನವರಿಂದ ಅಂತರ ಬೆಳೆಸಿಕೊಂಡು ಬಂದ ಶಿಕ್ಷಣದ ವಿಚಾರ. ವೈಚಾರಿಕತೆಯಲ್ಲಿನ
ವೈಜ್ಞಾನಿಕತೆಯನ್ನು ಗುರುತಿಸದೆ ತಮ್ಮದೇ ಆದ ಸಂಶೋಧನೆ
ಹೊರಗಿನಿಂದ ಬೆಳೆಸಿಕೊಂಡು  ಧರ್ಮಾಂತರ ಹೆಚ್ಚಾಯಿತು.
ಇನ್ನು ತತ್ವದ ವಿಚಾರದಲ್ಲಿಯೇ  ಅಂತರ ಸಾಕಷ್ಟಿದೆ. ತತ್ವವನ್ನು ತಂತ್ರವಾಗಿ ಬಳಸಿದಾಗ ಎಣಿಸಲಾಗದ ಅಂತರ.
ಹೀಗೇ ಒಂದೇ ಭೂಮಿ,ದೇಶ,ಧರ್ಮ, ಜಾತಿ, ಪಂಗಡ,ಪಕ್ಷವಿಲ್ಲದೆ ಅನೇಕ ದೇವರಿದ್ದರೂ ಮಾನವನಲ್ಲಿ ದೈವತ್ವದ ಕೊರತೆಯಿದೆ. ಹಾಗಾದರೆ ಅಂತರಿಕ ಶುದ್ದಿಯಿಂದ
ಅಂತರವನ್ನು  ಕಡಿಮೆಗೊಳಿಸಲು ಪ್ರಯತ್ನಪಟ್ಟ ಶರಣರು,ದಾಸರು,ಸಂತರು,ಮಹಾತ್ಮರುಗಳು ಎಲ್ಲಿರುವುದು?
ಅವರನ್ನು ರಾಜಕೀಯದ ದಾಳ ಮಾಡಿಕೊಂಡು  ತತ್ವ ಬಿಟ್ಟು ತಂತ್ರ ನಡೆಸಿದರೆ ಆತ್ಮನಿರ್ಭರ ಭಾರತವಾಗಲು ಸಾಧ್ಯವೆ?
ಸ್ತ್ರೀ ಶಕ್ತಿಯನ್ನು  ರಾಜಯೋಗದೆಡೆಗೆ ಕರೆದೊಯ್ಯುವ ಶಿಕ್ಷಣ ಇಲ್ಲದೆ ಜ್ಞಾನದೇವತೆಯನ್ನು ಪೂಜಿಸಿ,ಬೇಡಿದರೂ ವ್ಯರ್ಥ.
ಹೀಗಾಗಿ ಪ್ರಜಾಪ್ರಭುತ್ವದ ವ್ಯವಸ್ಥೆ ಅವಸ್ಥೆ ಯಾಗುತ್ತಿದೆ.
ಪ್ರಜೆಗಳ ಜ್ಞಾನದಿಂದ ಅಂತರ ಕಡಿಮೆಯಾಗಿದ್ದರೆ ತತ್ವಜ್ಞಾನ.
ಹೆಚ್ಚಾಗಿದ್ದರೆ ತಂತ್ರಜ್ಞಾನ. ವಿಪರೀತ ವಾಗಿದ್ದರೆ ಯಂತ್ರಜ್ಞಾನ
ಯಾಂತ್ರಿಕ ಜೀವನದಲ್ಲಿ ನಾವು ಯಂತ್ರಗಳನ್ನು ಪ್ರೀತಿಸುವಷ್ಟು  ನಮ್ಮ ಸ್ವತಂತ್ರ ಜ್ಞಾನವನ್ನು ಪ್ರೀತಿಸದೆ ಮುಂದೆ ನಡೆದರೆ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
ಬ್ರಹ್ಮನ ಸೃಷ್ಟಿ ವಿಷ್ಣು ವಿನ ಸ್ಥಿತಿ, ಶಿವನ ಲಯ ಕಾರ್ಯವನ್ನು
ಪ್ರಶ್ನೆ ಮಾಡಲು ನಾವ್ಯಾರು? ಮಹಾದೇವತೆಗಳನ್ನೇ ಮೇಲು ಕೀಳೆಂದು ನೋಡುವ‌ಮಹಾಜ್ಞಾನಿಗಳು ತಂತ್ರವನ್ನು ಬಳಸಿ ತತ್ವವನ್ನು  ಹಿಂದುಳಿಸಿದರೆ ಸಾಮಾನ್ಯರ ಗತಿ ಏನು? 
ಒಟ್ಟಿನಲ್ಲಿ ಅಂತರಕ್ಕೆ ಕಾರಣವೇ ಅಜ್ಞಾನ.ಅಜ್ಞಾನಕ್ಕೆ ಮದ್ದು  ಸತ್ಯಜ್ಞಾನ ದ ಶಿಕ್ಷಣ. ಶಿಕ್ಷಕರು,ಗುರು ಹಿರಿಯರು ಮೊದಲು ಸತ್ಯವಂತರಾಗಿ ಅಂತರವಿಲ್ಲದೆಯೇ ಶಿಷ್ಯರ ಜ್ಞಾನವನ್ನು ತಿಳಿದು ಬೆಳೆಸಿದರೆ  ಪರಿಹಾರವಿದೆ. ಇದು ಧಾರ್ಮಿಕ ಕ್ಷೇತ್ರದ
ಧರ್ಮ. ವಿದೇಶದಲ್ಲಿ  ಹಿಂದೂಗಳಿಗೆ ಗೌರವವಿದೆ, ಜ್ಞಾನಕ್ಕೆ ಬೆಲೆಯಿದೆ ಆದರೆ ನಮ್ಮಲ್ಲೇ ನಮ್ಮವರೆ ಶತ್ರುಗಳಾದರೆ  ಅಂತರದಿಂದ ಅವಾಂತರವೇ ಬೆಳೆಯೋದು. ಮೊದಲು ನಾವಿರುವ ಭೂಮಿ,ದೇಶ,ಭಾಷೆ,ಧರ್ಮ,ಕರ್ಮದ ಮೂಲ ಉದ್ದೇಶ ತಿಳಿದರೆ ಹೊರಗಿನಿಂದ ಬೆಳೆಸಿದ ಅಸಂಖ್ಯಾತ ದೇವರು,ಧರ್ಮ, ಜಾತಿ,ಪಕ್ಷ,ಪಂಗಡಗಳ ಉದ್ದೇಶ ತಿಳಿಯಲು ಸಾಧ್ಯ.ಒಳಗೇ ಅಜ್ಞಾನವಿಟ್ಟುಕೊಂಡು ಹೊರಗೆ ಹೋರಾಟ,ಹಾರಾಟ,ಮಾರಾಟ ಮಾಡಿದರೆ  ಅಂತರವೇ ಬೆಳೆಯೋದಲ್ಲವೆ? ಇದರಲ್ಲಿ ಸಾಮಾನ್ಯ ಜ್ಞಾನವಿದೆ. ಇದನ್ನು
ಆಳುವವರು  ಅರ್ಥ ಮಾಡಿಕೊಳ್ಳದೆಯೇ  ರಾಜಕೀಯ ಕ್ಕೆ ಇಳಿದರೆ ಹಾಳಾಗೋದು ಯಾರು?
ಮಾನವನ ಶತ್ರುವೇ ಅವನೊಳಗಿನ ಅಹಂಕಾರ ಸ್ವಾರ್ಥ.
ಇವೆರಡಕ್ಕೂ ಅಂತರ ಬೆಳೆಸಿಕೊಂಡರೆ ಸಾಕು. ಅಹಂಕಾರ ಬಿಟ್ಟರೆ  ಸ್ವಾರ್ಥ ವೂ ದೂರವಾಗುತ್ತದೆ. ಇದೇ ನಿಜವಾದ ಆತ್ಮಜ್ಞಾನ. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಅಗತ್ಯವಿದೆ.
ವೈಜ್ಞಾನಿಕ ಚಿಂತನೆ ಇರಲಿ ಆದರೆ ಆತ್ಮಹತ್ಯೆ ಆಗದಿರಲಿ.
ಜ್ಞಾನದೇವತೆಯನ್ನು ಆರಾಧಿಸಿ,ಪೂಜಿಸಿ,ಗೌರವಿಸಿ ಆಳಲು ಹೋಗಬೇಡಿ.
ಆಳಿದರೆ ಅಂತರ ಹೆಚ್ಚುವುದು. ತಾಯಿಯ ಋಣ ತೀರಿಸಲು ಜ್ಞಾನಬೇಡವೆ?

ಭೂಮಿ ಮೇಲೆ ಜನ್ಮ ಪಡೆಯಲು ಪುಣ್ಯ ಮಾಡಿರಬೇಕೋ ಪಾಪ ಮಾಡಿರಬೇಕೋ ಎಂದು ಪ್ರಶ್ನೆ ಹಾಕಿದರೆ ತುಂಬಾ  ಸಂತೋಷ ಸುಖವಿದ್ದವರು ಪುಣ್ಯದ ಫಲ ಎನ್ನುವರು ಕಷ್ಟ  ಶ್ರಮಜೀವಿಗಳ ಪಾಡಿಗೆ ಪಾಪವೇ ಕಾರಣವೆನ್ವನುರಷ್ಟೆ.
ಆದರೆ ಇವರಿಬ್ಬರಲ್ಲಿ ಯಾರು ಸ್ವಂತ ಬುದ್ದಿ ಜ್ಞಾನ ಧರ್ಮ ಕರ್ಮ ದೊಳಗಿದ್ದು ಸ್ವತಂತ್ರ ಜೀವನ ನಡೆಸುತ್ತಾ ಪರಮಾತ್ಮನ ಕಡೆಗೆ ಕಷ್ಟಪಟ್ಟು ಇಷ್ಟಪಟ್ಟು ವಿರೋಧಿಗಳ ನಡುವೆಯೂ ನಡೆದಿರುವರೋ ಅವರ ಪಾಪ ಪುಣ್ಯದ ಲೆಕ್ಕಾಚಾರ   ಮೇಲೆ ನಡೆದಿರುತ್ತದೆ.ಕೆಳಗಿನ ವ್ಯವಹಾರಕ್ಕೆ ಇದು ಸಿಗೋದಿಲ್ಲ. ಕಣ್ಣಿಗೆ ಕಾಣದ ಈ ಋಣದ ಲೆಕ್ಕಾಚಾರ ಚುಕ್ತಾ ಮಾಡೋದಕ್ಕಾಗಿ  ಮಾನವನ ಜನ್ಮವಾಗುತ್ತದೆ ಎಂದರೆ ಯಾರ ಋಣ ಯಾರೋ ತೀರಿಸಲಾಗದೆಂದರ್ಥ.
ಹೊರಗಿನ ಸರ್ಕಾರವಾಗಲಿ ಧರ್ಮ ಗಳಾಗಲಿ ತಮ್ಮ ತಮ್ಮ ಜನರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡಿಕೊಂಡಿರುವ ಈ ಪಕ್ಷಾಂತರವಾಗಲಿ ಮತಾಂತರವಾಗಲಿ  ಧರ್ಮವನ್ನು ರಕ್ಷಣೆ ಮಾಡೋದಿಲ್ಲವೆಂದರೆ  ಇದರ ಮೂಲ ಉದ್ದೇಶ ಕೇವಲ ರಾಜಕೀಯವಷ್ಟೆ. ರಾಜಕೀಯದ ವಶಕ್ಕೆ ಬಲಿಯಾದ ಜೀವಕ್ಕೆ‌ಮುಕ್ತಿಸಿಗದು. 

Thursday, July 11, 2024

ಚಿಂತನೆ ಉತ್ತಮವಿದ್ದರೆ ಚಿಂತೆಯಿರದು

ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆಗೋದನ್ನು ತಡೆಯಲಾಗದು,ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯೋದಿಲ್ಲ....ಹೀಗೇ ಪ್ರತಿಯೊಂದು ವಿಷಯದಲ್ಲೂ  ಸಕಾರಾತ್ಮಕ ವಾಗಿ ತಿಳಿದು ಬಿಟ್ಟು ಕೊಟ್ಟು ಮುಂದೆ ಮುಂದೆ ಹೋದವರಿಗೆ ಪರಮಾತ್ಮನ ಸತ್ಯದ ಅರಿವಾಗಿದೆ ದರ್ಶನವಾಗಿದೆ.
ಇದನ್ನು  ಈಗಲೂ ಪ್ರಚಾರ ಮಾಡಬಹುದು. ಆದರೆ  ಪ್ರಚಾರ ಮಾಡುವವರಿಗೆ ಅಧಿಕಾರ ಹಣವಿದ್ದರೆ ಜನಬಲವಿರುತ್ತದೆ.
ಹೀಗಾಗಿ ಜನರ ಹಣವನ್ನು ಬಳಸಿಕೊಂಡು ಅಧಿಕಾರ ಪಡೆದು  ಶ್ರೀಮಂತ ರಾದವರಿಗೂ ಚಿಂತೆ ತಪ್ಪಿದ್ದಲ್ಲ. ಯಾವಾಗ ಅಧಿಕಾರ ಹೋಗುವುದೋ ಯಾವಾಗ ಜನರಿಗೆ ಸತ್ಯ ಅರ್ಥ ಆಗಿ  ವಿರುದ್ದ ನಿಲ್ಲುವರೋ ಯಾರಿಗೂ ಗೊತ್ತಾಗೋದಿಲ್ಲ. ಒಟ್ಟಿನಲ್ಲಿ ಆ ಪರಮಾತ್ಮ ಯಾರ ಮೂಲಕವಾದರೂ ಸತ್ಯ ಹೊರಹಾಕಬಹುದು .ಆದರೆ ಸತ್ಯ ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಸತ್ಯಜ್ಞಾನವಿರಬೇಕಷ್ಟೆ. ಹೊರಗಿನ ಸತ್ಯ ಒಳಗಿನ ಸತ್ಯಕ್ಕೆ ದೂರವಾಗಿದ್ದು ವಿರುದ್ದವಿದ್ದರೆ ಚಿಂತೆಯೇ ಹೆಚ್ಚು.
ಇದರಲ್ಲಿ ಯಾರು ಸತ್ಯವಂತರು ಎನ್ನುವ ಬದಲಾಗಿ ನಾನೆಷ್ಟು ಸತ್ಯದಲ್ಲಿದ್ದೇನೆಂದು ತಿಳಿದು  ನಡೆದಾಗಲೇ  ನಮ್ಮ ಸಮಸ್ಯೆಗೆ ಕಾರಣವೇ ಅಸತ್ಯ ಅಧರ್ಮದ  ವ್ಯವಹಾರವಾಗಿರುತ್ತದೆ.
ವ್ಯವಹಾರಕ್ಕೆ ಇಳಿದಾಗ ಸತ್ಯ ಹಿಂದುಳಿಯುವುದು ಸಹಜ.ಆದರೂ ವ್ಯವಹಾರದಲ್ಲಿ ಧರ್ಮ ವಿದ್ದರೆ ನಾವೂ ಬದುಕಿ ಇತರರನ್ನೂ ಬದುಕಲು ಬಿಡುವರು. ಇಲ್ಲವಾದರೆ ತನ್ನ ಬದುಕಿಕಾಗಿ ಇತರರನ್ನು ದಾರಿತಪ್ಪಿಸಿ  ಆಳುವರು. ಆಳಿದವರೂ ಆಳಾಗಿ ದುಡಿದು ಋಣ ತೀರಿಸಲೇಬೇಕೆನ್ನುವುದು ಸನಾತನಧರ್ಮದ ಸಿದ್ದಾಂತ.
ಸಿದ್ದಾಂತ ಗಳು ಎಲ್ಲರಲ್ಲಿಯೂ ಅಡಗಿರುವ ಪರಮಾತ್ಮನೆಡೆಗೆ ನಡೆಸುತ್ತವೆ.ಆದರೆ ನಮ್ಮ ಚಿಂತನೆಯೇ ಪರಕೀಯರೆಡೆಗೆ ಹೊರಟಾಗ  ಪರಮಸತ್ಯ ಧರ್ಮ ಕಾಣದೆ ಚಿಂತೆ ಹೆಚ್ಚುವುದು.
ಒಟ್ಟಿನಲ್ಲಿ ದೇವರನ್ನು ಬೇಡೋದು,ಪೂಜಿಸೋದು ಆರಾಧಿಸೋದು ಎಲ್ಲಾ ಮಾಡಬಹುದು. ಯಾವುದನ್ನು ಬೇಡಬೇಕು,ಯಾರನ್ನು ದೇವರೆನ್ನಬೇಕು,ಯಾವುದನ್ನು ಪೂಜಿಸಬೇಕು ಆರಾದಿಸಬೇಕೆನ್ನುವ ಜ್ಞಾನ ಅಗತ್ಯವಿದೆ.ಇದಕ್ಕಾಗಿ ಸದ್ಗುರುಗಳ ಆಶೀರ್ವಾದ ಸಹಕಾರ ಸಲಹೆ ಸೂಚನೆಗಳನ್ನು ಅನುಸರಿಸಿದರೆ ಅದೇ ದೈವತ್ವದೆಡೆಗೆ ನಡೆಸುತ್ತಾ ಚಿಂತೆಯಿಲ್ಲದೆ ಜೀವನ ನಡೆಸಬಹುದೆನ್ನುವರು ಅಧ್ಯಾತ್ಮ ಚಿಂತಕರು.
ತಾಯಿಯೇ ಮೊದಲ ಗುರು ಇವಳ ಅಧ್ಯಾತ್ಮ ಶಕ್ತಿಯಿಂದ ಜಗತ್ತು ನಡೆದಿದೆ.ಜಗದೀಶ್ವರನ ಜೊತೆಗೆ ಜಗದೀಶ್ವರಿಯ ಕೃಪೆ ಇದ್ದರೆ ಚಿಂತೆ ಇದ್ದರೂ ನಿಶ್ಚಿಂತೆಯೆಡೆಗೆ  ನಡೆಯುತ್ತದೆ ಜೀವನ.
ಚಿಂತೆ ನಮ್ಮ ಹತ್ತಿರಬರದಂತಿರಲು ಸನ್ಯಾಸಿ ಗಳಂತೆ ಬದುಕಬೇಕು.ಸಂಸಾರದೊಳಗಿದ್ದಾಗ ಹೊರಗಿನಿಂದ ಹಾರಿಕೊಂಡು ಬರುತ್ತವೆ.ಆದರೆ ಅದರಲ್ಲಿ ಹೂತುಕೊಂಡಿದ್ದರೆ ಬಿಡೋದೆ ಇಲ್ಲ ಹಾಗಾಗಿ ಅದರಿಂದ ಸಾಧ್ಯವಾದರೆ  ದೂರವಿದ್ದಷ್ಟೂ  ನಮ್ಮ ಒಳ್ಳೆಯ ಚಿಂತನೆಗೆ  ಅಪಾಯವಿರದು.

Wednesday, July 10, 2024

ಅನ್ನದಾನ ಮಹಾದಾನ

ಅನ್ನದ ಋಣ ಎಲ್ಲಿರುವುದೆನ್ನುವುದೋ ತಿಳಿಯಲಾಗದು. ಹಾಗಾಗಿ ಹಿಂದೆ ಇನ್ನೊಬ್ಬರ ಮನೆಗೆ ಕರೆಯದೆ ಹೋಗಬಾರದೆನ್ನುತ್ತಿದ್ದರು. ಕರೆದರೂ  ಊಟಕ್ಕೆ  ಹೋಗೋರು ಕಡಿಮೆಯಿದ್ದರು.ಕಾರಣವಿಷ್ಟೆ ಋಣ ತೀರಿಸೋದು ಕಷ್ಟ ಜನ್ಮ ಜನ್ಮದ ಲೆಕ್ಕಾಚಾರ ಹಾಕಿದರೆ  ಈಗ ಉಚಿತ ಊಟ ಉಪಚಾರ ಉಡುಗೊರೆಗಳ ಹಿಂದೆ ಎಷ್ಟು ಋಣವಿರಬಹುದು? ಒಟ್ಟಿನಲ್ಲಿ ಜೀವ ಬರೋದೆ ಋಣ ತೀರಿಸಲೆಂದಾಗಿದೆ. ಅದಕ್ಕಾಗಿ ದಾನಧರ್ಮ ಕಾರ್ಯಕ್ರಮ ಪರಮಾತ್ಮನ ಸೇವೆ,ಸಮಾಜಸೇವೆ,ದೇಶಸೇವೆ
,ದೇವತಾರಾಧನೆ....
ಮುಂತಾದವುಗಳು ಹಿಂದಿನಿಂದಲೂ ಬೆಳೆದು ಬಂದಿದೆ. 
ಯಾವ ಜನ್ಮದ ಋಣ ಯಾವ ಜನ್ಮದಲ್ಲಿ ತೀರಿಸಬೇಕೋ ಅದು ಮೇಲಿರುವ ಪರಮಾತ್ಮನಿಗಷ್ಟೆ ಗೊತ್ತು. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಒಂದಿರಲಿ ಎಂದ ದಾಸರಿಗೂ ಬಂದದ್ದೆಲ್ಲಾ ನನಗೇ  ಬೇಕೆಂದು ಸಂಪತ್ತನ್ನು ಕೂಡಿಹಾಕುವ ಇಂದಿನ ಆಧುನಿಕತೆಗೂ ಎಷ್ಟೋ ಅಂತರವಿದೆ. ಅದಕ್ಕಾಗಿ ಎಷ್ಟು ಅನ್ನದಾನ ಮಾಡಿದರೂ ತೃಪ್ತಿ ಸಿಗದಂತಾಗಿದೆ. ಎಷ್ಟು ಅನ್ನ ತಿಂದರೂ ಸಾಲವೇ ಆಗಿದೆ.
ಸಾಲದ ಹಣದಲ್ಲಿ ಎಷ್ಟು ಧಾನ ಧರ್ಮ ಮಾಡಿದರೂ ಸಾಲಕ್ಕೆ ಹೋಗುತ್ತದೆ. ಸಾಲ ಕೊಟ್ಟವನಿಗೂ ತೃಪ್ತಿ ಇಲ್ಲ ಪಡೆದವನಿಗೂ ನೆಮ್ಮದಿ ಮುಕ್ತಿ ಇಲ್ಲ.  ಪರಮಾತ್ಮನಿಗೆ ಯಾವುದೂ ತಲುಪುತ್ತಿಲ್ಲ.ಅದಕ್ಕಾಗಿ ಶ್ರೀ ಕೃಷ್ಣ ಪರಮಾತ್ಮ ತಿಳಿಸಿರೋದು ನಿಸ್ವಾರ್ಥ ನಿರಹಂಕಾರ  ಪ್ರತಿಫಲಾಪೇಕ್ಷೆ ಇಲ್ಲದ ಸೇವೆಯಿಂದ ಋಣಮುಕ್ತರಾಗೋ ಯೋಗಿಯಾಗು ಎಂದು..ಇದೀಗ  ಎಷ್ಟು ಜನರಿಗೆ,ಯಾರಿಗೆ ಸಾಧ್ಯವಾಗಿದೆ?
ಉಚಿತ ಯೋಜನೆಗಳ ಹಿಂದಿರುವ ಸಾಲ ದೇಶದ ಸಾಲ.ಇದನ್ನು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದರ ಮೂಲಕ ತೀರಿಸಬೇಕೆಂದರೆ  ಕಷ್ಟಪಟ್ಟು ದುಡಿಯಬೇಕು. ದುಡಿಯುವ ಕೈಗೆ    ಉತ್ತಮ ಕೆಲಸ ಬೇಕು, ಕೆಲಸ ಮಾಡಲು ಜ್ಞಾನವಿರಬೇಕು,ಜ್ಞಾನದ ಶಿಕ್ಷಣ ಕೊಡಲೇಬೇಕು. ಕಲಿಯುವ ಯುಗ ಕಲಿಯುಗ.ಇದು ಸತ್ಯಜ್ಞಾನದಿಂದ  ಮೇಲ್ಮಟ್ಟಕ್ಕೆ  ಬೆಳೆದಾಗಲೇ ನಿಜವಾದ  ಯೋಗದ ಜೀವನ.
ದೇಶದಿಂದ ನನಗೇನು ಲಾಭ? ದೇವರಿಂದ ಪೋಷಕರಿಂದ, ಸ್ನೇಹಿತರಿಂದ,ಸಮಾಜದಿಂದ,ಭೂಮಿಯಿಂದ, ಸ್ತ್ರೀ ಯಿಂದ ಮಕ್ಕಳಿಂದ. ನನಗೇನು ಲಾಭ ಎನ್ನುವ ಮಟ್ಟಕ್ಕೆ ವ್ಯವಹಾರ ಬೆಳೆದಿರುವಾಗ  ದುಡ್ಡಿದ್ದವನೆದೊಡ್ಡಪ್ಪ.ಬಡವನ‌ಕೋಪ ದವಡೆಯ ಮೂಲ. ಎಷ್ಟು ಕೋಪತಾಪವಿದ್ದರೂ ಅನ್ನವಿಲ್ಲದೆ  ಬದುಕುವುದು ಕಷ್ಟವಿದೆ.ಅದಕ್ಕೆ ಅನ್ನದಾನ ಮಹಾದಾನ ಆಗಿದೆ.ಇದಕ್ಕಿಂತ ಮುಖ್ಯವಾಗಿದ್ದು  ಜ್ಞಾನ .ಜ್ಞಾನ ಸಂಪಾದನೆಗೆ ಇಳಿದವರು ಅನ್ನ ನೀರು ಬಿಟ್ಟು ನಡೆದಿದ್ದರು..
ಆಳವಾಗಿರುವ ಸನಾತನ ಧರ್ಮ  ಜ್ಞಾನದ ಹಸಿವನ್ನು ಹೆಚ್ಚಿಸುತ್ತದೆ. ಇದಕ್ಕೆ ಇದನ್ನು ಅರ್ಥ ಮಾಡಿಕೊಳ್ಳಲು  ರಾಜಕೀಯ ಬಿಟ್ಟು ಒಳಗಿನ ಸತ್ಯ  ಧರ್ಮದೆಡೆಗೆ ನಡೆದಿದ್ದರು. 
ರಾಜಕಾರಣಿಗಳಾಗಲಿ,ಶ್ರೀಮಂತ ಜನರಾಗಲಿ  ಹೆಚ್ಚು ಜನಬಲ ಪಡೆದಿರುವರೆಂದರೆ ಜನರ ಋಣವಿದೆ ಎಂದರ್ಥ. ತೀರಿಸದೆ ಮುಕ್ತಿಯಿಲ್ಲ.